31 August 2021 KANNADA Murli Today | Brahma Kumaris

Read and Listen today’s Gyan Murli in Kannada

August 30, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ – ವಿಶಾಲ ಬುದ್ಧಿಯವರಾಗಿ ದೊಡ್ಡ-ದೊಡ್ಡವರ ಅಭಿಪ್ರಾಯವನ್ನು ತೆಗೆದುಕೊಂಡು ಅನೇಕ ಆತ್ಮರ ಕಲ್ಯಾಣ ಮಾಡಿ, ಅವರಿಂದ ಹಾಲ್ ತೆಗೆದುಕೊಂಡು ಹೆಚ್ಚು ಪ್ರದರ್ಶನಿ ಚಿತ್ರಗಳನ್ನು ಹಾಕಿರಿ”

ಪ್ರಶ್ನೆ:: -

ಈಗ ನಿಮಗೆ ಯಾವ ಸ್ಮೃತಿ ಬಂದಿದೆ ಯಾವುದರ ಸ್ಮರಣೆ ಮಾಡಿದ್ದೇ ಆದರೆ ಎಂದೂ ದುಃಖಿಯಾಗುವುದಿಲ್ಲ?

ಉತ್ತರ:-

ಈಗ ಸ್ಮೃತಿ ಬಂದಿತು – ನಾವು ಪೂಜ್ಯ ರಾಜರಾಗಿದ್ದೆವು, ನಂತರ ಬಡವರಾದೆವು. ಈಗ ಪುನಃ ತಂದೆಯು ನಮ್ಮನ್ನು ರಾಜರನ್ನಾಗಿ ಮಾಡುತ್ತಿದ್ದಾರೆ. ಈಗ ತಂದೆಯು ನಮಗೆ ಇಡೀ ವಿಶ್ವದ ಸಮಾಚಾರವನ್ನು ತಿಳಿಸುತ್ತಾರೆ – ನಾವು ವಿಶ್ವದ ಚರಿತ್ರೆ-ಭೂಗೋಳವನ್ನು ಅರಿತುಕೊಂಡಿದ್ದೇವೆ. ಈ ಸ್ಮೃತಿಗಳ ಸ್ಮರಣೆ ಮಾಡಿದ್ದೇ ಆದರೆ ಎಂದೂ ತಮ್ಮನ್ನು ದುಃಖಿಯೆಂದು ತಿಳಿಯುವುದಿಲ್ಲ, ಸದಾ ಖುಷಿಯಾಗಿರುತ್ತೀರಿ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನಯನಹೀನನಿಗೆ ದಾರಿ ತೋರಿಸು ಪ್ರಭು………

ಓಂ ಶಾಂತಿ. ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳು ಗೀತೆಯನ್ನು ಕೇಳಿದಿರಿ, ಮಕ್ಕಳು ತಿಳಿದುಕೊಳ್ಳುತ್ತೀರಿ- ತಂದೆಯನ್ನು ಮಿಲನ ಮಾಡುವುದು ಮತ್ತು ತಂದೆಯಿಂದ ಆಸ್ತಿಯನ್ನು ಪಡೆಯುವುದು ಬಹಳ ಸಹಜವಾಗಿದೆ. ತಂದೆಯಿಂದ ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿಯ ಆಸ್ತಿಯು ಸಿಗುತ್ತದೆಯೆಂದು ಗಾಯನವಿದೆ, ಜೀವನ್ಮುಕ್ತಿಯೆಂದರೆ ಸುಖ-ಶಾಂತಿ, ಸಂಪತ್ತಿನ ಆಸ್ತಿ. ಈಗ ಜೀವನ್ಮುಕ್ತಿ ಮತ್ತು ಜೀವನ ಬಂಧನ ಎರಡು ಪದಗಳಿವೆ. ಮಕ್ಕಳಿಗೆ ತಿಳಿದಿದೆ, ಈ ಸಮಯದಲ್ಲಿ ಭಕ್ತಿಮಾರ್ಗ ಮತ್ತು ರಾವಣ ರಾಜ್ಯದ ಕಾರಣ ಎಲ್ಲರೂ ಜೀವನ ಬಂಧನದಲ್ಲಿದ್ದಾರೆ. ತಂದೆಯು ಬಂದು ಬಂಧನದಿಂದ ಮುಕ್ತಗೊಳಿಸುತ್ತಾರೆ, ಆಸ್ತಿ ಕೊಡುತ್ತಾರೆ. ಹೇಗೆ ಮಗು ಜನ್ಮ ಪಡೆಯಿತೆಂದರೆ ತಂದೆ, ತಾಯಿ, ಮಿತ್ರ ಸಂಬಂಧಿ ಮೊದಲಾದವರು ವಾರಸುಧಾರ ಜನ್ಮ ಪಡೆದನೆಂದು ತಿಳಿಯುತ್ತಾರೆ. ಹೇಗೆ ಇದನ್ನು ತಿಳಿಯುವುದು ಸಹಜವೋ ಹಾಗೆಯೇ ಅದೂ ಸಹಜವಾಗಿದೆ. ಮಕ್ಕಳು ಹೇಳುತ್ತೀರಿ, ಬಾಬಾ ಕಲ್ಪದ ಹಿಂದಿನ ತರಹ ತಾವು ಬಂದು ನಮ್ಮನ್ನು ಮಿಲನ ಮಾಡಿದ್ದೀರಿ, ತಮ್ಮಿಂದಲೇ ಸಹಜ ಆಸ್ತಿಯನ್ನು ಪಡೆಯುವ ಮಾರ್ಗ ಸಿಕ್ಕಿದೆ. ಇದಂತೂ ಪ್ರತಿಯೊಬ್ಬರಿಗೂ ತಿಳಿದಿದೆ, ಹೊಸ ಸೃಷ್ಟಿಯ ರಚಯಿತನು ಭಗವಂತನೇ ಆಗಿದ್ದಾರೆ, ಅವರು ನಮ್ಮನ್ನು ಅಲೆಯುವುದರಿಂದ ಬಿಡಿಸುತ್ತಾರೆ. ನೆನ್ನೆಯ ದಿನ ಭಕ್ತಿ ಮಾಡುತ್ತಿದ್ದೆವು, ಇಂದು ತಂದೆಯಿಂದ ಸಹಜ ಜ್ಞಾನ ಮತ್ತು ರಾಜಯೋಗದ ಮಾರ್ಗವು ಸಿಕ್ಕಿದೆ. ಮಕ್ಕಳು ತಮ್ಮ ಅನುಭವವನ್ನು ತಿಳಿಸುತ್ತಾರೆ – ನಾವು ಬಿ.ಕೆ.ಗಳ ಮೂಲಕ ಕೇಳಿದೆವು – ಇಬ್ಬರು ತಂದೆಯರಿದ್ದಾರೆ ಎಂಬುದು ನಿಮ್ಮ ವಿನಃ ಮತ್ತ್ಯಾರ ಬಾಯಿಂದಲೂ ಬರುವುದಿಲ್ಲ, ನಿಮ್ಮ ಪ್ರತಿಯೊಂದು ಮಾತು ಅದ್ಭುತವಾಗಿದೆ. ಈಗ ಸ್ಮೃತಿಯಲ್ಲಿ ಬರುತ್ತದೆ – ಯಾರು ಇಲ್ಲಿನವರಾಗಿರುವರೋ ಅವರಿಗೆ ಕೂಡಲೇ ಸ್ಮೃತಿಯಲ್ಲಿ ಬಂದು ಬಿಡುವುದು. ಹಾ! ಕೆಲವರಿಗೆ ಸ್ಮೃತಿಯಲ್ಲಿ ಬಂದರೂ ಸಹ ಮಾಯೆಯು ಆ ಸಮಯದಲ್ಲಿ ಜೋರಾಗಿ ಪೆಟ್ಟು ಕೊಟ್ಟು ವಿಸ್ಮೃತಿ ಮಾಡಿ ಬಿಡುತ್ತದೆ. ಇದರಲ್ಲಿ ಮಕ್ಕಳು ಬಹಳ ಎಚ್ಚರಿಕೆಯಿಂದ ಇರಬೇಕಾಗಿದೆ. ತಂದೆಯಂತೂ ಸ್ಮೃತಿ ತರಿಸಿದ್ದಾರೆ. ಪವಿತ್ರತೆಯ ಕಂಕಣವನ್ನೂ ಕಟ್ಟಿಕೊಳ್ಳಬೇಕಾಗಿದೆ. ರಕ್ಷಾಬಂಧನದ ರಹಸ್ಯವೇನೆಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ತಂದೆಯು ಈ ಪ್ರತಿಜ್ಞೆ ಮಾಡಿಸಿದ್ದಾರೆ, ಕಾಮ ಮಹಾಶತ್ರುವಾಗಿದೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ನನ್ನ ಜೊತೆ ಪ್ರತಿಜ್ಞೆ ಮಾಡಿರಿ- ಎಂದೂ ಪತಿತನಾಗುವುದಿಲ್ಲ ಎಂದು. ಜೊತೆಗೆ ನನ್ನನ್ನು ನೆನಪು ಮಾಡುತ್ತಾ ಇರಿ, ಇದರಿಂದ ಅರ್ಧಕಲ್ಪದ ಪಾಪಗಳು ಸುಟ್ಟು ಸಮಾಪ್ತಿಯಾಗುತ್ತದೆ. ತಂದೆಯು ಗ್ಯಾರಂಟಿ ಕೊಡುತ್ತಾರೆ ಆದರೆ ಇದನ್ನಂತೂ ಮಕ್ಕಳೂ ತಿಳಿದುಕೊಂಡಿದ್ದೀರಿ – ತಂದೆಯು ಗ್ಯಾರಂಟಿ ಕೊಡುತ್ತಾರೆ, ಇದು ಸರಿಯಾದ ಮಾತಲ್ಲವೆ. ಆಚಾರಿಗಳೂ ಸಹ ಏನು ಗ್ಯಾರಂಟಿ ಕೊಡುತ್ತಾರೆ? ನಾವು ಹಳೆಯ ಆಭರಣಗಳನ್ನು ಹೊಸದನ್ನಾಗಿ ಮಾಡುತ್ತೇವೆ, ಅವರ ಕರ್ತವ್ಯವೇ ಅದಾಗಿದೆ. ಬೆಂಕಿಯಲ್ಲಿ ಹಾಕಿದರೆ ಅವಶ್ಯವಾಗಿ ಅದು ಅಪ್ಪಟ ಚಿನ್ನವಾಗಿ ಬಿಡುವುದು ಹಾಗೆಯೇ ತಂದೆಯು ತಿಳಿಸುತ್ತಾರೆ – ಆತ್ಮದಲ್ಲಿಯೂ ತುಕ್ಕು ಹಿಡಿದಿದೆ. ಹೇಗೆ ಸತೋ, ರಜೋ, ತಮೋದಲ್ಲಿ ಬರುತ್ತಾರೆ ಎಂಬುದು ಬಹಳ ಸಹಜವಾಗಿದೆ. ಇವುಗಳ ಬಗ್ಗೆ ತಿಳಿಸುವುದಕ್ಕಾಗಿಯೇ ಈ ಚಿತ್ರಗಳನ್ನು ಮಾಡಿಸಲಾಗಿದೆ. ಹೇಗೆ ಯುನಿವರ್ಸಿಟಿ ಕಾಲೇಜುಗಳಲ್ಲಿಯೂ ಅನೇಕ ಪ್ರಕಾರದ ನಕ್ಷೆಗಳಿರುತ್ತವೆಯಲ್ಲವೆ. ನಿಮ್ಮದೂ ಸಹ ಇದು ನಕ್ಷೆಯಾಗಿದೆ. ನೀವು ಯಾರಿಗಾದರೂ ಬಹಳ ಚೆನ್ನಾಗಿ ತಿಳಿಸಬಲ್ಲಿರಿ, ಜ್ಞಾನ ಸಾಗರ, ಪತಿತ-ಪಾವನ ತಂದೆಯೇ ಬಂದು ಈ ಮಾರ್ಗವನ್ನು ತಿಳಿಸುತ್ತಾರೆ. ಮತ್ತ್ಯಾರೂ ಪತಿತರನ್ನು ಪಾವನ ಮಾಡಲು ಸಾಧ್ಯವಿಲ್ಲ. ನಯನಹೀನರು ದುಃಖಿ ಮನುಷ್ಯರಾಗಿದ್ದಾರೆ. ನೀವು ಮಕ್ಕಳಿಗೆ ತಿಳಿದಿದೆ – ಮೊದಲ ಎರಡು ಯುಗಗಳಲ್ಲಿ ದುಃಖವಿರುವುದಿಲ್ಲ, ಭಕ್ತಿಯೂ ಇರುವುದಿಲ್ಲ, ಅದು ಸ್ವರ್ಗವಾಗಿದೆ. ಭಾರತದ ಈ ಸಮಯದ ಮನುಷ್ಯರು ಮತ್ತು ಭಾರತದ ಪ್ರಾಚೀನ ಮನುಷ್ಯರಲ್ಲಿ ಅಂತರವಿದೆಯಲ್ಲವೆ ಆದರೆ ಇದನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ಎಷ್ಟೊಂದು ಪೂಜೆ ನಡೆಯುತ್ತದೆ! ಎಷ್ಟೇಷ್ಟು ಯಾರು ಸಾಹುಕಾರರಾಗುವರೋ ಅಷ್ಟಷ್ಟು ದೇವಿ-ದೇವತೆಗಳಿಗೆ ಆಭರಣಗಳನ್ನು ತೊಡಿಸುತ್ತಾರೆ. ಇದರಲ್ಲಿ ಈ ತಂದೆಯು ಅನುಭವಿಯಾಗಿದ್ದಾರೆ. ಬಾಂಬೆಯಲ್ಲಿ ಲಕ್ಷ್ಮೀ-ನಾರಾಯಣರ ಯಾವ ಮಂದಿರವಿದೆಯೋ ಅದರ ಟ್ರಸ್ಟಿಯು ಲಕ್ಷ್ಮೀ-ನಾರಾಯಣರಿಗಾಗಿ ವಜ್ರಗಳ ಹಾರವನ್ನು ಮಾಡಿಸಿದ್ದರು. ಬ್ರಹ್ಮಾ ತಂದೆಗೆ ಆ ಟ್ರಸ್ಟಿಯ ಹೆಸರೂ ನೆನಪಿದೆ. ಮೊದಲು ಶಿವ ತಂದೆಯ ಮಂದಿರವನ್ನು ಮಾಡಿಸಿದಾಗ ಅವರನ್ನು ಬಹಳ ಶೃಂಗರಿಸುತ್ತಿದ್ದರು ನಂತರ ದೇವತೆಗಳ ಮಂದಿರಗಳನ್ನು ಕಟ್ಟಿಸಿದರು ಆಗ ಲಕ್ಷ್ಮೀ-ನಾರಾಯಣ ಮೊದಲಾದವರಿಗೆ ಆಭರಣಗಳನ್ನು ತೊಡಿಸಿದರು, ಆ ಸಮಯದಲ್ಲಿ ಇನ್ನೆಷ್ಟು ಹಣವಿರಬಹುದು! ಮಹಮ್ಮದ್ ಘಜಿ್ನಯು ಒಂಟೆಗಳ ಮೇಲೆ ಎಷ್ಟೊಂದು ತುಂಬಿಕೊಂಡು ಹೋದನು. ಭಾರತದಲ್ಲಿ ಎಷ್ಟೊಂದು ಧನವಿತ್ತು, ನೀವೀಗ ಯಥಾರ್ಥ ರೀತಿಯಲ್ಲಿ ತಿಳಿದುಕೊಂಡಿದ್ದೀರಿ, ನಮ್ಮ ಭಾರತವು ಹೇಗಿತ್ತು! ನಮ್ಮ ಭಾರತದಲ್ಲಿ ಕುಬೇರನ ಖಜಾನೆಯಿತ್ತು, ವಜ್ರ ವೈಡೂರ್ಯಗಳ ಮಂದಿರಗಳನ್ನು ಕಟ್ಟಿಸಿದ್ದರು. ಈಗ ಅದೇನೂ ಇಲ್ಲ, ಎಲ್ಲವನ್ನೂ ಲೂಟಿ ಮಾಡಿ ತೆಗೆದುಕೊಂಡು ಹೋದರು, ಈಗಂತೂ ಯಾವ ಗತಿಯಾಗಿದೆ! ನೀವೇ ಪೂಜ್ಯ ರಾಜರಾಗಿದ್ದಿರಿ ನಂತರ ನೀವೇ ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡು ಬಡವರಾಗಿದ್ದೀರಿ. ಇಂತಿಂತಹ ಮಾತುಗಳನ್ನು ಮತ್ತೆ-ಮತ್ತೆ ಸ್ಮರಣೆ ಮಾಡಿಕೊಳ್ಳಬೇಕು ಆಗ ಎಂದೂ ನೀವು ನಿಮ್ಮನ್ನು ದುಃಖಿಯೆಂದು ತಿಳಿದುಕೊಳ್ಳುವುದಿಲ್ಲ. ಮನಸ್ಸಿನಲ್ಲಿ ಸ್ಮರಣೆ ಮಾಡುತ್ತಾ ಇರಿ – ನಾವು ತಂದೆಯಿಂದ ಏನನ್ನು ಪಡೆಯುತ್ತಿದ್ದೇವೆ, ತಂದೆಯು ಬಂದು ನಮಗೆ ಇಡೀ ವಿಶ್ವದ ಸಮಾಚಾರವನ್ನು ತಿಳಿಸುತ್ತಾರೆ. ಈ ವಿಶ್ವದ ಚರಿತ್ರೆ-ಭೂಗೋಳವನ್ನು ಯಾರೂ ತಿಳಿದುಕೊಂಡಿಲ್ಲ. ನಿಮಗೇ ತಿಳಿದಿದೆ – ಮೊದಲು ಒಂದು ಧರ್ಮ, ಒಂದು ರಾಜ್ಯ, ಒಂದು ಮತ, ಒಂದು ಭಾಷೆಯಿತ್ತು. ಎಲ್ಲರೂ ಸುಖಿಯಾಗಿದ್ದರು ನಂತರ ಈಗೀಗ ಇವರೆಲ್ಲರೂ ಪರಸ್ಪರ ಹೊಡೆದಾಡತೊಡಗಿದರು ಮತ್ತು ಭಾರತವು ತುಂಡು-ತುಂಡಾಯಿತು. ಮೊದಲು ಈ ರೀತಿಯಿರಲಿಲ್ಲ. ಅಲ್ಲಿ ಯಾವುದೇ ಪ್ರಕಾರದ ದುಃಖವಿರಲಿಲ್ಲ, ಖಾಯಿಲೆಯ ಹೆಸರು-ಗುರುತೂ ಇರಲಿಲ್ಲ. ಅದರ ಹೆಸರೇ ಆಗಿದೆ-ಸ್ವರ್ಗ. ನಿಮಗೆ ತಮ್ಮ ಸ್ಮೃತಿ ಬಂದಿದೆ. ಅವಶ್ಯವಾಗಿ ಕಲ್ಪ-ಕಲ್ಪವೂ ನಮಗೆ ವಿಸ್ಮೃತಿಯಾಗುತ್ತದೆ ನಂತರ ಸ್ಮೃತಿಗೆ ಬರುತ್ತದೆ. ಮೊಟ್ಟ ಮೊದಲನೇ ತಪ್ಪೇನೆಂದರೆ ರಚಯಿತ ಮತ್ತು ರಚನೆಯನ್ನು ಮರೆತು ಹೋದಿರಿ. ನೀವೀಗ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ಸತ್ಯಯುಗದಲ್ಲಿಯೂ ಈ ಜ್ಞಾನವಿರುವುದಿಲ್ಲ ಅಂದಮೇಲೆ ಪರಂಪರೆಯಿಂದ ನಡೆಯಲು ಹೇಗೆ ಸಾಧ್ಯ! ಆ ಸಮಯದಲ್ಲಿ ಮುಖ್ಯವಾಗಿ ರಾಜರೇ ಇರುತ್ತಾರೆ. ಋಷಿ-ಮುನಿಗಳು ಇರುವುದಿಲ್ಲ, ಇವರು ದ್ವಾಪರದಿಂದ ಬರುತ್ತಾರೆ. ಋಷಿ-ಮುನಿ ಮೊದಲಾದವರಿಗೆ ಆಹಾರ-ಪಾನೀಯಗಳೂ ಸಹ ರಾಜರಿಂದಲೇ ಸಿಗುತ್ತದೆ. ರಾಜರು ಸಂಭಾಲನೆ ಮಾಡುತ್ತಾರೆ ಏಕೆಂದರೆ ಸನ್ಯಾಸ ಮಾಡಿದ್ದಾರಲ್ಲವೆ. ಪ್ರಾಚೀನ ಭಾರತದ ಪ್ರಾಚೀನ ರಾಜಯೋಗವೆಂದು ಗಾಯನವಿದೆ. ಪ್ರಾಚೀನ ಋಷಿ-ಮುನಿಗಳು ಎಂದು ಹೇಳುವುದಿಲ್ಲ, ಅವರು ದ್ವಾಪಾರದಲ್ಲಿಯೇ ಬರುತ್ತಾರೆ. ಅವರು ರಾಜರ ಆಧಾರದ ಮೇಲೆ ನಡೆಯುತ್ತಾರೆ. ನಾವು ರಚಯಿತ ಮತ್ತು ರಚನೆಯನ್ನು ಅರಿತುಕೊಂಡಿಲ್ಲವೆಂದು ಹೇಳುತ್ತಾರೆ ಆದ್ದರಿಂದ ತಂದೆಯು ಹೇಳುತ್ತಾರೆ – ಸ್ವಯಂ ರಾಜರೂ ಸಹ ಇದನ್ನು ತಿಳಿದುಕೊಂಡಿರಲಿಲ್ಲ. ಈ ಪ್ರಪಂಚದಲ್ಲಿ ಯಾರು ಈ ಜ್ಞಾನವನ್ನು ತಿಳಿದುಕೊಂಡಿಲ್ಲ. ಈಗ ನೀವು ಮಕ್ಕಳು ಬುದ್ಧಿವಂತರಾಗಿದ್ದೀರಿ, ಯಾರು ಲಕ್ಷ್ಮೀ-ನಾರಾಯಣರ ಮಂದಿರಗಳನ್ನು ಕಟ್ಟಿಸಿದ್ದಾರೆಯೋ ಅವರಿಗೂ ನೀವಿದನ್ನು ಬರೆದು ಕಳುಹಿಸಿರಿ – ನೀವು ಇಷ್ಟು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಮಂದಿರವನ್ನು ಕಟ್ಟಿಸಿದ್ದೀರಿ ಆದರೆ ಅವರ ಜೀವನ ಕಥೆಯನ್ನು ತಾವು ತಿಳಿದುಕೊಂಡಿದ್ದೀರಾ? ಇವರು ಈ ರಾಜ್ಯವನ್ನು ಹೇಗೆ ಪಡೆದರು ನಂತರ ಎಲ್ಲಿ ಹೋದರು? ಈಗ ಎಲ್ಲಿದ್ದಾರೆ? ಎಂಬುದೆಲ್ಲಾ ರಹಸ್ಯವನ್ನು ನಾವು ನಿಮಗೆ ತಿಳಿಸುತ್ತೇವೆ. ಈ ರೀತಿ ಅವರಿಗೆ ಬರೆದು ಕಳುಹಿಸಿರಿ. ನೀವು ಮಕ್ಕಳು ಪ್ರತಿಯೊಬ್ಬರ ಜೀವನ ಚರಿತ್ರೆಯನ್ನು ಅರಿತುಕೊಂಡಿದ್ದೀರಿ ಅಂದಮೇಲೆ ಏಕೆ ಬರೆಯಬಾರದು! ನಮಗೆ ಸಮಯ ಕೊಟ್ಟರೆ ನಾವು ಒಬ್ಬೊಬ್ಬರ ಜೀವನ ಕಥೆಯನ್ನು ತಿಳಿಸುತ್ತೇವೆ ಎಂದು ಹೇಳಿರಿ. ಶಿವನ ಮಂದಿರವನ್ನು ಕಟ್ಟಿಸುತ್ತಾರೆ ಅಂದಮೇಲೆ ಅವರಿಗೂ ನೀವು ತಿಳಿಸಿರಿ ಕಾಶಿಯಲ್ಲಿ ಶಿವನ ಮಂದಿರವು ಎಷ್ಟು ದೊಡ್ಡದಾಗಿದೆ, ಅಲ್ಲಿಯೂ ಟ್ರಸ್ಟಿಗಳಿರುತ್ತಾರೆ. ದೊಡ್ಡ-ದೊಡ್ಡವರಿಗೆ ತಿಳಿಸುವ ಪ್ರಯತ್ನ ಪಡಬೇಕಾಗಿದೆ. ದೊಡ್ಡ ವ್ಯಕ್ತಿಗಳು ತಿಳಿದುಕೊಂಡರೆ ಅವರ ಮಾತು ಅನೇಕರಿಗೆ ಪ್ರಭಾವ ಬೀರುತ್ತದೆ. ಬಡವರು ಬಹುಬೇಗನೆ ಒಪ್ಪಿಕೊಳ್ಳುತ್ತಾರೆ ಆದ್ದರಿಂದ ದೊಡ್ಡ ವ್ಯಕ್ತಿಗಳ ಸಹಯೋಗವನ್ನು ತೆಗೆದುಕೊಳ್ಳಬೇಕಾಗಿದೆ. ಅವರಿಂದ ಅನಿಸಿಕೆಯನ್ನೂ ಬರೆಸಿಕೊಳ್ಳಬೇಕು ಏಕೆಂದರೆ ಅವರ ಅಭಿಪ್ರಾಯವೂ ಸಹ ಬಹಳ ಸಹಯೋಗ ನೀಡುತ್ತದೆ. ವಾಸ್ತವದಲ್ಲಿ ಅವರು ಇದರ ಬಗ್ಗೆ ಎಷ್ಟು ಹೇಳಬೇಕೋ ಅಷ್ಟು ಹೇಳುತ್ತಿಲ್ಲ. ನೀವು ರಾಷ್ಟ್ರಪತಿಗೂ ತಿಳಿಸುತ್ತೀರಿ, ಚೆನ್ನಾಗಿದೆ-ಚೆನ್ನಾಗಿದೆ ಎಂದು ಹೇಳುತ್ತಾರೆ. ಮುಖ್ಯಮಂತ್ರಿ, ರಾಜ್ಯಪಾಲ ಮೊದಲಾದವರು ಉದ್ಘಾಟನೆ ಮಾಡುತ್ತಾರೆ. ಈ ಬ್ರಹ್ಮಾಕುಮಾರ-ಕುಮಾರಿಯರು ಈಶ್ವರನೊಂದಿಗೆ ಮಿಲನ ಮಾಡುವ ಬಹಳ ಒಳ್ಳೆಯ ಸಹಜ ಮಾರ್ಗವನ್ನು ತಿಳಿಸುತ್ತಾರೆಂದು ಬರೆಯುತ್ತಾರೆ ಆದರೆ ಈಶ್ವರನೆಂದರೆ ಯಾರು ಎಂಬುದೇನನ್ನೂ ತಿಳಿದುಕೊಂಡಿಲ್ಲ. ಕೇವಲ ಆ ಸಮಯದಲ್ಲಿ ಮಾತ್ರ ಈ ಮಾರ್ಗವು ಚೆನ್ನಾಗಿದೆ, ಶಾಂತಿಯು ಸಿಗುವ ಮಾರ್ಗವು ಒಳ್ಳೆಯದಾಗಿದೆ ಎಂದು ಹೇಳುತ್ತಾರೆ ಆದರೆ ಸ್ವಯಂ ತಿಳಿದುಕೊಳ್ಳುವುದಿಲ್ಲ.

ತಂದೆಯು ದೊಡ್ಡ-ದೊಡ್ಡವರಿಗೆ ತಿಳಿಸುವುದಕ್ಕಾಗಿ ಹೇಳುತ್ತಾರೆ. ದೊಡ್ಡ-ದೊಡ್ಡ ಮನುಷ್ಯರಿಂದ ದೊಡ್ಡ ಪ್ರಸಿದ್ಧವಾಗಿರುವ ಹಾಲ್ನ್ನು ಕೇಳಿ ಪಡೆಯಿರಿ. ತಿಳಿಸಿ, ನಾವು ಎಲ್ಲಾ ಮನುಷ್ಯರ ಕಲ್ಯಾಣಕ್ಕಾಗಿ ಸದಾಕಾಲಕ್ಕಾಗಿ ಈ ಪ್ರದರ್ಶನಿಯನ್ನು ಇಡಲು ಬಯಸುತ್ತೇವೆ, ಕೇವಲ ಜಾಹೀರಾತು ಮಾಡಬೇಕಾಗಿದೆ. ಇಂತಹ 50 ಅಥವಾ 100 ಹಾಲ್ಗಳನ್ನು ತೆಗೆದುಕೊಳ್ಳಬೇಕು. ಭಾರತವಂತೂ ಬಹಳ ದೊಡ್ಡದಾಗಿದೆಯಲ್ಲವೆ. ಒಂದೊಂದು ನಗರದಲ್ಲಿ 10-12 ಹಾಲ್ಗಳನ್ನು ತೆಗೆದುಕೊಳ್ಳಿ. ಇಷ್ಟು ಹಾಲ್ಗಳಲ್ಲಿ ಪ್ರದರ್ಶನಿಯು ನಡೆಯುತ್ತಿದೆ ಯಾರು ತಿಳಿದುಕೊಳ್ಳಬೇಕಾಗಿದೆಯೋ ಅವರು ತಿಳಿದುಕೊಳ್ಳಬಹುದು ಎಂದು ಪತ್ರಿಕೆಗಳಲ್ಲಿ ಬರಲಿ ಆಗ ಅನೇಕರ ಕಲ್ಯಾಣವಾಗುವುದು. ಮಕ್ಕಳಿಗೆ ಬಹಳ ವಿಶಾಲ ಬುದ್ಧಿಯಾಗಬೇಕು. ಮಕ್ಕಳು ಸರ್ವೀಸ್ ಮಾಡಬೇಕಲ್ಲವೆ. ತಂದೆಯು ಎಲ್ಲಾ ಮಕ್ಕಳಿಗೆ ಹೇಳುತ್ತಾರೆ – ಪ್ರದರ್ಶನಿಗಳನ್ನು ಬಹಳ ಜೋರು-ಜೋರಾಗಿ ಮಾಡಿರಿ. ತಂದೆಯು ತಯಾರು ಮಾಡಿಸುತ್ತಿದ್ದಾರೆ, ಮಕ್ಕಳು ಪ್ರಯತ್ನ ಪಡಬೇಕಾಗಿದೆ. ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಭಗವಂತನು ಬರುತ್ತಾರೆ, ಪ್ರಜಾಪಿತ ಬ್ರಹ್ಮಾರವರ ಮೂಲಕ ಪ್ರಜೆಗಳ ರಚನೆಯನ್ನು ರಚಿಸುತ್ತಾರೆ ಅಂದಮೇಲೆ ಅವಶ್ಯವಾಗಿ ಎಷ್ಟು ಬ್ರಾಹ್ಮಣರನ್ನು ರಚಿಸಿರಬಹುದು! ಈಗ ಪುನಃ ರಚಿಸುತ್ತಿದ್ದಾರೆ. ಎಷ್ಟೊಂದು ಬ್ರಾಹ್ಮಣ-ಬ್ರಾಹ್ಮಿಣಿಯರಿದ್ದಾರೆ. ತಂದೆಯು ಸಂಗಮದಲ್ಲಿ ಈ ಬ್ರಾಹ್ಮಣ ಧರ್ಮವನ್ನು ರಚಿಸಿದ್ದಾರೆ, ನೀವು ಪ್ರತ್ಯಕ್ಷದಲ್ಲಿ ನೋಡುತ್ತಿದ್ದೀರಿ ಮತ್ತು ತಿಳಿದುಕೊಳ್ಳುತ್ತಿದ್ದೀರಿ. ಈ ಮಾತುಗಳು ಮತ್ತ್ಯಾವುದೇ ಶಾಸ್ತ್ರಗಳಲ್ಲಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಯಾವಾಗ ಪತಿತ ಪ್ರಪಂಚವು ಪಾವನವಾಗಬೇಕಾಗಿದೆಯೋ ಆಗಲೇ ತಂದೆಯು ಬರುತ್ತಾರೆ. ಇದೂ ಸಹ ತಿಳಿದಿದೆ- ಪರಮಾತ್ಮ ಪ್ರಜಾಪಿತ ಬ್ರಹ್ಮಾರವರ ಮೂಲಕವೇ ರಚನೆಯನ್ನು ರಚಿಸುತ್ತಾರೆ ಆದರೆ ಯಾವಾಗ ರಚಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದಿಲ್ಲ. ಯಾವುದೋ ಹೊಸ ರಚನೆಯನ್ನು ರಚಿಸಬಹುದೆಂದು ಅವರು ತಿಳಿದುಕೊಳ್ಳುತ್ತಾರೆ. ಬ್ರಹ್ಮನನ್ನು ಸೂಕ್ಷ್ಮವತನದಲ್ಲಿದ್ದರೆಂದು ತಿಳಿಯುತ್ತಾರೆ ಆದರೆ ನಿಮಗೆ ತಿಳಿದಿದೆ – ಅವ್ಯಕ್ತರಾಗುವವರೆಗೆ ಪ್ರಜಾಪಿತನು ಬ್ರಹ್ಮನು ಇಲ್ಲಿಯೇ ಇರುತ್ತಾರೆ. ನೀವು ಸೂಕ್ಷ್ಮವತನಕ್ಕೆ ಹೋಗುತ್ತೀರಿ, ಪವಿತ್ರರಾಗಿ ನಂತರ ಫರಿಶ್ತೆಗಳಾಗಿ ಬಿಡುತ್ತೀರಿ, ಸಾಕ್ಷಾತ್ಕಾರ ಮಾಡುತ್ತೀರಿ. ಅಲ್ಲಿ ಸನ್ನೆಯ ಭಾಷೆಯು ನಡೆಯುತ್ತದೆಯೆಂದು ಮಕ್ಕಳು ಬಂದು ತಿಳಿಸುತ್ತಾರೆ, ಅದು ಮೂವ್ಹಿ ಪ್ರಪಂಚವಾಗಿದೆ. ನೀವು ಮೂಖ ಚಲನಚಿತ್ರವನ್ನು ನೋಡುತ್ತೀರಿ, ಈಗ ಪ್ರತ್ಯಕ್ಷದಲ್ಲಿ ಎಲ್ಲಾ ಮಾತುಗಳನ್ನು ತಿಳಿದುಕೊಂಡಿದ್ದೀರಿ. ಮೂಲವತನವು ಶಾಂತಿಧಾಮವಾಗಿದೆ, ಅಲ್ಲಿ ಆತ್ಮರಿರುತ್ತಾರೆ. ಸೂಕ್ಷ್ಮವತನದಲ್ಲಿ ಸೂಕ್ಷ್ಮಶರೀರವೂ ಇರುತ್ತದೆ ಅಂದಮೇಲೆ ಅಲ್ಲಿ ಯಾವುದೋ ಭಾಷೆಯು ಇರುವುದು, ನೀವು ಮಕ್ಕಳ ಬುದ್ಧಿಯಲ್ಲಿದೆ – ನಾವಾತ್ಮರ ಸ್ಥಾನವು ಶಾಂತಿಧಾಮವಾಗಿದೆ, ಇದರ ನಂತರ ಸೂಕ್ಷ್ಮವತನವಿದೆ, ಅಲ್ಲಿ ಬ್ರಹ್ಮಾ-ವಿಷ್ಣು-ಶಂಕರರಿರುತ್ತಾರೆ ಮತ್ತು ಇದು ಕಲಿಯುಗ ಮತ್ತು ಸತ್ಯಯುಗದ ಸಂಗಮವಾಗಿದೆ. ಇಲ್ಲಿ ತಂದೆಯು ಬರುತ್ತಾರೆ, ಇಲ್ಲಿಂದ ನೀವು ಬ್ರಾಹ್ಮಣರು ಹೋಗುತ್ತೀರಿ. ತಂದೆಯ ಮನೆ ಮತ್ತು ಮಾವನ ಮನೆಯಾಗಿದೆಯಲ್ಲವೆ. ಇಲ್ಲಿ ಇಬ್ಬರೂ ನಿಮ್ಮ ತಂದೆಯರಾಗಿದ್ದಾರೆ, ಬಾಪ್ದಾದಾ ಇಬ್ಬರೂ ಸಹ ಮಕ್ಕಳನ್ನು ಹೂಗಳನ್ನಾಗಿ ಮಾಡಲು ಪರಿಶ್ರಮ ಪಡುತ್ತಾರೆ. ಮುಸಲ್ಮಾನರೂ ಸಹ ಅಲ್ಲಾಹ್ನ ಹೂದೋಟವೆಂದು ಹೇಳುತ್ತಿದ್ದರು. ಕರಾಚಿಯಲ್ಲಿ ಒಬ್ಬ ವ್ಯಕ್ತಿಯಿದ್ದರು, ಅವರು ಮುಂದೆ ನಿಂತು ನೋಡುತ್ತಾ-ನೋಡುತ್ತಾ ಕೆಳಗೆ ಬೀಳುತ್ತಿದ್ದರು. ಅವರೊಂದಿಗೆ ಕೇಳಿದಾಗ ನಾನು ಖುದಾನ ಹೂದೋಟಕ್ಕೆ ಹೋದೆನು, ಖುದನು ಹೂ ಕೊಟ್ಟರೆಂದು ಹೇಳುತ್ತಿದ್ದರು. ಅವರಿಗೆ ಜ್ಞಾನವಂತೂ ಇರಲಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ, ಯಾವುದಕ್ಕೆ ಹೂದೋಟವೆಂದು ಹೇಳಲಾಗುತ್ತದೆ. ಇದು ಮುಳ್ಳುಗಳ ಕಾಡು ಮತ್ತು ಅದು ಹೂದೋಟವಾಗಿದೆ. ನಿಮ್ಮ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವಿದೆ. ಸತ್ಯಯುಗದಲ್ಲಿ ಏನಿರುತ್ತದೆ, ಕಲಿಯುಗದಲ್ಲಿ ಏನಿದೆ. ನಿಮಗೆ ಬಹಳ ಖುಷಿಯಿರಬೇಕು, ಇದೇ ಚಕ್ರವು ನಿಮ್ಮ ಬುದ್ಧಿಯಲ್ಲಿದೆ. ಇದರ ವಿಸ್ತಾರವು ಬಹಳಷ್ಟಿದೆ. ನಿಮ್ಮ ಬುದ್ಧಿಯಲ್ಲಿ ಎಷ್ಟು ಸಾರ ರೂಪದಲ್ಲಿ ಜ್ಞಾನವು ಕುಳಿತಿದೆ. ನೀವು ಮಕ್ಕಳು ರಚಯಿತ ತಂದೆಯ ಮೂಲಕ ರಚಯಿತ ಮತ್ತು ರಚನೆಯನ್ನು ಅರಿತುಕೊಂಡಿದ್ದೀರಿ. ಬ್ರಹ್ಮನಿಗೆ ರಚಯಿತನೆಂದು ಹೇಳುವುದಿಲ್ಲ. ರಚಯಿತ ಒಬ್ಬರೇ ಆಗಿದ್ದಾರೆ, ಬಲಿಹಾರಿಯು ಒಬ್ಬರದೇ ಆಗಿದೆ. ಮೊಟ್ಟ ಮೊದಲ ರಚನೆಯು ಬ್ರಹ್ಮನದಾಗಿದೆ. ನಂತರ ಕೃಷ್ಣನ ರಚನೆಯೆಂದು ಹೇಳುತ್ತಾರೆ. ಬ್ರಹ್ಮನಿದ್ದಾರೆಂದ ಮೇಲೆ ಬ್ರಾಹ್ಮಣರು ಅವಶ್ಯವಾಗಿ ಬೇಕಾಗಿದೆ. ಪಾಂಡವರನ್ನು ಬ್ರಾಹ್ಮಣರೆಂದು ತಿಳಿಯುವುದಿಲ್ಲ. ಬ್ರಹ್ಮಾರವರ ಮೂಲಕ ಬ್ರಾಹ್ಮಣರು ಬೇಕು, ಇದು ಆತ್ಮಿಕ ಯಜ್ಞವಾಗಿದೆ. ಇದಕ್ಕೆ ಆಧ್ಯಾತ್ಮಿಕ ಜ್ಞಾನವನ್ನು ಹೇಳಲಾಗುತ್ತದೆ. ಆತ್ಮಕ್ಕೆ ಆ ತಂದೆಯೇ ಜ್ಞಾನವನ್ನು ಕೊಡುತ್ತಾರೆ. ನೀವು ತಿಳಿದುಕೊಂಡಿದ್ದೀರಿ, ನಮಗೆ ಮನುಷ್ಯರು ಓದಿಸುತ್ತಿಲ್ಲ, ಎಲ್ಲಾ ಆತ್ಮರಿಗೆ ತಂದೆಯು ಓದಿಸುತ್ತಾರೆ. ಬ್ರಹ್ಮಾರವರ ಮೂಲಕ ಸ್ಥಾಪನೆಯೆಂದು ಹೇಳುತ್ತಾರೆ. ಕೃಷ್ಣನ ಮೂಲಕ ಎಂದು ಹೇಳುವರೇ? ಅದು ಸಾಧ್ಯವೇ ಇಲ್ಲ. ಬ್ರಹ್ಮಾರವರ ಮೂಲಕ ಯಾರು ಸ್ಥಾಪನೆ ಮಾಡಿಸುತ್ತಾರೆ? ಕೃಷ್ಣನೇ? ಇಲ್ಲ. ಪರಮಪಿತ ಪರಮಾತ್ಮ. ವಿಷ್ಣುವಿನ ಮೂಲಕ ಪಾಲನೆ. ಬ್ರಹ್ಮಾ ಮತ್ತು ವಿಷ್ಣುವಿನ ಪಾತ್ರವು ಎಷ್ಟೊಂದಿದೆ! ಬ್ರಹ್ಮಾ ಮುಖವಂಶಾವಳಿಯೇ ಮತ್ತೆ ಹೋಗಿ ವಿಷ್ಣು ಪುರಿಯ ದೇವತೆಗಳಾಗುತ್ತಾರೆ. ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮಾ, ಇದನ್ನು ಮಕ್ಕಳಿಗೆ ತಿಳಿಸಿದ್ದಾರೆ. ಬ್ರಹ್ಮನಿಂದ ವಿಷ್ಣುವಾಗಲು ಒಂದು ಸೆಕೆಂಡ್, ವಿಷ್ಣುವಿನಿಂದ ಬ್ರಹ್ಮನಾಗುವುದರಲ್ಲಿ 84 ಜನ್ಮ ಹಿಡಿಸುತ್ತದೆ. ಎಷ್ಟು ಅದ್ಭುತ ಮಾತುಗಳಾಗಿವೆ! ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಇವು ಬೇಹದ್ದಿನ ಮಾತುಗಳಾಗಿವೆ. ಬೇಹದ್ದಿನ ತಂದೆಯಿಂದ ಬೇಹದ್ದಿನ ವಿದ್ಯೆಯನ್ನು ಓದಿ ಬೇಹದ್ದಿನ ರಾಜ್ಯವನ್ನು ಪಡೆಯಬೇಕಾಗಿದೆ. ಸೃಷ್ಟಿಚಕ್ರವನ್ನು ಅರಿತುಕೊಳ್ಳಬೇಕಾಗಿದೆ. ಆತ್ಮವೇ ಶರೀರದ ಮೂಲಕ ಅರಿತುಕೊಳ್ಳುತ್ತದೆ. ಶರೀರವು ಆತ್ಮದ ಮೂಲಕ ಜ್ಞಾನವನ್ನು ತೆಗೆದುಕೊಳ್ಳುತ್ತದೆ ಎಂದಲ್ಲ, ಆತ್ಮವೇ ಜ್ಞಾನವನ್ನು ಅಳವಡಿಸಿಕೊಳ್ಳುತ್ತದೆ. ನಿಮಗೆ ಎಷ್ಟೊಂದು ಖುಷಿಯಿದೆ, ಇದು ಆಂತರಿಕ ಗುಪ್ತ ಖುಷಿಯಿರಬೇಕಾಗಿದೆ. ವಿದ್ಯೆಯ ಸಂಸ್ಕಾರವು ಆತ್ಮದಲ್ಲಿದೆ. ದುಃಖವು ಆತ್ಮಕ್ಕೇ ಅನುಭವವಾಗುತ್ತದೆ. ನಾನಾತ್ಮನಿಗೆ ದುಃಖ ಕೊಡಬೇಡಿ ಎಂದು ಹೇಳುತ್ತಾರೆ, ಈಗ ಮಕ್ಕಳಿಗೆ ಎಷ್ಟೊಂದು ಪ್ರಕಾಶತೆಯು ಸಿಗುತ್ತಿದೆ. ನಿಮಗೆ ಖುಷಿಯಿರುತ್ತದೆ, ಸಾಗರದಿಂದ ರಿಫ್ರೆಶ್ ಆಗಿ ಮೋಡಗಳು ಸೇರಿ ಮಳೆ ಸುರಿಸಬೇಕಾಗಿದೆ. ಪರಸ್ಪರ ಸೇರಿ ಪ್ರದರ್ಶನಿ ಇತ್ಯಾದಿಗಳನ್ನು ತಯಾರು ಮಾಡುವುದರಲ್ಲಿ ಸಹಯೋಗ ನೀಡಿರಿ. ಇದೇ ಉಮಂಗವಿರಲಿ. ಸರ್ವೀಸ್, ಸರ್ವೀಸ್ ಮತ್ತು ಸರ್ವೀಸ್. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಂದೆಯ ಮೂಲಕ ಸಿಕ್ಕಿರುವ ಜ್ಞಾನದ ಸ್ಮರಣೆ ಮಾಡಿ ಅಪಾರ ಖುಷಿಯಲ್ಲಿರಬೇಕಾಗಿದೆ. ವಿಶಾಲ ಬುದ್ಧಿಯವರಾಗಿ ಬಹಳ ಜೋರಾಗಿ ಸರ್ವೀಸ್ ಮಾಡಬೇಕಾಗಿದೆ.

2. ತಂದೆಯ ಮೂಲಕ ಯಾವ ಸ್ಮೃತಿ ಸಿಕ್ಕಿದೆಯೋ ಅದನ್ನು ವಿಸ್ಮೃತಿಯಲ್ಲಿ ತಂದುಕೊಳ್ಳಬಾರದು. ತಂದೆಯೊಂದಿಗೆ ಪವಿತ್ರರಾಗಿರುವ ಯಾವ ಪ್ರತಿಜ್ಞೆ ಮಾಡಿದ್ದೀರೋ ಅದನ್ನು ಪೂರ್ಣ ನಿಭಾಯಿಸಬೇಕಾಗಿದೆ.

ವರದಾನ:-

ಎಲ್ಲಾ ಬ್ರಾಹ್ಮಣ ಮಕ್ಕಳಿಗೂ ಜನ್ಮವಾದ ಕೂಡಲೇ ಕಿರೀಟ, ಸಿಂಹಾಸನ, ತಿಲಕವು ಜನ್ಮಸಿದ್ಧ ಅಧಿಕಾರದ ರೂಪದಲ್ಲಿ ಪ್ರಾಪ್ತವಾಗುತ್ತದೆ. ಅಂದಮೇಲೆ ಈ ಭಾಗ್ಯದಿಂದ ಹೊಳೆಯುತ್ತಿರುವ ನಕ್ಷತ್ರವನ್ನು ನೋಡುತ್ತಾ, ತಮ್ಮ ಭಾಗ್ಯ ಹಾಗೂ ಭಾಗ್ಯವಿಧಾತನ ಗುಣಗಾನ ಮಾಡುತ್ತಾ ಇರುತ್ತೀರೆಂದರೆ ಗುಣ ಸಂಪನ್ನರು ಆಗಿ ಬಿಡುತ್ತೀರಿ. ತಮ್ಮ ಬಲಹೀನತೆಗಳ ಗುಣಗಾನ ಮಾಡುವುದಲ್ಲ, ಭಾಗ್ಯದ ಗುಣಗಾನ ಮಾಡುತ್ತಿರಿ. ಪ್ರಶ್ನೆಗಳಿಂದ ಪಾರಾಗುತ್ತಾ ಇರುತ್ತಿದ್ದರೆ,ಸದಾ ಪ್ರಸನ್ನಚಿತ್ತರಾಗಿರುವ ವರದಾನವು ಪ್ರಾಪ್ತಿಯಾಗುವುದು. ನಂತರ ಅನ್ಯರನ್ನೂ ಸಹಜವಾಗಿಯೇ ಪ್ರಸನ್ನಗೊಳಿಸಬಹುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top