27 September 2021 KANNADA Murli Today | Brahma Kumaris

Read and Listen today’s Gyan Murli in Kannada

September 26, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ – ಯೋಗ ಬಲದಿಂದಲೇ ನೀವು ತಮ್ಮ ವಿಕರ್ಮಗಳ ಮೇಲೆ ಜಯಿಸಿ ವಿಕರ್ಮಾಜೀತರಾಗಬೇಕಾಗಿದೆ”

ಪ್ರಶ್ನೆ:: -

ಯಾವ ವಿಚಾರವು ಪುರುಷಾರ್ಥಿ ಮಕ್ಕಳನ್ನೂ ಸಹ ಪುರುಷಾರ್ಥ ಹೀನರನ್ನಾಗಿ ಮಾಡಿ ಬಿಡುತ್ತದೆ?

ಉತ್ತರ:-

ಒಂದುವೇಳೆ ಯಾವುದೇ ಪುರುಷಾರ್ಥಿಗೆ ಇನ್ನೂ ಬಹಳ ಸಮಯವಿದೆ, ಕೊನೆಯಲ್ಲಿ ಮಾಡಿ ಬಿಡೋಣ ಎಂಬ ಸಂಕಲ್ಪ ಬಂದಿತೆಂದರೆ ಅಂತಹವರಿಗೆ ತಂದೆಯು ತಿಳಿಸುತ್ತಾರೆ – ಮಕ್ಕಳೇ, ಮೃತ್ಯುವಿನ ಸಮಯವು ನಿಶ್ಚಿತವಿದೆಯೇ? ನಾಳೆ-ನಾಳೆ ಎನ್ನುತ್ತಾ ಶರೀರ ಬಿಟ್ಟರೆ ಸಂಪಾದನೆ ಏನಾಗುವುದು? ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ತನ್ನ ಹಾಗೂ ಅನ್ಯರ ಕಲ್ಯಾಣ ಮಾಡುತ್ತಾ ಇರಿ. ಸಮಯದ ಕುರಿತು ಆಲೋಚಿಸಿ ಪುರುಷಾರ್ಥಹೀನ ಆಗಬೇಡಿ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಓಂ ನಮಃ ಶಿವಾಯ…..

ಓಂ ಶಾಂತಿ. ಇದನ್ನು ಮಕ್ಕಳಿಗೆ ತಿಳಿಸಲಾಗಿದೆ – ನಿರಾಕಾರ ತಂದೆಯು ಈ ಸಾಕಾರವಿಲ್ಲದೆ ಯಾವುದೇ ಕರ್ಮ ಮಾಡಲು ಸಾಧ್ಯವಿಲ್ಲ, ಪಾತ್ರವನ್ನು ಅಭಿನಯಿಸಲು ಸಾಧ್ಯವಿಲ್ಲ. ಆತ್ಮಿಕ ತಂದೆಯು ಬಂದು ಬ್ರಹ್ಮಾರವರ ಮೂಲಕ ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ. ಯೋಗಬಲದಿಂದಲೇ ಸತೋಪ್ರಧಾನರಾಗಬೇಕಾಗಿದೆ ಮತ್ತು ವಿಶ್ವದ ಮಾಲೀಕರಾಗಬೇಕಾಗಿದೆ, ಇದು ಮಕ್ಕಳ ಬುದ್ಧಿಯಲ್ಲಿದೆ – ಕಲ್ಪ-ಕಲ್ಪವೂ ತಂದೆಯು ಬಂದು ಬ್ರಹ್ಮಾರವರ ಮೂಲಕ ರಾಜಯೋಗವನ್ನು ಕಲಿಸುತ್ತಾರೆ ಮತ್ತು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆ ಅರ್ಥಾತ್ ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತಾರೆ. ಮನುಷ್ಯರು ಯಾರು ದೇವಿ-ದೇವತೆಗಳಾಗಿದ್ದರೋ, ಪಾವನರಾಗಿದ್ದರೋ ಅವರೇ ಈಗ 84 ಜನ್ಮಗಳ ನಂತರ ಪತಿತರಾಗಿದ್ದಾರೆ. ಭಾರತವು ಪಾರಸಪುರಿಯಾಗಿದ್ದಾಗ ಪವಿತ್ರತೆ, ಸುಖ-ಶಾಂತಿ ಎಲ್ಲವೂ ಇತ್ತು. ಇದು 5000 ವರ್ಷಗಳ ಮಾತಾಗಿದೆ. ತಿಥಿ-ತಾರೀಖಿನ ಸಹಿತ ತಂದೆಯು ಎಲ್ಲಾ ಲೆಕ್ಕವನ್ನೂ ತಿಳಿಸುತ್ತಾರೆ, ಇವರಿಗಿಂತಲೂ ಶ್ರೇಷ್ಠರು ಮತ್ತ್ಯಾರೂ ಇಲ್ಲ. ಸೃಷ್ಟಿ ಅಥವಾ ವೃಕ್ಷ ಯಾವುದಕ್ಕೆ ಕಲ್ಪವೃಕ್ಷವೆಂದು ಹೇಳುತ್ತಾರೆ ಅದರ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಂದೆಯೇ ಕುಳಿತು ತಿಳಿಸುತ್ತಾರೆ. ಭಾರತದ ಯಾವ ದೇವಿ-ದೇವತಾ ಧರ್ಮವಿತ್ತೋ ಅದು ಈಗ ಪ್ರಾಯಲೋಪವಾಗಿ ಬಿಟ್ಟಿದೆ. ಕೇವಲ ಚಿತ್ರಗಳಿವೆ. ಭಾರತವಾಸಿಗಳಿಗೆ ಗೊತ್ತಿದೆ, ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಭಲೆ ಶಾಸ್ತ್ರಗಳಲ್ಲಿ ಕೃಷ್ಣನನ್ನು ದ್ವಾಪರದಲ್ಲಿ ತೋರಿಸಿ ತಪ್ಪು ಮಾಡಿ ಬಿಟ್ಟಿದ್ದಾರೆ. ತಂದೆಯೇ ಬಂದು ಮರೆತಿರುವವರಿಗೆ ಮಾರ್ಗವನ್ನು ತಿಳಿಸುತ್ತಾರೆ. ಅವರಿಗೆ ಮುಕ್ತಿ-ಜೀವನ್ಮುಕ್ತಿಯ ಮಾರ್ಗದರ್ಶಕನೆಂದು ಹೇಳುತ್ತಾರೆ. ಸರ್ವರಿಗೆ ಮುಕ್ತಿ-ಜೀವನ್ಮುಕ್ತಿಯನ್ನು ಕೊಡುವವರು ಒಬ್ಬರೇ ಆಗಿದ್ದಾರೆ, ಭಾರತವು ಜೀವನ್ಮುಕ್ತನಾಗಿದ್ದಾಗ ಉಳಿದೆಲ್ಲಾ ಆತ್ಮರು ಮುಕ್ತಿಧಾಮದಲ್ಲಿದ್ದರು ಆದ್ದರಿಂದ ಅವರಿಗೆ ಮುಕ್ತಿ-ಜೀವನ್ಮುಕ್ತಿಯ ದಾತನೆಂದು ಹೇಳಲಾಗುತ್ತದೆ. ರಚಯಿತನು ಒಬ್ಬರೇ ಆಗಿದ್ದಾರೆ, ಸೃಷ್ಟಿಯು ಒಂದೇ ಆಗಿದೆ. ವಿಶ್ವದ ಚರಿತ್ರೆ-ಭೂಗೋಳವು ಒಂದೇ ಆಗಿದೆ. ಅದು ಪುನರಾವರ್ತನೆ ಆಗುತ್ತದೆ. ಸತ್ಯಯುಗ, ತ್ರೇತಾಯುಗ…. ನಂತರ ಸಂಗಮಯುಗವಾಗುತ್ತದೆ. ಕಲಿಯುಗವು ಪತಿತವಾಗಿದೆ, ಸತ್ಯಯುಗವು ಪಾವನವಾಗಿದೆ. ಸತ್ಯಯುಗವಾದಾಗ ಅದಕ್ಕೆ ಮೊದಲು ಅವಶ್ಯವಾಗಿ ಕಲಿಯುಗದ ವಿನಾಶವಾಗುವುದು. ವಿನಾಶಕ್ಕೆ ಮೊದಲು ಸ್ಥಾಪನೆ ಆಗುವುದು. ಸತ್ಯಯುಗದಲ್ಲಿ ಸ್ಥಾಪನೆ ಆಗುವುದಿಲ್ಲ, ಯಾವಾಗ ಪತಿತ ಪ್ರಪಂಚವನ್ನು ಪಾವನ ಮಾಡಬೇಕಾಗಿದೆಯೋ ಆಗಲೇ ಭಗವಂತ ಬರುವರು. ಈಗ ತಂದೆಯು ಸಹಜ ಯುಕ್ತಿಯನ್ನು ತಿಳಿಸುತ್ತಾರೆ. ದೇಹ ಸಹಿತವಾಗಿ ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ದೇಹೀ-ಅಭಿಮಾನಿಯಾಗಿ ತಂದೆಯನ್ನು ನೆನಪು ಮಾಡಿರಿ. ತಂದೆಯು ಭಕ್ತರಿಗೆ ಫಲ ನೀಡುವವರಾಗಿದ್ದಾರೆ, ಭಕ್ತರಿಗೆ ಪಾವನ ಮಾಡುವುದಕ್ಕಾಗಿ ಜ್ಞಾನ ಕೊಡುತ್ತಾರೆ. ಎಲ್ಲರನ್ನೂ ಪಾವನ ಮಾಡುವಂತದ್ದು ಯೋಗವಾಗಿದೆ. ಜ್ಞಾನಸಾಗರನು ಬಂದು ಮುಖದಿಂದ ಜ್ಞಾನವನ್ನು ತಿಳಿಸುತ್ತಾರೆ, ಪತಿತರನ್ನು ಪಾವನರನ್ನಾಗಿ ಮಾಡುತ್ತಾರೆ. ಈ ಸಮಯದಲ್ಲಿ ಎಲ್ಲಾ ಆತ್ಮರೂ ಪತಿತರಾಗಿದ್ದಾರೆ ಆದ್ದರಿಂದ ತಂದೆಯನ್ನು ಕರೆಯುತ್ತಾರೆ ಏಕೆಂದರೆ ತಂದೆಯಲ್ಲದೆ ಯಾರೂ ಪಾವನರನ್ನಾಗಿ ಮಾಡಲು ಸಾಧ್ಯವಿಲ್ಲ. ಒಂದುವೇಳೆ ಪತಿತ-ಪಾವನಿಯು ಗಂಗೆಯಾಗಿದ್ದರೆ ಮತ್ತೆ ಪತಿತ-ಪಾವನ ಸೀತಾರಾಂ ಎಂದು ಏಕೆ ಕರೆಯುತ್ತೀರಿ! ಬುದ್ಧಿಯು ಹೇಳುತ್ತದೆ – ಪರಮಪಿತ ಪರಮಾತ್ಮನು ಅವಶ್ಯವಾಗಿ ಹೊಸ ಪ್ರಪಂಚದ ಸ್ಥಾಪನೆ ಮತ್ತು ಹಳೆಯ ಪ್ರಪಂಚದ ವಿನಾಶಕ್ಕಾಗಿ ಬರುವರು. ಕಲ್ಪವೃಕ್ಷಕ್ಕೂ ಆಯಸ್ಸು ಇರುತ್ತದೆ. ಯಾವ ವಸ್ತು ಜಡಜಡೀಭೂತ ಸ್ಥಿತಿಯನ್ನು ತಲುಪುವುದೋ ಅದಕ್ಕೇ ತಮೋಪ್ರಧಾನವೆಂದು ಹೇಳುತ್ತದೆ, ಹೊಸ ಪ್ರಪಂಚವೆಂದು ಹೇಳುವುದಿಲ್ಲ. ಇದು ಕಲಿಯುಗೀ ಪ್ರಪಂಚವಾಗಿದೆ, ಇವೆಲ್ಲಾ ಮಾತುಗಳನ್ನು ಅನ್ಯರಿಗೆ ತಿಳಿಸುವುದಕ್ಕಾಗಿ ನಿಮ್ಮ ಬುದ್ಧಿಯಲ್ಲಿ ಕೂರಿಸಲಾಗುತ್ತದೆ. ಮನೆ-ಮನೆಗೆ ಸಂದೇಶ ಕೊಡಬೇಕಾಗಿದೆ. ಕೇವಲ ಪರಮಾತ್ಮನು ಬಂದಿದ್ದಾರೆಂದು ಹೇಳುವುದಲ್ಲ, ಯುಕ್ತಿಯಿಂದ ತಿಳಿಸಬೇಕಾಗಿದೆ – ಇಬ್ಬರು ತಂದೆಯರಿದ್ದಾರೆ. ಒಬ್ಬರು ಲೌಕಿಕ ಮತ್ತು ಇನ್ನೊಬ್ಬರ ಪಾರಲೌಕಿಕ. ದುಃಖದ ಸಮಯದಲ್ಲಿ ಪಾರಲೌಕಿಕ ತಂದೆಯನ್ನೇ ನೆನಪು ಮಾಡಲಾಗುತ್ತದೆ. ಸುಖಧಾಮದಲ್ಲಿ ಯಾರೂ ಪರಮಾತ್ಮನನ್ನು ನೆನಪು ಮಾಡುವುದಿಲ್ಲ. ಸತ್ಯಯುಗ ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ ಸುಖ, ಶಾಂತಿ, ಪವಿತ್ರತೆ ಎಲ್ಲವೂ ಇತ್ತು, ತಂದೆಯ ಆಸ್ತಿಯು ಸಿಕ್ಕಿ ಬಿಟ್ಟರೆ ಮತ್ತೇಕೆ ಕರೆಯುವರು? ಅಲ್ಲಿ ಸುಖವೇ ಸುಖವಿರುತ್ತದೆ. ತಂದೆಯು ದುಃಖಕ್ಕಾಗಿ ಪ್ರಪಂಚವನ್ನು ರಚಿಸಲಿಲ್ಲ, ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಯಾರ ಪಾತ್ರವು ಅಂತಿಮದಲ್ಲಿ ಇದೆಯೋ ಅವರು 2-4 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಉಳಿದ ಸಮಯದಲ್ಲಿ ಶಾಂತಿಧಾಮದಲ್ಲಿ ಇರುತ್ತಾರೆ ಬಾಕಿ ಯಾರೂ ಈ ಆಟದಿಂದ ಮುಕ್ತರಾಗಲು ಸಾಧ್ಯವಿಲ್ಲ. ಒಂದೆರಡು ಜನ್ಮಗಳು ತೆಗೆದುಕೊಂಡರೆ ಇನ್ನು ಉಳಿದ ಸಮಯವು ಹೇಗೆ ಅವರಿಗೆ ಮೋಕ್ಷವಿದ್ದಂತೆ. ಆತ್ಮನು ಪಾತ್ರಧಾರಿಯಾಗಿದೆ. ಕೆಲವರದು ಶ್ರೇಷ್ಠ ಪಾತ್ರವಿದೆ, ಕೆಲವರದು ಕನಿಷ್ಟ ಪಾತ್ರವಿದೆ. ಈಶ್ವರನ ಅಂತ್ಯವನ್ನು ತಿಳಿಯಲು ಸಾಧ್ಯವಿಲ್ಲವೆಂದು ಗಾಯನವಿದೆ, ಈಶ್ವರನೇ ಬಂದು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ತಂದೆಯು ತಿಳಿಸುತ್ತಾರೆ – ನಾನು ಸಾಧಾರಣ ತನುವಿನಲ್ಲಿ ಪ್ರವೇಶ ಮಾಡುತ್ತೇನೆ. ಇವರು ತಮ್ಮ ಜನ್ಮಗಳನ್ನು ಅರಿತುಕೊಂಡಿಲ್ಲ. ನಾನು ಇವರ 84 ಜನ್ಮಗಳ ಕಥೆಯನ್ನು ತಿಳಿಸುತ್ತೇನೆ. ಯಾವುದೇ ಪಾತ್ರವು ಬದಲಾವಣೆಯಾಗಲು ಸಾಧ್ಯವಿಲ್ಲ. ಇದು ಮಾಡಿ-ಮಾಡಲ್ಪಟ್ಟ ಆಟವಾಗಿದೆ. ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಯಾವಾಗ ಪವಿತ್ರರಾಗಿ ತಿಳಿದುಕೊಳ್ಳುವರೋ ಆಗಲೇ ಬುದ್ಧಿಯಲ್ಲಿ ಕುಳಿತುಕೊಳ್ಳುವುದು. ಚೆನ್ನಾಗಿ ತಿಳಿದುಕೊಳ್ಳಲು ಏಳು ದಿನಗಳು ಭಟ್ಟಿಯಲ್ಲಿ ಇರಬೇಕಾಗುತ್ತದೆ. ಭಾಗವತ ಇತ್ಯಾದಿಗಳನ್ನು ಏಳು ದಿನಗಳು ಇಡುತ್ತಾರೆ, ಕೆಲವರು ಏಳು ದಿನಗಳಲ್ಲಿ ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ಕೆಲವರಂತೂ ನಮ್ಮ ಬುದ್ಧಿಯಲ್ಲಿ ಏನೂ ಕುಳಿತುಕೊಳ್ಳಲಿಲ್ಲವೆಂದು ಹೇಳಿ ಬಿಡುತ್ತಾರೆ. ಶ್ರೇಷ್ಠ ಪದವಿಯನ್ನು ಪಡೆಯುವುದು ಇಲ್ಲದಿದ್ದರೆ ಬುದ್ಧಿಯಲ್ಲಿ ಹೇಗೆ ಕುಳಿತುಕೊಳ್ಳುವುದು ಆದರೂ ಕಲ್ಯಾಣವಂತೂ ಆಯಿತಲ್ಲವೆ. ಪ್ರಜೆಗಳು ಇದೇ ರೀತಿ ತಯಾರಾಗುತ್ತಾರೆ. ಬಾಕಿ ರಾಜ್ಯಭಾಗ್ಯವನ್ನು ಪಡೆಯುವುದರಲ್ಲಿ ಪರಿಶ್ರಮವಿದೆ, ತಂದೆಯನ್ನು ನೆನಪು ಮಾಡುವುದರಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ಈಗ ಮಾಡಿ-ಮಾಡದಿರಿ ಆದರೆ ತಂದೆಯ ಆದೇಶವಿದೆ – ಪ್ರಿಯವಾದ ವಸ್ತುವನ್ನು ನೆನಪು ಮಾಡಲಾಗುತ್ತದೆಯಲ್ಲವೆ. ಭಕ್ತಿಮಾರ್ಗದಲ್ಲಿಯೂ ಹೇ ಪತಿತ-ಪಾವನ ಬನ್ನಿ ಎಂದು ಹೇಳುತ್ತಾರೆ. ಅವರು ಈಗ ಸಿಕ್ಕಿದ್ದಾರೆ, ನನ್ನನ್ನು ನೆನಪು ಮಾಡಿದರೆ ತುಕ್ಕು ಕಳೆಯುವುದು ಎಂದು ಹೇಳುತ್ತಾರೆ. ರಾಜ್ಯಭಾಗ್ಯವು ಹಾಗೆಯೇ ಸಿಕ್ಕಿ ಬಿಡುವುದೇ? ನೆನಪಿನಲ್ಲಿಯೇ ಸ್ವಲ್ಪ ಪರಿಶ್ರಮವಿದೆ. ಬಹಳ ನೆನಪು ಮಾಡುವವರು ಕರ್ಮಾತೀತ ಸ್ಥಿತಿಯನ್ನು ಹೊಂದುತ್ತಾರೆ. ಪೂರ್ಣ ನೆನಪು ಮಾಡದೇ ಇದ್ದರೆ ವಿಕರ್ಮಗಳು ವಿನಾಶವಾಗುವುದಿಲ್ಲ. ಯೋಗಬಲದಿಂದಲೇ ವಿಕರ್ಮಾಜೀತ ಆಗಬೇಕಾಗಿದೆ. ಲಕ್ಷ್ಮೀ-ನಾರಾಯಣರು ಇಷ್ಟು ಪವಿತ್ರರು ಹೇಗಾದರು? ಕಲಿಯುಗದ ಅಂತ್ಯದಲ್ಲಿ ಯಾರೂ ಪವಿತ್ರರು ಇರಲಿಲ್ಲ ಅಂದಮೇಲೆ ಅವರು ಯಾವಾಗ ಪವಿತ್ರರಾದರು? ಈ ಸಮಯದಲ್ಲಿ ಗೀತಾಜ್ಞಾನದ ಭಾಗವು ಪುನರಾವರ್ತನೆ ಆಗುತ್ತಿದೆ, ಶಿವ ಭಗವಾನುವಾಚ – ತಪ್ಪುಗಳಂತೂ ಎಲ್ಲರಿಂದ ಆಗುತ್ತಿರುತ್ತವೆ. ನಾನು ಬಂದು ಎಲ್ಲರನ್ನೂ ಸುಧಾರಣೆ ಮಾಡುತ್ತೇನೆ. ಭಾರತದ ಯಾವುದೆಲ್ಲಾ ಶಾಸ್ತ್ರಗಳಿವೆಯೋ ಎಲ್ಲವೂ ಭಕ್ತಿಮಾರ್ಗದ್ದಾಗಿದೆ. ತಂದೆಯು ತಿಳಿಸುತ್ತಾರೆ – ನಾನು ಏನೆಲ್ಲವನ್ನೂ ಹೇಳಿದ್ದೆನೋ ಅದು ಯಾರಿಗೂ ತಿಳಿದಿಲ್ಲ, ಯಾರು ನನ್ನ ಮೂಲಕ ಕೇಳಿದರೋ ಅವರು 21 ಜನ್ಮಗಳ ಪ್ರಾಲಬ್ಧವನ್ನು ಪಡೆದುಕೊಂಡರು ನಂತರ ಜ್ಞಾನವು ಪ್ರಾಯಲೋಪವಾಗಿ ಬಿಡುತ್ತದೆ. ನೀವೇ ಚಕ್ರವನ್ನು ಸುತ್ತಿ ಮತ್ತೆ ಈ ಜ್ಞಾನವನ್ನು ಕೇಳುತ್ತಿದ್ದೀರಿ.

ನೀವು ತಿಳಿದುಕೊಂಡಿದ್ದೀರಿ – ನಾವು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುವ ಸಸಿಯನ್ನು ನಾಟಿ ಮಾಡುತ್ತಿದ್ದೇವೆ. ಇದು ದೈವೀ ವೃಕ್ಷದ ನಾಟಿಯಾಗಿದೆ, ಅವರಂತೂ ಆ ವೃಕ್ಷಗಳ ಸಸಿಗಳನ್ನು ನೆಡುತ್ತಿರುತ್ತಾರೆ. ತಂದೆಯು ಬಂದು ಅಂತರವನ್ನು ತಿಳಿಸುತ್ತಾರೆ. ನೀವು ನೋಡುತ್ತೀರಿ – ಅವರ ಯೋಜನೆ ಏನಾಗಿದೆ? ನಿಮ್ಮ ಯೋಜನೆ ಏನಾಗಿದೆ? ಜನಸಂಖ್ಯೆಯು ಹೆಚ್ಚಾಗದಿರಲಿ ಎಂದು ಅವರು ಫ್ಯಾಮಿಲಿ ಪ್ಲಾನಿಂಗ್ ಮಾಡುತ್ತಾರೆ. ತಂದೆಯಂತೂ ಬಹಳ ಒಳ್ಳೆಯ ಮಾತನ್ನು ತಿಳಿಸುತ್ತಾರೆ – ಅನೇಕ ಧರ್ಮಗಳು ವಿನಾಶವಾಗುತ್ತವೆ ಮತ್ತು ದೇವಿ-ದೇವತಾ ಧರ್ಮದ ಪರಿವಾರವು ಸ್ಥಾಪನೆಯಾಗುವುದು. ಸತ್ಯಯುಗದಲ್ಲಿ ಒಂದೇ ಆದಿ ಸನಾತನ ದೇವಿ-ದೇವತಾ ಧರ್ಮದ ಮನೆತನವಿತ್ತು. ಅನ್ಯ ಅನೇಕ ಮನೆತನಗಳು ಇರಲೇ ಇಲ್ಲ. ಈ ಸಮಯದಲ್ಲಿ ಭಾರತದಲ್ಲಿ ನೋಡಿ ಎಷ್ಟೊಂದು ಮನೆತನಗಳಿವೆ! ಗುಜರಾತಿ ವಂಶಾವಳಿ, ಸಿಖ್ಖ್ ವಂಶಾವಳಿ…. ವಾಸ್ತವದಲ್ಲಿ ಭಾರತದ ಒಂದೇ ವಂಶಾವಳಿ ಇರಬೇಕು, ಅನೇಕ ವಂಶಾವಳಿಗಳಿದ್ದರೆ ಅವಶ್ಯವಾಗಿ ಅಲ್ಲಿ ಕಿರಿಕಿರಿ ಆಗುವುದು ಮತ್ತೆ ಗೃಹ ಯುದ್ಧಗಳಾಗುತ್ತವೆ. ವಂಶಾವಳಿಗಳಲ್ಲಿಯೂ ಕೋಲಾಹಲಗಳು ನಡೆಯುತ್ತವೆ. ಹೇಗೆ ಕ್ರಿಶ್ಚಿಯನ್ನರ ಪರಸ್ಪರದಲ್ಲಿಯೂ ವಂಶಾವಳಿಯಿದೆ, ಅವರಲ್ಲಿಯೂ ಎರಡು ಪಂಗಡದವರು ಪರಸ್ಪರ ಸೇರುವುದಿಲ್ಲ, ವಿಭಾಜನೆ ಆಗಿ ಬಿಡುತ್ತದೆ. ನೀರನ್ನೂ ಹಂಚಲಾಗುತ್ತದೆ. ಸಿಖ್ಖ್ ಧರ್ಮದವರು ತಿಳಿದುಕೊಳ್ಳುತ್ತಾರೆ – ನಾವು ನಮ್ಮ ಧರ್ಮದವರಿಗೆ ಹೆಚ್ಚು ಸುಖ ಕೊಡಬೇಕು ಎಂದು. ಅಂದರೆ ಕುಲಾಭಿಮಾನ ಇರುತ್ತದೆಯಲ್ಲವೆ. ತಲೆ ಕೆಡಿಸಿಕೊಳ್ಳುತ್ತಿರುತ್ತಾರೆ, ಯಾವಾಗ ಅಂತ್ಯದ ಸಮಯವು ಬರುವುದೋ ಆಗ ಪರಸ್ಪರ ಹೊಡೆದಾಡತೊಡಗುತ್ತಾರೆ. ವಿನಾಶವಂತೂ ಆಗಲೇಬೇಕಾಗಿದೆ, ಅನೇಕ ಬಾಂಬುಗಳನ್ನು ತಯಾರಿಸುತ್ತಾ ಇರುತ್ತಾರೆ. ದೊಡ್ದ ಯುದ್ಧವಾದಾಗ ಎರಡು ಬಾಂಬುಗಳನ್ನು ಹಾಕಿದ್ದರು, ಈಗಂತೂ ಅನೇಕ ಬಾಂಬುಗಳನ್ನು ತಯಾರಿಸಿದ್ದಾರೆ. ಇದು ತಿಳಿದುಕೊಳ್ಳುವ ಮಾತಲ್ಲವೆ. ನೀವು ತಿಳಿಸಬೇಕಾಗಿದೆ – ಇದು ಅದೇ ಮಹಾಭಾರತ ಯುದ್ಧವಾಗಿದೆ, ದೊಡ್ಡ-ದೊಡ್ಡವರೂ ಸಹ ಹೇಳುತ್ತಾರೆ – ಒಂದುವೇಳೆ ಯುದ್ಧವನ್ನು ನಿಲ್ಲಿಸದಿದ್ದರೆ ಇಡೀ ಪ್ರಪಂಚಕ್ಕೆ ಬೆಂಕಿ ಬೀಳುವುದು. ನೀವು ತಿಳಿದುಕೊಂಡಿದ್ದೀರಿ, ಬೆಂಕಿ ಬೀಳಲೇಬೇಕಾಗಿದೆ.

ತಂದೆಯು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆ, ರಾಜಯೋಗವು ಸತ್ಯಯುಗಕ್ಕಾಗಿಯೇ ಇದೆ. ಯಾವ ದೇವಿ-ದೇವತಾ ಧರ್ಮವು ಪ್ರಾಯಲೋಪವಾಗಿ ಬಿಟ್ಟಿದೆಯೋ ಅದನ್ನು ಪುನಃ ಸ್ಥಾಪನೆ ಮಾಡುತ್ತಾರೆ. ಈಗ ಕಲಿಯುಗವಾಗಿದೆ, ಇದರ ನಂತರ ಸತ್ಯಯುಗ ಬೇಕು ಆದ್ದರಿಂದ ಕಲಿಯುಗದ ವಿನಾಶಕ್ಕಾಗಿ ಈ ಮಹಾಭಾರಿ ಮಹಾಭಾರತ ಯುದ್ಧವಿದೆ. ಇದೆಲ್ಲವನ್ನೂ ಚೆನ್ನಾಗಿ ತಿಳಿದುಕೊಂಡು ಧಾರಣೆ ಮಾಡಿ ತಿಳಿಸಬೇಕಾಗಿದೆ ಏಕೆಂದರೆ ಮನುಷ್ಯರು ಆಸುರೀ ಸಂಪ್ರದಾಯದವರಾಗಿದ್ದಾರೆ ಆದ್ದರಿಂದ ಎಚ್ಚರ ವಹಿಸಬೇಕಾಗಿದೆ. ಕಲ್ಪದ ಹಿಂದಿನ ತರಹ ಯಾವ ವಿಘ್ನಗಳು ಬರಬೇಕಾಗಿದೆಯೋ ಅವು ಅವಶ್ಯವಾಗಿ ಬರುತ್ತವೆ. ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಇದರಲ್ಲಿ ನಾವು ಬಂಧಿತರಾಗಿದ್ದೇವೆ. ನೆನಪಿನ ಯಾತ್ರೆಯನ್ನು ಎಂದೂ ಮರೆಯಬಾರದು. ರಾತ್ರಿಯ ಪ್ರಯಾಣಿಕನೇ ಸುಸ್ತಾಗಬೇಡ ಎಂದು ಗೀತೆಯಿದೆಯಲ್ಲವೆ. ಇದರ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ, ರಾತ್ರಿಯೂ ಮುಕ್ತಾಯವಾಗಿದೆ ದಿನ ಬರಲಿದೆ. ಅರ್ಧಕಲ್ಪ ಮುಗಿಯಿತು ಈಗ ಸುಖವು ಆರಂಭವಾಗುವುದು. ತಂದೆಯು ಮನ್ಮಾನಭವದ ಅರ್ಥವನ್ನೂ ತಿಳಿಸಿದ್ದಾರೆ, ಕೇವಲ ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿರುವುದರಿಂದ ಆ ಶಕ್ತಿಯೇ ಉಳಿದಿಲ್ಲ. ಕೃಷ್ಣನಿಗೆ ಎಂದೂ ಸರ್ವಶಕ್ತಿವಂತನೆಂದು ಹೇಳಲು ಸಾಧ್ಯವಿಲ್ಲ. ಕೃಷ್ಣನು ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾನೆ, ಆದ್ದರಿಂದ ಗೀತೆಯಲ್ಲಿ ಆ ಶಕ್ತಿಯೇ ಉಳಿದಿಲ್ಲ. ಈಗ ನಾವು ಎಲ್ಲಾ ಮನುಷ್ಯ ಮಾತ್ರರ ಕಲ್ಯಾಣ ಮಾಡುತ್ತಿದ್ದೇವೆ. ಯಾರು ಕಲ್ಯಾಣಕಾರಿ ಆಗುವರೋ ಅವರಿಗೆ ಆಸ್ತಿಯು ಸಿಗುವುದು. ನೆನಪಿನ ಯಾತ್ರೆಯಿಲ್ಲದೆ ಕಲ್ಯಾಣವಾಗಲು ಸಾಧ್ಯವಿಲ್ಲ, ಈ ಸಮಯದಲ್ಲಿ ಎಲ್ಲರೂ ವಿಪರೀತ ಬುದ್ಧಿಯವರಾಗಿದ್ದಾರೆ, ಪರಮಾತ್ಮ ಸರ್ವವ್ಯಾಪಿಯೆಂದು ಹೇಳಿ ಬಿಡುತ್ತಾರೆ. ನೀವು ತಿಳಿಸಿ, ಅವರು ಬೇಹದ್ದಿನ ತಂದೆಯಾಗಿದ್ದಾರೆ, ಬೇಹದ್ದಿನ ತಂದೆಯಿಂದಲೇ ಭಾರತವಾಸಿಗಳಿಗೆ ಬೇಹದ್ದಿನ ಆಸ್ತಿಯು ಸಿಕ್ಕಿದೆ. ಭಾರತವಾಸಿಗಳೇ 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆ. ನೀವೀಗ ಪ್ರತ್ಯಕ್ಷದಲ್ಲಿ ನೋಡುತ್ತೀರಿ – ಜ್ಞಾನವಂತೂ ನೀವು ಕೇಳುತ್ತಲೇ ಇರುತ್ತೀರಿ. ದಿನ-ಪ್ರತಿದಿನ ನಿಮ್ಮ ಬಳಿ ಹೊಸ-ಹೊಸಬರು ಅನೇಕರು ಬರುತ್ತಾ ಇರುತ್ತಾರೆ. ಈಗಲೇ ಒಂದುವೇಳೆ ದೊಡ್ಡ-ದೊಡ್ಡವರು ಬಂದು ಬಿಟ್ಟರೆ ಮತ್ತೆ ತಡವೇ ಆಗುವುದಿಲ್ಲ, ಪ್ರತ್ಯಕ್ಷತೆ ಆಗಿ ಬಿಡುವುದು. ಇನ್ನೊಂದು ಕಡೆ ಹೊಡೆದಾಟವು ಆರಂಭವಾಗುವುದು ಆದ್ದರಿಂದ ಯುಕ್ತಿಯಿಂದ ನಿಧಾನ-ನಿಧಾನವಾಗಿ ನಡೆಯುತ್ತಾ ಇರುತ್ತದೆ, ಇದು ಗುಪ್ತ ಜ್ಞಾನವಾಗಿದೆ. ಏನು ಮಾಡುತ್ತಿದ್ದೇವೆ ಎಂಬುದು ಯಾರಿಗೂ ಅರ್ಥವಾಗುವುದಿಲ್ಲ. ಭಕ್ತಿಯಲ್ಲಿ ದುಃಖವಿದೆ, ಜ್ಞಾನದಲ್ಲಿ ಸುಖವಿದೆ. ರಾವಣನ ಜೊತೆ ನಿಮ್ಮ ಯುದ್ಧವು ಹೇಗಿದೆ ಎಂಬುದನ್ನೂ ನೀವೇ ತಿಳಿದುಕೊಂಡಿದ್ದೀರಿ, ಮತ್ತ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಭಗವಾನುವಾಚ – ತಮೋಪ್ರಧಾನರಿಂದ ಸತೋಪ್ರಧಾನ ಆಗಬೇಕೆಂದರೆ ನನ್ನನ್ನು ನೆನಪು ಮಾಡಿರಿ ಆಗ ಪಾಪಗಳು ವಿನಾಶವಾಗುತ್ತವೆ. ಪವಿತ್ರರಾದರೆ ಜೊತೆ ಕರೆದುಕೊಂಡು ಹೋಗುತ್ತೇನೆ, ಮುಕ್ತಿಯಂತೂ ಎಲ್ಲರಿಗೂ ಸಿಗುವುದು. ಎಲ್ಲರೂ ರಾವಣ ರಾಜ್ಯದಿಂದ ಮುಕ್ತರಾಗಿ ಬಿಡುತ್ತಾರೆ. ನೀವು ಹೇಳುತ್ತೀರಿ – ಶಿವ ಶಕ್ತಿಯರು ಬ್ರಹ್ಮಾಕುಮಾರ-ಕುಮಾರಿಯರೇ ಶ್ರೇಷ್ಠಾಚಾರಿ ಪ್ರಪಂಚವನ್ನು ಸ್ಥಾಪನೆ ಮಾಡುತ್ತೇವೆ, ಪರಮಪಿತ ಪರಮಾತ್ಮನ ಶ್ರೀಮತದಂತೆ ಕಲ್ಪದ ಹಿಂದಿನ ತರಹ. 5000 ವರ್ಷಗಳ ಹಿಂದೆ ಶ್ರೇಷ್ಠಾಚಾರಿ ಪ್ರಪಂಚವಿತ್ತು ಇದನ್ನು ಬುದ್ಧಿಯಲ್ಲಿ ಕೂರಿಸಬೇಕು. ಮುಖ್ಯ ಮಾತುಗಳು ಯಾವಾಗ ಬುದ್ಧಿಯಲ್ಲಿ ಧಾರಣೆಯಾಗುವುದೋ ಆಗ ನೆನಪಿನ ಯಾತ್ರೆಯಲ್ಲಿ ಇರುತ್ತೀರಿ. ಇನ್ನೂ ಸಮಯವಿದೆ, ಕೊನೆಯಲ್ಲಿ ಪುರುಷಾರ್ಥ ಮಾಡೋಣವೆಂದು ಕೆಲವರು ತಿಳಿದುಕೊಳ್ಳುತ್ತಾರೆ ಆದರೆ ಮೃತ್ಯುವಿಗೆ ನಿಯಮವಿದೆಯೇ? ನಾಳೆಯೇ ಶರೀರ ಬಿಟ್ಟರೆ! ಆದ್ದರಿಂದ ಕೊನೆಯಲ್ಲಿ ಮಾಡಿಬಿಡೋಣವೆಂದು ತಿಳಿಯಬೇಡಿ, ಈ ಸಂಕಲ್ಪವು ಇನ್ನಷ್ಟು ಬೀಳಿಸುವುದು. ಎಷ್ಟು ಸಾಧ್ಯವೋ ಪುರುಷಾರ್ಥ ಮಾಡುತ್ತಾ ಇರಿ. ಶ್ರೀಮತದಂತೆ ಪ್ರತಿಯೊಬ್ಬರೂ ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ, ತಮ್ಮ ಪರಿಶೀಲನೆ ಮಾಡಿಕೊಳ್ಳಿ – ತಂದೆಯನ್ನು ಎಷ್ಟು ನೆನಪು ಮಾಡುತ್ತೇನೆ ಮತ್ತು ಎಷ್ಟು ತಂದೆಯ ಸೇವೆ ಮಾಡುತ್ತೇನೆ! ನೀವು ಆತ್ಮಿಕ ಈಶ್ವರೀಯ ಸೇವಾಧಾರಿಗಳಾಗಿದ್ದೀರಲ್ಲವೆ. ನೀವು ಆತ್ಮರನ್ನು ರಕ್ಷಣೆ ಮಾಡುತ್ತೀರಿ, ಆತ್ಮವು ಪತಿತನಿಂದ ಹೇಗೆ ಪಾವನವಾಗುವುದು ಎಂಬುದಕ್ಕೆ ಯುಕ್ತಿಯನ್ನು ತಿಳಿಸುತ್ತಾರೆ. ಕೃಷ್ಣನನ್ನು ನೆನಪು ಮಾಡುವುದರಿಂದ ವಿಕರ್ಮಗಳು ವಿನಾಶವಾಗುವುದಿಲ್ಲ, ಕೃಷ್ಣನಂತೂ ರಾಜಕುಮಾರನಾಗಿದ್ದಾನೆ. ಪ್ರಾಲಬ್ಧವನ್ನು ಭೋಗಿಸಿದನು, ಕೃಷ್ಣನ ಮಹಿಮೆಯ ಅವಶ್ಯಕತೆಯೂ ಇಲ್ಲ. ದೇವತೆಗಳ ಮಹಿಮೆಯನ್ನು ಏನು ಮಾಡುತ್ತೀರಿ! ಹಾ! ಜಯಂತಿಯನ್ನಂತೂ ಎಲ್ಲರೂ ಆಚರಿಸುತ್ತಾರೆ, ಇದು ಸಾಮಾನ್ಯ ಮಾತಾಗಿದೆ ಬಾಕಿ ಅವರು ಏನು ಮಾಡಿದರು? ಏಣಿಯನ್ನು ಇಳಿಯುತ್ತಲೇ ಬರುತ್ತಾರೆ. ಒಳ್ಳೆಯ ಹಾಗೂ ಕೆಟ್ಟ ಮನುಷ್ಯರು ಇದ್ದೇ ಇರುತ್ತಾರೆ. ಪ್ರತಿಯೊಬ್ಬರ ಪಾತ್ರವು ಬೇರೆ-ಬೇರೆಯಾಗಿದೆ, ಇದು ಬೇಹದ್ದಿನ ಮಾತಾಗಿದೆ. ಮುಖ್ಯ ರೆಂಬೆ-ಕೊಂಬೆಗಳನ್ನು ಎಣಿಕೆ ಮಾಡಲಾಗುತ್ತದೆ ಬಾಕಿ ಎಲೆಗಳು ಅನೇಕ ಇವೆ, ಅವನ್ನು ಎಲ್ಲಿಯವರೆಗೆ ಎಣಿಕೆ ಮಾಡುತ್ತೀರಿ! ತಂದೆಯು ತಿಳಿಸುತ್ತಾರೆ – ಮಕ್ಕಳೇ, ಪರಿಶ್ರಮ ಪಡಿ ಎಲ್ಲರಿಗೆ ತಂದೆಯ ಪರಿಚಯ ಕೊಡಿ ಆಗ ಎಲ್ಲರೊಂದಿಗೆ ಬುದ್ಧಿಯೋಗವು ಜೋಡಣೆಯಾಗುತ್ತದೆ. ತಂದೆಯು ತಿಳಿಸುತ್ತಾರೆ – ಎಲ್ಲರಿಗೆ ಹೇಳಿರಿ, ಪವಿತ್ರರಾದರೆ ಮುಕ್ತಿಧಾಮಕ್ಕೆ ಹೋಗುವಿರಿ, ಮಹಾಭಾರತ ಯುದ್ಧದಿಂದ ಏನಾಗುವುದು ಎಂದು ಪ್ರಪಂಚಕ್ಕೆ ಗೊತ್ತಿದೆಯೇ? ಈ ಯಜ್ಞವನ್ನು ರಚಿಸಿದ್ದಾರೆ ಏಕೆಂದರೆ ಹೊಸ ಪ್ರಪಂಚವು ಬೇಕು. ನಮ್ಮ ಯಜ್ಞವು ಮುಕ್ತಾಯವಾದರೆ ಎಲ್ಲವೂ ಈ ಯಜ್ಞದಲ್ಲಿ ಸ್ವಾಹಾ ಆಗುವುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಸತ್ಯ-ಸತ್ಯವಾದ ಈಶ್ವರೀಯ ಸೇವಾಧಾರಿಗಳಾಗಿ ಎಲ್ಲಾ ಆತ್ಮರನ್ನೂ ರಕ್ಷಣೆ ಮಾಡುವ ಸೇವೆ ಮಾಡಬೇಕಾಗಿದೆ. ಎಲ್ಲರ ಕಲ್ಯಾಣ ಮಾಡಬೇಕು, ಎಲ್ಲರಿಗೆ ತಂದೆಯ ಪರಿಚಯ ಕೊಡಬೇಕಾಗಿದೆ.

2. ಪ್ರಿಯಾತಿ ಪ್ರಿಯ ವಸ್ತು (ತಂದೆ) ವನ್ನು ಪ್ರೀತಿಯಿಂದ ನೆನಪು ಮಾಡಬೇಕಾಗಿದೆ. ಮಾಡಿ-ಮಾಡಲ್ಪಟ್ಟ ಡ್ರಾಮಾದ ಮೇಲೆ ಅಟಲವಾಗಿರಬೇಕಾಗಿದೆ, ವಿಘ್ನಗಳಿಗೆ ಗಾಬರಿಯಾಗಬಾರದು.

ವರದಾನ:-

ಯಾವಾಗ ಯಾವುದೇ ಪ್ರಕಾರದ ನಾನೆನ್ನುವುದು ಬರುತ್ತದೆಯೆಂದರೆ, ತಲೆಯ ಮೇಲೆ ಹೊರೆಯು ಬಂದು ಬಿಡುತ್ತದೆ. ಆದರೆ ಯಾವಾಗ ತಂದೆಗೆ ಅವಕಾಶವನ್ನು ಕೊಡುತ್ತಿದ್ದಾರೆ – ಎಲ್ಲಾ ಹೊರೆಗಳನ್ನು ನನಗೆ ಕೊಟ್ಟು ಬಿಡಿ, ತಾವು ಕೇವಲ ನರ್ತಿಸಿ, ಹಾರುತ್ತಿರಿ….. ಸೇವೆಯು ಹೇಗಾಗುತ್ತದೆ, ಭಾಷಣ ಹೇಗೆ ಮಾಡುವುದು, ಇವೆಲ್ಲಾ ಪ್ರಶ್ನೆಗಳೇಕೆ? ತಾವು ಕೇವಲ ನಿಮಿತ್ತರೆಂದು ತಿಳಿದುಕೊಂಡು ಸಂಬಂಧದ ಶಕ್ತಿ ಗೃಹದೊಂದಿಗೆ ಜೋಡಣೆ ಮಾಡಿ ಕುಳಿತು ಬಿಡಿ, ಹೃದಯ ವಿಧೀರ್ಣರಾಗದೇ ಇರುತ್ತೀರೆಂದರೆ, ಬಾಪ್ದಾದಾರವರು ಸ್ವತಹವಾಗಿಯೇ ಎಲ್ಲವನ್ನೂ ಮಾಡಿಸಿ ಬಿಡುತ್ತಾರೆ. ಬಾಲಕನಿಂದ ಮಾಲೀಕನೆಂದು ತಿಳಿದುಕೊಂಡು ಶ್ರೇಷ್ಠ ಸ್ಥಿತಿಯಲ್ಲಿ ಸ್ಥಿತರಾಗಿ ಇರುತ್ತೀರೆಂದರೆ ಪ್ರತ್ಯಕ್ಷ ಫಲದ ಅನುಭೂತಿಯನ್ನು ಮಾಡುತ್ತಿರುತ್ತೀರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top