29 June 2022 KANNADA Murli Today | Brahma Kumaris

Read and Listen today’s Gyan Murli in Kannada

28 June 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವು ಯಾರೊಂದಿಗೂ ಹೆಚ್ಚಿನ ಚರ್ಚೆಯನ್ನು ಮಾಡಬಾರದಾಗಿದೆ, ಕೇವಲ ಎಲ್ಲರಿಗೆ ತಂದೆಯ ಪರಿಚಯವನ್ನು ಕೊಡಿ”

ಪ್ರಶ್ನೆ:: -

ಬೇಹದ್ದಿನ ತಂದೆಗೆ ಸ್ವಂತ ಮಕ್ಕಳೂ ಇದ್ದಾರೆ ಹಾಗೂ ಮಲತಾಯಿ ಮಕ್ಕಳೂ ಇದ್ದಾರೆ ಅಂದಾಗ ಸ್ವಂತ ಮಕ್ಕಳು ಯಾರು?

ಉತ್ತರ:-

ಸ್ವಂತಮಕ್ಕಳು ತಂದೆಯ ಶ್ರೀಮತದ ಮೇಲೆ ನಡೆಯುತ್ತಾರೆ, ಪವಿತ್ರತೆಯ ಪಕ್ಕಾ ರಾಖಿಯನ್ನು ಕಟ್ಟಿಕೊಂಡಿರುತ್ತಾರೆ. ನಾವು ಬೇಹದ್ದಿನ ಆಸ್ತಿಯನ್ನು ತೆಗೆದುಕೊಂಡೇ ತೀರುತ್ತೇವೆ ಎನ್ನುವ ನಿಶ್ಚಯವಿರುತ್ತದೆ. ಇಂತಹ ನಿಶ್ಚಯಬುದ್ಧಿ ಮಕ್ಕಳು ಸ್ವಂತಮಕ್ಕಳಾಗಿದ್ದಾರೆ ಮತ್ತು ಯಾರು ಮನಮತದ ಮೇಲೆ ನಡೆಯುತ್ತಾರೆ, ಕೆಲವೊಮ್ಮೆ ನಿಶ್ಚಯ, ಇನ್ನೂ ಕೆಲವೊಮ್ಮೆ ಸಂಶಯ, ಪ್ರತಿಜ್ಞೆ ಮಾಡಿಯೂ ಬಿಟ್ಟುಬಿಡುತ್ತಾರೆ, ಇವರು ಮಲತಾಯಿ ಮಕ್ಕಳಾಗಿದ್ದಾರೆ. ತಂದೆಯ ಪ್ರತೀ ಮಾತನ್ನು ಪಾಲಿಸುವುದು ಸುಪುತ್ರ ಮಕ್ಕಳ ಕೆಲಸವಾಗಿದೆ. ತಂದೆಯು ಮೊದಲ ಮತವನ್ನು ಕೊಡುತ್ತಾರೆ- ಮಧುರ ಮಕ್ಕಳೇ, ಈಗ ಪ್ರತಿಜ್ಞೆಯ ಸತ್ಯರಾಖಿಯನ್ನು ಕಟ್ಟಿಕೊಳ್ಳಿ, ವಿಕಾರಿಭಾವನೆಯನ್ನು (ವೃತ್ತಿ) ಸಮಾಪ್ತಿ ಮಾಡಿ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಎದ್ದೇಳಿ ಪ್ರಿಯತಮೆಯರೇ ಎದ್ದೇಳಿ…….

ಓಂ ಶಾಂತಿ. ಮಕ್ಕಳು ಗೀತೆಯ ಅರ್ಥವನ್ನಂತು ತಿಳಿದುಕೊಂಡಿದ್ದೀರಿ. ಹೊಸಸೃಷ್ಟಿ-ಹೊಸಯುಗ ಮತ್ತು ಹಳೆಯ ಸೃಷ್ಟಿ-ಹಳೆಯ ಯುಗ. ಹಳೆಯ ಸೃಷ್ಟಿಯ ನಂತರ ಹೊಸಸೃಷ್ಟಿಯು ಬರುತ್ತದೆ. ಪರಮಪಿತ ಪರಮಾತ್ಮನೇ ಹೊಸಸೃಷ್ಟಿಯ ರಚನೆ ಮಾಡುತ್ತಾರೆ, ಅವರನ್ನು ಈಶ್ವರನೆಂದಾದರೂ ಹೇಳಿ ಅಥವಾ ಪ್ರಭು ಎಂದಾದರೂ ಹೇಳಿ ಅವರ ಹೆಸರನ್ನು ಅವಶ್ಯವಾಗಿ ಹೇಳಬೇಕಾಗಿದೆ. ಕೇವಲ ಪ್ರಭು ಎಂದು ಹೇಳುವುದರಿಂದ ಯೋಗವನ್ನು ಯಾರೊಂದಿಗೆ ಜೋಡಿಸುವುದು, ಯಾರನ್ನು ನೆನಪು ಮಾಡುವುದು? ಮನುಷ್ಯರು ಭಗವಂತನಿಗೆ ಯಾವುದೇ ನಾಮ, ರೂಪ, ದೇಶ, ಕಾಲ ಇಲ್ಲವೆಂದು ಹೇಳಿಬಿಡುತ್ತಾರೆ. ಅರೇ! ಅವರ ಹೆಸರು ಶಿವ ಎಂದು ಭಾರತದಲ್ಲಿ ಪ್ರಸಿದ್ಧವಾಗಿದೆ, ಶಿವರಾತ್ರಿಯನ್ನು ಆಚರಿಸಲಾಗುತ್ತದೆ, ಅವರನ್ನೇ ತಂದೆ ಎಂದು ಹೇಳಲಾಗಿದೆ. ಯಾವಾಗ ತಂದೆಯ ಪರಿಚಯವಾಗುತ್ತದೆ, ಆಗ ತಂದೆಯೊಂದಿಗೆ ಬುದ್ಧಿಯೋಗವು ಜೋಡಿಸಲ್ಪಡುತ್ತದೆ. ಯಾರೊಂದಿಗಾದರೂ ತುಂಬಾ ಚರ್ಚೆ ಮಾಡುವುದೂ ಸಹ ವ್ಯರ್ಥವಾಗಿದೆ. ಮೊಟ್ಟಮೊದಲು ಬೇಹದ್ದಿನ ತಂದೆಯ ಪರಿಚಯವನ್ನು ಕೊಡಬೇಕಾಗಿದೆ. ತಂದೆಯು ಮನುಷ್ಯ ಸೃಷ್ಟಿಯನ್ನು ಹೇಗೆ, ಯಾವಾಗ ಮತ್ತು ಯಾವುದನ್ನು ರಚಿಸುತ್ತಾರೆ. ಲೌಕಿಕತಂದೆಯು ಸತ್ಯಯುಗದಿಂದ ಹಿಡಿದು ಕಲಿಯುಗದ ಅಂತ್ಯದತನಕ ಸಿಗುತ್ತಲೇ ಇರುತ್ತಾರೆ ಆದರೂ ಸಹ ಪಾರಲೌಕಿಕ ತಂದೆಯನ್ನು ನೆನಪು ಮಾಡಲಾಗುತ್ತದೆ. ಅವರೇ ಪರಮಧಾಮದಲ್ಲಿ ಇರುವಂತಹ ತಂದೆಯಾಗಿದ್ದಾರೆ. ಪರಮಧಾಮವನ್ನು ಸ್ವರ್ಗವೆಂದು ಎಂದೂ ತಿಳಿಯಬಾರದು. ಸತ್ಯಯುಗವು ಇಲ್ಲಿಯ ಧಾಮವಾಗಿದೆ. ಇಲ್ಲಿ ಪರಮಪಿತ ಪರಮಾತ್ಮ ಹಾಗೂ ಆತ್ಮಗಳು ನಿವಾಸ ಮಾಡುತ್ತಾರೆ, ಅದೇ ಪರಮಧಾಮವಾಗಿದೆ. ಈಗ ಎಲ್ಲಾ ಆತ್ಮಗಳ ತಂದೆಯು ಸ್ವರ್ಗದ ರಚಯಿತನಾಗಿದ್ದಾರೆಂದರೆ ಮಕ್ಕಳಿಗೆ ಸ್ವರ್ಗದ ರಾಜ್ಯಭಾಗ್ಯ ಏಕಿಲ್ಲ? ಹಾ! ಸ್ವರ್ಗದ ರಾಜ್ಯಭಾಗ್ಯವು ಆವಶ್ಯವಾಗಿ ಸ್ವಲ್ಪ ಸಮಯವಿತ್ತು. ಹೊಸಪ್ರಪಂಚ ಹೊಸಯುಗವಾಗಿತ್ತು. ಈಗ ಹಳೆಯ ಪ್ರಪಂಚ, ಹಳೆಯ ಯುಗವಾಗಿದೆ. ತಂದೆಯಂತು ಸ್ವರ್ಗವನ್ನು ರಚಿಸಿದ್ದರು, ಈಗ ನರಕವಾಗಿಬಿಟ್ಟಿದೆ. ನರಕವನ್ನಾಗಿ ಯಾರು ಮಾಡಿದರು ಮತ್ತು ಯಾವಾಗ? ಮಾಯಾರಾವಣನು ನರಕವನ್ನಾಗಿ ಮಾಡಿದನು. ಭಾರತವಾಸಿಗಳಿಗೆ ಇದರ ತಿಳುವಳಿಕೆಯನ್ನು ಕೊಡುವುದು ಬಹಳ ಸಹಜವಾಗಿದೆ ಏಕೆಂದರೆ ಭಾರತವಾಸಿಗಳೇ ರಾವಣನನ್ನು ಸುಡುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಭಕ್ತರೆಲ್ಲರೂ ಭಗವಂತನನ್ನು ನೆನಪು ಮಾಡುತ್ತಾರೆ ಆದರೆ ಅವರಿಗೆ ತಿಳಿಯದೇ ಇರುವಕಾರಣ ತಂದೆಯನ್ನು ಸರ್ವವ್ಯಾಪಿ, ನಾಮ-ರೂಪದಿಂದ ಭಿನ್ನ, ಬೇಅಂತ್ ಎಂದು ಹೇಳಿಬಿಡುತ್ತಾರೆ. ಅವರು ಮೂಲವನ್ನು ತಿಳಿಯಲಾಗುವುದಿಲ್ಲ ಎಂದೂ ಸಹ ಹೇಳುತ್ತಾರೆ ಆದ್ದರಿಂದ ಎಲ್ಲಾ ಮನುಷ್ಯರು ನಿರಾಶಾವಾದಿಗಳು ಹಾಗೂ ತಣ್ಣಗಾಗಿಬಿಟ್ಟಿದ್ದಾರೆ. ಅವರು ತಣ್ಣಗಾಗಲೇಬೇಕಾಗಿದೆ ಆಗ ತಂದೆಯು ಬರುವ, ಸ್ವರ್ಗ ರಚನೆ ಮಾಡುವ ಸಮಯವು ಬರುತ್ತದೆ. ಈಗ ನಾನು ಪುನಃ ಬಂದಿದ್ದೇನೆ ಎಂದು ತಂದೆಯೇ ಹೇಳುತ್ತಾರೆ. ಭಕ್ತರಿಗೆ ಭಗವಂತನಿಂದ ಫಲವಂತು ಅವಶ್ಯವಾಗಿ ಸಿಗುತ್ತದೆ. ಭಗವಂತ ಇಲ್ಲಿ ಬಂದು ಫಲವನ್ನು ಕೊಡಬೇಕಾಗಿದೆ ಏಕೆಂದರೆ ಎಲ್ಲರೂ ಪತಿತರಾಗಿದ್ದಾರೆ. ಪತಿತರು ಮುಕ್ತಿಧಾಮಕ್ಕೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ ನಾನೇ ಬರಬೇಕಾಗುತ್ತದೆ. ನನ್ನ ಆಹ್ವಾನ ಮಾಡುತ್ತಾರೆ ಎಂದು ತಂದೆಯು ಹೇಳುತ್ತಾರೆ. ಭಕ್ತರಿಗೆ ಅವಶ್ಯವಾಗಿ ಭಗವಂತ ಬೇಕು. ಈಗ ಭಗವಂತನಿಂದ ಏನು ಸಿಗುತ್ತದೆ? ಮುಕ್ತಿ-ಜೀವನ್ಮುಕ್ತಿ. ಇದನ್ನು ಎಲ್ಲರಿಗೂ ಕೊಡುವುದಿಲ್ಲ, ಯಾರು ಪರಿಶ್ರಮಪಡುತ್ತಾರೆ ಅವರಿಗೆ ಕೊಡುತ್ತಾರೆ. ಇಷ್ಟು ಕೋಟಿ ಆತ್ಮಗಳು ಆಸ್ತಿಯನ್ನು ಪಡೆಯುತ್ತಾರೆಯೇ? ಯಾರೇ ಬರಲಿ, ಅವರಿಗೆ ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ, ನಾವು ಅನುಭವಿಗಳಾಗಿದ್ದೇವೆ. ನಾವೀಗ ಭಗವಂತನನ್ನು ಹುಡುಕುವುದಿಲ್ಲ. ತಂದೆಯು ಅವರ ಸಮಯದಲ್ಲಿ ಬರಬೇಕಾಗುತ್ತದೆ. ನಾವೂ ಸಹ ಮೊದಲು ತುಂಬಾ ಹುಡುಕಿದೆವು ಆದರೆ ಸಿಗಲಿಲ್ಲ. ಜಪ-ತಪ, ತೀರ್ಥಯಾತ್ರೆ ಮುಂತಾದವುಗಳನ್ನು ಮಾಡಿದೆವು. ತುಂಬಾ ಅಲೆದಾಡಿದೆವು ಆದರೆ ಸಿಗಲಿಲ್ಲ ಏಕೆಂದರೆ ಭಗವಂತ ತಮ್ಮ ಸಮಯದಲ್ಲಿ ಪರಮಧಾಮದಿಂದ ಬರಬೇಕಾಗುತ್ತದೆ, ಎನ್ನುವುದನ್ನು ತಿಳಿಸಿ. ಆದಿ-ಸನಾತನ ದೇವೀ-ದೇವತೆಗಳ 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಗಿದೆ. 5 ವರ್ಣಗಳೂ ಸಹ ಪ್ರಸಿದ್ಧವಾಗಿದೆ. ಈಗ ಶೂದ್ರವರ್ಣವಿದೆ, ಅದರ ನಂತರ ಬ್ರಾಹ್ಮಣವರ್ಣ. ವರ್ಣಗಳ ಮೇಲೆ ಒಳ್ಳೆಯರೀತಿಯಲ್ಲಿ ತಿಳಿಸಬೇಕಾಗಿದೆ. ವಿರಾಟರೂಪದಲ್ಲಿಯೂ ಸಹ ವರ್ಣಗಳಿರುತ್ತವೆ. ಬ್ರಾಹ್ಮಣವರ್ಣವು ಇದೆ ಆದರೆ ಇದು ಅವರಿಗೆ ತಿಳಿದಿಲ್ಲ ಆದ್ದರಿಂದ ಮೊಟ್ಟಮೊದಲು ತಂದೆಯ ಪರಿಚಯ ಕೊಡಬೇಕಾಗಿದೆ- ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ ಹಾಗೂ ನಾವು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ. ತಂದೆಯು ಬಂದು ಬ್ರಾಹ್ಮಣರನ್ನು ರಚಿಸುತ್ತಾರೆ, ಆಗಲೇ ನಾವು ದೇವತೆಗಳಾಗುತ್ತೇವೆ. ಪ್ರಜಾಪಿತ ಬ್ರಹ್ಮನ ಹೆಸರಿದೆ. ತಂದೆಯು ಬ್ರಹ್ಮನ ಮುಖಾಂತರ ಬ್ರಾಹ್ಮಣರನ್ನು ರಚಿಸುತ್ತಾರೆ. ಶಿವಬಾಬಾ ಬ್ರಹ್ಮಾರವರ ತಂದೆ ಆಗಿದ್ದಾರೆ. ಎಂದರೆ ಇದು ಈಶ್ವರೀಯ ಕುಲವಾಗಿದೆ. ಹೇಗೆ ಕೃಪಲಾನಿಕುಲ, ವಾಸವಾನಿ ಕುಲವಿರುತ್ತದೆ ಹಾಗೆಯೇ ಈ ಸಮಯದಲ್ಲಿ ನಿಮ್ಮದು ಈಶ್ವರೀಯ ಕುಲವಾಗಿದೆ. ನೀವು ಅವರ ಮಕ್ಕಳಾಗಿದ್ದೀರಿ, ಯಾರು ಸತ್ಯ ಬ್ರಾಹ್ಮಣರಾಗಿದ್ದಾರೆ, ಅವರೇ ಪವಿತ್ರತೆಯ ಪ್ರತಿಜ್ಞೆ ಮಾಡಿದ್ದಾರೆ. ಭಲೆ ಎಲ್ಲರೂ ಮಕ್ಕಳಾಗಿದ್ದಾರೆ, ಆದರೆ ಅವರಲ್ಲಿಯೂ ಸಹ ಕೆಲವರು ಸ್ವಂತ ತಾಯಿಯ ಮಕ್ಕಳಿದ್ದಾರೆ, ಕೆಲವರು ಮಲತಾಯಿ ಮಕ್ಕಳಿದ್ದಾರೆ. ಸ್ವಂತಮಕ್ಕಳು ಯಾರಿದ್ದಾರೆ ಅವರು ಪವಿತ್ರತೆಯ ರಕ್ಷಾಬಂಧನವನ್ನು ಕಟ್ಟಿಕೊಂಡಿರುತ್ತಾರೆ. ರಕ್ಷಾಬಂಧನದ ಹಬ್ಬವೂ ಇದೆಯಲ್ಲವೇ, ಎಲ್ಲವೂ ಈ ಸಂಗಮಯುಗದ ಮಾತುಗಳಾಗಿವೆ, ದಶಹರ ಹಬ್ಬವೂ ಸಹ ಸಂಗಮಯುಗದ್ದಾಗಿದೆ. ವಿನಾಶದ ನಂತರ ತಕ್ಷಣ ದೀಪಾವಳಿಯು ಬರುತ್ತದೆ, ಎಲ್ಲರ ಜ್ಯೋತಿಯು ಬೆಳಗುತ್ತದೆ. ಕಲಿಯುಗದಲ್ಲಿ ಎಲ್ಲರ ಜ್ಯೋತಿಯು ನಂದಿಹೋಗಿದೆ.

ಈಗ ತಂದೆಯನ್ನು ನಾವಿಕನೆಂದು ಹೇಳುತ್ತಾರೆ. ಬ್ರಹ್ಮಾ-ವಿಷ್ಣು-ಶಂಕರರಿಗೆ ನಾವಿಕ ಅಥವಾ ಭವಂತನೆಂದು ಹೇಳುವುದಿಲ್ಲ. ತಂದೆಯು ಬಂದು ತಮ್ಮ ಹೂದೋಟದಲ್ಲಿ ತಮ್ಮ ಮಕ್ಕಳನ್ನು ನೋಡುತ್ತಾರೆ. ಇದರಲ್ಲಿ ಕೆಲವರು ಗುಲಾಬಿಯಾಗಿದ್ದಾರೆ, ಕೆಲವರು ಮಲ್ಲಿಗೆ, ಇನ್ನು ಕೆಲವರು ಲಿಲ್ಲಿ ಹೂವಾಗಿದ್ದಾರೆ. ಪ್ರತಿಯೊಬ್ಬರಲ್ಲಿ ಜ್ಞಾನದ ಸುಗಂಧವಿದೆ. ನೀವೀಗ ಮುಳ್ಳುಗಳಿಂದ ಹೂವುಗಳಾಗುತ್ತಿದ್ದೀರಿ. ಈಗ ಈ ಪ್ರಪಂಚವು ಮುಳ್ಳುಗಳ ಕಾಡಾಗಿದೆ. ಎಷ್ಟೊಂದು ಜಗಳ-ಕಲಹ ಮುಂತಾದವುಗಳಿವೆ ಏಕೆಂದರೆ ಎಲ್ಲರೂ ನಾಸ್ತಿಕರು, ನಿರ್ಧನಿಕರಾಗಿದ್ದಾರೆ. ಯಾರೂ ಧನಿಕರಿಲ್ಲ. ಇಂತಹವರಿಗೆ ಯಾರೂ ತಮ್ಮ ಮತವನ್ನು ಕೊಟ್ಟು ಧನಿಕರನ್ನಾಗಿ ಮಾಡುತ್ತಾರೆಯೋ ಅವರನ್ನು ಅರಿತುಕೊಂಡಿಲ್ಲ ಎಂದಾಗ ಧನಿಕ ತಂದೆಯು ಅವಶ್ಯವಾಗಿ ಬರಬೇಕಾಗುತ್ತದೆಯಲ್ಲವೇ. ಈಗ ತಂದೆಯೇ ಬಂದು ಎಲ್ಲರನ್ನೂ ಧನಿಕರನ್ನಾಗಿ ಮಾಡುತ್ತಾರೆ. ಮನುಷ್ಯರು ಒಂದು ಧರ್ಮ, ಒಂದು ರಾಜ್ಯವಿರಲಿ, ಪವಿತ್ರತೆಯೂ ಇರಲಿ ಎಂದು ಇಚ್ಛಿಸುತ್ತಾರೆ. ಸತ್ಯಯುಗದಲ್ಲಿ ಒಂದೇ ಧರ್ಮವಿತ್ತು ಆದರೆ ಈಗ ದುಃಖಧಾಮವಾಗಿಬಿಟ್ಟಿದೆ. ಈಗ ನೀವು ಬ್ರಾಹ್ಮಣ ವರ್ಣದಲ್ಲಿ ವರ್ಗಾವಣೆಯಾಗಿದ್ದೀರಿ ನಂತರ ನೀವೇ ದೇವತಾ ವರ್ಣದಲ್ಲಿ ಹೋಗಿವಿರಿ ನಂತರ ನೀವು ಈ ಪತಿತ ಸೃಷ್ಟಿಯಲ್ಲಿ ಬರುವುದಿಲ್ಲ. ಭಾರತವೂ ಎಲ್ಲದಕ್ಕಿಂತ ಶ್ರೇಷ್ಠವಾಗಿದೆ. ಶಿವನ ಮಂದಿರದಲ್ಲಿ ಹೋಗುತ್ತೀರಲ್ಲವೇ. ಅದು ಬೇಹದ್ದಿನ ತಂದೆಯ ಮಂದಿರವಾಗಿದೆ ಏಕೆಂದರೆ ತಂದೆಯೇ ಸದ್ಗತಿದಾತನಾಗಿದ್ದಾರೆ. ಅವರು ಬಂದು ಅನಾಥರನ್ನು ಧನವಂತರನ್ನಾಗಿ ಮಾಡುತ್ತಾರೆ. ಈ ಮಾತುಗಳನ್ನು ತಂದೆಯ ಹೊರತು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಮನುಷ್ಯರೆಲ್ಲರೂ ಭಕ್ತಿಯನ್ನು ಕಲಿಸುವವರಾಗಿದ್ದಾರೆ. ಅಲ್ಲಿ ಜ್ಞಾನದ ಮಾತೇ ಇರುವುದಿಲ್ಲ. ಜ್ಞಾನಸಾಗರ ಸದ್ಗತಿದಾತ ಒಬ್ಬ ತಂದೆಯಾಗಿದ್ದಾರೆ. ಮನುಷ್ಯರು ಸದ್ಗತಿಗೋಸ್ಕರ ಗುರುಗಳನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ. ಇನ್ನೂ ಕೆಲವರು ಯಾವುದಾದರೂ ಕಲೆಯನ್ನು ಕಲಿಸುವವರಿಗೆ ಗುರುವೆಂದು ಹೇಳುತ್ತಾರೆ ಆದರೆ ಆ ಗುರುಗಳು ಇಡೀ ಸೃಷ್ಟಿಯ ಸದ್ಗತಿ ಮಾಡಲು ಸಾಧ್ಯವಿಲ್ಲ. ಭಲೆ ನಮಗೆ ಸಾಧುಗಳು ಮುಂತಾದವರಿಂದ ಶಾಂತಿಯು ಸಿಗುತ್ತದೆ ಎಂದು ಹೇಳುತ್ತಾರೆ ಆದರೆ ಅಲ್ಪಕಾಲಕ್ಕೋಸ್ಕರ. ನಂತರ ಸ್ವರ್ಗದ ಸುಖವು ಕಾಗವಿಷ್ಟ ಸಮಾನವೆಂದು ಸನ್ಯಾಸಿಗಳೂ ಹೇಳುತ್ತಾರೆ ಅಂದಾಗ ಅವರ ಮುಖಾಂತರ ಯಾವ ಶಾಂತಿಯು ಸಿಗುತ್ತದೆ ಅದೂ ಸಹ ಕಾಗವಿಷ್ಟ ಸಮಾನವೇ ಆಗಿರುತ್ತದೆ. ಅವರು ಮುಕ್ತಿಯನ್ನಂತು ಕೊಡುವುದಿಲ್ಲ. ಮುಕ್ತಿ-ಜೀವನ್ಮುಕ್ತಿ ದಾತ ಒಬ್ಬರೇ ತಂದೆಯಾಗಿದ್ದಾರೆ. ಎಲ್ಲರಿಗೂ ಶ್ರೀಕೃಷ್ಣನೊಂದಿಗೆ ತುಂಬಾ ಪ್ರೀತಿಯಿದೆ ಆದರೆ ಅವರನ್ನು ಪೂರ್ತಿ ಅರಿತುಕೊಂಡಿಲ್ಲ. ಈಗ ತಂದೆಯು ತಿಳಿಸಿಕೊಡುತ್ತಾರೆ- ಸತ್ಯಯುಗದಲ್ಲಿ ಕೃಷ್ಣಪುರಿಯಿತ್ತು, ಈಗ ಕಂಸಪುರಿಯಾಗಿಬಿಟ್ಟಿದೆ. ತಂದೆಯು ಬಂದು ಕೃಷ್ಣಪುರಿಯನ್ನಾಗಿ ಮಾಡುತ್ತಾರೆ. ಮತ್ತೆ ಅರ್ಧಕಲ್ಪದ ನಂತರ ರಾವಣರಾಜ್ಯ ನರಕವಾಗಿಬಿಡುತ್ತದೆ. ಅರ್ಧಕಲ್ಪ ಸುಖವಿರುತ್ತದೆ, ಅರ್ಧಕಲ್ಪ ದುಃಖವಿರುತ್ತದೆ. ಸುಖದ ಸಮಯವು ಜಾಸ್ತಿ ಇರುತ್ತದೆ ಆದರೆ ಸುಖ-ದುಃಖದ ಆಟವು ನಡೆಯುತ್ತಲೇ ಇರುತ್ತದೆ. ಇದನ್ನು ಸೃಷ್ಟಿಚಕ್ರ ಅಥವಾ ಸೋಲು-ಗೆಲುವಿನ ಆಟವೆಂದು ಹೇಳಲಾಗುತ್ತದೆ. ಸನ್ಯಾಸಿಗಳು ಮೋಕ್ಷವನ್ನು ಪಡೆಯುತ್ತೇವೆಂದು ತಿಳಿಯುತ್ತಾರೆ ಆದರೆ ಮೋಕ್ಷವನ್ನು ಯಾರೂ ಪಡೆಯಲು ಸಾಧ್ಯವಿಲ್ಲ. ಈ ರಹಸ್ಯವನ್ನು ಯಾರೂ ಅರಿತುಕೊಂಡಿಲ್ಲ. ಮುಕ್ತಿ ಮತ್ತು ಜೀವನ್ಮುಕ್ತಿಯನ್ನು ತಂದೆಯ ವಿನಃ ಯಾರೂ ಕೊಡಲು ಸಾಧ್ಯವಿಲ್ಲ. ನೀವು ತಮ್ಮ ರಾಜಧಾನಿಯ ಸ್ಥಾಪನೆಯನ್ನು ಮಾಡುತ್ತಿದ್ದೀರಿ. ಇಲ್ಲಿ ದುಃಖವೇ ದುಃಖವಿದೆ, ಈಗ ತಂದೆಯ ಸಹಯೋಗದಿಂದ ನಾವು ಸ್ವರ್ಗವನ್ನಾಗಿ ಮಾಡುತ್ತಿದ್ದೇವೆ, ನಂತರ ನಾವೇ ಮಾಲೀಕರಾಗಿ ರಾಜ್ಯ ಮಾಡುತ್ತೇವೆ ಮತ್ತೆಲ್ಲರನ್ನೂ ತಂದೆಯು ಮುಕ್ತಿಧಾಮದಲ್ಲಿ ಕಳಿಸುತ್ತಾರೆ. ಅವರು ನಂತರ ತಮ್ಮ ಸಮಯದಲ್ಲಿ ಬರುತ್ತಾರೆ. ಯಾವಾಗ ಅವರು ಇಳಿಯುತ್ತಾರೆ ಆಗ ಮೊದಲು ಸುಖದಲ್ಲಿ ಬರುತ್ತಾರೆ ನಂತರ ದುಃಖವು ಪ್ರಾರಂಭವಾಗುತ್ತದೆ. ಭಕ್ತಿಮಾರ್ಗದಲ್ಲಿ ಜಪ-ತಪ ಮಾಲೆ ಮುಂತಾದವುಗಳನ್ನು ಜಪಿಸುತ್ತಾರಲ್ಲವೇ. ಒಬ್ಬರನ್ನು ನೆನಪು ಮಾಡಬೇಕು ಎಂದೂ ಹೇಳುತ್ತಾರೆ ಆದರೆ ಇದರಲ್ಲಿ ದೇಹಾಭಿಮಾನವನ್ನು ಬಿಡಬೇಕಾಗುತ್ತದೆ. ಈಗ ಎಲ್ಲರೂ ಹಿಂತಿರುಗಿ ಹೋಗಬೇಕೆಂದು ತಂದೆಯು ಹೇಳುತ್ತಾರೆ. ತಂದೆಯು ಮಕ್ಕಳೊಂದಿಗೇ ಮಾತನಾಡುತ್ತಾರೆ. ಮಕ್ಕಳಲ್ಲಿಯೂ ಸಹ ಕೆಲವರು ಮಲತಾಯಿ ಮಕ್ಕಳಿದ್ದಾರೆ, ಇನ್ನೂ ಕೆಲವರು ಸ್ವಂತ ತಾಯಿ ಮಕ್ಕಳಿದ್ದಾರೆ. ಯಾರು ಪವಿತ್ರತೆಯ ರಕ್ಷಾಬಂಧನವನ್ನು ಕಟ್ಟಿಕೊಳ್ಳುವುದಿಲ್ಲ, ಅವರೇ ಮಲತಾಯಿ ಮಕ್ಕಳಾಗಿದ್ದಾರೆ. ಸ್ವಂತಮಕ್ಕಳಿಗೆ ನಾವಂತೂ ಆಸ್ತಿಯನ್ನು ಪಡೆದೇ ಪಡೆಯುತ್ತೇವೆ ಎನ್ನುವ ನಿಶ್ಚಯವಿರುತ್ತದೆ. ಬಾಕಿ ಕೆಲ-ಕೆಲವರು ಅನುತ್ತೀರ್ಣರಾಗುತ್ತಾರೆ. ಕಚ್ಚಾ-ಪಕ್ಕಾ ನಂಬರ್ವಾರಂತೂ ಇರುತ್ತಾರೆ. ಯಾರು ಪಕ್ಕಾ ಆಗಿರುತ್ತಾರೆ ಅವರು ತನ್ನ ಸ್ತ್ರೀ, ಮಕ್ಕಳು ಮುಂತಾದವರೆಲ್ಲರನ್ನೂ ಕರೆತರುತ್ತಾರೆ, ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುತ್ತಾರೆ. ಹಂಸ ಮತ್ತು ಕೊಕ್ಕರೆ ಜೊತೆ ಇರಲು ಸಾಧ್ಯವಿಲ್ಲ. ತಂದೆಯ ಮೇಲೆ ಅತಿದೊಡ್ಡ ಜವಾಬ್ದಾರಿಯಿದೆ. ಎಲ್ಲರನ್ನು ಪವಿತ್ರರನ್ನಾಗಿ ಮಾಡುವುದು- ಇದು ತಂದೆಯ ಕಾರ್ಯವಾಗಿದೆ. ಆದ್ದರಿಂದ ತಂದೆಯು ಹೇಳುತ್ತಾರೆ- ಎರಡು ಚಕ್ರಗಳು ಜೊತೆಗೂಡಿ ನಡೆಯಿರಿ. ಸ್ತ್ರೀ ಹಾಗೂ ಪತಿ ಜೊತೆ-ಜೊತೆಯಲ್ಲಿ ನಡೆಯುತ್ತಾರೆಂದರೆ ಜೀವನವೆಂಬ ವಾಹನವು ಸರಿಯಾಗಿ ನಡೆಯುತ್ತದೆ. ಒಬ್ಬರಿಗಿನ್ನೊಬ್ಬರು ಈ ರೀತಿ ಹೇಳಬೇಕು- ನಾವಿಬ್ಬರು ಪವಿತ್ರತೆಯ ಕಂಕಣವನ್ನು ಕಟ್ಟಿಕೊಳ್ಳೋಣ, ಈಗ ನಾವು ಪವಿತ್ರರಾಗಿ ತಂದೆಯಿಂದ ಆಸ್ತಿಯನ್ನು ಅವಶ್ಯವಾಗಿ ತೆಗೆದುಕೊಳ್ಳೋಣ. ಬ್ರಹ್ಮನ ಮಕ್ಕಳಾಗಿದ್ದೇವೆಂದರೆ ಸಹೋದರ-ಸಹೋದರಿಯರಾದೆವು. ನಂತರ ವಿಕಾರಿ ದೃಷ್ಟಿ ಇರಲು ಸಾಧ್ಯವಿಲ್ಲ. ಇದನ್ನು ಈಶ್ವರೀಯ ನಿಯಮವು ಹೇಳುತ್ತದೆ. ಈಗ ತಂದೆಯೂ ಸಹ ಹೇಳುತ್ತಾರೆ- ವಿಷವನ್ನು ಕುಡಿಯುವ, ಕುಡಿಸುವ ವೃತ್ತಿಯನ್ನು ಬಿಡಬೇಕಾಗಿದೆ. ನಾವು ಅನ್ಯರಿಗೆ ಜ್ಞಾನಾಮೃತವನ್ನು ಕುಡಿಸೋಣ. ನಾವೂ ಸಹ ತಂದೆಯಿಂದ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳೋಣ. ತಂದೆಯ ಮಾತನ್ನು ಪಾಲಿಸುವುದು ಸುಪುತ್ರ ಮಕ್ಕಳ ಕೆಲಸವಾಗಿದೆ. ಯಾರು ಪಾಲಿಸುವುದಿಲ್ಲ ಅವರು ಕುಪುತ್ರರೇ ಆಗುತ್ತಾರೆ. ಕುಪುತ್ರ ಮಕ್ಕಳಿಗೆ ಆಸ್ತಿಯನ್ನು ಕೊಡುವುದರಲ್ಲಿ ತಂದೆಯು ಅವಶ್ಯವಾಗಿ ಏರು-ಪೇರು ಮಾಡುತ್ತಾರೆ. ನೀವು ಬ್ರಾಹ್ಮಣರು ದೇವತೆಗಳು ಆಗುವವರಿದ್ದೀರಿ ಆದ್ದರಿಂದ ನೀವು ನಿಮ್ಮ ಸ್ತ್ರೀಯರಿಗೂ ಸಹ ಜ್ಞಾನಾಮೃತವನ್ನು ಕುಡಿಸಬೇಕು. ಹೇಗೆ ಚಿಕ್ಕಮಕ್ಕಳಿಗೆ ಮೂಗು ಹಿಡಿದುಕೊಂಡು ಔಷಧಿಯನ್ನು ಕುಡಿಸಲಾಗುತ್ತದೆ ಹಾಗೆಯೇ ಸ್ತ್ರೀಯರಿಗೆ ಹೇಳಿ, ನೀವು ನಿಮ್ಮ ಪತಿಯೇ ಗುರು ಈಶ್ವರನಾಗಿದ್ದಾರೆ ಎಂದು ಒಪ್ಪುತ್ತೀರಾ? ಒಪ್ಪುತ್ತೀರೆಂದರೆ ಅವಶ್ಯವಾಗಿ ನಾನು ನಿಮ್ಮ ಸದ್ಗತಿಯನ್ನು ಮಾಡುತ್ತೇನಲ್ಲವೇ! ಪುರುಷರಂತೂ ಸ್ತ್ರೀಯರನ್ನು ತಕ್ಷಣ ತಮ್ಮ ಸಮಾನರನ್ನಾಗಿ ಮಾಡಿಕೊಳ್ಳಬಲ್ಲರು ಆದರೆ ಸ್ತ್ರೀಯರು ಪುರುಷರನ್ನು ತಕ್ಷಣ ತನ್ನ ಸಮಾನ ಮಾಡಿಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ಅಬಲೆಯರ ಮೇಲೆ ಬಹಳ ಹತ್ಯಾಚಾರವಾಗುತ್ತದೆ. ಮಕ್ಕಳು ತುಂಬಾ ಪೆಟ್ಟನ್ನು ತಿನ್ನಬೇಕಾಗುತ್ತದೆ. ಸರ್ಕಾರವೂ ಸಹ ನಿಮ್ಮನ್ನು ರಕ್ಷಣೆ ಮಾಡಲಾಗುವುದಿಲ್ಲ. ನಾವು ಏನು ಮಾಡಲು ಸಾಧ್ಯವಿಲ್ಲವೆಂದು ಹೇಳಿಬಿಡುತ್ತಾರೆ. ತಂದೆಯು ಹೇಳುತ್ತಾರೆ- ಮಕ್ಕಳೇ, ಶ್ರೀಮತದಂತೆ ನಡೆಯುತ್ತೀರೆಂದರೆ ನೀವು ಸ್ವರ್ಗದ ಮಾಲೀಕರಾಗುತ್ತೀರಿ. ಒಂದುವೇಳೆ ಕುಪುತ್ರರಾಗುತ್ತೀರೆಂದರೆ ಆಸ್ತಿಯನ್ನು ಕಳೆದುಕೊಳ್ಳುತ್ತೀರಿ. ಅಲ್ಲಿ ಲೌಕಿಕ ತಂದೆಯಿಂದ ಮಕ್ಕಳು ಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ ಮತ್ತು ಇಲ್ಲಿ ಸುಪುತ್ರ ಮಕ್ಕಳು ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ. ಈಗ ಇದನ್ನು ದುಃಖಧಾಮವೆಂದು ಹೇಳಲಾಗುತ್ತದೆ. ಇಲ್ಲಿ ನೀವು ಚಿನ್ನದ ಆಭರಣಗಳನ್ನೂ ಸಹ ಹಾಕಿಕೊಳ್ಳಬಾರದು ಏಕೆಂದರೆ ಈ ಸಮಯದಲ್ಲಿ ನೀವು ಭಿಕಾರಿಗಳಾಗಿದ್ದೀರಿ. ನಂತರದ ಜನ್ಮದಲ್ಲಿ ನಿಮಗೆ ಚಿನ್ನದ ಮಹಲ್ಗಳು ಸಿಗುತ್ತವೆ. ರತ್ನಜಡಿತ ಮಹಲ್ಗಳು ಇರುತ್ತವೆ. ಈಗ ನಾವು ತಂದೆಯಿಂದ 21 ಜನ್ಮಗಳ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಎನ್ನುವುದನ್ನು ನೀವು ತಿಳಿದುಕೊಂಡಿದ್ದೀರಿ. ಭಕ್ತಿಮಾರ್ಗದಲ್ಲಿ ನಾನು ಕೇವಲ ಭಾವನೆಯ ಫಲವನ್ನು ಕೊಡುತ್ತೇನೆ. ಮನುಷ್ಯರು ಶ್ರೀಕೃಷ್ಣನ ಆತ್ಮವು ಎಲ್ಲಿದೆ, ಗುರುನಾನಕ್ನ ಆತ್ಮವು ಎಲ್ಲಿದೆ ಎನ್ನುವುದನ್ನು ಅರಿತುಕೊಂಡಿಲ್ಲ ಆದರೆ ನೀವೀಗ ಅರಿತುಕೊಂಡಿದ್ದೀರಿ- ಈಗ ಅವರೆಲ್ಲರೂ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ತಮೋಪ್ರಧಾನರು ಆಗಿಬಿಟ್ಟಿದ್ದಾರೆ. ಅವರೂ ಸಹ ಸೃಷ್ಟಿಚಕ್ರದಲ್ಲಿದ್ದಾರೆ, ಎಲ್ಲರೂ ಸಹ ತಮೋಪ್ರಧಾನರಾಗಲೇಬೇಕಾಗಿದೆ. ಅಂತ್ಯದಲ್ಲಿ ತಂದೆಯೇ ಬಂದು ಪುನಃ ಎಲ್ಲರನ್ನು ಹಿಂತಿರುಗಿ ಕರೆದುಕೊಂಡು ಹೋಗುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಈಗ ಪವಿತ್ರತೆಯ ಕಂಕಣವನ್ನು ಕಟ್ಟಿಕೊಳ್ಳಬೇಕಾಗಿದೆ. ದೇಹಾಭಿಮಾನವನ್ನು ಬಿಟ್ಟು ವಿಕಾರಿಭಾವನೆಯನ್ನು ಪರಿವರ್ತನೆ ಮಾಡಿಕೊಳ್ಳಬೇಕು.

2. ತಂದೆಯ ಶ್ರೀಮತದನುಸಾರ ನಡೆದು ಸುಪುತ್ರ ಮಕ್ಕಳಾಗಬೇಕಾಗಿದೆ. ಜ್ಞಾನಾಮೃತವನ್ನು ಕುಡಿಯಬೇಕು ಹಾಗೂ ಕುಡಿಸಬೇಕಾಗಿದೆ. ಸ್ವಯಂನಲ್ಲಿ ಜ್ಞಾನದ ಸುಗಂಧವನ್ನು ಧಾರಣೆ ಮಾಡಿಕೊಂಡು ಸುಗಂಧಭರಿತ ಹೂವಾಗಬೇಕಾಗಿದೆ.

ವರದಾನ:-

ಮಾಯೆಯು ಬರುವಂತಹ ಯಾವುದೆಲ್ಲಾ ದ್ವಾರಗಳಿವೆಯೋ ಅದಕ್ಕೆ ನೆನಪು ಹಾಗೂ ಸೇವೆಯ ಡಬಲ್ ಲಾಕ್ ಹಾಕಿಬಿಡಿ. ಒಂದುವೇಳೆ ನೆನಪಿನಲ್ಲಿರುತ್ತೀರಿ ಹಾಗೂ ಸೇವೆಯನ್ನು ಮಾಡುತ್ತಿದ್ದರೂ ಮಾಯೆಯು ಬರುತ್ತದೆಯೆಂದರೆ, ಖಂಡಿತ ನೆನಪು ಮತ್ತು ಸೇವೆಯಲ್ಲಿ ಏನೋ ಕೊರತೆಯಿದೆ. ಯಥಾರ್ಥವಾದ ಸೇವೆಯೆಂದರೆ, ಯಾವುದರಲ್ಲಿ ಯಾವುದೇ ಸ್ವಾರ್ಥವಿರುವುದಿಲ್ಲ. ಒಂದುವೇಳೆ ನಿಸ್ವಾರ್ಥ ಸೇವೆಯಿಲ್ಲದಿದ್ದರೆ ಲಾಕ್ ಸಡಿಲವಾಗಿರುತ್ತದೆ ಮತ್ತು ನೆನಪೂ ಸಹ ಶಕ್ತಿಶಾಲಿಯಾಗಿರಬೇಕು. ಇಂತಹ ಡಬಲ್ ಲಾಕ್ ಮಾಡಿದ್ದರೆ ನಿರ್ವಿಘ್ನರಾಗಿಬಿಡುತ್ತೀರಿ. ನಂತರದಲ್ಲಿ ಏಕೆ, ಏನು ಎಂಬ ವ್ಯರ್ಥ ಫೀಲಿಂಗ್ನಿಂದ ದೂರವಾಗಿ ಫೀಲಿಂಗ್ ಪ್ರೂಫ್ ಆತ್ಮರಾಗುವಿರಿ.

ಸ್ಲೋಗನ್:-

ಮಾತೇಶ್ವರಿಯವರ ಅಮೂಲ್ಯ ಮಹಾವಾಕ್ಯ

ವಾಸ್ತವದಲ್ಲಿ ಜ್ಞಾನವನ್ನು ಪ್ರಾಪ್ತಿ ಮಾಡಿಕೊಳ್ಳುವುದಂತು ಒಂದು ಸೆಕೆಂಡಿನ ಕೆಲಸವಾಗಿದೆ ಆದರೆ ಒಂದುವೇಳೆ ಮನುಷ್ಯನು ಒಂದು ಸೆಕೆಂಡಿನಲ್ಲಿ ತಿಳಿದುಬಿಟ್ಟರೆ, ಅದಕ್ಕಾಗಿ ಒಂದೇ ಸೆಕೆಂಡ್ ಹಿಡಿಸುತ್ತದೆ. ಕೇವಲ ತಮ್ಮ ಸ್ವಧರ್ಮವನ್ನು ತಿಳಿದುಬಿಡಬೇಕು- ನಾನು ಸತ್ಯವಾಗಿ ಶಾಂತ ಸ್ವರೂಪ ಆತ್ಮನಾಗಿದ್ದೇನೆ ಹಾಗೂ ಪರಮಾತ್ಮನ ಸಂತಾನನಾಗಿದ್ದೇನೆ. ಈಗ ಇದನ್ನು ತಿಳಿಯುವುದಂತು ಒಂದು ಸೆಕೆಂಡಿನ ಮಾತಾಗಿದೆ ಆದರೆ ಇದರಲ್ಲಿ ನಿಶ್ಚಯ ಮಾಡುವುದರಲ್ಲಿ ಕೆಲವರು ಹಠಯೋಗ, ಕೆಲವರು ಜಪ-ತಪ, ಯಾವುದೇ ಪ್ರಕಾರದ ಸಾಧನೆ ಮಾಡುವ ಅವಶ್ಯಕತೆಯಿಲ್ಲ. ಕೇವಲ ತಮ್ಮ ಸತ್ಯ ಸ್ವರೂಪದಲ್ಲಿರಬೇಕು. ಉಳಿದಂತೆ ನಾವೇನು ಇಷ್ಟೊಂದು ಕಷ್ಟ ಪಡುತ್ತಿದ್ದೇವೆ, ಅದು ಏತಕ್ಕಾಗಿ? ಈಗ ಇದರ ಬಗ್ಗೆ ತಿಳಿಸಲಾಗುತ್ತದೆ- ನಾವೇನು ಇಷ್ಟು ಕಷ್ಟ ಪಡುತ್ತಿದ್ದೇವೆ, ಅದು ಕೇವಲ ಇದಕ್ಕಾಗಿಯೇ ಮಾಡುತ್ತಿದ್ದೇವೆ. ಹೇಗೆ ನಮ್ಮ ಪ್ರತ್ಯಕ್ಷ ಜೀವನವನ್ನು ತಯಾರು ಮಾಡಿಕೊಳ್ಳಬೇಕೆಂದರೆ, ತಮ್ಮ ಈ ದೇಹಾಭಿಮಾನದಿಂದ ಸಂಪೂರ್ಣವಾಗಿ ಹೊರಬರಬೇಕು. ಸತ್ಯವಾಗಿ ಆತ್ಮಾಭಿಮಾನಿ ರೂಪದಲ್ಲಿ ಸ್ಥಿತರಾಗುವುದರಿಂದ ಅಥವಾ ಈ ದೈವೀಗುಣಗಳನ್ನು ಧಾರಣೆ ಮಾಡುವುದರಲ್ಲಿ ಅವಶ್ಯವಾಗಿ ಪರಿಶ್ರಮವೆನಿಸುತ್ತದೆ. ಇದರಲ್ಲಿ ನಾವು ಪ್ರತೀ ಸಮಯ, ಪ್ರತೀ ಹೆಜ್ಜೆಯಲ್ಲಿ ಎಚ್ಚರಿಕೆಯಿರುತ್ತದೆ, ಈಗ ನಾವೆಷ್ಟು ಮಾಯೆಯಿಂದ ಎಚ್ಚರವಾಗಿರುತ್ತೇವೆ, ಭಲೆ ಎಷ್ಟಾದರೂ ಘಟನೆಗಳು ನಮ್ಮಮುಂದೆ ಬರಲಿ ಆದರೆ ನಮ್ಮನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ಯಾವಾಗ ನಾವು ನಮ್ಮನ್ನು ಮರೆಯುತ್ತೇವೆಯೋ ಆಗಲೇ ಮಾಯೆಯು ಎದುರಿಸುತ್ತದೆ, ಈಗೇನು ಅವಕಾಶವಿದೆಯೋ ಅದು ಕೇವಲ ಪ್ರತ್ಯಕ್ಷ ಜೀವನವನ್ನು ತಯಾರು ಮಾಡಿಕೊಳ್ಳುವುದಕ್ಕಾಗಿಯೇ ಇದೆ. ಉಳಿದಂತೆ ಜ್ಞಾನವಂತು ಸೆಕೆಂಡಿನ ಮಾತಾಗಿದೆ. ಒಳ್ಳೆಯದು. ಓಂ ಶಾಂತಿ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top