28 May 2022 KANNADA Murli Today | Brahma Kumaris

Read and Listen today’s Gyan Murli in Kannada

27 May 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನಿಮ್ಮ ಪ್ರೀತಿಯು ಆತ್ಮನೊಂದಿಗಿರಬೇಕು, ನಡೆಯುತ್ತಾ-ತಿರುಗಾಡುತ್ತಾ ಅಭ್ಯಾಸ ಮಾಡಿ - ನಾನು ಆತ್ಮನಾಗಿದ್ದೇನೆ, ಆತ್ಮನೊಂದಿಗೆ ಮಾತನಾಡುತ್ತೇನೆ, ನಾನು ಯಾವುದೇ ಕೆಟ್ಟ ಕೆಲಸವನ್ನು ಮಾಡಬಾರದು”

ಪ್ರಶ್ನೆ:: -

ತಂದೆಯ ಮುಖಾಂತರ ರಚಿಸಿರುವಂತಹ ಯಜ್ಞವು ಎಲ್ಲಿಯ ತನಕ ನಡೆಯುತ್ತದೋ ಅಲ್ಲಿಯ ತನಕ ಬ್ರಾಹ್ಮಣರು ತಂದೆಯ ಯಾವ ಆಜ್ಞೆಯನ್ನು ಅವಶ್ಯವಾಗಿ ಪಾಲನೆ ಮಾಡಬೇಕಾಗಿದೆ?

ಉತ್ತರ:-

ತಂದೆಯ ಆಜ್ಞೆ ಆಗಿದೆ – ಮಕ್ಕಳೇ, ಎಲ್ಲಿಯ ತನಕ ಈ ಯಜ್ಞವು ನಡೆಯುತ್ತದೆಯೋ ಅಲ್ಲಿಯ ತನಕ ನೀವು ಅವಶ್ಯವಾಗಿ ಪವಿತ್ರರಾಗಿರಬೇಕಾಗಿದೆ. ನೀವು ಬ್ರಹ್ಮನ ಮಕ್ಕಳು ಬ್ರಹ್ಮಾಕುಮಾರ-ಕುಮಾರಿಯರು ಎಂದೂ ವಿಕಾರದಲ್ಲಿ ಹೋಗಲು ಸಾಧ್ಯವಿಲ್ಲ. ಒಂದುವೇಳೆ ಯಾರೇ ಈ ಆಜ್ಞೆಯ ಉಲ್ಲಂಘನೆ ಮಾಡುತ್ತಾರೆಂದರೆ ತುಂಬಾ ಕಠಿಣ ಶಿಕ್ಷೆಗೆ ಭಾಗಿಧಾರರಾಗುತ್ತಾರೆ. ಒಂದುವೇಳೆ ಯಾರಲ್ಲಾದರೂ ಕ್ರೋಧದ ಭೂತವಿದ್ದರೂ ಸಹ ಅವರು ಬ್ರಾಹ್ಮಣರಲ್ಲ. ಬ್ರಾಹ್ಮಣರು ದೇಹೀ-ಅಭಿಮಾನಿಯಾಗಿರಬೇಕು, ಎಂದೂ ವಿಕಾರಕ್ಕೆ ವಶೀಭೂತರಾಗಬಾರದು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಓ ದೂರ ದೇಶದ ಯಾತ್ರಿಕನೆ…..

ಓಂ ಶಾಂತಿ. ದೂರ ದೇಶದ ಯಾತ್ರಿಕನನ್ನು ನೀವು ಬ್ರಾಹ್ಮಣರಲ್ಲದೆ ಯಾವುದೇ ಮನುಷ್ಯರು ಅರಿತುಕೊಂಡಿಲ್ಲ. ಹೇ! ಪರಮಧಾಮದಲ್ಲಿ ನಿವಾಸ ಮಾಡುವಂತಹ ಪರಮಾತ್ಮನೇ ಬನ್ನಿ ಎಂದು ಕರೆಯುತ್ತಾರೆ. ತಂದೆ ಎಂದು ಹೇಳುತ್ತಾರೆ ಆದರೆ ತಂದೆಯ ರೂಪವೇನಾಗಿದೆ? ಆತ್ಮವು ಏನಾಗಿದೆ? ಎಂದು ಬುದ್ಧಿಯಲ್ಲಿ ಬರುವುದಿಲ್ಲ. ಭಲೆ ಆತ್ಮವು ಭೃಕುಟಿಯ ಮಧ್ಯ ನಕ್ಷತ್ರ ಸಮಾನ ಇರುತ್ತದೆ ಎಂದು ತಿಳಿಯುತ್ತಾರಷ್ಟೆ. ಇನ್ನೇನೂ ತಿಳಿದುಕೊಳ್ಳುವುದಿಲ್ಲ. ನಾವು ಆತ್ಮರಲ್ಲಿ 84 ಜನ್ಮಗಳ ಪಾತ್ರವೂ ತುಂಬಲ್ಪಟ್ಟಿದೆ. ಈ ಮಾತುಗಳ ಜ್ಞಾನವು ಸ್ವಲ್ಪವೂ ಇಲ್ಲ. ಆತ್ಮವೂ ಈ ಶರೀರದಲ್ಲಿ ಹೇಗೆ ಪ್ರವೇಶ ಮಾಡುತ್ತದೆ, ಇದನ್ನು ತಿಳಿದುಕೊಂಡಿಲ್ಲ. ಯಾವಾಗ ಒಳಗೆ ಕದಲುತ್ತದೆ, ಆಗಲೇ ಆತ್ಮವು ಪ್ರವೇಶ ಮಾಡಿದೆ ಎಂದು ತಿಳಿಯುತ್ತದೆ. ಮತ್ತೆ ಯಾವಾಗ ಪರಮಪಿತ ಪರಮಾತ್ಮ ಎಂದು ಹೇಳುತ್ತೇವೆಂದರೆ ಆತ್ಮವೇ ಪಿತ ಎಂದು ಹೇಳುತ್ತದೆ. ಆತ್ಮನಿಗೆ ಈ ಶರೀರವು ಲೌಕಿಕ ತಂದೆಯದೆಂದು ಗೊತ್ತಿದೆ. ನಮ್ಮ ತಂದೆಯಂತು ನಿರಾಕಾರ ಆಗಿದ್ದಾರೆ. ಅವಶ್ಯವಾಗಿ ನಮ್ಮ ತಂದೆಯೂ ಸಹ ನಮ್ಮ ತರಹ ಬಿಂದುಸ್ವರೂಪ ಆಗಿರುವರು. ಅವರ ಮಹಿಮೆಯನ್ನು ಮನುಷ್ಯ ಸೃಷ್ಟಿಯ ಬೀಜರೂಪ, ಜ್ಞಾನಸಾಗರ, ಪತಿತ ಪಾವನ ಎಂದು ಗಾಯನ ಮಾಡುತ್ತಾರೆ ಆದರೆ ಅವರೆಷ್ಟು ದೊಡ್ಡವರಾಗಿದ್ದಾರೆ ಅಥವಾ ಹೇಗಿದ್ದಾರೆ ಎನ್ನುವುದು ಎಲ್ಲರ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಮೊದಲು ನಿಮ್ಮ ಬುದ್ಧಿಯಲ್ಲಿಯೂ ಸಹ ಆತ್ಮ ಏನಾಗಿದೆ, ಹೇಗಿದೆ ಎನ್ನುವುದು ಗೊತ್ತಿರಲಿಲ್ಲ. ಭಲೆ, ಪರಮಾತ್ಮನನ್ನು ಹೇ ಪರಮಪಿತ… ಎಂದು ನೆನಪು ಮಾಡುತ್ತಿದ್ದಿರಿ ಆದರೆ ಏನೂ ತಿಳಿದುಕೊಂಡಿರಲಿಲ್ಲ. ತಂದೆಯು ನಿರಾಕಾರನಾಗಿದ್ದಾರೆ ಎಂದಾಗ ಅವರು ಪತಿತ-ಪಾವನ ಹೇಗಾದರು, ಅವರು ಜಾದು ಮಾಡುತ್ತಾರೆಯೇ? ಪತಿತರನ್ನು ಪಾವನ ಮಾಡಲು ಅವಶ್ಯವಾಗಿ ಇಲ್ಲಿಯೇ ಬರಬೇಕಾಗುತ್ತದೆ. ಹೇಗೆ ನಾವು ಆತ್ಮರು ಸಹ ಈ ಶರೀರದಲ್ಲಿರುತ್ತೇವೆ ಹಾಗೆಯೇ ತಂದೆಯೂ ಸಹ ನಿರಾಕಾರ ಆಗಿರುವ ಕಾರಣ ಅವಶ್ಯವಾಗಿ ಶರೀರದಲ್ಲಿ ಬರಬೇಕಾಗುತ್ತದೆ. ಆದ್ದರಿಂದಲೇ ಶಿವರಾತ್ರಿ ಅಥವಾ ಶಿವ ಜಯಂತಿಯನ್ನು ಆಚರಿಸುತ್ತಾರೆ. ಆದರೆ ಅವರು ಬಂದು ಪಾವನರನ್ನಾಗಿ ಹೇಗೆ ಮಾಡುತ್ತಾರೆ ಇದನ್ನು ಯಾರೂ ತಿಳಿಯುವುದಿಲ್ಲ ಆದ್ದರಿಂದಲೇ ಸರ್ವವ್ಯಾಪಿ ಎಂದು ಹೇಳುತ್ತಾರೆ. ಪ್ರದರ್ಶನಿಯಲ್ಲಿ ಅಥವಾ ಎಲ್ಲಿಯೇ ಭಾಷಣ ಮುಂತಾದವುಗಳನ್ನು ಮಾಡಲು ಹೋದಾಗ ಮೊಟ್ಟ ಮೊದಲು ತಂದೆಯ ಪರಿಚಯವನ್ನೇ ಕೊಡಬೇಕು, ನಂತರ ಆತ್ಮನ ಪರಿಚಯ ಕೊಡಬೇಕು. ಆತ್ಮವಂತೂ ಭೃಕುಟಿಯ ಮಧ್ಯೆ ಇರುತ್ತದೆ. ಆತ್ಮನಲ್ಲಿಯೇ ಎಲ್ಲಾ ಸಂಸ್ಕಾರವಿರುತ್ತದೆ. ಈ ಶರೀರವಂತೂ ಸಮಾಪ್ತಿಯಾಗುತ್ತದೆ. ಏನೆಲ್ಲಾ ಮಾಡಬೇಕೋ ಅದನ್ನು ಆತ್ಮವೇ ಮಾಡುತ್ತದೆ. ಶರೀರದ ಕರ್ಮೇಂದ್ರಿಯಗಳೂ ಕೂಡ ಆತ್ಮನ ಆಧಾರದ ಮೇಲೆಯೇ ನಡೆಯುತ್ತದೆ. ಆತ್ಮವು ರಾತ್ರಿಯಲ್ಲಿ ಅಶರೀರಿಯಾಗುತ್ತದೆ. ಇಂದು ನಾನು ತುಂಬಾ ವಿಶ್ರಾಂತಿ ಪಡೆದೆ, ಇಂದು ನಾನು ವಿಶ್ರಾಂತಿಯನ್ನೇ ಪಡೆಯಲಿಲ್ಲವೆಂದು ಆತ್ಮವೇ ಹೇಳುತ್ತದೆ. ನಾನು ಈ ಶರೀರದ ಮುಖಾಂತರ ವ್ಯಾಪಾರ ಮಾಡುತ್ತೇನೆ. ಇದೆಲ್ಲವೂ ನೀವು ಮಕ್ಕಳಿಗೆ ಅಭ್ಯಾಸ ಆಗಿ ಬಿಡಬೇಕು. ಆತ್ಮವೇ ಎಲ್ಲವನ್ನು ಮಾಡುತ್ತದೆ. ಆತ್ಮವು ಶರೀರದಿಂದ ಹೊರಗಡೆ ಹೋದಾಗ ಈ ಶರೀರವು ಶವವಾಗಿ ಬಿಡುತ್ತದೆ, ಆಗ ಏನೂ ಕೆಲಸಕ್ಕೆ ಬರುವುದಿಲ್ಲ. ಆತ್ಮವು ಶರೀರದಿಂದ ಹೊರಗಡೆ ಹೋದಾಗ ಶರೀರವು ವಾಸನೆ ಬಂದು ಬಿಡುತ್ತದೆ. ಆಗ ಶರೀರವನ್ನು ಸುಡುತ್ತಾರೆ. ಆದ್ದರಿಂದ ನಿಮ್ಮದು ಆತ್ಮನ ಜೊತೆಯೇ ಪ್ರೀತಿಯಿದೆ. ಈಗ ನೀವು ಮಕ್ಕಳಿಗೆ ನಾನು ಆತ್ಮನಾಗಿದ್ದೇನೆ ಎಂಬ ಶುದ್ಧ ಅಭಿಮಾನವಿರಬೇಕು. ಪೂರ್ಣ ಆತ್ಮಾಭಿಮಾನಿಯಾಗಬೇಕು. ಆದರೆ ಇದರಲ್ಲಿಯೇ ಪರಿಶ್ರಮವಿದೆ. ನಾನು ಆತ್ಮ ಈ ಕರ್ಮೇಂದ್ರಿಯಗಳ ಮುಖಾಂತರ ಯಾವುದೇ ಕೆಟ್ಟ ಕರ್ಮಗಳನ್ನು ಮಾಡಬಾರದಾಗಿದೆ. ಇಲ್ಲವೆಂದರೆ ತುಂಬಾ ಶಿಕ್ಷೆಯನ್ನು ಭೋಗಿಸಬೇಕಾಗುವುದು. ಈ ಶರೀರದಲ್ಲಿ ಆತ್ಮನಿದ್ದಾಗಲೇ ಶಿಕ್ಷೆಯನ್ನು ಭೋಗಿಸಬೇಕು. ಶರೀರವಿಲ್ಲದೆ ಆತ್ಮವು ಭೋಗಿಸಲು ಸಾಧ್ಯವಿಲ್ಲ ಎಂದಾಗ ಮೊದಲು ಆತ್ಮಾಭಿಮಾನಿಯಾಗಿ ನಂತರ ಪರಮಾತ್ಮಾಭಿಮಾನಿಯಾಗಬೇಕು. ನಾನು ಪರಮಪಿತ ಪರಮಾತ್ಮನ ಸಂತಾನನಾಗಿದ್ದೇನೆ. ಪರಮಪಿತ ಪರಮಾತ್ಮನೇ ನಮಗೆ ಜನ್ಮ ಕೊಟ್ಟರೆಂದು ಹೇಳುತ್ತಾರೆ. ಅವರು ರಚಯಿತನಾಗಿದ್ದಾರೆ. ಆದರೆ ಅವರು ಹೇಗೆ ರಚಯಿತನಾಗಿದ್ದಾರೆ ಎನ್ನುವುದನ್ನು ಯಾರೂ ತಿಳಿದುಕೊಂಡಿಲ್ಲ. ಈಗ ನೀವು ಪರಮಪಿತ ಪರಮಾತ್ಮ ಹೊಸ ಪ್ರಪಂಚವನ್ನು ಹೇಗೆ ಸ್ಥಾಪನೆ ಮಾಡುತ್ತಾರೆ ಹೇಗೆ ಹಳೆಯ ಪ್ರಪಂಚದಲ್ಲಿ ಇರುತ್ತಾರೆ ಎನ್ನುವುದನ್ನು ತಿಳಿದುಕೊಂಡಿದ್ದೀರಿ. ನೋಡಿ ಇದು ಎಂತಹ ಯುಕ್ತಿಯಾಗಿದೆ. ಅವರಂತೂ ಪ್ರಳಯವನ್ನು ತೋರಿಸಿ ಬಿಟ್ಟಿದ್ದಾರೆ. ಆಲದ ಎಲೆಯ ಮೇಲೆ ಒಬ್ಬ ಬಾಲಕ ಬಂದ ಎಂದು ಹೇಳುತ್ತಾರೆ, ಮತ್ತೆ ಬಾಲಕಿಯನ್ನಂತೂ ತೋರಿಸುವುದೇ ಇಲ್ಲ. ಇದಕ್ಕೇ ಅಜ್ಞಾನವೆಂದು ಹೇಳಲಾಗುತ್ತದೆ. ಭಗವಂತನೇ ಶಾಸ್ತ್ರಗಳನ್ನು ಮಾಡಿದರೆಂದು ಹೇಳುತ್ತಾರೆ ಆದರೆ ವ್ಯಾಸನಂತೂ ಭಗವಂತನಾಗಲು ಸಾಧ್ಯವಿಲ್ಲ. ಭಗವಂತನೇ ಕುಳಿತು ಶಾಸ್ತ್ರಗಳನ್ನು ಬರೆಯುತ್ತಾರೇನು? ಅವರಿಗೋಸ್ಕರ ಗಾಯನ ಮಾಡಲಾಗಿದೆ – ಭಗವಂತನು ಎಲ್ಲಾ ವೇದ ಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ. ಬಾಕಿ ಈ ವೇದ ಶಾಸ್ತ್ರಗಳನ್ನು ಓದುವುದರಿಂದ ಯಾರದೇ ಕಲ್ಯಾಣವಾಗುವುದಿಲ್ಲ. ಉದಾಹರಣೆಗೆ ಬ್ರಹ್ಮ ಜ್ಞಾನಿ ಎಂದು ತಿಳಿದುಕೊಳ್ಳಿ, ಆ ಬ್ರಹ್ಮ ಜ್ಞಾನಿಯು ಬ್ರಹ್ಮತತ್ವದಲ್ಲಿ ಲೀನವಾಗುತ್ತೇವೆಂದು ತಿಳಿಯುತ್ತಾರೆ. ಬ್ರಹ್ಮವಂತೂ ಮಹಾತತ್ವವಾಗಿದೆ. ಅಲ್ಲಿ ಆತ್ಮಗಳಿರುತ್ತಾರೆ ಎಂದಾಗ ನಾವು ಆತ್ಮರು ಬ್ರಹ್ಮದಲ್ಲಿ ಲೀನವಾಗಲು ಹೇಗೆ ಸಾಧ್ಯ! ಇದನ್ನು ಅರಿತುಕೊಳ್ಳದೆ ಇರುವ ಕಾರಣ ಏನು ಬರುತ್ತದೆಯೋ ಅದನ್ನೇ ಹೇಳುತ್ತಿರುತ್ತಾರೆ ಹಾಗೂ ಮನುಷ್ಯರೂ ಸಹ ಅದನ್ನು ಸತ್ಯ-ಸತ್ಯ ಎಂದು ಹೇಳುತ್ತಿರುತ್ತಾರೆ. ಅನೇಕರು ತುಂಬಾ ಹಠಯೋಗ, ಪ್ರಾಣಾಯಾಮ, ಮುಂತಾದವುಗಳನ್ನು ಮಾಡುತ್ತಾರೆ ಆದರೆ ನೀವು ಮಾಡಲು ಸಾಧ್ಯವಿಲ್ಲ ಏಕೆಂದರೆ ನೀವು ಸೂಕ್ಷ್ಮಕನ್ಯೆಯರು ಮತ್ತು ಸೂಕ್ಷ್ಮ ಮಾತೆಯರಾಗಿರುವ ಕಾರಣ ನಾನು ಕಷ್ಟವನ್ನೇಕೆ ಕೊಡಲಿ. ಮೊದಲಂತೂ ಮಾತೆಯರು ರಾಜವಿದ್ಯೆಯನ್ನೂ ಸಹ ಓದುತ್ತಿರಲಿಲ್ಲ. ಅಲ್ಪಸ್ವಲ್ಪ ಭಾಷೆಯನ್ನು ಕಲಿಯಲು ಶಾಲೆಗೆ ಕಳುಹಿಸಲಾಗುತ್ತಿತ್ತು. ಬಾಕಿ ನೌಕರಿಯನ್ನು ಮಾಡಬಾರದಾಗಿತ್ತು. ಈಗಂತೂ ಮಾತೆಯರೂ ಸಹ ಓದಬೇಕಾಗುತ್ತದೆ ಏಕೆಂದರೆ ಸಂಪಾದನೆ ಮಾಡುವವರು ಮನೆಯಲ್ಲಿಲ್ಲದಿದ್ದರೆ ತಮ್ಮ ಕಾಲುಗಳ ಮೇಲೆ ನಿಲ್ಲಲು ಸಾಧ್ಯವಾಗುವುದಿಲ್ಲ. ಭಿಕ್ಷೆಯನ್ನು ಸಹ ಬೇಡಲು ಆಗುವುದಿಲ್ಲ ಆದ್ದರಿಂದ ಓದಬೇಕಾಗುತ್ತದೆ. ನಿಯಮಾನುಸಾರ ತಂದೆಯು ಮಕ್ಕಳ ದುಡಿಮೆಯನ್ನು ತಿನ್ನಲು ಸಾಧ್ಯವಿಲ್ಲ. ಆದ್ದರಿಂದ ಹೆಣ್ಣು ಮಕ್ಕಳಿಗೆ ಮನೆಯ ಕೆಲಸವನ್ನು ಕಲಿಸಲಾಗುತ್ತದೆ ಆದರೆ ಈಗಂತೂ ಬ್ಯಾರಿಸ್ಟರಿ, ಡಾಕ್ಟರಿ ಮುಂತಾದ ವಿದ್ಯೆಗಳನ್ನು ಕಲಿಯುತ್ತಿರುತ್ತಾರೆ. ಆದರೆ ಇಲ್ಲಿ ನೀವು ಏನೂ ಮಾಡಬೇಕಾಗಿಲ್ಲ, ಕೇವಲ ಮೊಟ್ಟ ಮೊದಲು ತಂದೆಯ ಪರಿಚಯವನ್ನು ಕೊಡಬೇಕಾಗಿದೆ. ನಿರಾಕಾರ ತಂದೆಯನ್ನು ಎಲ್ಲರೂ ಶಿವಬಾಬಾ ಎಂದು ಹೇಳುತ್ತಾರೆ ಆದರೆ ಅವರ ರೂಪವೇನಾಗಿದೆ ಎನ್ನುವುದನ್ನು ಯಾರೂ ತಿಳಿದುಕೊಂಡಿಲ್ಲ. ಬ್ರಹ್ಮವಂತೂ ತತ್ವವಾಗಿದೆ. ಹೇಗೆ ಈ ಆಕಾಶವು ಎಷ್ಟು ದೊಡ್ಡದಾಗಿದೆ, ಇದರ ಅಂತ್ಯವನ್ನು ಮುಟ್ಟಲು ಸಾಧ್ಯವಿಲ್ಲ ಅದೇರೀತಿ ಬ್ರಹ್ಮತತ್ವಕ್ಕೂ ಸಹ ಅಂತ್ಯವಿಲ್ಲ. ಅದರ ಅಂಶಮಾತ್ರದಲ್ಲಿ ನಾವು ಆತ್ಮಗಳಿರುತ್ತೇವೆ. ಬಾಕಿ ಉಳಿದೆಲ್ಲವೂ ಆಕಾಶವೇ ಆಕಾಶವಾಗಿದೆ. ಸಾಗರಗಳೂ ಸಹ ತುಂಬಾ ಇದೆ. ನಡೆಯುತ್ತಾ ಹೋದ ಹಾಗೆ ಆಕಾಶದ ಅಂತ್ಯವನ್ನು ತಲುಪಲು ಸಾಧ್ಯವಿಲ್ಲ. ಮೇಲೆ ಹೋಗಲು ಪ್ರಯತ್ನಿಸುತ್ತಾರೆ ಆದರೆ ಹೋಗುತ್ತಾ ಹೋಗುತ್ತಾ ಅವರ ಹತ್ತಿರ ಇರುವ ಪದಾರ್ಥಗಳೇ ಕಾಲಿಯಾಗಿ ಬಿಡುತ್ತದೆ. ಅದೇ ರೀತಿ ಮಹಾತತ್ವವೂ ಸಹ ತುಂಬಾ ದೊಡ್ಡದಾಗಿದೆ. ಅಲ್ಲಿ ಹೋಗಿ ಹುಡುಕುವಂತಹ ಅವಶ್ಯಕತೆಯಿಲ್ಲ. ಅಲ್ಲಿ ಆತ್ಮಗಳಿಗೆ ಈ ವಿಚಾರ ಮಾಡುವಂತಹ ಅವಶ್ಯಕತೆಯೂ ಇಲ್ಲ. ಅಲ್ಲದೆ ಹುಡುಕುವುದರಿಂದ ಸಂಪಾದನೆಯಾದರೂ ಏನು? ತಿಳಿದುಕೊಳ್ಳಿ, ನಕ್ಷತ್ರಗಳಲ್ಲಿ ಹೋಗಿ ಪ್ರಪಂಚವನ್ನು ಹುಡುಕುತ್ತಾರೆ ಆದರೆ ಅದರಿಂದ ಲಾಭವಾದರೂ ಏನು? ಇದರಲ್ಲಿ ತಂದೆಯನ್ನು ಪಡೆಯುವಂತಹ ಯಾವುದೇ ಮಾರ್ಗವಿಲ್ಲ. ಭಕ್ತರು ಭಗವಂತನನ್ನು ಪಡೆಯಲು ಭಕ್ತಿ ಮಾಡುತ್ತಾರೆ ಆದ್ದರಿಂದ ಅವರಿಗೆ ಭಗವಂತ ಸಿಗುತ್ತಾರೆ. ಅವರು ಮುಕ್ತಿ-ಜೀವನಮುಕ್ತಿಯನ್ನು ಕೊಡುತ್ತಾರೆ. ಹುಡುಕುವುದು ಭಗವಂತನನ್ನು, ಆಕಾಶವನ್ನಲ್ಲ. ಏಕೆಂದರೆ ಅದರಿಂದ ಏನೂ ಸಿಗುವುದಿಲ್ಲ. ಸರ್ಕಾರಕ್ಕೆ ಎಷ್ಟೊಂದು ಖರ್ಚಾಗುತ್ತದೆ. ಇದೂ ಸಹ ಸರ್ವಶಕ್ತಿವಂತನ ಸರ್ಕಾರವಾಗಿದೆ. ಪಾಂಡವರು ಹಾಗು ಕೌರವರು ಇಬ್ಬರಿಗೂ ಸಹ ಕಿರೀಟವನ್ನು ತೋರಿಸುವುದಿಲ್ಲ ಏಕೆಂದರೆ ಅವರು ರಾಜ್ಯಾಧಿಕಾರಕ್ಕೋಸ್ಕರ ಹೋರಾಡಿದರೇ ಹೊರತು ರಾಜರಾಗಿರಲಿಲ್ಲ. ತಂದೆಯು ಬಂದು ನಿಮಗೆ ಈ ಎಲ್ಲ ಮಾತುಗಳನ್ನು ತಿಳಿಸುತ್ತಾರೆ. ನೀವು ಇಷ್ಟೆಲ್ಲಾ ಜ್ಞಾನವನ್ನು ಪಡೆಯುತ್ತಿರುವುದರಿಂದ ನಿಮಗೆ ತುಂಬಾ ಖುಷಿಯಿರಬೇಕು. ನಮಗೆ ಓದಿಸುವವರೂ ಸಹ ಬೇಹದ್ದಿನ ತಂದೆಯಾಗಿದ್ದಾರೆ. ಈಗ ಆತ್ಮವು ಹೇಳುತ್ತದೆ ನಾವೇ ಮೊದಲು ದೇವೀ-ದೇವತೆಗಳಾಗಿದ್ದೆವು ತುಂಬಾ ಸುಖಿಯಾಗಿದ್ದೆವು, ಪುಣ್ಯಾತ್ಮರಾಗಿದ್ದೆವು. ಈ ಸಮಯದಲ್ಲಿ ನಾವು ಪಾಪಾತ್ಮರಾಗಿ ಬಿಟ್ಟಿದ್ದೇವೆ ಏಕೆಂದರೆ ಇದು ರಾವಣ ರಾಜ್ಯವಾಗಿದೆ. ಎಲ್ಲರೂ ರಾವಣನ ಮತದ ಮೇಲಿದ್ದಾರೆ. ನೀವು ಈಶ್ವರೀಯ ಮತದ ಮೇಲಿದ್ದೀರಿ. ರಾವಣನೂ ಗುಪ್ತವಾಗಿರುವುದರಿಂದ ಈಶ್ವರನೂ ಗುಪ್ತವಾಗಿದ್ದಾರೆ. ಈಗ ಈಶ್ವರ ನಿಮಗೆ ಮತವನ್ನು ಕೊಡುತ್ತಿದ್ದಾರೆ. ಆದರೆ ರಾವಣನು ಹೇಗೆ ಮತವನ್ನು ಕೊಡುತ್ತಾನೆ. ರಾವಣನಿಗೆ ಯಾವುದೇ ರೂಪವಂತೂ ಇಲ್ಲ ಆದರೆ ತಂದೆಯು ರೂಪವನ್ನು ಧರಿಸುತ್ತಾರೆ. ರಾವಣನಿಗಂತೂ ಎಲ್ಲಾ ರೂಪಗಳಿದೆ. ತಿಳಿಯುತ್ತಾರೆ ನಾವು ಆತ್ಮರಲ್ಲಿ ಪಂಚ ವಿಕಾರಗಳಿದೆ, ನಾವು ಅಸುರೀ ಮತದ ಮೇಲೆ ನಡೆಯುತ್ತಿದ್ದೇವೆ. ಸ್ತ್ರೀ-ಪುರುಷ ಇಬ್ಬರಲ್ಲೂ ಪಂಚ ವಿಕಾರಗಳಿರುತ್ತದೆ. ಈ ಎಲ್ಲಾ ಮಾತುಗಳು ಮನುಷ್ಯನ ಬುದ್ಧಿಯಲ್ಲಿ ಯಾವಾಗ ಕುಳಿತುಕೊಳ್ಳುತ್ತದೆ ಎಂದರೆ ನಮಗೆ ಓದಿಸುವವರು ನಿರಾಕಾರ ಪರಮಪಿತ ಪರಮಾತ್ಮನಾಗಿದ್ದಾರೆ ಎನ್ನುವುದನ್ನು ತಿಳಿದುಕೊಂಡಾಗ ಮಾತ್ರ. ಪರಮಾತ್ಮ ನಿರಾಕಾರನಾಗಿದ್ದಾರೆ, ಅವರು ಯಾವಾಗ ಸಾಕಾರದಲ್ಲಿ ಬರುತ್ತಾರೆ ಆಗಲೇ ನಾವು ಬ್ರಾಹ್ಮಣರಾಗುತ್ತೇವೆ. ತಂದೆಯು ರಾತ್ರಿಯಲ್ಲಿಯೇ ಬರುತ್ತಾರೆ. ಶಿವರಾತ್ರಿಯೇ ಬ್ರಹ್ಮನ ರಾತ್ರಿಯಾಯಿತು. ಬ್ರಹ್ಮನ ಮುಖಾಂತರವೇ ಬ್ರಾಹ್ಮಣರಾಗುತ್ತಾರೆ. ಯಜ್ಞದಲ್ಲಿ ಬ್ರಾಹ್ಮಣರು ಅವಶ್ಯವಾಗಿ ಬೇಕು. ಬ್ರಾಹ್ಮಣರು ಎಲ್ಲಿಯವರೆಗೆ ಈ ಯಜ್ಞವನ್ನು ಸಂಭಾಲನೆ ಮಾಡಬೇಕೋ ಅಲ್ಲಿಯವರೆಗೂ ಪವಿತ್ರರಾಗಿರಬೇಕಾಗಿದೆ. ಶಾರೀರಿಕ ಬ್ರಾಹ್ಮಣರೂ ಸಹ ಯಜ್ಞವನ್ನು ರಚಿಸುತ್ತಾರೆಂದರೆ ವಿಕಾರದಲ್ಲಿ ಹೋಗುವುದಿಲ್ಲ. ಭಲೆ ವಿಕಾರಿಯಾಗಿದ್ದರೂ ಸಹ ಯಜ್ಞವನ್ನು ರಚಿಸುವ ಸಮಯದಲ್ಲಿ ವಿಕಾರದಲ್ಲಿ ಹೋಗುವುದಿಲ್ಲ. ಹೇಗೆ ಮನುಷ್ಯರು ತೀರ್ಥ ಸ್ಥಾನಗಳಿಗೆ ಹೋದಾಗ ಎಲ್ಲಿಯವರೆಗೆ ತೀರ್ಥಸ್ಥಾನಗಳಲ್ಲಿರುತ್ತಾರೋ ಅಲ್ಲಿಯವರೆಗೆ ವಿಕಾರದಲ್ಲಿ ಹೋಗುವುದಿಲ್ಲ. ಹಾಗೆಯೇ ನೀವು ಬ್ರಾಹ್ಮಣರೂ ಸಹ ಯಜ್ಞದಲ್ಲಿದ್ದು ಮತ್ತೆ ವಿಕಾರದಲ್ಲಿ ಹೋಗುತ್ತೀರೆಂದರೆ ಅತಿ ದೊಡ್ಡ ಪಾಪಾತ್ಮರಾಗಿ ಬಿಡುತ್ತೀರಿ. ಯಜ್ಞವು ನಡೆಯುತ್ತಿರುವುದರಿಂದ ಅಂತ್ಯದ ತನಕವು ಸಹ ನೀವು ಪವಿತ್ರರಾಗಿರಬೇಕಾಗಿದೆ. ಬ್ರಹ್ಮನ ಮಕ್ಕಳು ಬ್ರಹ್ಮಾಕುಮಾರ-ಕುಮಾರಿಯರು ಎಂದೂ ವಿಕಾರದಲ್ಲಿ ಹೋಗಬಾರದು ಏಕೆಂದರೆ ತಂದೆಯ ಆಜ್ಞೆಯಾಗಿದೆ – ನೀವು ಎಂದೂ ವಿಕಾರದಲ್ಲಿ ಹೋಗಬಾರದು. ಇಲ್ಲವೆಂದರೆ ತುಂಬಾ ಶಿಕ್ಷೆಗೆ ಬಾಗಿಯಾಗಿ ಬಿಡುತ್ತೀರಿ. ವಿಕಾರದಲ್ಲಿ ಹೋಗುತ್ತೀರೆಂದರೆ ಸತ್ಯನಾಶವಾದಂತೆ. ಆಗ ಅವರು ಬ್ರಹ್ಮಾ ಕುಮಾರ ಕುಮಾರಿಯರಲ್ಲ, ಅವರೇ ಶೂದ್ರ ಮಲೇಚ್ಛ (ಕೆಟ್ಟದ್ದನ್ನು ತಿನ್ನುವವರು)ರಾಗಿದ್ದಾರೆ. ಬಾಬಾ ಯಾವಾಗಲೂ ಕೇಳುತ್ತಿರುತ್ತಾರೆ – ನೀವು ಪವಿತ್ರರಾಗಿರುವ ಪ್ರತಿಜ್ಞೆಯನ್ನು ಮಾಡಿದ್ದೀರಿ, ಒಂದು ವೇಳೆ ತಂದೆಯೊಂದಿಗೆ ಪ್ರತಿಜ್ಞೆ ಮಾಡಿ, ಬ್ರಾಹ್ಮಣರಾಗಿ ಮತ್ತೆ ವಿಕಾರದಲ್ಲಿ ಹೋಗುತ್ತೀರೆಂದರೆ, ಚಂಡಾಲರ ಜನ್ಮವನ್ನು ಪಡೆಯುತ್ತೀರಿ. ಇಲ್ಲಿ ವೇಶ್ಯೆಯರಂತಹ ಕೊಳಕಿನ(ವಿಕಾರದ) ಜನ್ಮ ಇನ್ಯಾರದೂ ಇಲ್ಲ. ಇದು ವೇಶ್ಯಾಲಯವಾಗಿದೆ. ಇಬ್ಬರೂ ಒಬ್ಬರಿಗೊಬ್ಬರು ವಿಷವನ್ನೇ ಕೊಡಿಸುತ್ತಾರೆ. ಬಾಬಾ ಹೇಳುತ್ತಾರೆ – ಮಕ್ಕಳೆ ಮಾಯೆಯು ಭಲೆ ಎಷ್ಟೇ ಸಂಕಲ್ಪಗಳು ತರಲಿ ಆದರೆ ನೀವು ವಿಕಾರದಲ್ಲಿ ಹೋಗಬಾರದು. ಮಕ್ಕಳಲ್ಲಿ ತಾಕತ್ತು ಕಡಿಮೆ ಇರುತ್ತದೆ. ಆದ್ದರಿಂದ ಪವಿತ್ರತೆಯ ಜೊತೆ ನಿಮ್ಮ ಚಲನೆಯೂ ಸಹ ತುಂಬಾ ಚೆನ್ನಾಗಿರಬೇಕು. ಒಂದು ವೇಳೆ ಚಲನೆಯು ಸರಿಯಿಲ್ಲವೆಂದರೂ ಸಹ ಏನೂ ಕೆಲಸಕ್ಕೆ ಬರುವುದಿಲ್ಲ. ಲೌಕಿಕ ತಂದೆ ತಾಯಿಯಲ್ಲಿ ವಿಕಾರವಿತ್ತೆಂದರೆ ಮಕ್ಕಳೂ ಸಹ ತಂದೆ ತಾಯಿಯಿಂದಲೇ ಕಲಿಯುತ್ತಾರೆ. ನೀವು ಮಕ್ಕಳಿಗೆ ಪಾರಲೌಕಿಕ ತಂದೆಯು ಈ ಶಿಕ್ಷಣವನ್ನು ಕೊಡುವುದಿಲ್ಲ. ತಂದೆಯಂತೂ ಆತ್ಮಾಭಿಮಾನಿಯನ್ನಾಗಿ ಮಾಡುತ್ತಾರೆ. ಎಂದೂ ಕ್ರೋಧದಲ್ಲಿ ಬರಬಾರದು ಏಕೆಂದರೆ ಅದೇ ಸಮಯದಲ್ಲಿ ನೀವು ಬ್ರಾಹ್ಮಣರಲ್ಲ ಚಂಡಾಲರಾಗಿರುತ್ತೀರಿ ಏಕೆಂದರೆ ಕ್ರೋಧದ ಭೂತವಿರುತ್ತದೆ. ಭೂತವು ಮನುಷ್ಯರಿಗೆ ದುಃಖವನ್ನು ಕೊಡುತ್ತದೆ. ತಂದೆಯು ಹೇಳುತ್ತಾರೆ – ಬ್ರಾಹ್ಮಣರಾಗಿ ಯಾವುದೇ ಶೈತಾನಿ ಕೆಲಸವನ್ನು ಮಾಡಬಾರದು. ವಿಕಾರದಲ್ಲಿ ಹೋಗುವುದರಿಂದ ನೀವು ಯಜ್ಞವನ್ನು ಅಪವಿತ್ರವನ್ನಾಗಿ ಮಾಡುತ್ತೀರಿ. ಇದರಲ್ಲಿ ತುಂಬಾ ಎಚ್ಚರಿಕೆಯಿಂದಿರಬೇಕು. ಬ್ರಾಹ್ಮಣರಾಗುವುದೆಂದರೆ ಯಾವುದೇ ಚಿಕ್ಕಮ್ಮನ ಮನೆಯಂತಲ್ಲ. ಯಜ್ಞದಲ್ಲಿ ಯಾವುದೇ ಕೆಟ್ಟ ಕೆಲಸವನ್ನು ಮಾಡಬಾರದು. ಪಂಚ ವಿಕಾರಗಳಲ್ಲಿ ಯಾವುದೇ ವಿಕಾರವು ಇರಬಾರದು. ಕ್ರೋಧ ಮಾಡಿದರೆ ಪರವಾಗಿಲ್ಲ ಎಂದಲ್ಲ. ಈ ಭೂತವು ಬಂದರೂ ಸಹ ನೀವು ಬ್ರಾಹ್ಮಣರಲ್ಲ. ಕೆಲವರು ಹೇಳುತ್ತಾರೆ ಈ ಗುರಿಯು ಬಹಳ ಎತ್ತರವಾಗಿದೆ. ಇದರಲ್ಲಿ ನಡೆಯಲಾಗುವುದಿಲ್ಲವೆಂದರೆ ಹೋಗಿ ಕೊಳಕರಾಗಿ. ಈ ಯಜ್ಞದಲ್ಲಿ ಸದಾ ಪವಿತ್ರ, ಹರ್ಷಿತರಾಗಿರಬೇಕು. ಪತಿತ ಪಾವನ ತಂದೆಯ ಮಕ್ಕಳಾಗಿ ತಂದೆಗೆ ಸಹಯೋಗ ಕೊಡಬೇಕು. ಯಾವುದೇ ವಿಕಾರವಿರಬಾರದು. ಕೆಲವರಂತೂ ಬಂದ ತಕ್ಷಣವೇ ವಿಕಾರಗಳನ್ನು ಬಿಟ್ಟುಬಿಡುತ್ತಾರೆ. ತಿಳಿಯಬೇಕು – ನಾವು ರುದ್ರ ಜ್ಞಾನ ಯಜ್ಞದ ಬ್ರಾಹ್ಮಣರಾಗಿದ್ದೇವೆ, ನಮ್ಮಿಂದ ಮನಸ್ಸು ತಿನ್ನುವಂತಹ ಯಾವುದೇ ಕೆಟ್ಟ ಕೆಲಸವಾಗಬಾರದು. ನಾವು ಯೋಗ್ಯರಾಗಿದ್ದೇವೆಯೇ ಎನ್ನುವುದನ್ನು ಹೃದಯರೂಪೀ ಕನ್ನಡಿಯಲ್ಲಿ ನೋಡಿಕೊಳ್ಳಬೇಕಾಗಿದೆ. ಭಾರತವನ್ನು ಪವಿತ್ರವನ್ನಾಗಿ ಮಾಡಲು ನಾವು ನಿಮಿತ್ತರಾಗಿದ್ದೇವೆ ಆದ್ದರಿಂದ ಅವಶ್ಯವಾಗಿ ಯೋಗದಲ್ಲಿರಬೇಕು. ಸನ್ಯಾಸಿಗಳೆಲ್ಲರು ಕೇವಲ ಪವಿತ್ರರಾಗುತ್ತಾರೆ, ತಂದೆಯನ್ನಂತೂ ತಿಳಿದುಕೊಂಡಿಲ್ಲ. ಹಠಯೋಗ ಮುಂತಾದವುಗಳನ್ನು ತುಂಬಾ ಮಾಡುತ್ತಾರೆ ಆದರೆ ಪಡೆಯುವುದೇನಿಲ್ಲ. ತಂದೆಯು ಶಾಂತಿಧಾಮಕ್ಕೆ ಕರೆದುಕೊಂಡು ಹೋಗಲು ಬಂದಿದ್ದಾರೆಂದು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ನಾವು ಆತ್ಮರು ಅಲ್ಲಿನ ನಿವಾಸಿಯಾಗಿದ್ದೇವೆ, ನಾವೇ ಸುಖಧಾಮದಲ್ಲಿದ್ದೆವು ಈಗ ದುಃಖಧಾಮದಲ್ಲಿದ್ದೇವೆ. ಈಗ ಸಂಗಮವಾಗಿದೆ… ಈ ಸ್ಮರಣೆಯು ನಡೆಯುತ್ತಿದ್ದರೂ ಸಹ ಸದಾ ಮುಗುಳ್ನಗುತ್ತ ಇರುತ್ತೀರಿ. ಹೇಗೆ ಈ ಅಂಗಣ್ಣ ಮಗುವನ್ನು (ಬೆಂಗಳೂರಿನವರು) ನೋಡಿ ಸದಾ ಮುಗುಳ್ನಗುತ್ತಿರುತ್ತಾರೆ. ಬಾಬಾ ಎಂದು ಹೇಳುವುದರಿಂದಲೇ ಖುಷಿಯಲ್ಲಿ ತುಂಬಿ ಹೋಗುತ್ತಾರೆ. ನಾವು ಬಾಬಾನ ಮಕ್ಕಳಾಗಿದ್ದೇವೆ ಎನ್ನುವುದು ಇವರಿಗೆ ತುಂಬಾ ಖುಷಿ ಇದೆ. ಯಾರೇ ಸಿಗಲಿ ಅವರಿಗೆ ಜ್ಞಾನವನ್ನು ಕೊಡುತ್ತಾ ಇರಿ. ಹಾಂ! ಕೆಲವರು ಹಾಸ್ಯವನ್ನು ಮಾಡುತ್ತಾರೆ ಏಕೆಂದರೆ ಇವು ಹೊಸ ಮಾತಾಗಿದೆ, ಭಗವಂತನೇ ಬಂದು ಓದಿಸುತ್ತಾರೆ ಎನ್ನುವುದನ್ನು ಯಾರೂ ತಿಳಿದುಕೊಂಡಿಲ್ಲ. ಕೃಷ್ಣನಂತೂ ಎಂದೂ ಬಂದು ಓದಿಸುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾಪಿತ ಬಾಪ್ ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ತಂದೆ ಆತ್ಮೀಯ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ರುದ್ರ ಜ್ಞಾನ ಯಜ್ಞದ ಬ್ರಾಹ್ಮಣರಾಗಿ ಮನಸ್ಸು ತಿನ್ನುವಂತಹ ಯಾವುದೇ ಕಾರ್ಯವನ್ನು ಮಾಡಬಾರದಾಗಿದೆ. ಯಾವುದೇ ಭೂತಕ್ಕೆ ವಶೀಭೂತರಾಗಬಾರದಾಗಿದೆ.

2. ಪತಿತ ಪಾವನ ತಂದೆಗೆ ಪೂರ್ಣ ಸಹಯೋಗಿಗಳಾಗಲು ಸದಾ ಪವಿತ್ರ ಮತ್ತು ಹರ್ಷಿತರಾಗಿರಬೇಕಾಗಿದೆ. ಜ್ಞಾನದ ಸ್ಮರಣೆ ಮಾಡಿ ಮುಗುಳ್ನಗೆಯಿಂದಿರಬೇಕಾಗಿದೆ.

ವರದಾನ:-

ಯಾರು ಸ್ವಯಂನಿಂದ, ಸೇವೆಯಿಂದ ಹಾಗೂ ಸರ್ವರಿಂದ ಸಂತುಷ್ಟವಾಗಿ ಇರುತ್ತಾರೆಯೋ ಅವರೇ ಸಂತುಷ್ಟ ಮಣಿಯಾಗಿದ್ದಾರೆ. ತಪಸ್ಸಿನ ಮೂಲಕ ಸಂತುಷ್ಟವೆಂಬ ಫಲವನ್ನು ಪ್ರಾಪ್ತಿ ಮಾಡಿಕೊಳ್ಳುವುದೇ ತಪಸ್ಸಿನ ಸಿದ್ಧಿಯಾಗಿದೆ. ಯಾರ ಚಿತ್ತವು ಸದಾ ಪ್ರಸನ್ನವಾಗಿರುವುದೋ ಅವರೇ ಸಂತುಷ್ಟ ಮಣಿಯಾಗಿದ್ದಾರೆ. ಪ್ರಸನ್ನತೆ ಅರ್ಥಾತ್ ಮನಸ್ಸು-ಬುದ್ಧಿಯು ಸದಾ ಆರಾಮದಲ್ಲಿರುವುದು, ಸುಖ-ಶಾಂತಿಯ ಸ್ಥಿತಿಯಲ್ಲಿರುವುದು. ಇಂತಹ ಸಂತುಷ್ಟಮಣಿಗಳು ಸ್ವಯಂನ್ನು ಸರ್ವರ ಆಶೀರ್ವಾದಗಳ ವಿಮಾನದಲ್ಲಿ ಹಾರುತ್ತಿರುವ ಅನುಭವ ಮಾಡುತ್ತಾರೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top