27 October 2021 KANNADA Murli Today | Brahma Kumaris

Read and Listen today’s Gyan Murli in Kannada

October 26, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಈಗ ಕಲಿಯುವ ಜೊತೆ ಜೊತೆಗೆ ಶಿಕ್ಷಕರಾಗಿ ಕಲಿಸಲೂಬೇಕಾಗಿದೆ, ಈ ವಿದ್ಯೆಯು ಈ ಅಂತಿಮ ಜನ್ಮಕ್ಕಾಗಿಯೇ ಇದೆ ಆದ್ದರಿಂದ ಚೆನ್ನಾಗಿ ಓದಿರಿ ಮತ್ತು ಓದಿಸಿರಿ”

ಪ್ರಶ್ನೆ:: -

ಸತ್ಯಯುಗೀ ರಾಜಧಾನಿಯು ಯಾವ ಆಧಾರದ ಮೇಲೆ ಸ್ಥಾಪನೆಯಾಗುತ್ತದೆ?

ಉತ್ತರ:-

ಸಂಗಮದ ವಿದ್ಯೆಯ ಆಧಾರದ ಮೇಲೆ. ಯಾರು ಚೆನ್ನಾಗಿ ಓದುವರೋ ಅಥವಾ ಯಾರ ಮೇಲೆ ಬೃಹಸ್ಪತಿ ದೆಶೆಯಿದೆಯೋ ಅವರು ಸೂರ್ಯವಂಶದಲ್ಲಿ ಬರುತ್ತಾರೆ. ಯಾರು ಓದುವುದಿಲ್ಲ, ಸರ್ವೀಸ್ ಮಾಡುವುದಿಲ್ಲವೋ ಅವರ ಮೇಲೆ ಬುಧನ ದೆಶೆ ಕುಳಿತುಕೊಳ್ಳುತ್ತದೆ ಅರ್ಥಾತ್ ಅವರು ಬುದ್ದುಗಳಾಗಿದ್ದಾರೆ (ಮಂದ ಬುದ್ಧಿಯವರಾಗಿದ್ದಾರೆ). ಅವರು ಪ್ರಜೆಗಳಲ್ಲಿ ಬರುತ್ತಾರೆ. ಮ ಪ್ರಜೆ, ನೌಕರ-ಚಾಕರ ಮೊದಲಾದವರೆಲ್ಲರೂ ಈ ವಿದ್ಯೆಯ ಆಧಾರದ ಮೇಲೆ ಆಗುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಆತ್ಮರ ಪ್ರತಿ ಆತ್ಮಿಕ ತಂದೆ ಅರ್ಥಾತ್ ಪರಮಾತ್ಮನು ಕುಳಿತು ತಿಳಿಸುತ್ತಿದ್ದಾರೆ. ಆತ್ಮಿಕ ತಂದೆಗೆ ಪರಮಾತ್ಮನೆಂದು ಹೇಳಲಾಗುತ್ತದೆ. ಎಲ್ಲಾ ಆತ್ಮರ ತಂದೆಯು ಒಬ್ಬ ಪರಮಪಿತ ಪರಮಾತ್ಮನಾಗಿದ್ದಾರೆ. ಅವರು ಕುಳಿತು ಬ್ರಹ್ಮಾರವರ ತನುವಿನ ಮೂಲಕ ತಿಳಿಸುತ್ತಾರೆ. ಭಕ್ತಿಮಾರ್ಗದಲ್ಲಿ ಮನುಷ್ಯರು ತ್ರಿಮೂರ್ತಿ ಬ್ರಹ್ಮಾ ಎಂದು ಹೇಳುತ್ತಾರೆ. ಈಗ ನೀವು ಬ್ರಾಹ್ಮಣರು ಈ ರೀತಿ ಹೇಳುವುದಿಲ್ಲ. ನೀವು ಹೇಳುತ್ತೀರಿ – ತ್ರಿಮೂರ್ತಿ ಶಿವ ಅರ್ಥಾತ್ ಬ್ರಹ್ಮಾ-ವಿಷ್ಣು-ಶಂಕರನ ರಚಯಿತ ಶಿವನಾಗಿದ್ದಾರೆ. ತ್ರಿಮೂರ್ತಿ ಬ್ರಹ್ಮಾ ಎಂಬುದಕ್ಕೆ ಯಾವುದೇ ಅರ್ಥವಿಲ್ಲ. ಈ ಮೂವರು ದೇವತೆಗಳ ರಚಯಿತ ಶಿವನಾಗಿದ್ದಾರೆ ಆದ್ದರಿಂದ ತ್ರಿಮೂರ್ತಿ ಶಿವನೆಂದು ಹೇಳಲಾಗುತ್ತದೆ. ಒಬ್ಬರು ರಚಯಿತ ಉಳಿದೆಲ್ಲವೂ ರಚನೆಯಾಗಿದೆ. ಬೇಹದ್ದಿನ ತಂದೆಯು ಒಬ್ಬರೇ ಆಗಿದ್ದಾರೆ. ಲೌಕಿಕ ತಂದೆಯು ಪ್ರತಿಯೊಬ್ಬರಿಗೂ ಬೇರೆ-ಬೇರೆಯಾಗಿದ್ದಾರೆ. ಈ ಸಮಯದಲ್ಲಿ ಎಲ್ಲರೂ ಶಿವ ತಂದೆಯ ಮಕ್ಕಳಾಗಿದ್ದಾರೆ. ಮಕ್ಕಳಿಗೆ ತಿಳಿದಿದೆ – ನಾವಾತ್ಮರು 84 ಜನ್ಮಗಳ ಚಕ್ರವನ್ನು ಸುತ್ತುತ್ತೇವೆ ಅಂದರೆ 84 ಮಂದಿ ತಂದೆಯರಾಗುತ್ತಾರೆ. ಸತ್ಯಯುಗದಲ್ಲಿ ತಂದೆ-ತಾಯಿಯು ಯಾವುದೇ ಬೇಹದ್ದಿನ ಆಸ್ತಿಯನ್ನು ಕೊಡುವುದಿಲ್ಲ. ಸತ್ಯಯುಗಕ್ಕಾಗಿ ಬೇಹದ್ದಿನ ಆಸ್ತಿಯು ಈಗ ನಿಮಗೆ ಸಿಗುತ್ತದೆ. ಅಲ್ಲಿ ಲಕ್ಷ್ಮೀ-ನಾರಾಯಣರ ರಾಜಧಾನಿಯಿರುತ್ತದೆ ಮತ್ತು ಯಾರೆಲ್ಲಾ ರಾಜವಂಶದವರಿರುವರೋ ಅವರ ಮಕ್ಕಳಿಗೆ ತಮ್ಮ-ತಮ್ಮ ತಂದೆಯ ಆಸ್ತಿಯು ಸಿಗುತ್ತದೆ. ಆದರೂ ಅಲ್ಲಿ ಬಹಳ ಸುಖವಿರುತ್ತದೆ. ಈ ಸಮಯದಲ್ಲಿ ನಿಮ್ಮನ್ನು ಬೇಹದ್ದಿನ ತಂದೆಯು ಬೇಹದ್ದಿನ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. 21 ಜನ್ಮಗಳಿಗಾಗಿ ಸದಾ ಸುಖದ ಆಸ್ತಿಯು ಸಿಗುತ್ತದೆ. ಅಲ್ಲಿ ದುಃಖದ ಹೆಸರು, ಗುರುತೂ ಇರುವುದಿಲ್ಲ. ವಾಮ ಮಾರ್ಗವು ಆರಂಭವಾಗುವುದರಿಂದಲೇ ದುಃಖವು ಆರಂಭವಾಗುತ್ತದೆ. ಯಾರೇ ಬಂದರೂ ಅವರಿಗೆ ಇದನ್ನು ತಿಳಿಸಿರಿ – ನಿಮಗೆ ಇಬ್ಬರು ತಂದೆಯರಿದ್ದಾರೆ, 84 ಜನ್ಮಗಳಲ್ಲಿ 84 ಲೌಕಿಕ ತಂದೆಯರು ಸಿಗುತ್ತಾರೆ. ಬೇಹದ್ದಿನ ತಂದೆಯು ಒಬ್ಬರೇ ಆಗಿದ್ದಾರೆ. ಈಗ ನೀವು ಮಕ್ಕಳ ಬುದ್ಧಿಯಲ್ಲಿ ಮೂಲವತನವೆಂದರೇನು ಎಂಬ ತಿಳುವಳಿಕೆಯೂ ಇದೆ. ಮೂಲವತನ ಯಾವುದನ್ನು ಚಿತ್ರದಲ್ಲಿ ತೋರಿಸುತ್ತೀರೋ ಆ ಚಿತ್ರವನ್ನು ದೊಡ್ಡ-ದೊಡ್ಡದಾಗಿ ಮಾಡಿಸಬೇಕು. ಅದರಲ್ಲಿ ಚಿಕ್ಕ-ಚಿಕ್ಕ ಆತ್ಮರು ನಕ್ಷತ್ರಗಳಂತೆ ಕಾಣಿಸಲಿ. ಚಿತ್ರವು ದೊಡ್ಡದಾಗಿರಲಿ ಅದರಲ್ಲಿ ಚಿಕ್ಕ-ಚಿಕ್ಕ ಆತ್ಮರು ನಕ್ಷತ್ರದಂತೆ ಹೊಳೆಯುತ್ತಿರಲಿ. ಹೇಗೆ ಮೊದಲು ನೀವು ಮಿಂಚು ಹುಳುವಿನ ಹಾರವನ್ನು ಮಾಡುತ್ತಿದ್ದಿರಿ. ಹಾಗೆಯೇ ಈ ಮೂಲವತನದ ಚಿತ್ರವನ್ನೂ ಮಾಡಿಸಬೇಕು. ಪ್ರೊಜೆಕ್ಟರ್ ಶೋ ತೋರಿಸುವಾಗಲೂ ಅದರಲ್ಲಿ ಮೂಲವತನದ ಚಿತ್ರವನ್ನು ಈ ರೀತಿ ತೋರಿಸಬೇಕು. ವೃಕ್ಷವು ದೊಡ್ಡದಾಗಿರಲಿ ಮತ್ತು ನಾವಾತ್ಮರು ಅಲ್ಲಿರುತ್ತೇವೆ ಎಂಬುದು ಸ್ಪಷ್ಟವಾಗಿ ಕಾಣಿಸಲಿ. ಮಕ್ಕಳಿಗೆ ತಿಳಿದುಕೊಳ್ಳುವುದಕ್ಕೂ ಸಹಜವಾಗುತ್ತದೆ. ಇವರು ಬೇಹದ್ದಿನ ತಂದೆಯಾಗಿದ್ದಾರೆ, ಬ್ರಹ್ಮಾರವರ ಮೂಲಕ ದೈವೀ ಸಂಪ್ರದಾಯದ ಸ್ಥಾಪನೆ ಮಾಡುತ್ತಿದ್ದಾರೆ. ನೀವೀಗ ಬ್ರಾಹ್ಮಣರಾಗಿದ್ದೀರಿ, ನಂತರ ದೈವೀ ಗುಣವಂತ ದೇವತೆಗಳಾಗುತ್ತೀರಿ. ಹೀಗೆ ಎಲ್ಲರಲ್ಲಿ ಆಸುರೀ ಗುಣಗಳಿವೆ. ಅದಕ್ಕೆ ಆಸುರೀ ಅವಗುಣಗಳೆಂದು ಹೇಳುತ್ತಾರೆ. ವಾಮಮಾರ್ಗದಿಂದ ದುಃಖವು ಆರಂಭವಾಗುತ್ತದೆ. ರಜೋಪ್ರಧಾನರಿಂದ ಕೂಡಲೇ ಯಾರೂ ದುಃಖಿಗಳಾಗುವುದಿಲ್ಲ, ಸ್ವಲ್ಪ-ಸ್ವಲ್ಪವಾಗಿಯೇ ಕಲೆಗಳು ಕಡಿಮೆಯಾಗುತ್ತವೆ. ಮುಖ್ಯ ಚಿತ್ರಗಳಾಗಿವೆ – ತ್ರಿಮೂರ್ತಿ, ಸೃಷ್ಟಿಚಕ್ರ ಮತ್ತು ನರಕ-ಸ್ವರ್ಗದ ಗೋಲ. ಇವು ಮೊಟ್ಟ ಮೊದಲು ತಿಳಿಸುವುದಕ್ಕಾಗಿ ಬಹಳ ಅತ್ಯವಶ್ಯಕವಾಗಿದೆ. ವೃಕ್ಷದ ಚಿತ್ರದಲ್ಲಿಯೂ ಕಲ್ಪದ ಅರ್ಧ-ಅರ್ಧಭಾಗದ ಸ್ಪಷ್ಟ ಜ್ಞಾನವಿದೆ. ಚಿತ್ರವು ಸ್ಪಷ್ಟವಾಗಿದ್ದಾಗ ತಿಳಿಸಲು ಸಾಧ್ಯವಾಗುವುದು. ಈ ಜ್ಞಾನವನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಪದೇ-ಪದೇ ತಿಳಿಸುವುದಕ್ಕಾಗಿ ತ್ರಿಮೂರ್ತಿಯ ಚಿತ್ರವು ಅವಶ್ಯವಾಗಿ ಬೇಕಾಗಿದೆ. ಇವರು ನಿರಾಕಾರ ಬೇಹದ್ದಿನ ತಂದೆಯಾಗಿದ್ದಾರೆ, ಇವರನ್ನು ಎಲ್ಲರೂ ನೆನಪು ಮಾಡುತ್ತಾರೆ. ಆತ್ಮಕ್ಕೆ ಗೊತ್ತಿದೆ, ಅವರು ನಮ್ಮ ಬೇಹದ್ದಿನ ತಂದೆಯಾಗಿದ್ದಾರೆ. ಅವರನ್ನು ದುಃಖದಲ್ಲಿ ಎಲ್ಲರೂ ನೆನಪು ಮಾಡುತ್ತಾರೆ. ಸತ್ಯಯುಗದಲ್ಲಿ ನೆನಪು ಮಾಡುವ ಅವಶ್ಯಕತೆಯೇ ಇರುವುದಿಲ್ಲ. ಅದು ಸುಖಧಾಮವಾಗಿರುತ್ತದೆ. ದೇವತೆಗಳೇ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ಬರುತ್ತಾರೆ, ಇದೂ ಸಹ ಯಾರಿಗೂ ತಿಳಿದಿಲ್ಲ.

ಸತೋಪ್ರಧಾನರಿಂದ ನಾವು ಹೇಗೆ ಸತೋ, ರಜೋ, ತಮೋದಲ್ಲಿ ಬರುತ್ತೇವೆ. ಆತ್ಮದಲ್ಲಿ ತುಕ್ಕು ಹಿಡಿಯುತ್ತಾ ಹೋಗುತ್ತದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ನಾವು 84 ಜನ್ಮಗಳ ಪಾತ್ರವನ್ನು ಅಭಿನಯಿಸಬೇಕಾಗಿದೆ ಎಂಬುದು ನೀವಾತ್ಮರಿಗೆ ತಿಳಿದಿದೆ. ಅದು ನಿಖರವಾಗಿ ಆತ್ಮದಲ್ಲಿ ನಿಗಧಿತವಾಗಿದೆ. ಇಷ್ಟು ಚಿಕ್ಕ ಆತ್ಮದಲ್ಲಿ ಎಷ್ಟೊಂದು ಪಾತ್ರವು ನಿಗಧಿಯಾಗಿದೆ. ಇವು ಅತಿ ಗುಹ್ಯ, ತಿಳಿದುಕೊಳ್ಳುವ ಮಾತುಗಳಾಗಿವೆ. ಯಾವುದೇ ಮನುಷ್ಯ ಮಾತ್ರರು ಸಾಧು ಸನ್ಯಾಸಿ ಮೊದಲಾದವರ ಬುದ್ಧಿಯಲ್ಲಿ ಈ ಮಾತುಗಳು ಬರಲು ಸಾಧ್ಯವಿಲ್ಲ. ಭಲೆ ನಾಟಕವೆಂದು ಹೇಳುತ್ತಾರೆ, ನಾಟಕಕ್ಕೆ ಡ್ರಾಮಾ ಎಂದು ಹೇಳಲಾಗುವುದಿಲ್ಲ. ವಾಸ್ತವದಲ್ಲಿ ಇದು ಡ್ರಾಮಾ ಆಗಿದೆ. ಡ್ರಾಮಾ, ಸಿನೆಮಾ ಇತ್ಯಾದಿಗಳು ಮೊದಲು ಇರಲಿಲ್ಲ. ಮೊದಲು ಮೂಖ ಚಲನಚಿತ್ರಗಳಿತ್ತು. ಈಗ ಅವು ಶಬ್ಧದಿಂದ ಕೂಡಿದೆ. ನಾವಾತ್ಮರೂ ಸಹ ಶಾಂತಿಯಿಂದ ನಂತರ ಶಬ್ಧದಲ್ಲಿ ಬರುತ್ತೇವೆ. ಶಬ್ಧದಿಂದ ಮತ್ತೆ ಮೂವ್ಹಿಯಲ್ಲಿ ಹೋಗಿ ನಂತರ ಸೈಲೆನ್ಸ್ನಲ್ಲಿ ಹೋಗುತ್ತೇವೆ. ಆದ್ದರಿಂದಲೇ ಹೆಚ್ಚು ಮಾತನಾಡಬೇಡಿ ಎಂದು ನೀವು ಮಕ್ಕಳಿಗೆ ಕಲಿಸಲಾಗುತ್ತದೆ. ರಾಯಲ್ ಮನುಷ್ಯರು ಬಹಳ ಕಡಿಮೆ ಮಾತನಾಡುತ್ತಾರೆ. ನೀವೀಗ ಸೂಕ್ಷ್ಮವತನದಲ್ಲಿ ಹೋಗಬೇಕಾಗಿದೆ. ಸೂಕ್ಷ್ಮವತನದ ಜ್ಞಾನವನ್ನು ಈಗ ತಂದೆಯು ತಿಳಿಸಿದ್ದಾರೆ. ಇದು ಟಾಕಿ ಪ್ರಪಂಚ (ಶಬ್ಧ ಪ್ರಪಂಚ) ವಾಗಿದೆ, ಅದು ಮ್ಹೂವಿ ಪ್ರಪಂಚವಾಗಿದೆ. ಅಲ್ಲಿ ಈಶ್ವರನೊಂದಿಗೆ ವಾರ್ತಾಲಾಪ ನಡೆಯುತ್ತದೆ. ಅಲ್ಲಿ ಬಿಳಿಯ ಬೆಳಕಿನ ರೂಪವಿದೆ, ಶಬ್ದವಿಲ್ಲ. ಅಲ್ಲಿನ ಮ್ಹೂವಿ ಭಾಷೆಯನ್ನು ಒಬ್ಬರು ಇನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ. ನೀವೀಗ ಸೈಲೆನ್ಸ್ನಲ್ಲಿ ಮ್ಹೂವಿ ಮುಖಾಂತರ ಹೋಗಬೇಕಾಗಿದೆ (ಸೂಕ್ಷ್ಮವತನದ ಮೂಲಕ). ತಂದೆಯು ತಿಳಿಸುತ್ತಾರೆ – ನಾನು ಮೊಟ್ಟ ಮೊದಲು ಸೂಕ್ಷ್ಮ ಸೃಷ್ಟಿಯನ್ನು ರಚಿಸಬೇಕಾಗಿದೆ ನಂತರ ಸ್ಥೂಲ ಸೃಷ್ಟಿ. ಮೂಲವತನ, ಸೂಕ್ಷ್ಮವತನ, ಸ್ಥೂಲವತನ…. ಎಂದು ಗಾಯನವಿದೆ. ಬ್ರಹ್ಮಾ-ವಿಷ್ಣು-ಶಂಕರ ಸೂಕ್ಷ್ಮ ವತನವಾಸಿಗಳಾಗಿದ್ದಾರೆ. ಅಲ್ಲಿ ಯಾವುದೇ ಪ್ರಪಂಚವಿಲ್ಲ ಎಂಬುದು ಮನುಷ್ಯರಿಗೆ ತಿಳಿದಿಲ್ಲ, ಕೇವಲ ಬ್ರಹ್ಮಾ-ವಿಷ್ಣು-ಶಂಕರ ಕಾಣಿಸುತ್ತಾರೆ. ಚತುರ್ಭುಜ ವಿಷ್ಣುವನ್ನು ನೋಡುತ್ತೀರಿ, ಇದರಿಂದಲೇ ಸತ್ಯಯುಗದಲ್ಲಿ ಪ್ರವೃತ್ತಿ ಮಾರ್ಗವಿರುತ್ತದೆ ಎಂಬುದು ಸಿದ್ಧವಾಗುತ್ತದೆ. ಸನ್ಯಾಸಿಗಳದು ನಿವೃತ್ತಿ ಮಾರ್ಗವಾಗಿದೆ, ಇದೂ ಸಹ ಡ್ರಾಮಾ ಆಗಿದೆ. ಇದರ ವರ್ಣನೆ ಮಾಡಿ ತಂದೆಯು ತಿಳಿಸುತ್ತಾರೆ. ಮುಖ್ಯ ಮಾತನ್ನು ತಂದೆಯು ಹೇಳುತ್ತಾರೆ – ಮನ್ಮನಾಭವ. ಉಳಿದೆಲ್ಲವೂ ವಿಸ್ತಾರವಾಗಿದೆ. ಅದನ್ನೇ ತಿಳಿದುಕೊಳ್ಳುವುದರಲ್ಲಿ ಸಮಯ ಹಿಡಿಸುತ್ತದೆ. ಸಾರ ರೂಪದಲ್ಲಿದೆ – ಬೀಜ ಮತ್ತು ವೃಕ್ಷ. ಬೀಜವನ್ನು ನೋಡುವುದರಿಂದ ಇಡೀ ವೃಕ್ಷವೇ ಬುದ್ಧಿಯಲ್ಲಿ ಬಂದು ಬಿಡುತ್ತದೆ. ತಂದೆಯು ಬೀಜರೂಪನಾಗಿದ್ದಾರೆ, ಅವರಿಗೆ ಈ ವೃಕ್ಷದ ಮತ್ತು ಸೃಷ್ಟಿಚಕ್ರದ ಸಂಪೂರ್ಣ ಜ್ಞಾನವಿದೆ. ತಿಳಿಸುವುದಕ್ಕಾಗಿ ಸೃಷ್ಟಿಚಕ್ರವೇ ಬೇರೆಯಾಗಿದೆ, ಕಲ್ಪವೃಕ್ಷವೇ ಬೇರೆಯಾಗಿದೆ. ವೃಕ್ಷದಲ್ಲಿ ಇವೆಲ್ಲಾ ಚಿತ್ರಗಳನ್ನು ತೋರಿಸಿದ್ದಾರೆ. ಯಾವುದೇ ಧರ್ಮದವರಿಗೆ ತೋರಿಸಿದರೂ ಸಹ ಅರ್ಥ ಮಾಡಿಕೊಳ್ಳುವರು. ನಾವು ಸ್ವರ್ಗದಲ್ಲಿ ಬರಲು ಸಾಧ್ಯವಿಲ್ಲವೆಂದು. ಭಾರತವು ಪ್ರಾಚೀನವಾಗಿದ್ದಾಗ ಕೇವಲ ದೇವಿ-ದೇವತೆಗಳೇ ಇದ್ದರು, ಉಳಿದೆಲ್ಲರೂ ಶಾಂತಿಧಾಮದಲ್ಲಿರುತ್ತಾರೆ. ನೀವು ಬೀಜ ಮತ್ತು ವೃಕ್ಷ ಎರಡನ್ನೂ ತಿಳಿದುಕೊಂಡಿದ್ದೀರಿ. ಬೀಜವು ಮೇಲಿದೆ, ಅವರಿಗೆ ವೃಕ್ಷಪತಿಯೆಂದು ಹೇಳುತ್ತಾರೆ. ನೀವೀಗ ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ನಿಮ್ಮ ಮೇಲೆ ಬೃಹಸ್ಪತಿ ದೆಶೆಯು ಕುಳಿತಿದೆ. ಯಾರು ತಂದೆಯ ಮಕ್ಕಳಾಗುವರು ಅವರ ಮೇಲೆ ಬೃಹಸ್ಪತಿ ದೆಶೆಯಿದೆ ಎಂದು ಹೇಳುತ್ತೇವೆ. ನಂತರ ಶುಕ್ರ ದೆಶೆ, ಬುಧ ದೆಶೆ. ಬೃಹಸ್ಪತಿ ದೆಶೆಯಿರುವವರು ಸೂರ್ಯವಂಶಿಯರಾಗುತ್ತಾರೆ. ಬುಧ ದೆಶೆಯವರು ಪ್ರಜೆಗಳಲ್ಲಿ ಬರುತ್ತಾರೆ, ಅವರು ಸರ್ವೀಸ್ ಮಾಡುವುದಿಲ್ಲ. ತಂದೆಯನ್ನು ನೆನಪು ಮಾಡದಿದ್ದರೆ ಅವರು ಬುದ್ಧುಗಳಾದರು. ಇದರಲ್ಲಿಯೂ ನಂಬರ್ವಾರ್ ಬುದ್ಧುಗಳಾಗುತ್ತಾರೆ. ಕೆಲವರು ಉತ್ತಮ ಪ್ರಜೆಗಳು, ಕೆಲವರು ಕನಿಷ್ಟ ಪ್ರಜೆಗಳು, ಸಾಹುಕಾರ ಪ್ರಜೆಗಳಲ್ಲಿ ಮತ್ತೆ ಅವರಿಗೂ ನೌಕರ-ಚಾಕರರು ಆಗುವುದೆಲ್ಲಿ! ಎಲ್ಲವೂ ವಿದ್ಯೆಯ ಮೇಲೆ ಆಧಾರಿತವಾಗಿದೆ. ವಿದ್ಯಾಭ್ಯಾಸವೂ ಸಹ ಸತೋಗುಣಿ, ರಜೋಗುಣಿ, ತಮೋಗುಣಿಯಾಗಿರುತ್ತದೆ. ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಯಾರು ಬುದ್ಧಿವಂತರಾಗಿದ್ದಾರೆಯೋ ಅವರು ತಂದೆಯ ನೆನಪಿನಲ್ಲಿಯೂ ಇರುತ್ತಾರೆ. ಇಡೀ ವೃಕ್ಷವು ಬುದ್ಧಿಯಲ್ಲಿರುತ್ತದೆ. ವಿದ್ಯೆಯಿಂದಲೇ ಟೀಚರ್, ಬ್ಯಾರಿಸ್ಟರ್ ಆಗುತ್ತಾರೆ. ಟೀಚರ್ ಮತ್ತೆ ಅನ್ಯರಿಗೂ ಓದಿಸುತ್ತಾರೆ. ಎಲ್ಲರೂ ಓದುತ್ತಾರೆ, ಒಂದೇ ವಿದ್ಯೆಯಾಗಿದೆ ಆದರೆ ಕೆಲವರು ಓದಿ ಮೇಲೇರುತ್ತಾರೆ, ಇನ್ನೂ ಕೆಲವರು ಅಲ್ಲಿಯೇ ಟೀಚರ್ ಆಗಿ ಬಿಡುತ್ತಾರೆ. ಏನು ಕಲಿತಿದ್ದಾರೆಯೋ ಅದನ್ನು ಓದಿಸುತ್ತಾರೆ. ಈಗ ನೀವೂ ಸಹ ಓದುತ್ತೀರಿ, ಕೆಲವರು ಓದುತ್ತಾ-ಓದುತ್ತಾ ಶಿಕ್ಷಕರಾಗಿ ಬಿಡುತ್ತಾರೆ. ಶಿಕ್ಷಕರ ಕರ್ತವ್ಯವಾಗಿದೆ – ತಮ್ಮ ಸಮಾನ ಶಿಕ್ಷಕರನ್ನಾಗಿ ಮಾಡುವುದು, ಶಿಕ್ಷಕರಾಗದಿದ್ದರೆ ಅನ್ಯರ ಕಲ್ಯಾಣವನ್ನು ಹೇಗೆ ಮಾಡುವುದು! ಸಮಯವು ಕಡಿಮೆಯಿದೆ, ವಿನಾಶವಾಗುವವರೆಗೆ ಕಲಿಯುತ್ತಲೇ ಇರುತ್ತೀರಿ ನಂತರ ಕಲಿಯುವುದು ನಿಂತು ಹೋಗುವುದು. ಪುನಃ ತಂದೆಯು 5000 ವರ್ಷಗಳ ನಂತರ ಬಂದು ಕಲಿಸುತ್ತಾರೆ. ಈ ವಿದ್ಯೆಯು ಯಾವುದೇ ಸಾವಿರಾರು ವರ್ಷಗಳು ನಡೆಯುವುದಿಲ್ಲ. ಈ ವಿದ್ಯೆಯು ಇರುವುದೇ ಅಂತಿಮ ಜನ್ಮಕ್ಕಾಗಿ ಆದ್ದರಿಂದ ಓದಬೇಕು ಮತ್ತು ಓದಿಸಬೇಕಾಗಿದೆ. ಎಲ್ಲರೂ ಶಿಕ್ಷಕರಾಗುವುದಿಲ್ಲ. ಒಂದುವೇಳೆ ಎಲ್ಲರೂ ಶಿಕ್ಷಕರಾಗಿದ್ದರೆ ಎಲ್ಲರೂ ಬಹಳ ಶ್ರೇಷ್ಠ ಪದವಿಯನ್ನು ಪಡೆಯುವರು. ಆದ್ದರಿಂದ ನಂಬರ್ವಾರಂತೂ ಇದ್ದೇ ಇರುತ್ತಾರೆ. ಮೊಟ್ಟ ಮೊದಲು ಯಾರಿಗಾದರೂ ಇಬ್ಬರು ತಂದೆಯರ ಪರಿಚಯವನ್ನು ಕೊಡಿ. ಚಿತ್ರಗಳಿದ್ದಾಗ ಬಹಳ ಚೆನ್ನಾಗಿ ತಿಳಿದುಕೊಳ್ಳುವರು. ತ್ರಿಮೂರ್ತಿಯ ಚಿತ್ರವು ಅವಶ್ಯವಾಗಿ ಜೊತೆಯಿರಬೇಕು, ಇವರು ಶಿವ ತಂದೆ, ಇವರು ಪ್ರಜಾಪಿತ ಬ್ರಹ್ಮ ಎಲ್ಲರ ಮನುಕುಲದ ಪಿತಾಮಹನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಮೊದಲು ಬಂದಿರಬೇಕಲ್ಲವೆ. ಎಲ್ಲರಿಗಿಂತ ಮುಂದಿರುವವರು ಬ್ರಹ್ಮಾ. ಈಗ ರಚನೆಯನ್ನು ರಚಿಸುತ್ತಿದ್ದಾರೆ. ನೀವು ಬ್ರಾಹ್ಮಣರಾಗಿದ್ದೀರಿ ನಂತರ ಬ್ರಾಹ್ಮಣರೇ ದೇವತೆಗಳಾಗುತ್ತೀರಿ. ಬ್ರಾಹ್ಮಣರ ವೃಕ್ಷವು ಚಿಕ್ಕದಾಗಿದೆ, ದೇವತೆಗಳು ಕೆಲವರೇ ಇರುತ್ತಾರೆ ನಂತರ ವೃದ್ಧಿಯಾಗುತ್ತಾ ಹೋಗುತ್ತದೆ. ಈ ನಿಮ್ಮ ಹೊಸ ವೃಕ್ಷವು ಸ್ಥಾಪನೆಯಾಗುತ್ತಿದೆ. ಆ ಅನ್ಯ ಧರ್ಮದ ಆತ್ಮರು ಮೇಲಿಂದ ಪಾತ್ರವನ್ನು ಅಭಿನಯಿಸಲು ಬರುತ್ತಾರೆ, ಇಲ್ಲಿ ನಿಮ್ಮದು ಹೊಸ ವೃಕ್ಷವು ಸ್ಥಾಪನೆಯಾಗುತ್ತದೆ. ಮಾಯೆಯು ಸನ್ಮುಖದಲ್ಲಿದೆ, ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಲೇಬೇಕಾಗಿದೆ, ವರ್ಗಾಯಿತರಾಗಬೇಕಾಗಿದೆ ಏಕೆಂದರೆ ಪ್ರಪಂಚವು ಬದಲಾಗುತ್ತಿದೆ ಆದ್ದರಿಂದ ಪರಿಶ್ರಮವಾಗುತ್ತದೆ. ಈ ಸಂಗಮದಲ್ಲಿಯೇ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತದೆ. ಸತ್ಯಯುಗವು ಎಷ್ಟು ವರ್ಷಗಳು ನಡೆಯುತ್ತವೆ, ಸತ್ಯಯುಗದಿಂದ ಹೇಗೆ ಕಲಿಯುಗವಾಗುತ್ತದೆ ಎಂಬುದನ್ನು ನೀವು ತಿಳಿಸಿರಿ. ಕಲಿಯುಗದಲ್ಲಿ ತಮೋಪ್ರಧಾನರಾಗಲೇಬೇಕಾಗಿದೆ. ತಮೋಪ್ರಧಾನರಾದಾಗಲೇ ಪುನಃ ಸತೋಪ್ರಧಾನರಾಗುವಿರಿ. ನೀವು ಸತೋಪ್ರಧಾನರಾಗಿದ್ದಿರಿ, ನಂತರ ತುಕ್ಕು ಹಿಡಿಯುತ್ತಾ ಹೋಯಿತು, ಈಗ ಭಲೆ ಯಾವುದೇ ಹೊಸ ಆತ್ಮವು 2-3 ಜನ್ಮಗಳು ತೆಗೆದುಕೊಂಡರೂ ಸಹ ಕೂಡಲೇ ಅದರಲ್ಲಿ ತುಕ್ಕು ಹಿಡಿಯುತ್ತಾ ಹೋಗುತ್ತದೆ. ಆಗಲೇ ಸುಖ, ಆಗಲೇ ದುಃಖವನ್ನು ಅನುಭವಿಸುತ್ತದೆ. ಕೆಲವರದು ಒಂದು ಜನ್ಮವೂ ಇರುತ್ತದೆ. ಯಾವಾಗ ಆತ್ಮರ ಬರುವಿಕೆಯು ನಿಂತು ಹೋಗುವುದು ಆಗ ವಿನಾಶವಾಗುವುದು, ಪುನಃ ಎಲ್ಲಾ ಆತ್ಮರು ಹಿಂತಿರುಗಿ ಹೋಗಬೇಕಾಗುವುದು. ಪಾಪಾತ್ಮರು ಮತ್ತು ಪುಣ್ಯಾತ್ಮರು ಒಟ್ಟಿಗೆ ಹೋಗುತ್ತಾರೆ ನಂತರ ಪುಣ್ಯಾತ್ಮರು ಪಾತ್ರವನ್ನು ಅಭಿನಯಿಸಲು ಕೆಳಗಿಳಿಯುತ್ತಾರೆ. ಸಂಗಮದಲ್ಲಿ ಎಲ್ಲವೂ ಬದಲಾಗುತ್ತದೆ ಅಂದಾಗ ಮಕ್ಕಳು ಇಡೀ ಡ್ರಾಮಾವನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕು. ತಂದೆಯ ಬಳಿ ಸಂಪೂರ್ಣ ಜ್ಞಾನವಿದೆಯಲ್ಲವೆ. ಹೇಳುತ್ತಾರೆ – ನಾನು ಬಂದು ಸೃಷ್ಟಿಚಕ್ರದ ಆದಿ-ಮಧ್ಯ-ಅಂತ್ಯದ ಎಲ್ಲಾ ರಹಸ್ಯವನ್ನು ತಿಳಿಸುತ್ತೇನೆ. ಭಕ್ತಿಮಾರ್ಗದಲ್ಲಿ ಈ ಜ್ಞಾನವನ್ನು ತಿಳಿಸುವುದಿಲ್ಲ. ಭಕ್ತರು ನೆನಪು ಮಾಡುತ್ತಾರೆಂದರೆ ಅವರಿಗೆ ಸಾಕ್ಷಾತ್ಕಾರ ಮಾಡಿಸುತ್ತೇನೆ. ಭಕ್ತಿಮಾರ್ಗವು ಆರಂಭವಾಗುತ್ತದೆ ಎಂದರೆ ನನ್ನ ಪಾತ್ರವೂ ಆರಂಭವಾಗುತ್ತದೆ. ಸತ್ಯ-ತ್ರೇತಾಯುಗದಲ್ಲಿ ನಾನು ವಾನಪ್ರಸ್ಥದಲ್ಲಿ ಇರುತ್ತೇನೆ. ಮಕ್ಕಳನ್ನು ಸುಖದಲ್ಲಿ ಕಳುಹಿಸಿದ ಮೇಲೆ ಇನ್ನೇನಿದೆ? ನಾನು ವಾನಪ್ರಸ್ಥವನ್ನು ತೆಗೆದುಕೊಳ್ಳುತ್ತೇನೆ. ಈ ವಾನಪ್ರಸ್ಥವನ್ನು ಸ್ವೀಕರಿಸುವ ಪದ್ಧತಿಯು ಭಾರತದಲ್ಲಿಯೇ ಇದೆ. ನಾನು ವಾನಪ್ರಸ್ಥದಲ್ಲಿ ಕುಳಿತು ಬಿಡುತ್ತೇನೆಂದು ಬೇಹದ್ದಿನ ತಂದೆಯು ತಿಳಿಸುತ್ತಾರೆ. ಬೇಹದ್ದಿನ ತಂದೆಯೇ ಬಂದು ಗುರುವಿನ ರೂಪದಲ್ಲಿ ವಾನಪ್ರಸ್ಥದಲ್ಲಿ ಕರೆದುಕೊಂಡು ಹೋಗುತ್ತಾರೆ. ಮನುಷ್ಯರು ಭಗವಂತನೊಂದಿಗೆ ಮಿಲನ ಮಾಡುವುದಕ್ಕಾಗಿ ಗುರುಗಳ ಸಂಗವನ್ನು ಮಾಡಿಕೊಳ್ಳುತ್ತಾರೆ ಶಾಸ್ತ್ರಗಳನ್ನು ಓದುತ್ತಾರೆ. ತೀರ್ಥ ಯಾತ್ರೆಗಳನ್ನು ಮಾಡುತ್ತಾರೆ. ಗಂಗಾಸ್ನಾನ ಮಾಡುತ್ತಾರೆ ಆದರೆ ಸಿಗುವುದೇನೂ ಇಲ್ಲ. ಈಗ ನಿಮಗೆ ಬೇಹದ್ದಿನ ತಂದೆಯು ಸಿಕ್ಕಿದ್ದಾರೆ, ದುಃಖದಿಂದ ಬಿಡಿಸಿ ರಾವಣ ರಾಜ್ಯದಿಂದ ಬಿಡಿಸಿ ರಾಮ ರಾಜ್ಯದಲ್ಲಿ ಹೋಗುತ್ತಾರೆ. ಬೇಹದ್ದಿನ ತಂದೆಯು ಒಂದೇ ಬಾರಿ ಬಂದು ರಾವಣನ ದುಃಖದಿಂದ ಬಿಡಿಸುತ್ತಾರೆ ಆದ್ದರಿಂದ ಅವರಿಗೆ ಮುಕ್ತಿದಾತನೆಂದು ಹೇಳಲಾಗುತ್ತದೆ. ಸತ್ಯಯುಗದಲ್ಲಿ ರಾಮ ರಾಜ್ಯವೇ ಇರುತ್ತದೆ. ಉಳಿದ ಆತ್ಮರು ಶಾಂತಿಧಾಮಕ್ಕೆ ಹೋಗುತ್ತಾರೆ. ಇದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ನಾನಾತ್ಮನ ಸ್ವಧರ್ಮವೇ ಶಾಂತಿಯಾಗಿದೆ. ಇಲ್ಲಿ ಪಾತ್ರದಲ್ಲಿ ಬರುವ ಕಾರಣ ಅಶಾಂತರಾಗಿದ್ದಾರೆ ಆದ್ದರಿಂದ ಶಾಂತಿಯು ನೆನಪಿಗೆ ಬರುತ್ತದೆ. ಮೂಲತಃ ಶಾಂತಿಧಾಮದ ನಿವಾಸಿಗಳಾಗಿದ್ದೀರಿ. ನನಗೆ ಶಾಂತಿ ಬೇಕು, ಮನಸ್ಸಿಗೆ ಶಾಂತಿ ಬೇಕು ಎಂದು ಈಗ ಹೇಳುತ್ತಾರೆ. ಆತ್ಮವು ಮನ-ಬುದ್ಧಿ ಸಹಿತವಾಗಿದೆ. ಆತ್ಮವು ಶಾಂತ ಸ್ವರೂಪನಾಗಿದೆ. ಮತ್ತೆ ಇಲ್ಲಿ ಕರ್ಮದಲ್ಲಿ ಬರುತ್ತದೆ. ಇಲ್ಲಿ ಸಂಪೂರ್ಣ ಶಾಂತಿಯು ಹೇಗೆ ಸಿಗುವುದು? ಇದಂತೂ ಅಶಾಂತಿಧಾಮವಾಗಿದೆ. ಸತ್ಯಯುಗದಲ್ಲಿ ಸುಖ-ಶಾಂತಿ ಎರಡೂ ಇರುತ್ತದೆ. ಪವಿತ್ರತೆಯೂ ಇರುತ್ತದೆ, ಹಣ ಅಧಿಕಾರವೂ ಇರುತ್ತದೆ.

ತಂದೆಯು ತಿಳಿಸುತ್ತಾರೆ – ನಿಮಗೆ ಎಷ್ಟೊಂದು ಸುಖ-ಶಾಂತಿ, ಹಣ, ಅಧಿಕಾರ ಎಲ್ಲವೂ ಇತ್ತು. ಈಗ ಮತ್ತೆ ಅನ್ಯರಿಗೂ ತಿಳಿಸಬೇಕಾಗಿದೆ – ಯಾರು ಕಲ್ಪದ ಮೊದಲು ಆಸ್ತಿಯನ್ನು ತೆಗೆದುಕೊಂಡಿದ್ದರೋ ಅವರೇ ಚೆನ್ನಾಗಿ ತಿಳಿದುಕೊಳ್ಳುವ ಪ್ರಯತ್ನ ಪಡುತ್ತಾರೆ. ಭಲೆ ತಡವಾಗಿ ಬರುತ್ತಾರೆ ಆದರೆ ಹಳಬರಿಗಿಂತಲೂ ಮುಂದೆ ಹೋಗುತ್ತಾರೆ. ತಡವಾಗಿ ಬರುವವರಿಗೆ ಇನ್ನೂ ಒಳ್ಳೊಳ್ಳೆಯ ಅಂಶಗಳು ಸಿಗುತ್ತವೆ, ದಿನ-ಪ್ರತಿದಿನ ಸಹಜವಾಗುತ್ತಾ ಹೋಗುತ್ತದೆ. ಇದನ್ನೂ ಸಹ ತಿಳಿದುಕೊಳ್ಳುತ್ತಾರೆ – ಈಗ ನಾವು ಎಲ್ಲವನ್ನೂ ತಿಳಿದುಕೊಂಡಿದ್ದೇವೆ ಅಂದಮೇಲೆ ತಮೋಪ್ರಧಾನರಿಂದ ಸತೋಪ್ರಧಾನರಾಗುವ ಪರಿಶ್ರಮವನ್ನೂ ಪಡಬೇಕಾಗಿದೆ ಅದಕ್ಕಾಗಿ ತೀವ್ರ ಪುರುಷಾರ್ಥವನ್ನೂ ಮಾಡತೊಡಗುತ್ತಾರೆ ಏಕೆಂದರೆ ಸಮಯವು ಕಡಿಮೆಯಿದೆ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಎಷ್ಟು ಸಾಧ್ಯವೋ ಪುರುಷಾರ್ಥದಲ್ಲಿ ತೊಡಗೋಣ. ಮೃತ್ಯುವಿಗೆ ಮೊದಲೇ ನಾವು ಪುರುಷಾರ್ಥ ಮಾಡೋಣವೆಂದು ಅವರು ತಮ್ಮ ಚಾರ್ಟ್ ಇಟ್ಟುಕೊಳ್ಳುತ್ತಾರೆ. ವಿದ್ಯೆಯು ಬಹಳ ಸಹಜವಾಗಿದೆ, ಉಳಿದುದು ನೆನಪಿನ ಮಾತಾಗಿದೆ. ಮುಂಜಾನೆಯಲ್ಲಿ ರಾಮನನ್ನು ಸ್ಮರಿಸು ಮನವೆ ಎಂಬ ಗಾಯನವಿದೆ. ಆತ್ಮವೇ ಹೇಳುತ್ತದೆ – ಹೇ ನನ್ನ ಮನವೇ ರಾಮನ ಸ್ಮರಣೆ ಮಾಡು ಎಂದು. ಭಕ್ತಿಮಾರ್ಗದಲ್ಲಿ ರಾಮ ಯಾರೆಂಬುದೂ ಸಹ ಯಾರಿಗೂ ತಿಳಿದಿರುವುದಿಲ್ಲ. ಅವರು ರಘುಪತಿ ರಾಘವ ರಾಜಾರಾಮ ಎಂದು ಹೇಳಿಬಿಡುತ್ತಾರೆ, ಎಷ್ಟೊಂದು ಗಡಿ ಬಿಡಿ ಮಾಡಿದ್ದಾರೆ. ಎಲ್ಲರ ಭಗವಂತ ಆ ರಾಮನು ಯಾರು ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಸಮಯವನ್ನು, ಹಣವನ್ನು ವ್ಯರ್ಥ ಮಾಡುತ್ತಿರುತ್ತಾರೆ. ನೀವು ಮಕ್ಕಳಿಗೆ ನಾನು ವಿಶ್ವದ ರಾಜ್ಯಭಾಗ್ಯವನ್ನು ಕೊಟ್ಟಿದ್ದೆನು ಮತ್ತೆ ಎಲ್ಲಿ ಹೋಯಿತು? 5000 ವರ್ಷಗಳ ಮೊದಲು ನಿಮಗೆ ಸ್ವರ್ಗದ ರಾಜ್ಯಭಾಗ್ಯವನ್ನು ಕೊಟ್ಟಿದ್ದೆನು, ಅದನ್ನು ಎಲ್ಲಿ ಕಳೆದಿರಿ? ಹೇಗೆ ನಾವು ಕೆಳಗೆ ಇಳಿಯುತ್ತಾ ಬಂದಿದ್ದೇವೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಈಗ ಪುನಃ ಮೇಲೇರಬೇಕಾಗಿದೆ. ಏರುವ ಕಲೆಯು ಒಂದು ಸೆಕೆಂಡಿನಲ್ಲಿ, ಇಳಿಯುವ ಕಲೆಯು 5000 ವರ್ಷಗಳಲ್ಲಿ ಆಗುತ್ತದೆ. ಬ್ರಹ್ಮನಿಂದ ವಿಷ್ಣುವಾಗುವುದರಲ್ಲಿ ಒಂದು ಸೆಕೆಂಡ್, ವಿಷ್ಣುವಿನಿಂದ ಬ್ರಹ್ಮನಾಗುವುದರಲ್ಲಿ 5000 ವರ್ಷಗಳು ಹಿಡಿಸುತ್ತವೆ. ಎಷ್ಟೊಂದು ಮಾತುಗಳನ್ನು ತಿಳಿಸುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಈಗ ಟಾಕಿಯಿಂದ ಮ್ಹೂವಿ, ಮ್ಹೂವಿಯಿಂದ ಸೈಲೆನ್ಸ್ನಲ್ಲಿ ಹೋಗಬೇಕಾಗಿದೆ ಆದ್ದರಿಂದ ಟಾಕಿ (ಮಾತು) ಯನ್ನು ಬಹಳ ಕಡಿಮೆ ಮಾಡಿಕೊಳ್ಳಬೇಕಾಗಿದೆ. ಘನತೆಯಿಂದ ಬಹಳ ನಿಧಾನವಾಗಿ ಮಾತನಾಡಬೇಕಾಗಿದೆ.

2. ಜ್ಞಾನವನ್ನು ತಿಳಿದುಕೊಂಡ ನಂತರ ತೀವ್ರ ಪುರುಷಾರ್ಥ ಮಾಡಿ ಸತೋಪ್ರಧಾನರಾಗಬೇಕಾಗಿದೆ. ನೆನಪಿನ ಚಾರ್ಟ್ ಇಡಬೇಕಾಗಿದೆ.

ವರದಾನ:-

ನೆನಪಿನ ಮೂಲಕ ಯಾವ ಶಕ್ತಿಗಳ ಪ್ರಾಪ್ತಿಯಾಗುವುದೋ ಅದನ್ನು ಚಮತ್ಕಾರವೆಂದು ತಿಳಿದು ಪ್ರಯೋಗಿಸಬಾರದು, ಆದರೆ ಕರ್ತವ್ಯವೆಂದು ತಿಳಿದು ಕಾರ್ಯದಲ್ಲಿ ಉಪಯೋಗಿಸಬೇಕು. ಆ ಮನುಷ್ಯರ ಬಳಿ ರಿದ್ಧಿ-ಸಿದ್ಧಿಯ ಚಮತ್ಕಾರವಾಗುತ್ತದೆ ಆದರೆ ತಮ್ಮ ಬಳಿಯಿದೆ ಶ್ರೀಮತ. ಶ್ರೀಮತದಿಂದ ಅವಶ್ಯವಾಗಿ ಶಕ್ತಿಗಳು ಬರುವುದು ಆದ್ದರಿಂದ ಸಂಕಲ್ಪದಿಂದ ಕರ್ತವ್ಯವು ಸಿದ್ಧವಾಗುವುದು. ಸಂಕಲ್ಪದಿಂದ ಯಾರಿಗಾದರೂ ಕಾರ್ಯದ ಪ್ರೇರಣೆಯನ್ನು ಕೊಡಬಹುದು, ಇದೂ ಸಹ ಶಕ್ತಿಯೇ ಆಗಿದೆ ಆದರೆ ಶ್ರೀಮತದಲ್ಲಿ ಯಾವಾಗ ತಮ್ಮ ಮನಮತವು ಸೇರ್ಪಡೆ ಆಗುವುದಿಲ್ಲವೋ ಆಗ ಗಾಯನ ಮತ್ತು ಪೂಜ್ಯನೀಯ ಯೋಗ್ಯರಾಗುವಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top