31 March 2022 KANNADA Murli Today | Brahma Kumaris

Read and Listen today’s Gyan Murli in Kannada

March 30, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಜ್ಞಾನ ಮಾರ್ಗದಲ್ಲಿ ನಿಮ್ಮ ವಿಚಾರಗಳು ಬಹಳ ಶುದ್ದವಾಗಿರಬೇಕಾಗಿದೆ. ಸತ್ಯ ಸಂಪಾದನೆಯಲ್ಲಿ ಸುಳ್ಳು ಹೇಳಿದರೆ ಅಥವಾ ಹೆಚ್ಚು ಕಡಿಮೆ ಮಾಡಿದರೆ ಬಹಳ ನಷ್ಟವಾಗುತ್ತದೆ”

ಪ್ರಶ್ನೆ:: -

ಯಾವ ಅದೃಷ್ಟವಂತ ಮಕ್ಕಳು ಶೇಷ್ಠ ಪದವಿಯನ್ನು ಪಡೆಯುತ್ತಾರೆ ಅವರ ಚಿಹ್ನೆ ಏನಾಗಿರುತ್ತದೆ?

ಉತ್ತರ:-

1) ಅವರಿಂದ ಯಾವುದೇ ಕೆಟ್ಟ ಕರ್ಮವಾಗುವುದಿಲ್ಲ, ಯಜ್ಞ ಸೇವೆಯಲ್ಲಿ ಮೂಳೆ ಮೂಳೆಯನ್ನು ಅರ್ಪಣೆ ಮಾಡುತ್ತಾರೆ. ಯಾವುದೇ ಲೋಭವಿರುವುದಿಲ್ಲ. 2) ಬಹಳ ಸುಖದಾಯಿಯಾಗಿರುತ್ತಾರೆ, ಮುಖದಿಂದ ಸದಾ ಜ್ಞಾನರತ್ನಗಳೇ ಬರುತ್ತವೆ, ಅವರು ಬಹಳ ಮಧುರವಾಗಿರುತ್ತಾರೆ. 3) ಈ ಹಳೆಯ ಪ್ರಪಂಚವನ್ನು ನೋಡಿಯೂ ನೋಡದಂತೆ ಇರುತ್ತಾರೆ, ಅವರಲ್ಲಿ ಇಂತಹ ವಿಚಾರ ಎಂದೂ ಬರುವುದಿಲ್ಲ- ಅದೃಷ್ಟದಲ್ಲಿ ಏನು ಇರುತ್ತದೆಯೋ ಅದನ್ನು ನೋಡಿದರಾಯಿತು. ತಂದೆಯು ತಿಳಿಸುತ್ತಾರೆ – ಇಂತಹ ಮಕ್ಕಳು ಯಾವ ಕೆಲಸಕ್ಕೆ ಬರುವುದಿಲ್ಲ. ನೀವು ಬಹಳ ಪುರುಷಾರ್ಥ ಮಾಡಬೇಕಾಗಿದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನಮ್ಮ ತೀರ್ಥ ಯಾತ್ರೆ ಭಿನ್ನವಾಗಿದೆ..

ಓಂ ಶಾಂತಿ. ಇದು ಭಕ್ತಿಮಾರ್ಗದ ಹಾಡಾಗಿದೆ. ಹೀಗೆ ನಮ್ಮದೇ ಮಹಿಮೆಯಾಗುತ್ತಿದೆ ಎಂದು ಮಕ್ಕಳಿಗೆ ಗೊತ್ತಿದೆ. ಭಕ್ತಿಮಾರ್ಗದಲ್ಲಿ ಮಹಿಮೆ ಮತ್ತು ಪ್ರಾರ್ಥನೆಯನ್ನು ಮಾಡುತ್ತಾರೆ. ಆದರೆ ಜ್ಞಾನ ಮಾರ್ಗದಲ್ಲಿ ಆ ಪ್ರಾರ್ಥನೆ ಮತ್ತು ಭಕ್ತಿ ಮಾಡುವುದಿಲ್ಲ. ಜ್ಞಾನವೆಂದರೆ ವಿದ್ಯೆ, ಹೇಗೆ ವಿದ್ಯೆಯನ್ನು ಶಾಲೆಯಲ್ಲಿ ಓದುತ್ತಾರೆ. ವಿದ್ಯೆಯಲ್ಲಿ ಗುರಿ ಹಾಗೂ ಲಕ್ಷ್ಯವಿರುತ್ತದೆ. ನಾವು ಇಂತಹದನ್ನು ಓದಿ ಅಂತಹ ಪದವಿ ಪಡೆಯುತ್ತೇವೆ, ಈ ವ್ಯವಹಾರ ಮಾಡುತ್ತೇವೆ. ಕೆಲವರು ಹೀಗೆ ಮೋಸ ಮಾಡೊಣ, ಹಣ ಸಂಪಾದನೆ ಮಾಡೋಣವೆಂದು ಕಲಿಯುತ್ತಾರೆ. ಹಣಕ್ಕೋಸ್ಕರ ಬಹಳ ಮೋಸ ಮಾಡುತ್ತಾರೆ, ಇದಕ್ಕೆ ಭ್ರಷ್ಟಾಚಾರವೆಂದು ಹೇಳುತ್ತಾರೆ. ಲೂಟಿಯನ್ನೂ ಸಹ ಮಾಡುತ್ತಾರೆ. ಸಂಪಾದನೆ ಮಾಡಿ ತನ್ನನ್ನು ಸುಖಿಯನ್ನಾಗಿ ಇಟ್ಟುಕೊಳ್ಳಲು ಮತ್ತು ಮಕ್ಕಳು ಮೊಮ್ಮಕ್ಕಳನ್ನು ಸುಖಿಯಾಗಿರಲು ಹಾಗು ಮಕ್ಕಳಿಗೆ ಓದಿಸಿ, ಮದುವೆ ಮಾಡುವ ಸಲುವಾಗಿ ಸರ್ಕಾರದಲ್ಲಿ ಬಹಳ ಮೋಸದಿಂದ ಹಣ ಸಂಪಾದನೆಯನ್ನು ಮಾಡುತ್ತಾರೆ. ನಿಮಗೆ ಇಲ್ಲಿ ಹಣ ಸಂಪಾದನೆಯ ಮಾತೇ ಇಲ್ಲ. ಇದು ಪವಿತ್ರ ವಿದ್ಯೆಯಾಗಿದೆ. ಹೀಗೆ ನೀವು ಗೃಹಸ್ಥ ವ್ಯವಹಾರದಲ್ಲಿದ್ದು ಓದಬೇಕಾಗಿದೆ. ನಮಗೆ ಸಂಬಳ ಕಡಿಮೆ ಬರುತ್ತದೆ ಎಂದು ಕೆಲವರು ಹೇಳುತ್ತಾರೆ, ಅದಕ್ಕೋಸ್ಕರ ಮೋಸ ಮಾಡಬೇಕಾಗುತ್ತದೆ ಏನು ಮಾಡಲಿ ಆದರೆ ಈ ಜ್ಞಾನಮಾರ್ಗದಲ್ಲಿ ಅಂತಹ ವಿಚಾರಗಳು ಇರಬಾರದಾಗಿದೆ, ಒಂದುವೇಳೆ ಇಂತಹ ವಿಚಾರ ಬಂದರೆ ದುರ್ಗತಿಯಾಗುತ್ತದೆ. ಇಲ್ಲಂತೂ ಬಹಳ ಸತ್ಯತೆಯಿಂದ, ಸ್ವಚ್ಚತೆಯಿಂದ ತಂದೆಯನ್ನು ನೆನಪು ಮಾಡಬೇಕಾಗುತ್ತದೆ, ಆಗ ಶ್ರೇಷ್ಠ ಪದವಿ ಪ್ರಾಪ್ತಿಯಾಗುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯೆಯ ವಿನಃ ಬೇರೆ ಯಾವ ಮಾತು ಸಹ ಬುದ್ದಿಯಲ್ಲಿ ಇರಬಾರದಾಗಿದೆ. ಇಲ್ಲವೆಂದರೆ ಭವಿಷ್ಯದ ಶೇಷ್ಠ ಪದವಿ ಹೇಗೆ ಪ್ರಾಪ್ತಿಯಾಗುತ್ತದೆ. ಅಕಸ್ಮಾತ್ ಉಲ್ಟಾ-ಸುಲ್ಟಾ ಕರ್ಮ ಮಾಡಿದರೆ ಫೇಲ್ ಆಗಿ ಬಿಡುತ್ತೀರಿ. ಈ ಸತ್ಯ ಸಂಪಾದನೆಯಲ್ಲಿ ಏನಾದರೂ ಸ್ವಲ್ಪ ಸುಳ್ಳು ಹೇಳಿದರೆ ಅಥವಾ ಸಾಧಾರಣ ಕರ್ಮ ಮಾಡಿದರೆ ಪದವಿ ಭ್ರಷ್ಟವಾಗುತ್ತದೆ, ಇದರಿಂದ ಬಹಳ ನಷ್ಟವಾಗುತ್ತದೆ. ನೀವಂತು ಇಲ್ಲಿಗೆ ಬಂದಿರುವುದು ಭವಿಷ್ಯದಲ್ಲಿ ಪದಮಾಪತಿಗಳಾಗಲು. ಆದ್ದರಿಂದ ಇಲ್ಲಿ ಯಾವ ಕೆಟ್ಟ ವಿಚಾರಗಳು ಬರಬಾರದು. ಯಾರಾದರೂ ಕಳ್ಳತನ ಮಾಡಿದರೆ ಕೇಸ್ ನಡೆಯುತ್ತದೆ. ಅದರಲ್ಲಿ ಕೆಲವರು ತಪ್ಪಿಸಿಕೊಳ್ಳಬಹುದು, ಆದರೆ ಇಲ್ಲಿ ಧರ್ಮರಾಜನ ಹತ್ತಿರ ಯಾರೂ ಸಹ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪಾಪಾತ್ಮರು ಬಹಳ ಶಿಕ್ಷೆ ಅನುಭವಿಸಬೇಕಾಗುತ್ತದೆ. ಶಿಕ್ಷೆಗೆ ಗುರಿಯಾಗದವರು ಯಾರೂ ಇಲ್ಲ, ಮಾಯೇ ಬೀಳಿಸುತ್ತಲೇ ಇರುತ್ತದೆ. ಕೆನ್ನೆಗೆ ಹೊಡೆಯುತ್ತದೆ. ಒಳಗಡೆ ಕೆಟ್ಟ ವಿಚಾರಗಳು ನಡೆಯುತ್ತದೆ. ಇಲ್ಲಿಂದ ಸ್ವಲ್ಪ ಹಣ ತೆಗೆದುಕೊಳ್ಳಲೆ….. ಗೊತ್ತಿಲ್ಲ ಇಲ್ಲಿ ಇರಲು ಸಾಧ್ಯವೋ ಇಲ್ಲವೋ ಅದಕ್ಕೋಸ್ಕರ ಸ್ವಲ್ಪ ಹಣ ಸೇರಿಸೋಣ. ಈಗ ಇದು ಈಶ್ವರೀಯ ಸಭೆಯಾಗಿದೆ. ರೈಟ್ಹ್ಯಾಂಡ್ ಧರ್ಮರಾಜನೂ ಸಹ ಇದ್ದಾನೆ, ಅವನ ಶಿಕ್ಷೆಯಂತು ನೂರುಪಟ್ಟು ಜಾಸ್ತಿ ಇದೆ. ಹೊಸ ಹೊಸ ಮಕ್ಕಳಿಗೆ ಬಹುಶಃ ಗೊತ್ತಿಲ್ಲದಿರಬಹುದು, ಆದ್ದರಿಂದ ತಂದೆ ಎಚ್ಚರಿಸುತ್ತಿದ್ದಾರೆ. ನೀವು ಮಕ್ಕಳ ವಿಚಾರಗಳು ಬಹಳ ಶುದ್ದವಾಗಿರಬೇಕಾಗಿದೆ. ಬಹಳ ಮಕ್ಕಳು ಬರೆಯುತ್ತಾರೆ ಬಾಬಾ ನಿಮ್ಮ ಶ್ರೀಮತವಿದೆ, ಗೃಹಸ್ಥ ವ್ಯವಹಾರದಲ್ಲಿ ಇದ್ದು ಕೇವಲ ನನ್ನನ್ನು ನೆನಪು ಮಾಡಿ, ಶ್ರೀಮತದ ವಿನಃ ಯಾವ ಕರ್ಮವನ್ನೂ ಸಹ ಮಾಡಬೇಡಿ, ಆದರೆ ನಮಗಂತೂ ವ್ಯಹಾರದಲ್ಲಿ ಏನೆಲ್ಲಾ ಮಾಡಬೇಕಾಗುತ್ತದೆ, ಇಲ್ಲವೆಂದರೆ ನಾವು ಜೀವನ ಮಾಡುವುದು ಹೇಗೆ! ಸ್ವಲ್ಪ ಹಣದಿಂದ ಇಷ್ಟೊಂದು ಪರಿವಾರದ ಸದಸ್ಯರನ್ನು ಹೇಗೆ ನಡೆಸುವುದು, ಹಸಿವಿನಿಂದ ಇರಬೇಕಾಗುತ್ತದೆ. ಅದಕ್ಕಾಗಿ ವ್ಯಾಪಾರಿಗಳು ದಾನ-ಧರ್ಮವೆಂದು ಸ್ವಲ್ಪ ಹಣ ತೆಗೆಯುತ್ತಿರುತ್ತಾರೆ. ನಮ್ಮಿಂದ ಏನೆಲ್ಲಾ ಪಾಪವಾಗಿದೆ, ಅದು ಸಮಾಪ್ತಿಯಾಗುತ್ತದೆ ಎಂದು ತಿಳಿದುಕೊಳ್ಳುತ್ತಾರೆ, ನಾವು ಧರ್ಮಾತ್ಮರಗಬೇಕು. ಧರ್ಮಾತ್ಮ ಪುರುಷರು ಬಹಳ ಪಾಪ ಮಾಡುವುದಿಲ್ಲ ಏಕೆಂದರೆ ಧರ್ಮಾತ್ಮರು ಪಾಪಕ್ಕೆ ಹೆದರುತ್ತಾರೆ. ಇಂತಹವರೂ ಬಹಳ ಮಂದಿ ಇದ್ದಾರೆ ಯಾರು ಎಂದೂ ವ್ಯಾಪಾರದಲ್ಲಿ ಸುಳ್ಳು ಹೇಳುವುದಿಲ್ಲ. ಒಮ್ಮೆಯೇ ಬೆಲೆಯನ್ನು ನಿಗಧಿ ಇಟ್ಟಿರುತ್ತಾರೆ. ಕಲ್ಕತ್ತಾದಲ್ಲಿ ಒಬ್ಬ ಪಾತ್ರೆ ಮಾರುವವನಿದ್ದನು, ಅವನು ಎಲ್ಲದರ ಬೆಲೆಯನ್ನು ಬೋರ್ಡಿನ ಮೇಲೆ ಬರೆದಿದ್ದನು. ನಂತರ ಸ್ವಲ್ಪವೂ ಸಹ ಕಡಿಮೆ ಮಾಡುತ್ತಿರಲಿಲ್ಲ. ಕೆಲವರಂತು ಬಹಳ ಸುಳ್ಳು ಹೇಳುತ್ತಾರೆ. ಇದಂತು ಜ್ಞಾನದ ವಿದ್ಯೆಯಾಗಿದೆ. ನಾವು ಭವಿಷ್ಯದ 21 ಜನ್ಮಗಳಿಗಾಗಿ ಓದುತ್ತೇವೆ ಆದ್ದರಿಂದ ತಂದೆಗೆ ಪ್ರತೀ ಮಾತಿನಲ್ಲೂ ಸತ್ಯ ಹೇಳಬೇಕು. ತಂದೆಗೆ ಎಲ್ಲವೂ ತಿಳಿದಿದೆ ಎಂದಲ್ಲ ಆದ್ದರಿಂದ ಏನೂ ಹೇಳುವ ಅವಶ್ಯಕತೆ ಇಲ್ಲ. ತಂದೆ ಹೇಳುತ್ತಾರೆ ವಿದ್ಯೆ ಓದಿದರೆ ಉತ್ತಮ ಪದವಿ ಪಡೆಯುತ್ತೇವೆ, ಇಲ್ಲವೆಂದರೆ ನರಕದಲ್ಲಿ ಹೊರಟು ಹೋಗುತ್ತೇವೆ. ನೀವು ಯಾವ ಯಾವ ಪಾಪ ಮಾಡುತ್ತೀರೆಂದು ನಾನು ಕುಳಿತು ನೋಡುವುದಿಲ್ಲ, ಏನೆಲ್ಲ ಮಾಡುತ್ತೀರಿ ಅದು ನಿಮಗಾಗಿ ಮಾಡುತ್ತೀರಿ, ನಿಮ್ಮದೇ ಪದವಿ ಭ್ರಷ್ಟ ಮಾಡಿಕೊಳ್ಳುತ್ತೀರಿ. ಪಾಪಾತ್ಮ, ಪುಣ್ಯಾತ್ಮ ಎಂದು ಹೆಸರೂ ಸಹ ಇದೆ. ತಂದೆ ಬಂದು ನಮ್ಮನ್ನು ಪುಣ್ಯಾತ್ಮರನ್ನಾಗಿ ಮಾಡುತ್ತಿದ್ದಾರೆ ಆದ್ದರಿಂದ ಯಾವುದೇ ಪಾಪ ಆಗಬಾರದು. ಮಕ್ಕಳಿಗಂತು ಪಾಪದ ನೂರುಪಟ್ಟು ಶಿಕ್ಷೆಯಾಗುತ್ತದೆ, ಆಗ ಬಹಳ ನಷ್ಟವಾಗುತ್ತದೆ. ಏನು ಆಗುತ್ತದೆ ಅದನ್ನು ನೋಡೋಣವೆಂದು ಎಂದೂ ಹೇಳಬಾರದು. ಈಗಲೇ ಮಾಡಬೇಕಾಗಿದೆ. ಇಂತಹ ಮಕ್ಕಳು ಯಾವುದೇ ಕೆಲಸಕ್ಕೆ ಬಾರದವರು. ಈ ಹಳೆಯ ಪ್ರಪಂಚವನ್ನು ನೋಡಿಯೂ ನೋಡದಂತೆ ಎಲ್ಲವನ್ನು ಮರೆಯಬೇಕು. ನಾವು ಪಾತ್ರಧಾರಿಗಳಾಗಿದ್ದೇವೆ, ಈಗ ಈ ನಾಟಕ ಪೂರ್ತಿಯಾಗುತ್ತಿದೆ. 84 ಜನ್ಮಗಳನ್ನು ಪೂರ್ಣ ಮಾಡಿದೆವು ಆದ್ದರಿಂದ ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಎಷ್ಟು ಸೇವೆಯನ್ನು ಮಾಡುತ್ತೇವೆ, ಅಷ್ಟು ಒಳ್ಳೆಯ ಪದವಿಯನ್ನು ಪಡೆಯುತ್ತೇವೆ. ಈಗ ಮೇಳ, ಪ್ರದರ್ಶನಗಳು ಬಹಳ ನಡೆಯುತ್ತಿದೆ, ಯಾರು ಉತ್ತಮ ಪದವಿಯನ್ನು ಪಡೆಯುವವರು ಇದ್ದಾರೆ, ಅವರು ಇಂತಹ ಪ್ರದರ್ಶನಗಳಿಗೆ ಹೋಗಿ ಭಿನ್ನ-ಭಿನ್ನ ರೀತಿಯಲ್ಲಿ ಹೇಗೆ ತಿಳಿಸಿಕೊಡುವುದೆಂದು ಕೇಳಿ ತಿಳಿದುಕೊಳ್ಳುತ್ತಾರೆ. ಈ ರೀತಿ ಕೇಳುತ್ತಾ-ಕೇಳುತ್ತಾ ಇಂತಹ ಮಕ್ಕಳ ಬುದ್ದಿಯ ಬೀಗವು ತೆರೆಯುತ್ತದೆ. ಈ ರೀತಿಯ ಮೇಳ ಹಾಗೂ ಪ್ರದರ್ಶನಗಳಿಂದ ನಮ್ಮ ಬುದ್ದಿಯ ಬೀಗವು ತೆರೆದುಕೊಂಡಿತು ಎಂದು ಅನೇಕರು ತಂದೆಗೆ ಪತ್ರ ಬರೆಯುತ್ತಾರೆ. ತಂದೆ ಅನೇಕ ಸಹಾಯವನ್ನು ಮಾಡಿದ್ದಾರೆ ಹಾಗೂ ಮಾಡುತ್ತಲೂ ಇದ್ದಾರೆ, ಆದರೆ ಇದು ಯಾರಿಗೂ ತಿಳಿಯುದಿಲ್ಲ. ನಾವೇ ಇದನ್ನೆಲ್ಲಾ ಮಾಡಿದೆವು ಎಂದು ತಿಳಿದುಕೊಂಡು ಬಿಡುತ್ತಾರೆ. ಇದೆಲ್ಲವೂ ತಂದೆಯ ಸಹಾಯವೆಂದು ಕೆಲವು ಸತ್ಯವಾದಂತಹ ಮಕ್ಕಳು ತಿಳಿದುಕೊಳ್ಳುತ್ತಾರೆ. ಪ್ರದರ್ಶನದ ಸೇವೆಯಿಂದ ಬಹಳ ಉನ್ನತಿಯಾಗುತ್ತದೆ. ನಾವು ಜ್ಞಾನಸಾಗರ ತಂದೆಯ ಮಕ್ಕಳಾಗಿದ್ದೇವೆ. ತಂದೆಯ ನೆನಪಿನಲ್ಲಿ ಇರುವುದರಿಂದ ಬಹಳ ಶಕ್ತಿ ಸಿಗುತ್ತದೆ. ನಮಗೆ ವಿಶ್ವದ ರಾಜ್ಯಭಾಗ್ಯವು ಯೋಗಬಲದಿಂದ ಸಿಗುತ್ತದೆ. ನಾವು ತಂದೆಯಿಂದ ಆಸ್ತಿ ತೆಗೆದುಕೊಳ್ಳುವವರಿದ್ದೇವೆ ಹಾಗೂ ಅದಕ್ಕಾಗಿ ಶ್ರೀಮತದಂತೆ ನಡೆಯಬೇಕು ಎಂಬ ಮಾತು ಸದಾ ನೆನಪಿನಲ್ಲಿ ಇರಬೇಕು. ನಾವು ಶ್ರೀಮತದಂತೆ ನಡೆಯುವುದರಲ್ಲಿ ನಮ್ಮ ಸಂಪಾದನೆ ಇದೆ. ಈ ಪ್ರಪಂಚದಲ್ಲಿ ಕೆಲಸಕ್ಕೆ ಬರುವ ವಸ್ತುಗಳು ಯಾವುದೂ ಇಲ್ಲ, ಇಲ್ಲಿಯದೆಲ್ಲವೂ ಸಮಾಪ್ತಿಯಾಗುತ್ತದೆ. ನೀವು ಜ್ಞಾನ-ನಕ್ಷತ್ರಗಳಾಗಿದ್ದೀರಿ, ಈ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೇವೆ ಹಾಗೂ ಸ್ವರ್ಗವಾಸಿಗಳಾಗಲು ಯೋಗ್ಯ ಇಲ್ಲಿಯೇ ಆಗಬೇಕಾಗಿದೆ. ಯಜ್ಞದಲ್ಲಿ ಮೂಳೆ-ಮೂಳೆಯನ್ನು ತಂದೆಯ ಸೇವೆಯಲ್ಲಿ ಸವೆಸಬೇಕು ಏಕೆಂದರೆ ಅದರಲ್ಲಿ ಮತ್ತೆ ಯಾವುದೇ ಲೋಭವು ಉಳಿದುಕೊಳ್ಳಬಾರದು. ಯಾರ ಅದೃಷ್ಟದಲ್ಲಿ ಇಲ್ಲವೋ, ಅವರಿಂದ ಮತ್ತೆ ಕೆಟ್ಟ ಕೆಲಸ ಆಗುತ್ತಲೇ ಇರುತ್ತದೆ. ಇಲ್ಲಿಯಂತು ನೀವು ಸುಖದಾಯಿಗಳು ಆಗಲೇ ಬೇಕು. ತಂದೆಯು ನಮ್ಮನ್ನು ಸುಖದಾಯಿಯನ್ನಾಗಿ ಮಾಡಲು ಬಂದಿದ್ದಾರೆ ಆದ್ದರಿಂದ ನೀವು ಸುಖದಾಯಿಗಳಾಗಬೇಕು. ತಂದೆಯ ಮುಖದಿಂದ ಸದಾ ಜ್ಞಾನರತ್ನಗಳೇ ಬರುತ್ತವೆ. ಮಾಯೆಗೆ ವಶವಾದ ಮಾತುಗಳು ಬರುವುದಿಲ್ಲ, ಸುಳ್ಳು ಹೇಳುವ ಬದಲು ಬೇರೆ ಇನ್ನೇನಾದರು ಹೇಳುವುದು ಒಳ್ಳೆಯದು. ಬಹಳ ಮಧುರರಾಗಿ ಮಾತಾಪಿತರನ್ನು ಪ್ರತ್ಯಕ್ಷ ಮಾಡಬೇಕು. ತಂದೆ-ಸದ್ಗುರುವನ್ನು ಕುರಿತು ಈ ರೀತಿ ಬರೆದಿದ್ದಾರೆ – ಸದ್ಗುರುವಿನ ನಿಂದಕರಿಗೆ ಇಲ್ಲಿ ಸ್ಥಾನವಿಲ್ಲ…… ಸ್ವಲ್ಪ ಮಾತ್ರವೂ ಕಠಿಣತೆ, ಅವಗುಣವೇನೂ ಇರಬಾರದು. ಈ ರೀತಿಯ ಜನರೂ ಇದ್ದಾರೆ, ಯಾವುದಾದರೂ ವಸ್ತು ಸಿಗಲಿಲ್ಲವೆಂದರೆ ಕ್ರೋಧಿಗಳಾಗುತ್ತಾರೆ ಆದರೆ ಇದನ್ನು ಪರೀಕ್ಷೆ ಎಂದು ತಿಳಿದು ಶಾಂತಿಯಲ್ಲಿ ಇರಬೇಕು. ದೊಡ್ದ-ದೊಡ್ಡ ಋಷಿ-ಮುನಿಗಳು ಹೇಳುತ್ತಿದ್ದರು, ನಮಗೆ ಈಶ್ವರನೆಂದರೆ ಯಾರು ಎಂದು ಗೊತ್ತಿಲ್ಲ ಆದರೆ ಈಗ ಇವರು(ಸನ್ಯಾಸಿಗಳು) ಈ ರೀತಿ ಹೇಳಿದರೆ ಯಾರೂ ನಂಬುವುದಿಲ್ಲ. ಈಶ್ವರನನ್ನು ಇವರೇ ತಿಳಿದುಕೊಂಡಿಲ್ಲ ಇನ್ನು ಇವರು ನಮಗೆ ಏನು ಮಾರ್ಗ ತೋರಿಸಲು ಸಾಧ್ಯ ಎಂದು ಪ್ರಪಂಚದವರು ತಿಳಿದುಕೊಳ್ಳುತ್ತಾರೆ. ಇತ್ತೀಚೆಗೆ ಒಬ್ಬರಿಗೆ ಇನ್ನೊಬ್ಬರು ಗುರುಗಳು ಬಹಳ ಮಂದಿ ಇದ್ದಾರೆ. ಹಿಂದೂ ಧರ್ಮದ ನಾರಿಯು ಪತಿಯನ್ನೂ ಸಹ ಗುರು ಅಥವಾ ಈಶ್ವರನೆಂದು ಪೂಜಿಸುತ್ತಾರೆ, ಆದರೆ ಗುರು ಸದ್ಗತಿಯನ್ನು ಕೊಡುತ್ತಾರೆ, ಪತಿತರನ್ನಾಗಿ ಮಾಡುವುದಿಲ್ಲ. ಯಾರೆಲ್ಲ ಪ್ರಿಯತಮೆಯರಿದ್ದಾರೆ, ಅವರ ಗುರು ಹಾಗೂ ಪ್ರಿಯತಮನು ಒಬ್ಬರೇ ಆಗಿದ್ದಾರೆಂದು ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ತಂದೆ-ತಾಯಿ, ಬಾಪ್ದಾದಾ ಎಲ್ಲವೂ ಅವರೇ ಆಗಿದ್ದಾರೆ ಆದರೆ ಪ್ರಪಂಚದವರು ತನ್ನ ಪತಿಗಾಗಿ ಈ ಅಕ್ಷರಗಳನ್ನು ಉಪಯೋಗಿಸುತ್ತಾರೆ. ಈಗ ಇಲ್ಲಿ ಈ ಮಾತುಗಳು ಇಲ್ಲ. ಇಲ್ಲಂತು ಆತ್ಮಗಳಿಗೆ ಸ್ವಯಂ ಪರಮಪಿತ ಪರಮಾತ್ಮ ಓದಿಸುತ್ತಾರೆ. ಆತ್ಮ ಇಷ್ಟು ಚಿಕ್ಕದಾಗಿದ್ದರೂ ಸಹ ಅದರಲ್ಲಿ 84 ಜನ್ಮಗಳ ಪಾತ್ರ ತುಂಬಿದೆ. ಪರಮಾತ್ಮನೂ ಸಹ ಚಿಕ್ಕ ನಕ್ಷತ್ರ ಆಗಿದ್ದಾರೆ, ಅವರಲ್ಲಿಯೂ ಸಹ ಪಾತ್ರ ತುಂಬಿದೆ. ಪರಮಾತ್ಮ ಸರ್ವಶಕ್ತಿವಂತ, ಏನು ಬೇಕಾದರೂ ಮಾಡುತ್ತಾರೆಂದು ಪ್ರಪಂಚದವರು ತಿಳಿದುಕೊಂಡಿದ್ದಾರೆ ಆದರೆ ಪರಮಪಿತ ಪರಮಾತ್ಮ ತಿಳಿಸಿಕೊಡುತ್ತಾರೆ, ಈ ರೀತಿ ಏನೂ ಇಲ್ಲ, ಡ್ರಾಮಾನುಸಾರ ನನ್ನ ಪಾತ್ರವೂ ಸಹ ಇದೆ.

ತಂದೆಯು ತಿಳಿಸುತ್ತಾರೆ – ನೀವು ಆತ್ಮರು ಪರಸ್ಪರ ಸಹೋದರ-ಸಹೋದರರಾಗಿದ್ದೀರಿ ಹಾಗಾದರೆ ಆತ್ಮ ತನ್ನ ಸಹೋದರನ ಕೊಲೆ ಹೇಗೆ ಮಾಡಲು ಸಾಧ್ಯ! ನಾವೆಲ್ಲಾ ಆತ್ಮಗಳು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ, ಮೇಲ್ (ಪುರುಷ) ಅಥವಾ ಫೀಮೇಲ್ (ಸ್ತ್ರೀ)…… ಈ ದೇಹಾಭಿಮಾನವನ್ನು ಬಿಡಬೇಕು. ಶಿವಬಾಬಾರವರು ಬಹಳ ಮಧುರರಾಗಿದ್ದಾರೆಂದ ಮೇಲೆ ನಾವು ಅವರ ಮಕ್ಕಳು ಸಹೋದರರಾಗಿದ್ದೇವೆ ಆದ್ದರಿಂದ ನಾವು ಎಂದೂ ಸಹ ಜಗಳವಾಡಬಾರದು. ದೇಹೀ-ಅಭಿಮಾನಿಗಳಾಗಿದ್ದಾಗ ಜಗಳದ ಮಾತೇ ಇಲ್ಲ. ತಂದೆ ಇಷ್ಟು ಮಧುರ ಆದರೆ ಮಕ್ಕಳು ಸದಾ ಜಗಳವಾಡುತ್ತಿದ್ದರೆ ತಂದೆ ಏನೆಂದು ತಿಳಿದುಕೊಳ್ಳುತ್ತಾರೆ! ಈ ಸಮಯದಲ್ಲಿ ಮನುಷ್ಯರಲ್ಲಿ ಆತ್ಮದ ಜ್ಞಾನವಿಲ್ಲ. ನಾವು ಆತ್ಮಗಳು ಪರಮಾತ್ಮನ ಸಂತಾನದವರು ಅಂದಮೇಲೆ ಜಗಳವನ್ನೇಕೆ ಮಾಡಬೇಕು? ಮನುಷ್ಯರು ಕೇವಲ ಭಾಷಣದಲ್ಲಿ ಹೇಳುತ್ತಾರೆ ಆದರೆ ನೀವು ಮಕ್ಕಳು ಇದನ್ನು ಪ್ರತ್ಯಕ್ಷ ರೂಪದಲ್ಲಿ ತರುತ್ತೀರಿ. ತಂದೆ ಹೇಳುತ್ತಾರೆ – ದೇಹಾಭಿಮಾನವನ್ನು ಬಿಡಿ, ನಾವು ಆತ್ಮಗಳು, ಈಗ ಮನೆಗೆ ಹಿಂತಿರುಗಿ ಹೋಗಬೇಕಾಗಿದೆ – ಈ ನಶೆಯಲ್ಲೇ ಇರಬೇಕಾಗಿದೆ. ಪೂರ್ತಿ ಪುರುಷಾರ್ಥವನ್ನು ಮಾಡಬೇಕಾಗಿದೆ. ತಂದೆಯಂತೆ ಬಹಳ ಮಧುರ ಹಾಗು ಪ್ರೀತಿಯಲ್ಲಿ ತಲ್ಲೀನರಾಗುವವರು ಒಳ್ಳೆಯ ಮಕ್ಕಳು, ಇಂತಹವರಿಗೆ ಪ್ರೀತಿಯಲ್ಲಿ ತಲ್ಲೀನರಾಗಿರುವ ಮಕ್ಕಳು ಎಂದು ತಂದೆ ಹೇಳುತ್ತಾರೆ. ತಂದೆ ಎಷ್ಟು ನಿರಹಂಕಾರಿಯಾಗಿದ್ದಾರೆ! ನಾನು ನಿಮ್ಮ ತಂದೆ-ಗುರು-ಟೀಚರ್ ಎಲ್ಲವೂ ಆಗಿದ್ದೇನೆಂದು ತಂದೆಯು ತಿಳಿಸಿಕೊಡುತ್ತಾರೆ. ಅರ್ಧಕಲ್ಪ ನೀವು ತಂದೆ ಬಾ ಎಂದು ನೆನಪು ಮಾಡುತ್ತಲೇ ಬಂದಿದ್ದೀರಿ. ನನ್ನದೂ ಈ ಡ್ರಾಮಾದಲ್ಲಿ ಪಾತ್ರವಿದೆ. ಮೊದಲು ಗಡಿಯಾರವಿರಲಿಲ್ಲ, ಮಣ್ಣಿನ ಮಡಿಕೆಯಲ್ಲಿ ನೋಡುತ್ತಿದ್ದರು. ಈ ವಿಜ್ಞಾನದವರು ಏನೆಲ್ಲಾ ಮಾಡುತ್ತಿದ್ದಾರೆ, ಅದು ನಮಗಾಗಿ ಮಾಡುತ್ತಿದ್ದಾರೆ. ಈ ವಿಜ್ಞಾನಿಗಳು ಜ್ಞಾನಮಾರ್ಗದಲ್ಲಿ ಬರುವುದಿಲ್ಲ ಆದ್ದರಿಂದ ಅವರು ಪ್ರಜೆಯಲ್ಲಿ ಬರುತ್ತಾರೆ. ಅರಮನೆಗಳನ್ನು ಮಾಡುವವರು ಪ್ರಜೆಗಳಲ್ಲವೇ. ರಾಜಾ-ರಾಣಿಯರಂತು ಕೇವಲ ಆಜ್ಞೆ ಮಾಡುವವರು ಆದರೆ ಈ ವಿಜ್ಞಾನದ ವಸ್ತುಗಳೇನು ಕಳೆದು ಹೋಗುವುದಿಲ್ಲ, ಈ ವಿಜ್ಞಾನಿಗಳಂತು ಬಹಳ ಚತುರರಾಗುತ್ತಿದ್ದಾರೆ. ಬಾಕಿ ಈ ಚಂದ್ರನ ಮೇಲೆ ಹೋಗುವುದು – ಇದೆಲ್ಲವೂ ಅಂತ್ಯದ ಗುರುತಾಗಿದೆ. ವಿಜ್ಞಾನವೂ ದುಃಖವನ್ನು ಕೊಡುವಂತಹದ್ದಾಗಿದೆ. ಅದರೆ ಸತ್ಯಯುಗದಲ್ಲಿ ಎಲ್ಲವೂ ಸುಖ ಕೊಡುವಂತಹ ವಸ್ತುಗಳು ಇರುತ್ತವೆ. ಬಾಕಿ ಈಗ ಇರುವುದೂ ಸಹ ಸ್ವಲ್ಪ ಸಮಯವಷ್ಟೆ ಇರುತ್ತದೆ, ಅತಿಯಾಗಿ ಹೋಗುವ ಕಾರಣ ವಿನಾಶವಾಗಿ ಬಿಡುತ್ತದೆ. ನಂತರ ನೀವು ಸುಖವನ್ನು ಅನುಭವ ಮಾಡುತ್ತೀರಿ. ಮಮ್ಮಾ-ಬಾಬಾ ಎಂದು ಹೇಳುವಾಗ ಅವರನ್ನು ಅನುಕರಣೆ ಮಾಡಬೇಕು. ನಿಮ್ಮ ಮುಖದಿಂದ ಸದಾ ಜ್ಞಾನರತ್ನಗಳೇ ಬರಬೇಕು. ಕಲ್ಲುಗಳು ಹಾಡು ಹೇಳಿದವು ಎಂದು ಹೇಳುತ್ತಾರೆ, ಮೊದಲು ನೀವು ಕಲ್ಲು ಬುದ್ದಿಯವರಾಗಿದ್ದು, ಈಗ ತಂದೆಯು ಪಾರಸ ಬುದ್ದಿಯವರನ್ನಾಗಿ ಮಾಡುತ್ತಿದ್ದಾರೆ. ಪರಮಪಿತ ಪರಮಾತ್ಮನ ಜೀವನ ಚರಿತ್ರೆಯನ್ನು ಈಗ ನೀವು ತಿಳಿದುಕೊಂಡಿದ್ದೀರಿ. ಅವರು ಇದರ ಅರ್ಥವನ್ನು ಸ್ವಲ್ಪವೂ ತಿಳಿದುಕೊಂಡಿಲ್ಲ. ರತ್ನಗಳ ಬದಲು ಕಲ್ಲು(ಕಠಿಣ ಮಾತು)ಗಳಿಂದ ಹೊಡೆಯುತ್ತಾರೆ. ಈಗ ನಿಮ್ಮ ಬುದ್ದಿಯಲ್ಲಿ ನಂಬರ್ವಾರ್ ಆಗಿ ರತ್ನಗಳಿವೆ. ಕೆಲವರ ಮುಖದಿಂದ ಮುತ್ತು ರತ್ನಗಳ ಮಾತು ಬರುತ್ತವೆ ಆದುದರಿಂದ ನಿಮ್ಮ ಹೆಸರು ನೀಲಂಪರಿ, ಸಬ್ಜಪರಿ……… ಈಗ ನೀವು ಕಲ್ಲುಗಳಿಂದ ರತ್ನ ಅಥವಾ ಪಾರಸವಾಗುತ್ತಿದ್ದೀರಿ. ಯಾರೇ ಬಂದರೂ ನೀವು ಈ ರೀತಿ ತಿಳಿಸಿಕೊಡಬೇಕಾಗಿದೆ – ಪರಮಪಿತ ಪರಮಾತ್ಮನೊಂದಿಗೆ ನಿಮ್ಮ ಸಂಬಂಧವೇನು? ಎಲ್ಲಿಯವರೆಗೂ ಪರಮಾತ್ಮನ ಮಾತು ಸ್ಪಷ್ಟವಾಗುವುದಿಲ್ಲ, ಅಲ್ಲಿಯವರೆಗೂ ಸಹ ತಂದೆಯನ್ನು ಮಿಲನ ಮಾಡುವುದು ವ್ಯರ್ಥವಾಗುತ್ತದೆ. ಮೊಟ್ಟ ಮೊದಲು ತಂದೆಯನ್ನು ತಿಳಿದುಕೊಂಡರೆ, ಬಿ.ಕೆ. ಯಾರ ಮೊಮ್ಮಕ್ಕಳು ಎಂದು ತಿಳಿಯುತ್ತದೆ. ಇದು ಶ್ರೇಷ್ಠ ಗುರಿಯಗಿದೆ. 21 ಜನ್ಮಗಳಿಗೆ ರಾಜ್ಯ ಭಾಗ್ಯವನ್ನು ಬಡವರೂ ಸಹ ಪಡೆದುಕೊಳ್ಳಬಹುದು. ವಿಶ್ವದ ಮಾಲೀಕರಾಗುವುದು ಕಡಿಮೆ ಮಾತೇನು? ಕೇವಲ ಶ್ರೀಮತದಂತೆ ನಡೆಯಬೇಕು. ಮಕ್ಕಳ ಮೇಲೆ ತಂದೆಯೇ ಬಲಿಹಾರಿಗಳಾಗಿದ್ದಾರೆ. 21 ಜನ್ಮಗಳಿಗೆ ಬಲಿಹಾರಿಯಾಗಿ ವಿಶ್ವದ ಮಾಲೀಕತ್ವದ ವರದಾನ ಕೊಡುತ್ತಾರೆ. ಅಗತ್ಯವಾಗಿ ಮಕ್ಕಳ ಮುಖದಿಂದ ಜ್ಞಾನರತ್ನಗಳೇ ಬರಬೇಕು, ಆಗ ಭವಿಷ್ಯದಲ್ಲಿ ಪೂಜ್ಯನೀಯರಾಗುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಮಧುರರಾಗಿ ತಂದೆಯನ್ನು ಪ್ರತ್ಯಕ್ಷ ಮಾಡಬೇಕು. ಕಠಿಣತೆ ಸ್ವಲ್ಪವಿದ್ದರೂ ಸಹ ಅದನ್ನು ತೆಗೆದು ಬಿಡಬೇಕು. ತಂದೆಯಂತೆ ಅತಿ ಪ್ರಿಯರು ಹಾಗೂ ಮಧುರರು ಆಗಬೇಕು.

2. ಯಾವುದೇ ಕರ್ಮ ಶ್ರೀಮತದ ವಿರುದ್ದ ಮಾಡಬಾರದು. ಶ್ರೀಮತದಲ್ಲಿಯೇ ಒಳ್ಳೆಯ ಸಂಪಾದನೆ ಇದೆ.

ವರದಾನ:-

ತ್ರಿಕಾಲದರ್ಶಿ ಮಕ್ಕಳು ಪ್ರತಿಯೊಂದು ಕರ್ಮದ ಪರಿಣಾಮವನ್ನು ತಿಳಿದುಕೊಂಡ ನಂತರ ಕರ್ಮ ಮಾಡುವರು. ಅವರೆಂದಿಗೂ ಈ ರೀತಿ ಹೇಳುವುದಿಲ್ಲ- ಆಗಬಾರದಿತ್ತು ಆದರೆ ಆಗಿ ಹೋಯಿತು, ಮಾತನಾಡಬಾರದಿತ್ತು ಆದರೆ ಮಾತನಾಡಿ ಬಿಟ್ಟೆನು. ಇದರಿಂದ ಸಿದ್ಧವಾಗುತ್ತದೆ – ಕರ್ಮದ ಪರಿಣಾಮವನ್ನು ಅರಿಯದೇ ಮುಗ್ಧತೆಯಲ್ಲಿ ಕರ್ಮವನ್ನು ಮಾಡಿ ಬಿಡುತ್ತೀರಿ. ಮುಗ್ಧರಾಗುವುದು ಒಳ್ಳೆಯದು ಆದರೆ ಹೃದಯದಿಂದ ಮುಗ್ಧರಾಗಿರಿ, ಮಾತುಗಳಲ್ಲಿ ಮತ್ತು ಕರ್ಮದಲ್ಲಿ ಮುಗ್ಧರಾಗಬಾರದು. ಅದರಲ್ಲಿ ಪ್ರತಿಯೊಂದು ಮಾತನ್ನು ತ್ರಿಕಾಲದರ್ಶಿಯಾಗಿದ್ದು ಆಲಿಸಿರಿ ಮತ್ತು ಹೇಳಿದಾಗ ಮಹಾನ್ ಆತ್ಮ ಎಂದು ಹೇಳಲಾಗುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top