28 September 2021 KANNADA Murli Today | Brahma Kumaris

Read and Listen today’s Gyan Murli in Kannada

September 27, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ತಂದೆಯು ನಿಮ್ಮನ್ನು ಪೂಜಾರಿಗಳಿಂದ ಪೂಜ್ಯರನ್ನಾಗಿ ಮಾಡಲು ಬಂದಿದ್ದಾರೆ, ಪೂಜ್ಯರಿಂದ ಪೂಜಾರಿ ಮತ್ತು ಪೂಜಾರಿಗಳಿಂದ ಪೂಜ್ಯರಾಗುವ ಪೂರ್ಣ ಕಥೆಯನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ”

ಪ್ರಶ್ನೆ:: -

ಯಾವ ಮಾತು ಪ್ರಪಂಚದವರಿಗೆ ಅಸಂಭವವೆನಿಸುವುದು ಮತ್ತು ನೀವು ಅದನ್ನು ಸಹಜವಾಗಿ ತಮ್ಮ ಜೀವನದಲ್ಲಿ ಧಾರಣೆ ಮಾಡಿಕೊಳ್ಳುತ್ತೀರಿ?

ಉತ್ತರ:-

ಗೃಹಸ್ಥ ವ್ಯವಹಾರದಲ್ಲಿದ್ದು ಪವಿತ್ರರಾಗಿರುವುದು ಅಸಂಭವವಾಗಿದೆ ಎಂದು ಪ್ರಪಂಚದವರು ತಿಳಿಯುತ್ತಾರೆ ಮತ್ತು ನೀವು ಸಹಜವಾಗಿ ಧಾರಣೆ ಮಾಡಿಕೊಳ್ಳುತ್ತೀರಿ ಏಕೆಂದರೆ ಇದರಿಂದ ಸ್ವರ್ಗದ ರಾಜ್ಯಭಾಗ್ಯವು ಸಿಗುವುದೆಂದು ನಿಮಗೆ ತಿಳಿದಿದೆ ಅಂದಮೇಲೆ ಇದು ಸಸ್ತಾ ವ್ಯಾಪಾರವಾಯಿತಲ್ಲವೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಇಂದು ಬೆಳಗ್ಗೆ-ಬೆಳಗ್ಗೆ ಯಾರು ಬಂದರು…….

ಓಂ ಶಾಂತಿ. ಅಂಧಕಾರ ಮತ್ತು ಮುಂಜಾನೆ (ಪ್ರಕಾಶ), ಪ್ರಪಂಚದವರಿಗಾಗಿ ಸಂಪೂರ್ಣ ಭಿನ್ನವಾಗಿದೆ, ಅದಂತೂ ಸರ್ವೇ ಸಾಮಾನ್ಯವಾಗಿದೆ. ನೀವು ಮಕ್ಕಳ ಮುಂಜಾನೆಯೇ ಅಸಾಮಾನ್ಯವಾಗಿದೆ. ರಾತ್ರಿ ಮತ್ತು ಮುಂಜಾನೆ ಎಂದು ಯಾವುದಕ್ಕೆ ಹೇಳಲಾಗುತ್ತದೆ ಎಂಬುದನ್ನು ಪ್ರಪಂಚದವರು ತಿಳಿದುಕೊಂಡಿಲ್ಲ. ವಾಸ್ತವದಲ್ಲಿ ಈ ರಾತ್ರಿ ಮತ್ತು ಮುಂಜಾನೆಯು ಕಲ್ಪದ ಈ ಪುರುಷೋತ್ತಮ ಸಂಗಮಯುಗದಲ್ಲಿಯೇ ಆಗುತ್ತದೆ. ಈಗ ಅಜ್ಞಾನ ಅಂಧಕಾರವು ದೂರವಾಗುತ್ತದೆ. ಜ್ಞಾನಸೂರ್ಯ ಪ್ರಕಟ ಎಂದು ಹಾಡುತ್ತಾರೆ, ಆ ಸೂರ್ಯನಂತೂ ಬೆಳಕು ಕೊಡುವವನಾಗಿದ್ದಾನೆ. ಇದು ಜ್ಞಾನಸೂರ್ಯನ ಮಾತಾಗಿದೆ. ಭಕ್ತಿಗೆ ಅಂಧಕಾರ, ಜ್ಞಾನಕ್ಕೆ ಬೆಳಕು ಎಂದು ಹೇಳಲಾಗುತ್ತದೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಮುಂಜಾನೆಯಾಗುತ್ತಿದೆ, ಭಕ್ತಿಮಾರ್ಗದ ರಾತ್ರಿಯು ಮುಕ್ತಾಯವಾಗಿ ಬಿಡುತ್ತದೆ. ಭಕ್ತಿಗೆ ಅಜ್ಞಾನವೆಂದು ಹೇಳಲಾಗುತ್ತದೆ ಏಕೆಂದರೆ ಯಾರ ಭಕ್ತಿ ಮಾಡುವರೋ ಅವರಬಗ್ಗೆ ಸ್ವಲ್ಪವೂ ತಿಳಿದಿಲ್ಲ, ಇದರಲ್ಲಿ ಸಮಯವು ವ್ಯರ್ಥವಾಗುತ್ತದೆ. ಗೊಂಬೆಗಳ ಪೂಜೆಯಾಗುತ್ತಾ ಇರುತ್ತದೆ. ಅರ್ಧಕಲ್ಪದಿಂದ ಈ ಗೊಂಬೆಗಳ ಪೂಜೆಯಾಗುತ್ತದೆ, ಯಾರ ಪೂಜೆ ಮಾಡುವರೋ ಅವರ ಪೂರ್ಣ ಜ್ಞಾನವೂ ಬೇಕಲ್ಲವೆ. ದೇವಿ-ದೇವತೆಗಳದು ಪೂಜ್ಯ ಮನೆತನವಾಗಿದೆ. ಆ ಪೂಜ್ಯರೇ ನಂತರ ಪೂಜಾರಿಗಳಾಗುತ್ತಾರೆ. ಪೂಜ್ಯರಿಂದ ಪೂಜಾರಿ, ಪೂಜಾರಿಗಳಿಂದ ಪೂಜ್ಯರಾಗುವ ಎಷ್ಟು ಉದ್ದಗಲವಾದ ಕಥೆಯಾಗಿದೆ! ಮನುಷ್ಯರಂತೂ ಪೂಜ್ಯ, ಪೂಜಾರಿಯ ಅರ್ಥವನ್ನೂ ತಿಳಿದುಕೊಳ್ಳುವುದಿಲ್ಲ. ಪರಮಪಿತ ಪರಮಾತ್ಮನು ಸಂಗಮದಲ್ಲಿಯೇ ಬರುತ್ತಾರೆ ಆಗ ರಾತ್ರಿಯು ಮುಕ್ತಾಯವಾಗುತ್ತದೆ. ರಾತ್ರಿಯನ್ನು ಬೆಳಕನ್ನಾಗಿ ಮಾಡಲು ಬರುತ್ತಾರೆ ಆದರೆ ಅವರು ಕಲ್ಪದ ಸಂಗಮಯುಗದ ಬದಲು ಯುಗೇ ಯುಗೇ ಎಂದು ಬರೆದು ಬಿಟ್ಟಿದ್ದಾರೆ. ಯಾವಾಗ ನಾಲ್ಕೂ ಯುಗಗಳು ಮುಕ್ತಾಯವಾಗುವುದೋ ಆಗ ಹಳೆಯ ಪ್ರಪಂಚವು ಮುಗಿಯುವುದು ನಂತರ ಹೊಸ ಪ್ರಪಂಚವು ಆರಂಭವಾಗುತ್ತದೆ. ಈಗ ಇದಕ್ಕೆ ಕಲ್ಯಾಣಕಾರಿ ಸಂಗಮಯುಗವೆಂದು ಹೇಳಲಾಗುತ್ತದೆ, ಈ ಸಮಯದಲ್ಲಿ ಎಲ್ಲರೂ ನರಕವಾಸಿಗಳಾಗಿದ್ದಾರೆ. ಯಾರಾದರೂ ಮರಣ ಹೊಂದಿದರೆ ಸ್ವರ್ಗಕ್ಕೆ ಹೋದರೆಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ನರಕದಲ್ಲಿದ್ದರು, ನಾವು ನರಕದಲ್ಲಿದ್ದೇವೆ ಎಂಬುದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ರಾವಣನು ಎಲ್ಲರ ಬುದ್ಧಿಗೆ ಬೀಗ ಹಾಕಿ ಬಿಟ್ಟಿದ್ದಾನೆ. ಎಲ್ಲರ ಬುದ್ಧಿಯು ಭ್ರಷ್ಟವಾಗಿ ಬಿಟ್ಟಿದೆ, ತಂದೆಯು ತಿಳಿಸುತ್ತಾರೆ – ಭಾರತವಾಸಿಗಳ ಬುದ್ಧಿಯು ಎಲ್ಲರಿಗಿಂತ ವಿಶಾಲವಾಗಿತ್ತು ನಂತರ ಯಾವಾಗ ಸಂಪೂರ್ಣ ಕಲ್ಲು ಬುದ್ಧಿಯವರು ಆಗಿ ಬಿಡುವರೋ ಆಗಲೇ ದುಃಖವನ್ನು ಪಡೆಯುತ್ತಾರೆ. ಡ್ರಾಮಾನುಸಾರ ಬುದ್ಧಿ ಹೀನ ಆಗಲೇಬೇಕಾಗಿದೆ, ಮಾಯೆಯೇ ಬುದ್ಧಿಹೀನರನ್ನಾಗಿ ಮಾಡುತ್ತದೆ. ಪೂಜ್ಯರಿಗೆ ಬುದ್ಧಿವಂತರು ಮತ್ತು ಪೂಜಾರಿಗಳಿಗೆ ಬುದ್ಧಿಹೀನರೆಂದು ಹೇಳಲಾಗುತ್ತದೆ. ನಾವು ನೀಚರು ಪಾಪಿಗಳಾಗಿದ್ದೇವೆಂದು ಹೇಳುತ್ತಾರೆ ಆದರೆ ಯಾವಾಗ ಬುದ್ಧಿವಂತರಾಗಿದ್ದೆವು ಎಂಬುದು ಅರ್ಥವಾಗುವುದಿಲ್ಲ. ರಾವಣರೂಪಿ ಮಾಯೆಯು ಸಂಪೂರ್ಣ ಕಲ್ಲು ಬುದ್ಧಿಯವರನ್ನಾಗಿ ಮಾಡಿ ಬಿಡುತ್ತದೆ. ಈಗ ನಿಮಗೆ ಅರ್ಥವಾಗಿದೆ – ನಾವೇ ಪೂಜ್ಯರಾಗಿದ್ದೆವು ನಂತರ ಪೂಜಾರಿಗಳಾದೆವು. ಈಗ ನಿಮಗೆ ಖುಷಿಯಾಗುತ್ತದೆ. ನಮಗೆ ಶಾಂತಿ ಬೇಕು, ಅಥವಾ ಜನನ-ಮರಣದಿಂದ ಮುಕ್ತರಾಗಬೇಕು ಎಂದು ಬಹಳ ದಿನಗಳಿಂದ ಚೀರಾಡುತ್ತಾ ಬಂದಿದ್ದಾರೆ ಆದರೆ ಈ ಮಾಯೆಯ ಬಂಧನಗಳಿಂದ ಮುಕ್ತರಾಗಬೇಕು, ಈ ಜ್ಞಾನವೂ ಯಾರ ಬುದ್ಧಿಯಲ್ಲಿಯೂ ಇಲ್ಲ. ಏಣಿಯನ್ನು ಇಳಿಯುತ್ತಲೇ ಬರುತ್ತೀರಿ, ಸತ್ಯಯುಗದಲ್ಲಿಯೂ ಸಹ ನಿಧಾನ-ನಿಧಾನವಾಗಿ ಇಳಿಯುತ್ತೀರಿ, ಸಮಯ ಹಿಡಿಸುತ್ತದೆ. ಸುಖದ ಏಣಿಯನ್ನು ಇಳಿಯುವುದರಲ್ಲಿ ಸಮಯ ಹಿಡಿಸುತ್ತದೆ, ದುಃಖದ ಏಣಿಯನ್ನು ಬೇಗ-ಬೇಗನೆ ಇಳಿಯುತ್ತೀರಿ, ಸತ್ಯ-ತ್ರೇತಾಯುಗದಲ್ಲಿ 21 ಜನ್ಮಗಳು, ದ್ವಾಪರ-ಕಲಿಯುಗದಲ್ಲಿ 63 ಜನ್ಮಗಳು, ಆಯಸ್ಸು ಕಡಿಮೆ ಆಗಿ ಬಿಡುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ, ನಮ್ಮ ಏರುವ ಕಲೆಯು ಬಹು ಬೇಗನೆ ಆಗಿ ಬಿಡುತ್ತದೆ. ಜನಕನಿಗೆ ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಕ್ಕಿತು ಎಂದು ಹಾಡುತ್ತಾರೆ ಆದರೆ ಜೀವನ್ಮುಕ್ತಿಯ ಅರ್ಥವನ್ನು ತಿಳಿದುಕೊಂಡಿಲ್ಲ. ಒಬ್ಬ ಜನಕನಿಗೇ ಜೀವನ್ಮುಕ್ತಿ ಸಿಕ್ಕಿತೇ ಅಥವಾ ಇಡೀ ಪ್ರಪಂಚಕ್ಕೆ ಸಿಕ್ಕಿತೇ? ಈಗ ನಿಮ್ಮ ಬುದ್ಧಿಯ ಬೀಗವು ತೆರೆದಿದೆ, ಯಾರದು ಮಂಧಬುದ್ಧಿ ಆಗಿರುವುದೋ ಅವರಿಗಾಗಿ ಹೇಳುತ್ತಾರೆ – ಪರಮಾತ್ಮ ಇವರಿಗೆ ಒಳ್ಳೆಯ ಬುದ್ಧಿಯನ್ನು ಕೊಡು ಎಂದು. ಸತ್ಯಯುಗದಲ್ಲಿ ಇಂತಹ ಮಾತಿರುವುದಿಲ್ಲ ಯಾವ ಆತ್ಮರು ಬಹಳ ಕಾಲದಿಂದ ಪರಮಾತ್ಮನಿಂದ ಅಗಲಿ ಇರುತ್ತಾರೆಯೋ ಅವರದೂ ಲೆಕ್ಕವಿದೆ. ತಂದೆಯು ಪರಮಧಾಮದಲ್ಲಿ ಇದ್ದಾಗ ಯಾವ ಆತ್ಮರು ಅವರ ಜೊತೆ ಮುಕ್ತಿಧಾಮದಲ್ಲಿ ಇರುತ್ತಾರೆಯೋ, ಕೊನೆಯಲ್ಲಿ ಬರುತ್ತಾರೆಯೋ ಅವರು ಬಹಳ ಸಮಯ ಜೊತೆಯಲ್ಲಿರುತ್ತಾರೆ. ನಾವು ಸ್ವಲ್ಪ ಸಮಯವೇ ಅಲ್ಲಿರುತ್ತೇವೆ. ಮೊಟ್ಟ ಮೊದಲು ನಾವು ತಂದೆಯಿಂದ ಅಗಲುತ್ತೇವೆ ಆದ್ದರಿಂದ ಪರಮಾತ್ಮ-ಆತ್ಮರು ಬಹುಕಾಲ ಅಗಲಿದ್ದರು ಎಂದು ಗಾಯನವಿದೆ. ಅವರದೇ ಈಗ ಮೇಳವಾಗುತ್ತದೆ ಯಾರು ಬಹಳ ಸಮಯದಿಂದ ತಂದೆಯಿಂದ ಅಗಲಿದ್ದಾರೆ. ಯಾರು ಅಲ್ಲಿ ಬಹಳ ಸಮಯ ಜೊತೆಯಿರುತ್ತಾರೆಯೋ ಅವರನ್ನು ಮಿಲನ ಮಾಡುವುದಿಲ್ಲ. ತಂದೆಯು ತಿಳಿಸುತ್ತಾರೆ – ವಿಶೇಷವಾಗಿ ನೀವು ಮಕ್ಕಳಿಗೆ ನಾನು ಓದಿಸಲು ಬರುತ್ತೇನೆ. ನೀವು ಮಕ್ಕಳ ಜೊತೆ ಇರುತ್ತೇನೆ ಎಂದರೆ ಎಲ್ಲರ ಕಲ್ಯಾಣವಾಗುತ್ತದೆ. ಈಗ ಎಲ್ಲರ ಅಂತಿಮ ಸಮಯ ಆಗಿದೆ. ಈಗ ಎಲ್ಲರೂ ಲೆಕ್ಕಾಚಾರಗಳನ್ನು ಮುಗಿಸಿಕೊಂಡು ಹೊರಟು ಹೋಗುತ್ತಾರೆ ಬಾಕಿ ನೀವು ರಾಜ್ಯಭಾಗ್ಯವನ್ನು ಪಡೆಯುತ್ತೀರಿ. ಈ ಮಾತುಗಳು ಯಾರ ಬುದ್ಧಿಯಲ್ಲಿಯೂ ಇಲ್ಲ, ಹೇ ಪರಮಾತ್ಮ, ಮುಕ್ತಿದಾತ ಮಾರ್ಗದರ್ಶಕ ಎಂದು ಹಾಡುತ್ತಾರೆ. ದುಃಖದಿಂದ ಮುಕ್ತ ಮಾಡಿ ಶಾಂತಿಧಾಮದಲ್ಲಿ ಕರೆದುಕೊಂಡು ಹೋಗುವುದಕ್ಕಾಗಿ ಮಾರ್ಗದರ್ಶಕ ಆಗುತ್ತಾರೆ. ಸುಖಧಾಮಕ್ಕಾಗಿ ಮಾರ್ಗದರ್ಶಕ ಆಗುವುದಿಲ್ಲ. ಆತ್ಮರನ್ನು ಶಾಂತಿಧಾಮದಲ್ಲಿ ಕರೆದುಕೊಂಡು ಹೋಗುತ್ತಾರೆ. ಅದು ನಿರಾಕಾರಿ ಪ್ರಪಂಚವಾಗಿದೆ, ಅಲ್ಲಿ ಆತ್ಮರಿರುತ್ತಾರೆ ಆದರೆ ಅಲ್ಲಿಗೆ ಯಾರೂ ಹೋಗಲು ಸಾಧ್ಯವಿಲ್ಲ ಏಕೆಂದರೆ ಪತಿತರಾಗಿದ್ದಾರೆ ಆದ್ದರಿಂದ ಪತಿತ-ಪಾವನ ತಂದೆಯನ್ನು ಕರೆಯುತ್ತಾರೆ. ವಿಶೇಷವಾಗಿ ಭಾರತವಾಸಿಗಳು ಯಾವಾಗ ಉಲ್ಟಾ ಆಗಿ ಬಿಡುವರೋ ಆಗ ಬೇಹದ್ದಿನ ತಂದೆಯನ್ನೇ ನಾಯಿ, ಬೆಕ್ಕು, ಕಲ್ಲು-ಮುಳ್ಳಿನಲ್ಲಿ ತೆಗೆದುಕೊಂಡು ಹೋಗುತ್ತಾರೆ. ಆಶ್ಚರ್ಯವಲ್ಲವೆ! ತಮಗಿಂತಲೂ ನನ್ನನ್ನು ಕನಿಷ್ಟ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಾರೆ, ಇದೂ ಸಹ ಡ್ರಾಮಾದಲ್ಲಿ ಮಾಡಲ್ಪಟ್ಟಿದೆ. ಯಾರದೂ ದೋಷವಿಲ್ಲ, ಎಲ್ಲರೂ ಡ್ರಾಮಾದಲ್ಲಿ ವಶವಾಗಿದ್ದಾರೆ. ಈಶ್ವರನಿಗೇ ವಶವಲ್ಲ. ನಾಟಕವು ಈಶ್ವರನಿಗಿಂತಲೂ ತೀಕ್ಷ್ಣವಾಗಿದೆ. ತಂದೆಯು ತಿಳಿಸುತ್ತಾರೆ – ನಾನೂ ಸಹ ಡ್ರಾಮಾನುಸಾರ ನನ್ನ ಸಮಯದಲ್ಲಿ ಬರುತ್ತೇನೆ, ನಾನು ಒಂದೇ ಬಾರಿ ಬರುವೆನು. ಭಕ್ತಿಮಾರ್ಗದಲ್ಲಿ ಮನುಷ್ಯರು ಎಷ್ಟೊಂದು ಅಲೆದಾಡುತ್ತಾರೆ! ನಿಮಗೆ ತಂದೆಯು ಸಿಕ್ಕಿದ್ದಾರೆ ಅಂದಮೇಲೆ ತಂದೆಯಿಂದ ಸೆಕೆಂಡಿನಲ್ಲಿ ಆಸ್ತಿಯನ್ನು ಪಡೆಯಬೇಕಾಗಿದೆ. ಆಸ್ತಿ ಸಿಕ್ಕಿ ಬಿಟ್ಟರೆ ಮತ್ತೆ ಅಲೆಯುವ ಅವಶ್ಯಕತೆ ಇರುವುದಿಲ್ಲ. ಸ್ವಯಂ ಭಗವಂತನೇ ತಿಳಿಸುತ್ತಾರೆ – ನಾನು ಬಂದು ವೇದಶಾಸ್ತ್ರಗಳ ಸಾರವನ್ನು ತಿಳಿಸುತ್ತೇನೆ, ಮೊದಲು ಸತ್ಯ ಖಂಡವಾಗಿತ್ತು ನಂತರ ಹೇಗೆ ಅಸತ್ಯ ಖಂಡವಾಯಿತು ಎಂದು ಯಾರಿಗೂ ತಿಳಿದಿಲ್ಲ. ಗೀತೆಯನ್ನು ಯಾರು ತಿಳಿಸಿದರು ಎಂಬುದನ್ನೂ ಸಹ ಭಾರತವಾಸಿಗಳು ತಿಳಿದುಕೊಂಡಿಲ್ಲ. ಭಾರತದ್ದೇ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು, ದೇವತಾ ಧರ್ಮದವರೇ ಸತೋಪ್ರಧಾನ ಪೂಜ್ಯರಿಂದ ಯಾವಾಗ ತಮೋಪ್ರಧಾನ ಪೂಜಾರಿಗಳಾಗಿ ಬಿಡುವರೋ ಆಗ ದೇವತಾ ಧರ್ಮವು ಪ್ರಾಯಲೋಪವಾಗಿ ಬಿಡುತ್ತದೆ. ನಂತರ ತಂದೆಯು ಬಂದು ಪುನಃ ಆ ಧರ್ಮದ ಸ್ಥಾಪನೆ ಮಾಡುತ್ತಾರೆ. ಚಿತ್ರಗಳೂ ಇವೆ, ಶಾಸ್ತ್ರಗಳೂ ಇವೆ, ಭಾರತವಾಸಿಗಳದು ಒಂದೇ ಶಾಸ್ತ್ರ ಶಿರೋಮಣಿ ಗೀತೆಯಾಗಿದೆ. ಪ್ರತಿಯೊಬ್ಬರೂ ತಮ್ಮ ಧರ್ಮವನ್ನೇ ಮರೆತು ಬಿಟ್ಟಿದ್ದಾರೆ. ಆದ್ದರಿಂದ ಹೆಸರನ್ನು ಬದಲಾಯಿಸಿ ಹಿಂದೂಗಳೆಂದು ಇಟ್ಟುಕೊಂಡಿದ್ದಾರೆ, ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ಆತ್ಮವೇ ಪುನರ್ಜನ್ಮದಲ್ಲಿ ಬರುತ್ತಾ ತಮೋಪ್ರಧಾನವಾಗಿ ಬಿಟ್ಟಿದೆ, ತುಕ್ಕು ಹಿಡಿಯುತ್ತದೆ. ನಾವು ಸತ್ಯ ಚಿನ್ನವಾಗಿದ್ದೆವು, ಈಗ ನಕಲಿ ಆಗಿ ಬಿಟ್ಟಿದ್ದೇವೆ. ಶರೀರಕ್ಕೆ ಆಭರಣವೆಂದು ಹೇಳಲಾಗುತ್ತದೆ, ಶರೀರದ ಮುಖಾಂತರವೇ ಪಾತ್ರವನ್ನು ಅಭಿನಯಿಸುತ್ತೇವೆ. ನಮಗೆ ಎಷ್ಟು ದೊಡ್ಡ 84 ಜನ್ಮಗಳ ಪಾತ್ರವು ಸಿಕ್ಕಿದೆ, ದೇವತಾ, ಕ್ಷತ್ರಿಯ…. ತಾವೇ ಪೂಜ್ಯ, ತಾವೇ ಪೂಜಾರಿಗಳಾಗುತ್ತೀರಿ. ಒಂದುವೇಳೆ ಪೂಜ್ಯನಾದ ನಾನು ನಂತರ ಪೂಜಾರಿಯಾದರೆ ನಿಮ್ಮನ್ನು ಪೂಜ್ಯರನ್ನಾಗಿ ಯಾರು ಮಾಡುವರು? ನಾನಂತೂ ಸದಾ ಪಾವನ, ಜ್ಞಾನಸಾಗರ ಪತಿತ-ಪಾವನನಾಗಿದ್ದೇನೆ. ನೀವೇ ಪೂಜ್ಯರಿಂದ ಪೂಜಾರಿಗಳಾಗಿ ದಿನ ಮತ್ತು ರಾತ್ರಿಯಲ್ಲಿ ಬರುತ್ತೀರಿ. ಆದರೆ ಮನುಷ್ಯರಿಗೆ ತಿಳಿದಿಲ್ಲ, ತಂದೆಯು ತಿಳಿಸುತ್ತಾರೆ – ಪ್ರಪಂಚವು ಅಸತ್ಯವಾಗುತ್ತಾ ಹೋಗುತ್ತದೆ. ಆದ್ದರಿಂದ ಇಷ್ಟೊಂದು ಸುಳ್ಳು ಕಥೆಗಳನ್ನು ಬರೆದಿದ್ದಾರೆ. ವ್ಯಾಸನೂ ಸಹ ಕಮಾಲ್ ಮಾಡಿದ್ದಾರೆ, ವ್ಯಾಸನಂತೂ ಭಗವಂತನಲ್ಲ. ಭಗವಂತನು ಬಂದು ಬ್ರಹ್ಮಾರವರ ಮೂಲಕ ವೇದ ಶಾಸ್ತ್ರಗಳ ಸಾರವನ್ನು ತಿಳಿಸಿದ್ದಾರೆ. ಅವರು ಬ್ರಹ್ಮನ ಕೈಯಲ್ಲಿ ಶಾಸ್ತ್ರಗಳನ್ನು ತೋರಿಸಿದ್ದಾರೆ ಅಂದಮೇಲೆ ಭಗವಂತನೆಲ್ಲಿ? ವಿಷ್ಣುವಿನ ನಾಭಿಯಿಂದ ಬ್ರಹ್ಮನು ಬಂದನೆಂದಲ್ಲ. ವಿಷ್ಣು ಕುಳಿತು ಶಾಸ್ತ್ರಗಳ ಸಾರವನ್ನು ತಿಳಿಸಲಿಲ್ಲ. ತಂದೆಯು ಬ್ರಹ್ಮಾರವರ ಮೂಲಕ ತಿಳಿಸಿದ್ದಾರೆ, ತ್ರಿಮೂರ್ತಿಗಳ ಮೇಲೆ ಶಿವ ತಂದೆಯಿದ್ದಾರೆ ಅವರೇ ಬ್ರಹ್ಮಾರವರ ಮೂಲಕ ಸಾರವನ್ನು ತಿಳಿಸುತ್ತಾರೆ. ಯಾರ ಮೂಲಕ ತಿಳಿಸುತ್ತಾರೆಯೋ ಅವರೇ ನಂತರದ ಜನ್ಮದಲ್ಲಿ ಪಾಲನೆ ಮಾಡುತ್ತಾರೆ. ನೀವು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ, ಬ್ರಾಹ್ಮಣ ವರ್ಣವು ಸರ್ವ ಶ್ರೇಷ್ಠವಾಗಿದೆ. ನೀವೀಗ ಈಶ್ವರೀಯ ಸಂತಾನರಾಗಿದ್ದೀರಿ, ಈಶ್ವರನು ರಚಿಸಿರುವ ಯಜ್ಞವನ್ನು ನೀವು ಸಂಭಾಲನೆ ಮಾಡುತ್ತೀರಿ, ಈ ಜ್ಞಾನ ಯಜ್ಞದಲ್ಲಿ ಇಡೀ ಹಳೆಯ ಪ್ರಪಂಚವೇ ಸ್ವಾಹಾ ಆಗುವುದು. ಇದರ ಹೆಸರನ್ನಿಟ್ಟಿದ್ದಾರೆ, ರಾಜಸ್ವ ಅಶ್ವಮೇಧ ಅವಿನಾಶಿ ರುದ್ರ ಜ್ಞಾನ ಯಜ್ಞ. ರಾಜ್ಯವನ್ನು ಪ್ರಾಪ್ತಿ ಮಾಡಿಸುವುದಕ್ಕಾಗಿ ತಂದೆಯು ಯಜ್ಞವನ್ನು ರಚಿಸಿದ್ದಾರೆ, ಅವರು ಯಜ್ಞವನ್ನು ರಚಿಸುತ್ತಾರೆಂದರೆ ಮಣ್ಣಿನಿಂದ ಶಿವ ಮತ್ತು ಸಾಲಿಗ್ರಾಮಗಳನ್ನೂ ಮಾಡುತ್ತಾರೆ, ಅವರೇ ಉತ್ಪತ್ತಿ ಮಾಡಿ ಪಾಲನೆ ಮಾಡಿ ನಂತರ ಸಮಾಪ್ತಿ ಮಾಡಿ ಬಿಡುತ್ತಾರೆ. ದೇವತೆಗಳ ಮೂರ್ತಿಗಳನ್ನೂ ಸಹ ಇದೇ ರೀತಿ ಮಾಡುತ್ತಾರೆ. ಹೇಗೆ ಚಿಕ್ಕ ಮಕ್ಕಳು ಗೊಂಬೆಯಾಟ ಆಡುತ್ತಾರೆ, ಅದೇರೀತಿ ಇವರೂ ಮಾಡುತ್ತಾರೆ. ಈಗ ತಂದೆಗೆ ಹೇಳುತ್ತಾರೆ – ಸ್ಥಾಪನೆ, ಪಾಲನೆ ನಂತರ ವಿನಾಶ ಮಾಡುತ್ತಾರೆ, ಮೊದಲು ಸ್ಥಾಪನೆ.

ನೀವೀಗ ಮೃತ್ಯುಲೋಕದಲ್ಲಿ ಅಮರಲೋಕಕ್ಕಾಗಿ ಓದುತ್ತಿದ್ದೀರಿ, ನಿಮ್ಮದು ಇದು ಮೃತ್ಯುಲೋಕದ ಅಂತಿಮ ಜನ್ಮವಾಗಿದೆ. ತಂದೆಯು ಅಮರಲೋಕವನ್ನು ಸ್ಥಾಪನೆ ಮಾಡಲು ಬರುತ್ತಾರೆ, ಒಬ್ಬ ಪಾರ್ವತಿಗೇ ಕಥೆಯನ್ನು ತಿಳಿಸುವುದರಿಂದ ಏನಾಗುವುದು! ಶಂಕರನಿಗೆ ಅಮರನಾಥನೆಂದು ಹೇಳುತ್ತಾರೆ ಮತ್ತು ಪಾರ್ವತಿಯನ್ನು ತೋರಿಸುತ್ತಾರೆ. ಅವರನ್ನು ಸೂಕ್ಷ್ಮವತನದಲ್ಲಿ ತೋರಿಸಿದ್ದಾರೆ ಅಂದಮೇಲೆ ಶಂಕರ-ಪಾರ್ವತಿಯು ಸ್ಥೂಲದಲ್ಲಿ ಹೇಗೆ ಬರಲು ಸಾಧ್ಯ? ಈಗ ನಿಮಗೆ ತಿಳಿಸಿದ್ದೇನೆ, ಜಗದಂಬೆ-ಜಗತ್ಪಿತನೇ ಲಕ್ಷ್ಮೀ-ನಾರಾಯಣರಾಗುತ್ತಾರೆ. ಲಕ್ಷ್ಮೀ-ನಾರಾಯಣರು 84 ಜನ್ಮಗಳ ನಂತರ ಜಗದಂಬೆ-ಜಗತ್ಪಿತನಾಗುತ್ತಾರೆ. ವಾಸ್ತವದಲ್ಲಿ ಜಗದಂಬೆಯು ಪುರುಷಾರ್ಥಿ ಆಗಿದ್ದಾರೆ ಮತ್ತು ಲಕ್ಷ್ಮಿಯು ಪಾವನ ಪ್ರಾಲಬ್ಧವಾಗಿದೆ. ಹೆಚ್ಚು ಮಹಿಮೆ ಯಾರದಾಗಿದೆ? ಜಗದಂಬೆಗೆ ನೋಡಿ, ಎಷ್ಟೊಂದು ಮೇಳವಾಗುತ್ತದೆ. ಕಲ್ಕತ್ತಾದ ಕಾಳಿಯು ಪ್ರಸಿದ್ಧವಾಗಿದೆ, ಕಾಳಿ (ಕಪ್ಪಾಗಿರುವ) ತಾಯಿಯ ಬಳಿ ಕಪ್ಪಾದ ಪಿತನನ್ನು ಏಕೆ ತೋರಿಸಿಲ್ಲ? ವಾಸ್ತವದಲ್ಲಿ ಜಗದಂಬೆ ಆದಿ ದೇವಿಯು ಜ್ಞಾನ ಚಿತೆಯ ಮೇಲೆ ಕುಳಿತು ಪತಿತರಿಂದ ಪಾವನವಾಗುತ್ತಾರೆ, ಮೊದಲು ಜ್ಞಾನ ಜ್ಞಾನೇಶ್ವರಿಯಾಗಿದ್ದು ನಂತರ ರಾಜ ರಾಜೇಶ್ವರಿಯಾಗುತ್ತಾರೆ. ಇಲ್ಲಿ ನೀವು ಈಶ್ವರನಿಂದ ಜ್ಞಾನವನ್ನು ಪಡೆದು ರಾಜ ರಾಜೇಶ್ವರಿಯಾಗಲು ಬಂದಿದ್ದೀರಿ. ಲಕ್ಷ್ಮೀ-ನಾರಾಯಣರಿಗೆ ರಾಜ್ಯವನ್ನು ಯಾರು ಕೊಟ್ಟರು? ಈಶ್ವರ. ಅಮರ ಕಥೆ, ಸತ್ಯ ನಾರಾಯಣನ ಕಥೆಯನ್ನು ತಂದೆಯೇ ತಿಳಿಸುತ್ತಾರೆ, ಇದರಿಂದ ಸೆಕೆಂಡಿನಲ್ಲಿ ನರನಿಂದ ನಾರಾಯಣ ಆಗುತ್ತಾರೆ.

ಈಗ ನೀವು ಮಕ್ಕಳು ಕಪಾಟು ತೆರೆಯಿತು, ಕಾಮ ಮಹಾಶತ್ರುವಾಗಿದೆ. ಗೃಹಸ್ಥ ವ್ಯವಹಾರದಲ್ಲಿದ್ದು ಪವಿತ್ರವಾಗಿರುವುದು ಅಸಂಭವವಾಗಿದೆ. ಅವರಿಗೆ ತಿಳಿಸಲಾಗುತ್ತದೆ – ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ತಮ್ಮ ಮಕ್ಕಳಿಗೆ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುತ್ತಾರೆ. ಅಂದಾಗ ಸ್ವರ್ಗದ ರಾಜ್ಯಭಾಗ್ಯವನ್ನು ಪಡೆಯುವುದಕ್ಕಾಗಿ ಒಂದು ಜನ್ಮ ಪವಿತ್ರ ಆಗಿರಬೇಕಾಗುವುದು. ಇದಂತೂ ಸಸ್ತಾ ವ್ಯಾಪಾರ ಆಯಿತು, ವ್ಯಾಪಾರಿಗಳು ಈ ಮಾತನ್ನು ಚೆನ್ನಾಗಿ ಅಳವಡಿಸಿಕೊಳ್ಳುತ್ತಾರೆ ಏಕೆಂದರೆ ವ್ಯಾಪಾರಿಗಳು ದಾನವನ್ನೂ ಮಾಡುತ್ತಾರೆ. ಧರ್ಮಕ್ಕಾಗಿ ತೆಗೆಯುತ್ತಾರೆ, ತಂದೆಯು ತಿಳಿಸುತ್ತಾರೆ – ಈ ವ್ಯಾಪಾರವನ್ನು ಕೆಲವರೇ ವಿರಳ ಮಾಡುವರು. ಎಷ್ಟು ಅಗ್ಗವಾದ ವ್ಯಾಪಾರವಾಗಿದೆ! ಆದರೂ ಸಹ ಕೆಲವರು ವ್ಯಾಪಾರ ಮಾಡಿ ಮತ್ತೆ ವಿಚ್ಛೇದನ ಕೊಟ್ಟು ಬಿಡುತ್ತಾರೆ. ಈ ಜ್ಞಾನವನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಜ್ಞಾನಸಾಗರನು ಒಬ್ಬರೇ ಆಗಿದ್ದಾರೆ, ಅವರೇ ತಿಳಿಸುತ್ತಾರೆ. ಯಾರು ಪಾವನ, ಪೂಜ್ಯನಾಗಿದ್ದರೋ ಅವರೇ 84 ಜನ್ಮಗಳ ಅಂತಿಮದಲ್ಲಿ ಪೂಜಾರಿಯಾಗಿದ್ದಾರೆ. ಇವರ ತನುವಿನಲ್ಲಿ ನಾನು ಪ್ರವೇಶ ಮಾಡಿದೆನು. ಪ್ರಜಾಪಿತನು ಇಲ್ಲಿಯೇ ಇರುವರಲ್ಲವೆ. ನೀವೀಗ ಪುರುಷಾರ್ಥ ಮಾಡಿ ಫರಿಶ್ತೆಗಳಾಗುತ್ತಿದ್ದೀರಿ. ಈಗ ಭಕ್ತಿಮಾರ್ಗದ ರಾತ್ರಿಯ ನಂತರ ಜ್ಞಾನ ಅರ್ಥಾತ್ ದಿನವಾಗುತ್ತದೆ. ತಿಥಿ-ತಾರೀಖಂತೂ ಇಲ್ಲ. ಶಿವ ತಂದೆಯು ಯಾವಾಗ ಬಂದರು ಎಂಬುದು ಯಾರಿಗೂ ತಿಳಿದಿಲ್ಲ. ಕೃಷ್ಣ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಶಿವ ಜಯಂತಿಯ ಬಗ್ಗೆ ಯಾರಿಗೂ ತಿಳಿದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಈ ಕಲ್ಯಾಣಕಾರಿ ಯುಗದಲ್ಲಿ ಒಬ್ಬ ತಂದೆಯಿಂದಲೇ ಸತ್ಯವಾದ ಸತ್ಯ ನಾರಾಯಣ ಕಥೆ, ಅಮರ ಕಥೆಯನ್ನು ಕೇಳಬೇಕಾಗಿದೆ ಬಾಕಿ ಏನೆಲ್ಲವನ್ನೂ ಕೇಳಿದ್ದೀರೋ ಅದನ್ನು ಮರೆತು ಬಿಡಬೇಕಾಗಿದೆ.

2. ಸತ್ಯಯುಗೀ ರಾಜ್ಯಭಾಗ್ಯವನ್ನು ಪಡೆಯಲು ಇದೊಂದು ಜನ್ಮದಲ್ಲಿ ಪವಿತ್ರರಾಗಿರಬೇಕಾಗಿದೆ. ಫರಿಶ್ತೆಗಳಾಗುವ ಪುರುಷಾರ್ಥ ಮಾಡಬೇಕಾಗಿದೆ.

ವರದಾನ:-

ನಾವು ತಂದೆಯ ಸರ್ವ ಖಜಾನೆಗಳ ಬಾಲಕನಿಂದ ಮಾಲೀಕರಾಗಿದ್ದೇವೆ, ಸ್ವಾಭಾವಿಕ ಯೋಗಿ, ಸ್ವಭಾವಿಕವಾಗಿ ರಾಜ್ಯಾಧಿಕಾರಿ ಆಗಿದ್ದೇವೆ. ಈ ಸ್ಮೃತಿಯಿಂದ ಸರ್ವ ಪ್ರಾಪ್ತಿ ಸಂಪನ್ನರಾಗಿರಿ. ಸದಾ ಇದೇ ಹಾಡನ್ನು ಹಾಡುತ್ತಿರಿ – “ಏನನ್ನು ಪಡೆಯಬೇಕಾಗಿತ್ತು ಅದನ್ನು ಪಡೆದೆನು”. ಕಳೆದುಕೊಂಡೆನು-ಪಡೆದೆನು, ಕಳೆದುಕೊಂಡೆನು-ಪಡೆದೆನು ಎನ್ನುವಂತಹ ಆಟವನ್ನಾಡಬಾರದು. ಪಡೆಯುತ್ತಿದ್ದೇನೆ, ಪಡೆಯುತ್ತಿದ್ದೇನೆ ಎನ್ನುವುದು ಅಧಿಕಾರಿಯ ಮಾತಲ್ಲ.ಯಾರು ಸಂಪನ್ನ ತಂದೆಯ ಬಾಲಕರು…. ಸಾಗನ ಮಕ್ಕಳಾಗಿದ್ದಾರೆಯೋ ಅವರು ನೌಕರನಂತೆ ಕಷ್ಟಪಡಲು ಸಾಧ್ಯವಿಲ್ಲ.

ಸ್ಲೋಗನ್:-

ಮಾತೇಶ್ವರಿಯವರ ಅಮೂಲ್ಯ ಮಹಾವಾಕ್ಯ- “ರಾಜಋಷಿಯು ಸತ್ಯಯುಗಿಯಾಗುತ್ತಾರೆ”

ದ್ವಾಪರದಲ್ಲಿ ರಾಜಋಷಿಗಳಿದ್ದರು, ಅವರು ಕುಳಿತು ಈ ವೇದ-ಶಾಸ್ತ್ರಗಳನ್ನು ರಚಿಸಿದರು ಏಕೆಂದರೆ ಅವರು ತ್ರಿಕಾಲದರ್ಶಿ ಆಗಿದ್ದರು ಎಂದು ಜನರೇನು ಹೇಳುತ್ತಾರೆ, ವಾಸ್ತವದಲ್ಲಿ ಈಗ ನಾವು ರಾಜಋಷಿಗಳೆಂದು ಸತ್ಯಯುಗದಲ್ಲಿಯೇ ಕರೆಸಿಕೊಳ್ಳಬಹುದು ಏಕೆಂದರೆ ಅಲ್ಲಿ ವಿಕಾರಗಳ ಮೇಲೆ ಸಂಪೂರ್ಣ ವಿಜಯಿಯಾಗಿರುತ್ತೇವೆ ಅರ್ಥಾತ್ ಕಮಲ ಪುಷ್ಫ ಸಮಾನ ಜೀವನ್ಮುಕ್ತ ಸ್ಥಿತಿಯಲ್ಲಿರುತ್ತಾ ರಾಜ್ಯಾಡಳಿತ ನಡೆಸುತ್ತಾರೆ. ಉಳಿದಂತೆ ಯಾರು ದ್ವಾಪರದಲ್ಲಿ ಪರಮಾತ್ಮನನ್ನು ಪ್ರಾಪ್ತಿ ಮಾಡಿಕೊಳ್ಳುವುದಕ್ಕಾಗಿ ಜಪ-ತಪಗಳನ್ನು ಮಾಡುವ ಋಷಿಗಳಿದ್ದಾರೆ, ಅವರು ವೇದ ಶಾಸ್ತ್ರಗಳನ್ನು ರಚಿಸಿದ್ದಾರೆ. ಸತ್ಯಯುಗದಲ್ಲಂತು ವೇದ-ಶಾಸ್ತ್ರಗಳ ಅವಶ್ಯಕತೆಯೇ ಇರುವುದಿಲ್ಲ, ಅವರನ್ನು ತ್ರಿಕಾಲದರ್ಶಿಯೆಂದೂ ಸಹ ಹೇಳಲು ಸಾಧ್ಯವಿಲ್ಲ. ಬ್ರಹ್ಮಾ, ವಿಷ್ಣು, ಶಂಕರನನ್ನೇ ನಾವು ತ್ರಿಕಾಲದರ್ಶಿಯೆಂದು ಹೇಳಲು ಸಾಧ್ಯವಿಲ್ಲ ಅಂದಮೇಲೆ ದ್ವಾಪರ ಯುಗದಲ್ಲಿರುವ ರಜೋಗುಣದ ಸಮಯದ ಋಷಿ, ಮುನಿಗಳನ್ನು ತ್ರಿಕಾಲದರ್ಶಿ ಎಂದು ಹೇಳಲು ಹೇಗೆ ಸಾಧ್ಯ! ತ್ರಿಕಾಲದರ್ಶಿ ಅರ್ಥಾತ್ ತ್ರಿಮೂರ್ತಿ, ತ್ರಿನೇತ್ರಿ, ಯಾರು ಸ್ವಯಂ ಈ ಕಲ್ಪದ ಅಂತ್ಯದಲ್ಲಿ ಬಂದು ಇಡೀ ರಚನೆಯ ಅಂತ್ಯವನ್ನು ಮಾಡುತ್ತಾರೆಯೋ, ಆ ಒಬ್ಬ ಪರಮಾತ್ಮ ಶಿವನಿಗೇ ಹೇಳಬಹುದು. ಅಲ್ಲಿ ಸತ್ಯಯುಗದಲ್ಲಿ ಪ್ರಾಲಬ್ಧವನ್ನು ಭೋಗಿಸಬೇಕು, ಅಲ್ಲಿ ನಾವು ಬ್ರಹ್ಮಾವಂಶಿ ಬ್ರಾಹ್ಮಣರಷ್ಟೇ ಮಾಸ್ಟರ್ ತ್ರಿನೇತ್ರಿ, ತ್ರಿಕಾಲದರ್ಶಿಯಾಗುವರು, ಮತ್ತೆ ಇಡೀ ಕಲ್ಪದಲ್ಲಿ ಮತ್ತ್ಯಾರಿಗೂ ಜ್ಞಾನವು ಸಿಗಲು ಸಾಧ್ಯವಿಲ್ಲ ಎನ್ನುವ ಜ್ಞಾನವಿರುವುದಿಲ್ಲ. ದೇವತೆಗಳನ್ನೂ ಮಾಸ್ಟರ್ ತ್ರಿನೇತ್ರಿ, ತ್ರಿಕಾಲದರ್ಶಿ ಎಂದು ಹೇಳಲು ಸಾಧ್ಯವಿಲ್ಲ, ಮನುಷ್ಯರಿಗೂ ಹೇಳಲು ಸಾಧ್ಯವಿಲ್ಲ. ಒಳ್ಳೆಯದು. ಓಂ ಶಾಂತಿ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top