13 June 2021 KANNADA Murli Today | Brahma Kumaris

13 June 2021 KANNADA Murli Today | Brahma Kumaris

12 June 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಸ್ನೇಹ ಮತ್ತು ಶಕ್ತಿಯ ಸಮಾನತೆ

♫ ಕೇಳು ಇಂದಿನ ಮುರ್ಲಿ (audio)➤

ಇಂದು ಸ್ಮೃತಿ ಸ್ವರೂಪರನ್ನಾಗಿ ಮಾಡುವ ಸಮರ್ಥ ತಂದೆಯು ನಾಲ್ಕಾರು ಕಡೆಯ ಸ್ಮೃತಿ ಸ್ವರೂಪ ಸಮರ್ಥ ಮಕ್ಕಳನ್ನು ನೋಡುತ್ತಿದ್ದೇವೆ. ಇಂದಿನ ದಿನವು ಬಾಪ್ದಾದಾರವರ ಸ್ನೇಹದಲ್ಲಿ ಸಮಾವೇಶವಾಗುವ ಜೊತೆ ಜೊತೆಗೆ ಸ್ನೇಹ ಮತ್ತು ಸಮರ್ಥ – ಎರಡರ ಬ್ಯಾಲೆನ್ಸ್ ಸ್ಥಿತಿಯ ಅನುಭವದ ದಿನವಾಗಿದೆ. ಸ್ಮೃತಿ ದಿವಸ ಅರ್ಥಾತ್ ಸ್ನೇಹ ಮತ್ತು ಸಮರ್ಥ – ಎರಡರ ಸಮಾನತೆಯ ವರದಾನದ ದಿವಸವಾಗಿದೆ ಏಕೆಂದರೆ ಯಾವ ತಂದೆಯ ಸ್ಮೃತಿಯ ಸ್ನೇಹದಲ್ಲಿ ಲವಲೀನರಾಗುತ್ತೀರಿ, ಆ ಬ್ರಹ್ಮಾ ತಂದೆಯು ಸ್ನೇಹ ಮತ್ತು ಶಕ್ತಿಯ ಸಮಾನತೆಯ ಶ್ರೇಷ್ಠ ಸಂಕೇತವಾಗಿದ್ದಾರೆ. ಈಗೀಗ ಅತಿ ಸ್ನೇಹಿ, ಈಗೀಗ ಶ್ರೇಷ್ಠ ಶಕ್ತಿಶಾಲಿ. ಸ್ನೇಹದಲ್ಲಿಯೂ ಸ್ನೇಹದ ಮೂಲಕ ಪ್ರತಿಯೊಬ್ಬ ಮಗುವನ್ನು ಸದಾ ಶಕ್ತಿಶಾಲಿಯನ್ನಾಗಿ ಮಾಡಿದರು. ಕೇವಲ ಸ್ನೇಹದಲ್ಲಿ ತನ್ನ ಕಡೆ ಆಕರ್ಷಿತರನ್ನಾಗಿ ಮಾಡಲಿಲ್ಲ. ಬದಲಾಗಿ ಸ್ನೇಹದ ಮೂಲಕ ಶಕ್ತಿಸೇನೆಯನ್ನಾಗಿ ಮಾಡಿ ವಿಶ್ವದ ಮುಂದೆ ಸೇವಾರ್ಥವಾಗಿ ನಿಮಿತ್ತ ಮಾಡಿದರು. ಸದಾ ‘ಸ್ನೇಹಿ ಭವ’ದ ಜೊತೆಗೆ ‘ನಷ್ಟ ಮೋಹ ಕರ್ಮಾತೀತ ಭವ’ದ ಪಾಠವನ್ನು ಓದಿಸಿದರು. ಅಂತ್ಯದವರೆಗೆ ಮಕ್ಕಳಿಗೆ ಸದಾ ಭಿನ್ನ ಮತ್ತು ಸದಾ ಪ್ರಿಯ – ಇದೇ ನಯನಗಳ ದೃಷ್ಟಿಯ ಮೂಲಕ ವರದಾನ ನೀಡಿದರು.

ಇಂದಿನ ದಿನವು ನಾಲ್ಕಾರು ಕಡೆಯ ಮಕ್ಕಳು ಭಿನ್ನ-ಭಿನ್ನ ಸ್ವರೂಪದಿಂದ ಭಿನ್ನ-ಭಿನ್ನ ಸಂಬಂಧದಿಂದ, ಸ್ನೇಹದಿಂದ ಮತ್ತು ತಂದೆಯ ಸಮಾನರಾಗುವ ಸ್ಥಿತಿಯ ಅನುಭೂತಿಯಿಂದ ಮಿಲನ ಮಾಡಲು ಬಾಪ್ದಾದಾರವರ ವತನಕ್ಕೆ ತಲುಪಿದರು. ಕೆಲವರು ಬುದ್ಧಿಯ ಮೂಲಕ, ಇನ್ನೂ ಕೆಲವರು ದಿವ್ಯ ದೃಷ್ಟಿಯ ಮೂಲಕ ತಲುಪಿದರು. ಬಾಪ್ದಾದಾ ಎಲ್ಲಾ ಮಕ್ಕಳ ಸ್ನೇಹದ ಮತ್ತು ಸಮಾನ ಸ್ಥಿತಿಯ ನೆನಪು-ಪ್ರೀತಿಯನ್ನು ಹೃದಯದಿಂದ ಸ್ವೀಕಾರ ಮಾಡಿದರು ಮತ್ತು ಅದಕ್ಕೆ ಪ್ರತಿಯಾಗಿ ಎಲ್ಲಾ ಮಕ್ಕಳಿಗೆ ‘ಬಾಪ್ದಾದಾರವರ ಸಮಾನಭವ’ದ ವರದಾನವನ್ನು ಕೊಟ್ಟರು ಮತ್ತು ಕೊಡುತ್ತಿದ್ದಾರೆ. ಬಾಪ್ದಾದಾರವರಿಗೆ ತಿಳಿದಿದೆ, ಮಕ್ಕಳಿಗೆ ಬ್ರಹ್ಮಾ ತಂದೆಯ ಜೊತೆ ಅತಿಸ್ನೇಹವಿದೆ, ಸಾಕಾರದಲ್ಲಿ ಪಾಲನೆ ತೆಗೆದುಕೊಂಡಿರಬಹುದು ಅಥವಾ ಈಗ ಅವ್ಯಕ್ತ ರೂಪದಿಂದ ಪಾಲನೆ ಪಡೆಯುತ್ತಿರಬಹುದು ಆದರೆ ದೊಡ್ಡ ತಾಯಿಯಾಗಿರುವ ಕಾರಣ ತಾಯಿಯೊಂದಿಗೆ ಮಕ್ಕಳ ಪ್ರೀತಿಯು ಸ್ವತಹ ಇದ್ದೇ ಇರುತ್ತದೆ. ಈ ಕಾರಣದಿಂದ ತಂದೆಗೆ ಗೊತ್ತಿದೆ, ಬ್ರಹ್ಮಾ ತಾಯಿಯನ್ನು ಎಲ್ಲರೂ ನೆನಪು ಮಾಡುತ್ತೀರಿ ಆದರೆ ಸ್ನೇಹದ ಪ್ರತ್ಯಕ್ಷ ಸ್ವರೂಪವು ಸಮಾನರಾಗುವುದಾಗಿದೆ. ಎಷ್ಟೆಷ್ಟು ಹೃದಯದ ಸತ್ಯ ಪ್ರೀತಿಯಿದೆಯೋ ಅಷ್ಟೇ ಮಕ್ಕಳ ಮನಸ್ಸಿನಲ್ಲಿ ತಂದೆಯನ್ನು ಫಾಲೋ ಮಾಡುವ ಉಲ್ಲಾಸ-ಉತ್ಸಾಹವು ಕಾಣುತ್ತದೆ. ಈ ಅಲೌಕಿಕ ತಾಯಿಯ ಅಲೌಕಿಕ ಪ್ರೀತಿಯು ವಿಯೋಗಿಗಳನ್ನಾಗಿ ಮಾಡುವಂತದ್ದಲ್ಲ, ಸಹಜಯೋಗಿ-ರಾಜಯೋಗಿ ಅರ್ಥಾತ್ ರಾಜರನ್ನಾಗಿ ಮಾಡುವಂತದ್ದಾಗಿದೆ. ಅಲೌಕಿಕ ತಾಯಿಗೆ ಮಕ್ಕಳ ಪ್ರತಿ ಇದೇ ಅಲೌಕಿಕ ಮಮತೆಯಿದೆ – ನನ್ನ ಪ್ರತಿಯೊಬ್ಬ ಮಗುವು ರಾಜನಾಗಲಿ. ಎಲ್ಲರೂ ರಾಜಾ ಮಕ್ಕಳಾಗಲಿ, ಪ್ರಜೆಗಳಲ್ಲ. ಪ್ರಜೆಗಳನ್ನು ಮಾಡಿಕೊಳ್ಳುವವರಾಗಿದ್ದೀರಿ ಆದರೆ ಪ್ರಜೆಗಳಾಗುವವರಲ್ಲ.

ಇಂದು ವತನದಲ್ಲಿ ಮಾತಾಪಿತರ ವಾರ್ತಾಲಾಪವು ನಡೆಯುತ್ತಿತ್ತು. ತಂದೆಯು ಬ್ರಹ್ಮಾ ತಾಯಿಯೊಂದಿಗೆ ಕೇಳಿದರು – ಮಕ್ಕಳಿಗೆ ವಿಶೇಷ ಸ್ನೇಹದ ದಿನದಂದು ಏನು ನೆನಪಿಗೆ ಬರುತ್ತದೆ? ತಮ್ಮೆಲ್ಲರಿಗೂ ವಿಶೇಷ ನೆನಪು ಬರುತ್ತದೆಯಲ್ಲವೆ. ಪ್ರತಿಯೊಬ್ಬರಿಗೂ ತಮ್ಮ ನೆನಪು ಬರುತ್ತದೆ ಮತ್ತು ಆ ನೆನಪಿನಲ್ಲಿ ಸಮಾವೇಶವಾಗುತ್ತೀರಿ. ಇಂದಿನ ದಿನವು ವಿಶೇಷ ಅಲೌಕಿಕ ನೆನಪಿನ ಸಂಸಾರವಾಗುತ್ತದೆ. ಪ್ರತೀ ಹೆಜ್ಜೆಯಲ್ಲಿ ವಿಶೇಷ ಸಾಕಾರ ಸ್ವರೂಪದ ಚರಿತ್ರೆಗಳ ನೆನಪು ಸ್ವತಹವಾಗಿ ಬರುತ್ತದೆ. ಪಾಲನೆಯ ನೆನಪು, ಪ್ರಾಪ್ತಿಗಳ ನೆನಪು, ವರದಾನಗಳ ನೆನಪು ಸ್ವತಹವಾಗಿಯೇ ಬರುತ್ತದೆ ಅಂದಾಗ ತಂದೆಯೂ ಸಹ ಬ್ರಹ್ಮಾ ತಾಯಿಯೊಂದಿಗೆ ಇದನ್ನೇ ಕೇಳಿದರು. ಇದಕ್ಕೆ ಬ್ರಹ್ಮಾ ತಂದೆಯು ಏನು ಹೇಳಿರಬಹುದು, ಗೊತ್ತಿದೆಯೇ? ಸಂಸಾರವಂತೂ ಮಕ್ಕಳದೇ ಆಗಿದೆ, ಬ್ರಹ್ಮಾರವರು ತಿಳಿಸಿದರು – ಅಮೃತವೇಳೆ ಮೊಟ್ಟ ಮೊದಲಿಗೆ ‘ಸಮಾನ ಮಕ್ಕಳು’ ನೆನಪಿಗೆ ಬಂದರು. ಸ್ನೇಹಿ ಮಕ್ಕಳು ಮತ್ತು ಸಮಾನ ಮಕ್ಕಳು. ಸ್ನೇಹಿ ಮಕ್ಕಳಿಗೆ ಸಮಾನರಾಗುವ ಇಚ್ಛೆ ಅಥವಾ ಸಂಕಲ್ಪವಿದೆ ಆದರೆ ಇಚ್ಛೆಯ ಜೊತೆಗೆ, ಸಂಕಲ್ಪದ ಜೊತೆಗೆ ಸದಾ ಸಮರ್ಥರಾಗಿರುವುದಿಲ್ಲ ಆದ್ದರಿಂದ ಸಮಾನರಾಗುವುದರಲ್ಲಿ ಮೊದಲ ನಂಬರಿನ ಬದಲಾಗಿ ಹಿಂದುಳಿದು ಬಿಡುತ್ತಾರೆ. ಸ್ನೇಹವು ಉಲ್ಲಾಸ-ಉತ್ಸಾಹದಲ್ಲಿ ತರುತ್ತದೆ ಆದರೆ ಸಮಸ್ಯೆಗಳು ಸ್ನೇಹ ಮತ್ತು ಶಕ್ತಿಯ ರೂಪದ ಸಮಾನ ಸ್ಥಿತಿಯಾಗುವುದರಲ್ಲಿ ಕೆಲವೊಂದೆಡೆ ನಿರ್ಬಲರನ್ನಾಗಿ ಮಾಡಿ ಬಿಡುತ್ತದೆ. ಸಮಸ್ಯೆಗಳು ಸದಾ ಸಮಾನರಾಗುವ ಸ್ಥಿತಿಯಿಂದ ದೂರ ಮಾಡಿಬಿಡುತ್ತವೆ. ಸ್ನೇಹದ ಕಾರಣ ತಂದೆಯನ್ನು ಮರೆಯುವುದಕ್ಕೇ ಸಾಧ್ಯವಿಲ್ಲ ಏಕೆಂದರೆ ಪಕ್ಕಾ ಬ್ರಾಹ್ಮಣರಾಗಿದ್ದೀರಿ. ಹಿಂದೆ ಸರಿಯುವವರೂ ಅಲ್ಲ, ಅಮರರಾಗಿದ್ದೀರಿ ಆದರೆ ಸಮಸ್ಯೆಯನ್ನು ನೋಡಿ ಕೇವಲ ಸ್ವಲ್ಪ ಸಮಯಕ್ಕಾಗಿ ಗಾಬರಿಯಾಗಿ ಬಿಡುತ್ತೀರಿ ಆದ್ದರಿಂದ ನಿರಂತರ ಸ್ನೇಹ ಮತ್ತು ಶಕ್ತಿಯ ಸಮಾನ ಸ್ಥಿತಿಯ ಅನುಭವ ಮಾಡಲು ಸಾಧ್ಯವಾಗುವುದಿಲ್ಲ.

ಈ ಸಮಯದ ಪ್ರಮಾಣ ಜ್ಞಾನಪೂರ್ಣ, ಶಕ್ತಿಪೂರ್ಣ, ಯಶಸ್ವೀಪೂರ್ಣ ಸ್ಥಿತಿಯ ಬಹಳ ಕಾಲದ ಅನುಭವಿಗಳಾಗಿ ಬಿಟ್ಟಿದ್ದೀರಿ. ಮಾಯೆ, ಪ್ರಕೃತಿ ಹಾಗೂ ಆತ್ಮಗಳ ಮೂಲಕ ನಿಮಿತ್ತವಾಗಿರುವ ಸಮಸ್ಯೆಗಳಿಗೂ ಸಹ ಅನೇಕ ಬಾರಿ ಅನುಭವಿ ಆತ್ಮಗಳಾಗಿದ್ದೀರಿ. ಇದೇನು ಹೊಸ ಮಾತಲ್ಲ. ತ್ರಿಕಾಲದರ್ಶಿಗಳಾಗಿದ್ದೀರಿ, ಸಮಸ್ಯೆಗಳ ಆದಿ-ಮಧ್ಯ-ಅಂತ್ಯ ಮೂರನ್ನೂ ತಿಳಿದುಕೊಂಡಿದ್ದೀರಿ. ಅನೇಕ ಕಲ್ಪಗಳ ಮಾತನ್ನು ಬಿಡಿ ಆದರೆ ಈ ಕಲ್ಪದ ಬ್ರಾಹ್ಮಣ ಜೀವನದಲ್ಲಿಯೂ ಬುದ್ಧಿಯ ಮೂಲಕ ಅರಿತು ವಿಜಯಿಗಳಾಗುವುದರಲ್ಲಿ ಹಾಗೂ ಸಮಸ್ಯೆಯನ್ನು ಪಾರು ಮಾಡಿ ಅನುಭವಿಗಳಾಗುವುದರಲ್ಲಿ ನೀವೇನೂ ಹೊಸಬರಲ್ಲ, ಹಳಬರಾಗಿ ಬಿಟ್ಟಿದ್ದೀರಿ. ಭಲೆ ಒಂದು ವರ್ಷದವರಿರಬಹುದು ಆದರೆ ಈ ಅನುಭದಲ್ಲಿ ಹಳಬರಾಗಿದ್ದೀರಿ. ‘ನತಿಂಗ್ ನ್ಯೂ’ (ಹೊಸದೇನಿಲ್ಲ) ಈ ಪಾಠವನ್ನೂ ಓದಿಸಿದ್ದೇವೆ ಆದ್ದರಿಂದ ವರ್ತಮಾನ ಸಮಯದಪ್ರಮಾಣ ಈಗ ಸಮಸ್ಯೆಗಳಿಗೆ ಗಾಬರಿಯಾಗುವುದರಲ್ಲಿ ಸಮಯವನ್ನು ಕಳೆಯಬೇಡಿ. ಸಮಯವನ್ನು ಕಳೆಯುವುದರಿಂದ ಕೊನೆಯವರಾಗಿ ಬಿಡುತ್ತೀರಿ.

ಅಂದಾಗ ಬ್ರಹ್ಮಾ ತಾಯಿಯೂ ಹೇಳಿದರು – ಒಂದನೆಯವರು ವಿಶೇಷ ಸ್ನೇಹೀ ಮಕ್ಕಳು ಮತ್ತು ಎರಡನೆಯದಾಗಿ ಸಮಾನರಾಗುವ ಮಕ್ಕಳು. ಈ ಎರಡೂ ಪ್ರಕಾರದ ಮಕ್ಕಳನ್ನು ನೋಡಿ ಇದೇ ಸಂಕಲ್ಪ ಬಂದಿತು – ವರ್ತಮಾನ ಸಮಯದ ಪ್ರಮಾಣ ಮೆಜಾರಿಟಿ ಮಕ್ಕಳನ್ನು ಈಗ ಸಮಾನ ಸ್ಥಿತಿಯ ಸಮೀಪತೆಯನ್ನು ನೋಡಲು ಬಯಸುತ್ತೇವೆ. ಸಮಾನ ಸ್ಥಿತಿಯವರೂ ಇದ್ದಾರೆ ಆದರೆ ಮೆಜಾರಿಟಿ ಸಮಾನತೆಯ ಸಮೀಪ ತಲುಪಬೇಕು. ಅಮೃತವೇಳೆಯಲ್ಲಿ ಮಕ್ಕಳಲ್ಲಿ ಇದನ್ನೇ ನೋಡಿ-ನೋಡಿ ಸಮಾನರಾಗುವ ದಿನವು ನೆನಪಿಗೆ ಬರುತ್ತಿತ್ತು. ತಾವು ‘ಸ್ಮೃತಿ ದಿನ’ವನ್ನು ನೆನಪು ಮಾಡುತ್ತಿದ್ದಿರಿ ಮತ್ತು ಬ್ರಹ್ಮಾ ತಾಯಿಯು ‘ಸಮಾನರಾಗುವ ದಿನ’ವನ್ನು ನೆನಪು ಮಾಡುತ್ತಿದ್ದೆವು. ಇದೇ ಶ್ರೇಷ್ಠ ಸಂಕಲ್ಪವನ್ನು ಪೂರ್ಣ ಮಾಡುವುದು ಅರ್ಥಾತ್ ಸ್ಮೃತಿ ದಿವಸವನ್ನು ಸಮರ್ಥ ದಿವಸವನ್ನಾಗಿ ಮಾಡಿಕೊಳ್ಳಬೇಕಾಗಿದೆ. ಮಾತಾಪಿತರು ಇದೇ ಸ್ನೇಹದ ಪ್ರತ್ಯಕ್ಷ ಫಲವನ್ನು ನೋಡಲು ಬಯಸುತ್ತೇವೆ. ಪಾಲನೆಯ ಹಾಗೂ ತಂದೆಯ ವರದಾನಗಳಿಗೆ ಇದೇ ಶ್ರೇಷ್ಠ ಫಲವಾಗಿದೆ – ಮಾತಾಪಿತರಿಗೆ ಪ್ರತ್ಯಕ್ಷ ಫಲವನ್ನು ತೋರಿಸುವಂತಹ ಶ್ರೇಷ್ಠ ಮಕ್ಕಳಾಗಿದ್ದೀರಿ. ಮೊದಲೂ ಸಹ ತಿಳಿಸಿದ್ದೆವು, ಅತೀ ಸ್ನೇಹವಿರುವ ಚಿಹ್ನೆಯೇನೆಂದರೆ ಅವರು ಸ್ನೇಹಿಯ ಕೊರತೆಗಳನ್ನು ನೋಡಲು ಅವರಿಂದ ಸಾಧ್ಯವಾಗುವುದಿಲ್ಲ ಆದ್ದರಿಂದ ಈಗ ತೀವ್ರ ಗತಿಯಲ್ಲಿ ಸಮಾನ ಸ್ಥಿತಿಯ ಸಮೀಪ ಬನ್ನಿ. ಇದೇ ತಾಯಿಯ ಸ್ನೇಹವಾಗಿದೆ. ಪ್ರತೀ ಹೆಜ್ಜೆಯಲ್ಲಿ ಫಾಲೋ ಫಾದರ್ ಮಾಡುತ್ತಾ ಹೋಗಿ. ಬ್ರಹ್ಮಾರವರೊಬ್ಬರೇ ವಿಶೇಷ ಆತ್ಮನಾಗಿದ್ದಾರೆ. ಇವರದು ಮಾತಾಪಿತಾ ಇಬ್ಬರ ಪಾತ್ರವು ಸಾಕಾರ ರೂಪದಲ್ಲಿ ನಿಗಧಿಯಾಗಿದೆ ಆದ್ದರಿಂದ ವಿಚಿತ್ರ ಪಾತ್ರಧಾರಿ ಮಹಾನ್ ಆತ್ಮನ ಡಬಲ್ ಸ್ವರೂಪದ ಮಕ್ಕಳಿಗೆ ಅವಶ್ಯವಾಗಿ ನೆನಪಿಗೆ ಬರುತ್ತದೆ ಆದರೆ ಮಾತಾಪಿತಾ ಬ್ರಹ್ಮನ ಹೃದಯದ ಶೇಷ್ಠ ಆಸೆಯೇನೆಂದರೆ ಸರ್ವರೂ ಸಮಾನರಾಗಲಿ ಎಂಬುದಾಗಿದೆ ಅಂದಮೇಲೆ ಅದನ್ನೂ ನೆನಪು ಮಾಡಿಕೊಳ್ಳಿ. ತಿಳಿಯಿತೆ – ಇಂದಿನ ಸ್ಮೃತಿ ದಿವಸದ ಶ್ರೇಷ್ಠ ಸಂಕಲ್ಪವು “ಸಮಾನರಾಗಲೇಬೇಕಾಗಿದೆ” ಎಂಬುದಾಗಿದೆ. ಸಂಕಲ್ಪದಲ್ಲಿ, ಮಾತಿನಲ್ಲಿ, ಸಂಬಂಧ-ಸಂಪರ್ಕದಲ್ಲಿ ಸಮಾನ ಅರ್ಥಾತ್ ಸಮರ್ಥರಾಗಬೇಕಾಗಿದೆ. ಎಷ್ಟು ದೊಡ್ಡ ಸಮಸ್ಯೆಯೇ ಇರಲಿ ಆದರೆ ‘ನತಿಂಗ್ ನ್ಯೂ’ ಎನ್ನುವ ಸ್ಮೃತಿಯಿಂದ ಸಮರ್ಥರಾಗಿ ಬಿಡುತ್ತೀರಿ. ಇದರಲ್ಲಿ ಆಲಸಿಗಳಾಗಬೇಡಿ. ಆಲಸ್ಯದಲ್ಲಿಯೂ ಕೆಲವೊಮ್ಮೆ ನತಿಂಗ್ ನ್ಯೂ ಎಂಬ ಶಬ್ಧವನ್ನು ಉಪಯೋಗಿಸುತ್ತಾರೆ ಆದರೆ ಅನೇಕ ಬಾರಿ ವಿಜಯಿಗಳಾಗುವುದರಲ್ಲಿ ನತಿಂಗ್ ನ್ಯೂ ಎಂದು ಹೇಳಿ. ಈ ವಿಧಿಯಿಂದ ಸದಾ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾ ಹೋಗಿರಿ. ಒಳ್ಳೆಯದು.

ಎಲ್ಲರೂ ಬಹಳ ಉಲ್ಲಾಸದಿಂದ ಸ್ಮೃತಿದಿವಸವನ್ನು ಆಚರಿಸಲು ಬಂದಿದ್ದೀರಿ. ಮೂರು ಹೆಜ್ಜೆಗಳಷ್ಟು ಪೃಥ್ವಿಯನ್ನು ಕೊಡುವವರೂ ಬಂದಿದ್ದಾರೆ, ಮೂರು ಹೆಜ್ಜೆಗಳಷ್ಟು ಭೂಮಿಯನ್ನು ಕೊಟ್ಟು ಮೂರು ಲೋಕಗಳಿಗೆ ಮಾಲೀಕರಾಗಿ ಬಿಡುವುದು ಅಂದಮೇಲೆ ಇದು ಕೊಟ್ಟಂತಾಯಿತೇ, ಆದರೂ ಸಹ ಸೇವೆಯ ಪುಣ್ಯವನ್ನು ಜಮಾ ಮಾಡಿಕೊಳ್ಳುವುದರಲ್ಲಿ ಬುದ್ಧಿವಂತರಾದಿರಿ ಆದ್ದರಿಂದ ನಿಮ್ಮ ಬುದ್ಧಿವಂತಿಕೆಗೆ ಶುಭಾಷಯಗಳು. ಒಂದನ್ನು ಕೊಟ್ಟು ಲಕ್ಷವನ್ನು ಪಡೆಯುವ ವಿಧಿಯನ್ನು ತಮ್ಮದನ್ನಾಗಿ ಮಾಡಿಕೊಳ್ಳುವುದರಲ್ಲಿ ಸಾಮರ್ಥ್ಯವನ್ನಿಟ್ಟಿರಿ ಆದ್ದರಿಂದಲೆ ವಿಶೇಷ ಸ್ಮೃತಿ ದಿವಸದಂದು ಇಂತಹ ಸಮರ್ಥ ಆತ್ಮಗಳನ್ನು ಕರೆಸಲಾಗಿದೆ.

ತಂದೆಯು ರಮಣೀಕವಾಗಿ ಸಂಭಾಷಣೆ ಮಾಡುತ್ತಿದ್ದರು. ವಿಶೇಷವಾಗಿ ಸ್ಥಾನ ಕೊಡುವವರನ್ನು ಕರೆಸಲಾಗಿದೆ. ತಂದೆಯೂ ಸ್ಥಾನವನ್ನು ಕೊಟ್ಟಿದ್ದಾರಲ್ಲವೆ ಅಂದರೆ ತಂದೆಯ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಲ್ಲವೆ. ಯಾವ ಸ್ಥಾನವನ್ನು ಕೊಟ್ಟಿದ್ದಾರೆ? ಇಂತಹ ಸ್ಥಾನವನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ತಂದೆಯು ‘ಹೃದಯ ಸಿಂಹಾಸನ’ ವನ್ನು ಕೊಟ್ಟರು ಅಂದಮೇಲೆ ಎಷ್ಟು ದೊಡ್ಡ ಸ್ಥಾನವಾಗಿದೆ! ಇವೆಲ್ಲಾ ಸ್ಥಾನಗಳು ಅದರಲ್ಲಿ ಬಂದು ಬಿಡುತ್ತದೆಯಲ್ಲವೆ. ದೇಶ-ವಿದೇಶದ ಎಲ್ಲಾ ಸೇವಾಸ್ಥಾನಗಳನ್ನು ಒಟ್ಟು ಗೂಡಿಸಿದರೂ ಸಹ ಅದೆಲ್ಲದಕ್ಕಿಂತ ದೊಡ್ಡ ಸ್ಥಾನವು ಯಾವುದಾಗಿದೆ? ಹಳೆಯ ಪ್ರಪಂಚದಲ್ಲಿರುವ ಕಾರಣ ತಾವಂತೂ ಇಟ್ಟಿಗೆಗಳ ಮನೆಯನ್ನು ಕೊಟ್ಟಿರಿ ಆದರೆ ತಂದೆಯು ಸಿಂಹಾಸನವನ್ನೇ ಕೊಟ್ಟೆವು. ಅದರಲ್ಲಿ ನೀವು ಸದಾ ನಿಶ್ಚಿಂತ ಚಕ್ರವರ್ತಿಗಳಾಗಿ ಕುಳಿತು ಬಿಡುತ್ತೀರಿ ಆದರೂ ನೋಡಿ ಯಾವುದೇ ಪ್ರಕಾರದ ಭಲೆ ಸ್ಥಾನದ ಮೂಲಕ ಸೇವೆ ಮಾಡಬಹುದು, ಸ್ಥಿತಿಯ ಮೂಲಕ ಮಾಡಬಹುದು, ಸೇವೆಗೆ ಮಹತ್ವಿಕೆಯಂತೂ ಸ್ವತಹ ಇರುತ್ತದೆ ಅಂದಾಗ ಸ್ಥಾನದ ಸೇವೆಗೂ ಬಹಳ ಮಹತ್ವಿಕೆಯಿದೆ. ಅನ್ಯರಿಗೆ ‘ಹಾಂಜಿ’ (ಆಯಿತು) ಎಂದು ಹೇಳುತ್ತಾ ಅನ್ಯರನ್ನು ‘ಮೊದಲು ತಾವು’ ಎಂದು ಹೇಳುತ್ತಾ ಸೇವೆ ಮಾಡುವುದಕ್ಕೂ ಬಹಳ ಮಹತ್ವಿಕೆಯಿದೆ. ಕೇವಲ ಭಾಷಣ ಮಾಡುವುದು ಸೇವೆಯಲ್ಲ ಆದರೆ ಯಾವುದೇ ಸೇವೆಯ ವಿಧಿಯಿಂದ ಮನಸ್ಸಾ, ವಾಚಾ, ಕರ್ಮಣಾ ಪಾತ್ರೆ ತೊಳೆಯುವ ಸೇವೆಗೂ ಬಹಳ ಮಹತ್ವಿಕೆಯಿದೆ. ಭಾಷಣ ಮಾಡುವವರು ಎಷ್ಟು ಪದವಿಯನ್ನು ಪಡೆಯುತ್ತಾರೋ ಅಷ್ಟೇ ಯೋಗಯುಕ್ತ, ಯುಕ್ತಿಯುಕ್ತ ಸ್ಥಿತಿಯಲ್ಲಿ ಸ್ಥಿತರಾಗಿ ‘ಪಾತ್ರೆ ತೊಳೆಯುವ’ವರೂ ಸಹ ಶ್ರೇಷ್ಠ ಪದವಿಯನ್ನು ಪಡೆಯಬಲ್ಲರು. ಅವರು ಬಾಯಿಂದ ಮಾಡುತ್ತಾರೆ, ಇವರು ಸ್ಥಿತಿಯಿಂದ ಮಾಡುತ್ತಾರೆ ಆದ್ದರಿಂದ ಸದಾ ಪ್ರತೀ ಸಮಯ ಸೇವೆಯ ವಿಧಿಯ ಮಹತ್ವಿಕೆಯನ್ನರಿತು ಮಹಾನರಾಗಿ. ಯಾವುದೇ ಸೇವೆಗೆ ಫಲ ಸಿಗಲಿಲ್ಲವೆಂದು ಹೇಳಲು ಸಾಧ್ಯವಿಲ್ಲ, ಸತ್ಯಹೃದಯದವರ ಮೇಲೆ ಪ್ರಭು ರಾಜಿಯಾಗುತ್ತಾರೆ. ಯಾವಾಗ ದಾತ, ವರದಾತನು ರಾಜಿಯಾಗಿ ಬಿಟ್ಟರು ಅಂದಮೇಲೆ ಇನ್ನೇನು ಕೊರತೆಯಿದೆ! ವರದಾತ ಹಾಗೂ ಭಾಗ್ಯ ವಿದಾತ, ಜ್ಞಾನ ದಾತ, ಭೋಲಾ ತಂದೆಯನ್ನು ರಾಜಿ ಮಾಡಿಕೊಳ್ಳುವುದು ಬಹಳ ಸಹಜವಾಗಿದೆ. ಭಗವಂತನ ರಾಜಿಯಾಗಿ ಬಿಟ್ಟರೆ ಧರ್ಮ ರಾಜ ಕಾಜಿ (ನ್ಯಾಯಾಧೀಶ) ಯಿಂದಲೂ ಪಾರಾಗುವಿರಿ, ಮಾಯೆಯಿಂದಲೂ ಪಾರಾಗುತ್ತೀರಿ. ಒಳ್ಳೆಯದು.

ನಾಲ್ಕಾರು ಕಡೆಯ ಸರ್ವ ಸ್ನೇಹ ಮತ್ತು ಶಕ್ತಿಯ ಸಮಾನ ಸ್ಥಿತಿಯಲ್ಲಿ ಸ್ಥಿತರಾಗಿರುವಂತಹ ಸದಾ ಮಾತಾಪಿತರ ಶ್ರೇಷ್ಠ ಆಸೆಯನ್ನು ಪೂರ್ಣಮಾಡುವಂತಹ ಆಶಾ ದೀಪಗಳಿಗೆ, ಸದಾ ಪ್ರತೀ ವಿಧಿಯಿಂದ ಸೇವೆಯ ಮಹತ್ವಿಕೆಯನ್ನು ಅರಿತುಕೊಳ್ಳುವಂತಹ, ಸದಾ ಪ್ರತೀ ಹೆಜ್ಜೆಯಲ್ಲಿ ಫಾಲೋ ಫಾದರ್ ಮಾಡುವಂತಹ, ಮಾತಾಪಿತರಿಗೆ ಸದಾ ಸ್ನೇಹ ಮತ್ತು ಶಕ್ತಿಯ ಮೂಲಕ ಸಮಾನರಾಗುವ ಫಲವನ್ನು ತೋರಿಸುವಂತಹ ಸ್ಮೃತಿ ಸ್ವರೂಪ ಸರ್ವ ಸಮರ್ಥ ಮಕ್ಕಳಿಗೆ ಸಮರ್ಥ ತಂದೆಯ, ಸಮರ್ಥ ದಿವಸದ ನೆನಪು, ಪ್ರೀತಿ ಹಾಗೂ ನಮಸ್ತೆ.

ಸೇವಾಕೇಂದ್ರಕ್ಕಾಗಿ ಮೂರು ಹೆಜ್ಜೆಯಷ್ಟು ಭೂಮಿಯನ್ನು ಕೊಡುವವರ ಪ್ರತಿ ಸಹೋದರ-ಸಹೋದರಿಯರೊಂದಿಗೆ ಅವ್ಯಕ್ತ-ಬಾಪ್ದಾದಾರವರ ವಾರ್ತಾಲಾಪ:

ವಿಶೇಷ ಸೇವೆಯ ಪ್ರತ್ಯಕ್ಷ ಫಲದ ಪ್ರಾಪ್ತಿಯನ್ನು ನೋಡುತ್ತಾ ಖುಷಿಯಾಗುತ್ತಿದೆ ಅಲ್ಲವೆ. ಭವಿಷ್ಯವಂತು ಅವಶ್ಯವಾಗಿ ಜಮಾ ಆಯಿತು ಆದರೆ ವರ್ತಮಾನವೂ ಶ್ರೇಷ್ಠವಾಗಿ ಬಿಟ್ಟಿತು. ವರ್ತಮಾನ ಸಮಯದ ಪ್ರಾಪ್ತಿಯು ಭವಿಷ್ಯಕ್ಕಿಂತಲೂ ಶ್ರೇಷ್ಠವಾದುದು! ಏಕೆಂದರೆ ಅಪ್ರಾಪ್ತಿ ಮತ್ತು ಪ್ರಾಪ್ತಿಯ ಅನುಭವದ ಜ್ಞಾನವು ವರ್ತಮಾನ ಸಮಯದಲ್ಲಿರುತ್ತದೆ. ಅಲ್ಲಂತು ಅಪ್ರಾಪ್ತಿ ಎಂದರೇನು ಎಂಬುದರ ಅರಿವು ಇರುವುದೇ ಇಲ್ಲ. ಅಂದಮೇಲೆ ಅಲ್ಲಿ ಅಂತರವಂತು ತಿಳಿಯುವುದಿಲ್ಲ ಮತ್ತು ಇಲ್ಲಂತು ಅಂತರದ ಅನುಭವವಿದೆ ಆದ್ದರಿಂದ ಈ ಸಮಯದ ಪ್ರಾಪ್ತಿಯ ಅನುಭವದ ಮಹತ್ವವಿದೆ. ಯಾರೆಲ್ಲರೂ ಸೇವೆಗೆ ನಿಮಿತ್ತರಾಗುತ್ತಾರೆಂದರೆ ಕ್ಷಣದಲ್ಲಿಯೇ ದಾನ ಮಾಡುವುದು ಮಹಾಪುಣ್ಯವೆಂದು ಗಾಯನವಿದೆ. ಯಾವುದೇ ಮಾತಿನಲ್ಲಿ ಒಂದುವೇಳೆ ಯಾರೇ ನಿಮಿತ್ತರಾಗುತ್ತಾರೆ ಅಂದರೆ ಕ್ಷಣದಲ್ಲಿಯೇ ದಾನ ಮಾಡುತ್ತಾರೆಂದರೆ, ಅದರ ರಿಟರ್ನ್ನಲ್ಲಿ ಮಹಾಪುಣ್ಯದ ಅನುಭೂತಿಯು ಆಗುವುದು. ಅದು ಹೇಗಾಗುತ್ತದೆ? ಯಾವುದೇ ಸೇವೆಯ ಪುಣ್ಯವು ವಿಶೇಷ ‘ಖುಷಿ’, ಶಕ್ತಿಯ ಅನುಭೂತಿಯು ಆಗುವುದು. ಯಾರು ಯಾವಾಗ ಸಫಲತಾ ಸ್ವರೂಪರಾಗಿದ್ದು ಸೇವೆಯನ್ನು ಮಾಡುತ್ತೀರೆಂದರೆ, ಆ ಸಮಯದ ವಿಶೇಷ ಖುಷಿಯ ಅನುಭೂತಿಯನ್ನು ಮಾಡುತ್ತೀರಲ್ಲವೆ. ಹಾಗೂ ವರ್ಣನೆಯನ್ನೂ ಮಾಡುತ್ತೀರಿ – ಇಂದು ಬಹಳ ಒಳ್ಳೆಯ ಅನುಭವವಾಯಿತು! ಏಕಾಯಿತು? ತಂದೆಯ ಪರಿಚಯವನ್ನು ತಿಳಿಸುತ್ತಾ ಸಫಲತೆಯ ಅನುಭವವಾಯಿತು. ಪರಿಚಯವನ್ನು ಕೇಳಿಸಿಕೊಂಡು ಯಾರೇ ಜಾಗೃತವಾಗುತ್ತಾರೆ ಅಥವಾ ಪರಿಚಯ ಸಿಗುತ್ತಿದ್ದಂತೆಯೇ ಪರಿವರ್ತನೆ ಆಗಿ ಬಿಡುತ್ತಾರೆಂದರೆ, ಅವರಿಗಾಗುವ ಪ್ರಾಪ್ತಿಯ ಪ್ರಭಾವವು ತಮ್ಮ ಮೇಲೂ ಬೀರುತ್ತದೆ. ಹೃದಯದಲ್ಲಿ ಖುಷಿಯ ಹಾಡು ಮೊಳಗುವುದು ಆರಂಭವಾಗುತ್ತದೆ – ಇದಾಯಿತು ಪ್ರತ್ಯಕ್ಷ ಫಲದ ಪ್ರಾಪ್ತಿ. ಅಂದಮೇಲೆ ಸೇವೆ ಮಾಡುವವರು ಅರ್ಥಾತ್ ಸದಾ ಪ್ರಾಪ್ತಿಯ ಫಲವನ್ನು ಅನುಭವಿಸುವವರು. ಹಾಗಾದರೆ ಯಾರು ಫಲವನ್ನು ಅನುಭವಿಸುತ್ತಾರೆಯೋ, ಅವರೇನಾಗುವರು? ಆರೋಗ್ಯವಂತರು ಆಗುವರಲ್ಲವೆ! ವೈದ್ಯರೇನಾದರೂ ಬಲಹೀನವಾಗಿ ಇರುವವರನ್ನು ನೋಡುತ್ತಾರೆಂದರೆ ಏನು ಹೇಳುತ್ತಾರೆ? ಹಣ್ಣನ್ನು ಸೇವಿಸಿರಿ. ಏಕೆಂದರೆ ವರ್ತಮಾನದಲ್ಲಿ ಹೆಚ್ಚು ಶಕ್ತಿ ಕೊಡುವ ವಸ್ತುವಾಗಿ ಬೆಣ್ಣೆ-ತುಪ್ಪ ಸೇವಿಸಬಹುದು, ಆದರೆ ಅದಂತು ಜೀರ್ಣವಾಗಲು ಸಾಧ್ಯವಿಲ್ಲ. ವರ್ತಮಾನದಲ್ಲಿ ಶಕ್ತಿ ಬರಲು ಹಣ್ಣನ್ನು ಕೊಡುವರು ಅಂದಮೇಲೆ ಸೇವೆಯ ಪ್ರತ್ಯಕ್ಷ ಫಲವೂ ಸಿಗುತ್ತದೆ. ಭಲೆ ಕರ್ಮಣಾ ಸೇವೆಯನ್ನಾದರೂ ಮಾಡಿ, ಅದರಿಂದ ಖುಷಿಯಾಗುತ್ತದೆ. ಭಲೆ ಸ್ವಚ್ಛತೆ ಮಾಡಬಹುದು ಆದರೆ ಯಾವಾಗ ಸ್ಥಾನವು ಸ್ವಚ್ಛತೆಯಿಂದ ಶೋಭಿಸುತ್ತದೆಯೋ, ಆಗ ಸತ್ಯ ಹೃದಯದಿಂದ ಮಾಡುವ ಕಾರಣ ಸ್ಥಾನವು ಶೋಭಿಸುವುದನ್ನು ನೋಡಿ ಖುಷಿಯಾಗುತ್ತದೆ ಅಲ್ಲವೆ.

ಯಾವುದೇ ಸೇವೆಯ ಪುಣ್ಯದ ಫಲವು ಸ್ವತಹವಾಗಿಯೇ ಪ್ರಾಪ್ತಿಯಾಗುವುದು. ಪುಣ್ಯದ ಫಲವು ಜಮಾ ಸಹ ಆಗುತ್ತದೆ ಹಾಗೂ ಅದು ಈಗಲೂ ಸಿಗುತ್ತದೆ. ಒಂದುವೇಳೆ ತಾವು ಯಾವುದೇ ಕಾರ್ಯವನ್ನು ಮಾಡುತ್ತೀರಿ, ಸೇವೆಯನ್ನೇ ಮಾಡುತ್ತೀರೆಂದರೆ ತಮಗೆ ಯಾರಾದರೂ ಹೇಳುತ್ತಾರೆ – ಬಹಳ ಒಳ್ಳೆಯ ಸೇವೆಯನ್ನು ಮಾಡಿದರು, ಬಹಳ ಚೆನ್ನಾಗಿ ಅವಿಶ್ರಾಂತರಾಗಿ ಮಾಡಿದರು. ಇದನ್ನು ಕೇಳಿಸಿಕೊಂಡು ಖುಷಿಯಾಗುತ್ತದೆ ಅಲ್ಲವೆ. ಅಂದಮೇಲೆ ಫಲವು ಸಿಕ್ಕಿತಲ್ಲವೆ. ಭಲೆ ಮುಖದಿಂದ ಸೇವೆ ಮಾಡಿರಿ ಅಥವಾ ಕೈಗಳಿಂದ ಮಾಡಿರಿ ಆದರೆ ಸೇವೆಯೆಂದರೆ ಸೇವೆಯಾಗಿದೆ. ಇದೇ ಸೇವೆಯಲ್ಲಿ ನಿಮಿತ್ತರಾಗಿದ್ದೀರಲ್ಲವೆ. ಸೇವೆಯ ಮಹತ್ವವನ್ನಿಡುವ ಕಾರಣ ಮಹಾನತೆಯ ಪ್ರಾಪ್ತಿಯಾಯಿತು. ಹಾಗಾದರೆ ಇದೇ ರೀತಿಯಲ್ಲಿ ಸೇವೆಯ ಮಹತ್ವಿಕೆಯನ್ನು ತಿಳಿದುಕೊಂಡು, ಮುಂದೆಯೇ ಯಾವುದಾದರೊಂದು ಸೇವೆಯಲ್ಲಿ ಸದಾ ಬ್ಯುಸಿಯಾಗಿರಿ. ಯಾವುದೇ ಜಿಜ್ಞಾಸು ಸಿಗದಿದ್ದರೆ ಸೇವೆಯೇನು ಮಾಡಲಿ? ಯಾವುದೇ ಪ್ರದರ್ಶನಿ ಇಡಲಿಲ್ಲ, ಭಾಷಣ ಮಾಡದಿದ್ದರೆ ಏನು ಸೇವೆ ಮಾಡಲಿ? ಹೀಗೆ ಹೇಳಬಾರದು. ಸೇವೆಯ ಮೈದಾನವಂತು ವಿಶಾಲವಾಗಿದೆ! ನಮಗೆ ಸೇವೆಯೇ ಸಿಗುತ್ತಿಲ್ಲ ಎಂದು ಯಾರಾದರೂ ಹೇಳುತ್ತೀರಾ! ಹೇಳಲು ಸಾಧ್ಯವೇ ಇಲ್ಲ. ವಾಯುಮಂಡಲವನ್ನು ತಯಾರು ಮಾಡುವ ಸೇವೆಯನ್ನು ಎಷ್ಟೊಂದು ಉಳಿದುಕೊಂಡಿದೆ! ಪ್ರಕೃತಿಯನ್ನೂ ಪರಿವರ್ತನೆ ಮಾಡುವವರು ಆಗಿದ್ದೀರಿ ಅಂದಮೇಲೆ ಪ್ರಕೃತಿಯನ್ನು ಪರಿವರ್ತನೆ ಹೇಗಾಗುತ್ತದೆ? ಭಾಷಣ ಮಾಡುವಿರಾ? ವೃತ್ತಿಯಿಂದ ವಾಯುಮಂಡಲವು ತಯಾರಾಗುತ್ತದೆ. ವಾಯುಮಂಡಲವನ್ನು ತಯಾರು ಮಾಡುವುದು ಅರ್ಥಾತ್ ಪ್ರಕೃತಿಯ ಪರಿವರ್ತನೆ ಆಗುವುದಾಗಿದೆ. ಅಂದಮೇಲೆ ಎಷ್ಟೊಂದು ಸೇವೆಯಿದೆ! ಈಗ ಇಷ್ಟೆಲ್ಲಾ ಆಗಿದೆಯೇ? ಈಗಂತು ಪ್ರಕೃತಿಯು ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿದೆ ಅಂದಾಗ ಪ್ರತೀ ಸೆಕೆಂಡಿನಲ್ಲಿಯೂ ಸೇವೆಯ ಬಹಳ ವಿಶಾಲವಾದ ಮೈದಾನವೇ ಉಳಿದುಕೊಂಡಿದೆ. ನಮಗೆ ಸೇವೆಯ ಅವಕಾಶವೇ ಸಿಗುತ್ತಿಲ್ಲ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ರೋಗಿಯಾಗಿದ್ದರೂ ಸೇವೆಯ ಅವಕಾಶವಿದೆ. ಯಾರೇ ಅವಿದ್ಯಾವಂತರು ಆಗಿರಬಹುದು, ವಿದ್ಯಾವಂತರೇ ಆಗಿರಬಹುದು, ಯಾವುದೇ ಪ್ರಕಾರದ ಆತ್ಮನಾಗಿರಬಹುದು, ಎಲ್ಲರಿಗಾಗಿಯೂ ಸೇವೆಯ ಬಹಳ ದೊಡ್ಡ ಸಾಧನಗಳಿವೆ. ಸೇವೆಯ ಅವಕಾಶ ಸಿಗಲಿ ಎನ್ನುವುದಲ್ಲ, ಸಿಕ್ಕಿದೆ.

ಆಲ್ರೌಂಡ್ ಸೇವಾಧಾರಿ ಆಗಬೇಕಾಗಿದೆ. ಕರ್ಮಣಾ ಸೇವೆಯಲ್ಲಿಯೂ 100 ಅಂಕಗಳಿವೆ. ಒಂದುವೇಳೆ ವಾಚಾ ಮತ್ತು ಮನಸಾ ಸೇವೆಯು ಸರಿಯಿದೆ ಆದರೆ ಕರ್ಮಣಾದಲ್ಲಿ ಆಸಕ್ತಿಯಿಲ್ಲದಿದ್ದರೆ 100 ಅಂಕಗಳು ಕಳೆದು ಹೋಯಿತು. ಆಲ್ರೌಂಡ್ ಸೇವಾಧಾರಿ ಅರ್ಥಾತ್ ಸರ್ವ ಪ್ರಕಾರದ ಸೇವೆಯ ಮೂಲಕ ಪೂರ್ಣಾಂಕಗಳನ್ನು ಪಡೆಯುವವರು. ಅಂದಮೇಲೆ ಹೀಗಿದ್ದೀರಾ? ಯಜ್ಞದ ಆರಂಭದಲ್ಲಿ ಯಾವಾಗ ಮಕ್ಕಳ ಭಟ್ಟಿಯಾಯಿತು, ಆಗ ಕರ್ಮಣಾದ ಪಾಠವನ್ನು ಎಷ್ಟೊಂದು ಪರಿಪಕ್ವ ಮಾಡಿಸಲಾಯಿತು! ಮಾಲಿಯನ್ನಾಗಿಯೂ ಮಾಡಲಾಯಿತು, ಚಪ್ಪಲಿ ತಯಾರು ಮಾಡುವವರನ್ನಾಗಿಯೂ ಮಾಡಲಾಯಿತು, ಪಾತ್ರೆಯನ್ನು ಶುದ್ಧಗೊಳಿಸುವವರನ್ನಾಗಿಯೂ ಮಾಡಲಾಯಿತು, ಭಾಷಣ ಮಾಡುವವರನ್ನಾಗಿಯೂ ಮಾಡಲಾಯಿತು ಏಕೆಂದರೆ ಇದರ ಅಂಕಗಳನ್ನೂ ಕಳೆದುಕೊಳ್ಳಬಾರದು. ಅಲ್ಲಿಯೂ ಲೌಕಿಕ ವಿದ್ಯಾಭ್ಯಾಸದಲ್ಲಿಯೂ ಯಾವುದೇ ಚಿಕ್ಕ ವಿಷಯದಲ್ಲಾದರೂ ಅನುತ್ತೀರ್ಣರಾಗುತ್ತೀರಿ, ಭಲೆ ಮೂರು ಅಥವಾ ನಾಲ್ಕನೆ ನಂಬರಿನ ವಿಷಯವೇ ಆಗಿರಬಹುದು ಆದರೆ ಅದರಲ್ಲೇನಾದರೂ ಅನುತ್ತೀರ್ಣರು ಆಗುತ್ತೀರೆಂದರೆ ಪಾಸ್-ವಿತ್-ಆನರ್ ಆಗುವುದಿಲ್ಲ. ಒಟ್ಟು ಅಂಕಗಳಲ್ಲಂತು ಕಡಿಮೆ ಆಯಿತಲ್ಲವೆ. ಇದೇರೀತಿ ಎಲ್ಲಾ ವಿಷಯಗಳಲ್ಲಿಯೂ ಪರಿಶೀಲನೆ ಮಾಡಿರಿ – ಎಲ್ಲಾ ವಿಷಯಗಳಲ್ಲಿಯೂ ಅಂಕಗಳನ್ನು ಪಡೆದಿದ್ದೇನೆಯೇ? ಹೇಗೆ ಇವರು (ಮನೆ ಕೊಡುವುದಕ್ಕಾಗಿ) ನಿಮಿತ್ತರಾದರು, ಇವರು ಸೇವೆಯನ್ನು ಮಾಡಿದರು, ಅದರ ಪುಣ್ಯವು ಸಿಕ್ಕಿತು ಹಾಗೂ ಅಂಕಗಳು ಸಿಕ್ಕಿದವು. ಆದರೆ ಪೂರ್ಣಾಂಕಗಳನ್ನು ಪಡೆಯಲಾಯಿತೇ ಅಥವಾ ಇಲ್ಲವೆ ಎನ್ನುವುದನ್ನು ಪರಿಶೀಲನೆ ಮಾಡಿಕೊಳ್ಳಿರಿ. ಯಾವುದಾದರೊಂದು ಕರ್ಮಣಾ ಸೇವೆಯೂ ಸಹ ಅವಶ್ಯಕವಿರುತ್ತದೆ ಏಕೆಂದರೆ ಕರ್ಮಣಾ ಸೇವೆಯಲ್ಲಿಯೂ 100 ಅಂಕಗಳಿವೆ, ಕಡಿಮೆಯೇನಿಲ್ಲ. ಇಲ್ಲಿ ಎಲ್ಲಾ ವಿಷಯದಲ್ಲಿ 100 ಅಂಕಗಳಿವೆ, ಅಲ್ಲಂತು ಡ್ರಾಯಿಂಗ್ನಲ್ಲಿ ಸ್ವಲ್ಪ ಅಂಕಗಳಿರುತ್ತವೆ, ಲೆಕ್ಕದಲ್ಲಿ ಹೆಚ್ಚು ಅಂಕಗಳಿರುತ್ತವೆ. ಇಲ್ಲಂತು ಎಲ್ಲಾ ವಿಷಯಗಳೂ ಮಹತ್ವವಾಗಿರುತ್ತದೆ. ಅಂದಮೇಲೆ ಮನಸಾ, ವಾಚಾದಲ್ಲಂತು ಅಂಕಗಳನ್ನು ಪಡೆದಿರಿ ಮತ್ತು ಕರ್ಮಣಾದಲ್ಲಿ ಉಳಿದುಕೊಳ್ಳುತ್ತದೆ ಮತ್ತು ತಾವು ತಿಳಿಯುತ್ತೀರಿ – ನಾನಂತು ಬಹಳ ಮಹಾವೀರನಾಗಿದ್ದೇನೆ ಎಂದು ತಿಳಿಯುವವರು ಆಗಬಾರದು. ಎಲ್ಲದರಲ್ಲಿಯೂ ಅಂಕಗಳನ್ನು ಪಡೆಯಬೇಕಾಗಿದೆ – ಇಂತಹವರಿಗೆ ಸೇವಾಧಾರಿ ಎಂದು ಹೇಳಲಾಗುತ್ತದೆ. ಅಂದಮೇಲೆ ಇದು ಎಂತಹ ಗ್ರೂಪ್ ಆಗಿದೆ? ಆಲ್ರೌಂಡ್ ಸೇವಾಧಾರಿಯೇ ಅಥವಾ ಸ್ಥಾನವನ್ನು ಕೊಡುವ ಸೇವಾಧಾರಿಯೇ? ಯಾವುದನ್ನು ಸಫಲ ಮಾಡಿದಿರಿ ಅದು ಬಹಳ ಒಳ್ಳೆಯದನ್ನೇ ಮಾಡಿದಿರಿ. ಯಾರೆಷ್ಟು ಸಫಲ ಮಾಡುವರು, ಅಷ್ಟು ಮಾಲೀಕರಾಗುವರು. ಸಮಯಕ್ಕೆ ಮೊದಲೇ ಸಫಲ ಮಾಡಿ ಬಿಡುವುದು ಬುದ್ಧಿವಂತಿಕೆಯ ಸಂಕೇತವಾಗಿದೆ. ಅಂದಮೇಲೆ ಬುದ್ಧಿವಂತಿಕೆಯ ಕೆಲಸ ಮಾಡಲಾಗಿದೆ. ಇದರಿಂದ ಬಾಪ್ದಾದಾರವರು ಸಾಹಸವನ್ನಿಡುವ ಮಕ್ಕಳಾಗಿದ್ದಾರೆಂದು ಖುಷಿಯಾಗುತ್ತಾರೆ. ಒಳ್ಳೆಯದು.

ವರದಾನ:-

ಯಾವ ಮಕ್ಕಳು ಒಬ್ಬ ಸರ್ವಶಕ್ತಿವಂತ ತಂದೆಯ ಸ್ನೇಹಿಯೇ ಆಗಿರುತ್ತಾರೆಯೋ, ಅವರು ಸ್ವತಹವಾಗಿಯೇ ಸರ್ವ ಆತ್ಮರುಗಳ ಸ್ನೇಹಿಯಾಗಿ ಬಿಡುತ್ತಾರೆ. ಯಾರು ಈ ಗುಹ್ಯ ರಹಸ್ಯವನ್ನು ತಿಳಿಯುತ್ತಾರೆಯೋ ಅವರು ರಹಸ್ಯಯುಕ್ತ, ಯೋಗಯುಕ್ತ ಅಥವಾ ದಿವ್ಯ ಗುಣಗಳಿಂದ ಯುಕ್ತಿ ಯುಕ್ತರು ಆಗಿ ಬಿಡುತ್ತಾರೆ. ಇಂತಹ ರಹಸ್ಯಯುಕ್ತ ಆತ್ಮರು ಸರ್ವ ಆತ್ಮರುಗಳನ್ನು ಸಹಜವಾಗಿಯೇ ಪ್ರಸನ್ನಗೊಳಿಸುತ್ತಾರೆ. ಯಾರು ಈ ರಹಸ್ಯವನ್ನು ತಿಳಿದುಕೊಂಡಿಲ್ಲವೋ ಅವರು ಅನ್ಯರಿಗೆ ಕೆಲವೊಮ್ಮೆ ಬೇಸರ ಮಾಡುತ್ತಾರೆ, ಇನ್ನೂ ಕೆಲವೊಮ್ಮೆ ಸ್ವಯಂ ಬೇಸರವಾಗಿ ಇರುತ್ತಾರೆ. ಆದ್ದರಿಂದ ಸದಾ ಸ್ನೇಹಿಯಾಗಿರುವ ರಹಸ್ಯವನ್ನು ತಿಳಿದುಕೊಂಡು ರಹಸ್ಯಯುಕ್ತರಾಗಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top
Scroll to Top