30 June 2021 KANNADA Murli Today | Brahma Kumaris

Read and Listen today’s Gyan Murli in Kannada

29 June 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

"ಮಧುರ ಮಕ್ಕಳೇ - ತಂದೆಯ ಆಶೀರ್ವಾದವನ್ನು ಪಡೆಯಬೇಕೆಂದರೆ ಸೇವಾಧಾರಿ ಸುಪುತ್ರ ಮಕ್ಕಳಾಗಿ ಎಲ್ಲರಿಗೆ ಸುಖ ನೀಡಿ, ಯಾರಿಗೂ ದುಃಖ ಕೊಡಬೇಡಿ"

ಪ್ರಶ್ನೆ:: -

ಧರ್ಮರಾಜನ ಶಿಕ್ಷೆಗಳಿಂದ ಮುಕ್ತರಾಗಬೇಕೆಂದರೆ ಯಾವ ಈಶ್ವರೀಯ ನಿಯಮಗಳ ಮೇಲೆ ಗಮನ ಕೊಡಬೇಕಾಗಿದೆ?

ಉತ್ತರ:-

ಈಶ್ವರನ ಮುಂದೆ ಪ್ರತಿಜ್ಞೆ ಮಾಡಿದ ಮೇಲೆ ಮತ್ತೆಂದಿಗೂ ಅದರ ಉಲ್ಲಂಘನೆ ಮಾಡಬಾರದು. ಯಾರಿಗೂ ದುಃಖ ಕೊಡಬಾರದು. ಕ್ರೋಧ ಮಾಡುವುದು, ತೊಂದರೆ ಕೊಡುವುದು, ಇಂತಹ ಯಾವ ಚಲನೆಯಿಂದ ಈಶ್ವರನ ಹೆಸರು ಕೆಡುವುದೋ ಅಂತಹ ಕರ್ಮ ಮಾಡುವವರು ಬಹಳ ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಇಂತಹ ಯಾವುದೇ ಕರ್ಮ ಮಾಡಬಾರದು. ಮಾಯೆಯ ಬಿರುಗಾಳಿ ಎಷ್ಟಾದರೂ ಬರಲಿ ರೋಗವೇ ಹೆಚ್ಚಾಗಲಿ, ಆದರೆ ಬುದ್ಧಿಯಿಂದ ಸರಿ-ತಪ್ಪಿನ ನಿರ್ಣಯ ಮಾಡಿ ತಪ್ಪು ಕರ್ಮದಿಂದ ಸದಾ ದೂರವಿರಿ.

 

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನನ್ನ ಮನದ ಬಾಗಿಲಿನಲ್ಲಿ ಬಂದವರು ಯಾರು….

 

ಓಂ ಶಾಂತಿ. ಓಂ ಶಾಂತಿ ಎಂದು ಯಾರು ಹೇಳಿದರು? ಬಾಬಾ ಮತ್ತು ದಾದಾ, ಇದಂತೂ ಮಕ್ಕಳಿಗೆ ಅವಶ್ಯವಾಗಿ ನಿಶ್ಚಯವಿದೆ – ಪರಮಪಿತ ಪರಮಾತ್ಮ ಶಿವನೇ ನಮ್ಮ ಪಾರಲೌಕಿಕ ತಂದೆಯಾಗಿದ್ದಾರೆ ಮತ್ತು ಈ ಬ್ರಹ್ಮಾರವರು ಎಲ್ಲಾ ಮಕ್ಕಳ ಅಲೌಕಿಕ ತಂದೆಯಾಗಿದ್ದಾರೆ, ಇವರಿಗೆ ಪ್ರಜಾಪಿತ ಬ್ರಹ್ಮನೆಂದು ಹೇಳುವರು. ಪ್ರಜಾಪಿತ ಬ್ರಹ್ಮಾರವರ ವಿನಃ ಮತ್ತ್ಯಾರಿಗಾದರೂ ಇಷ್ಟು ಮಂದಿ ಮಕ್ಕಳು ಇರುತ್ತಾರೆಯೇ! ಮೊದಲು ಇರಲಿಲ್ಲ ಆದರೆ ಬೇಹದ್ದಿನ ತಂದೆಯು ಇವರಲ್ಲಿ ಪ್ರವೇಶ ಮಾಡಿದ ನಂತರ ಇವರು ದಾದಾ ಆಗಿ ಬಿಟ್ಟರು. ಸ್ವಯಂ ದಾದಾರವರೇ ಹೇಳುತ್ತಾರೆ – ಮಕ್ಕಳೇ, ನಿಮಗೆ ಪಾರಲೌಕಿಕ ತಂದೆಯ ಆಸ್ತಿ ಸಿಗುತ್ತದೆ. ಮೊಮ್ಮಕ್ಕಳು ಸದಾ ತಾತನಿಗೆ ವಾರಸುಧಾರರಾಗಿರುತ್ತಾರೆ. ಅವರ ಬುದ್ಧಿಯೋಗವು ತಾತನ ಕಡೆ ಹೋಗುತ್ತದೆ ಏಕೆಂದರೆ ತಾತನ ಆಸ್ತಿಯ ಹಕ್ಕು ಸಿಗುವುದು. ಹೇಗೆ ರಾಜರ ಬಳಿ ಯಾವ ಮಕ್ಕಳು ಜನ್ಮ ಪಡೆಯುವರೋ ಅವರನ್ನು ಇವರು ದೊಡ್ಡವರ ಆಸ್ತಿ ಎಂದು ಹೇಳುತ್ತಾರೆ. ಇದರ ಅರ್ಥವಾಗಿದೆ – ದೊಡ್ಡವರ ಆಸ್ತಿಯ ಮೇಲೆ ಇವರಿಗೆ ಹಕ್ಕಿದೆ ಎಂದು. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ನಾವು ಬೇಹದ್ದಿನ ತಂದೆಯ ಮೂಲಕ ಅತೀ ದೊಡ್ಡ ಆಸ್ತಿಯಾದ ಸ್ವರ್ಗದ ರಾಜ್ಯಭಾಗ್ಯವನ್ನು ಪಡೆಯುತ್ತಿದ್ದೇವೆ, ನಮಗೆ ಅಂತಹ ತಂದೆಯು ಓದಿಸುತ್ತಿದ್ದಾರೆ. ಈಗ ಸನ್ಮುಖದಲ್ಲಿ ಕುಳಿತಿದ್ದೇವೆ, ಆದರೆ ಸನ್ಮುಖದಲ್ಲಿ ಕುಳಿತಿರುವ ನಶೆಯು ಮಕ್ಕಳಲ್ಲಿ ನಂಬರ್ವಾರ್ ಪುರುಷಾರ್ಥದನುಸಾರ ಇರುತ್ತದೆ. ಕೆಲವರ ಹೃದಯದಲ್ಲಂತೂ ಬಹಳ ಪ್ರೀತಿ ಇರುತ್ತದೆ. ನಾವು ಶ್ರೇಷ್ಠಾತಿ ಶ್ರೇಷ್ಠ ಭಗವಂತನಿಗೆ ಈ ಸಾಕಾರ ಮಾತಾ-ಪಿತಾರವರ (ಮಮ್ಮಾ-ಬಾಬಾ) ಮೂಲಕ ವಾರಸುಧಾರರಾಗುತ್ತೇವೆ. ಬೇಹದ್ದಿನ ತಂದೆಯು ಬಹಳ ಮಧುರರಾಗಿದ್ದಾರೆ, ಅವರೇ ನಮ್ಮನ್ನು ರಾಜ್ಯಭಾಗ್ಯಕ್ಕೆ ಯೋಗ್ಯರನ್ನಾಗಿ ಮಾಡುತ್ತಾರೆ. ಮಾಯೆಯು ಸಂಪೂರ್ಣ ಅಯೋಗ್ಯರನ್ನಾಗಿ ಮಾಡಿ ಬಿಟ್ಟಿದೆ. ನಿನ್ನೆ ದಿನ ಬಾಬಾರವರ ಬಳಿ ಯಾರೋ ಮಿಲನ ಮಾಡಲು ಬಂದಿದ್ದರು ಆದರೆ ಅವರಿಗೇನೂ ತಿಳಿದಿರಲಿಲ್ಲ. ಆದರೂ ಬಾಬಾರವರು ತಿಳಿಸಿದರು – ಇವರೆಲ್ಲರೂ ಬ್ರಹ್ಮಾಕುಮಾರರಾಗಿದ್ದಾರೆ ಎಂದು. ನೀವೂ ಸಹ ಬ್ರಹ್ಮಾ ಹಾಗೂ ಶಿವನ ಮಕ್ಕಳಾಗಿದ್ದೀರಿ ಎಂದು ತಂದೆಯು ಹೇಳುವುದಂತೂ ಹೇಳಿದರು ಆದರೆ ಅವರಿಗೆ ಹೃದಯಕ್ಕೆ ನಾಟಲಿಲ್ಲ. ನಿಜವಾಗಿಯು ನಾವು ಅವರ ಮಕ್ಕಳಾಗಿದ್ದೇವೆ ಎಂಬ ಬಾಣವು ನಾಟಲಿಲ್ಲ. ಹಾಗೆಯೇ ಇಲ್ಲಿಯೂ ಕೆಲವು ಮಕ್ಕಳಿದ್ದಾರೆ ಅವರಿಗೆ ಬಹಳ ಸ್ವಲ್ಪ ಮಾತ್ರ ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ. ಆ ಖುಷಿ-ನಶೆ ಕಾಣಿಸುವುದಿಲ್ಲ. ನೀವು ಮಕ್ಕಳಿಗಂತೂ ಒಳಗೆ ಬಹಳ ಖುಷಿಯ ನಶೆ ಏರಿರಬೇಕು. ಆ ನಶೆಯು ಚೆಹರೆಯ ಮೇಲೆ ಕಂಡು ಬರುತ್ತದೆ. ಈಗ ನೀವು ಪ್ರಿಯತಮೆಯರ ಜ್ಞಾನ ಶೃಂಗಾರವಾಗುತ್ತಿದೆ. ನಾವೆಲ್ಲರು ಪ್ರಿಯತಮನ ಪ್ರಿಯತಮೆಯರಾಗಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ. ಒಬ್ಬ ರೈತನ ಮಗಳ ಕಥೆ ಇದೆಯಲ್ಲವೇ. ಒಬ್ಬ ರಾಜನು ರೈತನ ಮಗಳನ್ನು ಕರೆ ತಂದು ವಿವಾಹ ಮಾಡಿಕೊಂಡನು ಆದರೂ ಅವಳಿಗೆ ರಾಜ ಮಹಲಿನಲ್ಲಿ ಮಜಾ ಬರಲಿಲ್ಲ. ಆದ್ದರಿಂದ ರಾಜನು ಅವಳನ್ನು ಮತ್ತೆ ಕರೆದುಕೊಂಡು ಹೋಗಿ ಹಳ್ಳಿಯಲ್ಲಿ ಬಿಟ್ಟು ಬಂದನು. ನೀನು ರಾಜ್ಯಭಾಗ್ಯಕ್ಕೆ ಯೋಗ್ಯಳಲ್ಲ ಎಂದು ಹೇಳಿದನು. ಇಲ್ಲಿಯೂ ಸಹ ತಂದೆಯು ಶೃಂಗಾರ ಮಾಡುತ್ತಾರೆ, ಭವಿಷ್ಯದಲ್ಲಿ ಮಹಾರಾಣಿಯಾಗಿ ಎಂದು ಹೇಳುತ್ತಾರೆ. ಗೋಪಿಕೆಯರನ್ನು ಪಟ್ಟದ ರಾಣಿಯನ್ನಾಗಿ ಮಾಡಿಕೊಳ್ಳಲು ಓಡಿಸಿಕೊಂಡು ಹೋದನೆಂದು ಕೃಷ್ಣನಿಗೆ ಹೇಳುತ್ತಾರೆ ಆದರೆ ಏನನ್ನು ತಿಳಿದುಕೊಂಡಿಲ್ಲ. ಎಲ್ಲರೂ ಅಧರ್ಮಿಗಳಾಗಿದ್ದಾರೆ. ಪ್ರಪಂಚವು ಇದೇ ರೀತಿ ನಡೆಯುತ್ತಿರುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ಅನೇಕ ಮಂದಿ ಗುಡಿ-ಗೋಪುರಗಳಿಗೂ ಹೋಗುವುದಿಲ್ಲ. ಶಾಸ್ತ್ರಗಳನ್ನೂ ಒಪ್ಪುವುದಿಲ್ಲ. ಸರ್ಕಾರವೂ ಸಹ ಧರ್ಮವನ್ನು ಒಪ್ಪುವುದಿಲ್ಲ. ಭಾರತವು ಯಾವ ಧರ್ಮದ್ದಾಗಿತ್ತು, ಈಗ ಯಾವ ಧರ್ಮದ್ದಾಗಿದೆ ಎಂಬುದನ್ನು ತಿಳಿದುಕೊಂಡಿಲ್ಲ, ಈಗ ನೀವು ಮಕ್ಕಳು ದೈವೀ ಕುಲದವರಾಗಿದ್ದೀರಿ. ಹೇಗೆ ಅವರು ಕ್ರಿಶ್ಚಯನ್ ಕುಲದವರಾಗಿದ್ದಾರೆ, ಹಾಗೆಯೇ ನೀವು ಬ್ರಾಹ್ಮಣ ಕುಲದವರಾಗಿದ್ದೀರಿ. ಮೊಟ್ಟ ಮೊದಲು ನೀವು ಮಕ್ಕಳನ್ನು ಪತಿತ ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡುತ್ತೇನೆ. ಪಾವನರಾಗುತ್ತಾ-ಆಗುತ್ತಾ 21 ಜನ್ಮಗಳಿಗಾಗಿ ದೈವೀ ಸಂಪ್ರದಾಯದವರಾಗುತ್ತೀರಿ. ದೈವೀ ಮಡಿಲಿನಲ್ಲಿ ಹೋಗುತ್ತೀರಿ. ಮೊದಲು ಆಸುರಿ ಮಡಿಲಿನಲ್ಲಿ ಇದ್ದಿರಿ. ಆಸುರಿ ಮಡಿಲಿನಿಂದ ನೀವು ಈಶ್ವರೀಯ ಮಡಿಲಿಗೆ ಬಂದಿದ್ದೀರಿ. ಒಬ್ಬ ತಂದೆಯ ಮಕ್ಕಳು ಸಹೋದರ-ಸಹೋದರಿಯರಾಗಿದ್ದೀರಿ. ಇದು ಒಂದು ಅದ್ಭುತ ಆಗಿದೆ. ಎಲ್ಲರೂ ಹೇಳುತ್ತೀರಿ – ನಾವು ಬ್ರಾಹ್ಮಣ ಕುಲದವರಾಗಿದ್ದೇವೆ, ಶ್ರೀಮತದಂತೆ ನಡೆಯಬೇಕಾಗಿದೆ, ಎಲ್ಲರಿಗೆ ಸುಖ ಕೊಡಬೇಕು, ಮಾರ್ಗ ತಿಳಿಸಬೇಕು. ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ಹೇಳುವವರು ಪ್ರಪಂಚದಲ್ಲಿ ಯಾರೂ ಇಲ್ಲ. ನಿಮಗೆ ಬೇಹದ್ದಿನ ತಂದೆಯು ಸಿಕ್ಕಿದ್ದಾರೆ, ನೀವೇ ಅವರ ಮಕ್ಕಳಾಗಿದ್ದೀರಿ. ಬುದ್ಧಿಯಿಂದ ತಿಳಿದುಕೊಂಡಿದ್ದೀರಿ, ಕಲ್ಪದ ಮೊದಲು ಯಾರು ತಂದೆಯಿಂದ ಆಸ್ತಿಯನ್ನು ಪಡೆದಿದ್ದರೋ ಅವರೇ ಬಂದು ಪಡೆಯುವರು. ಸ್ವಲ್ಪ ಬುದ್ಧಿಯಲ್ಲಿದ್ದರೂ ಮತ್ತೆಂದಾದರೂ ಅವಶ್ಯವಾಗಿ ಬರುವರು. ಏನಾದರೂ ಒಂದು ಪಡೆಯುವುದಕ್ಕಾಗಿಯೇ ಬರುತ್ತಾರೆ. ನಿಮ್ಮಲ್ಲಿಯೂ ನಂಬರ್ವಾರ್ ತಿಳಿದುಕೊಂಡಿದ್ದೀರಿ. ಇಂದು ಪಾವನರಾಗಲು ಬರುತ್ತಾರೆ ಮತ್ತು ನಾಳೆ ಪತಿತರಾಗುತ್ತಾರೆ. ಅನ್ಯರ ಕೆಟ್ಟ ಸಂಗದ ಪ್ರಭಾವ ಬೀರಿದರೆ ತಂದೆಯನ್ನು ಮರೆತು ಹೋಗುತ್ತಾರೆ. ತಂದೆಯ ಮಕ್ಕಳಾಗಿ ನಂತರ ಅವರ ಕೈ ಬಿಟ್ಟರೆ ಬಹಳ ಪಾಪಾತ್ಮರಾಗುವರು. ಹೇಗೆ ಕೊಲೆ ಮಾಡಿದರೆ ಪಾಪವಾಗುತ್ತದೆ, ಆದರೆ ಆ ಪಾಪವು ಕಡಿಮೆಯೇ. ತಂದೆಯ ಮಕ್ಕಳಾಗಿ ತಂದೆಗೆ ಮತ್ತೆ ವಿಚ್ಛೆದನ ನೀಡಿ ವಿಕಾರಿಗಳಾಗುವರೋ ಅವರಿಗೆ ಬಹಳ ಪಾಪವಾಗುತ್ತದೆ. ಜ್ಞಾನದಲ್ಲಿ ಆಗುವಷ್ಟು ಅಜ್ಞಾನ ಕಾಲದಲ್ಲಿ ಅದು ಪಾಪವಾಗುವುದಿಲ್ಲ. ಅಜ್ಞಾನದಲ್ಲಿ ಮನುಷ್ಯರಿಗೆ ಕ್ರೋಧವು ಸಾಮಾನ್ಯವಾಗಿರುತ್ತದೆ. ಇಲ್ಲಿ ನೀವು ಯಾರ ಮೇಲಾದರೂ ಕ್ರೋಧ ಮಾಡಿದರೆ 100 ಪಟ್ಟು ಶಿಕ್ಷೆಯಾಗುತ್ತದೆ. ಸ್ಥಿತಿಯಿಂದ ಕೆಳಗೆ ಇಳಿಯುತ್ತೀರಿ ಏಕೆಂದರೆ ಈಶ್ವರನ ಆದೇಶವನ್ನು ಪಾಲಿಸಲಿಲ್ಲ. ಪವಿತ್ರರಾಗಿ ಎಂದು ಧರ್ಮರಾಜನ ಆದೇಶ ಸಿಗುತ್ತದೆ. ಈಶ್ವರನ ಮಕ್ಕಳಾಗಿಯು ಅವರ ಆದೇಶದ ಉಲ್ಲಂಘನೆ ಮಾಡಿದರೆ 100 ಪಟ್ಟು ಶಿಕ್ಷೆಯಾಗುತ್ತದೆ. ರಚಯಿತನು ಅವರೊಬ್ಬರೇ ಆಗಿದ್ದಾರೆ. ಬ್ರಹ್ಮಾ-ವಿಷ್ಣು-ಶಂಕರರೂ ತಂದೆಯ ರಚನೆಯಾಗಿದ್ದಾರೆ. ಧರ್ಮರಾಜನು ರಚನೆ. ಬಾಬಾರವರು ಧರ್ಮರಾಜನ ರೂಪವನ್ನು ಸಾಕ್ಷಾತ್ಕಾರ ಮಾಡಿಸುತ್ತಾರೆ. ಆ ಸಮಯದಲ್ಲಿ ಸಿದ್ಧ ಮಾಡಿ ತಿಳಿಸುತ್ತಾರೆ – ನೋಡಿ, ನಾವು ಕ್ರೋಧ ಮಾಡುವುದಿಲ್ಲ, ಯಾರಿಗೂ ದುಃಖ ಕೊಡುವುದಿಲ್ಲ ಎಂದು ನೀವು ಪ್ರತಿಜ್ಞೆ ಮಾಡಿದ್ದಿರಿ ಮತ್ತೆ ನೀವು ಇವರಿಗೆ ದುಃಖ ಕೊಟ್ಟು ತೊಂದರೆ ಮಾಡಿದ್ದೀರಿ. ಈಗ ಶಿಕ್ಷೆಯನ್ನು ಅನುಭವಿಸಿ ಎಂದು ಹೇಳುತ್ತಾರೆ. ತಂದೆಯು ಸಾಕ್ಷಾತ್ಕಾರ ಮಾಡಿಸದೆ ಶಿಕ್ಷೆ ಕೊಡುವುದಿಲ್ಲ. ಪ್ರೂಫ್ ಬೇಕಲ್ಲವೇ. ಶಿಕ್ಷೆ ಅನುಭವಿಸುವವರೂ ಸಹ ತಿಳಿದುಕೊಳ್ಳುತ್ತಾರೆ – ಅವಶ್ಯವಾಗಿ ನಾನು ತಂದೆಯನ್ನು ಬಿಟ್ಟು ಈ ಕೆಟ್ಟ ಕರ್ಮ ಮಾಡಿದೆನು ಎಂದು. ತಂದೆಗೆ ನಿಂದನೆ ಮಾಡಿಸುವುದರಿಂದ ಅನೇಕರಿಗೆ ಆಪತ್ತು ಬರುತ್ತದೆ. ಎಷ್ಟು ಮಂದಿ ಅಬಲೆಯರು ಬಂಧನಕ್ಕೆ ಒಳಗಾಗುತ್ತಾರೆ. ಇದೆಲ್ಲವು ನಿಂದನೆ ಮಾಡಿಸಿದವರಿಗೆ ಶಿಕ್ಷೆಯಾಗುತ್ತದೆ, ಆದ್ದರಿಂದ ತಂದೆ ಹೇಳುತ್ತಾರೆ – ಅತೀ ದೊಡ್ಡ ಪಾಪಾತ್ಮರನ್ನು ನೋಡಬೇಕೆಂದರೂ ಇಲ್ಲಿ ನೋಡಿರಿ ಎಂದು. ಹೇಗೆ ಅಗಸನ ಬಳಿ ಬಹಳ ಮೈಲಿಗೆ ಆಗಿರುವ ವಸ್ತ್ರಗಳಿದ್ದರೆ ಎತ್ತಿ ಒಗೆಯುತ್ತಿದ್ದಂತೆಯೇ ಕೆಲವು ಬಟ್ಟೆಗಳು ಹರಿದು ಹೋಗುತ್ತವೆ. ಅದೇ ರೀತಿ ಇಲ್ಲಿಯೂ ಸಹ ಸಹನೆ ಮಾಡಲಾರದೆ ಹೊರಟು ಹೋಗುತ್ತಾರೆ. ಈಶ್ವರನ ಮಡಿಲಿಗೆ ಬಂದು ಅವರ ಆಜ್ಞೆಯನ್ನು ಉಲ್ಲಂಘನೆ ಮಾಡಿದರೆ ಶಿಕ್ಷೆ ಅನುಭವಿಸಬೇಕಾಗುವುದು. ಯಾವ ಮುಖ್ಯ ಬ್ರಾಹ್ಮಣಿಯು ಇಂತಹವರನ್ನು ಕರೆ ತರುವರೋ ಅವರ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ. ಒಂದುವೇಳೆ ಒಬ್ಬರು ತಂದೆಯ ಕೈ ಬಿಟ್ಟು ಹೋಗಿ ವಿಕಾರಿ ಆದರೆ ಅದರ ಪಾಪವು ಕರೆದುಕೊಂಡು ಬಂದಿರುವವರ ಮೇಲೆ ಆಗುವುದು. ಆದ್ದರಿಂದ ಅಂತಹವರನ್ನು ಇಂದ್ರ ಸಭೆಯಲ್ಲಿ ಕರೆ ತರಬಾರದು. ನೀಲಮಣಿ ಮುಂತಾದ ಪರಿಗಳ ಕಥೆಯಿದೆಯಲ್ಲವೇ. ಇಂದ್ರ ಸಭೆಯಲ್ಲಿ ಯಾರೋ ಬಚ್ಚಿಟ್ಟುಕೊಂಡು ಬಂದಾಗ ಅವರಿಂದ ದುರ್ಗಂಧ ಬರತೊಡಗಿತು ಆಗ ಅವರನ್ನು ಕರೆ ತಂದವರಿಗೆ ಶಿಕ್ಷೆ ಆಯಿತು. ಅವರು ಕಲ್ಲಾಗಿ ಬಿಟ್ಟರು ಎಂದು ಇಂತಹ ಕೆಲವು ಕಥೆಗಳಿವೆ. ತಂದೆಯು ಪಾರಸನಾಥರನ್ನಾಗಿ ಮಾಡುತ್ತಾರೆ. ಒಂದುವೇಳೆ ಅವರ ಉಲ್ಲಂಘನೆ ಮಾಡಿದರೆ ಕಲ್ಲಾಗಿ ಬಿಡುತ್ತಾರೆ. ರಾಜ್ಯಭಾಗ್ಯವನ್ನು ಪಡೆಯುವ ಸೌಭಾಗ್ಯವನ್ನೇ ಕಳೆದುಕೊಳ್ಳುತ್ತಾರೆ. ಉದಾಹರಣೆಗೆ ಯಾರಾದರೂ ಬಡವರು ರಾಜನ ಮಡಿಲನ್ನು (ದತ್ತು) ತೆಗೆದುಕೊಳ್ಳುತ್ತಾರೆ ನಂತರ ಅವರು ಅಯೋಗ್ಯರಾಗಿಯೇ ಉಳಿದುಕೊಂಡರೆ ಅವರನ್ನು ರಾಜನು ರಾಜ್ಯದಿಂದ ಹೊರ ಹಾಕುವನು, ಆಗ ಅವರ ಗತಿ ಏನಾಗುವುದು? ಕಂಗಾಲರಾಗಿ ಉಳಿದುಕೊಳ್ಳುತ್ತಾರೆ. ಇಲ್ಲಿಯೂ ಹಾಗೆಯೇ. ನಂತರ ಬಹಳ ದುಃಖವಾಗುವುದು, ಆದ್ದರಿಂದ ಎಂದೂ ಯಾವುದೇ ಉಲ್ಲಂಘನೆ ಮಾಡಬೇಡಿ ಎಂದು ತಂದೆಯು ಹೇಳುತ್ತಾರೆ. ತಂದೆಯು ಸಾಧಾರಣವಾಗಿದ್ದಾರೆ, ಆದ್ದರಿಂದ ಶಿವ ತಂದೆಯನ್ನು ಮರೆತು ಸಾಕಾರದ ಕಡೆ ಬುದ್ಧಿಯು ಹೋಗುತ್ತದೆ. ಈಗ ನೀವು ಮಕ್ಕಳಿಗೆ ಶ್ರೀಮತ ಸಿಗುತ್ತದೆ. ಯಾರು ಕೆಟ್ಟು ಹೋಗುವರೋ ಅವರು ಇಂದ್ರ ಸಭೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಂದು ಸೇವಾಕೇಂದ್ರವು ಇಂದ್ರ ಪ್ರಸ್ಥವಾಗಿದೆ, ಅಲ್ಲಿ ಜ್ಞಾನದ ಮಳೆಯಾಗುತ್ತದೆ. ನೀಲಮಣಿ ಮುಂತಾದ ಪರಿಗಳ ಹೆಸರಿದೆಯಲ್ಲವೇ. ನೀಲ ಎಂದು ರತ್ನಕ್ಕೆ ಹೇಳುತ್ತಾರೆ. ಈ ಕೆಲವು ಹೆಸರುಗಳನ್ನು ನೀವು ಮಕ್ಕಳಿಗೇ ಇಡಲಾಗುತ್ತದೆ. ನನ್ನ ಮಕ್ಕಳಲ್ಲಿ ಕೆಲವರು ಬಹಳ ಒಳ್ಳೆಯ ರತ್ನಗಳಿದ್ದಾರೆ. ಯಾವುದೇ ಲೋಪವಿಲ್ಲ. ವಜ್ರಗಳಲ್ಲಿ ಕೆಲವು ವಜ್ರಗಳು ಬಹಳ ಕಲೆಯುಳ್ಳದ್ದಾಗಿರುತ್ತದೆ. ಇನ್ನೂ ಕೆಲವು ಸ್ವಚ್ಛವಾಗಿರುತ್ತವೆ, ಹಾಗೆಯೇ ಇಲ್ಲಿಯು ನಂಬರ್ವಾರ್ ರತ್ನಗಳು ಇದ್ದೀರಿ. ಕೆಲವು ರತ್ನಗಳು ಬಹಳ ಅಮೂಲ್ಯವಾಗಿದ್ದಾರೆ, ಬಹಳ ಒಳ್ಳೆಯ ಸೇವೆ ಮಾಡುತ್ತಾರೆ. ಇನ್ನೂ ಕೆಲವರು ಸೇವೆಯ ಬದಲಾಗಿ ಸೇವಾಭಂಗ ಮಾಡುತ್ತಾರೆ. ಗುಲಾಬಿ ಹೂವು ಮತ್ತು ಎಕ್ಕದ ಹೂವಿನಲ್ಲಿ ಎಷ್ಟೊಂದು ಅಂತರವಿರುತ್ತದೆ. ಶಿವನಿಗೆ ಇವೆರಡನ್ನು ಅರ್ಪಿಸುತ್ತಾರೆ. ನಿಮ್ಮಲ್ಲಿ ಯಾರು-ಯಾರು ಹೂಗಳಾಗಿದ್ದೀರಿ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಹೂಗಳಾಗಿರುವವರನ್ನು ಎಲ್ಲರು ನಮ್ಮ ಬಳಿ ಬರಲಿ ಎಂದು ಇಚ್ಛಿಸುತ್ತಾರೆ. ಬಾಬಾ ನಮಗೆ ಒಳ್ಳೊಳ್ಳೆಯ ಹೂಗಳನ್ನು (ಸೇವಾಧಾರಿಗಳು) ಕಳುಹಿಸಿ ಎಂದು ಹೇಳುತ್ತಾರೆ ಆದರೆ ಒಳ್ಳೊಳ್ಳೆಯ ಹೂಗಳನ್ನೇ ಎಲ್ಲಿಂದ ತರುವುದು? ಇದು ಹೂದೋಟವಾಗಿದೆಯಲ್ಲವೇ. ನೀವು ಜ್ಞಾನ ಗಂಗೆಯರು ಆಗಿದ್ದೀರಿ, ತಂದೆಯು ಸಾಗರನಾಗಿದ್ದಾರೆ, ಇವರೇ (ಬ್ರಹ್ಮಾ) ಅತೀ ದೊಡ್ಡ ಬ್ರಹ್ಮ್ಪುತ್ರ ನದಿಯಾಗಿದ್ದಾರೆ. ಕಲ್ಕತ್ತಾದಲ್ಲಿ ಬ್ರಹ್ಮ್ಪುತ್ರ ನದಿಯು ಬಹಳ ದೊಡ್ಡದಾಗಿದೆ, ಅಲ್ಲಿ ಸಾಗರ ಮತ್ತು ನದಿಯ ಬಹಳ ದೊಡ್ಡ ಮೇಳವಾಗುತ್ತದೆ. ಜ್ಞಾನ ಸಾಗರನು ತಂದೆಯು ಆಗಿದ್ದಾರೆ. ಚೈತನ್ಯ ಜ್ಞಾನ ಸಾಗರರಾಗಿದ್ದಾರೆ. ನೀವೂ ಸಹ ಚೈತನ್ಯ ಜ್ಞಾನ ನದಿಗಳಾಗಿದ್ದೀರಿ. ಸ್ಥೂಲ ನದಿಗಳಂತೂ ನೀರಿನ ಗಂಗೆಯಾಗಿದೆ. ವಾಸ್ತವದಲ್ಲಿ ನದಿಗಳಿಗೆ ಹೆಸರನ್ನು ಇಟ್ಟಿರುವ ಕಾರಣ ಆಸುರಿ ಸಂಪ್ರದಾಯದವರು ಇದನ್ನು ಮರೆತು ಹೋಗಿದ್ದಾರೆ. ಹರಿದ್ವಾರದಲ್ಲಿ ಗಂಗಾ ನದಿ ತೀರದಲ್ಲಿ ಚತುರ್ಭುಜನ ಚಿತ್ರವನ್ನು ತೋರಿಸುತ್ತಾರೆ, ಅದನ್ನೂ ಗಂಗೆ ಎಂದು ಹೇಳುತ್ತಾರೆ. ಈ ಚತುರ್ಭುಜ ಯಾರು ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಅವಶ್ಯವಾಗಿ ಈ ಸಮಯದಲ್ಲಿ ನೀವು ಸ್ವದರ್ಶನ ಚಕ್ರಧಾರಿಗಳಾಗುತ್ತೀರಿ. ನೀವು ಸತ್ಯವಾದ ಜ್ಞಾನ ನದಿಗಳಾಗಿದ್ದೀರಿ, ಅವು ನೀರಿನ ನದಿಗಳಾಗಿವೆ. ಅಲ್ಲಿ ಹೋಗಿ ಜನರು ಸ್ನಾನ ಮಾಡುತ್ತಾರೆ. ಏನನ್ನೂ ತಿಳಿದುಕೊಂಡಿಲ್ಲ. ಗಂಗಾ ದೇವಿ ಎಂದು ಹೇಳುತ್ತಾರೆ. ಮನುಷ್ಯರಿಗೆ ಎಂದೂ 4-8 ಭುಜಗಳು ಇರುವುದಿಲ್ಲ ಆದರೆ ಮನುಷ್ಯರಿಗೆ ಇದರ ಅರ್ಥವೇನೂ ಗೊತ್ತಿಲ್ಲ. ತಂದೆಯು ನಮ್ಮನ್ನು ಎಷ್ಟು ಬುದ್ಧಿವಂತರನ್ನಾಗಿ ಮಾಡುತ್ತಾರೆ, ನಾವಂತೂ 100% ಬುದ್ಧಿಹೀನರಾಗಿದ್ದೆವು, ಬಾಬಾರವರ ಮಡಿಲನ್ನು ಪಡೆದುಕೊಂಡು ನಾವು ಸ್ವರ್ಗದ ಮಾಲೀಕರಾಗುತ್ತೇವೆ, ಭಲೆ ಇಲ್ಲಿ ಯಾರಾದರೂ ರಾಜರೇ ಆಗಿರಲಿ ಆದರೆ ಇಲ್ಲಿನ ಸುಖ ಮತ್ತು ಸ್ವರ್ಗದ ಸುಖದಲ್ಲಿ ರಾತ್ರಿ-ಹಗಲಿನ ಅಂತರವಿದೆ. ನಿಮ್ಮಲಿಯೂ ಕೆಲವರು ತಂದೆಯನ್ನೂ ತಿಳಿದುಕೊಂಡಿಲ್ಲ, ತನ್ನನ್ನೂ ತಿಳಿದುಕೊಂಡಿಲ್ಲ. ಸ್ವಯಂನ್ನು ನೋಡಿಕೊಳ್ಳಿರಿ – ನಾನು ಎಷ್ಟು ಸುಗಂಧವನ್ನು ಬೀರುತ್ತೇನೆ? ಉಲ್ಟಾ-ಸುಲ್ಟಾ ಮಾತನಾಡುವುದಿಲ್ಲವೇ, ಕ್ರೋಧ ಮಾಡುವುದಿಲ್ಲವೇ? ಇವರು ಎಂತಹವರು ಎಂಬುದನ್ನು ತಂದೆಯು ಚಲನೆಯಿಂದಲೇ ತಿಳಿದುಕೊಳ್ಳುತ್ತಾರೆ. ಸೇವಾಧಾರಿ ಮಕ್ಕಳು ತಂದೆಗೆ ಬಹಳ ಪ್ರಿಯರು. ಎಲ್ಲರು ಒಂದೇ ರೀತಿ ಪ್ರಿಯರಾಗುವುದಿಲ್ಲ. ಪ್ರಿಯ ಮಕ್ಕಳ ಪ್ರತಿ ತಂದೆಯ ಆಶೀರ್ವಾದಗಳು ಸಿಗುತ್ತವೆ. ತಂದೆಯ ಆಜ್ಞೆಯನ್ನು ಉಲ್ಲಂಘನೆ ಮಾಡುವ ಮಕ್ಕಳ ಪ್ರತಿ ತಂದೆಯು ಇದೇ ಮಾತನ್ನು ಹೇಳುತ್ತಾರೆ – ಇಂತಹ ಮಕ್ಕಳು ಇರುವುದಕ್ಕಿಂತ ಸಾಯುವುದು ಲೇಸು. ತಂದೆಯ ಹೆಸರನ್ನು ಎಷ್ಟೊಂದು ಕೆಡಿಸುತ್ತಾರೆ, ಇದನ್ನೇ ದುರಾದೃಷ್ಟ ಎಂದು ಹೇಳುತ್ತಾರೆ. ಯಾರ ಅದೃಷ್ಟದಲ್ಲಿ ಏನಿದೆ ಎಂಬುದು ಕೂಡಲೇ ಅರ್ಥವಾಗುತ್ತದೆ. ತಂದೆಯು ತಿಳಿಸುತ್ತಾರೆ – ಇವರು ಸುಪುತ್ರರು, ಇವರು ಕುಪುತ್ರರು ಎಂದು. ಬಾಪ್ದಾದಾರವರನ್ನು ಅರಿತುಕೊಳ್ಳದೆ ಆಸ್ತಿ ತೆಗೆದುಕೊಳ್ಳದೆ ಇದ್ದರೆ ತಂದೆ ಏನು ಮಾಡುವರು? ಈ ಜ್ಞಾನ ಮಾರ್ಗದಲ್ಲಿ ಕಾಯಿದೆಯೇ ಬಹಳ ಕಠಿಣವಾಗಿದೆ. ತಂದೆಯು ಪವಿತ್ರರಾಗಿ ಮಕ್ಕಳು ಪವಿತ್ರರಾಗದಿದ್ದರೆ ಅಂತಹ ಮಗನು ಹಕ್ಕುಧಾರನಾಗುವುದಿಲ್ಲ. ಅವರನ್ನು ಮಗನೆಂದು ತಿಳಿಯುವುದಿಲ್ಲ. ಅಂತಹ ಸಮಯದಲ್ಲಿ ನಾವು ಶಿವ ತಂದೆಯನ್ನು ವಾರಸುಧಾರನನ್ನಾಗಿ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಾರೆ ಏಕೆಂದರೆ ತಂದೆಯು ನಮಗೆ 21 ಜನ್ಮಗಳಿಗಾಗಿ ರಿಟರ್ನ್ ಕೊಡುತ್ತಾರೆ. ಎಲ್ಲರು ತಂದೆಯ ಬಳಿ ಬಂದು ಇದ್ದು ಬಿಡಬೇಕು ಎಂದು ಇದರ ಅರ್ಥವಲ್ಲ. ಗೃಹಸ್ಥ ವ್ಯವಹಾರದಲ್ಲಿ ಇದ್ದು ಎಲ್ಲವನ್ನು ಸಂಭಾಲನೆ ಮಾಡಬೇಕು ಆದರೆ ಟ್ರಸ್ಟಿ ಆಗಿರಬೇಕು. ನಿಮ್ಮ ಮಕ್ಕಳು ಮೊದಲಾದವರನ್ನು ತಂದೆಯು ಕುಳಿತು ಸಂಭಾಲನೆ ಮಾಡುತ್ತಾರೆ ಎಂದಲ್ಲ. ಇಂತಹ ವಿಚಾರವನ್ನು ಇಟ್ಟುಕೊಳ್ಳುವವರು ಅಲೆದಾಟಕ್ಕೆ ಒಳಗಾಗುತ್ತಾರೆ. ತಂದೆಯ ಬಳಿಯಂತೂ ಸಂಪೂರ್ಣ ಪವಿತ್ರರು ಬೇಕಾಗಿದೆ. ಅಪವಿತ್ರರು ಕುಳಿತುಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಇಲ್ಲವೆಂದರೆ ಕಲ್ಲು ಬುದ್ಧಿಯವರಾಗಿ ಬಿಡುತ್ತಾರೆ. ತಂದೆಯು ಶಾಪವನ್ನೇನೂ ಕೊಡುವುದಿಲ್ಲ. ಇದೊಂದು ನಿಯಮವಾಗಿದೆ ಆದ್ದರಿಂದ ತಂದೆಯು ಹೇಳುತ್ತಾರೆ – ಮಕ್ಕಳೇ ಎಚ್ಚರಿಕೆಯಿಂದಿರಿ, ಕರ್ಮೇಂದ್ರಿಯಗಳಿಂದ ಪಾಪ ಮಾಡಿದರೆ ಅವರು ಸತ್ತಂತೆ. ಇದು ಬಹಳ ದೊಡ್ಡ ಗುರಿಯಾಗಿದೆ. ತಂದೆಯ ಮಕ್ಕಳಾದ ನಂತರ ಕೆಲವೊಮ್ಮೆ ರೋಗವು ಹೆಚ್ಚಾಗಬಹುದು, ಹೆದರಬೇಡಿ. ಇಂತಹ ಔಷಧಿಯಿಂದ ನಿಮ್ಮ ಕಾಯಿಲೆ ಎಲ್ಲವು ಹೊರ ಬರುವುದು, ಹೆದರಬೇಡಿ ಎಂದು ವೈದ್ಯರೂ ಸಹ ಹೇಳುತ್ತಾರೆ. ಇಲ್ಲಿ ತಂದೆಯು ಹೇಳುತ್ತಾರೆ – ನೀವು ನನ್ನ ಮಕ್ಕಳಾದ ಮೇಲೆ ಮಾಯಾ ರಾವಣನು ನಿಮ್ಮನ್ನು ಬಹಳ ಹೆದರಿಸುವನು, ಬಿರುಗಾಳಿ ತರುವನು. ಹೆದರಬೇಡಿ. ಈಗ ನಿಮಗೆ ಸರಿ ಮತ್ತು ತಪ್ಪು ನಿರ್ಣಯ ಮಾಡುವ ಬುದ್ಧಿ ಸಿಕ್ಕಿದೆ. ಮತ್ತ್ಯಾರಿಗೂ ಈ ಬುದ್ಧಿ ಇಲ್ಲ. ಎಲ್ಲರದೂ ವಿನಾಶ ಕಾಲದಲ್ಲಿ ವಿಪರೀತ ಬುದ್ಧಿಯಾಗಿದೆ. ನಿಮ್ಮಲ್ಲಿಯೂ ಪ್ರೀತಿ ಬುದ್ಧಿಯವರು ನಂಬರ್ವಾರ್ ಪುರುಷಾರ್ಥದನುಸಾರ ಇದ್ದಾರೆ. ಪ್ರೀತಿ ಬುದ್ಧಿಯವರು ತಂದೆಯ ಸೇವೆಯನ್ನು ಬಹಳ ಚೆನ್ನಾಗಿ ಮಾಡುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಈಶ್ವರನ ಮಗುವಾದನಂತರ ಅವರ ಆಜ್ಞೆಯ ಉಲ್ಲಂಘನೆ ಮಾಡಬಾರದು. ಈ ಕರ್ಮೇಂದ್ರಿಯಗಳಿಂದ ಯಾವುದೇ ಕೆಟ್ಟ ಕರ್ಮ ಮಾಡಬಾರದು. ಉಲ್ಟಾ-ಸುಲ್ಟಾ ಮಾತನಾಡಬಾರದು. ಸುಪುತ್ರರಾಗಿ ತಂದೆಯ ಆಶೀರ್ವಾದಗಳನ್ನು ಪಡೆಯಬೇಕಾಗಿದೆ.

2. ಟ್ರಸ್ಟಿಯಾಗಿ ತಮ್ಮ ಗೃಹಸ್ಥ ವ್ಯವಹಾರವನ್ನು ಸಂಭಾಲನೆ ಮಾಡಬೇಕಾಗಿದೆ. ಜ್ಞಾನ ಮಾರ್ಗದ ಕಾಯಿದೆಗಳ ಅನುಸಾರ ಪೂರ್ಣ ರೀತಿಯಿಂದ ನಡೆಯಬೇಕಾಗಿದೆ. ಸರಿ ಮತ್ತು ತಪ್ಪನ್ನು ತಿಳಿದುಕೊಂಡು ಮಾಯೆಯಿಂದ ಎಚ್ಚರವಾಗಿರಬೇಕಾಗಿದೆ.

ವರದಾನ:-

ಇದು ಸದಾ ಸ್ಮೃತಿಯಲ್ಲಿರಲಿ – ನಾನು ಪ್ರತೀ ಸಮಯ, ಪ್ರತೀ ಸೆಕೆಂಡ್, ಪ್ರತೀ ಕರ್ಮವನ್ನು ಮಾಡುತ್ತಿದ್ದರೂ ವೇದಿಕೆಯಲ್ಲಿ ಇದ್ದೇನೆ, ಇದರಿಂದ ಪ್ರತಿಯೊಂದು ಕರ್ಮದ ಮೇಲೆ ಗಮನವಿರುವುದರಿಂದ ಸಂಪೂರ್ಣ ಸ್ಥಿತಿಯು ಸಮೀಪದಲ್ಲಿ ಬಂದು ಬಿಡುತ್ತದೆ. ಜೊತೆ ಜೊತೆಗೆ ವರ್ತಮಾನ ಮತು ಭವಿಷ್ಯದ ಸ್ಥಿತಿಯ ಸ್ಮೃತಿ ಇರುವುದರಿಂದ ಪ್ರತಿಯೊಂದು ಕರ್ಮವು ಶ್ರೇಷ್ಠವಾಗುತ್ತದೆ. ಇವೆರಡೂ ಸ್ಮೃತಿಗಳು ತಂದೆಯ ಸಮಾನರನ್ನಾಗಿ ಮಾಡಿ ಬಿಡುತ್ತದೆ. ಸಮಾನತೆಯಲ್ಲಿ ಬರುವುದರಿಂದ ಒಬ್ಬರಿನ್ನೊಬ್ಬರ ಮನಸ್ಸಿನ ಸಂಕಲ್ಪಗಳನ್ನು ಸಹಜವಾಗಿಯೇ ತಿಳಿದುಕೊಂಡು ಬಿಡುತ್ತಾರೆ. ಇದಕ್ಕಾಗಿ ಕೇವಲ ಸಂಕಲ್ಪಗಳ ಮೇಲೆ ನಿಯಂತ್ರಣ ಶಕ್ತಿಯಿರಲಿ. ತಮ್ಮ ಸಂಕಲ್ಪಗಳ ಸೇರ್ಪಡೆಯು ಇರಬಾರದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top