30 June 2022 KANNADA Murli Today | Brahma Kumaris

Read and Listen today’s Gyan Murli in Kannada

29 June 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ತಂದೆಯೊಂದಿಗೆ ಯಾವ ಪ್ರತಿಜ್ಞೆಯನ್ನು ಮಾಡಿದ್ದೀರಿ, ಅದರ ಮೇಲೆ ಸಂಪೂರ್ಣ ನಡೆಯಬೇಕಾಗಿದೆ, ಭೂಮಿ ಬಾಯ್ಬಿಟ್ಟರೂ ಧರ್ಮವನ್ನು ಬಿಡಬಾರದು - ಇದೇ ಎಲ್ಲದಕ್ಕಿಂತ ಶ್ರೇಷ್ಠಗುರಿಯಾಗಿದೆ. ಪ್ರತಿಜ್ಞೆಯನ್ನು ಮರೆತು ಉಲ್ಟಾಕರ್ಮ ಮಾಡಿದರೆ ರಿಜಿಸ್ಟರ್ ಹಾಳಾಗುತ್ತದೆ”

ಪ್ರಶ್ನೆ:: -

ಯಾತ್ರೆಯಲ್ಲಿ ನಾವು ತೀವ್ರವಾಗಿ ಹೋಗುತ್ತಿದ್ದೇವೆ ಎನ್ನುವುದರ ಪರೀಶೀಲನೆ ಅಥವಾ ಲಕ್ಷಣಗಳೇನಾಗಿರುತ್ತವೆ?

ಉತ್ತರ:-

ಒಂದುವೇಳೆ ಯಾತ್ರೆಯಲ್ಲಿ ತೀವ್ರವಾಗಿ ಹೋಗುತ್ತಿದ್ದೀರೆಂದರೆ ಬುದ್ಧಿಯಲ್ಲಿ ಸ್ವದರ್ಶನಚಕ್ರವೇ ತಿರುಗುತ್ತಾ ಇರುತ್ತದೆ. ಸದಾ ತಂದೆ ಮತ್ತು ಆಸ್ತಿಯ ವಿನಃ ಮತ್ತೇನೂ ನೆನಪಿರುವುದಿಲ್ಲ. ಯಥಾರ್ಥ ನೆನಪು ಎಂದರೆ ಇಲ್ಲಿಯದೇನೂ ಕಂಡುಬರಬಾರದು. ನೋಡಿಯೂ ನೋಡದಂತಿರುತ್ತಾರೆ. ಅವರು ಎಲ್ಲವನ್ನೂ ನೋಡುತ್ತಿದ್ದರೂ ಸಹ ಇದೆಲ್ಲವೂ ಮಣ್ಣಿನಲ್ಲಿ ಸೇರಿ ಹೋಗುವುದಿದೆ. ಈ ಮಹಲ್ ಮುಂತಾದವೆಲ್ಲವೂ ಸಮಾಪ್ತಿಯಾಗಿಬಿಡುತ್ತದೆ. ಇಲ್ಲಿಯದೇನೂ ನಮ್ಮ ರಾಜಧಾನಿಯಲ್ಲಿ ಇರಲಿಲ್ಲ, ನಂತರ ಇರುವುದೂ ಇಲ್ಲ ಎಂದು ತಿಳಿಯುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಅಂಬಿಗ ನನ್ನ ಭಾಗ್ಯದ…

ಓಂ ಶಾಂತಿ. ಈ ಗೀತೆಯ ಸಾಲು ವಾಸ್ತವದಲ್ಲಿ ತಪ್ಪಾಗಿದೆ. ತಂದೆಯು ಹೇಳುತ್ತಾರೆ- ಮಕ್ಕಳೇ, ನಾನು ನಿಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ. ಎಲ್ಲಿಗೆ ಕರೆದುಕೊಂಡು ಹೋಗುತ್ತೇನೆ? ಮುಕ್ತಿ ಮತ್ತು ಜೀವನ್ಮುಕ್ತಿಧಾಮಕ್ಕೆ. ಎಷ್ಟು ಶ್ರೇಷ್ಠ ಪದವಿ ಬೇಕೋ ಅಷ್ಟು ಪಡೆದುಕೊಳ್ಳಿ ಆದರೆ ಎಲ್ಲಿ ಬೇಕೋ ಅಲ್ಲಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಎಲ್ಲರೂ ಸಹ ಪುರುಷಾರ್ಥ ಮಾಡಬೇಕೆಂದು ಇಚ್ಛಿಸುತ್ತಾರೆ ಆದರೆ ನಾಟಕದನುಸಾರ ಎಲ್ಲರೂ ಒಂದೇ ರೀತಿಯ ಪುರುಷಾರ್ಥಿಗಳಾಗಲು ಸಾಧ್ಯವಿಲ್ಲ. ಇದಂತು ತಮ್ಮಮೇಲೆ ತಾವು ಕೃಪೆ ತೋರಿಸಿಕೊಳ್ಳುವುದಾಗಿದೆ. ಜ್ಞಾನಸಾಗರನಂತು ಜ್ಞಾನ ಮತ್ತು ಯೋಗವನ್ನು ಕಲಿಸಲು ಬಂದಿದ್ದಾರೆ. ಇದು ಅವರ ಕೃಪೆಯಾಗಿದೆ. ಶಿಕ್ಷಕರು ಓದಿಸುತ್ತಾರೆ, ಯೋಗಿ ಯೋಗವನ್ನು ಕಲಿಸುತ್ತಾರೆ. ಬಾಕಿ ಕಡಿಮೆ ಅಥವಾ ಜಾಸ್ತಿ ಕಲಿಯುವುದು ಅವರ ಮೇಲೆ ಆಧಾರಿತವಾಗಿರುತ್ತದೆ. ನೀವು ತಿಳಿದುಕೊಂಡಿದ್ದೀರಿ- ನಾವು ಎಲ್ಲರೂ ಸತ್ಸಂಗದಲ್ಲಿ ಕುಳಿತಿದ್ದೇವೆ, ಕೆಟ್ಟಸಂಗದಲ್ಲಲ್ಲ. ಸತ್ಯಸಂಗವು ಒಂದೇ ಆಗಿದೆ ಏಕೆಂದರೆ ಒಬ್ಬರೇ ಸತ್ಯ ಆಗಿದ್ದಾರೆ. ಸತ್ಯಯುಗದ ಸ್ಥಾಪನೆಯನ್ನೂ ಸಹ ಅವರೇ ಮಾಡುತ್ತಾರೆ ಮತ್ತು ಸತ್ಯಯುಗದಲ್ಲಿ ಕರೆದುಕೊಂಡು ಹೋಗಲು ಪುರುಷಾರ್ಥವನ್ನು ಮಾಡಿಸುತ್ತಾರೆ. ಸತ್ಯದ ಬಗ್ಗೆ ಒಂದು ಶ್ಲೋಕವೂ ಇದೆ- ಸತ್ಯವನ್ನು ಹೇಳಬೇಕು, ಸತ್ಯವಾಗಿ ನಡೆಯಬೇಕು, ಆಗಲೇ ಸತ್ಯಖಂಡದಲ್ಲಿ ಹೋಗಬಲ್ಲಿರಿ. ಸಿಖ್ಖರು ಸತ್ ಶ್ರೀ ಅಕಾಲ್ ಎಂದು ಹೇಳುತ್ತಾರೆ. ಒಬ್ಬರೇ ಸತ್ಯತಂದೆ ಆಗಿದ್ದಾರೆ, ಅವರು ಎಲ್ಲರಿಗಿಂತ ಶ್ರೇಷ್ಠ, ಅಕಾಲಮೂರ್ತರಾಗಿದ್ದಾರೆ. ಅವರನ್ನು ಎಂದೂ ಕಾಲವು (ಮೃತ್ಯು) ಕಬಳಿಸಲು ಸಾಧ್ಯವಿಲ್ಲ. ಮನುಷ್ಯರಿಗಂತು ಗಳಿಗೆ-ಗಳಿಗೆಯೂ ಮೃತ್ಯು ಬರುತ್ತದೆ. ನೀವು ಮಕ್ಕಳು ಸತ್ಯವಾದ ಸತ್ಸಂಗದಲ್ಲಿ ಕುಳಿತಿದ್ದೀರಿ. ಯಾವ ಭಾರತವು ಈಗ ಸುಳ್ಳಿನ ಖಂಡವಾಗಿದೆ, ಅದನ್ನು ಸತ್ಯ ಖಂಡವನ್ನಾಗಿ ಮಾಡುವವರು ಒಬ್ಬ ತಂದೆಯೇ ಆಗಿದ್ದಾರೆ. ದೇವೀ-ದೇವತೆಗಳು ಎಲ್ಲರೂ ಅವರ ಮಕ್ಕಳಾಗಿದ್ದಾರೆ. ದೇವತೆಗಳು ಇಲ್ಲಿಂದ ಪುಣ್ಯಾತ್ಮತನದ ಆಸ್ತಿಯನ್ನು ತೆಗೆದುಕೊಂಡು ಹೋಗುತ್ತಾರೆ. ಇಲ್ಲಂತು ಸುಳ್ಳೇ ಸುಳ್ಳಿದೆ. ಸರ್ಕಾರವು ಪ್ರತಿಜ್ಞೆಯನ್ನು ಮಾಡಿಸುತ್ತದೆ, ಅದೂ ಸಹ ಸುಳ್ಳು ಆಗಿದೆ. ನಾವು ಭಗವಂತನ ಮೇಲೆ ಪ್ರತಿಜ್ಞೆ ಮಾಡಿ ಸತ್ಯವನ್ನು ಹೇಳುತ್ತೇವೆಂದು ಹೇಳುತ್ತಾರೆ ಆದರೆ ಪ್ರತಿಜ್ಞೆಯನ್ನು ಮಾಡಿರುವ ಭಯವೂ ಸಹ ಮನುಷ್ಯರಿಗೆ ಇರುವುದಿಲ್ಲ. ಇದಕ್ಕಿಂತ ತಮ್ಮ ಮಕ್ಕಳ ಮೇಲೆ ಪ್ರತಿಜ್ಞೆ ಮಾಡಬಹುದಲ್ಲವೇ ಆದರೆ ಇದಕ್ಕೆ ಹಿಂದು-ಮುಂದು ನೋಡುತ್ತಾರೆ ಏಕೆಂದರೆ ಮಕ್ಕಳ ಮೇಲೆ ಪ್ರತಿಜ್ಞೆ ಮಾಡುವುದರಿಂದ ಮಕ್ಕಳು ಸಾಯುತ್ತಾರೇನೋ ಎಂದು ಹಿಂದು-ಮುಂದು ನೋಡುತ್ತಾರೆ. ಈಶ್ವರನೇ ನಮಗೆ ಮಕ್ಕಳನ್ನು ಕೊಡುತ್ತಾರೆ ಎಂದು ತಿಳಿಯುತ್ತಾರೆ. ಆದರೂ ಸಹ ಈಶ್ವರನ ಮೇಲೆ ಪ್ರತಿಜ್ಞೆ ಮಾಡಿ ಸುಳ್ಳು ಹೇಳಲು ಹೆದರುವುದಿಲ್ಲ. ಸ್ತ್ರೀಯು ಎಂದೂ ಸಹ ಪತಿಯ ಮೇಲೆ ಪ್ರತಿಜ್ಞೆಯನ್ನು ಮಾಡುವುದಿಲ್ಲ ಆದರೆ ಪುರುಷರು ಅತಿಬೇಗ ಸ್ತ್ರೀ ಮೇಲೆ ಪ್ರತಿಜ್ಞೆ ಮಾಡಿಬಿಡುತ್ತಾರೆ. ಒಬ್ಬ ಸ್ತ್ರೀ ಹೋದರೆ ಇನ್ನೊಬ್ಬರನ್ನು ಕರೆತರೋಣ ಎಂದು ಪುರುಷರು ತಿಳಿಯುತ್ತಾರೆ. ಮನುಷ್ಯಮಾತ್ರರು ಯಾವುದೆಲ್ಲಾ ಪ್ರತಿಜ್ಞೆ ಮಾಡುತ್ತಾರೆ ಅದೆಲ್ಲವೂ ಸುಳ್ಳು ಪ್ರತಿಜ್ಞೆಗಳಾಗಿವೆ. ಮೊದಲು ಭಗವಂತನನ್ನು ತಂದೆ ಎಂದು ತಿಳಿಯಬೇಕು. ಇಲ್ಲವೆಂದರೆ ತಂದೆಯತನದ ನಶೆ ಏರುವುದಿಲ್ಲ.

ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ತಂದೆಯನ್ನೇ ಸತ್ ಶ್ರೀ ಅಕಾಲ್ ಎಂದು ಹೇಳಲಾಗುತ್ತದೆ. ಆ ಸತ್ನ ಹೆಸರು ಶಿವ ಆಗಿದೆ. ಒಂದುವೇಳೆ ಕೇವಲ ರುದ್ರ ಎಂದು ಹೇಳುತ್ತೀರೆಂದರೆ ಗೊಂದಲರಾಗುತ್ತಾರೆ ಆದರೆ ತಿಳಿಸಿಕೊಡುವಾಗ ಇದನ್ನು ಹೇಳಬೇಕಾಗುತ್ತದೆ. ಗೀತೆಯಲ್ಲಿಯೂ ಸಹ ರುದ್ರ ಜ್ಞಾನ ಯಜ್ಞವೆಂದು ಇದೆ, ಇದರಿಂದ ವಿನಾಶಜ್ವಾಲೆಯು ಪ್ರಜ್ವಲಿತವಾಗುತ್ತದೆ. ಅದೂ ಸಹ ಇಲ್ಲಿಯ ಮಾತಾಗಿದೆ. ಕೃಷ್ಣನ ಯಜ್ಞದ ಹೆಸರಿಲ್ಲ ಆದರೆ ಇಬ್ಬರನ್ನು ಸೇರಿಸಿಬಿಟ್ಟಿದ್ದಾರೆ. ಇದನ್ನು ತಿಳಿಸಲಾಗಿದೆ- ಸತ್ಯಯುಗ-ತ್ರೇತಾದಲ್ಲಿ ಯಾವುದೇ ಯಜ್ಞಗಳು ಇರುವುದಿಲ್ಲ. ಕೇವಲ ಒಂದು ಜ್ಞಾನಯಜ್ಞವಿದೆ. ಉಳಿದೆಲ್ಲವೂ ತಾತ್ಕಾಲಿಕ ಯಜ್ಞಗಳಾಗಿವೆ. ಗ್ರಂಥಗಳನ್ನು ಓದುವುದು, ಪೂಜೆ ಮಾಡುವುದು ಎಲ್ಲವೂ ಭಕ್ತಿಮಾರ್ಗವಾಗಿದೆ. ಜ್ಞಾನವು ಒಂದೇ ಆಗಿದೆ. ಅದನ್ನು ಸತ್ಯಪರಮಾತ್ಮನೇ ಕೊಡುತ್ತಾರೆ. ಮನುಷ್ಯರೆಲ್ಲರೂ ಈಶ್ವರನ ಬಗ್ಗೆ ಏನೆಲ್ಲಾ ಹೇಳುತ್ತಾರೆ ಅದು ಸುಳ್ಳನ್ನೇ ಹೇಳುತ್ತಾರೆ ಆದ್ದರಿಂದಲೇ ಭಾರತವು ಕಂಗಾಲ್ ಆಗಿದೆ. ಇಂತಹ ದೊಡ್ಡದಕ್ಕಿಂತ ದೊಡ್ಡ ಸುಳ್ಳು ಯಾವುದೂ ಇಲ್ಲ. ಈ ನಾಟಕವಂತು ಮಾಡಲ್ಪಟ್ಟಿದೆ. ಇದಕ್ಕೆ ಒಂದು ಹೆಸರಿದೆ- ಮರೆತು-ಮರೆಯಿಸುವಂತಹ ಅರ್ಥಾತ್ ತಂದೆಯನ್ನು ಮರೆಯುವುದರಿಂದ ಅಲೆದಾಡುವುದು ಎಂದರ್ಥ. ಮತ್ತೆ ತಂದೆಯು ಬಂದು ಅಲೆದಾಡುವಿಕೆಯನ್ನು ಬಿಡಿಸುತ್ತಾರೆ. ಈ ನಾಟಕದಲ್ಲಿ ಸೋಲು ಮತ್ತು ಗೆಲುವಿನ ಆಟವಿದೆ. ಸೋಲನ್ನು ಅನುಭವಿಸುವುದರಲ್ಲಿ ಅರ್ಧಕಲ್ಪ ಹಿಡಿಸುತ್ತದೆ. ಎಲ್ಲವೂ ಮಣ್ಣಿನಲ್ಲಿ ಸೇರಿ ಹೋಗುತ್ತದೆ ನಂತರ ಅರ್ಧಕಲ್ಪ ನಮ್ಮ ಗೆಲುವಿರುತ್ತದೆ. ಈ ಮಾತುಗಳನ್ನು ನಿಮ್ಮ ವಿನಃ ಯಾರೂ ತಿಳಿದುಕೊಂಡಿಲ್ಲ, ದೊಡ್ಡ-ದೊಡ್ಡ ಗೀತಾಪಾಠಶಾಲೆಗಳಿವೆ ಮತ್ತು ಗೀತೆಯ ಭಾರತಿ ವಿದ್ಯಾಭವನವನ್ನೂ ಮಾಡಿದ್ದಾರೆ. ಗೀತೆಯ ಹೆಸರು ತುಂಬಾ ದೊಡ್ಡದಿದೆ. ಗೀತೆಗೆ ಸರ್ವಶಾಸ್ತ್ರಮಯಿ ಶಿರೋಮಣಿ ಎಂದು ಹೇಳಲಾಗುತ್ತದೆ ಆದರೆ ಹೆಸರನ್ನು ಬದಲಾಯಿಸಿರುವುದರಿಂದ ಯಾವುದೇ ಕೆಲಸಕ್ಕೆ ಬಾರದಂತೆ ಆಗಿದೆ. ಗೀತೆಯ ಹೆಸರಂತು ನಡೆಯುತ್ತಾ ಬಂದಿದೆ. ತಂದೆಯು ಹೇಳುತ್ತಾರೆ- ಮಕ್ಕಳೇ, ಗೀತೆಯ ಭಗವಂತ ನಾನಾಗಿದ್ದೇನೆ, ಶ್ರೀಕೃಷ್ಣನಲ್ಲ. ಈಗ ಸಂಗಮವಾಗಿದೆ. ತಂದೆಯು ರಚಯಿತನಾಗಿದ್ದಾರೆ. ಯಾವಾಗ ಅವರು ಸ್ವರ್ಗವನ್ನು ರಚಿಸುತ್ತಾರೆ, ಆಗಲೇ ರಾಧಾ-ಕೃಷ್ಣ ಅಥವಾ ಲಕ್ಷ್ಮೀ-ನಾರಾಯಣರು ಬರುತ್ತಾರೆ. ತಂದೆಯು ಬಂದು ಜಗದಂಬಾ ಮತ್ತು ಜಗತ್ಪಿತಾರವರ ಮುಖಾಂತರ ನಮ್ಮನ್ನೇ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ರಾಜ್ಯಭಾಗ್ಯವನ್ನು ಭಗವಂತನ ವಿನಃ ಮತ್ತ್ಯಾರೂ ಕಲಿಸಲು ಸಾಧ್ಯವಿಲ್ಲ. ಜಗದಂಬ ತುಂಬಾ ಪ್ರಸಿದ್ಧವಾಗಿದ್ದಾರೆ. ಕಳಶವನ್ನೂ ಸಹ ಜಗದಂಬನ ಮೇಲೆ ಇಡುತ್ತಾರೆ. ಲಕ್ಷ್ಮೀ-ನಾರಾಯಣ ಅಥವಾ ರಾಧಾ-ಕೃಷ್ಣರಂತು ಈಗ ಇಲ್ಲ. ಕೃಷ್ಣನ ಜೊತೆಗೆ ರಾಧೆಯು ಇರಬೇಕಲ್ಲವೇ ಆದರೆ ಗೀತೆಯಲ್ಲಿ ರಾಧೆಯ ವರ್ಣನೆ ಸ್ವಲ್ಪವೂ ಇಲ್ಲ, ಭಾಗವತದಲ್ಲಿ ಇದೆ. ತಂದೆಯು ಹೇಳುತ್ತಾರೆ- ಯಾರು ರಾಧಾ-ಕೃಷ್ಣರಾಗಿದ್ದರು, ಅವರೀಗ 84ನೆ ಜನ್ಮದಲ್ಲಿದ್ದಾರೆ. ನಾನು ಈಗ ಅವರನ್ನು ಮತ್ತು ಅವರ ರಾಜಧಾನಿಯನ್ನು ಪುನಃ ಜಾಗೃತಗೊಳಿಸುತ್ತಿದ್ದೇನೆ. ಎಲ್ಲರನ್ನೂ ಸುಂದರರನ್ನಾಗಿ ಮಾಡುತ್ತಿದ್ದೇನೆ ಇವು ತುಂಬಾ ಗುಹ್ಯಮಾತುಗಳಾಗಿವೆ. ನೀವೇ ಇದನ್ನು ತಿಳಿದುಕೊಂಡಿದ್ದೀರಿ, ನಾವು ಸೂರ್ಯವಂಶಿ, ಚಂದ್ರವಂಶಿ ದೈವೀ ಮನೆತನದವರಾಗಿದ್ದೇವೆ. ನಾವೇ 84 ಜನ್ಮಗಳನ್ನು ತೆಗೆದುಕೊಂಡಿದ್ದೇನೆ. ಈಗ ಪುನಃ ನಾವು ಸತ್ಯಯುಗದಲ್ಲಿ ಹೋಗುತ್ತೇವೆ. ಸತ್ಯಯುಗದಿಂದ ಹಿಡಿದು ಲೆಕ್ಕ ಮಾಡಲಾಗುತ್ತದೆಯಲ್ಲವೇ. 84 ಜನ್ಮಗಳ ಚಕ್ರವೂ ಸಹ ಹೆಸರುವಾಸಿಯಾಗಿದೆ. ನೀವು ಆಸ್ತಿಯನ್ನು ಗಳಿಗೆ-ಗಳಿಗೆಯು ನೆನಪು ಮಾಡುತ್ತೀರಲ್ಲವೇ. ಈಗ 84 ರ ಚಕ್ರವನ್ನು ನೆನಪು ಮಾಡಿ. ಈ ಚಕ್ರವನ್ನು ನೆನಪು ಮಾಡುವುದು ಎಂದರೆ ಇಡೀ ಪ್ರಪಂಚದ ಇತಿಹಾಸ-ಭೂಗೋಳವನ್ನು ನೆನಪು ಮಾಡುವುದು. ಎಷ್ಟು ಸ್ವದರ್ಶನ ಚಕ್ರ ತಿರುಗುತ್ತಾ ಇರುವುದೋ, ಅಷ್ಟೂ ಅವರು ಯಾತ್ರೆಯಲ್ಲಿ ತೀವ್ರವಾಗಿ ಹೋಗುತ್ತಿದ್ದಾರೆ ಎಂದು ತಿಳಿಯಿರಿ.

ಈಗ ಮುಳ್ಳುಗಳ ಪ್ರಪಂಚವಾಗಿದೆ ಎನ್ನುವುದನ್ನು ನೀವು ತಿಳಿದುಕೊಂಡಿದ್ದೀರಿ. ತಮೋಪ್ರಧಾನ ಮನುಷ್ಯರು ಪಂಚವಿಕಾರಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ತಂದೆಯು ಹೇಳುತ್ತಾರೆ- ಮಕ್ಕಳೇ, ನನ್ನತನವನ್ನು ಬಿಡಿ ಎಂದು ಆದರೆ ಬಿಡುವುದೇ ಇಲ್ಲ. ಇಷ್ಟು ಬೇಹದ್ದಿನ ರಾಜ್ಯಭಾಗ್ಯವು ಸಿಗುತ್ತದೆ ಎಂದರೂ ಸಹ ವಿಚಾರ ಮಾಡುತ್ತೇವೆ ಎಂದು ಹೇಳುತ್ತಾರೆ. ಅದಕ್ಕೆ ತಂದೆಯು ಹೇಳುತ್ತಾರೆ- ಈ ವಿಕಾರಗಳು ಇಷ್ಟು ಪ್ರಿಯವೆನಿಸುತ್ತದೆಯೇ? ಇದನ್ನು ಬಿಡಲು ವಿಚಾರ ಮಾಡುತ್ತೇವೆಂದು ಹೇಳುತ್ತೀರಿ! ಅರೇ! ಈಗಂತು ಪ್ರತಿಜ್ಞೆ ಮಾಡುತ್ತೀರೆಂದರೆ ತಂದೆಯಿಂದ ಸಹಯೋಗವು ಸಿಗುತ್ತದೆ ಆದರೆ ಇಷ್ಟಂತು ಅವಶ್ಯಕತೆ ಇದೆ- ಪ್ರತಿಜ್ಞೆ ಮಾಡಿ ನಂತರ ಕುಲಕಳಂಕಿತರಾಗಬಾರದು. ಧರಣಿ ಬಾಯ್ಬಿಡಲಿ ಆದರೆ ಧರ್ಮವನ್ನು ಬಿಡಬೇಡಿ. ತುಂಬಾ ಕಷ್ಟಕರವಾದ ಗುರಿಯಾಗಿದೆ. ತಂದೆಯಂತು ಪೂರ್ಣ ಪ್ರಯತ್ನ ಮಾಡುತ್ತಾರೆ! ಅಷ್ಟು ಸರಳವಾಗಿ ಬಿಡುವುದಿಲ್ಲ. ಒಂದುಸಲ ಕ್ಷಮಿಸುತ್ತಾರೆ, ಒಂದುವೇಳೆ ನಂತರ ಅದೇ ತಪ್ಪನ್ನು ಮಾಡುತ್ತೀರೆಂದರೆ ಬಿದ್ದುಹೋಗುತ್ತೀರಿ, ಇದರಲ್ಲಿ ರಿಜಿಸ್ಟರ್ ಹಾಳಾಗುತ್ತದೆ. ಈ ವಿಕಾರವು ವಿಷವಾಗಿದೆ. ಜ್ಞಾನವು ಅಮೃತವಾಗಿದೆ. ಇದರಿಂದ ಮನುಷ್ಯರಿಂದ ದೇವತೆಗಳಾಗುತ್ತೀರಿ. ಅವರದು ಕೆಟ್ಟಸಂಗವಾಗಿದೆ. ಸಿಖ್ಖರು ಸತ್ಶ್ರೀಅಕಾಲ್ ಎಂದು ಹೇಳಿ ತುಂಬಾ ಗುಂಗಿನಲ್ಲಿ ಇರುತ್ತಾರೆ ಏಕೆಂದರೆ ಸತ್ ಶ್ರೀ ಅಕಾಲ್ ಎಲ್ಲರ ಉದ್ದಾರ ಮಾಡಿದ್ದಾರೆ ಆದರೆ ಅವರನ್ನು ಮರೆತುಬಿಟ್ಟಿದ್ದಾರೆ. ಮರೆಯುವುದೂ ಸಹ ನಾಟಕದಲ್ಲಿ ಇದೆ. ಜೈನ ಧರ್ಮದವರದು ತುಂಬಾ ಕಠಿಣ ಸನ್ಯಾಸವಾಗಿದೆ. ತಂದೆಯು ಹೇಳಿದ್ದಾರೆ- ನಾನು ನಿಮಗೆ ಸಹಜರಾಜಯೋಗವನ್ನು ಕಲಿಸುತ್ತೇನೆ. ತಂದೆಯು ಯಾವುದೇ ಕಷ್ಟವನ್ನು ಕೊಡುವುದಿಲ್ಲ. ಭಲೆ ವಿಮಾನಗಳಲ್ಲಿ ಹೋಗಿ, ವಾಹನಗಳಲ್ಲಿ ಓಡಾಡಿ, ತಿರುಗಾಡಿ ಆದರೆ ಅಹಾರಪದಾರ್ಥಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಪತ್ಯವನ್ನು ಇಟ್ಟುಕೊಳ್ಳಬೇಕು. ಭೋಜನಕ್ಕೆ ದೃಷ್ಟಿ ಕೊಟ್ಟು ನಂತರ ಸೇವಿಸಬೇಕಾಗಿದೆ ಆದರೆ ಮಕ್ಕಳು ಇದನ್ನು ಮರೆತುಹೋಗುತ್ತಾರೆ. ಇದರಲ್ಲಿ ತಂದೆಯನ್ನು ಅಥವಾ ಪ್ರಿಯತಮನನ್ನು ಖುಷಿಯಿಂದ ನೆನಪು ಮಾಡಬೇಕಾಗಿದೆ. ಓ ಪ್ರಿಯತಮನೇ ನಿಮ್ಮ ನೆನಪಿನಲ್ಲಿ, ನಿಮ್ಮ ಜೊತೆಯಲ್ಲಿ ಭೋಜನವನ್ನು ಸೇವಿಸುತ್ತೇವೆ. ನಿಮಗಂತೂ ನಿಮ್ಮದೇ ಆದ ಶರೀರವಿಲ್ಲ. ನಾವು ನಿಮ್ಮನ್ನು ನೆನಪು ಮಾಡುತ್ತಾ ಸೇವಿಸುತ್ತೇವೆ ಮತ್ತು ನೀವು ವಾಸನೆಯನ್ನು ತೆಗೆದುಕೊಳ್ಳುತ್ತಾ ಇರಿ- ಈ ರೀತಿ ನೆನಪು ಮಾಡುತ್ತಾ-ಮಾಡುತ್ತಾ ಅಭ್ಯಾಸವಾಗಿಬಿಡುತ್ತದೆ ಮತ್ತು ಖುಷಿಯ ನಶೆ ಏರುತ್ತಾ ಇರುತ್ತದೆ. ಜ್ಞಾನದ ಧಾರಣೆಯೂ ಸಹ ಆಗುತ್ತಾ ಹೋಗುವುದು. ಏನಾದರೂ ಕೋರಿಕೆ ಇದ್ದರೆ ಧಾರಣೆಯೂ ಸಹ ಕಡಿಮೆಯಾಗುತ್ತದೆ. ಅಂತಹವರ ಬಾಣವು ಜೋರಾಗಿ ನಾಟುವುದಿಲ್ಲ. ತಂದೆಯೊಂದಿಗೆ ಯೋಗ ಎಂದರೆ ಎಲ್ಲವನ್ನು ನೋಡುತ್ತಿದ್ದರೂ ಸಹ ಈ ಒಳ್ಳೊಳ್ಳೆಯ ಮಹಲ್ಗಳೂ ಸಹ ಮಣ್ಣಿನಲ್ಲಿ ಸೇರಿಹೋಗುತ್ತದೆ ಎಂದು ತಿಳಿಯಬೇಕು. ಇವು ನಮ್ಮ ರಾಜಧಾನಿಯಲ್ಲಿ ಇರಲಿಲ್ಲ. ಈಗಂತು ನಮ್ಮ ರಾಜಧಾನಿಯೂ ಸ್ಥಾಪನೆಯಾಗುತ್ತಿದೆ, ಅದರಲ್ಲಿ ಇವೇನೂ ಇರುವುದಿಲ್ಲ, ಹೊಸಪ್ರಪಂಚವಾಗಿರುವುದು. ಈ ಹಳೆಯ ವೃಕ್ಷಗಳು ಮುಂತಾದವುಗಳು ಏನೂ ಇರುವುದಿಲ್ಲ. ಅಲ್ಲಿ ಎಲ್ಲವೂ ಸುಂದರವಾದ ವಸ್ತುಗಳು ಇರುತ್ತವೆ. ಇಷ್ಟೆಲ್ಲಾ ಪ್ರಾಣಿಗಳು ಮುಂತಾದವುಗಳೆಲ್ಲವೂ ಸಮಾಪ್ತಿಯಾಗಿಬಿಡುತ್ತವೆ. ಅಲ್ಲಿ ಕಾಯಿಲೆಗಳು ಮುಂತಾದವುಗಳು ಇರುವುದಿಲ್ಲ. ಇವೆಲ್ಲವು ನಂತರದಲ್ಲಿ ಬರುತ್ತವೆ. ಸತ್ಯಯುಗವೆಂದರೇನೆ ಸ್ವರ್ಗ. ಇಲ್ಲಿ ಪ್ರತಿವಸ್ತುವು ದುಃಖ ಕೊಡುವಂತಹದಾಗಿದೆ. ಈ ಸಮಯದಲ್ಲಿ ಎಲ್ಲರದೂ ಆಸುರೀಮತವಾಗಿದೆ. ಸರ್ಕಾರವೂ ಸಹ ಇಂತಹ ಶಿಕ್ಷಣ ಇರಬೇಕು, ಅದರಲ್ಲಿ ಮಕ್ಕಳು ಚಂಚಲರಾಗಬಾರದೆಂದು ಇಚ್ಛಿಸುತ್ತದೆ. ಈಗಂತು ತುಂಬಾ ಚಂಚಲತೆ ಆಗಿಬಿಟ್ಟಿದೆ. ಸತ್ಯಾಗ್ರಹ ಮಾಡುವುದು, ಉಪವಾಸ ಸತ್ಯಾಗ್ರಹ ಮುಂತಾದವು ಆಗುತ್ತಿದೆಯಲ್ಲವೇ. ಇದೆಲ್ಲವನ್ನು ಯಾರು ಕಲಿಸಿದರು? ಸ್ವಯಂ ಕಲಿಸಿರುವುದೇ ಸ್ವಯಂನ ಮುಂದೆಬರುತ್ತದೆ. ಈಗ ತಂದೆಯು ಹೇಳುತ್ತಾರೆ, ಮಕ್ಕಳೇ ಶಾಂತಿಯಲ್ಲಿ ಇರಿ. ಘಂಟೆ ಬಾರಿಸುವುದು ಮುಂತಾದವುಗಳನ್ನು ಬಾರಿಸುವುದು, ಚೀರಾಡುವುದು……… ಇವೆಲ್ಲವೂ ಭಕ್ತಿಮಾರ್ಗದ ಚಿಹ್ನೆಗಳಾಗಿವೆ. ನೀವು ಸಾಧನೆಯನ್ನಂತೂ ಜನ್ಮ-ಜನ್ಮಾಂತರಗಳಿಂದ ಮಾಡುತ್ತಾ ಬಂದಿದ್ದೀರಿ, ಸಾಧನೆಯ ಹೆಸರು ನಡೆಯುತ್ತಾ ಬಂದಿದೆ ಆದರೆ ಯಾರ ಸದ್ಗತಿಯೂ ಆಗುವುದಿಲ್ಲ. ನಿಮ್ಮ ಹತ್ತಿರ ಚಿತ್ರ, ಸಾಹಿತ್ಯ ಮುಂತಾದವುಗಳು ಇಲ್ಲದಿದ್ದರೂ ಸಹ ನೀವು ಮಂದಿರಗಳಲ್ಲಿ ಹೋಗಿ ತಿಳಿಸಬಹುದು- ಈ ಲಕ್ಷ್ಮೀ-ನಾರಾಯಣರು ಮೊದಲು ಸ್ವರ್ಗದ ಮಾಲೀಕರಾಗಿದ್ದರಲ್ಲವೇ. ಅವರಿಗೆ ಅವಶ್ಯವಾಗಿ ಸ್ವರ್ಗದ ರಚಯಿತನಿಂದಲೇ ಆಸ್ತಿಯೂ ಸಿಕ್ಕಿರಬಹುದು. ಪರಮಪಿತ ಪರಮಾತ್ಮನೇ ಸ್ವರ್ಗದ ರಚಯಿತನಾಗಿದ್ದಾರೆ, ಅವರೇ ತಿಳಿಸುತ್ತಾರೆ. ಮಂದಿರಗಳನ್ನು ಕಟ್ಟಿಸುವವರು ಇದನ್ನು ಅರಿತುಕೊಂಡಿಲ್ಲ. ನೀವು ಮಕ್ಕಳು ತಿಳಿಸಿ- ಅವರಿಗೆ ಪರಮಪಿತ ಪರಮಾತ್ಮನಿಂದಲೇ ಆಸ್ತಿಯು ಸಿಕ್ಕಿದೆ. ಅವಶ್ಯವಾಗಿ ಕಲಿಯುಗದ ಅಂತ್ಯದಲ್ಲಿಯೇ ಸಿಕ್ಕಿರಬಹುದಲ್ಲವೇ. ಗೀತೆಯಲ್ಲಿಯೂ ಸಹ ರಾಜಯೋಗದ ಮಾತಿದೆ. ಅವಶ್ಯವಾಗಿ ಸಂಗಮಯುಗದಲ್ಲಿಯೇ ರಾಜಯೋಗವನ್ನು ಕಲಿಯುತ್ತಾರೆ. ಪರಮಪಿತ ಪರಮತ್ಮನಿಂದಲೇ ಕಲಿಯುತ್ತಾರೆ, ಶ್ರೀಕೃಷ್ಣ ರಚನೆಯಿಂದಲ್ಲ. ರಚಯಿತನಂತು ಒಬ್ಬ ತಂದೆಯಾಗಿದ್ದಾರೆ. ಇವರನ್ನೇ ಸ್ವರ್ಗದಾತಾ, ಪರಮಪಿತ ಪರಮಾತ್ಮನೆಂದು ಹೇಳುತ್ತಾರೆ. ಯಾರು ವಿಶಾಲಬುದ್ಧಿಯವರಿರುತ್ತಾರೆ ಅವರು ಚೆನ್ನಾಗಿ ತಿಳಿದುಕೊಳ್ಳುತ್ತಾರೆ ಮತ್ತು ಧಾರಣೆಯನ್ನು ಮಾಡುತ್ತಾರೆ. ಚಿಕ್ಕ-ಚಿಕ್ಕ ಮಕ್ಕಳು ಗಣ್ಯವ್ಯಕ್ತಿಗಳೊಂದಿಗೆ ಕುಳಿತು ಮಾತನಾಡಿ, ಚಿತ್ರಗಳ ಬಗ್ಗೆ ತಿಳಿಸಿ, ಇವರನ್ನು ರಚಿಸುವವರು ಯಾರು ಎನ್ನುವುದರ ಬಗ್ಗೆ ತಿಳಿಸಿ. ಭಲೆ ಸಾಮಾನ್ಯಚಿತ್ರಗಳೇ ಇರಬಹುದು, ಇಲ್ಲದೇ ಇರಬಹುದು. ಮಕ್ಕಳು ಗಿಳಿಯ ಭಾಷೆಯಲ್ಲಿ ತಿಳಿಸಬಹುದಾಗಿದೆ. ಚಿಕ್ಕಮಕ್ಕಳು ಒಂದುವೇಳೆ ಬುದ್ಧಿವಂತರಾಗಿಬಿಟ್ಟರೆ, ಬಲಿಹಾರಿ ಒಬ್ಬ ತಂದೆಯದಾಗಿದೆ, ಅವರು ಇವರನ್ನು ಇಂತಹ ಬುದ್ಧಿವಂತರನ್ನಾಗಿ ಮಾಡಿದ್ದಾರೆ ಎಂದು ಹೇಳುತ್ತಾರೆ. ಮಗು ಹೇಳುತ್ತದೆ ನಾನು ಅರಿತುಕೊಂಡಿದ್ದೇನೆ ಆದ್ದರಿಂದ ತಿಳಿಸುತ್ತೇನೆ. ಬೇಹದ್ದಿನ ತಂದೆಯು ಈಗ ರಾಜಯೋಗವನ್ನು ಕಲಿಸುತ್ತಿದ್ದಾರೆ.

ತಂದೆಯು ಹೇಳುತ್ತಾರೆ- ಮಕ್ಕಳೇ, ತಮ್ಮನ್ನು ಆತ್ಮನೆಂದು ತಿಳಿಯಿರಿ, ಯಾವುದೇ ದೇಹಧಾರಿಯನ್ನು ಗುರುವೆಂದು ತಿಳಿಯಬೇಡಿ. ಒಬ್ಬ ಸದ್ಗುರುವೇ ದಡ ಸೇರಿಸುವವರಾಗಿದ್ದಾರೆ, ಉಳಿದವರೆಲ್ಲರೂ ಮುಳುಗಿಸುವವರಾಗಿದ್ದಾರೆ. ಈ ರೀತಿ ಜ್ಞಾನದ ಧ್ವನಿ ಮಾಡುವುದರಿಂದ ಹೆಸರು ಪ್ರಸಿದ್ಧವಾಗುತ್ತದೆ. ಕನ್ಯೆಯರ ಮುಖಾಂತರವೇ ಜ್ಞಾನದ ಬಾಣವನ್ನು ಹಾಕಿಸಿದರು ಎನ್ನುವುದನ್ನು ತೋರಿಸಿದ್ದಾರಲ್ಲವೇ ಆದರೆ ಎಲ್ಲರೂ ತಿಳಿದುಕೊಳ್ಳುತ್ತಾರೆಂದಲ್ಲ. ಯಾರು ನಮ್ಮ ಧರ್ಮದವರಾಗಿರುತ್ತಾರೋ ಅವರು ತಕ್ಷಣ ತಿಳಿದುಕೊಳ್ಳುತ್ತಾರೆ. ವೃದ್ಧರಿಗೆ ಹಾಗೂ ಯಾರು ಮಂದಿರಗಳನ್ನು ಕಟ್ಟಿಸುತ್ತಾರೆ ಅವರಿಗೆ ತಿಳಿಸಬೇಕು, ಮೇಲೆತ್ತಬೇಕು. ನಾವು ನಿಮಗೆ ಶಿವತಂದೆಯ ಚರಿತ್ರೆಯನ್ನು ತಿಳಿಸುತ್ತೇವೆ. ಸೆಕೆಂಡ್ ನಂಬರ್ ಬ್ರಹ್ಮಾ, ವಿಷ್ಣು, ಶಂಕರರಾಗಿದ್ದಾರೆ. ನಾವು ನಿಮಗೆ ಮನುಷ್ಯರು 84 ಜನ್ಮಗಳನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎನ್ನುವ ಪ್ರಪಂಚದ ಇತಿಹಾಸ-ಭೂಗೋಳವನ್ನು ತಿಳಿಸುತ್ತೇವೆ. ಇದು 84 ಜನ್ಮಗಳ ಚಕ್ರವಾಗಿದೆ. ಬ್ರಹ್ಮಾ-ಸರಸ್ವತಿ ಎಲ್ಲರ ಕಥೆಯನ್ನು ಕುಳಿತು ತಿಳಿಸಿಕೊಡಿ. ಇದು ನೀವು ಮಕ್ಕಳ ವಿನಃ ಯಾರೂ ತಿಳಿಸಲು ಸಾಧ್ಯವಿಲ್ಲ. ಅವರಿಗೆ ತಿಳಿಸಿ – ನೀವು ಬಂದರೆ ಈ ಲಕ್ಷ್ಮೀ-ನಾರಾಯಣರು ರಾಜ್ಯವನ್ನು ಹೇಗೆ ಪಡೆದರು ನಂತರ ಹೇಗೆ ಕಳೆದುಕೊಂಡರು ಎಂದು ತಿಳಿಸುತ್ತೇವೆ. ಇಷ್ಟನ್ನು ತಿಳಿಯಲಾಗದಿದ್ದರೆ ಕೇವಲ ಮನ್ಮನಾಭವ ಆಗಿ. ಈ ರೀತಿಯಾಗಿ ಮಕ್ಕಳು ಹೋಗಿ ಸರ್ವೀಸ್ ಮಾಡಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿಹೋಗಿ ಮರಳಿಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಒಳಗೆ ಯಾವುದೇ ಇಚ್ಛೆಯಿದ್ದರೆ ಅದನ್ನು ಪರಿಶೀಲನೆ ಮಾಡಿ ತೆಗೆದುಹಾಕಬೇಕಾಗಿದೆ. ತಂದೆಯೊಂದಿಗೆ ಯಾವ ಪ್ರತಿಜ್ಞೆಯನ್ನು ಮಾಡಿದ್ದೀರಿ ಅದರಮೇಲೆ ಸ್ಥಿರವಾಗಿ ಇರಬೇಕಾಗಿದೆ.

2. ಭೋಜನವನ್ನು ಬಹಳ ಶುದ್ದಿಯಿಂದ ದೃಷ್ಟಿ ಕೊಟ್ಟು ಸ್ವೀಕಾರ ಮಾಡಬೇಕು. ತಂದೆ ಅಥವಾ ಪ್ರಿಯತಮನ ನೆನಪಿನಲ್ಲಿ ಖುಷಿ-ಖುಷಿಯಾಗಿ ಭೋಜನವನ್ನು ಸೇವಿಸಬೇಕಾಗಿದೆ.

ವರದಾನ:-

ಹೇಳಲಾಗುತ್ತದೆ- ಒಂದೆರಡು ಸಾವಿರವನ್ನು ಪಡೆಯಿರಿ, ವಿನಾಶಿ ಖಜಾನೆಯನ್ನು ಕೊಡುವುದರಿಂದ ಕಡಿಮೆಯಾಗುತ್ತದೆ, ಅವಿನಾಶಿ ಖಜಾನೆಯನ್ನು ಕೊಡುವುದರಿಂದ ಹೆಚ್ಚಾಗುತ್ತದೆ. ಆದರೆ ಯಾರು ಸ್ವಯಂನಲ್ಲಿ ಸಂಪನ್ನವಾಗಿರುತ್ತಾರೆಯೋ ಅವರೇ ಕೊಡಲು ಸಾಧ್ಯವಾಗುವುದು. ಅಂದಮೇಲೆ ಮಾಸ್ಟರ್ ದಾತಾ ಅರ್ಥಾತ್ ಸ್ವಯಂ ಸಂಪನ್ನರಾಗಿರುವವರು. ಅವರಲ್ಲಿ ಈ ನಶೆಯಿರುತ್ತದೆ- ತಂದೆಯ ಖಜಾನೆ ನನ್ನ ಖಜಾನೆಯಾಗಿದೆ. ಯಾರ ನೆನಪು ಸತ್ಯವಾಗಿದೆಯೋ ಅವರಿಗೆ ಸ್ವತಹವಾಗಿಯೇ ಸರ್ವಪ್ರಾಪ್ತಿಗಳು ಆಗುತ್ತಿರುತ್ತವೆ, ಬೇಡುವ ಅಥವಾ ಚಿಂತಿಸುವ ಅವಶ್ಯಕತೆಯಿಲ್ಲ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top