28 July 2021 KANNADA Murli Today | Brahma Kumaris

Read and Listen today’s Gyan Murli in Kannada

July 27, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಇದು ಪುರುಷೋತ್ತಮರಾಗುವ ಸಂಗಮಯುಗವಾಗಿದೆ, ಇದರಲ್ಲಿ ಯಾವುದೇ ಪಾಪ ಕರ್ಮವನ್ನು ಮಾಡಬಾರದು”

ಪ್ರಶ್ನೆ:: -

ಸಂಗಮದಲ್ಲಿ ನೀವು ಮಕ್ಕಳು ಅತಿ ಶ್ರೇಷ್ಠವಾದ ಯಾವ ಪುಣ್ಯವನ್ನು ಮಾಡಿಕೊಳ್ಳುತ್ತೀರಿ?

ಉತ್ತರ:-

ತಮ್ಮನ್ನು ತಂದೆಯವರಿಗೆ ಅರ್ಪಣೆ ಮಾಡಿ ಬಿಡುವುದು ಅರ್ಥಾತ್ ಸಂಪೂರ್ಣವಾಗಿ ಸ್ವಾಹಾ ಆಗಿ ಬಿಡುವುದು ಅತಿ ಶ್ರೇಷ್ಠವಾದ ಪುಣ್ಯವಾಗಿದೆ. ಈಗ ನೀವು ಮಮತ್ವವೆಲ್ಲವನ್ನೂ ನಶಿಸುವಿರಿ, ಮರಿ ಮಕ್ಕಳು, ಮನೆ ಎಲ್ಲವನ್ನೂ ಮರೆಯುತ್ತೀರಿ – ಇದೇ ನಿಮ್ಮ ವ್ರತವಾಗಿದೆ. ತಾವು ಸತ್ತರೆ ಇಡೀ ಪ್ರಪಂಚವೇ ಸತ್ತಂತೆ. ನೀವೀಗ ವಿಕಾರಿ ಸಂಬಂಧಗಳಿಂದ ಮುಕ್ತರಾಗುವಿರಿ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಹಾಡು: ಪತಂಗವೇ ನೀನೇಕೆ ಸುಡುತ್ತಿಲ್ಲ.

ಓಂ ಶಾಂತಿ. ಭಕ್ತಿಮಾರ್ಗದಲ್ಲಿ ಈ ರೀತಿ ತಂದೆಯ ಮಹಿಮೆ ಮಾಡುವರು. ಇದು ಪತಂಗಗಳ ಜ್ಯೋತಿಯ ಮಹಿಮೆ ಆಗಿದೆ, ಯಾವಾಗ ತಂದೆಯು ಬರುತ್ತಾರೆಯೋ ಆಗ ನಾವೇಕೆ ಬದುಕಿದ್ದಂತೆಯೇ ಅವರ ಮಕ್ಕಳಾಗಬಾರದು. ಯಾರನ್ನು ದತ್ತು ಮಾಡಿಕೊಳ್ಳುವರು ಅವರಿಗೇ ಬದುಕಿದ್ದಂತೆಯೇ ಸಾಯುವುದು ಎಂದು ಹೇಳಲಾಗುತ್ತದೆ. ಮುಂಚೆ ನೀವು ಆಸುರಿ ಪರಿವಾರದವರಾಗಿದ್ದಿರಿ, ಈಗ ನೀವು ಈಶ್ವರೀಯ ಪರಿವಾರದವರು ಆಗಿದ್ದೀರಿ. ನೀವು ಬದುಕಿದ್ದಂತೆಯೇ ಈಶ್ವರನು ಬಂದು ನಿಮ್ಮನ್ನು ದತ್ತು ಮಾಡಿಕೊಂಡಿದ್ದಾರೆ, ಅದನ್ನೇ ಶರಣಾಗತಿ ಆಗುವುದು ಹೇಳಲಾಗುತ್ತದೆ. ಮಹಿಮೆ ಮಾಡುವರಲ್ಲವೆ – ನಾನು ನಿನ್ನ ಆಶ್ರಯದಲ್ಲಿ ಬಂದಿದ್ದೇನೆ…… ಅವರು ಯಾವಾಗ ಬರುವರೋ ಆಗಲೇ ಪ್ರಭುವಿನ ಆಶ್ರಯದಲ್ಲಿ ಬರಬಹುದು, ಅವರು ತನ್ನ ಶಕ್ತಿಯನ್ನೂ ತೋರಿಸುವರು, ಶೋಭೆಯನ್ನು ತೋರಿಸುವರು. ಅವರಂತು ಸರ್ವಶಕ್ತಿವಂತನಲ್ಲವೆ, ಖಂಡಿತವಾಗಿಯೂ ಅವರಲ್ಲಿ ಆಕರ್ಷಣೆಯೂ ಇದೆಯಲ್ಲವೆ. ಎಲ್ಲವನ್ನೂ ಬಿಡಿಸಿ ಬಿಡುತ್ತಾರೆ, ಅವಶ್ಯವಾಗಿ ಯಾರು ತಂದೆಯ ಮಕ್ಕಳಾಗುವರೋ ಅವರು ಆಸುರಿ ಸಂಪ್ರದಾಯದ ಸಂಬಂಧದಿಂದ ಬೇಸತ್ತು ಹೋಗಿದ್ದಾರೆ. ಹೇಳುತ್ತಾರೆ – ಬಾಬಾ, ಈ ಸಂಬಂಧವು ಯಾವಾಗ ಬಿಡುಗಡೆಯಾಗುವುದೋ…. ಇಲ್ಲಿ ಈ ಹಳೆಯ ಸಂಬಂಧವನ್ನು ಮರೆಯಬೇಕಾಗುತ್ತದೆ. ಆತ್ಮವು ಯಾವಾಗ ದೇಹದಿಂದ ಬೇರ್ಪಡುತ್ತದೆಯೋ ಆಗ ಬಂಧನಗಳೆಲ್ಲವೂ ಸಮಾಪ್ತಿಯಾಗುತ್ತವೆ. ಈ ಸಮಯದಲ್ಲಿ ನೀವು ತಿಳಿದುಕೊಂಡಿದ್ದೀರಿ – ಮೃತ್ಯುವು ಎಲ್ಲರಿಗಾಗಿಯೂ ಇದೆ ಮತ್ತು ಈ ಬಂಧನಗಳೇನಿವೆಯೋ ಅವೆಲ್ಲವೂ ವಿಕಾರಿ ಬಂಧನವಾಗಿದೆ. ಈಗ ಮಕ್ಕಳು ನಿರ್ವಿಕಾರಿ ಸಂಬಂಧವನ್ನು ಬಯಸುತ್ತಾರೆ, ನಿರ್ವಿಕಾರಿ ಸಂಬಂಧದಲ್ಲಿದ್ದಿರಿ ನಂತರದಲ್ಲಿ ವಿಕಾರಿ ಸಂಬಂಧದಲ್ಲಿ ಸಿಕ್ಕಿಕೊಂಡು ಬಿಟ್ಟಿರಿ, ನಂತರ ನಮ್ಮ ನಿರ್ವಿಕಾರಿ ಸಂಬಂಧವಾಗುವುದು. ಈ ಮಾತುಗಳಂತು ಯಾರ ಬುದ್ಧಿಯಲ್ಲಿಯೂ ಇರುವುದಿಲ್ಲ. ಮಕ್ಕಳಿಗೆ ಗೊತ್ತಿದೆ – ನಾವು ಆಸುರಿ ಬಂಧನಗಳಿಂದ ಮುಕ್ತರಾಗುವ ಪುರುಷಾರ್ಥವನ್ನು ಮಾಡುತ್ತಿದ್ದೇವೆ. ಇದಕ್ಕಾಗಿ ಒಬ್ಬ ತಂದೆಯೊಂದಿಗೆ ಸಂಬಂಧವನ್ನು ಇಡಬೇಕಾಗುತ್ತದೆ, ಏಕೆಂದರೆ ಆ ಕಡೆ ಇದ್ದಾನೆ ಒಬ್ಬ ರಾವಣ, ಈ ಕಡೆ ಒಬ್ಬ ರಾಮನಿದ್ದಾರೆ. ಈ ಮಾತುಗಳು ಪ್ರಪಂಚದವರಿಗೆ ಗೊತ್ತಿಲ್ಲ, ಹೇಳುವುದಂತು ರಾಮ ರಾಜ್ಯ ಬೇಕು ಎನ್ನುತ್ತಾರೆ ಆದರೆ ಇಡೀ ಪ್ರಪಂಚವು ರಾವಣ ರಾಜ್ಯದಲ್ಲಿದೆ. ರಾಮ ರಾಜ್ಯದಲ್ಲಂತು ಪವಿತ್ರತೆ, ಸುಖ, ಶಾಂತಿಯಿತ್ತು, ಅದು ಈಗಿಲ್ಲ ಎನ್ನುವುದನ್ನು ಯಾರೂ ತಿಳಿದುಕೊಂಡಿಲ್ಲ. ಆದರೆ ಸ್ವಯಂ ಏನು ಹೇಳುವರು ಅದರ ಅನುಭವವನ್ನೂ ಮಾಡುವುದಿಲ್ಲ. ಗಾಯನವಂತು ಆಗುತ್ತದೆ – ಈ ಆತ್ಮರೆಲ್ಲರೂ ಸೀತೆಯರಾಗಿದ್ದಾರೆ, ಒಬ್ಬಳು ಸೀತೆಯ ಮಾತಲ್ಲ, ಒಬ್ಬ ಅರ್ಜುನನ ಮಾತಲ್ಲ, ಒಬ್ಬ ದ್ರೌಪದಿಯ ಮಾತಲ್ಲ, ಇದಂತು ಅನೇಕರ ಮಾತಾಗಿದೆ. ಉದಾಹರಣೆಯನ್ನಂತು ಒಬ್ಬರದೇ ಕೊಡುತ್ತಾರೆ, ನಿಮಗೂ ಸಹ ಹೇಳಲಾಗುತ್ತದೆ – ನೀವೆಲ್ಲರೂ ಅರ್ಜುನನ ಸಮಾನರಿದ್ದೀರಿ. ನೀವು ಹೇಳುವಿರಿ – ಅರ್ಜುನನಂತು ಈ ಭಗೀರಥನಾದರು, ಬಾಬಾರವರು ಹೇಳುತ್ತಾರೆ – ನಾನು ಸಾಧಾರಣ ವೃದ್ಧ ತನುವಾದ ಈ ರಥವನ್ನು ತೆಗೆದುಕೊಳ್ಳುವೆನು. ಆದರೆ ಅವರು ಚಿತ್ರಗಳಲ್ಲಿ ಕುದುರೆ ಗಾಡಿಯನ್ನು ತೋರಿಸಿದ್ದಾರೆ! ಇದಕ್ಕೆ ಅಜ್ಞಾನವೆಂದು ಹೇಳಲಾಗುತ್ತದೆ. ಮಕ್ಕಳು ಈ ಶಾಸ್ತ್ರ ಇತ್ಯಾದಿ ಏನೆಲ್ಲವೂ ಇವೆಯೂ ಭಕ್ತಿಮಾರ್ಗದ್ದಾಗಿದೆ ಎಂದು ತಿಳಿಯುವರು, ಈ ಮಾತುಗಳನ್ನು ಮತ್ತ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಎಲ್ಲಿಯವರೆಗೆ 7 ದಿನದಲ್ಲಿ ತಿಳುವಳಿಕೆಯ ಕೋರ್ಸ್ ತೆಗೆದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಭಕ್ತಿಮಾರ್ಗವೇ ವಿಭಿನ್ನವಾಗಿದೆ, ಜ್ಞಾನ ಭಕ್ತಿ ಮತ್ತು ವೈರಾಗ್ಯವೆಂದು ಹೇಳುತ್ತಾರೆ. ವಾಸ್ತವದಲ್ಲಿ ಸನ್ಯಾಸಿಗಳ ವೈರಾಗ್ಯವೇನೂ ಸತ್ಯವಲ್ಲ, ಅವರಂತು ಕಾಡಿನಲ್ಲಿ ಹೋಗಿ ಆನಂತರ ನಗರಗಳಿಗೆ ಬಂದು ನಿವಾಸ ಮಾಡಿ, ದೊಡ್ದ-ದೊಡ್ಡ ಕಟ್ಟಡ ಮುಂತಾದವುಗಳನ್ನು ನಿರ್ಮಾಣ ಮಾಡುತ್ತಾರೆ. ನಾವು ಸಂಸಾರವನ್ನು ಬಿಟ್ಟಿದ್ದೇವೆಂದು ಹೇಳುತ್ತಾರಷ್ಟೇ. ನಿಮ್ಮದಾಗಿದೆ- ಇಡೀ ಹಳೆಯ ಪ್ರಪಂಚದೊಂದಿಗಿನ ವೈರಾಗ್ಯವಾಗಿದೆ. ಇದು ಯಥಾರ್ಥವಾದ ಮಾತಾಗಿದೆ, ಅದು ಅಲ್ಪಕಾಲದ ಮಾತಾಗಿದೆ ಆದ್ದರಿಂದ ಅದನ್ನು ಹಠಯೋಗ, ಅಲ್ಪಕಾಲದ ವೈರಾಗ್ಯವೆಂದು ಹೇಳಲಾಗುವುದು.

ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಈ ಹಳೆಯ ಪ್ರಪಂಚವೀಗ ಸಮಾಪ್ತಿ ಆಗುವುದಿದೆ ಆದ್ದರಿಂದ ಇದರೊಂದಿಗೆ ಅವಶ್ಯವಾಗಿ ವೈರಾಗ್ಯವು ಬರಬೇಕಾಗಿದೆ. ಬುದ್ಧಿಯೂ ಸಹ ಹೇಳುತ್ತದೆ – ಹೊಸ ಮನೆಯನ್ನು ನಿರ್ಮಾಣವಾಗುತ್ತದೆ ಎಂದರೆ ಹಳೆಯದನ್ನು ಬೀಳಿಸಲಾಗುತ್ತದೆ. ಈಗ ತಯಾರಿಯಾಗುತ್ತಿದೆ, ಕಲಿಯುಗದ ನಂತರ ಪುನಃ ಸತ್ಯಯುಗವು ಅವಶ್ಯವಾಗಿ ಬರುವುದು, ಈಗ ಇದು ಪುರುಷೋತ್ತಮ ಸಂಗಮಯುಗವಾಗಿದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಪುರುಷೋತ್ತಮ ಮಾಸವೂ ಆಗುತ್ತದೆ, ನಿಮ್ಮದು ಇದು ಪುರುಷೋತ್ತಮ ಯುಗವಾಗಿದೆ. ಪುರುಷೋತ್ತಮ ಮಾಸದಲ್ಲಿ ದಾನ-ಪುಣ್ಯ ಇತ್ಯಾದಿಗಳನ್ನು ಮಾಡುತ್ತಾರೆ. ನೀವಂತು ಈ ಪುರುಷೋತ್ತಮ ಯುಗದಲ್ಲಿ ಸರ್ವಸ್ವವನ್ನೂ ಸ್ವಾಹಾ ಮಾಡಿ ಬಿಡುತ್ತೀರಿ. ಈ ಇಡೀ ಪ್ರಪಂಚವೇ ಸ್ವಾಹಾ ಆಗುವುದಿದೆ ಎಂಬುದು ಗೊತ್ತಿದೆ ಅಂದಮೆಲೆ ಇಡೀ ಪ್ರಪಂಚದ ಸರ್ವಸ್ವವು ಸ್ವಾಹಾ ಆಗುವುದಕ್ಕೆ ಮೊದಲೇ, ನಾನು ನಮ್ಮನ್ನೇಕೆ ಸ್ವಾಹಾ ಮಾಡಬಾರದು!! ಇದರ ಪುಣ್ಯವೆಷ್ಟು ಲಭಿಸುವುದು!! ಅದಂತು ಅಲ್ಪಕಾಲದ ಪುರುಷೋತ್ತಮ ಮಾಸ, ಇದಂತು ಬೇಹದ್ದಿನ ಮಾತಾಗಿದೆ. ಪುರುಷೋತ್ತಮ ಮಾಸದಲ್ಲಿ ಬಹಳಷ್ಟು ಕಥೆಗಳನ್ನು ಕೇಳುತ್ತಾರೆ, ವ್ರತ, ಉಪವಾಸವನ್ನು ಇಡುತ್ತಾರೆ. ನಿಮ್ಮದು ಇದು ಬಹಳ ಶ್ರೇಷ್ಠವಾದ ವ್ರವಾಗಿದೆ. ನಿಮಗಂತು ಮರಿಮಕ್ಕಳು, ಮನೆ-ವ್ಯಾಪಾರ ಇತ್ಯಾದಿಗಳೆಲ್ಲವೂ ಇವೆ, ಆದರೆ ಹೃದಯದಿಂದ ಮಮತ್ವವು ನಶಿಸಿ ಹೋಗಿದೆ. ತಾವು ಸತ್ತರೆ ಇಡೀ ಪ್ರಪಂಚವೇ ಸತ್ತಂತೆ, ಇದೆಲ್ಲವೂ ಸಮಾಪ್ತಿ ಆಗಿ ಬಿಡುತ್ತದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ನಾವು ಪುರುಷೋತ್ತಮರು ಆಗುವುದಕ್ಕಾಗಿ ತಂದೆಯ ಮಕ್ಕಳಾಗಿದ್ದೇವೆ. ಸರ್ವ ಪುರುಷರಲ್ಲಿ ಅರ್ಥಾತ್ ಮನುಷ್ಯರಲ್ಲಿ ಉತ್ತಮ ಪುರುಷರಾಗಿ ತಮ್ಮ ಮುಂದೆ ಈ ಲಕ್ಷ್ಮೀ-ನಾರಾಯಣ ನಿಂತಿದ್ದಾರೆ. ಇವರಿಗಿಂತ ಉತ್ತಮರಂತು ಯಾವುದೇ ಮನುಷ್ಯರಾಗಲು ಸಾಧ್ಯವಿಲ್ಲ. ಲಕ್ಷ್ಮೀ-ನಾರಾಯಣರು ವಿಶ್ವದ ಮಾಲೀಕನಾಗಿದ್ದರು. ನೀವೂ ಈ ರೀತಿಯೇ ಪುರುಷೋತ್ತಮರಾಗಲು ಬಂದಿರುವಿರಿ. ಮನುಷ್ಯರೆಲ್ಲರೂ ಸದ್ಗತಿಯನ್ನು ಪಡೆಯುತ್ತಾರೆ, ಮನುಷ್ಯರ ಆತ್ಮವು ಪುರುಷೋತ್ತಮರು ಆಗುತ್ತಾರೆಂದರೆ, ಮತ್ತೆ ಅವರಿರುವ ಸ್ಥಾನವೂ ಅಷ್ಟು ಉತ್ತಮವೇ ಆಗಿರಬೇಕು. ಹೇಗೆ ಪ್ರೆಸಿಡೆಂಟ್ ಎಲ್ಲರಿಗಿಂತಲೂ ಶ್ರೇಷ್ಠ ಪದವಿಯಲ್ಲಿದ್ದಾರೆ, ಆದ್ದರಿಂದ ಅವರಿರುವುದಕ್ಕಾಗಿ ರಾಷ್ಟ್ರಪತಿ ಭವನವು ಸಿಕ್ಕಿದೆ. ಅಲ್ಲಿ ಎಷ್ಟೊಂದು ದೊಡ್ಡ ಮಹಲು, ಉದ್ಯಾನವನ ಇತ್ಯಾದಿ…. ಇದೆ. ಇದೆಲ್ಲವೂ ಇಲ್ಲಿನ ಮಾತಾಯಿತು. ರಾಮ ರಾಜ್ಯವನ್ನಂತು ನೀವು ತಿಳಿದುಕೊಂಡಿದ್ದೀರಿ, ನೀವು ಸತ್ಯಯುಗಿ ಪುರುಷೋತ್ತಮರು ಆಗುತ್ತೀರಿ ನಂತರ ಈ ಕಲಿಯುಗೀ ಪುರುಷೋತ್ತಮರು ಇರುವುದಿಲ್ಲ. ನೀವು ಸತ್ಯಯುಗಿ ಪುರುಷೋತ್ತಮರಾಗಲು ಪುರುಷಾರ್ಥ ಮಾಡುತ್ತಿದ್ದೀರಿ, ನಿಮಗೆ ಗೊತ್ತಿದೆ – ಅಲ್ಲಿ ನಮ್ಮ ಮಹಲುಗಳು ಹೇಗಾಗುತ್ತವೆ. ನಾಳೆ ರಾಮ ರಾಜ್ಯವಾಗುವುದು, ನೀವು ರಾಮ ರಾಜ್ಯದಲ್ಲಿ ಪುರುಷೋತ್ತಮರಾಗಿ ಇರುತ್ತೀರಿ. ನಾವು ರಾವಣ ರಾಜ್ಯವು ಪರಿವರ್ತನೆ ಮಾಡಿ ರಾಮ ರಾಜ್ಯವನ್ನು ಸ್ಥಾಪಿಸುವೆವು ಎಂದು ನೀವು ಚಾಲೆಂಜ್ ಮಾಡುವಿರಿ. ಈಗ ಚಾಲೆಂಜ್ ಮಾಡಿದ್ದೀರೆಂದಾಗ ಭವಿಷ್ಯ 21 ಜನ್ಮಕ್ಕಾಗಿ ಒಬ್ಬರಿನ್ನೊಬ್ಬರನ್ನೂ ಪುರುಷೋತ್ತಮರನ್ನಾಗಿ ಮಾಡಬೇಕಾಗಿದೆ. ದೇವತೆಗಳ ಮಹಿಮೆಯನ್ನಂತು ಮಾಡುತ್ತಾರೆ – ಸರ್ವಗುಣ ಸಂಪನ್ನ….. ಅಹಿಂಸಾ ಪರಮೊ ದೇವಿ-ದೇವತಾ ಧರ್ಮ. ಇದನ್ನು ನೀವು ತಿಳಿದುಕೊಂಡಿದ್ದೀರಿ ಮತ್ತ್ಯಾವುದೇ ಮನುಷ್ಯರೂ ತಿಳಿದುಕೊಂಡಿಲ್ಲ. ನೀವು ಮುಂದಿನ ಜನ್ಮದಲ್ಲಿ ಪುರುಷೋತ್ತಮರಾಗುವಿರಿ, ನಂತರ ಯಾರಿಗೂ ಈ ರಾವಣ ರಾಜ್ಯವು ಇರುವುದಿಲ್ಲ. ನಿಮಗೀಗ ಸಂಪೂರ್ಣ ತಿಳುವಳಿಕೆಯಿದೆ, ಈಗ ರಾವಣ ರಾಜ್ಯವೇ ಸಮಾಪ್ತಿಯಾಗುವುದಿದೆ. ವರ್ತಮಾನದಲ್ಲಂತು ಸಮಯದ ಮೇಲೆ ಭರವಸೆಯೇ ಇಲ್ಲ, ಅಕಾಲ ಮೃತ್ಯುವಾಗಿ ಬಿಡುತ್ತದೆ ಅಥವಾ ಯಾರೊಂದಿಗೇ ಶತ್ರುತ್ವವಿದ್ದರೆ ಕೊಲೆ ಮಾಡಿ ಬಿಡುತ್ತಾರೆ. ನಿಮ್ಮನ್ನಂತು ಯಾರೂ ಸಹ ಈ ರೀತಿ ಮಾಡಲು ಸಾಧ್ಯವಿಲ್ಲ, ನೀವು ಅವಿನಾಶಿ ಪುರುಷೋತ್ತಮರಾಗಿದ್ದೀರಿ. ಈ ಪ್ರಪಂಚದಲ್ಲಿ ಇರುವವರಂತು ವಿನಾಶಿ, ಹಾಗೆಯೇ ರಾವಣ ರಾಜ್ಯದಲ್ಲಿ ಇದೆ. ಇವರಿಗೆ ನಿಮ್ಮ ದೈವೀ ರಾಜ್ಯದ ಬಗ್ಗೆ ಗೊತ್ತೇ ಇಲ್ಲ. ನಾವು ಶ್ರೀಮತದ ಆಧಾರದ ಮೇಲೆ ನಮ್ಮ ದೈವೀ ಸ್ವರಾಜ್ಯದ ಸ್ಥಾಪನೆ ಮಾಡುತ್ತಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ. ಯಾರ ಪೂಜೆಯಾಗುತ್ತದೆಯೋ ಅವರು ಅವಶ್ಯವಾಗಿ ಅಂಥಹ ಒಳ್ಳೆಯ ಕರ್ತವ್ಯವನ್ನು ಮಾಡಿಹೋಗಿದ್ದಾರೆ ಎನ್ನುವುದನ್ನಂತು ನೀವು ತಿಳಿದಿದ್ದೀರಿ. ಉದಾ: ಜಗದಂಬಾರವರ ಎಷ್ಟೊಂದು ಪೂಜೆಯಾಗುತ್ತದೆ, ಇವರೀಗ ಜ್ಞಾನ-ಜ್ಞಾನೇಶ್ವರಿ ಆಗಿದ್ದಾರೆ. ನೀವು ಜಗದಂಬನ ಮಕ್ಕಳು ಜ್ಞಾನ-ಜ್ಞಾನೇಶ್ವರಿ ಮತ್ತು ರಾಜ-ರಾಜೇಶ್ವರಿ ಆಗಿದ್ದೀರಿ. ಇಬ್ಬರಲ್ಲಿ ಉತ್ತಮರು ಯಾರು? ಜ್ಞಾನ-ಜ್ಞಾನೇಶ್ವರಿಯ ಬಳಿ ಹೋಗಿ ಅನೇಕ ಪ್ರಕಾರದ ಮನೋಕಾಮನೆಗಳನ್ನು ತಿಳಿಸುತ್ತಾರೆ. ಅನೇಕ ವಸ್ತುಗಳನ್ನು ಬೇಡುತ್ತಾರೆ. ಜಗದಂಬನ ಮಂದಿರ ಮತ್ತು ಲಕ್ಷ್ಮೀ-ನಾರಾಯಣನ ಮಂದಿರದಲ್ಲಿ ಬಹಳ ಅಂತರವಿದೆ. ಜಗದಂಬನ ಮಂದಿರವು ಬಹಳ ಚಿಕ್ಕದಾಗಿದೆ, ಚಿಕ್ಕ ಜಾಗದಲ್ಲಿಯೇ ಬಹಳ ಮನುಷ್ಯರ ಗುಂಪು ಸೇರುವುದು ಬಯಸುತ್ತಾರೆ, ಶ್ರೀನಾಥನ ಮಂದಿರದಲ್ಲಿಯೂ ಬಹಳಷ್ಟು ಜನ ಸಮೂಹವಾಗುತ್ತದೆ, ಸಮೂಹದಲ್ಲಿರುವ ಜನರನ್ನು ಮುಂದೆ ಕಳುಹಿಸಲು ಬಟ್ಟೆಯ ಕೋಲನ್ನು ತೋರಿಸುತ್ತಾ ಇರುತ್ತಾರೆ. ಕಲ್ಕತ್ತಾದಲ್ಲಿ ಕಾಳಿಯ ಮಂದಿರವು ಬಹಳ ಚಿಕ್ಕದಾಗಿದೆ, ಒಳಗೆ ಬಹಳ ಎಣ್ಣೆ ಮತ್ತು ನೀರಿರುತ್ತದೆ. ಮಂದಿರದೊಳಗೆ ಬಹಳ ಜಾಗ್ರತೆಯಿಂದ ನಡೆದುಕೊಂಡು ಹೋಗಬೇಕಾಗುತ್ತದೆ. ಅಲ್ಲಿ ಬಹಳ ಸಮೂಹವಿರುತ್ತದೆ. ಲಕ್ಷ್ಮೀ-ನಾರಾಯಣನ ಮಂದಿರವಂತು ಬಹಳ ದೊಡ್ಡದಾಗಿರುತ್ತದೆ, ಜಗದಂಬನ ಮಂದಿರವೇಕೆ ಚಿಕ್ಕದಾಗಿರುತ್ತದೆ? ಬಡವಳಲ್ಲವೆ. ಆದ್ದರಿಂದ ಮಂದಿರವೂ ಅದೇರೀತಿ ಇದೆ. ಅವರು ಸಾಹುಕಾರರಾಗಿದ್ದಾರೆ, ಆದರೆ ಮಂದಿರದಲ್ಲೆಂದಿಗೂ ಜಾತ್ರೆಯಾಗುವುದಿಲ್ಲ. ಜಗದಂಬನ ಮಂದಿರದಲ್ಲಿ ಬಹಳ ಜಾತ್ರೆಗಳಾಗುತ್ತವೆ, ಹೊರ ಪ್ರದೇಶಗಳಿಂದ ಬಹಳಷ್ಟು ಜನರು ಬರುತ್ತಾರೆ. ಮಹಾಲಕ್ಷ್ಮಿಯ ಮಂದಿರವೂ ಇದೆ, ಇದನ್ನು ನೀವೂ ತಿಳಿದಿದ್ದೀರಿ. ಇದರಲ್ಲಿ ಲಕ್ಷ್ಮಿಯೂ ಇದ್ದಾರೆ ಮತ್ತು ನಾರಾಯಣನೂ ಇರುವನು (ಕಂಬೈಂಡ್ ರೂಪ). ಲಕ್ಷ್ಮಿಯಿಂದ ಕೇವಲ ಹಣವನ್ನೇ ಬೇಡುವರು ಏಕೆಂದರೆ ಮಹಾಲಕ್ಷ್ಮಿಯು ಸಿರಿವಂತಳಾಗಿದ್ದಾರಲ್ಲವೆ. ಇಲ್ಲಿರುವುದಂತು ಅವಿನಾಶಿ ಜ್ಞಾನರತ್ನಗಳು. ಹಣಕ್ಕಾಗಿ ಲಕ್ಷ್ಮಿಯ ಬಳಿ ಹೋಗುವರು, ಬಾಕಿ ಅನೇಕ ಆಶೆಗಳನ್ನಿಟ್ಟುಕೊಂಡು ಜಗದಂಬನ ಬಳಿಗೆ ಹೋಗುವರು. ನೀವು ಜಗದಂಬನ ಮಕ್ಕಳಾಗಿದ್ದೀರಿ, 21 ಜನ್ಮಗಳಿಗಾಗಿ ನೀವು ಎಲ್ಲರ ಮನೋಕಾಮನೆಗಳನ್ನು ಪೂರ್ಣಗೊಳಿಸುವಿರಿ. ಒಂದು ಮಹಾಮಂತ್ರದಿಂದಲೇ ಎಲ್ಲರ ಮನೋಕಾಮನೆಗಳು 21 ಜನ್ಮಗಳಿಗಾಗಿ ಪೂರ್ಣಗೊಳ್ಳುತ್ತದೆ. ಅನ್ಯರು ಯಾವುದೆಲ್ಲಾ ಮಂತ್ರಗಳು ಮುಂತಾದವನ್ನು ಕೊಡುತ್ತಾರೆಯೋ ಅದರಲ್ಲಿ ಅರ್ಥವೇನೂ ಇಲ್ಲ. ತಂದೆಯು ತಿಳಿಸುವರು – ಈ ಮಂತ್ರವನ್ನು ನಿಮಗೆ ಕೊಡುತ್ತೇನೆ – ಏಕೆ? ಏಕೆಂದರೆ ನೀವು ಪತಿತರಾಗಿದ್ದೀರಲ್ಲವೆ. ನನ್ನೊಬ್ಬನನ್ನೇ ನೆನಪು ಮಾಡುತ್ತೀರಿ, ಆಗಲೇ ಪಾವನರಾಗುವಿದಿ. ಆತ್ಮರಿಗೆ ಇದನ್ನು ತಂದೆಯವರಲ್ಲದೆ ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ. ಇದರಿಂದ ಸಿದ್ಧವಾಗುತ್ತದೆ – ಈ ಸಹಜ ರಾಜಯೋಗವನ್ನು ಒಬ್ಬ ತಂದೆಯೇ ಕಲಿಸುವರು. ಅವರೇ ಮಂತ್ರವನ್ನೂ ಕೊಡುವರು. ಈ ಮಂತ್ರವನ್ನು 5000 ವರ್ಷಗಳ ಮೊದಲೂ ಕೊಟ್ಟಿದ್ದರೆಂಬ ಸ್ಮೃತಿಯು ಬಂದಿದೆ. ಈಗ ನೀವು ಸನ್ಮುಖದಲ್ಲಿ ಕುಳಿತುಕೊಂಡಿದ್ದೀರಿ. ಕ್ರೈಸ್ಟ್ ಇದ್ದು ಹೋದರು, ನಂತರ ಅವರ ಬೈಬಲ್ ಗ್ರಂಥವನ್ನು ಓದುತ್ತಿರುತ್ತಾರೆ. ಅವರೇನು ಮಾಡಿ ಹೋದರು? ಧರ್ಮದ ಸ್ಥಾಪನೆ ಮಾಡಿಹೋದರು. ಶಿವ ತಂದೆಯು ಏನು ಮಾಡಿಹೋದರು, ಕೃಷ್ಣನು ಏನು ಮಾಡಿ ಹೋದನು! ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಕೃಷ್ಣನಂತು ಸತ್ಯಯುಗದ ರಾಜಕುಮಾರನಾಗಿದ್ದನು, ಅವನೇ ನಂತರ ನಾರಾಯಣನಾಗುವನು, ನಂತರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ಬಂದಿದ್ದಾನೆ. ಶಿವ ತಂದೆಯೂ ಸಹ ಏನೋ ಮಾಡಿ ಹೋಗಿದ್ದಾರೆ. ಆದ್ದರಿಂದಲೇ ಅವರ ಇಷ್ಟೆಲ್ಲಾ ಪೂಜೆ ಇತ್ಯಾದಿ… ನಡೆಯುತ್ತದೆ. ಈಗ ನೀವು ತಿಳಿದಿದ್ದೀರಿ – ರಾಜಯೋಗವನ್ನು ಕಲಿಸಿಕೊಟ್ಟು ಹೋದರು, ಭಾರತವನ್ನು ಸ್ವರ್ಗವನ್ನಾಗಿ ಮಾಡಿಹೋಗಿದ್ದಾರೆ, ಆ ಸ್ವರ್ಗದ ಮೊದಲ ನಂಬರಿನ ಮಾಲೀಕನು ಸ್ವಯಂ ತಂದೆಯಾಗುವುದಿಲ್ಲ, ಶ್ರೀಕೃಷ್ಣನಾದನು. ಅವಶ್ಯವಾಗಿ ಕೃಷ್ಣ ಆತ್ಮನಿಗೆ ಓದಿಸಿದ್ದಾರೆ ಎಂಬುದನ್ನು ನೀವು ತಿಳಿದುಕೊಂಡು ಬಿಟ್ಟಿರಿ. ಕೃಷ್ಣನ ವಂಶಾವಳಿಯಾಗಿ ನೀವು ಕುಳಿತಿದ್ದೀರಿ, ರಾಜಾ-ರಾಣಿಯನ್ನು ಮಾತಾಪಿತ ಅನ್ನದಾತಾ ಎಂದು ಕರೆಯುತ್ತಾರೆ. ರಾಜಾಸ್ಥಾನದಲ್ಲಿಯೂ ರಾಜನಿಗೆ ಅನ್ನದಾತಾ ಎನ್ನುವರು. ರಾಜರಿಗೆಷ್ಟು ಮಾನ್ಯತೆಯಿರುತ್ತದೆ! ಮುಂಚೆ ಎಲ್ಲಾ ದೂರುಗಳು ರಾಜರ ಬಳಿ ಬರುತ್ತಿದ್ದವು, ಸಭೆಯು ಸೇರುತ್ತಿತ್ತು. ಯಾರೇ ತಪ್ಪು ಮಾಡುತ್ತಿದ್ದರು, ಅವರು ಬಹಳ ಪಶ್ಚಾತ್ತಾಪ ಪಡುತ್ತಿದ್ದರು. ವರ್ತಮಾನದಲ್ಲಂತು ಬಹಳಷ್ಟು ಜೈಲಿನ ಪಕ್ಷಿಗಳಿದ್ದಾರೆ, ಪದೇ-ಪದೇ ಜೈಲಿಗೆ ಹೋಗುತ್ತಾರೆ. ಈಗ ನೀವು ಮಕ್ಕಳು ಗರ್ಭ ಜೈಲಿನಲ್ಲಿ ಹೋಗಬಾರದು, ನೀವಂತು ಗರ್ಭ ಮಹಲಿನಲ್ಲಿ ಬರಬೇಕಾಗಿದೆ ಆದ್ದರಿಂದ ತಂದೆಯನ್ನು ನೆನಪು ಮಾಡುವಿರೆಂದರೆ ವಿಕರ್ಮಗಳ ವಿನಾಶವಾಗುವುದು. ನಂತರ ಮತ್ತೆಂದಿಗೂ ಗರ್ಭ ಜೈಲಿನಲ್ಲಿ ಹೋಗುವುದಿಲ್ಲ, ಅಲ್ಲಿ (ಸತ್ಯ-ತ್ರೇತಾ) ಪಾಪಗಳಾಗುವುದಿಲ್ಲ. ಎಲ್ಲರೂ ಗರ್ಭಮಹಲಿನಲ್ಲಿ ಇರುತ್ತಾರೆ, ಕೇವಲ ಕಡಿಮೆ ಪುರುಷಾರ್ಥದ ಕಾರಣ ಕಡಿಮೆ ಪದವಿಯನ್ನು ಪಡೆಯುತ್ತಾರೆ. ಶ್ರೇಷ್ಠ ಪದವಿಯುಳ್ಳವರಿಗೆ ಸುಖವೂ ಅತ್ಯಧಿಕವಾಗಿರುತ್ತದೆ. ಇಲ್ಲಂತು ಕೇವಲ 5 ವರ್ಷಗಳಿಗಾಗಿ ಗವರ್ನರ್, ಪ್ರೆಸಿಡೆಂಟ್ ನಿಮಿತ್ತರನ್ನಾಗಿ ಮಾಡುತ್ತಾರೆ. ನೀವು ಇದನ್ನು ತಿಳಿಸಬಹುದು – ಭಾರತವೇ ದೈವೀ ರಾಜಾಸ್ಥಾನವಾಗಿತ್ತು, ಈಗಂತು ರಾಜಾಸ್ಥಾನವೂ ಇಲ್ಲ ಮತ್ತು ರಾಜಾ-ರಾಣಿಯೂ ಇಲ್ಲ. ಮುಂಚೆ ಯಾರಾದರೂ ಸರ್ಕಾರಕ್ಕೆ ಹಣವನ್ನು ಕೊಡುತ್ತಿದ್ದರೆಂದರೆ, ಮಹಾರಾಜಾ-ಮಹಾರಾಣಿ ಎಂಬ ಬಿರುದು ಸಿಕ್ಕಿ ಬಿಡುತ್ತಿತ್ತು. ಇಲ್ಲಂತು ನಿಮ್ಮ ವಿದ್ಯಾಭ್ಯಾಸವಿದೆ. ಈ ಪ್ರಪಂಚದಲ್ಲಿ ವಿದ್ಯಾಭ್ಯಾಸದಿಂದ ಎಂದಿಗೂ ರಾಜಾ-ರಾಣಿ ಆಗುವುದಿಲ್ಲ. ನಿಮ್ಮದು ಇಲ್ಲಿ ಗುರಿ-ಉದ್ದೇಶವಿದೆ, ಈ ವಿದ್ಯಾಭ್ಯಾಸದಿಂದ ನೀವು ವಿಶ್ವದ ಮಹಾರಾಜಾ-ಮಹಾರಾಣಿ ಆಗುತ್ತೀರಿ. ಕೇವಲ ರಾಜಾ-ರಾಣಿಯಲ್ಲ. ರಾಜಾ-ರಾಣಿಯ ಬಿರುದಂತು ತ್ರೇತಾದಿಂದ ಆರಂಭವಾಗುವುದು.

ನೀವೀಗ ಜ್ಞಾನ-ಜ್ಞಾನೇಶ್ವರಿ ಆಗುತ್ತೀರಿ, ನಂತರ ರಾಜ-ರಾಜೇಶ್ವರಿಯಾಗುವಿರಿ. ಆ ರೀತಿ ಮಾಡುವವರು ಯಾರು? ಈಶ್ವರ. ಹೇಗೆ? ರಾಜಯೋಗ ಮತ್ತು ಜ್ಞಾನದಿಂದ. ರಾಜ್ಯಭಾಗ್ಯಕ್ಕಾಗಿ ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯು ನಿಮ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ, ಇದಂತು ಬಹಳ ಸಹಜವಿದೆಯಲ್ಲವೆ. ಸ್ವರ್ಗದ ಸ್ಥಾಪನೆ ಮಾಡುವವರಂತು ಗಾಡ್ ಫಾದರ್ ಆಗಿದ್ದಾರೆ. ಸ್ವರ್ಗದಲ್ಲಿಯೇ ಸ್ವರ್ಗದ ಸ್ಥಾಪನೆಯನ್ನು ಮಾಡುವುದಿಲ್ಲ. ಅವರಿಗೆ ಆ ಪದವಿಯೂ ಸಹ ಅವಶ್ಯವಾಗಿ ಸಂಗಮದಲ್ಲಿಯೇ ಸಿಕ್ಕಿರುತ್ತದೆ. ಆದ್ದರಿಂದ ಇದನ್ನು ಸೌಭಾಗ್ಯಶಾಲಿ ಕಲ್ಯಾಣಕಾರಿ ಸಂಗಮಯುಗವೆಂದು ಹೇಳಲಾಗುವುದು. ಯಾವ ತಂದೆಯು ಎಷ್ಟೊಂದು ಮಕ್ಕಳ ಕಲ್ಯಾಣ ಮಾಡುತ್ತಾರೆ, ಅವರೇ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ಹೇಳುವುದೂ ಸಹ ಪರಮಪಿತ ಪರಮಾತ್ಮ ಹೊಸ ಪ್ರಪಂಚವನ್ನು ರಚಿಸುವರು ಎಂದು ಹೇಳುತ್ತಾರೆ, ಆದರೆ ಅದರಲ್ಲಿ ಯಾರು ರಾಜ್ಯಾಡಳಿತ ಮಾಡುವರು ಎಂಬುದು ಯಾರಿಗೂ ತಿಳಿದಿಲ್ಲ. ನೀವು ಯಾವುದಕ್ಕೆ ರಾಮ ರಾಜ್ಯವೆಂದು ಹೇಳಲಾಗುತ್ತದೆ ಎಂಬುದನ್ನು ತಿಳಿದುಕೊಂಡಿದ್ದೀರಿ. ಅವರುಗಳಂತು ರಾಮ ರಾಜ್ಯದ ಸಮಯವನ್ನು ಲಕ್ಷಾಂತರ ವರ್ಷಗಳೆಂದು ಹೇಳಿಕೆ ಕೊಟ್ಟಿದ್ದಾರೆ, ಕಲಿಯುಗಕ್ಕೆ 40 ಸಾವಿರ ವರ್ಷಗಳೆಂದು ಹೇಳಿ ಬಿಟ್ಟಿದ್ದಾರೆ. ತಂದೆಯು ಹೇಳುತ್ತಾರೆ – ನಾನು ಬರುವುದೇ ಸಂಗಮದಲ್ಲಿ, ಬಂದು ಬ್ರಹ್ಮಾರವರ ಮೂಲಕ ವಿಷ್ಣುಪುರಿಯ ಸ್ಥಾಪನೆ ಮಾಡುವೆನು. ಸತ್ಯ ನಾರಾಯಣನ ಕಥೆಯೂ ಸಹ ಇದೇ ಆಗಿದೆ. ಸತ್ಯಯುಗದಲ್ಲಿ ನೀವು ಲಕ್ಷ್ಮೀ-ನಾರಾಯಣನು ಸರ್ವಗುಣ ಸಂಪನ್ನ…. ಆಗುತ್ತೀರಿ. ನಂತರದಲ್ಲಿ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತದೆ. ಯಾವಾಗ ಸ್ಥಾಪನೆಯಾಗುವುದೋ ಆಗಲೇ ಹೊಸ ವೃಕ್ಷವಾಗುವುದು. ಹೊಸ ಮನೆಯ ನಿರ್ಮಾಣವಾಗುತ್ತದೆ ಎಂದರೆ ಹೊಸದೆಂದು ಹೇಳಲಾಗುವುದು. ನೀವೂ ಸಹ ಸತ್ಯಯುಗದಲ್ಲಿ ಬರುತ್ತೀರೆಂದರೆ ಹೊಸ ರಾಜಧಾನಿಯಾಗುವುದು, ನಂತರ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತದೆ. ಸ್ಥಾಪನೆಯು ಇಲ್ಲಿಯೇ ಆಗುತ್ತದೆ, ಈ ಅದ್ಭುತವಾದ ಮತುಗಳು ಯಾರದೇ ಬುದ್ಧಿಯಲ್ಲಿಯೂ ಇಲ್ಲ. ಆದ್ದರಿಂದ ತಂದೆಯು ತಿಳಿಸಿದ್ದಾರೆ – ಎಲ್ಲಾ ಆತ್ಮರಿಗಾಗಿ ಈ ಯುಗವು ಪುರುಷೋತ್ತಮರಾಗುವ ಯುಗವಾಗಿದೆ. ಜೀವನ್ಮುಕ್ತಿಗೆ ಪುರುಷೋತ್ತಮ ಎಂದು ಹೇಳಲಾಗುತ್ತದೆ. ಜೀವನ ಬಂಧನವನ್ನು ಪುರುಷೋತ್ತಮ ಎಂದು ಹೇಳುವುದಿಲ್ಲ, ಈ ಸಮಯದಲ್ಲಂತು ಎಲ್ಲರೂ ಜೀವನ ಬಂಧನದಲ್ಲಿದ್ದಾರೆ. ತಂದೆಯು ಬಂದು ಎಲ್ಲರನ್ನೂ ಜೀವನ್ಮುಕ್ತರನ್ನಾಗಿ ಮಾಡುತ್ತಾರೆ, ನೀವು ಅರ್ಧಕಲ್ಪಕ್ಕಾಗಿ ಜೀವನ್ಮುಕ್ತರಾಗುವಿರಿ ನಂತರ ಜೀವನ ಬಂಧನದಲ್ಲಿ – ಇದನ್ನಂತು ನೀವು ತಿಳಿದಿದ್ದೀರಿ. ನಿಮ್ಮ ಈ ವ್ರತ-ಉಪವಾಸಗಳೆಲ್ಲವೂ ಏನಾಗಿದೆ? ಬಾಬಾರವರು ಬಂದು ವ್ರತ ಮಾಡಿಸಿದ್ದಾರೆ, ಆದರೆ ಅದು ಆಹಾರ-ಪಾನೀಯಗಳ ಮಾತಲ್ಲ. ಎಲ್ಲಾ ಕಾರ್ಯಗಳನ್ನೂ ಮಾಡಿರಿ ಕೇವಲ ತಂದೆಯನ್ನು ನೆನಪು ಮಾಡಿರಿ ಮತ್ತು ಪವಿತ್ರರಾಗಿರಿ. ಪುರುಷೋತ್ತಮ ಮಾಸದಲ್ಲಿ ಬಹಳಷ್ಟು ಮಂದಿ ಪವಿತ್ರವಾಗಿಯೂ ಇರುತ್ತಾರೆ. ವಾಸ್ತವದಲ್ಲಿ ಈ ಪುರುಷೋತ್ತಮ ಯುಗದ ಮಾನ್ಯತೆಯಿದೆ ಅಂದಾಗ ನಿಮಗೆಷ್ಟು ಖುಷಿ ಹಾಗೂ ನಶೆಯುಂಟಾಗಬೇಕು!! ಈಗ ನಿಮ್ಮ ಯಾವುದೇ ಪಾಪಕರ್ಮಗಳು ಆಗಬಾರದು ಏಕೆಂದರೆ ನೀವು ಪುರುಷೋತ್ತಮರು ಆಗುತ್ತಿದ್ದೀರಿ. ಒಳ್ಳೆಯದು!

ಮಧುರಾತಿ ಮಧುರ ಅಗಲಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಈ ಪುರುಷೋತ್ತಮ ಯುಗದಲ್ಲಿ ಜೀವನ್ಮುಕ್ತರು ಆಗುವುದಕ್ಕಾಗಿ ಪುಣ್ಯ ಕರ್ಮಗಳನ್ನು ಮಾಡಬೇಕಾಗಿದೆ. ಅವಶ್ಯವಾಗಿ ಪವಿತ್ರರಾಗಿ ಇರಬೇಕಾಗಿದೆ. ಮನೆ-ವ್ಯವಹಾರ ಮುಂತಾದವೆಲ್ಲವೂ ಇದ್ದರೂ ಮನಃಪೂರ್ವಕವಾಗಿ ಮಮತ್ವ ಸಮಾಪ್ತಿ ಮಾಡಬೇಕಾಗಿದೆ.

2. ಶ್ರೀಮತದಂತೆ ತಮ್ಮ ತನು-ಮನ-ಧನದಿಂದ ದೈವೀ ರಾಜ್ಯವನ್ನು ಸ್ಥಾಪಿಸಬೇಕಾಗಿದೆ. ಪುರುಷೋತ್ತಮರನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ.

ವರದಾನ:-

ನಾವು ಎಲ್ಲಾ ಕಾರ್ಯಗಳನ್ನೂ ಸರ್ವ ಶ್ರೇಷ್ಠ ಸರ್ವ ಶಕ್ತಿವಂತ ತಂದೆಯ ಅಧಿಕಾರದಿಂದ ಮಾಡುವವರಾಗಿದ್ದೇವೆ, ಇಷ್ಟು ಅಟಲ ನಿಶ್ಚಯವಿರಲಿ ಅದನ್ನೆಂದಿಗೂ ಯಾರೂ ಮುರಿಯಲು ಸಾಧ್ಯವಾಗಬಾರದು. ಇದರಿಂದ ಎಷ್ಟೇ ದೊಡ್ಡ ಕಾರ್ಯವನ್ನು ಮಾಡುತ್ತಿದ್ದರೂ ಅತಿ ಸಹಜವೆಂಬಂತೆ ಅನುಭವ ಮಾಡುವಿರಿ. ಹೇಗೆ ವರ್ತಮಾನದಲ್ಲಿ ವಿಜ್ಞಾನಿಗಳು ಇಂತಹ ಯಂತ್ರವನ್ನು ತಯಾರು ಮಾಡಿಟ್ಟಿದ್ದಾರೆ, ಅದರಿಂದ ಯಾವುದೇ ಪ್ರಶ್ನೆಗೆ ಉತ್ತರವನ್ನು ಸಹಜವಾಗಿಯೇ ಸಿಕ್ಕಿ ಬಿಡುತ್ತದೆ, ಬುದ್ಧಿಯನ್ನು ಉಪಯೋಗಿಸುವುದರಿಂದ ಮುಕ್ತರಾಗಿ ಬಿಡುತ್ತಾರೆ. ಅದೇರೀತಿ ಸರ್ವಶಕ್ತಿವಂತನ ಅಧಿಕಾರವನ್ನು ತಮ್ಮ ಮುಂದೆ ಇಟ್ಟುಕೊಳ್ಳುತ್ತೀರೆಂದರೆ, ಎಲ್ಲಾ ಪ್ರಶ್ನೆಗಳ ಉತ್ತರವು ಸಹಜವಾಗಿ ಸಿಕ್ಕಿ ಬಿಡುವುದು ಹಾಗೂ ಸಹಜ ಮಾರ್ಗದ ಅನುಭೂತಿಯಾಗುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top