27 July 2021 KANNADA Murli Today | Brahma Kumaris

Read and Listen today’s Gyan Murli in Kannada

26 July 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಯೋಗಬಲದಿಂದಲೇ ಆತ್ಮದ ತುಕ್ಕು ಕಳೆಯುವುದು, ಆದ್ದರಿಂದ ಇದರಲ್ಲಿ ಎಂದೂ ಹುಡುಗಾಟಿಕೆ (ಆಲಸ್ಯ) ಮಾಡಬೇಡಿ”

ಪ್ರಶ್ನೆ:: -

ತಂದೆಯು ಮಕ್ಕಳಿಗೆ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳಲು ಯಾವ ಯುಕ್ತಿಯನ್ನು ತಿಳಿಸಿದ್ದಾರೆ, ಅದರಲ್ಲಿ ಮಾಯೆಯು ನಾಲ್ಕೂ ಕಡೆ ವಿಘ್ನವನ್ನು ಹಾಕುತ್ತದೆ?

 

ಉತ್ತರ:-

ತಂದೆಯು ಯುಕ್ತಿಯನ್ನು ತಿಳಿಸಿದ್ದಾರೆ – ಮಕ್ಕಳೇ, ನೀವು ಬ್ರಹ್ಮಾಕುಮಾರ-ಕುಮಾರಿಯರು ಒಬ್ಬ ತಂದೆಯ ಮಕ್ಕಳು ಪರಸ್ಪರ ಸಹೋದರ-ಸಹೋದರಿಯರಾಗಿದ್ದೀರಿ, ನೀವೆಂದೂ ಕುದೃಷ್ಟಿಯನ್ನು ಇಡಲು ಸಾಧ್ಯವಿಲ್ಲ. ಸಹೋದರ-ಸಹೋದರಿಯರು ವಿಕಾರದಲ್ಲಿ ಹೋಗಲು ಸಾಧ್ಯವಿಲ್ಲ. ನೀವು ಶಿವ ತಂದೆಯ ಮತದಂತೆ ನಡೆದು ಬೇಹದ್ದಿನ ಆಸ್ತಿಯನ್ನು ಪಡೆಯಬೇಕಾಗಿದೆ ಆದರೆ ಮಾಯೆಯು ಕಡಿಮೆಯಿಲ್ಲ. ನಾಲ್ಕೂ ಕಡೆ ಇದರಲ್ಲಿಯೇ ವಿಘ್ನಗಳನ್ನು ತರುತ್ತಾ ಇರುತ್ತದೆ. ನಾವು ಸಹೋದರ-ಸಹೋದರಿಯಾಗಿದ್ದೇವೆ, ಒಬ್ಬ ತಂದೆಯಿಂದ ಆಸ್ತಿಯನ್ನು ಪಡೆಯುತ್ತೇವೆ ಎಂಬುದನ್ನೇ ಮರೆತು ಹೋಗುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನಿಮ್ಮನ್ನು ಪಡೆದ ನಾನು ಜಗತ್ತನ್ನೇ ಪಡೆದೆನು…….

 

ಓಂ ಶಾಂತಿ. ಗೀತೆಯ ಒಂದು ಅಕ್ಷರವೇ ಬಹಳಷ್ಟಾಗಿದೆ. ಮಕ್ಕಳಿಗೆ ತಿಳಿದಿದೆ – ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ ಮತ್ತು ಕಲ್ಪ-ಕಲ್ಪವೂ ಸಿಗುತ್ತದೆ. ಇದನ್ನೂ ಸಹ ಮಕ್ಕಳು ತಿಳಿದುಕೊಂಡಿದ್ದೀರಿ – ಬೇಹದ್ದಿನ ಆಸ್ತಿಯು ಸಿಗುತ್ತದೆ, ಅವಶ್ಯವಾಗಿ ಅದು ಭಾರತಕ್ಕೇ ಸಿಕ್ಕಿತ್ತು, ಈಗ ಇಲ್ಲ ಪುನಃ ಸಿಗುತ್ತಿದೆ. ನೋಡುತ್ತೀರಿ, ಈಗಂತೂ ಸ್ವರ್ಗದ ಆಸ್ತಿಯಿಲ್ಲ, ರಾವಣನ ಮೂಲಕ ನರಕದ ಶಾಪವು ಸಿಗುತ್ತಿದೆ. ಶಾಪದಿಂದ ಮನುಷ್ಯರು ದುಃಖಿಯಾಗುತ್ತಾರೆ. ವರ ಅರ್ಥಾತ್ ಆಸ್ತಿಯಿಂದ ಸುಖಿಯಾಗುತ್ತಾರೆ, ಈಗ ಬ್ರಾಹ್ಮಣ ಮಕ್ಕಳಿಗೆ ಅರ್ಥವಾಗಿದೆ – ಒಬ್ಬರು ಬೇಹದ್ದಿನ ನಿರಾಕಾರ ತಂದೆ, ಇನ್ನೊಬ್ಬರು ಪ್ರಜಾಪಿತ ಬೇಹದ್ದಿನ ಸಾಕಾರ ತಂದೆ ಆಗಿದ್ದಾರೆ. ಬೇಹದ್ದಿನ ಸಾಕಾರ ತಂದೆಯು ಪ್ರಜಾಪಿತ ಬ್ರಹ್ಮನಲ್ಲದೆ ಮತ್ತ್ಯಾರೂ ಅಲ್ಲ. ಗಾಂಧೀಜಿಗೂ ಬಾಪೂಜಿ ಎಂದು ಹೇಳುತ್ತಿದ್ದರು ಆದರೆ ನಿಯಮಾನುಸಾರ ಇಡೀ ಮನುಷ್ಯ ಸೃಷ್ಟಿಗೆ ಅವರು ಬಾಪೂಜಿಯಾಗಲು ಸಾಧ್ಯವಿಲ್ಲ. ಇಡೀ ನಿರಾಕಾರಿ ವಿಶ್ವದ ಬಾಪೂಜಿಯು ಶಿವನಾಗಿದ್ದಾರೆ. ನೀವೀಗ ತಿಳಿದುಕೊಂಡಿದ್ದೀರಿ, ನಾವು ಶಿವ ತಂದೆಯ ಮಕ್ಕಳಾಗಿದ್ದೇವೆ, ಶಿವ ತಂದೆಯು ಬಂದು ಆಸ್ತಿಯನ್ನು ಕೊಡುವುದಕ್ಕಾಗಿ ನಮ್ಮನ್ನು ತಮ್ಮವರನ್ನಾಗಿ ಮಾಡಿಕೊಂಡಿದ್ದಾರೆ. ಮಧುಬನಕ್ಕೆ ಏತಕ್ಕಾಗಿ ಬರುತ್ತೀರಿ? ಶಿವ ತಂದೆಯೊಂದಿಗೆ ಮಿಲನ ಮಾಡುವುದಕ್ಕಾಗಿ. ಆದರೆ ಅವರು ನಿರಾಕಾರನಾಗಿದ್ದಾರೆ. ಕೇವಲ ಶಿವ ತಂದೆಯೆಂದು ಹೇಳಿದರೆ ಅರ್ಥವಾಗುವುದಿಲ್ಲ ಆದ್ದರಿಂದ ಬಾಪ್ದಾದಾ ಎಂದು ಹೇಳಲಾಗುತ್ತದೆ. ಶಿವ ತಂದೆ ಮತ್ತು ಬ್ರಹ್ಮಾದಾದಾ ಆಗಿದ್ದಾರೆ. ದಾದಾರವರ ಹೆಸರೇ ಬೇರೆ, ತಂದೆಯ ಹೆಸರೇ ಬೇರೆಯಾಗಿದೆ. ಆ ನಿರಾಕಾರನು ಎಲ್ಲರ ತಂದೆಯಾಗಿದ್ದಾರೆ, ಎಲ್ಲರ ತಾತನೂ ಆಗಿದ್ದಾರೆ. ಎಲ್ಲಾ ಮಕ್ಕಳಿಗೆ ಬಾಪ್ದಾದಾರವರಿಂದ ಆಸ್ತಿಯು ಅವಶ್ಯವಾಗಿ ಸಿಗುತ್ತದೆ, ಬೇಹದ್ದಿನ ತಂದೆಯಿಂದ ಎಲ್ಲರಿಗೆ ಆಸ್ತಿಯು ಸಿಗುತ್ತದೆ. ಆ ತಂದೆಯು ಎಲ್ಲರ ದುಃಖಹರ್ತ-ಸುಖಕರ್ತನಾಗಿದ್ದಾರೆ. ಸತ್ಯಯುಗದಲ್ಲಿ ಯಾವುದೇ ಮನುಷ್ಯರು ದುಃಖಿಯಾಗಿರಲು ಸಾಧ್ಯವಿಲ್ಲ, ಹೆಸರೇ ಆಗಿದೆ ಸ್ವರ್ಗ, ಅವರು ಸ್ವರ್ಗವನ್ನು ಸ್ಥಾಪಿಸುವ ಪರಮಪಿತನಾಗಿದ್ದಾರೆ. ಭಾರತವು ಎಲ್ಲದಕ್ಕಿಂತ ಹಳೆಯದಾಗಿದೆ, ಇದೇ ಹೊಸದಾಗಿತ್ತು ಆದ್ದರಿಂದ ಈಗ ಎಲ್ಲದಕ್ಕಿಂತ ಹಳೆಯದಾಗಿದೆ. ಭಾರತಕ್ಕೇ ಸತ್ಯಯುಗ, ಕಲಿಯುಗ ಎಂದು ಹೇಳಲಾಗುತ್ತದೆ. ಅವಶ್ಯವಾಗಿ ಭಾರತವು ಸ್ವರ್ಗವಾಗಿತ್ತು, ಈ ಲಕ್ಷ್ಮೀ-ನಾರಾಯಣರು ರಾಜ್ಯಭಾರ ಮಾಡುತ್ತಿದ್ದರು. ಇದು ಬುದ್ಧಿಯಲ್ಲಿದೆ. ನೀವೀಗ ಲಕ್ಷ್ಮೀ-ನಾರಾಯಣರ ಮಂದಿರಕ್ಕೆ ಹೋಗುತ್ತೀರೆಂದರೆ ಕೂಡಲೇ ಬುದ್ಧಿಯಲ್ಲಿ ಬರುತ್ತದೆ – ಅವರಿಗೆ ಈ ಆಸ್ತಿಯು ಹೇಗೆ ಸಿಕ್ಕಿತು! ಇವರು ಹೇಗೆ ಪೂಜ್ಯರಾದರು! ಯಾವಾಗ ರಾಜ್ಯ ಮಾಡಿದರು? ಯಾರ ಮುಖಾಂತರ ರಾಜ್ಯ ಪಡೆದರು? ಇದೆಲ್ಲವೂ ಬುದ್ಧಿಯಲ್ಲಿ ಬರುತ್ತದೆ. ಮೊದಲು ಲಕ್ಷ್ಮೀ-ನಾರಾಯಣರ ಮಂದಿರಕ್ಕೆ ಹೋಗುತ್ತಿದ್ದಿರಿ, ಮಾಲೆಯನ್ನು ಜಪಿಸುತ್ತಿದ್ದಿರಿ, ಅವರ ಕರ್ತವ್ಯದ ಬಗ್ಗೆ ಏನೂ ತಿಳಿದಿರಲಿಲ್ಲ. ಈಗ ಕೇವಲ ನಿಮ್ಮ ಬುದ್ಧಿಯಲ್ಲಿದೆ, ನಿಮ್ಮಲ್ಲಿಯೂ ನಂಬರ್ವಾರ್. ನೀವೀಗ ಲಕ್ಷ್ಮೀ-ನಾರಾಯಣರ ಮಂದಿರದಲ್ಲಿ ಹೋಗಿ ನಿಂತುಕೊಂಡ ಕೂಡಲೇ ಹರ್ಷಿತರಾಗುತ್ತೀರಿ, ಏಕೆಂದರೆ ನಿಮ್ಮ ಬುದ್ಧಿಯಲ್ಲಿದೆ – ಇವರು ಈ ಪ್ರಾಲಬ್ಧವನ್ನು ಹೇಗೆ ಪಡೆದಿದ್ದರು, ಸಂಗಮಯುಗದಲ್ಲಿಯೇ ಪಡೆದರು ಏಕೆಂದರೆ ಸಂಗಮ ಯುಗದಲ್ಲಿಯೇ ಹಳೆಯ ಪ್ರಪಂಚ ಪರಿವರ್ತನೆ ಆಗಬೇಕಾಗಿದೆ. ಸಂಗಮದಲ್ಲಿಯೇ ತಂದೆಯು ಬಂದು ರಾಜಯೋಗವನ್ನು ಕಲಿಸಿದ್ದರು, ಇದನ್ನೂ ತಿಳಿದುಕೊಂಡಿದ್ದೀರಿ – ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿ ಇವರು ಬ್ರಹ್ಮನಾಗಿದ್ದರು. ಬ್ರಹ್ಮಾರವರ ಮೂಲಕ ವಿಷ್ಣು ಪುರಿಯ ಸ್ಥಾಪನೆಯಾಗುತ್ತದೆ. ಈ ಲಕ್ಷ್ಮೀ-ನಾರಾಯಣರೇ ಹಿಂದಿನ ಜನ್ಮದಲ್ಲಿ ಬ್ರಹ್ಮಾ-ಸರಸ್ವತಿಯಾಗಿದ್ದರು, ಬ್ರಹ್ಮನ ಜೊತೆಗೆ ಬ್ರಾಹ್ಮಣ-ಬ್ರಾಹ್ಮಣಿಯರೂ ಇರುತ್ತಾರೆ. ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತಲ್ಲವೆ. ಅವಶ್ಯವಾಗಿ ಪ್ರಜಾಪಿತನೂ ಇರುವರು. ನೀವು ತಿಳಿದುಕೊಂಡಿದ್ದೀರಿ – ನಾವು ಪುರುಷಾರ್ಥ ಮಾಡುತ್ತಿದ್ದೇವೆ, ಯಾರು ಕಲ್ಪದ ಹಿಂದೆ ಪುರುಷಾರ್ಥ ಮಾಡಿದ್ದಾರೆಯೋ ಅವರನ್ನು ನಾವು ಸಾಕ್ಷಿಯಾಗಿ ನೋಡುತ್ತೇವೆ. ಒಂದು ರಾಜ್ಯ ಮನೆತನವಿರುತ್ತದೆ, ಇನ್ನೊಂದು ಪ್ರಜಾ ಮನೆತನವಿರುತ್ತದೆ. ಪ್ರಜೆಗಳಲ್ಲಿಯೂ ಕೆಲವರು ಬಹಳ ಸಾಹುಕಾರರಿರುತ್ತಾರೆ, ಕೆಲವರು ಕಡಿಮೆ. ರಾಜರಲ್ಲಿಯೂ ಕೆಲವರು ಬಹಳ ಸಾಹುಕಾರರು, ಕೆಲವರು ಕಡಿಮೆ ಸಾಹುಕಾರರಿರುತ್ತಾರೆ. ಇವರು ಈ ರಾಜ್ಯವನ್ನು ಹೇಗೆ ಪಡೆದರೆಂದು ನೀವು ಲಕ್ಷ್ಮೀ-ನಾರಾಯಣರ ಮಂದಿರದಲ್ಲಿ ಯಾರಿಗಾದರೂ ತಿಳಿಸಬಲ್ಲಿರಿ. ಈಗ ಪುನಃ ಅವರೇ ತಮ್ಮ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಿದ್ದಾರೆ, ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಎಷ್ಟು ಸಹಜವಾಗಿದೆ. ಅಂಬಾ ಯಾರೆಂಬುದನ್ನು ತಿಳಿದುಕೊಂಡಿಲ್ಲ, ನೀವು ಹೇಳುತ್ತೀರಿ, ಇವರಂತೂ ಜಗದಂಬೆಯಾಗಿದ್ದಾರೆ, ಕಲ್ಪದ ಮೊದಲೂ ಜಗದಂಬಾ ಜಗತ್ಪಿತರು ಇದ್ದರು. ಅವರ ಮಕ್ಕಳು ನಾವೂ ಇದ್ದೆವು, ಸಂಗಮದಲ್ಲಿ ತಂದೆಯು ರಾಜಯೋಗವನ್ನು ಕಲಿಸುತ್ತಿದ್ದಾರೆ. ಜಗದಂಬೆಯ ಮಕ್ಕಳು ಅನೇಕರಿದ್ದಾರೆ ಆದರೆ ಇಷ್ಟೊಂದು ಮಂದಿಯನ್ನು ಇಲ್ಲಿಯೇ ಇರಿಸಿಕೊಳ್ಳಲು ಸಾಧ್ಯವಿಲ್ಲ.

ಈಗ ನಿಮಗೆ ಜ್ಞಾನದ ಮೂರನೇ ನೇತ್ರವು ಸಿಕ್ಕಿದೆ. ತಂದೆಯು ಜ್ಞಾನ ಸಾಗರನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಮಕ್ಕಳಿಗೆ ಜ್ಞಾನವನ್ನೇ ಕೊಡುತ್ತಾರೆ. ಅವರಿಗೆ ಮನುಷ್ಯನೆಂದಾಗಲಿ, ದೇವತೆಯೆಂದಾಗಲಿ ಹೇಳುವುದಿಲ್ಲ. ಅವರಿಗೆ ಪರಮಾತ್ಮನೆಂದೇ ಹೇಳಲಾಗುತ್ತದೆ. ನೀವು ಯಾರದೇ ಮಂದಿರದಲ್ಲಿ ಹೋಗುತ್ತೀರೆಂದರೆ ಅವರ ಚರಿತ್ರೆಯನ್ನು ತಿಳಿಸಬಲ್ಲಿರಿ. ರಾಮನ ಚರಿತ್ರೆಯನ್ನು ನೀವು ತಿಳಿಸಬಲ್ಲಿರಿ, ಚಂದ್ರವಂಶಿ ಮನೆತನವು ಈಗ ಸ್ಥಾಪನೆಯಾಗುತ್ತಿದೆ. ಬ್ರಹ್ಮನ ಮೂಲಕ ಬ್ರಾಹ್ಮಣ ಧರ್ಮದ ಸ್ಥಾಪನೆಯೂ ಆಗುತ್ತದೆ. ಬ್ರಹ್ಮನ ಹೆಸರು ಎಷ್ಟು ಪ್ರಸಿದ್ಧವಾಗಿದೆ! ತಂದೆಯು ಬ್ರಹ್ಮನ ಮೂಲಕ ಬ್ರಾಹ್ಮಣರನ್ನು ರಚಿಸುತ್ತಾರೆ. ನೀವು ಬ್ರಹ್ಮಾಕುಮಾರ-ಕುಮಾರಿಯರಾಗಿರುವುದರಿಂದ ತಿಳಿದುಕೊಂಡಿದ್ದೀರಿ, ನಾವು ಒಬ್ಬ ತಂದೆಯ ಮಕ್ಕಳು ಪರಸ್ಪರ ಸಹೋದರ-ಸಹೋದರಿಯರಾಗಿದ್ದೇವೆ ಅಂದಮೇಲೆ ವಿಕಾರಿ ದೃಷ್ಟಿಯನ್ನು ಇಡಲು ಸಾಧ್ಯವಿಲ್ಲ. ಸಹೋದರ-ಸಹೋದರಿಯು ವಿಕಾರದಲ್ಲಿ ಹೋಗಲು ಸಾಧ್ಯವಿಲ್ಲ. ತಂದೆಯು ಈ ಯುಕ್ತಿಯನ್ನು ರಚಿಸಿದ್ದಾರೆ – ಡ್ರಾಮಾ ಅನುಸಾರ ನೀವು ಬ್ರಹ್ಮಾಕುಮಾರರು ನಾನೂ ಬ್ರಹ್ಮಾಕುಮಾರಿಯಾಗಿದ್ದೇನೆ. ವಾಸ್ತವದಲ್ಲಿ ಇಡೀ ಪ್ರಪಂಚವೇ ಬ್ರಹ್ಮಾಕುಮಾರ-ಕುಮಾರಿಯರದಾಗಿದೆ ಆದರೆ ನಾವೂ ಸಹ ಬಿ.ಕೆ., ಆಗಿದ್ದೇವೆ ಎಂಬುದನ್ನು ಅವರು ತಿಳಿದುಕೊಂಡಿಲ್ಲ. ನಾವು ಶಿವ ತಂದೆಯ ಮತದಿಂದ ಬೇಹದ್ದಿನ ಆಸ್ತಿಯನ್ನು ಪಡೆಯುತ್ತಿದ್ದೇವೆ. ಮಾಯೆಯೂ ಕಡಿಮೆಯಿಲ್ಲ, ನಾಲ್ಕೂ ಕಡೆಯಿಂದ ವಿಘ್ನ ಹಾಕುತ್ತಿರುತ್ತದೆ. ನಾವು ಸಹೋದರ-ಸಹೋದರಿಯರಾಗಿದ್ದೇವೆ. ಒಬ್ಬ ತಂದೆಯಿಂದ ಆಸ್ತಿಯನ್ನೂ ತೆಗೆದುಕೊಳ್ಳುತ್ತೇವೆ ಎಂಬುದನ್ನೇ ಮರೆತು ಹೋಗುತ್ತಾರೆ. ಇದನ್ನು ನೀವು ಚೆನ್ನಾಗಿ ತಿಳಿದುಕೊಂಡಿದ್ದೀರಿ, ಸತ್ಯಯುಗದಲ್ಲಿ ಒಂದೇ ಧರ್ಮವಿರುತ್ತದೆ. ಮತ್ತೆಲ್ಲಾ ಧರ್ಮಗಳು ಸಮಾಪ್ತಿಯಾಗಲಿದೆ. ಇದು ಮಕ್ಕಳಿಗೆ ಗೊತ್ತಿದೆ, ಇದೇನೂ ಹೊಸ ಮಾತಲ್ಲ. ಪ್ರತೀ 5000 ವರ್ಷಗಳ ನಂತರ ಈ ಚಕ್ರವು ಸುತ್ತುತ್ತದೆ, ತಿಥಿ-ತಾರೀಖನ್ನು ಬರೆದಿದ್ದಾರೆ. ಅಂದಾಗ ಇದೂ ಬುದ್ಧಿಯಲ್ಲಿರಬೇಕು – ನಾವು ಶಿವ ತಂದೆಯಿಂದ ಈ ಯುಕ್ತಿಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಲಕ್ಷ್ಯವಂತೂ ಸಿಕ್ಕಿದೆಯಲ್ಲವೆ, ತಂದೆಯನ್ನು ನೆನಪು ಮಾಡಿ, ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ನೆನಪು ಅರ್ಥಾತ್ ಯೋಗಬಲದಿಂದಲೇ ತುಕ್ಕು ಕಳೆಯುವುದು, ಇದರಲ್ಲಿ ಯಾವುದೇ ಆಲಸ್ಯವಿರಬಾರದು ಆದ್ದರಿಂದ ಮುರುಳಿಗಳು ಸಿಗುತ್ತವೆ. ನಿಶ್ಚಯ ಬುದ್ಧಿಯವರಾಗಿದ್ದಾರೆ. ಎಲ್ಲಿ ಬೇಕಾದರೂ ಹೋಗಬಹುದು, ಒಂದುವೇಳೆ ಮುರುಳಿ ಸಿಗಲಿಲ್ಲವೆಂದರೂ ಸಹ ನಾವು ತಂದೆಯವರಾಗಿ ಬಿಟ್ಟಿದ್ದೇವೆ ಎಂಬುದಂತೂ ಬುದ್ಧಿಯಲ್ಲಿರುತ್ತದೆಯಲ್ಲವೆ. ತಂದೆಯು ತಿಳಿಸುತ್ತಾರೆ – ನೀವಾತ್ಮರು ತಮೋಪ್ರಧಾನ ಬುದ್ಧಿಯವರಾಗಿದ್ದೀರಿ, ನೀವೀಗ ತಂದೆಯನ್ನು ನೆನಪು ಮಾಡಿದರೆ ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ, ಈ ಮಹಾಮಂತ್ರವನ್ನು ಒಬ್ಬ ತಂದೆಯೇ ತಿಳಿಸುತ್ತಾರೆ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ತಂದೆಯೇ ಹೇಳುತ್ತಾರೆ – ಮಧುರಾತಿ ಮಧುರ ಮಕ್ಕಳೇ, ನೆನಪಿನಿಂದಲೇ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ. ಈ ಅಕ್ಷರವಿದೆ ಆದರೆ ಇದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ನೀವೀಗ ತಿಳಿದುಕೊಳ್ಳುತ್ತೀರಿ, ಅವಶ್ಯವಾಗಿ ಕಲ್ಪದ ಮೊದಲೂ ಸಹ ತಂದೆಯು ಈ ಶಬ್ಧವನ್ನು ತಿಳಿಸಿದ್ದರು – ದೇಹದ ಎಲ್ಲಾ ಧರ್ಮಗಳನ್ನು ಬಿಟ್ಟು ತಮ್ಮನ್ನು ಆತ್ಮನೆಂದು ತಿಳಿಯಿರಿ, ಇವೆಲ್ಲವೂ ದೇಹದ ಧರ್ಮಗಳಾಗಿದೆಯಲ್ಲವೆ. ಎಲ್ಲರಿಗೆ ತಂದೆಯು ಒಬ್ಬರೇ ಆಗಿದ್ದಾರೆ, ಎಲ್ಲಾ ಆತ್ಮರು ಆ ಒಬ್ಬ ತಂದೆಯನ್ನು ಕರೆಯುತ್ತಾರೆ. ಪೋಪನೂ ಸಹ ಭಗವಂತನನ್ನೇ ನೆನಪು ಮಾಡುತ್ತಾರೆ. ಓ ಗಾಡ್ ಫಾದರ್ ದಯೆ ತೋರಿಸಿ, ಈ ಮನುಷ್ಯರ ಕ್ರೋಧಿ ಬುದ್ಧಿಗಳನ್ನು ಪರಿವರ್ತನೆ ಮಾಡಿ, ಅದರಿಂದ ಇವರು ಪರಸ್ಪರ ಹೊಡೆದಾಡದಿರಲಿ ಎಂದು ಹೇಳುತ್ತಾರೆ. ತಂದೆಯನ್ನೇ ನೆನಪು ಮಾಡುತ್ತಾರಲ್ಲವೆ, ಮತ್ತ್ಯಾರನ್ನೂ ನೆನಪು ಮಾಡುವುದಿಲ್ಲ. ಬಂದು ಪತಿತರನ್ನು ಪಾವನ ಮಾಡಿರಿ ಎಂದು ಶಿವ ತಂದೆಯನ್ನೇ ಕರೆಯುತ್ತಾರೆ. ಪಾವನರಾಗಿ ಬಿಟ್ಟರೆ ಮತ್ತೆ ಈ ಛೀ ಛೀ ರಾವಣನ ಪ್ರಪಂಚದಲ್ಲಿರಲು ಸಾಧ್ಯವಿಲ್ಲ. ಅವಶ್ಯವಾಗಿ ಹೊಸ ಪ್ರಪಂಚವು ಬೇಕಾಗುತ್ತದೆ. ಕಲಿಯುಗದಿಂದ ಪರಿವರ್ತನೆಯಾಗಿ ಸತ್ಯಯುಗವೇ ಆಗುತ್ತದೆಯಲ್ಲವೆ ಆದರೆ ಇಷ್ಟನ್ನು ಮನುಷ್ಯರು ತಿಳಿದುಕೊಳ್ಳುವುದಿಲ್ಲ. ಕಲಿಯುಗವಂತೂ ಕಲಿಯುಗವಾಗಿಯೇ ನಡೆಯುತ್ತಾ ಇರುತ್ತದೆ ಎಂದು ಒಬ್ಬ ವೈದ್ಯರು ಹೇಳುತ್ತಿದ್ದರು. ಅರೆ! ಸದಾ ಕಲಿಯುಗವೇ ಹೇಗೆ ನಡೆಯುತ್ತದೆ! ಈ ಕಲಿಯುಗವು ಚೆನ್ನಾಗಿದೆಯೇ? ಆದರೆ ಅವರಿಗೆ ಅರ್ಥವಾಗುವುದಿಲ್ಲ. ಕೇವಲ ಭಾವನೆಯಿರುವ ಕಾರಣ ಅನ್ಯರನ್ನೂ ಕರೆದುಕೊಂಡು ಬರುತ್ತಾರೆ, ಅವರಿಗೆ ಬಾಣವು ನಾಟುವುದಿಲ್ಲ, ಯಾರಾದರೂ ಅವರ ಜೊತೆ ಬರುವವರಿಗೆ ಬಾಣವು ನಾಟಿದರೂ ಸಹ ಅಲ್ಪಸ್ವಲ್ಪ ದಲ್ಲಾಳಿ ಫಲ ಸಿಗುವುದು, ಸ್ವರ್ಗದಲ್ಲಿ ಬಂದು ಬಿಡುವರು. ತಂದೆಯಿಂದ ಸ್ವಲ್ಪ ಕೇಳಿದರೂ ಸಹ ಸ್ವರ್ಗದಲ್ಲಿ ಅವಶ್ಯವಾಗಿ ಹೋಗುತ್ತಾರೆ. ಈಗಂತೂ ಸ್ವರ್ಗದ ರಚಯಿತ ತಂದೆಯ ಸನ್ಮುಖದಲ್ಲಿ ಬಂದು ಕುಳಿತಿದ್ದೀರಿ. ತಂದೆಯು ತಿಳಿಸುತ್ತಾರೆ – ನಾನು ಎಲ್ಲರ ತಂದೆಯಾಗಿದ್ದೇನೆ, ಶಿವ ತಂದೆಯು ಹೇಗೆ ಬರುವರು ಎಂಬುದನ್ನು ಯಾರೂ ಒಪ್ಪುವುದಿಲ್ಲ. ಅರೆ! ಕೆಲವು ಆತ್ಮಗಳೇ ಬರುತ್ತಾರೆ ಎಂದಮೇಲೆ ನಾನೇಕೆ ಬರುವುದಿಲ್ಲ. ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದರಲ್ಲಿ ಹೋಗುತ್ತದೆ ಅಂದಮೇಲೆ ನಾನು ಬರಲು ಸಾಧ್ಯವಿಲ್ಲವೆ? ಇಲ್ಲದಿದ್ದರೆ ನಾನು ಹೇಗೆ ಬರಲಿ! ಹೇ ಪತಿತ-ಪಾವನ ತಂದೆಯೇ ಬಂದು ಪತಿತರಿಂದ ಪಾವನ ಮಾಡಿ ಎಂದು ಕರೆಯುತ್ತಾರೆ. ಇದಕ್ಕೆ ತಂದೆಯು ತಿಳಿಸುತ್ತಾರೆ – ನಾನು ಭಾರತದಲ್ಲಿಯೇ ಬರುತ್ತೇನೆ, ಕಲ್ಪ-ಕಲ್ಪದ ಸಂಗಮದಲ್ಲಿ ಒಂದೇ ಬಾರಿ ಬರುತ್ತೇನೆ, ಯಾವಾಗ ನೀವು ಪೂರ್ಣ 84 ಜನ್ಮಗಳನ್ನು ಮುಗಿಸುತ್ತೀರೋ ಆಗ ನಾನು ಬರುತ್ತೇನೆ. ನೀವು ಮಕ್ಕಳಿಗೆ ನಿಶ್ಚಯವಿದೆ – ತಂದೆಯು ಪುನಃ ಆಸ್ತಿಯನ್ನು ಕೊಡಲು ಬಂದಿದ್ದಾರೆ. ತಂದೆಯು ಹೇಳುತ್ತಾರೆ – ನನ್ನ ಕರ್ತವ್ಯವೇ ಆಗಿದೆ, ಹಳೆಯ ಪ್ರಪಂಚವನ್ನು ಪರಿವರ್ತನೆ ಮಾಡಿ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುವುದು ಆದ್ದರಿಂದಲೇ ಹೊಸ ಪ್ರಪಂಚದ ಸ್ಥಾಪನೆ, ಹಳೆಯ ಪ್ರಪಂಚದ ವಿನಾಶ ಎಂದು ಗಾಯನವಿದೆ. ನಂತರ ನೀವು ಪಾಲನೆ ಮಾಡುತ್ತೀರಿ. ಜ್ಞಾನದ ಪ್ರಕಾಶತೆ ಸಿಕ್ಕಿದೆಯಲ್ಲವೆ. ಕಾಳಿಯ ಮಂದಿರವನ್ನು ನೋಡುತ್ತೀರೆಂದರೆ ಇದು ಸುಳ್ಳು ಚಿತ್ರವೆಂದು ತಿಳಿದುಕೊಳ್ಳುತ್ತೀರಿ. ಕಾಳಿಯು ಅವಶ್ಯವಾಗಿ ಜಗದಂಬೆಯಾಗಿದ್ದಾರೆ ಆದರೆ ಇಂತಹ ಭಯಾನಕ ರೂಪವಂತೂ ಇಲ್ಲ. ಬಂಗಾಳದಲ್ಲಿ ಕಾಳಿಯ ಮುಂದೆ ಬಲಿ ಕೊಡುತ್ತಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ಲಕ್ಷಾಂತರ ಮಂದಿ ಜಗದಂಬೆಯ ಮಂದಿರಕ್ಕೆ ಹೋಗುತ್ತಾರೆ. ಸದಾ ಮೇಳವಿದ್ದಂತೆ ಇರುತ್ತದೆ. ಚಿಕ್ಕದಾದ ಮೂರ್ತಿಯನ್ನು ಇಟ್ಟಿದ್ದಾರಲ್ಲವೆ. ಜಗದಂಬೆಯೆಂದು ಹೆಸರನ್ನಿಟ್ಟಿದ್ದಾರೆ ಅಂದಾಗ ಜಗದಂಬೆಯಂತೂ ಒಬ್ಬರೇ ಇರಬೇಕಲ್ಲವೆ. ಸಿಂಧ್ನಲ್ಲಿ ಕಾಳಿಯ ಮಂದಿರವನ್ನು ಹೇಗೆ ಕಟ್ಟಿಸಿದ್ದರು, ಒಂದು ಬಾರಿ ಕೋಟೆಯಲ್ಲಿ ಅಣುಬಾಂಬ್ನ ಸ್ಫೋಟವಾಯಿತು, ಆಗ ಒಬ್ಬ ಕಾವಲುಗಾರನು ಹೇಳಿದನು – ಕಾಳಿ ಮಾತೆಯು ಕೋಪಿಸಿಕೊಂಡಿದ್ದಾರೆ ಎಂದು ಆಗ ಅವರು ಬಂದು ಅಲ್ಲಿ ಕಾಳಿಯ ಮಂದಿರವನ್ನು ಕಟ್ಟಿಸಿ ಬಿಟ್ಟರು. ವಾಸ್ತವದಲ್ಲಿ ಕಾಳಿಯು ಯಾರಾಗಿದ್ದಾರೆ! ಏನನ್ನೂ ತಿಳಿದುಕೊಂಡಿಲ್ಲ. ಈಗ ನಿಮಗೆ ಜ್ಞಾನ ಸಿಕ್ಕಿದೆ, ನೀವು ತಿಳಿದುಕೊಂಡಿರದ ಮಾತೇ ಇಲ್ಲ. ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ತಿಳಿದುಕೊಂಡಿದ್ದೀರಿ ಅಂದಮೇಲೆ ಅದಕ್ಕಾಗಿ ಪೂರ್ಣ ಪುರುಷಾರ್ಥ ಮಾಡಬೇಕಲ್ಲವೆ.

ಮೊಟ್ಟ ಮೊದಲನೆಯದಾಗಿ ಯಾವಾಗ ಕುಮಾರ-ಕುಮಾರಿಯು ವಿವಾಹ ಮಾಡಿಕೊಳ್ಳುವರೋ ಆಗಲೇ ದುಃಖವು ಆರಂಭವಾಗುತ್ತದೆ, ನಿಮಗೆ ವಿವಾಹ ಮಾಡಿಕೊಳ್ಳುವ ಸಂಕಲ್ಪವೂ ಸಹ ಎಂದಿಗೂ ಬರಬಾರದು. ಈಗ ತಂದೆಯು ತಿಳಿಸುತ್ತಾರೆ – ಈ ರಾವಣ ರಾಜ್ಯವು ಸಮಾಪ್ತಿಯಾಗಲಿದೆ, ಇದು ವಿಕಾರಿ ಗೃಹಸ್ಥ ವ್ಯವಹಾರವಾಗಿದೆ. ದೇವಿ-ದೇವತೆಗಳಿಗಾಗಿ ಗಾಯನ ಮಾಡುತ್ತಿರುತ್ತಾರೆ, ಈ ದೇವತೆಗಳನ್ನೂ ನಿರ್ವಿಕಾರಿಗಳನ್ನಾಗಿ ಮಾಡುವವರು ಯಾರೆಂಬುದು ಯಾರಿಗೂ ತಿಳಿದಿರುವುದಿಲ್ಲ. ಸತ್ಯಯುಗವು ಸಂಪೂರ್ಣ ನಿರ್ವಿಕಾರಿ ಪ್ರಪಂಚವಾಗಿದೆ. ಅಲ್ಲಿಯೂ ವಿಕಾರಗಳಿತ್ತು ಎಂದು ಶಾಸ್ತ್ರಗಳಲ್ಲಿ ತೋರಿಸಿಬಿಟ್ಟಿದ್ದಾರೆ ಆದರೆ ಅದು ಸಂಪೂರ್ಣ ನಿರ್ವಿಕಾರಿ ಪ್ರಪಂಚವಾಗಿರುತ್ತದೆ. ವಿಕಾರಿ ಪ್ರಪಂಚ ಮತ್ತು ನಿರ್ವಿಕಾರಿ ಪ್ರಪಂಚದಲ್ಲಿ ಎಷ್ಟೊಂದು ಅಂತರವಿದೆ! ಈ ಮಾತುಗಳು ಮತ್ತ್ಯಾರ ಬುದ್ಧಿಯಲ್ಲಿಯೂ ಇಲ್ಲ. ನೀವು ತಿಳಿದುಕೊಂಡಿದ್ದೀರಿ – ಈ ಲಕ್ಷ್ಮೀ-ನಾರಾಯಣರ ರಾಜ್ಯವಿದ್ದಾಗ ಕೆಲವರೇ ಮನುಷ್ಯರಿದ್ದರು, ಒಂದೇ ಧರ್ಮವಿತ್ತು ನಂತರ ಇದು ವೃದ್ಧಿಯಾಗಿದೆ. ಪೂರ್ಣ ಚಕ್ರವನ್ನು ಸುತ್ತಬೇಕಾಗಿದೆ ಆದ್ದರಿಂದಲೇ ಇಡೀ ಪೃಥ್ವಿಯನ್ನು ಸುತ್ತಿದರೆಂದು ಹೇಳುತ್ತಾರೆ. ಸಮುದ್ರವನ್ನಂತೂ ಸುತ್ತಲು ಸಾಧ್ಯವಿಲ್ಲ, ಸತ್ಯಯುಗದಲ್ಲಿ ಕೆಲವರೇ ಇರುವ ಕಾರಣ ಎಷ್ಟೊಂದು ಕಡಿಮೆ ಭೂಮಿಯನ್ನು ತೆಗೆದುಕೊಳ್ಳುತ್ತಾರೆ. ಈಗ ಮನುಷ್ಯ ಸೃಷ್ಟಿಯ ಎಲ್ಲೆಯು ಪೂರ್ಣವಾಗಲಿದೆ. ಮೇಲೆ ಉಳಿದುಕೊಂಡಿರುವ ಆತ್ಮಗಳೆಲ್ಲರೂ ಬರುತ್ತಿದ್ದಾರೆ, ಜನಸಂಖ್ಯೆಯು ವೃದ್ಧಿಯಾಗುತ್ತಲೇ ಇದೆ. ಯಾವಾಗ ಮೇಲಿನಿಂದ ಎಲ್ಲಾ ಆತ್ಮರು ಬರುವುದು ಮುಕ್ತಾಯವಾಗುವುದೋ, ನೀವು ಕರ್ಮಾತೀತ ಸ್ಥಿತಿಯನ್ನು ಹೊಂದುವಿರೋ ಆಗ ಮತ್ತೆ ಆತ್ಮಗಳು ಶರೀರ ಬಿಟ್ಟು ಹೋಗಬೇಕಾಗಿದೆ. ಅವರು ಬರುತ್ತಾರೆ ಮತ್ತು ನೀವು ಹೋಗುತ್ತೀರಿ. ಕೆಲಕೆಲವರೇ ಬರುತ್ತಾ ಇದ್ದಾರೆ, ಇದು ತಿಳಿದುಕೊಳ್ಳುವ ಮಾತುಗಳಲ್ಲವೆ. ನಾವು ಮೊಟ್ಟ ಮೊದಲಿಗೆ ಹೋಗಿ ಅಲ್ಲಿರುತ್ತೇವೆ. ನಾವಿರಬೇಕಾದರೆ ಅವರು ಯಾರೂ ಇರುವುದಿಲ್ಲ. ಇವು ವಿಸ್ತಾರದ ಮಾತುಗಳಾಗಿವೆ. ಮಕ್ಕಳಿಗೆ ಪುನಃ ತಂದೆಯು ತಿಳಿಸುತ್ತಾರೆ – ತಮ್ಮ ಪ್ರಿಯ ತಂದೆಯನ್ನು ನೆನಪು ಮಾಡಿರಿ, ತಂದೆಯನ್ನು ನೆನಪು ಮಾಡುವುದರಲ್ಲಿಯೇ ನಿಮಗೆ ಲಾಭವಿದೆ. ಈ ಚರಿತ್ರೆ-ಭೂಗೋಳವನ್ನಂತೂ ಮನುಷ್ಯರು ಬಹಳ ಓದುತ್ತಾರೆ. ಬಹಳ ದೂರ-ದೂರದವರೆಗೆ ಹೋಗುತ್ತಾರೆ, ಚಂದ್ರಗೃಹಕ್ಕೂ ಹೋಗುತ್ತಾರೆ. ಇದು ವಿಜ್ಞಾನದ ಅಭಿಮಾನವಾಗಿದೆ. ಬಹಳ ಅತಿಯಲ್ಲಿ ಹೋಗುತ್ತಾರೆ ಅದರೆ ಚಂದ್ರಗೃಹದಲ್ಲಿ ಏನಾದರೂ ಇದೆಯೇ? ನೀವಂತೂ ಸೂರ್ಯ-ಚಂದ್ರನಿಗಿಂತಲೂ ದೂರ ಹೋಗುತ್ತೀರಿ, ಈ ಜ್ಞಾನವು ಈಗ ನಿಮ್ಮ ಬುದ್ಧಿಯಲ್ಲಿದೆ. ತಿಳಿದುಕೊಳ್ಳುತ್ತೀರಿ- ಡ್ರಾಮಾನುಸಾರ ತಂದೆಯು ಇವೆಲ್ಲವನ್ನೂ ತಿಳಿಸುತ್ತಾರೆ. ತಂದೆಯೇ ಹೇಳುತ್ತಾರೆ – ನಾನು ನಿಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡುತ್ತೇನೆ. ಇದು ನನ್ನ ಪಾತ್ರವಾಗಿದೆ. ಭಕ್ತಿಮಾರ್ಗದಲ್ಲಿಯೂ ಈ ನನ್ನ ಪಾತ್ರವಿರುತ್ತದೆ. ಇದು ಡ್ರಾಮಾ ಅಲ್ಲವೆ. ಹೇಗೆ ನೀವು ಪಾತ್ರಧಾರಿಗಳಾಗಿದ್ದೀರೋ ಹಾಗೆಯೇ ನಾನೂ ಪಾತ್ರಧಾರಿಯಾಗಿದ್ದೇನೆ. ನಿಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡುವುದೇ ನನ್ನ ಕರ್ತವ್ಯವಾಗಿದೆ. ಯಾರಾದರೂ ಸ್ವಲ್ಪ ಮಾಡಿದರೂ ಸಹ ಅವರಿಗೆ ಮಹಿಮೆ ಆಗುತ್ತದೆಯಲ್ಲವೆ. ಈ ಲಕ್ಷ್ಮೀ-ನಾರಾಯಣರಿಗೆ ಎಷ್ಟೊಂದು ಮಹಿಮೆಯಿದೆ, ಆದರೆ ಇವರನ್ನು ಅಷ್ಟು ಯೋಗ್ಯರನ್ನಾಗಿ ಯಾರು ಮಾಡಿದರು! ಇವರು ಸುಖಧಾಮದ ಮಾಲೀಕರಾಗಿದ್ದರು, ಈಗಂತೂ ಅನೇಕ ಪ್ರಕಾರದ ದುಃಖಗಳಿವೆ. ಇಂದು ಯಾರಾದರೂ ಶರೀರ ಬಿಡುತ್ತಾರೆ, ಜಗಳವಾಗುತ್ತದೆ. ಭಲೆ ಯಾರ ಬಳಿಯಾದರೂ ಲಕ್ಷ, ಕೋಟಿಗಳಷ್ಟು ಇರಬಹುದು ಆದರೆ ಒಂದುವೇಳೆ ಯಾವುದೇ ಖಾಯಿಲೆ ಬಂದು ಬಿಟ್ಟರೆ ಏನು ಮಾಡುವುದು! ಬಿರ್ಲಾದವರ ಬಳಿ ಎಷ್ಟೊಂದು ಹಣವಿದೆ! ಒಂದು ಜನ್ಮದಲ್ಲಿ ಬಹಳ ಹಣವಿರುತ್ತದೆ ಆದರೆ ಯಾವುದೇ ದುಃಖವಿಲ್ಲದಂತಹ ಮನುಷ್ಯರು ಯಾರೂ ಇಲ್ಲ. ಎಲ್ಲರಿಗೆ ಯಾವುದಾದರೊಂದು ಪ್ರಕಾರದ ದುಃಖವು ಇದ್ದೇ ಇರುತ್ತದೆ. ಈಗಂತೂ ಈ ಹಣ ಇತ್ಯಾದಿಯೆಲ್ಲವೂ ಮಣ್ಣು ಪಾಲಾಗಲಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಕರ್ಮಾತೀತ ಸ್ಥಿತಿಯನ್ನು ಪ್ರಾಪ್ತಿ ಮಾಡಿಕೊಂಡು ಮನೆಗೆ ಹಿಂತಿರುಗಿ ಹೋಗಬೇಕಾಗಿದೆ, ಆದರೆ ಯಾವಾಗ ಆತ್ಮರ ಬರುವಿಕೆಯು ಮುಕ್ತಾಯವಾಗುವುದೋ ಆಗಲೇ ಹಿಂತಿರುಗಿ ಹೋಗುತ್ತೀರಿ. ಈ ವಿಸ್ತಾರವನ್ನು ಬುದ್ಧಿಯಲ್ಲಿಟ್ಟುಕೊಂಡು ಒಬ್ಬ ಬಬುಲ್ ತಂದೆಯನ್ನು ಪ್ರೀತಿಯಿಂದ ನೆನಪು ಮಾಡಬೇಕಾಗಿದೆ.

2. ಜ್ಞಾನದ ಬೆಳಕು ಸಿಕ್ಕಿದೆ, ಆದ್ದರಿಂದ ನಿಶ್ಚಯ ಬುದ್ಧಿಯವರಾಗಿ ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಎಲ್ಲಿದ್ದರೂ ಸಹ ನೆನಪಿನ ಬಲದಿಂದ ಆತ್ಮವನ್ನು ತಮೋಪ್ರಧಾನದಿಂದ ಸತೋಪ್ರಧಾನರಾಗುವ ಪುರುಷಾರ್ಥ ಮಾಡಬೇಕಾಗಿದೆ.

ವರದಾನ:-

ಸಮಯವು ತಮ್ಮ ರಚನೆ ಆಗಿದೆ, ತಾವು ಮಾಸ್ಟರ್ ರಚೈತರಾಗಿದ್ದೀರಿ. ರಚೈತನು ರಚನೆಯ ಆಧಾರದ ಮೇಲೆ ಆಧಾರಿತವಾಗಿರುವುದಿಲ್ಲ. ರಚೈತನು ರಚನೆಯನ್ನು ಅಧೀನ ಮಾಡುವನು, ಆದ್ದರಿಂದ ಈ ರೀತಿ ಎಂದಿಗೂ ಯೋಚಿಸದಿರಿ – ಸಮಯವೇ ಸ್ವತಹವಾಗಿ ಸಂಪೂರ್ಣರನ್ನಾಗಿ ಮಾಡಿ ಬಿಡುವುದು. ತಾವು ಸಂಪೂರ್ಣರಾಗಿ ಸಮಯವನ್ನು ಸಮೀಪದಲ್ಲಿ ತರಬೇಕಾಗಿದೆ. ಅದೇರೀತಿ ಯಾವುದೇ ವಿಘ್ನವು ಬಂದಿತೆಂದರೆ, ಸಮಯದನುಸಾರ ಅವಶ್ಯವಾಗಿ ಹೋಗುವುದು ಆದರೆ ಸಮಯಕ್ಕೆ ಮೊದಲು ಅದನ್ನು ಪರಿವರ್ತನಾ ಶಕ್ತಿಯ ಮೂಲಕ ಪರಿವರ್ತಿಸಿ ಬಿಡಿ, ಇದರಿಂದ ಆ ಪ್ರಾಪ್ತಿಯೂ ತಮಗೇ ಆಗುವುದು. ಸಮಯದ ಆಧಾರದ ಮೇಲೆ ಪರಿವರ್ತನೆ ಮಾಡಿದಿರೆಂದರೆ, ಅದರ ಪ್ರಾಪ್ತಿ ತಮಗಾಗುವುದಿಲ್ಲ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *