31 May 2021 KANNADA Murli Today – Brahma Kumaris

30 May 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಈ ಪ್ರಪಂಚವು ಸ್ಮಶಾನವಾಗುವುದಿದೆ - ಆದ್ದರಿಂದ ಇದರೊಂದಿಗೆ ಮನಸ್ಸನ್ನಿಡಬೇಡಿ, ಪರಿಸ್ತಾನವನ್ನು ನೆನಪು ಮಾಡಿ”

ಪ್ರಶ್ನೆ:: -

ನೀವು ಬಡ ಮಕ್ಕಳಂತಹ ಅದೃಷ್ಟವಂತರು ಪ್ರಪಂಚದಲ್ಲಿ ಯಾರೂ ಇಲ್ಲ – ಏಕೆ?

ಉತ್ತರ:-

ಏಕೆಂದರೆ ನೀವು ಬಡ ಮಕ್ಕಳೇ ಡೈರೆಕ್ಟ್ ಆ ತಂದೆಯವರಾಗಿದ್ದೀರಿ, ಯಾರಿಂದ ಸದ್ಗತಿಯ ಆಸ್ತಿಯು ಸಿಗುತ್ತದೆ. ಬಡ ಮಕ್ಕಳೇ ಓದುತ್ತಾರೆ, ಸಾಹುಕಾರರು ಒಂದುವೇಳೆ ಅಲ್ಪಸ್ವಲ್ಪ ಓದಿದರೂ ಸಹ ಅವರಿಗೆ ತಂದೆಯ ನೆನಪು ನಿಲ್ಲುವುದು ಕಷ್ಟ. ನಿಮಗಂತೂ ತಂದೆಯ ವಿನಃ ಮತ್ತೇನೂ ನೆನಪಿಗೆ ಬರುವುದಿಲ್ಲ, ಆದ್ದರಿಂದ ನೀವು ಎಲ್ಲರಿಗಿಂತ ಅದೃಷ್ಟವಂತರಾಗಿದ್ದೀರಿ.

 

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಹೃದಯದ ಆಸರೆ ತುಂಡಾಗದಿರಲಿ………

ಓಂ ಶಾಂತಿ. ಮಕ್ಕಳ ಪ್ರತಿ ತಂದೆಯು ತಿಳಿಸುತ್ತಿದ್ದಾರೆ ಮತ್ತು ಮಕ್ಕಳು ತಿಳಿದುಕೊಳ್ಳುತ್ತಿದ್ದೀರಿ – ಅವಶ್ಯವಾಗಿ ಈ ಪ್ರಪಂಚವು ಈಗ ಸ್ಮಶಾನವಾಗುವುದಿದೆ. ಮೊದಲು ಇದು ಪರಿಸ್ತಾನವಾಗಿತ್ತು, ಈಗ ಹಳೆಯದಾಗಿ ಬಿಟ್ಟಿದೆ, ಆದ್ದರಿಂದ ಇದಕ್ಕೆ ಸ್ಮಶಾನವೆಂದು ಹೇಳಲಾಗುತ್ತದೆ. ಎಲ್ಲವೂ ಸ್ಮಶಾನದಲ್ಲಿ ಹೋಗಲಿದೆ. ಹಳೆಯ ವಸ್ತುವು ಸ್ಮಶಾನಕ್ಕೆ ಯೋಗ್ಯವಾಗಿರುತ್ತದೆ ಅರ್ಥಾತ್ ಮಣ್ಣಿನಲ್ಲಿ ಸೇರಿ ಹೋಗುತ್ತದೆ, ಇದನ್ನೂ ಸಹ ಕೇವಲ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ, ಪ್ರಪಂಚದವರು ತಿಳಿದುಕೊಂಡಿಲ್ಲ. ಕೆಲವರು ವಿದೇಶಿಯರಿಗೆ ಇದು ಅರ್ಥವಾಗುತ್ತಿದೆ – ಇದೆಲ್ಲವೂ ಸ್ಮಶಾನವಾಗಲಿರುವ ಸಮಯವು ಕಂಡು ಬರುತ್ತಿದೆ ಎಂದು. ನೀವು ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ – ಪರಿಸ್ತಾನವನ್ನು ಸ್ಥಾಪನೆ ಮಾಡುವ ನಮ್ಮ ತಂದೆಯು ಪುನಃ ಬಂದಿದ್ದಾರೆ. ಮಕ್ಕಳು ಇದನ್ನೂ ಸಹ ತಿಳಿದುಕೊಂಡಿದ್ದೀರಿ – ಒಂದುವೇಳೆ ಈ ಸ್ಮಶಾನದೊಂದಿಗೆ ಮನಸ್ಸನ್ನು ಇಟ್ಟಿದ್ದೇ ಆದರೆ ನಷ್ಟವುಂಟಾಗುವುದು. ನೀವೀಗ ಬೇಹದ್ದಿನ ತಂದೆಯಿಂದ ಕಲ್ಪದ ಹಿಂದಿನ ತರಹ ಬೇಹದ್ದಿನ ಸುಖದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ. ಇದು ನೀವು ಮಕ್ಕಳ ಬುದ್ಧಿಯಲ್ಲಿ ಪ್ರತೀ ಹೆಜ್ಜೆಯಲ್ಲಿ ಸ್ಮೃತಿಯಿರಬೇಕು. ಇದೇ ಮನ್ಮನಾಭವ ಆಗಿದೆ. ತಂದೆಯ ನೆನಪಿನಲ್ಲಿ ಇರುವುದರಿಂದಲೇ ಸ್ವರ್ಗವಾಸಿಗಳಾಗುತ್ತೀರಿ. ಭಾರತವೇ ಪರಿಸ್ತಾನವಾಗಿತ್ತು, ಮತ್ತ್ಯಾವ ಖಂಡವೂ ಆಗುವುದಿಲ್ಲ. ಇದು ಮಾಯಾ ರಾವಣನ ಶೋ ಆಗಿದೆ. ಇದು ಇನ್ನು ಸ್ವಲ್ಪ ಸಮಯವೇ ನಡೆಯಲಿದೆ. ಇದೆಲ್ಲವೂ ಸುಳ್ಳು ಶೋ ಆಗಿದೆ. ಸುಳ್ಳು ಕಾಯ, ಸುಳ್ಳು ಮಾಯೆಯಲ್ಲವೆ. ಇದು ಅಂತಿಮದ ಆಡಂಬರವಾಗಿದೆ. ಇದನ್ನು ನೋಡಿ ಮನುಷ್ಯರು ಸ್ವರ್ಗವಂತೂ ಈಗ ಇದೆ, ಮೊದಲು ನರಕವಾಗಿತ್ತು ಎಂದು ತಿಳಿದುಕೊಳ್ಳುತ್ತಾರೆ. ದೊಡ್ಡ-ದೊಡ್ಡ ಕಟ್ಟಡಗಳನ್ನು ಕಟ್ಟಿಸುತ್ತಿರುತ್ತಾರೆ, ಇದು 100 ವರ್ಷಗಳ ಶೋ ಆಗಿದೆ. ವಿದ್ಯುತ್, ಟೆಲಿಫೋನ್, ವಿಮಾನ ಇವೆಲ್ಲವೂ 100 ವರ್ಷಗಳಿಂದ ಈಚೆಗೆ ಹೊರ ಬಂದಿದೆ, ಎಷ್ಟೊಂದು ಶೋ ಇದೆ ಆದ್ದರಿಂದ ಸ್ವರ್ಗವಂತೂ ಈಗಲೇ ಇದೆ ಎಂದು ಅವರು ತಿಳಿದುಕೊಳ್ಳುತ್ತಾರೆ. ಹಳೆಯ ದೆಹಲಿಯು ಹೇಗಿತ್ತು? ಈಗ ನವ ದೆಹಲಿಯು ಎಷ್ಟು ಚೆನ್ನಾಗಿ ತಯಾರಾಗಿದೆ! ನವ ದೆಹಲಿಯೆಂದೇ ಹೆಸರನ್ನಿಟ್ಟಿದ್ದಾರೆ. ಹೊಸ ಪ್ರಪಂಚ ರಾಮ ರಾಜ್ಯವು ಸ್ಥಾಪನೆಯಾಗಲಿ, ಪರಿಸ್ತಾನವಾಗಲಿ ಎಂದು ಬಾಪೂಜಿಯೂ ಸಹ ಹೇಳುತ್ತಿದ್ದರು. ಇದಂತೂ ತಾತ್ಕಾಲಿಕ ಶೋ ಆಗಿದೆ. ಎಷ್ಟು ದೊಡ್ಡ-ದೊಡ್ಡ ಮನೆಗಳು, ಕಾರಂಜಿ ಮೊದಲಾದುವುಗಳನ್ನು ಕಟ್ಟಿಸುತ್ತಾರೆ. ಇದಕ್ಕೆ ಆರ್ಟಿಫಿಷಿಯಲ್ ಸ್ವರ್ಗವೆಂದು ಹೇಳಲಾಗುತ್ತದೆ, ಇದು ಅಲ್ಪಕಾಲಕ್ಕಾಗಿ. ನೀವು ತಿಳಿದುಕೊಂಡಿದ್ದೀರಿ – ಇದರ ಹೆಸರು ಸ್ವರ್ಗವೇನಲ್ಲ, ಇದು ನರಕವಾಗಿದೆ. ನರಕದ್ದು ಒಂದು ಶೋ ಆಗಿದೆ, ಇದು ಅಲ್ಪಕಾಲದ ಶೋ. ಈಗ ಹೋಯಿತೆಂದರೆ ಹೋಯಿತು.

ಈಗ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ – ಮೊದಲನೆಯದಾಗಿ ಶಾಂತಿಧಾಮವನ್ನು ನೆನಪು ಮಾಡಿ. ಎಲ್ಲಾ ಮನುಷ್ಯ ಮಾತ್ರರೂ ಶಾಂತಿಯನ್ನೇ ಹುಡುಕುತ್ತಾ ಇರುತ್ತಾರೆ, ಎಲ್ಲಿಂದ ಶಾಂತಿ ಸಿಗುವುದು? ಪ್ರಪಂಚದಲ್ಲಿ ಹೇಗೆ ಶಾಂತಿಯು ಸ್ಥಾಪನೆಯಾಗುವುದು ಎಂಬ ಪ್ರಶ್ನೆಯಂತೂ ಇಡೀ ಪ್ರಪಂಚಕ್ಕೆ ಇದೆ. ವಾಸ್ತವದಲ್ಲಿ ನಾವೆಲ್ಲರೂ ಶಾಂತಿಧಾಮದ ನಿವಾಸಿಗಳು. ನಾವಾತ್ಮರು ಶಾಂತಿಧಾಮದಲ್ಲಿ ಇರುತ್ತೇವೆ ನಂತರ ಪಾತ್ರವನ್ನು ಅಭಿನಯಿಸಲು ಇಲ್ಲಿಗೆ ಬರುತ್ತೇವೆ ಎಂದು ಮನುಷ್ಯರಿಗೆ ತಿಳಿದೇ ಇಲ್ಲ. ಅದೂ ನೀವು ಮಕ್ಕಳಿಗೇ ತಿಳಿದಿದೆ. ಶಾಂತಿಧಾಮದ ಮೂಲಕ ಸುಖಧಾಮದಲ್ಲಿ ಹೋಗಲು ನೀವು ಪುರುಷಾರ್ಥ ಮಾಡುತ್ತಿದ್ದೀರಿ. ಪ್ರತಿಯೊಬ್ಬರ ಬುದ್ಧಿಯಲ್ಲಿದೆ – ನಾವಾತ್ಮರು ಈಗ ನಮ್ಮ ಮನೆ ಶಾಂತಿಧಾಮಕ್ಕೆ ಹೋಗುತ್ತೇವೆ. ಇಲ್ಲಂತೂ ಶಾಂತಿಯ ಮಾತಿರಲು ಸಾಧ್ಯವಿಲ್ಲ. ಇದು ದುಃಖಧಾಮವಾಗಿದೆ. ಸತ್ಯಯುಗವು ಪಾವನ ಪ್ರಪಂಚ, ಕಲಿಯುಗವು ಪತಿತ ಪ್ರಪಂಚವಾಗಿದೆ. ಈ ಮಾತುಗಳ ತಿಳುವಳಿಕೆಯು ಈಗ ನೀವು ಮಕ್ಕಳಿಗೆ ಬಂದಿದೆ. ಪ್ರಪಂಚದವರು ಏನನ್ನೂ ತಿಳಿದುಕೊಂಡಿಲ್ಲ. ಬೇಹದ್ದಿನ ತಂದೆಯು ನಮಗೆ ಸೃಷ್ಟಿಚಕ್ರದ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ ಮತ್ತೆ ಧರ್ಮ ಸ್ಥಾಪಕರು ಬಂದು ಹೇಗೆ ಧರ್ಮ ಸ್ಥಾಪನೆ ಮಾಡುತ್ತಾರೆ ಎಂಬುದು ನಿಮ್ಮ ಬುದ್ಧಿಯಲ್ಲಿ ಬಂದಿದೆ. ಈಗ ಸೃಷ್ಟಿಯಲ್ಲಿ ಎಷ್ಟೊಂದು ಜನಸಂಖ್ಯೆಯಿದೆ, ಭಾರತದಲ್ಲಿಯೂ ಬಹಳಷ್ಟಿದೆ. ಭಾರತವು ಸ್ವರ್ಗವಾಗಿದ್ದಾಗ ಬಹಳ ಸಾಹುಕಾರರಿದ್ದರು, ಮತ್ತ್ಯಾವುದೇ ಧರ್ಮವಿರಲಿಲ್ಲ. ನೀವು ಮಕ್ಕಳನ್ನು ಪ್ರತಿನಿತ್ಯವೂ ರಿಫ್ರೆಷ್ ಮಾಡಲಾಗುತ್ತದೆ, ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ. ಭಕ್ತಿಮಾರ್ಗದಲ್ಲಿಯೂ ಇದು ನಡೆದು ಬರುತ್ತದೆ. ಯಾವಾಗಲೂ ಬೆರಳು ಮೇಲೆ ಮಾಡಿ ತೋರಿಸುತ್ತಾರೆ – ಪರಮಾತ್ಮನನ್ನು ನೆನಪು ಮಾಡಿ, ಪರಮಾತ್ಮ ಅಥವಾ ಅಲ್ಲಾ ಪರಮಧಾಮದಲ್ಲಿದ್ದಾರೆ. ಆದರೆ ಕೇವಲ ಹಾಗೆಯೇ ನೆನಪು ಮಾಡುವುದರಿಂದ ಏನೂ ಆಗುವುದಿಲ್ಲ. ನೆನಪಿನಿಂದ ಲಾಭವೇನು, ಅವರ ಜೊತೆ ನಮ್ಮ ಸಂಬಂಧವೇನು ಎಂಬುದೂ ಅವರಿಗೆ ತಿಳಿದಿಲ್ಲ. ದುಃಖದ ಸಮಯದಲ್ಲಿ ಹೇ ರಾಮ…. ಎಂದು ಕರೆಯುತ್ತಾರೆ. ಆತ್ಮವು ನೆನಪು ಮಾಡುತ್ತದೆ ಆದರೆ ಯಾವುದಕ್ಕೆ ಸುಖ-ಶಾಂತಿಯೆಂದು ಹೇಳಲಾಗುತ್ತದೆ ಎಂಬುದನ್ನು ತಿಳಿದುಕೊಂಡಿಲ್ಲ. ನಿಮ್ಮ ಬುದ್ಧಿಯಲ್ಲಿ ಬರುತ್ತದೆ – ನಾವೆಲ್ಲರೂ ಒಬ್ಬ ತಂದೆಯ ಸಂತಾನರಾಗಿದ್ದೇವೆ ಅಂದಮೇಲೆ ಏಕೆ ದುಃಖವಾಗಬೇಕು? ಬೇಹದ್ದಿನ ತಂದೆಯಿಂದ ಸದಾ ಸುಖದ ಆಸ್ತಿಯು ಸಿಗಬೇಕು. ಇದೂ ಸಹ ಚಿತ್ರದಲ್ಲಿ ಸ್ಪಷ್ಟವಾಗಿದೆ. ಭಗವಂತನು ಸ್ವರ್ಗದ ಸ್ಥಾಪನೆ ಮಾಡುವವರಾಗಿದ್ದಾರೆ, ಅವರು ಭಾರತದಲ್ಲಿಯೇ ಬರುತ್ತಾರೆ ಆದರೆ ಇದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ಅವಶ್ಯವಾಗಿ ಸಂಗಮದಲ್ಲಿಯೇ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುವುದು. ಸತ್ಯಯುಗದಲ್ಲಿ ಹೇಗಾಗುವುದು ಆದರೆ ಈ ಮಾತುಗಳನ್ನು ಅನ್ಯ ಧರ್ಮದವರು ತಿಳಿದುಕೊಳ್ಳುವುದಿಲ್ಲ. ತಂದೆಯೇ ಜ್ಞಾನಪೂರ್ಣನಾಗಿದ್ದಾರೆ ಅವರು ಆದಿ ಸನಾತನ ದೇವಿ-ದೇವತಾ ಧರ್ಮವು ಹೇಗೆ ಸ್ಥಾಪನೆಯಾಯಿತು ಎಂಬುದನ್ನು ತಿಳಿಸುತ್ತಾರೆ. ಸತ್ಯಯುಗದ ಆಯಸ್ಸನ್ನು ಲಕ್ಷಾಂತರ ವರ್ಷಗಳು ಎಂದು ಹೇಳಿರುವುದರಿಂದ ಬಹಳ ದೂರ ತೆಗೆದುಕೊಂಡು ಹೋಗುತ್ತಾರೆ. ನೀವು ಮಕ್ಕಳು ಚಿತ್ರದಲ್ಲಿ ತಿಳಿಸಬೇಕಾಗಿದೆ – ಭಾರತದಲ್ಲಿ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಇವರು ಹೇಗೆ ಯಾವಾಗ ಈ ರಾಜ್ಯವನ್ನು ಪಡೆದರು ಎಂಬುದನ್ನು ತಿಳಿದುಕೊಂಡಿಲ್ಲ. ಕೇವಲ ಇವರು ಸತ್ಯಯುಗದ ಮಾಲೀಕರಾಗಿದ್ದರು ಎಂದು ಹೇಳುತ್ತಾರೆ. ಅವರ ಮುಂದೆ ಹೋಗಿ ಬೇಡುತ್ತಾರೆ ಆಗ ಅಲ್ಪಕಾಲಕ್ಕಾಗಿ ಏನಾದರೂ ಸಿಗುತ್ತದೆ. ಯಾರಾದರೂ ದಾನ-ಪುಣ್ಯ ಮಾಡಿದರೆ ಅಲ್ಪಕಾಲಕ್ಕಾಗಿ ಅದರ ಫಲವು ಸಿಗುತ್ತದೆ. ಸಾಹುಕಾರ ಮುಖ್ಯಸ್ಥರಿಗೆ ಎಷ್ಟು ಖುಷಿಯಿರುತ್ತದೆಯೋ ಅಷ್ಟು ಬಡ ಪಂಚಾಯಿತಿಯ ಮುಖ್ಯಸ್ಥರಿಗೂ ಇರುತ್ತದೆ. ಬಡವರೂ ಸಹ ತಮ್ಮನ್ನು ಸುಖಿಯೆಂದು ತಿಳಿದುಕೊಳ್ಳುತ್ತಾರೆ. ಬಾಂಬೆಯಲ್ಲಿ ನೋಡಿ, ಬಡವರು ಎಂತೆಂತಹ ಸ್ಥಳಗಳಲ್ಲಿ ಇರುತ್ತಾರೆ! ನೀವು ಮಕ್ಕಳು ಈಗ ತಿಳಿದುಕೊಂಡಿದ್ದೀರಿ – ಭಲೆ ಕೋಟ್ಯಾಧೀಶ್ವರರಿರಬಹುದು ಆದರೆ ಎಷ್ಟೊಂದು ದುಃಖಿಯಾಗಿದ್ದಾರೆ! ನೀವು ಹೇಳುತ್ತೀರಿ – ನಮ್ಮಂತಹ ಅದೃಷ್ಟವಂತರು ಮತ್ತ್ಯಾರೂ ಇಲ್ಲ, ನಾವು ಡೈರೆಕ್ಟ್ ತಂದೆಯ ಮಕ್ಕಳಾಗಿದ್ದೇವೆ ಯಾರಿಂದ ಸದ್ಗತಿಯ ಆಸ್ತಿಯು ಸಿಗುತ್ತದೆ. ದೊಡ್ಡ-ದೊಡ್ಡ ವ್ಯಕ್ತಿಗಳು ಎಂದೂ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಯಾರು ಬಡವರಿದ್ದಾರೆಯೋ ಅವರೇ ಸಾಹುಕಾರರಾಗಿ ಬಿಡುತ್ತಾರೆ. ವಾಸ್ತವದಲ್ಲಿ ನೀವೇ ಓದಿ ವಿದ್ಯಾವಂತರಾಗುತ್ತೀರಿ, ಅವರು ಅವಿದ್ಯಾವಂತರಾಗುತ್ತಾರೆ. ಭಲೆ ಅಲ್ಪ ಸ್ವಲ್ಪ ಓದಿದರೂ ಸಹ ಅವರಿಗೆ ತಂದೆಯ ನೆನಪಿನಲ್ಲಿರಲು ಸಾಧ್ಯವಿಲ್ಲ. ಅಂತಿಮದಲ್ಲಿ ನಿಮಗೆ ತಂದೆಯ ವಿನಃ ಮತ್ತೇನೂ ನೆನಪಿರಬಾರದು ಏಕೆಂದರೆ ನಿಮಗೆ ತಿಳಿದಿದೆ – ಇದೆಲ್ಲವೂ ಸ್ಮಶಾನವಾಗಲಿದೆ. ಬುದ್ಧಿಯಲ್ಲಿರಲಿ – ನಾವು ಯಾವ ಉದ್ಯೋಗ ವ್ಯವಹಾರಗಳನ್ನು ಮಾಡುತ್ತೇವೆಯೋ ಇವು ಸ್ವಲ್ಪ ಸಮಯಕ್ಕಾಗಿ ಮಾತ್ರ. ಧನವಂತರು ಧರ್ಮ ಶಾಲೆಗಳನ್ನು ಕಟ್ಟಿಸುತ್ತಾರೆ, ಅವರೇನೂ ಸಂಪಾದನೆಗಾಗಿ ಕಟ್ಟಿಸುವುದಿಲ್ಲ. ತೀರ್ಥ ಸ್ಥಾನಗಳಲ್ಲಿ ಧರ್ಮ ಶಾಲೆಗಳಿಲ್ಲವೆಂದರೆ ಅಲ್ಲಿ ಹೋಗುವವರು ಎಲ್ಲಿ ಇರುವುದು, ಆದ್ದರಿಂದ ಸಾಹುಕಾರರು ಧರ್ಮ ಶಾಲೆಗಳನ್ನು ಕಟ್ಟಿಸುತ್ತಾರೆ. ವ್ಯಾಪಾರ ಮಾಡುವುದಕ್ಕಾಗಿ ಅಲ್ಲ. ತೀರ್ಥ ಸ್ಥಳಗಳಲ್ಲಿ ಧರ್ಮಶಾಲೆಗಳನ್ನು ಕಟ್ಟಿಸಲಾಗುತ್ತದೆ. ನಿಮ್ಮ ಸೇವಾಕೇಂದ್ರವು ದೊಡ್ಡದಕ್ಕಿಂತ ದೊಡ್ಡ ತೀರ್ಥ ಸ್ಥಾನವಾಗಿದೆ. ಎಲ್ಲೆಲ್ಲಿ ನಿಮ್ಮ ಸೇವಾಕೇಂದ್ರಗಳಿವೆಯೋ ಅವು ದೊಡ್ಡ-ದೊಡ್ಡ ತೀರ್ಥ ಸ್ಥಾನಗಳಿವೆ, ಎಲ್ಲಿಂದ ಮನುಷ್ಯರಿಗೆ ಸುಖ-ಶಾಂತಿ ಸಿಗುತ್ತದೆ. ನಿಮ್ಮ ಈ ಗೀತಾ ಪಾಠ ಶಾಲೆಯು ದೊಡ್ಡದಾಗಿದೆ, ಇದು ಆದಾಯದ ಮೂಲವಾಗಿದೆ, ಇದರಿಂದ ಬಹಳ ಸಂಪಾದನೆಯಾಗುತ್ತದೆ. ನೀವು ಮಕ್ಕಳಿಗಾಗಿ ಇದು ಧರ್ಮ ಶಾಲೆಯಾಗಿದೆ, ದೊಡ್ಡದಕ್ಕಿಂತ ದೊಡ್ಡ ತೀರ್ಥ ಸ್ಥಾನವಾಗಿದೆ. ನೀವು ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ಇದರಂತಹ ದೊಡ್ಡ ತೀರ್ಥ ಸ್ಥಾನವು ಮತ್ತ್ಯಾವುದೂ ಇರುವುದಿಲ್ಲ. ಆ ತೀರ್ಥ ಸ್ಥಳಗಳಿಗೆ ಹೋಗುವುದರಿಂದ ನಿಮಗೆ ಏನೂ ಸಿಗುವುದಿಲ್ಲ, ಇದನ್ನೂ ನೀವೀಗ ತಿಳಿದುಕೊಂಡಿದ್ದೀರಿ. ಭಕ್ತರು ಬಹಳ ಪ್ರೇಮದಿಂದ ಮಂದಿರಗಳಲ್ಲಿ ಚರಣಾಮೃತವನ್ನು ತೆಗೆದುಕೊಳ್ಳುತ್ತಾರೆ, ಇದರಿಂದ ನಾವು ಪವಿತ್ರವಾಗಿ ಬಿಡುವುದು ಎಂದು ತಿಳಿದುಕೊಳ್ಳುತ್ತಾರೆ. ಆದರೆ ಅದಂತೂ ನೀರಾಗಿದೆ, ಇಲ್ಲಿ ತಂದೆಯು ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿದರೆ ಆಸ್ತಿಯು ಸಿಗುವುದು. ಈಗ ಬೇಹದ್ದಿನ ತಂದೆಯಿಂದ ನಿಮಗೆ ಅವಿನಾಶಿ ಜ್ಞಾನರತ್ನಗಳ ಖಜಾನೆಯು ಸಿಗುತ್ತದೆ. ಬಹುತೇಕವಾಗಿ ಶಂಕರನ ಬಳಿ ಹೋಗುತ್ತಾರೆ, ಅಮರನಾಥನು ಪಾರ್ವತಿಗೆ ಕಥೆ ಹೇಳಿದರೆಂದು ಹೇಳುತ್ತಾರೆ. ಆದ್ದರಿಂದ ಜೋಳಿಗೆಯನ್ನು ತುಂಬಿಸು…. ಎಂದು ಹೇಳುತ್ತಾರೆ. ನೀವು ಅವಿನಾಶಿ ಜ್ಞಾನ ರತ್ನಗಳಿಂದ ಜೋಳಿಗೆಯನ್ನು ತುಂಬಿಸಿಕೊಳ್ಳುತ್ತೀರಿ ಬಾಕಿ ಅಮರನಾಥನು ಕೇವಲ ಒಬ್ಬರಿಗೆ ಕುಳಿತು ಕಥೆ ಹೇಳುವರೇ? ಅವಶ್ಯವಾಗಿ ಅನೇಕರಿರಬೇಕು, ಅವರು ಮೃತ್ಯುಲೋಕದಲ್ಲಿಯೇ ಇರುವರು. ಸೂಕ್ಷ್ಮವತನದಲ್ಲಂತು ಕಥೆಯನ್ನು ಹೇಳುವ ಅವಶ್ಯಕತೆಯೇ ಇಲ್ಲ. ಅನೇಕ ತೀರ್ಥ ಸ್ಥಾನಗಳನ್ನು ಮಾಡಿದ್ದಾರೆ, ಸಾಧು-ಸಂತ ಮಹಾತ್ಮರು ಅನೇಕರು ಹೋಗುತ್ತಾರೆ. ಅಮರನಾಥದಲ್ಲಿ ಲಕ್ಷಾಂತರ ಮಂದಿ ಹೋಗುತ್ತಾರೆ. ಎಲ್ಲದಕ್ಕಿಂತ ಹೆಚ್ಚಿನದಾಗಿ ಕುಂಭಮೇಳದಲ್ಲಿ ಗಂಗಾ ಸ್ನಾನ ಮಾಡಲು ಹೋಗುತ್ತಾರೆ, ಇದರಿಂದ ನಾವು ಪಾವನರಾಗುತ್ತೇವೆಂದು ತಿಳಿದುಕೊಳ್ಳುತ್ತಾರೆ. ವಾಸ್ತವದಲ್ಲಿ ಸತ್ಯವಾದ ಕುಂಭಮೇಳವು ಇದಾಗಿದೆ. ಆ ಮೇಳಗಳಲ್ಲಂತೂ ಜನ್ಮ-ಜನ್ಮಾಂತರದಿಂದ ಮಾಡುತ್ತಾ ಬಂದಿರಿ. ಆದರೆ ತಂದೆಯು ತಿಳಿಸುತ್ತಾರೆ – ಇದರಿಂದ ಯಾರೂ ತಮ್ಮ ಮನೆಗೆ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಏಕೆಂದರೆ ಆತ್ಮವು ಪವಿತ್ರವಾದಾಗಲೇ ಹೋಗಲು ಸಾಧ್ಯ ಆದರೆ ಅಪವಿತ್ರರಾಗಿರುವ ಕಾರಣ ಎಲ್ಲರ ರೆಕ್ಕೆಗಳು ತುಂಡಾಗಿವೆ. ಆತ್ಮಕ್ಕೆ ಈಗ ರೆಕ್ಕೆಗಳು ಸಿಕ್ಕಿವೆ. ಯೋಗದಲ್ಲಿ ಇರುವುದರಿಂದ ಆತ್ಮವು ಎಲ್ಲದಕ್ಕಿಂತ ತೀಕ್ಷ್ಣವಾಗಿ ಹಾರುತ್ತದೆ. ಯಾರ ಲೆಕ್ಕಾಚಾರವು ಲಂಡನ್ನಿನಲ್ಲಿ, ಅಮೇರಿಕಾದಲ್ಲಿದ್ದರೆ ಕೂಡಲೇ ಅಲ್ಲಿಗೆ ಹಾರುತ್ತಾರೆ. ಸೆಕೆಂಡಿನಲ್ಲಿ ಅಲ್ಲಿಗೆ ಹೋಗಿ ತಲುಪುತ್ತಾರೆ ಆದರೆ ಮುಕ್ತಿಧಾಮಕ್ಕೆ ಕರ್ಮಾತೀತರಾದಾಗಲೇ ಹೋಗಲು ಸಾಧ್ಯ. ಅಲ್ಲಿಯವರೆಗೆ ಇಲ್ಲಿಯೇ ಜನನ-ಮರಣದಲ್ಲಿ ಬರುತ್ತಾರೆ. ಹೇಗೆ ನಾಟಕವು ಟಿಕ್ ಟಿಕ್ ಎಂದು ನಡೆಯುತ್ತದೆ. ಆತ್ಮವೂ ಹಾಗೆಯೇ ಒಂದು ಸೆಕೆಂಡ್ ಕಳೆಯಿತೆಂದರೆ ಆತ್ಮವು ಹೊರಟು ಹೋಯಿತು, ಇದರಷ್ಟು ತೀಕ್ಷ್ಣ ಮತ್ತ್ಯಾವುದೇ ವಸ್ತುವಿರುವುದಿಲ್ಲ. ಅನೇಕಾನೇಕ ಆತ್ಮಗಳು ಮೂಲವತನದಲ್ಲಿ ಹೋಗುವರು. ಆತ್ಮಕ್ಕೆ ಎಲ್ಲಿಂದ ಎಲ್ಲಿಗೆ ಬೇಕಾದರೂ ತಲುಪುವುದರಲ್ಲಿ ಸಮಯ ಹಿಡಿಸುವುದಿಲ್ಲ, ಮನುಷ್ಯರು ಈ ಮಾತುಗಳನ್ನು ತಿಳಿದುಕೊಳ್ಳುವುದಿಲ್ಲ. ನೀವು ಮಕ್ಕಳ ಬುದ್ಧಿಯಲ್ಲಿ ಬರುತ್ತದೆ – ಹೊಸ ಪ್ರಪಂಚದಲ್ಲಿ ಅವಶ್ಯವಾಗಿ ಕೆಲವರೇ ಆತ್ಮರಿರುತ್ತಾರೆ ಮತ್ತು ಅಲ್ಲಿ ಬಹಳ ಸುಖಿಯಾಗಿರುತ್ತಾರೆ. ಅದೇ ಆತ್ಮಗಳು ಈಗ 84 ಜನ್ಮಗಳನ್ನು ತೆಗೆದುಕೊಂಡು ಬಹಳ ದುಃಖಿಯಾಗಿದ್ದಾರೆ. ನಿಮಗೆ ಇಡೀ ಚಕ್ರದ ಬಗ್ಗೆ ಅರ್ಥವಾಗಿದೆ, ನಿಮ್ಮ ಬುದ್ಧಿಯು ಕೆಲಸ ಮಾಡುತ್ತದೆ. ಮತ್ತ್ಯಾವ ಮನುಷ್ಯರ ಬುದ್ಧಿಯು ಓಡುವುದಿಲ್ಲ. ಪ್ರಜಾಪಿತ ಬ್ರಹ್ಮನ ಗಾಯನವೂ ಇದೆ. ಕಲ್ಪದ ಮೊದಲೂ ಸಹ ಇದೇ ರೀತಿ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದಿರಿ, ನೀವು ತಿಳಿದುಕೊಂಡಿದ್ದೀರಿ – ಪ್ರಜಾಪಿತ ಬ್ರಹ್ಮನಿಗೆ ನಾವು ಮಕ್ಕಳಾಗಿದ್ದೇವೆ, ನಮ್ಮ ಮೂಲಕ ತಂದೆಯು ಸ್ವರ್ಗದ ಸ್ಥಾಪನೆ ಮಾಡಿಸುತ್ತಿದ್ದಾರೆ ಯಾವಾಗ ನಂಬರ್ವಾರ್ ಪುರುಷಾರ್ಥದನುಸಾರ ಯೋಗ್ಯರಾಗಿ ಬಿಡುತ್ತೀರೋ ಆಗ ಈ ಹಳೆಯ ಪ್ರಪಂಚದ ವಿನಾಶವಾಗುವುದು. ತ್ರಿಮೂರ್ತಿಯದೂ ಇಲ್ಲಿಯೇ ಗಾಯನವಿದೆ, ತ್ರಿಮೂರ್ತಿ ಚಿತ್ರವನ್ನು ಇಟ್ಟುಕೊಳ್ಳುತ್ತಾರೆ ಅದರಲ್ಲಿ ಶಿವನನ್ನು ತೋರಿಸುವುದಿಲ್ಲ. ಬ್ರಹ್ಮನ ಮೂಲಕ ಸ್ಥಾಪನೆ ಎಂದು ಹೇಳಲಾಗುತ್ತದೆ, ಅದನ್ನು ಯಾರು ಮಾಡಿಸುತ್ತಾರೆ? ಶಿವ ತಂದೆ. ವಿಷ್ಣುವಿನ ಮೂಲಕ ಪಾಲನೆಯಾಗುತ್ತದೆ. ನೀವು ಬ್ರಾಹ್ಮಣರು ಈಗ ದೇವತೆಗಳಾಗುವುದಕ್ಕಾಗಿ ಯೋಗ್ಯರಾಗುತ್ತಿದ್ದೀರಿ. ನೀವೀಗ ಆ ಪಾತ್ರವನ್ನಭಿನಯಿಸುತ್ತಿದ್ದೀರಿ. ಕಲ್ಪದ ನಂತರ ಪುನಃ ಅಭಿನಯಿಸುತ್ತೀರಿ. ನೀವು ಪವಿತ್ರರಾಗುತ್ತೀರಿ. ನೀವು ಹೇಳುತ್ತೀರಿ – ತಂದೆಯ ಆದೇಶವಾಗಿದೆ, ಕಾಮ ರೂಪಿ ಶತ್ರುವನ್ನು ಜಯಿಸಿರಿ, ನನ್ನೊಬ್ಬನನ್ನೇ ನೆನಪು ಮಾಡಿ. ಬಹಳ ಸಹಜವಾಗಿದೆ. ಭಕ್ತಿಮಾರ್ಗದಲ್ಲಿ ನೀವು ಮಕ್ಕಳು ದುಃಖ ನೋಡಿದ್ದೀರಿ. ಭಲೆ ಸ್ವಲ್ಪ ಸುಖವಿದ್ದರೂ ಸಹ ಅಲ್ಪಕಾಲಕ್ಕಾಗಿ. ಭಕ್ತಿಯಲ್ಲಿ ಸಾಕ್ಷಾತ್ಕಾರವಾಗುತ್ತದೆ, ಅಲ್ಪಕಾಲಕ್ಕಾಗಿ ನಿಮ್ಮ ಆಸೆಗಳು ಈಡೇರುತ್ತದೆ. ಈ ಸಾಕ್ಷಾತ್ಕಾರವನ್ನೂ ಸಹ ನಾನೇ ಮಾಡಿಸುತ್ತೇನೆ, ಡ್ರಾಮಾದಲ್ಲಿ ನಿಗಧಿಯಾಗಿದೆ. ಯಾವ ಕ್ಷಣ-ಪ್ರತಿಕ್ಷಣವು ಕಳೆಯಿತೋ ಅದು ಡ್ರಾಮಾದಲ್ಲಿ ಮೊದಲೇ ನಿಗಧಿಯಾಗಿದೆ. ಈಗ ನಿಗಧಿಯಾಯಿತು ಎಂದು ಹೇಳುವುದಿಲ್ಲ. ಇದು ಅನಾದಿ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಎಷ್ಟು ಮಂದಿ ಪಾತ್ರಧಾರಿಗಳಿದ್ದಾರೆಯೋ ಎಲ್ಲರ ಪಾತ್ರವು ಅವಿನಾಶಿಯಾಗಿದೆ. ಯಾರೂ ಮೋಕ್ಷವನ್ನು ಪಡೆಯುವುದಿಲ್ಲ. ನಾವು ಲೀನವಾಗಿ ಬಿಡುತ್ತೇವೆಂದು ಸನ್ಯಾಸಿಗಳು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ – ನೀವು ಅವಿನಾಶಿ ಆತ್ಮನಾಗಿದ್ದೀರಿ, ಆತ್ಮವು ಬಿಂದುವಾಗಿದೆ. ಇಷ್ಟು ಚಿಕ್ಕ ಬಿಂದುವಿನಲ್ಲಿ 84 ಜನ್ಮಗಳ ಪಾತ್ರವು ನಿಗಧಿಯಾಗಿದೆ. ಈ ಚಕ್ರವು ನಡೆಯುತ್ತಲೇ ಇರುತ್ತದೆ. ಯಾರು ಮೊಟ್ಟ ಮೊದಲು ಪಾತ್ರವನ್ನಭಿನಯಿಸಲು ಬರುತ್ತಾರೆಯೋ ಅವರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ, ಎಲ್ಲರೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಿಮ್ಮ ವಿನಃ ಮತ್ತ್ಯಾರ ಬುದ್ಧಿಯಲ್ಲಿಯೂ ಈ ಜ್ಞಾನವಿಲ್ಲ. ಜ್ಞಾನ ಸಾಗರನು ಒಬ್ಬರೇ ತಂದೆಯಾಗಿದ್ದಾರೆ. ನಾವು ಆ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ತಂದೆಯು ನಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡುತ್ತಾರೆ. ಸುಖ-ಶಾಂತಿಯ ಆಸ್ತಿಯನ್ನು ಕೊಡುತ್ತಾರೆ. ಸತ್ಯಯುಗದಲ್ಲಿ ದುಃಖದ ಹೆಸರು-ಗುರುತೂ ಇರುವುದಿಲ್ಲ. ತಂದೆಯು ಹೇಳುತ್ತಾರೆ – ಆಯುಷ್ಯವಾನ್ಭವ, ಧನವಾನ್ಭವ….. ನಿವೃತ್ತಿ ಮಾರ್ಗದವರು ಹೀಗೆ ಆಶೀರ್ವಾದ ಮಾಡಲು ಸಾಧ್ಯವಿಲ್ಲ. ನೀವು ಮಕ್ಕಳಿಗೆ ತಂದೆಯಿಂದ ಆಸ್ತಿಯು ಸಿಗುತ್ತಿದೆ, ಸತ್ಯ-ತ್ರೇತಾಯುಗವು ಸುಖಧಾಮವಾಗಿದೆ ಮತ್ತೆ ಹೇಗೆ ದುಃಖವಾಗುತ್ತದೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ದೇವತೆಗಳು ಹೇಗೆ ವಾಮ ಮಾರ್ಗದಲ್ಲಿ ಹೋಗುತ್ತಾರೆಂದು ಸಾಕ್ಷಿಗಳಿವೆ. ಜಗನ್ನಾಥ ಪುರಿಯಲ್ಲಿ ದೇವತೆಗಳ ಚಿತ್ರಗಳು ಕಿರೀಟ ಇತ್ಯಾದಿ ಧರಿಸಿರುವುದನ್ನು ತೋರಿಸುತ್ತಾರೆ. ನಂತರ ಕೊಳಕು ಚಿತ್ರಗಳನ್ನೂ ತೋರಿಸಿದ್ದಾರೆ, ಆದ್ದರಿಂದ ಅವರ ಮೂರ್ತಿಯನ್ನು ಕಪ್ಪಾಗಿ ತೋರಿಸಿದ್ದಾರೆ. ಇದರಿಂದಲೇ ದೇವತೆಗಳು ವಾಮ ಮಾರ್ಗದಲ್ಲಿ ಇಳಿಯುತ್ತಾರೆಂದು ಸಿದ್ಧವಾಗುತ್ತದೆ ಆದ್ದರಿಂದ ಅಂತಿಮದಲ್ಲಿ ಸಂಪೂರ್ಣ ಕಪ್ಪಾಗಿ ಬಿಡುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ – ಭಾರತವು ಎಷ್ಟು ಸುಂದರವಾಗಿತ್ತು, ನಂತರ ಡ್ರಾಮಾ ಪ್ಲಾನ ಅನುಸಾರ ತಮೋಪ್ರಧಾನ ಆಗಲೇಬೇಕಾಗಿದೆ. ಈಗ ಸಂಗಮದಲ್ಲಿ ನಿಮಗೆ ಈ ಜ್ಞಾನವಿದೆ, ತಂದೆಯು ಜ್ಞಾನಪೂರ್ಣನಾಗಿದ್ದಾರೆ. ನಿಮಗೆ ಒಬ್ಬರೇ ತಂದೆಯು ತಂದೆ, ಶಿಕ್ಷಕ, ಗುರು ಮೂವರೂ ಆಗಿದ್ದಾರೆ. ಇದು ಸದಾ ಬುದ್ಧಿಯಲ್ಲಿರಲಿ – ಶಿವ ತಂದೆಯು ನಮಗೆ ಓದಿಸುತ್ತಾರೆ. ಇದು ಬೇಹದ್ದಿನ ವಿದ್ಯೆಯಾಗಿದೆ, ಇದರಿಂದ ನೀವು ಜ್ಞಾನ ಪೂರ್ಣರಾಗಿ ಬಿಟ್ಟಿದ್ದೀರಿ. ನೀವು ಎಲ್ಲವನ್ನೂ ಅರಿತುಕೊಂಡಿದ್ದೀರಿ. ಅವರು ಸರ್ವವ್ಯಾಪಿಯೆಂದು ಹೇಳುತ್ತಾರೆ, ನೀವು ಪತಿತ-ಪಾವನನೆಂದು ಹೇಳುತ್ತೀರಿ, ಎಷ್ಟು ರಾತ್ರಿ-ಹಗಲಿನ ವ್ಯತ್ಯಾಸವಿದೆ. ನೀವೀಗ ನಂಬರ್ವಾರ್ ಮಾ|| ಜ್ಞಾನಪೂರ್ಣರಾಗಿದ್ದೀರಿ. ತಂದೆಯ ಬಳಿ ಏನಿದೆಯೋ ಅದನ್ನು ಕಲಿಸುತ್ತಾರೆ, ನೀವೂ ಸಹ ಎಲ್ಲರಿಗೆ ತಿಳಿಸುತ್ತೀರಿ – ತಂದೆಯನ್ನು ನೆನಪು ಮಾಡಿದರೆ 21 ಜನ್ಮಗಳಿಗಾಗಿ ಆಸ್ತಿಯು ಸಿಗುವುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಸ್ವಯಂ ರಿಫ್ರೆಷ್ ಆಗಿದ್ದು ಅನ್ಯರನ್ನೂ ರಿಫ್ರೆಷ್ ಮಾಡಲು ತಂದೆ ಮತ್ತು ಆಸ್ತಿಯ ನೆನಪಿನಲ್ಲಿರಬೇಕು ಮತ್ತು ಎಲ್ಲರಿಗೂ ನೆನಪು ತರಿಸಬೇಕಾಗಿದೆ.

2. ಈ ಹಳೆಯ ಪ್ರಪಂಚದೊಂದಿಗೆ, ಈ ಸ್ಮಶಾನದೊಂದಿಗೆ ಮನಸ್ಸನ್ನು ಇಡಬಾರದು. ಶಾಂತಿಧಾಮ-ಸುಖಧಾಮವನ್ನು ನೆನಪು ಮಾಡಬೇಕಾಗಿದೆ. ಸ್ವಯಂನ್ನು ದೇವತೆಯಾಗಲು ಯೋಗ್ಯರನ್ನಾಗಿ ಮಾಡಿಕೊಳ್ಳಬೇಕಾಗಿದೆ.

ವರದಾನ:-

ಸಂಗಮಯುಗದಲ್ಲಿ ಬಾಪ್ದಾದಾರವರ ಮೂಲಕ ಎಲ್ಲಾ ಮಕ್ಕಳಿಗೂ ಕಿರೀಟ ಮತ್ತು ಸಿಂಹಾಸನವು ಪ್ರಾಪ್ತಿಯಾಗಿದೆ. ಪವಿತ್ರತೆಯ ಕಿರೀಟವಿದೆ, ಹಾಗೂ ಜವಾಬ್ದಾರಿಗಳ ಕಿರೀಟವೂ ಇದೆ. ಅಕಾಲ ಸಿಂಹಾಸನವೂ ಇದೆ, ಹೃದಯ ಸಿಂಹಾಸನಾಧಿಕಾರಿಯೂ ಆಗಿದ್ದೀರಿ. ಯಾವಾಗ ಈ ರೀತಿ ಡಬಲ್ ಕಿರೀಟ ಮತ್ತು ಸಿಂಹಾಸನಾಧಿಕಾರಿ ಆಗುತ್ತೀರೆಂದರೆ, ನಶೆ ಮತ್ತು ಗುರಿಯೂ ಸಹ ಸ್ವತಹವಾಗಿಯೇ ನೆನಪಿರುತ್ತದೆ. ಆನಂತರ ಈ ಕರ್ಮೇಂದ್ರಿಯಗಳೂ ಸಹ ಆಯಿತು ಪ್ರಭು, ತಮ್ಮ ಆಜ್ಞೆ….. ಎನ್ನುತ್ತಾ ಬಾಗುತ್ತದೆ. ಯಾರು ಕಿರೀಟ ಅಥವಾ ಸಿಂಹಾಸನವನ್ನು ಬಿಟ್ಟು ಬಿಡುತ್ತಾರೆಯೋ, ಅವರ ಆದೇಶವನ್ನು ಯಾವುದೇ ಕರ್ಮಚಾರಿಯೂ ಪಾಲಿಸುವುದಿಲ್ಲ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top