30 October 2021 KANNADA Murli Today | Brahma Kumaris

Read and Listen today’s Gyan Murli in Kannada

October 29, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನಿಮಗೆ ತಿಳಿದಿದೆ - ಎಲ್ಲಾ ಆತ್ಮರು ಬೇಹದ್ದಿನ ತಂದೆಯಿಂದ ಓದುವುದಿಲ್ಲ ಆದರೆ ಜೊತೆಯಲ್ಲಿ ಅವಶ್ಯವಾಗಿ ಹಿಂತಿರುಗಿ ಹೋಗುವರು”

ಪ್ರಶ್ನೆ:: -

ಚಕ್ರವರ್ತಿ ರಾಜರಾಗುವಂತಹ ಮಕ್ಕಳಿಗೆ ಯಾವ ಮಾತಿನ ಬಹಳ-ಬಹಳ ಗಮನವಿರುವುದು?

ಉತ್ತರ:-

ಅವರಿಗೆ ವಿದ್ಯೆಯ ಮೇಲೆ ಬಹಳ ಗಮನವಿರುತ್ತದೆ. ಎಲ್ಲಿದ್ದರೂ ಸಹ ವಿದ್ಯೆಯನ್ನು ಅವಶ್ಯವಾಗಿ ಓದುತ್ತಾರೆ. ಜೊತೆ ಜೊತೆಗೆ ಮಿತ್ರ ಸಂಬಂಧಿಗಳೊಂದಿಗೆ ನಿಭಾಯಿಸುತ್ತಾ ನೆನಪಿನಲ್ಲಿರುವ ಅಭ್ಯಾಸ ಮಾಡುತ್ತಾರೆ ಮತ್ತು ಎಲ್ಲರಿಗೆ ಇದೇ ಸಂದೇಶವನ್ನು ಕೊಡುತ್ತಾರೆ – ತಂದೆಯನ್ನು ನೆನಪು ಮಾಡಿದರೆ ಶಾಂತಿಧಾಮ-ಸುಖಧಾಮದಲ್ಲಿ ಹೋಗುವಿರಿ. ಈ ಶ್ರೀಮತದಂತೆ ಸಂಪೂರ್ಣ ನಡೆಯುವ ಮಕ್ಕಳು ಚಕ್ರವರ್ತಿಗಳಾಗುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ತಂದೆಯು ಎಲ್ಲಾ ಆತ್ಮಿಕ ಮಕ್ಕಳನ್ನು ಜೊತೆ ಜೊತೆಗೆ ಸೃಷ್ಟಿಯಲ್ಲಿ ಯಾರೆಲ್ಲಾ ಜೀವಾತ್ಮರಿದ್ದಾರೆಯೋ ಅವರೆಲ್ಲರನ್ನೂ ಮರಳಿ ಕರೆದುಕೊಂಡು ಹೋಗಲೇಬೇಕಾಗಿದೆ ಏಕೆಂದರೆ ಈಗ ಅಂಧಕಾರ ರಾತ್ರಿಯು ಪೂರ್ಣವಾಗುತ್ತದೆ. ಹಳೆಯ ಪ್ರಪಂಚವು ಮುಕ್ತಾಯವಾಗಿದೆ ಹೊಸ ಪ್ರಪಂಚದ ಸ್ಥಾಪನೆಯಾಗುತ್ತಿದೆ. ಪ್ರಪಂಚವು ಅದೇ ಆಗಿದೆ, ಆದರೆ ಹಳೆಯದರಿಂದ ಹೊಸದಾಗುತ್ತದೆ. ಸತ್ಯಯುಗದ ಆದಿಯಲ್ಲಿ ಅವಶ್ಯವಾಗಿ ಆದಿ ಸನಾತನ ದೇವಿ-ದೇವತಾ ಧರ್ಮವೇ ಇತ್ತು. ಈಗ ಆ ಸೂರ್ಯವಂಶಿ-ಚಂದ್ರವಂಶಿಯರಿಲ್ಲ. ತಂದೆಯು ತಿಳಿಸುತ್ತಾರೆ – ಅವರು ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ 84 ಜನ್ಮಗಳನ್ನು ಪೂರ್ಣಗೊಳಿಸಿದ್ದಾರೆ. ಈ ಸಮಯದಲ್ಲಿ ಎಲ್ಲಾ ಪಾತ್ರಧಾರಿಗಳು ತಮೋಪ್ರಧಾನರಾಗಿ ಬಿಟ್ಟಿದ್ದಾರೆ. ರಾಮ ರಾಜ್ಯ, ಹೊಸ ಪ್ರಪಂಚ, ಹೊಸ ದೆಹಲಿ ಬೇಕೆಂದು ಬಯಸುತ್ತಾರೆ. ಹೇಗೆ ಮಕ್ಕಳು ನಮಗೆ ಇಂತಹ ಹೊಸ ವಸ್ತು ಬೇಕು ಎಂದು ಹೇಳುತ್ತಾರಲ್ಲವೆ. ಹಾಗೆಯೇ ಹೊಸ ಪ್ರಪಂಚಕ್ಕಾಗಿ ನಮಗೆ ಹೊಸ ವಸ್ತ್ರ ಬೇಕೆಂದು ಇಲ್ಲಿಯೂ ಹೇಳುತ್ತಾರೆ. ದೀಪಾವಳಿಯಂದು ಮನುಷ್ಯರು ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಕೃಷ್ಣ ಜಯಂತಿಯನ್ನು ಹೊಸ ವಸ್ತ್ರಗಳನ್ನು ಧರಿಸುವ ಮಾತಿರುವುದಿಲ್ಲ. ವಿಶೇಷವಾಗಿ ದೀಪಾವಳಿಯಂದು ಹೊಸ ವಸ್ತ್ರಗಳನ್ನು ಧರಿಸುವುದಕ್ಕಾಗಿ ಬಹಳಷ್ಟು ಮಂದಿ ಖರೀದಿಸುತ್ತಾರೆ. ದೀಪಾವಳಿಯಂದು ಜ್ಯೋತಿಯನ್ನು ಬೆಳಗಿಸುತ್ತಾರೆ. ಈಗ ನಿಮ್ಮ ಜ್ಯೋತಿಯು ಬೆಳಗಿದೆ ಅಂದಮೇಲೆ ನೀವು ಅನ್ಯರ ಜ್ಯೋತಿಯನ್ನೂ ಬೆಳಗಿಸಬೇಕಾಗಿದೆ. ಅವರದು ಭಕ್ತಿಮಾರ್ಗದ ದೀಪಾವಳಿಯಾಗಿದೆ, ನಿಮ್ಮದು ಜ್ಞಾನದ ದೀಪಾವಳಿಯಾಗಿದೆ. ನೀವು ಹೊಸ ವಸ್ತ್ರಗಳನ್ನು ಬದಲಾಯಿಸಬೇಕಿಲ್ಲ. ಯಾವಾಗ ನಿಮ್ಮ ಜ್ಯೋತಿಯು ಪೂರ್ಣ ಜಾಗೃತವಾಗುವುದೋ ಅನಂತರ ಹೊಸ ಪ್ರಪಂಚದಲ್ಲಿ ಹೊಸ ವಸ್ತ್ರಗಳು ಸಿಗುತ್ತವೆ. ತಂದೆಯು ತಿಳಿಸುತ್ತಾರೆ – ಯಾರು ಇಚ್ಛಿಸಲಿ, ಇಚ್ಛಿಸದಿರಲಿ ನಾನು ಎಲ್ಲರನ್ನು ಕರೆದುಕೊಂಡೇ ಹೋಗುವೆನು. ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ಇನ್ನೂ ಕೆಲವರು ಲಿಬರೇಟರ್ ಬನ್ನಿ ಎಂದು ಹೇಳುತ್ತಾರೆ. ಒಬ್ಬೊಬ್ಬರು ಒಂದೊಂದು ಭಾಷೆಯಲ್ಲಿ ಹೇಳುತ್ತಾರೆ. ನಾನು ಕಲ್ಪ-ಕಲ್ಪವೂ ಬಂದು ಎಲ್ಲರನ್ನೂ ಕರೆದುಕೊಂಡು ಹೋಗುತ್ತೇನೆ. ಸತ್ಯಯುಗದಲ್ಲಿ ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ. ಈಗ ಎಷ್ಟೊಂದು ಮಂದಿ ಪಾತ್ರಧಾರಿಗಳಿದ್ದಾರೆ. ಇವರು ಜೀವಾತ್ಮರಾಗಿದ್ದಾರೆ, ಶರೀರಕ್ಕೆ ಜೀವವೆಂದು ಹೇಳಲಾಗುತ್ತದೆ. ನಾನು ಒಂದು ಆತ್ಮವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇನೆ ಎಂದು ಜೀವವು ಹೇಳುವುದಿಲ್ಲ. ನಾನು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇನೆಂದು ಆತ್ಮವೇ ಹೇಳುತ್ತದೆ ಆದರೆ ನಾವು 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆಂದು ಯಾರಿಗೂ ತಿಳಿದಿಲ್ಲ. ಎಲ್ಲರಿಗೂ 84 ಜನ್ಮಗಳು ಸಿಗುವುದಿಲ್ಲ. ಎಲ್ಲರದು ತಮ್ಮ ತಮ್ಮದೇ ಆದ ಲೆಕ್ಕವಿದೆ, ಯಾರು ಮೊಟ್ಟ ಮೊದಲು ಬರುತ್ತಾರೆಯೋ ಅವರು ಅವಶ್ಯವಾಗಿ ಹೆಚ್ಚು ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಗರಿಷ್ಟ 84 ಜನ್ಮಗಳಿವೆ, ಕನಿಷ್ಠ ಒಂದು ಜನ್ಮವಿರಬಹುದು. ಇದನ್ನು ತಂದೆಯು ತಿಳಿಸುತ್ತಾರೆ, ನಾನು ಎಲ್ಲರಿಗೆ ಓದಿಸುವುದಿಲ್ಲ ಆದರೆ ಎಲ್ಲರನ್ನೂ ಜೊತೆಯಲ್ಲಿ ಖಂಡಿತವಾಗಿಯೂ ಕರೆದುಕೊಂಡು ಹೋಗುತ್ತೇನೆ. ಡ್ರಾಮಾನುಸಾರ ಎಲ್ಲರನ್ನು ಕರೆದುಕೊಂಡು ಹೋಗಲು ನಾನು ಬಂಧಿತನಾಗಿದ್ದೇನೆ. ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ. ತಂದೆಯು ಬಂದು ಅವಶ್ಯವಾಗಿ ಹೊಸ ಪ್ರಪಂಚದ ಸ್ಥಾಪನೆ ಮಾಡುತ್ತಾರೆಂಬುದು ಪ್ರಪಂಚದವರಿಗೆ ತಿಳಿದಿಲ್ಲ. ಮನುಷ್ಯರಿಗೆ ರಚಯಿತ ಮತ್ತು ರಚನೆಯ, ಆದಿ-ಮಧ್ಯ-ಅಂತ್ಯದ ಜ್ಞಾನವು ಅಂಶ ಮಾತ್ರವೂ ಗೊತ್ತಿಲ್ಲ. ಹಾ! ಭಕ್ತಿಮಾರ್ಗದ ಬಗ್ಗೆ ತಿಳಿದಿದೆ, ಭಕ್ತಿಮಾರ್ಗದ ರೀತಿ-ನೀತಿಯೇ ಬೇರೆ, ಜ್ಞಾನ ಮಾರ್ಗದ ರೀತಿ-ನೀತಿಗಳೇ ಬೇರೆಯಾಗಿದೆ. ಸತ್ಯಯುಗದಿಂದ ಕಲಿಯುಗದವರೆಗೆ ಭಕ್ತಿಯೇ ನಡೆದು ಬರಲು ಸಾಧ್ಯವಿಲ್ಲ. ಜ್ಞಾನ ದಿನ, ಭಕ್ತಿಯು ರಾತ್ರಿಯೆಂದು ಗಾಯನವಿದೆ. ಅಂಧಕಾರ ರಾತ್ರಿಯಲ್ಲಿ ಮನುಷ್ಯರು ಹುಡುಕಾಡುತ್ತಾರೆ. ತಂದೆಯು ತಿಳಿಸುತ್ತಾರೆ- ಕಲ್ಲು ಮುಳ್ಳುಗಳಲ್ಲಿಯೂ ಹೋಗಿ ನನ್ನನ್ನು ಹುಡುಕುತ್ತಾರೆ. ಕೆಲವರು ಹನುಮಂತನ ಸಾಕ್ಷಾತ್ಕಾರ ಮಾಡುತ್ತಾರೆ, ಇನ್ನೂ ಕೆಲವರು ಗಣೇಶನ ಸಾಕ್ಷಾತ್ಕಾರ ಮಾಡುತ್ತಾರೆ ಆದರೆ ಅವರೆಲ್ಲರೂ ಭಗವಂತರಲ್ಲ, ನನಗೆ ನನ್ನದೇ ಆದ ಶರೀರವಿಲ್ಲ. ಮಾಯಾ ರಾವಣನು ಎಲ್ಲರನ್ನೂ ಮಂಧ ಬುದ್ಧಿಯವರನ್ನಾಗಿ ಮಾಡಿ ಬಿಟ್ಟಿದ್ದಾನೆ. ಯಾವುದಕ್ಕೆ ರಾಮ ರಾಜ್ಯವೆಂದು ಹೇಳಲಾಗುತ್ತದೆ ಎಂಬುದೂ ಸಹ ಭಾರತವಾಸಿಗಳಿಗೆ ಗೊತ್ತಿಲ್ಲ. ಇದು ಗಮನಕ್ಕೂ ಬರುತ್ತದೆ, ಲಕ್ಷ್ಮೀ-ನಾರಾಯಣ ರಾಜ್ಯವು ಇದೇ ಪ್ರಪಂಚದಲ್ಲಿತ್ತು, ಕೇವಲ ರಾಮ ರಾಜ್ಯ ಬೇಕೆಂದು ಹೇಳಿ ಬಿಡುತ್ತಾರೆ. ರಾಮನೆಂದರೆ ಯಾವುದೇ ರಘುಪತಿ ರಾಮನಲ್ಲ, ರಾಮನ ಬಗ್ಗೆ ಶಾಸ್ತ್ರಗಳಲ್ಲಿ ಬಹಳ ಉಲ್ಟಾ ಮಾತುಗಳನ್ನು ಬರೆದಿದ್ದಾರೆ. ಮನುಷ್ಯರು ಮೃತ್ಯುವಿಗೆ ಎಷ್ಟೊಂದು ಹೆದರುತ್ತಾರೆ. ಜೀವನವನ್ನು ರಕ್ಷಿಸಿಕೊಳ್ಳಲು ಆಶೀರ್ವಾದಗಳನ್ನು ಬೇಡುತ್ತಿರುತ್ತಾರೆ. ಈಗಂತೂ ಅನೇಕರು ಮರಣ ಹೊಂದಿದರು, ಅವರಿಗಾಗಿ ಏನು ಹೇಳುವುದು! ತಂದೆಯನ್ನು ಕರೆಯುವುದೇ ಬಾಬಾ, ನಮ್ಮನ್ನು ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗಿರಿ ಎಂದು. ಶಾಂತಿಧಾಮಕ್ಕೆ ಶರೀರಗಳನ್ನಂತೂ ಕರೆದುಕೊಂಡು ಹೋಗುವುದಿಲ್ಲ, ಅಲ್ಲಿಗೆ ಆತ್ಮಗಳೇ ಹೋಗುವರು. ಇದಂತೂ ಹಳೆಯ ಛೀ ಛೀ ಶರೀರವಾಗಿದೆ. ಈ ಬಿದುರಿನ ಕಾಡಿಗೆ ಬೆಂಕಿ ಬೀಳಲಿದೆ ಆದ್ದರಿಂದ ಬೆಂಕಿಯ ಉಂಡೆ (ಬಾಂಬು) ತಯಾರಿಸುತ್ತಿದ್ದಾರೆ. ಈಗ ಬಾಂಬುಗಳನ್ನು ಅವರು ತಯಾರಿಸದಿರಲಿ ಎಂದು ಹೇಳುತ್ತಾರೆ ಆದರೆ ಯಾರ ಬಳಿ ಹೆಚ್ಚು ಬಾಂಬುಗಳಿರುವುದೋ ಅವರು ಅವಶ್ಯವಾಗಿ ಶಕ್ತಿಶಾಲಿಗಳಾಗಿ ಬಿಡುತ್ತಾರೆ ಎಂಬ ತಿಳುವಳಿಕೆಯೂ ಮನುಷ್ಯರಿಗೆ ಇಲ್ಲ ಅಂದಮೇಲೆ ಒಂದುವೇಳೆ ಬಾಂಬುಗಳನ್ನು ತಯಾರು ಮಾಡದಿದ್ದರೆ ಅನ್ಯರು ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಲು ಸಾಧ್ಯ! ಅವರು ಯಾವಾಗ ಎಲ್ಲವನ್ನೂ ಸಮುದ್ರದಲ್ಲಿ ಹಾಕಿ ಬಿಡುವರೋ ಆಗ ಇವರೂ ಸಹ ಅದನ್ನು ತಯಾರಿಸುವುದನ್ನು ನಿಲ್ಲಿಸುವರು ಆದರೆ ಸಮುದ್ರದಿಂದಲೂ ಮೋಡಗಳು ನೀರನ್ನು ಸೆಳೆಯುತ್ತದೆ. ಅದು ಮಳೆಯಾಗಿ ಬಿದ್ದರೆ ಎಲ್ಲವೂ ನಷ್ಟವಾಗಿ ಬಿಡುವುದು. ಹೊಲ-ಗದ್ದೆಗಳು ಸುಟ್ಟು ಹೋಗುವವು ಆದ್ದರಿಂದ ಡ್ರಾಮಾದಲ್ಲಿ ಈ ಯುಕ್ತಿಯು ರಚಿಸಲ್ಪಟ್ಟಿದೆ. ಮೊದಲು ಈ ಬಾಂಬುಗಳಿರಲಿಲ್ಲ, ಈಗ ಹೊರ ಬಂದಿವೆ ಆದ್ದರಿಂದ ಇದೆಲ್ಲವೂ ಬಹಳ ಝೇಂಕರಿಸುತ್ತಿದೆ. ಈಗ ನೀವು ತಿಳಿದುಕೊಂಡಿದ್ದೀರಿ – ಇದೆಲ್ಲವೂ ಪೂರ್ವ ನಿಶ್ಚಿತವಾಗಿದೆ. ನಿಮ್ಮಲ್ಲಿಯೂ ಕೆಲವರಿಗೆ ವಿನಾಶದ ಪೂರ್ವ ನಿಶ್ಚಿತದ ಮೇಲೆ ನಿಶ್ಚಯವಿಲ್ಲ. ಒಂದುವೇಳೆ ಇದ್ದಿದ್ದರೆ ಬಹಳ ಚೆನ್ನಾಗಿ ಯೋಗದಲ್ಲಿರುತ್ತಿದ್ದರು. ಯೋಗಬಲದಿಂದ ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳಬೇಕಾಗಿದೆ. ನಿಮ್ಮದೆಲ್ಲವೂ ಗುಪ್ತವಾಗಿದೆ, ಕಲಿಸುವವರೂ ಗುಪ್ತವಾಗಿದ್ದಾರೆ. ಈ ಕಣ್ಣುಗಳಿಗೆ ಕಂಡು ಬರುವುದಿಲ್ಲ. ನೀವೀಗ ಆತ್ಮಾನುಭೂತಿ ಮಾಡಿದ್ದೀರಿ, ನಾನಾತ್ಮನಲ್ಲಿ 84 ಜನ್ಮಗಳ ಪಾತ್ರವು ಅಡಕವಾಗಿದೆ. ನಾನಾತ್ಮನು ಅವಿನಾಶಿಯಾಗಿದ್ದೇನೆ. ಇದು ಅತಿ ಗುಹ್ಯ ಮಾತಾಗಿದೆ. ಪತ್ರಿಕೆಯಲ್ಲಿಯೂ ಬರೆದಿದ್ದಾರೆ – ಆತ್ಮವೆಂದರೇನು ಯಾವುದು ಶರೀರದಲ್ಲಿರುತ್ತದೆ? ಇದನ್ನು ಯಾರಾದರೂ ತಿಳಿಸಿದರೆ ಅವರಿಗೆ ಲಕ್ಷಾಂತರ ರೂಪಾಯಿಗಳು ಸಿಗುತ್ತದೆ. ಆತ್ಮವೆಂದರೇನು, ಎಲ್ಲಿಂದ ಬರುತ್ತದೆ? ಹೇಗೆ ಪಾತ್ರವನ್ನು ಅಭಿನಯಿಸುತ್ತದೆ? ಇದನ್ನು ಯಾರೂ ತಿಳಿದುಕೊಂಡಿಲ್ಲ. ಅದು ನೀರಿನ ಗುಳ್ಳೆಯಾಗಿದೆ ಎಂದು ಕೆಲವರು ಹೇಳುತ್ತಾರೆ, ಇನ್ನೂ ಕೆಲವರು ಬ್ರಹ್ಮತತ್ವವು ದೊಡ್ಡ ಜ್ಯೋತಿಯಾಗಿದೆ. ಅದರಲ್ಲಿ ಆತ್ಮಗಳೆಲ್ಲರೂ ಲೀನವಾಗಿ ಬಿಡುತ್ತಾರೆಂದು ಹೇಳುತ್ತಾರೆ. ಅನೇಕ ಪ್ರಕಾರದ ಮಾತುಗಳನ್ನು ಆಡುತ್ತಿರುತ್ತಾರೆ. ನೀವು ತಿಳಿದುಕೊಂಡಿದ್ದೀರಿ – ಆತ್ಮವು ಬಿಂದು ಸಮಾನವಾಗಿದೆ, ಅದರಲ್ಲಿ ಪಾತ್ರವನ್ನು ಅಭಿನಯಿಸುವುದು ನಿಗಧಿತವಾಗಿದೆ. ಈ ನಾಟಕವು ಅನಾದಿ, ಮಾಡಿ-ಮಾಡಲ್ಪಟ್ಟಿದೆ, ಅದೆಂದೂ ವಿನಾಶವಾಗುವುದಿಲ್ಲ. ಆತ್ಮವೂ ಅವಿನಾಶಿಯಾಗಿದೆ, ಅದು ಅದೇ ಪಾತ್ರವನ್ನು ಅಭಿನಯಿಸಬೇಕಾಗಿದೆ, ಸ್ವಲ್ಪವೂ ವ್ಯತ್ಯಾಸವಾಗಲು ಸಾಧ್ಯವಿಲ್ಲ. ಕಲ್ಪದ ಮೊದಲು ಯಾರ ಬುದ್ಧಿಯಲ್ಲಿ ಕುಳಿತುಕೊಂಡಿತ್ತೋ ಅವರ ಬುದ್ಧಿಯಲ್ಲಿಯೇ ಇವೆಲ್ಲಾ ಮಾತುಗಳು ಪುನಃ ಕುಳಿತುಕೊಳ್ಳುವವು.

ತಂದೆಯು ತಿಳಿಸುತ್ತಾರೆ – ಇಷ್ಟೆಲ್ಲಾ ಮನುಷ್ಯರಿಗೆ ನಾನು ಹೇಗೆ ಓದಿಸಲಿ? ಹಾ! ಇಷ್ಟು ಮಾತ್ರ ತಿಳಿದುಕೊಳ್ಳುತ್ತಾರೆ – ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಎಲ್ಲರಿಗೆ ಸಂದೇಶ ಸಿಗುವುದು, ತಂದೆಯು ಎಲ್ಲರಿಗೆ ಈ ಮಂತ್ರವನ್ನು ಕೊಡುತ್ತಾರೆ. ತಂದೆಯು ತಿಳಿಸುತ್ತಾರೆ – ನೀವು ಮಕ್ಕಳು ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕು, ಅವಗುಣಗಳನ್ನು ಬಿಡಬೇಕಾಗಿದೆ. ದೇಹಾಭಿಮಾನವನ್ನು ಬಿಡಿ ಎಂದು ಹೇಳುತ್ತಾರೆ ಆದರೂ ಸಹ ಬಿಡುವುದಿಲ್ಲ. ಪಾಪ! ಅವರಿಗೇನು ಸಿಗುತ್ತದೆ? ಒಬ್ಬರು ಇನ್ನೊಬ್ಬರೊಂದಿಗೆ ಪ್ರೀತಿಯಿಂದ ನಡೆಯುವುದಿಲ್ಲ. ನೀವಂತೂ ಬಹಳ ಮಧುರರಾಗಬೇಕಾಗಿದೆ. ತಂದೆಯು ಪ್ರೀತಿಯ ಸಾಗರನಾಗಿದ್ದಾರೆ, ನೀವು ಅವರ ಮಕ್ಕಳಾಗಿದ್ದೀರಿ ಅಂದಮೇಲೆ ನೀವು ಬಹಳ ಪ್ರಿಯರಾಗಬೇಕಾಗಿದೆ. ಎಂದಾದರೂ ಯಾರು ಎಷ್ಟಾದರೂ ಕ್ರೋಧ ಮಾಡಲಿ ಸ್ತುತಿ-ನಿಂದೆ ಎಲ್ಲವನ್ನೂ ಸಹನೆ ಮಾಡಿಕೊಳ್ಳಬೇಕಾಗಿದೆ. ಯಾರಾದರೂ ದಿವಾಳಿಯಾದರೆ ಬಾಬಾ ಈಗ ಸಹಾಯ ಮಾಡಲಿ ಎಂದು ತಿಳಿದುಕೊಳ್ಳುತ್ತಾರೆ. ಇದಂತೂ ನಿಮ್ಮ ಕರ್ಮಭೋಗವಾಗಿದೆ ಅಂದಮೇಲೆ ನೀವು ಸಹನೆ ಮಾಡಲೇಬೇಕಾಗಿದೆ. ಇದರಲ್ಲಿ ತಂದೆ ಏನು ಮಾಡುವರು? ತಂದೆಯು ಬಂದಿರುವುದೇ ಎಲ್ಲಾ ಆತ್ಮರನ್ನೂ ಕರೆದುಕೊಂಡು ಹೋಗಲು. ಇದನ್ನೂ ಸಹ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಪ್ರಪಂಚದಲ್ಲಿ ಎಲ್ಲರೂ ಘೋರ ಅಂಧಕಾರದಲ್ಲಿದ್ದಾರೆ. ಭಕ್ತಿಮಾರ್ಗದಲ್ಲಿ ಅವಶ್ಯವಾಗಿ ಭಕ್ತರಿಗೇ ಮಾನ್ಯತೆಯಿರಬೇಕು. ಶಂಕರಾಚಾರ್ಯ ಮೊದಲಾದವರು ಭಕ್ತರಾಗಿದ್ದಾರೆ, ಅವರಿಗೆ ಪವಿತ್ರ ಭಕ್ತರೆಂದು ಹೇಳಲಾಗುತ್ತದೆ. ಭಕ್ತಿಕಾಂಡವಿದೆಯಲ್ಲವೆ. ಯಾರು ಪವಿತ್ರರಾಗಿರುವರೋ ಅವರದು ಎಷ್ಟು ದೊಡ್ಡ-ದೊಡ್ಡ ಪೀಠಗಳಿವೆ, ಅವರದು ಎಷ್ಟೊಂದು ಮಾನ್ಯತೆಯಿದೆ. ಧರ್ಮ ಗ್ರಂಥಗಳಿಗೂ ಬಹಳ ಮಾನ್ಯತೆಯಿದೆ. ಭಕ್ತಿಗೂ ಸಹ ಬಹಳ ಮಾನ್ಯತೆಯಿದೆ. ಜ್ಞಾನದ ಬಗ್ಗೆ ಯಾರಿಗೂ ತಿಳಿದಿಲ್ಲ. ನೀವು ಯಾವಾಗ ದೇವತೆಗಳಾಗುತ್ತೀರೋ ಆಗ ನಿಮ್ಮದು ಎಷ್ಟೊಂದು ಮಹಿಮೆಯಾಗುತ್ತದೆ! ಯಾರ ತಂದೆ-ತಾಯಿಯು ಯಾವುದೇ ಮಂದಿರಗಳಿಗೆ ಹೋಗದೇ ಇರುವವರು ಯಾರೂ ಇಲ್ಲ. ಭಕ್ತಿಯ ಒಂದಲ್ಲ ಒಂದು ಚಿಹ್ನೆಗಳು ಮನೆಯಲ್ಲಿ ಅವಶ್ಯವಾಗಿ ಇರುತ್ತವೆ, ಹೇ ಭಗವಂತ ಎಂದು ಹೇಳುವುದೂ ಸಹ ಭಕ್ತಿಮಾರ್ಗವಾಗಿದೆ. ನೀವು ಬೇಹದ್ದಿನ ತಂದೆಯ ಮಕ್ಕಳಾಗಿದ್ದೀರಿ. ಇವರು ತಂದೆ, ಅವರು ದಾದಾ ಆಗಿದ್ದಾರೆ ಆದ್ದರಿಂದ ತ್ರಿಮೂರ್ತಿಯ ಚಿತ್ರದಲ್ಲಿ ಬಹಳ ಚೆನ್ನಾಗಿ ತಿಳಿಸಬೇಕಾಗಿದೆ. ಈ ದಾದಾರವರನ್ನು ಏಕೆ ಇಟ್ಟಿದ್ದೀರಿ ಎಂದು ಕೆಲವರು ಕೇಳುತ್ತಾರೆ. ಅರೆ! ಪ್ರಜಾಪಿತ ಬ್ರಹ್ಮನು ಅವಶ್ಯವಾಗಿ ಇಲ್ಲಿಯೇ ಬೇಕಲ್ಲವೆ. ಇವರಂತೂ ವೃಕ್ಷದಲ್ಲಿ ಕೆಳಗಡೆ ತಪಸ್ಸಿನಲ್ಲಿ ಕುಳಿತಿದ್ದಾರೆ ಆದರೆ ಅವರು ಬದಲಾಗುತ್ತಿರುತ್ತಾರೆ. ಇಲ್ಲಿ ಯಾರು ಮುಖ್ಯವಾದವರನ್ನು ತೋರಿಸಿದ್ದಾರೆಯೋ ಅವರು ಸದಾ ಸ್ಥಿರವಾಗಿರುತ್ತಾರೆ. ಮಕ್ಕಳು ಇಲ್ಲಿ ಬಹಳ ಮಧುರರಾಗಬೇಕು. ಚಲನೆಯು ಬಹಳ ಘನತೆಯಿಂದ ಕೂಡಿರಲಿ, ಕಡಿಮೆ ಮಾತನಾಡಬೇಕು. ಮೊಟ್ಟ ಮೊದಲು ತಂದೆಯ ಪರಿಚಯವನ್ನು ಕೊಡಬೇಕು. ಹೆಚ್ಚು ವಾದ-ವಿವಾದ ಮಾಡುವುದು ವ್ಯರ್ಥವಾಗಿದೆ, ಬಹಳ ಕಡಿಮೆ ಹೇಳಿರಿ. ನೀವೂ ಸಹ ಭಕ್ತಿಮಾರ್ಗದಲ್ಲಿ ಬಹಳ ಮಾತನಾಡಿದ್ದೀರಿ, ಕೂಗಿದ್ದೀರಿ, ಎಷ್ಟೊಂದು ಅಲೆದಾಡಿದ್ದೀರಿ. ಈಗ ತಂದೆಯು ನಿಮಗೆ ಸರಳವಾಗಿ ತಿಳಿಸುತ್ತಾರೆ – ಕೇವಲ ತಂದೆಯನ್ನು ನೆನಪು ಮಾಡಿದರೆ ಯೋಗಬಲದಿಂದ ವಿಶ್ವದ ಮಾಲೀಕರಾಗುತ್ತೀರಿ. ಮುಂದೆ ಹೋದಂತೆ ನಂಬರ್ವಾರ್ ಯಾರು-ಯಾರು ಏನಾಗುತ್ತಾರೆಂಬುದು ಅರ್ಥವಾಗುತ್ತದೆ. ಪ್ರಜೆಗಳ ಲೆಕ್ಕವನ್ನು ತೆಗೆಯಲು ಸಾಧ್ಯವಿಲ್ಲ. ಲಕ್ಷಾಂತರ, ಕೋಟ್ಯಾಂತರ ಅಂದಾಜಿನಲ್ಲಿ ಪ್ರಜೆಗಳು ತಯಾರಾಗುತ್ತಾರೆ. ಯಾರು ಬ್ರಾಹ್ಮಣರಾಗುವರೋ ಅವರೇ ಸೂರ್ಯವಂಶಿ, ಚಂದ್ರವಂಶಿಯರಾಗುತ್ತಾರೆ. ಮುಂದೆ ಹೋದಂತೆ ಬಹಳ ನೆನಪು ಮಾಡತೊಡಗುವರು. ಯಾವಾಗ ಮೃತ್ಯು ಸನ್ಮುಖದಲ್ಲಿ ಬರುವುದೋ ಆಗ ವೈರಾಗ್ಯ ಬರುವುದು. ಇದು ಅದೇ ಮಹಾಭಾರತ ಯುದ್ಧವಾಗಿದೆ. ಎಲ್ಲಾ ಆತ್ಮರು ಎಲ್ಲಾ ಲೆಕ್ಕಾಚಾರಗಳನ್ನು ಮುಗಿಸಿಕೊಂಡು ಹೋಗುವರು. ಇದಕ್ಕೆ ಅಂತಿಮಸಮಯ ಎಂದು ಹೇಳಲಾಗುತ್ತದೆ. ಇಷ್ಟು ಶರೀರಗಳೆಲ್ಲವೂ ಸಮಾಪ್ತಿಯಾಗುತ್ತದೆ. ಪ್ರಾಕೃತಿಕ ವಿಕೋಪಗಳಾಗುತ್ತವೆ. ಇವೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ಹೊಸ ಮಾತಿಲ್ಲ. ಬರಗಾಲದ ಕಾರಣ ಮನುಷ್ಯರು ಹಸಿವಿನಿಂದ ನರಳುತ್ತಾರೆ.

ತಂದೆಗೆ ಗೊತ್ತಿದೆ – ನನ್ನ ಮಕ್ಕಳು ಬಹಳ ದುಃಖಿಯಾಗಿದ್ದಾರೆ, ಎಲ್ಲರನ್ನೂ ದುಃಖಗಳಿಂದ ಬಿಡಿಸಿ ಮರಳಿ ಕರೆದುಕೊಂಡು ಹೋಗುವೆನು. ಇವರೆಲ್ಲರೂ ಪರಸ್ಪರ ಹೊಡೆದಾಡುತ್ತಾರೆ. ಬೆಣ್ಣೆಯು ನಿಮಗೇ ಸಿಗುವುದು. ನೀವು ಇಡೀ ವಿಶ್ವದ ಮಾಲೀಕರಾಗುತ್ತೀರಿ. ಬಾಯಲ್ಲಿ ಚಂದ್ರಮನ ಸಾಕ್ಷಾತ್ಕಾರ ಮಾಡುತ್ತಿದ್ದರಲ್ಲವೆ ಅಂದರೆ ಬಾಯಲ್ಲಿ ಇಡೀ ವಿಶ್ವದ ಗೋಲವು ಬಂದು ಬಿಡುತ್ತದೆ. ನೀವು ರಾಜಕುಮಾರ-ಕುಮಾರಿಯರಾಗುತ್ತೀರಿ. ಇಡೀ ಸೃಷ್ಟಿಯೇ ನಿಮ್ಮ ಮುಷ್ಟಿಯಲ್ಲಿದೆ. ಮುಷ್ಟಿಯಲ್ಲಿಯೂ ತೋರಿಸುತ್ತಾರೆ ಮತ್ತು ಬಾಯಲ್ಲಿಯೂ ಸೃಷ್ಟಿಯನ್ನು ತೋರಿಸುತ್ತಾರೆ. ಈಗ ಸ್ವರ್ಗದ ಗೋಲವು ನಿಮ್ಮ ಬಾಯಲ್ಲಿದೆ. ನಾವು ಯೋಗಬಲದಿಂದ ವಿಶ್ವದ ಮಾಲೀಕರಾಗುತ್ತೇವೆ. ಯೋಗದಿಂದ ಆರೋಗ್ಯ, ಜ್ಞಾನದಿಂದ ಐಶ್ವರ್ಯ ಸಿಗುತ್ತದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ನೀವು ಚಕ್ರವರ್ತಿ ರಾಜರಾಗುತ್ತೀರಿ ಆದರೆ ಮಕ್ಕಳಿಗೆ ವಿದ್ಯೆಯಪ್ರತಿ ಅಷ್ಟೊಂದು ಗಮನವಿಲ್ಲ. ಭಲೆ ಸ್ಥಳ ಬದಲಾವಣೆಯಾಗಬಹುದು ಆದರೆ ತಂದೆಯು ತಿಳಿಸುತ್ತಾರೆ – ಎಲ್ಲಿಯೇ ಇರಿ ವಿದ್ಯೆಯನ್ನು ಅವಶ್ಯವಾಗಿ ಓದಿರಿ, ಪವಿತ್ರರಾಗಿರಿ. ಆಹಾರ-ಪಾನೀಯಗಳನ್ನು ಶುದ್ಧವಾಗಿಟ್ಟುಕೊಳ್ಳಿ. ಎಲ್ಲರೊಂದಿಗೆ ಸಂಬಂಧವನ್ನೂ ನಿಭಾಯಿಸಬೇಕಾಗಿದೆ. ಪ್ರಪಂಚವು ದುಃಖ ಕೊಡುವಂತದ್ದಾಗಿದೆ, ಮುಖ್ಯವಾದುದು ಕಾಮ ಕಟಾರಿಯನ್ನು ನಡೆಸುವುದಾಗಿದೆ. ಅದನ್ನೂ ಸಹ ಕಷ್ಟದಿಂದ ಬಿಡುತ್ತಾರೆ. ಏನಾದರೂ ಹೇಳಿದರೆ ವಿರೋಧಿಗಳಾಗಿ ಬಿಡುತ್ತಾರೆ ಮತ್ತೆ ಅಬಲೆಯರ ಮೇಲೆ ಎಷ್ಟೊಂದು ವಿಘ್ನಗಳು ಬರುತ್ತವೆ. ಈ ಆರ್ಯ ಸಮಾಜಿಗಳು ಎಲ್ಲಿದ್ದಾರೆ, ಇದು ಅಂತಿಮ ರೆಂಬೆಯಾಗಿದೆ. ದೇವತೆಗಳನ್ನು ಒಪ್ಪುವವರಲ್ಲ. ಮಹಾವೀರ, ಹನುಮಂತನ ಹೆಸರಿದೆ. ವೀರತ್ವವನ್ನು ತೋರಿಸಿದ್ದಾರೆ. ಜೈನರಲ್ಲಿಯೂ ಮಹಾವೀರ ಎಂಬ ಹೆಸರನ್ನಿಟ್ಟಿದ್ದಾರೆ, ಅದರ ಅರ್ಥವನ್ನು ಈಗ ನೀವು ತಿಳಿದುಕೊಂಡಿದ್ದೀರಿ. ನೀವು ಮಕ್ಕಳೂ ಸಹ ಮಹಾವೀರರಾಗಿದ್ದೀರಿ, ರಾವಣನ ಮೇಲೆ ಜಯ ಗಳಿಸುತ್ತೀರಿ. ಇದು ಯೋಗಬಲದ ಮಾತಾಗಿದೆ. ನೀವು ತಂದೆಯನ್ನು ನೆನಪು ಮಾಡುತ್ತೀರಿ ಅದರಿಂದ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ನಂತರ ಸುಖ-ಶಾಂತಿಯಲ್ಲಿ ಹೋಗುತ್ತೀರಿ. ಈ ಸಂದೇಶವನ್ನು ಎಲ್ಲರಿಗೆ ಕೊಡಬೇಕಾಗಿದೆ. ಈ ಸ್ಥಾಪನೆಯೇ ಬಹಳ ಅದ್ಭುತವಾಗಿದೆ, ಇದನ್ನು ಯಾರೂ ತಿಳಿದುಕೊಂಡಿಲ್ಲ. ನಿಮ್ಮಲ್ಲಿಯೂ ನಂಬರ್ವಾರ್ ಇದ್ದಾರೆ. ಒಳಗೆ ಯಾವುದೇ ವಿಕಾರವಿರಬಾರದು, ತಂದೆಯು ಆತ್ಮಕ್ಕೆ ಜ್ಞಾನವನ್ನು ಕೊಡುತ್ತಿದ್ದಾರೆ. ಆತ್ಮವು ವಿಕಾರಿಯಾಗುತ್ತದೆ, ಎಲ್ಲವನ್ನು ಆತ್ಮವೇ ಮಾಡುತ್ತದೆ ಅಂದಮೇಲೆ ಈಗ ತಂದೆಯ ಶ್ರೀಮತದಂತೆ ಸಂಪೂರ್ಣ ನಡೆಯಬೇಕಾಗಿದೆ. ಸದ್ಗುರುವಿನ ಸನ್ಮುಖದಲ್ಲಿದ್ದು ನಿಂದನೆ ಮಾಡಿಸಿದರೆ ಪದವಿ ಪಡೆಯಲು ಸಾಧ್ಯವಿಲ್ಲ. ಯಾವುದೇ ಪಾಪ ಮಾಡುವುದು, ನಿಂದನೆಯಾಯಿತು. ಶಿಕ್ಷಕರ ಮತದಂತೆ ನಡೆಯದಿದ್ದರೆ ಪದವಿಯಲ್ಲಿ ಅನುತ್ತೀರ್ಣರಾಗಿ ಬಿಡುವರು. ಶಿಕ್ಷಕನ ಶಿಕ್ಷಣವನ್ನು ತೆಗೆದುಕೊಳ್ಳುತ್ತಾ ಇದ್ದರೆ ಪಾಸ್-ವಿತ್-ಆನರ್ ಆಗುತ್ತಾರೆ. ಅವು ಹದ್ದಿನ ಮಾತುಗಳು, ಇವು ಬೇಹದ್ದಿನ ಮಾತುಗಳಾಗಿವೆ. ಭಗವಂತ ಯಾರು ಎಂಬುದು ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ಮಾಯೆಯೂ ಸಹ ಸತೋ, ರಜೋ, ತಮೋ ಆಗುತ್ತದೆ. ಈಗ ಮಾಯೆಯೂ ಸಹ ತಮೋಪ್ರಧಾನವಾಗಿದೆ, ನೋಡಿ ಏನೇನು ಮಾಡುತ್ತಿರುತ್ತಾರೆ! ನಾವು ಯಾವುದಕ್ಕೆ ಬೆಂಕಿಯನ್ನು ಇಡುತ್ತಿದ್ದೇವೆ ಎಂಬುದು ಯಾರಲ್ಲಿಯೂ ಬುದ್ಧಿಯಿಲ್ಲ. ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ಏನೆಲ್ಲವೂ ಆಗುತ್ತದೆಯೋ ಅದು ಡ್ರಾಮಾನುಸಾರ ಆಗುತ್ತದೆ. ಕೌರವರ ಯೋಜನೆ, ಯಾದವರ ಯೋಜನೆ ಮತ್ತು ಪಾಂಡವರ ಯೋಜನೆ, ಏನೇನು ಮಾಡಿ ಹೋಯಿತು? ಪಾಂಡವರಿಗೆ ಸರ್ವ ಶ್ರೇಷ್ಠ ಉಪಾಯವನ್ನು ತಿಳಿಸುವವರು ತಂದೆಯಾಗಿದ್ದಾರೆ. ಹೊಸ ಪ್ರಪಂಚದಲ್ಲಿ ಲಕ್ಷ್ಮಿ-ನಾರಾಯಣರ ರಾಜ್ಯವಿತ್ತು. ಈಗ ಹಳೆಯ ಪ್ರಪಂಚದ ವಿನಾಶವಾಗಲಿದೆ. ನೀವು ಅತೀ ಪ್ರಿಯ ತಂದೆಯಿಂದ ಅತಿಪ್ರಿಯ ಮಕ್ಕಳು ಆಸ್ತಿಯನ್ನು ಪಡೆಯುತ್ತಿದ್ದೀರಿ. ತಂದೆಯ ವಿನಃ ನಾನು ನಿಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇನೆ ಎಂದು ಹೇಳುವವರು ಮತ್ತ್ಯಾರೂ ಇಲ್ಲ. ಎಲ್ಲರೂ ಪರಮಾತ್ಮನೇ ಎಂದು ಅವರು ಹೇಳಿ ಬಿಡುತ್ತಾರೆ. ಆದರೆ ಇದು ಹೇಳುವುದಕ್ಕಾದರೂ ಹೇಗೆ ಬರುತ್ತದೆ! ಇವೆಲ್ಲಾ ಮಾತುಗಳನ್ನು ನೀವೇ ತಿಳಿದುಕೊಂಡಿದ್ದೀರಿ, ಮತ್ತ್ಯಾರಿಗೂ ಗೊತ್ತಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ವಿನಾಶದ ಪೂರ್ವ ನಿಶ್ಚಿತವನ್ನರಿತು ಸಂಪೂರ್ಣ ಶ್ರೀಮತದಂತೆ ನಡೆಯಬೇಕಾಗಿದೆ. ನೆನಪಿನ ಬಲದಿಂದ ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುವ ಪುರುಷಾರ್ಥ ಮಾಡಬೇಕಾಗಿದೆ. ತಮ್ಮ ಬೆಳಗಿರುವ ಜ್ಯೋತಿಯಿಂದ ಎಲ್ಲರ ಜ್ಯೋತಿಗಳನ್ನು ಬೆಳಗಿಸಿ ಸತ್ಯ ದೀಪಾವಳಿಯನ್ನು ಆಚರಿಸಬೇಕಾಗಿದೆ.

2. ಸ್ತುತಿ-ನಿಂದೆ ಎಲ್ಲವನ್ನೂ ಸಹನೆ ಮಾಡುತ್ತಾ ತಂದೆಯ ಸಮಾನ ಪ್ರೀತಿಯ ಸಾಗರರಾಗಬೇಕಾಗಿದೆ. ಚಲನೆಯು ಬಹಳ ಘನತೆಯಿಂದ ಇಟ್ಟುಕೊಳ್ಳಬೇಕಾಗಿದೆ. ಬಹಳ ಕಡಿಮೆ ಮಾತನಾಡಬೇಕಾಗಿದೆ.

ವರದಾನ:-

ಯಾವುದೇ ಕಾರ್ಯದಲ್ಲಿ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳಬೇಕೆಂದರೆ ಮೊದಲು ಸ್ಮೃತಿಯ ಮೂಲಕ ಸಮರ್ಥ ಸ್ವರೂಪರಾಗಿರಿ. ಸಮರ್ಥತೆ ಬರುವುದರಿಂದ ಮಾಯೆಯನ್ನು ಎದುರಿಸುವುದು ಸಹಜವಾಗುವುದು. ಸ್ಮೃತಿಯಂತೆ ಸ್ವರೂವಾಗುವುದು ಆದ್ದರಿಂದ ಸದಾ ಶಕ್ತಿಶಾಲಿ ಸ್ಮೃತಿಯಿರುತ್ತದೆ – ಎಲ್ಲಿಯವರೆಗೆ ಈ ಈಶ್ವರೀಯ ಜನ್ಮವಿದೆಯೋ ಅಲ್ಲಿಯವರೆಗೆ ಪ್ರತೀ ಸೆಕೆಂಡ್, ಪ್ರತೀ ಸಂಕಲ್ಪ, ಪ್ರತೀ ಕಾರ್ಯದಲ್ಲಿ ಈಶ್ವರೀಯ ಸೇವೆಯಲ್ಲಿದ್ದೇನೆ. ಇದು ನಮ್ಮ ಈಶ್ವರೀಯ ಕುಲವಾಗಿದೆ ಎಂಬ ಸ್ಮೃತಿಯ ಸ್ಥಾನವು, ಸರ್ವ ಬಲಹೀನತೆಗಳನ್ನು ಸಮಾಪ್ತಿ ಮಾಡಿ ಬಿಡುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top