30 May 2021 KANNADA Murli Today – Brahma Kumaris
29 May 2021
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
ಮನನ ಮಾಡುವ ವಿಧಿ ಹಾಗೂ ಮನನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಯುಕ್ತಿಗಳು
♫ ಕೇಳು ಇಂದಿನ ಮುರ್ಲಿ (audio)➤
ಇಂದು ರತ್ನಾಗಾರ ತಂದೆಯು ತನ್ನ ಅಮೂಲ್ಯ ರತ್ನಗಳೊಂದಿಗೆ ಮಿಲನ ಮಾಡಲು ಬಂದಿದ್ದಾರೆ – ಪ್ರತಿಯೊಬ್ಬ ಶ್ರೇಷ್ಟ ಆತ್ಮನು ಎಷ್ಟು ಜ್ಞಾನ ರತ್ನಗಳನ್ನು ಜಮಾ ಮಾಡಿಕೊಂಡಿದ್ದೀರಿ ಅರ್ಥಾತ್ ಜೀವನದಲ್ಲಿ ಧಾರಣೆ ಮಡಿಕೊಂಡಿದ್ದೀರಿ? ಒಂದೊಂದು ಜ್ಞಾನ ರತ್ನವು ಪದುಮಗಳಿಗಿಂತಲೂ ಹೆಚ್ಚು ಅಮೂಲ್ಯವಾಗಿದೆ ಅಂದಾಗ ಆಲೋಚಿಸಿ, ಆದಿಯಿಂದ ಇಲ್ಲಿಯವರೆಗೆ ಎಷ್ಟು ಜ್ಞಾನ ರತ್ನಗಳು ಸಿಕ್ಕಿವೆ! ರತ್ನಾಗಾರ ತಂದೆಯು ಪ್ರತಿಯೊಬ್ಬ ಮಗುವಿನ ಬುದ್ಧಿರೂಪಿ ಜೋಳಿಗೆಯಲ್ಲಿ ಅನೇಕಾನೇಕ ರತ್ನಗಳನ್ನು ತುಂಬಿದ್ದೇವೆ. ಎಲ್ಲಾ ಮಕ್ಕಳಿಗೂ ಒಂದೇ ಬಾರಿ, ಒಂದೇ ತರಹವಾಗಿ ಜ್ಞಾನ ರತ್ನಗಳನ್ನು ಕೊಟ್ಟಿದ್ದೇವೆ ಆದರೆ ಈ ಜ್ಞಾನ ರತ್ನಗಳನ್ನು ಸ್ವಯಂನ ಪ್ರತಿ ಹಾಗೂ ಅನ್ಯ ಆತ್ಮಗಳ ಪ್ರತಿ ಎಷ್ಟು ಕಾರ್ಯದಲ್ಲಿ ತೊಡಗಿಸುತ್ತೀರೋ ಅಷ್ಟು ಈ ಜ್ಞಾನ ರತ್ನಗಳು ಹೆಚ್ಚುತ್ತಾ ಹೋಗುತ್ತವೆ. ಬಾಪ್ದಾದಾ ನೋಡುತ್ತಿದ್ದೇವೆ, ತಂದೆಯಂತೂ ಎಲ್ಲರಿಗೂ ಸಮಾನವಾಗಿ ಕೊಟ್ಟರು. ಆದರೆ ಕೆಲವು ಮಕ್ಕಳು ರತ್ನಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಇನ್ನೂ ಕೆಲವರು ರತ್ನಗಳನ್ನು ಹೆಚ್ಚಿಸಿಕೊಂಡಿಲ್ಲ. ಕೆಲವರು ಸಂಪನ್ನರಾಗಿದ್ದಾರೆ, ಕೆಲವರು ಮುಗಿಯದಂತೆ ಸಂಪನ್ನರಾಗಿದ್ದಾರೆ. ಇನ್ನೂ ಕೆಲವರು ಸಮಯ ಪ್ರಮಾಣ ಕಾರ್ಯದಲ್ಲಿ ತೊಡಗಿಸಿದ್ದಾರೆ. ಮತ್ತೆ ಕೆಲವರು ಸದಾ ಕಾರ್ಯದಲ್ಲಿ ತೊಡಗಿಸಿ ಒಂದಕ್ಕೆ ಪದಮಾಗುಣದಷ್ಟು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಕೆಲವರು ಎಷ್ಟು ಕಾರ್ಯದಲ್ಲಿ ತೊಡಗಿಸಬೇಕೋ ಅಷ್ಟು ತೊಡಗಿಸುತ್ತಿಲ್ಲ. ಆದ್ದರಿಂದ ರತ್ನಗಳ ಬೆಲೆಯನ್ನು ಎಷ್ಟು ತಿಳಿದುಕೊಳ್ಳಬೇಕೋ ಅಷ್ಟು ತಿಳಿದುಕೊಳ್ಳುತ್ತಿಲ್ಲ. ಎಷ್ಟು ಸಿಕ್ಕಿದೆಯೋ ಅಷ್ಟನ್ನು ಬುದ್ಧಿಯಲ್ಲಿ ಧಾರಣೆಯಂತೂ ಮಾಡಿಕೊಂಡರು ಆದರೆ ಕಾರ್ಯದಲ್ಲಿ ತರುವುದರಿಂದ ಯಾವ ಸುಖ, ಶಾಂತಿ, ಶಕ್ತಿ, ಖುಷಿ ಮತ್ತು ನಿರ್ವಿಘ್ನ ಸ್ಥಿತಿಯ ಪ್ರಾಪ್ತಿಯ ಅನುಭೂತಿಯಾಗಬೇಕೋ ಅದು ಆಗುತ್ತಿಲ್ಲ. ಇದಕ್ಕೆ ಕಾರಣ ಮನನ ಶಕ್ತಿಯ ಕೊರತೆಯಾಗಿದೆ ಏಕೆಂದರೆ ಮನನ ಮಾಡುವುದು ಅರ್ಥಾತ್ ಜೀವನದಲ್ಲಿ ಸಮಾವೇಶ ಮಾಡಿಕೊಳ್ಳುವುದು, ಧಾರಣೆ ಮಾಡಿಕೊಳ್ಳುವುದಾಗಿದೆ. ಮನನ ಮಾಡದೇ ಇರುವುದೆಂದರೆ ಕೇವಲ ಬುದ್ಧಿಯವರೆಗೆ ಮಾತ್ರ ಧಾರಣೆ ಮಾಡಿಕೊಳ್ಳುವುದಾಗಿದೆ. ಮೊದಲನೆಯವರು ಜೀವನದ ಪ್ರತೀ ಕಾರ್ಯದಲ್ಲಿ, ಪ್ರತೀ ಕರ್ಮದಲ್ಲಿ ತನ್ನ ಪ್ರತಿ ಅಥವಾ ಅನ್ಯರ ಪ್ರತಿ ತೊಡಗಿಸುತ್ತಾರೆ ಮತ್ತು ಎರಡನೆಯವರು ಕೇವಲ ಬುದ್ಧಿಯಲ್ಲಿ ನೆನಪಿಟ್ಟುಕೊಳ್ಳುತ್ತಾರೆ ಅರ್ಥಾತ್ ಧಾರಣೆ ಮಾಡಿಕೊಳ್ಳುತ್ತಾರೆ.
ಹೇಗೆ ಯಾವುದೇ ಸ್ಥೂಲ ಖಜಾನೆಯನ್ನು ಕೇವಲ ಜೇಬಿನಲ್ಲಿ ಅಥವಾ ಲಾಕರ್ನಲ್ಲಿ ಇಟ್ಟುಕೊಂಡು ಸದಾ ಕಾರ್ಯದಲ್ಲಿ ತೊಡಗಿಸಲಿಲ್ಲವೆಂದರೆ ಅದರ ಖುಷಿಯ ಪ್ರಾಪ್ತಿಯಾಗುವುದಿಲ್ಲ. ಕೇವಲ ನನ್ನ ಬಳಿ ಇದೆಯೆಂಬ ಹೃದಯದ ಭರವಸೆಯಿರುತ್ತದೆ. ಅದು ವೃದ್ಧಿಯಾಗುವುದೂ ಇಲ್ಲ, ಅನುಭೂತಿಯೂ ಆಗುವುದಿಲ್ಲ. ಅದೇರೀತಿ ಜ್ಞಾನ ರತ್ನಗಳನ್ನು ಕೇವಲ ಬುದ್ಧಿಯಲ್ಲಿ ಧಾರಣೆ ಮಾಡಿಕೊಂಡಿರಿ, ನೆನಪಿಟ್ಟುಕೊಂಡಿರಿ, ಹೌದು ಈ ವಿಚಾರವು ಬಹಳ ಚೆನ್ನಾಗಿದೆಯೆಂದು ವರ್ಣನೆ ಮಾಡಿದಿರೆಂದರೆ ಅದು ಸ್ವಲ್ಪ ಸಮಯಕ್ಕಾಗಿ ಆ ಒಳ್ಳೆಯ ವಿಚಾರದ ನಶೆಯಿರುತ್ತದೆ. ಆದರೆ ಜೀವನದಲ್ಲಿ ಪ್ರತೀ ಕರ್ಮದಲ್ಲಿ ಆ ಜ್ಞಾನ ರತ್ನಗಳನ್ನು ತರಬೇಕಾಗಿದೆ ಏಕೆಂದರೆ ಜ್ಞಾನವು ರತ್ನವೂ ಆಗಿದೆ, ಜ್ಞಾನವು ಪ್ರಕಾಶತೆಯೂ ಆಗಿದೆ, ಶಕ್ತಿಯೂ ಆಗಿದೆ. ಆದ್ದರಿಂದ ಒಂದುವೇಳೆ ಇದೇ ವಿಧಿಯಿಂದ ಕರ್ಮದಲ್ಲಿ ತರಲಿಲ್ಲವೆಂದರೆ ಅದು ವೃದ್ಧಿಯಾಗುವುದಿಲ್ಲ ಹಾಗೂ ಅನುಭೂತಿಯೂ ಆಗುವುದಿಲ್ಲ. ಜ್ಞಾನವು ವಿದ್ಯೆಯೂ ಆಗಿದೆ, ಜ್ಞಾನವು ಯುದ್ಧದ ಶ್ರೇಷ್ಠ ಶಸ್ತ್ರವೂ ಆಗಿದೆ. ಇದು ಜ್ಞಾನದ ಬೆಲೆಯಾಗಿದೆ, ಬೆಲೆಯನ್ನು ಅರಿತುಕೊಳ್ಳುವುದೆಂದರೆ ಕಾರ್ಯದಲ್ಲಿ ತೊಡಗಿಸುವುದು ಮತ್ತು ಎಷ್ಟೆಷ್ಟು ಕಾರ್ಯದಲ್ಲಿ ತೊಡಗಿಸುವಿರೋ ಅಷ್ಟು ಶಕ್ತಿಯ ಅನುಭವ ಮಾಡುತ್ತಾ ಹೋಗುವಿರಿ. ಹೇಗೆ ಶಸ್ತ್ರವನ್ನು ಸಮಯ ಪ್ರಮಾಣ ಉಪಯೋಗಿಸಲಿಲ್ಲವೆಂದರೆ ಆ ಶಸ್ತ್ರವು ವ್ಯರ್ಥವಾಗಿ ಬಿಡುತ್ತದೆ ಅರ್ಥಾತ್ ಅದಕ್ಕೆ ಎಷ್ಟು ಬೆಲೆಯಿರಬೇಕೋ ಅಷ್ಟು ಇರುವುದಿಲ್ಲ. ಜ್ಞಾನವೂ ಸಹ ಶಸ್ತ್ರವಾಗಿದೆ. ಒಂದುವೇಳೆ ಮಾಯಾಜೀತರಾಗುವ ಸಮಯದಲ್ಲಿ ಶಸ್ತ್ರವನ್ನು ಕಾರ್ಯದಲ್ಲಿ ತೊಡಗಿಸಲಿಲ್ಲವೆಂದರೆ ಅದಕ್ಕೆ ಯಾವ ಬೆಲೆಯಿದೆಯೋ ಅದನ್ನು ಕಡಿಮೆ ಮಾಡಿಬಿಟ್ಟಿರಿ ಏಕೆಂದರೆ ಲಾಭವನ್ನು ತೆಗೆದುಕೊಳ್ಳಲಿಲ್ಲ. ಲಾಭ ತೆಗೆದುಕೊಳ್ಳುವುದೆಂದರೆ ಅದರ ಪ್ರತಿ ಬೆಲೆಯಿಡುವುದು. ಜ್ಞಾನರತ್ನಗಳು ಎಲ್ಲರ ಬಳಿಯಿದೆ ಏಕೆಂದರೆ ಅಧಿಕಾರಿಯಾಗಿದ್ದೀರಿ ಆದರೆ ಅದರಿಂದ ಸಂಪನ್ನರಾಗಿರುವುದರಲ್ಲಿ ನಂಬರ್ವಾರ್ ಆಗಿದ್ದೀರಿ. ಮೂಲ ಕಾರಣವನ್ನು ತಿಳಿಸಿದೆವಲ್ಲವೆ – ಮನನ ಶಕ್ತಿಯ ಕೊರತೆಯಿದೆ.
ಮನನ ಶಕ್ತಿಯು ತಂದೆಯ ಖಜಾನೆಯನ್ನು ತನ್ನ ಖಜಾನೆಯೆಂದು ಅನುಭವ ಮಾಡಿಸುವ ಆಧಾರವಾಗಿದೆ. ಹೇಗೆ ಸ್ಥೂಲ ಭೋಜನವು ಜೀರ್ಣವಾದಾಗ ಅದು ರಕ್ತವಾಗುತ್ತದೆ ಏಕೆಂದರೆ ಭೋಜನವೇ ಬೇರೆಯಾಗಿದೆ. ಅದನ್ನು ಯಾವಾಗ ಜೀರ್ಣ ಮಾಡಿಕೊಳ್ಳುತ್ತೀರೋ ಆಗ ಅದು ರಕ್ತದ ರೂಪದಲ್ಲಿ ತನ್ನದಾಗಿ ಬಿಡುತ್ತದೆ. ಹಾಗೆಯೇ ಮನನ ಶಕ್ತಿಯಿಂದ ತಂದೆಯ ಖಜಾನೆಯೇ ನನ್ನ ಖಜಾನೆ, ಇದು ನನ್ನ ಅಧಿಕಾರ, ತನ್ನ ಖಜಾನೆಯೆಂಬ ಅನುಭವವಾಗುತ್ತದೆ. ಬಾಪ್ದಾದಾ ಮೊದಲಿನಿಂದಲೂ ತಿಳಿಸುತ್ತಾ ಬಂದಿದ್ದೇವೆ – ತನ್ನಲ್ಲಿ ತಾನು ಚಿಂತನೆ ಮಾಡಿದಾಗ ನಶೆ ಬರುವುದು ಅರ್ಥಾತ್ ತಂದೆಯ ಖಜಾನೆಯನ್ನು ಮನನ ಶಕ್ತಿಯಿಂದ ಕಾರ್ಯದಲ್ಲಿ ತೊಡಗಿಸಿ, ಪ್ರಾಪ್ತಿಗಳ ಅನುಭೂತಿ ಮಾಡಿ ಆಗ ನಶೆಯೇರುವುದು. ಕೇಳುವ ಸಮಯದಲ್ಲಿ ನಶೆಯಿರುವುದು ಆದರೆ ಸದಾ ಏಕೆ ಇರುವುದಿಲ್ಲ? ಇದಕ್ಕೆ ಕಾರಣವೇನೆಂದರೆ ಸದಾ ಮನನ ಶಕ್ತಿಯಿಂದ ತನ್ನದನ್ನಾಗಿ ಮಾಡಿಕೊಂಡಿಲ್ಲ. ಮನನಶಕ್ತಿ ಅರ್ಥಾತ್ ಸಾಗರದ ಆಳದಲ್ಲಿ ಹೋಗಿ ಅಂತರ್ಮುಖಿಯಾಗಿ ಪ್ರತಿಯೊಂದು ಜ್ಞಾನ ರತ್ನಗಳ ಗುಹ್ಯತೆಯಲ್ಲಿ ಹೋಗುವುದು. ಕೇವಲ ರಿಪೀಟ್ ಮಾಡುವುದಲ್ಲ ಆದರೆ ಪ್ರತಿಯೊಂದು ಮಾತಿನ ರಹಸ್ಯವೇನು ಮತ್ತು ತಂದೆಯ ಪ್ರತೀ ಮಾತನ್ನು ಯಾವ ಸಮಯ ಯಾವ ವಿಧಿಯಿಂದ ಕಾರ್ಯದಲ್ಲಿ ತೊಡಗಿಸಬೇಕು ಹಾಗೂ ಪ್ರತೀ ಮಾತನ್ನು ಅನ್ಯ ಆತ್ಮಗಳ ಪ್ರತಿ ಸೇವೆಯಲ್ಲಿ ಯಾವ ವಿಧಿಯಿಂದ ಕಾರ್ಯದಲ್ಲಿ ತೊಡಗಿಸಬೇಕು – ಈ ನಾಲ್ಕೂ ಮಾತುಗಳಲ್ಲಿ ಪ್ರತಿಯೊಂದು ಅಂಶವನ್ನು ಕೇಳಿ ಮನನ ಮಾಡಿ. ಜೊತೆ ಜೊತೆಗೆ ಮನನ ಮಾಡುತ್ತಾ ಪ್ರತ್ಯಕ್ಷದಲ್ಲಿ ಆ ರಹಸ್ಯದ ರಸದಲ್ಲಿ ಹೊರಟು ಹೋಗಿ ನಶೆಯ ಅನುಭೂತಿಯಲ್ಲಿ ಬನ್ನಿ. ಮಾಯೆಯ ಭಿನ್ನ-ಭಿನ್ನ ವಿಘ್ನಗಳ ಸಮಯ ಹಾಗೂ ಪ್ರಕೃತಿಯ ಭಿನ್ನ-ಭಿನ್ನ ಪರಿಸ್ಥಿತಿಗಳ ಸಮಯದಲ್ಲಿ ಕಾರ್ಯದಲ್ಲಿ ತೊಡಗಿಸಿ ನೋಡಿ – ಈ ಪರಿಸ್ಥಿತಿಯ ಪ್ರಮಾಣ ಅಥವಾ ವಿಘ್ನದ ಪ್ರಮಾಣ ಈ ಜ್ಞಾನರತ್ನವು ಮಾಯಾಜೀತರನ್ನಾಗಿ ಮಾಡಬಲ್ಲದು ಅಥವಾ ಮಾಡುವಂತದ್ದಾಗಿದೆ ಎಂದು ಯಾವ ಮನನ ಮಾಡಿದೆನೋ ಅದು ಪ್ರತ್ಯಕ್ಷದಲ್ಲಿ ಕಾರ್ಯ ಮಾಡಿತೇ ಅರ್ಥಾತ್ ಮಾಯಾಜೀತನಾದೆನೇ? ಅಥವಾ ಮಾಯಾಜೀತ ಆಗುತ್ತೇನೆಂದು ಯೋಚಿಸಿದ್ದೆನು ಆದರೆ ಪರಿಶ್ರಮ ಪಡಬೇಕಾಯಿತು ಅಥವಾ ಸಮಯ ವ್ಯರ್ಥವಾಯಿತೇ? ಇದರಿಂದ ಸಿದ್ಧವಾಗುತ್ತದೆ – ವಿಧಿಯು ಯಥಾರ್ಥವಾಗಿರಲಿಲ್ಲ ಆದ್ದರಿಂದ ಸಿದ್ಧಿಯು ಸಿಗಲಿಲ್ಲ. ಉಪಯೋಗಿಸುವ ವಿಧಿಯೂ ಬೇಕು, ಅಭ್ಯಾಸವೂ ಬೇಕು. ಹೇಗೆ ವಿಜ್ಞಾನಿಗಳೂ ಸಹ ಬಹಳ ಶಕ್ತಿಶಾಲಿ ಬಾಂಬುಗಳನ್ನು ತೆಗೆದುಕೊಂಡು ಹೋಗುತ್ತಾರೆ, ಇದರಿಂದ ನಾವೀಗ ಜಯ ಪಡೆಯುತ್ತೇವೆಂದು ತಿಳಿದುಕೊಳ್ಳುತ್ತಾರೆ ಆದರೆ ಉಪಯೋಗಿಸುವವರಿಗೆ ಅದನ್ನು ಉಪಯೋಗಿಸುವ ವಿಧಿಯು ಬರಲಿಲ್ಲವೆಂದರೆ ಶಕ್ತಿಶಾಲಿ ಬಾಂಬುಗಳಾಗಿದ್ದರೂ ಸಹ ಅದು ಎಲ್ಲೆಲ್ಲೊ ಇಂತಹ ಸ್ಥಾನದಲ್ಲಿ ಹೋಗಿ ಬೀಳುತ್ತದೆ ಅದು ವ್ಯರ್ಥವಾಗಿ ಹೊರಟು ಹೋಗುತ್ತದೆ. ಕಾರಣವೇನಾಯಿತು? ಉಪಯೋಗಿಸುವ ವಿಧಿಯು ಸರಿಯಿಲ್ಲ. ಹೀಗೆ ಒಂದೊಂದು ಜ್ಞಾನ ರತ್ನವು ಅತೀ ಅಮೂಲ್ಯವಾಗಿದೆ. ಜ್ಞಾನ ರತ್ನ ಅಥವಾ ಜ್ಞಾನದ ಶಕ್ತಿಯ ಮುಂದೆ ಪರಿಸ್ಥಿತಿ ಹಾಗೂ ವಿಘ್ನವು ನಿಲ್ಲಲು ಸಾಧ್ಯವಿಲ್ಲ ಆದರೆ ಒಂದುವೇಳೆ ವಿಜಯವಾಗಲಿಲ್ಲವೆಂದರೆ ತಿಳಿದುಕೊಳ್ಳಿ, ಅದನ್ನು ಉಪಯೋಗಿಸುವ ವಿಧಿಯು ಬರುತ್ತಿಲ್ಲ. ಎರಡನೆಯ ಮಾತೇನೆಂದರೆ ಮನನ ಶಕ್ತಿಯ ಅಭ್ಯಾಸವನ್ನು ಸದಾ ಮಾಡದೇ ಇರುವ ಕಾರಣ ಸಮಯದಲ್ಲಿ ಅಭ್ಯಾಸವಿಲ್ಲದೆ ಆಕಸ್ಮಿಕವಾಗಿ ಕಾರ್ಯದಲ್ಲಿ ತೊಡಗಿಸುವ ಪ್ರಯತ್ನ ಮಾಡುತ್ತೀರಿ, ಆದ್ದರಿಂದ ಮೋಸ ಹೋಗುತ್ತೀರಿ. ಜ್ಞಾನವಂತೂ ಬುದ್ಧಿಯಲ್ಲಿ ಇದ್ದೇ ಇದೆ, ಸಮಯ ಬಂದಾಗ ಕಾರ್ಯದಲ್ಲಿ ತೊಡಗಿಸಿದರೆ ಆಯಿತೆಂದು ಆಲಸ್ಯವು ಬಂದು ಬಿಡುತ್ತದೆ ಆದರೆ ಸದಾಕಾಲದ ಅಭ್ಯಾಸ, ಬಹಳ ಕಾಲದ ಅಭ್ಯಾಸ ಬೇಕಾಗಿದೆ ಇಲ್ಲವಾದರೆ ಆ ಸಮಯದಲ್ಲಿ ಯೋಚಿಸುವವರಿಗೆ ಯಾವ ಬಿರುದು ಕೊಡುತ್ತಾರೆ? ಕುಂಭಕರ್ಣ. ಕುಂಭಕರ್ಣನು ಯಾವ ಆಲಸ್ಯ ಮಾಡಿದನು? ಬರಲಿ ಬಿಡು, ಬಂದಾಗ ಜಯ ಗಳಿಸುತ್ತೇನೆ ಎಂದೇ ಯೋಚಿಸಿದನಲ್ಲವೆ. ಸಮಯ ಬಂದಾಗ ಆಗಿ ಬಿಡುವುದೆಂದು ಯೋಚಿಸುವ ಈ ಆಲಸ್ಯವೇ ಮೋಸಗೊಳಿಸುತ್ತದೆ. ಆದ್ದರಿಂದ ಪ್ರತಿನಿತ್ಯವೂ ಮನನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಿ.
ರಿವೈಜ್ ಕೋರ್ಸ್ನಲ್ಲಿ ಅಥವಾ ಯಾವ ಅವ್ಯಕ್ತ ಮುರುಳಿಯನ್ನು ನಿತ್ಯವೂ ಕೇಳುತ್ತೀರೋ ಅದರಲ್ಲಿ ಮನನಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನಿತ್ಯವೂ ಯಾವುದಾದರೊಂದು ವಿಶೇಷ ಮಾತನ್ನು ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಿ ಮತ್ತು ಯಾವ ನಾಲ್ಕು ಮಾತುಗಳನ್ನು ತಿಳಿಸಿದೆವೋ ಆ ವಿಧಿಯಿಂದ ಅಭ್ಯಾಸ ಮಾಡಿ. ನಡೆಯುತ್ತಾ-ತಿರುಗಾಡುತ್ತಾ ಪ್ರತೀ ಕರ್ಮ ಮಾಡುತ್ತಾ, ಸ್ಥೂಲ ಕರ್ಮವನ್ನೇ ಮಾಡಿ ಅಥವಾ ಯಾವುದೇ ಸೇವೆ ಮಾಡಿ ಆದರೆ ಇಡೀ ದಿನ ಮನನ ನಡೆಯುತ್ತಿರಲಿ. ವ್ಯಾಪಾರವನ್ನೇ ಮಾಡುತ್ತೀರೋ ಅಥವಾ ಅಂಗಡಿಯ ಕೆಲಸ ಮಾಡುತ್ತೀರೋ ಅಥವಾ ಸೇವಾಕೇಂದ್ರದಲ್ಲಿ ಸೇವೆ ಮಾಡುತ್ತೀರೋ ಆದರೆ ಯಾವ ಸಮಯದಲ್ಲಿ ಬುದ್ಧಿಯು ಸ್ವಲ್ಪ ಬಿಡುವಾದರೆ ಸಾಕು ತನ್ನ ಮನನಶಕ್ತಿಯ ಅಭ್ಯಾಸವನ್ನು ಮತ್ತೆ-ಮತ್ತೆ ಮಾಡಿ. ಕೆಲವು ಇಂತಹ ಕೆಲಸಗಳಿರುತ್ತವೆ, ಕರ್ಮ ಮಾಡುತ್ತಿದ್ದೀರಿ ಆದರೆ ಜೊತೆ ಜೊತೆಗೆ ಬೇರೆಯದನ್ನೂ ಆಲೋಚಿಸಬಹುದು. ಅಲ್ಪ ಸ್ವಲ್ಪ ಸಮಯವಿರುತ್ತದೆ, ಅದರಲ್ಲಿ ಇಂತಹ ಕಾರ್ಯವಿರುತ್ತದೆ, ಅದರಲ್ಲಿ ಬುದ್ಧಿಯ ಪೂರ್ಣ ಗಮನ ಕೊಡಬೇಕಾಗುತ್ತದೆ. ಇಲ್ಲವಾದರೆ ಬುದ್ಧಿಯು ಎರಡೂ ಕಡೆ ನಡೆಯುತ್ತಿರುತ್ತದೆ. ಇಂತಹ ಸಮಯದಲ್ಲಿ ತಮ್ಮ ದಿನಚರಿಯಲ್ಲಿ ನೋಟ್ ಮಾಡಿಕೊಳ್ಳಿ ಆಗ ಮಧ್ಯ-ಮಧ್ಯದಲ್ಲಿ ಬಹಳ ಸಮಯ ಸಿಗುತ್ತದೆ. ಮನನ ಶಕ್ತಿಗಾಗಿ ವಿಶೇಷ ಸಮಯ ಸಿಗಲಿ ಆಗ ಅಭ್ಯಾಸ ಮಾಡುತ್ತೇವೆ ಎಂಬುದಲ್ಲ. ನಡೆಯುತ್ತಾ-ತಿರುಗಾಡುತ್ತಲೂ ಮಾಡಬಹುದಾಗಿದೆ. ಒಂದುವೇಳೆ ಏಕಾಂತದ ಸಮಯ ಸಿಕ್ಕಿದರೆ ಬಹಳ ಒಳ್ಳೆಯದು. ಇನ್ನೂ ಆಳದಲ್ಲಿ ಹೋಗಿ ಪ್ರತಿಯೊಂದು ಮಾತಿನ ಸ್ಪಷ್ಟೀಕರಣದಲ್ಲಿ ಹೋಗಿ, ವಿಸ್ತಾರದಲ್ಲಿ ತನ್ನಿ ಆಗ ಆನಂದವಾಗುವುದು ಆದರೆ ಮೊದಲು ಆ ಮಾತಿನ ನಶೆಯ ಸ್ಥಿತಿಯಲ್ಲಿ ಸ್ಥಿತರಾಗಿ ಮಾಡಿರಿ ಆಗ ಬೇಸರವಾಗುವುದಿಲ್ಲ. ಇಲ್ಲದಿದ್ದರೆ ಕೇವಲ ರಿಪೀಟ್ ಮಾಡಿಕೊಳ್ಳುತ್ತಾರೆ ಮತ್ತೆ ಇದಂತೂ ಆಗಿ ಹೋಯಿತು, ಈಗ ಏನು ಮಾಡುವುದೆಂದು ಹೇಳುತ್ತಾರೆ.
ಹೇಗೆ ಕೆಲವರು ಸ್ವದರ್ಶನ ಚಕ್ರವನ್ನು ತಿರುಗಿಸುವ ಮಾತಿನಲ್ಲಿ ಚಕ್ರವನ್ನೇನು ತಿರುಗಿಸುವುದು, ಐದು ನಿಮಿಷಗಳಲ್ಲಿ ಚಕ್ರವು ಮುಕ್ತಾಯವಾಗಿ ಬಿಡುತ್ತದೆ ಎಂದು ನಗಿಸುತ್ತಾರಲ್ಲವೆ. ಸ್ಥಿತಿಯ ಅನುಭವ ಮಾಡುವುದು ಬರುವುದಿಲ್ಲ ಆದರೆ ಕೇವಲ ರಿಪೀಟ್ ಮಾಡಿಕೊಳ್ಳುತ್ತಾರೆ – ಸತ್ಯ, ತ್ರೇತಾ, ದ್ವಾಪರ, ಕಲಿಯುಗ ಇಷ್ಟು ಜನ್ಮಗಳು, ಇಷ್ಟು ಆಯಸ್ಸು, ಇಷ್ಟು ಸಮಯ… ಅಷ್ಟೆ ಆಗಿ ಹೋಯಿತು. ಆದರೆ ಸ್ವದರ್ಶನ ಚಕ್ರಧಾರಿಗಳಾಗುವುದು ಎಂದರೆ ಜ್ಞಾನಪೂರ್ಣ, ಶಕ್ತಿಶಾಲಿ ಸ್ಥಿತಿಯ ಅನುಭವ ಮಾಡುವುದು. ಪ್ರತಿಯೊಂದು ಮಾತಿನ ನಶೆಯಲ್ಲಿ ಸ್ಥಿತರಾಗಿರುವುದು, ರಹಸ್ಯದಲ್ಲಿ ರಹಸ್ಯಯುಕ್ತರಾಗುವುದು, ಇಂತಹ ಅಭ್ಯಾಸವನ್ನೂ ಪ್ರತೀ ಮಾತಿನಲ್ಲಿ ಮಾಡಿರಿ. ಇದಂತೂ ಒಂದು ಸ್ವದರ್ಶನ ಚಕ್ರದ ಮಾತನ್ನು ತಿಳಿಸಿದೆವು, ಇದೇರೀತಿ ಪ್ರತೀ ಜ್ಞಾನದ ಮಾತನ್ನು ಮನನ ಮಾಡಿ ಮತ್ತು ಮಧ್ಯ-ಮಧ್ಯದಲ್ಲಿ ಅಭ್ಯಾಸ ಮಾಡಿ. ಕೇವಲ ಅರ್ಧ ಗಂಟೆ ಮನನ ಮಾಡಿದೆವು, ಸಮಯ ಸಿಕ್ಕಿತು ಮತ್ತು ಬುದ್ಧಿಯು ಮನನದ ಅಭ್ಯಾಸದಲ್ಲಿ ಹೊರಟು ಹೋಯಿತೆಂದಲ್ಲ. ಮನನ ಶಕ್ತಿಯಿಂದ ಬುದ್ಧಿಯು ಬ್ಯುಸಿಯಾಗಿರುವುದು ಆಗ ಸ್ವತಹವಾಗಿ ಸಹಜವಾಗಿ ಮಾಯಾಜೀತರಾಗಿ ಬಿಡುತ್ತೀರಿ. ಬ್ಯುಸಿಯಾಗಿರುವುದನ್ನು ನೋಡಿ ಮಾಯೆಯು ತಾನೇ ದೂರ ಸರಿಯುತ್ತದೆ. ಮಾಯೆಯು ಬಂದಿತು ಮತ್ತೆ ಯುದ್ಧ ಮಾಡಿ ಓಡಿಸಿ ಒಮ್ಮೆ ಸೋಲು ಇನ್ನೊಮ್ಮೆ ಗೆಲುವು – ಇದೆಲ್ಲವೂ ಇರುವೆ ಮಾರ್ಗದ ಪುರುಷಾರ್ಥವಾಗಿದೆ. ಈಗಂತೂ ತೀವ್ರ ಪುರುಷಾರ್ಥ ಮಾಡುವ ಸಮಯ, ಹಾರುವ ಸಮಯವಾಗಿದೆ ಆದ್ದರಿಂದ ಮನನ ಶಕ್ತಿಯಿಂದ ಬುದ್ಧಿಯನ್ನು ಬ್ಯುಸಿಯಾಗಿಟ್ಟುಕೊಳ್ಳಿ. ಇದೇ ಮನನ ಶಕ್ತಿಯಿಂದ ನೆನಪಿನ ಶಕ್ತಿಯಲ್ಲಿ ಮಗ್ನರಾಗಿರುವ ಅನುಭವವು ಸಹಜವಾಗುವುದು. ಮನನ ಶಕ್ತಿಯು ಮಾಯಾಜೀತರು ಮತ್ತು ವ್ಯರ್ಥ ಸಂಕಲ್ಪಗಳಿಂದಲೂ ಮುಕ್ತರನ್ನಾಗಿ ಮಾಡುತ್ತದೆ. ಎಲ್ಲಿ ವ್ಯರ್ಥವಿಲ್ಲ, ವಿಘ್ನವಿಲ್ಲವೆಂದರೆ ಸಮರ್ಥ ಸ್ಥಿತಿ ಹಾಗೂ ಲಗನ್ನಿನಲ್ಲಿ ಮಗ್ನರಾಗಿರುವ ಸ್ಥಿತಿಯು ಸ್ವತಹವಾಗಿ ಆಗಿ ಬಿಡುತ್ತದೆ.
ಬೀಜ ರೂಪ ಸ್ಥಿತಿ ಅಥವಾ ಶಕ್ತಿಶಾಲಿ ನೆನಪಿನ ಸ್ಥಿತಿಯು ಕಡಿಮೆಯಿರುತ್ತದೆ ಇಲ್ಲವೆ ಬಹಳ ಗಮನ ಕೊಟ್ಟ ನಂತರ ಅನುಭವವಾಗುತ್ತದೆ ಎಂದು ಕೆಲವರು ಯೋಚಿಸುತ್ತಾರೆ. ಇದಕ್ಕೆ ಕಾರಣವೇನೆಂದರೆ ಇದರ ಹಿಂದಿನ ಬಾರಿಯೂ ತಿಳಿಸಿದೆವು – ಎಲ್ಲಿಯೋ ಸೋರಿಕೆಯಿದೆ, ಬುದ್ಧಿಯ ಶಕ್ತಿಯು ವ್ಯರ್ಥದ ಕಡೆ ಹಂಚಲ್ಪಡುತ್ತಿದೆ. ಕೆಲವೊಮ್ಮೆ ವ್ಯರ್ಥ ಸಂಕಲ್ಪಗಳು ನಡೆಯುತ್ತವೆ, ಇನ್ನೂ ಕೆಲವೊಮ್ಮೆ ಸಾಧಾರಣ ಸಂಕಲ್ಪಗಳು ನಡೆಯುತ್ತವೆ, ಯಾವ ಕೆಲಸ ಮಾಡುತ್ತಿದ್ದೀರೋ ಅದರ ಸಂಕಲ್ಪದಲ್ಲಿಯೇ ಬುದ್ಧಿಯು ಬ್ಯುಸಿಯಾಗಿರುವುದಕ್ಕೆ ಸಾಧಾರಣ ಸಂಕಲ್ಪವೆಂದು ಹೇಳುತ್ತಾರೆ. ನೆನಪಿನ ಶಕ್ತಿ, ಅಥವಾ ಮನನಶಕ್ತಿ ಏನಿರಬೇಕೋ ಅದು ಇರುವುದಿಲ್ಲ ಮತ್ತು ತನ್ನನ್ನು ತಾನು ಇಂದು ಯಾವುದೇ ಪಾಪ ಕರ್ಮವಾಗಲಿಲ್ಲ, ವ್ಯರ್ಥವು ನಡೆಯಲಿಲ್ಲ, ಯಾರಿಗೂ ದುಃಖ ಕೊಡಲಿಲ್ಲವೆಂದು ಖುಷಿ ಪಡಿಸಿಕೊಳ್ಳುತ್ತಾರೆ ಅದರೆ ಸಮರ್ಥ ಸಂಕಲ್ಪ, ಸಮರ್ಥ ಸ್ಥಿತಿ, ಶಕ್ತಿಶಾಲಿ ನೆನಪು ಇದ್ದಿತೆ? ಒಂದುವೇಳೆ ಅದು ಇಲ್ಲವೆಂದರೆ ಇದಕ್ಕೆ ಸಾಧಾರಣ ಸಂಕಲ್ಪವೆಂದು ಹೇಳಲಾಗುತ್ತದೆ. ಕರ್ಮವನ್ನಂತೂ ಮಾಡಿದಿರಿ ಆದರೆ ಕರ್ಮ ಮತ್ತು ಯೋಗವು ಜೊತೆ ಜೊತೆಗೆ ಇರಲಿಲ್ಲವಲ್ಲವೆ? ಕರ್ಮ ಕರ್ತರಂತೂ ಆದಿರಿ ಆದರೆ ಕರ್ಮಯೋಗಿಗಳಾಗಲಿಲ್ಲ. ಆದ್ದರಿಂದ ಕರ್ಮ ಮಾಡುತ್ತಲೂ ಅಥವಾ ಮನನ ಶಕ್ತಿ ಇಲ್ಲವೆ ಮಗ್ನಸ್ಥಿತಿಯ ಶಕ್ತಿ – ಇವೆರಡರಲ್ಲಿ ಒಂದು ಅನುಭೂತಿಯು ಸದಾ ಇರಬೇಕು. ಇವೆರಡೂ ಸ್ಥಿತಿಗಳು ಶಕ್ತಿಶಾಲಿ ಸೇವೆ ಮಾಡಿಸುವ ಆಧಾರವಾಗಿದೆ. ಮನನ ಮಾಡುವವರು ಅಭ್ಯಾಸವಿರುವ ಕಾರಣ ಯಾವ ಸಮಯದಲ್ಲಿ ಯಾವ ಸ್ಥಿತಿಯನ್ನು ಮಾಡಿಕೊಳ್ಳಬೇಕೋ ಅದನ್ನು ಮಾಡಿಕೊಳ್ಳಬಲ್ಲರು. ಬುದ್ಧಿಯೋಗವು ಸ್ಪಷ್ಟವಾಗಿರುವ ಕಾರಣ ಸೋರಿಕೆಯು ನಿಂತು ಹೋಗುತ್ತದೆ ಮತ್ತು ಯಾವ ಸಮಯದಲ್ಲಿ ಭಲೆ ಬೀಜರೂಪ ಸ್ಥಿತಿಯಿರಬಹುದು ಅಥವಾ ಫರಿಶ್ತಾ ರೂಪವಿರಬಹುದು, ಯಾವ ಅನುಭೂತಿ ಮಾಡಬೇಕೋ ಅದನ್ನು ಸಹಜವಾಗಿ ಮಾಡುತ್ತಾರೆ ಏಕೆಂದರೆ ಜ್ಞಾನದ ಸ್ಮೃತಿಯಿದ್ದಾಗ ಜ್ಞಾನದ ಸ್ಮರಣೆಯಿಂದ ಜ್ಞಾನದಾತನು ಸ್ವತಹ ನೆನಪಿರುತ್ತಾರೆ ಅಂದಮೇಲೆ ಹೇಗೆ ಮನನ ಮಾಡಬೇಕೆಂದು ತಿಳಿಯಿತೆ? ಮನನ ಶಕ್ತಿಯ ಬಗ್ಗೆ ಮತ್ತೆಂದಾದರೂ ತಿಳಿಸುತ್ತೇವೆಂದು ಹೇಳಿದ್ದೇವಲ್ಲವೆ. ಆದ್ದರಿಂದ ಇಂದು ಮನನ ಮಾಡುವ ವಿಧಿಯನ್ನು ತಿಳಿಸಿದೆವು. ಮಾಯೆಯ ವಿಘ್ನಗಳಿಂದ ಸದಾ ವಿಜಯಿಗಳಾಗುವುದು ಹಾಗೂ ಸದಾ ಸೇವೆಯಲ್ಲಿ ಸಫಲತೆಯ ಅನುಭವ ಮಾಡುವ ಆಧಾರವು ಮನನಶಕ್ತಿಯಾಗಿದೆ. ತಿಳಿಯಿತೆ? ಒಳ್ಳೆಯದು.
ಸರ್ವ ಜ್ಞಾನ ಸಾಗರನ ಜ್ಞಾನಿ ಆತ್ಮ ಮಕ್ಕಳಿಗೆ, ಸದಾ ಮನನ ಶಕ್ತಿಯ ಮೂಲಕ ಸಹಜವಾಗಿ ಮಾಯಾಜೀತರಾಗುವಂತಹ ಶ್ರೇಷ್ಠ ಆತ್ಮರಿಗೆ, ಸದಾ ಮನನ ಶಕ್ತಿಯ ಅಭ್ಯಾಸವನ್ನು ಹೆಚ್ಚಿಸಿಕೊಳ್ಳುವಂತಹ, ಮನನದಿಂದ ಮಗ್ನ ಸ್ಥಿತಿಯ ಅನುಭವ ಮಾಡುವಂತಹ, ಸದಾ ಜ್ಞಾನ ರತ್ನಗಳ ಮೌಲ್ಯವನ್ನು ಅರಿತುಕೊಳ್ಳುವಂತಹ, ಸದಾ ಪ್ರತೀ ಕರ್ಮದಲ್ಲಿ ಜ್ಞಾನದ ಶಕ್ತಿಯನ್ನು ಕಾರ್ಯದಲ್ಲಿ ತರುವಂತಹ ಸದಾ ಶ್ರೇಷ್ಠ ಸ್ಥಿತಿಯಲ್ಲಿರುವ ವಿಶೇಷ ಹಾಗೂ ಅಮೂಲ್ಯ ರತ್ನಗಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ಪಾರ್ಟಿಯೊಂದಿಗೆ ಅವ್ಯಕ್ತ-ಬಾಪ್ದಾದಾರವರ ವಾರ್ತಾಲಾಪ:
ಸ್ವಯಂನ್ನು ತೀವ್ರ ಪುರುಷಾರ್ಥಿ ಆತ್ಮರೆಂದು ಅನುಭವ ಮಾಡುವಿರಾ? ಏಕೆಂದರೆ ಸಮಯವು ಬಹಳ ತೀವ್ರ ಗತಿಯಿಂದ ಸಾಗುತ್ತಿದೆ. ಹೇಗೆ ಸಮಯವು ಮುಂದೆ ಸಾಗುತ್ತಿದೆಯೋ, ಅದೇ ರೀತಿ ಸಮಯದಲ್ಲಿ ಗುರಿಗೆ ತಲುಪುವವರು ಯಾವ ಗತಿಯಿಂದ ನಡೆಯಬೇಕಾಗುತ್ತದೆ? ಸಮಯವು ಕಡಿಮೆಯಿದೆ ಮತ್ತು ಹೆಚ್ಚು ಪ್ರಾಪ್ತಿ ಮಾಡಿಕೊಳ್ಳಬೇಕಾಗಿದೆ. ಅಂದಮೇಲೆ ಸ್ವಲ್ಪ ಸಮಯದಲ್ಲಿ ಹೆಚ್ಚು ಪ್ರಾಪ್ತಿ ಮಾಡಿಕೊಳ್ಳಬೇಕೆಂದರೆ, ತೀವ್ರಗೊಳಿಸಬೇಕಾಗುತ್ತದೆ. ಒಂದುವೇಳೆ ಸಮಯವು ತೀವ್ರ ಗತಿಯಲ್ಲಿದೆ ಮತ್ತು ತಮ್ಮ ಗತಿಯು ತೀವ್ರವಾಗಿಲ್ಲದಿದ್ದರೆ ಸಮಯ ಅರ್ಥಾತ್ ತಮ್ಮ ರಚನೆಯು ತಾವು ರಚೈತನಿಗಿಂತಲೂ ತೀವ್ರವಾಯಿತು. ರಚೈತನಿಗಿಂತ ರಚನೆಯು ತೀವ್ರವಾಗಿ ಸಾಗುತ್ತದೆಯೆಂದರೆ, ಅದು ಒಳ್ಳೆಯದೆ ಎನ್ನುವಿರಾ? ರಚನೆಗಿಂತಲೂ ರಚೈತನು ಮುಂದೆ ಇರಬೇಕು. ಸದಾ ತೀವ್ರ ಪುರುಷಾರ್ಥಿ ಆತ್ಮರಾಗಿದ್ದು ಮುಂದುವರೆಯುವ ಸಮಯವಾಗಿದೆ. ಇದರಲ್ಲಿ ಏನಾದರೂ ಮುಂದುವರೆಯುತ್ತಾ ಸೈಡ್ ಸೀನ್ನ್ನೂ ನೋಡಬಹುದು, ಇದರಿಂದ ನಿಲ್ಲುವವರು ಸರಿಯಾದ ಸಮಯದಲ್ಲಿ ತಲುಪಲು ಸಾಧ್ಯವಾಗುವುದಿಲ್ಲ. ಮಾಯೆಯ ಯಾವುದೇ ಆಕರ್ಷಣೆಯೂ ಸಹ ಸೈಡ್ ಸೀನ್ ಆಗಿದೆ. ಸೈಡ್ ಸೀನ್ನಲ್ಲಿ ನಿಲ್ಲುವವರು ಗುರಿಯಲ್ಲಿ ಹೇಗೆ ತಲುಪುತ್ತಾರೆ? ಆದ್ದರಿಂದ ಸದಾ ತೀವ್ರ ಪುರುಷಾರ್ಥಿಗಳಾಗಿರುತ್ತಾ ಮುಂದುವರೆಯುತ್ತಾ ಸಾಗಬೇಕಾಗಿದೆ. ಈ ರೀತಿಯಾಗಿಯೂ ತಿಳಿಯಬಾರದು – ಸಮಯದಲ್ಲಿ ತಲುಪಿ ಬಿಡುತ್ತೇನೆ, ಈಗಂತು ಇನ್ನೂ ಸಮಯವಿದೆ. ಈ ರೀತಿ ಯೋಚಿಸುತ್ತಾ ನಿಧಾನವಾಗಿ ನಡೆಯುತ್ತಿದ್ದರೆ, ಸಮಯದಲ್ಲಿ ಮೋಸವಾಗಿ ಬಿಡುತ್ತದೆ. ಬಹಳ ಕಾಲದ ತೀವ್ರ ಪುರುಷಾರ್ಥದ ಸಂಸ್ಕಾರವು ಅಂತಿಮ ಸಮಯದಲ್ಲಿಯೂ ತೀವ್ರ ಪುರುಷಾರ್ಥದ ಅನುಭವ ಮಾಡಿಸುತ್ತದೆ. ಅಂದಾಗ ಸದಾ ತೀವ್ರ ಪುರುಷಾರ್ಥಿಗಳಾಗಿರಿ. ಕೆಲವೊಮ್ಮೆ ತೀವ್ರಗತಿ, ಕೆಲವೊಮ್ಮೆ ಬಲಹೀನರಾಗಿ ಇರಬಾರದು. ಯಾವುದಾದರೂ ಚಿಕ್ಕ ಮಾತಿನಿಂದಲೂ ಬಲಹೀನ ಆಗುವಂತೆಯೂ ಆಗಬಾರದು. ಇಂತಹವರಿಗೆ ತೀವ್ರ ಪುರುಷಾರ್ಥಿಗಳೆಂದು ಹೇಳುವುದಿಲ್ಲ. ತೀವ್ರ ಪುರುಷಾರ್ಥಿಗಳೆಂದಿಗೂ ನಿಲ್ಲುವುದಿಲ್ಲ, ಹಾರುತ್ತಿರುತ್ತಾರೆ. ಆದ್ದರಿಂದ ಹಾರುವ ಪಕ್ಷಿಯಾಗಿರುತ್ತಾ ಹಾರುವ ಕಲೆಯ ಅನುಭವ ಮಾಡುತ್ತಾ ಸಾಗಬೇಕಾಗಿದೆ. ಒಬ್ಬರು ಇನ್ನೊಬ್ಬರಿಗೂ ಸಹ ಸಹಯೋಗವನ್ನು ಕೊಡುತ್ತಾ ತೀವ್ರ ಪುರುಷಾರ್ಥಿಗಳನ್ನಾಗಿ ಮಾಡುತ್ತಾ ಸಾಗಿರಿ. ಅನ್ಯರ ಸೇವೆಯನ್ನೆಷ್ಟು ಮಾಡುವಿರಿ ಅಷ್ಟು ಸ್ವಯಂನ ಒಲವು -ಉತ್ಸಾಹವು ಹೆಚ್ಚಾಗುತ್ತಾ ಇರುತ್ತದೆ.
ವಿದಾಯಿಯ ಸಮಯದಲ್ಲಿ (ದಾದಿ ಜಾನಕಿಜೀ ವಿದೇಶಕ್ಕೆ ಹೋಗುವುದಕ್ಕಾಗಿ ಬಾಪ್ದಾದಾರವರಿಂದ ಅನುಮತಿ ಪಡೆಯುತ್ತಿದ್ದಾರೆ)
ದೇಶ-ವಿದೇಶದಲ್ಲಿ ಸೇವೆಯ ಒಲವು-ಉತ್ಸಾಹವಂತು ಬಹಳ ಚೆನ್ನಾಗಿದೆ. ಎಲ್ಲಿ ಒಲವು-ಉತ್ಸಾಹವಿರುತ್ತದೆಯೋ ಅಲ್ಲಿ ಸಫಲತೆಯೂ ಇರುತ್ತದೆ. ಸದಾ ಈ ಗಮನವನ್ನಿಡಿ – ಮೊದಲು ಸ್ವಯಂನ ಒಲವು-ಉತ್ಸಾಹವಿರಲಿ, ಸಂಘಟನೆಯ ಶಕ್ತಿಯಿರಲಿ. ಸ್ನೇಹದ ಶಕ್ತಿ, ಸಹಯೋಗದ ಶಕ್ತಿಯಿದ್ದರೆ, ಅದರನುಸಾರವಾಗಿ ಸಫಲತೆಯೂ ಆಗುತ್ತದೆ, ಇದು ಧರಣಿಯಾಗಿದೆ. ಹೇಗೆ ಧರಣಿಯು ಪರಿಪಕ್ವವಾಗಿ ಇರುತ್ತದೆಯೆಂದರೆ, ಅದೇರೀತಿ ಫಲವೂ ಬರುತ್ತದೆ, ಅದೇನಾದರೂ ತತ್ಕಾಲಕ್ಕಾಗಿ ಪರಿಪಕ್ವಗೊಳಿಸಿದರೆ ಫಲವೂ ಸಹ ಸ್ವಲ್ಪ ಸಮಯಕ್ಕಾಗಿ ಸಿಗುತ್ತದೆ, ಆದರೆ ಸದಾಕಾಲಕ್ಕಾಗಿ ಸಿಗುವುದಿಲ್ಲ. ಅಂದಾಗ ಸಫಲತೆಯ ಫಲಕ್ಕೆ ಮೊದಲು ಸದಾ ಧರಣಿಯನ್ನು ಪರಿಶೀಲನೆ ಮಾಡಿರಿ. ಯಾರು ಮಾಡುತ್ತಾರೆಯೋ ಅವರಲ್ಲಿ ಜಮಾ ಆಗಿ ಬಿಡುತ್ತದೆ. ಈಗಲೂ ಖುಷಿ ಸಿಗುತ್ತದೆ ಮತ್ತು ಭವಿಷ್ಯವಂತು ಇದ್ದೇ ಇರುತ್ತದೆ. ಒಳ್ಳೆಯದು!
ವರದಾನ:-
ಸಂಪೂರ್ಣ ವಿದ್ಯೆಯ ಮತ್ತು ಶಿಕ್ಷಣದ ಸಾರವು ಈ ಮೂರು ಶಬ್ಧಗಳಲ್ಲಿದೆ – 1. ಕರ್ಮ ಬಂಧನವನ್ನು ಮುರಿಯುವುದು 2. ತನ್ನ ಸಂಸ್ಕಾರ-ಸ್ವಭಾವವನ್ನು ಪರಿವರ್ತಿಸುವುದು ಮತ್ತು 3. ಒಬ್ಬ ತಂದೆಯೊಂದಿಗೆ ಸರ್ವ ಸಂಬಂಧವನ್ನು ಜೋಡಿಸುವುದು – ಇದೇ ಮೂರು ಶಬ್ಧಗಳನ್ನು ಸಂಪೂರ್ಣ ವಿಜಯಿಗಳನ್ನಾಗಿ ಮಾಡಿ ಬಿಡುತ್ತದೆ. ಇದಕ್ಕಾಗಿ ಸ್ಮೃತಿಯಲ್ಲಿ ಸದಾ ಇದೇ ಇರಲಿ – ಈ ನಯನಗಳಿಂದ ಯಾವುದೆಲ್ಲಾ ವಿನಾಶಿ ವಸ್ತುಗಳನ್ನು ನೋಡುತ್ತೇನೆ, ಅವೆಲ್ಲವೂ ವಿನಾಶವಾಗಿ ಬಿಟ್ಟಿದೆ. ಅದನ್ನು ನೋಡುತ್ತಿದ್ದರೂ ತಮ್ಮ ಹೊಸ ಸಂಬಂಧ, ಹೊಸ ಸೃಷ್ಟಿಯನ್ನು ನೋಡುತ್ತಾ ಇರುತ್ತೀರೆಂದರೆ, ಎಂದಿಗೂ ಸೋಲುಂಟಾಗಲು ಸಾಧ್ಯವಿಲ್ಲ.
ಸ್ಲೋಗನ್:-
➤ Email me Murli: Receive Daily Murli on your email. Subscribe!