31 October 2021 KANNADA Murli Today | Brahma Kumaris

Read and Listen today’s Gyan Murli in Kannada

October 30, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಸತ್ಯ ಹೃದಯದವರ ಮೇಲೆ ಪ್ರಭು ಪ್ರಸನ್ನವಾಗುವರು

♫ ಕೇಳು ಇಂದಿನ ಮುರ್ಲಿ (audio)➤

ಇಂದು ವಿಶ್ವದ ಸರ್ವ ಆತ್ಮರ ಉಪಕಾರಿ ಬಾಪ್ದಾದಾ ತನ್ನ ಶ್ರೇಷ್ಠ ಪರೋಪಕಾರಿ ಮಕ್ಕಳನ್ನು ನೋಡುತ್ತಿದ್ದಾರೆ. ವರ್ತಮಾನ ಸಮಯದಲ್ಲಿ ಅನೇಕ ಆತ್ಮರು ಉಪಕಾರಕ್ಕಾಗಿ ಇಚ್ಛುಕರಾಗಿದ್ದಾರೆ. ಸ್ವ-ಉಪಕಾರ ಮಾಡಿಕೊಳ್ಳುವ ಇಚ್ಛೆಯಿದೆ ಆದರೆ ಧೈರ್ಯ ಮತ್ತು ಶಕ್ತಿಯಿಲ್ಲ. ಇಂತಹ ನಿರ್ಬಲ ಆತ್ಮರಿಗೆ ಉಪಕಾರ ಮಾಡುವವರು ತಾವು ಪರೋಪಕಾರಿ ಮಕ್ಕಳು ನಿಮಿತ್ತರಾಗಿದ್ದೀರಿ. ತಾವು ಪರೋಪಕಾರಿ ಮಕ್ಕಳಿಗೆ ಆತ್ಮಗಳ ಕೂಗು ಕೇಳಿ ಬರುತ್ತದೆಯೇ ಅಥವಾ ಸ್ವ-ಉಪಕಾರದಲ್ಲಿಯೇ ವ್ಯಸ್ತರಾಗಿದ್ದೀರೋ? ವಿಶ್ವದ ರಾಜ್ಯಾಧಿಕಾರಿಗಳು ಅಥವಾ ಸ್ವ-ಉಪಕಾರಿ ಆಗುವುದಿಲ್ಲ, ಪರೋಪಕಾರಿ ಆತ್ಮನೇ ರಾಜ್ಯಾಧಿಕಾರಿಯಾಗಲು ಸಾಧ್ಯ. ಉಪಕಾರವು ಸತ್ಯ ಹೃದಯದಿಂದ ಮಾಡಲಾಗುತ್ತದೆ, ಜ್ಞಾನವನ್ನು ತಿಳಿಸುವುದು, ಇದು ಕೇವಲ ಬಾಯಿಂದಲೂ (ಮನಸ್ಸಿಲ್ಲದೆ) ಹೇಳಬಹುದಾಗಿದೆ. ಜ್ಞಾನವನ್ನು ತಿಳಿಸುವುದು, ಇದು ವಿಶಾಲ ಬುದ್ಧಿಯ ಮಾತಾಗಿದೆ ಹಾಗೂ ವರ್ಣನೆಯ ಅಭ್ಯಾಸದ ಮಾತಾಗಿದೆ ಆದ್ದರಿಂದ ಹೃದಯ ಮತ್ತು ಬುದ್ಧಿ ಎರಡರಲ್ಲಿ ಅಂತರವಿದೆ. ಯಾರಾದರೂ ಯಾರೊಂದಿಗಾದರೂ ಸ್ನೇಹವನ್ನು ಬಯಸುವುದಾದರೆ ಅವರು ಹೃದಯಪೂರ್ವಕ ಸ್ನೇಹವನ್ನು ಬಯಸುತ್ತಾರೆ. ಬಾಪ್ದಾದಾರವರ ಬಿರುದಾಗಿದೆ – ಹೃದಯ ಗೆಲ್ಲುವವರಾಗಿದ್ದಾರೆ, ಹೃದಯ ರಾಮನಾಗಿದ್ದಾರೆ. ಬುದ್ಧಿಯು ಸ್ಥೂಲವಾಗಿದೆ, ಹೃದಯವು ಸೂಕ್ಷ್ಮವಾಗಿದೆ. ಮಾತಿನಲ್ಲಿಯೂ ಸಹ ಸದಾ ಇದನ್ನೇ ಹೇಳುತ್ತೀರಿ, ಸತ್ಯ ಹೃದಯದಿಂದ ಹೇಳುತ್ತೇವೆ – ಸತ್ಯ ಹೃದಯದಿಂದ ತಂದೆಯನ್ನು ನೆನಪು ಮಾಡಿ, ಸತ್ಯ ಬುದ್ಧಿಯಿಂದ ನೆನಪು ಮಾಡಿ ಎಂದು ಹೇಳುವುದಿಲ್ಲ. ಸತ್ಯ ಹೃದಯದವರ ಮೇಲೆ ಪ್ರಭು ಪ್ರಸನ್ನರಾಗುವರು ಎಂದು ಹೇಳಲಾಗುತ್ತದೆ, ವಿಶಾಲ ಬುದ್ಧಿಯವರ ಮೇಲೆ ಪ್ರಸನ್ನರಾಗುವರು ಎಂದು ಹೇಳುವುದಿಲ್ಲ. ವಿಶಾಲ ಬುದ್ಧಿಯ ವಿಶೇಷತೆಯು ಅವಶ್ಯಕವಾಗಿದೆ. ಈ ವಿಶೇಷತೆಯಿಂದ ಜ್ಞಾನದ ಅಂಶಗಳನ್ನು ಚೆನ್ನಾಗಿ ಧಾರಣೆ ಮಾಡಿಕೊಳ್ಳಬಹುದು. ಆದರೆ ಹೃದಯದಿಂದ ನೆನಪು ಮಾಡುವವರು ಬಿಂದು ರೂಪರಾಗುತ್ತಾರೆ. ಬುದ್ಧಿಯಿಂದ ನೆನಪು ಮಾಡುವವರು ಕೇವಲ ಪಾಯಿಂಟ್ನ್ನು ರಿಪೀಟ್ ಮಾಡುತ್ತಾರೆ ಆದರೆ ಪಾಯಿಂಟ್ ರೂಪದಲ್ಲಿ ಹಿಂದುಳಿಯುತ್ತಾರೆ. ಕೆಲವೊಮ್ಮೆ ಸಹಜ, ಕೆಲವೊಮ್ಮೆ ಪರಿಶ್ರಮದಿಂದ ಬಿಂದು ರೂಪದಲ್ಲಿ ಸ್ಥಿತರಾಗುತ್ತಾರೆ ಆದರೆ ಸತ್ಯ ಹೃದಯದವರು ಸೆಕೆಂಡಿನಲ್ಲಿ ಬಿಂದುವಾಗಿ ಬಿಂದು ಸ್ವರೂಪ ತಂದೆಯನ್ನು ನೆನಪು ಮಾಡುತ್ತಾರೆ. ಸತ್ಯ ಹೃದಯದವರು ಸತ್ಯ ಸಾಹೇಬನನ್ನು ಖುಷಿ ಪಡಿಸುವ ಕಾರಣ ತಂದೆಯ ವಿಶೇಷ ಆಶೀರ್ವಾದಗಳ ಪ್ರಾಪ್ತಿಯ ಕಾರಣ ಸ್ಥೂಲ ರೂಪದಲ್ಲಿ ಭಲೆ ಬುದ್ಧಿಯು ಕೆಲವರ ಅಂತರದಲ್ಲಿ ಇಷ್ಟು ವಿಶಾಲವಾಗಿ ಇರದೇ ಇರಬಹುದು ಆದರೆ ಸತ್ಯತೆಯ ಶಕ್ತಿಯಿಂದ ಸಮಯ ಪ್ರಮಾಣ ಅವರ ಬುದ್ಧಿಯು ಯುಕ್ತಿ-ಯುಕ್ತ, ಯಥಾರ್ಥ ಕಾರ್ಯವನ್ನು ಸ್ವತಹ ಮಾಡುವುದು ಏಕೆಂದರೆ ಯಾವುದು ಯಥಾರ್ಥ ಕರ್ಮ, ಮಾತು ಮತ್ತು ಸಂಕಲ್ಪವಿದೆಯೋ ಅದು ಆಶೀರ್ವಾದಗಳ ಕಾರಣ ಡ್ರಾಮಾನುಸಾರ ಸಮಯ ಪ್ರಮಾಣ ಅದೇ ಪ್ರೇರಣೆಯು ಅವರ ಬುದ್ಧಿಯಲ್ಲಿ ಬರುವುದು ಏಕೆಂದರೆ ಬುದ್ಧಿವಂತರಿಗೂ ಬುದ್ಧಿವಂತನಾದ ತಂದೆಯನ್ನು ರಾಜಿ ಮಾಡಿಕೊಂಡಿರುತ್ತಾರೆ. ಯಾರು ಭಗವಂತನನ್ನೇ ರಾಜಿ ಮಾಡಿಕೊಂಡರೋ ಅವರು ಸ್ವತಹ ರಹಸ್ಯಯುಕ್ತ, ಯುಕ್ತಿ-ಯುಕ್ತರಾಗಿರುತ್ತಾರೆ.

ಅಂದಾಗ ಇದನ್ನು ಪರಿಶೀಲನೆ ಮಾಡಿಕೊಳ್ಳಿ – ನಾನು ವಿಶಾಲ ಬುದ್ಧಿಯ ಕಾರಣ ನೆನಪು ಮತ್ತು ಸೇವೆಯಲ್ಲಿ ಮುಂದುವರೆಯುತ್ತಿದ್ದೇನೆಯೇ ಅಥವಾ ಸತ್ಯ ಹೃದಯ ಮತ್ತು ಯಥಾರ್ಥ ಬುದ್ಧಿಯಿಂದ ಮುಂದುವರೆಯುತ್ತಿದ್ದೇನೆಯೇ? ಮೊದಲೂ ಸಹ ತಿಳಿಸಿದ್ದೆವು – ಬುದ್ಧಿಯಿಂದ ಸೇವೆ ಮಾಡುವವರ ಬಾಣವು ಅನ್ಯರ ಬುದ್ಧಿಯವರೆಗೆ ನಾಟುತ್ತದೆ. ಹೃದಯದಿಂದ ಸೇವೆ ಮಾಡುವವರ ಬಾಣವು ಹೃದಯಕ್ಕೆ ನಾಟುತ್ತದೆ. ಹೇಗೆ ಸ್ಥಾಪನೆಯ, ಸೇವೆಯ ಆದಿಯಲ್ಲಿ ನೋಡಿದಿರಿ, ಮೊದಲ ಸೇವೆಯ ಸಮೂಹದ ವಿಶೇಷತೆಯೇನಿತ್ತು? ಯಾವುದೇ ಭಾಷೆ ಅಥವಾ ಭಾಷಣದ ವಿಶೇಷತೆಯಿರಲಿಲ್ಲ. ಹೇಗೆ ಈಗಿನ ಕಾಲದಲ್ಲಿ ಬಹಳ ಚೆನ್ನಾಗಿ ಭಾಷಣ ಮಾಡುತ್ತೀರಿ, ಕಥೆಗಳು ಮತ್ತು ಕಾದಂಬರಿಗಳನ್ನೂ ಬಹಳ ಚೆನ್ನಾಗಿ ತಿಳಿಸುತ್ತೀರಿ ಆದರೆ ಆದಿಯಲ್ಲಿ ಇದ್ದವರಿಗೆ ಇಷ್ಟು ಬುದ್ಧಿಯಿರಲಿಲ್ಲ ಆದರೆ ಏನಿತ್ತು? ಸತ್ಯ ಹೃದಯದ ಧ್ವನಿಯಿತ್ತು. ಆದ್ದರಿಂದ ಹೃದಯದ ಕೂಗು ಅನೇಕರನ್ನು ಹೃದಯರಾಮನ ಮಕ್ಕಳನ್ನಾಗಿ ಮಾಡುವುದರಲ್ಲಿ ನಿಮಿತ್ತವಾಯಿತು. ಭಾಷೆಯು ಬೆರಕೆಯಾಗಿತ್ತು ಆದರೆ ನಯನಗಳ ಭಾಷೆಯು ಆತ್ಮೀಯವಾಗಿತ್ತು ಆದ್ದರಿಂದ ಭಲೆ ಭಾಷೆಯು ಹೇಗಿದ್ದರೂ ಸಹ ಮುಳ್ಳುಗಳಿಂದ ಗುಲಾಬಿಗಳಂತೂ ಆಗಿಯೇ ಬಿಟ್ಟರು. ಆ ಮೊದಲ ಗುಂಪಿನವರ ಸೇವೆಯ ಸಫಲತೆ ಮತ್ತು ವರ್ತಮಾನ ಸಮಯದ ವೃದ್ಧಿ ಎರಡನ್ನೂ ಪರಿಶೀಲನೆ ಮಾಡಿದಾಗ ಈಗ ಅಂತರವು ಕಂಡು ಬರುತ್ತದೆಯಲ್ಲವೆ. ಎರಡನೇ, ಮೂರನೇ ಗುಂಪಿನವರಲ್ಲಿಯೂ ಕೆಲಕೆಲವರು ಹೃದಯದವರಿದ್ದಾರೆ ಆದರೆ ಬಹಳ ಕಡಿಮೆ. ಆದಿಯ ಒಗಟು ಇಲ್ಲಿಯವರೆಗೂ ನಡೆಯುತ್ತಿದೆ, ಅದು ಯಾವ ಒಗಟು? ನಾನು ಯಾರು? ಈಗಲೂ ಸಹ ಬಾಪ್ದಾದಾ ಹೇಳುತ್ತಾರೆ – ತನ್ನೊಂದಿಗೆ ತಾನು ಕೇಳಿಕೊಳ್ಳಿ – ನಾನು ಯಾರು? ಈ ಒಗಟನ್ನು ಬಿಡಿಸುವುದು ಬರುತ್ತದೆಯಲ್ಲವೆ ಅಥವಾ ಅನ್ಯರು ತಿಳಿಸಿದಾಗ ಅದನ್ನು ಬಿಡಿಸಿತ್ತೀರೋ! ಅನ್ಯರು ತಿಳಿಸಿದಾಗಲೂ ಸಹ ಅವರ ಮಾತನ್ನು ಚಲಾಯಿಸುವ ಪ್ರಯತ್ನ ಪಡುತ್ತೀರಾ – ಹೀಗಲ್ಲ, ಹಾಗೆ ಎಂದು. ಆದ್ದರಿಂದ ತಮ್ಮನ್ನು ತಾವೇ ನೋಡಿಕೊಳ್ಳಿ.

ಕೆಲವು ಮಕ್ಕಳು ತಮ್ಮನ್ನು ತಾವು ಪರಿಶೀಲನೆ ಮಾಡಿಕೊಳ್ಳುತ್ತಾರೆ ಆದರೆ ನೋಡಿಕೊಳ್ಳುವ ದೃಷ್ಟಿಯು ಎರಡು ಪ್ರಕಾರದ್ದಾಗಿದೆ. ಅದರಲ್ಲಿ ಕೆಲವರು ಕೇವಲ ವಿಶಾಲ ಬುದ್ಧಿಯ ದೃಷ್ಟಿಯಿಂದ ಪರಿಶೀಲನೆ ಮಾಡಿಕೊಳ್ಳುತ್ತಾರೆ, ಅವರದು ಹುಡುಗಾಟಿಕೆಯ ಕನ್ನಡಕವಾಗಿರುತ್ತದೆ. ಪ್ರತೀ ಮಾತಿನಲ್ಲಿ ಇದೇ ಕಂಡು ಬರುತ್ತದೆ- ತ್ಯಾಗ ಮಾಡಿದೆವು, ಸೇವೆ ಮಾಡಿದೆವು, ಪರಿವರ್ತನೆ ಮಾಡಿಕೊಂಡೆವು, ಎಷ್ಟು ಮಾಡಿದೆವೋ ಅಷ್ಟೇ ಬಹಳವಾಗಿದೆ. ಇಂತಿಂತಹ ಆತ್ಮಗಳಿಗಿಂತ ನಾನು ಬಹಳ ಚೆನ್ನಾಗಿದ್ದೇನೆ. ಇಷ್ಟು ಮಾಡುವುದೇನೂ ಸಹಜವಲ್ಲ. ಅಲ್ಪಸ್ವಲ್ಪ ನಿರ್ಬಲತೆಗಳಂತೂ ಪ್ರಖ್ಯಾತ ಆದವರಲ್ಲಿಯೂ ಇರುತ್ತವೆ. ಆ ಲೆಕ್ಕದಿಂದ ನಾನಂತೂ ಸರಿಯಾಗಿದ್ದೇನೆ, ಇದು ಹುಡುಗಾಟಿಕೆಯ ಕನ್ನಡಕವಾಗಿದೆ. ಇನ್ನೊಂದು ಸ್ವ-ಉನ್ನತಿಯ ಯಥಾರ್ಥ ಕನ್ನಡಕವಾಗಿದೆ, ಅದು ಸತ್ಯ ಹೃದಯದವರದಾಗಿದೆ. ಅವರು ಏನನ್ನು ನೋಡುತ್ತಾರೆ? ಹೃದಯರಾಮ ತಂದೆಗೆ ಸದ ಯಾವುದು ಇಷ್ಟವೋ ಅದೇ ಸಂಕಲ್ಪ, ಮಾತು ಮತ್ತು ಕರ್ಮವನ್ನು ನಾವು ಮಾಡಬೇಕಾಗಿದೆ. ಯಥಾರ್ಥ ಕನ್ನಡಕವನ್ನು ಧರಿಸಿರುವವರು ಕೇವಲ ತಂದೆ ಮತ್ತು ತಮ್ಮನ್ನು ನೋಡಿಕೊಳ್ಳುತ್ತಾರೆ. ಎರಡನೆಯವರು, ಮೂರನೆಯವರು ಏನು ಮಾಡುತ್ತಾರೆಂದು ನೋಡುವುದಿಲ್ಲ. ನಾನೇ ಮೊದಲಾಗಬೇಕೆಂಬ ಗುಂಗಿನಲ್ಲಿ ಸದಾ ಇರುತ್ತಾರೆ. ಅನ್ಯರು ಬದಲಾದರೆ ನಾನು ಬದಲಾಗುವೆನು ಅಥವಾ ನಾನು 80% ಬದಲಾದರೆ ಅವರು 20% ಆದರೂ ಬದಲಾಗಲಿ ಎಂಬುದನ್ನೂ ಸಹ ಅವರು ನೋಡುವುದಿಲ್ಲ. ನಾನು ಬದಲಾಗಿ ಅನ್ಯರಿಗೂ ಸಹಜ ಮಾಡುವುದಕ್ಕಾಗಿ ನಾನು ಮಾದರಿಯಾಗಬೇಕೆಂದು ಅವರಿಗೆ ಸಂಕಲ್ಪವಿರುತ್ತದೆ. ಆದ್ದರಿಂದ ಗಾದೆಯಿದೆ – ‘ಮೊದಲು ಮಾಡುವವರೇ ಅರ್ಜುನರು’. ಅರ್ಜುನ ಅರ್ಥಾತ್ ಅಲೌಕಿಕ ಜನ. ಇದಕ್ಕೆ ಯಥಾರ್ಥ ಕನ್ನಡಕ ಹಾಗೂ ಯಥಾರ್ಥ ದೃಷ್ಟಿಯೆಂದು ಹೇಳಲಾಗುತ್ತದೆ. ಹಾಗೆ ನೋಡಿದಾಗಲೂ ಪ್ರಪಂಚದಲ್ಲಿ ಮಾನವನ ಜೀವನಕ್ಕಾಗಿ ಮುಖ್ಯವಾಗಿ ಎರಡು ಮಾತುಗಳಿವೆ – ಹೃದಯ ಮತ್ತು ಬುದ್ಧಿ. ಎರಡೂ ಸರಿಯಿರಬೇಕು. ಅದೇರೀತಿ ಬ್ರಾಹ್ಮಣ ಜೀವನದಲ್ಲಿ ವಿಶಾಲ ಬುದ್ಧಿಯೂ ಬೇಕು, ಸತ್ಯ ಹೃದಯವೂ ಬೇಕು. ಸತ್ಯ ಹೃದಯದವರಿಗೆ ಬುದ್ಧಿಯ ಲಿಫ್ಟ್ ಸಿಕ್ಕಿ ಬಿಡುತ್ತದೆ ಆದ್ದರಿಂದ ಸದಾ ಇದನ್ನು ಪರಿಶೀಲನೆ ಮಾಡಿಕೊಳ್ಳಿ – ಸತ್ಯ ಹೃದಯದಿಂದ ಸಾಹೇಬನನ್ನು ಖುಷಿ ಪಡಿಸಿದ್ದೇವೆಯೇ? ಕೇವಲ ತನ್ನ ಮನಸ್ಸು ಅಥವಾ ಕೇವಲ ಕೆಲವೊಂದು ಆತ್ಮಗಳನ್ನು ಮಾತ್ರವೇ ಖುಷಿ ಪಡಿಸಿಲ್ಲ ತಾನೆ. ಸತ್ಯ ಸಾಹೇಬನನ್ನು ಪ್ರಸನ್ನ ಮಾಡುವುದಕ್ಕೆ ಬಹಳ ಚಿಹ್ನೆಗಳಿವೆ, ಇದರ ಮೇಲೆ ಮನನ ಮಾಡಿ, ವಾರ್ತಾಲಾಪ ಮಾಡಿರಿ ಮತ್ತೆ ಬಾಪ್ದಾದಾರವರೂ ಸಹ ತಿಳಿಸುತ್ತೇವೆ. ಒಳ್ಳೆಯದು.

ಇಂದು ಟೀಚರ್ಸ್ ಕುಳಿತಿದ್ದಾರೆ, ಟೀಚರ್ಸ್ ಗುತ್ತಿಗೆದಾರರಾಗಿದ್ದಾರೆ. ಕಾಂಟ್ರಾಕ್ಟ್ ತೆಗೆದುಕೊಂಡಿದ್ದೀರಲ್ಲವೆ. ಸ್ವ-ಪರಿವರ್ತನೆಯಿಂದ ವಿಶ್ವ ಪರಿವರ್ತನೆ ಮಾಡಲೇಬೇಕಾಗಿದೆ. ಹೀಗೆ ಅತಿ ದೊಡ್ಡ ಕಾಂಟ್ರಾಕ್ಟ್ ತೆಗೆದುಕೊಂಡಿದ್ದೀರಲ್ಲವೆ. ಹೇಗೆ ಪ್ರಪಂಚದವರು ತಾನು ಸತ್ತರೆ ತನ್ನ ಪಾಲಿಗೆ ಜಗತ್ತೇ ಸತ್ತಂತೆ. ತಾನು ಸಾಯದಿದ್ದರೆ ಪ್ರಪಂಚವು ಸಾಯುವುದಿಲ್ಲವೆಂದು ಹೇಳುತ್ತಾರೆ. ಹಾಗೆಯೇ ಸ್ವ ಪರಿವರ್ತನೆಯೇ ವಿಶ್ವ ಪರಿವರ್ತನೆಯಾಗಿದೆ. ಸ್ವ ಪರಿವರ್ತನೆಯಿಲ್ಲದೆ ಯಾವುದೇ ಆತ್ಮನ ಪ್ರತಿ ಎಷ್ಟಾದರೂ ಪರಿಶ್ರಮ ಪಡಿ, ಅವರು ಪರಿವರ್ತನೆಯಾಗಲು ಸಾಧ್ಯವಿಲ್ಲ. ಈಗಿನ ಸಮಯದಲ್ಲಿ ಕೇವಲ ಕೇಳುವುದರಿಂದ ಬದಲಾಗುವುದಿಲ್ಲ ಆದರೆ ನೋಡುವುದರಿಂದ ಬದಲಾಗುತ್ತಾರೆ. ಮಧುಬನ ಭೂಮಿಯಲ್ಲಿ ಎಂತಹದ್ದೇ ಆತ್ಮವೂ ಏಕೆ ಪರಿವರ್ತನೆ ಆಗುತ್ತಾರೆ! ಹಾಗೆ ನೋಡಿದರೆ ನೀವು ಸೇವಾಕೇಂದ್ರದಲ್ಲಿಯೂ ತಿಳಿಸುತ್ತೀರಿ. ಆದರೆ ಇಲ್ಲಿ ಬಂದಾಗ ಸ್ವಯಂನ್ನು ನೋಡಿಕೊಳ್ಳುತ್ತಾರೆ, ಸ್ವಯಂನ್ನು ನೋಡಿಕೊಳ್ಳುವ ಕಾರಣ ಪರಿವರ್ತನೆ ಆಗಿ ಬಿಡುತ್ತಾರೆ. ಕೆಲವು ಬಂಧನದಲ್ಲಿರುವ ಮಾತೆಯರನ್ನೂ ಸಹ ಅವರ ಪತಿಯು ಅವರ ಜೀವನದಲ್ಲಿ ಪರಿವರ್ತನೆಯನ್ನು ನೋಡಿ ಬದಲಾಗಿ ಬಿಡುತ್ತಾರೆ. ಜ್ಞಾನವನ್ನು ತಿಳಿಸುವ ಪ್ರಯತ್ನ ಪಟ್ಟರೆ ಅವರು ಕೇಳುವುದಿಲ್ಲ ಆದರೆ ನೋಡುವುದರಿಂದ ಆ ಪ್ರಭಾವವು ಅವರನ್ನೂ ಸಹ ಪರಿವರ್ತನೆ ಮಾಡಿ ಬಿಡುತ್ತದೆ. ಆದ್ದರಿಂದಲೇ ಹೇಳಿದ್ದೆವು – ಈಗಿನ ಪ್ರಪಂಚವು ನೋಡಲು ಇಚ್ಛಿಸುತ್ತದೆ ಆದ್ದರಿಂದ ಟೀಚರ್ಸ್ನ ವಿಶೇಷ ಕರ್ತವ್ಯವು ಇದೇ ಆಗಿದೆ – ಮಾಡಿ ತೋರಿಸುವುದು ಅರ್ಥಾತ್ ಬದಲಾಗಿ ತೋರಿಸುವುದು. ತಿಳಿಯಿತೆ.

ಸದಾ ಸರ್ವ ಆತ್ಮರ ಪ್ರತಿ ಪರೋಪಕಾರಿ, ಸದಾ ಸತ್ಯ ಹೃದಯದಿಂದ ಸತ್ಯ ಸಾಹೇಬನನ್ನು ಖುಷಿ ಪಡಿಸುವವರು, ವಿಶಾಲ ಬುದ್ಧಿ ಮತ್ತು ಸತ್ಯ ಹೃದಯದ ಬ್ಯಾಲೆನ್ಸ್ ಇಟ್ಟುಕೊಳ್ಳುವವರು, ಸದಾ ಸ್ವಯಂನ್ನು ವಿಶ್ವ ಪರಿವರ್ತನೆಗೆ ನಿಮಿತ್ತನನ್ನಾಗಿ ಮಾಡಿಕೊಳ್ಳುವವರು ಸ್ವ-ಪರಿವರ್ತನೆ ಮಾಡಿಕೊಳ್ಳುವಂತಹ ಶ್ರೇಷ್ಠಾತ್ಮ, ಶ್ರೇಷ್ಠ ಸೇವಾಧಾರಿ ಆತ್ಮನೆಂದು ತಿಳಿದು ಮುಂದುವರೆಯುವವರು, ಇಂತಹ ನಾಲ್ಕಾರು ಕಡೆಯ ವಿಶೇಷ ಮಕ್ಕಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.

ದೆಹಲಿ ಗ್ರೂಪ್:

ಎಲ್ಲರ ಹೃದಯದಲ್ಲಿ ತಂದೆಯ ಸ್ನೇಹವು ಅಡಗಿದೆ. ಸ್ನೇಹವೇ ಇಲ್ಲಿಯವರೆಗೂ ಕರೆತಂದಿದೆ. ಹೃದಯದ ಸ್ನೇಹವು ಹೃದಯರಾಮನ…ವರೆಗೂ ಕರೆ ತಂದಿದೆ. ಹೃದಯದಲ್ಲಿ ತಂದೆಯಲ್ಲದೆ ಮತ್ತೇನೂ ಇರಲು ಸಾಧ್ಯವಿಲ್ಲ, ಯಾವಾಗ ತಂದೆಯವರೇ ತಮ್ಮ ಪ್ರಪಂಚವೆಂದಾಗ, ತಂದೆಯ ಹೃದಯದಲ್ಲಿರುವುದು ಎಂದರೆ ತಂದೆಯಲ್ಲಿಯೇ ಪ್ರಪಂಚವು ಅಡಗಿದೆ. ಆದ್ದರಿಂದ ಒಂದು ಮತ, ಒಂದು ಬಲ, ಒಂದು ಭರವಸೆಯಿದೆ. ಎಲ್ಲಿ ಒಂದಿದೆಯೋ (ಏಕತೆ) ಅಲ್ಲಿ ಪ್ರತಿಯೊಂದು ಕಾರ್ಯದಲ್ಲಿಯೂ ಸಫಲತೆಯಿದೆ. ಯಾವುದೇ ಪರಿಸ್ಥಿತಿಯನ್ನು ಪಾರು ಮಾಡುವುದು ಸಹಜವೆನಿಸುವುದೇ ಅಥವಾ ಕಷ್ಟವಾಗುವುದೇ? ಒಂದುವೇಳೆ ಅನ್ಯರನ್ನು ನೋಡಿದಿರಿ ಅಥವಾ ಅನ್ಯರನ್ನು ನೆನಪು ಮಾಡಿದಿರೆಂದರೆ ಎರಡರಲ್ಲಿ ಒಂದೂ ಸಹ ಸಿಗುವುದಿಲ್ಲ ಆದ್ದರಿಂದ ಕಷ್ಟವಾಗಿ ಬಿಡುತ್ತದೆ. ತಂದೆಯವರ ಆಜ್ಞೆಯಿದೆ – ‘ನನ್ನೊಬ್ಬನನ್ನೇ ನೆನಪು ಮಾಡಿರಿ’, ಒಂದುವೇಳೆ ಈ ಆಜ್ಞೆಯನ್ನು ಪಾಲಿಸುತ್ತೀರೆಂದರೆ, ಆಜ್ಞಾಕಾರಿ ಮಕ್ಕಳಿಗೆ ತಂದೆಯವರ ಆಶೀರ್ವಾದಗಳು ಸಿಗುತ್ತವೆ ಹಾಗೂ ಎಲ್ಲವೂ ಸಹಜವಾಗುತ್ತದೆ. ಒಂದುವೇಳೆ ಆಜ್ಞೆಯನ್ನು ಪಾಲಿಸದಿದ್ದರೆ ತಂದೆಯವರ ಸಹಯೋಗ ಅಥವಾ ಆಶೀರ್ವಾದಗಳು ಸಿಗುವುದಿಲ್ಲ. ಆದ್ದರಿಂದ ಕಷ್ಟವಾಗಿ ಬಿಡುತ್ತದೆ. ಹಾಗಾದರೆ ಸದಾಕಾಲ ಆಜ್ಞಾಕಾರಿ ಆಗಿದ್ದೀರಲ್ಲವೆ? ಲೌಕಿಕ ಸಂಬಂಧದಲ್ಲಿಯೂ ಸಹ ಆಜ್ಞಾಕಾರಿ ಮಕ್ಕಳ ಪ್ರತಿ ಎಷ್ಟೊಂದು ಸ್ನೇಹವಿರುತ್ತದೆ! ಅದಂತು ಅಲ್ಪಕಾಲದ ಸ್ನೇಹವಾಗಿದೆ ಮತ್ತು ಇದು ಅವಿನಾಶಿ ಸ್ನೇಹವಾಗಿದೆ, ಇದೊಂದು ಜನ್ಮದ ಆಶೀರ್ವಾದಗಳು ಅನೇಕ ಜನ್ಮಗಳವರೆಗೂ ಜೊತೆಯಿರುತ್ತದೆ ಅಂದಮೇಲೆ ಅವಿನಾಶಿ ಆಶೀರ್ವಾದಗಳಿಗೆ ಪಾತ್ರರಾಗಿ ಬಿಟ್ಟಿರಿ. ತಮ್ಮ ಈ ಜೀವನವು ಮಧುರ(ಪ್ರಿಯ)ವೆನಿಸುತ್ತದೆ ಅಲ್ಲವೆ! ಇದೆಷ್ಟು ಶ್ರೇಷ್ಠ ಹಾಗೂ ಎಷ್ಟೊಂದು ಪ್ರಿಯವಾದ ಜೀವನವಾಗಿದೆ! ಬ್ರಾಹ್ಮಣ ಜೀವನವಂತು ಪ್ರಿಯವಾದುದು, ಬ್ರಾಹ್ಮಣ ಜೀವನವಿಲದಿದ್ದರೆ ಪ್ರಿಯವೆನಿಸುವುದಿಲ್ಲ ಆದರೆ ಬೇಸರದ ಜೀವನವೆನಿಸುತ್ತದೆ. ಅಂದಾಗ ಇದು ಪ್ರಿಯವಾದ ಜೀವನವೇ ಅಥವಾ ಸುಸ್ತಾಗಿದ್ದೀರಾ? ಸಂಗಮವು ಎಲ್ಲಿಯವರೆಗೆ ನಡೆಯುತ್ತದೆಯೋ ಎಂದು ಯೋಚಿಸುತ್ತೀರಾ? ಶರೀರ ನಡೆಯುವುದಿಲ್ಲ, ಸೇವೆ ಮಾಡುವುದಿಲ್ಲ…… ಇದರಿಂದಂತು ಬೇಸರವಾಗುವುದಿಲ್ಲವೇ? ಸಂಗಮದ ಈ ಜೀವನವು ಸರ್ವ ಜನ್ಮಗಳಿಗಿಂತಲೂ ಶ್ರೇಷ್ಠವಾದುದು, ಇದು ಪ್ರಾಪ್ತಿಗಳ ಜೀವನವಾಗಿದೆ. ಆನಂತರವಂತು ಪ್ರಾಲಬ್ಧವನ್ನು ಅನುಭವಿಸುವ ಜೀವನವಾಗಿದೆ, ಕಡಿಮೆಯಾಗುವ ಜೀವನವಿದೆ, ಈಗ ಸಂಪನ್ನರಾಗುವ ಜೀವನವಾಗಿದೆ ಮತ್ತು ಈಗಲೇ 16 ಕಲಾ ಸಂಪನ್ನರೂ ಆಗುವಿರಿ. 16 ಕಲೆಗಳೆಂದು ಸಂಪೂರ್ಣರು! ಈ ಜೀವನವು ಬಹಳ ಪ್ರಿಯವಾದುದು ಎಂದು ಅನುಭವ ಆಗುತ್ತದೆ ಅಲ್ಲವೆ ಅಥವಾ ಕೆಲವೊಮ್ಮೆ ಜೀವನದಿಂದ ಬೇಸರವಾಗುತ್ತೀರಾ? ಬೇಸರವಾಗಿ ಈ ರೀತಿಯಾಗಿ ಯೋಚಿಸುವುದಿಲ್ಲವೇ – ಈಗಂತು ಹೊರಡೋಣ. ತಂದೆಯವರು ಒಂದುವೇಳೆ ಸೇವೆಗಾಗಿ ಕರೆದುಕೊಂಡು ಹೋಗುತ್ತಾರೆಂದರೆ ಬೇರೆ ಮಾತಾಗಿದೆ, ಆದರೆ ಬೇಸರವಾಗಿ ಹೋಗಬಾರದು. ಅಡ್ವಾನ್ಸ್ ಪಾರ್ಟಿಯಲ್ಲಿ ಸೇವೆಯ ಪಾತ್ರವಿದೆ ಮತ್ತು ಡ್ರಾಮಾನುಸಾರ ಹೋದರೆಂದರೆ ಬೇಸರವಾಗಿ ಹೋಗುವುದಿಲ್ಲ, ಹೆಮ್ಮೆಯಿಂದ ಹೋಗುವರು. ಸೇವಾರ್ಥವಾಗಿ ಹೋಗುತ್ತಿದ್ದಾರೆ ಅಂದಾಗ ಎಂದಿಗೂ ಮಕ್ಕಳಿಂದ ಅಥವಾ ತಮ್ಮಿಂದ ತಾವು ಬೇಸರವಾಗಬಾರದು. ಮಾತೆಯರು ಎಂದಿಗಾದರೂ ಮಕ್ಕಳಿಂದ ಬೇಸರಾಗುವುದಿಲ್ಲವೇ? ತಮೋಗುಣಿ ತತ್ವಗಳಿಂದಲೇ ಜನ್ಮವಾಗಿದೆಯೆಂದರೆ, ಅವರನೇದಾರೂ ಸತೋಪ್ರಧಾನತೆಯನ್ನು ತೋರಿಸುವರೇ! ಅವರೂ ಸಹ ಪರವಶರಾಗಿದ್ದಾರೆ. ತಾವೂ ಸಹ ತಂದೆಯವರ ಆಜ್ಞೆಗಳನ್ನು ಕೆಲಕೆಲವೊಮ್ಮೆ ಮರೆಯುತ್ತೀರಲ್ಲವೆ! ಹಾಗಾದರೆ ಯಾವಾಗ ತಾವು ಮರೆಯಲು ಸಾಧ್ಯವಿದೆಯೆಂದರೆ, ಮಕ್ಕಳು ತಪ್ಪು ಮಾಡಿದರೆಂದರೆ ಏನಾಯಿತು! ಯಾವಾಗ ಹೆಸರಿನಲ್ಲಿಯೇ ಮಕ್ಕಳೆಂದು ಹೇಳುತ್ತೀರೆಂದರೆ, ಮಕ್ಕಳೆಂದರೆ ಏನು? ಭಲೆ ದೊಡ್ಡವರೇ ಆಗಿರಬಹುದು ಆದರೆ ಆ ಸಮಯದಲ್ಲಿ ಅವರೂ ಸಹ ಮಕ್ಕಳಾಗಿ ಬಿಡುತ್ತಾರೆ ಅರ್ಥಾತ್ ಬುದ್ಧಿಹೀನರು ಆಗಿ ಬಿಡುತ್ತಾರೆ. ಆದ್ದರಿಂದ ಎಂದಿಗೂ ಸಹ ಅನ್ಯರ ಬೇಸರವನ್ನು ನೋಡುತ್ತಾ, ಸ್ವಯಂ ತಾವು ಬೇಸರವಾಗಬಾರದು. ಅವರೆಷ್ಟಾದರೂ ಬೇಸರ ಪಡಿಸಲಿ ಆದರೆ ತಾವೇಕೆ ತಮ್ಮ ಸ್ಥಾನದಿಂದ ಇಳಿಯುತ್ತೀರಿ! ಬಲಹೀನತೆ ತಮ್ಮದೇ ಅಥವಾ ಮಕ್ಕಳದೇ? ಅವರಂತು ಬಹದ್ದೂರರಾದರು, ಅದರಿಂದ ತಮ್ಮ ಸ್ಥಾನದಿಂದ ಇಳಿಸಿ ಬಿಟ್ಟರು ಮತ್ತು ಬೇಸರ ಪಡಿಸುತ್ತಾರೆ. ಅಂದಮೇಲೆ ಸ್ವಪ್ನದಲ್ಲಿಯೂ ಸಹ ಎಂದಿಗೂ ಬೇಸರವಾಗಬಾರದು ಅರ್ಥಾತ್ ಶ್ರೇಷ್ಠ ಸ್ಥಿತಿಯಿಂದ ದೂರವಾಗಬಾರದು. ತಮ್ಮ ಸ್ಥಿತಿಯ ಸ್ಥಾನದಲ್ಲಿ ಕುಳಿತುಕೊಳ್ಳಲು ಬರುವುದಿಲ್ಲವೇ! ಅಂದಾಗ ಈ ದಿನದಿಂದ ಬೇಸರವಾಗಬಾರದು. ಭಲೆ ರೋಗದಿಂದ ಅಥವಾ ಮಕ್ಕಳಿಂದ, ಅಥವಾ ತಮ್ಮದೇ ಸಂಸ್ಕಾರಗಳಿಂದ ಆಗಿರಬಹುದು ಅಥವಾ ಅನ್ಯರಿಂದಲೂ ಬೇಸರವಾಗಬಾರದು. ಅನ್ಯರಿಂದಲೂ ಬೇಸರವಾಗಿ ಬಿಡುತ್ತೀರಿ ಅಲ್ಲವೆ! ಕೆಲವರು ಹೇಳುತ್ತಾರೆ – ಬೇರೆಲ್ಲವೂ ಸರಿಯಿದೆ, ಇದೊಂದು ಹೀಗಿದೆ ಅದರಿಂದ ಬೇಸರವಾಗಿ ಬಿಡುತ್ತೇವೆ. ಹಾಗಾದರೆ ಬೇಸರ ಪಡಿಸುವವರು ಬಹುದ್ದೂರ್ ಆಗಬಾರದು, ತಾವು ಬಹದ್ದೂರ್ ಆಗಿರಿ. ಭಲೆ ಒಬ್ಬರಿರಲಿ ಅಥವಾ 10 ಮಂದಿಯಿರಲಿ ಆದರೆ ನಾನು ಮಾಸ್ಟರ್ ಸರ್ವಶಕ್ತಿವಂತ, ಬಲಹೀನನಲ್ಲ – ಇದೇ ವರದಾನವನ್ನು ಸದಾ ಸ್ಮೃತಿಯಲ್ಲಿ ಇಟ್ಟುಕೊಳ್ಳಿರಿ – “ನಾವು ಸದಾ ನಮ್ಮ ಶ್ರೇಷ್ಠ ಸ್ಥಿತಿಯಲ್ಲಿ ಇರುವವರು, ಬೇಸರವಾಗುವವರಲ್ಲ”. ಅನ್ಯರ ಬೇಸರವನ್ನು ಸಮಾಪ್ತಿ ಮಾಡುವವರಾಗಿದ್ದೇವೆ, ಸದಾ ಶ್ರೇಷ್ಠ ಸ್ಥಿತಿಯ ಸಿಂಹಾಸನಾಧಿಕಾರಿ ಆಗಿದ್ದೇವೆ. ಇತ್ತೀಚಿನ ದಿನಗಳಲ್ಲಿ ಕುರ್ಚಿಯಿದೆ (ಸ್ಥಾನದ), ತಮಗಂತು ಸಿಂಹಾಸನವಿದೆ. ಅವರು ಕುರ್ಚಿಯ ಹಿಂದೆ ಸಾಯುತ್ತಾರೆ, ತಮಗಂತು ಸಿಂಹಾಸನವೇ ಸಿಕ್ಕಿದೆ ಅಂದಮೇಲೆ ಅಕಾಲ ಸಿಂಹಾಸನಾಧಿಕಾರಿ ಶ್ರೇಷ್ಠ ಸ್ಥಿತಿಯಲ್ಲಿ ಇರುವವರು, ತಂದೆಯ ಹೃದಯ ಸಿಂಹಾಸನಾಧಿಕಾರಿ ಆತ್ಮನಾಗಿದ್ದೇನೆ – ಇದೇ ಸ್ಥಿತಿಯಲ್ಲಿ ಇರಬೇಕು. ಇದರಿಂದ ಸದಾ ಖುಷಿಯಾಗಿರಿ ಮತ್ತು ಖುಷಿಯನ್ನು ಹಂಚಬೇಕು. ಒಳ್ಳೆಯದು – ದೆಹಲಿಯು ಸೇವೆಯ ಆಧಾರವಾಗಿದೆ, ಆಧಾರವು ಕಚ್ಚಾ ಆಗಿದ್ದರೆ ಎಲ್ಲರೂ ಕಚ್ಚಾ ಆಗಿ ಬಿಡುತ್ತಾರೆ. ಆದ್ದರಿಂದ ಸದಾ ಪರಿಪಕ್ವವಾಗಿ ಇರಬೇಕು.

ವರಂಗಲ್ ಗ್ರೂಪ್:

ತಮ್ಮನ್ನು ಸದಾ ಡಬಲ್ ಲೈಟ್ ಎಂದು ಅನುಭವ ಮಾಡುವಿರಾ? ಯಾರು ಡಬಲ್ ಲೈಟ್ ಆಗಿದ್ದಾರೆಯೋ, ಆ ಆತ್ಮರಲ್ಲಿ ಮೈಟ್ ಅಂದರೆ ತಂದೆಯ ಶಕ್ತಿಗಳೆಲ್ಲವೂ ಜೊತೆಯಿರುತ್ತವೆ. ಅಂದಾಗ ಡಬಲ್ ಲೈಟ್ ಸಹ ಆಗಿದ್ದೀರಿ ಹಾಗೂ ಶಕ್ತಿಯೂ ಇವೆ. ಸಮಯದಲ್ಲಿ ಆ ಶಕ್ತಿಗಳನ್ನು ಉಪಯೋಗಿಸಬಲ್ಲಿರಾ ಅಥವಾ ಸಮಯದಲ್ಲಿ ಕಳೆದು ಹೋದ ನಂತರದಲ್ಲಿ ನೆನಪಿಗೆ ಬರುತ್ತದೆಯೇ? ಏಕೆಂದರೆ ತಮ್ಮ ಬಳಿ ಎಷ್ಟಾದರೂ ಶಕ್ತಿಯಿರಬಹುದು, ಅದೇನಾದರೂ ಸಮಯದಲ್ಲಿ ಉಪಯೋಗ ಮಾಡಲಿಲ್ಲವೆಂದರೆ ಏನು ಹೇಳುವುದು? ಯಾವ ಸಮಯದಲ್ಲಿ, ಯಾವ ಶಕ್ತಿಯ ಅವಶ್ಯಕತೆಯಿದೆಯೋ ಆ ಶಕ್ತಿಯನ್ನು ಅದೇ ಸಮಯದಲ್ಲಿ ಉಪಯೋಗಿಸಲು ಸಾಧ್ಯವಾಗಬೇಕು – ಇದರಲ್ಲಿಯೇ ಅಭ್ಯಾಸವಿರುವ ಅಗತ್ಯವಿದೆ. ಕೆಲ ಮಕ್ಕಳು ಹೇಳುತ್ತಾರೆ – ಮಾಯೆಯು ಬಂದು ಬಿಟ್ಟಿತು. ಏಕೆ ಬಂದಿತು? ಪರಿಶೀಲಿಸುವ ಶಕ್ತಿಯನ್ನು ಉಪಯೋಗಿಸಲಿಲ್ಲ. ಆದ್ದರಿಂದ ಬಂದಿತಲ್ಲವೆ! ಒಂದುವೇಳೆ ಮಾಯೆಯು ದೂರವಿರುವಾಗಲೇ ಪರಿಶೀಲಿಸಿದ್ದರೆ, ಅದನ್ನು ದೂರದಿಂದಲೇ ಓಡಿಸಿ ಬಿಡುತ್ತಿದ್ದಿರಲ್ಲವೆ! ಮಾಯೆಯು ಬಂದು ಬಿಟ್ಟಿತೆಂದರೆ, ಬರಲು ಅವಕಾಶ ಕೊಟ್ಟಿದ್ದಿರಿ ಆದ್ದರಿಂದ ಬಂದಿತು. ದೂರದಿಂದಲೇ ಓಡಿಸಿದ್ದರೆ ಬರುತ್ತಿರಲೇ ಇಲ್ಲ. ಮಾಯೆಯು ಒಂದುವೇಳೆ ಮತ್ತೆ-ಮತ್ತೆ ಬರುತ್ತಿದೆ, ಮತ್ತೆ ಯುದ್ಧ ಮಾಡಿ ಓಡಿಸುತ್ತೀರೆಂದರೆ ಯುದ್ಧದ ಸಂಸ್ಕಾರವಾಗುತ್ತದೆ. ಒಂದುವೇಳೆ ಬಹಳ ಕಾಲದ ಯುದ್ಧದ ಸಂಸ್ಕಾರವೇ ಇರುತ್ತದೆಯೆಂದರೆ ಚಂದ್ರವಂಶಿ ಆಗಬೇಕಾಗುವುದು. ಸೂರ್ಯವಂಶಿಯು ಬಹಳ ಕಾಲದ ವಿಜಯಿ ಮತ್ತು ಚಂದ್ರವಂಶಿ ಎಂದರೆ ಯುದ್ಧ ಮಾಡುತ್ತಾ-ಮಾಡುತ್ತಾ ಕೆಲವೊಮ್ಮೆ ವಿಜಯಿ, ಕೆಲವೊಮ್ಮೆ ಯುದ್ಧದಲ್ಲಿಯೇ ಪರಿಶ್ರಮ ಪಡುವವರು. ಹಾಗಾದರೆ ಎಲ್ಲರೂ ಸೂರ್ಯವಂಶಿ ಆಗುವಿರಲ್ಲವೆ! ಚಂದ್ರಮನಿಗೂ ಬೆಳಕನ್ನು ಕೊಡುವವನು ಸೂರ್ಯನಾಗಿದ್ದಾನೆ ಅಂದಮೇಲೆ ನಂಬರ್ವನ್ ಎಂದು ಸೂರ್ಯನಿಗೆ ಹೇಳುವರಲ್ಲವೆ! ಚಂದ್ರವಂಶಿಗಳಲ್ಲಿ ಎರಡು ಕಲೆ ಕಡಿಮೆಯಿದೆ, 16 ಕಲೆ ಅರ್ಥಾತ್ ಫುಲ್ ಪಾಸ್. ಕೆಲವೊಮ್ಮೆ ಮನಸ್ಸಿನಿಲ್ಲಿ, ವಾಣಿಯಲ್ಲಿ ಅಥವಾ ಸಂಬಂಧ-ಸಂಪರ್ಕದಲ್ಲಿ ಅಥವಾ ಸಂಸ್ಕಾರಗಳಲ್ಲಿಯೂ ಅನುತ್ತೀರ್ಣರು ಆಗುವವರಲ್ಲ, ಇವರಿಗೇ ಸೂರ್ಯವಂಶಿಗಳೆಂದು ಹೇಳಲಾಗುತ್ತದೆ. ಇಂತಹ ಸೂರ್ಯವಂಶಿಗಳು ಆಗಿದ್ದೀರಾ? ಒಳ್ಳೆಯದು – ಎಲ್ಲರೂ ತಮ್ಮ ಪುರುಷಾರ್ಥದಿಂದ ಸಂತುಷ್ಟವಾಗಿದ್ದೀರಾ? ಎಲ್ಲಾ ವಿಷಯಗಳಲ್ಲಿ ಫುಲ್ ಪಾಸ್ ಆಗುವುದಕ್ಕೆ ಹೇಳಲಾಗುತ್ತದೆ – ತನ್ನ ಪುರುಷಾರ್ಥದಿಂದ ಸಂತುಷ್ಟವಾಗಿರುವುದು. ಈ ವಿಧಿಯಿಂದ ತಮ್ಮನ್ನು ತಾವೇ ಪರಿಶೀಲನೆ ಮಾಡಿಕೊಳ್ಳಿರಿ ಹಾಗೂ ಇದನ್ನೇ ನೆನಪಿಟ್ಟುಕೊಳ್ಳಿರಿ – ನಾನು ಹಾರುವ ಕಲೆಯಲ್ಲಿ ಹೋಗುವಂತಹ ಹಾರುವ ಪಕ್ಷಿಯಾಗಿದ್ದೇನೆ. ಕೆಳಗೆ ಸಿಲುಕುವವನಲ್ಲ. ಒಳ್ಳೆಯದು.

ವರದಾನ:-

ಯಾವ ಮಕ್ಕಳು ಸಂಗಮಯುಗದಲ್ಲಿ ಸದಾಕಾಲಕ್ಕಾಗಿ ಅತೀಂದ್ರಿಯ ಸುಖದ ಆಸ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ ಅಂದರೆ ಯಾರಿಗೆ ತಂದೆಯ ವ್ಹಿಲ್ ಮೇಲೆ ಸಂಪೂರ್ಣ ಅಧಿಕಾರವಿರುತ್ತದೆಯೋ, ಅವರು ವಿಲ್ಪವರ್ (ಆತ್ಮ ವಿಶ್ವಾಸ) ಇರುವವರಾಗುತ್ತಾರೆ. ಅವರಲ್ಲಿ ಅಟೂಟ ಅಟಲ ಅತೀಂದ್ರಿಯ ಸುಖದ ಅನುಭೂತಿಯಾಗುವುದು. ಇಂತಹ ವಾರಸುಧಾರರು ಅರ್ಥಾತ್ ಸಂಪೂರ್ಣ ಆಸ್ತಿಯ ಅಧಿಕಾರಿ ಆಗಿರುವವರೇ ಭವಿಷ್ಯದಲ್ಲಿ ಅಟಲ-ಅಖಂಡ ಸ್ವರಾಜ್ಯದ ಅಧಿಕಾರವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top