29 January 2022 KANNADA Murli Today | Brahma Kumaris

Read and Listen today’s Gyan Murli in Kannada

January 29, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಆತ್ಮನನ್ನು ನಿರೋಗಿಯನ್ನಾಗಿ ಮಾಡಿಕೊಳ್ಳುವುದಕ್ಕೋಸ್ಕರ ಆತ್ಮೀಯ ವಿದ್ಯೆಯನ್ನು ಓದಿ ಮತ್ತು ಓದಿಸಿ, ಆತ್ಮೀಯ ಆಸ್ಪತ್ರೆಯನ್ನು ತೆರೆಯಿರಿ”

ಪ್ರಶ್ನೆ:: -

ಯಾವ ಒಂದು ಆಸೆಯನ್ನಿಟ್ಟುಕೊಳ್ಳುವುದರಿಂದ ಉಳಿದ ಎಲ್ಲಾ ಆಸೆಗಳು ಸ್ವತಃವಾಗಿ ಪೂರ್ಣವಾಗುತ್ತವೆ?

 

ಉತ್ತರ:-

ಕೇವಲ ತಂದೆಯನ್ನು ನೆನಪು ಮಾಡಿ ಸದಾ ಆರೋಗ್ಯವಂತರಾಗುವ ಆಸೆಯನ್ನಿಟ್ಟು ಕೊಳ್ಳಬೇಕು. ಜ್ಞಾನ-ಯೋಗದ ಆಸೆಯನ್ನು ಪೂರ್ಣ ಮಾಡುವುದರಿಂದ ಉಳಿದ ಎಲ್ಲಾ ಆಸೆಗಳು ಸ್ವತಃವಾಗಿ ಪೂರ್ಣ ಆಗುತ್ತವೆ. ಮಕ್ಕಳು ಯಾವುದೇ ಅಭ್ಯಾಸವನ್ನು ಇಟ್ಟುಕೊಳ್ಳಬಾರದು. ಸರ್ವತೋಮುಖರಾಗಬೇಕಾಗಿದೆ. ಭಲೆ ಕೊರತೆಗಳು ಪ್ರತಿಯೊಬ್ಬರಲ್ಲೂ ಇದೆ ಆದರೆ ಸೇವೆಯನ್ನು ಅವಶ್ಯಕವಾಗಿ ಮಾಡಬೇಕಾಗಿದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಧೈರ್ಯವನ್ನು ತಾಳು ಮಾನವನೇ……..

ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಾ? ಈ ಸಮಯದಲ್ಲಿ ಎಲ್ಲಾ ಆತ್ಮರಿಗೂ ಧೈರ್ಯ ಕೊಡಲಾಗುತ್ತದೆ. ಅತ್ಮನಲ್ಲಿಯೇ ಮನಸ್ಸು-ಬುದ್ದಿ ಇದೆ. ಆತ್ಮವೇ ದುಃಖಿ ಆಗುತ್ತದೆ. ಆಗ ತಂದೆಯನ್ನು ಕರೆಯುತ್ತದೆ-ಹೇ ಪತಿತ ಪಾವನ ಪರಮಪಿತ ಪರಮಾತ್ಮ ಬನ್ನಿ ಎಂದು ಬ್ರಹ್ಮಾ, ವಿಷ್ಣು, ಶಂಕರರನ್ನು ಪತಿತ ಪಾವನ ಎಂದು ಹೇಳುವುದಿಲ್ಲ. ಯಾವಾಗ ಇವರಿಗೆ ಹೇಳಲಾಗುವುದಿಲ್ಲವೆಂದಾಗ ಲಕ್ಷ್ಮೀ-ನಾರಾಯಣ, ರಾಮ ಸೀತಾ ಮುಂತಾದವರನ್ನು ಪತಿತ ಪಾವನ ಎಂದು ಹೇಳಲು ಸಾಧ್ಯವಿಲ್ಲ. ಪತಿತ ಪಾವನರಂತೂ ಒಬ್ಬರೇ ಆಗುತ್ತಾರೆ. ವಿಷ್ಣುವಿನ ಚಿತ್ರವಂತೂ ಪಾವನವಾಗಿದೆ. ವಿಷ್ಣುವು ವಿಷ್ಣು ಪುರಿಯ ಮಾಲಿಕರಾಗಿದ್ದಾರೆ. ಶಿವಬಾಬಾರವರೇ ವಿಷ್ಣು ಪುರಿಯ ಸ್ಥಾಪನೆ ಮಾಡುವವರಾಗಿದ್ದಾರೆ. ಅವರೇ ಈ ಸಮಯದಲ್ಲಿ ವಿಷ್ಣು ಪುರಿಯ ಸ್ಥಾಪನೆ ಮಾಡುತ್ತಿದ್ದಾರೆ. ಅಲ್ಲಿ ದೇವೀ ದೇವತೆಗಳೇ ಇರುತ್ತಾರೆ. ವಿಷ್ಣು ವಂಶಾವಳಿ ಎಂದಾದರೂ ಹೇಳಬಹುದು ಅಥವಾ ಲಕ್ಷ್ಮಿ-ನಾರಾಯಣ ವಂಶಾವಳಿ ಎಂದಾದರೂ ಹೇಳಿ ಮಾತು ಒಂದೇ ಆಗಿದೆ. ಈ ಎಲ್ಲಾ ಮಾತುಗಳು ಧಾರಣೆ ಮಾಡುವಂತದ್ದಾಗಿದೆ. ಬಾಬಾ ಆತ್ಮೀಯ ತಂದೆ ಆಗಿದ್ದಾರೆ ಮತ್ತು ಇದು ಆತ್ಮೀಯ ವಿದ್ಯೆಯಾಗಿದೆ, ಆತ್ಮೀಯ ಚಿಕಿತ್ಸೆಯಾಗಿದೆ. ಆದ್ದರಿಂದ ಬೋರ್ಡ್ ಮೇಲೆ ಹೆಸರನ್ನೂ ಸಹ ಈ ರೀತಿ ಬರೆಯಬೇಕಾಗಿದೆ – “ಬ್ರಹ್ಮಾಕುಮಾರಿಯರ ಆತ್ಮೀಯ ಈಶ್ವರೀಯ ವಿಶ್ವ ವಿದ್ಯಾಲಯ”. ಆತ್ಮೀಯ ಅಕ್ಷರವನ್ನು ಖಂಡಿತ ಬರೆಯಬೇಕು. ಆತ್ಮೀಯ ಆಸ್ಪತ್ರೆ ಎಂದೂ ಸಹ ಕರೆಯಬಹುದಾಗಿದೆ, ಏಕೆಂದರೆ ತಂದೆಯನ್ನು ಅವಿನಾಶಿ ಸರ್ಜನ್ ಎಂದು ಹೇಳುತ್ತಾರೆ, ಪತಿತ ಪಾವನ, ಜ್ಞಾನದ ಸಾಗರ ಎಂದೂ ಸಹ ಹೇಳುತ್ತಾರೆ. ಅವರು ಧೈರ್ಯವನ್ನು ಕೊಡುತ್ತಿದ್ದಾರೆ -ಮಕ್ಕಳೇ ನಾನು ಬಂದಿದ್ದೇನೆ. ನಾನು ಆತ್ಮಗಳಿಗೆ ಓದಿಸುವವನಾಗಿದ್ದೇನೆ. ನನಗೆ ಪರಮಾತ್ಮ ಎಂದು ಹೇಳುತ್ತಾರೆ. ಈಗ ಆತ್ಮ ರೋಗಿಯಾಗಿದೆ, ತುಕ್ಕು ಹಿಡಿದಿದೆ. ಸತ್ಯಯುಗದಲ್ಲಿ ಪವಿತ್ರ ಆತ್ಮರು ಇರುತ್ತಾರೆ, ಇಲ್ಲಿ ಅಪವಿತ್ರ ಆತ್ಮರಿದ್ದಾರೆ. ಅಲ್ಲಿ ಪುಣ್ಯಾತ್ಮರಿದ್ದಾರೆ ಇಲ್ಲಿ ಪಾಪಾತ್ಮರಿದ್ದಾರೆ. ಆತ್ಮನ ಮೇಲೆಯೇ ಎಲ್ಲಾ ಆಧಾರವಾಗಿದೆ. ಪರಮಾತ್ಮ ಆತ್ಮನಿಗೆ ಶಿಕ್ಷಣ ಕೊಡುವವರು ಆಗಿದ್ದಾರೆ. ಆತ್ಮರು ಅವರನ್ನೇ ನೆನಪು ಮಾಡುತ್ತಾರೆ. ಎಲ್ಲವನ್ನು ಅವರಿಂದಲೇ ಪಡೆಯಬೇಕಾಗಿದೆ. ಯಾರಾದರೂ ದುಃಖಿ ಬಡವರಾಗಿದ್ದರೆ ಹೇಳುತ್ತಾರೆ-ದಯೆ ತೋರಿಸಿ ಸಾಹುಕಾರರಿಂದ ಸ್ವಲ್ಪ ಹಣವನ್ನು ಕೊಡಿಸಿ. ಹಣ ಸಿಕ್ಕಿತೆಂದರೆ ಹೇಳುತ್ತಾರೆ ಈಶ್ವರ ಕೊಟ್ಟರು ಅಥವಾ ಕೊಡಿಸಿದರು. ಯಾರೇ ಬಡಗಿ ಇರುತ್ತಾರೆಂದರೆ ಅವರಿಗೆ ಮಾಲಿಕನಿಂದ ಸಿಗುತ್ತದೆ. ಮಕ್ಕಳಿಗಂತೂ ತಂದೆಯಿಂದ ಸಿಗುತ್ತದೆ. ಆದರೆ ಈಶ್ವರನ ಹೆಸರೇ ಪ್ರಸಿದ್ದವಾಗುತ್ತದೆ. ಈಗ ಈಶ್ವರನನ್ನಂತೂ ಮನುಷ್ಯರು ಅರಿತುಕೊಂಡೇ ಇಲ್ಲ. ಆದ್ದರಿಂದ ಈ ಎಲ್ಲಾ ಯುಕ್ತಿಗಳನ್ನು ರಚಿಸಲಾಗುತ್ತದೆ. ಕೇಳಬೇಕಾಗಿದೆ-ಪರಮಪಿತ ಪರಮಾತ್ಮನೊಂದಿಗೆ ನಿಮ್ಮ ಸಂಬಂಧವೇನು? ಪ್ರಜಾಪಿತ ಬ್ರಹ್ಮಾ ಮತ್ತು ಜಗದಂಬಾರೊಂದಿಗೆ ನಿಮ್ಮ ಸಂಬಂಧವೇನು? ರಾಜ ರಾಜೇಶ್ವರಿ ಲಕ್ಷ್ಮೀ ನಾರಾಯಣರೊಂದಿಗೆ ನಿಮ್ಮ ಸಂಬಂಧವೇನು? ಅವರಂತೂ ಸ್ವರ್ಗದ ಮಾಲಿಕರಾಗಿದ್ದಾರೆ. ಅವಶ್ಯವಾಗಿ ಸ್ವರ್ಗದ ಸ್ಥಾಪನೆ ಮಾಡುವವರೇ ಇವರಿಗೆ ಆಸ್ತಿ ಕೊಟ್ಟಿರಬೇಕು. ಲಕ್ಷ್ಮೀ ನಾರಾಯಣರಂತೂ ವಿಷ್ಣು ಪುರಿಯ ಮಾಲಿಕರಾಗಿದ್ದಾರಲ್ಲವೇ. ಮುಖ್ಯ ಚಿತ್ರವಾಗಿದೆ ಶಿವಬಾಬಾ ಮತ್ತು ಬ್ರಹ್ಮಾ ವಿಷ್ಣು ಶಂಕರರದು. ವಿಷ್ಣುವಿನದು ಅಲಂಕರಿಸಿದ ರೂಪವನ್ನು ತೋರಿಸುತ್ತಾರೆ. ವಿಷ್ಣುವಿನ ಮುಖಾಂತರ ಪಾಲನೆ ಶಂಕರನ ಮುಖಾಂತರ ವಿನಾಶ ಮಾಡುತ್ತಾರೆ. ಶಂಕರನಿಗೆ ಅಷ್ಟೊಂದು ಕರ್ತವ್ಯವಿಲ್ಲ. ಗಾಯನ ಯೋಗ್ಯರಂತೂ ಶಿವಬಾಬಾ ಆಗಿದ್ದಾರೆ ಮತ್ತು ವಿಷ್ಣುವು ಆಗುತ್ತಾರೆ. ಶಂಕರನ ಪಾತ್ರ ಬೇರೆ ಆಗಿದೆ. ಅವರ ಮುಖಾಂತರವಂತೂ ವಿನಾಶವಾಗುತ್ತದೆ. ಹೆಸರಿಟ್ಟಿದ್ದಾರೆ ತ್ರಿಮೂರ್ತಿ. ರಾಮ ಸೀತೆ, ಲಕ್ಷ್ಮೀನಾರಾಯಣ ಇದೇ ಮುಖ್ಯ ಚಿತ್ರವಾಗಿದೆ. ಅವರ ನಂತರದ ಚಿತ್ರ ರಾವಣನದಾಗಿದೆ. ಈ ಚಿತ್ರವನ್ನು ಅತಿ ದೊಡ್ಡದಾಗಿ ಮಾಡಿಸಬೇಕು. ರಾವಣನನ್ನು ವರ್ಷ ವರ್ಷವೂ ಸುಡುತ್ತಾರೆ ಇವರೊಂದಿಗೆ ನಿಮ್ಮ ಸಂಬಂಧವೇನು? ರಾವಣನನ್ನು ಸುಡುತ್ತಾರೆಂದರೆ ಅವಶ್ಯಕವಾಗಿ ದೊಡ್ಡ ಶತ್ರುವಾದರು. ಪ್ರದರ್ಶನೆಯಲ್ಲಿ ಇವರ ದೊಡ್ಡ ಚಿತ್ರವನ್ನು ಇಡಬೇಕಾಗಿದೆ. ರಾವಣನ ರಾಜ್ಯ ದ್ವಾಪರನಿಂದ ಶುರುವಾಗುತ್ತದೆ, ಆಗ ದೇವೀ-ದೇವತೆಗಳು ವಾಮ ಮಾರ್ಗದಲ್ಲಿ ಇಳಿಯುತ್ತಾರೆ. ಈ ಚಿತ್ರವನ್ನು ಬಿಟ್ಟು ಉಳಿದ ಚಿತ್ರಗಳನ್ನು ಪ್ರದರ್ಶನಿಯಲ್ಲಿ ತೋರಿಸಬೇಕು-ಇವಲ್ಲೆವು ಕಲಿಯುಗೀ ಚಿತ್ರಗಳಾಗಿದೆ. ಗಣೇಶ, ಹನುಮಂತ, ಕಚ್ಚ, ಮಚ್ಚ ಮುಂತಾದ ಎಲ್ಲರ ಚಿತ್ರಗಳನ್ನೂ ಸಹ ಹಾಕಬೇಕು. ಈ ರೀತಿ ತುಂಬಾ ಭಿನ್ನ ಭಿನ್ನ ವಾದ ಚಿತ್ರಗಳು ಸಿಗುತ್ತವೆ. ಒಂದು ಕಡೆ ಕಲಿಯುಗೀ ಚಿತ್ರ, ಇನ್ನೊಂದು ಕಡೆ ನಿಮ್ಮ ಚಿತ್ರ. ಇದರಮೇಲೆ ನೀವು ತಿಳಿಸಬೇಕಾಗಿದೆ. ಶಿವಬಾಬಾರವರದು ಮತ್ತು ಗುರಿ ಉದ್ದೇಶದ ಚಿತ್ರವೂ ಮುಖ್ಯ ಚಿತ್ರವಾಗಿದೆ. ಸಂಗಮಯುಗದ್ದು ಬೇರೆಯಾಗಿದೆ, ಲಕ್ಷ್ಮೀ-ನಾರಾಯಣರದ್ದು, ಕಲಿಯುಗದ್ದು ಬೇರೆ ಬೇರೆಯಾಗಿದೆ. ಚಿತ್ರಗಳ ಪ್ರದರ್ಶನಿಗೋಸ್ಕರ ತುಂಬಾ ದೊಡ್ಡ ಕೋಣೆಯು ಬೇಕು.

ದೆಹಲಿಯಲ್ಲಿ ತುಂಬಾ ಜನ ಬರುತ್ತಾರೆ. ಅವರಲ್ಲಿ ಒಳ್ಳೆಯವರು ಮತ್ತು ಕೆಟ್ಟವರು ಇರುತ್ತಾರೆ. ಇದರಿಂದ ತುಂಬಾ ಹುಷಾರಾಗಿರಬೇಕು. ಇದರಲ್ಲಿ ತುಂಬಾ ತಿಳುವಳಿಕೆ ಬೇಕು. ಚೀಫ್ ಜಸ್ಟೀಸ್ ನಿಂದ ಏನನ್ನಾದರೂ ಉದ್ಘಾಟನೆ ಮಾಡಿಸುತ್ತಾರೆ, ಅವರು ಪ್ರಸಿದ್ದ ನಂಬರ್ವನ್ ಆಗಿದ್ದಾರೆ. ಪ್ರೆಸಿಡೆಂಟ್ ಮತ್ತು ಚೀಫ್ ಜಸ್ಟೀಸ್ ಸಮಾನ ಆಗಿದ್ದಾರೆ. ಒಬ್ಬರು ಇನ್ನೊಬ್ಬರಿಗೆ ಪ್ರತಿಜ್ಞೆ ಮಾಡಿಸುತ್ತಾರೆ. ಅವಶ್ಯಕವಾಗಿ ಅಲ್ಪ ಸ್ವಲ್ಪ ತಿಳಿದಿದ್ದು ಉದ್ಘಾಟನೆ ಮಾಡಿಸುತ್ತಾರೆ. ಅವರು ನಿರ್ಮಾಣದ್ದೇ ಉದ್ಘಾಟನೆ ಮಾಡುತ್ತಾರೆ. ವಿನಾಶದ್ದಲ್ಲ.

ಈಗ ತಂದೆಯು ತಿಳಿಸುತ್ತಾರೆ-ಮಕ್ಕಳೇ, ನಿಮ್ಮ ಸುಖದ ದಿನಗಳು ಬರಲಿದೆ. ಬೋರ್ಡಿನ ಮೇಲೆ ಹಾಸ್ಪಿಟಲ್ ಎಂಬ ಹೆಸರನ್ನು ಅವಶ್ಯವಾಗಿ ಬರೆಯಬೇಕು-ಇದನ್ನು ಯಾರು ಸ್ಥಾಪನೆ ಮಾಡಿದರು? ಅವಿನಾಶಿ ಸರ್ಜನ್ ಪತಿತ ಪಾವನ ತಂದೆಯೇ ಸ್ಥಾಪನೆ ಮಾಡುತ್ತಾರಲ್ಲವೇ! ಪಾವನ ಪ್ರಪಂಚದಲ್ಲಂತೂ ಪಾವನ ಮನುಷ್ಯರಿಗೇ ಎಂದೂ ಕಾಯಿಲೆ ಮುಂತಾದವು ಬರುವುದಿಲ್ಲ. ಈ ಪತಿತ ಪ್ರಪಂಚದಲ್ಲಂತೂ ಬಹಳ ಕಾಯಿಲೆಗಳಿದೆ. ಆದ್ದರಿಂದ ಸೇವೆಗೋಸ್ಕರ ವಿಚಾರ ನಡೆಸಬೇಕು-ಯಾವ ಯಾವ ಚಿತ್ರ ಇಡಬೇಕು, ಹೇಗೆ ತಿಳಿಸಬೇಕು. ಒಂದುವೇಳೆ ಯಾರಾದರು ಸರಿಯಾಗಿ ಗೊತ್ತಿಲ್ಲದವರು (ಬುದ್ದು) ತಿಳಿಸುತ್ತಾರೆಂದರೆ ಅವರಿಗೆ ಏನೂ ಅರ್ಥ ಆಗುವುದಿಲ್ಲ. ಹೇಳುತ್ತಾರೆ ಇಲ್ಲಿ ಏನೂ ಇಲ್ಲ. ಅವರು ಸುಳ್ಳನ್ನು ಹೇಳುತ್ತಿರುತ್ತಾರೆ. ಆದ್ದರಿಂದ ಪ್ರದರ್ಶನಿಯಲ್ಲಿ ಎಂದೂ ಗೊತ್ತಿಲ್ಲದವರನ್ನು ತಿಳಿಸಿಕೊಡಲು ನಿಲ್ಲಿಸಬಾರದು. ತಿಳಿಸಿಕೊಡುವವರೂ ತುಂಬಾ ಹುಷಾರಾಗಿರಬೇಕು. ಭಿನ್ನ ಭಿನ್ನವಾದ ಮನುಷ್ಯರು ಬರುತ್ತಾರೆ ಎಂದಾಗ ದೊಡ್ಡ ಮನುಷ್ಯರಿಗೆ ಯಾರೇ ಸರಿಯಾಗಿ ಗೊತ್ತಿಲ್ಲದವರು ತಿಳಿಸುತ್ತಾರೆಂದರೆ ಇಡೀ ಪ್ರದರ್ಶನಿಯ ಹೆಸರನ್ನೇ ಕೆಡಿಸಿ ಬಿಡುತ್ತಾರೆ. ಬಾಬಾ ತಿಳಿಸಬಲ್ಲರು-ಇಂತಿಂತಹವರು ಈ ಪ್ರಕಾರದ ಶಿಕ್ಷಕಿ ಆಗಿದ್ದಾರೆ. ಒಬ್ಬರು ಇನೊಬ್ಬರ ತರಹ ಬುದ್ದಿವಂತರಾಗಿರುವುದಿಲ್ಲ. ಬಹಳ ದೇಹಾಭಿಮಾನಿಗಳೂ ಇದ್ದಾರೆ.

ಈಗ ತಂದೆ ತಿಳಿಸುತ್ತಾರೆ – ಹೇ ಆತ್ಮರೇ ನಿಮ್ಮ ಸುಖದ ದಿನಗಳು ಬರುತ್ತಿವೆ. ಸ್ವರ್ಗದ ಹೆಸರನ್ನು ಎಲ್ಲರು ಹೇಳುತ್ತಾರೆ ಆದರೆ ಸ್ವರ್ಗದಲ್ಲೂ ಸಹ ನಂಬರ್ವಾರ್ ಪದವಿಗಳಿರುತ್ತವೆ. ನರಕದಲ್ಲೂ ಸಹ ನಂಬರ್ವಾರ್ ಪದವಿಗಳಿವೆ. ವಿಜಯ ಮಾಲೆಯಲ್ಲಿ ಪೋಣಿಸಲ್ ಪಡುವವರು ರಾಜ ರಾಜೇಶ್ವರಿ ಆಗುತ್ತಾರೆ. ನಾವು ಕೇಳುತ್ತೇವೆ-ಜ್ಞಾನಜ್ಞಾನೇಶ್ವರಿ ಜಗದಂಬ ಜೊತೆ ನಿಮ್ಮ ಸಂಬಂಧವೇನು? ಜ್ಞಾನ ಜ್ಞಾನೇಶ್ವರಿಗೆ ಈಶ್ವರ ಜ್ಞಾನವನ್ನು ಕೊಡುತ್ತಾರೆಂದರೆ ರಾಜ ರಾಜೇಶ್ವರಿ ಆಗುತ್ತಾರೆ. ಜಗದಂಬಾರವರಿಗೂ ಸಹ ಬಹಳ ಮಕ್ಕಳಿದ್ದಾರೆ ಮತ್ತು ಪ್ರಜಾಪಿತ ಬ್ರಹ್ಮಾರವರಿಗೂ ಸಹ ಬಹಳ ಮಕ್ಕಳಿದ್ದಾರೆ. ಇದು ಎಷ್ಟು ಸೂಕ್ಷ್ಮ ಮಾತಾಗಿದೆ. ಜಗದಂಬ ಮತ್ತು ಪ್ರಜಾಪಿತ ಬ್ರಹ್ಮಾ ಯಾರು ಎಂದು ಮನುಷ್ಯರು ತಿಳಿದುಕೊಳ್ಳಲು ಸಾಧ್ಯವಿಲ್ಲ! ಪ್ರಜಾಪಿತ ಬ್ರಹ್ಮನ ಮುಖವಂಶಾವಳಿಯಲ್ಲವೆ. ತೀಕ್ಷ್ಣ ಬುದ್ದಿಯುಳ್ಳವರು ತಕ್ಷಣ ಕೇಳುತ್ತಾರೆ ಪ್ರಜಾಪಿತ ಬ್ರಹ್ಮಾ ಮತ್ತು ಜಗದಂಬಾರವರಿಗೆ ಪರಸ್ಪರ ಯಾವ ಸಂಬಂಧವಿದೆ? ಇದು ನಮಗೆ ತಿಳಿಯುತ್ತಿಲ್ಲ ಇಷ್ಟೆಲ್ಲಾ ಮಕ್ಕಳು ಮುಖದಿಂದ ಆಗಿದ್ದಾರೆ. ಈ ರೀತಿಯ ಪ್ರಶ್ನೆಯಿಂದ ಬರುವವರ ಬುದ್ದಿಗೂ ಸಹ ಅರ್ಥವಾಗುತ್ತದೆ. ತಂದೆ ಎಲ್ಲಾ ರಹಸ್ಯವನ್ನು ತಿಳಿಸುತ್ತಾರೆ. ತ್ರಿಮೂರ್ತಿ ವೃಕ್ಷ ಚಕ್ರ ಲಕ್ಷ್ಮಿ-ನಾರಾಯಣರ ಚಿತ್ರ ಇದರಲ್ಲಿ ಗುರಿ ಧ್ಯೇಯವೂ ಇದೆ. ಆಸ್ತಿಯೇನು ಕೊಡುವವರೂ ಸಹ ಮೇಲೆ ಇದ್ದಾರೆ. ತಿಳಿಸುವಂತವರು ಬಹಳ ಬುದ್ದಿವಂತರಾಗಿರಬೇಕು. ರಾವಣನೊಂದಿಗೆ ನಿಮ್ಮ ಸಂಬಂಧವೇನು? ಇಷ್ಟು ದೊಡ್ಡ ದೊಡ್ಡ ವಿದ್ವಂಸರು ಪಂಡಿತರು ರಾವಣ ನಮ್ಮ ಶತ್ರು ಹೇಗೆ ಎಂದು ತಿಳಿದಿಲ್ಲ. ನಾವೂ ಕೂಡ ಮೊದಲು ತಿಳಿದಿರಲ್ಲಿಲ್ಲ. ತಂದೆ ತಿಳಿಸುತ್ತಾರೆ ಈ ಬ್ರಹ್ಮಾರವರನ್ನು ನಾನು ದತ್ತು ಮಾಡಿಕೊಂಡಿದ್ದೇನೆ ಇವರೂ ಸಹ ತಿಳಿದಿರಲಿಲ್ಲ. ಈಗ ತಿಳಿದುಕೊಂಡರೆಂದರೆ ಬೇರೆಯವರಿಗೂ ಸಹ ತಿಳಿಸಲು ಬಹಳ ಕುತೂಹಲವಿರಬೇಕು. ಈ ಪ್ರದರ್ಶನ ಸಂಪೂರ್ಣ ಹೊಸದಾಗಿದೆ. ಭಲೆ ಅನ್ಯರು ಕಾಪಿ ಮಾಡಿದ್ದರೂ ಸಹ ತಿಳಿಸಲು ಸಾಧ್ಯವಿಲ್ಲ. ಇದು ಅದ್ಭುತವಾಗಿದೆ. ಬಹಳ ನಶೆ ಬೇಕು. ಸೇವೆಯಲ್ಲಿ ಪೂರ್ಣ ತೊಡಗಿರಬೇಕು. ಸೇವೆಗಾಗಿ ಬಹಳ ವಿಶಾಲ ಬುದ್ದಿಯುಳ್ಳವರು ಬೇಕು. ಖರ್ಚಂತೂ ಆಗುತ್ತದೆ. ಹಣವಂತೂ ಖರ್ಚು ಮಾಡುವುದಕ್ಕಾಗಿರುವುದು. ಖರ್ಚನ್ನು ಮಾಡುತ್ತೀರೆಂದರೆ ಅದು ವೃದ್ದಿ ಆಗುತ್ತಾ ಹೋಗುತ್ತದೆ. ಹಣವನ್ನು ಕೊಟ್ಟರೆ ಹಣ ಕಡಿಮೆ ಆಗುವುದಿಲ್ಲ. ಮಕ್ಕಳಂತೂ ಬಹಳಷ್ಟು ಜನ ಆಗುತ್ತಾರೆ. ಹಣವಂತೂ ಸೇವೆಯಲ್ಲಿ ತೊಡಗಿಸಬೇಕು. ರಾಜಧಾನಿಯಂತೂ ಸತ್ಯಯುಗದಲ್ಲಿ ಆಗುವುದು. ಇಲ್ಲಂತೂ ಮೆಹಲುಗಳನ್ನು ಕಟ್ಟಬಾರದು. ಅದರಲ್ಲಿ ಸರ್ಕಾರದ್ದು ಎಷ್ಟೆಲ್ಲ ಖರ್ಚು ಆಗುತ್ತದೆ. ಇಲ್ಲಿ ಚಿತ್ರ ಮಾಡಲು ಖರ್ಚು ಆಗುತ್ತದೆ. ದಿನ ಪ್ರತಿ ದಿನ ಒಳ್ಳೊಳ್ಳೆ ಪಾಯಿಂಟ್ಸ್ ಗಳು ದೊರೆಯುತ್ತವೆ. ರಾವಣ ರಾಜ್ಯ ಯಾವಾಗಿನಿಂದ ಪ್ರಾರಂಭವಾಯುತ್ತೆಂದು ಬಹಳ ಯುಕ್ತಿಯಿಂದ ತಿಳಿಸಬೇಕು. ಅರ್ಧ ಸಮಯ ರಾವಣ ರಾಜ್ಯ ಅರ್ಧ ಸಮಯ ರಾಮ ರಾಜ್ಯ. ಈ ರಾವಣನಿಂದ ತಂದೆಯೇ ಬಂದು ಬಿಡಿಸುತ್ತಾರೆ. ಬೇರೆ ಯಾರೂ ಬಿಡಿಸಲು ಸಾಧ್ಯವಿಲ್ಲ. ಇದಕ್ಕಾಗಿ ಸರ್ವಶಕ್ತಿವಂತನೇ ಬೇಕು. ಅವರೇ ಮಾಯೆಯ ಮೇಲೆ ಜಯವನ್ನು ಗಳಿಸಿ ಕೊಡಲು ಸಾಧ್ಯವಿದೆ. ನಂತರ ಸತ್ಯಯುಗದಲ್ಲಿ ಈ ರಾವಣ ಶತ್ರು ಇರುವುದೇ ಇಲ್ಲ. ನಿಧಾನ ನಿಧಾನವಾಗಿ ನಿಮ್ಮ ಪ್ರಭಾವ ಬಹಳ ಬೀರಲಿದೆ ನಂತರ ಮಾತೆಯರು, ಕನ್ಯೆಯರ ಎಲ್ಲಾ ಬಂಧನಗಳು ಬಿಡಿಸಲ್ಪಡುತ್ತವೆ. ನಂತರ ಇದು ಒಳ್ಳೆಯ ಮಾತೆಂದು ತಿಳಿದುಕೊಳ್ಳುತ್ತಾರೆ. ಕಳಂಕವಂತೂ ಬರಲೇ ಬೇಕು. ಕೃಷ್ಣನಿಗೂ ಸಹ ಕಳಂಕ ಬಂದಿದೆಯಲ್ಲವೆ. ಸ್ಥಾಪನೆ ಸಮಯದಲ್ಲೂ ಸಹ ಓಡಿಸಿಕೊಂಡು ಹೋಗುತ್ತಾರೆಂದು ಕಳಂಕವನ್ನು ಹೊರಿಸಿ ನಿಂದನೆ ಮಾಡುತ್ತಿದ್ದರು. ನಂತರ ಸ್ವರ್ಗದಲ್ಲೂ ಸಹ ಕಳಂಕವನ್ನು ತೋರಿಸಿದ್ದಾರೆ, ಸರ್ಪ ಖಚ್ಚಿತು ಎಂದು ಎಷ್ಟೆಲ್ಲಾ ವ್ಯರ್ಥ ಮಾತುಗಳಿವೆ. ಪ್ರದರ್ಶಿನಿಯಲ್ಲಿ ಬಹಳಷ್ಟು ಜನ ಬರುತ್ತಾರೆ. ಅವರನ್ನು ಸೇವಾಕೇಂದ್ರಕ್ಕೆ ಬಂದು ತಿಳಿದುಕೊಳ್ಳಿ ಎಂದು ಹೇಳಲಾಗುತ್ತದೆ. ಕಾಲನ ಮೇಲೆ ಜಯವನ್ನು ಗಳಿಸಿ. ಸತ್ಯಯುಗದಲ್ಲಿ ಕಾಲ ಕಬಳಿಸುವುದಿಲ್ಲ. ಒಂದು ಕಥೆಯಿದೆ ಯಮದೂತ ಕರೆದುಕೊಂಡು ಹೋಗಲು ಹೋದಾಗ ಆತನಿಗೆ ನೀನು ಒಳಗಡೆ ಬರಲು ಸಾಧ್ಯವಿಲ್ಲವೆಂದು ಹೇಳಲಾಯಿತು…… ಇದು ಬಹಳ ತಿಳಿದುಕೊಳ್ಳುವ ಮಾತು. ಇದರಲ್ಲಿ ಬಹಳ ವಿಶಾಲ ಬುದ್ದಿ ಬೇಕು ಮತ್ತು ದೇಹೀಅಭಿಮಾನಿಯಾಗಿರಬೇಕು. ನಾನು ಆತ್ಮ ಹಳೆಯ ಸಂಬಂಧ ಮತ್ತು ಹಳೆಯ ಶರೀರದ ಪರಿವೇ ಇರಬಾರದು. ಈಗ ನಾಟಕ ಪೂರ್ಣವಾಗಲಿದೆ. ನಾವು ಮರಳಿ ಹೋಗುತ್ತಿದ್ದೇವೆ. ಸ್ವರ್ಗದಲ್ಲಿ ಹೋಗಿ ನಾವು ಹೊಸ ಸಂಬಂಧದಲ್ಲಿ ಸೇರಬೇಕಾಗಿದೆ. ಈ ಜ್ಞಾನ ಬುದ್ದಿಯಲ್ಲಿದೆ. ಈ ಹಳೆಯ ಪ್ರಪಂಚವಂತೂ ಸಮಾಪ್ತಿ ಆಗಲಿದೆ. ನಮ್ಮ ಸಂಬಂಧ ತಂದೆ ಮತ್ತು ಹೊಸ ಜಗತ್ತಿನೊಂದಿಗಿದೆ. ಈ ಮಾತನ್ನು ನೆನಪಿಟ್ಟುಕೊಳ್ಳಬೇಕು. ಹೊಸ ಪ್ರಪಂಚಕ್ಕಾಗಿ ಈ ಜ್ಞಾನ ಸಿಕ್ಕಿದೆ. ಈ ಹಳೆಯ ಪ್ರಪಂಚ ಸ್ಮಶಾನವಗಿದೆ. ಇದರೊಂದಿಗೆ ಏಕೆ ಮನಸ್ಸಿಡಬೇಕು. ದೇಹ ಸಹಿತವಾಗಿ ಎಲ್ಲವೂ ಸಮಾಪ್ತಿಯಾಗಲಿದೆ. ದೇಹೀ ಅಭಿಮಾನಿ ಯಾಗುವುದು ಒಳ್ಳೆಯದಿದೆ. ನಾವು ಬಾಬಾರವರ ಬಳಿ ಹೋಗುತ್ತಿದ್ದೇವೆ. ತನ್ನೊಂದಿಗೆ ತಾವೇ ಮಾತನಾಡುಕೊಳ್ಳಿ ಆಗ ಅನ್ಯರಿಗೆ ತಿಳಿಸಿಕೊಡಲು ಸಾಧ್ಯವಾಗುತ್ತದೆ.

ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ನಮ್ಮ ಸುಖದ ದಿನ ಬರಲಿದೆ. ಎಷ್ಟು ಉತ್ತೀರ್ಣರಾಗುವ ಪುರುಷಾರ್ಥ ಮಾಡುತ್ತೀರೆಂದರೆ ಶ್ರೇಷ್ಠ ಪದವಿ ಸಿಗುತ್ತದೆ. ಸರ್ಟಿಫಿಕೆಟ್ ಅಂತೂ ಶಿಕ್ಷಕರೆ ಕೊಡುತ್ತಾರಲ್ಲವೆ. ಇವರಲ್ಲಿ ಎಷ್ಟು ಸತ್ಯತೆಯಿದೆ, ಇವರು ಎಷ್ಟು ಸೇವಾಧಾರಿ ಆಗಿದ್ದಾರೆ, ಇವರು ಸ್ಥಾಪನೆಯ ಕರ್ತವ್ಯವನ್ನು ಮಾಡುತ್ತಾರೆಯೇ, ವಿನಾಶದ ಕರ್ತವ್ಯವನ್ನು ಮಾಡುವುದಿಲ್ಲ…….. ಇದೆಲ್ಲವನ್ನು ಟೀಚರ್ ತಿಳಿದಿರುತ್ತಾರೆ. ಸೇವಾಧಾರಿಗಳೇ ತಂದೆಯ ಹೃದಯದಲ್ಲಿರುತ್ತಾರೆ. ಇದುವರೆಗೂ ಯಾರೂ ಪರಿಪೂರ್ಣರು ಆಗಿಲ್ಲ, ಬಲಹೀನತೆಗಳು ಎಲ್ಲರಲ್ಲೂ ಇದೆ. ಮುಂದೆ ನಡೆಯುತ್ತಾ ಸಂಪೂರ್ಣರಾಗಬೇಕು. ಮನುಷ್ಯರ ಜೀವನವನ್ನು ಹೇಗೆ ಮಾಡುವುದೆಂಬ ಆಸಕ್ತಿ ಇಟ್ಟುಕೊಳ್ಳಬೇಕು. ಮುಳ್ಳುಗಳನ್ನು ಹೂಗಳನ್ನಾಗಿ ಮಾಡಬೇಕು. ತಂದೆಯೂ ಸಹ ಮುಳ್ಳುಗಳಂತಹ ಮನುಷ್ಯರನ್ನು ಹೂಗಳನ್ನಾಗಿ ಮಾಡುತ್ತಿದ್ದಾರೆ. ದೇವತೆಗಳನ್ನಾಗಿ ಮಾಡುತ್ತಾರೆ. ಅದಕ್ಕಾಗಿ ಜ್ಞಾನ ಹಾಗೂ ಯೋಗವು ಇರಬೇಕು. ಮಕ್ಕಳು ವೃದ್ದಿಯಾಗುತ್ತಾ ವಿರೋಧ ಮಾಡುವವರು ಇರುವುದಿಲ್ಲ. ಅಂತಹವರು ಸರಿ ಹೋಗುತ್ತಾರೆ. ಇಲ್ಲಿ ಯಾರು ದೇವತೆಗಳಂತೂ ಇಲ್ಲ. ಪ್ರತಿ ಮಾತಿನ ಕಡೆ ಗಮನ ಕೊಡಬೇಕಾಗುತ್ತದೆ. ಎಲ್ಲಾ ರೀತಿಯ ತಿಳುವಳಿಕೆ ಇರಬೇಕು. ಸರ್ವೀಸನ್ನು ಸರಿಯಾದ ರೀತಿಯಲ್ಲಿ ಮಾಡುತ್ತಿದ್ದಾರೋ ಅಥವಾ ಇಲ್ಲವೆ, ಸೋಮಾರಿಗಳಂತೂ ಯಾರೂ ಇಲ್ಲ ತಾನೆ! ಇಡೀ ದಿನ ಇದು ಬೇಕು ಅದು ಬೇಕು ಎನ್ನುವುದಿಲ್ಲವೇ, ಇದಕ್ಕೂ ಲೋಭವೆಂದು ಕರೆಯಲಾಗುತ್ತದೆ. ಉತ್ತಮವಾದ ಊಟ ಬೇಕು ವಸ್ತ್ರ ಬೇಕು ಇಂತಹ ಆಸೆಗಳು ತುಂಬಾ ಇರುತ್ತವೆ. ವಾಸ್ತವಿಕವಾಗಿ ಯಜ್ಞದಲ್ಲಿ ಯಾವ ವಸ್ತು ಸಿಗುತ್ತದೋ ಅದು ಚೆನ್ನಾಗಿಯೆ ಇರುತ್ತದೆ. ಸನ್ಯಾಸಿಗಳು ಎಂದೂ ಅನ್ಯ ವಸ್ತುಗಳನ್ನು ತೆಗೆದುಕೊಳ್ಳುವುದಿಲ್ಲ. ಈ ಅಭ್ಯಾಸ ಉತ್ತಮ ಅಲ್ಲವೆಂದು ತಿಳಿದಿರುತ್ತಾರೆ. ಶಿವಬಾಬಾರವರ ಯಜ್ಞದಿಂದ ಎಲ್ಲವೂ ಚೆನ್ನಾಗಿ (ಸಂತುಷ್ಟವಾಗಿ) ಸಿಗುತ್ತದೆ. ನಂತರವೂ ಅಲ್ಪ ಸ್ವಲ್ಪ ಆಸೆ ಇಟ್ಟುಕೊಳ್ಳುತ್ತಾರೆ. ಮೊದಲಿಗೆ ಜ್ಞಾನ ಯೋಗದ ಆಸೆಗಳನ್ನು ಪೂರ್ಣ ಮಾಡಿಕೊಳ್ಳಬೇಕು. ಏಕೆಂದರೆ ಈ ಆಸೆಗಳನ್ನಂತೂ ಜನ್ಮ ಜನ್ಮಾಂತರದಿಂದ ಇಟ್ಟುಕೊಂಡು ಬಂದಿದ್ದೇವೆ. ಈಗ ತಂದೆಯನ್ನು ನೆನಪು ಮಾಡುವುದರಿಂದ ಸದಾ ಆರೋಗ್ಯವಂತರು ಆಗುತ್ತೇವೆ ಎಂಬ ಆಸೆಯನ್ನು ಇಟ್ಟುಕೊಳ್ಳಬೇಕು. ಇದು ಆತ್ಮಿಕ ಆಸ್ಪತ್ರೆಯಾಗಿದೆಯೆಂದು ಅಗತ್ಯವಾಗಿ ಬರೆಯಬೇಕು. ಇದರಿಂದ ಮನುಷ್ಯರು ಇದನ್ನು ಆಸ್ಪತ್ರೆ ಅಥವಾ ಕಾಲೇಜಾಗಿದೆ ಎಂದು ತಿಳಿಯಲಿ. ತಂದೆಯು ಮನೆಗಳನ್ನು ಸಹ ಆಸ್ಪತ್ರೆ ಹಾಗೂ ಕಾಲೇಜಿನ ರೂಪದಲ್ಲಿ ಕಟ್ಟಿಸಿದ್ದಾರೆ. ಕಾಲೇಜುಗಳಲ್ಲಿ ಯಾವುದೇ ಶೃಂಗಾರವಿರುವುದಿಲ್ಲ, ಸರಳವಾಗಿರುತ್ತವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಸೋಮಾರಿಗಳು (ಆರಾಮ-ಪಸಂದ್) ಆಗಬಾರದು. ತುಂಬಾ ಸೇವೆಯಲ್ಲಿ ಆಸಕ್ತಿ ಇಟ್ಟುಕೊಳ್ಳಬೇಕು. ಸೇವೆಗಾಗಿಯೇ ಹಣವನ್ನು ಖರ್ಚು ಮಾಡಬೇಕು. ಮನುಷ್ಯರು ಜೀವನವನ್ನು ಹೂವುಗಳನ್ನಾಗಿ ಮಾಡಬೇಕು.

2. ಸದಾ ಸ್ಥಾಪನೆಯ ಕರ್ತವ್ಯವನ್ನು ಮಾಡಬೇಕು. ವಿನಾಶದ ಕರ್ತವ್ಯವನ್ನು ಮಾಡಬಾರದು. ತಮ್ಮೊಂದಿಗೆ ತಾವೇ ಮಾತನಾಡಿಕೊಳ್ಳಬೇಕು…………….. ನಾವು ಎಲ್ಲಿಗೆ ಹೋಗುತ್ತಿದ್ದೇವೆ! ಏನು ಆಗುತ್ತಿದ್ದೇವೆ!

ವರದಾನ:-

ಶಕ್ತಿಶಾಲಿ ನೆನಪು ಒಂದೇ ಸಮಯದಲ್ಲಿ ಡಬಲ್ ಅನುಭವ ಮಾಡಿಸುತ್ತದೆ. ಒಂದು ಕಡೆ ನೆನಪಿನ ಅಗ್ನಿಯಾಗಿ ಭಸ್ಮಗೊಳಿಸುವ, ಪರಿವರ್ತನೆ ಮಾಡುವ ಕಾರ್ಯವನ್ನು ಮಾಡುತ್ತದೆ, ಮತ್ತೊಂದು ಕಡೆ ಖುಷಿ ಹಾಗೂ ಹಗುರತೆಯ ಅನುಭವ ಮಾಡಿಸುತ್ತದೆ. ಇಂತಹ ವಿಧಿಪೂರ್ವಕ ಶಕ್ತಿಶಾಲಿ ನೆನಪನ್ನೇ ಯಥಾರ್ಥ ನೆನಪು ಎಂದು ಹೇಳಲಾಗುತ್ತದೆ. ಇಂತಹ ಯಥಾರ್ಥ ನೆನಪಿನಲ್ಲಿ ಇರುವವರು ಸ್ಮೃತಿ ಸ್ವರೂಪ ಮಕ್ಕಳೇ ಸಮರ್ಥರಾಗಿರುತ್ತಾರೆ. ಈ ಸ್ಮೃತಿಯಿಂದ ಸಮರ್ಥತೆಯೇ ನಂಬರ್ವನ್ ಬಹುಮಾನದ ಅಧಿಕಾರಿಯನ್ನಾಗಿ ಮಾಡುತ್ತದೆ.

ಸ್ಲೋಗನ್:-

ಲವಲೀನ ಸ್ಥಿತಿಯ ಅನುಭವ ಮಾಡಿರಿ:

ಪರಮಾತ್ಮನ ಪ್ರೀತಿಯು ಈ ಶ್ರೇಷ್ಠವಾದ ಬ್ರಾಹ್ಮಣ ಜೀವನದ ಆಧಾರವಾಗಿದೆ. ಹೇಳುತ್ತಾರೆ- ಪ್ರೀತಿಯಿದ್ದರೆ ಪ್ರಪಂಚವೇ ಇದ್ದಂತೆ, ಪ್ರಾಣವಿದ್ದಂತೆ. ಪ್ರೀತಿಯಿಲ್ಲದಿದ್ದರೆ ಜೀವನವೂ ಇಲ್ಲ. ಪ್ರೀತಿ ಸಿಕ್ಕಿತೆಂದರೆ ಜಗತ್ತೂ ಸಿಕ್ಕಿದಂತೆ. ಪ್ರಪಂಚವು ಒಂದು ಹನಿಗಾಗಿ ಬಾಯಾರಿದೆ ಮತ್ತು ತಾವು ಮಕ್ಕಳಿಗೆ ಪ್ರಭು ಪ್ರೀತಿಯೇ ಆಸ್ತಿಯಾಗಿದೆ. ಇದೇ ಪ್ರಭು ಪ್ರೀತಿಯಿಂದ ಬೆಳೆಯುತ್ತಿದ್ದೀರಿ ಅರ್ಥಾತ್ ಬ್ರಾಹ್ಮಣ ಜೀವನದಲ್ಲಿ ಮುಂದುವರೆಯುತ್ತಿದ್ದೀರಿ ಅಂದಮೇಲೆ ಸದಾ ಪ್ರೀತಿಯ ಸಾಗರನಲ್ಲಿ ಲವಲೀನರಾಗಿರಿ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top