26 June 2021 KANNADA Murli Today | Brahma Kumaris

Read and Listen today’s Gyan Murli in Kannada

June 25, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

"ಮಧುರ ಮಕ್ಕಳೇ - ತಂದೆಯ ಶ್ರೀಮತವಾಗಿದೆ, ಈ ಹಳೆಯ ಪ್ರಪಂಚದಿಂದ ತಮ್ಮ ಮುಖವನ್ನು ತಿರುಗಿಸಿಕೊಳ್ಳಿರಿ, ಜೀವನ್ಮುಕ್ತಿಗಾಗಿ ನೀವು ದೈವೀ ಮ್ಯಾನರ್ಸ್ ಧಾರಣೆ ಮಾಡಿಕೊಳ್ಳಿ"

ಪ್ರಶ್ನೆ:: -

ಯಾವ ಮ್ಯಾನರ್ಸ್ನ್ನು ತಂದೆಯ ವಿನಃ ಯಾರೂ ಕಲಿಸಲು ಸಾಧ್ಯವಿಲ್ಲ?

ಉತ್ತರ:-

ಪವಿತ್ರರಾಗುವುದು ಮತ್ತು ಅನ್ಯರನ್ನು ಮಾಡುವುದು ಎಲ್ಲದಕ್ಕಿಂತ ದೊಡ್ಡ ದೈವೀ ಮ್ಯಾನರ್ಸ್ ಆಗಿದೆ. ನೀವು ಗೃಹಸ್ಥದಲ್ಲಿ ಇದ್ದರೂ ಪವಿತ್ರರಾಗಿ, ಈ ಶಿಕ್ಷಣವನ್ನು ಒಬ್ಬ ತಂದೆಯು ಕೊಡುತ್ತಾರೆ ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ನೀವು ಮಕ್ಕಳದು ಬೇಹದ್ದಿನ ಸನ್ಯಾಸವಾಗಿದೆ, ನೀವು ಈ ಹಳೆಯ ಪ್ರಪಂಚವನ್ನೇ ಬುದ್ಧಿಯಿಂದ ಮರೆಯುತ್ತೀರಿ. ನಿಮಗೆ ತಿಳಿದಿದೆ – ಪವಿತ್ರತೆಯ ಧಾರಣೆಯಿಂದ ಉಳಿದೆಲ್ಲಾ ಮ್ಯಾನರ್ಸ್ ಸ್ವತಃವಾಗಿಯೇ ಬರುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಇಂದು ಅಂಧಕಾರದಲ್ಲಿ ಇದ್ದಾರೆ ಮಾನವರು…..

ಓಂ ಶಾಂತಿ. ಮಕ್ಕಳು ಗೀತೆಯ ಒಂದು ಸಾಲನ್ನು ಕೇಳಿದಿರಿ. ಒಂದು ಕಡೆ ಇಡೀ ಪ್ರಪಂಚವಿದೆ ಅಂದರೆ ಭಕ್ತಿಮಾರ್ಗದವರು ಇದ್ದಾರೆ ಮತ್ತೊಂದು ಕಡೆ ನೀವು ಜ್ಞಾನ ಮಾರ್ಗದವರು ಇದ್ದೀರಿ. ಅವರು ಭಕ್ತಿಯ ಏಣಿಯನ್ನು ಹತ್ತುತ್ತಿರುತ್ತಾರೆ ಮತ್ತು ನೀವು ಮಕ್ಕಳು ಜ್ಞಾನದ ಏಣಿಯನ್ನು ಹತ್ತುತ್ತೀರಿ. ಮಕ್ಕಳಿಗೆ ತಿಳಿದಿದೆ ಅರ್ಧಕಲ್ಪದಿಂದ ಭಕ್ತಿಯ ಏಣಿಯನ್ನು ಹತ್ತಲಾಗುತ್ತದೆ. ಭಕ್ತಿಯು ಸಹ ಮೊದಲು ಅವ್ಯಭಿಚಾರಿ ಆಗಿರುತ್ತದೆ. ನಂತರ ಕೊನೆಯಲ್ಲಿ ವ್ಯಭಿಚಾರಿ ಆಗುತ್ತದೆ. ಮನುಷ್ಯರು ಸಂಪೂರ್ಣ ಅಂಧಶ್ರದ್ಧೆಯಲ್ಲಿ ಬಂದು ಬಿಡುತ್ತಾರೆ. ಏನನ್ನೂ ತಿಳಿದುಕೊಳ್ಳುವುದಿಲ್ಲ. ನಾವು ಅಂಧಕಾರದಲ್ಲಿ ಇದ್ದೇವೆ. ಸದ್ಗುರು ಇಲ್ಲದಿದ್ದರೆ ಘೋರ ಅಂಧಕಾರ ಎಂದು ಹಾಡುತ್ತಾರೆ. ಗುರುಗಳಂತೂ ಇಲ್ಲಿ ಅನೇಕರಿದ್ದಾರೆ. ಹಾಗಾದರೆ ಸತ್ಯವಾದ ಗುರು ಯಾರು? ಸಾಧು-ಸಂತ ಮಹಾತ್ಮ, ಭಕ್ತ ಮೊದಲಾದವರೆಲ್ಲರೂ ಸಾಧನೆ ಮಾಡುತ್ತಾರೆ ಅಥವಾ ನೆನಪು ಮಾಡುತ್ತಾರೆ. ಶಾಸ್ತ್ರ-ವೇದ-ಉಪನಿಷತ್ತು ಇತ್ಯಾದಿಗಳನ್ನು ಓದುತ್ತಾರೆ ಆದರೂ ಮತ್ತೆ ಹೇಳುತ್ತಾರೆ – ಭಗವಂತನು ಬಂದಾಗಲೇ ನಮ್ಮ ಸದ್ಗತಿ ಮಾಡುವರು ಎಂದು. ಸದ್ಗತಿ ದಾತನಿಗೆ ಪತಿತ ಪಾವನ ಎಂದು ಹೇಳಲಾಗುತ್ತದೆ. ಈಗ ನೀವು ಮಕ್ಕಳು ಘೋರ ಅಂಧಕಾರದಲ್ಲಿ ಇಲ್ಲ. ನೀವು ಜ್ಞಾನದ ಬೆಳಕಿನೆಡೆಗೆ ಬಂದಿದ್ದೀರಿ. ಪತಿತ ಪಾವನ ತಂದೆಯನ್ನು ಅರಿತುಕೊಂಡಿದ್ದೀರಿ ಹಾಗೂ ಅವರನ್ನು ನೆನಪು ಮಾಡುತ್ತೀರಿ. ಯಾವ ಮಗು ಎಷ್ಟು ನೆನಪು ಮಾಡುವರೋ ಮತ್ತು ಜ್ಞಾನದ ಧಾರಣೆ ಮಾಡಿಕೊಳ್ಳುವರೋ ಅಷ್ಟು ಅವರ ಅಜ್ಞಾನ ಅಂಧಕಾರವು ವಿನಾಶ ಆಗುತ್ತದೆ. ಬೆಳಕಿನೆಡೆಗೆ ಕರೆದುಕೊಂಡು ಹೋಗುವರು ಒಬ್ಬ ತಂದೆ ಆಗಿದ್ದಾರೆ. ಜ್ಞಾನ ಅಂಜನವನ್ನು ಸದ್ಗುರು ಕೊಟ್ಟರು… ಎಂದು ಹೇಳುತ್ತಾರೆ. ಇದು ಯಾವುದೇ ಕಾಡಿಗೆ ಅಲ್ಲ ಜ್ಞಾನದ ಮಾತಾಗಿದೆ. ಜ್ಞಾನದ ಜೊತೆ ಯೋಗವು ಇದೆ. ಮನುಷ್ಯರು ಭಕ್ತಿಯನ್ನು ಕಲಿಸುತ್ತಾರೆಂದರೆ ಅವರೊಂದಿಗೂ ಯೋಗವಿರುತ್ತದೆ. ಈಗ ನೀವು ಮಕ್ಕಳ ಬುದ್ಧಿಯೋಗವು ನಿರಾಕಾರ ಪರಮಪಿತ ಪರಮಾತ್ಮನ ಜೊತೆ ಜೋಡಿಸಲ್ಪಟ್ಟಿದೆ. ನೀವು ಮಕ್ಕಳಲ್ಲೂ ನಂಬರ್ವಾರ್ ಇದ್ದಾರೆ. ಇಡೀ ವಿಶ್ವದಲ್ಲಿ ನಿಮ್ಮ ವಿನಃ ಮತ್ತ್ಯಾವ ಮನುಷ್ಯ ಮಾತ್ರರ ಬುದ್ಧಿಯೋಗವು ಪರಮಪಿತ ಪರಮಾತ್ಮ ಸರ್ವಶಕ್ತಿವಂತನ ಜೊತೆ ಇಲ್ಲ. ನೀವು ತಂದೆ ಹಾಗೂ ಮುಕ್ತಿ-ಜೀವನ್ಮುಕ್ತಿಧಾಮದೊಂದಿಗೆ ಯೋಗವನ್ನು ಇಡಬೇಕಾಗುತ್ತದೆ. ಒಳ್ಳೆಯ ದೈವೀ ಮ್ಯಾನರ್ಸ್ ಬೇಕಾಗಿದೆ. ಈ ಸಮಯದಲ್ಲಿ ಎಲ್ಲರದೂ ಆಸುರಿ ನಡವಳಿಕೆಯಾಗಿದೆ. ಪರಮಪಿತ ಪರಮಾತ್ಮನ ಗುಣಗಾನ ಮಾಡಲಾಗುತ್ತದೆ ಏಕೆಂದರೆ ಅವರು ಮನುಷ್ಯ ಸೃಷ್ಟಿಯ ಬೀಜ ರೂಪ, ಸತ್ಯ, ಚೈತನ್ಯನಾಗಿದ್ದಾರೆ, ಆನಂದ ಸಾಗರ, ಜ್ಞಾನ ಸಾಗರನಾಗಿದ್ದಾರೆ. ಸದಾ ಕಾಲಕ್ಕಾಗಿ ಪವಿತ್ರತೆಯ ಸಾಗರನಾಗಿದ್ದಾರೆ. ಅವರದು ಇದು ಅವಿನಾಶಿ ಪದವಿಯಾಗಿದೆ ಮತ್ತ್ಯಾವುದೇ ಮನುಷ್ಯರ ಪದವಿಯು ಅವಿನಾಶಿ ಆಗಿರುವುದಿಲ್ಲ. ಭಲೆ ನೀವೀಗ ಜ್ಞಾನ ಸಾಗರ, ಪವಿತ್ರತೆಯ ಸಾಗರರಾಗುತ್ತೀರಿ ಆದರೆ ಅಲ್ಪಕಾಲಕ್ಕಾಗಿ. ತಂದೆಯು ಹೇಳುತ್ತಾರೆ – ನಾನು ಬೇಹದ್ದಿನ ಸಾಗರನಾಗಿದ್ದೇನೆ, ನಿಮ್ಮನ್ನು ಬೇಹದ್ದಿನವರನ್ನಾಗಿ ಮಾಡಲು ಸಾಧ್ಯವಿಲ್ಲ. ಹಾಗಿದ್ದರೆ ಸೃಷ್ಟಿಯ ನಾಟಕವು ಹೇಗೆ ನಡೆಯುತ್ತದೆ. 84 ಜನ್ಮಗಳನ್ನು ಹೇಗೆ ಪಡೆಯುತ್ತೀರಿ? ಆದ್ದರಿಂದ ನೀವು ಸದಾ ಪಾವನರಾಗಲು ಸಾಧ್ಯವಿಲ್ಲ. ಕೇವಲ 21 ಜನ್ಮಗಳಿಗಾಗಿ ಪಾವನರಾಗುತ್ತೀರಿ. ಇದಕ್ಕೆ 21 ಪೀಳಿಗೆ ಎಂದು ಬರೆಯಲಾಗಿದೆ. ನೀವು ಸದಾ ಕಾಲಕ್ಕಾಗಿ ಪಾವನರಾಗುವುದು ಈ ಡ್ರಾಮಾದಲ್ಲಿ ನಿಯಮವಿಲ್ಲ. ನಾನು ಸದಾ ಪಾವನನಾಗಿದ್ದೇನೆ. ಪರಮಧಾಮದಲ್ಲಿ ಇರುತ್ತೇನೆ. ನನ್ನ ಬಳಿ ಜ್ಞಾನ-ಪವಿತ್ರತೆ, ಮುಂತಾದ ಖಜಾನೆಗಳಿವೆ. ನೀವು ಇದನ್ನು ಮರೆತು ಹೋಗುತ್ತೀರಿ, ಆದ್ದರಿಂದ ಈ ಸಮಯದಲ್ಲಿ ತಂದೆಯು ಬಂದು ಮಕ್ಕಳನ್ನು ಘೋರ ಅಂಧಕಾರದಿಂದ ತೆಗೆದು ಜ್ಞಾನ ಮತ್ತು ಯೋಗದಿಂದ ಪವಿತ್ರರನ್ನಾಗಿ ಮಾಡುತ್ತಾರೆ. ನಾನು ಪರಮಧಾಮದಿಂದ ಬಂದಿದ್ದೇನೆ. ಈಗ ನನ್ನನ್ನು ನೆನಪು ಮಾಡಿರಿ ಎಂದು ತಂದೆಯ ವಿನಃ ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ. ಈ ನನ್ನ ಮಹಾವಾಕ್ಯಗಳನ್ನು ಯಾರೂ ಕಾಪಿ ಮಾಡಲು ಸಾಧ್ಯವಿಲ್ಲ. ನಾನು ಬರುವುದೇ ನೀವು ಮಕ್ಕಳನ್ನು 21 ಜನ್ಮಗಳಿಗೆ ರಾಜರಿಗೂ ರಾಜರನ್ನಾಗಿ ಮಾಡಲು ಅಂದಮೇಲೆ ಆಗಬೇಕಯಲ್ಲವೇ. ಯಾರು ಕಲ್ಪದ ಮೊದಲು ಆಗಿದ್ದರೋ ಅವರೇ ಆಗುವರು. ಎಷ್ಟು ಮಂದಿ ಪವಿತ್ರರಾಗುತ್ತಾರೆ, ಎಷ್ಟು ಮಂದಿ ಅಜಾಮಿಳರಂತಹ ಪಾಪಿಗಳಾಗುತ್ತಾರೆ, ಎಷ್ಟು ಅಶುದ್ಧ ಮೈಲಿಗೆ ಆಗಿ ಬಿಡುತ್ತಾರೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಮೈಲಿಗೆ ವಸ್ತ್ರಗಳನ್ನು ತಂದೆಯೇ ಬಂದು ಸ್ವಚ್ಛ ಮಾಡಬೇಕಾಗುತ್ತದೆ. ಆತ್ಮವೇ ಮೈಲಿಗೆ ಆಗುತ್ತದೆ. ತಂದೆಯು ಆತ್ಮರಿಗೇ ತಿಳಿಸುತ್ತಾರೆ – ಮಾಯಾರಾವಣನು ನಿಮ್ಮನ್ನು ಎಷ್ಟೊಂದು ಮೈಲಿಗೆಯನ್ನಾಗಿ ಮಾಡಿ ಬಿಟ್ಟಿದ್ದಾನೆ. ಕೇವಲ ಇದು ಒಂದು ಜನ್ಮದ ಮಾತಲ್ಲ. ಜನ್ಮ-ಜನ್ಮಾಂತರದ ಮಾತಾಗಿದೆ, ಇಂತಹ ಆತ್ಮರನ್ನು ಸ್ವಚ್ಛ ಮಡಲು ಲಕ್ಷ್ಯದ ಸೋಪನ್ನು (ಗುರಿ) ಕೊಡುತ್ತೇನೆ. ಮಕ್ಕಳೇ ನನ್ನನ್ನು ನೆನಪು ಮಾಡಿದಾಗ ನಂದಿ ಹೋಗುತ್ತಿರುವ ನೀವು ಆತ್ಮರು ಈ ಯೋಗದಿಂದ ಮತ್ತೆ ಜಾಗೃತರಾಗುವಿರಿ ಆದರೆ ಎಷ್ಟೆಷ್ಟು ನನ್ನನ್ನು ನೆನಪು ಮಾಡುತ್ತೀರೋ ಅಷ್ಟೇ ಆಗುತ್ತೀರಿ. ತಂದೆಯು ಸ್ಮೃತಿ ತರಿಸುತ್ತಿದ್ದಾರೆ, ನಾನು ನಿಮ್ಮನ್ನು ಸ್ವರ್ಗದಲ್ಲಿ ಕಳುಹಿಸಿದ್ದೆನು ಮತ್ತು ಮಾಯೆಯು ಮೈಲಿಗೆಯನ್ನಾಗಿ ಮಾಡಿದೆ. ಈಗ ಪುನಃ ನಾನು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ. ಈ ಬ್ರಹ್ಮಾರವರ ತನುವಿನಿಂದ ಶಿಕ್ಷಣವನ್ನು ನೀಡುತ್ತಿದ್ದೇನೆ. ಹೇ ಮಕ್ಕಳೇ! ಲೌಕಿಕ ತಂದೆಯನ್ನು ಬುದ್ಧಿಯಿಂದ ಮರೆಯಿರಿ. ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಮರೆತು ತಂದೆಯಾದ ನನ್ನನ್ನು ನೆನಪು ಮಾಡಿರಿ ಆಗ ನಿಮ್ಮ ಆತ್ಮವು ಸ್ವಚ್ಛ ಆಗುತ್ತಾ ಹೋಗುವುದು. ನಿಮಗೆ ಭವಿಷ್ಯದಲ್ಲಿ ಹೊಸ ಶರೀರವು ಸಿಗುವುದು. ತತ್ವಗಳೂ ಸಹ ಸತೋಪ್ರಧಾನವಾಗುತ್ತವೆ ಎಂದು ತಂದೆಯು ಆತ್ಮರೊಂದಿಗೆ ಮಾತನಾಡುತ್ತಾರೆ. ಹೇಳುತ್ತಾರೆ – ಈಗ ಈ ಹಳೆಯ ಪ್ರಪಂಚವನ್ನು ಮರೆಯುತ್ತಾ ಹೋಗಿ. ನನ್ನನ್ನು ನೆನಪು ಮಾಡುತ್ತಾ ಹೋದರೆ ನನ್ನ ಬಳಿ ಬಂದು ನಂತರ ಸ್ವರ್ಗದಲ್ಲಿ ಹೋಗುವಿರಿ. ಇದು ಹಳೆಯ ಪ್ರಪಂಚವಾಗಿದೆ. ಇದರಲ್ಲಿ ಯಾವುದೇ ವಸ್ತುವನ್ನು ತಯಾರು ಮಾಡಿದರೆ ಅದಕ್ಕೆ ಹೊಸ ಹೆಸರನ್ನು ಇಟ್ಟು ಬಿಡುತ್ತಾರೆ, ಉದಾಹರಣೆಗೆ ಹೊಸ ದೆಹಲಿ, ಹಳೆಯ ದೆಹಲಿ ಎಂದು ಹೇಳುತ್ತಾರೆ ಆದರೆ ಪ್ರಪಂಚವಂತೂ ಹಳೆಯದಲ್ಲವೇ. ಈಗ ನೀವು ಮಕ್ಕಳ ಬುದ್ಧಿಯೋಗವು ಈ ಹಳೆಯ ಪ್ರಪಂಚದಿಂದ ದೂರ ಸರಿಯಬೇಕು. ನೀವಾತ್ಮರ ಮನೆಯ ನಿರ್ವಾಣ ಧಾಮವಾಗಿದೆ. ಈಗ ಅಲ್ಲಿಗೆ ಹೋಗಬೇಕಾಗಿದೆ, ಆದುದರಿಂದ ತಮ್ಮನ್ನು ಆತ್ಮ ಎಂದು ನಿಶ್ಚಯ ಮಾಡಿಕೊಂಡು ನನ್ನನ್ನು ನೆನಪು ಮಾಡಿರಿ ಆಗ ಅಂತ್ಯಮತಿ ಸೋ ಗತಿ ಆಗುವುದು. ಮನುಷ್ಯರು ಅನೇಕರನ್ನು ನೆನಪು ಮಾಡುತ್ತಾರೆ, ಕೆಲವರು ಗುರುಗಳನ್ನು, ಕೆಲವರು ಕೃಷ್ಣನನ್ನು ನೆನಪು ಮಾಡುತ್ತಾರೆ, ಆದರೆ ಕೃಷ್ಣನು ಎಲ್ಲಿಂದ ಬಂದನು – ಇದು ಯಾರಿಗೂ ಗೊತ್ತಿಲ್ಲ. ಎಲ್ಲರೂ ಪುನರ್ಜನ್ಮದಲ್ಲಿ ಬರಲೇಬೇಕಾಗಿದೆ ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಈ ಪುನರ್ಜನ್ಮದ ಪದ್ಧತಿಯು ಸೃಷ್ಟಿಯ ಆದಿಯಿಂದಲೂ ನಡೆದು ಬಂದಿದೆ. ಸೃಷ್ಟಿಯ ಆದಿಯಲ್ಲಿ ದೇವೀ-ದೇವತೆಗಳು ಇದ್ದರು. ಅವಶ್ಯವಾಗಿ ಪುನರ್ಜನ್ಮವು ಅಲ್ಲಿಂದಲೇ ಆರಂಭವಾಗಿದೆ. ಮೊಟ್ಟ ಮೊದಲ ಪವಿತ್ರ ಮನುಷ್ಯ ಶ್ರೀ ಕೃಷ್ಣನಾಗಿದ್ದಾನೆ, ಆದ್ದರಿಂದ ಲಕ್ಷ್ಮೀ-ನಾರಾಯಣರಿಗಿಂತಲೂ ಶ್ರೀ ಕೃಷ್ಣನ ಮಹಿಮೆ ಹೆಚ್ಚು ಇದೆ ಏಕೆಂದರೆ ಮಕ್ಕಳು ಪವಿತ್ರ-ಸತೋಪ್ರಧಾನ ಆಗಿರುವುದರಿಂದ ಮಕ್ಕಳ ಮಹಿಮೆಯ ಗಾಯನವಿದೆ, ಆದ್ದರಿಂದ ಕೃಷ್ಣನ ಮಹಿಮೆಯು ಹೆಚ್ಚಾಗಿದೆ, ಆದರೆ ಕೃಷ್ಣಪುರಿ ಎಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಸತ್ಯಯುಗಕ್ಕೆ ವೈಕುಂಠವೆಂದು ಹೇಳುತ್ತಾರೆ ಆದರೆ ಕೃಷ್ಣನನ್ನು ದ್ವಾಪರದಲ್ಲಿ ಇದ್ದನೆಂದು ಏಕೆ ಹೇಳಿದ್ದಾರೆಯೋ ಗೊತ್ತಿಲ್ಲ. ಕೃಷ್ಣನು ಮತ್ತ್ಯಾವುದೇ ಸಮಯದಲ್ಲಿ ಅದೇ ನಾಮ-ರೂಪದಿಂದ ಬರಲು ಸಾಧ್ಯವಿಲ್ಲ. ಅದೇ ಹೆಸರು ಮತ್ತೊಂದು ಜನ್ಮದಲ್ಲಿ ಇರಲು ಸಾಧ್ಯವಿಲ್ಲ. ಶ್ರೀಕೃಷ್ಣನು ಸತ್ಯಯುಗದಲ್ಲಿ ಇದ್ದನು. ನಿಮಗೆ ತಿಳಿದಿದೆ, ಈ ಜಗದಂಬೆ, ಜಗತ್ಪಿತನು ಹೋಗಿ ಲಕ್ಷ್ಮೀ-ನಾರಾಯಣರಾಗುತ್ತಾರೆ. ಸತ್ಯಯುಗಕ್ಕೆ ಕೃಷ್ಣ ಪುರಿ ಎಂದು ಹೇಳಲಾಗುತ್ತದೆ. ಈಗಂತೂ ಕಂಸ ಪುರಿಯಾಗಿದೆ. ಇವೆಲ್ಲವೂ ಆಸುರಿ ಹೆಸರುಗಳಾಗಿವೆ. ಅಲ್ಲಿ ದೈವೀ ಸಂಪ್ರದಾಯದವರು ಇದ್ದರು. ಇಲ್ಲಿ ಆಸುರಿ ಸಂಪ್ರದಾಯದವರು ಇದ್ದಾರೆ. ತಂದೆಯು ಮಕ್ಕಳಿಗೆ ಇದೆಲ್ಲವನ್ನು ಸಂಗಮದಲ್ಲಿಯೇ ತಿಳಿಸುತ್ತಾರೆ. ಅವರು ರಚಯಿತನಾಗಿದ್ದಾರೆ. ಅವರಿಗೆ ಮನುಷ್ಯ ಸೃಷ್ಟಿಯ ಬೀಜರೂಪನೆಂದು ಹೇಳಲಾಗುತ್ತದೆ. ಅಂದಮೇಲೆ ಅವಶ್ಯವಾಗಿ ಹೊಸ ಮನುಷ್ಯ ಸೃಷ್ಟಿಯನ್ನು ರಚಿಸುತ್ತಾರೆ. ಬಾಬಾ ತಾವು ಪತಿತ ಪಾವನನಾಗಿದ್ದೀರಿ, ಈ ಪತಿತ ಸೃಷ್ಟಿಯನ್ನು ತಾವು ಬಂದು ಪಾವನ ಮಾಡಿ, ಪಾವನ ಸೃಷ್ಟಿಯನ್ನು ರಚಿಸಿ ಪತಿತ ಸೃಷ್ಟಿಯ ವಿನಾಶ ಮಾಡಿಸಿ ಎಂದು ನೀವು ಹಾಡುತ್ತೀರಿ. ಪತಿತ ಪಾವನ ತಂದೆಯು ಬ್ರಹ್ಮಾರವರ ಮೂಲಕ ಪಾವನ ಸೃಷ್ಟಿಯನ್ನು ರಚಿಸಿ ಪತಿತ ಸೃಷ್ಟಿಯನ್ನು ವಿನಾಶ ಮಾಡಿಸುತ್ತಾರೆ. ಈ ಮಾತುಗಳನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ಈಗ ನೀವು ಮಕ್ಕಳು ತಂದೆಯ ಜೊತೆ ಯೋಗವನ್ನಿಡುತ್ತೀರಿ, ಬಾಬಾರವರು ಹೇಗೆ ಮೈಲಿಗೆ ವಸ್ತ್ರವನ್ನು ಒಗೆಯುತ್ತಾರೆ ಈಗ ನೀವು ನೋಡುತ್ತಿದ್ದೀರಿ. ಕೆಲವು ವಸ್ತ್ರಗಳಂತೂ ಒಗೆಯುವಾಗ ಹರಿದೇ ಹೋಗುತ್ತದೆ. ಅಂದರೆ ಕೆಲವರು ಬಹಳ ಮೈಲಿಗೆ ಅಜಾಮಳರಂತ ಪಾಪಾತ್ಮರಿದ್ದಾರೆ, ಅವರಿಗೆ ಧಾರಣೆ ಆಗುವುದೇ ಇಲ್ಲ. ಹಾಗೆಯೇ ಎಷ್ಟು ಒಳ್ಳೆಯ ಮಾತುಗಳನ್ನು ತಿಳಿಸುತ್ತಾರೆ, ಮಧುರ ಮುದ್ದಾದ ಮಕ್ಕಳೇ ನಾನು ಅತೀ ಪ್ರಿಯ ತಂದೆಯನ್ನು ನೆನಪು ಮಾಡಿರಿ, ಪ್ರಿಯವಾದ ಸುಖಧಾಮವನ್ನು ನೆನಪು ಮಾಡಿರಿ. ಇದೂ ಸಹ ನಿಮಗೆ ಮಾತ್ರ ತಿಳಿದಿದೆ, ಪ್ರಪಂಚದಲ್ಲಿ ಯಾರಿಗೂ ಗೊತ್ತಿಲ್ಲ. ಈಗ ಇದು ಅತೀ ದುಃಖಧಾಮವಾಗಿದೆ, ಮನುಷ್ಯರು ತ್ರಾಹಿ-ತ್ರಾಹಿ ಎನ್ನುತ್ತಿದ್ದಾರೆ. ಒಬ್ಬರು ಇನ್ನೊಬ್ಬರನ್ನು ಸಾಯಿಸುತ್ತಿರುತ್ತಾರೆ. ಭಗವಂತನೇ ರಕ್ಷಣೆ ಮಾಡಿ ಎಂದು ಹೇಳುತ್ತಾರೆ. ಈ ಶಬ್ದವು ಅವಶ್ಯವಾಗಿ ಮುಖದಿಂದ ಹೊರಡುತ್ತದೆ ಏಕೆಂದರೆ ತಂದೆಯು ಮುಕ್ತಿದಾತನಾಗಿದ್ದಾರೆ.

ನೀವು ತಿಳಿದುಕೊಂಡಿದ್ದೀರಿ – ತಂದೆಯು ಇಡೀ ವಿಶ್ವದ ಮಕ್ಕಳನ್ನು ಅದರಲ್ಲಿಯೂ ವಿಶೇಷವಾಗಿ ನಿಮ್ಮನ್ನು ಸುಖಧಾಮದಲ್ಲಿ ಕರೆದುಕೊಂಡು ಹೋಗಲು ಬಂದಿದ್ದಾರೆ. ಈ ನಶೆಯು ನೀವು ಮಕ್ಕಳಲ್ಲಿ ನಂಬರ್ವಾರ್ ಇದೆ. ಈ ವಿದ್ಯೆಯು ಕಡಿಮೆ ಇಲ್ಲ. ತಂದೆಯು ನೋಡಿ ಯಾರಿಗೆ ಓದಿಸುತ್ತಿದ್ದಾರೆ! ಅಜಾಮಿಳರಂತ ಪಾಪಾತ್ಮರಿಗೆ ಓದಿಸಿ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ತಮೋಪ್ರಧಾನರಂತೂ ಎಲ್ಲರೂ ಆಗಿದ್ದಾರೆ. ಅವರನ್ನು ಸತೋಪ್ರಧಾನ ಪ್ರಪಂಚದಲ್ಲಿ ಕರೆದುಕೊಂಡು ಹೋಗಬೇಕಾಗುತ್ತದೆ. ಆದ್ದರಿಂದಲೇ ಮಕ್ಕಳಿಗೆ ಪದೇ-ಪದೇ ತಿಳಿಸುತ್ತಾರೆ – ಇಲ್ಲಿ ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಿರಿ. ಇಲ್ಲಿ ನಿಮಗೆ ಗುರಿ-ಧ್ಯೇಯವು ಬುದ್ಧಿಯಲ್ಲಿ ಇದೆ. ಈ ಪವಿತ್ರತೆಯ ಮ್ಯಾನರ್ಸನ್ನು ಮತ್ತೆ ಯಾರೂ ಕಲಿಸುವುದಿಲ್ಲ. ಸನ್ಯಾಸಿಗಳಾದರೂ ಮನೆ-ಮಠವನ್ನು ಬಿಡಿಸುತ್ತಾರೆ, ಆದರೆ ಇಲ್ಲಿ ತಂದೆಯು ತಿಳಿಸುತ್ತಾರೆ – ನೀವು ಮನೆಯನ್ನು ಬಿಡುವಂತಿಲ್ಲ, ಈ ಹಳೆಯ ಪ್ರಪಂಚವನ್ನು ಬಿಡಬೇಕಾಗಿದೆ ಅರ್ಥಾತ್ ಮರೆಯಬೇಕಾಗಿದೆ. ಅದು ಹದ್ದಿನ ಸನ್ಯಾಸ, ಇದು ಬೇಹದ್ದಿನ ಸನ್ಯಾಸವಾಗಿದೆ. ಆ ಸನ್ಯಾಸಿಗಳಿಗೂ ಎಷ್ಟೊಂದು ಮಾನ್ಯತೆ ಸಿಗುತ್ತದೆ? ಸಾಧು-ಸಮಾಜದವರು, ಸರ್ಕಾರಕ್ಕೂ ಮತ ಕೊಡುತ್ತಾರೆ. ಮುಂದೆ ಹೋದಂತೆ ಈ ಸನ್ಯಾಸಿ ಮೊದಲಾದವರೂ ನೀವು ಮಾತೆಯರ ಚರಣಗಳಿಗೆ ಬೀಳುವರು. ಮಾತೆಯರು ಇಲ್ಲದೆ ಅವರ ಉದ್ಧಾರ ಆಗಲು ಸಾಧ್ಯವಿಲ್ಲ ಏಕೆಂದರೆ ನೀವು ಜ್ಞಾನ ಕೊಡುತ್ತೀರಿ. ಉಳಿದಂತೆ ಚರಣಗಳಿಗೆ ಬೀಳುವ ಮಾತಿಲ್ಲ. ಹಾ! ಯಾರಾದರೂ ನಮಸ್ತೆ ಅಥವಾ ರಾಂ-ರಾಂ ಎಂದು ಹೇಳಿದರೆ ಅವರಿಗೆ ಪ್ರತ್ಯುತ್ತರ ನೀಡಬೇಕಾಗುತ್ತದೆ. ತಂದೆಯು ಸಹ ಮಕ್ಕಳೇ ನಮಸ್ತೆ ಎಂದು ಹೇಳುತ್ತಾರಲ್ಲವೇ. ನಾನು ನೀವು ಮಕ್ಕಳನ್ನು ನನಗಿಂತಲೂ ಶ್ರೇಷ್ಠರನ್ನಾಗಿ ಮಾಡುತ್ತೇನೆ. ನಿಮ್ಮನ್ನು ಬ್ರಹ್ಮಾಂಡ ಹಾಗೂ ಸೃಷ್ಟಿ ಎರಡಕ್ಕೂ ಮಾಲೀಕರನ್ನಾಗಿ ಮಾಡುತ್ತೇನೆ ಮತ್ತು ನಾನು ವಾನಪ್ರಸ್ಥದಲ್ಲಿ ಹೊರಟು ಹೋಗುತ್ತೇನೆ ಆದರೆ ನೀವೀಗ ಶ್ರೀಮತದಂತೆ ನಡೆಯಬೇಕಾಗಿದೆ. ಈ ಹಳೆಯ ಪ್ರಪಂಚದಿಂದ ಮುಖವನ್ನು ತಿರುಗಿಸಬೇಕಾಗಿದೆ. ರಾಮ, ರಾವಣ ಮತ್ತು ಸೀತೆಯ ಗೊಂಬೆಗಳು ಇರುತ್ತವೆಯಲ್ಲವೇ. ಸೀತೆಯು ರಾವಣನಿಗೆ ಬೆನ್ನು ತಿರುಗಿಸಿ ರಾಮನ ಕಡೆ ಮುಖ ಮಾಡುತ್ತಾಳೆ. ಇದನ್ನು ಗೊಂಬೆಗಳ ರೂಪದಲ್ಲಿ ತೋರಿಸಿದ್ದಾರೆ, ಹಾಗೆಯೇ ನರಕವನ್ನು ಕಾಲಿನಿಂದ ಒದೆಯುವ ಹಾಗೂ ಸ್ವರ್ಗವನ್ನು ಅಂಗೈಯಲ್ಲಿ ಹಿಡಿದಿರುವ ಕೃಷ್ಣನ ಚಿತ್ರವು ಇದೆ. ತಂದೆಯು ಬಹಳ ಚೆನ್ನಾಗಿ ತಿಳಿಸುತ್ತಾರೆ ಆದರೆ ಇಂತಹವರೊಂದಿಗೆ ವ್ಯಾಪಾರ ಮಾಡುವ ವ್ಯಾಪಾರಿಗಳೇ ವಿರಳ. ತಂದೆಗೆ ತಮ್ಮ ಹಳೆಯ ತನು-ಮನ-ಧನವನ್ನು ಕೊಟ್ಟು ಹೊಸದನ್ನು ಪಡೆಯಿರಿ. ಇದು ಬಹಳ ದೊಡ್ಡ ಇನ್ಶ್ಯೂರೆನ್ಸ್ ಆಗಿದೆ. ನೀವೀಗ ಆತ್ಮನನ್ನು ಪವಿತ್ರ ಮಾಡಿಕೊಂಡರೆ ಶರೀರವು ಪವಿತ್ರವಾದುದು ಸಿಗುವುದು. ಇದರಿಂದ ನಂತರ ನೀವು ಸ್ವರ್ಗದ ರಾಜ್ಯಭಾರ ಮಾಡುತ್ತೀರಿ, ಆದ್ದರಿಂದ ತಂದೆಗೆ ವ್ಯಾಪಾರಿ, ಜಾದೂಗಾರನೆಂದು ತಿಳಿಯುತ್ತಾರೆ. ಪತಿತರನ್ನು ಪಾವನರನ್ನಾಗಿ ಮಾಡುವುದು, ಇದು ಈಶ್ವರೀಯ ಜಾದು ಎಂದು ಹೇಳಬಹುದಲ್ಲವೇ. ನರಕವಾಸಿಗಳನ್ನು ಸ್ವರ್ಗವಾಸಿಗಳನ್ನಾಗಿ ಮಾಡಿರಿ ಎಂದು ಹೇಳುತ್ತೀರಿ ಅಂದಮೇಲೆ ಈ ರೀತಿ ಮಾಡುವುದು ಬಹಳ ಒಳ್ಳೆಯ ಜಾದು ಆಗಿದೆ. ಇದರಲ್ಲಿ ಬಹಳ ಪ್ರಾಪ್ತಿ ಇದೆ. ಆದ್ದರಿಂದ ರಾಜರಿಗೂ ರಾಜರಾಗಿ, ಫಾಲೋ ಮಾಡಿರಿ, ನಾನು ಕುಳಿತಿದ್ದೇನೆ ಎಂದು ತಂದೆಯು ಹೇಳುತ್ತಾರೆ. ಇವರು (ಬ್ರಹ್ಮಾ) ಅದರ್ಕುಮಾರನಾಗಿದ್ದಾರೆ, ಮಮ್ಮಾರವರು ಕುಮಾರಿ, ಕನ್ಯೆಯಾಗಿದ್ದಾರೆ, ಆದ್ದರಿಂದ ಅವರನ್ನು ಫಾಲೋ ಮಾಡಬೇಕಾಗಿದೆ. ಆಸ್ತಿಯು ತಂದೆಯಿಂದಲೇ ಸಿಗುವುದು. ಆದ್ದರಿಂದ ನಾವು ಸಹೋದರ-ಸಹೋದರಿಯರು ತಂದೆಯಿಂದ ಆಸ್ತಿಯನ್ನು ಪಡೆಯುತ್ತೇವೆಂದು ನೀವು ಹೇಳುತ್ತೀರಿ. ಲೌಕಿಕ ರೀತಿಯಿಂದ ನೋಡಿದಾಗ ಸಹೋದರಿಗೆ ಆಸ್ತಿ ಸಿಗುವುದಿಲ್ಲ, ಸಹೋದರನಿಗೆ ಸಿಗುತ್ತದೆ. ಇಲ್ಲಂತೂ ನಿಮ್ಮೆಲ್ಲರಿಗೂ ಸಿಗುವುದು ಏಕೆಂದರೆ ನೀವೆಲ್ಲರೂ ಆತ್ಮರಾಗಿದ್ದೀರಲ್ಲವೇ. ನೀವೀಗ ನನ್ನ ಬಳಿ ಬರಬೇಕಾಗಿದೆ ಎಂದು ತಂದೆಯು ಹೇಳುತ್ತಾರೆ. ತಂದೆಯ ಬಳಿ ಹೋದ ಮೇಲೆ ಸಹೋದರ-ಸಹೋದರಿಯ ಸಂಬಂಧವು ಬಿಟ್ಟು ಹೋಗುವುದು. ಅಲ್ಲಿ ಕೇವಲ ತಂದೆಯ-ಮಕ್ಕಳ ಸಂಬಂಧ ಇರುವುದು. ಆದ್ದರಿಂದ ನಾವೆಲ್ಲರೂ ಸಹೋದರರು ಎಂದು ಹೇಳುತ್ತೀರಿ. ಒಂದುವೇಳೆ ಈಶ್ವರನಿಗೆ ಸರ್ವವ್ಯಾಪಿ ಎಂದು ಹೇಳಿದರೆ ವಿಶ್ವ ಪಿತೃತ್ವವಾಗುತ್ತದೆ ಅಂದರೆ ಎಲ್ಲರೂ ಪರಮಾತ್ಮನೆಂದರ್ಥ. ನೋಡಿ! ಈ ಸರ್ವವ್ಯಾಪಿಯ ಜ್ಞಾನವು ಎಷ್ಟೊಂದು ನಷ್ಟವನ್ನು ಉಂಟು ಮಾಡಿದೆ.

ಈಗ ನೀವು ಮಕ್ಕಳ ಬಳಿ ತಂದೆಯ ನೆನಪಿದೆ. ತಂದೆಯನ್ನು ನೆನಪು ಮಾಡುವುದರಲ್ಲಿಯೇ ಹೆಚ್ಚು ಶ್ರಮವಿದೆ. ನಿಮಗೆ ಯಾರಾದರೂ ಯೋಗ ಮಾಡಿಸಬೇಕು ಎಂಬ ಆಧಾರವು ಇರಬಾರದು ಏಕೆಂದರೆ ನಿಮಗೆ ಲಕ್ಷ್ಯವಂತೂ ಸಿಕ್ಕಿದೆ, ಇಲ್ಲಿ ಕೇವಲ ಮುರಳಿಯನ್ನು ಓದಿ ತಿಳಿಸುತ್ತೀರಿ, ಯೋಗವು ಸದಾ ಇರುತ್ತದೆ ಅಂದರೆ ಮುರಳಿಯನ್ನು ಕೇಳಿದ ಮೇಲೆ ನಡೆಯುತ್ತಾ-ತಿರುಗಾಡುತ್ತಾ ನೆನಪಿನಲ್ಲಿ ಇರಬಹುದಾಗಿದೆ. ನಾವು ಯಾತ್ರೆಯಲ್ಲಿ ಹೋಗುತ್ತಿದ್ದೇವೆ, ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ನೆನಪಿನಲ್ಲಿ ಇರಬೇಕು. 8 ಗಂಟೆಗಳು ನಿಮ್ಮ ಸೇವೆಯನ್ನೇ ಮಾಡಿಕೊಳ್ಳಿರಿ. ಅನುಮತಿ ಇದೆ. ಉಳಿದ ಸಮಯವನ್ನು ನೆನಪಿನ ಯಾತ್ರೆಯಲ್ಲಿ ಕೊಡಬೇಕಾಗಿದೆ. ಮೂಲ ಮಾತು ಪವಿತ್ರತೆಯದಾಗಿದೆ. ನೀವು ತಿಳಿದುಕೊಂಡಿದ್ದೀರಿ – ಇದು ಮುಳ್ಳುಗಳ ಕಾಡಾಗಿದೆ. ಒಬ್ಬರು ಇನ್ನೊಬ್ಬರಿಗೆ ಮುಳ್ಳು ಚುಚ್ಚುತ್ತಿರುತ್ತಾರೆ. ತಂದೆಯು ಹೇಳುತ್ತಾರೆ ಮಕ್ಕಳೇ ಶ್ರೀಮತದಂತೆ ನಡೆಯಿರಿ. ಮುರಳಿ ನುಡಿಸುವಾಗ ಶಿವ ತಂದೆಯು ಮಾತನಾಡುತ್ತಾರೆ, ಬ್ರಹ್ಮಾ ತಂದೆಯು ಮಾತನಾಡುತ್ತಾರೆ ಆದರೆ ಶಿವ ತಂದೆ ನಮಗೆ ಓದಿಸುತ್ತಾರೆ ಎಂಬುದು ನಿಮಗೆ ತಿಳಿದಿದೆ. ನೀವು ವಿದ್ಯಾರ್ಥಿಗಳಾಗಿದ್ದೀರಿ. ಶಿವ ತಂದೆಯು ನಮಗೆ ತಂದೆಯು ಆಗಿದ್ದಾರೆ, ಶಿಕ್ಷಕ, ಸದ್ಗುರುವೂ ಆಗಿದ್ದಾರೆ. ನಾನು ನಿಮ್ಮನ್ನು ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಗ್ಯಾರೆಂಟಿ ನೀಡುತ್ತಾರೆ. ಈ ಗ್ಯಾರೆಂಟಿಯನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ತಂದೆಯು ಸುಖವನ್ನು ಕೊಡುವಂತಹ ಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ಆ ತಂದೆಯನ್ನು ಯಾರೂ ತಿಳಿದುಕೊಂಡಿಲ್ಲ. ಒಂದುವೇಳೆ ತಂದೆಯನ್ನು ಅರಿತುಕೊಂಡರೆ ತಂದೆಯ ಆಸ್ತಿಯನ್ನು ಅರಿತುಕೊಳ್ಳುವರು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಗುರಿ, ಧ್ಯೇಯವನ್ನು ಸದಾ ಮುಂದಿಟ್ಟುಕೊಂಡು ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಸತೋಪ್ರಧಾನ ಪ್ರಪಂಚದಲ್ಲಿ ಹೋಗಲು ಪವಿತ್ರತೆಯ ನಡವಳಿಕೆಯನ್ನು ಧಾರಣೆ ಮಾಡಿಕೊಳ್ಳಬೇಕು, ಬುದ್ಧಿಯಿಂದ ಬೇಹದ್ದಿನ ಸನ್ಯಾಸ ಮಾಡಬೇಕಾಗಿದೆ.

2. ಅತೀ ಪ್ರಿಯವಾದ ತಂದೆಯನ್ನು ಹಾಗೂ ತಮ್ಮ ಸುಖಧಾಮವನ್ನು ನೆನಪು ಮಾಡಬೇಕಾಗಿದೆ. ಈ ದುಃಖಧಾಮದಿಂದ ಬುದ್ಧಿಯೋಗವನ್ನು ತೆಗೆಯಬೇಕಾಗಿದೆ.

ವರದಾನ:-

ಯಾರೆಷ್ಟು ಯೋಗಿ ಆಗಿರುತ್ತಾರೆಯೋ, ಅವರಿಗಷ್ಟೇ ಸಹಯೋಗವು ಅವಶ್ಯವಾಗಿ ಪ್ರಾಪ್ತಿಯಾಗುವುದು. ಯೋಗ ಸಂಬಂಧ ಅಥವಾ ಸ್ನೇಹದ ಬೀಜದೊಂದಿಗೆ ಇರುವ ಕಾರಣ, ಅದರ ರಿಟರ್ನ್ನಲ್ಲಿ ಸರ್ವರ ಸಹಯೋಗವು ಪ್ರಾಪ್ತಿಯಾಗುವುದು. ಅಂದಾಗ ಬೀಜದೊಂದಿಗೆ ಸಂಬಂಧವನ್ನಿಡುವವರು, ಬೀಜಕ್ಕೆ ಸ್ನೇಹದ ಜಲವನ್ನು ನೀಡುವವರು, ಸರ್ವಾತ್ಮರ ಮೂಲಕ ಸಹಯೋಗವೆಂಬ ಫಲವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ ಏಕೆಂದರೆ ಬೀಜದೊಂದಿಗೆ ಸಂಬಂಧವಿರುವ ಕಾರಣ ಇಡೀ ವೃಕ್ಷದ ಜೊತೆ ಸಂಬಂಧವಾಗಿ ಬಿಡುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top