31 December 2021 KANNADA Murli Today | Brahma Kumaris

Read and Listen today’s Gyan Murli in Kannada

December 30, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಸದಾ ಸುಖಿಯಾಗಿರಿ, ಎಷ್ಟು ನೆನಪು ಮಾಡುತ್ತೀರಿ ಅಷ್ಟು ಸುಖ ಸಿಗುತ್ತದೆ, ನೀವು ಮಕ್ಕಳಿಗೆ ತಂದೆಯು ಇದೇ ಆಶೀರ್ವಾದವನ್ನು ಕೊಡುತ್ತಾರೆ”

ಪ್ರಶ್ನೆ:: -

ಸಂಗಮಯುಗದಲ್ಲಿ ನೀವು ಮಕ್ಕಳು ಅಂತಹ ಯಾವ ಶುಭ ಕಾರ್ಯವನ್ನು ಮಾಡುತ್ತೀರಿ ಅದನ್ನು ಇಡೀ ಕಲ್ಪದಲ್ಲಿ ಮಾಡುವುದಿಲ್ಲ?

ಉತ್ತರ:-

ಪವಿತ್ರರಾಗುವುದು ಹಾಗು ಅನ್ಯರನ್ನು ಮಾಡುವುದೇ ಎಲ್ಲದಕ್ಕಿಂತ ದೊಡ್ಡ ಶುಭ ಕಾರ್ಯವಾಗಿದೆ. ಪವಿತ್ರರಾಗುವುದರಿಂದ ನೀವು ಪವಿತ್ರ ಪ್ರಪಂಚದ ಮಾಲೀಕರಾಗಿ ಬಿಡುತ್ತೀರಿ. ಪವಿತ್ರರಾಗುವ ಯುಕ್ತಿಯನ್ನು ತಂದೆಯು ತಿಳಿಸಿದ್ದಾರೆ – ಮಧುರ ಮಕ್ಕಳೇ, ನೀವು ನನ್ನನ್ನು ಪ್ರೀತಿಯಿಂದ ನೆನಪು ಮಾಡಿರಿ. ದೇಹೀ-ಅಭಿಮಾನಿಯಾಗಿ. ಇಂತಹ ಯುಕ್ತಿಯನ್ನು ಎಲ್ಲರಿಗೂ ತಿಳಿಸುತ್ತಿರಬೇಕು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಯಾರು ಇದೆಲ್ಲಾ ಆಟವನ್ನು ರಚಿಸಿದವರು……

ಓಂ ಶಾಂತಿ. ಶಿವ ತಂದೆಯು ಕುಳಿತು ತನ್ನ ಮಕ್ಕಳಿಗೆ, ಸಾಲಿಗ್ರಾಮಗಳಿಗೆ ತಿಳಿಸುತ್ತಾರೆ. ಶಿವ ತಂದೆಯನ್ನಂತು ಎಲ್ಲರೂ ತಿಳಿದುಕೊಂಡಿರುತ್ತಾರೆ. ಇದೂ ಸಹ ತಿಳಿದಿದೆ – ಶಿವತಂದೆಗೆ ತನ್ನ ಶರೀರ ಇಲ್ಲ. ಶಿವನ ಪ್ರತಿಮೆಯಂತು ಒಂದೇ ಆಗಿದೆ. ಇದರಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಅವರನ್ನು ಲಿಂಗದ ಆಕಾರದಲ್ಲಿ ತೋರಿಸುತ್ತಾರೆ. ಹೇಗೆ ಮನುಷ್ಯರಿದ್ದಾರೆ, ಅವರಲ್ಲಿ ಯಾವುದೇ ವ್ಯತ್ಯಾಸ ಬರಲು ಸಾಧ್ಯವಿಲ್ಲ. ಕಣ್ಣು, ಕಿವಿ, ಮೂಗು… ಎಲ್ಲರಿಗೂ ಇದೆ. ಯಾವುದೇ ಆತ್ಮವು ಬಚ್ಚಿಟ್ಟುಕೊಂಡಿಲ್ಲ. ಹೇಗೆ ಮನುಷ್ಯರು, ದೇವತೆಗಳ ಪೂಜೆಯಾಗುತ್ತದೆಯೋ ಹಾಗೆಯೇ ಆತ್ಮರು ಹಾಗೂ ಪರಮಾತ್ಮನ ಪೂಜೆಯೂ ಆಗುತ್ತದೆ. ಶಿವನ ಮಂದಿರದಲ್ಲಿ ಬಹಳಷ್ಟು ಚಿಕ್ಕ-ಚಿಕ್ಕ ಸಾಲಿಗ್ರಾಮಗಳನ್ನು ಇಟ್ಟಿರುತ್ತಾರೆ, ಅದರ ಪೂಜೆಯೂ ನಡೆಯುತ್ತದೆ. ಮನುಷ್ಯರದು ಎರಡು ಪ್ರಕಾರದ ಪೂಜೆಯಾಗುತ್ತದೆ – ಒಂದು ವಿಕಾರಿಗಳ ಪೂಜೆ, ಇನ್ನೊಂದು ನಿರ್ವಿಕಾರಿಗಳ ಪೂಜೆ, ಇದಕ್ಕೆ ಭೂತ ಪೂಜೆ ಎಂದು ಹೇಳಲಾಗುತ್ತದೆ ಏಕೆಂದರೆ ಇಲ್ಲಂತು ಯಾವುದೇ ಶರೀರವೂ ಪವಿತ್ರವಾಗಿಲ್ಲ. 5 ತತ್ವಗಳಿಂದ ಮಾಡಲ್ಪಟ್ಟಿದ್ದಾಗಿದೆ. ಮಣ್ಣಿನಿಂದ ಮಾಡಿರುವ ಭೂತವಾಗಿದೆ. ಮೂರ್ತಿಗಳನ್ನು ತಯಾರಿಸುತ್ತಾರೆ, ಅದೂ ಸಹ ಮಣ್ಣು ಮತ್ತು ನೀರನ್ನು ಸೇರಿಸಿ ಮಾಡುತ್ತಾರೆ ನಂತರ ಅದನ್ನು ಒಣಗಿಸಲು ಬಿಸಿಲು ಬೇಕಾಗುತ್ತದೆ. ಬಿಸಿಲು ಸಹ ಬೆಂಕಿಯ ಅಂಶವಾಗಿದೆ, ಹಿಂದಿನ ಕಾಲದಲ್ಲಿ ಬಿಸಿಲಿನಿಂದ ಬೆಂಕಿ ಹಚ್ಚುತ್ತಿದ್ದರು. ಅಂದಮೇಲೆ ಮಕ್ಕಳಿಗೆ ಇದೂ ಸಹ ತಿಳಿದಿದೆ – ನಿರಾಕಾರನ ಪೂಜೆಯೂ ನಡೆಯುತ್ತದೆ. ಸಾಕಾರ ದೇವತೆಗಳದೂ ಸಹ ಪೂಜೆಯಾಗುತ್ತದೆ, ಅಂದಮೇಲೆ ಮನುಷ್ಯರ ಪೂಜೆಯೂ ಆಗುತ್ತದೆ. ದೇವತೆಗಳು ಪವಿತ್ರರಾಗಿದ್ದಾರೆ, ಇಲ್ಲಿ ಅಪವಿತ್ರರಿದ್ದಾರೆ. ಉಳಿದಂತೆ ಪೂಜೆಯಂತು ಭೂತ(5 ತತ್ವಗಳ)ಗಳದ್ದೇ ಪೂಜೆಯಾಗುತ್ತದೆ. ಆತ್ಮ ಏನಾಗಿದೆ ಎಂಬುದನ್ನು ಮನುಷ್ಯರು ತಿಳಿದಿಲ್ಲ. ತಮ್ಮನ್ನು ತಾವು ಅನುಭವ ಮಾಡಿ ಎಂದು ಹೇಳಲಾಗುತ್ತದೆ. ಆತ್ಮವನ್ನು ಅನುಭವ ಮಾಡಿ, ಆತ್ಮವು ಬಿಂದು ಸಮಾನವಾಗಿದೆ. ಕೆಲವರು ಸಾಕ್ಷಾತ್ಕಾರವನ್ನೂ ನೋಡಿದ್ದಾರೆ. ವರ್ಣನೆ ಮಾಡುತ್ತಾರೆ – ಅದು ಚಿಕ್ಕದಾದ ಪ್ರಕಾಶವಾಗಿದೆ, ಅದರಿಂದ ಬಂದು ನಮ್ಮಲ್ಲಿ ಪ್ರವೇಶವಾಯಿತು. ಒಳ್ಳೆಯದು – ಇದರಿಂದ ಲಾಭವಂತೂ ಏನೂ ಆಗುವುದಿಲ್ಲ. ನಾರದ ಮತ್ತು ಮೀರಾ ಭಕ್ತಿಯಲ್ಲಿ ಪ್ರಸಿದ್ಧರೆಂದು ಗಾಯನ ಮಾಡುತ್ತಾರೆ. ಭಲೆ ಸಾಕ್ಷಾತ್ಕಾರವಾಗುತ್ತದೆ ಆದರೆ ಏಣಿಯನ್ನು ಇಳಿಯುತ್ತಾರಲ್ಲವೆ. ಅಲ್ಪಕಾಲಕ್ಕಾಗಿ ಲಾಭವಾಗುತ್ತದೆ, ಈಗ ನೀವು ಮಕ್ಕಳು ಆತ್ಮಾಭಿಮಾನಿ ಆಗಿದ್ದೀರಿ. ಮುಂಚೆ ನಾವು ದೇಹಾಭಿಮಾನಿಯಾಗಿದ್ದೆವು ಎಂದು ತಿಳಿದಿದ್ದೀರಿ, ಈಗ ಇದು ಹೊಸ ಮಾತುಗಳಾಗಿವೆ. ಆತ್ಮವು ಓದುತ್ತಿದೆ. ತಂದೆಯು ಓದಿಸುತ್ತಿದ್ದಾರೆ ಎಂಬುದನ್ನು ಪಕ್ಕಾ ಮಾಡಿಕೊಳ್ಳಬೇಕಾಗಿದೆ. ಇದಂತು ಮೊದಲ ಪಕ್ಕಾ ನಿಶ್ಚಯವಾಗಬೇಕು. ಆತ್ಮಾಭಿಮಾನಿ ಆಗಬೇಕಾಗಿದೆ, ಅರ್ಧಕಲ್ಪ ಆತ್ಮಾಭಿಮಾನಿಯಾಗುತ್ತೀರಿ ನಂತರ ಅರ್ಧಕಲ್ಪ ದೇಹಾಭಿಮಾನಿಯಾಗುತ್ತೀರಿ. ಸತ್ಯಯುಗದಲ್ಲಿ ಆತ್ಮನಲ್ಲಿ ನಾವು ಪರಮಾತ್ಮನನ್ನು ತಿಳಿದಿದ್ದೇವೆ ಎಂಬ ಶುದ್ಧ ಅಭಿಮಾನವಿರುವುದಿಲ್ಲ. ಶುದ್ಧ ಅಭಿಮಾನ ಮತ್ತು ಅಶುದ್ಧ ಅಭಿಮಾನವಿದೆಯಲ್ಲವೆ. ಕರ್ತತ್ಯವೂ ಶುಭ ಹಾಗೂ ಅಶುಭವಾಗುತ್ತದೆ. ಶುಭ ಕಾರ್ಯದಲ್ಲಿ ನಿಧಾನಿಸಬಾರದು ಎಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ – ನಾನು ನಿಮ್ಮನ್ನು ಎಷ್ಟು ಒಳ್ಳೆಯವರನ್ನಾಗಿ ಮಾಡುತ್ತೇನೆ. ನೀವು ಪವಿತ್ರರಾಗುತ್ತೀರೆಂದರೆ ಪವಿತ್ರ ಪ್ರಪಂಚದ ಮಾಲೀಕರಾಗಿ ಬಿಡುತ್ತೀರಿ. ಇಂತಹ ಶುಭ ಕಾರ್ಯ ಮತ್ತ್ಯಾವುದೂ ಆಗಲು ಸಾಧ್ಯವಿಲ್ಲ. ನೀವು ಪಾವನರಿದ್ದಿರಿ. ಈಗ ಗಳಿಗೆ-ಗಳಿಗೆ ತಂದೆಯು ತಿಳಿಸುತ್ತಾರೆ – ದೇಹೀ-ಅಭಿಮಾನಿಯಾಗಿರಿ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯೊಂದಿಗೆ ಪೂರ್ಣ ಪ್ರೀತಿಯನ್ನಿಡಬೇಕಾಗಿದೆ. ಆತ್ಮದ ಸಂಬಂಧವೇ ಒಬ್ಬ ತಂದೆಯೊಂದಿಗಿದೆ. ಅವರು ಕುಳಿತು ಓದಿಸುತ್ತಾರೆ. ಇದು ಪ್ರಾಕ್ಟಿಕಲ್ ಅನುಭವದ ಮಾತಾಗಿದೆ. ಬೇಹದ್ದಿನ ತಂದೆಯಿಂದ ನಾವು ಬೇಹದ್ದಿನ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ತಂದೆಯೂ ತಿಳಿಸುತ್ತಾರೆ – ಹೇ ಮಧುರಾತಿ ಮಧುರ ಮಕ್ಕಳೇ ಎಂದು ಆತ್ಮಗಳಿಗೇ ಹೇಳುತ್ತಾರೆ. ಆತ್ಮವು ಈ ಕಿವಿಗಳಿಂದ ಕೇಳಿಸಿಕೊಳ್ಳುತ್ತದೆ. ನೀವು ತಿಳಿದಿದ್ದೀರಿ – ಇಂದು ನಮ್ಮನ್ನು ಯಾರು ಮಧುರಾತಿ ಮಧುರ ಮಗು ಎಂದು ಕರೆದರು? ತಂದೆಗೆ ಮಕ್ಕಳಲ್ಲಿ ಪ್ರೀತಿಯಿರುತ್ತದೆಯಲ್ಲವೆ. ಬಹಳ ಖುಷಿಯಿಂದ ಮಕ್ಕಳ ಪಾಲನೆ ಮಾಡಲಾಗುತ್ತದೆ. ಇವರೂ ಸಹ ನಾವು ಮಕ್ಕಳ ಬೇಹದ್ದಿನ ತಂದೆಯಾಗಿದ್ದಾರೆ. ನಾವು ಶರೀರದ ಕರ್ಮೇಂದ್ರಿಯಗಳ ಮೂಲಕ ಕೇಳುತ್ತೇನೆ ಎಂದು ಆತ್ಮವು ಹೇಳುತ್ತದೆ. ಅಜ್ಞಾನ ಕಾಲದಲ್ಲಿ ತಂದೆಯು ಮಕ್ಕಳನ್ನು ಎಷ್ಟೊಂದು ಪ್ರೀತಿ ಮಾಡುತ್ತಾರೆ. ಈ ಮಗು ನನ್ನ ವಾರಸುಧಾರನೆಂದು ತಿಳಿಯುತ್ತಾರೆ, ನಾವು ಯೋಗ್ಯರನ್ನಾಗಿ ಮಾಡುತ್ತೇವೆ ಅದರಿಂದ ಬಹಳ ಸುಖಿಯಾಗಿರುತ್ತಾರೆ. ಒಳ್ಳೆಯ ಆಸ್ತಿಯನ್ನು ಪಡೆಯಲಿ ಎಂದು ಹೇಳುತ್ತಾರಲ್ಲವೆ – ಮಗು ಚೆನ್ನಾಗಿರಿ, ಸುಖಿಯಾಗಿ. ಆಶೀರ್ವಾದಗಳು ತಾನಾಗಿಯೇ ಬರುತ್ತಿರುತ್ತದೆ. ಮಕ್ಕಳು ಸದಾ ಸುಖಿಯಾಗಿರಲಿ ಎಂದು ತಿಳಿಯುತ್ತಾರೆ ಆದರೆ ಅವರಂತು ಸದಾ ಸುಖಿಯಾಗಿರಲು ಸಾಧ್ಯವಿಲ್ಲ. ತಂದೆಯು ಮಕ್ಕಳ ಸೇವಾಧಾರಿಯಲ್ಲವೆ. ಮಕ್ಕಳ ಸೇವೆಯನ್ನು ಎಷ್ಟೊಂದು ಮಾಡಬೇಕಾಗುತ್ತದೆ. ತಾಯಿ ಶರೀರ ಬಿಡುತ್ತಾರೆಂದರೆ ತಂದೆಯೇ ಎಲ್ಲವನ್ನೂ ಮಾಡಬೇಕಾಗುತ್ತದೆ. ಈ ತಂದೆಯು ಮಕ್ಕಳಿಗೆ ಎಷ್ಟೊಂದು ಪ್ರೀತಿಯಿಂದ ತಿಳಿಸುತ್ತಾರೆ. ತಮ್ಮ ಕಾಲುಗಳ ಮೇಲೆ ತಾವು ನಿಲ್ಲಬೇಕು (ಯೋಗ್ಯರಾಗಬೇಕು) ಹೇ ಆತ್ಮ, ನೀವು ತಂದೆಯಿಂದ ಆಸ್ತಿ ತೆಗೆದುಕೊಳ್ಳಬೇಕು, ದೇಹದ ಭಾನವನ್ನು ಬಿಟ್ಟು ತಮ್ಮನ್ನು ಆತ್ಮನೆಂದು ತಿಳಿಯುವುದು ದೊಡ್ಡ ಪಾಠವಾಗಿದೆ. ಮಕ್ಕಳು ಗಳಿಗೆ-ಗಳಿಗೆ ಮರೆಯುತ್ತೀರಿ. ತಂದೆಯನ್ನು ನೆನಪು ಮಾಡುವುದು ಮರೆತುಬಿಡುತ್ತೀರಿ. ನೆನಪು ಎನ್ನುವ ಅಕ್ಷರ ಬಹಳ ಸಹಜವಾಗಿದೆ. ಪ್ರಪಂಚದಲ್ಲಿ ನಮ್ಮ ತಂದೆಯಂತಹ ತಂದೆಯು ಮತ್ತೆಲ್ಲಿಯೂ ಸಿಗಲು ಸಾಧ್ಯವಿಲ್ಲ. ನೀವು ತಿಳಿದಿದ್ದೀರಿ – ನಾವು ಆತ್ಮರು ಪತಿತರಾಗಿದ್ದೆವು, ಈಗ ತಂದೆಯು ಪಾವನ ಮಾಡುತ್ತಾರೆ ಆದ್ದರಿಂದ ಹೇ ಪತಿತ-ಪಾವನ ಬನ್ನಿ, ಬಂದು ನಮ್ಮನ್ನು ಪಾವನ ಮಾಡಿ ಎಂದು ಕರೆಯುತ್ತಾರೆ. ತಂದೆಯ ನೆನಪು ಮಾಡುವುದನ್ನು ಬಿಟ್ಟರೆ ತಂದೆಯು ಮತ್ತ್ಯಾವುದೇ ಕಷ್ಟವನ್ನು ಕೊಡುವುದಿಲ್ಲ, ಇದರ ಹೆಸರೇ ಸಹಜ ನೆನಪು, ಸಹಜ ಜ್ಞಾನ. ಇದನ್ನೂ ಮಕ್ಕಳು ತಿಳಿದಿದ್ದೀರಿ. ತಂದೆಯು ಸತ್ಯ ಆಗಿದ್ದಾರೆ, ಚೈತನ್ಯ ಆಗಿದ್ದಾರೆ. ಅವರ ಆತ್ಮವು ಜ್ಞಾನಸಾಗರ, ಜ್ಞಾನದ ಅಥಾರಿಟಿಯಾಗಿದ್ದಾರೆ. ಇಲ್ಲಿ ಇಂತಹ ಶಾಸ್ತ್ರಗಳ ಅಥಾರಿಟಿ ಎಂದು ಮನುಷ್ಯರ ಮಹಿಮೆಯಾಗುತ್ತದೆ. ಇಲ್ಲಿ ತಂದೆಯು ಹೇಳುತ್ತಾರೆ – ನಾನೇ ಎಲ್ಲಾ ವೇದ-ಶಾಸ್ತ್ರಗಳನ್ನು ತಿಳಿದಿದ್ದೇನೆ, ಅಥಾರಿಟಿಯಾಗಿದ್ದೇನೆ. ಭಕ್ತಿಮಾರ್ಗದಲ್ಲಿ ಚಿತ್ರಗಳನ್ನೂ ತೋರಿಸುತ್ತಾರೆ – ವಿಷ್ಣುವಿನ ನಾಭಿಯಿಂದ ಬ್ರಹ್ಮಾ ಬಂದರು, ಮತ್ತೆ ಅವರ ಕೈಯಲ್ಲಿ ಶಾಸ್ತ್ರಗಳನ್ನು ಕೊಟ್ಟಿದ್ದಾರೆ. ತಂದೆಯು ತಿಳಿಸುತ್ತಾರೆ – ಬ್ರಹ್ಮನ ಮೂಲಕ ಎಲ್ಲಾ ವೇದ-ಶಾಸ್ತ್ರಗಳ ಸಾರವನ್ನು ತಿಳಿಸುತ್ತೇನೆ. ತಂದೆಯು ಎಲ್ಲಾ ಮಾತುಗಳನ್ನು ಬಹಳ ಚೆನ್ನಾಗಿ ತಿಳಿಸುತ್ತಾರೆ. ಈಗ ಬ್ರಹ್ಮನಂತು ಸೂಕ್ಷ್ಮವತನದಲ್ಲಿದ್ದಾರೆ. ಭಗವಂತ ಮೂಲವತನದವರಾದರು. ಈಗ ಸೂಕ್ಷ್ಮವತನದಲ್ಲಿ ಯಾರಿಗೆ ಜ್ಞಾನ ತಿಳಿಸುವುದು! ಅವಶ್ಯವಾಗಿ ಇಲ್ಲಿಬಂದು ತಿಳಿಸುತ್ತಾರಲ್ಲವೆ. ಇದು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ಬ್ರಹ್ಮನ ಮೂಲಕ ಎಲ್ಲಾ ಶಾಸ್ತ್ರಗಳ ಸಾರವನ್ನು ಎಲ್ಲಿ ತಿಳಿಸುತ್ತಾರೆ? ತಿಳಿಸುವ ಮಾತಂತು ಇಲ್ಲಿಯೇ ತಿಳಿಸಬೇಕಾಗುತ್ತದೆ.

ಭಗವಂತನು ಬಂದು ಹೇಗೆ ಬ್ರಹ್ಮನ ಮೂಲಕ ನಮಗೆ ತಿಳಿಸುತ್ತಾರೆ ಎನ್ನುವುದನ್ನು ಈಗ ಪ್ರತ್ಯಕ್ಷದಲ್ಲಿ ತಿಳಿದಿದ್ದೀರಿ. ಮಕ್ಕಳಿಗಂತು ಅಪಾರ ಖುಷಿಯಾಗಬೇಕು. ಮನುಷ್ಯರು 5-10 ಲಕ್ಷ ರೂಗಳನ್ನು ಸಂಪಾದಿಸುತ್ತಾರೆಂದರೆ ಎಷ್ಟು ಖುಷಿಯಾಗುತ್ತದೆ. ಇಲ್ಲಿ ತಂದೆಯು ನಿಮ್ಮ ಖಜಾನೆಯನ್ನು ತುಂಬುತ್ತಾರೆ. ನನ್ನನ್ನು ನೆನಪು ಮಾಡಿದರೆ ನೀವು ಚಿನ್ನದ ಸಮಾನ ಆಗಿ ಬಿಡುತ್ತೀರೆಂದರೆ ಹೇಳುತ್ತಾರೆ. ಈ ಭಾರತವು ಚಿನ್ನದ ಪಕ್ಷಿಯಾಗಿ ಬಿಡುತ್ತದೆ. ತಂದೆಯು ಮೂಲವತನದಿಂದ ಬಂದು ಬ್ರಹ್ಮನ ಮೂಲಕ ನಮಗೆ ಶಾಸ್ತ್ರಗಳ ಸಾರವನ್ನು ತಿಳಿಸುತ್ತಿದ್ದಾರೆಂದು ನೀವು ತಿಳಿದಿದ್ದೀರಿ. ಎಲ್ಲದರ ರಹಸ್ಯವನ್ನು ತಿಳಿಸುತ್ತಾರೆ. ಯೋಗ, ತಪ, ದಾನ-ಪುಣ್ಯ ಮುಂತಾದವುಗಳಿಂದ ಮುಕ್ತಿಯನ್ನಂತು ಪಡೆಯಲು ಸಾಧ್ಯವಿಲ್ಲ. ಇವೆಲ್ಲಾ ಮಾರ್ಗಗಳಿಂದ ನಾವು ಮುಕ್ತಿಯಲ್ಲಿ ಹೋಗುತ್ತೇವೆಂದು ಮನುಷ್ಯರು ತಿಳಿಯುತ್ತಾರೆ. ಒಂದುವೇಳೆ ಆ ರೀತಿ ಆಗುವಂತಿದ್ದರೆ ಮತ್ತೆ ಪತಿತ-ಪಾವನ ತಂದೆಯು ಬರುವ ಅವಶ್ಯಕತೆಯೇನಿದೆ! ಒಂದುವೇಳೆ ಅವರ ಬಳಿ ಹಿಂತಿರುಗಿ ಹೋಗುವ ಮಾರ್ಗವಿದ್ದಿದ್ದೇ ಆದರೆ ಯಾರಾದರೂ ಹೋಗುತ್ತಿದ್ದರಲ್ಲವೆ. ಪ್ರಪಂಚದಲ್ಲಿ ಮನುಷ್ಯರದು ಅನೇಕ ಮತಗಳಿವೆ. ಈಗ ಮಕ್ಕಳಿಗೆ ತಂದೆಯು ತಿಳಿಸಿದ್ದಾರೆ – ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ – ನಾನು ಇವರ(ಬ್ರಹ್ಮಾ) ಮೂಲಕ ಎಲ್ಲಾ ವೇದ-ಶಾಸ್ತ್ರಗಳ ಸಾರವನ್ನು ತಿಳಿಸುತ್ತೇನೆ. ಇವರೂ(ಬ್ರಹ್ಮ) ಸಹ ಅನೇಕ ಗುರುಗಳನ್ನಾಗಿ ಮಾಡಿಕೊಂಡಿದ್ದರು, ವಿದ್ಯಾವಂತನಾಗಿದ್ದರು. ತಂದೆಯು ಹೇಳುತ್ತಾರೆ – ಇದೆಲ್ಲವನ್ನು ಮರೆತು ಬಿಡಿ. ಪತಿತ-ಪಾವನ ಎಂದು ಪರಮಪಿತ ಪರಮಾತ್ಮನಿಗೇ ಹೇಳಲಾಗುತ್ತದೆ. ಅವರು ಮನುಷ್ಯ ಸೃಷ್ಟಿಯ ಬೀಜರೂಪ, ವೃಕ್ಷಪತಿ ಚೈತನ್ಯವಾಗಿದ್ದಾರೆ. ಆತ್ಮಗಳೂ ಚೈತನ್ಯವಾಗಿದೆ. ನೀವು ತಿಳಿದಿದ್ದೀರಿ – ನಾವು ಮೂಲವತನಕ್ಕೆ ಹೋಗಿ ಮತ್ತೆ ಪಾತ್ರವನ್ನಭಿನಯಿಸಲು ಬರುತ್ತೇವೆ. ಅರ್ಧಕಲ್ಪ ಸುಖದ ಪಾತ್ರವನ್ನಭಿನಯಿಸುತ್ತೇವೆ, ಎಲ್ಲದರ ಆಧಾರವಾಗಿದೆ – ವಿದ್ಯೆ. ವಿದ್ಯೆಯನ್ನು ಎಷ್ಟು ಚೆನ್ನಾಗಿ ಓದುತ್ತೀರಿ ಅಷ್ಟು ಶ್ರೇಷ್ಠ ಪದವಿ ಪಡೆಯುತ್ತೀರಿ. ಈ ವಿದ್ಯೆಯು ಬಹಳ ಶ್ರೇಷ್ಠವಾಗಿದೆ. ಲಕ್ಷ್ಯವೇ ಆಗಿದೆ – ನರನಿಂದ ನಾರಾಯಣ, ಮನುಷ್ಯರಿಂದ ದೇವತೆಗಳಾಗುವುದು. ಯಾವಾಗ ಆದಿ ಸನಾತನ ದೇವಿ-ದೇವತಾ ಧರ್ಮವೆಂದೇ ಇದೆ ಅಂದಮೇಲೆ ಅಲ್ಲಿ ಯಾವುದೇ ಹಿಂಸೆಯಿರುವುದಿಲ್ಲ. ವಿಕಾರದ ಮಾತುಗಳಿರುವುದಿಲ್ಲ, ಯಾವುದೇ ಜಗಳ-ಹೊಡೆದಾಟವಿರುವುದಿಲ್ಲ.

ಈಗ ನೀವು ತಿಳಿಸುತ್ತೀರಿ – ಯಾವಾಗ ಅನೇಕ ಧರ್ಮಗಳಿರುತ್ತವೆ ಆಗ ಭಾಷೆಗಳೂ ಅನೇಕವಿರುತ್ತದೆ. ಎಲ್ಲರ ಭಾಷೆಯು ಒಂದಾಗಲು ಸಾಧ್ಯವಿಲ್ಲ. ಈಗ ನಿಮ್ಮದು ಅದ್ವೈತ ಧರ್ಮ ಸ್ಥಾಪನೆಯಾಗುತ್ತಿದೆ. ಅದ್ವೈತ ಹಾಗೂ ದೇವತಾ ಒಂದೇ ಅರ್ಥವಾಗಿದೆ. ಈಗ ನೀವು ದೇವತಾ ಧರ್ಮದವರಾಗುತ್ತಿದ್ದೀರಿ. ಗೀತೆಯೂ ಇದೆಯಲ್ಲವೆ – ಬಾಬಾ, ನಾವು ತಮ್ಮಿಂದ 21 ಜನ್ಮಗಳಿಗಾಗಿ ಇಡೀ ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೇವೆ. ಇದು ನಮ್ಮ ಆಕಾಶವಾಗಿದೆ, ಇಲ್ಲಿಂದ ನೀವು ಮುಂದೆ ಹೋಗಬಾರದು ಎಂದು ಅಲ್ಲಿ ಈ ರೀತಿ ಯಾರೂ ಹೇಳುವುದಿಲ್ಲ. ಇಲ್ಲಂತು ಒಬ್ಬರು ಇನ್ನೊಬ್ಬರಿಗೆ ಭಯ ಪಡಿಸುತ್ತಿರುತ್ತಾರೆ. ಕುಳಿತು-ಕುಳಿತಿದ್ದಂತೆಯೇ ಜಗಳ-ಹೊಡೆದಾಡುವ ಭೂತಗಳು ಬಂದು ಕುಳಿತುಕೊಳ್ಳುತ್ತವೆ. ನೀವು ಮಕ್ಕಳು ಶ್ರೀಮತದಂತೆ ತಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೀರಿ, ವಿಶ್ವದ ಮಾಲೀಕರಾಗುತ್ತಿದ್ದೇವೆಂದು ನೀವು ತಿಳಿದಿದ್ದೀರಿ. ನಾವು ಭಾರತದಲ್ಲಿಯೇ ಇರುತ್ತೇವೆ. ದೆಹಲಿಯ ಅಕ್ಕ-ಪಕ್ಕದಲ್ಲಿಯೇ ನದಿ ತೀರದಲ್ಲಿರುತ್ತೀರಿ. ಅಲ್ಲಿ ಸದಾ ವಸಂತ ಋತುವಿರುತ್ತದೆ, ಎಲ್ಲರೂ ಸುಖಿಯಾಗಿರುತ್ತಾರೆ. ಪ್ರಕೃತಿಯೂ ಸಹ ಸತೋಪ್ರಧಾನವಾಗಿರುತ್ತದೆ ಅಲ್ಲವೆ. ನೀವು ತಿಳಿಯಬಹುದು – ನಾವು ಹೇಗೆ ದೈವೀ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆ ಅಂದಮೇಲೆ ತಂದೆಯ ನೆನಪಿನಲ್ಲಿ ಬಹಳ ಖುಷಿಯಲ್ಲಿರಬೇಕಾಗಿದೆ. ನಿರಂತರ ನೆನಪು ಮಾಡಿ ಮತ್ತ್ಯಾವುದೇ ಕಷ್ಟದ ಮಾತನ್ನು ಕೊಡುವುದಿಲ್ಲ, ಇದರಲ್ಲಿಯೇ ಪರಿಶ್ರಮವಿದೆ. ಗಳಿಗೆ-ಗಳಿಗೆ ತಂದೆಯ ನೆನಪು ಮರೆತು ಹೋಗುತ್ತದೆ. ದೇಹಾಭಿಮಾನದಲ್ಲಿ ಬರುವುದರಿಂದ ಉಲ್ಟಾ ಕರ್ಮ ಮಾಡಿ ಬಿಡುತ್ತೀರಿ. ಮೊದಲ ವಿಕಾರವೇ ದೇಹಾಭಿಮಾನವಾಗಿದೆ. ಇದು ನಿಮ್ಮ ದೊಡ್ಡ ಶತ್ರುವಾಗಿದೆ. ದೇಹೀ-ಅಭಿಮಾನಿಯಾಗದೇ ಇರುವ ಕಾರಣ ಮತ್ತೆ ಕಾಮ ಮುಂತಾದ ವಿಕಾರಗಳು ಕಚ್ಚುತ್ತವೆ. ಗುರಿ ಬಹಳ ಶ್ರೇಷ್ಠವಾಗಿದೆ ಎಂದು ಮಕ್ಕಳು ತಿಳಿದಿದ್ದೀರಿ. ಪವಿತ್ರರಾಗಿಯೂ ಇರಬೇಕು. ನೀವು ಸತ್ಯ-ಸತ್ಯ ಬ್ರಾಹ್ಮಣರಾಗಿದ್ದೀರಿ. ಕೋಟ್ಯಾಂತರ ಮಂದಿಗೆ ಜ್ಞಾನವನ್ನು ತಿಳಿಸುತ್ತಾ ಇರಬೇಕು. ಆಮೆಯ ಉದಾಹರಣೆಯೂ ಸಹ ಇಲ್ಲಿ ನಿಮಗೆ ಹೋಲುತ್ತದೆ. ತಂದೆಯು ತಿಳಿಸುತ್ತಾರೆ – ಭಲೆ ನೀವು ತಮ್ಮ ಕೆಲಸಕಾರ್ಯ ಮುಂತಾದವನ್ನು ಮಾಡಿ, ಆಫೀಸಿನಲ್ಲಿ ಕುಳಿತುಕೊಳ್ಳಿ, ಯಾವುದೇ ಗ್ರಾಹಕರು ಬರಲಿಲ್ಲವೆಂದರೆ ನೆನಪಿನಲ್ಲಿ ಕುಳಿತು ಬಿಡಬೇಕು. ಜೊತೆಯಲ್ಲಿ ಚಿತ್ರವನ್ನಿಟ್ಟುಕೊಳ್ಳಿ ನಂತರ ನಾವು ಬಾಬಾರವರ ನೆನಪಿನಲ್ಲಿ ಕುಳಿತುಬಿಡುತ್ತೇವೆ ಎಂದು ನಿಮಗೆ ಹವ್ಯಾಸ ಆಗಿ ಬಿಡುತ್ತದೆ. ಅನೇಕ ಪ್ರಕಾರದ ಯುಕ್ತಿಗಳನ್ನಂತು ತಂದೆಯು ತಿಳಿಸುತ್ತಾರೆ. ಭಕ್ತಿಮಾರ್ಗದಲ್ಲಿ ಚಿತ್ರವನ್ನು ನೆನಪು ಮಾಡುತ್ತಾರೆ. ಇಲ್ಲಿ ವಿಚಿತ್ರನ(ನಿರಾಕಾರ) ನೆನಪು ಮಾಡಲಾಗುತ್ತದೆ. ಇದು ಹೊಸ ಮಾತಾಯಿತಲ್ಲವೆ. ತಮ್ಮನ್ನು ತಾವು ಆತ್ಮನೆಂದು ತಿಳಿದು ನಂತರ ತಂದೆಯನ್ನು ನೆನಪು ಮಾಡಿ. ಹೊಸ ಮಾತಾಗಿರುವ ಕಾರಣ ಪರಿಶ್ರಮವೆನಿಸುತ್ತದೆ. ಇದರಲ್ಲಿ ಅಭ್ಯಾಸ ಮಾಡಬೇಕಾಗುತ್ತದೆ. ಜ್ಞಾನವಂತು ಸಿಕ್ಕಿದೆ, ಇದನ್ನೂ ತಿಳಿಸಲಾಗಿದೆ – ವಿಷ್ಣುವಿನಿಂದ ಬ್ರಹ್ಮಾ ಹೇಗೆ ಬಂದರು. ವಿಷ್ಣು ಅರ್ಥಾತ್ ಲಕ್ಷ್ಮೀ-ನಾರಾಯಣನ 84 ಜನ್ಮಗಳ ನಂತರ ಅವರೇ ಬ್ರಹ್ಮಾ-ಸರಸ್ವತಿಯಾಗುತ್ತಾರೆ. ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿಲ್ಲ. ವಿಷ್ಣುವಿನ ನಾಭಿಯಿಂದ ಬ್ರಹ್ಮಾ ಬಂದರು ಎಂದಲ್ಲ. ಬಾಬಾ ತಿಳಿಸುತ್ತಾರೆ – ನಾನು ನೀವು ಮಕ್ಕಳನ್ನು ಸ್ವದರ್ಶನ ಚಕ್ರಧಾರಿಯನ್ನಾಗಿ ಮಾಡುತ್ತೇನೆ. ಅದರ ಅರ್ಥವನ್ನೂ ಸಹ ನೀವು ತಿಳಿದಿದ್ದೀರಿ. ನಿಮ್ಮ ಅಕ್ಷರಗಳೇ ಈ ರೀತಿ ಗುಪ್ತವಾಗಿದೆ, ಅದನ್ನು ಮತ್ತೆ ಕಾಪಿ ಮಾಡಲು ಸಾಧ್ಯವಿಲ್ಲ. ವರ್ತಮಾನದಲ್ಲಿ ಕಾಪಿ ಮಾಡುತ್ತಾರಲ್ಲವೆ. ಅನೇಕರೂ ಶ್ವೇತ ವಸ್ತ್ರಧಾರಿಗಳೂ ಆಗುತ್ತಾರೆ, ಸಮಾನರಾಗುತ್ತಾರೆ, ಇದರಲ್ಲಿ ಯಾರೂ ಕಾಪಿ ಮಾಡಲು ಸಾಧ್ಯವಿಲ್ಲ.

ಈಗ ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ – ನಾವು ಪ್ರತಿನಿತ್ಯ ಸನ್ಮುಖದಲ್ಲಿ ಕುಳಿತು ಬಾಬಾರವರಿಂದ ಕೇಳಿಸಿಕೊಳ್ಳುತ್ತೇವೆ. ಹೊರಗಡೆಯಿರುವ ಮಕ್ಕಳೂ ಸಹ ತಿಳಿಯುತ್ತಿರಬಹುದು – ಮಧುಬನದಲ್ಲಿ ಶಿವ ತಂದೆಯು ಬ್ರಹ್ಮಾ ತಂದೆಯ ಮೂಲಕ ಮುರುಳಿಯನ್ನು ನುಡಿಸುತ್ತಿರುತ್ತಾರೆ. ಆತ್ಮವೇ ತಂದೆಯನ್ನು ನೆನಪು ಮಾಡುತ್ತದೆ. ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ ಏಕೆಂದರೆ ಯಾವಾಗಿನಿಂದ ವಿಕಾರಿಗಳಾದಿರಿ, ಪಾಪವನ್ನೇ ಮಾಡುತ್ತಾ ಬಂದಿದೆಯೆಂದರೆ ಜನ್ಮ-ಜನ್ಮಾಂತರದ ಹೊರೆಯು ತಲೆಯ ಮೇಲಿದೆ. ತಮೋಪ್ರಧಾನವಾಗುತ್ತಾ ಹೋಗುತ್ತಾರೆ. ತಮೋಪ್ರಧಾನ ಆಗುವುದರಲ್ಲಿ ಅರ್ಧಕಲ್ಪ ಹಿಡಿಸಿತು. ಸತೊ, ರಜೊ, ತಮೋ ಆಗುತ್ತಾ ತುಕ್ಕು ಬೀಳುವುದರಿಂದ ಆತ್ಮವು ಮೈಲಿಗೆಯಾಗುತ್ತದೆಯಲ್ಲವೆ. ಆ ತುಕ್ಕು ಅವಶ್ಯವಾಗಿ ಸಮಾಪ್ತಿಯಾಗಬೇಕು, ಆ ರೀತಿಯಂತು ತಂದೆಯ ನೆನಪು ಮಾಡದೆ ಆತ್ಮವು ಹಾರಲು ಸಾಧ್ಯವಿಲ್ಲ. ಮಾಯಾ ರಾವಣನು ಎಲ್ಲರ ರೆಕ್ಕೆಗಳನ್ನು ತುಂಡು ಮಾಡಿದ್ದಾನೆ. ಇದೂ ಸಹ ತಿಳಿದುಕೊಳ್ಳುವ ಮಾತುಗಳಾಗಿವೆ. ಮೋಕ್ಷ ಇತ್ಯಾದಿಯಂತು ಯಾರಿಗೂ ಸಿಗುವುದೇ ಇಲ್ಲ. ನಾವು ಪತಿತರನ್ನು ಬಂದು ಪಾವನರನ್ನಾಗಿ ಮಾಡಿ ಎಂದು ಕರೆಯುತ್ತಾರಷ್ಟೇ. ಇದರಲ್ಲಿ ಮತ್ತ್ಯಾವುದೇ ಮಾತೇ ಇಲ್ಲ. ತಮೋಪ್ರಧಾನರಿಂದ ಸತೋಪ್ರಧಾನಾರಾಗುವುದು ಹೇಗೆ ಎಂಬುದನ್ನು ತಂದೆಯು ಶಿಕ್ಷಣ ನೀಡುತ್ತಾರೆ. ಮಕ್ಕಳು ಬರೆಯುತ್ತಲೂ ಇರುತ್ತೀರಿ. ಮಕ್ಕಳೇ, ನೀವು ತಂದೆಯನ್ನು ಮರೆಯುವುದರಿಂದ ತಮೋಪ್ರಧಾನರಾದಿರಿ. ಈಗ ತಂದೆಯನ್ನು ನೆನಪು ಮಾಡಿದರೆ ಸತೋಪ್ರಧಾನರಾಗುತ್ತೀರಿ. ಸತೋಪ್ರಧಾನ ವಿಶ್ವದ ಮಾಲೀಕರಾಗಲು ತಂದೆಯನ್ನು ನೆನಪು ಮಾಡಿ. ನಿಮ್ಮ ಆತ್ಮದಲ್ಲಿ 84 ಜನ್ಮಗಳ ಜ್ಞಾನವಿದೆ. 84ರ ಚಕ್ರವನ್ನು ಪೂರ್ಣವಾಯಿತು. ಆತ್ಮದಲ್ಲಿ ಎಷ್ಟು ದೊಡ್ಡ ಬೃಹತ್ ಪಾತ್ರ ಅಡಕವಾಗಿದೆ. ಇದು ಅದ್ಭುತವೆನಿಸುತ್ತದೆಯಲ್ಲವೆ. ಇಷ್ಟು ಚಿಕ್ಕ ಆತ್ಮದಲ್ಲಿ ಎಷ್ಟೊಂದು ಪಾತ್ರವಿದೆ. ಆತ್ಮವು ಹೇಳುತ್ತದೆ – ನಾವು 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ. ಇದೂ ಸಹ ಈಗ ನಿಮಗೆ ತಿಳುವಳಿಕೆ ಸಿಕ್ಕಿದೆ. ಮನುಷ್ಯರಂತು ಏನೂ ತಿಳಿದಿಲ್ಲ. ತಂದೆಯು ಈಗ ತಿಳಿಸುತ್ತಿದ್ದಾರೆ – ನೀವು ಆತ್ಮರು 84 ಜನ್ಮಗಳನ್ನು ಭೋಗಿಸುತ್ತೀರಿ. ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೀರಿ. ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಕೆಳಗಿಳಿಯುತ್ತಲೇ ಬರುತ್ತೀರಿ. ಈಗ ಮತ್ತೆ ಸತೋಪ್ರಧಾನರಾಗಿ ರಾಜ್ಯಾಡಳಿತ ಮಾಡುತ್ತೀರೆಂದರೆ ಎಷ್ಟು ಖುಷಿಯಾಗಬೇಕು! ತಂದೆಯು ನಮಗೆ ಬೇಹದ್ದಿನ ಆಸ್ತಿಯನ್ನು ಕಲ್ಪ-ಕಲ್ಪವೂ ಕೊಡುತಾರೆ. ನೀವು ಮಕ್ಕಳಿಗೆ ಈಗ ಅರಿವುಂಟಾಗಿದೆ, ನಾವು ಮಾಲೆಯ ಮಣಿಯಾಗುತ್ತೇವೆ ಮತ್ತೆ ನಂಬರ್ವಾರ್ ಆಗಿ ರಾಜ್ಯ ಮಾಡುತ್ತೇವೆ ಎಂದು ನೀವು ತಿಳಿದಿದ್ದೀರಿ. ಅಲ್ಲಿನ ರಾಜಧಾನಿಯ ಯಾವ ರೀತಿ-ಪದ್ಧತಿಗಳಿರುತ್ತವೆ ಮತ್ತೆ ಅದೇ ಪುನರಾವರ್ತನೆ ಆಗುತ್ತದೆ. ಅದಕ್ಕಾಗಿ ಇದು ಹೇಗಾಗುತ್ತದೆ, ಏನಾಗುತ್ತದೆ ಎಂದು ವ್ಯರ್ಥ ವಿಚಾರ ಮಾಡುವ ಅವಶ್ಯಕತೆಯೇ ಇಲ್ಲ, ಸಾಕ್ಷಿಯಾಗಿ ನೋಡಬೇಕಾಗಿದೆ. ಏನಾಗುತ್ತದೆ ಎಂದು ಚಿಂತನೆ ಮಾಡುವ ಅವಶ್ಯಕತೆಯೇ ಇಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಶುಭ ಕಾರ್ಯದಲ್ಲಿ ನಿಧಾನಿಸಬಾರದು. ಪವಿತ್ರರಾಗಿ ತಂದೆಯಿಂದ ಪೂರ್ಣ ಆಸ್ತಿ ತೆಗೆದುಕೊಳ್ಳಬೇಕಾಗಿದೆ. ತಮ್ಮನ್ನು ಯೋಗ್ಯರನ್ನಾಗಿ ಮಾಡಿಕೊಂಡು ತಮ್ಮ ಕಾಲುಗಳ ಮೇಲೆ ನಿಲ್ಲಬೇಕಾಗಿದೆ. ಒಬ್ಬ ತಂದೆಯೊಂದಿಗೆ ಪೂರ್ಣ ಪ್ರೀತಿಯನ್ನಿಡಬೇಕಾಗಿದೆ.

2. ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾ, ಒಬ್ಬ ವಿಚಿತ್ರ (ನಿರಾಕಾರ) ತಂದೆಯನ್ನು ನೆನಪು ಮಾಡಬೇಕಾಗಿದೆ. ಯಾವುದೇ ವ್ಯರ್ಥ ವಿಚಾರಗಳನ್ನು ಮಾಡಬಾರದು. ಸತೋಪ್ರಧಾನರಾಗಬೇಕಾಗಿದೆ. ಅಪಾರ ಖುಷಿಯಲ್ಲಿರಬೇಕಾಗಿದೆ.

ವರದಾನ:-

ಮಕ್ಕಳ ಒಂದು ದೂರು ಇರುತ್ತದೆ – ಎಲ್ಲಾ ಸಂಬಂಧಿಗಳು ಕೇಳುವುದಿಲ್ಲ, ಸಂಗ ಚೆನ್ನಾಗಿಲ್ಲ, ಈ ಕಾರಣ ಶಕ್ತಿಶಾಲಿಯಾಗಲು ಸಾಧ್ಯವಿಲ್ಲ. ಆದರೆ ಶ್ರೇಷ್ಠ ಮತದ ಮೇಲೆ ಜ್ಞಾನ ಸ್ವರೂಪ, ಶಕ್ತಿ ಸ್ವರೂಪದ ವರದಾನಿಯಾಗಿ ತಮ್ಮ ಸ್ಥಿತಿಯನ್ನು ಅಚಲವನ್ನಾಗಿ ಮಾಡಿಕೊಳ್ಳಿ. ಸಾಕ್ಷಿಯಾಗಿ ಪ್ರತಿಯೊಬ್ಬರ ಪಾತ್ರವನ್ನು ನೋಡಿರಿ. ತಮ್ಮ ಸತೋಗುಣಿ ಪಾತ್ರದಲ್ಲಿ ಸ್ಥಿತರಾಗಿ. ಸದಾ ತಂದೆಯ ಸಂಗದಲ್ಲಿರಿ ಆಗ ತಮೋಗುಣಿ ಆತ್ಮದ ಸಂಗದ ರಂಗಿನ ಪ್ರಭಾವ ಬಿಳಲು ಸಾಧ್ಯವಿಲ್ಲ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top