29 May 2021 KANNADA Murli Today – Brahma Kumaris

May 28, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಹೇಗೆ ತಂದೆಯು ಪ್ರೀತಿಯ ಸಾಗರನಾಗಿದ್ದಾರೆ, ಅವರಷ್ಟು ಪ್ರೀತಿಯನ್ನು ಪ್ರಪಂಚದಲ್ಲಿ ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ, ಹಾಗೆ ನೀವು ಮಕ್ಕಳೂ ಸಹ ತಂದೆಯ ಸಮಾನರಾಗಿ, ಯಾರಿಗೂ ಬೇಸರ ಪಡಿಸಬೇಡಿ”

ಪ್ರಶ್ನೆ:: -

ತಂದೆಯು ತನ್ನ ಮಕ್ಕಳಿಗೆ ಯಾವ ಶಬ್ಧಗಳಲ್ಲಿ ಶಿಕ್ಷಣ ನೀಡುತ್ತಾರೆ, ಶಾಪವಲ್ಲ?

ಉತ್ತರ:-

ಮಧುರ ಮಕ್ಕಳೇ, ಎಂದೂ ಯಾರಿಗೂ ದುಃಖ ಕೊಡಬೇಡಿ, ದುಃಖ ಕೊಟ್ಟರೆ ದುಃಖಿಯಾಗಿಯೇ ಸಾಯುವಿರಿ, ಇದು ಶಿಕ್ಷಣವಾಗಿದೆ ಶಾಪವಲ್ಲ ಏಕೆಂದರೆ ನೀವು ಸುಖದಾತನ ಮಕ್ಕಳಾಗಿದ್ದೀರಿ ಅಂದಮೇಲೆ ನೀವು ಎಲ್ಲರಿಗೂ ಸುಖವನ್ನು ಕೊಡಬೇಕಾಗಿದೆ. ಎಷ್ಟೆಷ್ಟು ನೀವು ಎಲ್ಲರಿಗೆ ಸುಖ ಕೊಡುವಿರೋ ಅಷ್ಟು ಸದಾ ಸುಖಿಯಾಗಿರುತ್ತೀರಿ. ಯಾವ ಮಕ್ಕಳು ಸರ್ವೀಸ್ ಮಾಡುವರೋ ಅವರಿಗೆ ಸುಖದ ಆಸ್ತಿಯು ಸಿಗುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಮಕ್ಕಳು ತಂದೆಯ ನೆನಪಿನಲ್ಲಿ ಕುಳಿತಿದ್ದೀರಿ, ಇದು ಶ್ರೀಮತ ಅರ್ಥಾತ್ ಶ್ರೇಷ್ಠಾತಿ ಶ್ರೇಷ್ಠ ಮತ ಸಿಗುತ್ತಿದೆ, ನೆನಪಿನ ಯಾತ್ರೆಯು ಬಹಳ ಮಧುರವಾಗಿದೆ. ಮಕ್ಕಳು ನಂಬರ್ವಾರ್ ಪುರುಷಾರ್ಥದ ಅನುಸಾರ ತಿಳಿದುಕೊಂಡಿದ್ದೀರಿ – ಎಷ್ಟು ತಂದೆಯನ್ನು ನೆನಪು ಮಾಡುತ್ತೀರೋ ಅಷ್ಟು ತಂದೆಯು ಪ್ರಿಯರೆನಿಸುವರು. ತಂದೆಯು ಸ್ಯಾಕ್ರೀನ್ ಅಲ್ಲವೆ. ಒಬ್ಬ ತಂದೆಯೇ ಪ್ರೀತಿ ಮಾಡುತ್ತಾರೆ ಉಳಿದೆಲ್ಲರೂ ಪೆಟ್ಟನ್ನೇ ಕೊಡುತ್ತಾರೆ. ಪ್ರಪಂಚದವರೆಲ್ಲರೂ ಒಬ್ಬರು ಇನ್ನೊಬ್ಬರನ್ನು ತಿರಸ್ಕರಿಸುತ್ತಾರೆ, ತಂದೆಯು ಪ್ರೀತಿ ಮಾಡುತ್ತಾರೆ. ಅವರನ್ನು ಕೇವಲ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ತಂದೆಯು ತಿಳಿಸುತ್ತಾರೆ – ನಾನು ಯಾರಾಗಿದ್ದೇನೆ, ಹೇಗಿದ್ದೇನೆ, ಎಷ್ಟು ದೊಡ್ಡವನಾಗಿದ್ದೇನೆ, ತಿಳಿಸಿ – ನಮ್ಮ ತಂದೆಯು ಎಷ್ಟು ದೊಡ್ಡವರಾಗಿದ್ದಾರೆ? ಆಗ ಬಿಂದುವಾಗಿದ್ದಾರೆಂದು ಹೇಳುತ್ತಾರೆ ಮತ್ತ್ಯಾರೂ ಅರಿತುಕೊಂಡಿಲ್ಲ. ಮಕ್ಕಳೂ ಸಹ ಪದೇ-ಪದೇ ಮರೆತು ಹೋಗುತ್ತೀರಿ. ಭಕ್ತಿಮಾರ್ಗದಲ್ಲಂತೂ ದೊಡ್ಡ-ದೊಡ್ಡ ಚಿತ್ರಗಳ ಪೂಜೆಯನ್ನು ಮಾಡುತ್ತಿದ್ದೆವು. ಈಗ ಬಿಂದುವನ್ನು ಹೇಗೆ ನೆನಪು ಮಾಡುವುದು ಎಂದು ಹೇಳುತ್ತಾರೆ. ಬಿಂದುವು ಬಿಂದುವನ್ನೇ ನೆನಪು ಮಾಡುವುದಲ್ಲವೆ. ಆತ್ಮಕ್ಕೆ ತಿಳಿದಿದೆ – ನಾನು ಬಿಂದುವಾಗಿದ್ದೇನೆ. ನಮ್ಮ ತಂದೆಯೂ ಬಿಂದುವಾಗಿದ್ದಾರೆ. ಆತ್ಮವೇ ರಾಷ್ಟ್ರಪತಿ, ಆತ್ಮವೇ ನೌಕರನಾಗುತ್ತದೆ. ಆತ್ಮವೇ ಪಾತ್ರವನ್ನು ಅಭಿನಯಿಸುತ್ತದೆ. ತಂದೆಯು ಎಲ್ಲರಿಗಿಂತ ಮಧುರರಾಗಿದ್ದಾರೆ. ಹೇ ಪತಿತ-ಪಾವನ, ದುಃಖಹರ್ತ-ಸುಖಕರ್ತ ಬನ್ನಿ ಎಂದು ಎಲ್ಲರೂ ನೆನಪು ಮಾಡುತ್ತಾರೆ. ಈಗ ನೀವು ಮಕ್ಕಳಿಗೆ ಈ ನಿಶ್ಚಯವಿದೆ – ನಾವು ಯಾರನ್ನು ಬಿಂದುವೆಂದು ಹೇಳುತ್ತೇವೆಯೋ ಅವರು ಬಹಳ ಸೂಕ್ಷ್ಮವಾಗಿದ್ದಾರೆ, ಮಹಿಮೆಯು ಎಷ್ಟು ಭಾರಿಯಾಗಿದೆ! ಭಲೆ ಜ್ಞಾನ ಸಾಗರ, ಶಾಂತಿಯ ಸಾಗರನೆಂದು ಮಹಿಮೆಯನ್ನು ಹಾಡುತ್ತಾರೆ ಆದರೆ ಅವರು ಹೇಗೆ ಬಂದು ಸುಖವನ್ನು ಕೊಡುತ್ತಾರೆ ಎಂಬುದನ್ನು ತಿಳಿದುಕೊಂಡಿಲ್ಲ. ಮಧುರಾತಿ ಮಧುರ ಮಕ್ಕಳು ಪ್ರತಿಯೊಬ್ಬರೂ ಇದನ್ನು ತಿಳಿದುಕೊಳ್ಳಬಹುದು – ಯಾರು ಯಾರು ಶ್ರೀಮತದಂತೆ ನಡೆಯುತ್ತಾರೆ! ಸರ್ವೀಸ್ ಮಾಡುವ ಶ್ರೀಮತವು ಸಿಗುತ್ತದೆ. ಅನೇಕ ಮನುಷ್ಯರು ರೋಗಿಗಳಾಗಿದ್ದಾರೆ, ಇನ್ನೂ ಅನೇಕರು ಆರೋಗ್ಯವಂತರೂ ಆಗಿದ್ದಾರೆ. ಭಾರತವಾಸಿಗಳಿಗೆ ತಿಳಿದಿದೆ – ಸತ್ಯಯುಗದಲ್ಲಿ ಬಹಳ ಧೀರ್ಘಾಯಸ್ಸು ಅಂದರೆ 125-150 ವರ್ಷಗಳಿರುತ್ತಿತ್ತು. ಪ್ರತಿಯೊಬ್ಬರೂ ತಮ್ಮ ಆಯಸ್ಸು ಮುಗಿಯುವವರೆಗೂ ಇರುತ್ತಾರೆ, ಈಗಂತೂ ಸಂಪೂರ್ಣ ಛೀ ಛೀ ಪ್ರಪಂಚವಾಗಿದೆ, ಇನ್ನು ಸ್ವಲ್ಪವೇ ಸಮಯವಿದೆ. ಮನುಷ್ಯರು ಇಲ್ಲಿಯವರೆಗೆ ದೊಡ್ಡ-ದೊಡ್ಡ ಧರ್ಮಶಾಲೆಗಳನ್ನು ಕಟ್ಟಿಸುತ್ತಿರುತ್ತಾರೆ. ಇವು ಇನ್ನೆಷ್ಟು ಸಮಯ ಇರುವುದೆಂದು ತಿಳಿದುಕೊಂಡಿಲ್ಲ, ಮಂದಿರಗಳನ್ನು ಕಟ್ಟಿಸುತ್ತಾರೆ, ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಅದರ ಆಯಸ್ಸು ಇನ್ನೆಷ್ಟು ಸಮಯ ಇರಬಹುದು? ನೀವು ತಿಳಿದುಕೊಂಡಿದ್ದೀರಿ – ಇವು ಬಿದ್ದಿತೆಂದರೆ ಬಿದ್ದಿತು. ನಿಮಗೆ ಮನೆ ಕಟ್ಟಿಸುವುದಕ್ಕಾಗಿ ತಂದೆಯು ಎಂದೂ ನಿರಾಕರಿಸುವುದಿಲ್ಲ. ನೀವು ತಮ್ಮದೇ ಮನೆಯಲ್ಲಿ ಒಂದು ಕೋಣೆಯಲ್ಲಿ ಆಸ್ಪತ್ರೆ ಹಾಗೂ ಯುನಿವರ್ಸಿಟಿ (ಸೇವಾಕೇಂದ್ರ) ಯನ್ನು ತೆರೆಯಿರಿ. ಯಾವುದೇ ಖರ್ಚಿಲ್ಲದೆ ಈ ಜ್ಞಾನದಿಂದ ಆರೋಗ್ಯ, ಐಶ್ವರ್ಯ, ಸಂತೋಷವನ್ನು 21 ಜನ್ಮಗಳಿಗೆ ತೆಗೆದುಕೊಳ್ಳಬೇಕಾಗಿದೆ. ಇದನ್ನೂ ಸಹ ತಿಳಿಸಿದ್ದೇವೆ – ನಿಮಗೆ ಬಹಳ ಸುಖ ಸಿಗುತ್ತದೆ. ಯಾವಾಗ ತಮೋಪ್ರಧಾನರಾಗುವಿರೋ ಆಗಿನಿಂದ ದುಃಖವು ಹೆಚ್ಚಾಗುತ್ತದೆ, ಎಷ್ಟೆಷ್ಟು ತಮೋಪ್ರಧಾನರಾಗುವಿರೋ ಅಷ್ಟು ಪ್ರಪಂಚದಲ್ಲಿ ದುಃಖ, ಅಶಾಂತಿಯು ಹೆಚ್ಚಾಗುತ್ತಾ ಹೋಗುವುದು. ಮನುಷ್ಯರು ಬಹಳ ದುಃಖಿಯಾಗುತ್ತಾರೆ ನಂತರ ಜಯ ಜಯಕಾರವಾಗುತ್ತದೆ. ನೀವು ಮಕ್ಕಳು ಯಾವ ವಿನಾಶವನ್ನು ದಿವ್ಯ ದೃಷ್ಟಿಯಿಂದ ನೋಡುತ್ತೀರೋ ಅದನ್ನು ಪ್ರತ್ಯಕ್ಷದಲ್ಲಿ ನೋಡುವಿರಿ. ಅನೇಕರು ಸ್ಥಾಪನೆಯ ಸಾಕ್ಷಾತ್ಕಾರವನ್ನೂ ನೋಡಿದ್ದಾರೆ. ಚಿಕ್ಕ ಕನ್ಯೆಯರು ಬಹಳ ಸಾಕ್ಷಾತ್ಕಾರ ನೋಡುತ್ತಿದ್ದರು. ಜ್ಞಾನವೇನೂ ಇರಲಿಲ್ಲ. ಹಳೆಯ ಪ್ರಪಂಚದ ವಿನಾಶವು ಖಂಡಿತ ಆಗುವುದಿದೆ, ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ತಂದೆಯೇ ಬಂದು ಸ್ವರ್ಗದ ಆಸ್ತಿಯನ್ನು ಕೊಡುತ್ತಾರೆ. ಆದರೆ ಮಕ್ಕಳು ಶ್ರೇಷ್ಠ ಪದವಿಯನ್ನೇ ಪಡೆಯುವ ಪುರುಷಾರ್ಥ ಮಾಡಬೇಕಾಗಿದೆ. ನೀವು ಮಕ್ಕಳಿಗೆ ತಂದೆಯು ಕುಳಿತು ಇವೆಲ್ಲಾ ಮಾತುಗಳನ್ನು ತಿಳಿಸುತ್ತಾರೆ. ಇನ್ನು ಸ್ವಲ್ಪವೇ ಸಮಯವಿದೆ ಎಂದು ಮನುಷ್ಯರಿಗೆ ಗೊತ್ತಿದೆಯೇ! ತಂದೆಯು ತಿಳಿಸುತ್ತಾರೆ – ನಾನು ದಾತನಾಗಿದ್ದೇನೆ, ನಿಮಗೆ ನೀಡಲು ಬಂದಿದ್ದೇನೆ. ಮನುಷ್ಯರು ಹೇಳುತ್ತಾರೆ – ಪತಿತ-ಪಾವನ ಬನ್ನಿ, ಬಂದು ನಮ್ಮನ್ನು ಪಾವನ ಮಾಡಿರಿ.

ಮೊದಲು ನೀವು ಎಷ್ಟು ಬುದ್ಧಿವಂತರಾಗಿದ್ದಿರಿ, ಸತೋಪ್ರಧಾನರಾಗಿದ್ದಿರಿ, ಈಗಂತೂ ತಮೋಪ್ರಧಾನರಾಗಿ ಬಿಟ್ಟಿದ್ದೀರಿ ಎಂದು ತಂದೆಯು ತಿಳಿಸುತ್ತಾರೆ. ನಿಮ್ಮ ಬುದ್ಧಿಯಲ್ಲಿಯೂ ಈಗ ಬಂದಿದೆ, ನಾವೇ ವಿಶ್ವದ ಮೇಲೆ ರಾಜ್ಯ ಮಾಡುತ್ತಿದ್ದೆವು ಎಂಬುದು ಮೊದಲು ತಿಳಿದಿರಲಿಲ್ಲ. ನೀವೇ ಆಗಿದ್ದಿರಿ, ಪುನಃ ಅವಶ್ಯವಾಗಿ ಆಗುತ್ತೀರಿ. ಚರಿತ್ರೆ-ಭೂಗೋಳವು ಪುನರಾವರ್ತನೆಯಾಗುವುದು. ತಂದೆಯು ತಿಳಿಸುತ್ತಾರೆ – 5000 ವರ್ಷಗಳ ಮೊದಲು ನಾನು ಬಂದಿದ್ದೆನು, ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಿದ್ದೆನು ನಂತರ ನೀವು 84 ಜನ್ಮಗಳ ಏಣಿಯನ್ನು ಇಳಿಯುತ್ತೀರಿ. ಈ ವಿಸ್ತಾರವು ಯಾವುದೇ ಶಾಸ್ತ್ರದಲ್ಲಿಲ್ಲ. ಶಿವ ತಂದೆಯು ಯಾವುದೇ ಶಾಸ್ತ್ರಗಳನ್ನು ಓದಿದ್ದಾರೆಯೇ? ಅವರಿಗಂತೂ ಜ್ಞಾನದ ಅಥಾರಿಟಿಯೆಂದು ಹೇಳಲಾಗುತ್ತದೆ. ಆ ಮನುಷ್ಯರೂ ಸಹ ಶಾಸ್ತ್ರಗಳನ್ನು ಓದಿ ಶಾಸ್ತ್ರಗಳ ಅಥಾರಿಟಿಯಾಗಿದ್ದಾರೆ. ಪತಿತ-ಪಾವನ ಬನ್ನಿ ಎಂದು ಅವರೇ ಹಾಡುತ್ತಾರೆ. ಗಂಗಾ ಸ್ನಾನ ಮಾಡಲು ಹೋಗುತ್ತಾರೆ. ವಾಸ್ತವದಲ್ಲಿ ಈ ಭಕ್ತಿಯಿರುವುದು ಗೃಹಸ್ಥಿಗಳಿಗಾಗಿ. ತಂದೆಯು ತಿಳಿಸುತ್ತಾರೆ, ಸದ್ಗತಿದಾತನು ಯಾರೆಂಬುದು ಅವರಿಗೂ ತಿಳಿದಿಲ್ಲ. ತಂದೆಯು ತಿಳಿಸುತ್ತಾರೆ – ಹೇ ಪತಿತ-ಪಾವನ ಬನ್ನಿ ಎಂದು ನೀವು ನನ್ನನ್ನು ಕರೆಯುತ್ತೀರಿ. ನಾನು ನಿಮ್ಮನ್ನು ಪಾವನರನ್ನಾಗಿ ಮಾಡುತ್ತೇನೆ. ನಾನು ನಿಮಗೆ ಓದಿಸುವುದಕ್ಕಾಗಿ ಬರುತ್ತೇನೆ. ನೀವು ನಮ್ಮ ಮೇಲೆ ಕೃಪೆ ತೋರಿ ಎಂದು ಹೇಳುವುದಲ್ಲ. ನಾನಂತೂ ಶಿಕ್ಷಕನಾಗಿದ್ದೇನೆ ಅಂದಮೇಲೆ ಕೃಪೆಯನ್ನೇಕೆ ಬೇಡುತ್ತೀರಿ! ಆಶೀರ್ವಾದವನ್ನಂತೂ ಅನೇಕ ಜನ್ಮಗಳಿಂದ ತೆಗೆದುಕೊಳ್ಳುತ್ತಾ ಬಂದಿದ್ದೀರಿ. ಈಗ ಬಂದು ತಂದೆ-ತಾಯಿಯ ಸಂಪತ್ತಿಗೆ ಮಾಲೀಕರಾಗಿ. ಆಶೀರ್ವಾದವನ್ನೇನು ಮಾಡುವುದು! ಮಗುವಿನ ಜನ್ಮವಾಯಿತೆಂದರೆ ತಂದೆಯ ಪೂರ್ಣ ಸಂಪತ್ತಿಗೆ ಮಾಲೀಕನಾಯಿತು. ಲೌಕಿಕ ತಂದೆಗೆ ಕೃಪೆ ತೋರಿ ಎಂದು ಹೇಳುತ್ತಾರೆ, ಇಲ್ಲಿ ಕೃಪೆಯ ಮಾತಿಲ್ಲ. ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ಇದೂ ಸಹ ಯಾರಿಗೂ ತಿಳಿದಿಲ್ಲ – ತಂದೆಯು ಬಿಂದುವಾಗಿದ್ದಾರೆ, ಈಗ ನಿಮಗೆ ತಂದೆಯು ತಿಳಿಸಿದ್ದಾರೆ, ಪರಮಪಿತ ಪರಮಾತ್ಮ, ಗಾಡ್ಫಾದರ್, ಸುಪ್ರೀಂಸೌಲ್ ಎಂದು ಎಲ್ಲರೂ ಹೇಳುತ್ತಾರೆ ಅಂದಮೇಲೆ ಪರಮ ಆತ್ಮನಾದರಲ್ಲವೆ. ಅವರು ಪರಮ ಅರ್ಥಾತ್ ಶ್ರೇಷ್ಠನಾಗಿದ್ದಾರೆ ಉಳಿದೆಲ್ಲರೂ ಆತ್ಮರಾಗಿದ್ದೀರಿ. ಪರಮಾತ್ಮ ತಂದೆಯೇ ಬಂದು ತಮ್ಮ ಸಮಾನರನ್ನಾಗಿ ಮಾಡುತ್ತಾರೆ, ಮತ್ತೇನೂ ಇಲ್ಲ. ಬೇಹದ್ದಿನ ತಂದೆಯು ಸ್ವರ್ಗದ ರಚಯಿತನೇ ಬಂದು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆಂದು ಮತ್ತ್ಯಾರ ಬುದ್ಧಿಯಲ್ಲಾದರೂ ಇರುತ್ತದೆಯೇ? ನೀವೀಗ ತಿಳಿದುಕೊಂಡಿದ್ದೀರಿ, ಕೃಷ್ಣನ ಕೈಯಲ್ಲಿ ಸ್ವರ್ಗದ ಗೋಲವಿದೆ, ಗರ್ಭದಿಂದ ಮಗುವು ಹೊರ ಬರುತ್ತದೆ, ಆಗಿನಿಂದ ಆಯಸ್ಸು ಆರಂಭವಾಗುತ್ತದೆ. ಶ್ರೀಕೃಷ್ಣನು ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾನೆ. ಗರ್ಭದಿಂದ ಹೊರಬಂದರೆ ಆ ದಿನದಿಂದ 84 ಜನ್ಮಗಳೆಂದು ಎಣಿಕೆಯಾಗುತ್ತದೆ. ಲಕ್ಷ್ಮೀ-ನಾರಾಯಣರಿಗಂತೂ ದೊಡ್ಡವರಾಗುವುದರಲ್ಲಿ 30-35 ವರ್ಷಗಳು ಹಿಡಿಸಿತಲ್ಲವೆ. ಅಂದಾಗ ಆ 30-35 ವರ್ಷಗಳನ್ನು 5000 ವರ್ಷಗಳಲ್ಲಿ ಕಡಿಮೆ ಮಾಡಬೇಕಾಗಿದೆ. ಶಿವ ತಂದೆಯದಂತೂ ಎಣಿಕೆ ಮಾಡಲು ಸಾಧ್ಯವಿಲ್ಲ. ಶಿವ ತಂದೆಯು ಯಾವಾಗ ಬಂದರು ಎಂದು ಸಮಯವನ್ನು ಹೇಳಲು ಸಾಧ್ಯವಿಲ್ಲ. ಆರಂಭದಿಂದ ಸಾಕ್ಷಾತ್ಕಾರವಾಗುತ್ತಿತ್ತು, ಮುಸಲ್ಮಾನರೂ ಸಹ ಸೂಕ್ಷ್ಮವತನದಲ್ಲಿ ಹೋಗಿ ಉದ್ಯಾನವನ ಇತ್ಯಾದಿಗಳನ್ನು ನೋಡುತ್ತಿದ್ದರು. ಈ ನೌಧಾಭಕ್ತಿಯನ್ನಂತೂ ಯಾರೂ ಮಾಡಲಿಲ್ಲ. ಮನೆಯಲ್ಲಿ ಕುಳಿತಿದ್ದಂತೆಯೇ ತಾವೇ ಧ್ಯಾನದಲ್ಲಿ ಹೋಗುತ್ತಿದ್ದರು, ಆ ಮನುಷ್ಯರಂತೂ ಎಷ್ಟೊಂದು ನೌಧಾ ಭಕ್ತಿ ಮಾಡುತ್ತಾರೆ. ಆದ್ದರಿಂದ ತಂದೆಯು ಸನ್ಮುಖದಲ್ಲಿ ಕುಳಿತು ತಿಳಿಸುತ್ತಾರೆ – ತಂದೆಯು ದೂರ ದೇಶದಿಂದ ಬಂದಿದ್ದಾರೆ, ಇದನ್ನು ಮಕ್ಕಳು ತಿಳಿದುಕೊಂಡಿದ್ದೀರಿ. ಇವರಲ್ಲಿ ತಂದೆಯು ಪ್ರವೇಶ ಮಾಡಿ ನಮಗೆ ಓದಿಸುತ್ತಾರೆ ಆದರೆ ಹೊರಗಡೆ ಹೋಗುತ್ತಿದ್ದಂತೆಯೇ ನಶೆಯು ಕಡಿಮೆಯಾಗಿ ಬಿಡುತ್ತದೆ. ನೆನಪಿದ್ದಾಗ ಖುಷಿಯ ನಶೆಯೇ ಏರಿರುವುದು ಮತ್ತು ಕರ್ಮಾತೀತ ಸ್ಥಿತಿಯಾಗುವುದು ಆದರೆ ಅದರಲ್ಲಿ ಸಮಯ ಬೇಕು. ಈಗ ನೋಡಿ, ಶ್ರೀಕೃಷ್ಣನ ಆತ್ಮಕ್ಕೆ ಅಂತಿಮ ಜನ್ಮದಲ್ಲಿ ಸಂಪೂರ್ಣ ಜ್ಞಾನವಿದೆ, ಮತ್ತೆ ಗರ್ಭದಿಂದ ಹೊರ ಬಂದ ಮೇಲೆ ಒಂದು ಪೈಸೆಯಷ್ಟೂ ಜ್ಞಾನವಿರುವುದಿಲ್ಲ. ತಂದೆಯು ಬಂದು ತಿಳಿಸುತ್ತಾರೆ – ಕೃಷ್ಣನು ಮುರುಳಿಯನ್ನು ನುಡಿಸಲಿಲ್ಲ, ಕೃಷ್ಣನಂತೂ ಜ್ಞಾನವನ್ನೇ ತಿಳಿದುಕೊಂಡಿಲ್ಲ. ಲಕ್ಷ್ಮೀ-ನಾರಾಯಣರೇ ತಿಳಿದುಕೊಂಡಿಲ್ಲವೆಂದಮೇಲೆ ಮತ್ತೆ ಋಷಿ-ಮುನಿ, ಸಾಧು-ಸನ್ಯಾಸಿಗಳು ಹೇಗೆ ತಿಳಿದುಕೊಳ್ಳುವರು! ವಿಶ್ವದ ಮಾಲೀಕರಾದ ಲಕ್ಷ್ಮೀ-ನಾರಾಯಣರೇ ಅರಿತುಕೊಂಡಿಲ್ಲ ಅಂದಮೇಲೆ ಈ ಸನ್ಯಾಸಿಗಳು ಏನು ಅರಿತುಕೊಳ್ಳುವರು! ಸಾಗರದಲ್ಲಿ ಆಲದ ಎಲೆಯ ಮೇಲೆ ತೇಲಿ ಬಂದನು, ಇದನ್ನು ಮಾಡಿದನು…. ಇವೆಲ್ಲವೂ ಕಥೆಗಳಾಗಿವೆ, ಮನುಷ್ಯರು ಕುಳಿತು ಬರೆದಿದ್ದಾರೆ. ಗಂಗಾ ನದಿಯಲ್ಲಿ ಹೆಜ್ಜೆಯಿಟ್ಟ ಕೂಡಲೇ ಗಂಗೆಯು ಕೆಳಗಡೆ ಹೊರಟು ಹೋಯಿತು ಎಂದು ಹೇಳುತ್ತಾರೆ ಅಂದಮೇಲೆ ವಿಚಾರ ಮಾಡಿ – ಮನುಷ್ಯರು ಯಾವ ಮಾತುಗಳನ್ನು ತಾನೇ ಬರೆಯಲು ಸಾಧ್ಯವಿಲ್ಲ! ಈಗ ತಂದೆಯು ತಿಳಿಸುತ್ತಾರೆ – ಯಾವುದೇ ಉಲ್ಟಾ ಸುಲ್ಟಾ ಮಾತುಗಳ ಮೇಲೆ ವಿಶ್ವಾಸವನ್ನಿಡಬೇಡಿ. ಮನುಷ್ಯರು ಎಷ್ಟೊಂದು ಶಾಸ್ತ್ರಗಳನ್ನು ಓದುತ್ತಾರೆ, ಈಗ ತಂದೆಯು ತಿಳಿಸುತ್ತಾರೆ – ಓದಿರುವುದೆಲ್ಲವನ್ನೂ ಮರೆತು ಹೋಗಿ, ಈ ದೇಹವನ್ನೂ ಮರೆತುಬಿಡಿ. ಆತ್ಮವೇ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸುತ್ತದೆ. ಭಿನ್ನ-ಭಿನ್ನ ನಾಮ-ರೂಪ, ದೇಶ, ವಸ್ತ್ರಗಳನ್ನು ಧರಿಸುತ್ತದೆ. ಈಗ ತಂದೆಯು ತಿಳಿಸುತ್ತಾರೆ – ಇದು ಛೀ ಛೀ ವಸ್ತ್ರವಾಗಿದೆ. ಆತ್ಮ ಮತ್ತು ಶರೀರವು ಎರಡೂ ಪತಿತವಾಗಿದೆ. ಆತ್ಮಕ್ಕೆ ಶ್ಯಾಮ ಮತ್ತು ಸುಂದರ ಎಂದು ಹೇಳಲಾಗುತ್ತದೆ. ಆತ್ಮವು ಪವಿತ್ರವಾಗಿತ್ತು, ಆಗ ಸುಂದರವಾಗಿತ್ತು, ನಂತರ ಕಾಮ ಚಿತೆಯ ಮೇಲೆ ಕುಳಿತುಕೊಳ್ಳುವುದರಿಂದ ಕಪ್ಪಾಗಿದೆ. ಈಗ ಪುನಃ ತಂದೆಯು ಜ್ಞಾನ ಚಿತೆಯ ಮೇಲೆ ಕೂರಿಸುತ್ತಾರೆ. ಪತಿತ-ಪಾವನ ತಂದೆಯು ತಿಳಿಸುತ್ತಾರೆ – ಮಕ್ಕಳೇ, ನನ್ನನ್ನು ನೆನಪು ಮಾಡಿರಿ ಆಗಲೇ ಈ ತುಕ್ಕು ಹೊರಟು ಹೋಗುವುದು. ಆತ್ಮದಲ್ಲಿಯೇ ತುಕ್ಕು ಬೀಳುತ್ತದೆ. ಕಲಿಯುಗದ ಅಂತ್ಯದಲ್ಲಿ ನೀವು ಬಡವರಾಗಿದ್ದೀರಿ. ಅಲ್ಲಿ ಸತ್ಯಯುಗದಲ್ಲಿ ನೀವು ಚಿನ್ನದ ಮಹಲುಗಳನ್ನು ಕಟ್ಟಿಸುತ್ತೀರಿ. ಅದ್ಭುತವೇನೆಂದರೆ ಇಲ್ಲಿ ವಜ್ರಗಳ ಬೆಲೆ ನೋಡಿ ಎಷ್ಟೊಂದಿದೆ! ಅಲ್ಲಂತೂ ವಜ್ರಗಳು ಕಲ್ಲುಗಳಂತಿರುತ್ತವೆ, ನೀವೀಗ ತಂದೆಯಿಂದ ಜ್ಞಾನರತ್ನಗಳ ಜೋಳಿಗೆಯನ್ನು ತುಂಬಿಸಿಕೊಳ್ಳುತ್ತಿದ್ದೀರಿ. ಸಾಗರದಿಂದ ರತ್ನಗಳ ತಟ್ಟೆಗಳನ್ನು ತುಂಬಿಸಿ ತೆಗೆದುಕೊಂಡು ಬರುತ್ತಾರೆ ಎಂದು ಬರೆಯಲ್ಪಟ್ಟಿದೆ. ಸಾಗರದಿಂದ ಎಷ್ಟು ಬೇಕೋ ಅಷ್ಟನ್ನು ತೆಗೆದುಕೊಳ್ಳಿ, ಗಣಿಗಳೇ ಸಂಪನ್ನವಾಗಿ ಬಿಡುತ್ತವೆ. ನೀವು ಸಾಕ್ಷಾತ್ಕಾರ ಮಾಡಿದ್ದೀರಿ, ಮಾಯಾ ಮಚ್ಛಂದರ್ನ ಆಟವನ್ನು ತೋರಿಸುತ್ತಾರೆ. ಅವನು ಚಿನ್ನದ ಇಟ್ಟಿಗೆಯು ಬಿದ್ದಿರುವುದನ್ನು ನೋಡಿ ತೆಗೆದುಕೊಂಡು ಹೋಗೋಣವೆಂದು ತಿಳಿದುಕೊಂಡನು, ಕೆಳಗೆ ಬಂದಾಗ ಏನೂ ಇರಲಿಲ್ಲ. ಸತ್ಯಯುಗದಲ್ಲಿ ಚಿನ್ನದ ಇಟ್ಟಿಗೆಗಳಿಂದ ಮಹಲುಗಳನ್ನು ಕಟ್ಟಿಸುತ್ತೀರಿ. ಈ ರೀತಿಯ ವಿಚಾರವು ಬಂದಾಗ ಖುಷಿಯ ನಶೆಯಿರುವುದು. ತಂದೆಯ ಪರಿಚಯ ಕೊಡಬೇಕಾಗಿದೆ, ಶಿವ ತಂದೆಯು 5000 ವರ್ಷಗಳ ಮೊದಲೂ ಸಹ ಬಂದಿದ್ದರು, ಇದು ಯಾರಿಗೂ ತಿಳಿದಿಲ್ಲ. ನೀವು ತಿಳಿದುಕೊಂಡಿದ್ದೀರಿ – 5000 ವರ್ಷಗಳ ಮೊದಲು ಬಂದು ನಿಮಗೆ ರಾಜಯೋಗವನ್ನು ಕಲಿಸಿದ್ದೆನು, ಕಲ್ಪ-ಕಲ್ಪವೂ ನಿಮಗೇ ಕಲಿಸುತ್ತೇನೆ. ಯಾರು-ಯಾರು ಬಂದು ಬ್ರಾಹ್ಮಣರಾಗುವರೋ ಅವರು ಮತ್ತೆ ದೇವತೆಗಳಾಗುವರು. ವಿರಾಟ ರೂಪವನ್ನೂ ತೋರಿಸುತ್ತಾರೆ, ಅದರಲ್ಲಿ ಬ್ರಾಹ್ಮಣರ ಶಿಖೆಯನ್ನು ಮರೆ ಮಾಡಿ ಬಿಟ್ಟಿದ್ದಾರೆ. ಬ್ರಾಹ್ಮಣ ಕುಲವು ಬಹಳ ಉತ್ತಮವೆಂದು ಗಾಯನವಿದೆ, ಅವರು ದೈಹಿಕ ಬ್ರಾಹ್ಮಣರಾಗಿದ್ದಾರೆ, ನೀವು ಆತ್ಮಿಕ ಬ್ರಾಹ್ಮಣರಾಗಿದ್ದೀರಿ. ಸತ್ಯ-ಸತ್ಯವಾದ ಕಥೆಯನ್ನು ತಿಳಿಸುತ್ತೀರಿ. ಇದೇ ಸತ್ಯ ನಾರಾಯಣನ ಕಥೆ, ಅಮರ ಕಥೆಯಾಗಿದೆ. ನಿಮಗೆ ಅಮರ ಕಥೆಯನ್ನು ತಿಳಿಸಿ ಅಮರರನ್ನಾಗಿ ಮಾಡುತ್ತಿದ್ದಾರೆ. ಈ ಮೃತ್ಯುಲೋಕವು ಸಮಾಪ್ತಿಯಾಗಲಿದೆ. ನಾನು ನಿಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದೇನೆಂದು ಶಿವ ತಂದೆಯು ತಿಳಿಸುತ್ತಾರೆ. ಎಷ್ಟೊಂದು ಆತ್ಮರಿರಬಹುದು, ಆತ್ಮಕ್ಕೆ ತಿಳಿದಿದೆ – ಯಾವುದೇ ಶಬ್ಧ ಆಗುವುದಿಲ್ಲ, ಜೇನುನೊಣಗಳ ಹಿಂಡು ಹೋಗುವಾಗ ಎಷ್ಟು ಶಬ್ಧವಾಗುತ್ತದೆ! ರಾಣಿ ನೊಣದ ಹಿಂದೆ ಉಳಿದೆಲ್ಲವೂ ಓಡುತ್ತವೆ. ಪರಸ್ಪರ ಎಷ್ಟೊಂದು ಏಕತೆಯಿರುತ್ತದೆ! ಭ್ರಮರಿಯ ಉದಾಹರಣೆಯೂ ಸಹ ಇಲ್ಲಿಯದೇ ಆಗಿದೆ. ನೀವು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತೀರಿ, ಪತಿತರಿಗೆ ನೀವು ಜ್ಞಾನದ ಭೂ ಭೂ ಮಾಡುತ್ತೀರಿ ಆಗ ಅವರು ಪಾವನ ವಿಶ್ವದ ಮಾಲೀಕರಾಗಿ ಬಿಡುತ್ತಾರೆ. ನಿಮ್ಮದು ಪ್ರವೃತ್ತಿ ಮಾರ್ಗವಾಗಿದೆ, ಅದರಲ್ಲಿಯೂ ಮೆಜಾರಿಟಿ ಮಾತೆಯರದಾಗಿದೆ ಆದ್ದರಿಂದ ವಂದೇ ಮಾತರಂ ಎಂದು ಹೇಳಲಾಗುತ್ತದೆ. ಯಾರು ತಂದೆಯ ಮೂಲಕ 21 ಜನ್ಮಗಳ ಆಸ್ತಿಯನ್ನು ಕೊಡಿಸುವರೋ ಅವರೆ ಬ್ರಹ್ಮಾಕುಮಾರಿಯಾಗಿದ್ದಾರೆ. ತಂದೆಯು ಸದಾ ಸುಖದ ಆಸ್ತಿಯನ್ನು ಕೊಡುತ್ತಾರೆ. ಯಾರು ಸರ್ವೀಸ್ ಮಾಡುವರೋ, ಓದುವರೋ-ಬರೆಯುವರೋ ಅವರು ನವಾಬರಾಗುತ್ತಾರೆ. ರಾಜರಾಗುವುದು ಒಳ್ಳೆಯದೋ ಅಥವಾ ನೌಕರರಾಗುವುದು ಒಳ್ಳೆಯದೋ? ಅಂತಿಮ ಸಮಯದಲ್ಲಿ ನಿಮಗೆ ಎಲ್ಲವೂ ಅರ್ಥವಾಗುವುದು – ನಾವು ಏನಾಗುತ್ತೇವೆ? ಎಂದು. ಆಗ ನಾವು ಶ್ರೀಮತದಂತೆ ಏಕೆ ನಡೆಯಲಿಲ್ಲ ಎಂದು ಬಹಳ ಪಶ್ಚಾತ್ತಾಪ ಪಡುವರು. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಫಾಲೋ ಮಾಡಿ. ಯಾರಾದರೂ ಸೇವಾಕೇಂದ್ರಕ್ಕಾಗಿ ಒಂದು ಕೋಣೆಯನ್ನು ಕೊಟ್ಟು ತಾನು ಮಾತ್ರ ಮಾಂಸ-ಮಧ್ಯಗಳನ್ನು ಸೇವಿಸುತ್ತಾ ಇರುವುದಲ್ಲ. ಒಬ್ಬರು ಪುಣ್ಯಾತ್ಮ, ಇನ್ನೊಬ್ಬರು ಪಾಪಾತ್ಮ ಅಂದಮೇಲೆ ಆ ಆಶ್ರಮವು ಇರುವುದಿಲ್ಲ. ಮನೆಯಲ್ಲಿ ಸ್ವರ್ಗವನ್ನು ಮಾಡುತ್ತೀರೆಂದರೆ ತಾವು ಸ್ವರ್ಗದಲ್ಲಿ ಹೋಗಲು ಯೋಗ್ಯರಾಗಬೇಕಲ್ಲವೆ. ಕೇವಲ ಆಶೀರ್ವಾದದ ಮೇಲೆ ನಿಲ್ಲಬಾರದು. ತಂದೆಯನ್ನು ನೆನಪು ಮಾಡಬೇಕಾಗಿದೆ. ಪವಿತ್ರರನ್ನಾಗಿ ಮಾಡಿಯೇ ಜೊತೆ ಕರೆದುಕೊಂಡು ಹೋಗುತ್ತೇನೆ. ನಿಮಗಂತೂ ಬಹಳ ಖುಷಿಯಿರಬೇಕು, ಎಷ್ಟು ದೊಡ್ಡ ಲಾಟರಿ ಸಿಗುತ್ತದೆ! ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ವಿಕರ್ಮಗಳು ವಿನಾಶವಾಗುತ್ತವೆ. ತಂದೆಯು ಮಾಡುವ ಪ್ರೀತಿಯನ್ನು ಪ್ರಪಂಚದಲ್ಲಿ ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ಅವರಿಗೆ ಪ್ರೀತಿಯ ಸಾಗರನೆಂದೇ ಹೇಳಲಾಗುತ್ತದೆ. ನೀವೂ ಸಹ ಅವರಂತೆಯೇ ಆಗಿ, ಒಂದುವೇಳೆ ಯಾರಿಗಾದರೂ ದುಃಖ ಕೊಟ್ಟರೆ, ಬೇಸರ ಪಡಿಸಿದರೆ ಬೇಸರವಾಗಿಯೇ ಸಾಯುವಿರಿ. ತಂದೆಯು ಈ ರೀತಿ ಶಾಪ ಕೊಡುತ್ತಿಲ್ಲ, ತಿಳಿಸುತ್ತಿದ್ದೇವೆ. ಸುಖ ಕೊಡುತ್ತೀರೆಂದರೆ ಸುಖಿಯಾಗಿರುತ್ತೀರಿ, ಎಲ್ಲರನ್ನೂ ಪ್ರೀತಿ ಮಾಡಿ. ತಂದೆಯೂ ಸಹ ಪ್ರೀತಿಯ ಸಾಗರನಾಗಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಯಾವುದೇ ಉಲ್ಟಾ ಸುಲ್ಟಾ ಮಾತಿನ ಮೇಲೆ ವಿಶ್ವಾಸವನ್ನಿಡಬಾರದು. ಏನೆಲ್ಲವನ್ನೂ ಉಲ್ಟಾ ಓದಿದ್ದೀರೋ ಅದನ್ನು ಮರೆತು ಅಶರೀರಿಯಾಗುವ ಅಭ್ಯಾಸ ಮಾಡಬೇಕಾಗಿದೆ.

2. ಕೇವಲ ಆಶೀರ್ವಾದದ ಮೇಲೆ ನಡೆಯಬಾರದು. ಸ್ವಯಂನ್ನು ಪವಿತ್ರನನ್ನಾಗಿ ಮಾಡಿಕೊಳ್ಳಬೇಕಾಗಿದೆ. ತಂದೆಯನ್ನು ಪ್ರತೀ ಹೆಜ್ಜೆಯಲ್ಲಿ ಫಾಲೋ ಮಾಡಬೇಕಾಗಿದೆ. ಯಾರಿಗೂ ದುಃಖ ಕೊಡಬಾರದು, ಬೇಸರ ಪಡಿಸಬಾರದು.

ವರದಾನ:-

ಸಂಕಲ್ಪಗಳ ಸಿದ್ಧಿಯ ಪ್ರಾಪ್ತಿಯು ಆಗ ಪ್ರಾಪ್ತಿಯಾಗುತ್ತದೆ, ಯಾವಾಗ ಸಮರ್ಥ ಸಂಕಲ್ಪಗಳ ರಚನೆ ಮಾಡುವಿರಿ. ಯಾರು ಅಧಿಕ ಸಂಕಲ್ಪಗಳ ರಚನೆ ಮಾಡುವರು, ಅವರು ಅದನ್ನು ಪಾಲಿಸಲು ಆಗುವುದಿಲ್ಲ. ಆದ್ದರಿಂದ ರಚನೆಯೆಷ್ಟು ಹೆಚ್ಚಾಗುವುದು ಅಷ್ಟು ಶಕ್ತಿಹೀನರಾಗುವರು. ಅಂದಮೇಲೆ ಮೊದಲು ವ್ಯರ್ಥದ ರಚನೆಯನ್ನು ಬಂಧ್ ಮಾಡುತ್ತೀರೆಂದರೆ ಸಫಲತೆಯ ಪ್ರಾಪ್ತಿಯಾಗುವುದು ಮತ್ತು ಕರ್ಮಗಳಲ್ಲಿ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವ ಯುಕ್ತಿಯಾಗಿದೆ – ಕರ್ಮ ಮಾಡುವುದಕ್ಕೆ ಮೊದಲು ಆದಿ-ಮಧ್ಯ ಮತ್ತು ಅಂತ್ಯವನ್ನು ತಿಳಿದುಕೊಂಡ ನಂತರ ಕರ್ಮವನ್ನು ಮಾಡುವುದು. ಇದರಿಂದ ಸಂಪೂರ್ಣ ಮೂರ್ತಿಗಳಾಗುವಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top