27 June 2022 KANNADA Murli Today | Brahma Kumaris
Read and Listen today’s Gyan Murli in Kannada
26 June 2022
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
“ಮಧುರ ಮಕ್ಕಳೇ - ಈ ಶರೀರರೂಪಿ ರಥದಲ್ಲಿ ವಿರಾಜಮಾನವಾಗಿರುವ ಆತ್ಮವು ರಥಿಯಾಗಿದೆ, ರಥಿ ಎಂದು ತಿಳಿದುಕೊಂಡು ಕರ್ಮ ಮಾಡುವುದರಿಂದ ದೇಹಾಭಿಮಾನವು ಬಿಡುಗಡೆಯಾಗುತ್ತದೆ”
ಪ್ರಶ್ನೆ:: -
ತಂದೆಯು ಮಾತನಾಡುವ ಪದ್ಧತಿಯು ಮನುಷ್ಯರ ಪದ್ಧತಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ, ಹೇಗೆ?
ಉತ್ತರ:-
ತಂದೆಯು ಈ ರಥದಲ್ಲಿ ರಥಿಯಾಗಿ ಮಾತನಾಡುತ್ತಾರೆ ಮತ್ತು ಆತ್ಮಗಳೊಂದಿಗೇ ಮಾತನಾಡುತ್ತಾರೆ, ಶರೀರವನ್ನು ನೋಡುವುದಿಲ್ಲ. ಮನುಷ್ಯರು ಸ್ವಯಂನ್ನು ಆತ್ಮನೆಂದೂ ತಿಳಿಯುವುದಿಲ್ಲ ಮತ್ತು ಆತ್ಮಗಳೊಂದಿಗೆ ಮಾತನಾಡುವುದಿಲ್ಲ. ನೀವು ಮಕ್ಕಳು ಈಗ ಈ ಅಭ್ಯಾಸ ಮಾಡಬೇಕಾಗಿದೆ. ಯಾವುದೇ ಆಕಾರಿ ಹಾಗೂ ಸಾಕಾರಿಚಿತ್ರವನ್ನು ನೋಡಿಯೂ ನೋಡದಂತಿರಿ. ಆತ್ಮನನ್ನು ನೋಡಿ ಮತ್ತು ಒಬ್ಬ ವಿದೇಹಿಯನ್ನು ನೆನಪು ಮಾಡಿ.
♫ ಕೇಳು ಇಂದಿನ ಮುರ್ಲಿ (audio)➤
ಗೀತೆ:-
ನೀವೇ ಮಾತಾ ಪಿತಾ ಆಗಿದ್ದೀರಿ……
ಓಂ ಶಾಂತಿ. ಮಕ್ಕಳಿಗೆ ಓಂಶಾಂತಿಯ ಅರ್ಥವನ್ನು ಸಂಪೂರ್ಣ ಸಹಜವಾಗಿ ತಿಳಿಸಲಾಗುತ್ತದೆ. ಪ್ರತಿಯೊಂದು ಮಾತು ಸಹಜವಾಗಿದೆ. ಸಹಜ ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳಬೇಕಾಗಿದೆ, ಎಲ್ಲಿಗೋಸ್ಕರ? ಸತ್ಯಯುಗಕ್ಕೋಸ್ಕರ, ಅದನ್ನು ಜೀವನ್ಮುಕ್ತಿ ಎಂದು ಹೇಳಲಾಗುತ್ತದೆ. ಅಲ್ಲಿ ರಾವಣನೆಂಬ ಭೂತವು ಇರುವುದೇ ಇಲ್ಲ. ಯಾರಿಗಾದರೂ ಕ್ರೋಧವು ಬಂದರೆ ನಿಮ್ಮಲ್ಲಿ ಈ ಭೂತವಿದೆಯೆಂದು ಹೇಳಲಾಗುತ್ತದೆ. ಯೋಗದ ಅರ್ಥವಾಗಿದೆ – ನಾನು ಆತ್ಮನಾಗಿದ್ದೇನೆ, ಇದು ನನ್ನ ಶರೀರವಾಗಿದೆ. ಹೀಗೆ ಪ್ರತಿಯೊಬ್ಬರ ಶರೀರರೂಪಿ ರಥದಲ್ಲಿ ಆತ್ಮ ರಥಿಯು ಕುಳಿತುಕೊಂಡಿದೆ. ಆತ್ಮನ ಶಕ್ತಿಯಿಂದ ಈ ರಥವು ನಡೆಯುತ್ತದೆ. ಆತ್ಮನಿಗೆ ಈ ಶರೀರದಲ್ಲಿ ಗಳಿಗೆ-ಗಳಿಗೆಯು ತೆಗೆದುಕೊಳ್ಳಬೇಕಾಗುತ್ತದೆ ಹಾಗೂ ಬಿಡಬೇಕಾಗುತ್ತದೆ. ಈಗ ಭಾರತವು ದುಃಖಧಾಮವಾಗಿದೆ. ಸ್ವಲ್ಪ ಸಮಯದ ಹಿಂದೆ ಸುಖಧಾಮವಾಗಿತ್ತು. ಈಶ್ವರೀಯ ಸರ್ಕಾರವಿತ್ತು ಏಕೆಂದರೆ ಸರ್ವಶಕ್ತಿವಂತ ತಂದೆ ಭಾರತದಲ್ಲಿ ದೇವತಾ ರಾಜ್ಯದ ಸ್ಥಾಪನೆ ಮಾಡಿದ್ದರು. ಅಲ್ಲಿ ಒಂದು ಧರ್ಮವಿತ್ತು. ಇಂದಿನಿಂದ 5000 ವರ್ಷಗಳ ಮೊದಲು ಅವಶ್ಯವಾಗಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಆ ರಾಜ್ಯವನ್ನು ಸ್ಥಾಪನೆ ಮಾಡುವವರು ಅವಶ್ಯವಾಗಿ ತಂದೆಯೇ ಆಗಿರುವರು. ತಂದೆಯಿಂದ ಅವರಿಗೆ ಆಸ್ತಿಯು ಸಿಕ್ಕಿರಬಹುದು. ದೇವತೆಗಳ ಆತ್ಮವು 84 ಜನ್ಮಗಳ ಚಕ್ರವನ್ನು ಸುತ್ತಿದೆ. ಭಾರತವಾಸಿಗಳೇ ಈ ವರ್ಣಗಳಲ್ಲಿ ಬರುತ್ತಾರೆ. ಶೂದ್ರ ವರ್ಣದ ನಂತರ ಸರ್ವೋತ್ತಮ ಬ್ರಾಹ್ಮಣ ವರ್ಣವು ಬರುತ್ತದೆ. ಬ್ರಾಹ್ಮಣವರ್ಣ ಅರ್ಥಾತ್ ಬ್ರಹ್ಮನ ಮುಖವಂಶಾವಳಿ. ಆ ಬ್ರಾಹ್ಮಣರು ಕುಖವಂಶಾವಳಿಯಾಗಿದ್ದಾರೆ. ನಾವು ಬ್ರಹ್ಮಾಮುಖವಂಶಾವಳಿ ಆಗಿದ್ದೇವೆ ಎಂದು ಅವರು ಹೇಳಲು ಸಾಧ್ಯವಿಲ್ಲ. ಪ್ರಜಾಪಿತ ಬ್ರಹ್ಮನಿಗೆ ಅವಶ್ಯವಾಗಿ ದತ್ತುಮಕ್ಕಳು ಇರುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ಈ ಭಾರತವು ಪೂಜ್ಯವಾಗಿತ್ತು, ಈಗ ಪೂಜಾರಿಯಾಗಿದೆ. ತಂದೆಯಂತೂ ಸದಾ ಪೂಜ್ಯರಾಗಿದ್ದಾರೆ. ಅವರು ಪತಿತರನ್ನು ಪಾವನ ಮಾಡಲು ಅವಶ್ಯವಾಗಿ ಬರುತ್ತಾರೆ. ಸತ್ಯಯುಗವು ಪಾವನ ಪ್ರಪಂಚವಾಗಿದೆ. ಸತ್ಯಯುಗದಲ್ಲಿ ಪತಿತಪಾವನಿ ಗಂಗಾ, ಈ ಹೆಸರೇ ಇರುವುದಿಲ್ಲ ಏಕೆಂದರೆ ಅದು ಪಾವನ ಪ್ರಪಂಚವಾಗಿದೆ. ಎಲ್ಲರೂ ಪುಣ್ಯಾತ್ಮರಾಗಿದ್ದಾರೆ, ಪಾಪಾತ್ಮರಿಲ್ಲ. ಕಲಿಯುಗದಲ್ಲಿ ನಂತರ ಪುಣ್ಯಾತ್ಮರು ಇರುವುದಿಲ್ಲ. ಎಲ್ಲರೂ ಪಾಪಾತ್ಮಗಳಾಗಿದ್ದಾರೆ. ಪುಣ್ಯಾತ್ಮನೆಂದು ಪವಿತ್ರರಿಗೆ ಹೇಳಲಾಗುತ್ತದೆ. ಭಾರತದಲ್ಲಿ ತುಂಬಾ ದಾನ-ಪುಣ್ಯವನ್ನು ಮಾಡುತ್ತಾರೆ. ಈ ಸಮಯದಲ್ಲಿ ಯಾವಾಗ ತಂದೆಯು ಬರುತ್ತಾರೆ, ಆಗ ಅವರ ಮೇಲೆ ಬಲಿಹಾರಿ ಆಗುತ್ತಾರೆ. ಸನ್ಯಾಸಿಗಳು ಮನೆ-ಮಠ ಬಿಟ್ಟು ಹೋಗುತ್ತಾರೆ. ಇಲ್ಲಿ ಮಕ್ಕಳು ಹೇಳುತ್ತಾರೆ- ಬಾಬಾ ಇದೆಲ್ಲವೂ ನಿಮ್ಮದೇ ಆಗಿದೆ. ನೀವು ಸತ್ಯಯುಗದಲ್ಲಿ ತುಂಬಾ ಧನವನ್ನು ಕೊಟ್ಟಿದ್ದಿರಿ ನಂತರ ಮಾಯೆಯು ಕವಡೆಯ ಸಮಾನ ಮಾಡಿಬಿಟ್ಟಿದೆ. ಈಗ ಈ ಆತ್ಮವೂ ಸಹ ಪತಿತವಾಗಿಬಿಟ್ಟಿದೆ. ತನು-ಮನ-ಧನ ಎಲ್ಲವೂ ಪತಿತವಾಗಿದೆ. ಆತ್ಮ ಮೊಟ್ಟಮೊದಲು ಪವಿತ್ರವಾಗಿರುತ್ತದೆ ನಂತರ ಚಕ್ರವನ್ನು ಸುತ್ತಿ ಅಂತ್ಯದಲ್ಲಿ ತಮೋಪ್ರಧಾನ ಕಲುಷಿತ ಆಭರಣವಾಗಿದೆ. ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ಪತಿತವಾಗಿಬಿಡುತ್ತದೆ. ಮನುಷ್ಯರು ಗೋಲ್ಡನ್, ಸಿಲ್ವರ್…….. ಈ ಸ್ಥಿತಿಗಳಲ್ಲಿ ಅವಶ್ಯವಾಗಿ ಬರಲೇ ಬೇಕಾಗಿದೆ. ಹಾಡುತ್ತಾರೆ ನೀವೇ ಮಾತಾ-ಪಿತಾ………ಲಕ್ಶ್ಮೀ-ನಾರಾಯಣರ ಮುಂದೆಯೂ ಸಹ ಹೋಗಿ ಈ ಮಹಿಮೆ ಮಾಡುತ್ತಾರೆ ಆದರೆ ಅವರಿಗೆ ಒಬ್ಬ ಮಗ, ಒಬ್ಬ ಮಗಳು ಇರುತ್ತಾರೆ. ರಾಜಾ-ರಾಣಿಗೆ ಯಾವ ಸುಖವಿರುತ್ತದೆಯೋ ಅದು ಮಕ್ಕಳಿಗೂ ಇರುತ್ತದೆ. ಎಲ್ಲರಿಗೂ ಅಪಾರ ಸುಖವಿರುತ್ತದೆ. ಈಗಂತು 84 ನೇ ಅಂತಿಮ ಜನ್ಮದಲ್ಲಿ ಅಪಾರ ದುಃಖವಿದೆ. ಈಗ ತಂದೆಯು ಹೇಳುತ್ತಾರೆ- ನಾನು ಪುನಃ ನಿಮಗೆ ರಾಜಯೋಗವನ್ನು ಕಲಿಸುತ್ತೇನೆ. ಮಕ್ಕಳಿಗೆ ತಿಳಿಸಲಾಗಿದೆ- ಈ ರಥದಲ್ಲಿ ರಥಿ ಅತ್ಮವು ಕುಳಿತಿದೆ. ಈ ರಥಿಯೂ ಮೊದಲು 16 ಕಲಾ ಸಂಪೂರ್ಣವಾಗಿತ್ತು, ಈಗ ಕಲಾಹೀನವಾಗಿಬಿಟ್ಟಿದೆ. ನಾನು ನಿರ್ಗುಣನಲ್ಲಿ ಈಗ ಯಾವುದೇ ಗುಣವಿಲ್ಲ. ತಾವೇ ದಯೆ ತೋರಿಸಿ ಎಂದು ಹೇಳುತ್ತಾರೆ. ಯಾರಲ್ಲಿಯೂ ಗುಣವಿಲ್ಲ, ಎಲ್ಲರೂ ಪತಿತರಾಗಿದ್ದಾರೆ ಆದ್ದರಿಂದಲೇ ಗಂಗೆಯಲ್ಲಿ ಪಾಪವನ್ನು ತೊಳೆಯಲು ಹೋಗುತ್ತಾರೆ. ಸತ್ಯಯುಗದಲ್ಲಿ ಈ ರೀತಿ ಹೋಗುವುದಿಲ್ಲ. ನದಿಯಂತು ಅದೇ ಆಗಿದೆಯಲ್ಲವೇ. ಬಾಕಿ ಈ ರೀತಿ ಹೇಳಬಹುದು ಆ ಸಮಯದಲ್ಲಿ ಅಲ್ಲಿ ಪ್ರತಿಯೊಂದು ವಸ್ತು ಸತೋಪ್ರಧಾನವಾಗಿರುತ್ತದೆ. ನದಿಗಳೂ ಸಹ ತುಂಬಾ ಸ್ವಚ್ಚವಾಗಿರುತ್ತದೆ. ನದಿಗಳಲ್ಲಿ ಕೊಳಕು ಮುಂತಾದವು ಇರುವುದಿಲ್ಲ. ಇಲ್ಲಂತೂ ನೋಡಿ ಎಷ್ಟೊಂದು ಕೊಳಕು ಬೀಳುತ್ತಿರುತ್ತದೆ. ಇಡೀ ಕೊಳಕೆಲ್ಲವೂ ಸಾಗರದಲ್ಲಿ ಹೋಗುತ್ತದೆ. ಸತ್ಯಯುಗದಲ್ಲಿ ಈ ರೀತಿಯಿರಲು ಸಾಧ್ಯವಿಲ್ಲ. ಅಲ್ಲಿ ಯಾರನ್ನೂ ಅಪವಿತ್ರರನ್ನಾಗಿ ಮಾಡುವ ನಿಯಮವೇ ಇಲ್ಲ. ಎಲ್ಲಾ ವಸ್ತುಗಳು ಪವಿತ್ರವಾಗಿ ಇರುತ್ತದೆ. ತಂದೆಯು ಹೇಳುತ್ತಾರೆ- ಈಗ ಇದು ಎಲ್ಲರ ಅಂತಿಮ ಜನ್ಮವಾಗಿದೆ. ಆಟವು ಪೂರ್ಣವಾಗಿದೆ. ಈ ಆಟದ ಪರಿಮಿತ 5000 ವರ್ಷಗಳಾಗಿದೆ. ಇದನ್ನು ನಿರಾಕಾರ ಶಿವತಂದೆಯೇ ತಿಳಿಸುತ್ತಾರೆ. ಅವರು ನಿರಾಕಾರ ಎಲ್ಲರಿಗಿಂತ ಶ್ರೇಷ್ಠ ಪರಮಧಾಮದಲ್ಲಿ ಇರುವವರಾಗಿದ್ದಾರೆ, ಪರಮಧಾಮದಿಂದ ನಾವೆಲ್ಲಾ ಆತ್ಮರು ಬರುತ್ತೇವೆ. ಈಗ ಕಲಿಯುಗದ ಅಂತ್ಯದಲ್ಲಿ ನಾಟಕವು ಪೂರ್ತಿಯಾಗಿ ಪುನಃ ಇತಿಹಾಸವು ಪುನರಾವರ್ತನೆ ಆಗುವುದಿದೆ. ಮನುಷ್ಯರು ಯಾವುದೆಲ್ಲಾ ಶಾಸ್ತ್ರ, ಗೀತಾ ಮುಂತಾದವುಗಳನ್ನು ಓದುತ್ತಾರೆ. ಅವೆಲ್ಲವೂ ದ್ವಾಪರದಿಂದ ಆಗಿವೆ. ಈ ಜ್ಞಾನವು ಪ್ರಾಯಃಲೋಪವಾಗಿಬಿಡುತ್ತದೆ. ರಾಜಯೋಗವನ್ನು ಯಾರೂ ಕಲಿಸಲು ಸಾಧ್ಯವಿಲ್ಲ. ಕೇವಲ ಅವರ ನೆನಪಾರ್ಥಕ್ಕೋಸ್ಕರ ಪುಸ್ತಕಗಳನ್ನು ಮಾಡುತ್ತಾ ಇರುತ್ತಾರೆ. ಅವರು ಧರ್ಮಸ್ಥಾಪನೆ ಮಾಡಿ ಪುನರ್ಜನ್ಮದಲ್ಲಿ ಬರತೊಡಗುತ್ತಾರೆ. ಅವರ ನೆನಪಾರ್ಥ ಪುಸ್ತಕವು ಇರುವುದು. ಈಗ ಸಂಗಮದಲ್ಲಿ ದೇವೀ-ದೇವತಾ ಧರ್ಮವು ಸ್ಥಾಪನೆ ಆಗುತ್ತದೆ. ತಂದೆಯು ಬಂದು ಈ ರಥದಲ್ಲಿ ವಿರಾಜಮಾನ ಆಗುತ್ತಾರೆ. ಕುದುರೆ ಗಾಡಿಯ ಮಾತಿಲ್ಲ. ಈ ಸಾಧಾರಣ ವೃದ್ಧನ ರಥದಲ್ಲಿ ಪ್ರವೇಶ ಮಾಡುತ್ತಾರೆ. ತಂದೆಯು ರಥಿ ಆಗಿದ್ದಾರೆ. ಬ್ರಹ್ಮಾಮುಖವಂಶಾವಳಿ ಬ್ರಹ್ಮಾಕುಮಾರ-ಕುಮಾರಿಯರು ಎಂದು ಗಾಯನವನ್ನು ಮಾಡಲಾಗಿದೆ. ಈ ಬ್ರಹ್ಮಾರವರೂ ಸಹ ದತ್ತು ಮಾಡಿಕೊಂಡಿರುವವರಾಗಿದ್ದಾರೆ. ತಂದೆಯು ಹೇಳುತ್ತಾರೆ – ನಾನು ಬಂದು ಈ ರಥದ ರಥಿಯಾಗುತ್ತೇನೆ, ಇವರಿಗೆ ಜ್ಞಾನವನ್ನು ಕೊಡುತ್ತೇನೆ. ಇವರಿಂದಲೇ ಪ್ರಾರಂಭ ಮಾಡುತ್ತೇನೆ, ಮಾತೆಯರ ಮೇಲೆ ಕಳಶವನ್ನಿಡುತ್ತೇನೆ. ಇವರೂ ಸಹ(ಬ್ರಹ್ಮ) ತಾಯಿ ಆಗಿದ್ದಾರಲ್ಲವೇ. ಮೊಟ್ಟಮೊದಲು ಇವರು ಕೇಳುತ್ತಾರೆ ನಂತರ ನೀವು ಕೇಳುತ್ತೀರಿ, ಇವರಲ್ಲಿ ವಿರಾಜಮಾನನಾಗಿದ್ದೇನೆ ಆದರೆ ಸಮ್ಮುಖದಲ್ಲಿ ಯಾರಿಗೆ ತಿಳಿಸಲಿ. ತಂದೆಯು ಕುಳಿತು ಆತ್ಮಗಳೊಂದಿಗೆ ಮಾತನಾಡುತ್ತಾರೆ ಮತ್ತ್ಯಾವುದೇ ವಿದ್ವಾಂಸ-ಪಂಡಿತರು ಈ ರೀತಿ ಕುಳಿತು ಆತ್ಮಗಳೊಂದಿಗೆ ಮಾತನಾಡುವುದಿಲ್ಲ. ನಾನು ನಿಮ್ಮ ತಂದೆಯಾಗಿದ್ದೇನೆ. ನೀವು ಆತ್ಮಗಳು ನಿರಾಕಾರ ಆಗಿದ್ದೀರಿ, ನಾನೂ ಸಹ ನಿರಾಕಾರನಾಗಿದ್ದೇನೆ. ನಾನು ಜ್ಞಾನಸಾಗರ, ಸ್ವರ್ಗದ ರಚಯಿತನಾಗಿದ್ದೇನೆ. ನರಕವನ್ನು ನಾನು ರಚಿಸುವುದಿಲ್ಲ. ಈ ಮಾಯೆಯು ನರಕವನ್ನಾಗಿ ಮಾಡುತ್ತದೆ. ನಾನು ರಚಯಿತನಾಗಿರುವ ಕಾರಣ ಸ್ವರ್ಗವನ್ನೇ ರಚಿಸುತ್ತೇನೆ. ನೀವು ಭಾರತವಾಸಿಗಳು ಸ್ವರ್ಗವಾಸಿಗಳಾಗಿದ್ದೀರಿ, ಈಗ ನರಕವಾಸಿಗಳಾಗಿದ್ದೀರಿ. ರಾವಣ ನರಕವಾಸಿಗಳನ್ನಾಗಿ ಮಾಡಿದ್ದಾನೆ ಏಕೆಂದರೆ ಆತ್ಮವು ರಾವಣನ ಮತದ ಮೇಲೆ ನಡೆಯುತ್ತದೆ. ಈ ಸಮಯದಲ್ಲಿ ನೀವು ಆತ್ಮಗಳು ಶ್ರೀ ಶ್ರೀ ಶಿವಬಾಬಾರವರ ಮತದಂತೆ ನಡೆಯುತ್ತೀರಿ. ಈಗ ಎಲ್ಲರ ಪಾತ್ರವು ಪೂರ್ಣವಾಯಿತು. ಯಾವಾಗ ಎಲ್ಲಾ ಆತ್ಮಗಳು ಜೊತೆಗೂಡುತ್ತಾರೆ ಆಗ ಮೇಲಿನಿಂದ ಎಲ್ಲರೂ ಬಂದುಬಿಡುತ್ತಾರೆ, ಆಗ ಮತ್ತೆ ಹೋಗುವುದು ಪ್ರಾರಂಭವಾಗುತ್ತದೆ. ನಂತರ ವಿನಾಶವು ಪ್ರಾರಂಭವಾಗುತ್ತದೆ. ಭಾರತದಲ್ಲಿ ಈಗ ಅನೇಕ ಧರ್ಮಗಳಿವೆ. ಒಂದು ಆದಿಸನಾತನ ದೇವೀ-ದೇವತಾ ಧರ್ಮವಿಲ್ಲ. ಯಾವುದೇ ಧರ್ಮದವರು ತಮ್ಮನ್ನು ದೇವತೆಗಳೆಂದು ಕರೆಸಿಕೊಳ್ಳುವುದಿಲ್ಲ. ದೇವತೆಗಳ ಮಹಿಮೆಯನ್ನು ಹಾಡುತ್ತಾರೆ- ನೀವು ಸರ್ವಗುಣ ಸಂಪನ್ನ….. ನಂತರ ತಮಗೆ ಹೇಳಿಕೊಳ್ಳುತ್ತಾರೆ- ನಾವು ಪಾಪಿಗಳು ನೀಚರಾಗಿದ್ದೇವೆ….. ದ್ವಾಪರದಿಂದ ರಾವಣರಾಜ್ಯವು ಶುರುವಾಗುತ್ತದೆ. ರಾಮರಾಜ್ಯವು ಬ್ರಹ್ಮನ ದಿನವಾಗಿದೆ, ರಾವಣರಾಜ್ಯವು ಬ್ರಹ್ಮನ ರಾತ್ರಿಯಾಗಿದೆ. ತಂದೆಯು ಯಾವಾಗ ಬರುತ್ತಾರೆ? ಯಾವಾಗ ಬ್ರಹ್ಮನ ರಾತ್ರಿಯು ಪೂರ್ತಿಯಾಗುತ್ತದೆ ಆಗಲೇ ಬರುವರಲ್ಲವೇ ಮತ್ತು ಈ ಬ್ರಹ್ಮನ ಶರೀರದಲ್ಲಿ ಬಂದಾಗಲೇ ಬ್ರಹ್ಮನ ಮುಖದಿಂದ ಬ್ರಾಹ್ಮಣರು ಜನ್ಮ ಪಡೆಯುತ್ತೀರಿ. ನೀವು ಬ್ರಾಹ್ಮಣರಿಗೆ ರಾಜಯೋಗವನ್ನು ಕಲಿಸುತ್ತಾರೆ. ತಂದೆಯು ಹೇಳುತ್ತಾರೆ- ಯಾವುದೆಲ್ಲಾ ಆಕಾರಿ, ಸಾಕಾರಿ, ನಿರಾಕಾರಿ ಚಿತ್ರಗಳಿವೆ ಅವುಗಳನ್ನು ನೀವು ನೆನಪು ಮಾಡಬಾರದು. ನಿಮಗಂತು ಲಕ್ಷ್ಯವನ್ನು ಕೊಡಲಾಗಿದೆ. ಮನುಷ್ಯರು ಚಿತ್ರವನ್ನು ನೋಡಿ ನೆನಪು ಮಾಡುತ್ತಾರೆ ಆದರೆ ಈಗ ಚಿತ್ರಗಳನ್ನು ನೋಡುವುದು ಸಮಾಪ್ತಿ ಮಾಡಿ ಎಂದು ತಂದೆಯು ಹೇಳುತ್ತಾರೆ. ಇದು ಭಕ್ತಿಮಾರ್ಗವಾಗಿದೆ. ಈಗಂತು ನೀವು ಆತ್ಮರು ನನ್ನ ಹತ್ತಿರ ಹಿಂತಿರುಗಿ ಬರಬೇಕಾಗಿದೆ. ತಲೆಯ ಮೇಲೆ ಪಾಪದ ಹೊರೆಯಿದೆ. ಪಾಪಾತ್ಮರಾಗಲೇಬೇಕಾಗಿದೆ. ಗರ್ಭಜೈಲಿನಲ್ಲಿ ಪಾಪವು ಸಮಾಪ್ತಿಯಾಗುತ್ತದೆ ಎಂದಲ್ಲ. ಸ್ವಲ್ಪ ಸಮಾಪ್ತಿಯಾಗುತ್ತದೆ, ಸ್ವಲ್ಪ ಇರುತ್ತದೆ. ನಾನೀಗ ಮಾರ್ಗದರ್ಶಕನಾಗಿ ಬಂದಿದ್ದೇನೆ. ಈ ಸಮಯದಲ್ಲಿ ಎಲ್ಲಾ ಆತ್ಮಗಳು ಮಾಯೆಯ ಮತದ ಮೇಲೆ ನಡೆಯುತ್ತಾರೆ. ನಾನು ಪತಿತ-ಪಾವನ, ಸ್ವರ್ಗದ ರಚಯಿತನಾಗಿದ್ದೇನೆ. ನರಕವನ್ನು ಸ್ವರ್ಗವನ್ನಾಗಿ ಮಾಡುವುದೇ ನನ್ನ ಕರ್ತವ್ಯವಾಗಿದೆ. ಸ್ವರ್ಗದಲ್ಲಿ ಇರುವುದೇ ಒಂದು ಧರ್ಮ, ಒಂದು ರಾಜ್ಯ. ಅಲ್ಲಿ ಯಾವುದೇ ವಿಭಾಗವಿರುವುದಿಲ್ಲ. ತಂದೆಯು ಹೇಳುತ್ತಾರೆ- ನಾನು ವಿಶ್ವದ ಮಾಲೀಕನಾಗುವುದಿಲ್ಲ ನಿಮ್ಮನ್ನು ಮಾಡುತ್ತೇನೆ ನಂತರ ರಾವಣನು ಬಂದು ನಿಮ್ಮಿಂದ ರಾಜ್ಯವನ್ನು ಕಸಿದುಕೊಳ್ಳುತ್ತಾನೆ. ಈಗ ಎಲ್ಲರೂ ತಮೋಪ್ರಧಾನ ಕಲ್ಲುಬುದ್ಧಿಯವರಾಗಿದ್ದಾರೆ. ಸಂಗಮಯುಗದಲ್ಲಿ ಪಾರಸಬುದ್ಧಿಯವರಾಗಿರುತ್ತಾರೆ. ತಂದೆಯು ಹೇಳುತ್ತಾರೆ- ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ, ಬುದ್ಧಿಯೋಗವನ್ನು ಮೇಲೆ ಜೋಡಿಸಿ. ಎಲ್ಲಿ ಹೋಗಬೇಕಾಗಿದೆ, ಅವರನ್ನೇ ನೆನಪು ಮಾಡಬೇಕಾಗಿದೆ. ಒಬ್ಬ ತಂದೆಯ ವಿನಃ ಯಾರೂ ಇಲ್ಲ. ಅವರೇ ಸತ್ಯವನ್ನು ತಿಳಿಸುವಂತಹ ಸತ್ಯಸಾಮ್ರಾಟನಾಗಿದ್ದಾರೆ ಆದ್ದರಿಂದ ಈಗ ಯಾವುದೇ ಚಿತ್ರದ ಸ್ಮರಣೆ ಮಾಡಬಾರದಾಗಿದೆ. ಶಿವನ ಯಾವ ಚಿತ್ರಗಳಿವೆ ಅದರ ಧ್ಯಾನವನ್ನೂ ಸಹ ಮಾಡಬಾರದು ಏಕೆಂದರೆ ಶಿವ ಈ ರೀತಿಯಲ್ಲಿ ಇಲ್ಲ. ಹೇಗೆ ನಾವು ಆತ್ಮಗಳು ಭೃಕುಟಿಯ ಮಧ್ಯದಲ್ಲಿ ಇರುತ್ತೇವೆ ಹಾಗೆಯೇ ತಂದೆಯು ಹೇಳುತ್ತಾರೆ, ನಾನು ಸ್ವಲ್ಪ ಜಾಗವನ್ನು ತೆಗೆದುಕೊಂಡು ಈ ಆತ್ಮನ(ಬ್ರಹ್ಮಾ) ಪಕ್ಕದಲ್ಲಿ ಕುಳಿತುಕೊಳ್ಳುತ್ತೇನೆ. ರಥಿಯಾಗಿ ಇವರಿಗೆ ಜ್ಞಾನವನ್ನು ಕೊಡುತ್ತೇನೆ. ಈ ಆತ್ಮನಲ್ಲಿಯೂ ಸಹ ಜ್ಞಾನವಿರಲಿಲ್ಲ. ಹೇಗೆ ಇವರ ಆತ್ಮ ರಥಿಯು ಶರೀರದ ಮುಖಾಂತರ ಮಾತನಾಡುತ್ತದೆ ಹಾಗೆಯೇ ನಾನೂ ಸಹ ಇವರ ಕರ್ಮೇಂದ್ರಿಯಗಳಿಂದ ಮಾತನಾಡುತ್ತೇನೆ, ಇಲ್ಲವೆಂದರೆ ನಾನು ಹೇಗೆ ತಿಳಿಸಲಿ! ಬ್ರಾಹ್ಮಣರನ್ನು ರಚಿಸಲು ಬ್ರಹ್ಮನು ಅವಶ್ಯವಾಗಿ ಬೇಕು. ಈ ಬ್ರಹ್ಮನೇ ನಂತರ ನಾರಾಯಣನಾಗುವರು. ಈಗ ನೀವು ಬ್ರಹ್ಮನ ಸಂತಾನರಾಗಿದ್ದೀರಿ ನಂತರ ಸೂರ್ಯವಂಶಿ ಶ್ರೀನಾರಾಯಣನ ಮನೆತನದಲ್ಲಿ ಬರುತ್ತೀರಿ. ಈಗಂತು ಸಂಪೂರ್ಣ ಕಂಗಾಲಾಗಿಬಿಟ್ಟಿದ್ದೀರಿ. ಜಗಳಾಡುತ್ತಾ-ಹೊಡೆದಾಡುತ್ತಾ ಇರುತ್ತಾರೆ, ಕೋತಿಗಿಂತಲೂ ಕಡೆಯಾಗಿದ್ದಾರೆ. ಕೋತಿಯಲ್ಲಿ ಪಂಚವಿಕಾರಗಳು ತುಂಬಾ ಕಠಿಣವಾಗಿರುತ್ತವೆ. ಕಾಮ, ಕ್ರೋಧ, ಎಲ್ಲಾ ವಿಕಾರಗಳು ಕೋತಿಯಲ್ಲಿ ಈ ರೀತಿ ಇರುತ್ತವೆ ಅದರ ಮಾತೇ ಕೇಳಬೇಡಿ, ಅದರ ಮಗು ಸತ್ತಾಗ ಅದರ ಮೂಳೆಗಳನ್ನೂ ಸಹ ಬಿಡುವುದಿಲ್ಲ. ಇಂದಿನಕಾಲದಲ್ಲಿ ಮನುಷ್ಯರೂ ಸಹ ಈ ರೀತಿ ಇದ್ದಾರೆ. ಮಗ ಸತ್ತರೆ 6-8 ತಿಂಗಳು ಅಳುತ್ತಾ ಇರುತ್ತಾರೆ. ಸತ್ಯಯುಗದಲ್ಲಿ ಅಕಾಲಮೃತ್ಯು ಇರುವುದಿಲ್ಲ. ಯಾರು ಅಳುವುದಾಗಲಿ, ದುಃಖ ಪಡುವುದಾಗಲಿ ಇಲ್ಲ. ಅಲ್ಲಿ ಮಾಯೆಯೇ ಇರುವುದಿಲ್ಲ.
ತಂದೆಯು ಈ ಸಮಯದಲ್ಲಿ ನೀವು ಮಕ್ಕಳೊಂದಿಗೆ ಮಾತನಾಡುತ್ತಾರೆ. ಮನೆ-ಮಠವನ್ನು ಭಲೆ ಸಂಭಾಲನೆ ಮಾಡಿ, ಅದರಲ್ಲಿದ್ದರೂ ಸಹ ಸನ್ಯಾಸಿಗಳು ಮಾಡದೇ ಇರುವಂತಹ ಕಮಾಲ್ ಮಾಡಿ ತೋರಿಸಿ. ಈ ಸತೋಪ್ರಧಾನ ಸನ್ಯಾಸವನ್ನು ತಂದೆಯೇ ಕಲಿಸುತ್ತಾರೆ. ತಂದೆಯು ಹೇಳುತ್ತಾರೆ- ಈ ಹಳೆಯ ಪ್ರಪಂಚವು ಈಗ ಸಮಾಪ್ತಿಯಾಗುವುದಿದೆ ಆದ್ದರಿಂದ ಇದರೊಂದಿಗಿನ ಮಮತ್ವವನ್ನು ತೆಗೆಯಿರಿ. ಎಲ್ಲರೂ ಹಿಂತಿರುಗಿ ಹೋಗಬೇಕಾಗಿದೆ. ದೇಹಸಹಿತ ಯಾವುದೇ ಹಳೆಯ ವಸ್ತುಗಳಿವೆ, ಅವುಗಳನ್ನು ಮರೆತುಬಿಡಿ. ಪಂಚವಿಕಾರಗಳನ್ನು ನನಗೆ ಕೊಡಿ. ಒಂದುವೇಳೆ ಅಪವಿತ್ರರಾಗುತ್ತೀರೆಂದರೆ ಪವಿತ್ರ ಪ್ರಪಂಚದಲ್ಲಿ ಬರಲು ಸಾಧ್ಯವಿಲ್ಲ. ಈ ಅಂತಿಮ ಜನ್ಮಕ್ಕೋಸ್ಕರ ತಂದೆಯೊಂದಿಗೆ ಪ್ರತಿಜ್ಞೆ ಮಾಡಿ ನಂತರ ಪವಿತ್ರತೆಯು ಸ್ಥಿರವಾಗಿಬಿಡುವುದು. 63 ಜನ್ಮಗಳು ವಿಷದಲ್ಲಿ ಮುಳುಗಿಹೋಗಿದ್ದೀರಿ, ಸಂಪೂರ್ಣ ಕೊಳಕರಾಗಿಬಿಟ್ಟಿದ್ದೀರಿ. ತಮ್ಮ ಧರ್ಮ-ಕರ್ಮವನ್ನು ಮರೆತಿದ್ದೀರಿ. ಹಿಂದೂ ಧರ್ಮದವರೆಂದು ಹೇಳುತ್ತಾ ಇರುತ್ತೀರಿ. ತಂದೆಯು ಹೇಳುತ್ತಾರೆ- ಭಾರತ ಸ್ವರ್ಗವಾಗಿತ್ತು, ನಾವೇ ದೇವತೆಗಳಾಗಿದ್ದೇವೆ ಎನ್ನುವುದನ್ನು ನೀವೇಕೆ ತಿಳಿಯುವುದಿಲ್ಲ. ನಾನು ನಿಮಗೆ ರಾಜಯೋಗವನ್ನು ಕಲಿಸಿದ್ದೆನು ಆದರೆ ನೀವು ಕೃಷ್ಣನು ಕಲಿಸಿದರೆಂದು ಹೇಳುತ್ತೀರಿ. ಕೃಷ್ಣನು ಎಲ್ಲರ ತಂದೆ ಸ್ವರ್ಗದ ರಚಯಿತನಾಗಿದ್ದಾನೆಯೇ? ತಂದೆಯು ನಿರಾಕಾರ, ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ. ಮತ್ತೆ ಅವರಿಗೋಸ್ಕರ ಸರ್ವವ್ಯಾಪಿ ಎಂದು ಹೇಳುತ್ತೀರಿ. ಶಿವ-ಶಂಕರನನ್ನು ಸೇರಿಸಿಬಿಟ್ಟಿದ್ದೀರಿ. ಶಿವ ಪರಮಾತ್ಮನಾಗಿದ್ದಾರೆ. ನಾನು ಬರುವುದೇ ದೇವೀ-ದೇವತಾಧರ್ಮ ಸ್ಥಾಪನೆ ಮಾಡುವುದಕ್ಕಾಗಿ ಅದನ್ನು ಸ್ಥಾಪನೆ ಮಾಡುತ್ತಾರೆ, ಅದನ್ನು ವಿಷ್ಣುವಿನ ಎರಡು ರೂಪ ಲಕ್ಷ್ಮೀ-ನಾರಾಯಣರು ರಾಜ್ಯ ಮಾಡುತ್ತಾರೆ. ವಿಷ್ಣುವಿನಿಂದಲೇ ವೈಷ್ಣವ ಎನ್ನುವ ಅಕ್ಷರವು ಬರುತ್ತದೆ.
ವರ್ತಮಾನದಲ್ಲಿ ಎಲ್ಲರೂ ಪಾಪಾತ್ಮಗಳಾಗಿದ್ದಾರೆ. ಅಲ್ಲಿ ಸತ್ಯಯುಗದಲ್ಲಿ ಕಾಮಕಟಾರಿಯನ್ನು ನಡೆಸಿ ಒಬ್ಬರು ಇನ್ನೊಬ್ಬರಿಗೆ ಮೋಸ ಮಾಡುವುದಿಲ್ಲ. ಸತ್ಯಖಂಡವನ್ನು ಸ್ಥಾಪನೆ ಮಾಡುವವರು ಒಬ್ಬರೇ ಸದ್ಗುರುವಾಗಿದ್ದಾರೆ. ಉಳಿದ ಎಲ್ಲರೂ ಮುಳುಗಿಸುವವರಾಗಿದ್ದಾರೆ. ಸಂಗಮ ಮತ್ತು ಸ್ವರ್ಗ ಒಂದು ಇನ್ನೊಂದರ ಸಮೀಪವಿರುವ ಕಾರಣ ನರಕದ ಮಾತನ್ನು ಸ್ವರ್ಗದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ವಾಸ್ತವದಲ್ಲಿ ಕಂಸ, ರಾವಣ ಮುಂತಾದವರೆಲ್ಲರೂ ಈಗ ಇದ್ದಾರೆ. ಅಲ್ಲಿ ಇವರು ಇರಲು ಸಾಧ್ಯವಿಲ್ಲ. ರಥದಲ್ಲಿ ಯಾವ ರಥಿಯನ್ನು ತೋರಿಸುತ್ತಾರೆ- ವಾಸ್ತವದಲ್ಲಿ ರಥವು ಇವರಾಗಿದ್ದಾರೆ. ಇವರನ್ನು ನಂದಿಗಣ, ಭಾಗೀರಥ ಎಂದು ಹೇಳಲಾಗುತ್ತದೆ. ನೀವೆಲ್ಲರೂ ಅರ್ಜುನರಾಗಿದ್ದೀರಿ, ನಿಮಗೆ ಹೇಳುತ್ತಾರೆ ಈ ರಥದಲ್ಲಿ ಬಂದಿದ್ದೇನೆ, ಯುದ್ಧದ ಮೈದಾನದಲ್ಲಿ ನಿಮಗೆ ಮಾಯೆಯ ಮೇಲೆ ಜಯವನ್ನು ಪ್ರಾಪ್ತಿ ಮಾಡಿಸಲು ಬಂದಿದ್ದೇನೆ. ಸತ್ಯಯುಗದಲ್ಲಿ ರಾವಣನು ಇರುವುದಿಲ್ಲ, ಸುಡುವುದೂ ಇಲ್ಲ. ಈಗಂತೂ ವಿನಾಶವಾಗುವ ತನಕ ರಾವಣನನ್ನು ಸುಡುತ್ತಲೇ ಇರುತ್ತಾರೆ, ತುಂಬಾ ಆಪತ್ತುಗಳು ಬರುತ್ತವೆ. ದಶಹರಾದಲ್ಲಿ ರಾವಣನನ್ನು ಅವಶ್ಯವಾಗಿ ಸುಡುತ್ತಾರೆ. ಕೊನೆಗೂ ಈ ರಾವಣ ಸಂಪ್ರದಾಯವು ಸಮಾಪ್ತಿಯಾಗಿಬಿಡುವುದು. ಸದ್ಗತಿದಾತ ಒಬ್ಬರೇ ಆಗಿದ್ದಾರೆ. ಮನುಷ್ಯರು ಮನುಷ್ಯರಿಗೆ ಸದ್ಗತಿ ಕೊಡಲು ಸಾಧ್ಯವಿಲ್ಲ. ಯಾವಾಗ ಈ ದೇವತೆಗಳ ರಾಜ್ಯವಿತ್ತು, ಆಗ ಇಡೀ ವಿಶ್ವದಲ್ಲಿ ಇವರದೇ ರಾಜ್ಯವಿತ್ತು ಮತ್ತ್ಯಾವುದೇ ಧರ್ಮವಿರಲಿಲ್ಲ. ಈಗ ಮತ್ತೆಲ್ಲಾ ಧರ್ಮಗಳಿವೆ, ದೇವತಾಧರ್ಮವಿಲ್ಲ. ಈಗ ಇದರ ಸ್ಥಾಪನೆಯಾಗುತ್ತಿದೆ. ದೇವತಾಧರ್ಮದವರೇ ಬಂದು ಶೂದ್ರರಿಂದ ಬ್ರಾಹ್ಮಣರಾಗುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:-
1. ಸತೋಪ್ರಧಾನ ಸನ್ಯಾಸ ಮಾಡಬೇಕಾಗಿದೆ. ಈ ಹಳೆಯ ಪ್ರಪಂಚದಲ್ಲಿ ಇರುತ್ತಾ ಇದರೊಂದಿಗಿನ ಮಮತ್ವವನ್ನು ತೆಗೆಯಬೇಕಾಗಿದೆ. ದೇಹಸಹಿತ ದೇಹದ ಏನೆಲ್ಲಾ ಪದಾರ್ಥಗಳಿವೆ ಅವುಗಳನ್ನು ಮರೆತುಬಿಡಬೇಕಾಗಿದೆ.
2. ತಮ್ಮ ಬುದ್ಧಿಯೋಗವನ್ನು ಮೇಲೆ ಜೋಡಿಸಬೇಕಾಗಿದೆ. ಯಾವುದೇ ಚಿತ್ರ ಅಥವಾ ದೇಹಧಾರಿಯನ್ನು ನೆನಪು ಮಾಡಬಾರದಾಗಿದೆ. ಒಬ್ಬ ತಂದೆಯ ಸ್ಮರಣೆಯನ್ನೇ ಮಾಡಬೇಕಾಗಿದೆ.
ವರದಾನ:-
ಸಂಗಮಯುಗದಲ್ಲಿ ತಾವು ಶ್ರೇಷ್ಠ ಭಾಗ್ಯಶಾಲಿ ಆತ್ಮರಿಗೆ ಪರಮಾತ್ಮನ ಶ್ರೀಮತವೇನು ಸಿಗುತ್ತಿದೆ- ಈ ಶ್ರೀಮತವೇ ಶ್ರೇಷ್ಠ ಪಾಲನೆಯಾಗಿದೆ. ಪರಮಾತ್ಮನ ಪಾಲನೆಯಿಲ್ಲದೆ ಒಂದು ಹೆಜ್ಜೆಯನ್ನೂ ಇಡಲು ಸಾಧ್ಯವಿಲ್ಲ. ಇಂತಹ ಪಾಲನೆಯು ಸತ್ಯಯುಗದಲ್ಲಿಯೂ ಸಿಗುವುದಿಲ್ಲ. ಈಗ ಪ್ರತ್ಯಕ್ಷದಲ್ಲಿ ಅನುಭವದಿಂದ ಹೇಳುತ್ತೀರಿ- ನಮ್ಮ ಪಾಲನೆ ಮಾಡುವವರು ಸ್ವಯಂ ಭಗವಂತನಾಗಿದ್ದಾರೆ. ಸದಾ ಈ ನಶೆಯು ಪ್ರತ್ಯಕ್ಷದಲ್ಲಿದ್ದಾಗ ಸ್ವಯಂ ಬೇಹದ್ದಿನ ಖಜಾನೆಗಳಿಂದ ಸಂಪನ್ನ, ಅವಿನಾಶಿ ಆಸ್ತಿಗೆ ಅಧಿಕಾರಿಯೆಂದು ಅನುಭವ ಮಾಡುವಿರಿ.
ಸ್ಲೋಗನ್:-
➤ Email me Murli: Receive Daily Murli on your email. Subscribe!