29 November 2021 KANNADA Murli Today | Brahma Kumaris

Read and Listen today’s Gyan Murli in Kannada

November 28, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಭಲೆ ಪ್ರಪಂಚದಲ್ಲಿ ಮತ್ತ್ಯಾರದೂ ಭಯವನ್ನು ಇಟ್ಟುಕೊಳ್ಳಬೇಡಿ, ಆದರೆ ಅವಶ್ಯವಾಗಿ ಈ ತಂದೆಯ ಭಯವನ್ನು ಇಟ್ಟುಕೊಳ್ಳಿ, ಭಯ ಇಟ್ಟುಕೊಳ್ಳುವುದು ಎಂದರೆ ಪಾಪಕರ್ಮಗಳಿಂದ ಪಾರಾಗಿರುವುದಾಗಿದೆ”

ಪ್ರಶ್ನೆ:: -

ಬಾಬಾರವರು ಪ್ರತಿಯೊಂದು ಮಗುವಿಗೆ ತಮ್ಮ ಪರಿಶೀಲನೆಯನ್ನು ಮಾಡಲು (ಚಾರ್ಟ್ ಇಡಲು) ಏಕೆ ಶ್ರೀಮತವನ್ನು ಕೊಡುತ್ತಾರೆ?

ಉತ್ತರ:-

ಏಕೆಂದರೆ ಈಶ್ವರೀಯ ಕಾಯಿದೆಯು ಬಹಳ ಕಠಿಣವಾಗಿದೆ. ಒಂದುವೇಳೆ ಬ್ರಾಹ್ಮಣರಾಗಿ ಚಿಕ್ಕ ಪುಟ್ಟ ತಪ್ಪಾಯಿತೆಂದರೆ ಬಹಳ ಕಠಿಣ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ, ಆದ್ದರಿಂದ ಬಾಬಾರವರು ಹೇಳುತ್ತಾರೆ – ತಮ್ಮ ಪರಿಶೀಲನೆಯನ್ನು ಇಡಿ. ಒಂದುವೇಳೆ ಯಾವುದೇ ಹಳೆಯ ಲೆಕ್ಕಾಚಾರಗಳು ಉಳಿದುಕೊಳ್ಳುತ್ತದೆಯೆಂದರೆ ಪೆಟ್ಟು ತಿಂದು ತುಂಡು ರೊಟ್ಟಿಯನ್ನು (ಶಿಕ್ಷೆಯನ್ನೂ ಅನುಭವಿಸಿ, ಪದವಿಯೂ ಭ್ರಷ್ಟವಾಗುವುದು) ತಿನ್ನಬೇಕಾಗುತ್ತದೆ. ಈಗ ಅಂತಿಮ ಸಮಯ ಬಹಳ ಸಮೀಪವಿದೆ, ಆದ್ದರಿಂದ ತಮ್ಮ ಎಲ್ಲಾ ಲೆಕ್ಕಾಚಾರಗಳನ್ನು ಯೋಗಬಲದಿಂದ ಸಮಾಪ್ತಿ ಮಾಡಿ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ತಂದೆಯ ನೆನಪಿನಲ್ಲಂತು ಮಕ್ಕಳು ತಾವಾಗಿಯೇ ಇರುತ್ತೀರಿ. ಗಳಿಗೆ-ಗಳಿಗೆಗೆ ಹೇಳುವ ಅವಶ್ಯಕತೆಯೂ ಇರುವುದಿಲ್ಲ. ತಂದೆಯ ಡೈರೆಕ್ಷನ್ ಆಗಿದೆ – ನಡೆಯುತ್ತಾ-ತಿರುಗಾಡುತ್ತಾ, ಏಳುತ್ತಾ-ಕುಳಿತುಕೊಳ್ಳುತ್ತಾ ತಂದೆಯನ್ನು ನೆನಪು ಮಾಡುತ್ತೀರೆಂದರೆ, ಯಾವ ರಾವಣ ನಿಮ್ಮನ್ನು ಪತಿತರನ್ನಾಗಿ ಮಾಡಿಬಿಟ್ಟಿದ್ದಾನೆ, ಅದರ ಮೇಲೆ ವಿಜಯವನ್ನು ಪಡೆಯುತ್ತೀರಿ. ನಿಮಗೆ ಯಾವುದೇ ಅಸ್ತ್ರ ಮುಂತಾದವುಗಳನ್ನು ಕೊಡುವುದಿಲ್ಲ, ಕೇವಲ ಯೋಗಬಲದಿಂದ ನೀವು ರಾವಣನ ಮೇಲೆ ವಿಜಯವನ್ನು ಪಡೆಯುತ್ತೀರಿ. ಅವಶ್ಯವಾಗಿ ವಿಜಯ ಪಡೆಯಬೇಕು ಮತ್ತು ಸಂಗಮದಲ್ಲಿಯೇ ಪಡೆಯುತ್ತೀರಿ, ಆಗ ರಾವಣ ರಾಜ್ಯವು ಸಮಾಪ್ತಿಯಾಗಿ ರಾಮ ರಾಜ್ಯದ ಸ್ಥಾಪನೆಯಾಗಬೇಕು. ತಂದೆಯಂತು ಹಿಂಸೆಯನ್ನೆಂದಿಗೂ ಕಲಿಸಲು ಸಾಧ್ಯವಿಲ್ಲ. ದೇವತೆಗಳಂತು ಅಹಿಂಸಾ ಪರಮೋಧರ್ಮಿ ಆಗಿಯೇ ಇದ್ದಾರೆ. ಅಲ್ಲಿ ಕಾಮ ಕಟಾರಿಯ ಹಿಂಸೆ ಆಗುವುದಿಲ್ಲವೆಂದು ಪ್ರಪಂಚದವರು ತಿಳಿದುಕೊಂಡಿಲ್ಲ. ಯಾರು ಕಲ್ಪದ ಮೊದಲು ನಿರ್ವಿಕಾರಿಗಳಾಗಿದ್ದರು, ಅವರೇ ನಿಮ್ಮ ಮಾತುಗಳನ್ನು ಒಪ್ಪಿಕೊಳ್ಳುತ್ತಾರೆ. ಈಗ ನೀವು ಯುದ್ಧದ ಮೈದಾನದಲ್ಲಿದ್ದೀರಿ. ಗಾಯನವಿದೆ – ಶಿವಶಕ್ತಿ ಸೇನೆ ಎಂದು. ನೀವು ಗುಪ್ತ ಯೋಧರಾಗಿದ್ದೀರಿ, ಪ್ರತಿಯೊಬ್ಬರೂ ತನಗಾಗಿ ಮಾಡುತ್ತಿದ್ದೀರಿ. ಮಾಯಾಜೀತ್ ಜಗತ್ಜೀತ್ ಆಗಬೇಕಾಗಿದೆ. ನೀವು ತಮಗಾಗಿ ಮಾಡುತ್ತೀರಿ ಅಂದರೆ ತಮ್ಮ ಭಾರತ ದೇಶಕ್ಕಾಗಿ ಮಾಡುತ್ತೀರಿ. ಇದರಲ್ಲಿ ಯಾರು ಚೆನ್ನಾಗಿ ಪುರುಷಾರ್ಥ ಮಾಡುತ್ತಾಎರ್ ಅವರು ಪಡೆಯುತ್ತಾರೆ. ಯಾರು 5 ವಿಕಾರಗಳ ಮೇಲೆ ವಿಜಯವನ್ನು ಪಡೆಯುತ್ತಾರೆ ಅವರೇ ಜಗತ್ಜೀತರಾಗುತ್ತಾರೆ, ಮತ್ತ್ಯಾವುದೇ ವಸ್ತುವಿನ ಮೇಲೆ ವಿಜಯ ಪಡೆಯುವುದಲ್ಲ. ನಿಮ್ಮದಿರುವುದೇ ರಾವಣ ರಾಜ್ಯದ ಮೇಲೆ ವಿಜಯ ಪಡೆಯುವುದು ಅರ್ಥಾತ್ ದೈವೀ ಗುಣಗಳನ್ನು ಧಾರಣೆ ಮಾಡುವುದು. ದೈವೀ ಗುಣಗಳ ಧಾರಣೆ ಮಾಡದೇ ಸತ್ಯಯುಗದಲ್ಲಿ ಹೋಗಲು ಸಾಧ್ಯವಿಲ್ಲ. ಅಂದಮೇಳೆ ತಮ್ಮೊಂದಿಗೆ ಕೇಳಿಕೊಳ್ಳಿ – ನಾವು ಎಲ್ಲಿಯವರಗೆ ದೈವೀ ಗುಣಗಳ ಧಾರಣೆ ಮಾಡಿದ್ದೇವೆ? ದೈವೀ ಗುಣಗಳ ಧಾರಣೆ ಮಾಡುವುದು ಎಂದರೆ ರಾವಣನ ಮೇಲೆ ವಿಜಯ ಪಡೆಯುವುದು. ರಾಮ ರಾಜ್ಯವಿತ್ತು ಎಂದು ಹೇಳಲಾಗುತ್ತದೆ ಅಂದಮೇಲೆ ಒಬ್ಬ ರಾಮನಂತು ರಾಜ್ಯಾಡಳಿತ ಮಾಡಿರುವುದಿಲ್ಲ? ಪ್ರಜೆಗಳಂತು ಇರುತ್ತಾರೆ. ಇಲ್ಲಿ ರಾಜ, ರಾಣಿ ಹಾಗೂ ಪ್ರಜೆಗಳೆಲ್ಲರೂ ರಾವಣನ ಮೇಲೆ ವಿಜಯವನ್ನು ಪಡೆಯುತ್ತಿದ್ದಾರೆ. ದೈವೀ ಗುಣಗಳನ್ನು ಧಾರಣೆ ಮಾಡುತ್ತಿದ್ದಾರೆ. ದೈವೀ ಗುಣಗಳಲ್ಲಿ ಆಹಾರ-ಪಾನೀಯ, ಮಾತನಾಡುವುದು – ಎಲ್ಲವೂ ಶುದ್ಧ ಪವಿತ್ರವಾಗುತ್ತದೆ. ಪ್ರತಿಯೊಂದು ಮಾತಿನಲ್ಲಿ ಸತ್ಯವನ್ನು ಹೇಳಬೇಕಾಗಿದೆ. ತಂದೆಯ ಸತ್ಯವೇ ಆಗಿದ್ದಾರೆ ಅಂದಾಗ ಇಂತಹ ತಂದೆಯ ಜೊತೆ ಎಷ್ಟು ಸತ್ಯವಾಗಿರಬೇಕು! ಒಂದುವೇಳೆ ಸತ್ಯವಾಗಿರುವುದಿಲ್ಲವೆಂದರೆ ಎಷ್ಟು ದುರ್ಗತಿಯಾಗುತ್ತದೆ! ಗತಿಯಂತು ಶ್ರೇಷ್ಠವಾಗಿರುವುದನ್ನು ಪಡೆಯಬೇಕಾಗಿದೆ. ನರನಿಂದ ನಾರಾಯಣ, ನಾರಿಯಿಂದ ಲಕ್ಷ್ಮಿ ಆಗಬೇಕಾಗಿದೆ. ಹೇಳಲಾಗುತ್ತದೆ – ನಿಮ್ಮ ಗತಿ ಮತ ನೀವೇ ತಿಳಿದಿದ್ದೀರಿ ಎಂದು. ತಂದೆಯು ಯಾವ ಮತವನ್ನು ಕೊಡುತ್ತಾರೆ, ಅದರಿಂದ ಎಂತಹ ಶ್ರೇಷ್ಠ ಗತಿಯಾಗುತ್ತದೆ. ಸರ್ವ ಶ್ರೇಷ್ಠ ತಂದೆಯು ಸರ್ವ ಶ್ರೇಷ್ಠ ಗತಿಯನ್ನು ಪಾಪ್ತಿ ಮಾಡಿಸುತ್ತಾರೆ ಅಂದಮೇಲೆ ಈಗ ಶ್ರೀಮತದಂತೆ ನಡೆದು ದೈವೀ ಗುಣಗಳನ್ನು ಧಾರಣೆ ಮಾಡಬೇಕಾಗಿದೆ. ಜನ್ಮ-ಜನ್ಮಾಂತರದ ಪಾಪವನ್ನು ಯೋಗಬಲವಿಲ್ಲದೆ ತುಂಡಾಗುವುದಿಲ್ಲ ಇದಕ್ಕಾಗಿ ನೆನಪಿನ ಯಾತ್ರೆಯು ಬಹಳ ಚೆನ್ನಾಗಿ ಮಾಡಬೇಕು. ಅಮೃತವೇಳೆ ನೆನಪು ಚೆನ್ನಾಗಿರುತ್ತದೆ. ಆ ಸಮಯದ ವಾಯುಮಂಡಲವು ಚೆನ್ನಾಗಿರುತ್ತದೆ. ದಿನದಲ್ಲಿ ಭಲೆ ಎಷ್ಟೇ ಸಮಯ ಕುಳಿತುಕೊಳ್ಳಿ ಆದರೆ ಅಮೃತವೇಳೆಯಂತಹ ಸಮಯವಿಲ್ಲ. ತಮ್ಮ ಮಾತುಗಳು ಗುಪ್ತವಾಗಿದೆ. ಆಂಗ್ಲಭಾಷೆಯಲ್ಲಿ ಹೇಳುತ್ತಾರೆ – “ವಿ ಆರ್ ಅಟ್ ವಾರ್” (ನಾವು ಯುದ್ಧದ ಮೈದಾನದಲ್ಲಿದ್ದೇವೆ) ನಮ್ಮ ಯುದ್ಧ ರಾವಣನೊಂದಿಗೆ ಇದೆ. ರಾವಣನು ನಂಬರ್ವನ್ ಶತ್ರುವಾಗಿದ್ದಾನೆ. ಶ್ರೀಮತದಿಂದ ರಾಮನ ಸಂಪ್ರದಾಯದವರು ರಾವಣ ಸಂಪ್ರದಾಯದವರ ಮೇಲೆ ವಿಜಯ ಪಡೆದರು. ತಂದೆಯು ಸರ್ವಶಕ್ತಿವಂತನಾಗಿದ್ದಾರಲ್ಲವೆ. ಪ್ರಪಂಚವಂತು ಪಾಪ! ಈ ಸಮಯದಲ್ಲಿ ಘೋರ ಅಂಧಕಾರದಲ್ಲಿದೆ. ನಾವು ಸೋತಿದ್ದೇವೆಂದರೆ ಅವರಿಗೆ ತಿಳಿದೇ ಇಲ್ಲ. ಮಾಯೆಯೊಂದಿಗೆ ಸೋಲುವುದೇ ಸೋಲು, ಮಾಯೆಯೆಂದು ಯಾವುದಕ್ಕೆ ಹೇಳಲಾಗುತ್ತದೆ- ಇದೂ ಸಹ ಯಾರೂ ತಿಳಿದಿಲ್ಲ. ಇಡೀ ಲಂಕೆಯ ಮೇಲೆ ರಾವಣನ ರಾಜ್ಯವಿತ್ತು. ಶಾಸ್ತ್ರಗಳಲ್ಲಿ ಭಕ್ತಿಮಾರ್ಗದಲ್ಲಿ ಎಷ್ಟೊಂದು ದಂತಕಥೆಗಳನ್ನು ಬರೆದಿದ್ದಾರೆ, ಅದನ್ನು ಜನ್ಮ-ಜನ್ಮಾಂತರದಿಂದ ಓದಿದ್ದೀರಿ. ಈಗ ಹೇಳುತ್ತಾರೆ- ಶಾಸ್ತ್ರಗಳನ್ನಂತು ಅವಶ್ಯವಾಗಿ ಓದಬೇಕು ಎಂದು. ಯಾರು ಓದುವುದಿಲ್ಲ ಅವರಿಗೆ ನಾಸ್ತಿಕರೆಂದು ಹೇಳಲಾಗುತ್ತದೆ ಮತ್ತು ತಂದೆಯು ತಿಳಿಸುತ್ತಾರೆ- ಶಾಸ್ತ್ರಗಳನ್ನು ಓದುತ್ತಾ-ಓದುತ್ತಾ ಎಲ್ಲರೂ ನಾಸ್ತಿಕರಾಗಿ ಬಿಟ್ಟಿದ್ದಾರೆ. ಈ ಮಾತುಗಳನ್ನು ಮಕ್ಕಳಿಗೆ ಚೆನ್ನಾಗಿ ತಿಳಿಸಬೇಕು- ಭಾರತವು ಯಾವಾಗ ಸತೋಪ್ರಧಾನವಿತ್ತು ಆಗ ಅದನ್ನು ಸ್ವರ್ಗವೆಂದು ಹೇಳಲಾಗುತ್ತಿತ್ತು. ಅದೇ ಭಾರತವಾಸಿಗಳು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಪತಿತ-ತಮೋಪ್ರಧಾನರಾದರು. ಈಗ ಮತ್ತೆ ಪಾವನರಾಗುವುದು ಹೇಗೆ! ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿದ್ದೇ ಆದರೆ ಸತೋಪ್ರಧಾನ ಪಾವನರಾಗಿ ಬಿಡುತ್ತೀರಿ, ಮತ್ತ್ಯಾವುದೇ ದೇಹಧಾರಿಯನ್ನು ನೆನಪು ಮಾಡಬೇಡಿ. ಯಾರನ್ನೂ ಗುರುಗಳನ್ನಾಗಿ ಮಾಡಿಕೊಳ್ಳಬೇಡಿ. ಹೇಳಲಾಗುತ್ತದೆ- ಗುರುವಿಲ್ಲದೆ ಘೋರ ಅಂಧಕಾರ. ಬಹಳಷ್ಟು ಮಂದಿ ಗುರುಗಳಿದ್ದಾರೆ ಆದರೆ ಎಲ್ಲರೂ ಅಂಧಕಾರದಲ್ಲಿ ಕರೆದುಕೊಂಡು ಹೋಗುವವರಾಗಿದ್ದಾರೆ. ತಂದೆಯು ತಿಳಿಸುತ್ತಾರೆ- ಯಾವಾಗ ಜ್ಞಾನಸೂರ್ಯನು ಬರುವನು ಆಗ ಘೋರ ಅಂಧಕಾರವು ದೂರವಾಗುವುದು. ಭಲೆ ಸನ್ಯಾಸಿಗಳು ಪಾವನರಾಗುತ್ತಾರೆ ಆದರೆ ಜನ್ಮವಂತು ವಿಕಾರದಿಂದಲೇ ತೆಗೆದುಕೊಳ್ಳುತ್ತಾರಲ್ಲವೆ. ದೇವಿ-ದೇವತೆಗಳಂತು ವಿಕಾರದಿಂದ ಜನಿಸುವುದಿಲ್ಲ. ಇಲ್ಲಿ ಎಲ್ಲರ ಶರೀರ ಕೊಳಕಾಗಿದೆ. ತಂದೆಯು ಈ ರೀತಿ ಕೊಳಕಾಗಿರುವ ವಸ್ತ್ರಗಳನ್ನು ಸ್ವಚ್ಛ ಮಾಡುತ್ತಾರೆ. ಆತ್ಮವು ಪವಿತ್ರವಾಯಿತೆಂದರೆ ಶರೀರವು ಚೆನ್ನಾಗಿರುವುದು ಸಿಗುತ್ತದೆ. ಇದಕ್ಕಾಗಿ ಪುರುಷಾರ್ಥ ಮಾಡಬೇಕಾಗಿದೆ. ತಮ್ಮ ಪರಿಶೀಲನೆಯನ್ನು ಇಡಬೇಕು- ನನ್ನಿಂದ ಯಾವುದೇ ಕೆಟ್ಟ ಕೆಲಸವಂತು ಆಗುತ್ತಿಲ್ಲವೇ. ಈಶ್ವರೀಯ ಕಾಯಿದೆಯು ಕಠಿಣವಾಗಿದೆ. ಯಾವುದೇ ಕೆಟ್ಟ ಕೆಲಸ ಮಾಡುತ್ತೀರೆಂದರೆ ಅದರ ಶಿಕ್ಷೆಯು ಬಹಳ ಕಠಿಣವಾಗಿದೆ. ಈಗ ಅಂತಿಮ ಸಮಯವಾಗಿದೆ, ಎಲ್ಲಾ ಲೆಕ್ಕಾಚಾರಗಳನ್ನು ಯೋಗಬಲದಿಂದ ಸಮಾಪ್ತಿ ಮಾಡಬೇಕಾಗಿದೆ. ಒಂದುವೇಳೆ ಸಮಾಪ್ತಿ ಮಾಡಲಿಲ್ಲವೆಂದರೆ ತುಂಡು ರೊಟ್ಟಿ (ಚಿಕ್ಕ ಪದವಿ) ಯನ್ನು ತಿನ್ನಬೇಕಾಗುತ್ತದೆ. ನಂತರ ಮಾನಿ ಮತ್ತು ಮೋಚ್ರಾ (ಶಿಕ್ಷೆಯನ್ನು ಅನುಭವಿಸಿ ಮತ್ತೆ ಪದವಿ ಭ್ರಷ್ಟವಾಗುವುದು) ಎಂದು ಹೇಳಲಾಗುತ್ತದೆ. ಮಾನಿ(ತುಂಡು ರೊಟ್ಟಿ)ಯಂತು ಎಲ್ಲರಿಗೂ ಸಿಗುತ್ತದೆ. ಮುಕ್ತಿ ಮತ್ತು ಜೀವನ್ಮುಕ್ತಿಯ ರೊಟ್ಟಿಯಂತು ಎಲ್ಲರಿಗೂ ಕೊಡುತ್ತಾರೆ. ಕೆಲವರು ಪಾಸ್-ವಿತ್-ಆನರ್, ಕೆಲವರಿಗೆ ಶಿಕ್ಷೆ ಸಿಗುತ್ತದೆ ನಂತರ ಅಪಮಾನದಿಂದ ಸ್ವಲ್ಪ ತುಂಡು ರೊಟ್ಟಿ ಸಿಗುತ್ತದೆ. ಸಿಂಹಾಸನದಲ್ಲಂತು ಕುಳಿತುಕೊಳ್ಳಲು ಸಾಧ್ಯವಿಲ್ಲ. ಯಾವುದೇ ಕೆಟ್ಟ ಕೆಲಸ ಮಾಡಿದರೆಂದರೆ ಅಪಮಾನವಾಗುತ್ತದೆ, ಅದೂ ತಂದೆಯ ಮುಂದೆ. ಶಿವ ತಂದೆಯು ಕುಳಿತಿದ್ದಾರಲ್ಲವೆ. ನಿಮಗೆ ಸಾಕ್ಷಾತ್ಕಾರ ಮಾಡಿಸುತ್ತೇವೆ- ನಾವು ಇದರಲ್ಲಿದ್ದೆವು, ನಿಮಗೆ ಎಷ್ಟೊಂದು ತಿಳಿಸುತ್ತಿದ್ದೆವು. ಈಗ ನಾನು ಸಂಪೂರ್ಣ(ಬ್ರಹ್ಮ)ನಲ್ಲಿ ಇದ್ದೇನೆ. ನೀವು ಮಕ್ಕಳು ಸಂಪೂರ್ಣ ತಂದೆಯ ಬಳಿ ಹೋಗುತ್ತೀರಿ. ಅವರ ಮೂಲಕ ಶಿವ ತಂದೆಯು ಡೈರೆಕ್ಷನ್ ಮುಂತಾದುದನ್ನು ಕೊಡುತ್ತಾರಲ್ಲವೆ. ತಂದೆಯು ನಿಮಗೆ ಸಾಕ್ಷಾತ್ಕಾರ ಮಾಡಿಸುತ್ತಾರೆ – ದೈವೀ ಗುಣಗಳನ್ನು ಧಾರಣೆ ಮಾಡಿ ಸೇವೆ ಮಾಡಿ, ಯಾರದೇ ನಿಂದನೆಯನ್ನು ಮಾಡಬೇಡಿ ಎಂದು ಇವರಲ್ಲಿ ಕುಳಿತು ನಿಮಗೆ ಎಷ್ಟು ಓದಿಸುತ್ತಿದ್ದೆವು, ತಿಳಿಸುತ್ತಿದ್ದೆವು, ಆದರೂ ನೀವು ಇದೇ ಕೆಲಸ ಮಾಡಿದಿರಿ, ಈಗ ಶಿಕ್ಷೆಯನ್ನು ಅನುಭವಿಸಿ. ಎಷ್ಟೆಷ್ಟು ಪಾಪ ಮಾಡಿರುತ್ತೀರಿ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಕೆಲವರು ಬಹಳ ಶಿಕ್ಷೆಯನ್ನು ಅನುಭವಿಸುತ್ತಾರೆ, ಕೆಲವರು ಕಡಿಮೆ. ಅವರಲ್ಲಿಯೂ ನಂಬರ್ವಾರ್, ಎಷ್ಟು ಸಾಧ್ಯವೊ ಯೋಗಬಲದಿಂದ ವಿಕರ್ಮಗಳನ್ನು ತುಂಡರಿಸುತ್ತಿರಬೇಕು. ಮಕ್ಕಳು ಎಲ್ಲದಕ್ಕಿಂತ ದೊಡ್ಡ ಚಿಂತೆ ಇದನ್ನೇ ಇಟ್ಟುಕೊಳ್ಳಬೇಕು- ನಾವು ಹೇಗೆ ಸಂಪೂರ್ಣ ಅಪ್ಪಟ ಚಿನ್ನವಾಗುವುದು? ಏಳುತ್ತಾ-ಕುಳಿತುಕೊಳ್ಳುತ್ತಾ ಇದೇ ಬುದ್ಧಿಯಲ್ಲಿರಲಿ, ಎಷ್ಟು ನೆನಪು ಮಾಡುತ್ತೀರಿ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಮಾಯೆಯ ಬಿರುಗಾಳಿಗಳ ಚಿಂತೆ ಮಾಡಬಾರದು, ಎಷ್ಟು ಸಮಯ ಸಿಗುತ್ತದೆಯೋ ತಂದೆಯನ್ನು ನೆನಪು ಮಾಡಬೇಕಾಗಿದೆ. ನಾನು ತಮೋಪ್ರಧಾನದಿಂದ ಸತೋಪ್ರಧಾನನಾಗಬೇಕಾಗಿದೆ ಎಂದು. ತಂದೆಯನ್ನು ನೆನಪು ಮಾಡುತ್ತೀರೆಂದರೆ ಪಾಪಗಳು ತುಂಡಾಗುತ್ತವೆ. ಯಾವುದೇ ಪಾಪ ಮಾಡಬಾರದು. ಇಲ್ಲವೆಂದರೆ ನೂರು ಪಟ್ಟಾಗುವುದು. ಕ್ಷಮೆ ಕೇಳಲಿಲ್ಲವೆಂದರೆ ನಂತರ ವೃದ್ಧಿಯಾಗುತ್ತಾ-ಆಗುತ್ತಾ ಸತ್ಯನಾಶವಾಗಿ ಬಿಡುತ್ತದೆ. ಮಾಯೆಯು ಪಾಪದ ಹಿಂದೆ ಪಾಪವನ್ನು ಮಾಡಿಸುತ್ತಿರುತ್ತದೆ. ಬೇಹದ್ದಿನ ತಂದೆಯೊಂದಿಗೆ ಅವಿನಯಿಗಳಾಗಿ ಬಿಡುತ್ತೀರಿ. ಇದೂ ಸಹ ಅನೇಕರಿಗೆ ಗೊತ್ತಾಗುವುದಿಲ್ಲ. ತಂದೆಯು ಸದಾ ತಿಳಿಸುತ್ತಾರೆ- ಶಿವ ತಂದೆಯು ಮುರುಳಿಯನ್ನು ನುಡಿಸುತ್ತಿದ್ದಾರೆ ಎಂದು ತಿಳಿಯಿರಿ. ಶಿವ ತಂದೆಯು ಡೈರೆಕ್ಷನ್ ಕೊಡುತ್ತಿದ್ದಾರೆಂದರೆ ನೆನಪೂ ಸಹ ಇರಲಿ, ಭಯವೂ ಇರಲಿ. ಬಹಳ ಪಾಪ ಮಾಡುತ್ತಿರುತ್ತೀರಿ, ಸತ್ಯವನ್ನು ತಿಳಿಸಬೇಕು – ಬಾಬಾ ನಮ್ಮಿಂದ ಈ ತಪ್ಪಾಯಿತು. ತಂದೆಯು ತಿಳಿಸುತ್ತಾರೆ – ಪಾಪಗಳ ಹೊರೆಯು ತಲೆಯ ಮೇಲೆ ಬಹಳ ಇದೆ. ಏನೆಲ್ಲಾ ಮಾಡಿದಿರಿ ಅದನ್ನು ತಿಳಿಸಿ. ಸತ್ಯವನ್ನು ತಿಳಿಸುವುದರಿಂದ ಅರ್ಧ ಕಡಿಮೆಯಾಗಿ ಬಿಡುತ್ತದೆ.

ತಂದೆಯು ತಿಳಿಸುತ್ತಾರೆ- ಯಾರು ನಂಬರ್ವನ್ ಪುಣ್ಯಾತ್ಮನಾಗುತ್ತಾರೆ, ನಂತರ ಅವರೇ ಪಾಪತ್ಮನೂ ಸಹ ನಂಬರ್ವನ್ನಲ್ಲಿ ಆಗುತ್ತಾರೆ. ಬಾಬಾ ಸ್ವಯಂ ಹೇಳುತ್ತಾರೆ- ನಿಮ್ಮ ಬಹಳ ಜನ್ಮಗಳಲ್ಲಿಯೂ ಅಂತಿಮ ಜನ್ಮವಾಗಿದೆ. ನೀವು ಪುಣ್ಯಾತ್ಮನಾಗಿದ್ದಿರಿ, ಈಗ ಪಾಪಾತ್ಮನಾಗಿದ್ದೀರಿ ನಂತರ ಪುಣ್ಯಾತ್ಮನಾಗಬೇಕಾಗಿದೆ. ತನ್ನ ಕಲ್ಯಾಣವನ್ನಂತು ಮಾಡಿಕೊಳ್ಳಬೇಕಾಗಿದೆ. ಇಲ್ಲಿ ನೀವು ತಲೆ ಮುಂತಾದನ್ನು ಬಾಗಿಸುವ ಅವಶ್ಯಕತೆಯಿಲ್ಲ, ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ಭಲೆ ಇವರೂ (ಬ್ರಹ್ಮ) ವೃದ್ಧನಾಗಿದ್ದಾರೆ, ನಮಸ್ತೆ ಮಾಡುತ್ತಾರೆ. ಮನೆಯಲ್ಲಿ ಮಕ್ಕಳು ಗಳಿಗೆ-ಗಳಿಗೆ ನಮಸ್ತೆ ಮಾಡುತ್ತಾರೆಯೇ! ಒಂದು ಬಾರಿ ನಮಸ್ತೆ ಮಾಡಿದರು ನಂತರ ಪ್ರತ್ಯುತ್ತರದಲ್ಲಿಯೂ ಮಾಡಲಾಗುತ್ತದೆ. ತಂದೆಯು ತಿಳಿಸುತ್ತಾರೆ- ನೀವು ನನ್ನನ್ನು ದೊಡ್ಡವರೆಂದು ತಿಳಿದು ನಮಸ್ತೆ ಮಾಡುತ್ತೀರಿ, ಮತ್ತೆ ನಾನು ನಿಮ್ಮನ್ನು ವಿಶ್ವದ ಮಾಲೀಕರೆಂದು ತಿಳಿದು ನಮಸ್ತೆ ಮಾಡುತ್ತೇನೆ. ಅರ್ಥವಿದೆಯಲ್ಲವೆ. ಮನುಷ್ಯರಂತು ರಾಮ-ರಾಮ ಎಂದು ಹೇಳಿ ಬಿಡುತ್ತಾರೆ ಆದರೆ ಅರ್ಥವನ್ನೇನೂ ತಿಳಿಯುವುದಿಲ್ಲ. ವಾಸ್ತವದಲ್ಲಿ ರಾಮ ಎಂದರೆ ಶಿವ ತಂದೆ. ರಾಮ ಆ ರಘುಪತಿ ಅಲ್ಲ, ಈ ರಾಮ ನಿರಾಕಾರನಾಗಿದ್ದಾರೆ. ಅವರ ಹೆಸರು ಶಿವ ತಂದೆ ಎಂದಾಗಿದೆ. ಶಿವನ ಮುಂದೆ ಈ ರೀತಿ ಯಾರೂ ಹೇಳುವುದಿಲ್ಲ- ನಾನು ರಾಮನ ಪೂಜೆಯನ್ನು ಮಾಡುತ್ತೇನೆ. ಈಗ ತಂದೆಯು ತಿಳಿಸುತ್ತಾರೆ- ನೀವು ಮಂದಿರಗಳಲ್ಲಿ ಹೋಗಿ ತಿಳಿಸಿ, ಇವರೂ ಸಹ ಮನುಷ್ಯನಾಗಿದ್ದರು. ನೀವು ಇವರ ಮುಂದೆ ಹೋಗಿ ಮಹಿಮೆ ಹಾಡುತ್ತೀರಿ- ತಾವು ನಿರ್ವಿಕಾರಿ, ಸರ್ವಗುಣ ಸಂಪನ್ನ, ನಾವು ಪಾಪಿ-ನೀಚರಾಗಿದ್ದೇವೆ. ಈ ತನುವೂ ಸಹ ಮನುಷ್ಯನದಾಗಿದೆ ಮತ್ತು ಆ ತನುವೂ ಸಹ ಮನುಷ್ಯನದಾಗಿದೆ ಆದರೆ ಅವರಲ್ಲಿ ದೈವೀ ಗುಣಗಳಿದೆ ಆದ್ದರಿಂದ ದೇವತೆಯಾಗಿದ್ದಾರೆ. ನೀವು ಸ್ವಯಂ ಹೇಳುತ್ತೀರಿ- ನಮ್ಮಲ್ಲಿ ಆಸುರೀ ಗುಣಗಳಿವೆ ಆದ್ದರಿಂದ ಮಂಗನಾಗಿದ್ದೇವೆ. ಚಹರೆಯಂತು ಇಬ್ಬರದೂ ಒಂದೇ ಆಗಿದೆ. ಲಕ್ಷಣದಲ್ಲಿ ವ್ಯತ್ಯಾಸವಿದೆ. ಭಾರತವಾಸಿಗಳೇ ಕಿರೀಟಧಾರಿಯಾಗಿದ್ದರು, ಈಗ ನೋ ತಾಜ್(ಕಿರೀಟವಿಲ್ಲ), ಬಡವರೂ ಸಹ ಭಾರತವಾಸಿಗಳೇ ಆಗಿದ್ದಾರೆ. ತಂದೆಯು ಸಹ ಭಾರತದಲ್ಲಿಯೇ ಬರುತ್ತಾರೆ, ಎಲ್ಲಿ ಸ್ವರ್ಗವಾಗಬೇಕಾಗಿದೆ ಅಲ್ಲಿ ತಂದೆಯು ಬರುತ್ತಾರಲ್ಲವೆ. ಕಳಿಂಗನ ಅವತಾರವೆಂದು ಹೇಳಲಾಗುತ್ತದೆ, ಎಷ್ಟು ಕಳಂಕಗಳನ್ನು ಹಾಕಲಾಗಿದೆ. ಒಂದುವೇಳೆ ಅನ್ಯ ಧರ್ಮದವರಿಗೆ ಸ್ವಲ್ಪ ತಿಳಿದರೆ ಅವರೂ ಸಹ ಭಾರತವಾಸಿಗಳನ್ನು ಫಾಲೋ ಮಾಡುತ್ತಾರೆ. ಕಲ್ಲು ಬುದ್ಧಿಯವರಾಗಿರುವ ಕಾರಣ ನನ್ನನ್ನೂ ಕಲ್ಲು-ಮಣ್ಣಿನಲ್ಲಿ ಇದ್ದಾರೆಂದು ಹೇಳಿ ಬಿಡುತ್ತಾರೆ. ತಂದೆಯನ್ನು ತಿಳಿದೇ ಇಲ್ಲ- ತಂದೆಯು ಇವರಲ್ಲಿ ಪ್ರವೇಶ ಮಾಡಿ ಭಾರತವನ್ನು ಎಂತಹ ಕಿರೀಟಧಾರಿಯನ್ನಾಗಿ ಮಾಡುತ್ತಾರೆ. ಭಾರತದ ಸೇವೆಯನ್ನು ಎಷ್ಟೊಂದು ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ- ನೀವು ನನ್ನ ಗ್ಲಾನಿ ಮಾಡುತ್ತೀರಿ, ನಾನು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ. ನೀವು ಎಷ್ಟೊಂದು ಅಪಕಾರ ಮಾಡುತ್ತೀರಿ, ರಾವಣನು ನಿಮ್ಮ ಮತವನ್ನು ಸಾಯಿಸಿ ಬಿಟ್ಟಿದ್ದಾನೆ. ಕೆಟ್ಟ ಗತಿಯಾಗಿ ಬಿಟ್ಟಿದೆ, ಆದ್ದರಿಂದ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ತಿಳುವಳಿಕೆ ಎಷ್ಟು ಸಹಜವಾಗಿ ಸಿಗುತ್ತಿದೆ ಆದರೂ ಕೆಲವು ಮಕ್ಕಳು ಮರೆತು ಹೋಗುತ್ತಾರೆ. ಯೋಗವಿಲ್ಲವೆಂದರೆ ಧಾರಣೆಯೂ ಆಗುವುದಿಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ- ಬಂಧನದಲ್ಲಿ ಇರುವವರು ಎಲ್ಲರಿಗಿಂತ ಹೆಚ್ಚು ನೆನಪು ಮಾಡುತ್ತಾರೆ. ಶಿವ ತಂದೆಯ ನೆನಪಿನಲ್ಲಿ ಸಹನೆಯನ್ನೂ ಮಾಡುತ್ತಾರೆ. ಭಾರತವಾಸಿಗಳಲ್ಲಿ ಯಾರು ದೇವಿ-ದೇವತೆಗಳು ಆಗುವಂತಹವರಿದ್ದಾರೆ ಅವರೇ ಇಲ್ಲಿಗೆ ಬರುತ್ತಾರೆ. ಆರ್ಯ ಸಮಾಜಿಗಳಂತು ದೇವತೆಗಳ ಮೂರ್ತಿಗಳನ್ನು ಒಪ್ಪುವುದೇ ಇಲ್ಲ. ವೃಕ್ಷದ ಅಂತ್ಯದಲ್ಲಿ ರೆಂಬೆಯಿದೆ, ಹೆಚ್ಚೆಂದರೆ 2-3 ಜನ್ಮಗಳೂ ಸಹ ವಿರಳವಾಗಿ ಪಡೆಯುತ್ತಾರೆ.

ಬಹಳ ಮಂದಿ ತಿಳಿಯುತ್ತಾರೆ – ವಿಕಾರವಿಲ್ಲದೆ ಪ್ರಪಂಚವು ಹೇಗೆ ನಡೆಯುವುದು. ಅರೆ! ದೇವತೆಗಳನ್ನು ಸಂಪೂರ್ಣ ನಿರ್ವಿಕಾರಿ ಎಂದು ಹೇಳಲಾಗುತ್ತದೆ ಅಲ್ಲವೆ. ಇದೂ ಸಹ ಯಾರಿಗೂ ತಿಳಿದಿಲ್ಲ- ಅಲ್ಲಿ ವಿಕಾರವಿರುವುದೇ ಇಲ್ಲ ಎಂದು. ಕಲ್ಪದ ಮೊದಲಿನವರು ತಕ್ಷಣ ತಿಳಿದು ಬಿಡುತ್ತಾರೆ. ಗಾಯನವೂ ಇದೆ, ಭಗವಾನುವಾಚ- ಕಾಮ ಮಹಾಶತ್ರುವಾಗಿದೆ. ಆದರೆ ಭಗವಂತನು ಯಾವಾಗ ಹೇಳಿದ್ದರು ಎಂಬುದು ಯಾರೂ ತಿಳಿದಿಲ್ಲ. ಈಗ ನೀವು ಮಕ್ಕಳು ಜಗತ್ಜೀತ್ ಆಗುತ್ತಿದ್ದೀರಿ ಆದರೆ ಶ್ರೇಷ್ಠ ಪದವಿಯನ್ನು ಪಡೆಯಲು ಪರಿಶ್ರಮ ಪಡಬೇಕಾಗಿದೆ. ತಂದೆಯು ತಿಳಿಸುತ್ತಾರೆ- ಗೃಹಸ್ಥ ವ್ಯವಹಾರದಲ್ಲಿರುತ್ತಾ ಕೇವಲ ಬುದ್ಧಿಯೋಗವನ್ನು ನನ್ನೊಂದಿಗೆ ತೊಡಗಿಸಿ. ಯಾವಾಗ ತಂದೆಯ ಮಕ್ಕಳಾಗಿ ಬಿಟ್ಟಿರಿ ಅಂದಮೇಲೆ ತಂದೆಯೊಂದಿಗೆ ಪ್ರೀತಿಯುಂಟಾಗಬೇಕು. ಉಳಿದಂತೆ ಅನ್ಯರ ಜೊತೆ ಕಾರ್ಯವನ್ನು ಮಾಡಿಸಲು ಪ್ರೀತಿಯನ್ನು ಇಡಬೇಕು. ಬುದ್ಧಿಯಲ್ಲಿ ಈ ವಿಚಾರವನ್ನು ಇಟ್ಟುಕೊಳ್ಳಬೇಕು- ಪಾಪ ಇವರನ್ನು ಸ್ವರ್ಗವಾಸಿಯನ್ನಾಗಿ ಹೇಗೆ ಮಾಡುವುದು. ಸತ್ಯ ಯಾತ್ರೆಯಲ್ಲಿ ನಡೆಯುವ ಯುಕ್ತಿಯನ್ನು ತಿಳಿಸಿ. ಅದು ಶಾರೀರಿಕ ಯಾತ್ರೆಯಾಗಿದೆ, ಅದನ್ನು ಜನ್ಮ-ಜನ್ಮಾಂತರದಿಂದ ಮಾಡುತ್ತಾ ಬಂದಿದ್ದೀರಿ. ಇದೊಂದೇ ನೆನಪಿನ ಯಾತ್ರೆಯಾಗಿದೆ. ಈಗ ನಮ್ಮ 84 ಜನ್ಮಗಳ ಪೂರ್ಣವಾಯಿತು ಮತ್ತೆ ಸತ್ಯಯುಗದ ಇತಿಹಾಸವು ಪುನರಾವರ್ತನೆಯಾಗುವುದು. ಪತಿತರಂತು ಮನೆ(ಪರಮಧಾಮ)ಗೆ ಹೋಗಲು ಸಾಧ್ಯವಿಲ್ಲ. ಪಾವನರನ್ನಾಗಿ ಮಾಡಲು ಪತಿತ-ಪಾವನ ತಂದೆಯು ಬೇಕಾಗಿದೆ. ಭಲೆ ಸನ್ಯಾಸಿಗಳು ಪಾವನರಾಗುತ್ತಾರೆ ಆದರೆ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಎಲ್ಲರನ್ನು ಕರೆದುಕೊಂಡು ಹೋಗುವವರು ತಂದೆಯೇ ಆಗಿದ್ದಾರೆ. ತಂದೆಯು ಬಂದು ಎಲ್ಲರನ್ನು ರಾವಣನಿಂದ ಬಿಡಿಸಿ ಮುಕ್ತ ಮಾಡಿ ಬಿಡುತ್ತಾರೆ. ಸತ್ಯಯುಗದಲ್ಲಿ ದುಃಖ ಕೊಡುವಂತಹ ಯಾವುದೇ ವಸ್ತುವಿರುವುದಿಲ್ಲ. ಹೆಸರೇ ಸುಖಧಾಮವಾಗಿದೆ. ಇದಾಗಿದೆ ದುಃಖಧಾಮ. ಅದು ಕ್ಷೀರಸಾಗರ, ಇದು ವಿಷದ ಸಾಗರ ಆಗಿದೆ.

ಈಗ ನೀವು ತಿಳಿದಿದ್ದೀರಿ – ಸ್ವರ್ಗದಲ್ಲಿ ಎಷ್ಟು ಸುಖದಿಂದ ವಿಶ್ರಾಂತಿಯಿಂದ ಇರುತ್ತೀರಿ. ಕ್ಷೀರ ಸಾಗರದಿಂದ ಹೊರಬಂದು ವಿಷದ ಸಾಗರದಲ್ಲಿ ಹೇಗೆ ಬರುತ್ತಾರೆ, ಇದು ಯಾರೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ- ಶ್ರೀಮತದಂತೆ ನಡೆಯಬೇಕು ನಂತರ ಅವರು ಜವಾಬ್ದಾರನಾಗಿದ್ದಾರೆ. ಶ್ರೀಮತವು ಹೇಳುತ್ತದೆ- ಭಲೆ ಹೋಗಿ, ಮಕ್ಕಳನ್ನು ಸಂಭಾಲನೆ ಮಾಡಿ. ಅವರಿಗೆ ಜ್ಞಾನದ ಧ್ವನಿ ಮಾಡುತ್ತೀರೆಂದರೆ ಸ್ವಲ್ಪವಾದರೂ ಕಲ್ಯಾಣವಾಗಿ ಬಿಡುತ್ತದೆ. ಸ್ವರ್ಗದಲ್ಲಂತು ಬಂದು ಬಿಡುತ್ತಾರೆ. ತಂದೆಯು ಬಂದು ನರಕವಾಸಿಗಳಿಂದ ಸ್ವರ್ಗವಾಸಿಯನ್ನಾಗಿ 21 ಜನ್ಮಗಳಿಗಾಗಿ ಮಾಡುತ್ತಾರೆ. ಇದೂ ಸಹ ನಿಮ್ಮ ಬುದ್ಧಿಯಲ್ಲಿದೆ. ಮನುಷ್ಯರಂತು ಏನನ್ನೂ ತಿಳಿದುಕೊಂಡಿಲ್ಲ. ಇದೂ ಸಹ ಮೊದಲು ತಿಳಿದಿರಲಿಲ್ಲ – ಹೇಗೆ ಇವರ 84 ಜನ್ಮಗಳ ಕಥೆಯಾಗಿದೆ – “ತತ್ತ್ವಂ” ಇವರೂ ಸಹ ರಾಜಯೋಗ ಕಲಿಯುತ್ತಿದ್ದಾರೆ. ನೀವು ರಾಜಋಷಿಯಾಗಿದ್ದೀರಿ. ಅವರು ಹಠಯೋಗಿ ಋಷಿಗಳಾಗಿದ್ದಾರೆ. ನೀವು ಗೃಹಸ್ಥ ವ್ಯವಹಾರದಲ್ಲಿದ್ದು ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿದ್ದೀರಿ. ನೀವೆಲ್ಲರೂ ಶರಣಾಗತಿಯಾಗಲು ಬಂದಿದ್ದೀರಲ್ಲವೆ. ಈಗ ನಾವು ಸ್ವರ್ಗದಲ್ಲಿ ಕುಳಿತಿದ್ದೇವೆಂದು ತಿಳಿಯುತ್ತೀರಿ. ಪ್ರಪಂಚದಲ್ಲಿ ಮಾಯೆಯ ಆಡಂಬರವಿದೆ. ಎಲ್ಲಿಯವರೆಗೆ ನರಕದ ವಿನಾಶವಾಗುವುದಿಲ್ಲ ಅಲ್ಲಿಯವರೆಗೆ ಸ್ವರ್ಗವಾಗಲು ಹೇಗೆ ಸಾಧ್ಯ! ಮಾಯಾವೀ ಮನುಷ್ಯರು ಇದಕ್ಕೇ ಸ್ವರ್ಗವೆಂದು ತಿಳಿದು ಕುಳಿತಿದ್ದಾರೆ. ಹೊಸ ಪ್ರಪಂಚವನ್ನು ಸ್ಥಾಪನೆ ಮಾಡಲು ತಂದೆಗೆ ಎಷ್ಟೊಂದು ಪರಿಶ್ರಮವೆನಿಸುತ್ತದೆ. ಪೂರ್ಣ ನರಕವಾಸಿಯಾಗಿದ್ದಾರೆ. ಸ್ವರ್ಗವಾಸಿಗಳಾಗುವುದೇ ಇಲ. ತಂದೆಯು ಎಷ್ಟೊಂದು ಪ್ರೀತಿಯಿಂದ ತಿಳಿಸುತ್ತಾರೆ. ಒಳ್ಳೆಯದು- ಮಧುರಾತಿ ಮಧುರ ಮಕ್ಕಳು ರಾವಣನ ಮೇಲೆ ವಿಜಯವನ್ನು ಪಡೆಯುವುದರಿಂದಲೇ ನೀವು ಜಗತ್ಜೀತರಾಗುವಿದಿ. ಅದಕ್ಕಾಗಿ ಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಮರ್ಯಾದೆ ಹೋಗುವ ರೀತಿ ಯಾವುದೇ ಕಾರ್ಯವನ್ನು ಮಾಡಬೇಡಿ. ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆ. ಮಾಯೆಯ ಬಿರುಗಾಳಿಯನ್ನು ಲೆಕ್ಕಿಸದೇ, ಎಷ್ಟು ಸಮಯ ಸಿಗುತ್ತದೋ ಅಷ್ಟು ಸಮಯ ತಂದೆಯನ್ನು ನೆನಪು ಮಾಡಬೇಕಾಗಿದೆ.

2. ತಮ್ಮ ಶ್ರೇಷ್ಠ ಗತಿಯನ್ನು ಮಾಡಿಕೊಳ್ಳಲು ಸತ್ಯ ತಂದೆಯ ಜೊತೆ ಸತ್ಯವಾಗಿರಬೇಕು. ಯಾವುದೇ ಮಾತನ್ನು ಮುಚ್ಚಿಡಬಾರದು.

ವರದಾನ:-

ತಾವು ಮಕ್ಕಳು ಸರ್ವಶಕ್ತಿವಂತನ ಸರ್ಕಾರದ ಸಂದೇಶವಾಹಕರು ಆಗಿದ್ದೀರಿ ಆದ್ದರಿಂದ ಯಾರೊಂದಿಗೇ ವಿಚಾರ ವಿಮರ್ಷೆ ಮಾಡುವುದರಲ್ಲಿ ತಮ್ಮ ಮನಸ್ಸನ್ನು ಬೇಸರ ಮಾಡಿಕೊಳ್ಳಬರದು. ನೆನಪಿನ ಮಂತ್ರವನ್ನು ಉಪಯೋಗ ಮಾಡಿಕೊಳ್ಳಬೇಕು. ಹೇಗೆ ಯಾರಾದರೂ ವಾಣಿಯಿಂದ ಅಥವಾ ಅನ್ಯ ಯಾವುದೇ ವಿಧಿಯಿಂದ ವಶರಾಗುವುದಿಲ್ಲವೆಂದರೆ ರಿದ್ಧಿ-ಸಿದ್ಧಿಯನ್ನು ಮಾಡುತ್ತಾರೆ, ತಮ್ಮ ಬಳಿ ಆತ್ಮಿಕ ದೃಷ್ಟಿಯ ನೇತ್ರ ಮತ್ತು ಮನ್ಮನಾಭವದ ಮಂತ್ರವಿದೆ, ಅದರಿಂದ ತಮ್ಮ ಸಂಕಲ್ಪಗಳನ್ನು ಸಿದ್ಧಗೊಳಿಸುತ್ತಾ ಸಿದ್ಧಿ ಸ್ವರೂಪರಾಗಲು ಸಾಧ್ಯ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top