17 June 2021 KANNADA Murli Today | Brahma Kumaris

17 June 2021 Read and Listen today’s Gyan Murli in Kannada

June 16, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವು ಪಾರಲೌಕಿಕ ತಂದೆಯನ್ನು ಯಥಾರ್ಥ ರೀತಿಯಲ್ಲಿ ತಿಳಿದುಕೊಂಡಿದ್ದೀರಿ, ಆದ್ದರಿಂದ ನಿಮ್ಮನ್ನು ಸತ್ಯವಾದ ಪ್ರೀತಿ ಬುದ್ಧಿಯವರು ಅಥವಾ ಆಸ್ತಿಕರೆಂದು ಕರೆಯುತ್ತಾರೆ”

ಪ್ರಶ್ನೆ:: -

ತಂದೆಯ ಯಾವ ಕರ್ತವ್ಯದಿಂದ ಭಕ್ತರ ರಕ್ಷಕನೆಂದು ಸಿದ್ಧವಾಗುತ್ತದೆ?

ಉತ್ತರ:-

ಎಲ್ಲಾ ಭಕ್ತರನ್ನು ರಾವಣನ ಜೈಲಿನಿಂದ ಬಿಡಿಸುವುದು, ದಿವಾಳಿಗಳನ್ನು ಸಾಹುಕಾರರನ್ನಾಗಿ ಮಾಡುವುದು – ಇದು ಒಬ್ಬ ತಂದೆಯ ಕರ್ತವ್ಯವಾಗಿದೆ. ಯಾರು ಹಳೆಯ ಭಕ್ತರಿದ್ದಾರೆಯೋ ಅವರನ್ನು ಬ್ರಾಹ್ಮಣರನ್ನಾಗಿ ಮಾಡಿ ದೇವತೆಯನ್ನಾಗಿ ಮಾಡುವುದೇ ಅವರ ರಕ್ಷಣೆ ಮಾಡುವುದಾಗಿದೆ. ತನ್ನ ಎಲ್ಲಾ ಭಕ್ತರಿಗೆ ಮುಕ್ತಿ-ಜೀವನ್ಮುಕ್ತಿಯನ್ನು ಕೊಡಲು ಭಕ್ತರ ರಕ್ಷಕನು ಬಂದಿದ್ದಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಭೋಲಾನಾಥನಿಗಿಂತ ಭಿನ್ನ……

ಓಂ ಶಾಂತಿ. ಇದು ಯಾರ ಮಹಿಮೆಯನ್ನು ಕೇಳಿದಿರಿ. ಶ್ರೇಷ್ಠಾತಿ ಶ್ರೇಷ್ಠ ಭಗವಂತನೇ ಆಗಿದ್ದಾರೆ, ಭಗವಂತನೇ ಎಲ್ಲರ ತಂದೆಯಾಗಿದ್ದಾರೆಂದು ಗಾಯನ ಮಾಡುತ್ತಾರೆ. ಹೇಗೆ ಲೌಕಿಕ ತಂದೆಯು ತನ್ನ ರಚನೆಯ ರಚಯಿತನಾಗುತ್ತಾರೆಯೋ ಹಾಗೆಯೇ ತಂದೆಯೇ ಈ ರಚನೆಯ ರಚಯಿತನಾಗಿದ್ದಾರೆ. ಮೊದಲು ಕನ್ಯೆಯನ್ನು ತನ್ನ ಸ್ತ್ರೀಯನ್ನಾಗಿ ಮಾಡಿಕೊಂಡು ಅವರಿಂದ ತನ್ನ ರಚನೆಯನ್ನು ರಚಿಸುತ್ತಾರೆ. 5-7 ಮಂದಿ ಮಕ್ಕಳಿಗೆ ಜನ್ಮ ಕೊಡುತ್ತಾರೆ. ಅವರನ್ನು ರಚನೆಯೆಂದು ಕರೆಯುತ್ತಾರೆ. ತಂದೆಯು ರಚಯಿತನಾಗಿದ್ದಾನೆ, ಅವರು ಹದ್ದಿನ ರಚಯಿತನಾಗಿದ್ದಾರೆ. ರಚನೆಗೆ ರಚಯಿತ ತಂದೆಯಿಂದ ಆಸ್ತಿಯು ಸಿಗುತ್ತದೆಯೆಂದು ನೀವು ತಿಳಿದುಕೊಂಡಿದ್ದೀರಿ. ಒಬ್ಬರು ಲೌಕಿಕತಂದೆ, ಇನ್ನೊಬ್ಬರು ಪಾರಲೌಕಿಕ ತಂದೆ. ಮನುಷ್ಯರಿಗೆ ಇಬ್ಬರು ತಂದೆಯರಿರುತ್ತಾರೆ. ಜ್ಞಾನ ಮತ್ತು ಭಕ್ತಿಯು ಭಿನ್ನ-ಭಿನ್ನವಾಗಿದೆ, ನಂತರ ವೈರಾಗ್ಯ ಎಂದು ಮಕ್ಕಳಿಗೆ ತಿಳಿಸಲಾಗುತ್ತದೆ. ಈ ಸಮಯದಲ್ಲಿ ನೀವು ಸಂಗಮದಲ್ಲಿ ಕುಳಿತಿದ್ದೀರಿ. ಬಾಕಿ ಎಲ್ಲರೂ ಕಲಿಯುಗದಲ್ಲಿ ಕುಳಿತಿದ್ದಾರೆ. ಎಲ್ಲಾ ಮಕ್ಕಳೇ ಆಗಿದ್ದಾರೆ ಆದರೆ ನೀವು ಎಲ್ಲಾ ರಚನೆಯ ರಚಯಿತನಾದ ಬೇಹದ್ದಿನ ತಂದೆಯನ್ನು ತಿಳಿದುಕೊಂಡಿದ್ದೀರಿ. ಲೌಕಿಕ ತಂದೆಯಿದ್ದರೂ ಸಹ ಆ ಪಾರಲೌಕಿಕ ತಂದೆಯನ್ನು ನೆನಪು ಮಾಡುತ್ತಾರೆ. ಸತ್ಯಯುಗದಲ್ಲಿ ಲೌಕಿಕ ತಂದೆಯಿದ್ದರೂ ಪಾರಲೌಕಿಕ ತಂದೆಯನ್ನು ನೆನಪು ಮಾಡುವುದಿಲ್ಲ ಏಕೆಂದರೆ ಅದು ಸುಖಧಾಮವಾಗಿದೆ. ಆ ಪಾರಲೌಕಿಕ ತಂದೆಯನ್ನು ದುಃಖದಲ್ಲಿ ನೆನಪು ಮಾಡುತ್ತಾರೆ. ಇಲ್ಲಿ ಮನುಷ್ಯರಿಗೆ ಓದಿಸಿ ಬುದ್ಧಿವಂತರನ್ನಾಗಿ ಮಾಡಲಾಗುತ್ತದೆ. ಭಕ್ತಿಮಾರ್ಗದಲ್ಲಿ ಮನುಷ್ಯರು ತಂದೆಯನ್ನು ತಿಳಿದುಕೊಂಡಿಲ್ಲ. ಪರಮಪಿತ ಪರಮಾತ್ಮ, ಹೇ ಗಾಡ್ಫಾದರ್, ಹೇ ದುಃಖಹರ್ತ-ಸುಖಕರ್ತ ಎಂದು ಹೇಳುತ್ತಾರೆ. ನಂತರ ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ. ನಂತರ ಕಲ್ಲು, ಕಣ-ಕಣದಲ್ಲಿ, ನಾಯಿ, ಬೆಕ್ಕು ಎಲ್ಲದರಲ್ಲಿಯೂ ಇದ್ದಾರೆಂದು ಹೇಳುತ್ತಾರೆ. ಪರಮಾತ್ಮ ತಂದೆಯನ್ನೂ ಸಹ ನಿಂದನೆ ಮಾಡಲು ಆರಂಭಿಸುತ್ತಾರೆ. ನೀವು ತಂದೆಯ ಮಕ್ಕಳಾಗಿದ್ದೀರಿ, ಆದ್ದರಿಂದ ನೀವು ಆಸ್ತಿಕರಾಗಿದ್ದೀರಿ. ತಂದೆಯ ಜೊತೆ ನಿಮ್ಮದು ಪ್ರೀತಿ ಬುದ್ಧಿಯಿದೆ, ಬಾಕಿ ಎಲ್ಲರದೂ ವಿಪರೀತ ಬುದ್ಧಿಯಿದೆ. ಈಗ ನೀವು ತಿಳಿದುಕೊಂಡಿದ್ದೀರಿ – ಮಹಾಭಾರತ ಯುದ್ಧವು ಎದುರಿಗೆ ನಿಂತಿದೆ, ಹಳೆಯ ಪ್ರಪಂಚದ ವಿನಾಶ ಅರ್ಥಾತ್ ಪ್ರತೀ 5000 ವರ್ಷಗಳ ನಂತರ ಕಲಿಯುಗದ ಪತಿತಪ್ರಪಂಚವು ಸಂಪೂರ್ಣವಾಗಿ ನಂತರ ಸತ್ಯಯುಗ, ಪಾವನ ಪ್ರಪಂಚದ ಸ್ಥಾಪನೆಯು ತಂದೆಯ ಮೂಲಕ ಆಗುತ್ತದೆ. ಆದ್ದರಿಂದಲೇ ಅವರನ್ನು ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ – ಹೇ ಅಂಬಿಗ, ನಮ್ಮನ್ನು ಈ ವಿಷಯ ಸಾಗರದಿಂದ ತೆಗೆದು ಕ್ಷೀರ ಸಾಗರಕ್ಕೆ ಕರೆದುಕೊಂಡು ಹೋಗು. ಗಾಂಧೀಜಿಯೂ ಸಹ ಪತಿತ-ಪಾವನ ಸೀತಾರಾಂ…. ಎಂದು ಹಾಡುತ್ತಿದ್ದರು. ಹೇ ರಾಮ ಎಲ್ಲಾ ಸೀತೆಯರನ್ನು ಪಾವನ ಮಾಡು. ನೀವೆಲ್ಲರೂ ಸೀತೆಯರು, ಭಕ್ತಿನಿಯರಾಗಿದ್ದೀರಿ. ಅವರೇ ಭಗವಂತನಾಗಿದ್ದಾರೆ, ಅವರನ್ನೇ ಎಲ್ಲರೂ ಕರೆಯುತ್ತಾರೆ, ನಿಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡುತ್ತಿದ್ದಾರೆ. ಅವರು ನಿಮಗೆ ಎಂದೂ ಸಹ ಮೋಸ ಮಾಡುವುದಿಲ್ಲ. ತೀರ್ಥ ಸ್ಥಾನಗಳಿಗೆ, ಕುಂಭ ಮೇಳಗಳಿಗೆ ಹೋಗಿ ಎಂದು ಹೇಳುವುದಿಲ್ಲ. ಈ ನದಿಗಳ್ಯಾವುದೂ ಪತಿತ-ಪಾವನಿ ಅಲ್ಲ. ಪತಿತ-ಪಾವನ ಒಬ್ಬ ತಂದೆಯೇ ಜ್ಞಾನ ಸಾಗರನಾಗಿದ್ದಾರೆ. ಸಾಗರ ಅಥವಾ ನದಿಗಳನ್ನು ಯಾರೂ ನೆನಪು ಮಾಡುವುದಿಲ್ಲ. ಹೇ ಪತಿತ-ಪಾವನ, ನಮ್ಮನ್ನು ಪಾವನ ಮಾಡು ಎಂದು ತಂದೆಯನ್ನೇ ಕರೆಯುತ್ತಾರೆ. ಉಳಿದಂತೆ ನೀರಿನ ನದಿಗಳಂತೂ ಪ್ರಪಂಚದಲ್ಲಿ ಅನೇಕ ಇವೆ, ಅವು ಪತಿತ-ಪಾವನಿ ಆಗಲು ಸಾಧ್ಯವೇ! ಪತಿತ-ಪಾವನ ಎಂದು ಒಬ್ಬ ತಂದೆಗೇ ಹೇಳಲಾಗುತ್ತದೆ, ಅವರು ಯಾವಾಗ ಬರುತ್ತಾರೆಯೋ ಆಗ ಪಾವನರನ್ನಾಗಿ ಮಾಡುತ್ತಾರೆ. ಭಾರತದ ಮಹಿಮೆಯು ಬಹಳ ಭಾರಿಯಾಗಿದೆ. ಭಾರತವು ಎಲ್ಲಾ ಧರ್ಮಗಳ ತೀರ್ಥ ಸ್ಥಾನವಾಗಿದೆ, ಶಿವ ಜಯಂತಿಯನ್ನೂ ಸಹ ಇಲ್ಲಿಯೇ ಗಾಯನ ಮಾಡಲಾಗುತ್ತದೆ. ಸತ್ಯಯುಗವಂತೂ ಪಾವನ ಪ್ರಪಂಚ, ಅಲ್ಲಿ ದೇವಿ-ದೇವತೆಗಳಿರುತ್ತಾರೆ. ದೇವತೆಗಳ ಮಹಿಮೆಯನ್ನು ಗಾಯನ ಮಾಡುತ್ತಾರೆ – ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣ…. ಚಂದ್ರವಂಶಿಯರನ್ನು 14 ಕಲಾ ಸಂಪೂರ್ಣರೆಂದು ಹೇಳುತ್ತಾರೆ. ನಂತರ ಏಣಿಯಿಂದ ಇಳಿಯುತ್ತಾರೆ. ತಂದೆಯು ಬಂದು ಸೆಕೆಂಡಿನಲ್ಲಿ ಏಣಿಯನ್ನು ಹತ್ತಿಸಿ ಶಾಂತಿಧಾಮ, ಸುಖಧಾಮಕ್ಕೆ ಕರೆದೊಯ್ಯುತ್ತಾರೆ. ನಂತರ 84ರ ಚಕ್ರವನ್ನು ಸುತ್ತಿ ಏಣಿಯನ್ನಿಳಿಯುತ್ತಾರೆ. 84 ಜನ್ಮಗಳಲ್ಲಿ ಯಾರಾದರೂ ಅವಶ್ಯವಾಗಿ ತೆಗೆದುಕೊಂಡಿರಬೇಕಲ್ಲವೆ. ಮುಖ್ಯವಾದುದು ಸರ್ವಶಾಸ್ತ್ರಮಯಿ ಶಿರೋಮಣಿ ಗೀತೆ ಶ್ರೀಮತ್ಭಗವತ್ ಅರ್ಥಾತ್ ಭಗವಂತನು ಉಚ್ಛರಿಸಿರುವುದಾಗಿದೆ. ಆದರೆ ಭಗವಂತನು ಯಾರಿಗೆ ಹೇಳುತ್ತಾರೆಂದು ಈ ಪತಿತ ಮನುಷ್ಯರು ತಿಳಿದುಕೊಂಡಿಲ್ಲ. ಪತಿತ-ಪಾವನ ಎಲ್ಲರ ಸದ್ಗತಿದಾತ ಒಬ್ಬ ನಿರಾಕಾರ ಶಿವನಾಗಿದ್ದಾರೆ. ಆದರೆ ಅವರು ಯಾವಾಗ ಬಂದರು ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ತಾವೇ ಬಂದು ತಮ್ಮ ಪರಿಚಯ ಕೊಡುತ್ತಾರೆ. ಈಗ ನೋಡಿ, ಈ ಗಂಡು ಮಕ್ಕಳು – ಹೆಣ್ಣು ಮಕ್ಕಳು ಇಬ್ಬರೂ ಬಾಬಾ ಎನ್ನುತ್ತಾರೆ. ಗಾಯನವೂ ಇದೆ – ನೀವೇ ತಂದೆ, ನೀವೇ ತಾಯಿ…. ನಿಮ್ಮ ಈ ರಾಜಯೋಗವನ್ನು ಕಲಿಯುವುದರಿಂದ ಅಪಾರವಾದ ಸುಖ ಸಿಗುತ್ತದೆ. ಬೇಹದ್ದಿನ ತಂದೆಯಿಂದ ಸ್ವರ್ಗದ 21 ಜನ್ಮಗಳ ಆಸ್ತಿಯನ್ನು ಪಡೆಯುವುದಕ್ಕೆ ನೀವು ಇಲ್ಲಿ ಬರುತ್ತೀರಿ. ಶಿವ ಜಯಂತಿಯನ್ನು ಭಾರತದಲ್ಲಿಯೇ ಆಚರಿಸುತ್ತಾರೆ. ರಾವಣನನ್ನೂ ಭಾರತದಲ್ಲಿಯೇ ತೋರಿಸುತ್ತಾರೆ ಆದರೆ ಅರ್ಥವನ್ನಂತೂ ಸ್ವಲ್ಪವೂ ತಿಳಿದಿಲ್ಲ. ಶಿವ ತಂದೆಯು ನಮ್ಮ ಬೇಹದ್ದಿನ ತಂದೆಯಾಗಿದ್ದಾರೆ, ಇದನ್ನು ಒಬ್ಬರೂ ತಿಳಿದಿಲ್ಲ ಕೇವಲ ಶಿವನ ಪೂಜೆಯನ್ನು ಮಾಡುತ್ತಾರೆ. ಯಾವಾಗ ಇಡೀ ವೃಕ್ಷವು ತಮೋಪ್ರಧಾನವಾಗುವುದೊ ಆಗ ತಂದೆಯು ಬರುತ್ತಾರೆ. ಹೊಸ ಪ್ರಪಂಚದಲ್ಲಿ ಭಾರತವು ಸ್ವರ್ಗವಾಗಿತ್ತು, ಭಾರತದಲ್ಲಿಯೇ ಸತ್ಯಯುಗವಿತ್ತು, ಭಾರತದಲ್ಲಿಯೇ ಈಗ ಕಲಿಯುಗವಿದೆ. ಮೊಟ್ಟ ಮೊದಲು ನೀವೇ ಸ್ವರ್ಗದ ಮಾಲೀಕರಾಗಿದ್ದಿರಿ ಎಂದು ತಂದೆಯು ತಿಳಿಸುತ್ತಾರೆ. ಈಗ ನೀವು 84 ಜನ್ಮಗಳನ್ನನುಭವಿಸಿ ನರಕವಾಸಿಗಳಾಗಿದ್ದೀರಿ. ಈಗ ನಿಮಗೆ ನಾನು ರಾಜಯೋಗವನ್ನು ಕಲಿಸಿ ಮನುಷ್ಯರಿಂದ ದೇವತೆ, ಪತಿತರಿಂದ ಪಾವನರನ್ನಾಗಿ ಮಾಡುತ್ತೇನೆ. ಭಕ್ತಿ ಅರ್ಥಾತ್ ಬ್ರಹ್ಮನ ರಾತ್ರಿಯಾಗಿದೆ, ಜ್ಞಾನ ಅರ್ಥಾತ್ ಬ್ರಹ್ಮನ ದಿನವಾಗಿದೆ. ನೀವು ಬ್ರಹ್ಮಾಕುಮಾರ-ಕುಮಾರಿಯರು ದಿನದಲ್ಲಿ ಹೋಗುತ್ತೀರಿ. ಈ ಹಳೆಯ ಪ್ರಪಂಚಕ್ಕೆ ಈಗ ಬೆಂಕಿ ಹತ್ತಿಕೊಳ್ಳಲಿದೆ, ಅವಶ್ಯವಾಗಿ ಮಹಾಭಾರತ ಯುದ್ಧ ನಡೆಯಲಿದೆ. ಅವಶ್ಯವಾಗಿ ಮಹಾಭಾರತ ಯುದ್ಧದ ನಂತರ ಭಾರತವು ಸ್ವರ್ಗವಾಗುವುದು. ಅನೇಕ ಧರ್ಮವು ವಿನಾಶವಾಗಿ ಒಂದು ಧರ್ಮ ಸ್ಥಾಪನೆಯಾಗುತ್ತದೆ. ನೀವು ಮಕ್ಕಳು ತಂದೆಗೆ ಸಹಯೋಗಿಗಳಾಗಿ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಿದ್ದೀರಿ. ನೀವು ಸ್ವರ್ಗದ ಮಾಲೀಕರಾಗಲು ಯೋಗ್ಯರಾದ ನಂತರ ವಿನಾಶವು ಪ್ರಾರಂಭವಾಗುತ್ತದೆ. ಇದು ಶಿವ ತಂದೆಯ ಜ್ಞಾನಯ ಜ್ಞವಾಗಿದೆ. ನಂತರ ಇದನ್ನು ಶಿವನೆಂದಾದರೂ ಹೇಳಿ ಅಥವಾ ರುದ್ರನೆಂದಾದರೂ ಹೇಳಿ, ಕೃಷ್ಣ ಜ್ಞಾನ ಯಜ್ಞವೆಂದು ಎಂದೂ ಹೇಳಲಾಗುವುದಿಲ್ಲ. ಸತ್ಯಯುಗ-ತ್ರೇತಾದಲ್ಲಿ ಯಜ್ಞಗಳಿರುವುದಿಲ್ಲ. ಉಪದ್ರವಗಳು ಆರಂಭವಾದಾಗ ಯಜ್ಞಗಳನ್ನು ರಚಿಸುತ್ತಾರೆ. ಧಾನ್ಯಗಳು ಸಿಗದಿದ್ದಾಗ, ಯುದ್ಧ ಪ್ರಾರಂಭವಾಯಿತೆಂದರೆ ಯಜ್ಞಗಳನ್ನು ಶಾಂತಿಗಾಗಿ ರಚಿಸುತ್ತಾರೆ. ವಿನಾಶವಾಗದ ಹೊರತು ಭಾರತವು ಸ್ವರ್ಗವಾಗುವುದಿಲ್ಲವೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಭಾರತ ಮಾತೆ ಶಿವಶಕ್ತಿ ಸೇನೆಯ ಗಾಯನವನ್ನು ಮಾಡಿದ್ದಾರೆ. ಪವಿತ್ರರಿಗೇ ವಂದನೆಯನ್ನು ಮಾಡಲಾಗುತ್ತದೆ. ನೀವು ಮಾತೆಯರಿಗೆ ವಂದೇ ಮಾತರಂ ಎಂದು ಹೇಳಲಾಗುತ್ತದೆ ಏಕೆಂದರೆ ಭಾರತವನ್ನು ಶ್ರೀಮತದಂತೆ ಸ್ವರ್ಗವನ್ನಾಗಿ ಮಾಡುತ್ತೀರಿ. ಮೃತ್ಯುವಂತೂ ಎಲ್ಲರ ತಲೆಯ ಮೇಲಿದೆ ಆದ್ದರಿಂದ ಇದೊಂದು ಜನ್ಮದಲ್ಲಿ ಪವಿತ್ರರಾಗಿ ತಂದೆಯನ್ನು ನೆನಪು ಮಾಡುವುದರಿಂದ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುವಿರಿ. ಈಗ ನೀವು ಶೂದ್ರರಿಂದ ಬ್ರಾಹ್ಮಣರಾಗಿ ನಂತರ ದೇವತೆಗಳಾಗುತ್ತೀರಿ, ಇದು ಹೊಸ ಮಾತೇನಲ್ಲ, ಕಲ್ಪ-ಕಲ್ಪ ಪ್ರತೀ 5000 ವರ್ಷದ ನಂತರ ಈ ಚಕ್ರವು ಸುತ್ತುತ್ತಿರುತ್ತದೆ. ನರಕದಿಂದ ಸ್ವರ್ಗವಾಗುತ್ತದೆ. ಪತಿತ ಪ್ರಪಂಚದಲ್ಲಿ ಮನುಷ್ಯರು ಯಾವುದೇ ಕರ್ಮವನ್ನು ಮಾಡುತ್ತಾರೆಂದರೆ ಅದು ವಿಕರ್ಮವೇ ಆಗುತ್ತದೆ. 5000 ವರ್ಷಗಳ ಮೊದಲು ಕರ್ಮ-ವಿಕರ್ಮ-ಅಕರ್ಮದ ಗತಿಯನ್ನು ತಿಳಿಸಲಾಗಿತ್ತು, ಈಗ ಪುನಃ ನಿಮಗೆ ತಿಳಿಸುತ್ತೇನೆ ಎಂದು ತಂದೆಯು ತಿಳಿಸುತ್ತಾರೆ. ನಾನು ಪರಮಪಿತ ಪರಮಾತ್ಮ ನಿರಾಕಾರ ನಿಮ್ಮ ತಂದೆಯಾಗಿದ್ದೇನೆ. ಈ ಶರೀರದ ಆಧಾರವನ್ನು ತೆಗೆದುಕೊಂಡಿದ್ದೇನೆ, ಆದರೆ ಇವರಂತೂ ಭಗವಂತನಲ್ಲ. ಮನುಷ್ಯರನ್ನು ದೇವತೆಯೆಂದೂ ಕರೆಯಲು ಸಾಧ್ಯವಿಲ್ಲ. ಅಂದಮೇಲೆ ಮನುಷ್ಯರನ್ನು ಭಗವಂತನೆಂದು ಕರೆಯಲು ಹೇಗೆ ಸಾಧ್ಯ. ನೀವು 84 ಜನ್ಮಗಳ ತೆಗೆದುಕೊಳ್ಳುತ್ತಾ, ಕೆಳಗಿಳಿಯುತ್ತಾ ಬಂದಿರಿ. ಮೇಲೆ ಹೋಗಲು ಯಾರೂ ಸಾಧ್ಯವಿಲ್ಲ ಎಂದು ತಿಳಿಸುತ್ತಾರೆ. ಎಲ್ಲರೂ ಪತಿತರಾಗುವ ದಾರಿಯನ್ನೇ ತೋರಿಸುತ್ತಾರೆ, ಸ್ವಯಂ ತಾವೂ ಸಹ ಪತಿತರಾಗುತ್ತಾರೆ ಆದ್ದರಿಂದಲೇ ಅವರ ಉದ್ಧಾರವನ್ನೂ ಸಹ ಮಾಡಲು ನಾನು ಬರಬೇಕಾಗುತ್ತದೆ. ಇದು ರಾವಣ ರಾಜ್ಯವಾಗಿದೆ, ನೀವೀಗ ರಾವಣ ರಾಜ್ಯದಿಂದ ಹೊರ ಬಂದಿದ್ದೀರಿ, ಇದು ನಿಧಾನ-ನಿಧಾನವಾಗಿ ಎಲ್ಲರಿಗೂ ತಿಳಿಯುತ್ತದೆ. ಬ್ರಾಹ್ಮಣರಾಗದ ಹೊರತು ಶಿವ ತಂದೆಯಿಂದ ಆಸ್ತಿಯನ್ನು ಪಡೆಯಲು ಸಾಧ್ಯವಿಲ್ಲ. ಇಬ್ಬರು ತಂದೆಯರಿದ್ದಾರೆ, ಒಬ್ಬರು ನಿರಾಕಾರ ತಂದೆ, ಇನ್ನೊಬ್ಬರು ಸಾಕಾರ ತಂದೆ ಆಗಿದ್ದಾರೆ. ಸಾಕಾರಿ ತಂದೆಯಿಂದ ಸಾಕಾರಿ ಮಕ್ಕಳಿಗೆ ಆಸ್ತಿಯು ಸಿಗುತ್ತದೆ, ನಂತರ ನಿರಾಕಾರ ಬೇಹದ್ದಿನ ತಂದೆಯಿಂದ ನಿರಾಕಾರಿ ಆತ್ಮಗಳಿಗೆ ಆಸ್ತಿಯು ಸಿಗುತ್ತದೆ. ಮಧುರಾತಿ ಮಧುರ ತಂದೆಯಿಂದ ನೀವು 21 ಜನ್ಮಕ್ಕಾಗಿ ಸುಖಧಾಮದ ಆಸ್ತಿಯನ್ನು ಪಡೆಯಲು ಬಂದಿದ್ದೇವೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಯೋಗಬಲದಿಂದ ನೀವು ವಿಶ್ವದ ಮಾಲೀಕರಾಗಿದ್ದಿರಿ. ಯಾವುದೇ ಆಯುಧಗಳಿಂದಲ್ಲ. ತಂದೆಯ ಜೊತೆ ಬುದ್ಧಿಯೋಗವನ್ನು ಜೋಡಿಸಿ ವಿಕರ್ಮವನ್ನು ವಿನಾಶ ಮಾಡಿಕೊಂಡು ವಿಷ್ಣು ಪುರಿಯ ಮಾಲೀಕರಾಗುತ್ತೀರಿ. ಈಗ ಅಮರಲೋಕಕ್ಕೆ ಹೋಗಲು ಅಮರಕಥೆಯನ್ನು ಕೇಳುತ್ತಿದ್ದೀರಿ. ಅಲ್ಲಿ ಅಕಾಲಮೃತ್ಯು ಎಂದೂ ಆಗುವುದಿಲ್ಲ. ದುಃಖದ ಹೆಸರು-ಗುರುತೂ ಇರುವುದಿಲ್ಲ. ನೀವು ಮಕ್ಕಳು ಈಗ ಬೇಹದ್ದಿನ ತಂದೆಯ ಶ್ರೀಮತಂತೆ ನಡೆದು ಶ್ರೇಷ್ಠಾತಿ ಶ್ರೇಷ್ಠ ದೇವತೆಗಳಾಗುತ್ತಿದ್ದೀರಿ. ಇದು ಯಾವುದೇ ಶಾಸ್ತ್ರಗಳ ಜ್ಞಾನವಲ್ಲ. ವಿಷ್ಣುವಿನ ನಾಭಿಯಿಂದ ಬ್ರಹ್ಮನು ಬಂದನೆಂದು ತೋರಿಸುತ್ತಾರೆ, ಅವನ ಕೈಯಲ್ಲಿ ಶಾಸ್ತ್ರಗಳನ್ನು ತೋರಿಸುತ್ತಾರೆ. ಬ್ರಹ್ಮನ ಮುಖಾಂತರ ನಾನು ನಿಮಗೆ ಇಡೀ ಪ್ರಪಂಚದ ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತೇನೆಂದು ತಂದೆಯು ಹೇಳುತ್ತಾರೆ. ನಾನೇ ಜ್ಞಾನ ಸಾಗರನಾಗಿದ್ದೇನೆ. ಗಾಯನವೂ ಇದೆ – ಜ್ಞಾನ ಸೂರ್ಯ ಪ್ರಕಟ…. ಅಜ್ಞಾನ ಅಂಧಕಾರ ವಿನಾಶ…… ಸತ್ಯಯುಗದಲ್ಲಿ ಅಜ್ಞಾನವಿರುವುದಿಲ್ಲ. ಅದಂತೂ ಸತ್ಯ ಖಂಡವಾಗಿರುತ್ತದೆ ಅಂದಮೇಲೆ ಭಾರತವು ವಜ್ರ ಸಮಾನವಾಗಿತ್ತು, ವಜ್ರ ವೈಡೂರ್ಯಗಳ ಮಹಲುಗಳಿದ್ದವು. ಈಗಂತೂ ಮನುಷ್ಯರಿಗೆ ಸಂಪೂರ್ಣವಾಗಿ ತಿನ್ನಲೂ ಸಹ ಇಲ್ಲದಂತಾಗಿದೆ. ಕಂಗಾಲಾಗಿರುವ ವಿಶ್ವವನ್ನು ಮತ್ತೆ ಸಾಹುಕಾರನನ್ನಾಗಿ ಯಾರು ಮಾಡುತ್ತಾರೆ? ಇದು ತಂದೆಯದೇ ಕೆಲಸವಾಗಿದೆ. ತಂದೆಗೇ ದಯೆ ಬರುತ್ತದೆ. ನಿಮಗೆ ರಾಜಯೋಗವನ್ನು ತಿಳಿಸಿ ಕೊಡಲು, ನರನಿಂದ ನಾರಾಯಣನನ್ನಾಗಿ ನಾರಿಯನ್ನು ಲಕ್ಷ್ಮಿಯನ್ನಾಗಿ ಮಾಡಲು ಬರುತ್ತೇನೆ ಎಂದು ತಂದೆಯು ತಿಳಿಸುತ್ತಾರೆ. ಭಕ್ತರ ರಕ್ಷಕ ಒಬ್ಬರೇ ತಂದೆಯಾಗಿದ್ದಾರೆ, ರಾವಣ ಜೈಲಿನಿಂದ ಬಿಡಿಸಿ ನಿಮ್ಮನ್ನು ಸುಖಧಾಮಕ್ಕೆ ಕರೆದುಕೊಂಡು ಹೋಗುತ್ತೇನೆ. ಇಡೀ ಪ್ರಪಂಚದಲ್ಲಿ ಯಾರು ಬ್ರಾಹ್ಮಣರಾಗುತ್ತಾರೆಯೋ ಅವರೇ ದೇವತೆಗಳಾಗುವರು. ಬ್ರಹ್ಮನ ಹೆಸರೂ ಸಹ ಪ್ರಜಾಪಿತ ಬ್ರಹ್ಮನೆಂದು ಪ್ರಸಿದ್ಧವಾಗಿದೆ. ನೀವು ಬ್ರಾಹ್ಮಣರು ಎಲ್ಲರಿಗಿಂತ ಉತ್ತಮರಾಗಿದ್ದೀರಿ. ನೀವು ಭಾರತದ ಸತ್ಯ ಆತ್ಮಿಕ ಸೇವೆ ಮಾಡುತ್ತಿದ್ದೀರಿ. ತಂದೆಯ ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತದೆ, ಪತಿತರಿಂದ ಪಾವನವಾಗುವುದನ್ನು ಬಿಟ್ಟರೆ ಮತ್ತ್ಯಾವುದೇ ದಾರಿಯಿಲ್ಲ. ನೆನಪಿನಿಂದಲೇ ತುಕ್ಕು ಭಸ್ಮವಾಗುತ್ತದೆ. ಯಾವುದು ಅಪ್ಪಟ ಚಿನ್ನವಾಗಿದೆ, ಯಾವುದು ನಕಲಿ ಚಿನ್ನವಾಗುತ್ತದೆ ಎಂದು ಆಚಾರಿಗಳು ತಿಳಿದಿರುತ್ತಾರೆ. ಅದರಲ್ಲಿ ಬೆಳ್ಳಿ, ತಾಮ್ರ, ಲೋಹ ಹಾಕಿದಾಗ ಚಿನ್ನದ ಅಂಶವು ಕಡಿಮೆಯಾಗುತ್ತದೆ. ನೀವೂ ಸಹ ಸತೋಪ್ರಧಾನರಾಗಿದ್ದಿರಿ, ನಿಮ್ಮಲ್ಲಿಯೂ ತುಕ್ಕು ಬೀಳುತ್ತದೆ ಆದ್ದರಿಂದ ತಮೋಪ್ರಧಾನರಾಗುತ್ತೀರಿ. ಈಗ ಪುನಃ ಸತೋಪ್ರಧಾನರಾದಾಗಲೇ ಸತ್ಯಯುಗದಲ್ಲಿ ಹೋಗಲು ಸಾಧ್ಯ. ಯಾವುದೇ ದೇಹಧಾರಿಯನ್ನು ನೆನಪು ಮಾಡಬೇಡಿ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಒಬ್ಬ ತಂದೆಯನ್ನು ಬಿಟ್ಟು ಯಾರನ್ನೂ ನೆನಪು ಮಾಡಬಾರದು ಅಂದಾಗ ನೀವು ಸ್ವರ್ಗ ಪುರಿಯ ಮಾಲೀಕರಾಗಿ ಬಿಡುತ್ತೀರಿ. ಸ್ವರ್ಗ ಅಥವಾ ವಿಷ್ಣು ಪುರಿಯಾಗಿತ್ತು, ಈಗ ರಾವಣ ಪುರಿಯಾಗಿದೆ, ಪುನಃ ಅವಶ್ಯವಾಗಿ ವಿಷ್ಣು ಪುರಿಯಾಗುತ್ತದೆ. ಸಾಧು-ಸಂತರೆಲ್ಲರನ್ನೂ ಉದ್ಧಾರ ಮಾಡಲು ಬರುತ್ತೇನೆ, ಅದಕ್ಕೆ ಯಧಾ ಯಧಾಹೀ ಧರ್ಮಸ್ಯ…. ಎಂದು ಹೇಳುತ್ತಾರೆ. ಇದು ಭಾರತದ ಮಾತಾಗಿದೆ. ಸರ್ವರ ಸದ್ಗತಿದಾತ ನಾನೊಬ್ಬನೇ ಶಿವ ತಂದೆಯಾಗಿದ್ದೇನೆ. ಶಿವ, ರುದ್ರ ಎಂಬುದೆಲ್ಲವೂ ಅವರದೇ ಹೆಸರುಗಳಾಗಿವೆ, ಅನೇಕ ಹೆಸರುಗಳನ್ನು ಇಟ್ಟು ಬಿಟ್ಟಿದ್ದಾರೆ. ನನ್ನ ಸತ್ಯವಾದ ಹೆಸರು ಶಿವ ಎಂದಾಗಿದೆ ಎಂದು ತಿಳಿಸುತ್ತಾರೆ. ನಾನು ಶಿವನಾಗಿದ್ದೇನೆ, ನೀವು ಮಕ್ಕಳು ಸಾಲಿಗ್ರಾಮಗಳಾಗಿದ್ದೀರಿ. ನೀವು ಅರ್ಧಕಲ್ಪ ದೇಹಾಭಿಮಾನದಲ್ಲಿರುತ್ತೀರಿ, ಈಗ ದೇಹೀ-ಅಭಿಮಾನಿಗಳಾಗಿ. ಒಬ್ಬ ತಂದೆಯನ್ನು ತಿಳಿಯುವುದರಿಂದ ಎಲ್ಲವನ್ನೂ ತಿಳಿದು ಬಿಡುತ್ತೀರಿ, ಮಾ|| ಜ್ಞಾನ ಸಾಗರರಾಗುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಶ್ರೀಮತದಂತೆ ನಡೆದು ಶ್ರೇಷ್ಠಾತಿ ಶ್ರೇಷ್ಠ ದೇವತೆಗಳಾಗಬೇಕಾಗಿದೆ. ಇಡೀ ವಿಶ್ವದಲ್ಲಿ ಸತ್ಯ-ಸತ್ಯವಾದ ಆತ್ಮಿಕ ಸೇವೆ ಮಾಡಬೇಕಾಗಿದೆ. ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಗೆ ತಂದೆಗೆ ಸಂಪೂರ್ಣ ಸಹಯೋಗಿಗಳಾಗಬೇಕಾಗಿದೆ.

2. ಆತ್ಮವನ್ನು ಸತ್ಯ ಚಿನ್ನವನ್ನಾಗಿ ಮಾಡಲು ಒಬ್ಬ ತಂದೆಯ ವಿನಃ ಯಾವ ದೇಹಧಾರಿಯನ್ನೂ ನೆನಪು ಮಾಡಬಾರದು. ಪಾರಲೌಕಿಕ ತಂದೆಯ ಜೊತೆ ಸತ್ಯ-ಸತ್ಯವಾದ ಪ್ರೀತಿಯನ್ನಿಡಬೇಕು.

ವರದಾನ:-

ಯಾವುದೇ ಹೊಸ ಅನ್ವೇಷಣೆಯನ್ನು ಮಾಡಲಾಗುತ್ತದೆಯೆಂದರೆ ಅಂಡರ್ಗ್ರೌಂಡ್ನಲ್ಲಿ ಮಾಡುತ್ತಾರೆ. ತಾವೂ ಸಹ ಎಷ್ಟು ಅಂತರ್ಮುಖಿ ಅರ್ಥಾತ್ ಅಂಡರ್ಗ್ರೌಂಡ್ ಆಗಿರುತ್ತೀರಿ, ಅಷ್ಟು ವಾಯುಮಂಡಲದಿಂದ ಪಾರಾಗಿ ಬಿಡುತ್ತೀರಿ, ಮನನ ಶಕ್ತಿಯು ಹೆಚ್ಚಾಗುವುದು ಮತ್ತು ಮಾಯೆಯ ವಿಘ್ನಗಳಿಂದ ಸುರಕ್ಷಿತರು ಆಗಿ ಬಿಡುತ್ತೀರಿ. ಬಾಹರ್ಮುಖತೆಯಲ್ಲಿ ಬರುತ್ತಿದ್ದರೂ ಅಂತರ್ಮುಖತೆ, ಹರ್ಷಿತಮುಖ, ಆಕರ್ಷಣೀಯ ಮೂರ್ತಿಯಾಗಿರಿ – ಈ ಅಭ್ಯಾಸವು ಕರ್ಮ ಮಾಡುತ್ತಿರುವಾಗಲೂ ಇರುತ್ತದೆಯೆಂದರೆ ಸಮಯವೂ ಉಳಿಯುತ್ತದೆ ಮತ್ತು ಅಧಿಕ ಸಫಲತೆಯ ಅನುಭವ ಮಾಡುವಿರಿ.

ಸ್ಲೋಗನ್:-

ಮಾತೇಶ್ವರಿಯವರ ಅಮೂಲ್ಯ ಮಹಾವಾಕ್ಯಗಳು - “ಮನುಷ್ಯನು ಸಾಕ್ಷಾತ್ಕಾರದಲ್ಲಿ ಹೇಗೆ ಹೋಗುವನು?''

ಸಾಕ್ಷಾತ್ಕಾರದಲ್ಲಿ ಹೋಗುವುದರ ಬಗ್ಗೆ ಬಹಳ ಸೂಕ್ಷ್ಮವಾದ ಸಿದ್ಧಾಂತಗಳಿವೆ. ಅಂತಃವಾಹಕ ಶರೀರದ ಮೂಲಕ ಹೋಗಿ ಸುತ್ತಾಡಿಕೊಂಡು ಬರುತ್ತಾರೆ. ಹೇಗೆ ಯಾರಾದರೂ ಹೊರಗೆ ಸುತ್ತಾಡಲು ಹೋಗುತ್ತಾರಲ್ಲವೆ, ಸುತ್ತಾಡಲು ಹೋದರೆಂದರೆ ಸತ್ತರು ಎನ್ನುವಂತಲ್ಲ, ಅವರು ಸುತ್ತಾಡಿಕೊಂಡು ಹಿಂತಿರುಗಿ ಬರುವರಲ್ಲವೆ. ಅದೇರೀತಿ ಇಲ್ಲಿ ಆತ್ಮವೂ ಸಹ ಈ ಶರೀರದಿಂದ ಹೊರ ಬಂದು ಅಂತಃವಾಹಕ ಶರೀರದಿಂದ ಪರಿಕ್ರಮಣ ಮಾಡಲು ಹೋಗುತ್ತದೆ, ಸ್ವಲ್ಪ ಸಮಯಕ್ಕಾಗಿ ಈ ಆತ್ಮವು ಹಾರುವ ಪಕ್ಷಿಯಾಗುತ್ತದೆ. ಇದೂ ಸಹ ಪರಮಾತ್ಮನದೇ ಕಾರ್ಯವಾಗಿದೆ, ಅವರ ಸ್ನೇಹವನ್ನು ಸೆಳೆಯುತ್ತಾ ಅವರಿಗೆ ದಿವ್ಯ ದೃಷ್ಟಿಯಿಂದ ಸಾಕ್ಷಾತ್ಕಾರ ಮಾಡಿಸುತ್ತಾರೆ. ಹೇಗೆ ರಾತ್ರಿಯಲ್ಲಿ ನಾವು ಶರೀರದಿಂದ ನಿರ್ಲಿಪ್ತ ಆತ್ಮನಾಗಿ ಸುಖದ ಮಾರ್ಗ ಅಥವಾ ಸ್ವಪ್ನಾವಸ್ಥೆಯಲ್ಲಿ ಹೊರಟು ಹೋಗುತ್ತೇವೆ, ಅದೇ ಸಮಯದಲ್ಲಿ ಶರೀರವು ಶಾಂತವಾಗಿರುತ್ತದೆ, ಆಗ ದೇಹ ಮತ್ತು ದೇಹದ ಧರ್ಮವೆಲ್ಲವೂ ಮರೆತು ಹೋಗುತ್ತದೆ. ಆದರೆ ಈ ರೀತಿಯಲ್ಲ – ಇವರ ಶರೀರವು ಸತ್ತು ಹೋಯಿತು, ನಂತರ ಯಾವಾಗ ಜಾಗೃತವಾಗುತ್ತಾರೆಯೋ ಆಗ ರಾತ್ರಿಯ ಸ್ವಪ್ನಾವಸ್ಥೆಯ ವರ್ಣನೆಯನ್ನು ಮಾಡುತ್ತಾ ತಿಳಿಸುತ್ತಾರೆ ಎಂದಲ್ಲ. ಇದು ಪರಮಾತ್ಮನ ಜೊತೆ ಯೋಗವನ್ನಿಡುವುದರಿಂದ ಪರಮಾತ್ಮನು ಆ ಆತ್ಮನನ್ನು ದಿವ್ಯ ದೃಷ್ಟಿಯಿಂದ ಪರಿಕ್ರಮಣ ಮಾಡಿಸುತ್ತಾರೆ. ನಂತರ ಯಾವಾಗ ಧ್ಯಾನದಿಂದ ಮೇಲೇಳುತ್ತಾರೆಯೋ ಆಗ ಅವರು ನೋಡಿರುವುದೆಲ್ಲವೂ ಸಾಕ್ಷಾತ್ಕಾರವಾಗಿರುತ್ತದೆ, ಅದನ್ನು ವರ್ಣನೆ ಮಾಡಿ ತಿಳಿಸುತ್ತಾರೆ – ನಾವು ಇದನ್ನು ನೋಡಿ ಬಂದೆವು. ಅಂದಾಗ ಆ ಸ್ವಪ್ನವು ರಜೋಗುಣ, ತಮೋಗುಣವೂ ಆಗಿರುತ್ತದೆ, ಈ ಧ್ಯಾನವು ಸತೋಗುಣಿ ಸ್ಥಿತಿಯಾಗಿದೆ. ಧ್ಯಾನದಲ್ಲಿ ಯಾರದೇ ಶರೀರವು ಸಾಯುವುದಿಲ್ಲ, ಆದರೆ ಶರೀರದ ಪರಿವೆಯು ಮರ್ಜ್ ಆಗಿ ಬಿಡುತ್ತದೆ. ಹೇಗೆ ಕ್ಲೋರೋ ಫಾರ್ಮ್ ಕೊಡುವುದರಿಂದ ಶರೀರದ ಪರಿವೆಯೇ ಮರೆತು ಹೋಗುತ್ತದೆ. ಹೇಗೆ ವೈದ್ಯರುಗಳು ಯಾವುದೇ ಅಂಗವನ್ನು ಮರೆಸುತ್ತಾರೆಂದರೆ, ಇಂಜೆಕ್ಷನ್ ಹಾಕಿ ಡೆಡ್(ಮೂರ್ಛೆ) ಮಾಡಿ ಬಿಡುತ್ತಾರೆ. ಆದರೆ ಅನ್ಯ ಇಂದ್ರಿಯಗಳ ಕೆಲಸವು ನಡೆಯುತ್ತಿರುತ್ತದೆ. ಇದೇ ರೀತಿ ಧ್ಯಾನದಲ್ಲಿಯೂ ನಡೆಯುತ್ತದೆ – ಯಾವುದೇ ಆತ್ಮವು ಹಾರಿಕೊಂಡು ಹೋಗಿ ಪರಿಕ್ರಮಣ ಮಾಡಿ ಬರುತ್ತದೆ ಆದರೆ ಶರೀರವು ಸಾಯುವುದಿಲ್ಲ, ಈಗ ಈ ಸ್ನೇಹದ ಸಂಬಂಧವನ್ನು ಸೆಳೆಯುವ ಸ್ಮೃತಿಯೂ ಪರಮಾತ್ಮನಲ್ಲಿದೆ, ಮನುಷ್ಯಾತ್ಮರಲ್ಲಿ ಇಲ್ಲ. ಒಳ್ಳೆಯದು. ಓಂ ಶಾಂತಿ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top