28 June 2021 KANNADA Murli Today | Brahma Kumaris

Read and Listen today’s Gyan Murli in Kannada

June 27, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ತಮ್ಮನ್ನು ತಾವು ಆತ್ಮನೆಂದು ತಿಳಿದು ಆತ್ಮನೊಂದಿಗೆ ಮಾತನಾಡುತ್ತೀರೆಂದರೆ ಹೂವಿನಿಂದ ಸುಗಂದ ಬರುತ್ತಿರುತ್ತದೆ, ದೇಹಾಭಿಮಾನದ ದುರ್ಗಂಧವು ಬಿಟ್ಟು ಹೋಗುತ್ತದೆ”

ಪ್ರಶ್ನೆ:: -

ತಮ್ಮ ಸುವಾಸನೆಯನ್ನು ನಾಲ್ಕೂ ಕಡೆ ಹರಡುವಂತಹ ಸತ್ಯವಾದ ಹೂ ಅಥವಾ ಪತಂಗ ಯಾರಾಗಿದ್ದಾರೆ?

ಉತ್ತರ:-

ಯಾರು ಅನೇಕರನ್ನು ತಮ್ಮ ಸಮಾನ ಸುವಾಸನಾಯುಕ್ತ ಹೂವನ್ನಾಗಿ ಮಾಡುತ್ತಾರೆಯೋ ಅವರೇ ಸತ್ಯ ಹೂಗಳಾಗಿದ್ದಾರೆ. ಶ್ರೀಮತದಂತೆ ನಡೆದು ಪರಂಜ್ಯೋತಿಯ ಮೇಲೆ ಬಲಿಹಾರಿಯಾಗುವವರು, ಬದುಕಿದ್ದರೂ ಸತ್ತಂತಿರುವವರೇ ಸತ್ಯವಾದ ಪತಂತಗಗಳಾಗಿದ್ದಾರೆ. ಅಂತಹ ಹೂಗಳಿಂದ ಸ್ವತಹ ಸುವಾಸನೆಯು ನಾಲ್ಕೂ ಕಡೆ ಹರಡುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಮಹಾಸಭೆಯಲ್ಲಿ ಜ್ಯೋತಿ ಬೆಳಗಿತು……………….

ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಪತಂಗಗಳೇ ಗೀತೆಯನ್ನು ಕೇಳಿದಿರಿ. ನೀವು ಮಕ್ಕಳನ್ನು ಪತಂಗವೆಂದಾದರೂ ಹೇಳಿ, ಹೂವೆಂದಾದರೂ ಹೇಳಿ ಎರಡೂ ಒಂದೇ ಮಾತಾಗಿದೆ. ತಮ್ಮನ್ನು ತಾವು ಕೇಳಿಕೊಳ್ಳಿ – ನಾವು ಸತ್ಯವಾಗಿ ಬಲಿಹಾರಿಯಾಗುವಂತಹ ಪತಂಗಗಳಾಗಿದ್ದೇವೆಯೇ ಅಥವಾ ಸುತ್ತು ಹಾಕಿ ಹೋಗುವವರೇ? ಪರಂಜ್ಯೋತಿಯನ್ನು ಮರೆಯುವುದಿಲ್ಲ ತಾನೆ? ಮತ್ತೊಂದು ಎಲ್ಲರೂ ತಮ್ಮನ್ನು ತಾವು ಕೇಳಿಕೊಳ್ಳಿ – ನಾವು ಎಲ್ಲಿಯವರೆಗೆ ಹೂಗಳಾಗಿ ಜ್ಞಾನದ ಪರಿಮಳವನ್ನು ಹರಡುತ್ತಿದ್ದೇವೆ. ನಮ್ಮಂತೆಯೇ ಎಷ್ಟು ಹೂಗಳನ್ನು ಮಾಡಿದ್ದೇವೆ? ತಂದೆಯಂತೂ ಜ್ಞಾನಸಾಗರನಾಗಿದ್ದಾರೆ, ಅವರ ಸುವಾಸನೆಯಂತೂ ಎಷ್ಟೊಂದಿದೆ ಎಂದು ನೀವು ಮಕ್ಕಳು ತಿಳಿದಿದ್ದೀರಿ. ಯಾರು ಒಳ್ಳೆಯ ಹೂಗಳು ಅಥವಾ ಪತಂಗಗಳಿರುತ್ತಾರೆಯೋ ಅವಶ್ಯವಾಗಿ ಅವರಿಂದ ಸುವಾಸನೆಯು ಬರುತ್ತದೆ. ಅವರು ಸದಾ ಖುಷಿಯಾಗಿರುತ್ತಾರೆ. ಬೇರೆಯವರನ್ನು ತಮ್ಮ ಸಮಾನ ಹೂಗಳನ್ನಾಗಿ ಅಥವಾ ಪತಂಗಗಳನ್ನಾಗಿ ಮಾಡುತ್ತಾರೆ. ಹೂಗಳನ್ನಾಗಿ ಮಾಡದಿದ್ದರೂ ಮೊಗ್ಗುಗಳನ್ನಾಗಿ ಮಾಡುತ್ತಾರೆ. ಯಾರು ಬದುಕಿದ್ದರೂ ಸತ್ತಂತಿರುತ್ತಾರೆಯೋ ಅವರೇ ಸಂಪೂರ್ಣ ಪತಂಗಗಳಾಗಿದ್ದಾರೆ. ಬಲಿಹಾರಿಯಾಗುತ್ತಾರೆ ಅಥವಾ ಈಶ್ವರನ ಮಕ್ಕಳಾಗುತ್ತಾರೆ. ಯಾವುದೇ ಸಾಹುಕಾರನು ಬಡವನ ಮಗುವನ್ನು ದತ್ತು ಮಾಡಿಕೊಳ್ಳುತ್ತಾರೆಂದರೆ ಆ ಮಗುವಿಗೆ ಸಾಹುಕಾರನ ಮನೆಗೆ ಬಂದ ನಂತರ ಅವರನ್ನೇ ತಂದೆ-ತಾಯಿಯಾಗಿ ನೆನಪು ಮಾಡುತ್ತಾರೆಯೇ ಹೊರತು ಬಡ ತಂದೆ-ತಾಯಿ ನೆನಪಿಗೆ ಬರುವುದಿಲ್ಲ. ನಮ್ಮ ತಂದೆ-ತಾಯಿ ಬಡವರಾಗಿದ್ದರೆಂದು ತಿಳಿದಿರುತ್ತದೆ ಆದರೆ ಸಾಹುಕಾರ ತಂದೆ-ತಾಯಿಯನ್ನು ನೆನಪು ಮಾಡುತ್ತಾರೆ ಏಕೆಂದರೆ ಅವರಿಂದ ಧನ ಸಿಗುತ್ತದೆ. ಸಾಧು-ಸನ್ಯಾಸಿಗಳೆಲ್ಲರೂ ಮುಕ್ತಿಧಾಮಕ್ಕೆ ಹೋಗುವ ಸಾಧನೆಯನ್ನೇ ಮಾಡುತ್ತಾರೆ. ಎಲ್ಲರೂ ಮುಕ್ತಿಗೆ ಹೋಗಲು ಪುರುಷಾರ್ಥ ಮಾಡುತ್ತಾರೆ ಆದರೆ ಮುಕ್ತಿಯ ಅರ್ಥವಂತೂ ತಿಳಿದಿಲ್ಲ. ಕೆಲವರು ಜ್ಯೋತಿಯು ಜ್ಯೋತಿಯಲ್ಲಿ ಲೀನವಾಯಿತೆಂದು ತಿಳಿಯುತ್ತಾರೆ. ಕೆಲವರು ನಿರ್ವಾಣಧಾಮಕ್ಕೆ ಹೋಯಿತೆಂದು ತಿಳಿಯುತ್ತಾರೆ. ನಿರ್ವಾಣಧಾಮಕ್ಕೆ ಹೋಗುವುದನ್ನು ಜ್ಯೋತಿಯಲ್ಲಿ ಲೀನವಾದರೆಂದು ಹೇಳಲು ಸಾಧ್ಯವಿಲ್ಲ. ನಾವು ದೂರದೇಶದ ನಿವಾಸಿಗಳಾಗಿದ್ದೇವೆಂದು ನೀವು ತಿಳಿದಿಲ್ಲ. ಈ ಕೊಳಕು ಪ್ರಪಂಚದಲ್ಲಿದ್ದು ಏನು ಮಾಡುವುದು? ಯಾರಾದರೂ ಸಿಕ್ಕಿದರೆಂದರೆ ಅವರಿಗೆ ಇದು ಮಾಡಿ-ಮಾಡಲ್ಪಟ್ಟಿರುವ ಡ್ರಾಮಾ ಆಗಿದೆ ಎಂದು ನೀವು ತಿಳಿಸಬೇಕು. ಸತ್ಯಯುಗದ ನಂತರ ತ್ರೇತಾಯುಗದ ಸಂಗಮವಾಗುತ್ತದೆ ಇದನ್ನೂ ಸಹ ತಿಳಿದಿದ್ದೀರಿ. ಈ ಯುಗವು ತಿರುಗುತ್ತಿರುತ್ತದೆ ಮತ್ತು ಕಲ್ಪವೂ ಸುತ್ತುತ್ತಿರುತ್ತದೆ. ಮನುಷ್ಯರು ತಿಳಿದಿರುವಂತೆ ತಂದೆಯು ಯುಗ-ಯುಗದಲ್ಲಿ ಬರುವುದಿಲ್ಲ. ಯಾವಾಗ ಎಲ್ಲರೂ ತಮೋಪ್ರಧಾನರಾಗಿ ಬಿಡುತ್ತಾರೆ, ಕಲಿಯುಗದ ಅಂತ್ಯವಾಗಿ ಬಿಡುತ್ತದೆ ಆಗ ಕಲ್ಪದ ಸಂಗಮದಲ್ಲಿ ನಾನು ಬರುತ್ತೇನೆಂದು ತಂದೆಯು ತಿಳಿಸುತ್ತಾರೆ. ಯುಗವು ಪೂರ್ಣವಾದಂತೆಯೇ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತದೆ. ಈಗಂತೂ ಪೂರ್ಣ ಗ್ರಹಣ ಹಿಡಿದು ಬಿಟ್ಟಿದೆ ಆಗ ನಾನು ಬರುತ್ತೇನೆ, ನಾನು ಯುಗ-ಯುಗದಲ್ಲಿ ಬರುವುದಿಲ್ಲ. ತಂದೆಯು ಕುಳಿತು ಇದನ್ನು ಪತಂಗಗಳಿಗೆ ತಿಳಿಸುತ್ತಾರೆ. ಪತಂಗಗಳಲ್ಲಿಯೂ ನಂಬರ್ವಾರ್ ಇರುತ್ತಾರೆ. ಕೆಲವರಂತೂ ಬಲಿಹಾರಿಯಾಗುತ್ತಾರೆ, ಕೆಲವರು ಸುತ್ತು ಹಾಕಿ ಹೊರಟು ಹೋಗುತ್ತಾರೆ. ಶ್ರೀಮತದಂತೆ ನೀವೇ ನಡೆಯಲು ಸಾಧ್ಯ. ಒಂದುವೇಳೆ ಎಲ್ಲಿಯಾದರೂ ಶ್ರೀಮತದಂತೆ ನಡೆಯದಿದ್ದರೆ ಮಾಯೆಯು ಸತಾಯಿಸುತ್ತಿರುತ್ತದೆ. ಶ್ರೀಮತದ್ದು ಬಹಳ ಗಾಯನವಿದೆ. ಶ್ರೀ ಮದ್ಭಗವದ್ಗೀತಾ ಎಂದೂ ಸಹ ಹೇಳುತ್ತಾರೆ, ನಂತರ ಕುಳಿತು ಶಾಸ್ತ್ರಗಳನ್ನು ಬರೆಯುತ್ತಾರೆ, ಆ ಸಮಯದಲ್ಲಿ ಬುದ್ಧಿಯು ರಜೋ ಸ್ಥಿತಿಯಲ್ಲಿರುವುದರ ಕಾರಣ ಕೃಷ್ಣನು ದ್ವಾಪರದಲ್ಲಿ ಬಂದನೆಂದು ಬರೆಯುತ್ತಾರೆ. ಯಾವಾಗ ದೇವಿ-ದೇವತಾ ಧರ್ಮವು ಪ್ರಾಯಃಲೋಪವಾಗುತ್ತದೆಯೋ ಆಗ ನಾನು ಬರುತ್ತೇನೆ, ಬಾಕಿ ಎಲ್ಲಾ ಧರ್ಮಗಳಿರುತ್ತವೆ. ದೇವತಾ ಧರ್ಮದ ಮನುಷ್ಯರು ಪ್ರಾಯಃಲೋಪವಾಗಿ ಬಿಡುತ್ತಾರೆ ಎಂದಲ್ಲ ಆದರೆ ತಾವೇ ದೇವಿ-ದೇವತಾ ಧರ್ಮದವರಾಗಿದ್ದೆವೆಂದು ಮರೆತು ಹೋಗಿದ್ದಾರೆ. ತಮ್ಮನ್ನು ಹಿಂದೂ ಧರ್ಮದವರೆಂದು ಹೇಳಿಕೊಳ್ಳುತ್ತಾರೆ, ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ಯಾವಾಗ ಮರೆತು ಹೋಗುತ್ತಾರೆಯೋ ಆಗ ನಾನು ಬಂದು ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತೇನೆ. ಈ ಒಬ್ಬ ತಂದೆಯೇ ಬಂದು ದುಃಖಧಾಮದಿಂದ ಸುಖಧಾಮದ ಮಾಲೀಕರನ್ನಾಗಿ ಮಾಡುತ್ತಾರೆ. ನೀವೀಗ ಹೇಳುತ್ತೀರಿ – ನಾವು ನರಕದ ಮಾಲೀಕರಾಗಿದ್ದೇವೆ, ಪ್ರಪಂಚವಂತೂ ತಮೋಪ್ರಧಾನವಾಗಲೇಬೇಕು. ಎಲ್ಲರೂ ಪತಿತರಾಗಿದ್ದಾರೆ ಆದ್ದರಿಂದ ಪವಿತ್ರರಾಗಿರುವವರ ಮುಂದೆ ಹೋಗಿ ನಮಸ್ಕಾರ ಮಾಡುತ್ತಾರೆ. ಈಗ ಶ್ರೀಮತದಂತೆ ನಡೆಯಿರಿ ಎಂದು ತಂದೆಯು ಹೇಳುತ್ತಾರೆ. ಜನ್ಮ-ಜನ್ಮಾಂತರ ಹೊರೆಯು ತಲೆಯ ಮೇಲಿದೆ ಇಲ್ಲದಿದ್ದರೆ ಅಯ್ಯೊ ಅಯ್ಯೊ ಎನ್ನಬೇಕಾಗುತ್ತದೆ. ಅವರಂತೂ ಆತ್ಮವು ನಿರ್ಲೇಪವೆಂದು ತಿಳಿದಿದ್ದಾರೆ ಆದರೆ ಆತ್ಮವು ಸುಖ-ದುಃಖ ಎರಡನ್ನೂ ಭೋಗಿಸುತ್ತದೆ, ಇದನ್ನು ಯಾರೂ ತಿಳಿದುಕೊಂಡಿಲ್ಲ. ಗುರಿಯು ಬಹಳ ದೊಡ್ಡದಾಗಿದೆ ಎಂದು ತಂದೆಯು ಬಹಳ ತಿಳಿಸುತ್ತಾರೆ. ಈ ಸಮಯದಲ್ಲಿ ನೀವು ದುಃಖಿಗಳಾಗಿದ್ದೀರಿ ಆದ್ದರಿಂದ ಪುರುಷಾರ್ಥ ಮಾಡುತ್ತಿದ್ದೀರಿ. ಸತ್ಯಯುಗದಲ್ಲಿ ನಾವು ಬಹಳ ಸುಖಿಗಳಾಗಿರುತ್ತೇವೆ, ಅಲ್ಲಂತೂ ಮತ್ತೆ ದುಃಖಧಾಮಕ್ಕೆ ಹೋಗಬೇಕಾಗಿದೆ ಎಂದು ತಿಳಿದಿರುವುದಿಲ್ಲ. ನಾವು ಸುಖದಲ್ಲಿ ಹೇಗೆ ಬಂದೆವು? ಎಷ್ಟು ಜನ್ಮಗಳನ್ನು ಪಡೆದುಕೊಂಡೆವೆಂದು ತಿಳಿದಿರುವುದಿಲ್ಲ. ಈಗ ಯಾರು ಶ್ರೇಷ್ಠರಾಗಿದ್ದಾರೆ? ನೀವು ಈಶ್ವರನ ಮಕ್ಕಳಾಗಿರುವ ಕಾರಣ ಹೇಗೆ ಈಶ್ವರನು ಜ್ಞಾನ ಸಾಗರನಾಗಿದ್ದಾರೆಯೋ ಅವರಂತೆಯೇ ನೀವೂ ಜ್ಞಾನ ಸಾಗರನಾಗಿದ್ದೀರಿ. ಈಗ ನೀವು ಈಶ್ವರನ ಮಕ್ಕಳು ನಂಬರ್ವಾರ್ ಆಗಿದ್ದೀರಿ. ಕೆಲವರಂತೂ ಬಹಳ ಮಸ್ತಿಯಲ್ಲಿರುತ್ತಾರೆ, ನಾವು ತಂದೆಯ ಮತದಂತೆ ನಡೆಯುತ್ತಿದ್ದೇವೆಂದು ತಿಳಿದಿರುತ್ತಾರೆ. ಮತದಂತೆ ಎಷ್ಟು ನಡೆಯುತ್ತೀರೋ ಅಷ್ಟೇ ಶ್ರೇಷ್ಠರಾಗುತ್ತೀರಿ. ತಂದೆಯು ಎದುರಿನಲ್ಲಿ ಕುಳಿತು ಮಕ್ಕಳಿಗೆ ತಿಳಿಸುತ್ತಾರೆ – ಮಕ್ಕಳೇ, ದೇಹಾಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಯಾಗಿ ನಿರಂತರ ನೆನಪು ಮಾಡಿ. ತಂದೆಯಂತೂ ಸದಾ ಸುಖದಾತನಾಗಿದ್ದಾರೆ, ತಂದೆಯೇ ದುಃಖವನ್ನೂ ಕೊಡುತ್ತಾರೆ ಎಂದಲ್ಲ. ತಂದೆಯೂ ಎಂದೂ ದುಃಖವನ್ನು ಕೊಡುವುದಿಲ್ಲ, ಮಕ್ಕಳು ತಪ್ಪು ನಡುವಳಿಕೆಗಳಿಂದ ದುಃಖ ಪಡೆಯುತ್ತಾರೆ. ತಂದೆಯು ದುಃಖವನ್ನು ಕೊಡಲು ಸಾಧ್ಯವಿಲ್ಲ. ಹೇ ಭಗವಂತ ಮಗುವನ್ನು ಕೊಡು, ಕುಲದ ವೃದ್ಧಿಯಾಗುತ್ತದೆ ಎಂದು ಭಗವಂತನನ್ನು ಕೇಳುತ್ತಾರೆ, ಮಗುವನ್ನು ಬಹಳ ಪ್ರೀತಿ ಮಾಡುತ್ತಾರೆ ಬಾಕಿ ದುಃಖವಂತೂ ತಮ್ಮ ಕರ್ಮದನುಸಾರವಾಗಿಯೇ ಪಡೆಯುತ್ತಾರೆ. ಈಗ ನೀವು ಮಕ್ಕಳನ್ನು ಬಹಳ ಸುಖಿಯನ್ನಾಗಿ ಮಾಡುತ್ತಾರೆ. ಶ್ರೀಮತದಂತೆ ನಡೆಯಿರಿ, ಆಸುರೀ ಮತದಂತೆ ನಡೆಯುವುದರಿಂದ ದುಃಖವನ್ನು ಪಡೆಯುತ್ತೀರಿ. ಮಕ್ಕಳೇ, ತಂದೆ ಅಥವಾ ಶಿಕ್ಷಕ ಅಥವಾ ದೊಡ್ಡವರ ಆಜ್ಞೆಯನುಸಾರ ನಡೆಯದೇ ಇರುವುದರಿಂದ ದುಃಖಿಗಳಾಗುತ್ತಾರೆ, ಸ್ವತಃ ದುಃಖದಾಯಿಗಳಾಗುತ್ತಾರೆ. ಮಾಯೆಗೆ ವಶರಾಗಿ ಬಿಡುತ್ತಾರೆ. ಈಶ್ವರನ ಮತವು ನಿಮಗೆ ಈಗ ಸಿಗುತ್ತದೆ. ಈಶ್ವರನ ಮತದ ಫಲಿತಾಂಶವಾಗಿ 21 ಜನ್ಮಗಳು ನಡೆಯುತ್ತದೆ, ನಂತರ ಅರ್ಧ ಕಲ್ಪ ಮಾಯೆಯ ಮತದಂತೆ ನಡೆಯುತ್ತದೆ. ಈಶ್ವರನು ಒಂದೇ ಬಾರಿ ಬಂದು ಮತವನ್ನು ಕೊಡುತ್ತಾರೆ. ಮಾಯೆಯಂತೂ ಅರ್ಧ ಕಲ್ಪದಿಂದ ಮತವನ್ನು ಕೊಡುತ್ತಲೇ ಇರುತ್ತದೆ. ತಂದೆಯಂತೂ ಒಂದೇ ಬಾರಿ ಮತವನ್ನು ಕೊಡುತ್ತಾರೆ, ಮಾಯೆಯ ಮತದಂತೆ ನಡೆಯುವುದರಿಂದ 100% ದುರ್ಭಾಗ್ಯಶಾಲಿ ಆಗಿ ಬಿಡುತ್ತೀರಿ. ಯಾರು ಒಳ್ಳೊಳ್ಳೆಯ ಮಕ್ಕಳಿದ್ದಾರೆಯೋ ಅವರು ಸದಾ ಖುಷಿಯ ಮಸ್ತಿಯಲ್ಲಿರುತ್ತಾರೆ, ನಂಬರ್ವಾರಂತೂ ಇದ್ದಾರಲ್ಲವೆ. ಪತಂಗಗಳು ಕೆಲವರಂತೂ ತಂದೆಯ ಮಕ್ಕಳಾಗಿ ಶ್ರೀಮತದಂತೆ ನಡೆಯುತ್ತಾರೆ, ಬಡವರೇ ತಮ್ಮ ಲೆಕ್ಕವನ್ನು ಬರೆಯುತ್ತಾರೆ. ಸಾಹುಕಾರರಿಗೆ ಇಲ್ಲಿ ತಮ್ಮ ಹಣವನ್ನು ಎಲ್ಲಿ ತೆಗೆದುಕೊಂಡು ಬಿಡುತ್ತಾರೆಂದು ಅವರಿಗೆ ಭಯವಿರುತ್ತದೆ, ಸಾಹುಕಾರರಿಗೆ ಇದು ಬಹಳ ಕಷ್ಟ. ನಾನಂತೂ ಬಡವರ ಬಂಧುವಾಗಿದ್ದೇನೆ ಎಂದು ತಂದೆಯು ಹೇಳುತ್ತಾರೆ. ದಾನವನ್ನೂ ಸಹ ಯಾವಾಗಲೂ ಬಡವರಿಗೇ ಕೊಡಲಾಗುತ್ತದೆ. ಒಂದು ಹಿಡಿ ಅಕ್ಕಿಯನ್ನು ಕೊಟ್ಟು ಅರಮನೆಯನ್ನು ಪಡೆದನೆಂದು ಸುಧಾಮನ ಮಾತಿದೆಯಲ್ಲವೆ. ನೀವೆಲ್ಲಾ ಬಡವರು ತಿಳಿದುಕೊಳ್ಳಿ, ಯಾರ ಬಳಿಯಾದರೂ 25-50 ರೂಗಳಿವೆ, ಅದರಿಂದ 20-25 ಪೈಸೆ ಕೊಡುತ್ತಾರೆ, ಸಾಹುಕಾರನು 50 ಸಾವಿರ ರೂಗಳನ್ನು ಕೊಡುತ್ತಾನೆಂದರೆ ಅದಕ್ಕೆ ಸಮಾನವಾಗಿ ಬಿಡುತ್ತದೆ ಆದ್ದರಿಂದ ಬಡವರ ಬಂಧುವೆಂದು ಗಾಯನ ಮಾಡಲಾಗುತ್ತದೆ. ನಮಗೆ ಸಮಯವಿಲ್ಲ ಎಂದು ಸಾಹುಕಾರರು ಹೇಳುತ್ತಾರೆ ಏಕೆಂದರೆ ಪೂರ್ಣ ನಿಶ್ಚಯವಿರುವುದಿಲ್ಲ, ನೀವಂತೂ ಬಡವರಾಗಿದ್ದೀರಿ, ಬಡವರಿಗೆ ಧನ ಸಿಗುವುದರಿಂದ ಬಹಳ ಖುಷಿಯಾಗುತ್ತದೆ. ಇಲ್ಲಿಯ ಬಡವರು ಅಲ್ಲಿ ಸಾಹುಕಾರರಾಗಿ ಬಿಡುತ್ತಾರೆ ಮತ್ತು ಇಲ್ಲಿಯ ಸಾಹುಕಾರರು ಅಲ್ಲಿ ಬಡವರಾಗಿ ಬಿಡುತ್ತಾರೆಂದು ತಂದೆಯು ತಿಳಿಸುತ್ತಾರೆ.

ನಾವು ಯಜ್ಞದ ಬಗ್ಗೆ ಗಮನ ಕೊಡುವುದೋ ಅಥವಾ ಕುಟುಂಬದ ಬಗ್ಗೆ ಗಮನ ಕೊಡುವುದೋ ಎಂದು ಕೆಲವರು ಕೇಳುತ್ತಾರೆ. ನೀವು ನಿಮ್ಮ ಕುಟುಂಬದ ಬಗ್ಗೆ ಚೆನ್ನಾಗಿ ಸಂಭಾಲನೆ ಮಾಡಿ ಎಂದು ಹೇಳುತ್ತಾರೆ. ಒಳ್ಳೆಯದು – ಈ ಸಮಯದಲ್ಲಿ ನೀವು ಬಡವರಾಗಿದ್ದೀರಿ. ಸಾಹುಕಾರರಾಗಿದ್ದರೆ ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಸನ್ಯಾಸಿಗಳು ಈ ರೀತಿ ಹೇಳುವುದಿಲ್ಲ. ಅವರಂತೂ ಹಣವನ್ನು ತೆಗೆದುಕೊಂಡು ತಮ್ಮ ಆಸ್ತಿಯನ್ನು ಮಾಡಿಕೊಳ್ಳುತ್ತಾರೆ. ಶಿವ ತಂದೆಯು ಮಾಡಲು ಸಾಧ್ಯವೇ! ಇಲ್ಲಿ ಮನೆ ಇತ್ಯಾದಿಗಳನ್ನು ನೀವೆಲ್ಲಾ ಮಕ್ಕಳಿಗಾಗಿ ಮಾಡಿದ್ದಾರೆ. ಇದು ಯಾರದೇ ಆಸ್ತಿಯಲ್ಲ, ಇದಂತೂ ಅಲ್ಪಕಾಲಕ್ಕಾಗಿ ಇದೆ ಏಕೆಂದರೆ ಅಂತ್ಯ ಕಾಲದಲ್ಲಿ ಮಕ್ಕಳು ಬಂದು ಇಲ್ಲಿರಬೇಕಾಗುತ್ತದೆ, ನಮ್ಮ ನೆನಪಾರ್ಥವೂ ಸಹ ಇಲ್ಲಿಯೇ ಇದೆ ಅಂದಮೇಲೆ ಕಡೆಯಲ್ಲಿ ಎಲ್ಲರೂ ಬಂದು ಇಲ್ಲಿ ವಿಶ್ರಾಂತಿಯನ್ನು ಪಡೆಯುತ್ತಾರೆ. ತಂದೆಯ ಬಳಿ ಯಾರು ಯೋಗಯುಕ್ತರಾಗಿರುತ್ತಾರೆಯೋ ಅವರೇ ಓಡಿ ಹೋಗುತ್ತಾರೆ. ಅವರಿಗೇ ತಂದೆಯ ಸಹಾಯವೂ ಸಿಗುತ್ತದೆ. ತಂದೆಯ ಸಹಾಯವು ಬಹಳ ಸಿಗುತ್ತದೆ. ನೀವೆಲ್ಲರೂ ಇಲ್ಲಿ ಕುಳಿತು ವಿನಾಶ ನೋಡಬೇಕಾಗಿದೆ. ಮಕ್ಕಳಾದ ನಿಮಗೆ ಮನೋರಂಜನೆಯನ್ನು ಮೊದಲು ಹೇಗೆ ಕೊಟ್ಟರೋ ಹಾಗೆಯೇ ಅಂತ್ಯದಲ್ಲಿಯೂ ಸಹ ನಿಮ್ಮನ್ನು ಮನರಂಜಿಸಲು ಪ್ರಾರಂಭಿಸುತ್ತಾರೆ, ಬಹಳ ಪ್ರೀತಿ ಮಾಡುತ್ತಾರೆ. ಹೇಗೆ ವೈಕುಂಠದಲ್ಲಿ ಕುಳಿತಿರುವಂತೆ ಅದು ಸಮೀಪ ಬರುತ್ತಾ ಹೋಗುತ್ತದೆ. ನಾವೀಗ ಯಾತ್ರೆಯಲ್ಲಿದ್ದೇವೆಂದು ನೀವು ತಿಳಿದಿದ್ದೀರಿ. ಸ್ವಲ್ಪ ಸಮಯದ ನಂತರ ವಿನಾಶವಾಗುತ್ತದೆ, ನೀವು ಬಹಳ ಖುಷಿಯಾಗಿ ಬಿಡುತ್ತೀರಿ. ನಾವು ಹೋಗಿ ಈ ರಾಜಕುಮಾರರಾಗುತ್ತೇವೆ ಅಷ್ಟೇ. ವಿಧ ವಿಧವಾದ ಹೂಗಳಿವೆ. ಪ್ರತಿಯೊಬ್ಬರೂ ನಾನೆಷ್ಟು ಜ್ಞಾನದ ಸುವಾಸನೆಯನ್ನು ಕೊಡುತ್ತೇವೆ, ಯಾರಿಗೆ ಜ್ಞಾನ-ಯೋಗದ ಶಿಕ್ಷಣವನ್ನು ಕೊಡುತ್ತೇನೆ ಎಂದು ತಿಳಿದುಕೊಳ್ಳುತ್ತೇವೆ. ಯಾರು ಜ್ಞಾನವನ್ನು ತಿಳಿಸುತ್ತಾರೆಯೋ ಅವರು ಪ್ರಫುಲ್ಲಿತರಾಗಿರುತ್ತಾರೆ. ಇವರು ಯಾವ ಸ್ಥಿತಿಯಲ್ಲಿರುತ್ತಾರೆಂದು ತಂದೆಯು ತಿಳಿದಿರುತ್ತಾರೆ. ಇವರ ಯಾವ ಸ್ಥಿತಿಯವರೆಗೆ ಗ್ಯಾಲಪ್ ಮಾಡುತ್ತಾರೆಂದು ತಿಳಿದಿರುತ್ತಾರೆ. ಯಾರು ಪತಂಗಗಳಾಗಿರುತ್ತಾರೆಯೋ ಅವರೇ ಗ್ಯಾಲಪ್ ಮಾಡುತ್ತಾರೆ. ಮಾಯೆಯ ಬಿರುಗಾಳಿಗಳಂತೂ ಬಹಳ ಬರುತ್ತವೆ ಅದರೆ ಅವುಗಳಿಂದ ಸುರಕ್ಷಿತರಾಗಿರಿ ಎಂದು ತಂದೆಯು ತಿಳಿಸುತ್ತಾರೆ. ಈ ರಾಜಯೋಗವನ್ನು ಕಲಿಸಲು ಪರಮಪಿತ ಪರಮಾತ್ಮ ಬರುತ್ತಾರೆ, ಪರಮಾತ್ಮನು ಬಂದು ಆತ್ಮಗಳಿಗೆ ತಿಳಿಸುತ್ತಾರೆ. ಆತ್ಮದ ಜ್ಞಾನ – ನಾನಾತ್ಮ, ನನ್ನ ಈ ಸಹೋದರ ಆತ್ಮನಿಗೆ ತಿಳಿಸುತ್ತೇನೆ. ಹೇಗೆ ಪರಮಾತ್ಮ ತಂದೆಯು ಆತ್ಮ ಮಕ್ಕಳಿಗೆ ತಿಳಿಸುತ್ತಾರೆಯೋ ಹಾಗೆಯೇ, ನಾವೂ ಸಹ ಆತ್ಮರಾಗಿದ್ದೇವೆ. ತಂದೆಯು ನಮ್ಮೆಲ್ಲರಿಗೂ ತಿಳಿಸುತ್ತಾರೆ, ನಂತರ ನಾವು ಈ ಆತ್ಮಗಳಿಗೆ ತಿಳಿಸುತ್ತೇವೆ. ಆದರೆ ಈ ಆತ್ಮತನದ ನಿಶ್ಚಯವಿಲ್ಲದ ಕಾರಣ ತಮ್ಮನ್ನು ತಾವು ಮನುಷ್ಯನೆಂದು ತಿಳಿದುಕೊಂಡಿದ್ದಾರೆ. ನಾನು ಪರಮ ಆತ್ಮನು ನೀವು ಆತ್ಮಗಳೊಂದಿಗೆ ಮಾತನಾಡುತ್ತೇನೆ, ನೀವಾತ್ಮಗಳೂ ಕೇಳುತ್ತೀರಿ. ನೀವು ದೇಹೀ-ಅಭಿಮಾನಿಗಳಾಗಿ ಯಾರಿಗೇ ತಿಳಿಸುತ್ತೀರೆಂದರೆ ತಕ್ಷಣ ಬಾಣ ನಾಟುವುದು. ಒಂದುವೇಳೆ ದೇಹೀ-ಅಭಿಮಾನಿಯಾಗಿರದಿದ್ದರೆ ಧಾರಣೆಯಾಗಲು ಸಾಧ್ಯವಿಲ್ಲ, ಇದು ಬಹಳ ದೊಡ್ಡ ಗುರಿಯಾಗಿದೆ. ನಾನಾತ್ಮನು ಈ ಅಂಗಾಂಗಳಿಂದ ಕೇಳುತ್ತಿದ್ದೇನೆಂದು ಬುದ್ಧಿಯಲ್ಲಿರಬೇಕಾಗಿದೆ. ನಾವಾತ್ಮಗಳೊಂದಿಗೆ ತಂದೆಯು ಮಾತನಾಡುತ್ತಿದ್ದಾರೆ. ತಂದೆಯ ಆದೇಶವಾಗಿದೆ – ಅಶರೀರಿ ಭವ. ದೇಹಾಭಿಮಾನವನ್ನು ಬಿಟ್ಟು ನನ್ನನ್ನು ನೆನಪು ಮಾಡಿ ಎಂಬುದು ಬುದ್ಧಿಯಲ್ಲಿರಬೇಕಾಗಿದೆ. ನಾನು ಆತ್ಮಗಳೊಂದಿಗೆ ಮಾತನಾಡುತ್ತೇನೆ ಹೊರತು ಶರೀರದೊಂದಿಗಲ್ಲ. ಭಲೆ ಸ್ತ್ರೀ ಇರಬಹುದು ಆದರೆ ಅವರ ಆತ್ಮದೊಂದಿಗೆ ಮಾತನಾಡುತ್ತೇನೆ. ನೀವು ಬಾಬಾರವರ ಮಗುವಾಗಿದ್ದೇವೆಂದು ಮಕ್ಕಳು ತಿಳಿದಿದ್ದೀರಿ. ಆದರೆ ಇದರಲ್ಲಿ ಬಹಳ ಸೂಕ್ಷ್ಮ ಬುದ್ಧಿಯು ನಡೆಯುತ್ತಿರುತ್ತದೆ. ನಾನಾತ್ಮ ಇವರ ಆತ್ಮಕ್ಕೆ ತಿಳಿಸುತ್ತಿದ್ದೇನೆ. ಇವರು ನನ್ನ ಸಹೋದರನಾಗಿದ್ದಾರೆ, ಇವರಿಗೆ ನಾನು ಮಾರ್ಗವನ್ನು ತೋರಿಸಬೇಕಾಗಿದೆ. ಆತ್ಮವೇ ತಿಳಿದುಕೊಳ್ಳುತ್ತಿದೆ ಎಂದು ತಿಳಿದುಕೊಂಡಾಗ ಬಾಣವು ನಾಟುವುದು, ದೇಹವನ್ನು ನೋಡಿ ಹೇಳುತ್ತೀರೆಂದರೆ ಆತ್ಮವು ಕೇಳುವುದಿಲ್ಲ. ಮೊದಲು ಈ ಎಚ್ಚರಿಕೆಯನ್ನು ತಮಗೆ ತಾವು ಕೊಟ್ಟುಕೊಳ್ಳಿ – ಆತ್ಮದೊಂದಿಗೆ ಮಾತನಾಡುತ್ತಿದ್ದೇನೆ. ಆತ್ಮವಂತೂ ಪುರುಷನೂ ಅಲ್ಲ, ಸ್ತ್ರೀಯೂ ಅಲ್ಲ, ಆತ್ಮವಂತೂ ವಿಭಿನ್ನವಾಗಿದೆ. ಪುರುಷ-ಸ್ತ್ರೀ ಎಂದು ಶರೀರದಿಂದ ಹೆಸರುಗಳು ಬರುತ್ತವೆ, ಬ್ರಹ್ಮಾ-ಸರಸ್ವತಿಯನ್ನು ಪುರುಷ-ಸ್ತ್ರೀ ಎಂದು ಹೇಳುತ್ತಾರಲ್ಲವೆ. ಶಿವ ತಂದೆಯನ್ನು ಪುರುಷನೆಂದೂ ಹೇಳುವುದಿಲ್ಲ, ಸ್ತ್ರೀಯೆಂದೂ ಹೇಳುವುದಿಲ್ಲ ಅಂದಮೇಲೆ ತಂದೆಯು ಆತ್ಮಗಳಿಗೆ ತಿಳಿಸುತ್ತಾರೆ, ಇದು ಬಹಳ ದೊಡ್ಡ ಗುರಿಯಾಗಿದೆ. ಪಾಯಿಂಟ್ ಬಹಳ ಕಠಿಣವಾಗಿದೆ. ಆತ್ಮಕ್ಕೆ ಇಂಜೆಕ್ಷನ್ ಬಿದ್ದಾಗ ದೇಹಾಭಿಮಾನವು ಹೊರಟು ಹೋಗುತ್ತದೆ, ಇಲ್ಲದಿದ್ದರೆ ಸುವಾಸನೆಯೂ ಬರುವುದಿಲ್ಲ, ಶಕ್ತಿಯೂ ಇರುವುದಿಲ್ಲ. ಮಾತಂತೂ ಬಹಳ ಚಿಕ್ಕದಾಗಿದೆ, ನಾವಾತ್ಮರೊಂದಿಗೆ ಮಾತನಾಡುತ್ತಿದ್ದೇವೆ. ನೀವೀಗ ಹಿಂತಿರುಗಿ ಹೋಗಬೇಕಾಗಿದೆ ಆದ್ದರಿಂದ ದೇಹೀ-ಅಭಿಮಾನಿಯಾಗಿ ಎಂದು ತಂದೆಯು ಹೇಳುತ್ತಾರೆ. ಮನ್ಮನಾಭವ ನಂತರ ಸ್ವಾಭಾವಿಕವಾಗಿ ಮಧ್ಯಾಜೀ ಭವವೂ ಬಂದು ಬಿಡುತ್ತದೆ, ಈಗ ಬಹಳ ದೊಡ್ಡ ಸೂಕ್ಷ್ಮ ಬುದ್ಧಿ ಸಿಗುತ್ತದೆ. ಮುಂಜಾನೆಯೇ ಎದ್ದು ಕುಳಿತು ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ಇಡೀ ದಿನದಲ್ಲಿ ಸರ್ವೀಸ್ ಮಾಡಬೇಕು ಏಕೆಂದರೆ ನೀವು ಕರ್ಮಯೋಗಿಗಳಾಗಿದ್ದೀರಿ. ನಿದ್ರೆಯನ್ನೂ ಗೆಲ್ಲುವವರಾಗಿದ್ದೀರೆಂದು ಬರೆಯುತ್ತಾರೆ. ರಾತ್ರಿಯಲ್ಲಿ ಎಚ್ಚರವಾಗಿದ್ದು ಸಂಪಾದನೆ ಮಾಡಿಕೊಳ್ಳಿ, ದಿನದಲ್ಲಂತೂ ಮಾಯೆಯ ಬಹಳ ಪ್ರಭಾವವಿರುತ್ತದೆ. ಅಮೃತವೇಳೆಯ ವಾಯುಮಂಡಲವು ಬಹಳ ಚೆನ್ನಾಗಿರುತ್ತದೆ, ಇಂತಹ ಸಮಯದಲ್ಲಿ ಎದ್ದು ಕುಳಿತು ವಿಚಾರ ಸಾಗರ ಮಂಥನ ಮಾಡುತ್ತೇವೆಂದು ತಂದೆಗೆ ಯಾರೂ ಬರೆಯುವುದಿಲ್ಲ, ಇದರಲ್ಲಿ ಪರಿಶ್ರಮವಿದೆ. ನೀವು ವಿಶ್ವದ ಮಾಲೀಕರಾಗುತ್ತೀರಿ, ಇಲ್ಲಂತೂ ಹದ್ದಿನ ಮಾಲೀಕರಾಗಿದ್ದೀರಿ. ನೀರಿನ ಪರಿಮಿತಿಯ ಬಗ್ಗೆಯೂ ಎಷ್ಟೊಂದು ಜಗಳ ನಡೆಯುತ್ತದೆ, ಶತೃತ್ವ ಬಂದು ಬಿಟ್ಟಿದೆ, ಒಬ್ಬರನ್ನೊಬ್ಬರು ಸಹೋದರರೆಂದು ತಿಳಿದಿಲ್ಲ, ಕೇವಲ ನಾವೆಲ್ಲರೂ ಒಂದು ಎಂದು ಹೇಳುತ್ತಾರೆ. ಒಂದಾಗಲು ಸಾಧ್ಯವೇ ಇಲ್ಲ, ಅನೇಕ ಆತ್ಮಗಳಿದ್ದಾರೆ ಎಲ್ಲರದೂ ಅವರವರ ಪಾತ್ರಗಳಿವೆ, ನೀವು ಇಲ್ಲಿ ಕುಳಿತಿದ್ದೀರಿ. ಕಲ್ಪದ ಹಿಂದೆಯೂ ಸಹ ಹೀಗೆ ಕುಳಿತಿದ್ದಿರಿ, ಎಲೆಯು ಅಲುಗಾಡಿತೆಂದರೂ ಸಹ ಅದು ಡ್ರಾಮಾನುಸಾರ. ಒಂದೊಂದು ಎಲೆಯನ್ನೂ ಪರಮಾತ್ಮನು ಅಲುಗಾಡಿಸುತ್ತಾನೆ ಎಂದಲ್ಲ. ಇಂತಹ ಮಾತುಗಳನ್ನು ತಿಳಿದುಕೊಂಡು ನಂತರ ತಿಳಿಸಬೇಕಾಗಿದೆ. ಪ್ರತಿಯೊಬ್ಬರೂ ನಾವು ಪತಂಗಗಳಾಗಿದ್ದೇವೆಯೇ ಅಥವಾ ಇಲ್ಲವೆ ಎಂದು ತಿಳಿದುಕೊಳ್ಳಬಹುದು. ನಾವು ತಂದೆಯ ಮತದಂತೆಯೇ ನಡೆಯುತ್ತಿರುತ್ತೇವೆ, ವ್ಯರ್ಥ ಮಾತುಗಳನ್ನು ಮಾತನಾಡುವುದಿಲ್ಲ. ನಮ್ಮ ಹಣವಂತೂ ಪಾಪದ ಕಡೆ ಹೋಗುತ್ತಿಲ್ಲ ಅಷ್ಟೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಸ್ವಯಂ ತಮ್ಮನ್ನು ಆತ್ಮನೆಂದು ತಿಳಿದು ಆತ್ಮದೊಂದಿಗೆ ಮಾತನಾಡಬೇಕಾಗಿದೆ. ದೇಹೀ-ಅಭಿಮಾನಿಯಾಗಿ ಹೇಳುವ-ಕೇಳುವುದರಿಂದ ಚೆನ್ನಾಗಿ ಧಾರಣೆಯಾಗುತ್ತದೆ.

2. ನಿದ್ರೆಯನ್ನು ಗೆಲ್ಲುವಂತಹವರಾಗಿ ರಾತ್ರಿಯಲ್ಲಿ ಎಚ್ಚರವಾಗಿದ್ದು ಸಂಪಾದನೆ ಮಾಡಿಕೊಳ್ಳಬೇಕಾಗಿದೆ. ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ಯಾವುದೇ ವ್ಯರ್ಥಮಾತುಗಳಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡಬಾರದು.

ವರದಾನ:-

ಹೇಗೆ ಸತ್ಯಯುಗೀ ಆತ್ಮರು ವಿಕಾರಗಳ ಮಾತುಗಳ ತಿಳುವಳಿಕೆಯಿಂದ ಮುಗ್ಧರಾಗಿರುತ್ತಾರೆಯೋ, ಅದೇ ಸಂಸ್ಕಾರವು ಸ್ಪಷ್ಟವಾಗಿ ಸ್ಮೃತಿಯಲ್ಲಿದ್ದರೆ ಮಾಯೆಯ ತಿಳುವಳಿಕೆಯಿಂದ ಮುಗ್ಧರಾಗಿ ಬಿಡುತ್ತೀರಿ. ಆದರೆ ಭವಿಷ್ಯ ಸಂಸ್ಕಾರವು ಸ್ಮೃತಿಯಲ್ಲಿ ಆಗ ಸ್ಪಷ್ಟವಾಗಿರುತ್ತದೆ ಯಾವಾಗ ಸದಾಕಾಲ ಹಾಗೂ ಸ್ಪಷ್ಟ ರೀತಿಯಿಂದ ಆತ್ಮಿಕ ಸ್ವರೂಪದ ಸ್ಮೃತಿಯಿರುತ್ತದೆ. ಹೇಗೆ ದೇಹವು ಸ್ಪಷ್ಟವಾಗಿ ಕಾಣಿಸುತ್ತದೆಯೋ ಹಾಗೆಯೇ ತಮ್ಮ ಆತ್ಮ ಸ್ವರೂಪವೂ ಸ್ಪಷ್ಟವಾಗಿ ಕಾಣಿಸಲಿ ಅರ್ಥಾತ್ ಅನುಭವದಲ್ಲಿ ಬರುತ್ತೀರೆಂದರೆ ಹೇಳಲಾಗುತ್ತದೆ – ಮಾಯೆಯಿಂದ ಮುಗ್ಧರು ಮತ್ತು ಜ್ಞಾನದಲ್ಲಿ ಪರಿಪೂರ್ಣರು ಅರ್ಥಾತ್ ಸಂಪೂರ್ಣ ಪವಿತ್ರರು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top