30 January 2022 KANNADA Murli Today | Brahma Kumaris

Read and Listen today’s Gyan Murli in Kannada

January 29, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಇಡೀ ಜ್ಞಾನದ ಸಾರ – ಸ್ಮೃತಿ

♫ ಕೇಳು ಇಂದಿನ ಮುರ್ಲಿ (audio)➤

ಇಂದು ಸಮರ್ಥ ತಂದೆ ತನ್ನ ನಾಲ್ಕಾರು ಕಡೆಯ ಸರ್ವ ಸಮರ್ಥ ಮಕ್ಕಳನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬ ಸಮರ್ಥ ಮಗು ತನ್ನ ಸಾಮರ್ಥ್ಯದ ಪ್ರಮಾಣ ಮುಂದುವರೆಯುತ್ತಿದ್ದಾರೆ. ಈ ಸಮರ್ಥ ಜೀವನ ಅರ್ಥಾತ್ ಸುಖಮಯ ಶ್ರೇಷ್ಠ ಸಫಲತಾ ಸಂಪನ್ನ ಅಲೌಕಿಕ ಜೀವನದ ಆಧಾರವೇನಾಗಿದೆ? ಇದಕ್ಕೆ ಆಧಾರವಾಗಿದೆ ಒಂದು ಶಬ್ಧ – `ಸ್ಮೃತಿ’. ವಾಸ್ತವದಲ್ಲಿ ಇಡೀ ಡ್ರಾಮಾದ ಆಟವೇ ಸ್ಮೃತಿ ಮತ್ತು ವಿಸ್ಮೃತಿಯದಾಗಿದೆ. ಈ ಸಮಯದಲ್ಲಿ ಸ್ಮೃತಿಯ ಆಟವು ನಡೆಯುತ್ತಿದೆ, ಬಾಪ್ದಾದಾ ತಾವೆಲ್ಲಾ ಆತ್ಮರನ್ನು ಯಾವ ಆಧಾರದ ಮೇಲೆ ಪರಿವರ್ತನೆ ಮಾಡಿದರು? ಕೇವಲ ಸ್ಮೃತಿ ತರಿಸಿದರು – ತಾವು ಆತ್ಮನಾಗಿದ್ದೀರಿ, ಶರೀರವಲ್ಲ. ಈ ಸ್ಮೃತಿಯು ಎಷ್ಟೊಂದು ಅಲೌಕಿಕ ಪರಿವರ್ತನೆ ಮಾಡಿ ಬಿಟ್ಟಿತು. ಎಲ್ಲವೂ ಬದಲಾಯಿತಲ್ಲವೆ! ಮಾನವ ಜೀವನದ ವಿಶೇಷತೆಯೇ ಸ್ಮೃತಿಯಾಗಿದೆ, ಸ್ಮೃತಿಯು ಬೀಜವಾಗಿದೆ. ಯಾವ ಬೀಜದಿಂದ ವೃತ್ತಿ, ದೃಷ್ಟಿ, ಕೃತಿ, ಇಡೀ ಸ್ಥಿತಿಯೇ ಬದಲಾಗಿ ಬಿಡುತ್ತದೆ. ಆದ್ದರಿಂದಲೇ ಎಂತಹ ಸ್ಮೃತಿಯೋ ಅಂತಹ ಸ್ಥಿತಿಯೆಂದು ಗಾಯನವಿದೆ. ತಂದೆಯು ಮೊದಲ ತಳಪಾಯವಾಗಿ ಸ್ಮೃತಿಯನ್ನು ಪರಿವರ್ತನೆ ಮಾಡಿದರು. ಯಾವಾಗ ತಳಹದಿಯು ಶ್ರೇಷ್ಠವಾಯಿತೆಂದರೆ ಸ್ವತಹವಾಗಿ ಇಡೀ ಜೀವನವೇ ಶ್ರೇಷ್ಠವಾಯಿತು. ಎಷ್ಟು ಚಿಕ್ಕ ಮಾತಿನ ಪರಿವರ್ತನೆ ಮಾಡಿದರು – ನೀವು ಶರೀರವಲ್ಲ, ಆತ್ಮರಾಗಿದ್ದೀರಿ, ಈ ಪರಿವರ್ತನೆ ಆಗುತ್ತಿದ್ದಂತೆಯೇ ಆತ್ಮವು ಮಾ|| ಸರ್ವಶಕ್ತಿವಂತನಾಗಿರುವ ಕಾರಣ ಸ್ಮೃತಿ ಬರುತ್ತಿದ್ದಂತೆಯೇ ಸಮರ್ಥನಾಗಿ ಬಿಟ್ಟಿತು. ಈಗ ಈ ಸಮರ್ಥ ಜೀವನವು ಎಷ್ಟು ಪ್ರಿಯವೆನಿಸುತ್ತದೆ! ಸ್ವಯಂ ಸ್ಮೃತಿ ಸ್ವರೂಪರಾದಿರಿ ಮತ್ತು ಅನ್ಯರಿಗೂ ಸಹ ಇದೇ ಸ್ಮೃತಿಯನ್ನು ತರಿಸಿ ಹೇಗಿದ್ದವರನ್ನು ಹೇಗೆ ಮಾಡಿ ಬಿಡುತ್ತೀರಿ! ಈ ಸ್ಮೃತಿಯಿಂದ ಸಂಸಾರವೇ ಬದಲಾಯಿತು. ಈ ಈಶ್ವರೀಯ ಸಂಸಾರವು ಎಷ್ಟು ಪ್ರಿಯವಾಗಿದೆ! ಭಲೆ ಸೇವಾರ್ಥವಾಗಿ ಸಂಸಾರಿ ಆತ್ಮಗಳ ಜೊತೆ ಇರುತ್ತೀರಿ ಆದರೆ ಮನಸ್ಸು ಸದಾ ಅಲೌಕಿಕ ಸಂಸಾರದಲ್ಲಿರುತ್ತದೆ. ಅಂತಹವರಿಗೆ ಸ್ಮೃತಿ ಸ್ವರೂಪರೆಂದು ಹೇಳಲಾಗುತ್ತದೆ. ಯಾವುದೇ ಪರಿಸ್ಥಿತಿಯು ಬರಲಿ ಆದರೆ ಸ್ಮೃತಿ ಸ್ವರೂಪ ಆತ್ಮನು ಸಮರ್ಥನಾಗಿರುವ ಕಾರಣ ಪರಿಸ್ಥಿತಿಯನ್ನು ಏನೆಂದು ತಿಳಿದುಕೊಳ್ಳುತ್ತಾರೆ? ಇದು ಆಟವಾಗಿದೆ ಎಂದು ತಿಳಿದುಕೊಳ್ಳುತ್ತಾರೆ. ಎಂದೂ ಗಾಬರಿ ಆಗುವುದಿಲ್ಲ. ಭಲೆ ಎಷ್ಟೇ ದೊಡ್ಡ ಪರಿಸ್ಥಿತಿಯಾಗಿರಲಿ ಆದರೆ ಸಮರ್ಥ ಆತ್ಮನಿಗಾಗಿ ಗುರಿಯನ್ನು ತಲುಪಲು ಇವೆಲ್ಲವೂ ಮಾರ್ಗದ ಬದಿ ದೃಶ್ಯಗಳಾಗಿವೆ. ಸೈಡ್ಸೀನ್ ನೋಡಲು ಇಷ್ಟವಾಗುತ್ತದೆ ಅಲ್ಲವೆ. ಖರ್ಚು ಮಾಡಿಯಾದರೂ ನೋಡಲು ಹೋಗುತ್ತಾರೆ. ಇಲ್ಲಿಯೂ ಸಹ ಇತ್ತೀಚೆಗೆ ಅಬು ದರ್ಶನ ಮಾಡಲು ಹೋಗುತ್ತೀರಲ್ಲವೆ. ಒಂದುವೇಳೆ ಮಾರ್ಗದಲ್ಲಿ ಬದಿ ದೃಶ್ಯಗಳಿಲ್ಲವೆಂದರೆ ಆ ಮಾರ್ಗವು ಚೆನ್ನಾಗಿರುತ್ತದೆಯೇ? ಬೋರ್ ಆಗಿ ಬಿಡುತ್ತದೆ. ಹಾಗೆಯೇ ಸ್ಮೃತಿ ಸ್ವರೂಪ ಸಮರ್ಥ ಸ್ವರೂಪ ಆತ್ಮರಿಗೆ ಪರಿಸ್ಥಿತಿ ಎಂದಾದರೂ ಹೇಳಿ, ಪರೀಕ್ಷೆ-ವಿಘ್ನ ಎಂದಾದರೂ ಹೇಳಿ, ಸಮಸ್ಯೆಗಳೆಂದಾದರೂ ಹೇಳಿ ಎಲ್ಲವೂ ಬದಿ ದೃಶ್ಯಗಳಾಗಿವೆ ಏಕೆಂದರೆ ಸ್ಮೃತಿಯಲ್ಲಿದೆ – ಗುರಿಯನ್ನು ತಲುಪಲು ಇಂತಹ ಬದಿ ದೃಶ್ಯಗಳನ್ನು ಅನೇಕ ಬಾರಿ ಪಾರು ಮಾಡಿದ್ದೇವೆ. ಹೊಸದೇನಲ್ಲ ಎಂಬುದರ ತಳಹದಿಯೂ ಏನಾಯಿತು? ಸ್ಮೃತಿ. ಒಂದುವೇಳೆ ಈ ಸ್ಮೃತಿಯು ಮರೆತು ಹೋದರೆ ಅರ್ಥಾತ್ ತಳಪಾಯವು ಅಲುಗಾಡಿದರೆ ಜೀವನದ ಇಡೀ ಕಟ್ಟಡವೇ ಅಲುಗಾಡತೊಡಗುತ್ತದೆ. ತಾವಂತೂ ಅಚಲರಾಗಿದ್ದೀರಲ್ಲವೆ! ಇಡೀ ವಿದ್ಯೆಯ ನಾಲ್ಕೂ ಸಬ್ಜೆಕ್ಟ್ಗಳ ಆಧಾರವೂ ಸಹ ಸ್ಮೃತಿಯಾಗಿದೆ. ಎಲ್ಲದಕ್ಕಿಂತ ಮುಖ್ಯವಾದ ಸಬ್ಜೆಕ್ಟ್ ನೆನಪಾಗಿದೆ. ನೆನಪು ಅರ್ಥಾತ್ ಸ್ಮೃತಿ – ನಾನು ಯಾರು? ತಂದೆ ಯಾರು? ಎರಡನೇ ಸಬ್ಜೆಕ್ಟ್ ಜ್ಞಾನವಾಗಿದೆ – ರಚಯಿತ ಮತ್ತು ರಚನೆಯ ಜ್ಞಾನವು ಸಿಕ್ಕಿತು. ಅದಕ್ಕೂ ತಳಹದಿಯನ್ನು ಸ್ಮೃತಿಗೆ ತರಿಸಿದೆವು – ಅನಾದಿಯಲ್ಲಿ ಏನಾಗಿದ್ದಿರಿ ಮತ್ತು ಆದಿಯಲ್ಲಿ ಏನಾಗಿದ್ದಿರಿ ಮತ್ತು ವರ್ತಮಾನ ಸಮಯದಲ್ಲಿ ಏನಾಗಿದ್ದೀರಿ – ಬ್ರಾಹ್ಮಣ ಸೋ ಫರಿಶ್ತಾ, ಫರಿಶ್ತಾ ಸೋ ದೇವತಾ. ಇನ್ನೂ ಎಷ್ಟೊಂದು ಸ್ಮೃತಿಗಳನ್ನು ತರಿಸಿದ್ದೇವೆ ಅಂದಮೇಲೆ ಜ್ಞಾನದ ಸ್ಮೃತಿ ಆಯಿತಲ್ಲವೆ. ಮೂರನೇ ಸಬ್ಜೆಕ್ಟ್ ಆಗಿದೆ – ದಿವ್ಯ ಗುಣಗಳು. ತಾವು ಬ್ರಾಹ್ಮಣರದು ಈ ಗುಣಗಳೆಂದೂ ದಿವ್ಯ ಗುಣಗಳ ಸ್ಮೃತಿಯನ್ನು ತರಿಸಿದೆವು. ಗುಣಗಳ ಪಟ್ಟಿಯೂ ಸ್ಮೃತಿಯಲ್ಲಿರುತ್ತದೆ ಆದ್ದರಿಂದ ಸಮಯ ಪ್ರಮಾಣ ಆ ಗುಣವನ್ನು ಕಾರ್ಯದಲ್ಲಿ, ಕರ್ಮದಲ್ಲಿ ತೊಡಗಿಸುತ್ತೀರಿ. ಯಾವುದೇ ಸಮಯದಲ್ಲಿ ಸ್ಮೃತಿಯು ಕಡಿಮೆಯಾದರೆ ಫಲಿತಾಂಶವೇನಾಗುತ್ತದೆ? ಸಮಯದಲ್ಲಿ ಆ ಗುಣವನ್ನು ಉಪಯೋಗಿಸಲು ಸಾಧ್ಯವಾಗುವುದಿಲ್ಲ. ಸಮಯವು ಕಳೆದು ಹೋದ ನಂತರ ಸ್ಮೃತಿಗೆ ಬರುತ್ತದೆ – ಇದನ್ನು ಮಾಡಬಾರದಾಗಿತ್ತು ಆದರೆ ಆಗಿ ಹೋಯಿತು. ಮುಂದೆ ಈ ರೀತಿ ಮಾಡುವುದಿಲ್ಲ ಅಂದಮೇಲೆ ದಿವ್ಯ ಗುಣಗಳನ್ನು ಕರ್ಮದಲ್ಲಿ ತರಬೇಕಾದರೂ ಸಹ ಸಮಯದಲ್ಲಿ ಸ್ಮೃತಿ ಬೇಕು. ಈಗೀಗ ಈ ರೀತಿ ತನ್ನ ಬಗ್ಗೆಯೂ ನಗು ಬರುತ್ತದೆ. ಯಾವುದೇ ಮಾತು ಅಥವಾ ಯಾವುದೇ ವಸ್ತು ಸಮಯದಲ್ಲಿ ಮರೆತು ಹೋಗುತ್ತದೆ ಎಂದರೆ ಆ ಸಮಯದಲ್ಲಿ ಪರಿಸ್ಥಿತಿ ಏನಾಗುತ್ತದೆ? ವಸ್ತು ಇರುತ್ತದೆ ಆದರೆ ಸಮಯದಲ್ಲಿ ನೆನಪಿಗೆ ಬರುವುದಿಲ್ಲ ಆಗ ಗಾಬರಿ ಆಗುತ್ತೀರಲ್ಲವೆ. ಹಾಗೆಯೇ ಇದೂ ಸಹ ಸಮಯದಲ್ಲಿ ಸ್ಮೃತಿ ಇಲ್ಲದಿರುವ ಕಾರಣ ಕೆಲಕೆಲವೊಮ್ಮೆ ಗಾಬರಿಯಾಗುತ್ತೀರಿ ಅಂದಮೇಲೆ ದಿವ್ಯ ಗುಣಗಳ ಆಧಾರವೇನಾಯಿತು? ಸದಾ ಸ್ಮೃತಿ ಸ್ವರೂಪ. ನಿರಂತರ ಮತ್ತು ನ್ಯಾಚುರಲ್ ದಿವ್ಯ ಗುಣಗಳು ಸಹಜವಾಗಿ ಪ್ರತೀ ಕರ್ಮದಲ್ಲಿ, ಕಾರ್ಯದಲ್ಲಿ ತೊಡಗುತ್ತಾ ಇರುವುದು. ನಾಲ್ಕನೇ ಸಬ್ಜೆಕ್ಟ್ ಆಗಿದೆ – ಸೇವೆ. ಇದರಲ್ಲಿಯೂ ಒಂದುವೇಳೆ ನಾನು ವಿಶ್ವ ಕಲ್ಯಾಣಕಾರಿ ಆತ್ಮ ನಿಮಿತ್ತನಾಗಿದ್ದೇನೆ ಎಂದು ಒಂದುವೇಳೆ ಸ್ಮೃತಿ ಸ್ವರೂಪರು ಆಗಲಿಲ್ಲವೆಂದರೆ ಸೇವೆಯಲ್ಲಿ ಸಫಲತೆಯನ್ನು ಪಡೆಯಲು ಸಾಧ್ಯವಿಲ್ಲ. ಸೇವೆಯ ಮೂಲಕ ಯಾವುದೇ ಆತ್ಮನನ್ನು ಸ್ಮೃತಿ ಸ್ವರೂಪರನ್ನಾಗಿ ಮಾಡಲು ಸಾಧ್ಯವಿಲ್ಲ. ಜೊತೆ ಜೊತೆಗೆ ಸ್ವಯಂನ ಮತ್ತು ತಂದೆಯ ಸ್ಮೃತಿ ತರಿಸುವುದೇ ಸೇವೆಯಾಗಿದೆ.

ಅಂದಾಗ ನಾಲ್ಕೂ ಸಬ್ಜೆಕ್ತ್ ಗಳ ತಳಪಾಯವು ಸ್ಮೃತಿಯಾಯಿತಲ್ಲವೆ. ಇಡೀ ಜ್ಞಾನದ ಸಾರದ ಒಂದು ಶಬ್ಧವಾಯಿತು – ಸ್ಮೃತಿ. ಆದ್ದರಿಂದ ಬಾಪ್ದಾದಾ ಮೊದಲೇ ತಿಳಿಸಿದ್ದೇವೆ – ಅಂತಿಮ ಪರೀಕ್ಷೆಯ ಪ್ರಶ್ನೆಯೂ ಸಹ ಏನು ಬರುವುದು? ಬಹಳ ಉದ್ದಗಲವಾದ ಪ್ರಶ್ನೆಯಿರುವುದಿಲ್ಲ. ಒಂದೇ ಪ್ರಶ್ನೆಯ ಪರೀಕ್ಷೆಯಿರುವುದು ಮತ್ತು ಒಂದೇ ಸೆಕೆಂಡಿನ ಪರೀಕ್ಷೆಯಿರುವುದು. ಯಾವ ಪ್ರಶ್ನೆಯಿರುವುದು? ನಷ್ಟಮೋಹ ಸ್ಮೃತಿ ಸ್ವರೂಪ. ಪ್ರಶ್ನೆಯನ್ನೂ ಸಹ ಮೊದಲೇ ಕೇಳಿಸಿಕೊಂಡಿದ್ದೀರಿ ಅಂದಮೇಲೆ ಎಲ್ಲರೂ ತೇರ್ಗಡೆಯಾಗಬೇಕು. ಎಲ್ಲರೂ ನಂಬರ್ವನ್ ಉತ್ತೀರ್ಣರಾಗುವಿರೊ ಅಥವಾ ನಂಬರ್ವಾರ್ ಆಗುವಿರೋ?

ಡಬಲ್ ವಿದೇಶಿಯರು ಯಾವ ನಂಬರಿನಲ್ಲಿ ತೇರ್ಗಡೆಯಾಗುತ್ತೀರಿ? (ನಂಬರ್ವನ್). ಅಂದಮೇಲೆ ಮಾಲೆಯನ್ನು ಸಮಾಪ್ತಿ ಮಾಡುವುದೇ? ಅಥವಾ ಪ್ರತ್ಯೇಕ ಮಾಲೆಯನ್ನು ತಯಾರು ಮಾಡುವುದೇ? ಉಮ್ಮಂಗವು ಬಹಳ ಚೆನ್ನಾಗಿದೆ. ಡಬಲ್ ವಿದೇಶಿಯರಿಗೆ ಲಾಸ್ಟ್ ಸೋ ಫಾಸ್ಟ್ ಹೋಗುವ ವಿಶೇಷ ಅವಕಾಶವಿದೆ. ಒಂದುವೇಳೆ ಮಾಲೆಯನ್ನು ಪ್ರತ್ಯೇಕವಾಗಿ ತಯಾರು ಮಾಡಿದರೆ ಯಾವ ಪಿಕ್ನಿಕ್ ಸ್ಥಾನಗಳಾಗುವುದೋ ಅಲ್ಲಿ ಹೋಗಬೇಕಾಗುವುದು. ಇದು ಇಷ್ಟವಾಗುವುದಾದರೆ ಬೇರೆ ಮಾಲೆಯನ್ನು ಮಾಡುವುದೇ? ತಮ್ಮೆಲ್ಲರಿಗೆ ಮಾಲೆಯಲ್ಲಿ ಬರುವ ಅವಕಾಶವನ್ನು ಇಡಲಾಗಿದೆ, ಬಂದು ಬಿಡುತ್ತೀರಿ. ಒಳ್ಳೆಯದು.

ಎಲ್ಲಾ ಶಿಕ್ಷಕಿ ಸಹೋದರಿಯರು ಸ್ಮೃತಿ ಸ್ವರೂಪರಾಗಿದ್ದೀರಲ್ಲವೆ. ನಾಲ್ಕೂ ಸಬ್ಜೆಕ್ಟ್ಗಳಲ್ಲಿ ಸ್ಮೃತಿ ಸ್ವರೂಪರು. ಪರಿಶ್ರಮದ ಕೆಲಸವಂತೂ ಇಲ್ಲ ಅಲ್ಲವೆ! ಟೀಚರ್ಸ್ನ ಅರ್ಥವೇ ಆಗಿದೆ – ತನ್ನ ಸ್ಮೃತಿ ಸ್ವರೂಪ ಲಕ್ಷಣಗಳಿಂದ ಅನ್ಯರನ್ನೂ ಸ್ಮೃತಿ ಸ್ವರೂಪರನ್ನಾಗಿ ಮಾಡುವುದು. ತಮ್ಮ ಚಹರೆಯೇ ಅನ್ಯರಿಗೆ ಸ್ಮೃತಿ ತರಿಸಲಿ – ನಾನಾತ್ಮನಾಗಿದ್ದೇನೆ, ಮಸ್ತಕದಲ್ಲಿ ಹೊಳೆಯುತ್ತಿರುವ ಆತ್ಮ ಅಥವಾ ಮಣಿಯನ್ನೇ ನೋಡಲಿ. ಹೇಗೆ ಸರ್ಪದ ಮಣಿಯನ್ನು ನೋಡಿ ಸರ್ಪದ ಕಡೆ ಯಾರದೇ ಗಮನ ಹೋಗುವುದಿಲ್ಲ, ಮಣಿಯ ಕಡೆ ಹೋಗುತ್ತದೆ ಹಾಗೆಯೇ ಅವಿನಾಶಿ ಹೊಳೆಯುತ್ತಿರುವ ಮಣಿಯನ್ನು ನೋಡಿ ದೇಹಭಾನವು ಸ್ಮೃತಿಯಲ್ಲಿ ಬರಬಾರದು. ಗಮನವೆಲ್ಲವೂ ಸ್ವತಹವಾಗಿ ಆತ್ಮದ ಕಡೆ ಹೋಗಲಿ. ಟೀಚರ್ಸ್ ಇದೇ ಸೇವೆಗೆ ನಿಮಿತ್ತರಾಗಿದ್ದೀರಿ. ವಿಸ್ಮೃತಿಯಾದವರಿಗೆ ಸ್ಮೃತಿ ತರಿಸುವುದೇ ಸೇವೆಯಾಗಿದೆ. ಸಮರ್ಥರಂತೂ ಆಗಿದ್ದೀರಿ ಅಥವಾ ಕೆಲಕೆಲವೊಮ್ಮೆ ಗಾಬರಿಯಾಗುತ್ತೀರಾ? ಒಂದುವೇಳೆ ಶಿಕ್ಷಕಿಯರು ಗಾಬರಿಯಾಗಿಬಿಟ್ಟರೆ ವಿದ್ಯಾರ್ಥಿಗಳೇನಾಗುವರು? ಟೀಚರ್ಸ್ ಅರ್ಥಾತ್ ಸದಾ ನ್ಯಾಚುರಲ್, ನಿರಂತರ ಸ್ಮೃತಿ ಸ್ವರೂಪರು ಸೋ ಸಮರ್ಥ ಸ್ವರೂಪರು. ಹೇಗೆ ಬ್ರಹ್ಮಾ ತಂದೆಯು ಎಲ್ಲರಿಗಿಂತ ಮುಂದೆ ಇದ್ದರು ಹಾಗೆಯೇ ಶಿಕ್ಷಕಿಯರೂ ಮುಂದೆ ಇದ್ದೀರಲ್ಲವೆ. ನಿಮಿತ್ತರೆಂದರೆ ಮುಂದೆ ಇರುವವರು. ಹೇಗೆ ಸೇವೆಯ ಪ್ರತಿ ಸಮರ್ಪಣೆ ಆಗುವುದರಲ್ಲಿ ಸಾಹಸವನ್ನು ಇಟ್ಟಿರಿ, ಸಮರ್ಥರಾದಿರಿ ಅಂದಾಗ ಈ ಸ್ಮೃತಿ ಏನಾಗಿದೆ, ಇದಂತೂ ತ್ಯಾಗದ ಭಾಗ್ಯವಾಗಿದೆ. ತ್ಯಾಗ ಮಾಡಿದಿರಿ, ಈಗ ಭಾಗ್ಯದ್ದೇನು ದೊಡ್ಡ ಮಾತು? ತ್ಯಾಗ ಮಾಡಿದಿರಿ ಆದರೆ ತ್ಯಾಗವು ತ್ಯಾಗವಲ್ಲ ಏಕೆಂದರೆ ಪ್ರಾಪ್ತಿಯು ಬಹಳಷ್ಟಿದೆ. ತ್ಯಾಗವನ್ನೇನು ಮಾಡಿದಿರಿ ಕೇವಲ ಬಿಳಿಯ ಸೀರೆಯನ್ನು ಧರಿಸಿದಿರಿ. ಇದರಿಂದ ಇನ್ನೂ ಬ್ಯುಟಿಫುಲ್ (ಸುಂದರ) ಆಗಿ ಬಿಟ್ಟಿದ್ದೀರಿ, ಫರಿಶ್ತೆಗಳು, ಪರಿಗಳಾಗಿ ಬಿಟ್ಟಿದ್ದೀರಿ, ಮತ್ತೇನು ಬೇಕು! ಬಾಕಿ ಆಹಾರ-ಪಾನೀಯಗಳನ್ನು ಬಿಟ್ಟಿರಿ…. ಅದಂತೂ ಈಗಿನ ವೈದ್ಯರೂ ಸಹ ಹೇಳುತ್ತಾರೆ. ಹೆಚ್ಚಿನದಾಗಿ ತಿನ್ನಬೇಡಿ, ಕಡಿಮೆ ತಿನ್ನಿರಿ, ಸಾತ್ವಿಕ ಸಾಧಾರಣ ಭೋಜನವನ್ನು ತಿನ್ನಿರಿ. ಇತ್ತೀಚೆಗಂತೂ ವೈದ್ಯರೂ ಸಹ ತಿನ್ನಲು ಬಿಡುವುದಿಲ್ಲ ಅಂದಮೇಲೆ ಏನನ್ನು ಬಿಟ್ಟಿರಿ? ಆಭರಣ ಧರಿಸುವುದನ್ನು ಬಿಟ್ಟಿರಿ…. ಈಗಿನ ಕಾಲದಲ್ಲಂತೂ ಆಭರಣಗಳಿಗೆ ಕಳ್ಳರು ಹಿಂದೆ ಬರುತ್ತಾರೆ. ಅದನ್ನು ಬಿಟ್ಟು ಒಳ್ಳೆಯದನ್ನೇ ಮಾಡಿದಿರಿ, ಬುದ್ಧಿವಂತಿಕೆಯ ಕೆಲಸವೇ ಮಾಡಿದಿರಿ ಆದ್ದರಿಂದ ತ್ಯಾಗದ ಪದುಮದಷ್ಟು ಭಾಗ್ಯವು ಸಿಕ್ಕಿ ಬಿಟ್ಟಿತು. ಒಳ್ಳೆಯದು.

ಈಗೀಗ ಬಾಪ್ದಾದಾರವರು ಅಥೆನ್ಸ್ನವರು ನೆನಪಿಗೆ ಬರುತ್ತಿದ್ದಾರೆ. (ಅಥೆನ್ಸ್ನಲ್ಲಿ ಬಹಳ ದೊಡ್ಡ ಕಾರ್ಯಕ್ರಮವು ನಡೆಯುತ್ತಿದೆ) ಅವರೂ ಸಹ ಬಹಳ ನೆನಪು ಮಾಡಿಕೊಳ್ಳುತ್ತಿದ್ದಾರೆ. ಯಾವುದೇ ವಿಶಾಲ ಕಾರ್ಯವಾಗುತ್ತದೆ ಎಂದರೆ ಬೇಹದ್ದಿನ ಕಾರ್ಯದಲ್ಲಿ ಬೇಹದ್ದಿನ ತಂದೆ ಮತ್ತು ಬೇಹದ್ದಿನ ಪರಿವಾರವು ಅವಶ್ಯವಾಗಿ ನೆನಪಿಗೆ ಬರುತ್ತದೆ. ಯಾರೆಲ್ಲಾ ಮಕ್ಕಳು ಹೋಗಿದ್ದಾರೆಯೋ ಎಲ್ಲರೂ ಸಾಹಸವಂತ ಮಕ್ಕಳಾಗಿದ್ದಾರೆ. ಯಾರು ನಿಮಿತ್ತರಾಗಿದ್ದಾರೆಯೋ ಅವರ ಸಾಹಸವು ಕಾರ್ಯವನ್ನು ಶ್ರೇಷ್ಠ ಮತ್ತು ಅಚಲವನ್ನಾಗಿ ಮಾಡಿ ಬಿಡುತ್ತದೆ. ತಂದೆಯ ಸ್ನೇಹ ಮತ್ತು ವಿಶೇಷ ಆತ್ಮರ ಶುಭಕಾಮನೆ-ಶುಭಭಾವನೆಯು ಮಕ್ಕಳ ಜೊತೆಯಿದೆ. ಬುದ್ಧಿವಂತರಿಗೂ ಬುದ್ಧಿವಂತನಾದ ತಂದೆಯು ಯಾರ ಮೂಲಕವಾದರೂ ನಿಮಿತ್ತರನ್ನಾಗಿ ಮಾಡಿ ತನ್ನ ಕಾರ್ಯವನ್ನು ಮಾಡಿಸಿಕೊಳ್ಳುತ್ತಾರೆ ಆದ್ದರಿಂದ ನಿಶ್ಚಿಂತ ಚಕ್ರವರ್ತಿಗಳಾಗಿ, ಲೈಟ್ಹೌಸ್ ಮೈಟ್ಹೌಸ್ ಆಗಿ, ಶುಭ ಭಾವನೆ-ಶುಭ ಕಾಮನೆಯ ವೈಬ್ರೇಷನ್ ಹರಡುತ್ತಾ ಇರಿ. ಪ್ರತಿಯೊಬ್ಬ ಸೇವಾಧಾರಿ ಮಗುವಿಗೆ ಬಾಪ್ದಾದಾರವರು ಹೆಸರು ಮತ್ತು ವಿಶೇಷತೆಯ ಸಹಿತವಾಗಿ ನೆನಪು-ಪ್ರೀತಿಯನ್ನು ಕೊಡುತ್ತಿದ್ದೇವೆ. ಒಳ್ಳೆಯದು.

ಸದಾ ನಿರಂತರ ಸ್ಮೃತಿ ಸ್ವರೂಪ ಸಮರ್ಥ ಆತ್ಮರಿಗೆ, ಸದಾ ಸ್ಮೃತಿ ಸ್ವರೂಪರಾಗಿ ಪ್ರತಿಯೊಂದು ಪರಿಸ್ಥಿತಿಯನ್ನು ಸೈಡ್ಸೀನ್ ಅನುಭವ ಮಾಡುವಂತಹ ವಿಶೇಷ ಆತ್ಮರಿಗೆ, ಸದಾ ತಂದೆಯ ಸಮಾನ ನಾಲ್ಕಾರು ಕಡೆ ಸ್ಮೃತಿಯ ಅಲೆಯನ್ನು ಹರಡಿಸುವಂತಹ ಮಹಾವೀರ ಮಕ್ಕಳಿಗೆ, ಸದಾ ತೀವ್ರ ಗತಿಯಿಂದ ಪಾಸ್-ವಿತ್-ಆನರ್ ಆಗುವಂತಹ ಮಹಾರಥಿ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ದೆಹಲಿ ಜೋನ್ನವರೊಂದಿಗೆ ಅವ್ಯಕ್ತ ಬಾಪ್ದಾದಾರವರ ವಾರ್ತಾಲಾಪ:

ಸದಾ ತಮ್ಮ ಭಾಗ್ಯವನ್ನು ನೋಡುತ್ತಾ ಹರ್ಷಿತವಾಗುತ್ತೀರಾ! ಸದಾ `ವಾಹ್-ವಾಹ್’ ಹಾಡನ್ನಾಡುತ್ತೀರಾ? ಅಯ್ಯೊ-ಅಯ್ಯೊ ಎಂಬ ಹಾಡು ಸಮಾಪ್ತಿಯಾಯಿತೆ ಅಥವಾ ಕೆಲವೊಮ್ಮೆ ದುಃಖದ ಅಲೆಗಳು ಬರುತ್ತವೆಯೇ? ದುಃಖದ ಪ್ರಪಂಚದಿಂದ ದೂರವಾಗಿದ್ದೀರಿ ಮತ್ತು ತಂದೆಯ ಪ್ರಿಯರಾಗಿದ್ದೀರಿ. ಆದ್ದರಿಂದ ದುಃಖದ ಅಲೆಗಳು ತಮ್ಮ ಸ್ಪರ್ಷಿಸುವುದಕ್ಕೂ ಸಾಧ್ಯವಿಲ್ಲ. ಭಲೆ ಸೇವಾರ್ಥವಾಗಿ ಇರುತ್ತೀರಿ ಆದರೆ ಕಮಲ ಸಮಾನರಾಗಿರುತ್ತೀರಿ .ಕಮಲ ಪುಷ್ಪವು ಕೆಸರಿನಿಂದ ಹೊರ ಬರುವುದಿಲ್ಲ, ಅದರಲ್ಲಿಯೇ ಇರುತ್ತದೆ ಆದರೆ ಭಿನ್ನವಾಗಿರುತ್ತದೆ. ಈ ರೀತಿ ಭಿನ್ನವಾಗಿದ್ದೀರಾ? ಭಿನ್ನವಾಗಿರುವುದರ ಚಿಹ್ನೆಯಾಗಿದೆ – ಎಷ್ಟು ಭಿನ್ನವೋ ಅಷ್ಟು ತಂದೆಯ ಪ್ರಿಯರಾಗುವಿದಿ, ಸ್ವತಹವಾಗಿಯೇ ತಂದೆಯ ಪ್ರೀತಿಯ ಅನುಭವವಾಗುವುದು ಮತ್ತು ಪರಮಾತ್ಮನ ಈ ಪ್ರೀತಿಯು ಛತ್ರಛಾಯೆಯಾಗುವುದು. ಯಾರ ಮೇಲೆ ಛತ್ರಛಾಯೆಯಿರುತ್ತದೆಯೋ ಅವರೆಷ್ಟು ಸುರಕ್ಷಿತವಾಗಿರುತ್ತಾರೆ! ಯಾರ ಮೇಲೆ ಪರಮಾತ್ಮನ ಛತ್ರಛಾಯೆಯಿದೆ, ಅವರನ್ನ್ಯಾರು ಏನು ಮಾಡಲು ಸಾಧ್ಯ! ಆದ್ದರಿಂದ ನಶೆಯಲ್ಲಿರಿ – ನಾವು ಪರಮಾತ್ಮನ ಛತ್ರಛಾಯೆಯಲ್ಲಿರುವವರು, ಇದು ಅಭಿಮಾನವಲ್ಲ ಆದರೆ ಆತ್ಮಿಕ ನಶೆಯಾಗಿದೆ. ದೇಹಾಭಿಮಾನವಿದ್ದರೆ ಅಭಿಮಾನ ಬರುತ್ತದೆ, ಆತ್ಮಾಭಿಮಾನಿಯಾಗಿದ್ದರೆ ಅಭಿಮಾನ ಬರುವುದಿಲ್ಲ. ಆದರೆ ಆತ್ಮಿಕ ನಶೆಯಿರುತ್ತದೆ ಮತ್ತು ಎಲ್ಲಿ ನಶೆಯಿರುವುದೋ ಅಲ್ಲಿ ವಿಘ್ನವುಂಟಾಗಲು ಸಾಧ್ಯವಿಲ್ಲ. ಎಲ್ಲಿಯೇ ಆದರೂ ಚಿಂತೆಯಿರುತ್ತದೆ ಅಥವಾ ನಶೆಯಿರುತ್ತದೆ, ಎರಡೂ ಒಟ್ಟಿಗೆ ಇರುವುದಿಲ್ಲ. ಬಹಳ ಚೆನ್ನಾಗಿರುವ ರೊಟ್ಟಿ ಪಲ್ಯವನ್ನು ಕೊಡುವುದಕ್ಕಾಗಿ ಬಾಪ್ದಾದಾರವರು ಬಂಧಿತನಾಗಿದ್ದಾರೆ. ಪ್ರತಿನಿತ್ಯವೂ 36 ಪ್ರಕಾರದ ಭೋಜನವನ್ನು ಕೊಡುವುದಿಲ್ಲ ಆದರೆ ಅವಶ್ಯವಾಗಿ ರೊಟ್ಟಿ ಪಲ್ಯವಂತು ಸಿಗುತ್ತದೆ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ, ನೊಂದಣಿಯಿದೆ ಅಂದಮೇಲೆ ಯಾವ ಮಾತಿಗಾಗಿ ಚಿಂತೆ ಮಾಡುವುದು! ಪ್ರಪಂಚದಲ್ಲಿ ಇರುವವರಿಗಂತು ಈ ಚಿಂತೆಯಿರುತ್ತದೆ – ನಾವೂ ಅನುಭವಿಸಬೇಕು, ನಮ್ಮ ನಂತರದವರೂ ಅನುಭವಿಸಲಿ. ಅಂದಮೇಲೆ ತಾವೂ ಸಹ ಹಸಿವಿನಿಂದ ಇರುವುದಿಲ್ಲ, ನಂತರ ಬರುವವರೂ ಹಸಿವಿನಿಂದ ಇರುವುದಿಲ್ಲ. ಇನ್ನೇನು ಬೇಕು? ಡನ್ಲಪ್ ಹಾಸಿಗೆ ಬೇಕಾ! ಒಂದುವೇಳೆ ಡನ್ಲಪ್ ಹಾಸಿಗೆಯಲ್ಲಿ ಚಿಂತೆಯ ನಿದ್ರೆಯಿದ್ದರೆ ನಿದ್ರೆ ಬರುವುದೇ? ನಿಶ್ಚಿಂತರಾಗಿದ್ದರೆ ನೆಲದ ಮೇಲೆ ಮಲಗಿದರೂ ನಿದ್ರೆ ಬರುತ್ತದೆ. ಭುಜವನ್ನು ತಮ್ಮ ದಿಂಬನ್ನಾಗಿ ಮಾಡಿಕೊಂಡರೂ ನಿದ್ರೆ ಬರುತ್ತದೆ. ಎಲ್ಲಿ ಪ್ರೀತಿಯಿದೆಯೋ ಅಲ್ಲಿನ ಒಣರೊಟ್ಟಿಯೂ 36 ಪ್ರಕಾರದ ಭೋಜನವೆನಿಸುತ್ತದೆ ಆದ್ದರಿಂದ ನಿಶ್ಚಿಂತ ಚಕ್ರವರ್ತಿ ಆಗಿದ್ದೀರಿ. ನಿಶ್ಚಿಂತವಾಗಿರುವ ಈ ರಾಜ್ಯಭಾಗ್ಯದಲ್ಲಿ ಎಲ್ಲರೂ ರಾಜರಿಗಿಂತಲೂ ಶ್ರೇಷ್ಠರು. ಒಂದುವೇಳೆ ಕಿರೀಟ ಧರಿಸಿ ಸಿಂಹಾಸನದಲ್ಲಿ ಕುಳಿತುಕೊಳ್ಳುತ್ತೀರಿ, ಮತ್ತೆ ಚಿಂತೆ ಮಾಡುತ್ತಾ ಇರುತ್ತೀರೆಂದರೆ ಅದು ಸಿಂಹಾಸನವಾಯಿತೇ ಅಥವಾ ಚಿಂತೆಯಾಯಿತೆ? ಅಂದಮೇಲೆ ಭಾಗ್ಯ ವಿದಾತಾ ಭಗವಂತನು ತಮ್ಮ ಮಸ್ತಕದಲ್ಲಿ ಶ್ರೇಷ್ಠ ಭಾಗ್ಯದ ರೇಖೆಯನ್ನು ಎಳೆದಿದ್ದಾರೆ. ನಿಶ್ಚಿಂತ ಚಕ್ರವರ್ತಿಗಳು ಆಗಿದ್ದೀರಾ! ಆ ಟೋಪಿ ಅಥವಾ ಕುರ್ಚಿಯಲ್ಲಿರುವ ಚಕ್ರವರ್ತಿಯಲ್ಲ, ನಿಶ್ಚಿಂತ ಚಕ್ರವರ್ತಿಗಳು. ಯಾವುದಾದರೂ ಚಿಂತೆಯಿದೆಯೇ? ಮಕ್ಕಳು-ಮೊಮ್ಮಕ್ಕಳ ಚಿಂತೆಯಿದೆಯೇ? ತಮ್ಮ ಕಲ್ಯಾಣವಾಗಿದೆಯೆಂದರೆ, ಅವರುಗಳ ಕಲ್ಯಾಣವೂ ಆಗುವುದು. ಹಾಗಾದರೆ ಸದಾ ತಮ್ಮ ಮಸ್ತಕದಲ್ಲಿರುವ ಶ್ರೇಷ್ಠ ಭಾಗ್ಯದ ರೇಖೆಯನ್ನು ನೋಡುತ್ತಿರಿ – ವಾಹ್ ನನ್ನ ಶ್ರೇಷ್ಠ ಈಶ್ವರೀಯ ಭಾಗ್ಯವೇ! ಹಣ-ಆಸ್ತಿಯ ಭಾಗ್ಯವಲ್ಲ, ಈಶ್ವರೀಯ ಭಾಗ್ಯ. ಈ ಭಾಗ್ಯದ ಮುಂದೆ ಆ ಹಣವೇನೂ ಬೆಲೆಯಿಲ್ಲ, ಅದಂತು ತಮ್ಮ ಹಿಂದಿಂದೆ ಬರುತ್ತದೆ. ಹೇಗೆ ನೆರಳು ತಮ್ಮ ಹಿಂದಿಂದೆ ಬರುತ್ತದೆಯೋ ಅಥವಾ ತಾವು ಹಿಂದೆ ಬಾ ಎಂದು ಹೇಳುತ್ತೀರಾ! ಅದೇರೀತಿ ಇದೆಲ್ಲವೂ ನೆರಳಿನಂತೆ ಆದರೆ ಇದು ಈಶ್ವರೀಯ ಭಾಗ್ಯವಾಗಿದೆ. ಸದಾ ಇದೇ ನಶೆಯಲ್ಲಿರಿ – ಒಂದುವೇಳೆ ಪಡೆಯಬೇಕೆಂದರೆ ಸದಾಕಾಲದ್ದನ್ನು ಪಡೆಯಬೇಕು. ಯಾವಾಗ ತಂದೆ ಮತ್ತು ಆತ್ಮನು ಅವಿನಾಶಿ ಅಂದಮೇಲೆ ಪ್ರಾಪ್ತಿಯೇಕೆ ವಿನಾಶಿ? ಪ್ರಾಪ್ತಿಯೂ ಅವಿನಾಶಿಯಾಗಿರುವುದೇ ಇರಬೇಕು.

ಬ್ರಾಹ್ಮಣ ಜೀವನವಿರುವುದೇ ಖುಷಿಯಲ್ಲಿ, ಖುಷಿಯಿಂದ ತಿನ್ನುವುದು, ಖುಷಿಯಿಂದ ಇರುವುದು, ಖುಷಿಯಿಂದ ಮಾತನಾಡಿರಿ, ಖುಷಿಯಿಂದ ಕೆಲಸ ಮಾಡಿರಿ. ಏಳುತ್ತಿದ್ದಂತೆಯೇ ಕಣ್ಣು ತೆರೆಯಿತು ಮತ್ತು ಖುಷಿಯ ಅನುಭವವಾಯಿತು. ರಾತ್ರಿ ಕಣ್ಣು ಮುಚ್ಚಿತು, ಖುಷಿಯಿಂದ ವಿಶ್ರಾಂತಿಯಲ್ಲಿ ಹೋದಿರಿ – ಇದೇ ಬ್ರಾಹ್ಮಣ ಜೀವನವಾಗಿದೆ. ಒಳ್ಳೆಯದು!

ಬಾಪ್ದಾದಾರೊಂದಿಗೆ ವ್ಯಕ್ತಿಗತ ವಾರ್ತಾಲಾಪ – ಆಜ್ಞಾಕಾರಿ ಆಗುವುದರಿಂದ ಪರಿವಾರದ ಆಶೀರ್ವಾದಗಳು:

(ಬಾಪ್ದಾದಾರವರ ಮುಂದೆ ಗಾಯತ್ರಿ ಮೋದಿಯ ಪರಿವಾರವು ಕುಳಿತುಕೊಂಡಿದ್ದಾರೆ)

ಬಾಪ್ದಾದಾರವರು ಈ ಪರಿವಾರದಲ್ಲಿನ ಒಂದು ಮಾತನ್ನು ನೋಡಿ ಬಹಳ ಖುಷಿಯಿದೆ. ಅದು ಯಾವುದು? ಆಜ್ಞಾಕಾರಿ ಪರಿವಾರವಾಗಿದೆ. ಇಷ್ಟು ದೂರದಿಂದ ತಲುಪಿದ್ದೀರಲ್ಲವೆ! ಈ ಆಶೀರ್ವಾದಗಳೂ ಸಿಗುತ್ತದೆ.ಯಾರು ಆಜ್ಞೆಯನ್ನು ಪಾಲಿಸುತ್ತಾರೆಯೋ ಅವರಿಗೆ ಆಶೀರ್ವಾದಗಳು ಸಿಗುತ್ತವೆ. ಭಲೆ ಯಾರೊಬ್ಬರು ಹೇಳಿದರು, ಇನ್ನೊಬ್ಬರು ಒಪ್ಪಿದರೆಂದರೆ ಖುಷಿಯಾಗುತ್ತದೆ. ಹೃದಯದಿಂದ ಒಬ್ಬರಿನ್ನೊಬ್ಬರ ಪ್ರತಿ ಆಶೀರ್ವಾದಗಳು ಬರುತ್ತವೆ. ಯಾರೇ ಒಳ್ಳೆಯ ಮಿತ್ರ ಅಥವಾ ಸಹೋದರನಿದ್ದರೆ ಹೇಳುತ್ತಾರೆ – ಇವರು ಬಹಳ ಒಳ್ಳೆಯವರು, ಇದು ಆಶೀರ್ವಾದವಾಯಿತಲ್ಲವೆ! ಯಾರಿಗೇ `ಹಾಂ ಜಿ’ ಮಾಡುವುದು ಅಥವಾ ಆಜ್ಞೆಯನ್ನು ಪಾಲಿಸುವುದರಿಂದ ಗುಪ್ತ ಆಶೀರ್ವಾದವು ಸಿಗುತ್ತದೆ. ಆ ಆಶೀರ್ವಾದಗಳು ಸಮಯದಲ್ಲಿ ಬಹಳ ಸಹಯೋಗ ಕೊಡುತ್ತದೆ. ಆ ಸಮಯದಲ್ಲಿ ಗೊತ್ತಾಗುವುದಿಲ್ಲ, ಆ ಸಮಯದಲ್ಲಂತು ಭಲೆ ಆಗಿ ಬಿಟ್ಟಿತೆಂದು ಸಾಧಾರಣ ಮಾತೆನಿಸುತ್ತದೆ. ಆದರೆ ಈ ಗುಪ್ತವಾದ ಆಶೀರ್ವಾದಗಳು ಆತ್ಮನಿಗೆ ಸಮಯದಲ್ಲಿ ಸಹಯೋಗ ಕೊಡುತ್ತದೆ. ಇದು ಜಮಾ ಆಗಿ ಬಿಡುತ್ತದೆ ಆದ್ದರಿಂದ ಬಾಪ್ದಾದಾರವರು ನೋಡಿ ಖುಷಿಯಾಗುತ್ತದೆ. ಭಲೆ ಯಾವುದೇ ಕಾರ್ಯಕ್ಕಾದರೂ ಬಂದಿರಬಹುದು, ಬಂದಿದ್ದೀರಲ್ಲವೆ ಮತ್ತು ಇದನ್ನೂ ನೆನಪಿಟ್ಟುಕೊಳ್ಳಿರಿ – ಪರಮಾತ್ಮನ ಸ್ಥಾನದಲ್ಲಿ ಯಾವುದೇ ಕಾರಣದಿಂದ, ಭಲೆ ನೋಡುವ ಕಾರಣದಿಂದ ಬಂದಿರಬಹುದು ಅಥವಾ ತಿಳಿದುಕೊಳ್ಳುವ ಕಾರಣದಿಂದ ಬಂದಿರಬಹುದು ಆದರೆ ಹೆಜ್ಜೆಯನ್ನಿಟ್ಟಿದೀರಿ. ಅದರ ಫಲವೂ ಜಮಾ ಆಗಿ ಬಿಡುತ್ತದೆ. ಇದೂ ಸಹ ಕಡಿಮೆ ಭಾಗ್ಯವಲ್ಲ, ಈ ಭಾಗ್ಯವೂ ಸಹ ಮುಂದೆ ನಡೆದಂತೆ ಅನುಭವ ಮಾಡುವಿರಿ. ಆ ಸಮಯದಲ್ಲಿ ತಮ್ಮನ್ನು ಬಹಳ ಭಾಗ್ಯಶಾಲಿ ಎಂದು ತಿಳಿಯುತ್ತೀರಿ. ಯಾವ ಕಾರಣದಿಂದ ನಾವು ಕಾಲನ್ನಿಟ್ಟಿದ್ದೇವೆ ಎನ್ನುವುದು ಈಗ ಗೊತ್ತಾಗುವುದಿಲ್ಲ. ಗೊತ್ತಿಲ್ಲ ಇದೇನು ಎಂದು ಈಗ ಯೋಚಿಸುತ್ತೀರಿ ಆದರೆ ತಂದೆಗೆ ಗೊತ್ತಿದೆ – ತಿಳಿದೊ ತಿಳಿಯದೆಯೋ ಭಾಗ್ಯವು ಜಮಾ ಆಗಿ ಬಿಟ್ಟಿತು. ಅದು ಸಮಯದಲ್ಲಿ ತಮಗೂ ಗೊತ್ತಾಗುತ್ತದೆ ಮತ್ತು ಕೆಲಸಕ್ಕೆ ಉಪಯೋಗವಾಗುವುದು. ಒಳ್ಳೆಯದು!

(ರಷ್ಯಾದ ಸಹೋದರ-ಸಹೋದರಿಯರ ನೆನಪುಗಳನ್ನು ಚಕ್ರಧಾರಿ ಅಕ್ಕನವರು ಕೊಟ್ಟರು)

ಒಳ್ಳೆಯದು, ಸ್ವಲ್ಪ ಸಮಯದಲ್ಲಿ ಬಹಳ ಒಳ್ಳೆಯ ಸಫಲತೆ ಆಗಿದೆ ಮತ್ತು ಒಳ್ಳೊಳ್ಳೆಯ ಬಾಯಾರಿರುವ ಆತ್ಮರು ಬಂದಿದ್ದಾರೆ. ಅವರ ಸ್ನೇಹವು ತಂದೆಯ ಬಳಿ ತಲುಪಿಬಿಟ್ಟಿದೆ. ಎಲ್ಲರಿಗೂ ನೆನಪು-ಪ್ರೀತಿಯನ್ನು ಬರೆಯಿರಿ ಮತ್ತು ಹೇಳಿರಿ – ಬಾಪ್ದಾದಾರವರ ಸ್ನೇಹವು ಎಲ್ಲಾ ಮಕ್ಕಳಿಗೂ ಸಹಯೋಗವನ್ನು ಕೊಡುತ್ತಾ ಮುಂದುವರೆಸುತ್ತಿದೆ. ಒಳ್ಳೆಯ ಸೇವೆಯಾಗಿದೆ, ವೃದ್ಧಿ ಮಾಡುತ್ತಾ ಸಾಗಿರಿ.

ವರದಾನ:-

ಪುರುಷಾರ್ಥ ಯಥಾರ್ಥ ವಿಧಿಯಾಗಿದೆ – ಅನೇಕ ನನ್ನದನ್ನು ಪರಿವರ್ತನೆಗೊಳಿಸಿ ಒಂದು “ನನ್ನ ಬಾಬಾ” ಈ ಸ್ಮೃತಿಯಲ್ಲಿರುವುದು, ಮತ್ತೆಲ್ಲವನ್ನೂ ಮರೆತು ಬಿಡುವುದು. ಆದರೆ ನನ್ನ ಬಾಬಾ ಎಂಬ ಮಾತನ್ನೆಂದಿಗೂ ಮರೆಯಬಾರದು. ನನ್ನದನ್ನು ನೆನಪು ಮಾಡಬೇಕಾಗುವುದಿಲ್ಲ, ನೆನಪು ಸ್ವತಹವಾಗಿಯೇ ಬರುತ್ತದೆ. “ನನ್ನ ಬಾಬಾ” ಎಂದು ಹೃದಯದಿಂದ ಹೇಳುತ್ತೀರೆಂದರೆ ಯೋಗವು ಶಕ್ತಿಶಾಲಿ ಆಗಿ ಬಿಡುತ್ತದೆ. ಹಾಗಾದರೆ ಸದಾ ಈ ಸಹಜ ವಿಧಿಯಿಂದ ಮುಂದುವರೆಯುತ್ತಾ ಸಿದ್ಧಿ ಸ್ವರೂಪರಾಗಿರಿ.

ಸ್ಲೋಗನ್:-

ಲವಲೀನ ಸ್ಥಿತಿಯ ಅನುಭವ ಮಾಡಿರಿ:

ಕರ್ಮದಲ್ಲಿ, ವಾಣಿಯಲ್ಲಿ, ಸಂಪರ್ಕ ಅಥವಾ ಸಂಬಂಧದಲ್ಲಿ ಲವ್ ಮತ್ತು ಸ್ಮೃತಿ ಹಾಗೂ ಸ್ಥಿತಿಯಲ್ಲಿ ಲವಲೀನರಾಗಿರಬೇಕು. ಯಾರೆಷ್ಟು ಲವಲಿ ಆಗಿರುತ್ತಾರೆ ಅವರಷ್ಟೇ ಲವಲೀನರಾಗಿರಲು ಸಾಧ್ಯ. ತಾವು ಮಕ್ಕಳೀಗ ತಂದೆಯ ಪ್ರೀತಿಯಲ್ಲಿ ಲವಲೀನರಾಗಿದ್ದು ಅನ್ಯರಿಗೂ ಸಹಜವಾಗಿ ತಮ್ಮ ಸಮಾನ ಅಥವಾ ತಂದೆಯ ಸಮಾನರನ್ನಾಗಿ ಮಾಡಿ ಬಿಡುತ್ತೀರಿ.

Daily Murli in Kannada

Email me Murli: Receive Daily Murli on your email. Subscribe!

1 thought on “30 January 2022 KANNADA Murli Today | Brahma Kumaris”

  1. 👌🇲🇰 BEAUTIFUL AWESOME POWERFUL ENERGY GOD BAAPDADA THANK MUCH OM SHANTI…..🌹🌹🌹🌹🌹🌹🌹🌹🌹🌹🌹🌹🌹🌹🌹💛🕊️🕊️🕊️

Leave a Comment

Your email address will not be published. Required fields are marked *

Scroll to Top