07 June 2021 KANNADA Murli Today – Brahma Kumaris

June 6, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಅಮೃತವೇಳೆಯ ಸಮಯವು ಬಹಳ-ಬಹಳ ಒಳ್ಳೆಯದಾಗಿದೆ, ಆದ್ದರಿಂದ ಬೆಳಗ್ಗೆ-ಬೆಳಗ್ಗೆ ಎದ್ದು ಏಕಾಂತದಲ್ಲಿ ಕುಳಿತು ತಂದೆಯೊಂದಿಗೆ ಮಧುರಾತಿ ಮಧುರವಾಗಿ ಮಾತನಾಡಿ”

ಪ್ರಶ್ನೆ:: -

ಯಾವ ಜ್ಞಾನವು ನಿರಂತರ ಯೋಗಿಗಳಾಗಲು ಬಹಳ ಸಹಯೋಗ ನೀಡುತ್ತದೆ?

ಉತ್ತರ:-

ಡ್ರಾಮಾದ ಜ್ಞಾನ. ಏನು ಕಳೆಯಿತೋ ಅದು ಡ್ರಾಮಾದಲ್ಲಿ ನಿಗಧಿಯಾಗಿದೆ. ಸ್ಥಿತಿಯು ಸ್ವಲ್ಪವೂ ಏರುಪೇರಿನಲ್ಲಿ ಬರಬಾರದು. ಭಲೆ ಎಂತಹದ್ದೇ ಪರಿಸ್ಥಿತಿಯಿರಲಿ, ಭೂಕಂಪವಾಗಲಿ, ವ್ಯಾಪಾರದಲ್ಲಿ ನಷ್ಟವೇ ಆಗಲಿ ಆದರೆ ಸ್ವಲ್ಪವೂ ಸಂಶಯ ಬರಬಾರದು. ಅಂತಹವರಿಗೇ ಮಹಾವೀರರೆಂದು ಹೇಳುತ್ತಾರೆ. ಒಂದುವೇಳೆ ಡ್ರಾಮಾದ ಯಥಾರ್ಥ ಜ್ಞಾನವು ಇಲ್ಲವೆಂದರೆ ಕಣ್ಣೀರು ಹಾಕುತ್ತಿರುತ್ತಾರೆ. ಡ್ರಾಮಾದ ಜ್ಞಾನವು ನಿರಂತರ ಯೋಗಿಗಳಾಗುವುದರಲ್ಲಿ ಬಹಳ ಸಹಯೋಗ ನೀಡುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಓಂ ನಮಃ ಶಿವಾಯ……….

ಓಂ ಶಾಂತಿ. ಮಕ್ಕಳು ಈಗ ಬಹಳ ಚೆನ್ನಾಗಿ ತಿಳಿದುಕೊಳ್ಳುತ್ತೀರಿ – ಈಗ ಪತಿತ ಪ್ರಪಂಚದ ಅಂತ್ಯವಾಗುತ್ತಿದೆ, ಪಾವನ ಪ್ರಪಂಚದ ಆದಿಯಾಗುತ್ತಿದೆ. ಇದನ್ನು ಕೇವಲ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಮಕ್ಕಳಿಗೇ ಈ ಆದೇಶ ಅಥವಾ ಶ್ರೀಮತ ಸಿಗುತ್ತದೆ. ಯಾರು ಕೊಡುತ್ತಾರೆ? ಶ್ರೇಷ್ಠಾತಿ ಶ್ರೇಷ್ಠ ಭಗವಂತ. ಅವರು ಪತಿತರಿಂದ ಪಾವನರಾಗಬೇಕೆಂದು ತಿಳಿಸುತ್ತಾ ಇರುತ್ತಾರೆ. ಈ ಜ್ಞಾನವು ನಿಮಗಾಗಿ ಇದೆ ಮತ್ತೆಲ್ಲರೂ ಪತಿತರಾಗಿದ್ದಾರೆ. ಈ ಪತಿತ ಪ್ರಪಂಚದ ವಿನಾಶವು ಖಂಡಿತ ಆಗುವುದು. ವಿಕಾರಿಗೇ ಪತಿತರೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ – ನೀವು ಜನ್ಮ ಜನ್ಮಾಂತರದಿಂದ ನೀವು ಒಬ್ಬರು ಇನ್ನೊಬ್ಬರಿಗೆ ದುಃಖ ಕೊಡುತ್ತಾ ಬಂದಿದ್ದೀರಿ. ಆದ್ದರಿಂದ ನೀವು ಆದಿ-ಮಧ್ಯ-ಅಂತ್ಯ ದುಃಖವನ್ನು ಪಡೆಯುತ್ತೀರಿ. ಒಬ್ಬರು ಇನ್ನೊಬ್ಬರನ್ನು ಪತಿತರನ್ನಾಗಿ ಮಾಡುತ್ತೀರಿ. ನಾವು ಪತಿತರಾಗಿದ್ದೇವೆಂದು ಕರೆಯುತ್ತಾರೆ ಆದರೆ ಬುದ್ಧಿಯಲ್ಲಿ ಪೂರ್ಣ ರೀತಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಪತಿತ-ಪಾವನ ಬನ್ನಿ ಎಂದು ಹೇಳುತ್ತಾರೆ ಆದರೂ ಪತಿತತನವನ್ನು ಬಿಡುವುದೇ ಇಲ್ಲ. ನೀವೀಗ ತಿಳಿದುಕೊಂಡಿದ್ದೀರಿ, ಇದೆಲ್ಲವೂ ಪಾವನರಾಗುವ ಮಾತಾಗಿದೆ, ಇದನ್ನು ತಿಳಿಸುವವರೂ ಸಹ ಯಾರಾದರೂ ಬೇಕಲ್ಲವೆ ಅಂದಾಗ ಒಬ್ಬ ತಂದೆಯೇ ತಿಳಿಸುವವರಾಗಿದ್ದಾರೆ. ಬಾಕಿ ಈ ಗುರುಗಳೂ ಯಾರೂ ಸಹ ಯಾರನ್ನೂ ಪಾವನ ಮಾಡಲು ಸಾಧ್ಯವಿಲ್ಲ. ಪಾವನರೂ ಸಹ ಕೇವಲ ಒಂದು ಜನ್ಮಕ್ಕಾಗಿ ಅಲ್ಲ ಜನ್ಮ ಜನ್ಮಾಂತರಕ್ಕಾಗಿ ಆಗಬೇಕಾಗಿದೆ. ನಿಮ್ಮಲ್ಲಿಯೂ ಯಾರು ಜ್ಞಾನವಂತರಿದ್ದಾರೆಯೋ ಅವರು ತೀಕ್ಷ್ಣವಾಗಿರುತ್ತಾರೆ, ಡ್ರಾಮಾನುಸಾರ ಅದು ನಿಗಧಿಯಾಗಿದೆ. ನಿಮ್ಮಲ್ಲಿಯೂ ಮಹಾವೀರತನವಿರಬೇಕು. ತಂದೆಯ ನೆನಪಿನಲ್ಲಿದ್ದಾಗಲೇ ಅದು ಬರುವುದು. ತಂದೆಯು ಬಹಳ ಚೆನ್ನಾಗಿ ತಿಳಿಸುತ್ತಾರೆ. ಹೇಗೆ ತಂದೆಯು ಹೇಳುತ್ತಾರೆ, ಮುಂಜಾನೆ ಎದ್ದು ನೆನಪು ಮಾಡಿ, ನೆನಪು ಮಾಡಲು ಆ ಸಮಯವು ಬಹಳ ಸುಂದರವಾಗಿದೆ ಅದಕ್ಕೆ ಪ್ರಭಾತವೆಂದು ಹೇಳಲಾಗುತ್ತದೆ. ಭಕ್ತಿಮಾರ್ಗದಲ್ಲಿಯೂ ಹೇ ನನ್ನ ಮನವೇ ಮುಂಜಾನೆ ರಾಮ ಸ್ಮರಣೆ ಮಾಡು ಎಂದು ಹೇಳುತ್ತಾರೆ, ತಂದೆಯೂ ಸಹ ಹೇಳುತ್ತಾರೆ – ಮುಂಜಾನೆ ಎದ್ದು ತಂದೆಯಾದ ನನ್ನನ್ನು ನೆನಪು ಮಾಡಿರಿ ಆಗ ಬಹಳ ಮಜಾ ಬರುವುದು. ತಂದೆಯ ನೆನಪಿನಲ್ಲಿ ಕುಳಿತು ಇದೇ ಚಿಂತನೆ ಮಾಡಬೇಕು – ಯಾರಿಗೆ ಹೇಗೆ ತಿಳಿಸಿಕೊಡುವುದು? ಅಮೃತವೇಳೆ ವಾಯುಮಂಡಲವು ಬಹಳ ಶುದ್ಧವಾಗಿರುತ್ತದೆ, ದಿನದಲ್ಲಂತೂ ಉದ್ಯೋಗ-ವ್ಯವಹಾರಗಳ ಜಂಜಾಟವಿರುತ್ತದೆ. ರಾತ್ರಿ 12 ಗಂಟೆಯವರೆಗೆ ವಿಕಾರಿ ವಾಯುಮಂಡಲವಿರುತ್ತದೆ. ಸಾಧು-ಸಂತ ಭಕ್ತರೆಲ್ಲರೂ ಮುಂಜಾನೆಯ ಸಮಯದಲ್ಲಿ ಭಕ್ತಿಮಾಡುತ್ತಾರೆ. ಹಾಗೆ ನೋಡಿದರೆ ದಿನದಲ್ಲಿ ನೆನಪು ಮಾಡಬಹುದು, ಭಲೆ ಉದ್ಯೋಗ-ವ್ಯವಹಾರಗಳಲ್ಲಿರಬಹುದು ಬುದ್ಧಿಯೋಗವು ಯಾವ ದೇವತೆಯ ಪೂಜಾರಿಯಾಗಿರುವರೋ ಅವರ ಬಳಿಯೇ ಇರುವುದು ಆದರೆ ಈ ರೀತಿ ಯಾರಿಗೂ ಇರುವುದಿಲ್ಲ. ಭಕ್ತಿ ಮಾರ್ಗದಲ್ಲಿ ಕೇವಲ ದರ್ಶನಕ್ಕಾಗಿ ಪರಿಶ್ರಮ ಪಡುತ್ತಾರೆ, ಸಿಗುವುದೇನೂ ಇಲ್ಲ. ಅವರೂ ಸಹ ಭಕ್ತಿ ಮಾಡುತ್ತಾ-ಮಾಡುತ್ತಾ ತಮೋಪ್ರಧಾನವಾಗಲೇಬೇಕು. ಭಕ್ತಿಮಾರ್ಗದಲ್ಲಿಯೂ ಶಿವನಿಗೆ ಬಲಿ ಕೊಡುತ್ತಾರೆ, ಅದಕ್ಕೆ ಕಾಶಿ ಕಲ್ವಟ್ ಎಂದು ಹೇಳುತ್ತಾರೆ. ಶಿವನನ್ನು ನೆನಪು ಮಾಡುತ್ತಾ-ಮಾಡುತ್ತಾ ಬಾವಿಯಲ್ಲಿ ಹೋಗಿ ಬೀಳುತ್ತಾರೆ, ಶಿವನಿಗೆ ಬಲಿಯಾಗುತ್ತಾರೆ. ಅದು ಭಕ್ತಿ ಮಾರ್ಗದ ಬಲಿಯಾಗಿದೆ, ಇದು ಜ್ಞಾನ ಮಾರ್ಗದ ಬಲಿಯಾಗಿದೆ. ಅದೂ ಪರಿಶ್ರಮ, ಇದೂ ಪರಿಶ್ರಮವಾಗಿದೆ, ಭಕ್ತಿ ಮಾರ್ಗದಲ್ಲಿ ಇದರಿಂದೇನೂ ಲಾಭವಿಲ್ಲ. ಇದು ಹೇಗೆ ಆತ್ಮವು ತನ್ನ ಶರೀರವನ್ನು ಘಾತ ಮಾಡಿಕೊಂಡಂತೆ. ಇದು ಜ್ಞಾನವಲ್ಲ, ಆತ್ಮವೇ ಪರಮಾತ್ಮನೆಂದು ಅವರು ಹೇಳಿ ಬಿಡುತ್ತಾರೆ, ಆತ್ಮಾಭಿಮಾನಿಯಂತೂ ಒಬ್ಬರೇ ತಂದೆಯಾಗಿದ್ದಾರೆ. ಅವರು ಮಕ್ಕಳಿಗೆ ತಿಳಿಸುತ್ತಾರೆ – ಪರಮಾತ್ಮನು ನಾನೊಬ್ಬನೇ ಆಗಿದ್ದೇನೆ, ಆತ್ಮನೇ ಪರಮಾತ್ಮನೆಂದು ಹೇಳುವುದು ಅತಿ ದೊಡ್ಡ ಸುಳ್ಳಾಗಿದೆ. ಆತ್ಮವೇ ಪರಮಾತ್ಮನಾಗಲು ಸಾಧ್ಯವಿಲ್ಲ.

ತಂದೆಯು ತಿಳಿಸುತ್ತಾರೆ – ನಾನು ಪತಿತರನ್ನು ಪಾವನರನ್ನಾಗಿ ಮಾಡುವುದಕ್ಕಾಗಿಯೇ ಬರುತ್ತೇನೆ ಅಂದಾಗ ಪಾವನರನ್ನಾಗಿ ಮಾಡುತ್ತಿದ್ದೇನೆ. ಉಳಿದಂತೆ ಡ್ರಾಮಾದಲ್ಲಿ ಏನಾಗುವುದಿದೆಯೋ ಅದೇ ಆಗುವುದು. ತಿಳಿದುಕೊಳ್ಳಿ, ಭೂಕಂಪವಾಗುತ್ತದೆ ಮನೆ ಬೀಳುತ್ತದೆ ಎಂದರೆ ಡ್ರಾಮಾದಲ್ಲಿ ಇದೇ ರೀತಿಯಿತ್ತು, ಕಲ್ಪದ ಹಿಂದೆಯೂ ಇದೇ ರೀತಿ ಆಗಿತ್ತು, ಇದರಲ್ಲಿ ಸ್ಥಿತಿಯು ಸ್ವಲ್ಪವೂ ಅಲುಗಾಡುವ ಅವಶ್ಯಕತೆಯಿಲ್ಲ. ಡ್ರಾಮಾದ ಮೇಲೆ ಧೃಡವಾಗಿ ನಿಂತಿರಬೇಕಾಗಿದೆ, ಅಂತಹವರಿಗೇ ಮಹಾವೀರರೆಂದು ಹೇಳಲಾಗುತ್ತದೆ. ಅಪಘಾತಗಳಂತೂ ಬಹಳಷ್ಟು ಆಗುತ್ತಲೇ ಇರುತ್ತವೆ. ಯಾರದೇ ರಕ್ಷಣೆ ಮಾಡಲು ಸಾಧ್ಯವೇ? ಇದಂತೂ ಡ್ರಾಮಾದಲ್ಲಿ ನಿಗಧಿಯಾಗಿದೆ, ಡ್ರಾಮಾದಲ್ಲಿ ಇದೇರೀತಿ ಪಾತ್ರವಿದೆ. ಯಾರು ಡ್ರಾಮಾವನ್ನು ತಿಳಿದುಕೊಂಡಿಲ್ಲವೋ ಅವರು ದೇಹವನ್ನು ನೆನಪು ಮಾಡಿಕೊಂಡು ಕಣ್ಣೀರನ್ನು ಸುರಿಸುತ್ತಾರೆ. ಅವರೆಂದೂ ಶಿವ ತಂದೆಯನ್ನು ನೆನಪು ಮಾಡಲು ಸಾಧ್ಯವಿಲ್ಲ ಏಕೆಂದರೆ ಶಿವ ತಂದೆಯೊಂದಿಗೆ ಪ್ರೀತಿಯಿಲ್ಲ, ಸತ್ಯವಾದ ಪ್ರೀತಿಯಿಲ್ಲ. ಇಂತಹ ತಂದೆಯ ಜೊತೆಯಂತೂ ಸಂಪೂರ್ಣ ಪ್ರೀತಿಯನ್ನಿಡಬೇಕು. ನೀವು ಕಲ್ಪ-ಕಲ್ಪವೂ ಶಿವ ತಂದೆಯ ಜೊತೆ ಪ್ರೀತಿ ಬುದ್ಧಿಯವರಾಗುತ್ತೀರಿ, ದೇವತೆಗಳಿಗೆ ತಂದೆಯ ಜೊತೆ ಪ್ರೀತಿ ಬುದ್ಧಿಯಿತ್ತು, ಆ ಪ್ರೀತಿಯಿಂದ ಅವರು ಆ ಪದವಿಯನ್ನು ಪಡೆದಿದ್ದಾರೆಂದು ಹೇಳುವುದಿಲ್ಲ. ಅವರಿಗೆ ಅಲ್ಲಿ ಏನೂ ತಿಳಿದಿರುವುದಿಲ್ಲ. ಇಡೀ ಕಲ್ಪದಲ್ಲಿ ತಂದೆಯ ಜೊತೆ ಪ್ರೀತಿಯನ್ನಿಡಲು ನಿಮಗೆ ಅವರ ಬಗ್ಗೆ ತಿಳಿದಿರುವುದೇ ಇಲ್ಲ. ಈಗ ತಂದೆಯು ತಮ್ಮ ಪರಿಚಯ ನೀಡಿದ್ದಾರೆ, ತಂದೆಯು ತಿಳಿಸುತ್ತಾರೆ – ಮತ್ತೆಲ್ಲಾ ಸಂಗಗಳನ್ನು ಬಿಟ್ಟು ನನ್ನೊಬ್ಬನ ಸಂಗ ಮಾಡಿ. ಇದು ಖಂಡಿತವಾಗಿಯೂ ವಿನಾಶಕಾಲವಾಗಿದೆ, ಇದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಮನುಷ್ಯರು ಸಂಪೂರ್ಣ ಘೋರ ಅಂಧಕಾರದಲ್ಲಿದ್ದಾರೆ. ನೀವೀಗ ತಿಳಿದುಕೊಳ್ಳುತ್ತೀರಿ – ನಾವು ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ನೆನಪು ಮಾಡದ ಹೊರತು ಸತೋಪ್ರಧಾನರಾಗಲು ಸಾಧ್ಯವಿಲ್ಲ. ಸರ್ಜನ್ ಆಗಿ ತಮ್ಮ ರೋಗವನ್ನು ನೋಡಿಕೊಳ್ಳಬೇಕಾಗಿದೆ. ಶ್ರೀಮತದಂತೆ ನೋಡಿಕೊಳ್ಳಿ – ತಂದೆಯ ಜೊತೆ ನನಗೆ ಎಷ್ಟು ಪ್ರೀತಿಯಿದೆ? ಅಮೃತವೇಳೆ ತಂದೆಯನ್ನು ನೆನಪು ಮಾಡುವುದು ಒಳ್ಳೆಯದಾಗಿದೆ. ಮುಂಜಾನೆಯ ಸಮಯವು ಬಹಳ ಚೆನ್ನಾಗಿರುತ್ತದೆ, ಆ ಸಮಯದಲ್ಲಿ ಮಾಯೆಯ ಬಿರುಗಾಳಿಗಳು ಬರುವುದಿಲ್ಲ. ರಾತ್ರಿ 12 ಗಂಟೆಯವರೆಗೆ ತಪಸ್ಸು ಮಾಡುವುದರಿಂದ ಯಾವುದೇ ಲಾಭವಿರುವುದಿಲ್ಲ ಏಕೆಂದರೆ ಆ ಸಮಯವೇ ಕೊಳಕಾಗಿರುತ್ತದೆ. ವಾಯುಮಂಡಲವು ಅಶುದ್ಧವಾಗಿರುತ್ತದೆ, ಆದ್ದರಿಂದ ಒಂದು ಗಂಟೆಯವರೆಗೆ ಬಿಟ್ಟು ಬಿಡಬೇಕು. ಒಂದು ಗಂಟೆಯ ನಂತರ ವಾಯುಮಂಡಲವು ಬಹಳ ಚೆನ್ನಾಗಿರುತ್ತದೆ. ತಂದೆಯು ತಿಳಿಸುತ್ತಾರೆ – ನಿಮ್ಮದು ಸಹಜ ರಾಜಯೋಗವಾಗಿದೆ, ಭಲೆ ಆರಾಮವಾಗಿ ಕುಳಿತುಕೊಳ್ಳಿ. ಬ್ರಹ್ಮಾ ತಂದೆಯು ತಮ್ಮ ಅನುಭವವನ್ನು ತಿಳಿಸುತ್ತಾರೆ – ಹೇಗೆ ತಂದೆಯೊಂದಿಗೆ ಮಾತನಾಡುತ್ತೇನೆ ಎಂದು – ಬಾಬಾ, ಇದು ಎಂತಹ ವಿಚಿತ್ರ ನಾಟಕವಾಗಿದೆ! ತಾವು ಹೇಗೆ ಬಂದು ಪತಿತರಿಂದ ಪಾವನರನ್ನಾಗಿ ಮಾಡುತ್ತೀರಿ! ಇಡೀ ಪ್ರಪಂಚವನ್ನು ಹೇಗೆ ಪರಿವರ್ತನೆ ಮಾಡುತ್ತೀರಿ! ಬಹಳ ಅದ್ಭುತವಾಗಿದೆ! ಹೇಗೆ ತಂದೆಗೆ ವಿಚಾರಗಳು ಬರುತ್ತವೆಯೋ ಹಾಗೆಯೇ ಮಕ್ಕಳಿಗೂ ಬರಬೇಕು – ಹೇಗೆ ಮನುಷ್ಯರ ಜೀವನದ ದೋಣಿಯನ್ನು ಪಾರು ಮಾಡುವುದು? ತಂದೆಯು ಹೇಳುತ್ತಾರೆ – ಹೇ ಪತಿತ-ಪಾವನ ಬನ್ನಿ ಎಂದು ನೀವು ಕೂಗುತ್ತಿರುತ್ತೀರಿ. ನಾನೀಗ ಬಂದಿದ್ದೇನೆ, ನೀವು ಪತಿತರಾಗಬೇಡಿ. ಪತಿತರಾಗಿ ಸಭೆಯಲ್ಲಿ ಬಂದು ಕುಳಿತುಕೊಳ್ಳಬೇಡಿ. ಹಾಗಿದ್ದರೆ ವಾಯುಮಂಡಲವನ್ನು ಅಶುದ್ಧ ಮಾಡಿಬಿಡುತ್ತೀರಿ. ತಂದೆಗಂತೂ ಅರ್ಥವಾಗುತ್ತದೆ, ದೆಹಲಿಯಲ್ಲಿ ಬಾಂಬೆಯಲ್ಲಿ ಹೀಗೆ ವಿಕಾರದಲ್ಲಿ ಹೋಗುವವರು ಬಂದು ಕುಳಿತು ಬಿಡುತ್ತಿದ್ದರು, ಅಸುರರು ಬಂದು ವಿಘ್ನ ಹಾಕಲು ಕುಳಿತುಕೊಳ್ಳುತ್ತಿದ್ದರೆಂದು ಗಾಯನವಿದೆ. ವಿಕಾರದಲ್ಲಿ ಹೋಗುವವರಿಗೆ ಅಸುರರೆಂದು ಹೇಳಲಾಗುತ್ತದೆ. ವಾಯುಮಂಡಲವನ್ನು ಹಾಳು ಮಾಡುತ್ತಾರೆ, ಅವರಿಗೆ ಬಹಳ ಕಠಿಣ ಶಿಕ್ಷೆಯಾಗುತ್ತದೆ. ತಂದೆಯು ಎಲ್ಲಾ ಮಾತುಗಳನ್ನು ತಿಳಿಸುತ್ತಾರೆ ಆದರೂ ಸಹ ತಮಗೆ ನಷ್ಟ ಮಾಡಿಕೊಳ್ಳದೆ ಇರುವುದೇ ಇಲ್ಲ. ಸುಳ್ಳನ್ನೂ ಹೇಳುತ್ತಾರೆ, ಇಲ್ಲವಾದರೆ ಕೂಡಲೇ ಬರೆದು ಬಿಡಬೇಕು – ಬಾಬಾ, ನನ್ನಿಂದ ಈ ತಪ್ಪಾಯಿತು ಕ್ಷಮಿಸಿ ಎಂದು ತಮ್ಮ ಪಾಪವನ್ನು ಬರೆಯಿರಿ, ಇಲ್ಲದಿದ್ದರೆ ಅದು ವೃದ್ಧಿ ಹೊಂದುತ್ತಾ ಇರುತ್ತದೆ ಮತ್ತು ರಸಾತಳಕ್ಕೆ ಹೊರಟು ಹೋಗುತ್ತದೆ. ಬಹಳಷ್ಟು ಕಡೆ ಬರುತ್ತಾರೆ, ಬಂದು ಇನ್ನೂ ಕಿವಿಗಳನ್ನು ಕತ್ತರಿಸಿಕೊಳ್ಳುತ್ತಾರೆ, ಇದೂ ಸಹ ಡ್ರಾಮಾದಲ್ಲಿ ಪಾತ್ರವಿದೆ. ಇಂತಹ ಅಸುರರು ಕಲ್ಪದ ಮೊದಲೂ ಇದ್ದರು, ಈಗಲೂ ಇದ್ದಾರೆ. ಅಮೃತವನ್ನು ಬಿಟ್ಟು ವಿಷವನ್ನು ಕುಡಿಯುತ್ತಾರೆ, ತಮಗೆ ಘಾತ ಮಾಡಿಕೊಳ್ಳುತ್ತಾರೆ ಮತ್ತು ಅನ್ಯರಿಗೂ ನಷ್ಟವನ್ನುಂಟು ಮಾಡುತ್ತಾರೆ, ವಾಯುಮಂಡಲವನ್ನು ಕೆಡಿಸಿ ಬಿಡುತ್ತಾರೆ. ಬ್ರಾಹ್ಮಿಣಿಯರೂ ಸಹ ಎಲ್ಲರೂ ಒಂದೇ ಸಮಾನರಾಗಿಲ್ಲ, ಮಹಾರಥಿಗಳು, ಕುದುರೆ ಸವಾರರು ಕಾಲಾಳುಗಳು ಎಲ್ಲರೂ ಇದ್ದಾರೆ.

ನೀವು ಮಕ್ಕಳಿಗೆ ಅಪಾರ ಖುಷಿಯಿರಬೇಕು – ಬಾಬಾ ಸಿಕ್ಕಿದರು ಅಂದಮೇಲೆ ಮತ್ತೇನು ಬೇಕು! ತಮ್ಮ ಮಕ್ಕಳನ್ನೂ ಸಹ ಸಂಭಾಲನೆ ಮಾಡಬೇಕಾಗಿದೆ, ಬಾಬಾ ಇವರೆಲ್ಲರೂ ತಮ್ಮ ಮಕ್ಕಳಾಗಿದ್ದಾರೆ, ನೀವೇ ಸಂಭಾಲನೆ ಮಾಡಿ ನಾವಂತೂ ನಿಮ್ಮವರಾಗಿ ಬಿಟ್ಟೆವು ಎಂದಲ್ಲ. ತಂದೆಯು ತಿಳಿಸುತ್ತಾರೆ – ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲ ಪುಷ್ಫ ಸಮಾನ ಪವಿತ್ರರಾಗಿರಿ, ಯಾವುದೇ ಪತಿತ ಕರ್ಮವನ್ನು ಮಾಡಬೇಡಿ. ಮೊದಲ ಮಾತು – ಕಾಮದ್ದಾಗಿದೆ. ದ್ರೌಪದಿಯೂ ಸಹ ಇದಕ್ಕಾಗಿಯೇ ಕರೆದಳು, ನನ್ನನ್ನು ಇವರು ಅಪಮಾನ ಮಾಡುತ್ತಾರೆ ಎಂದು. ಯಾವಾಗ ಕೇಳುವಂತಹ ತಂದೆಯು ಬಂದಿದ್ದರೋ ಆಗಲೇ ಕರೆದಳು. ತಂದೆಯು ಬರುವುದಕ್ಕೆ ಮೊದಲು ಯಾರೂ ಕರೆಯುವುದಿಲ್ಲ. ಯಾರನ್ನು ಕರೆಯುತ್ತಾರೆ? ತಂದೆಯು ಬಂದಿದ್ದಾರೆ ಆದ್ದರಿಂದಲೇ ಕರೆಯುತ್ತಾರೆ. ಪತಿತರಿಂದ ಪಾವನರಾಗಿ ಮತ್ತೆ ಎಲ್ಲಿ ಹೋಗುವರು? ಹಿಂತಿರುಗಿ ಹೋಗಬೇಕಾಗಿದೆ. ಅದಂತೂ ಇದೇ ಸಮಯವಾಗಿದೆ. ಎಲ್ಲರ ಸದ್ಗತಿದಾತ, ಮುಕ್ತಿದಾತನು ಒಬ್ಬರೇ ಆಗಿದ್ದಾರೆ. ಇಲ್ಲಂತೂ ದುಃಖವಿದೆ, ಸಾಧು-ಸಂತ ಮೊದಲಾದವರು ಯಾರೂ ಸಹ ಸುಖಿಯಾಗಿರಲು ಸಾಧ್ಯವಿಲ್ಲ. ಎಲ್ಲರಿಗೂ ಯಾವುದಾದರೊಂದು ದುಃಖ, ರೋಗ ಇತ್ಯಾದಿ ಇದ್ದೇ ಇರುತ್ತದೆ. ಕೆಲವರು ಗುರುಗಳು ಕುರುಡರು, ಕುಂಟರೂ ಇರುತ್ತಾರೆ ಅಂದಮೇಲೆ ಅವರು ಅವಶ್ಯವಾಗಿ ಅಂತಹ ಯಾವುದೋ ಕೆಲಸ ಮಾಡಿದ್ದಾರೆ. ಆದ್ದರಿಂದಲೇ ಕುರುಡರು ಕುಂಟರಾಗುತ್ತಾರೆ. ಸತ್ಯಯುಗದಲ್ಲಿ ಯಾರೂ ಕುರುಡ, ಕುಂಟರಿರುವುದಿಲ್ಲ, ಮನುಷ್ಯರಿಗೆ ಇದು ತಿಳಿದಿದೆಯೇ! ತಂದೆಯೇ ಬಂದು ತಿಳಿಸುತ್ತಾರೆ. ತಂದೆಯೇ ಜ್ಞಾನ ಸಾಗರ, ಪತಿತ-ಪಾವನನಾಗಿದ್ದಾರೆ. ಉಳಿದೆಲ್ಲವೂ ಭಕ್ತಿಯಾಗಿದೆ. ಭಕ್ತಿಮಾರ್ಗವೇ ಬೇರೆಯಾಗಿದೆ, ಅದು ಏಣಿಯನ್ನು ಇಳಿಯುವ ಮಾರ್ಗವಾಗಿದೆ. ಇಳಿಯುತ್ತಾ ಜೀವನ ಬಂಧನದಲ್ಲಿ ಬರಲು 84 ಜನ್ಮಗಳು ಹಿಡಿಸುತ್ತವೆ, ಜೀವನ್ಮುಕ್ತರಾಗಲು ಕೇವಲ ಒಂದು ಸೆಕೆಂಡ್ ಹಿಡಿಸುತ್ತದೆ. ಆದರೆ ತಂದೆಯ ಮತದಂತೆ ನಡೆದು ಅವರನ್ನು ನೆನಪು ಮಾಡಿದಾಗ ಮಾತ್ರ. ನಂಬರ್ವಾರಂತೂ ಇರುತ್ತಾರಲ್ಲವೆ. ಬಾಬಾ, ನಮಗೆ ಇಂತಹ ಶಿಕ್ಷಕಿಯರು ಸಿಕ್ಕಿದರೆ ಒಳ್ಳೆಯದು ಎಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ತಾನೂ ನಿರ್ಬಲರಾಗಿದ್ದಾರೆ, ಆದ್ದರಿಂದಲೇ ಇಂತಹವರನ್ನು 2-4 ತಿಂಗಳಿಗಾಗಿ ಕಳುಹಿಸಿ ಎಂದು ಹೇಳುತ್ತಾರೆ. ತಂದೆಯು ಹೇಳುತ್ತಾರೆ – ಇದೂ ಸಹ ತಪ್ಪಾಗಿದೆ, ಯಾವಾಗ ತಂದೆಯು ಕೇವಲ ನನ್ನೊಬ್ಬನನ್ನು ನೆನಪು ಮಾಡಿ ಮತ್ತು ಸ್ವದರ್ಶನ ಚಕ್ರವನ್ನು ತಿರುಗಿಸಿ, ಅನ್ಯರಿಗೂ ತಿಳಿಸಿಕೊಡಿ ಎಂದು ಸಹಜ ಮಾತನ್ನು ತಿಳಿಸುತ್ತಾರೆ ಅಂದಮೇಲೆ ನೀವು ಬ್ರಾಹ್ಮಣಿಯರನ್ನು ಏಕೆ ನೆನಪು ಮಾಡುತ್ತೀರಿ! ಇದರಲ್ಲಿ ಬ್ರಾಹ್ಮಣಿಯರು ಏನು ಮಾಡುತ್ತಾರೆ? ಇದಂತೂ ಸೆಕೆಂಡಿನ ಮಾತಾಗಿದೆ. ನೀವು ಉದ್ಯೋಗ-ವ್ಯವಹಾರಗಳಲ್ಲಿ ಇದನ್ನು ಮರೆತು ಹೋಗುತ್ತೀರಿ, ಆಗಲೂ ಸಹ ಬ್ರಾಹ್ಮಿಣಿಯು ಇದನ್ನೇ ಹೇಳುವರು – ಮನ್ಮಾನಭವ. ಕೆಲವರು ಮಂಧ ಬುದ್ಧಿಯವರು ತಿಳಿದುಕೊಳ್ಳುವುದೇ ಇಲ್ಲ. ಕೇವಲ ಒಳ್ಳೆಯ ಬ್ರಾಹ್ಮಿಣಿ ಬೇಕೆಂದು ಹೇಳುತ್ತಾರೆ. ನಿಮಗೆ ಜ್ಞಾನವಂತೂ ಸಿಕ್ಕಿದೆಯಲ್ಲವೆ ಅಂದಮೇಲೆ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ, ದೇಹದ ಅಭಿಮಾನವನ್ನು ಬಿಡಿ. ಇದು ನಮ್ಮ ಸೇವಾಕೇಂದ್ರವಾಗಿದೆ, ಇದು ಇವರ ಸೇವಾಕೇಂದ್ರವಾಗಿದೆ, ಈ ವಿದ್ಯಾರ್ಥಿಗಳು ಇಲ್ಲಿಗೇಕೆ ಹೋಗುತ್ತಾರೆ…. ಇದೆಲ್ಲವೂ ದೇಹಾಭಿಮಾನವಾಗಿದೆ. ಎಲ್ಲವೂ ಶಿವ ತಂದೆಯ ಸೇವಾಕೇಂದ್ರಗಳಾಗಿವೆ, ನಮ್ಮ ಸೇವಾಕೇಂದ್ರಗಳೇನು! ಇಂತಹವರು ನಮ್ಮ ಸೇವಾಕೇಂದ್ರಕ್ಕೆ ಏಕೆ ಬರುವುದಿಲ್ಲವೆಂದು ನಿಮಗೇಕೆ ಸಂಕಲ್ಪ ಬರುತ್ತದೆ! ಎಲ್ಲಿಯಾದರೂ ಹೋಗಲಿ. ತಂದೆಯು ಯಾವಾಗಲೂ ಹೇಳುತ್ತಾರೆ – ಯಾರೊಂದಿಗೂ ಬೇಡಬೇಡಿ, ಇದನ್ನಂತೂ ತಿಳಿದುಕೊಳ್ಳಬಹುದು – ಬೀಜ ಬಿತ್ತಲಿಲ್ಲವೆಂದರೆ ಸಿಗುವುದೇನು? ಭಕ್ತಿಮಾರ್ಗದಲ್ಲಿಯೂ ದಾನ-ಪುಣ್ಯ ಮಾಡಲಾಗುತ್ತದೆ, ನೀವೆಲ್ಲರೂ ಭಕ್ತಿಮಾರ್ಗದಲ್ಲಿ ಈಶ್ವರಾರ್ಥವಾಗಿ ಪರೋಕ್ಷವಾಗಿ ಮಾಡುತ್ತಿದ್ದಿರಿ, ಸನ್ಯಾಸಿಗಳಿಗೂ ಬಹಳ ಕೊಡುತ್ತಾರೆ. ವಾಸ್ತವದಲ್ಲಿ ಬಡವರಿಗೇ ದಾನ ಮಾಡಲಾಗುತ್ತದೆ, ಸಾಹುಕಾರರಿಗಲ್ಲ. ಇದರಲ್ಲಿ ಧಾನ್ಯಗಳ ದಾನವು ಎಲ್ಲದಕ್ಕಿಂತ ಒಳ್ಳೆಯದಾಗಿದೆ. ಅದನ್ನೂ ತಂದೆಯು ತಿಳಿಸುತ್ತಾರೆ, ದಾನ ಮಾಡಿದರೆ ಇನ್ನೊಂದು ಜನ್ಮದಲ್ಲಿ ಅದರ ಫಲವು ಸಿಗುತ್ತದೆ, ಈಶ್ವರನೇ ಎಲ್ಲರಿಗೆ ಫಲ ಕೊಡುತ್ತಾರೆ. ಸಾಧು-ಸಂತ ಮೊದಲಾದ ಯಾರೂ ಸಹ ಪ್ರತೀ ಫಲವನ್ನು ಕೊಡಲು ಸಾಧ್ಯವಿಲ್ಲ, ಕೊಡುವವರು ಒಬ್ಬರೇ ಆಗಿದ್ದಾರೆ. ಅವರು ಯಾರ ಮೂಲಕವಾದರೂ ಕೊಡಬಹುದು. ತಂದೆಯು ತಿಳಿಸುತ್ತಾರೆ – ನೀವು ಈಶ್ವರಾರ್ಥವಾಗಿ ಕೊಡುತ್ತಿದ್ದಿರಿ, ಆಗಲೂ ಸಹ (ಭಕ್ತಿ ಮಾರ್ಗದಲ್ಲಿ) ಇನ್ನೊಂದು ಜನ್ಮದಲ್ಲಿ ನಿಮಗೆ ಅದರ ಫಲವನ್ನು ಕೊಡಿಸುತ್ತಿದ್ದೆನು, ಈಗಂತೂ ನಾನು ಡೈರೆಕ್ಟ್ ಬಂದಿದ್ದೇನೆ. ಈಗ ನಿಮಗೆ 21 ಜನ್ಮಗಳಿಗಾಗಿ ಫಲ ಸಿಗುತ್ತದೆ, ಮೃತ್ಯು ಸನ್ಮುಖದಲ್ಲಿ ನಿಂತಿದೆ. ಭಕ್ತಿಮಾರ್ಗದಲ್ಲಿ ನಿಮಗೆ ಮೃತ್ಯು ಸನ್ಮುಖದಲ್ಲಿ ನಿಂತಿದೆ ಆದ್ದರಿಂದ ತಮ್ಮದೆಲ್ಲವನ್ನೂ ಸಫಲ ಮಾಡಿಕೊಳ್ಳಿ ಎಂದು ಹೇಳುತ್ತಿರಲಿಲ್ಲ. ಈಗ ತಂದೆಯು ತಿಳಿಸುತ್ತಾರೆ – ಯಾರು ಬೇಕಾದರೂ ಈ ಆತ್ಮಿಕ ಆಸ್ಪತ್ರೆಯನ್ನು ತೆರೆಯಿರಿ. ಮನೆ ಕಟ್ಟಿಸಿ ಅದರಲ್ಲಿ ಈ ಆಸ್ಪತ್ರೆಯನ್ನು ತೆರೆಯುವುದೇ? ಎಂದು ಕೆಲವರು ಕೇಳುತ್ತಾರೆ ಅದಕ್ಕೆ ತಂದೆಯು ತಿಳಿಸುತ್ತಾರೆ – ಇಂದು ಮನೆ ಕಟ್ಟಿಸಿ ನಾಳೆ ಶರೀರ ಬಿಟ್ಟರೆ ಇದೆಲ್ಲವೂ ಸಮಾಪ್ತಿಯಾಗುವುದು. ಶರೀರದ ಮೇಲೆ ಯಾವುದೇ ಭರವಸೆಯಿಲ್ಲ. ಈಗ ಏನಿದೆಯೋ ಅದರಲ್ಲಿಯೇ ಒಂದು ಕೋಣೆಯಲ್ಲಿ ಆತ್ಮಿಕ ಆಸ್ಪತ್ರೆ ಹಾಗೂ ಆತ್ಮಿಕ ಕಾಲೇಜನ್ನು ತೆರೆಯಿರಿ, ಅನೇಕರ ಕಲ್ಯಾಣ ಮಾಡುತ್ತೀರೆಂದರೆ ಬಹಳ ಶ್ರೇಷ್ಠ ಪದವಿಯನ್ನು ಪಡೆಯುವಿರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಶ್ರೀಮತದಂತೆ ತಮ್ಮನ್ನು ತಾವು ನೋಡಿಕೊಳ್ಳಿ – ಈ ವಿನಾಶ ಕಾಲದಲ್ಲಿ ಒಬ್ಬ ತಂದೆಯೊಂದಿಗೆ ನನಗೆ ಸತ್ಯ ಪ್ರೀತಿಯಿದೆಯೇ? ಮತ್ತೆಲ್ಲಾ ಸಂಗಗಳನ್ನು ಬಿಟ್ಟು ಒಬ್ಬರ ಸಂಗ ಮಾಡಿದ್ದೇನೆಯೇ? ಎಂದೂ ಯಾವುದೇ ವಿಕರ್ಮ ಮಾಡಿ ಅಸುರನಾಗುತ್ತಿಲ್ಲವೆ? ಹೀಗೆ ಪರಿಶೀಲನೆ ಮಾಡಿಕೊಂಡು ಸ್ವಯಂನ್ನು ಪರಿವರ್ತನೆ ಮಾಡಿಕೊಳ್ಳಬೇಕು.

2. ಈ ಶರೀರದ ಮೇಲೆ ಯಾವುದೇ ಭರವಸೆಯಿಲ್ಲ, ಆದ್ದರಿಂದ ತಮ್ಮದೆಲ್ಲವನ್ನೂ ಸಫಲ ಮಾಡಿಕೊಳ್ಳಬೇಕು. ತಮ್ಮ ಸ್ಥಿತಿಯನ್ನು ಏಕರಸ, ಅಚಲವನ್ನಾಗಿ ಮಾಡಿಕೊಳ್ಳಲು ಡ್ರಾಮಾದ ರಹಸ್ಯವನ್ನು ಬುದ್ಧಿಯಲ್ಲಿಟ್ಟುಕೊಂಡು ನಡೆಯಬೇಕಾಗಿದೆ.

ವರದಾನ:-

ಯಾರು ನಿಷ್ಕಾಮ ಸೇವಾಧಾರಿ ಆಗಿರುತ್ತಾರೆಯೋ, ಅವರಲ್ಲೆಂದಿಗೂ ಈ ಸಂಕಲ್ಪವು ಬರಲು ಸಾಧ್ಯವಿಲ್ಲ – ನಾನು ಇಷ್ಟೊಂದು ಮಾಡಿದೆನು, ಇದರಿಂದ ನನಗೆ ಮಾನ್ಯತೆ, ಸ್ಥಾನ ಅಥವಾ ಮಹಿಮೆಯು ಸಿಗಬೇಕು….. ಇದೂ ಸಹ ತೆಗೆದುಕೊಳ್ಳುವುದಾಯಿತು. ದಾತನ ಮಕ್ಕಳಲ್ಲಿ ತೆಗೆದುಕೊಳ್ಳುವ ಸಂಕಲ್ಪವನ್ನೂ ಮಾಡುತ್ತಾರೆಂದರೂ ಸಹ ದಾತನಾಗಲಿಲ್ಲ. ಈ ರೀತಿ ತೆಗೆದುಕೊಳ್ಳುವುದೂ ಸಹ ಕೊಡುವವರ ಮುಂದೆ ಶೋಭಿಸುವುದಿಲ್ಲ. ಈ ಸಂಕಲ್ಪವು ಯಾವಾಗ ಸಮಾಪ್ತಿಯಾಗುತ್ತದೆಯೋ ಆಗಲೇ ವಿಶ್ವ ಮಹಾರಾಜನ ಪದವಿಯು ಪ್ರಾಪ್ತಿಯಾಗುವುದು. ಇಂತಹ ನಿಷ್ಕಾಮ ಸೇವಾಧಾರಿ, ಬೇಹದ್ದಿನ ವೈರಾಗಿಗಳು ಆಗಿರುವವರೇ ವಿಶ್ವ ಕಲ್ಯಾಣಿ, ದಯಾಹೃದಯಿಗಳು ಆಗುತ್ತಾರೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top