31 July 2021 KANNADA Murli Today | Brahma Kumaris

Read and Listen today’s Gyan Murli in Kannada

July 30, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನಿಮಗೆ ನಶೆಯಿರಲಿ, ನಮ್ಮ ತಂದೆಯು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡಲು ಬಂದಿದ್ದಾರೆ, ನಾವು ಅವರ ಸನ್ಮುಖದಲ್ಲಿ ಕುಳಿತಿದ್ದೇವೆ”

ಪ್ರಶ್ನೆ:: -

ಕರ್ಮದ ಗುಹ್ಯಗತಿಯನ್ನು ತಿಳಿದುಕೊಂಡಿರುವವರು ಅವಶ್ಯವಾಗಿ ಯಾವ ಪುರುಷಾರ್ಥ ಮಾಡುತ್ತಾರೆ?

ಉತ್ತರ:-

ನೆನಪಿನಲ್ಲಿರುವ ಪುರುಷಾರ್ಥ ಮಾಡುತ್ತಾರೆ, ಏಕೆಂದರೆ ನೆನಪಿನಿಂದಲೇ ಹಳೆಯ ಲೆಕ್ಕಾಚಾರ ಸಮಾಪ್ತಿಯಾಗಬೇಕು. ಅವರು ತಿಳಿದುಕೊಂಡಿರುತ್ತಾರೆ ಆತ್ಮವು ಹಳೆಯ ಲೆಕ್ಕಾಚಾರಗಳನ್ನು ಕರ್ಮಭೋಗ, ಮುಗಿಸದಿದ್ದರೆ ಅವರು ಕಠಿಣ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು ಮತ್ತು ಪದವಿಯೂ ಭ್ರಷ್ಟವಾಗುವುದು, ಪುನರ್ಜನ್ಮವೂ ಅದೇರೀತಿ ಇರುವುದು.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಬಾಪ್ದಾದಾರವರನ್ನು ಸನ್ಮುಖದಲ್ಲಿ ನೋಡುತ್ತಾರೆಂದರೆ ಮಕ್ಕಳಿಗೆ ಅಪಾರ ಖುಷಿಯ ನಶೆಯೇರುತ್ತದೆ ಮತ್ತು 5000 ವರ್ಷಗಳ ಹಿಂದೆ ಶಿವ ತಂದೆಯು ಬ್ರಹ್ಮಾರವರಲ್ಲಿ ಹೇಗೆ ಬಂದಿದ್ದರೋ ಹಾಗೆಯೇ ಬಂದಿದ್ದಾರೆಂದು ಮಕ್ಕಳು ತಿಳಿದಿದ್ದೀರಿ. ಏನು ಮಾಡಲು ಬಂದಿದ್ದಾರೆ? ಇದು ಮಕ್ಕಳಿಗೆ ನಶೆಯೇರಿರುತ್ತದೆ. ಸ್ವರ್ಗದ ಮಾಲೀಕರನ್ನಾಗಿ ಮಾಡಲು, ನಮ್ಮನ್ನು ಯೋಗ್ಯರನ್ನಾಗಿ ಮಾಡಲು ತಂದೆಯು ಬಂದಿದ್ದಾರೆಂಬುದು ಎಲ್ಲಾ ಮಕ್ಕಳಿಗೆ ತಿಳಿದಿದೆ. ನಮ್ಮನ್ನು ತಮೋಪ್ರಧಾನರಿಂದ ಸತೋಪ್ರಧಾನರಾಗುವ ಯುಕ್ತಿಗಳನ್ನು ಪದೇ-ಪದೇ ತಿಳಿಸುತ್ತಾರೆ. ಯುಕ್ತಿಯಂತೂ ಬಹಳ ಸಹಜವಾಗಿದೆ. ಅವಶ್ಯವಾಗಿ ಸಹಜವಾದ ನೆನಪನ್ನು ಮಕ್ಕಳಿಗೆ ಕಲಿಸುತ್ತಾರೆ. ಅಜ್ಞಾನ ಕಾಲದಲ್ಲಿಯೂ ತಂದೆಗೆ ಮಗನ ಜನನವಾಗುತ್ತದೆ ಎಂದರೆ ಆಸ್ತಿಗೆ ಹಕ್ಕುದಾರನು ಜನಿಸಿದನೆಂದು ತಿಳಿಯುತ್ತಾರೆ. ಈ ಸಮಯದಲ್ಲಿ ತಂದೆಯು ಬಂದು ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತಾರೆಂದು ತಿಳಿದಿದ್ದೀರಿ. ನೀವಂತೂ ಶಿವ ತಂದೆಯ ಮಕ್ಕಳೇ ಆಗಿದ್ದೀರಿ, ಆದರೆ ತಂದೆಯು ಬಂದು ತನ್ನವರನ್ನಾಗಿ ಹೇಗೆ ಮಾಡಿಕೊಂಡರು, ನಮಗೆ ತಿಳಿಸಲು ಹಾಗೂ ನಾವು ಅವರಿಂದ ಕೇಳಲು ಸಾಧ್ಯವಿದೆ. ಶಿವ ತಂದೆಯು ನಿಮ್ಮ ತಂದೆಯಾಗಿದ್ದೇನೆ ಎಂದು ಬ್ರಹ್ಮಾರವರ ತನುವಿನ ಮೂಲಕ ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆಂದು ಹೇಳುತ್ತಾರೆ. ಕೇವಲ ನೀವಾತ್ಮರು ಪತಿತರಾಗಿದ್ದೀರಿ ಆದ್ದರಿಂದ ನೀವು ಮುಕ್ತಿ ಹಾಗೂ ಜೀವನ್ಮುಕ್ತಿಧಾಮಕ್ಕೂ ಹೋಗಲು ಸಾಧ್ಯವಿಲ್ಲ, ನೀವೆಲ್ಲರೂ ಒಬ್ಬ ತಂದೆಯ ಮಕ್ಕಳಾಗಿದ್ದೀರಿ. ಎಲ್ಲರೂ ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ. ಅನೇಕಾನೇಕ ಮಕ್ಕಳಿದ್ದಾರೆ, ವೃದ್ಧಿಯಂತೂ ಆಗುತ್ತಲೇ ಇರುತ್ತದೆ, ದತ್ತು ತೆಗೆದುಕೊಳ್ಳುತ್ತಲೇ ಇರುತ್ತಾರೆ. ಹೇ ಆತ್ಮಗಳೇ, ಈಗ ನೀವು ನನ್ನ ಸಂತಾನರಾಗಿದ್ದೀರಿ. ತಮ್ಮನ್ನು ತಾವು ಆತ್ಮನೆಂದು ತಿಳಿದುಕೊಳ್ಳಬೇಕು, ನಮಗೆ ತಂದೆಯು ಸಿಕ್ಕಿದ್ದಾರೆ ಯಾರನ್ನು ನಾವು ಅರ್ಧ ಕಲ್ಪದಿಂದ ನೆನಪು ಮಾಡುತ್ತಾ ಬಂದೆವೋ ಆ ತಂದೆಯೇ ಸಿಕ್ಕಿದ್ದಾರೆ. ಇದನ್ನು ಎಂದೂ ಮರೆಯಬಾರದು. ಅರ್ಧ ಕಲ್ಪದಿಂದ ಈ ಆತ್ಮವು ಶರೀರದ ಮೂಲಕ ನೆನಪು ಮಾಡುತ್ತಲೇ ಬಂದಿದೆ. ಹೇ ಪತಿತ-ಪಾವನ, ಹೇಗೆ ದುಃಖಹರ್ತ-ಸುಖಕರ್ತ ಎಂದು ಕೂಗುತ್ತಾರೆ ಏಕೆಂದರೆ ಇದು ರಾವಣ ರಾಜ್ಯವಲ್ಲವೆ. ಭಲೆ ನಾವು ಬಹಳ ಸುಖಿಗಳಾಗಿದ್ದೇವೆ, ನಮ್ಮ ಬಳಿ ಬೇಕಾದಷ್ಟು ಹಣವಿದೆ, ಅನೇಕ ಮಿಲ್ಗಳಿವೆ, ಕಾರ್ಖಾನೆಗಳಿವೆ ಆದರೆ ಇವೆಲ್ಲವೂ ಅಲ್ಪಕಾಲದ್ದಾಗಿದೆ. ಅಂತ್ಯದಲ್ಲಿ ಬಹಳ ಅಯ್ಯೊ, ಅಯ್ಯೊ ಎನ್ನಬೇಕಾಗುತ್ತದೆ, ದುಃಖದ ಬೆಟ್ಟವೇ ಬೀಳಲಿದೆ. ಇಷ್ಟೊಂದು ಆಸ್ತಿಯೆಲ್ಲಾ ಒಂದು ಸೆಕೆಂಡಿನಲ್ಲಿ ಸಮಾಪ್ತಿಯಾಗುವುದು. ತಂದೆಯಿಂದ ನಿಮಗೆ ಒಂದು ಸೆಕೆಂಡಿನಲ್ಲಿ ಆಸ್ತಿಯು ದೊರಕುತ್ತದೆ. ಹೇಳುತ್ತಾರೆ ನಿಮಗೆ ಒಂದು ಸೆಕೆಂಡಿನಲ್ಲಿ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುತ್ತೇನೆ. ಈ ಹಳೆಯ ಪ್ರಪಂಚವು ಸಮಾಪ್ತಿಯಾಗುವುದು, ಯುದ್ಧಗಳು ನಡೆಯಲಿದೆ, ಪ್ರಾಕೃತಿಕ ವಿಕೋಪಗಳುಂಟಾಗುವುದು. ಸ್ವಚ್ಛವಾಗಬೇಕಲ್ಲವೆ! ನೀವಾತ್ಮರು ಈಗ ಪವಿತ್ರರಾಗುತ್ತಿದ್ದೀರಿ. ಬಾಪ್ದಾದಾ ಇಬ್ಬರೂ ತಿಳಿಯುತ್ತಾರೆ – ಮಕ್ಕಳು ಎಷ್ಟೊಂದು ಪರಿಶ್ರಮ ಪಡುತ್ತಾರೆ. ತಂದೆಯಿಂದ ಆಸ್ತಿಯನ್ನು ಪಡೆಯಲು ಸ್ವಲ್ಪವೇ ಕಷ್ಟ ಕೊಡುತ್ತಾರೆ? ತಮ್ಮನ್ನು ತಾವು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಅವರು ಆತ್ಮೀಯ ತಂದೆ ನಿರಾಕಾರನಾಗಿದ್ದಾರೆ. ನಾವೆಲ್ಲರೂ ಕರೆಯುತ್ತೇವಲ್ಲವೆ! ನೀವಾತ್ಮರು ಪತಿತರಿಂದ ಪಾವನರು ಹೇಗಾಗಬಹುದು ಎಂದು ತಂದೆಯು ತಿಳಿಸುತ್ತಾರೆ. ಪತಿತ-ಪಾವನನಂತೂ ಒಬ್ಬ ತಂದೆಯೇ ಆಗಿದ್ದಾರೆ. ನದಿಯ ನೀರು ಪತಿತ-ಪಾವನಿಯಾಗಿದ್ದರೆ ತಕ್ಷಣ ಹೋಗಿ ಮುಳುಗಿ ಬಂದು ಬಿಡಬೇಕಿತ್ತು. ಗಂಗಾ ಸ್ನಾನ ಬಹಳ ಮಂದಿ ಮಾಡುತ್ತಾರೆ ಆದರೂ ಇನ್ನೂ ಪತಿತರಾಗಿದ್ದಾರೆ ಏಕೆ? ಹಗಲು-ರಾತ್ರಿ ಇದೇ ವಿಚಾರ ಬರುತ್ತಿರುತ್ತದೆ – ಪತಿತ-ಪಾವನ ಸೀತಾರಾಂ ಅರ್ಥಾತ್ ಎಲ್ಲರೂ ಭಕ್ತಿನಿಯರಾಗಿದ್ದಾರೆ ಅಥವಾ ಸೀತೆಯರಾಗಿದ್ದಾರೆ. ಎಲ್ಲರ ರಕ್ಷಕ ಒಬ್ಬನೇ ರಾಮ ಪರಮಪಿತ ಪರಮಾತ್ಮನಾಗಿದ್ದಾರೆ. ಪತಿತ-ಪಾವನ ಪತಿಯರ ಪತಿ ಅವರೇ ಆಗಿದ್ದಾರೆ. ತಂದೆಯು ಬರುತ್ತಾರೆಂದರೆ ಪಾವನರನ್ನಾಗಿಯೇ ಮಾಡುತ್ತಾರೆ. ಆದ್ದರಿಂದಲೇ ನನ್ನ ಶ್ರೀಮತದಂತೆ ನಡೆಯಬೇಕು ಮತ್ತ್ಯಾವುದೇ ಮತದಂತೆ ನಡೆಯಬಾರದು. ಮನುಷ್ಯರು ಭಕ್ತಿಯಿಂದ ಭಗವಂತನು ಸಿಗುತ್ತಾನೆಂದು ಹೇಳುತ್ತಾರೆ. ಆದರೆ ಭಕ್ತರನ್ನು ರಕ್ಷಿಸು ಎಂದು ಏಕೆ ಹೇಳಬೇಕು? ಭಕ್ತರನ್ನು ರಕ್ಷಣೆ ಮಾಡಲು ಅವರಿಗೆ ಯಾವ ಕಷ್ಟ ಬಂದಿದೆ? ಯಾವುದಾದರೂ ಕಷ್ಟದ ಸಮಯದಲ್ಲಿಯೇ ರಕ್ಷಣೆ ಮಾಡುತ್ತಾರೆ. ನೀವು ಎಷ್ಟೊಂದು ದುರ್ಗತಿಯನ್ನು ಪಡೆದಿದ್ದೀರಿ! ಇದು ರೌರವ ನರಕವಾಗಿದೆ, ಎಲ್ಲರೂ ದುಃಖಿ, ರೋಗಿಗಳಾಗಿದ್ದಾರೆ. ಮನೆ-ಮನೆಯಲ್ಲಿ ನೋಡಿ, ಏನೆಲ್ಲಾ ನಡೆಯುತ್ತಿದೆ! ದುಃಖವೇ ದುಃಖ. ಆದ್ದರಿಂದ ಬಾಬಾ, ನಮ್ಮ ದುಃಖವನ್ನು ದೂರ ಮಾಡು, ಸುಖವನ್ನು ಕೊಡು ಎಂದು ಕರೆಯುತ್ತಾರೆ. ಭಾರತದಲ್ಲಿಯೇ ಸದಾ ಸುಖವಿತ್ತು ಈಗ ದುಃಖವಿದೆ. ಭಾರತದ್ದೇ ಮಾತಾಗಿದೆ, ಬೇರೆ ಖಂಡಗಳು ವಿಭಿನ್ನವಾಗಿದೆ. ಅನ್ಯ ಧರ್ಮದವರಂತೂ ನಂತರ ಬರುತ್ತಾರೆ. ಕೆಲವರದು 60 ಜನ್ಮಗಳು, ಕೆಲವರಂತೂ ಇದಕ್ಕಿಂತಲೂ ಕಡಿಮೆ ಜನ್ಮಗಳನ್ನು ಪಡೆಯುತ್ತಾರೆ. 84 ಜನ್ಮಗಳನ್ನು ದೇವತಾ ಧರ್ಮದವರೇ ತೆಗೆದುಕೊಳ್ಳುತ್ತಾರೆ ಅಂದಮೇಲೆ ಲೆಕ್ಕದ ಪ್ರಕಾರದ ಅರ್ಧ ಕಲ್ಪದ ನಂತರ ಬರುತ್ತಾರೆಂದರೆ ಅವರು 84ಕ್ಕಿಂತಲೂ ಅರ್ಧ ಜನ್ಮವನ್ನು ಪಡೆಯಬೇಕಲ್ಲವೆ! ಎಲ್ಲರೂ 84 ಜನ್ಮದ ಚಕ್ರವನ್ನು ಸುತ್ತುತ್ತಾರೆ ಎಂದಲ್ಲ. ಮನುಷ್ಯರಿಗೆ ಏನು ಬರುತ್ತದೆಯೋ ಅದನ್ನು ಹೇಳಿ ಬಿಡುತ್ತಾರೆ. ಈಗ ನೀವು ಮಕ್ಕಳು ತಂದೆಯ ಮೂಲಕ ಅವಿನಾಶಿ ಜ್ಞಾನರತ್ನಗಳ ಜೋಳಿಗೆಯನ್ನು ತುಂಬಿಸಿಕೊಳ್ಳುತ್ತಿದ್ದೀರಿ. ರತ್ನಗಳಂತೂ ಬಹಳ ಬೆಲೆ ಬಾಳುವಂತಾಗಿರುತ್ತದೆ. ತಂದೆಯಂತೂ ಬಹಳ ಸಹಜವಾಗಿ ತಿಳಿಸಿಕೊಡುತ್ತಾರೆ. ತಂದೆಯು ತಿಳಿಸುತ್ತಾರೆ – ನೀವು ಪತಿತ-ಪಾವನ ಬನ್ನಿ ಬಂದು ಪಾವನ ಮಾಡಿ ಎಂದು ಕರೆಯುತ್ತೀರಿ ಆದ್ದರಿಂದಲೇ ತಂದೆಯು ಬಂದಿದ್ದಾರೆ. ನಾವು ಪಾವನರಾಗುತ್ತೇವೆ ಅಂದಮೇಲೆ ಸ್ವರ್ಗದ ಮಾಲೀಕರಾಗುತ್ತೇವೆಂದು ನೀವೀಗ ತಿಳಿದಿದ್ದೀರಿ. ಶಿವ ತಂದೆಯು ನಮ್ಮನ್ನು ಕಲ್ಲು ಬುದ್ಧಿಯವರಿಂದ ಪಾರಸ ಬುದ್ಧಿಯವರನ್ನಾಗಿ, ಪಥ್ಥರ್ನಾಥ (ಕಲ್ಲಿನ ಸಮಾನ) ರಿಂದ ಪಾರಸನಾಥರನ್ನಾಗಿ ಮಾಡಲು ಬಂದಿದ್ದಾರೆ. ಭಕ್ತಿಮಾರ್ಗದಲ್ಲಂತೂ ಎಲ್ಲವನ್ನೂ ಕಲ್ಲಿನಿಂದಲೇ ಮಾಡಲ್ಪಟ್ಟಿವೆ. ಕಲ್ಲುಗಳ ಬಳಿ ಹೋಗಿ ತಲೆ ಚಚ್ಚಿಕೊಳ್ಳುತ್ತಾರೆ. ಎಷ್ಟೇ ಪರಿಶ್ರಮ ಪಟ್ಟರೂ ಸಹ ಲಾಭ ಸಿಗುವುದಿಲ್ಲ. ಮೊದಲು ನೀವೆಲ್ಲರೂ ಬಲಿಹಾರಿಯಾಗುತ್ತಿದ್ದಿರಿ ಆದರೆ ಏನಾದರೂ ಲಾಭವಾಯಿತೆ? ದೇವಿಯ ಸಾಕ್ಷಾತ್ಕಾರವಾಗಿರಬಹುದು ಅಷ್ಟೇ. ಸಂಗಮಯುಗದಲ್ಲಿ ಒಂದೇ ಬಾರಿ ಪತಿತ-ಪಾವನ ತಂದೆಯು ಬರುತ್ತಾರೆ. ಸತ್ಯಯುಗದಲ್ಲಿ ಭಕ್ತಿಮಾರ್ಗದ ಮಾತುಗಳೇ ಇರುವುದಿಲ್ಲ. ತಂದೆಯು ಎಂದೂ ಕತ್ತನ್ನು ಕತ್ತರಿಸಿಕೊಳ್ಳಿ, ಇದನ್ನು ಮಾಡಿ ಎಂದು ಹೇಳುವುದಿಲ್ಲ. ಭಕ್ತಿಮಾರ್ಗದಲ್ಲಿ ಅನೇಕ ಪ್ರಕಾರವಾಗಿ ಏನೆನೆಲ್ಲಾ ಮಾಡುತ್ತಾ ಬಂದಿದ್ದಾರೆ! ಮುಂದೆ ಮನುಷ್ಯರನ್ನೂ ಸಹ ಬಲಿ ಕೊಡುತ್ತಿದ್ದರು, ನೀವು ಸುಧಾರಣೆಯಾಗಿದ್ದಾಗ ದೇವತೆಗಳಾಗಿದ್ದಿರಿ ಆದರೆ ಈಗ ಕಲ್ಲು ಬುದ್ಧಿಯವರಾಗಿದ್ದೀರಿ. ನಿಮಗೆ ಸ್ವರ್ಗದ ರಾಜ್ಯಭಾಗ್ಯ ದೊರಕಿತ್ತು, ಎಷ್ಟೊಂದು ಚಿನ್ನ ,ವಜ್ರಗಳ ಮಹಲುಗಳಿತ್ತು, ಅಪಾರ ಧನವಿತ್ತು, ಅದೆಲ್ಲವನ್ನೂ ಏನು ಮಾಡಿದಿರಿ? ಈಗಂತೂ ನೀವು ಬಹಳ ದುಃಖಿಗಳಾಗಿದ್ದೀರಿ. ವಾಸ್ತವದಲ್ಲಿ ನೀವು ದೇವಿ-ದೇವತಾ ಧರ್ಮದವರಾಗಿದ್ದೀರಿ. ಈಗ ನೀವು ರಜೋ, ತಮೋದಲ್ಲಿ ಬಂದಿದ್ದೀರಿ. ನೀವು ದೇವತಾ ಧರ್ಮದವರಾಗಿದ್ದಿರಿ, ಮತ್ತೆ ನೀವೇಕೆ ನಿಮ್ಮನ್ನು ಹಿಂದೂಗಳೆಂದು ಕರೆದುಕೊಳ್ಳುತ್ತೀರಿ? ಬೇರೆ ಎಲ್ಲಾ ಧರ್ಮದವರು ತಮ್ಮ ಧರ್ಮವನ್ನು ಒಪ್ಪಿಕೊಳ್ಳುತ್ತಾರೆ, ಧರ್ಮವಂತೂ ಒಂದೇ ಆಗಿರುತ್ತದೆಯಲ್ಲವೆ. ಮುಸಲ್ಮಾನರದು ಮುಸ್ಲಿಂ ಧರ್ಮ, ಕ್ರಿಶ್ಚಿಯನ್ನರದು ಕ್ರಿಶ್ಚಿಯನ್ ಧರ್ಮವು ನಡೆದು ಬರುತ್ತದೆ, ನಿಮ್ಮದು ಏನಾಯಿತು, ನೀವಂತೂ ಸಂಪೂರ್ಣ ಸುಖಿ, ಪವಿತ್ರರು, ಸಂಪೂರ್ಣ ನಿರ್ವಿಕಾರಿಗಳಾಗಿದ್ದಿರಿ, ಈಗ ಎಷ್ಟೊಂದು ವಿಕಾರಿಗಳಾಗಿದ್ದೀರಿ. ಅವಶ್ಯವಾಗಿ ನಾವು ಸಂಪೂರ್ಣ ನಿರ್ವಿಕಾರಿಗಳಾಗಿದ್ದೆವು ನಂತರ ಹೇಗೆ ಸಂಪೂರ್ಣ ವಿಕಾರಿಗಳಾದೆವು? ಇದು ಯಾರಿಗೂ ತಿಳಿದಿಲ್ಲ. 84 ಜನ್ಮಗಳನ್ನು ಪಡೆಯುತ್ತಾ ಸತೋದಿಂದ ತಮೋ ಆಗಿದ್ದೀರಿ. ಅವಶ್ಯವಾಗಿ ಈಗ ತಮೋಪ್ರಧಾನ, ಪತಿತರಾಗಿದ್ದೀರಿ. ಸತ್ಯಯುಗದಿಂದ ಕಲಿಯುಗಕ್ಕೆ ಬರಲೇಬೇಕಾಗಿದೆ. ಎಲ್ಲಾ ಧರ್ಮದವರು ಸತೋ, ರಜೋ, ತಮೋದಲ್ಲಿ ಬಂದೇ ಬರುತ್ತಾರೆ, ವೃದ್ಧಿ ಪಡೆಯಲೇಬೇಕಾಗಿದೆ. ನೀವೂ ಸಹ ವೃಕ್ಷದಲ್ಲಿದ್ದೀರಲ್ಲವೆ. ವೃಕ್ಷದಲ್ಲಿ ನೋಡಿದಾಗ ಅಂತ್ಯದಲ್ಲಿ ಬ್ರಹ್ಮನು ನಿಂತಿದ್ದಾರೆ, ವೃಕ್ಷದ ಮೇಲೆ ಶಿಖೆಯಲ್ಲಿ ಬ್ರಹ್ಮನೇ 84 ಜನ್ಮಗಳನ್ನು ಪಡೆದು ಅಂತ್ಯದಲ್ಲಿ ನಿಂತಿದ್ದಾರೆ. ನೀವೀಗ ಕೆಳಗಡೆ ಬ್ರಾಹ್ಮಣರು ಕುಳಿತಿದ್ದೀರಿ ನಂತರ ಅಂತ್ಯದಲ್ಲಿ ಪತಿತ, ಶೂದ್ರರಾಗಿದ್ದೀರಿ. ಮತ್ತೆ ಕೆಳಗೆ ರಾಜಯೋಗವನ್ನು ಕಲಿಯುತ್ತಿದ್ದೀರಿ. ನೀವೇ ಶೂದ್ರರಾಗಿದ್ದಿರಿ, ಈಗ ಬ್ರಾಹ್ಮಣರಾಗುತ್ತೀರಿ. ಇದು ಬಹಳ ದೊಡ್ಡ ತಿಳುವಳಿಕೆಯ ಮಾತಾಗಿದೆ. ಈಗ ಈ ವೃಕ್ಷದಲ್ಲೆ ಬಹಳ ಹೆಚ್ಚಿನ ತಿಳುವಳಿಕೆಯಿದೆ, ಈಗ ನೀವು ರಾಜಯೋಗದ ತಪಸ್ಸನ್ನು ಮಾಡುತ್ತಿದ್ದೀರಿ, ನಿಮ್ಮದೇ ನೆನಪಾರ್ಥವು ಇಲ್ಲಿ ಇದೆ. ಇದು ಚೈತನ್ಯ ದಿಲ್ವಾಡಾ ಮಂದಿರವಾಗಿದೆ, ಅದು ಜಡ ಮಂದಿರವಾಗಿದೆ. ಸತ್ಯಯುಗದಲ್ಲಿ ಇದು ಇರಲಿಲ್ಲ, ಈ ಸಮಯದಲ್ಲಿ ನೀವು ನಿಮ್ಮ ನೆನಪಾರ್ಥವನ್ನು ನೋಡುತ್ತೀರಿ. ನೀವು ಪ್ರಾಕ್ಟಿಕಲ್ನಲ್ಲಿ ಸತ್ಯ-ಸತ್ಯವಾದ ದಿಲ್ವಾಡಾ ಮಂದಿರದಲ್ಲಿ, ಚೈತನ್ಯದಲ್ಲಿ ಕುಳಿತಿದ್ದೀರಿ. ಸ್ವರ್ಗದ ಸ್ಥಾಪನೆಯಾಗುತ್ತಿದೆ ನಂತರ ಸ್ವರ್ಗದಲ್ಲಿ ಬರುತ್ತೀರೆಂದರೆ ಈ ಮಂದಿರಗಳು ಏನೂ ಇರುವುದಿಲ್ಲ. ಈ ಮಮ್ಮಾ, ಬಾಬಾ ಮತ್ತು ನಾವು ಮಕ್ಕಳು ಕುಳಿತಿದ್ದೇವೆ. ಕಲ್ಪದ ಹಿಂದಿನಂತೆಯೇ ಇದು ನಿಮ್ಮದೇ ಮಂದಿರವಾಗಿದೆ, ಹೆಸರನ್ನು ಮಧುಬನ ಎಂದು ಇಡಲಾಗಿದೆ. ಇದು ಚೈತನ್ಯ ದಿಲ್ವಾಡಾ ಮಂದಿರವಾಗಿದೆ. ನಂತರ ಭಕ್ತಿಮಾರ್ಗವು ಪ್ರಾರಂಭವಾದಾಗ ಮತ್ತೆ ಈ ಮಂದಿರಗಳನ್ನು ಕಟ್ಟುತ್ತಾರೆ. ತಂದೆಯು ನಿಮ್ಮನ್ನು ಎಷ್ಟೊಂದು ಧನವಂತರನ್ನಾಗಿ ಮಾಡಿದ್ದರು, ಆದ್ದರಿಂದ ನೀವು ಅವರ ಮಂದಿರಗಳನ್ನು ಮಾಡುತ್ತೀರಿ. ಶಿವನ ಮಂದಿರವೊಂದನ್ನೇ ಮಾಡುವುದಿಲ್ಲ. ಯಥಾ ಶಕ್ತಿಯ ಅನುಸಾರವಾಗಿ ಮಂದಿರಗಳನ್ನು ಕಟ್ಟುತ್ತಾರೆಂದು ಎಲ್ಲರೂ ತಿಳಿದಿದ್ದಾರೆ.

ನಾವೇ ಪೂಜ್ಯರಾಗಿದ್ದೆವು ನಂತರ ದ್ವಾಪರದಿಂದ ಪೂಜಾರಿಗಳಾಗುತ್ತೇವೆಂದು ನೀವೇ ತಿಳಿದಿದ್ದೀರಿ. ಶಿವ ತಂದೆಯು ಎಷ್ಟೊಂದು ಸಾಹುಕಾರರನ್ನಾಗಿ ಮಾಡುತ್ತಾರೆ, ಭಕ್ತಿಯಲ್ಲಿ ನಂತರ ನೀವೇ ಅವರ ಮಂದಿರಗಳನ್ನು ಕಟ್ಟುತ್ತೀರಿ, ಈ ಮಾತುಗಳನ್ನು ನೀವೀಗ ತಿಳಿದಿದ್ದೀರಿ ಅಂದಮೇಲೆ ಈಗ ಪುರುಷಾರ್ಥ ಮಾಡಿ ನಂತರ ರಾಜರಿಗೂ ರಾಜರಾಗಬೇಕಲ್ಲವೆ. ಸತ್ಯಯುಗದಲ್ಲಿ ಇರುವವರನ್ನು ಮಹಾರಾಜರೆಂದು, ತ್ರೇತಾದಲ್ಲಿರುವವರನ್ನು ರಾಜರೆಂದು ಕರೆಯಲಾಗುವುದು. ನಂತರ ಪ್ರಪಂಚವು ಪತಿತವಾಗುತ್ತದೆ ಅಂದಮೇಲೆ ಮಹಾರಾಜರು ಪತಿತರಾಗುತ್ತಾರೆ, ರಾಜರೂ ಪತಿತರಾಗುತ್ತಾರೆ. ಅವರು ನಿರ್ವಿಕಾರಿ ಮಹಾರಾಜರುಗಳ ಮಂದಿರಗಳನ್ನು ಕಟ್ಟಿಸಿ ಪೂಜೆ ಮಾಡುತ್ತಾರೆ. ಮೊಟ್ಟ ಮೊದಲು ಶಿವನ ಮಂದಿರವನ್ನು ಕಟ್ಟುತ್ತಾರೆ ನಂತರ ದೇವತೆಗಳ ಮಂದಿರಗಳನ್ನು ಕಟ್ಟುತ್ತಾರೆ. ತಾವೇ ಮಂದಿರವನ್ನು ಕಟ್ಟಿ ಪೂಜೆ ಮಾಡುತ್ತಾರೆ, 84 ಜನ್ಮಗಳನ್ನು ಭೋಗಿಸುತ್ತಾರಲ್ಲವೆ. ಅರ್ಧಕಲ್ಪ ನೀವು ಪೂಜ್ಯರು ನಂತರ ಅರ್ಧಕಲ್ಪ ಪೂಜಾರಿಗಳಾಗುತ್ತೀರಿ. ಭಗವಂತನೇ ಪೂಜ್ಯ ಮತ್ತು ಪೂಜಾರಿಯಾಗುತ್ತಾನೆಂದು, ಅವನೇ ಎಲ್ಲವನ್ನೂ ಕೊಡುತ್ತಾನೆ ಎಲ್ಲವನ್ನೂ ಕಸಿದುಕೊಳ್ಳುತ್ತಾನೆಂದು ಮನುಷ್ಯರು ತಿಳಿಯುತ್ತಾರೆ. ಅಂದಮೇಲೆ ಭಗವಂತನೇ ಕೊಟ್ಟನು, ತೆಗೆದುಕೊಂಡನೆಂದ ಮೇಲೆ ಚಿಂತೆಯೇಕೆ? ನೀವೆಲ್ಲರೂ ನಿಮಿತ್ತರಲ್ಲವೆ. ಇನ್ನು ಅಳುವ ಮಾತೇನು? ತಂದೆಯು ಕುಳಿತು ಆತ್ಮಗಳಿಗೆ ತಿಳಿಸುತ್ತಾರೆ – ಈಗ ನೀವು ನಂಬರ್ವಾರ್ ಆಗಿ ಆತ್ಮಾಭಿಮಾನಿಗಳಾಗುತ್ತೀರಿ. ಕೆಲವರಂತೂ ಅವಶ್ಯವಾಗಿ ನೆನಪು ಮಾಡುವುದೇ ಇಲ್ಲ, ದೇಹೀ-ಅಭಿಮಾನಿಗಳು ಆಗುವುದೇ ಇಲ್ಲ. ಅರೆ! ನೀವಂತೂ ಆತ್ಮರಾಗಿದ್ದೀರಿ, ನಿಮಗೆ ಪರಮಾತ್ಮನು ಓದಿಸುತ್ತಿದ್ದಾರೆ, ಇದನ್ನು ಎಷ್ಟು ಬಾರಿ ತಿಳಿಸಲಾಗಿದೆ! ಆತ್ಮದಲ್ಲಿಯೇ ಸಂಸ್ಕಾರವಿರುತ್ತದೆ. ಆತ್ಮವೇ ಬ್ಯಾರಿಸ್ಟರ್, ಮೆಜಿಸ್ಟ್ರೇಟ್ ಇತ್ಯಾದಿ ಆಗುತ್ತದೆ, ನಾಳೆ ಏನಾಗುತ್ತಾರೆ? ಒಂದುವೇಳೆ ಆತ್ಮವು ಚೆನ್ನಾಗಿ ನೆನಪು ಮಾಡಿದರೆ ನಂತರ ಅಮರಲೋಕದಲ್ಲಿ ಹೋಗಿ ಜನ್ಮ ಪಡೆಯಬಹುದು, ಮೃತ್ಯುಲೋಕದಲ್ಲಿ ಮತ್ತೆ ಜನ್ಮ ಪಡೆಯುವ ಅವಶ್ಯಕತೆಯಿಲ್ಲ. ಒಂದುವೇಳೆ ಲೆಕ್ಕಾಚಾರವು ಉಳಿದಿದ್ದರೆ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಶಿಕ್ಷೆಯಿಂದ ಸಮಾಪ್ತಿ ಮಾಡಿದರೆ ನಂತರ ಶ್ರೇಷ್ಠ ಪದವಿಯು ಸಿಗುವುದಿಲ್ಲ. ಕರ್ಮದ ಗುಹ್ಯಗತಿಯನ್ನು ತಂದೆಯು ಮಕ್ಕಳಿಗೆ ತಿಳಿಸಿಕೊಡುತ್ತಾರೆ. ಸತ್ಯಯುಗವು ಸತೋಪ್ರಧಾನವಾಗಿದೆ ಎಂದು ಮಕ್ಕಳು ತಿಳಿದಿದ್ದೀರಿ, ಅಲ್ಲಿನ ಪ್ರತಿಯೊಂದು ವಸ್ತುವು ಸತೋಪ್ರಧಾನವಾಗಿರುವುದು. ಕೃಷ್ಣನು ಹಸುಗಳನ್ನು ಸಂಭಾಲನೆ ಮಾಡುತ್ತಿದ್ದನೆಂದು ಹೇಳುತ್ತಾರೆ. ರಾಜರು ಹಸುಗಳನ್ನು ಸಂಭಾಲನೆ ಮಾಡುತ್ತಾರೆಯೇ! ಅಂತಹ ಮಾತುಗಳಿರಲು ಸಾಧ್ಯವೇ ಇಲ್ಲ. ಸತ್ಯಯುಗದಲ್ಲಿ ಹಸುಗಳು ಬಹಳ ಫಸ್ಟ್ಕ್ಲಾಸ್ ಆಗಿರುತ್ತವೆ, ಅವುಗಳನ್ನು ಕಾಮಧೇನು ಎಂದೂ ಸಹ ಹೇಳುತ್ತಾರೆ. ಜಗದಂಬಾ ಸರಸ್ವತಿಯೂ ಸಹ ಕಾಮಧೇನುವಾಗಿದ್ದಾರೆ. 21 ಜನ್ಮಗಳಿಗೆ ಮನೋಕಾಮನೆಗಳನ್ನು ಪೂರ್ಣ ಮಾಡುವವರಾಗಿದ್ದಾರೆ ಅಂದಮೇಲೆ ನೀವೂ ಸಹ ಕಾಮಧೇನು ಅಲ್ಲವೆ. ಅದೇ ಹೆಸರನ್ನು ಹಸುಗಳಿಗೆ ಇಟ್ಟಿದ್ದಾರೆ, ಆ ಹಸುಗಳು ಬಹಳ ಹಾಲನ್ನು ಕೊಡುತ್ತವೆ. ರಾಜರುಗಳ ಮನೆಯಲ್ಲಿಯೂ ಸಹ ಬಹಳ ಫಸ್ಟ್ಕ್ಲಾಸ್ ಆಗಿರುವ ಹಸುಗಳಿರುತ್ತವೆ, ರಾಜರ ಬಳಿ ಒಳ್ಳೊಳ್ಳೆಯ ಹಸುಗಳಿದ್ದವು ಅಂದಮೇಲೆ ಸ್ವರ್ಗವು ಎಷ್ಟೊಂದು ಸುಂದರವಾಗಿರಬಹುದು! ಅಲ್ಲಿ ಯಾವುದೇ ದುರ್ವಾಸನೆ ಇತ್ಯಾದಿಗಳು ಖಂಡಿತ ಬರುವುದಿಲ್ಲ.

ನಾನು ನಿಮ್ಮನ್ನು ಹೂಗಳನ್ನಾಗಿ ಮಾಡಿ ಜೊತೆಯಲ್ಲಿ ಕರೆದುಕೊಂಡು ಹೋಗಲು ಬಂದಿದ್ದೇನೆಂದು ತಿಳಿಸುತ್ತಾರೆ. ಪತಿತ-ಪಾವನ ಬನ್ನಿ ಎಂದು ಕರೆಯುತ್ತೀರಿ, ಪತಿತ ಪ್ರಪಂಚ, ಪತಿತ ಶರೀರದಲ್ಲಿಯೇ ಬನ್ನಿ ಎಂದು ಕರೆಯುತ್ತೀರಿ. ಇದು ಪತಿತಶರೀರ, ಅದು ಪಾವನ ಫರಿಶ್ತಾ ಆಗಿದೆ. ಹೋಲಿಕೆಯನ್ನು ತೋರಿಸುತ್ತಾರಲ್ಲವೆ. ನೀವೂ ಸಹ ಪತಿತರಿಂದ ಈ ಪಾವನ ಫರಿಶ್ತೆಗಳಂತೆ ಆಗುತ್ತೀರಿ. ಸತ್ಯಯುಗೀ ದೇವತೆಗಳಿಗೆ ಡೀಟಿ (ದೈವೀ) ಎಂದು ಹೇಳುತ್ತಾರೆ. ಸೂಕ್ಷ್ಮವತನವಾಸಿಗಳಿಗೆ ಫರಿಶ್ತೆಗಳೆಂದು ಹೇಳುತ್ತಾರೆ. ನೀವೀಗ ಪವಿತ್ರ ಫರಿಶ್ತೆಗಳಾಗುತ್ತಿದ್ದೀರಿ. ತಂದೆಯು ಎಷ್ಟೊಂದು ಸಹಜವಾದ ಶಿಕ್ಷಣ ಕೊಡುತ್ತಾರೆ! ಇಲ್ಲಿ ನೀವು ಬರುತ್ತೀರೆಂದ ಮೇಲೆ ಹೊರಗಡೆಯ ಯಾವುದೇ ಮಿತ್ರ ಸಂಬಂಧಿ, ಮನೆ-ಮಠ, ವ್ಯಾಪಾರ ಇತ್ಯಾದಿಗಳ ನೆನಪು ಬರಬಾರದು. ನೀವು ತಂದೆಯ ಸನ್ಮುಖದಲ್ಲಿ ಬಂದಿದ್ದೀರಲ್ಲವೆ. ಇಲ್ಲಿ ಬಂದಿದ್ದೀರೆಂದ ಮೇಲೆ ಯೋಗದಿಂದ ಸಂಪಾದನೆ ಮಾಡುವುದರಲ್ಲಿ ತೊಡಗಿ ಬಿಡಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಶಿಕ್ಷೆಗಳಿಂದ ಮುಕ್ತರಾಗಬೇಕೆಂದರೆ ಹಳೆಯ ಎಲ್ಲಾ ಲೆಕ್ಕಾಚಾರವನ್ನು ಯೋಗಬಲದಿಂದ ಸಮಾಪ್ತಿ ಮಾಡಬೇಕು. ನಿಮಿತ್ತರಾಗಿ ಎಲ್ಲವನ್ನೂ ಸಂಭಾಲನೆ ಮಾಡಬೇಕು. ಯಾವುದೇ ಮಾತಿನ ಚಿಂತೆಯನ್ನಿಟ್ಟುಕೊಳ್ಳಬಾರದು, ಆತ್ಮಾಭಿಮಾನಿ ಆಗಬೇಕಾಗಿದೆ.

2. ಇದು ಸಂಪಾದನೆ ಮಾಡುವ ಸಮಯವಾಗಿದೆ, ಇದರಲ್ಲಿ ಮನೆ-ಮಠ, ವ್ಯಾಪಾರ ಇತ್ಯಾದಿಗಳನ್ನು ನೆನಪು ಮಾಡಬಾರದು. ಫರಿಶ್ತೆಗಳಾಗಲು ಒಬ್ಬ ತಂದೆಯ ನೆನಪಿನಲ್ಲಿರುವ ಸಂಪೂರ್ಣ ಪುರುಷಾರ್ಥವನ್ನು ಮಾಡಬೇಕಾಗಿದೆ.

ವರದಾನ:-

ವರ್ತಮಾನ ಸಮಯದಲ್ಲಿ ವಿಶ್ವದ ಮೆಜಾರಿಟಿ ಆತ್ಮರಿಗೆ ಸತ್ಯ ಶಾಂತಿಯ ಅತ್ಯವಶ್ಯಕತೆಯಿದೆ. ದಿನ ಕಳೆದಂತೆ ಅಶಾಂತಿಯ ಅನೇಕ ಕಾರಣಗಳು ಹೆಚ್ಚಾಗುತ್ತಿವೆ ಹಾಗೂ ಹೆಚ್ಚಾಗುತ್ತಿರುತ್ತವೆ. ಒಂದುವೇಳೆ ತಾವು ಅಶಾಂತರಾಗಿ ಇರುವುದಿಲ್ಲ, ಅನ್ಯರ ಅಶಾಂತಿಯ ವಾಯುಮಂಡಲ, ವಾತಾವರಣವು ಶಾಂತ ಸ್ಥಿತಿಯಲ್ಲಿ ಕುಳಿತುಕೊಳ್ಳುವುದಕ್ಕೆ ಬಿಡುವುದಿಲ್ಲ. ಅಶಾಂತಿಯ ಒತ್ತಡದ ಅನುಭವವು ಹೆಚ್ಚುತ್ತದೆ. ಇಂತಹ ಸಮಯದಲ್ಲಿ ತಾವು ಮಾಸ್ಟರ್ ಶಾಂತಿ ಸಾಗರನ ಮಕ್ಕಳು ಅಶಾಂತಿಯ ಸಂಕಲ್ಪಗಳನ್ನು ಲುಪ್ತಗೊಳಿಸುತ್ತಾ, ವಿಶೇಷವಾಗಿ ಶಾಂತಿಯ ಪ್ರಕಂಪನಗಳನ್ನು ಹರಡಿಸಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top