14 June 2021 KANNADA Murli Today | Brahma Kumaris

Read and Listen BK Murli Of 14 June 2021 in Kannada Murli Today | Daily Murli Online

June 13, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಯಾವಾಗ ಈ ಹಳೆಯ ಪ್ರಪಂಚದಿಂದ ಬೇಹದ್ದಿನ ವೈರಾಗ್ಯ ಬರುವುದೋ ಆಗಲೇ ತಂದೆಯ ಜೊತೆ ಜೊತೆಯಲ್ಲಿ ಹೋಗಲು ಸಾಧ್ಯ”

ಪ್ರಶ್ನೆ:: -

ಭಗವಂತನು ಸಮರ್ಥನಾಗಿದ್ದರೂ ಸಹ ಅವರು ರಚಿಸಿರುವ ಯಜ್ಞದಲ್ಲಿ ವಿಘ್ನಗಳು ಏಕೆ ಬೀಳುತ್ತವೆ?

ಉತ್ತರ:-

ಏಕೆಂದರೆ ರಾವಣನು ಭಗವಂತನಿಗಿಂತಲೂ ತೀಕ್ಷ್ಣವಾಗಿದ್ದಾನೆ, ಯಾವಾಗ ಅವನ ರಾಜ್ಯವನ್ನು ಕಸಿದುಕೊಳ್ಳಲಾಗುವುದೋ ಆಗ ಅವನು ವಿಘ್ನಗಳನ್ನು ಹಾಕಿಯೇ ಹಾಕುತ್ತಾನೆ. ಆರಂಭದಿಂದ ಹಿಡಿದು ಡ್ರಾಮಾನುಸಾರ ಈ ಯಜ್ಞದಲ್ಲಿ ವಿಘ್ನಗಳು ಬೀಳುತ್ತಲೇ ಬಂದಿದೆ, ಬೀಳಲೇಬೇಕಾಗಿದೆ. ನಾವು ಪತಿತ ಪ್ರಪಂಚದಿಂದ ಪಾವನ ಪ್ರಪಂಚಕ್ಕೆ ವರ್ಗಾಯಿತರಾಗುತ್ತಿದ್ದೇವೆ ಅಂದಮೇಲೆ ಅವಶ್ಯವಾಗಿ ಪತಿತ ಮನುಷ್ಯರು ವಿಘ್ನಗಳನ್ನು ಹಾಕುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಓ ದೂರದ ಯಾತ್ರಿಕನೇ………..

ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯ ಸಾಲನ್ನು ಕೇಳಿದಿರಿ. ಹೇಗೆ ವೇದ ಶಾಸ್ತ್ರಗಳು ಭಕ್ತಿಮಾರ್ಗದ ದಾರಿಯನ್ನು ತಿಳಿಸುತ್ತದೆ ಹಾಗೆಯೇ ಹಾಡುಗಳೂ ಸಹ ಸ್ವಲ್ಪ ಮಾರ್ಗವನ್ನು ತಿಳಿಸುತ್ತದೆ. ಮನುಷ್ಯರಂತೂ ಏನನ್ನೂ ತಿಳಿದುಕೊಳ್ಳುವುದಿಲ್ಲ, ಶಾಸ್ತ್ರಗಳ ಕಥೆಗಳನ್ನು ಕೇಳುವುದು ಹಾಗೆ ಕನರಸವಾಗಿದೆ. ದೂರ ದೇಶದ ಯಾತ್ರಿಕನೆಂದು ಯಾರಿಗೆ ಹೇಳಲಾಗುತ್ತದೆ ಎಂಬುದನ್ನು ಮಕ್ಕಳು ತಿಳಿದುಕೊಂಡಿದ್ದೀರಿ. ಆತ್ಮಕ್ಕೆ ಗೊತ್ತಿದೆ – ನಾವೂ ಸಹ ದೂರದ ಯಾತ್ರಿಕರಾಗಿದ್ದೇವೆ, ನಮ್ಮ ಮನೆಯು ಶಾಂತಿಧಾಮವಾಗಿದೆ. ಮನುಷ್ಯರು ಈ ಮಾತುಗಳನ್ನು ತಿಳಿದುಕೊಳ್ಳಲಿಲ್ಲವೆಂದರೆ ಅವರು ಏನನ್ನೂ ತಿಳಿದುಕೊಂಡಿಲ್ಲವೆಂದರ್ಥ. ತಂದೆಯನ್ನು ತಿಳಿಯದೇ ಇರುವ ಕಾರಣ ಸೃಷ್ಟಿಚಕ್ರವನ್ನೂ ಸಹ ಯಾರೂ ತಿಳಿದುಕೊಳ್ಳುವುದಿಲ್ಲ. ಇದನ್ನು ಆತ್ಮವು ತಿಳಿದುಕೊಳ್ಳುತ್ತದೆ, ಶಿವ ತಂದೆಯು ಹೇಳುತ್ತಾರೆ – ನಾನು ತತ್ಕಾಲಕ್ಕಾಗಿ ಜೀವಾತ್ಮನಾಗುತ್ತೇನೆ. ನೀವು ಸ್ಥಿರವಾಗಿ ಜೀವಾತ್ಮರಾಗುತ್ತೀರಿ, ನಾನು ಕೇವಲ ಸಂಗಮದಲ್ಲಿಯೇ ಸ್ವಲ್ಪ ಸಮಯಕ್ಕಾಗಿ ಜೀವಾತ್ಮನಾಗಿದ್ದೇನೆ, ನಾನು ನಿಮ್ಮ ತರಹ ಆಗುವುದಿಲ್ಲ. ನಾನು ನನ್ನ ಪರಿಚಯ ಕೊಡಲು ಈ ಜೀವದಲ್ಲಿ ಪ್ರವೇಶ ಮಾಡುತ್ತೇನೆ. ಇಲ್ಲವಾದರೆ ನಿಮಗೆ ಹೇಗೆ ಪರಿಚಯ ಕೊಡಲಿ? ತಂದೆಯು ತಿಳಿಸುತ್ತಾರೆ – ಆತ್ಮಿಕ ತಂದೆಯು ಒಬ್ಬರೇ ಆಗಿದ್ದಾರೆ, ಅವರಿಗೆ ಶಿವ ತಂದೆ ಅಥವಾ ಭಗವಂತನೆಂದು ಹೇಳುತ್ತಾರೆ, ಮತ್ತ್ಯಾರೂ ತಿಳಿದುಕೊಂಡಿಲ್ಲ. ಇದರಲ್ಲಿ ಪವಿತ್ರತೆಯದೂ ಬಂಧನವಿದೆ. ಮನುಷ್ಯರ ಲೆಕ್ಕದಲ್ಲಿ ತಮ್ಮನ್ನು ಆತ್ಮನೆಂದು ತಿಳಿಯುವುದೇ ಅತಿ ದೊಡ್ಡ ಬಂಧನವಾಗಿದೆ. ಯಾವ ದೂರದ ಯಾತ್ರಿಕ, ಪತಿತ-ಪಾವನನ್ನು ಭಕ್ತಿಮಾರ್ಗದಲ್ಲಿ ನೆನಪು ಮಾಡುತ್ತಾರೆ. ಆ ಆತ್ಮಿಕ ತಂದೆಯು ತಿಳಿಸುತ್ತಾರೆ – ನಾನು ಎಲ್ಲರನ್ನೂ ಕರೆದುಕೊಂಡು ಹೋಗುತ್ತೇನೆ. ಯಾರನ್ನೂ ಬಿಟ್ಟು ಹೋಗುವುದಿಲ್ಲ, ಎಲ್ಲರೂ ಹಿಂತಿರುಗಿ ಹೋಗಲೇಬೇಕಾಗಿದೆ. ಪ್ರಳಯವಾಗುವುದಿಲ್ಲ, ಭಾರತ ಖಂಡವಂತೂ ಇದ್ದೇ ಇದೆ. ಭಾರತ ಖಂಡವು ಎಂದೂ ವಿನಾಶವಾಗುವುದಿಲ್ಲ. ಸತ್ಯಯುಗದ ಆದಿಯಲ್ಲಿ ಕೇವಲ ಭಾರತ ಖಂಡವೇ ಇರುತ್ತದೆ, ಕಲ್ಪದ ಸಂಗಮದಲ್ಲಿ ತಂದೆಯು ಬಂದಾಗ ಆದಿ ಸನಾತನ ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡಲಾಗುತ್ತದೆ. ಉಳಿದೆಲ್ಲಾ ಧರ್ಮಗಳು ವಿನಾಶವಾಗುವವು. ನೀವೂ ಸಹ ಆದಿ ಸನಾತನ ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡುವುದರಲ್ಲಿ ಸಹಯೋಗ ನೀಡುತ್ತಿದ್ದೀರಿ. ಗೀತೆಯನ್ನು ಕೇಳಿದಿರಿ – ಬಾಬಾ, ನಮ್ಮನ್ನೂ ಸಹ ಜೊತೆ ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ, ಎಲ್ಲಿಯವರೆಗೂ ಹಳೆಯ ಪ್ರಪಂಚದೊಂದಿಗೆ ವೈರಾಗ್ಯ ಬರುವುದಿಲ್ಲವೋ ಅಲ್ಲಿಯವರೆಗೆ ಯಾರನ್ನೂ ಜೊತೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಹೊಸ ಮನೆಯು ತಯಾರಾದಾಗ ಹಳೆಯದರೊಂದಿಗೆ ಪ್ರೀತಿಯು ಹೊರಟು ಹೋಗುತ್ತದೆ. ನೀವೂ ಸಹ ತಿಳಿದುಕೊಂಡಿದ್ದೀರಿ, ಈ ಹಳೆಯ ಪ್ರಪಂಚವು ಸಮಾಪ್ತಿಯಾಗುವುದು, ಈಗ ಹೊಸ ಪ್ರಪಂಚದಲ್ಲಿ ಹೋಗಬೇಕಾಗಿದೆ. ಎಲ್ಲಿಯವರೆಗೆ ಸತೋಪ್ರಧಾನರಾಗುವುದಿಲ್ಲವೋ ಅಲ್ಲಿಯವರೆಗೆ ಸತೋಪ್ರಧಾನ ದೇವಿ-ದೇವತೆಗಳಾಗಲು ಸಾಧ್ಯವಿಲ್ಲ. ಆದ್ದರಿಂದ ತಂದೆಯು ಪದೇ-ಪದೇ ತಿಳಿಸುತ್ತಾರೆ – ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುತ್ತಾ ಇರಿ. ಸದ್ಗತಿ ಕೊಡುವಂತಹ ದೂರದ ಯಾತ್ರಿಕನು ಬಂದಿದ್ದಾರೆ, ಅವರನ್ನು ಪ್ರಪಂಚದವರು ತಿಳಿದುಕೊಂಡಿಲ್ಲ, ಅವರಿಗೆ ಸರ್ವವ್ಯಾಪಿ ಎಂದು ಹೇಳಿ ಬಿಟ್ಟಿದ್ದಾರೆ. ಈಗ ನೀವು ಮಕ್ಕಳು ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ, ನಾವು ಶಿವ ತಂದೆಯ ಸಂತಾನರಾಗಿದ್ದೇವೆ. ಮಧುಬನಕ್ಕೆ ಬಂದಾಗಲೂ ಸಹ ನಾವು ಬಾಪ್ದಾದಾರವರ ಬಳಿ ಹೋಗುತ್ತೇವೆಂದು ತಿಳಿಯುತ್ತಾರೆ ಅಂದಮೇಲೆ ಇದು ಪರಿವಾರವಾಯಿತು. ಇದು ಈಶ್ವರೀಯ ಪರಿವಾರವಾಗಿದೆ. ಯಾರಿಗೆ ಬಹಳ ಮಂದಿ ಮಕ್ಕಳಿರುವರೋ ಅವರದು ಬಹಳ ದೊಡ್ಡ ಪರಿವರ್ತನೆಯಾಗಿ ಬಿಡುತ್ತದೆ. ಶಿವ ತಂದೆಗೂ ಸಹ ಯಾವ ಬಿ.ಕೆ. ಸಹೋದರ-ಸಹೋದರಿಯರಿದ್ದಾರೆಯೋ ಇವರದೂ ಸಹ ಬಹಳ ದೊಡ್ಡ ಪರಿವರ್ತನೆಯಾಗುತ್ತದೆ. ಬ್ರಹ್ಮಾಕುಮಾರ-ಕುಮಾರಿಯರೆಲ್ಲರೂ ತಿಳಿದುಕೊಂಡಿದ್ದೀರಿ – ನಾವು ಬೇಹದ್ದಿನ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಶಾಸ್ತ್ರಗಳಲ್ಲಿ ಪಾಂಡವರು ಮತ್ತು ಕೌರವರು ಜೂಜಾಟವನ್ನು ಆಡಿದರು, ಅದರ ರಾಜ್ಯವನ್ನೇ ಪಣವಾಗಿ ಇಟ್ಟರು ಎಂದು ತೋರಿಸುತ್ತಾರೆ. ಈಗ ರಾಜ್ಯವು ಕೌರವರಿಗೂ ಇಲ್ಲ, ಪಾಂಡವರಿಗೂ ಇಲ್ಲ, ಕಿರೀಟ ಇತ್ಯಾದಿಗಳೂ ಇಲ್ಲ. ಅವರನ್ನು ನಗರದಿಂದಲೇ ಹೊರಗೆ ಕಳುಹಿಸಲಾಯಿತು, ಆಯುಧಗಳನ್ನು ತೆಗೆದುಕೊಂಡು ಹೋಗಿ ಒಂದು ಕಡೆ ಬಚ್ಚಿಟ್ಟರು ಎಂದು ತೋರಿಸುತ್ತಾರೆ. ಇವೆಲ್ಲವೂ ದಂತ ಕಥೆಗಳಾಗಿವೆ. ಪಾಂಡವರ ರಾಜ್ಯವಾಗಲಿ, ಕೌರವರ ರಾಜ್ಯವಾಗಲಿ ಇಲ್ಲ. ಅವರ ಪರಸ್ಪರ ಯುದ್ಧವೂ ನಡೆಯಲಿಲ್ಲ. ರಾಜರ ನಡುವೆ ಯುದ್ಧವಾಗುತ್ತದೆ. ಇವರಂತೂ ಸಹೋದರ-ಸಹೋದರರಾಗಿದ್ದಾರೆ. ಕೌರವರು ಮತ್ತು ಯಾದವರ ಯುದ್ಧವಾಯಿತು. ಬಾಕಿ ಸಹೋದರರು ಒಬ್ಬರು ಇನ್ನೊಬ್ಬರನ್ನು ಹೇಗೆ ಸಮಾಪ್ತಿ ಮಾಡುವರು! ಪಾಂಡವರು, ಕೌರವರು ಹೊಡೆದಾಡಿದರು, ಕೊನೆಗೆ ಐದು ಜನ ಪಾಂಡವರು ಉಳಿದುಕೊಂಡರು. ಜೊತೆಗೆ ಒಂದು ನಾಯಿಯೂ ಉಳಿದುಕೊಂಡಿತು. ಅವರೂ ಸಹ ಪರ್ವತಗಳ ಮೇಲೆ ಹೋಗಿ ಕರಗಿ ಹೋದರೆಂದು ತೋರಿಸುತ್ತಾರೆ. ಆಟವೇ ಸಮಾಪ್ತಿ, ಇದರಿಂದ ರಾಜಯೋಗಕ್ಕೆ ಅರ್ಥವೇ ಬರುವುದಿಲ್ಲ.

ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ತಂದೆಯು ಕಲ್ಪ-ಕಲ್ಪವೂ ಬಂದು ಒಂದು ಧರ್ಮದ ಸ್ಥಾಪನೆ ಮಾಡುತ್ತಾರೆ. ಹೇ ಪತಿತ-ಪಾವನ ತಂದೆಯೇ ಬನ್ನಿ, ಬಂದು ಪತಿತರಿಂದ ಪಾವನರನ್ನಾಗಿ ಮಾಡಿ ಎಂದು ಅವರನ್ನೇ ಕರೆಯುತ್ತಾರೆ. ಸತ್ಯಯುಗದಲ್ಲಿ ಸೂರ್ಯವಂಶಿ ರಾಜಧಾನಿಯೇ ಇರುತ್ತದೆ. ಬ್ರಹ್ಮಾರವರ ಮೂಲಕ ವಿಷ್ಣು ಪುರಿಯ ಸ್ಥಾಪನೆಯಾಗುತ್ತಿದೆ. ಈಗ ತಂದೆಯು ಬಂದಿದ್ದಾರೆ ಅಂದಮೇಲೆ ಅವರ ಆದೇಶದಂತೆ ನಡೆಯಬೇಕಾಗಿದೆ, ಕಮಲ ಪುಷ್ಫ ಸಮಾನ ಪವಿತ್ರರಾಗಿರಬೇಕಾಗಿದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲ ಪುಷ್ಫ ಸಮಾನರಾಗಿರಿ ಎಂದು ಕನ್ಯೆಯರಿಗೆ ಹೇಳಲಾಗುವುದಿಲ್ಲ. ಅವರಂತೂ ಪವಿತ್ರರಾಗಿಯೇ ಇದ್ದಾರೆ, ಇದನ್ನು ಗೃಹಸ್ಥಿಗಳಿಗಾಗಿ ಹೇಳಲಾಗುತ್ತದೆ. ಕುಮಾರ-ಕುಮಾರಿಯರಂತೂ ವಿವಾಹ ಮಾಡಿಕೊಳ್ಳಲೇಬಾರದು. ಇಲ್ಲದಿದ್ದರೆ ಅವರೂ ಸಹ ಗೃಹಸ್ಥಿಯಾಗಿ ಬಿಡುವರು. ಕೆಲವು ಗಂಧರ್ವ ವಿವಾಹಗಳ ಹೆಸರೂ ಇದೆ. ಕನ್ಯೆಯರ ಮೇಲೆ ಬಹಳ ಪೆಟ್ಟು ಬಿದ್ದಾಗ ಅಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಗಂಧರ್ವ ವಿವಾಹ ಮಾಡಿಸಲಾಗುತ್ತದೆ. ವಾಸ್ತವದಲ್ಲಿ ಪೆಟ್ಟುಗಳನ್ನು ಸಹನೆ ಮಾಡಿದರೂ ಪರವಾಗಿಲ್ಲ ಆದರೆ ಅಧರ್ ಕುಮಾರಿಯಾಗಬಾರದು. ಬಾಲ ಬ್ರಹ್ಮಾಚಾರಿಯ ಹೆಸರು ಬಹಳ ಪ್ರಸಿದ್ಧವಾಗುತ್ತದೆ. ವಿವಾಹ ಮಾಡಿಕೊಂಡರೆ ಅರ್ಧಾಂಗಿಯಾಗಿ ಬಿಡುವರು. ಕುಮಾರರಿಗೆ ಹೇಳಲಾಗುತ್ತದೆ, ನೀವಂತೂ ಪವಿತ್ರರಾಗಿರಿ, ಗೃಹಸ್ಥ ವ್ಯವಹಾರದಲ್ಲಿರುವವರಿಗೆ ಹೇಳಲಾಗುತ್ತದೆ, ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲ ಪುಷ್ಫ ಸಮಾನವಾಗಿರಿ. ಅವರಿಗೇ ಪರಿಶ್ರಮವಾಗುತ್ತದೆ. ವಿವಾಹ ಮಾಡಿಕೊಳ್ಳದಿದ್ದರೆ ಬಂಧನವಿರುವುದಿಲ್ಲ, ಕನ್ಯೆಯರಂತೂ ಓದಬೇಕಾಗಿದೆ ಮತ್ತು ಜ್ಞಾನದಲ್ಲಿ ಬಹಳ ಧೃಡವಾಗಿರಬೇಕಾಗಿದೆ. ಚಿಕ್ಕ ಕುಮಾರಿಯರು ಅಪ್ರಾಪ್ತ ವಯಸ್ಕವರಿದ್ದಾರೆಯೋ ಅವರನ್ನು ನಾವು ಇಟ್ಟುಕೊಳ್ಳಲು ಸಾಧ್ಯವಿಲ್ಲ, ಅವರು ತಮ್ಮ ಮನೆಯಲ್ಲಿದ್ದೇ ಓದಬಹುದು. ಒಂದುವೇಳೆ ಅವರ ಮಾತಾಪಿತರು ಜ್ಞಾನದಲ್ಲಿ ಬಂದರೆ ಅವರನ್ನು ಇಟ್ಟುಕೊಳ್ಳಬಹುದು. ಇದು ಶಾಲೆಗೆ ಶಾಲೆಯೂ ಆಗಿದೆ, ಮನೆಗೆ ಮನೆಯೂ ಆಗಿದೆ ಮತ್ತು ಸತ್ಸಂಗವೂ ಆಗಿದೆ. ಸತ್ಯವೆಂದರೆ ಒಬ್ಬ ತಂದೆಯಾಗಿದ್ದಾರೆ, ಓ ದೂರದ ಯಾತ್ರಿಕನೇ ಎಂದು ಅವರಿಗೇ ಹೇಳುತ್ತಾರೆ. ಆತ್ಮವು ಪವಿತ್ರವಾಗುತ್ತದೆ, ತಂದೆಯು ಹೇಳುತ್ತಾರೆ – ನಾನು ಯಾತ್ರಿಕನು ಸದಾ ಪವಿತ್ರನಾಗಿರುತ್ತೇನೆ. ನಾನು ಬಂದು ಎಲ್ಲಾ ಆತ್ಮರನ್ನು ಪವಿತ್ರ, ಸುಂದರರನ್ನಾಗಿ ಮಾಡುತ್ತೇನೆ, ಮತ್ತ್ಯಾವುದೇ ಯಾತ್ರಿಕರು ಈ ರೀತಿಯಿರುವುದಿಲ್ಲ. ತಂದೆಯು ತಿಳಿಸುತ್ತಾರೆ – ನಾನು ರಾವಣ ರಾಜ್ಯದಲ್ಲಿ ಬಂದಿದ್ದೇನೆ, ಈ ಶರೀರವು ಪರ ಆಗಿದೆ. ಇದು ನನ್ನ ಶರೀರವಾಗಿದೆ ಎಂದು ನೀವಾತ್ಮರು ಹೇಳುತ್ತೀರಿ. ತಂದೆಯು ಹೇಳುತ್ತಾರೆ – ಇದು ನನ್ನ ಶರೀರವಲ್ಲ, ಇದು ಇವರ ಶರೀರವಾಗಿದೆ. ಈ ಪತಿತ ಶರೀರವು ನನ್ನದಲ್ಲ, ಇವರ ಬಹಳ ಜನ್ಮಗಳ ಅಂತಿಮದಲ್ಲಿ ನಾನು ಬರುತ್ತೇನೆ. ಯಾರು ನಂಬರ್ವನ್ ಪಾವನರಾಗಿದ್ದರೋ ಅವರೇ ಕೊನೆಯಲ್ಲಿ ವಿಕಾರಿಯಾಗುತ್ತಾರೆ, ಮೊಟ್ಟ ಮೊದಲಿಗೆ 16 ಕಲಾ ಸಂಪೂರ್ಣನಾಗಿದ್ದರು, ಈಗ ಯಾವುದೇ ಕಲೆಯಿಲ್ಲ. ವಾಸ್ತವದಲ್ಲಿ ಎಲ್ಲರೂ ಪತಿತರಾಗಿದ್ದಾರೆ ಅಂದಾಗ ತಂದೆಯು ದೂರದೇಶದ ಯಾತ್ರಿಕನಾದರಲ್ಲವೆ. ನೀವಾತ್ಮರೂ ಸಹ ಯಾತ್ರಿಕರಾಗಿದ್ದೀರಿ, ಇಲ್ಲಿ ಬಂದು ಪಾತ್ರವನ್ನಭಿನಯಿಸುತ್ತೀರಿ. ಈ ಸೃಷ್ಟಿಚಕ್ರವನ್ನು ಯಾರೂ ಅರಿತುಕೊಂಡಿಲ್ಲ, ಭಲೆ ಯಾರೆಷ್ಟಾದರೂ ಶಾಸ್ತ್ರಗಳನ್ನು ಓದಿರಬಹುದು ಆದರೆ ಈ ಜ್ಞಾನವನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ನಾನು ಇವರ ತನುವಿನಲ್ಲಿ ಪ್ರವೇಶ ಮಾಡಿ ಆತ್ಮರಿಗೆ ಜ್ಞಾನ ಕೊಡುತ್ತೇನೆ. ಅಲ್ಲಿ ಮನುಷ್ಯರು ಮನುಷ್ಯರಿಗೆ ಶಾಸ್ತ್ರಗಳ ಜ್ಞಾನವನ್ನು ತಿಳಿಸುತ್ತಾರೆ, ಅವರು ಭಕ್ತರಾದರು. ಸದ್ಗತಿದಾತನೂ ಒಬ್ಬರೇ ಆಗಿದ್ದಾರೆ, ಅವರೇ ಜ್ಞಾನ ಸಾಗರನಾಗಿದ್ದಾರೆ, ಅವರನ್ನು ಅರಿತುಕೊಳ್ಳದ ಕಾರಣ ದೇಹಾಭಿಮಾನವು ಬಂದು ಬಿಡುತ್ತದೆ. ಅವರ್ಯಾರೂ ಸಹ ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಿ ಎಂದು ಹೇಳುವುದಿಲ್ಲ, ಆತ್ಮವೇ ಓದುತ್ತದೆ ಎಂಬುದನ್ನು ಯಾರೂ ತಿಳಿಸುವುದಿಲ್ಲ ಏಕೆಂದರೆ ದೇಹಾಭಿಮಾನವಿದೆ, ಈಗ ದೂರದ ಯಾತ್ರಿಕನೆಂದು ಶಿವ ತಂದೆಗೇ ಹೇಳುತ್ತಾರೆ. ನೀವು ತಿಳಿದುಕೊಂಡಿದ್ದೀರಿ – ನಾವು 84 ಜನ್ಮಗಳ ಚಕ್ರವನ್ನು ಸುತ್ತಿದ್ದೇವೆ.

ತಂದೆಯು ಹೇಳುತ್ತಾರೆ – 5000 ವರ್ಷಗಳ ಮೊದಲೂ ಸಹ ತಿಳಿಸಿದ್ದೆವು, ಮಕ್ಕಳೇ ನೀವು ತಮ್ಮ ಜನ್ಮಗಳನ್ನು ಅರಿತುಕೊಂಡಿಲ್ಲ, ನಾನು ಅರಿತಿದ್ದೇನೆ. ಗೀತೆಯಲ್ಲಿ ಹಿಟ್ಟಿನಲ್ಲಿ ಉಪ್ಪಿನಷ್ಟು ಕೆಲವೊಂದು ಮಾತುಗಳು ಸರಿಯಾಗಿದೆ, ಅದೇ ಗೀತಾ ಭಾಗ, ಅದೇ ಮಹಾ ಭಾರತ ಯುದ್ಧ, ಅದೇ ಮನ್ಮನಾಭವ-ಮಧ್ಯಾಜೀ ಭವದ ಜ್ಞಾನವಾಗಿದೆ. ನನ್ನೊಬ್ಬನನ್ನೇ ನೆನಪು ಮಾಡಿ, ಯುದ್ಧವೂ ಸಹ ಅವಶ್ಯವಾಗಿ ಆಯಿತು. ಪಾಂಡವರ ವಿಜಯವಾಯಿತು, ವಿಷ್ಣುವಿನ ವಿಜಯ ಮಾಲೆಯ ಗಾಯನವೂ ಇದೆ. ಪಾಂಡವರು ಪರ್ವತಗಳ ಮೇಲೆ ಕರಗಿ ಹೋದರೆಂದು ಶಾಸ್ತ್ರಗಳಲ್ಲಿ ತೋರಿಸಿದ್ದಾರೆ ಅಂದಮೇಲೆ ಮಾಲೆಯು ಎಲ್ಲಿ ಆಯಿತು? ಈಗ ನೀವು ತಿಳಿದುಕೊಂಡಿದ್ದೀರಿ – ವಿಷ್ಣುವಿನ ಮಾಲೆಯಾಗಲು ನಾವಿಲ್ಲಿ ಬಂದಿದ್ದೇವೆ. ಪತಿತ-ಪಾವನ ತಂದೆಯು ಮೇಲಿದ್ದಾರೆ, ಅವರ ನೆನಪಾರ್ಥವು ಬೇಕಲ್ಲವೆ. ಭಕ್ತಿಮಾರ್ಗದಲ್ಲಿ ನೆನಪಾರ್ಥದ ಗಾಯನವಾಗುತ್ತದೆ. ಕೆಲವರದು 8ರ ಮಾಲೆ, ಕೆಲವರದು 108ರ ಮಾಲೆ ಮತ್ತು 16,108ರ ಮಾಲೆಯನ್ನು ಮಾಡಿದ್ದಾರೆ. ನಿಮ್ಮ ಏರುವ ಕಲೆಯಿಂದ ಸರ್ವರ ಉನ್ನತಿಯಾಗುವುದೆಂದು ಹಾಡುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ – ನಮ್ಮದು ಏರುವ ಕಲೆಯಾಗಿದೆ, ನಾವು ನಮ್ಮ ಸುಖಧಾಮಕ್ಕೆ ಹೋಗುತ್ತೇವೆ. ಅಲ್ಲಿಂದ ಮತ್ತೆ ಕೆಳಗಡೆ ಹೇಗೆ ಇಳಿಯುತ್ತೇವೆ, 84 ಜನ್ಮಗಳನ್ನು ಹೇಗೆ ತೆಗೆದುಕೊಳ್ಳುತ್ತೇವೆ – ಇದೆಲ್ಲಾ ಜ್ಞಾನವು ನಿಮ್ಮ ಬುದ್ಧಿಯಲ್ಲಿದೆ. ಈ ಜ್ಞಾನವನ್ನು ಮರೆಯಬಾರದು. ನಮ್ಮೆಲ್ಲಾ ದುಃಖವನ್ನು ದೂರಮಾಡಲು, ಶಾಪವನ್ನು ಕಳೆದು ಸುಖದ ಆಸ್ತಿಯನ್ನು ಕೊಡಲು ತಂದೆಯು ಬಂದಿದ್ದಾರೆ. ರಾವಣನ ಶಾಪದಿಂದ ಎಲ್ಲರಿಗೆ ದುಃಖವಾಗುತ್ತದೆ. ಆದ್ದರಿಂದ ಈಗ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಬೇಕಾಗಿದೆ. ನೀವು ತಿಳಿದುಕೊಂಡಿದ್ದೀರಿ – ಸೂರ್ಯವಂಶಿಯರೇ ಭಾರತದಲ್ಲಿ ರಾಜ್ಯ ಮಾಡಿದೆವು. ಶಿವ ತಂದೆಯು ಭಾರತದಲ್ಲಿಯೇ ಬರುತ್ತಾರೆ, ಭಾರತವೇ ಸ್ವರ್ಗವಾಗಿತ್ತು. ಇದನ್ನು ಪದೇ-ಪದೇ ಬುದ್ಧಿಯಲ್ಲಿ ನೆನಪು ಮಾಡಿಕೊಳ್ಳಬೇಕಾಗಿದೆ. ಯಾರು 84 ಜನ್ಮಗಳ ಚಕ್ರವನ್ನು ಸುತ್ತಿರುವುದಿಲ್ಲವೋ ಅವರು ಧಾರಣೆ ಮಾಡುವುದಿಲ್ಲ, ಅನ್ಯರಿಗೂ ಮಾಡಿಸುವುದಿಲ್ಲ, ಅಂತಹವರು 84 ಜನ್ಮಗಳನ್ನು ತೆಗೆದುಕೊಂಡಿಲ್ಲವೆಂದು ತಿಳಿಯಲಾಗುವುದು. ಅವರು ತಡವಾಗಿ ಬರುತ್ತಾರೆ. ಸ್ವರ್ಗದಲ್ಲಿ ಬರುವುದಿಲ್ಲ, ಮೊಟ್ಟ ಮೊದಲಿಗೇ ಹೋಗುವುದು ಒಳ್ಳೆಯದಲ್ಲವೆ. ಹೊಸ ಮನೆಯನ್ನು ಕಟ್ಟಿಸಿದಾಗ ಮೊದಲು ತಾವಿರುತ್ತಾರೆ ನಂತರ ಬಾಡಿಗೆಗೆ ಕೊಡುತ್ತಾರೆ ಅಂದಮೇಲೆ ಅದೂ ಸಹ ಮಧ್ಯಮ ದರ್ಜೆಯದಾಯಿತಲ್ಲವೆ. ಸತ್ಯಯುಗವು ಹೊಸ ಪ್ರಪಂಚವಾಗಿದೆ, ತ್ರೇತಾಯುಗಕ್ಕೆ ಮಧ್ಯಮ ದರ್ಜೆಯದು ಎಂದು ಹೇಳಲಾಗುತ್ತದೆ. ಆದ್ದರಿಂದ ಈಗ ಬುದ್ಧಿಯಲ್ಲಿ ಬರುತ್ತದೆ – ನಾವು ಸ್ವರ್ಗ, ಹೊಸ ಪ್ರಪಂಚದಲ್ಲಿ ಹೋಗಬೇಕು, ಪುರುಷಾರ್ಥ ಮಾಡಬೇಕಾಗಿದೆ. ಪ್ರಜೆಗಳೂ ಸಹ ತಯಾರಾಗುತ್ತಾ ಹೋಗುವರು. ಮಾಲೆಯಲ್ಲಿ ಯಾರು-ಯಾರು ಪೋಣಿಸಲ್ಪಡುತ್ತಾರೆಂದು ನಿಮಗೆ ಅರ್ಥವಾಗುತ್ತಾ ಹೋಗುವುದು. ಒಂದುವೇಳೆ ಯಾರಿಗಾದರೂ ನೀವು ಮಾಲೆಯಲ್ಲಿ ಬರುವುದಿಲ್ಲವೆಂದು ಹೇಳಿ ಬಿಟ್ಟರೆ ಅವರಿಗೆ ಹೃದಯಾಘಾತವಾಗಿ ಬಿಡುವುದು ಆದ್ದರಿಂದ ಪುರುಷಾರ್ಥ ಮಾಡಿ ಎಂದು ಹೇಳಲಾಗುತ್ತದೆ. ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಿ – ನಮ್ಮ ಬುದ್ಧಿಯೋಗವು ಅಲೆಯುತ್ತಿಲ್ಲವೆ! ಶಿವ ತಂದೆಯೊಂದಿಗೆ ನಿಮ್ಮದು ಎಷ್ಟೊಂದು ಪ್ರೀತಿಯುಂಟಾಗುತ್ತಾ ಹೋಗುತ್ತದೆ! ನಾವು ಬಾಪ್ದಾದಾರವರ ಬಳಿ ಹೋಗುತ್ತೇವೆಂದು ಹೇಳುತ್ತಾರೆ. ಶಿವ ತಂದೆಯಿಂದ ದಾದಾರವರ ಮೂಲಕ ಆಸ್ತಿಯನ್ನು ತೆಗೆದುಕೊಳ್ಳಲು ಹೋಗುತ್ತೀರಿ, ಇಂತಹ ತಂದೆಯ ಬಳಿಗಂತೂ ಬಹಳಷ್ಟುಬಾರಿ ಹೋಗಬೇಕು ಆದರೆ ಗೃಹಸ್ಥ ವ್ಯವಹಾರವನ್ನೂ ಸಂಭಾಲನೆ ಮಾಡಬೇಕಾಗಿದೆ. ಭಲೆ ಬಹಳ ಧನವಂತರಿದ್ದಾರೆ ಆದರೆ ಅವರಿಗೆ ಬಿಡುವಿಲ್ಲ, ಪೂರ್ಣ ನಿಶ್ಚಯವಿಲ್ಲ. ಇಲ್ಲವಾದರೆ ತಿಂಗಳು, ಎರಡು ತಿಂಗಳಿನ ನಂತರವಾಗಲಿ ಬಂದು ರಿಫ್ರೆಷ್ ಆಗುವರು. ಅವರಿಗೆ ಪದೇ-ಪದೇ ತಂದೆಯ ಕಡೆ ಸೆಳೆತವಾಗುವುದು. ಸೂಜಿಯ ಮೇಲೆ ತುಕ್ಕು ಹಿಡಿದಿದ್ದರೆ ಅಯಸ್ಕಾಂತವು ಅದನ್ನು ಸೆಳೆಯುವುದಿಲ್ಲ. ಯಾರಿಗೆ ತಂದೆಯ ಜೊತೆ ಸಂಪೂರ್ಣ ಯೋಗವಿರುವುದೋ ಅವರಿಗೆ ಕೂಡಲೇ ಆಕರ್ಷಣೆಯಾಗುತ್ತದೆ, ಓಡೋಡಿ ಬರುತ್ತಾರೆ. ಎಷ್ಟು ತುಕ್ಕು ಕಳೆಯುತ್ತಾ ಹೋಗುವುದೋ ಅಷ್ಟು ಆಕರ್ಷಣೆಯಾಗುವುದು – ನಾವು ಅಯಸ್ಕಾಂತದೊಂದಿಗೆ ಮಿಲನ ಮಾಡಬೇಕು ಎಂದು. ನೀವು ಪ್ರೀತಿಯನ್ನಾದರೂ ಮಾಡಿ, ತಿರಸ್ಕಾರವನ್ನಾದರೂ ಮಾಡಿ….. ನಾವು ನಿಮ್ಮ ದ್ವಾರವನ್ನು ಬಿಟ್ಟು ಹೋಗುವುದಿಲ್ಲವೆಂದು ಗೀತೆಯಿದೆ ಆದರೆ ಆ ಸ್ಥಿತಿಯು ಕೊನೆಯಲ್ಲಿಯೇ ಇರುವುದು. ಪೂರ್ಣ ತುಕ್ಕು ಇಳಿದಿದ್ದಾಗ ಆ ಸ್ಥಿತಿಯು ಬರುವುದು. ತಂದೆಯು ತಿಳಿಸುತ್ತಾರೆ – ಹೇ ಆತ್ಮಗಳೇ, ಮನ್ಮನಾಭವ. ಭಲೆ ಗೃಹಸ್ಥ ವ್ಯವಹಾರದಲ್ಲಿರಿ, ಇಲ್ಲಿಗೆ ಓಡಿ ಬಂದು ಕುಳಿತು ಬಿಡುವಂತಿಲ್ಲ. ಸಾಗರನ ಬಳಿ ಮೋಡಗಳು ರಿಫ್ರೆಷ್ ಆಗಲು ಬರಬೇಕಾಗಿದೆ ಮತ್ತೆ ಸೇವಾರ್ಥವಾಗಿ ಹೋಗಬೇಕಾಗಿದೆ. ಯಾವಾಗ ಬಂಧನವು ಕಳೆಯುವುದೋ ಆಗ ಸೇವೆಗೆ ಹೋಗಬಹುದು. ತಂದೆ-ತಾಯಿಗಳು ತಮ್ಮ ಮಕ್ಕಳನ್ನು ಸಂಭಾಲನೆ ಮಾಡಲೇಬೇಕಾಗಿದೆ. ತಂದೆಯ ನೆನಪಿನಲ್ಲಿರಬೇಕು, ಪವಿತ್ರರಾಗಬೇಕಾಗಿದೆ.

ತಂದೆಯು ತಿಳಿಸುತ್ತಾರೆ – ಯಜ್ಞದಲ್ಲಿ ಅನೇಕ ಪ್ರಕಾರದ ವಿಘ್ನಗಳು ಬರುತ್ತವೆ, ಈಶ್ವರನು ಸಮರ್ಥನಾಗಿದ್ದಾರೆ, ಆದರೂ ವಿಘ್ನಗಳೇಕೆ ಎಂದು ಕೇಳುತ್ತಾರೆ. ರಾವಣನು ಭಗವಂತನಿಗಿಂತಲೂ ತೀಕ್ಷ್ಣವಾಗಿದ್ದಾನೆ ಎಂಬುದು ಮನುಷ್ಯರಿಗೆ ತಿಳಿದಿಲ್ಲ. ಈಗ ಅವನಿಂದ ರಾಜ್ಯವನ್ನು ಹಿಂತೆಗೆದುಕೊಳ್ಳಲಾಗುತ್ತದೆ ಆದ್ದರಿಂದ ಅನೇಕ ಪ್ರಕಾರದ ವಿಘ್ನಗಳು ಬೀಳುತ್ತಿರುತ್ತವೆ. ಡ್ರಾಮಾ ಪ್ಲಾನನುಸಾರ ಕಲ್ಪದ ನಂತರವೂ ಈ ವಿಘ್ನಗಳು ಬರುತ್ತವೆ. ಆರಂಭದಿಂದಲೂ ಪತಿತರ ವಿಘ್ನಗಳು ಬೀಳುತ್ತಿವೆ, ಶಾಸ್ತ್ರಗಳಲ್ಲಿಯೂ ಬರೆದಿದ್ದಾರೆ – ಕೃಷ್ಣನಿಗೆ 16,108 ಮಂದಿ ಪಟ್ಟದರಾಣಿಯರಿದ್ದರು. ಸರ್ಪವು ಕಚ್ಚಿತು, ರಾಮನ ಸೀತೆಯ ಅಪಹರಣವಾಯಿತು, ಆದರೆ ಸ್ವರ್ಗದಲ್ಲಿ ರಾವಣನೆಲ್ಲಿಂದ ಬಂದನು! ಬಹಳಷ್ಟು ಅಸತ್ಯವಿದೆ. ವಿಕಾರವಿಲ್ಲದೆ ಹೇಗೆ ಮಕ್ಕಳಾಗುವರು ಎಂದು ಕೇಳುತ್ತಾರೆ. ಅವರಿಗೆ ತಿಳಿದೇ ಇಲ್ಲ. ಯಾರು ಆಸ್ತಿಯನ್ನು ಪಡೆಯುವವರಿದ್ದಾರೆಯೋ ಅವರೇ ಬಂದು ತಿಳಿದುಕೊಳ್ಳುತ್ತಾರೆ ಆದ್ದರಿಂದ ಈ ಜ್ಞಾನ ಯಜ್ಞದಲ್ಲಿ ಅಸುರರ ವಿಘ್ನಗಳು ಬೀಳುತ್ತವೆ. ಪತಿತರಿಗೆ ಅಸುರರೆಂದು ಹೇಳಲಾಗುತ್ತದೆ. ರಾವಣ ಸಂಪ್ರದಾಯವಾಗಿದೆ. ನೀವೀಗ ಸಂಗಮದಲ್ಲಿದ್ದೀರಿ, ರಾವಣ ರಾಜ್ಯದಿಂದ ದೂರ ಸರಿದಿದ್ದೀರಿ ಆದರೂ ಸಹ ಅದರ ಸ್ವಲ್ಪ ಪ್ರಭಾವವಾದರೂ ಬೀರುತ್ತದೆ. ನಾವೀಗ ಹೋಗುತ್ತಿದ್ದೇವೆಂದು ಬುದ್ಧಿಯಲ್ಲಿ ಜ್ಞಾನವಿದೆ, ಇಲ್ಲಿಯೇ ಕುಳಿತಿದ್ದೀರಿ ಆದರೆ ಬುದ್ಧಿಯಲ್ಲಿ ಹೋಗಬೇಕೆಂಬ ಸ್ಮೃತಿಯಿದೆ. ಇಲ್ಲಿಯೇ ಕುಳಿತಿದ್ದರೂ ಸಹ ಇದರಿಂದ ನಿಮಗೆ ವೈರಾಗ್ಯವಿದೆ. ಇದು ಛೀ ಛೀ ಪ್ರಪಂಚ, ಸ್ಮಶಾನವಾಗಲಿದೆ. ಭಿನ್ನ-ಭಿನ್ನ ಮಾತುಗಳಿಂದ ತಿಳಿಸಲಾಗುತ್ತದೆ. ವಾಸ್ತವದಲ್ಲಿ ಒಂದೆ ಮಾತಾಗಿದೆ – ಮನ್ಮನಾಭವ. ಬಾಬಾ, ನಾವು ಬಂಧನದಲ್ಲಿದ್ದೇವೆಂದು ಎಷ್ಟೊಂದು ಮಂದಿಯ ಪತ್ರಗಳು ಬರುತ್ತವೆ. ಒಬ್ಬ ದ್ರೌಪದಿಯಿರಲಿಲ್ಲ, ಸಾವಿರಾರು ಮಂದಿ ಇದ್ದಾರೆ. ನೀವೀಗ ಪತಿತ ಪ್ರಪಂಚದಿಂದ ಪಾವನ ಪ್ರಪಂಚಕ್ಕೆ ಹೋಗುತ್ತಿದ್ದೀರಿ. ಯಾರು ಕಲ್ಪದ ಹಿಂದೆ ಹೂವಾಗಿದ್ದರೋ ಅವರೇ ಬರುತ್ತಾರೆ. ಭಗವಂತನ ಹೂದೋಟವು ಇಲ್ಲಿಯೇ ಸ್ಥಾಪನೆಯಾಗುವುದು. ಕೆಲವರು ಇಂತಿಂತಹ ಒಳ್ಳೊಳ್ಳೆಯ ಹೂಗಳಾಗಿದ್ದಾರೆ, ಅವರನ್ನು ನೋಡುತ್ತಿದ್ದಂತೆಯೇ ಬಹಳ ತೃಪ್ತಿಯಾಗುತ್ತದೆ. ಹೆಸರೇ ಇದೆ, ಹೂವುಗಳ ರಾಜ ಎಂದು. 5 ದಿನಗಳವರೆಗೆ ಇಟ್ಟಿದ್ದರೂ ಸಹ ಅರಳಿರುತ್ತದೆ, ಸುಗಂಧ ಬೀರುತ್ತಾ ಇರುತ್ತದೆ. ಇಲ್ಲಿಯೂ ಸಹ ಯಾರು ತಂದೆಯನ್ನು ನೆನಪು ಮಾಡುತ್ತಾರೆ ಮತ್ತು ನೆನಪು ತರಿಸುತ್ತಾರೆಯೋ ಅವರ ಸುಗಂಧ ಹರಡುತ್ತದೆ, ಸದಾ ಖುಷಿಯಾಗಿರುತ್ತಾರೆ, ಇಂತಹ ಮಧುರಾತಿ ಮಧುರ ಮಕ್ಕಳನ್ನು ನೋಡಿ ತಂದೆಯು ಹರ್ಷಿತರಾಗುತ್ತಾರೆ. ಅವರ ಮುಂದೆ ತಂದೆಯ ಜ್ಞಾನದ ನೃತ್ಯವು ಬಹಳ ಚೆನ್ನಾಗಿ ನಡೆಯುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಜ್ಞಾನ ಮತ್ತು ಯೋಗದಲ್ಲಿ ಶಕ್ತಿಶಾಲಿಯಾಗಬೇಕಾಗಿದೆ. ಒಂದುವೇಳೆ ಯಾವುದೇ ಬಂಧನವಿಲ್ಲದಿದ್ದರೆ ಮತ್ತೆಂದೂ ಬಂಧನಗಳಲ್ಲಿ ಮರೆತೂ ಕೂಡ ಹೋಗಿ ಸಿಲುಕಬಾರದು. ಬಾಲ ಬ್ರಹ್ಮ್ಚಾರಿಯಾಗಿರಬೇಕಾಗಿದೆ.

2. ಈಗ ನಮ್ಮದು ಏರುವ ಕಲೆಯಾಗಿದೆ, ತಂದೆಯು ನಮ್ಮ ಎಲ್ಲಾ ದುಃಖವನ್ನು ದೂರ ಮಾಡಲು ಶಾಪವನ್ನು ಕಳೆದು ಆಸ್ತಿಯನ್ನು ಕೊಡಲು ಬಂದಿದ್ದಾರೆ. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ ಅಪಾರ ಖುಷಿಯಲ್ಲಿರಬೇಕಾಗಿದೆ. ಪರಿಶೀಲನೆ ಮಾಡಿಕೊಳ್ಳಿ – ನಮ್ಮ ಬುದ್ಧಿಯೋಗವು ಎಲ್ಲಿಯೂ ಅಲೆದಾಡುತ್ತಿಲ್ಲವೆ?

ವರದಾನ:-

ಯಾವ ಮಕ್ಕಳು ಸ್ವಮಾನದಲ್ಲಿ ಸ್ಥಿತರಾಗಿ ಇರುತ್ತಾರೆಯೋ, ಅವರೇ ತಂದೆಯ ಪ್ರತಿಯೊಂದು ಆದೇಶಗಳನ್ನು ಸಹಜವಾಗಿ ಪಾಲಿಸಲು ಸಾಧ್ಯವಾಗುವುದು. ಸ್ವಮಾನವು ಭಿನ್ನ-ಭಿನ್ನ ಪ್ರಕಾರದ ದೇಹ-ಅಭಿಮಾನವನ್ನು ಸಮಾಪ್ತಿ ಮಾಡಿ ಬಿಡುತ್ತದೆ. ಆದರೆ ಯಾವಾಗ ಸ್ವಮಾನದಿಂದ `ಸ್ವ’ ಶಬ್ಧವು ಮರೆತು ಹೋಗುತ್ತದೆ ಮತ್ತು ಮಾನ್ಯತೆ-ಸ್ಥಾನದ ಕಡೆ ಬಂದು ಬಿಡುತ್ತೀರೆಂದರೆ, ಒಂದು ಶಬ್ಧದ ತಪ್ಪಿನಿಂದ ಅನೇಕ ತಪ್ಪುಗಳಾಗುತ್ತವೆ ಆದ್ದರಿಂದ ಹೆಚ್ಚು ಪರಿಶ್ರಮ ಮತ್ತು ಪ್ರತ್ಯಕ್ಷ ಫಲವು ಕಡಿಮೆ ಸಿಗುತ್ತದೆ. ಆದರೆ ಸದಾ ಸ್ವಮಾನದಲ್ಲಿ ಸ್ಥಿತರಾಗಿ ಇರುತ್ತೀರೆಂದರೆ ಪುರುಷಾರ್ಥ ಅಥವಾ ಸೇವೆಯಲ್ಲಿ ಸಹಜವಾಗಿಯೇ ಸಫಲತಾಮೂರ್ತಿ ಆಗಿ ಬಿಡುವಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top