30 August 2021 KANNADA Murli Today | Brahma Kumaris

Read and Listen today’s Gyan Murli in Kannada

August 29, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

"ಮಧುರ ಮಕ್ಕಳೇ - ನೀವೀಗ ಆತ್ಮಿಕ ವ್ಯವಹಾರವನ್ನು ಮಾಡಬೇಕಿದೆ, ಪ್ರತಿಯೊಂದು ಕರ್ಮವನ್ನೂ ಆತ್ಮನೆಂದು ತಿಳಿದು ಮಾಡುವುದರಿಂದ ಆತ್ಮವು ನಿರ್ವಿಕಾರಿ ಆಗುತ್ತದೆ"

ಪ್ರಶ್ನೆ:: -

ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುವ ಮತ್ತು ಸ್ವರ್ಗದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುವ ಆಧಾರವೇನಾಗಿದೆ?

ಉತ್ತರ:-

ಬ್ರಹ್ಮಾಕುಮಾರ/ಕುಮಾರಿ ಆಗುವಿರೆಂದರೆ ಸ್ವರ್ಗದ ಆಸ್ತಿಯು ಸಿಕ್ಕಿ ಬಿಡುವುದು. ಆದರೆ ಶ್ರೇಷ್ಠ ಪದವಿಗೆ ಆಧಾರವಾಗಿದೆ – ವಿದ್ಯಾಭ್ಯಾಸ. ಒಂದುವೇಳೆ ತಂದೆಯ ಮಗುವಾಗಿ ಒಳ್ಳೆಯ ರೀತಿ ವಿದ್ಯಾಭ್ಯಾಸ ಮಾಡುತ್ತೀರಿ, ಸಂಪೂರ್ಣ ಪವಿತ್ರರಾಗಿ ಇರುತ್ತೀರೆಂದರೆ ರಾಜನ ಪದವಿಯು ಸಿಗುತ್ತದೆ. ಕೆಲವರು ಸಂಪೂರ್ಣ ಓದುವುದೇ ಇಲ್ಲ, ಕರ್ಮ ಬಂಧನವಿರುತ್ತದೆ, ಸಂಪೂರ್ಣ ಪವಿತ್ರರಾಗುವುದಿಲ್ಲ ಮತ್ತು ಶರೀರ ಬಿಡುತ್ತಾರೆಂದರೆ, ಪ್ರಜೆಗಳಲ್ಲಿಯೂ ಸಾಧಾರಣ ಪದವಿಯನ್ನು ಪಡೆದುಕೊಳ್ಳುವರು.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯು ತಿಳಿಸುತ್ತಿದ್ದಾರೆ. ಇಲ್ಲಿ ಆತ್ಮಿಕ ವ್ಯವಹಾರವಿದೆ. ಉಳಿದಂತೆ ಇಡೀ ಜಗತ್ತಿನಲ್ಲಿ ಭೌತಿಕ ವ್ಯವಹಾರವಿದೆ. ವಾಸ್ತವದಲ್ಲಿ ವ್ಯವಹಾರವು ಆತ್ಮಗಳಲ್ಲಿ ನಡೆಯುತ್ತದೆ. ಆತ್ಮವೇ ಈ ಶರೀರದ ಮೂಲಕ ವಿದ್ಯಾಭ್ಯಾಸ ಮಾಡುತ್ತದೆ, ನಡೆಯುತ್ತದೆ, ವಿಕರ್ಮವನ್ನು ಮಾಡುತ್ತದೆ. ಆದ್ದರಿಂದ ಪತಿತ-ಆತ್ಮ, ಪಾಪ-ಆತ್ಮ ಎಂದು ಹೇಳಲಾಗುತ್ತದೆ. ಆತ್ಮವೇ ಎಲ್ಲವನ್ನೂ ಮಾಡುತ್ತದೆ, ಈ ಸಮಯದಲ್ಲಿ ಎಲ್ಲಾ ಮನುಷ್ಯರೂ ದೇಹ-ಅಭಿಮಾನಿ ಆಗಿದ್ದಾರೆ. ನಾನು ಆತ್ಮ ಎಂದು ತಿಳಿಯುವ ಬದಲು, ನಾನು ಇಂತಹವನು ಅಥವಾ ನಾನು ಈ ವ್ಯಾಪಾರ ಮಾಡುತ್ತೇನೆಂದು ತಿಳಿಯುತ್ತಾರೆ. ಇವರು ಇಂತಹವರು ಕಾಮಿ, ಕ್ರೋಧಿ ಆಗಿದ್ದಾರೆ ಎಂದು ತಿಳಿಯುವರು. ಶರೀರದ ಹೆಸರನ್ನೇ ತೆಗೆದುಕೊಳ್ಳುವರು, ಇದಕ್ಕೇ ದೇಹ-ಅಭಿಮಾನಿ ಜಗತ್ತು, ಇಳಿಯುವ ಕಲೆಯ ಜಗತ್ತೆಂದು ಹೇಳಲಾಗುವುದು. ಸತ್ಯಯುಗದಲ್ಲಂತು ಈ ರೀತಿ ಆಗುವುದಿಲ್ಲ, ಅಲ್ಲಿ ದೇಹಿ-ಅಭಿಮಾನಿಗಳು ಇರುತ್ತಾರೆ. ತಮ್ಮನ್ನು ಆತ್ಮನೆಂದು ನಿಶ್ಚಯ ಮಾಡಿಕೊಳ್ಳಿರಿ ಎಂದು ನಿಮ್ಮನ್ನು ದೇಹೀ-ಅಭಿಮಾನಿಯನ್ನಾಗಿ ಮಾಡಲಾಗುತ್ತದೆ. ನಾನು ಆತ್ಮನು ಈ ಶರೀರವೆಂಬ ವಸ್ತ್ರವನ್ನು ಧರಸಿಕೊಂಡು ಪಾತ್ರವನ್ನು ಅಭಿನಯಿಸುತ್ತಾ ಇದ್ದೇನೆ. ಆ ಪಾತ್ರಧಾರಿಗಳೂ ಸಹ ಭಿನ್ನ-ಭಿನ್ನ ಪ್ರಕಾರದ ವಸ್ತ್ರಗಳನ್ನು ಬದಲಾಯಿಸಿ ಪಾತ್ರವನ್ನು ಅಭಿನಯಿಸುವರು. ತಂದೆಯು ಹೇಳುವರು – ನೀವು ಆತ್ಮರು ಮೊದಲು ಶಾಂತಿಧಾಮದಲ್ಲಿ ಇದ್ದಿರಿ, ನಿಮ್ಮ ಮನೆಯು ಶಾಂತಿಧಾಮ ಆಗಿದೆ. ಹೇಗೆ ಅದು ಅಲ್ಪಕಾಲದ ನಾಟಕವಿರುತ್ತದೆ, ಇದು ಬೇಹದ್ದಿನ ನಾಟಕವಾಗಿದೆ. ಎಲ್ಲಾ ಆತ್ಮರು ಪರಮಧಾಮದಿಂದ ಬಂದು, ಶರೀರವನ್ನು ಧಾರಣೆ ಮಾಡಿಕೊಂಡು ಪಾತ್ರವನ್ನು ಅಭಿನಯಿಸುತ್ತಾರೆ. ಆತ್ಮರ ಸತ್ಯವಾದ ಮನೆಯು ಪರಮಧಾಮವಾಗಿದೆ. ಆ ಪಾತ್ರಧಾರಿಗಳ ಮನೆಯಂತು ಇದೇ ಜಗತ್ತಿನಲ್ಲಿರುತ್ತದೆ. ಅವರು ಕೇವಲ ವಸ್ತ್ರವನ್ನು ಬದಲಾಯಿಸಿಕೊಂಡು ಬಂದು ಪಾತ್ರವನ್ನು ಅಭಿನಯಿಸುತ್ತಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ – ನೀವು ಆತ್ಮರಾಗಿದ್ದೀರಿ, ತಂದೆಯಂತು ಮಕ್ಕಳೇ ಮಕ್ಕಳೇ ಎನ್ನುವರು. ಸನ್ಯಾಸಿಗಳು ಮಕ್ಕಳೆ ಮಕ್ಕಳೆ ಎನ್ನುವುದಿಲ್ಲ. ತಂದೆಯು ತಿಳಿಸುತ್ತಾರೆ – ನಾನು ಪತಿತ-ಪಾವನನು ನೀವೆಲ್ಲಾ ಆತ್ಮರ ತಂದೆಯಾಗಿದ್ದೇನೆ. ಯಾರನ್ನು ನೀವು ಗಾಡ್ ಫಾದರ್ ಎಂದು ಹೇಳುತ್ತಿದ್ದಿರಿ, ಅವರಂತು ನಿರಾಕಾರನಾಗಿದ್ದಾರೆ. ಬ್ರಹ್ಮಾ-ವಿಷ್ಣು-ಶಂಕರನಿಗೂ ಪರಮಪಿತ (ಗಾಡ್ ಫಾದರ್) ಎಂದು ಹೇಳುವುದಿಲ್ಲ. ಅವರಲ್ಲಿಯೂ ಆತ್ಮವಿದೆ ಆದರೆ ಅವರಿಗೆ ಹೇಳಲಾಗುತ್ತದೆ – ಬ್ರಹ್ಮಾ ದೇವತಾಯ ನಮಃ, ವಿಷ್ಣು ದೇವತಾಯ ನಮಃ….. ದೇವತೆಗಳೇನು ಮಾಡುತ್ತಾರೆ?ಇದು ಯಾರಿಗೂ ಗೊತ್ತಿಲ್ಲ. ನೀವು ನಾಟಕದ ಯೋಜನೆಯನುಸಾರ ಹೇಗೆ ಪಾತ್ರವನ್ನು ಅಭಿನಯಿಸುತ್ತಾ ಇದ್ದೀರಿ ಎನ್ನುವುದನ್ನು ತಂದೆಯವರೇ ಬಂದು ತಿಳಿಸುತ್ತಾರೆ. ಪ್ರಪಂಚವಂತು ಇರುವುದೇ ಒಂದು, ಆದರೆ ಕೆಳಗೊಂದು ಪಾತಾಳವಿದೆ ಅಥವಾ ಮೇಲೆ ಒಂದು ಜಗತ್ತಿದೆ ಎಂದಲ್ಲ. ಪ್ರಪಂಚವಿರುವುದೇ ಒಂದು, ಸೃಷ್ಟಿ ಚಕ್ರವು ಸುತ್ತುತ್ತಿರುತ್ತದೆ. ಜನರಂತು ಚಂದ್ರನಲ್ಲಿ ಫ್ಲಾಟ್ ತೆಗೆದುಕೊಳ್ಳುವೆವು ಎಂದು ಹೇಳಿ ಬಿಡುತ್ತಾರೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಎಷ್ಟೊಂದು ದಿವಾಳಿಗಳಾಗಿದ್ದೀರಿ! ಭಾರತವಾಸಿಗಳಿಗಾಗಿಯೇ ಹೇಳುತ್ತಾರೆ, ನೀವೆಶ್ಟು ಸಾಹುಕಾರರು, ಬುದ್ಧಿವಂತರಿದ್ದಿರಿ. ಈ ಲಕ್ಷ್ಮೀ-ನಾರಾಯಣನ ಆಡಳಿತವು ಇಡೀ ಜಗತ್ತಿನಲ್ಲಿತ್ತು, ಅದನ್ನು ಯಾರೂ ಸಹ ಲೂಟಿ ಮಾಡಲು ಸಾಧ್ಯವಿರಲಿಲ್ಲ. ಅಲ್ಲಿ ಯಾವುದೇ ಪ್ರಕಾರದ ಒಡಕು ಮುಂತಾದವುಗಳು ಆಗುವುದಿಲ್ಲ. ಇಲ್ಲಂತು ಎಷ್ಟೊಂದು ಒಡಕು(ವಿಭಾಗ)ಗಳಿವೆ. ಪರಸ್ಪರ ಚಿಕ್ಕ-ಚಿಕ್ಕ ತುಂಡಿನಲ್ಲಿಯೂ ಜಗಳವಾಡುತ್ತಾ ಇರುತ್ತಾರೆ. ನೀವು ಇಡೀ ವಿಶ್ವದ ಮೇಲೆ ಮಾಲೀಕರಾಗಿದ್ದಿರಿ, ಸಮಸ್ತ ಆಕಾಶ, ಪೃಥ್ವಿ, ಸಮುದ್ರ ಎಲ್ಲವೂ ನಿಮ್ಮದೇ ಆಗಿತ್ತು, ನೀವು ಅದರ ಮಾಲೀಕರಿದ್ದಿರಿ. ಈಗಂತು ಇಬ್ಬಾಗಗಳಾಗಿವೆ. ಭಾರತವೇ ವಿಶ್ವದ ಮಾಲೀಕನಾಗಿತ್ತು ಎನ್ನುವುದು ಯಾರಿಗೂ ತಿಳಿದಿಲ್ಲ.

ತಂದೆಯು ತಿಳಿಸುವರು – ಆತ್ಮನಿಗೆ ಯಾವ ಪಾತ್ರವು ಸಿಕ್ಕಿದೆಯೋ ಅದೆಂದಿಗೂ ನಶಿಸಿ ಹೋಗುವುದಿಲ್ಲ. ನಡೆಯುತ್ತಲೇ ಇರುವುದು. ಈಗ ನೀವು ಪುನಃ ಮನುಷ್ಯನಿಂದ ದೇವತಾ ಆಗುತ್ತಿದ್ದೀರಿ, ನಂತರದಲ್ಲಿ 84 ಜನ್ಮಗಳನ್ನು ತೆಗೆದುಕೊಳ್ಳುವಿರಿ. ನಿಮ್ಮ ಪಾತ್ರವು ನಡೆಯುತ್ತಲೇ ಇರುವುದು, ಎಂದಿಗೂ ಸ್ಥಗಿತಗೊಳ್ಳುವುದಿಲ್ಲ. ಯಾರೂ ಸಹ ಮೋಕ್ಷ ಮುಂತಾದವನ್ನು ಪಡೆಯುವುದಿಲ್ಲ. ಎಷ್ಟು ಅನೇಕ ಗುರುಗಳು, ಅನೇಕ ಶಾಸ್ತ್ರ, ಅನೇಕ ಮತಗಳಾಗುವವು. ಮನುಷ್ಯರಲ್ಲಿ ಎಷ್ಟೊಂದು ಅಶಾಂತಿಯಿದೆ, ಎಲ್ಲಿಗೇ ಹೋದರೂ ಮನಸ್ಸಿಗೆ ಶಾಂತಿ ಹೇಗೆ ಸಿಗುತ್ತದೆ ಎಂದು ಕೇಳುವರು.ಇದನ್ನು ದೇಹಾಭಿಮಾನದಲ್ಲಿ ಬಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ – ಮನಸ್ಸು ಮತ್ತು ಬುದ್ಧಿಯು ಆತ್ಮನ ಇಂದ್ರಿಯಗಳಾಗಿವೆ. ಬಾಕಿ ಇವೆಲ್ಲವೂ ಶರೀರದ ಇಂದ್ರಿಯಗಳಾಗಿವೆ. ಆತ್ಮವು ಹೇಳುತ್ತದೆ – ನನ್ನ ಮನಸ್ಸಿಗೆ ಶಾಂತಿ ಹೇಗೆ ಸಿಗುವುರು. ವಾಸ್ತವದಲ್ಲಿ ಈ ರೀತಿ ಹೇಳುವುದು ತಪ್ಪಾಗಿದೆ. ನೀವು ಆತ್ಮನಿದ್ದೀರಿ, ನಿಮ್ಮ ಸ್ವಧರ್ಮವೇ ಶಾಂತಿ ಆಗಿದೆ. ನಾನು ಆತ್ಮನಿಗೆ ಶಾಂತಿಯು ಹೇಗೆ ಸಿಗುವುದು ಎನ್ನುವುದಕ್ಕೆ ನೀವು ಈ ರೀತಿ ಹೇಳಿರಿ – ಇದರಲ್ಲಿ ಕರ್ಮವನ್ನಂತು ಮಾಡಲೇಬೇಕು. ಈ ಮಾತುಗಳನ್ನು ತಂದೆಯೇ ತಿಳಿಸುತ್ತಾರೆ. ಪ್ರಪಂಚದಲ್ಲಿ ಈ ತಿಳುವಳಿಕೆಯು ಯಾರಲ್ಲಿಯೂ ಇಲ್ಲ. ಅಲ್ಲಿರುವುದು(ಜಗತ್ತಿನಲ್ಲಿ) ಭಕ್ತಿಮಾರ್ಗ, ಅವರಿಗೆ ಜ್ಞಾನದ ಬಗ್ಗೆ ಗೊತ್ತೇ ಇಲ್ಲ. ಜ್ಞಾನವನ್ನಂತು ಒಬ್ಬ ತಂದೆಯೇ ಕೊಡುವರು. ಸ್ವಯಂ ತಂದೆಯೇ ಹೇಳುತ್ತಾರೆ – ನಾನು ಕಲ್ಪ-ಕಲ್ಪ, ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ. ಕಲಿಯುಗದ ಅಂತ್ಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ, ಇದು ರಾವಣ ರಾಜ್ಯ ಆಗಿದೆ. ರಾವಣನನ್ನು ಸುಡುವುದೂ ಸಹ ಭಾರತವಾಸಿಗಳೇ ಸುಡುವರು. ಪತಿತ-ಪಾವನನಾದ ತಂದೆಯ ಜನ್ಮವೂ ಇಲ್ಲಿಯೇ ಆಗಿದೆ ಅಂದಮೇಲೆ ರಾವಣನ ಜನ್ಮವೂ ಇಲ್ಲಿಯೇ ಆಗಿದೆ. ಯಾವ ರಾವಣನು ಎಲ್ಲರನ್ನೂ ಪತಿತರನ್ನಾಗಿ ಮಾಡುವನು ಆದ್ದರಿಂದ ಅವನನ್ನು ಸುಡುತ್ತಾರೆ. ಈ ಮಾತುಗಳು ಯಾರದೇ ಬುದ್ಧಿಯಲ್ಲಿಯೂ ಇಲ್ಲದಂತಾಗಿದೆ. ಈಗ ಭಾರತದಲ್ಲಿ ಕೃಷ್ಣ ಜಯಂತಿಯನ್ನು ಆಚರಿಸುತ್ತಾರೆ, ಕೃಷ್ಣ ಲೀಲೆ ಭಜನೆ ಇತ್ಯಾದಿಗಳನ್ನು ಮಾಡುತ್ತಾರೆ. ಈಗ ತಂದೆಯು ಹೇಳುತ್ತಾರೆ – ವಾಸ್ತವದಲ್ಲಿ ಕೃಷ್ಣ ಲೀಲೆಯಂತು ಏನೂ ಇಲ್ಲ. ಕೃಷ್ಣನು ಏನು ಮಾಡಿದನು? ಅದಕ್ಕೆ ಹೇಳುತ್ತಾರೆ – ಕಂಸ ಪುರಿಯಲ್ಲಿ ಜನ್ಮ ತೆಗೆದುಕೊಂಡನು. ಈ ಕಂಸನೆಂದು ಭೂತಕ್ಕೆ ಹೇಳಲಾಗುವುದು. ಸತ್ಯಯುಗದಲ್ಲಿ ಭೂತಗಳು ಎಲ್ಲಿಂದ ಬಂದವು. ನೀವು ತಿಳಿದುಕೊಂಡಿದ್ದೀರಿ – ಕೃಷ್ಣನ ಆತ್ಮವೇನು ಸತ್ಯಯುಗದಲ್ಲಿತ್ತು, ಅವನು ತನ್ನ 84 ಜನ್ಮಗಳನ್ನು ಭೋಗಿಸಿ, ಈ ಸಮಯದಲ್ಲಿ ಪತಿತನಿಂದ ಪಾವನ ಆಗುತ್ತಿದ್ದಾನೆ. ತನ್ನ ಪದವಿಯನ್ನು ಪುನಃ ತೆಗೆದುಕೊಳ್ಳುತ್ತಿದ್ದಾನೆ. ಹಾಗೆ ನೋಡಿದರೆ ನೀವು ಕೃಷ್ಣ ಪುರಿಯಲ್ಲಿ ಇರುವವರಾಗಿದ್ದಿರಿ. 84 ಜನ್ಮಗಳನ್ನು ತೆಗೆದುಕೊಂಡು, ಈಗ ಪುನಃ ತಮ್ಮ ಪದವಿಯನ್ನು ಪಡೆಯುತ್ತಿದ್ದೀರಿ. ವಾಸ್ತವದಲ್ಲಿ ಜಯಂತಿ ಆಚರಿಸಬೇಕು ಶಿವ ತಂದೆಯ ಜಯಂತಿಯನ್ನು. ಆ ಶಿವ ತಂದೆಯು ಎಲ್ಲರನ್ನೂ ನರಕದಿಂದ ಸ್ವರ್ಗದಲ್ಲಿ ಕರೆದುಕೊಂಡು ಹೋಗುತ್ತಾರೆ, ಅವರದು ಯಾವುದೇ ಲೀಲೆಯೇ ಇಲ್ಲ. ಹೇಳುತಾರೆ – ಹೇ ಪತಿತ-ಪಾವನ ಬನ್ನಿ, ಬಂದು ನಮ್ಮನ್ನು ನರಕದಿಂದ ಸ್ವರ್ಗದಲ್ಲಿ ಕರೆದುಕೊಂಡು ಹೋಗಿ. ತಾವು ನಮ್ಮ ತಂದೆ ಆಗಿದ್ದೀರಿ ಅಂದಮೇಲೆ ನಾವು ಸ್ವರ್ಗದಲ್ಲಿ ಹೋಗಬೇಕು, ನಾವೇಕೆ ಈ ನರಕದಲ್ಲಿದ್ದೇವೆ? ಆದ್ದರಿಂದ ಕರೆಯುತ್ತಾರೆ – ಹೇ ಗಾಡ್ ಫಾದರ್, ನಮ್ಮ ಈ ದುಃಖದ ಪ್ರಪಂಚದಿಂದ ಮುಕ್ತಗೊಳಿಸು. ಇದೂ ಸಹ ನಾಟಕದಲ್ಲಿ ನೊಂದಣಿಯಾಗಿದೆ. ತಂದೆಯು ತಿಳಿಸುತ್ತಾರೆ – ಈ ನಾಟಕವನ್ನು ಯಾರೂ ತಿಳಿದುಕೊಂಡಿಲ್ಲ, ಶಾಸ್ತ್ರದಲ್ಲಿ ಸೃಷ್ಟಿ ನಾಟಕದ ಆಯಸ್ಸನ್ನು ಬಹಳ ದೊಡ್ಡ ಲೆಕ್ಕದಲ್ಲಿ ಬರೆದಿದ್ದಾರೆ. ಹೊಸ ಪ್ರಪಂಚವು ಹಳೆಯದಾಗಲೇಬೇಕು. ಸತೊ, ರಜೊ, ತಮೊ…ದಲ್ಲಿ ಬರಲೇಬೇಕು, ಇದು ಬೇಹದ್ದಿನ ಮಾತಾಗಿದೆ. ಈಗ ಪುನಃ ನೀವು ವಿಶ್ವದ ಮಾಲೀಕರು ಆಗುತ್ತಿದ್ದೀರಿ. ಭಾರತವಾಸಿಗಳು ಯಾರು ಹೊಸ ಪ್ರಪಂಚದಲ್ಲಿದ್ದರು, ಅವರೇ 4 ಜನ್ಮಗಳ ಪಾತ್ರವನ್ನು ಅಭಿನಯಿಸುವರು. ಈಗ ನೀವು ಪವಿತ್ರರಾಗುತ್ತೀರಿ, ಉಳಿದೆಲ್ಲಾ ಮನುಷ್ಯರು ಪತಿತರಾಗಿದ್ದಾರೆ ಆದ್ದರಿಂದ ಪಾವನರ ಮುಂದೆ ಹೋಗಿ ನಮನ ಮಾಡುತ್ತಾರೆ. ಪಾವನನು ಪಾವನನಿಗೆ ನಮನವನ್ನೇಕೆ ಮಾಡುವರು. ಸನ್ಯಾಸಿಗಳು ಪಾವನರಿದ್ದಾರೆ ಆದ್ದರಿಂದ ಪತಿತ ಮನುಷ್ಯರು ಅವರ ಮುಂದೆ ಹೋಗಿ ತಲೆ ಬಾಗಿಸುತ್ತಾರೆ. ಕನ್ಯೆಯು ಪವಿತ್ರವಾಗಿದ್ದಾಳೆ ಆದ್ದರಿಂದ ಎಲ್ಲರ ಅವಳ ಮುಂದೆ ತಲೆ ಬಾಗಿಸುತ್ತಾರೆ. ಅದೇ ಕನ್ಯೆಯು ವಿವಾಹ ಮಾಡಿಕೊಂಡು ಅತ್ತೆ ಮನೆಗೆ ಹೋಗುವಳೆಂದರೆ ತಾನೇ ತಲೆ ಬಾಗಿಸಬೇಕಾಗುವುದು. ಈಗ ಬೇಹದ್ದಿನ ತಂದೆಯು ಸರ್ವರನ್ನೂ ಪಾವನ ಮಾಡುವುದಕ್ಕಾಗಿ ಬಂದಿದ್ದಾರೆ. ಅವರೆಲ್ಲರೂ ಕಲಿಯುಗದಲ್ಲಿ ಇದ್ದಾರೆ, ನೀವೀಗ ಸಂಗಮದಲ್ಲಿದ್ದೀರಿ. ನೀವೀಗ ಪತಿತ ಪ್ರಪಂಚದಲ್ಲಿ ಹೋಗಬಾರದು, ಇದಂತು ಇರುವುದೇ ಕಲ್ಯಾಣಕಾರಿ ಯುಗ. ತಂದೆಯು ಬಂದು ಸರ್ವರ ಕಲ್ಯಾಣ ಮಡುವರು. ನೀವೀಗ ಕೃಷ್ಣ ಜಯಂತಿ ಆಚರಿಸುತ್ತೀರಿ, ಇಲ್ಲದಿದ್ದರೆ ಜನರು ತಿಳಿಯುವರು – ಇವರಂತು ನಾಸ್ತಿಕರಾಗಿದ್ದಾರೆ. ವಾಸ್ತವದಲ್ಲಿ ನಾಸ್ತಿಕರೆಂದು ಅವರಿಗೇ ಹೇಳಲಾಗುತ್ತದೆ, ಯಾರು ತನ್ನ ತಂದೆಯನ್ನು ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲ. ಈ ಸಮಯದಲ್ಲಿ ಎಲ್ಲರೂ ಅನಾಥರಾಗಿದ್ದಾರೆ. ಮನೆ-ಮನೆಯಲ್ಲಿಯೂ ಜಗಳವಿದೆ, ಒಬ್ಬರಿನ್ನೊಬ್ಬರು ಸಾಯಿಸುವುದಕ್ಕೂ ನಿಧಾನ ಮಾಡುವುದಿಲ್ಲ ಆದ್ದರಿಂದ ಇದಕ್ಕೆ ನಾಸ್ತಿಕರ ಜಗತ್ತು, ತಂದೆಯನ್ನು ಅರಿಯದಿರುವವರು ಎಂದು ಹೇಳಲಾಗುವುದು. ನೀವು ಅರಿತಿರುವವರು ಆಗಿದ್ದೀರಿ, ಈಗ ನೀವು ತಿಳಿಯುತ್ತೀರಿ – ನಾವು ಕಲ್ಲು ಬುದ್ಧಿಯವರು ಆಗಿದ್ದೆವು, ತಂದೆಯು ನಮ್ಮನ್ನು ಪಾರಸ ಬುದ್ಧಿಯವರನ್ನಾಗಿ ಮಾಡುತ್ತಿದ್ದಾರೆ. ಇದರಲ್ಲಿ ಮತ್ತ್ಯಾವುದೇ ಕಷ್ಟದ ಮಾತಿಲ್ಲ. ಕೇವಲ ಒಂದು ಗಂಟೆ ವಿದ್ಯಾಭ್ಯಾಸ ಮಾಡಿರಿ ಎಂದು ತಂದೆಯು ಹೇಳುತ್ತಾರೆ. ಅದರಲ್ಲಿ ತಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿರಿ. ಶರೀರವನ್ನು ನೆನಪು ಮಾಡಿದರೆ ಲೌಕಿಕ ಸಂಬಂಧಿಗಳ ನೆನಪು ಬರುತ್ತದೆ. ದೇಹಿ-ಅಭಿಮಾನಿ ಆಗಿರುತ್ತೀರೆಂದರೆ ತಂದೆಯಾದ ನನ್ನ ನೆನಪಿರುತ್ತದೆ. ಇದಂತು ವಿಕಾರ ಪ್ರಪಂಚವೇ ಆಗಿದೆ, ವಿಷದ ಸಾಗರದಲ್ಲಿ ಮುಳುಗುತ್ತಿರುತ್ತಾರೆ. ವಿಷ್ಣುವನ್ನು ಕ್ಷೀರ ಸಾಗರದಲ್ಲಿ ತೋರಿಸುವರು, ಅದರಬಗ್ಗೆ ಹೇಳುವರು – ಅಲ್ಲಿ ತುಪ್ಪದ ನದಿಗಳು ಹರಿಯುತ್ತಿದ್ದವು. ಇಲ್ಲಂತು ಸೀಮೆ ಎಣ್ಣೆಯೂ ಸಿಗುವುದಿಲ್ಲ, ಅಂತರವಿದೆ ಅಲ್ಲವೆ. ಹಾಗಾದರೆ ನೀವು ಮಕ್ಕಳು ಎಷ್ಟು ಖುಷಿಯಲ್ಲಿರಬೇಕು! ತಂದೆಯೇ ಅಂಬಿಗನು ಆಗಿದ್ದಾರಲ್ಲವೆ. ಅಂಬಿಗ ನಾ ನಿಮ್ಮ ನಂಬಿದೆ….. ಎಂದು ಮಹಿಮೆಯಲ್ಲಿಯೂ ಹಾಡುತ್ತಾರೆ. ಇವೆಲ್ಲವೂ ದೋಣಿಗಳಾಗಿವೆ, ಅಂಬಿಗನಂತು ಒಬ್ಬ ತಂದೆಯೇ ಆಗಿದ್ದಾರೆ. ಈ ಶರೀರವನ್ನಂತು ಇಲ್ಲಿಯೇ ಬಿಟ್ಟು ಬಿಡುತ್ತೇವೆ. ಉಳಿದಂತೆ ಆತ್ಮರನ್ನು ಇದರಿಂದಾಚೆ ಶಾಂತಿಧಾಮಕ್ಕೆ ಕರೆದುಕೊಂಡು ಹೋಗುತ್ತೇವೆ. ಅಲ್ಲಿಂದ ಮತ್ತೆ ಸುಖಧಾಮಕ್ಕೆ ಕಳುಹಿಸುತ್ತೇವೆ. ಪರಮಪಿತ ಪರಮಾತ್ಮನನ್ನೇ ಅಂಬಿಗನೆಂದು ಹೇಳಲಾಗುತ್ತದೆ, ತಂದೆಯದೇ ಅನೇಕ ಪ್ರಕಾರವಾಗಿ ಮಹಿಮೆ ಮಾಡುತ್ತಾರೆ. ನೀವೀಗ ಪವಿತ್ರರಾಗಿ ಪವಿತ್ರ ಪ್ರಪಂಚದ ಮಾಲೀಕರಾಗುತ್ತಾ ಇದ್ದೀರಿ. ಶ್ರೀ ಶ್ರೀ ಶಿವ ತಂದೆಯು ಶ್ರೇಷ್ಠರನ್ನಾಗಿ ಮಾಡುವುದಕ್ಕಾಗಿ ಬಂದಿದ್ದಾರೆ. ಸ್ವಯಂ ಭಗವಂತನೇ ಹೇಳುತ್ತಾರೆ – ಇದು ಭ್ರಷ್ಟಾಚಾರಿ ಪ್ರಪಂಚವಾಗಿದೆ, ಈಗ ನೀವು ಪರಮಪಿತ ಪರಮಾತ್ಮನ ಶ್ರೀಮತದನುಸಾರ ನಡೆಯುತ್ತಾ ಶ್ರೇಷ್ಠಾಚಾರಿಗಳು ಆಗುವಿರಿ. ಇದೆಷ್ಟು ಗುಪ್ತ ರಮಣೀಕವಾದ ಮಾತುಗಳಾಗಿವೆ, ಅದು ನೀವು ಮಕ್ಕಳ ಬುದ್ಧಿಯಲ್ಲೇ ತಿಳಿದುಬರುತ್ತದೆ. ಅನ್ಯರಿಗಂತು ತಿಳಿಯುವುದೇ ಇಲ್ಲ. ನೀವು ಇದನ್ನು ತಿಳಿದುಕೊಂಡಿದ್ದೀರಿ – ಈಗ ದೇವಿ-ದೇವತಾ ಧರ್ಮದ ನಾಟಿಯಾಗುತ್ತಿದೆ. ಯಾರು ದೇವಿ-ದೇವತಾ ಧರ್ಮದಲ್ಲಿ ಇರುವವರು, ಅನ್ಯ ಧರ್ಮಗಳಲ್ಲಿ ಹೊರಟು ಹೋಗಿದ್ದಾರೆ ಅವರೇ ಬಂದು ಪುನಃ ಬ್ರಾಹ್ಮಣರಾಗುವರು. ಬ್ರಹ್ಮಾಕುಮಾರ-ಕುಮಾರಿ ಆಗದೇ ತಂದೆಯಿಂದ ಸ್ವರ್ಗದ ಆಸ್ತಿಯನ್ನು ಪಡೆಯಲು ಸಾಧ್ಯವಿಲ್ಲ. ಈಗ ನೀವು ಬ್ರಹ್ಮಾಕುಮಾರ-ಕುಮಾರಿಯರು ಸ್ವರ್ಗದ ಆಸ್ತಿಯನ್ನು ಪಡೆಯುತ್ತಿದ್ದೀರಿ. ಯಾರೆಷ್ಟು ಪುರುಷಾರ್ಥ ಮಾಡುವರು, ಮಾಡಿಸುವರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುವರು. ಎಲ್ಲರಿಗೆ ಎಲ್ಲರೂ ಇಷ್ಟೊಂದು ಮಾಡಲು ಸಾಧ್ಯವಿಲ್ಲ. ಯಾರು ಸಂಪೂರ್ಣ ಓದುವುದಿಲ್ಲವೋ ಅವರ ಗತಿಯೇನಾಗುವುದು! ಒಂದುವೇಳೆ ಶರೀರವನ್ನು ಬಿಡುತ್ತಾರೆಂದರೆ ಸ್ವರ್ಗದಲ್ಲಿ ಹೋಗುವರು ಆದರೆ ಪ್ರಜೆಗಳಲ್ಲಿಯೂ ಸಂಪೂರ್ಣ ಸಾಧಾರಣರು ಆಗುವರು. ಒಂದುವೇಳೆ ತಂದೆಯ ಮಗುವಾಗಿ ಬಹಳ ಚೆನ್ನಾಗಿ ವಿದ್ಯಾಭ್ಯಾಸ ಮಾಡಿದರೆ ರಾಜನ ಪದವಿಯನ್ನು ಪಡೆಯಬಹುದು. ಇಲ್ಲದಿದ್ದರೆ ತಿಳಿದುಕೊಳ್ಳುವೆವು – ಇವರ ಅದೃಷ್ಟದಲ್ಲಿಲ್ಲ. ಪವಿತ್ರರಾಗಿ ಇರುತ್ತೀರಿ, ವಿದ್ಯಾಭ್ಯಾಸ ಮಾಡುತ್ತೀರೆಂದರೆ ಶ್ರೇಷ್ಠ ಪದವಿಯನ್ನು ಪಡೆಯುವಿರಿ. ಅಪವಿತ್ರರು ಆಗುವುದರಿಂದ ತಂದೆಯನ್ನು ನೆನಪು ಮಾಡುವುದಕ್ಕೆ ಸಾಧ್ಯವಿಲ್ಲ. ಈ ರೀತಿಯೂ ಅನೇಕರಿದ್ದಾರೆ – ಕರ್ಮಬಂಧನದ ಲೆಕ್ಕಾಚಾರವು ಯಾವಾಗ ಕಳೆಯುವುದೋ ಎನ್ನುವವರು. ಗಾಡಿಯ ಎರಡೂ ಚಕ್ರಗಳು ಪವಿತ್ರವಾಗಿ ಇರುತ್ತದೆಯೆಂದರೆ ಸರಿಯಾಗಿ ನಡೆಯುತ್ತದೆ. ಇಬ್ಬರೂ ಪವಿತ್ರರಾಗಿ ಇರುತ್ತಾರೆಂದರೆ ಜ್ಞಾನ ಚಿತೆಯ ಮೇಲೆ ಕುಳಿತು ಬಿಡುವರು. ಇಲ್ಲದಿದ್ದರೆ ಒಳ ಜಗಳಗಳು ಆಗುತ್ತಿರುತ್ತವೆ.

ಹಲವು ಮಕ್ಕಳು ಹೇಳುತ್ತಾರೆ – ಬಾಬಾ, ಶ್ರೀಕೃಷ್ಣನು ಸತ್ಯಯುಗದ ಮೊದಲ ರಾಜಕುಮಾರನೆಂದು ಗೊತ್ತಿದೆ, ನಾವೇಕೆ ಮನವೊಲಿಸಬಾರದು. ಒಳ್ಳೆಯದು. ನಾವು ಕೃಷ್ಣನ ಆತ್ಮವನ್ನು ಕರೆಸಬಹುದು, ಬಂದು ಆಟ-ಪಾಠ ಮಾಡುವನು, ನೃತ್ಯ ಮಾಡುವನು ಮತ್ತೇನು ಮಾಡುವನು. ಗೋಪ-ಗೋಪಿಕೆಯರಂತು ಇಲ್ಲಿಯೇ ತಯಾರಾಗುತ್ತೇವೆ. ಅಲ್ಲಂತು ರಾಜಕುಮಾರ-ರಾಜಕುಮಾರಿಯ ಪರಸ್ಪರದಲ್ಲಿ ಭೇಟಿಯಾಗುತ್ತಾರೆಂದರೆ ನೃತ್ಯ ಮಾಡುತ್ತಾರೆ. ಮಲಗಲು ಮುರುಳಿ ನಾದವಿರುತ್ತದೆ. ನೀವು ಇವೆಲ್ಲಾ ಆಟ-ಪಾಠಗಳನ್ನು ಅಂತ್ಯದಲ್ಲಿ ನೋಡುವಿರಿ, ಇವೆಲ್ಲಾ ಪಾತ್ರಗಳು ನಡೆಯುತ್ತವೆ. ಆರಂಭದಲ್ಲಿ ತೋರಿಸಲಾಯಿತು, ನಂತರ ನೀವು ಪುರುಷಾರ್ಥ ಮಾಡತೊಡಗಿದಿರಿ. ಈಗ ಮತ್ತೆ ಸಾಕ್ಷಾತ್ಕಾರವಾಗುವುದು ಆರಂಭವಾಗುವುದು. ಯಾರ್ಯಾರು ಯಾವ ಪದವಿಯನ್ನು ಪಡೆಯುವರು ಎನ್ನುವುದನ್ನು ನೀವು ತಿಳಿದುಕೊಂಡಿದ್ದೀರಿ. ತಂದೆಯು ಕುಳಿತು ಇದೆಲ್ಲಾ ರಹಸ್ಯಗಳನ್ನು ತಿಳಿಸುತ್ತಾರೆ. ನಿಮ್ಮೊಂದಿಗೆ ಪ್ರಶ್ನೆ ಮಾಡುತ್ತಾರೆ – ನೀವು ವೇದ-ಶಾಸ್ತ್ರಗಳನ್ನು ಒಪ್ಪುವಿರಾ! ಆಗ ಹೇಳಿರಿ – ಹೌದು, ನಾವೇಕೆ ಒಪ್ಪುವುದಿಲ್ಲ. ಇವೆಲ್ಲವೂ ಭಕ್ತಿಮಾರ್ಗದ ಸಾಮಗ್ರಿಗಳಾಗಿವೆ, ಇದರಲ್ಲಿ ತಿಳುವಳಿಕೆಯೇ ಇಲ್ಲ. ಜ್ಞಾನವನ್ನು ಕೊಡುವವರಂತು ಒಬ್ಬರೇ ಆಗಿದ್ದಾರೆ. ಜ್ಞಾನವು ಸಿಗುತ್ತದೆಯೆಂದರೆ ಭಕ್ತಿಯು ಸ್ವತಹವಾಗಿಯೇ ಬಿಟ್ಟು ಹೋಗುವುದು. ನೀವು ಮಂದಿರಕ್ಕೆ ಹೋಗುತ್ತೀರೆಂದರೂ ಬುದ್ಧಿಯಲ್ಲಿರುತ್ತದೆ – ಇವರು ಲಕ್ಷ್ಮೀ-ನಾರಾಯಣ, ಇವರೇ ಪುನಃ ಈಗ ಹೊಸ ಪ್ರಪಂಚದಲ್ಲಿ ರಾಜ್ಯಾಡಳಿತ ಮಾಡುವರು.

ತಂದೆಯು ಮಕ್ಕಳಿಗೆ ತಿಳಿಸುತ್ತಾರೆ, ಎರಡೂ ಕಡೆಯಿದ್ದು ನಿಭಾಯಿಸಬೇಕಾಗುತ್ತದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಪವಿತ್ರರಾಗಬೇಕು. ಶ್ರೀಮತ ಹೇಳುತ್ತದೆ – ಸಂಪೂರ್ಣ ಪವಿತ್ರರಾಗಿರಿ, ಸಂಪೂರ್ಣ ವೈಷ್ಣವರಾಗಿರಿ ಮತ್ತು ವಿಷ್ಣು ಪುರಿಯ ರಾಜ್ಯವನ್ನು ಪಡೆಯಿರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಯೋಗದ ಮೂಲಕ ಕರ್ಮ ಬಂಧನದ ಲೆಕ್ಕಾಚಾರದಿಂದ ಮುಕ್ತರಾಗಿ ಪಾವನರಾಗಬೇಕಾಗಿದೆ. ಜ್ಞಾನ ಚಿತೆಯ ಮೇಲೆ ಕುಳಿತುಕೊಳ್ಳಬೇಕು. ಸಂಪೂರ್ಣ ವೈಷ್ಣವ ಅಂದರೆ ಪವಿತ್ರರು ಆಗಬೇಕಾಗಿದೆ.

2. ತಮ್ಮ ಸ್ವಧರ್ಮ ಶಾಂತಿಯಲ್ಲಿ ಸ್ಥಿತರಾಗಬೇಕು. ಎಲ್ಲರಿಗೂ ಶಾಂತಿಧಾಮದ ನೆನಪು ತರಿಸಬೇಕಾಗಿದೆ. ಎಂದಿಗೂ ಅಶಾಂತರು ಆಗಬಾರದು.

ವರದಾನ:-

ಯಾವ ಮಕ್ಕಳು ಜ್ಞಾನದ ಮೂಲಕ ಬಹಳ ಚೆನ್ನಾಗಿ ರಾವಣನ ಬಹು ರೂಪಗಳನ್ನು ಅರಿತುಕೊಳ್ಳುವರು, ಅದು ಅವರ ಮುಂದೆ ಸಮೀಪಕ್ಕೂ ಬರಲು ಸಾಧ್ಯವಾಗುವುದಿಲ್ಲ. ಭಲೆ ಚಿನ್ನದ ಅಥವಾ ವಜ್ರದ ರೂಪವನ್ನೇ ಧಾರಣೆ ಮಾಡಿಕೊಳ್ಳಲಿ ಆದರೆ ಅದರ ಆಕರ್ಷಣೆಯಲ್ಲಿ ಬರುವುದಿಲ್ಲ. ಇಂತಹ ಸತ್ಯ ಸೀತೆಯರಾಗಿದ್ದು ಗೆರೆಯೊಳಗೆ(ಶ್ರೀಮತ) ಇರುವಂತಹ ಲಕ್ಷ್ಯವನ್ನು ಇಟ್ಟುಕೊಳ್ಳುತ್ತಾ ಸಾಹಸಶಾಲಿ ಆಗಿರಿ. ನಂತರದಲ್ಲಿ ಈ ರಾವಣನ ಬಹು ಸೇನೆಯು ಯುದ್ಧ ಮಾಡುವುದಕ್ಕೆ ಬದಲು ತಮ್ಮ ಸಹಯೋಗಿ ಆಗಿ ಬಿಡುತ್ತವೆ. ಪ್ರಕೃತಿಯ 5 ತತ್ವಗಳು ಹಾಗೂ 5 ವಿಕಾರಗಳು ವರ್ಗಾವಣೆಯಾಗಿ, ತಮ್ಮ ಸೇವೆಗಾಗಿ ಬರುತ್ತವೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top