23 June 2021 KANNADA Murli Today | Brahma Kumaris

23 June 2021 Read and Listen today’s Gyan Murli in Kannada

June 22, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೆನಪಿನಿಂದ ಆತ್ಮದಲ್ಲಿರುವ ಕೊಳಕು ತೆಗೆಯುತ್ತಾ ಹೋಗಿ, ಆತ್ಮವು ಯಾವಾಗ ಸಂಪೂರ್ಣ ಪಾವನವಾಗುತ್ತದೆಯೋ ಆಗ ಮನೆಗೆ ಹೋಗಬಹುದು”

ಪ್ರಶ್ನೆ:: -

ಈ ಅಂತಿಮ ಜನ್ಮದಲ್ಲಿ ತಂದೆಯ ಯಾವ ಡೈರೆಕ್ಷನ್ನ್ನು ಪಾಲನೆ ಮಾಡುವುದರಲ್ಲಿ ಮಕ್ಕಳ ಕಲ್ಯಾಣವಿದೆ?

ಉತ್ತರ:-

ತಂದೆಯು ತಿಳಿಸುತ್ತಾರೆ – ಮಧುರ ಮಕ್ಕಳೇ, ಈ ಅಂತಿಮ ಜನ್ಮದಲ್ಲಿ ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಿ, ಬುದ್ಧಿಯನ್ನು ಹೊರಗಡೆ ಅಲೆಯಲು ಬಿಡಬೇಡಿ, ವಿಷವನ್ನು ಬಿಟ್ಟು ಅಮೃತವನ್ನು ಕುಡಿಯಿರಿ. ಈ ಅಂತಿಮ ಜನ್ಮದಲ್ಲಿಯೇ ನೀವು 63 ಜನ್ಮಗಳ ಅಭ್ಯಾಸವನ್ನು ತೆಗೆದುಹಾಕಬೇಕು ಆದ್ದರಿಂದ ರಾತ್ರಿ-ಹಗಲು ಪರಿಶ್ರಮ ಪಟ್ಟು ದೇಹೀ-ಅಭಿಮಾನಿಯಾಗಿ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಶಾಂತಿಧಾಮವು ವಿಶ್ರಾಮ ಪುರಿಯಾಗಿದೆ. ಈ ಪ್ರಪಂಚದಿಂದ ಎಲ್ಲರೂ ಸುಸ್ತಾಗಿದ್ದಾರೆ, ನಾವು ನಮ್ಮ ಸುಖಧಾಮಕ್ಕೆ ಹೋಗಬೇಕೆಂದು ಎಲ್ಲರೂ ಇಚ್ಛಿಸುತ್ತಾರೆ. ಈ ಪ್ರಪಂಚವು ಯಾರಿಗೂ ಚೆನ್ನಾಗಿದೆ ಅನಿಸುವುದಿಲ್ಲ. ಸ್ವರ್ಗವನ್ನು ನೋಡುತ್ತೀರೆಂದರೆ ನರಕದ ಕಡೆ ಮನಸ್ಸು ಹೇಗೆ ಹೋಗುತ್ತದೆ! ಬಾಬಾ, ಬೇಗ ಈ ದುಃಖದ ಪ್ರಪಂಚದಿಂದ ಕರೆದುಕೊಂಡು ಹೋಗು ಎಂದು ಹೇಳುತ್ತಾರೆ. ಇದಂತೂ ಛೀ ಛೀ ಪ್ರಪಂಚವಾಗಿದೆ, ಇದರ ಹೆಸರೇ ಭೂತಗಳ ಪ್ರಪಂಚ, ನರಕ ಎಂದು ತಂದೆಯು ತಿಳಿಸುತ್ತಾರೆ. ಇದೇನೂ ಒಳ್ಳೆಯ ಅಕ್ಷರವಾಗಿದೆಯೇ? ಆ ದೇವತೆಗಳ ಪ್ರಪಂಚವೆಲ್ಲಿ, ಈ ಭೂತಗಳ ಪ್ರಪಂಚವೆಲ್ಲಿ! ಈ ಭೂತಗಳ ಪ್ರಪಂಚದಲ್ಲಿ ಎಲ್ಲರೂ ಸುಸ್ತಾಗಿ ಬಿಟ್ಟಿದ್ದಾರೆ ಆದರೆ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ತಮೋಪ್ರಧಾನದ ತುಕ್ಕು ಹಿಡಿದು ಬಿಟ್ಟಿದೆ. ಆ ತುಕ್ಕನ್ನು ಆತ್ಮನಿಂದ ಹೊರ ತೆಗೆಯಬೇಕು, ಅದಕ್ಕಾಗಿಯೇ ಪುರುಷಾರ್ಥ ಮಾಡುತ್ತಿದ್ದೀರಿ. ಯಾರು ಒಳ್ಳೆಯ ಪುರುಷಾರ್ಥಿಗಳಿದ್ದೀರೋ ಅವರ ಸ್ಥಿತಿಯು ಬಹಳ ಚೆನ್ನಾಗಿರುವುದು. ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ, ಇನ್ನು ಕೆಲವೇ ದಿನಗಳಿವೆ. ಎಲ್ಲಿಯರೆಗೆ ತಂದೆಯು ಹಿಂತಿರುಗಿ ಕರೆದುಕೊಂಡು ಹೋಗುವುದಿಲ್ಲವೋ ಅಲ್ಲಿಯವರೆಗೂ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಪ್ರಪಂಚದಲ್ಲಿ ಬಹಳ ದುಃಖವಿದೆಯಲ್ಲವೆ. ಮನೆಯಲ್ಲಿಯೂ ಸಹ ಯಾವುದಾದರೊಂದು ದುಃಖವಿರುತ್ತದೆ, ನೀವು ಮಕ್ಕಳ ಹೃದಯದಲ್ಲಿ ಇದೆ – ಬಾಬಾ ನಮ್ಮನ್ನು ದುಃಖದಿಂದ ಬಿಡಿಸಲು ಬಂದಿದ್ದಾರೆ. ಯಾರು ಬಹಳ ಒಳ್ಳೆಯ ನಿಶ್ಚಯ ಬುದ್ಧಿಯವರಿರುತ್ತಾರೆಯೋ ಅವರು ತಂದೆಯ ನೆನಪನ್ನು ಮರೆಯಲು ಸಾಧ್ಯವೇ ಇಲ್ಲ. ಅವರನ್ನು ಸರ್ವರ ದುಃಖಹರ್ತನೆಂದು ಕರೆಯುತ್ತಾರೆ. ಮಕ್ಕಳೇ ತಂದೆಯನ್ನು ಗುರುತಿಸುತ್ತಾರೆ, ಒಂದುವೇಳೆ ಎಲ್ಲರೂ ಗುರುತಿಸಿದರೆಂದರೆ ಇಷ್ಟೊಂದು ಮನುಷ್ಯರು ಎಲ್ಲಿ ಕುಳಿತುಕೊಳ್ಳುವರು, ಇದು ಆಗಲು ಸಾಧ್ಯವಿಲ್ಲ ಆದ್ದರಿಂದ ಡ್ರಾಮಾದಲ್ಲಿ ಯುಕ್ತಿ ರಚನೆಯಾಗಿದೆ. ಯಾರು ಶ್ರೀಮತದಂತೆ ನಡೆಯುತ್ತಾರೆಯೋ ಅವರೇ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ, ಅದಂತೂ ಸರಿಯಲ್ಲವೆ. ಶಿಕ್ಷೆಯನ್ನನುಭವಿಸಿ ಶಾಂತಿಧಾಮಕ್ಕೆ ಅಥವಾ ಪಾವನ ಪ್ರಪಂಚಕ್ಕೆ ಹೊರಟು ಹೋಗುವರು ಆದರೆ ಶ್ರೇಷ್ಠ ಪದವಿಯನ್ನು ಪಡೆಯಲು ಪುರುಷಾರ್ಥ ಮಾಡಬೇಕಾಗಿದೆ. ಇನ್ನೊಂದಾಗಿದೆ – ಪಾವನರಾಗದೆ ಪಾವನ ಪ್ರಪಂಚಕ್ಕೆ ಯಾರೂ ಹೋಗಲು ಸಾಧ್ಯವಿಲ್ಲ. ಇಂತಹವರು ಜ್ಯೋತಿ ಜ್ಯೋತಿಯಲ್ಲಿ ಸಮಾವೇಶವಾದರು, ಹಿಂತಿರುಗಿ ಹೋದರು ಎಂದು ಹೇಳುತ್ತಾರೆ ಆದರೆ ಇದು ಸಾಧ್ಯವಿಲ್ಲ. ಯಾರು ಮೊಟ್ಟ ಮೊದಲು ಸೃಷ್ಟಿಯಲ್ಲಿ ಬಂದಿದ್ದಾರೆ, ಲಕ್ಷ್ಮೀ-ನಾರಾಯಣರೇ ಹಿಂತಿರುಗಿ ಹೋಗಿಲ್ಲವೆಂದರೆ ಬೇರೆ ಯಾರು ಹೋಗಲು ಸಾಧ್ಯ! ಅವರದೇ ಈಗ 84 ಜನ್ಮಗಳು ಪೂರ್ಣವಾಗಿದೆ. ಈಗ ಹಿಂತಿರುಗಿ ಹೋಗಲು ತಪಸ್ಸು ಮಾಡುತ್ತಿದ್ದಾರೆ. ಎಲ್ಲರೂ ಒಬ್ಬ ತಂದೆಯನ್ನೇ ಓ ಗಾಡ್ ಫಾದರ್, ಓ ಮುಕ್ತಿದಾತ ಎಂದು ಕರೆಯುತ್ತಾರೆ, ಅವರೇ ಗಾಡ್ಫಾದರ್ ಆಗಿದ್ದಾರೆ, ದುಃಖಹರ್ತ-ಸುಖಕರ್ತನೂ ಆಗಿದ್ದಾರೆ. ಕೃಷ್ಣ ಅಥವಾ ಮತ್ತ್ಯಾರನ್ನಾದರೂ ಕರೆಯುತ್ತಾರೆಯೇ! ಕ್ರಿಶ್ಚಿಯನ್ನರು ಇರಲಿ, ಮುಸಲ್ಮಾನರಿರಲಿ ಎಲ್ಲರೂ ಓ ಗಾಡ್ಫಾದರ್ ಎಂದೇ ಕರೆಯುತ್ತಾರೆ. ಆತ್ಮವು ತನ್ನ ತಂದೆಯನ್ನು ಕರೆಯುತ್ತದೆ. ತಂದೆ ಎಂದು ಕರೆಯುತ್ತಾರೆ ಅಂದಮೇಲೆ ನಾವೆಲ್ಲರೂ ಆತ್ಮಗಳೆಂದು ಆಗ ತಿಳಿದುಕೊಳ್ಳುತ್ತಾರೆ. ಆತ್ಮವೂ ಸಹ ಒಂದು ವಸ್ತುವಲ್ಲವೆ! ಆತ್ಮವು ಯಾವುದೇ ದೊಡ್ಡ ಗಾತ್ರದಲ್ಲಿಲ್ಲ. ಅದು ಒಂದು ನಕ್ಷತ್ರ, ಅತಿ ಸೂಕ್ಷ್ಮವಾಗಿದೆ. ಹೇಗೆ ತಂದೆಯಿದ್ದಾರೆಯೋ ಹಾಗೆಯೇ ಆತ್ಮನ ಸ್ವರೂಪವೂ ಇದೆ. ಈಗ ನೀವು ತಂದೆಯ ಮಹಿಮೆಯನ್ನು ಮಾಡುತ್ತೀರಿ, ಅವರು ಸತ್ಚಿತ್ ಜ್ಞಾನ ಸಾಗರ, ಆನಂದ ಸಾಗರನಾಗಿದ್ದಾರೆ. ನೀವಾತ್ಮರೂ ಸಹ ಅವರ ಸಮಾನರಾಗುತ್ತೀರಿ. ನಿಮ್ಮ ಬುದ್ಧಿಯಲ್ಲಿ ಈಗ ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನ ತಿಳಿದಿದೆ ಮತ್ತ್ಯಾವುದೇ ಮನುಷ್ಯ ಮಾತ್ರರಿಗೂ ತಿಳಿದಿಲ್ಲ. ಇಡೀ ಭಾರತ, ವಿದೇಶವನ್ನು ಹುಡುಕಿನೋಡಿ, ಯಾರಿಗೂ ಗೊತ್ತಿಲ್ಲ.ಆತ್ಮವು 84 ಜನ್ಮಗಳನ್ನು ಅಭಿನಯಿಸುತ್ತದೆ, 84 ಲಕ್ಷವಂತೂ ಅಸಾಧ್ಯವಾಗಿದೆ. 84 ಲಕ್ಷ ಜನ್ಮಗಳನ್ನು ಯಾರೂ ವರ್ಣನೆ ಮಾಡಲು ಸಾಧ್ಯವಿಲ್ಲ. ನೀವೇ ನಿಮ್ಮ ಜನ್ಮಗಳನ್ನು ತಿಳಿದುಕೊಂಡಿಲ್ಲ, ನಾನೇ ತಿಳಿಸುತ್ತೇನೆ ಎಂದು ತಂದೆಯು ತಿಳಿಸುತ್ತಾರೆ. ಅವರೆಲ್ಲರೂ ಕೇಳುತ್ತಿದ್ದರೂ ಸಹ ಕಲ್ಲು ಬುದ್ಧಿಯವರು ಅರ್ಥವೇ ಮಾಡಿಕೊಳ್ಳುವುದಿಲ್ಲ, 84 ಲಕ್ಷ ಜನ್ಮಗಳೆಂದು ಹೇಗೆ ಹೇಳಲು ಸಾಧ್ಯ!

ನಾವು ಬ್ರಾಹ್ಮಣರೆಂದು ಈಗ ನೀವು ತಿಳಿದಿದ್ದೀರಿ. ನಾವು 84 ಜನ್ಮಗಳನ್ನು ಪಡೆದಿದ್ದೇವೆ, ಬ್ರಹ್ಮನೂ ಹಾಗೂ ವಿಷ್ಣುವೂ ಸಹ 84 ಜನ್ಮಗಳನ್ನು ಪಡೆದಿದ್ದಾರೆ. ಬ್ರಹ್ಮಾ ಸೋ ವಿಷ್ಣು, ವಿಷ್ಣು ಸೋ ಬ್ರಹ್ಮ, ಲಕ್ಷ್ಮೀ-ನಾರಾಯಣರೇ 84 ಜನ್ಮಗಳನ್ನು ಪಡೆದು ಬ್ರಹ್ಮಾ-ಸರಸ್ವತಿಯರಾಗುತ್ತಾರೆ. ಇದೂ ಸಹ ತಿಳಿದುಕೊಳ್ಳುವ ಮಾತಾಗಿದೆಯಲ್ಲವೆ. 5000 ವರ್ಷಗಳ ನಂತರ ಬಂದು ಮತ್ತೆ ತಿಳಿಸುತ್ತೇನೆ. 5000 ವರ್ಷಗಳ ಚಕ್ರವಾಗಿದೆ. ಈಗ ನಿಮಗೆ ವರ್ಣಗಳ ರಹಸ್ಯವು ತಿಳಿದಿದೆ. ಹಮ್ ಸೋನ ಅರ್ಥವೂ ಸಹ ತಿಳಿದಿದೆ, ನಾವಾತ್ಮರು ದೇವತೆಗಳಾಗುತ್ತೇವೆ ನಂತರ ಕ್ಷತ್ರಿಯ, ನಾವೇ ವೈಶ್ಯ-ಶೂದ್ರರಾಗುತ್ತೇವೆ. ಇಷ್ಟಿಷ್ಟು ಜನ್ಮಗಳನ್ನು ಪಡೆಯುತ್ತೇವೆ, ನಂತರ ನಾವೇ ಬ್ರಾಹ್ಮಣರಾಗುತ್ತೇವೆ. ಬ್ರಾಹ್ಮಣರದು ಇದು ಒಂದುಜನ್ಮವಾಗಿದೆ. ಇದು ನಿಮ್ಮ ವಜ್ರ ಸಮಾನ ಜನ್ಮವಾಗಿದೆ.

ತಂದೆಯು ತಿಳಿಸುತ್ತಾರೆ – ಇದು ನಿಮ್ಮ ಉತ್ತಮ ಶರೀರವಾಗಿದೆ, ಇದರಿಂದ ನೀವು ಸ್ವರ್ಗದ ಆಸ್ತಿಯನ್ನು ಪಡೆಯುತ್ತೀರಿ ಆದ್ದರಿಂದ ಈಗ ಮತ್ತ್ಯಾವ ಕಡೆಯೂ ಅಲೆಯಬಾರದು, ಜ್ಞಾನಾಮೃತವನ್ನು ಕುಡಿಯಿರಿ. ಅವಶ್ಯವಾಗಿ 84 ಜನ್ಮಗಳನ್ನೂ ತೆಗೆದುಕೊಳ್ಳುತ್ತೇವೆಂದು ತಿಳಿದು ಬರುತ್ತದೆ, ಮೊದಲು ನೀವು ಸತ್ಯಯುಗದಲ್ಲಿ ಸತೋಪ್ರಧಾನರಾಗಿದ್ದಿರಿ, ನಂತರ ಸತೋ ಅದಿರಿ, ನಂತರ ಬೆಳ್ಳಿ ಮಿಶ್ರಣವಾಯಿತು. ಲೆಕ್ಕವನ್ನು ತಿಳಿಸುತ್ತಾರೆ. ಈಗ ಸರ್ಕಾರವೂ ಸಹ ಹೇಳುತ್ತದೆ – ಚಿನ್ನದಲ್ಲಿ ಇಷ್ಟು ಮಿಶ್ರಣವನ್ನು ಬೆರೆಸಿ ಎಂದು. 14 ಕ್ಯಾರೇಟ್ ಚಿನ್ನವನ್ನು ಹಾಕಿಕೊಳ್ಳಿ. ಚಿನ್ನದಲ್ಲಿ ಲೋಹ ಬೆರೆಸಿ, ಇದನ್ನು ಭಾರತದವರು ಅಪಶಕುನವೆಂದು ತಿಳಿಯುತ್ತಾರೆ. ವಿವಾಹ ಮಾಡುತ್ತಾರೆಂದರೆ ಸಂಪೂರ್ಣ ಅಪ್ಪಟ ಚಿನ್ನವನ್ನು ಧರಿಸುತ್ತಾರೆ. ಚಿನ್ನದ ಮೇಲೂ ಸಹ ಭಾರತವಾಸಿಗಳಿಗೆ ಬಹಳ ಪ್ರೀತಿಯಿದೆ. ಭಾರತದ ಮಾತನ್ನು ಕೇಳಲೇಬೇಡಿ. ಸತ್ಯಯುಗದಲ್ಲಿ ಚಿನ್ನದ ಮಹಲುಗಳಿದ್ದವು, ಚಿನ್ನದ ಇಟ್ಟಿಗೆಗಳಿಂದ ಮಾಡಲ್ಪಟ್ಟಿದ್ದವು. ಇಲ್ಲಿ ಇಟ್ಟಿಗೆ ಹೇರಳವಾಗಿರುತ್ತವೆ, ಅಲ್ಲಿ ಚಿನ್ನ-ಬೆಳ್ಳಿಯು ಹೇರಳವಾಗಿರುತ್ತದೆ. ಮಾಯಾಮಚ್ಛಂದರ್ನ ಆಟವನ್ನು ತೋರಿಸುತ್ತಾರೆ. ಅವನು ಚಿನ್ನದ ಇಟ್ಟಿಗೆಯನ್ನು ನೋಡಿ ತೆಗೆದುಕೊಂಡು ಹೋಗೋಣ ಎಂದು ಯೋಚಿಸುತ್ತಾನೆ. ಕೆಳಗೆ ಇಳಿದು ನೋಡಿದರೆ ಏನೂ ಇಲ್ಲ. ಏನೋ ಅಲ್ಪಸ್ವಲ್ಪ ಇರಬೇಕಲ್ಲವೆ. ಮಕ್ಕಳು ತಿಳಿಯುತ್ತಾರೆ – ಈಗ ನಾವು ಪುನಃ ಸ್ವರ್ಗದಲ್ಲಿ ಹೋಗುತ್ತೇವೆ, ಒಂದುವೇಳೆ ಪತಿ ಅಥವಾ ಯಾರಾದರೂ ತೊಂದರೆ ಕೊಡುತ್ತಾರೆಂದರೆ ಪಾಪ! ಒಳಗೆ ಅಳುತ್ತಾಳೆ. ನಾವು ಯಾವಾಗ ಸುಖಧಾಮದಲ್ಲಿ ಹೋಗುತ್ತೇವೆ, ಈಗ ಬೇಗ ಸಾಕು ಮಾಡಿ ಎನ್ನುತ್ತಾರೆ. ಆದರೆ ಬೇಗ ಹೇಗೆ ಮಾಡಲಿ, ಮೊದಲು ಯೋಗಬಲದಿಂದ ನಿಮ್ಮಲ್ಲಿರುವ ಕೊಳಕನ್ನು ತೆಗೆದುಹಾಕಬೇಕು. ನೆನಪಿನ ಯಾತ್ರೆಯಲ್ಲಿ ಇರಬೇಕೆಂದು ತಂದೆಯು ಧೈರ್ಯ ಕೊಡುತ್ತಾರೆ. ಪತಿತ-ಪಾವನನನ್ನೇ ಕರೆಯುತ್ತಾರೆ. ಸರ್ವರ ಸದ್ಗತಿದಾತ ಒಬ್ಬನೇ ಆಗಿದ್ದಾರೆ ಎಂದು ಗಾಯನವಿದೆ, ಇದೆಲ್ಲವೂ ಇಲ್ಲಿಯ ಮಾತೇ ಆಗಿದೆ. ಅಕಾಸುರ-ಬಕಾಸುರ ಎಲ್ಲಾ ಇಲ್ಲಿಯ ಸಂಗಮ ಸಮಯದ್ದೇ ಆಗಿದೆ. ಇದು ಆಸುರೀ ಪ್ರಪಂಚವಾಗಿದೆ. ನಾನು ಕಲ್ಪ-ಕಲ್ಪ ಸಂಗಮದಲ್ಲಿ ಬರುತ್ತೇನೆಂದು ತಂದೆಯು ತಿಳಿಸುತ್ತಾರೆ. ಯಾವಾಗ ಇಡೀ ವೃಕ್ಷವು ಜಡಜಡೀಭೂತ ಸ್ಥಿತಿಯಾಗುತ್ತದೆಯೋ ಆಗ ನಾನು ಬರುತ್ತೇನೆ.

ನೀವು ತಿಳಿದುಕೊಂಡಿದ್ದೀರಿ – ಸತ್ಯಯುಗದಲ್ಲಿ ಪ್ರತಿಯೊಂದು ವಸ್ತುವು ಸತೋಪ್ರಧಾನವಾಗಿರುತ್ತದೆ. ಇಲ್ಲಿ ಇಷ್ಟೊಂದು ಪಕ್ಷಿ, ಪ್ರಾಣಿ ಇತ್ಯಾದಿಗಳೆಲ್ಲವೂ ಇದೆ, ಅಲ್ಲಿ ಇಷ್ಟೊಂದಿರುವುದಿಲ್ಲ. ದೊಡ್ಡ ವ್ಯಕ್ತಿಗಳ ಬಳಿ ಬಹಳ ಸ್ವಚ್ಛತೆಯಿರುತ್ತದೆ. ಅವರು ಇರುವಂತಹ ಸ್ಥಳ, ಪೀಠೋಪಕರಣಗಳು ಬಹಳ ಚೆನ್ನಾಗಿರುತ್ತದೆ. ನೀವೂ ಸಹ ಅಷ್ಟು ಶ್ರೇಷ್ಠ ದೇವತೆಗಳಾಗುತ್ತೀರಿ. ಅಲ್ಲಿ ಯಾವುದೇ ಛೀ ಛೀ ವಸ್ತುಗಳಿರಲು ಸಾಧ್ಯವಿಲ್ಲ. ಇಲ್ಲಂತೂ ಸೊಳ್ಳೆ ಇತ್ಯಾದಿಗಳಿಂದ ಅನೇಕ ರೋಗಗಳು ಹರಡುತ್ತವೆ ಮತ್ತು ಬಹಳ ಕೊಳಕಿರುತ್ತದೆ. ಹಳ್ಳಿಗಳಲ್ಲಿ ಇಷ್ಟೊಂದು ಕೊಳಕಿರುವುದಿಲ್ಲ. ದೊಡ್ಡ-ದೊಡ್ಡ ಪಟ್ಟಣಗಳಲ್ಲಿ ಬಹಳ ಕೊಳಕು ಇರುತ್ತದೆ ಏಕೆಂದರೆ ಬಹಳ ಜನಸಂಖ್ಯೆಯಿದೆ, ವಾಸಮಾಡಲು ಸ್ಥಳವೇ ಇಲ್ಲ. ಮನುಷ್ಯರು ಗಾಯನ ಮಾಡುತ್ತಾರೆ – ಕಣ ಕಣದಲ್ಲಿಯೂ ಬ್ರಹ್ಮಾ, ವಿಷ್ಣು ಇರುತ್ತಾರೆ. ಬ್ರಹ್ಮನೇ ವಿಷ್ಣುವಾಗುತ್ತಾರೆ. ಬ್ರಹ್ಮನ ಜೊತೆಯಲ್ಲಿ ನಕ್ಷತ್ರಗಳೂ ಸಹ ಇವೆ. ಸತ್ಯಯುಗದಲ್ಲಿ ಮೊದಲು ದೇವತೆಗಳಾಗುತ್ತಾರೆಂದರೆ ಇಷ್ಟೊಂದು ಜನ ಇರುತ್ತಾರೆಯೇ! ವೃಕ್ಷವು ಯಾವಾಗಲೂ ಚಿಕ್ಕದಾಗಿರುತ್ತದೆ ನಂತರ ವೃದ್ಧಿಯಾಗುತ್ತದೆ, ಸತ್ಯಯುಗದಲ್ಲಿ ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ. ಸಿಹಿ ನೀರಿನ ನದಿಗಳ ತೀರದಲ್ಲಿ ವಾಸ ಮಾಡುತ್ತಾರೆ. ಇಲ್ಲಿ ನದಿಗಳಿಂದ ಎಷ್ಟೊಂದು ಕಾಲುವೆಗಳು ತೆಗೆಯುತ್ತಾರೆ, ಅಲ್ಲಿ ಕಾಲುವೆಗಳಿರಲು ಸಾಧ್ಯವೇ! ಒಂದು ಮುಷ್ಟಿಯಷ್ಟು ಜನರಿರುತ್ತಾರೆ. ಅವರಿಗಂತೂ ಗಂಗಾ-ಜಮುನಾ ನದಿಗಳು ಇದ್ದೇ ಇರುತ್ತವೆ. ಅವರು ನದಿಗಳ ಅಕ್ಕಪಕ್ಕದಲ್ಲಿಯೇ ಇರುತ್ತಾರೆ. 5 ತತ್ವಗಳೂ ಸಹ ದೇವತೆಗಳ ಸೇವಕನಾಗಿರುತ್ತದೆ, ಅಕಾಲ ಮಳೆ ಬರುವುದಿಲ್ಲ. ಯಾವುದೇ ನದಿಗಳ ಪ್ರವಾಹ ಬರುವುದಿಲ್ಲ. ಹೆಸರೇ ಸ್ವರ್ಗವಾಗಿದೆ ಅಂದಮೇಲೆ ಕೇಳಬೇಕೆ! ಈಗ ಸ್ವರ್ಗದ ಆಯಸ್ಸು ಎಷ್ಟೊಂದು ಆಗಿದೆ ಎಂದು ಹೇಳುತ್ತಾರೆ. ಒಳ್ಳೆಯದು- ಅಲ್ಲಿ ಯಾರು ರಾಜ್ಯ ಮಾಡುತ್ತಿದ್ದರೆಂದು ಹೇಳಿ ನೋಡೋಣ. ಎಷ್ಟೊಂದು ಕಥೆಗಳನ್ನು ಹೇಳುತ್ತಲೇ ಇರುತ್ತಾರೆ. ಕಲ್ಪದ ಹಿಂದಿನಂತೆಯೇ ನಾವು ಪಾತ್ರವನ್ನಭಿನಯಿಸುತ್ತಿದ್ದೇವೆ. ರುದ್ರ ಜ್ಞಾನ ಯಜ್ಞದಲ್ಲಿ ಅನೇಕ ಪ್ರಕಾರದ ಅಸುರರ ವಿಘ್ನಗಳು ಬೀಳುತ್ತವೆ, ಮನುಷ್ಯರು ತಿಳಿಯುತ್ತಾರೆ – ಅಸುರರು ಮೇಲಿನಿಂದ ಕೊಳಕು, ಗೊಬ್ಬರಗಳನ್ನು ಹಾಕುತ್ತಿದ್ದರು ಎಂದು. ಆದರೆ ಇಲ್ಲ, ಇಲ್ಲಿ ಎಂತಹ ವಿಘ್ನಗಳು ಬೀಳುತ್ತವೆ ಎಂದು ನೀವು ನೋಡುತ್ತೀರಿ. ಅಬಲೆಯರ ಮೇಲೆ ಅತ್ಯಾಚಾರವಾಗುತ್ತದೆಯೆಂದರೆ ಪಾಪದ ಕೊಡ ತುಂಬುತ್ತದೆ. ಸ್ವಲ್ಪ ಸಹನೆ ಮಾಡಿ ಎಂದು ತಂದೆಯು ತಿಳಿಸುತ್ತಾರೆ. ನೀವು ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುತ್ತಲೇ ಇರಿ ಎಂದು ತಂದೆಯು ತಿಳಿಸುತ್ತಾರೆ. ಪೆಟ್ಟು ತಿನ್ನುವ ಸಮಯದಲ್ಲಿಯೂ ಸಹ ಶಿವಬಾಬಾ ಎಂದೇ ನೆನಪು ಮಾಡಿ. ನಿಮಗಂತೂ ಬುದ್ಧಿಯಲ್ಲಿ ಜ್ಞಾನವಿದೆ, ಯಾರಿಗಾದರೂ ನೇಣು ಗಂಬಕ್ಕೆ ಏರಿಸುತ್ತಾರೆಂದರೆ ಪಾದ್ರಿಗಳು ಗಾಡ್ಫಾದರನ್ನು ನೆನಪು ಮಾಡು ಎಂದು ಹೇಳುತ್ತಿದ್ದರು. ಕ್ರೈಸ್ತನನ್ನು ನೆನಪು ಮಾಡಿ ಎಂದಲ್ಲ. ಭಗವಂತನ ಕಡೆಯೇ ಬೆರಳು ಮಾಡಿ ತೋರಿಸುತ್ತಾರೆ, ಇಷ್ಟೊಂದು ಲವಲೀ ಆಗಿದ್ದಾರೆ ಆದ್ದರಿಂದ ಎಲ್ಲರೂ ಕರೆಯುತ್ತಾರೆ. ಆತ್ಮವೇ ಕರೆಯುತ್ತದೆ, ಈಗ ಆತ್ಮಾಭಿಮಾನಿಯಾಗುವುದರಲ್ಲಿಯೇ ಪರಿಶ್ರಮವಿದೆ. 63 ಜನ್ಮಗಳಲ್ಲಿ ನೀವು ದೇಹಾಭಿಮಾನದಲ್ಲಿರುತ್ತೀರಿ, ಈ ಒಂದು ಅಂತಿಮ ಜನ್ಮದಲ್ಲಿ ಅರ್ಧಕಲ್ಪದ ಅಭ್ಯಾಸವನ್ನು ಅಳಿಸಬೇಕಾಗಿದೆ. ದೇಹೀ-ಅಭಿಮಾನಿಯಾಗುವುದರಿಂದ ಸ್ವರ್ಗದ ಮಾಲೀಕರಾಗುತ್ತೇವೆಂದು ನೀವು ತಿಳಿದಿದ್ದೀರಿ. ಎಷ್ಟು ದೊಡ್ಡದಾದ ಪ್ರಾಪ್ತಿಯಿದೆ ಅಂದಮೇಲೆ ರಾತ್ರಿ-ಹಗಲು ಇದೇ ಪ್ರಯತ್ನ ಪಡುತ್ತಿರಬೇಕು. ಮನುಷ್ಯರು ವ್ಯಾಪಾರ ಇತ್ಯಾದಿಗಳಿಗಾಗಿ ಪರಿಶ್ರಮ ಪಡುತ್ತಾರೆ. ವ್ಯಾಪಾರ ಮಾಡುವಾಗ ಮನುಷ್ಯರಿಗೆ ಎಂದೂ ಆಕಳಿಕೆ, ತೂಕಡಿಕೆ ಬರುವುದಿಲ್ಲ ಏಕೆಂದರೆ ಅದು ವ್ಯಾಪಾರವಾಗಿದೆ, ಹಣದ ಖುಷಿಯಿರುತ್ತದೆ. ಸುಸ್ತಾಗುವ ಮಾತೇ ಇರುವುದಿಲ್ಲ. ಬಾಬಾರವರೂ ಸಹ ಅನುಭವಿಯಲ್ಲವೆ. ರಾತ್ರಿಯಲ್ಲಿ ಸ್ಟೀಮರ್ಸ್ ಬರುತ್ತಿದ್ದವು ಅಂದಮೇಲೆ ಬಂದು ಸರಕುಗಳನ್ನು ಮಾರಾಟ ಮಾಡುತ್ತಿದ್ದರು. ಎಲ್ಲಿಯವರೆಗೆ ಗ್ರಾಹಕರು ಲಗೇಜು ಖಾಲಿಯಾಗುವುದಿಲ್ಲವೋ ಅಲ್ಲಿಯವರೆಗೆ ಅವರನ್ನು ಬಿಡುತ್ತಿರಲಿಲ್ಲ. ತಂದೆಯೂ ಸಹ ಅನುಭವೀ ರಥವನ್ನೇ ತೆಗೆದುಕೊಂಡಿದ್ದಾರೆ. ಇವರು ಎಲ್ಲಾ ಅನುಭವ ಮಾಡಿದ್ದಾರೆ. ಇವರು ಹಳ್ಳಿ ಬಾಲಕನಾಗಿದ್ದರು, ಹತ್ತು ಆಣೆಗೆ ಒಂದು ಮಣ ಅಕ್ಕಿಯನ್ನು ಮಾರುತ್ತಿದ್ದರು, ಈಗ ನೋಡಿ, ವಿಶ್ವದ ಮಾಲೀಕರಾಗುತ್ತಿದ್ದಾರೆ. ಏಕ್ದಂ ಹಳ್ಳಿಯವನಾಗಿದ್ದನು ನಂತರ ಏಕ್ದಂ ಚಿನ್ನದ ವ್ಯಾಪಾರಿಯಾಗಿ ಬಿಟ್ಟರು. ಇದು ವಜ್ರದ ವ್ಯಾಪಾರದ ಮಾತಾಗಿದೆ, ನಂತರ ಇಲ್ಲಿ ಸತ್ಯವಾದ ವ್ಯಾಪಾರಿಯಾದರು. ಇದು ರಾಯಲ್ ವ್ಯಾಪಾರವಾಗಿದೆ. ಬಾಬಾ ಬಹಳ ಅನುಭವಿಯಾಗಿದ್ದಾರೆ, ಬಾಬಾ ವೈಸರಾಯ್ ಮುಂತಾದವರ ಮನೆಗಳಿಗೆ ತಮ್ಮ ಮನೆಗೆ ಹೋದಂತೆಯೇ ಹೋಗುತ್ತಿದ್ದರು. ಇದಕ್ಕೇ ಅವಿನಾಶಿ ಜ್ಞಾನರತ್ನವೆಂದು ಹೇಳುತ್ತಾರೆ. ಬುದ್ಧಿಯಲ್ಲಿ ಎಷ್ಟು ಧಾರಣೆ ಮಾಡುತ್ತೀರೊ ಅಷ್ಟು ನೀವು ಪದಮಾಪತಿಗಳಾಗುತ್ತೀರಿ. ಶಿವ ತಂದೆಗೆ ಸೌಧಾಗಾರ, ರತ್ನಾಗಾರ ಎಂದು ಹೇಳುತ್ತಾರೆ. ಅವರ ಮಹಿಮೆಯನ್ನೂ ಸಹ ಮಾಡುತ್ತಾರೆ ನಂತರ ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ. ಮಹಿಮೆಯ ಜೊತೆಯಲ್ಲಿ ಎಷ್ಟೊಂದು ನಿಂದನೆ! ಇದು ಭಕ್ತಿಮಾರ್ಗದ ಸ್ಥಿತಿಯಾಗಿದೆ. ಯಾವಾಗ ಭಕ್ತಿ ಪೂರ್ಣವಾಗುತ್ತದೆಯೋ ಆಗ ನಾನು ಬರುತ್ತೇನೆ. ಯಾರು ಬಹಳ ಭಕ್ತಿ ಮಾಡುತ್ತಾರೆಯೋ ಅದೂ ಸಹ ಸಿದ್ಧವಾಗುತ್ತದೆ. ಎಲ್ಲರಿಗಿಂತ ನೀವೇ ಹೆಚ್ಚು ಭಕ್ತಿ ಮಾಡುತ್ತೀರಿ, ಅವರೇ ಬಂದು ಇಲ್ಲಿ ಬ್ರಾಹ್ಮಣರಾಗುತ್ತಾರೆ ನಂತರ ತಂದೆಯಿಂದ ಪೂಜ್ಯರಾಗುವ ಆಸ್ತಿಯನ್ನು ಪಡೆಯುತ್ತಾರೆ. ರಾವಣ ಪೂಜಾರಿಯನ್ನಾಗಿ ಮಾಡಿದನು, ತಂದೆಯು ಪೂಜ್ಯರನ್ನಾಗಿ ಮಾಡುತ್ತಾನೆ. ಇದು ಭಗವಾನುವಾಚ ಆಗಿದೆ. ಭಗವಂತನು ಒಬ್ಬರೇ ಆಗಿದ್ದಾರೆ, 2-3 ಭಗವಂತರಿರಲು ಸಾಧ್ಯವಿಲ್ಲ. ಗೀತೆಯ ಭಗವಂತನ ಬಗ್ಗೆ ಹಾಡಿದ್ದಾರೆ, ಶಿವ ಭಗವಾನುವಾಚ, ಇದರ ಬದಲು ಕೃಷ್ಣನ ಹೆಸರನ್ನು ಹಾಕಿದ್ದಾರೆ, ಎಷ್ಟೊಂದು ವ್ಯತ್ಯಾಸವಿದೆ! ಡ್ರಾಮಾನುಸಾರ ಗೀತೆಯಲ್ಲಿ ಈ ಹೆಸರು ಬದಲಾಗಲೇಬೇಕು, ನಂತರ ಪತಿತ-ಪಾವನ ಬಾ ಎಂದು ಕರೆಯುತ್ತಾರೆ. ತಂದೆಯು ಪಾವನರನ್ನಾಗಿ ಮಾಡುತ್ತಾರೆ, ರಾವಣನು ಪತಿತರನ್ನಾಗಿ ಮಾಡುತ್ತಾನೆ. ಅಂದಮೇಲೆ ತಿಳಿದುಕೊಳ್ಳಲು ಎಷ್ಟೊಂದು ಬುದ್ಧಿ ಬೇಕು. ಶ್ರೀಮತ ಶ್ರೇಷ್ಠಾತಿ ಶ್ರೇಷ್ಠ ಮತವು ಒಬ್ಬ ತಂದೆಯದಾಗಿದೆ. ಈ ಲಕ್ಷ್ಮೀ-ನಾರಾಯಣರು ತಂದೆಯ ಮತದಿಂದಲೇ ಆಗಿದ್ದರು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಈ ಒಂದು ಜನ್ಮದಲ್ಲಿ 63 ಜನ್ಮಗಳ ಹಳೆಯ ದೇಹಾಭಿಮಾನದ ಅಭ್ಯಾಸವನ್ನು ಅಳಿಸುವ ಪರಿಶ್ರಮ ಪಡಬೇಕು. ದೇಹೀ-ಅಭಿಮಾನಿಯಾಗಿ ಸ್ವರ್ಗದ ಮಾಲೀಕರಾಗಬೇಕಾಗಿದೆ.

2. ಈ ವಜ್ರ ಸಮಾನ ಉತ್ತಮ ಜನ್ಮದಲ್ಲಿ ತಮ್ಮ ಬುದ್ಧಿಯನ್ನು ಅಲೆದಾಡಲು ಬಿಡಬಾರದು, ಸತೋಪ್ರಧಾನರಾಗಬೇಕು. ಅತ್ಯಾಚಾರವನ್ನು ಸಹನೆ ಮಾಡಿ ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕು.

ವರದಾನ:-

ಇಡೀ ಶಿಕ್ಷಣಗಳ ಸಾರವಾಗಿದೆ – ಯಾವುದೇ ಕರ್ಮದಿಂದ ನೋಡುವ, ಕುಳಿತುಕೊಳ್ಳುವ-ನಡೆಯುವ, ನಡೆಯುವುದರಿಂದ ಫರಿಶ್ತಾ ಸ್ಥಿತಿಯು ಕಾಣಿಸಲಿ, ಪ್ರತಿಯೊಂದು ಕರ್ಮದಲ್ಲಿ ಅಲೌಕಿಕತೆ ಇರಲ್ಲಿ. ಯಾವುದೇ ಕರ್ಮದಲ್ಲಿ ಅಥವಾ ಸಂಸ್ಕಾರಗಳಲ್ಲಿ ಲೌಕಿಕತೆಯಿರಬಾರದು. ಯೋಚಿಸುವುದು-ಮಾಡುವುದು-ಹೇಳುವುದು ಎಲ್ಲವೂ ಸಮಾನವಾಗಿರಲಿ. ಇದನ್ನು ಮಾಡಬಾರದು ಎಂದು ಯೋಚಿಸಿದ್ದೆನು ಆದರೆ ಮಾಡಿ ಬಿಟ್ಟೆನು ಎನ್ನುವಂತೆ ಆಗಬಾರದು. ಯಾವಾಗ ಮೂರೂ ಒಂದು ಸಮಾನ ಹಾಗೂ ತಂದೆಯ ಸಮಾನವಾಗುವುದು ಆಗ ಹೇಳಲಾಗುತ್ತದೆ – ಶ್ರೇಷ್ಠ ಅಥವಾ ಸರ್ವೋತ್ತಮ ಪುರುಷಾರ್ಥಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top