30 March 2022 KANNADA Murli Today | Brahma Kumaris

Read and Listen today’s Gyan Murli in Kannada

March 29, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವು ಈ ಪ್ರಪಂಚದಿಂದ ಸಾಯುವ ಸಲುವಾಗಿ ತಂದೆಗೆ ಮಕ್ಕಳಾಗಿದ್ದೀರಿ, ಅಂತ್ಯದಲ್ಲಿ ಒಬ್ಬ ತಂದೆಯ ವಿನಃ ಬೇರೆ ಯಾರ ನೆನಪು ಬಾರದಂತೆ ನಿಮ್ಮ ಸ್ಥಿತಿಯನ್ನು ಪಕ್ಕಾ ಮಾಡಿಕೊಳ್ಳಿ”

ಪ್ರಶ್ನೆ:: -

ಈ ಸಮಯದಲ್ಲಿ ಇಡೀ ಪ್ರಪಂಚದಲ್ಲಿ ಹರಡಿರುವಂತಹ ಎಲ್ಲಕ್ಕಿಂತ ತೀಕ್ಷ್ಣವಾದ ಅಗ್ನಿ ಯಾವುದಾಗಿದೆ? ಅದನ್ನು ಆರಿಸುವ (ನಂದಿಸುವ) ವಿಧಿಯನ್ನು ತಿಳಿಸಿ?

ಉತ್ತರ:-

ಈ ಸಮಯ ಇಡೀ ಪ್ರಪಂಚದಲ್ಲಿ “ಕಾಮ” ಎಂಬ ಅಗ್ನಿ ವ್ಯಾಪಕವಾಗಿದೆ, ಇದು ಎಲ್ಲಕ್ಕಿಂತಲೂ ತೀಕ್ಷ್ಣವಾದ ಅಗ್ನಿಯಾಗಿದೆ. ಈ ಅಗ್ನಿಯನ್ನು ಆರಿಸುವಂತಹ ಆತ್ಮಿಕ ಮಿಷನ್ ಒಂದೇ ಆಗಿದೆ. ಅದಕ್ಕೋಸ್ಕರ ಸ್ವಯಂನ್ನು ಅಗ್ನಿ ಆರಿಸುವಂತಹವರನ್ನಾಗಿ ಮಾಡಿಕೊಳ್ಳಬೇಕು. ಯೋಗಬಲದ ವಿನಃ ಈ ಅಗ್ನಿ ಶಾಂತವಾಗುವುದಿಲ್ಲ. ಕಾಮ ವಿಕಾರವೇ ಎಲ್ಲರನ್ನು ಸತ್ಯನಾಶ ಮಾಡುತ್ತದೆ, ಆದುದರಿಂದ ಈ ಭೂತವನ್ನು ಓಡಿಸುವ ನಿರಂತರ ಪುರುಷಾರ್ಥವನ್ನು ಮಾಡಬೇಕು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಸಭೆಯಲ್ಲಿ ಜ್ಯೋತಿ ಬೆಳಗಿತು..

ಓಂ ಶಾಂತಿ. ಈ ಗೀತೆಯ ಅರ್ಥವನ್ನು ಒಳ್ಳೊಳ್ಳೆಯ ಸೇವಾಧಾರಿ ಮಕ್ಕಳು ಬಹಳ ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ಈ ಗೀತೆಯನ್ನು ಕೇಳಿದಾಗ ಇಡೀ ಸೃಷ್ಟಿಚಕ್ರದ ರಚಯಿತ ಹಾಗು ರಚಯಿತನ ಆದಿ-ಮದ್ಯ-ಅಂತ್ಯದ ಜ್ಞಾನವನ್ನು ತಿಳಿದುಕೊಳ್ಳಲಾಗುತ್ತದೆ. ಮನುಷ್ಯರು ತಿಳಿದುಕೊಳ್ಳುವ ಸಲುವಾಗಿ ಹಾಡನ್ನು ಹಾಕಲಾಗುತ್ತದೆ. ಈ ಹಾಡನ್ನು ಜ್ಞಾನ ಸಾಗರನಿಂದ ಕೇಳಲಾಗುತ್ತದೆ. ನಾವು ಈ ಹಳೆಯ ಪ್ರಪಂಚದಿಂದ ಸತ್ತು ತಂದೆಯ ಜೊತೆಯಲ್ಲಿ ಪರಮಧಾಮಕ್ಕೆ ಹಿಂತಿರುಗುವ ಸಲುವಾಗಿ ನಾವೀಗ ತಂದೆಯ ಮಕ್ಕಳಾಗಿದ್ದೇವೆಂದು ತಿಳಿದುಕೊಡಿದ್ದೇವೆ. ಒಬ್ಬ ತಂದೆಯಲ್ಲದೆ ಈ ಪುರುಷಾರ್ಥವನ್ನು ಬೇರೆ ಯಾರೂ ಸಹ ಮಾಡಿಸಲು ಸಾಧ್ಯವಿಲ್ಲ. ನೀವು ನನ್ನ ಮಕ್ಕಳದಾರೆ ನೀವು ಈ ಪ್ರಪಂಚದಿಂದ ಸಾಯಬೇಕಾಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ತಮ್ಮ ಸ್ಥಿತಿಯು ಅಂತ್ಯದ ವೇಳೆಗೆ ಒಬ್ಬ ತಂದೆಯಲ್ಲದೆ ಬೇರೆ ಯಾರ ನೆನಪು ಬಾರದಂತೆ ಮಾಡಿಕೊಳ್ಳಬೇಕು. ಪರಂಜ್ಯೋತಿಯು ಪತಂಗಗಳನ್ನು ಕರೆದೊಯ್ಯಲು ಬಂದಿದ್ದಾರೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಅನೇಕಾನೇಕ ಪತಂಗಗಳಿವೆ. ಪ್ರದರ್ಶನದಲ್ಲಿ ಅನೇಕರು ಬರುತ್ತಾರೆ. ಕೆಲವು ಮಕ್ಕಳು ಪ್ರದರ್ಶನದ ಅರ್ಥವನ್ನು ತಿಳಿದುಕೊಂಡಿರುವುದಿಲ್ಲ. ಇದು ಹಳೆಯ ಪ್ರಪಂಚವನ್ನು ಹೊಸ ಪ್ರಪಂಚವನ್ನಾಗಿ ಮಾಡುವ ಪ್ರದರ್ಶನವಾಗಿದೆ. ಹಳೆಯ ಪ್ರಪಂಚದ ವಿನಾಶ ಹೊಸ ಪ್ರಪಂಚದ ಸ್ಥಾಪನೆ ಪುನಃ ಹೇಗೆ ಆಗುತ್ತಿದೆ ಎಂದು ಸಂಗಮಯುಗದ ಚಿತ್ರದಲ್ಲಿ ತೋರಿಸಲಾಗಿದೆ. ಹಳೆಯ ಹಾಗೂ ಹೊಸ ಪ್ರಪಂಚಗಳೆರಡು ಜೊತೆಯಲ್ಲಿರಲು ಸಾಧ್ಯವಿಲ್ಲ. ಒಂದಂತು ಸಮಾಪ್ತಿಯಾಗಬೇಕಾಗಿದೆ. ರಾಮರಾಜ್ಯ ಅರ್ಥಾತ್ ಹೊಸ ಪ್ರಪಂಚದ ಸ್ಥಾಪನೆಯಾಗುತ್ತಿದೆ ಎಂದು ನಿಮ್ಮಲ್ಲಿಯೂ ಸಹ ಒಳ್ಳೊಳ್ಳೆಯ ಮಕ್ಕಳು ಮಾತ್ರ ತಿಳಿದುಕೊಂಡಿದ್ದಾರೆ. ರಾಮರಾಜ್ಯ ಸ್ಥಾಪನೆಯ ನಂತರ ರಾವಣ ರಾಜ್ಯ ಸಮಾಪ್ತಿಯಾಗುತ್ತದೆ. ನೀವು ಯಾವಾಗ ರಾಮರಾಜ್ಯದ ಕುಲದವರಾಗುತ್ತೀರಿ ಆಗ ನಿಮ್ಮಲ್ಲಿ ಯಾವುದೇ ಭೂತವಿರುವುದಿಲ್ಲ. ನೀವು ಈ ಭೂತಗಳನ್ನು ಓಡಿಸಲು ಶ್ರಮ ಪಡಬೇಕು. ಮೊಟ್ಟ ಮೊದಲು ಈ ಕಾಮಾಗ್ನಿಯನ್ನು ಶಾಂತ ಮಾಡಬೇಕು. ತಮಗಾಗಿ ತಾವೇ ಆಗ್ನಿ ಆರಿಸುವವರಾಗಬೇಕು. ಈ ಅಗ್ನಿ ಬಹಳ ತೀಕ್ಷ್ಣವಾಗಿದೆ. ಯೋಗಬಲ ವಿನಃ ಇದು ಶಾಂತವಾಗುವುದಿಲ್ಲ. ಇದು ಇಡೀ ಪ್ರಪಂಚದ ಸವಾಲಾಗಿದೆ. ಎಲ್ಲರಲ್ಲು ಕಾಮಾಗ್ನಿ ವ್ಯಾಪಕವಾಗಿದೆ. ಈ ಅಗ್ನಿಯನ್ನು ಶಾಂತಿ ಮಾಡುವ ಮಿಷನ್ ಇದು ಒಂದೇ ಆಗಿದೆ ಆದುದರಿಂದ ಎಲ್ಲರೂ ಇಲ್ಲಿಗೆ ಬರಬೇಕಾಗುತ್ತದೆ. ಹೇ ಪತಿತ ಪಾವನ ಬಾ… ಎಂದು ಕರೆಯುತ್ತಾರೆ. ಪತಿತರೆಂದು ಕಾಮಿಗಳಿಗೆ ಹೇಳಲಾಗುತ್ತದೆ. ಪತಿತ ಪಾವನ ಬಾ ಎಂದರೆ ಕಾಮಾಗ್ನಿಯನ್ನು ಶಾಂತ ಮಾಡುವವರೇ ಬನ್ನಿ ಎಂದು ಕರೆದಂತಾಗುತ್ತದೆ. ಇಲ್ಲಿ ಸಾಮಾನ್ಯವಾಗಿ ಎಲ್ಲರೂ ಪತಿತರಾಗಿದ್ದಾರೆ. ಕೆಲವರಷ್ಟೇ ಪವಿತ್ರವಾಗಿರಬಹುದು. ಈ ಅಗ್ನಿಯನ್ನು ಶಾಂತ ಮಾಡುವ ಯುಕ್ತಿಯನ್ನು ನಿಮಗೆ ತಿಳಿಸುತ್ತೇನೆಂದು ತಂದೆಯು ಹೇಳುತ್ತಾರೆ. ಈ ಕಾಮಾಗ್ನಿಯು ಸಹ ಸತೋ, ರಜೋ, ತಮೋನಲ್ಲಿ ಬರುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಯಾರೂ ಸಹ ವಿಕಾರದ ವಿನಃ ಇರುವುದಿಲ್ಲ, ಅಂತಹವರಿಗೆ ತಮೊಪ್ರಧಾನರೆಂದು ಕರೆಯಲಾಗುತ್ತದೆ. ಅಗ್ನಿಯು ಸದಾ ಅತ್ತುತ್ತಿರುತ್ತದೆ. ಈ ಕಾಮ ವಿಕಾರವು ಮನುಷ್ಯರ ಸತ್ಯನಾಶ ಮಾಡುತ್ತದೆ. ಸತ್ಯಯುಗದಲ್ಲಿ ಶತ್ರುಗಳು ಯಾರೂ ಇರುವುದಿಲ್ಲ. ಅಲ್ಲಿ ರಾವಣನು ಇರುವುದಿಲ್ಲ, ಹಾಗೂ ಪರಸ್ಪರ ಮನುಷ್ಯರಲ್ಲಿ ಶತ್ರುಗಳರುವುದಿಲ್ಲ. ರಾವಣ ಭಾರತದ ಅತಿ ದೊಡ್ಡ ಶತ್ರುವೆಂದು ನೀವು ತಿಳಿಸುತ್ತೀರಿ. ಈ ಎಲ್ಲಾ ಆಟವು ಭಾರತದ ಮೇಲೆ ಮಾಡಲ್ಪಟ್ಟಿದೆ. ಸತ್ಯಯುಗದಲ್ಲಿ ರಾಮ ರಾಜ್ಯ, ಕಲಿಯುಗದಲ್ಲಿ ರಾವಣ ರಾಜ್ಯವಿದೆ. ಚಿತ್ರದಲ್ಲಿ ಕಲಿಯುಗ ಹಾಗೂ ಸತ್ಯಯುಗದಲ್ಲಿ ಇರುವಂತಹವರಿಬ್ಬರೂ ಮನುಷ್ಯರೆಂದು ತೋರಿಸಿದೆ. ಮನುಷ್ಯರು ದೇವತೆಗಳ ಮುಂದೆ ಕೈ ಜೋಡಿಸಿ ನೀವು ಸರ್ವಗುಣ ಸಂಪನ್ನರು, ನಾವು ಪಾಪಿ ದುಃಖಿಗಳಾಗಿದ್ದೇವೆಂದು ಹೇಳುತ್ತಾರೆ. ಈ ಭಾರತ ಅವಶ್ಯವಾಗಿ ಶ್ರೇಷ್ಠಾಚಾರಿ ಪಾವನವಾಗಿತ್ತು. ಆ ಪಾವನ ಭಾರತದಲ್ಲಿ ದೇವತೆಗಳು ರಾಜ್ಯ ಮಾಡುತ್ತಿದ್ದರು. ಲಕ್ಷ್ಮೀ-ನಾರಾಯಣರ ಹಾಗೂ ರಾಮ-ಸೀತೆಯ ಇಬ್ಬರ ರಾಜ್ಯವಿತ್ತು. ಇಬ್ಬರೂ ಸಹ ದೇವತೆಗಳ ಮನೆತನದವರಾಗಿದ್ದರು. ಆ ಪ್ರಜೆಗಳ ಚಿತ್ರಗಳನ್ನು ಮಾಡುವುದಿಲ್ಲ. ಈಗ ತಂದೆ ಸಹಜ ಮಾಡಿ ತಿಳಿಸಿಕೊಡುತ್ತಾರೆ-ಅದನ್ನು ತಿಳಿಸಿಕೊಟ್ಟು ನಿಮಗೆ ಬುದ್ದಿಯಲ್ಲಿ ಧಾರಣೆ ಆಗುತ್ತದೆಯಲ್ಲವೇ ಎಂದು ಕೇಳುತ್ತಾರೆ. ಹೇಗೆ ತಂದೆಯಾದ ನನ್ನ ಬುದ್ದಿಯಲ್ಲಿ ವೃಕ್ಷ, ನಾಟಕದ ಜ್ಞಾನ ಧಾರಣೆ ಆಗಿರುವದರಿಂದ ನನ್ನನ್ನು ಜ್ಞಾನ ಸಾಗರನೆಂದು ಹೇಳುತ್ತಾರೆ. ಸೃಷ್ಟಿಯ ಆದಿ, ಮಧ್ಯ, ಅಂತ್ಯದ ಜ್ಞಾನ ನನ್ನ ಬಳಿ ಇದೆ. ನನ್ನನ್ನು ಪವಿತ್ರತೆಯ ಸಾಗರನೆಂದೂ ಸಹ ಹೇಳುತ್ತಾರೆ. ಪತಿತ ಪಾವನನೆಂದು ನನಗೇ ಹೇಳುತ್ತಾ ಭಾರತವನ್ನು ಪಾವನ ಮಾಡಲು ಕರೆಯುತ್ತಾರೆ. ಇದು ರಾಜಯೋಗ ಹಾಗೂ ಜ್ಞಾನವಾಗಿದೆ. ವಕೀಲರಾಗುವ ವಿದ್ಯೆಗೆ ವಕೀಲರೊಂದಿಗೆ ಸಂಬಂಧ ಇರುವುದೆಂದು ಕರೆಯಲಾಗುತ್ತದೆ, ಆ ವಿದ್ಯೆಯಿಂದ ವಕೀಲರಾಗುತ್ತಾರೆ. ನಾನು ಬಂದು ಮಕ್ಕಳಾದ ನಿಮಗೆ ರಾಜಯೋಗವನ್ನು ಕಲಿಸುತ್ತೇನೆಂದು ತಂದೆ ತಿಳಿಸುತ್ತಾರೆ. ರಾಜರೂ ಸಹ ಭಗವಂತನನ್ನು ನೆನಪು ಮಾಡುತ್ತಾರೆ. ಭಗವಂತನಿಂದ ಏನು ಪ್ರಾಪ್ತಿಯಾಗುತ್ತದೆ? ಅವಶ್ಯವಾಗಿ ಸ್ವರ್ಗದ ಆಸ್ತಿ ಪ್ರಾಪ್ತಿಯಾಗಬೇಕು.

ಪರಮಪಿತ ಪರಮಾತ್ಮನ ಪರಿಚಯವಿದೆಯೇ? ಎಂದು ನೀವು ಎಲ್ಲರನ್ನು ಕೇಳಬೇಕು. ತಂದೆ ರಚಯಿತನಾಗಿರುವ ಕಾರಣ ಅವಶ್ಯವಾಗಿ ಸ್ವರ್ಗವನ್ನು ರಚಿಸಿ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುತ್ತಾರೆ. ಆ ರಾಜ್ಯಭಾಗ್ಯವು ನಮಗೆ ಪ್ರಾಪ್ತಿ ಆಗಿತ್ತು. ಈಗ ಇಲ್ಲದ ಕಾರಣ ಪುನಃ ಪಡೆಯುತ್ತಿದ್ದೇವೆ. ಹೀಗೆ ಭಾರತವಾಸಿಗಳೇ ಕಲ್ಪದ ಹಿಂದೆ ಪಡೆದಿದ್ದರು, ಈಗ ಪುನಃ ಭಾರತವಾಸಿಗಳೇ ಪಡೆಯಬೇಕು (ನಾರದನಂತೆ) ಭಾರತವಾಸಿಗಳನ್ನು ನೀವು ಮಕ್ಕಳು ಈ ರೀತಿ ಕೇಳಬಹುದು-ನೀವು ವೈಕುಂಠಕ್ಕೆ ಬರುತ್ತೀರಾ? ಭಗವಂತನಿಂದ ಹೊಸ ಪ್ರಪಂಚದ ಆಸ್ತಿಯನ್ನು ಪಡೆಯುತ್ತೀರಾ? ಸ್ವರ್ಗದ ಆಸ್ತಿಯೂ ಭಾರತೀಯರಿಗೆ ಮಾತ್ರ ಪ್ರಾಪ್ತಿಯಾಗಿತ್ತು, ಈಗ ಇಲ್ಲವಾಗಿದೆ, ಆದರೆ ಬೇರೆ ಯಾರಿಗೂ ಸಿಗುವುದಿಲ್ಲ. ಏಕೆಂದರೆ ಭಾರತವೇ ಭಗವಂತನ ಜನ್ಮ ಭೂಮಿಯಾಗಿದೆ. ಈ ರೀತಿ ತಂದೆಯು ತನ್ನ ಜನ್ಮ ಭೂಮಿಯ ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಾರೆ (ಚಾರಿಟಿ ಬಿಗಿನ್ಸ್ ಎಟ್ ಹೋಂ) ಅರ್ಥಾತ್ ಭಾರತದಲ್ಲಿ ಇರುವವರಿಗೆ ಆಸ್ತಿಯನ್ನು ಕೊಡುತ್ತಾರೆ, ಆದರೆ ಬಹಳ ಮಕ್ಕಳು ಇದನ್ನು ತಿಳಿದುಕೊಳ್ಳುವುದಿಲ್ಲ. ಅನೇಕ ಮಕ್ಕಳಿಗೆ ತಂದೆ ತನ್ನ ಸಾಕ್ಷಾತ್ಕಾರವನ್ನು ಈ ರೀತಿ ಮಾಡಿಸುತ್ತಾರೆ. ನೀವು ವೈಕುಂಠದಲ್ಲಿ ರಾಜಕುಮಾರ -ರಾಜಕುಮಾರಿಯಾಗಿ ಬಂದ ಮೇಲೆ ನೀವು ವೈಕುಂಠದ ರಾಜಕುಮಾರ ಬಂದಿದ್ದಾನೆಂದು ಹೇಳುತ್ತಾರೆ. ಇದು ಮನುಷ್ಯರಿಂದ ರಾಜಕುಮಾರರಾಗುವ ಪಾಠಶಾಲೆಯಾಗಿದೆ. ರಾಜಕುಮಾರ ಅಥವಾ ರಾಜನಾಗುವ ಮಾತಿನ ಅರ್ಥ ಒಂದೇ ಆಗಿದೆ. ಈ ಸಾಕ್ಷಾತ್ಕಾರವೂ ಸಹ ಪುರುಷಾರ್ಥ ಮಾಡಬೇಕೆಂದು ಮಾಡಿಸುತ್ತಾರೆ. ತಂದೆಯ ಶ್ರೀಮತದಂತೆ ನಡೆದು ಪುರುಷಾರ್ಥ ಮಾಡಬೇಕು. ಕೇವಲ ಕೃಷ್ಣನು ಸಾಕ್ಷಾತ್ಕಾರದಲ್ಲಿ ನೋಡುವುದು ದೊಡ್ಡ ಮಾತೇನಲ್ಲ. ಈ ರೀತಿ ಸಾಕ್ಷಾತ್ಕಾರದಲ್ಲಿ ನೋಡಿದವರು ಹೊರಟು ಹೋದರು. ಸಾಕ್ಷಾತ್ಕಾರವಾದರೆ ಮತ್ತೆ ವಿದ್ಯೆಯನ್ನು ಬಿಟ್ಟು ಪುರುಷಾರ್ಥ ಮಾಡುವುದೇ ಇಲ್ಲ ಏಕೆಂದರೆ ಭೂತಗಳ ಯುದ್ಧ ನಡೆಯುತ್ತಿರುತ್ತದೆ. ದೇಹಾಭಿಮಾನದ ಭೂತ ಬಹಳ ಕಠಿಣವಾಗಿದೆ. ಈಗ ನಾನು ಈ ಹಳೆಯ ವಸ್ತ್ರವನ್ನು ಬಿಡಬೇಕೆಂಬ ನೆನಪಿದ್ದರೂ ಸಹ ಬಹಳ ಭಾಗ್ಯ ಹಾಗೂ ಖುಷಿಯ ಮಾತಾಗಿದೆ. ಈಗ ಮನೆಯಾದ ಮುಕ್ತಿಧಾಮಕ್ಕೆ ಹಿಂತಿರುಗಬೇಕೆಂದು ಯಾರ ಬುದ್ದಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಸನ್ಯಾಸಿಗಳಂತು ಈ ಶರೀರವನ್ನು ಬಿಟ್ಟು ಬ್ರಹ್ಮತತ್ವದಲ್ಲಿ ಲೀನವಾಗಿ ಬಿಡುತ್ತೇವೆಂದು ಹೇಳುತ್ತಾರೆ ಆದರೆ ತತ್ವನ್ನು ನೆನಪು ಮಾಡುವುದರಿಂದ ಮನೆಗೆ ಹಿಂತಿರುಗಲು ಸಾಧ್ಯವಿಲ್ಲ. ಮನೆಗೆ ಕರೆದುಕೊಂಡು ಹೋಗುವ ರಾಮ ಒಬ್ಬರೇ ಆಗಿದ್ದು, ಈಗ ಎಲ್ಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ತಂದೆಯ ಮಾರ್ಗದರ್ಶನವಿಲ್ಲದೆ ಹೋಗಲು ಸಾಧ್ಯವಿಲ್ಲ ಆದರೂ ಸಹ ಈ ಪ್ರಪಂಚವು ಜೀವನ ಮಾಡಲು ಯೋಗ್ಯವಿಲ್ಲದ ಕಾರಣ ಮನೆಗೆ ಹೋಗುವ ಪುರುಷಾರ್ಥ ಮಾಡುತ್ತಾರೆ. ಈ ರೀತಿ ಅನೇಕ ಮತ-ಮತಾಂತರಗಳಿದ್ದು ಕೆಲವರು ಈ ನಾಟಕದ ಚಕ್ರದಲ್ಲಿ ಜನ್ಮ ಪಡೆಯುವುದು ಬೇಡವೆಂದು ಹೇಳುತ್ತಾರೆ. ಸೃಷ್ಟಿ ನಾಟಕದಲ್ಲಿ ಗುರು ಮೊದಲಾದವರು ಕೋಟ್ಯಾಂತರ ಅಂದಾಜಿನಲ್ಲಿದ್ದಾರೆ ಆದ್ದರಿಂದ ಪ್ರತಿಯೊಬ್ಬರೂ ತಮ್ಮ-ತಮ್ಮದೇ ಆದ ಮತವನ್ನು ಹೇಳುತ್ತಾರೆ. ಇಲ್ಲಿಗೆ ಬಂದಾಗ ನಿಮ್ಮ ಜ್ಞಾನ ಚೆನ್ನಾಗಿದೆ ಎಂದು ಹೇಳಿ ಹೊರಗೆ ಹೋಗಿ ಮರೆಯುತ್ತಾರೆ. ಅನೇಕರು ಬರುತ್ತಾರೆ ಆದರೆ ಅವರ ಅದೃಷ್ಟದಲ್ಲಿ ಇರುವುದಿಲ್ಲ. ಇಲ್ಲಿಗೆ ಬಂದು ತಂದೆಗೆ ಮಕ್ಕಳಾಗಬೇಕಾಗುತ್ತದೆ ಆದರೆ ತಮ್ಮ ಸ್ಥಾನ-ಮಾನವನ್ನು ಬಿಟ್ಟು ಬರಲು ಕಷ್ಟವಾಗುತ್ತದೆ ಆದುದರಿಂದ ಬಡವರು ಮಾತ್ರ ತಂದೆಗೆ ಮಕ್ಕಳಾಗುತ್ತಾರೆ. ತಮ್ಮೆಲ್ಲ ಅನುಯಾಯಿಗಳನ್ನು ಬಿಟ್ಟು ಬರುವುದು ಕಷ್ಟದ ಮಾತು. ಆದರೆ ಇದು ಪ್ರವೃತ್ತಿ ಮಾರ್ಗವಾಗಿದ್ದು ಸ್ತ್ರೀ, ಪುರುಷರು ಇಬ್ಬರು ಜೊತೆಯಲ್ಲಿದ್ದು ಪವಿತ್ರರಾಗಬೇಕು. ನಿಶ್ಚಯಬುದ್ದಿ ಮಕ್ಕಳಿಗೆ ತಕ್ಷಣ ಪರೀಕ್ಷೆಗಳು ಬರುತ್ತವೆ. ಆದರೂ ತಮ್ಮ ಅಭಿಮಾನವನ್ನು ಬಿಡುತ್ತಾರೆಂದು ನೋಡಬೇಕು ಏಕೆಂದರೆ ತಂದೆಗೆ ಮಕ್ಕಳಾಗಬೇಕಾಗುತ್ತದಲ್ಲವೆ? ತಂದೆ ಯಾರಿಗಾದರೂ ತಿಳಿಸಿಕೊಡುವಂತಹ ಸಹಜ ಉಪಾಯವನ್ನೂ ಸಹ ತಿಳಿಸಿಕೊಡುತ್ತಾರೆ. ಕೇವಲ ಪರಮಪಿತ ಪರಮಾತ್ಮನೊಂದಿಗೆ ನಿಮ್ಮ ಸಂಬಂಧವೇನು? ಅವರು ಅವಶ್ಯವಾಗಿ ಮುಕ್ತಿ-ಜೀವನ್ಮುಕ್ತಿಯನ್ನು ಕೊಡುತ್ತಾರೆ. ಮನುಷ್ಯರೆಂದಿಗೂ ಮುಕ್ತಿ-ಜೀವನ್ಮುಕ್ತಿಯನ್ನು ಕೊಡಲು ಸಾಧ್ಯವಿಲ್ಲ. ಆದುದರಿಂದ ತಂದೆಯಿಂದ ಆಸ್ತಿ ಪಡೆಯಲು ಇಲ್ಲಿಗೆ ಬರಲೇಬೇಕು ಹಾಗೂ ಅವರ ಶ್ರೀಮತದಂತೆ ಕಲಿಯಬೇಕಾಗುತ್ತದೆ. ಮೊಟ್ಟ ಮೊದಲು ನಿಶ್ಚಯಬುದ್ದಿಯವರಾಗಿ ನಂತರ ಅವರ ಶ್ರೀಮತ ದೊರೆತಂತೆ ನಡೆಯಬೇಕು. ಮೊಟ್ಟ ಮೊದಲು ತಂದೆಯ ಪರಿಚಯವನ್ನು ಕೊಡಬೇಕು. ಅನೇಕರು ಬರುತ್ತಾ ಇದು ಬಹಳ ಶ್ರೇಷ್ಠವಾದ ವಸ್ತುಯೆಂದು ಹೇಳುತ್ತಾರೆ, ಆದರೆ ಸ್ವಯಂ ಜ್ಞಾನದಲ್ಲಿ ನಿಲ್ಲಬೇಕಾಗುತ್ತದೆ. ಅವರು ಕೇವಲ ತಮ್ಮ ಸಲಹೆಯನ್ನು ಕೊಟ್ಟು ಹೊರಟುಹೋಗುತ್ತಾರೆ. ಅವರಿಗೆ ಇಲ್ಲಿ ಯಾರ ಮತದಂತೆ ನಡೆಯುತ್ತಿದ್ದಾರೆಂದು ಗೊತ್ತಿರುವುದಿಲ್ಲ. ಇಂತಹ ಪ್ರದರ್ಶನ ಅನೇಕ ಸ್ಥಾನಗಳಲ್ಲಿ ಇರಬೇಕೆಂದು ಅವರ ಸಲಹೆಯನ್ನು ಕೊಡುತ್ತಿರುತ್ತಾರೆ. ಆದರೆ ಈಶ್ವರನಿಗೆ ನಮ್ಮ ಸಲಹೆಯನ್ನು ಕೊಡಬಾರದು. ಅವರಿಗೆ ಸಲಹೆಯನ್ನು ಕೊಡುವ ಅಭ್ಯಾಸವಾಗಿರುತ್ತದೆ. ಅವರು ಮಾತ್ರ ಕುಳಿತು ತಿಳಿದುಕೊಳ್ಳುವುದಿಲ್ಲ. ಅಂದಾಗ ಇಲ್ಲಿ ಯಾರು ತಮ್ಮ ಸಲಹೆಯನ್ನು ಕೊಡುವ ಅವಶ್ಯಕತೆ ಇರುವುದಿಲ್ಲ. ಪ್ರತಿಯೊಬ್ಬರು ಶ್ರೀಮತದಂತೆ ನಡೆಯಬೇಕು. ಈ ರೀತಿ ಸಲಹೆ ಕೊಡುವಂತಹವರಿಗೆ ಮೊದಲು ತಂದೆಯ ಮಕ್ಕಳಾಗಲು ತಿಳಿಸುತ್ತಾ ನಂತರ ತಂದೆಯ ಶ್ರೀಮತವನ್ನು ತಿಳಿಸಿಕೊಡಬೇಕು. ಮತ್ತೆ ಅವರು ಬೇರೆ ಯಾರಿಗಾದರೂ ತಿಳಿಸಿಕೊಡುತ್ತಾ ಈ ರೀತಿ ಬರೆದು ಕೊಡಬೇಕು – ನಾನು ಶ್ರೀಮತದಂತೆ ನಡೆಯಬೇಕು, ಆಗ ಇವರು ಯಥಾರ್ಥವಾಗಿ ತಿಳಿದುಕೊಂಡಿದ್ದಾರೆಂದು ತಿಳಿದುಕೊಳ್ಳಬೇಕು. ತಿಳಿದುಕೊಳ್ಳಲು ಅನೇಕರು ಬರುತ್ತಾರೆ, ಆದರೆ ಅಷ್ಟೊಂದು ಸ್ಪಷ್ಟವಾಗಿ ತಿಳಿದುಕೊಳ್ಳದೆ ಜ್ಞಾನದ ಮತದಂತೆ ನಡೆಯುವುದಿಲ್ಲ ಏಕೆಂದರೆ ಈ ಸಮಯದಲ್ಲಿ ಎಲ್ಲರೂ ಭಕ್ತಿಯ ಮತದವರಾಗಿದ್ದಾರೆ. ಜಪ, ತಪ, ಪಾಠ ಮೊದಲಾದವೆಲ್ಲವನ್ನು ಭಕ್ತಿಗಾಗಿ ಮಾಡುತ್ತಾರೆ. ಭಗವಂತನೊಂದಿಗೆ ಸೇರಲು ನೀವು ಅರ್ಧಕಲ್ಪ ಭಕ್ತಿಯನ್ನು ಮಾಡಿದ್ದೀರೆಂದು ಸ್ವಯಂ ಭಗವಂತನೇ ಹೇಳುತ್ತಾರೆ. ಎಲ್ಲರೂ ಭಕ್ತರಾಗಿದ್ದು ಭಗವಂತ ಒಬ್ಬರೇ ಆಗಿದ್ದಾರೆ. ಆದುದರಿಂದ ಪತಿತ ಪಾವನೆಂದು ಒಬ್ಬರಿಗೆ ಮಾತ್ರ ಹೇಳಲಾಗುತ್ತದೆ. ಅಂದಾಗ ಸ್ವಯಂ ಎಲ್ಲರೂ ಪತಿತರಾಗಿದ್ದಾರಲ್ಲವೇ? ಇದು ರಾವಣ ರಾಜ್ಯವಾಗಿದೆ. ಈ ಕಲ್ಪದ ಸಂಗಮದ ಸಮಯವನ್ನು ಗಾಯನ ಮಾಡುತ್ತಾರೆ. ಕಲ್ಪದ ಸಂಗಮಯುಗೇ ಯುಗೇಯಲ್ಲಿ ತಂದೆ ಬರುತ್ತಾರೆ.

ಸತ್ಯಯುಗ ಕಲ್ಯಾಣಕಾರಿ ಸ್ವರ್ಗ, ಕಲಿಯುಗ ಅಕಲ್ಯಾಣಕಾರಿ ನರಕವಾಗಿದೆ. ರಾವಣ ಅಕಲ್ಯಾಣಕಾರಿ ಆಗಿದ್ದು ರಾಮ ಕಲ್ಯಾಣಕಾರಿ ಆಗಿದ್ದಾರೆ. ಜ್ಞಾನ ಮಕ್ಕಳ ಬುದ್ದಿಯಲ್ಲಿ ಚಿಂತನೆ ನಡೆಯಬೇಕು. ಅಸಹಾಯಕರನ್ನು ಹೇಗೆ ಕಲ್ಯಾಣ ಮಾಡಬೇಕೆಂಬ ಚಿಂತೆ ಇರಬೇಕು. ಕೆಲವು ಮಕ್ಕಳಲ್ಲಿ ಬಹಳ ಬಲಹೀನತೆಗಳಿದ್ದರೆ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ. ಬಾಬಾ ನಮಗೆ ಚೆನ್ನಾಗಿ ಕಲಿಸುವವರು ಬೇಕೆಂದು ಹೇಳುತ್ತಾರೆ. ಕೆಲವರಲ್ಲಿ ಬಹಳ ಅವಗುಣವಿರುತ್ತದೆ. ಆದುದರಿಂದ ಎಲ್ಲಾ ಸಮಾಚಾರ ತಂದೆಗೆ ತಿಳಿಯುತ್ತದೆ. ತಂದೆಗೂ ಸಹ ಸಮಾಚಾರವನ್ನು ಕೊಟ್ಟಾಗ ಸಲಹೆ ಸಿಗುತ್ತದೆ ಎಂದು ತಿಳಿಸುತ್ತಾರೆ. ಯಾವುದಾದರೂ ಅವಗುಣ ಇದ್ದರೆ ಕಡಿಮೆ ಸೇವೆ ಮಾಡುತ್ತಾರೆ. ಈ ಸಮಯದಲ್ಲಿ ಓದಿರುವವಂತಹ, ವಿದ್ವಾನ ಪಂಡಿತರು ತೀಕ್ಷ್ಣ ಬುದ್ದಿಯಿರುವವರು ಬಹಳ ಇದ್ದಾರೆ. ಕಚ್ಚಾ ಇರುವ ಮಕ್ಕಳಂತೂ ಬೇರೆಯವರ ಬುದ್ದಿಯನ್ನು ಹೊಲಸು ಮಾಡುತ್ತಾರೆ ಆದುದರಿಂದ ಉತ್ತಮ ಬುದ್ದಿವಂತ ಮಕ್ಕಳನ್ನು ತಂದೆ ಕರೆಯುತ್ತಾರೆ. ಪ್ರದರ್ಶನದ ಸಮಾಚಾರವನ್ನೂ ಸಹ ತಂದೆ ಕೇಳುತ್ತಾರೆ. ಯಾರು ಉತ್ತಮ ಸೇವೆ ಮಾಡುವಂತಹ ಮಕ್ಕಳು ಇರಬೇಕಾಗುತ್ತದೆ. ಯಾರಾದರೂ ನಿಮ್ಮನ್ನು ಶಾಸ್ತ್ರ ಮೊದಲಾದವುಗಳನ್ನು ಓದುತ್ತೀರ ಎಂದು ಕೇಳಿದರೆ ಈ ರೀತಿ ಹೇಳಬೇಕು-ಈ ವೇದ ಶಾಸ್ತ್ರಗಳನ್ನು ಜನ್ಮ-ಜನ್ಮಾಂತರಗಳಿಂದ ಓದುತ್ತಾ ಎಲ್ಲವನ್ನು ತಿಳಿದುಕೊಂಡಿದ್ದೇವೆ. ಆದುದರಿಂದ ಈಗ ನಮಗೆ ತಂದೆಯ ಆದೇಶವಾಗಿದೆ-ಕೇವಲ ತಂದೆ ಹೇಳುವುದನ್ನು ಬಿಟ್ಟು ಬೇರೆ ಏನನ್ನು ಓದಬಾರದು ಹಾಗೂ ಕೇಳಬಾರದು. ನನ್ನ ಮತದಂತೆ ನಡೆದು ನನ್ನನ್ನು ನೆನಪು ಮಾಡಿದಾಗ ವಿಕರ್ಮ ವಿನಾಶವಾಗುತ್ತದೆ. ಈಗ ಮೃತ್ಯು ಮುಂದೆ ನಿಂತಿದೆ. ನಾನು ನಿಮ್ಮ ತಂದೆ ನಿಮ್ಮನ್ನು ಮನೆಗೆ ಕರೆದೊಯ್ಯಲು ಬಂದಿದ್ದೇನೆ. ಹಾಗೂ ನಿಮಗೆ ಮುಕ್ತಿ-ಜೀವನ್ಮುಕ್ತಿಯನ್ನು ಕೊಡುತ್ತೇನೆ. ಪ್ರತಿಯೊಬ್ಬರೂ ನಾಟಕದ ಅನುಸಾರ ಮೊದಲು ಮುಕ್ತಿಯಲ್ಲಿ ಹೋಗಿ ನಂತರ ಜೀವನ್ಮುಕ್ತಿಯಲ್ಲಿ, ಸತೋಪ್ರಧಾನದಲ್ಲಿ ಬರಬೇಕು. ಇದರಿಂದ ಹೇಳುತ್ತಾರೆ – ಸರ್ವರ ಸದ್ಗತಿದಾತ, ಸರ್ವೋದಯ ಎಂದು. ಸರ್ವ ಎಂಬ ಶಬ್ದದಲ್ಲಿ ಇಡೀ ಪ್ರಪಂಚವೇ ಬರುತ್ತದೆ. ಸರ್ವ ಅಂದಾಗ ಇಡೀ ಜಗತ್ತಿಗೆ ತಂದೆ ತಿಳಿಸುತ್ತಾರೆ, ಉಳಿದೆಲ್ಲರೂ ಅಲ್ಪಕಾಲ ಹದ್ದಿನ ಸೇವೆ ಮಾಡುವವರಾಗಿದ್ದಾರೆ. ಬೇಹದ್ದಿನ ಸರ್ವೋದಯ ಮುಂದಾಳು ಒಬ್ಬರೇ ಆಗಿದ್ದಾರೆ. ಅವರೇ ವಿಶ್ವದ ಮೇಲೆ ದಯೆ ತೋರಿಸಿ ವಿಶ್ವ ಪರಿವರ್ತನೆ ಮಾಡುವವರಾಗಿದ್ದಾರೆ. ತಂದೆ ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡಲು ಬಂದಿದ್ದಾರೆಂದು ನೀವು ತಿಳಿದುಕೊಂಡಿದ್ದೀರಿ. ಆಗ ನಾವು ಸದಾ ಆರೋಗ್ಯ ಹಾಗೂ ಐಶ್ವರ್ಯವಂತರಾಗುತ್ತೇವೆ ಆದರೆ ಈ ಎಲ್ಲಾ ಮಾತುಗಳು ಯಾರ ಬುದ್ದಿಯಲ್ಲೂ ಸಹ ಕುಳಿತುಕೊಳ್ಳುವುದಿಲ್ಲ. ಎರಡು ಅಕ್ಷರ ಕುಳಿತುಕೊಂಡರೆ ಸಾಕು. ನಾವು ಭಗವಂತ ತಂದೆಯ ಮಕ್ಕಳಾಗಿದ್ದೇವೆ. ನಮಗೆ ಭಗವಂತನಿಂದ ಸ್ವರ್ಗದ ಆಸ್ತಿ ಪ್ರಾಪ್ತಿಯಾಗಿತ್ತು, ಈಗ ಪುನಃ ಸಿಗುತ್ತಿದೆ. ತಂದೆಯೂ ಸಹ ನನ್ನನ್ನು ಹಾಗೂ ಆಸ್ತಿಯನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಪರಸ್ಪರ ನಾವು ಬೇಹದ್ದಿನ ತಂದೆಯೇ ಮಕ್ಕಳಾಗಿದ್ದೇವೆಂಬ ಮಂತ್ರವನ್ನು ಕೊಡಬೇಕು. ಧರ್ಮ ಸ್ಥಾಪನೆಗಾಗಿ ಬಹಳ ಶ್ರಮ ಪಡಬೇಕಾಗಿದೆ. ಈಗ ನಾಟಕ ಮುಗಿಯಲು ಸ್ವಲ್ಪ ಸಮಯವಿದ್ದು ನಾವು ಮನೆಗೆ ಹಿಂತಿರುಗಬೇಕೆಂದು ಸದಾ ಬುದ್ದಿಯಲ್ಲಿರಬೇಕು. ಪುನಃ ನಮ್ಮದು ನಾಟಕದ ಆರಂಭದಿಂದ ಪಾತ್ರ ಪ್ರಾರಂಭವಾಗುತ್ತದೆ. ಇಷ್ಟೆಲ್ಲಾ ಬುದ್ದಿಯಲ್ಲಿದ್ದರೆ ಬಹಳ ಒಳ್ಳೆಯದು.

ನೀವು ಮಕ್ಕಳ ಹೆಜ್ಜೆ-ಹೆಜ್ಜೆಯಲ್ಲಿ ಪದಮಗಳ ಸಂಪಾದನೆಯಿದೆ, ಇದು ಸರ್ವಶ್ರೇಷ್ಠ ಸಂಪಾದನೆಯಾಗಿದೆ. ಸ್ವಯಂ ಭಗವಂತನೇ ಸಂಪಾದನೆ ಮಾಡಿಕೊಳ್ಳುವ ಸಲುವಾಗಿ ಸಲಹೆಯನ್ನು ನೀಡುತ್ತಾರೆ. ಸಲಹೆಯುಂತೆ ನಡೆಯುವುದರಿಂದ ಸ್ವರ್ಗವನ್ನು ತಲುಪುತ್ತೇವೆ. ಆದರೆ ಸ್ವರ್ಗದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗುತ್ತದೆ. ಈ ಸಂಪಾದನೆ ಶಾಂತಿಯಲ್ಲಿದ್ದು ಮಾಡಿಕೊಳ್ಳುವುದಾಗಿದೆ. ಕರ್ಮೇಂದ್ರಿಯಗಳಿಂದ ಕರ್ಮ ಮಾಡುತ್ತಾ ಮನಸ್ಸು ಒಬ್ಬ ಪ್ರಿಯತಮನಲ್ಲಿದ್ದಾಗ ನಮ್ಮ ಜೀವನವೆಂಬ ಹಡುಗು ಪಾರಾಗುತ್ತದೆ. ಇದು ಬಹಳ ಶಕ್ತಿಶಾಲಿಯಾದ ಸಂಪಾದನೆಯಾಗಿದೆ. ತಂದೆಯ ಸೇವೆಯಲ್ಲಿದ್ದಾಗ ತಾನೇ ತಾನಾಗಿ ಬಹಳ ಲಾಭವಾಗುತ್ತದೆ. ಒಳ್ಳೆಯದು.

ಮಧುರ ಮಧುರ ಅಗಲಿ ಹೋಗಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ.

ಧಾರಣೆಗಾಗಿ ಮುಖ್ಯಸಾರ:-

1. ಈಗ ನಾಟಕ ಮುಗಿಯಿತು, ಈಗ ನಾವು ಮನೆಗೆ ಹಿಂತಿರುಗಬೇಕು. ಈ ಖುಷಿಯಲ್ಲಿದ್ದು ಈ ಹಳೆಯ ದೇಹಾಭಿಮಾನವನ್ನು ಬಿಡಬೇಕು.

2. ಒಬ್ಬ ತಂದೆಯ ಮತದಂತೆ ನಡೆಯಬೇಕು. ತಂದೆಗೆ ನಮ್ಮ ಸಲಹೆಯನ್ನು ಕೊಡಬಾರದು. ನಿಶ್ಚಯಬುದ್ದಿಯವರಾಗಿ ತಂದೆಯಿಂದ ಸಿಕ್ಕಿರುವಂತಹ ಶ್ರೀಮತದಂತೆ ನಡೆಯಬೇಕು.

ವರದಾನ:-

ರಾಜಯೋಗಿ ಮಕ್ಕಳಿಗಾಗಿ ಭಿನ್ನ-ಭಿನ್ನ ಸ್ಥಿತಿಗಳೇ ಆಸನವಾಗಿದೆ, ಕೆಲವೊಮ್ಮೆ ಸ್ವಮಾನದ ಸ್ಥಿತಿಯಲ್ಲಿ ಸ್ಥಿತರಾಗಿ ಬಿಡಿ, ಕೆಲವೊಮ್ಮೆ ಫರಿಶ್ತಾ ಸ್ಥಿತಿಯಲ್ಲಿ, ಕೆಲವೊಮ್ಮೆ ಲೈಟ್ಹೌಸ್, ಕೆಲವೊಮ್ಮೆ ಮೈಟ್ಹೌಸ್ ಸ್ಥಿತಿಯಲ್ಲಿ, ಕೆಲವೊಮ್ಮೆ ಪ್ರೀತಿಯ ಸ್ವರೂಪದ ಲವಲೀನ ಸ್ಥಿತಿಯಲ್ಲಿ ಸ್ಥಿತರಾಗಿ ಬಿಡಿ. ಆಸನದ ಮೇಲೆ ಯಾವ ರೀತಿ ಏಕಾಗ್ರವಾಗಿ ಕುಳಿತುಕೊಳ್ಳುತ್ತಾರೆಯೋ ಹಾಗೆಯೇ ತಾವೂ ಸಹ ಭಿನ್ನ-ಭಿನ್ನ ಸ್ಥಿತಿಯ ಆಸನದಲ್ಲಿ ಸ್ಥಿತರಾಗಿದ್ದು, ವಿಭಿನ್ನ ಸ್ಥಿತಿಗಳ ಅನುಭವ ಮಾಡಿರಿ. ಯಾವಾಗ ಬೇಕು ಆಗ ಮನಸ್ಸು-ಬುದ್ಧಿಗೆ ಆದೇಶ ಕೊಡಿ ಮತ್ತು ಸಂಕಲ್ಪ ಮಾಡುತ್ತಿದ್ದಂತೆಯೇ ಆ ಸ್ಥಿತಿಯಲ್ಲಿ ಸ್ಥಿತರಾಗಿ ಬಿಡಬೇಕು. ಹೀಗಾದಾಗ ರಾಜಯೋಗಿ ಸ್ವರಾಜ್ಯ ಅಧಿಕಾರಿ ಎಂದು ಹೇಳಲಾಗುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top