27 January 2022 KANNADA Murli Today | Brahma Kumaris

Read and Listen today’s Gyan Murli in Kannada

January 26, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನಿಮ್ಮ ಸುಖದ ದಿನಗಳು ಈಗ ಬರುತ್ತಿವೆ, ಲೋಕ ಮರ್ಯಾದೆ, ಕಲಿಯುಗೀ ಕುಲದ ಮರ್ಯಾದೆಗಳನ್ನು ಬಿಟ್ಟು ಈಗ ನೀವು ಸಂಪಾದನೆ ಮಾಡಿಕೊಳ್ಳಿ. ತಂದೆಯಿಂದ ಪೂರ್ತಿ ಆಸ್ತಿಯನ್ನು ತೆಗೆದುಕೊಳ್ಳಿ”

ಪ್ರಶ್ನೆ:: -

ಅಂತ್ಯಮತಿ ಸೋ ಗತಿ ಅಂತ್ಯದಲ್ಲಿ ಒಳ್ಳೆಯ ಗತಿ ಯಾವ ಪುರುಷಾರ್ಥದಿಂದ ಆಗುತ್ತದೆ?

ಉತ್ತರ:-

ತಂದೆ ತಿಳಿಸುತ್ತಾರೆ – ಮಕ್ಕಳೇ ನೀವು ಇದುವರೆಗೂ ಓದಿರುವುದನ್ನೆಲ್ಲಾ ಮರೆತು ಕೇವಲ ಒಂದು ಮಾತನ್ನು ನೆನಪು ಮಾಡಿ-ಮೌನವಾಗಿರಿ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯ ನೆನಪಿಲ್ಲಿರುವ ಪುರುಷಾರ್ಥ ಮಾಡಿ, ತಂದೆ ಮಕ್ಕಳಿಗೆ ಕಷ್ಟವೇನು ಕೊಡುವುದಿಲ್ಲ, ಆದರೆ ಆಶ್ರಯಯಿಲ್ಲದೆ ಅಲೆದಾಡುವುದರಿಂದ ರಕ್ಷಣೆ ಮಾಡುತ್ತಾರೆ. ಬಡ ಮಕ್ಕಳು ವಿವಾಹ ಮುಂತಾದವುಗಳಿಗೆ ಸಾಲ ತೆಗೆದುಕೊಳ್ಳುತ್ತಾರೆ. ಬಾಬಾ ಅದರಿಂದಲೂ ಮುಕ್ತ ಮಾಡಿಸುತ್ತಾರೆ. ತಂದೆ ತಿಳಿಸುತ್ತಾರೆ-ಮಕ್ಕಳೇ ನೀವು ಪವಿತ್ರವಾದಾಗ ಅಂತ್ಯಮತಿ ಸೋ ಗತಿ ಆಗಿ ಬಿಡುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಧೈರ್ಯ ತಾಳು ಮಾನವ…..

ಓಂ ಶಾಂತಿ. ಇದು ಭಕ್ತಿ ಮಾರ್ಗದ ಹಾಡಾಗಿದೆ. ಅವರು ಇದರ ಅರ್ಥವನ್ನು ತಿಳಿದುಕೊಂಡಿಲ್ಲ. ಕೇವಲ ನೀವು ಮಕ್ಕಳ ಮಾತ್ರ ತಿಳಿದುಕೊಂಡಿದ್ದೀರಿ. ಈಗ ನಮ್ಮ ಸುಖಧ ದಿನಗಳು ಬರುತ್ತಿವೆ, ಅದಕ್ಕಾಗಿ ನಾವು ಪುರುಷಾರ್ಥ ಮಾಡುತ್ತಿದ್ದೇವೆ. ಎಷ್ಟು ಪುರುಷಾರ್ಥ ಮಾಡುತ್ತೀರೋ ಅಷ್ಟು ಸುಖ ಸಿಗುತ್ತದೆ. ಶ್ರೀಮತದಿಂದ ಜೋಳಿಗೆ ತುಂಬುತ್ತದೆ. ಭಕ್ತಿ ಮಾರ್ಗವನ್ನು ಬ್ರಹ್ಮನ ರಾತ್ರಿಯೆಂದು ಕರೆಯಲಾಗುತ್ತದೆ. ಪತಿತ ಪಾವನ ತಂದೆ ಯಾವಾಗ ಬರುತ್ತಾರೆಂದು ಅವರಿಗೆ ಗೊತ್ತಿಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ ಕಲಿಯುಗದ ಅಂತ್ಯ ಹಾಗೂ ಸತ್ಯಯುಗದ ಆದಿಗೆ ಸಂಗಮಯೆಂದು ಕರೆಯಲಾಗುತ್ತದೆ. ಈಗ ನೀವು ಅವರನ್ನು ಕುಂಭಕರ್ಣನ ನಿದ್ರೆಯಿಂದ ಎಚ್ಚರ ಮಾಡುತ್ತೀರಿ. ಮನುಷ್ಯರು ಒಬ್ಬನೇ ಪತಿತ ಪಾವನ ಜ್ಞಾನ ಸಾಗರ ತಂದೆಯನ್ನು ನೆನಪು ಮಾಡುತ್ತಾರೆ. ನೀರಿನ ನದಿ ಆಗುವಂತಹ ಸಾಗರವನ್ನು ನೆನಪು ಮಾಡುವುದಿಲ್ಲ. ಅಲ್ಲಿಯಾದರೊ ನೀರಿನ ನದಿಗಳ ಸಂಗಮವಾಗಿದೆ, ನೀರಿನ ಸಾಗರ ಹಾಗೂ ನದಿಗಳ ಸಂಬಂಧವಲ್ಲ. ವಿಶೇಷತೆ ಇರುವುದಾದರೆ ಜ್ಞಾನ ಸಾಗರ ಹಾಗೂ ಜ್ಞಾನ ನದಿಗಳ ಸಂಗಮದಲ್ಲಿದೆ. ಸಾಗರನು ಅವಶ್ಯವಾಗಿ ಬೇಕಲ್ಲವೆ. ಸತ್ಯಯುಗವನ್ನು ಸ್ಥಾಪನೆ ಮಾಡುವಂತಹ ಸತ್ಯ ತಂದೆ ನರನಿಂದ ನಾರಾಯಣನಾಗುವ ಸತ್ಯ ಕಥೆಯನ್ನು ಹೇಳುತ್ತಿದ್ದಾರೆ. ಹೇ ಪತಿತ ಪಾವನ ಬಾ ಎಂದು ನೆನಪು ಮಾಡುತ್ತಾರೆ. ಯಾವಾಗ ಪರಮಾತ್ಮ ಬರುತ್ತಾರೆ ಆಗ ಆತ್ಮಗಳು ಹಾಗೂ ಪರಮಾತ್ಮನ ಮಿಲನದ ಸಂಗಮವೆಂದು ಹೇಳಲಾಗುವುದು. ಇದು ಸತ್ಯ-ಸತ್ಯ ಮೇಳ ಆಗಿದೆ. ನೀವು ಈ ರೀತಿ ಬರೆಯಬಹುದು-ಇದು ಆತ್ಮ ಹಾಗೂ ಪರಮಾತ್ಮನ ಒಂದೇ ಪುರುಷೋತ್ತಮ ಸಂಗಮಯುಗದಲ್ಲಿ ಮೇಳ ನಡೆಯುತ್ತದೆ. ಇದರಿಂದ ಪತಿತ ಸೃಷ್ಟಿ ಪರಿವರ್ತನೆಗೊಂಡು ಅವಶ್ಯಕವಾಗಿ ಪಾವನ ವಾಗುತ್ತದೆ. ಇದು ಪತಿತ ಪ್ರಪಂಚವಾಗಿದೆ. ಅದು ಪಾವನ ಪ್ರಪಂಚವಾಗಿದೆ. ಇದು ಸತ್ಯ ಮೇಳ ಆಗಿದೆ. ಇಲ್ಲಿ ಪತಿತ ಪಾವನ ತಂದೆ ಬಂದು ಆತ್ಮಗಳನ್ನು ಪಾವನ ಮಾಡಿ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಪರಮಾತ್ಮ ಹಾಗೂ ಆತ್ಮಗಳ ಸಂಗಮವು ಪತಿತ ಪ್ರಪಂಚವನ್ನು ಪಾವನ ಮಾಡಲು ಸಲುವಾಗಿ ಆಗುತ್ತದೆ. ಅಂದಾಗ ಇದರ ಚಿತ್ರವನ್ನು ಮಾಡಿಸಬೇಕು. ತಂದೆ ಮೊದಲೇ ಎಲ್ಲವನ್ನು ತಿಳಿಸಿಕೊಡುತ್ತಾರೆ. ತ್ರಿವೇಣಿಯಲ್ಲಿ ಶಿವರಾತ್ರಿಯಲ್ಲಿ ಉದ್ದೇಶಪೂರ್ವಕವಾಗಿ ಹೋಗುತ್ತಾರೆ. ಈ ಎಲ್ಲಾ ಮಾತುಗಳನ್ನು ತಿಳಿಸಲು ನಶೆ ಇರಬೇಕು. ಚೆನ್ನಾಗಿ ತಿಳಿಸಿಕೊಡುವಂತಹವರು ಯುಕ್ತಿಯಿಂದ ತಿಳಿಸಿಕೊಡುತ್ತಾರೆ. ಇಲ್ಲವೆಂದರೆ ತಿಳಿಸುವಾಗ ತೊದಲಿಕೊಳ್ಳುತ್ತಾರೆ. ಸತ್ಯ ಹಾಗೂ ಅಸತ್ಯ ಕುಂಭಮೇಳ ಯಾವುದೆಂದು ಸಿದ್ಧ ಮಾಡಬೇಕು. ಇದು ಪತಿತ ಪ್ರಪಂಚ ಪಾವನ ಆಗುವ ಸಂಗಮವಾಗಿದೆ. ಅವರೆಲ್ಲರೂ ಕುಂಭಕರ್ಣನ ಅಜ್ಞಾನ ನಿದ್ರೆಯಲ್ಲಿ ಮಲಿಗಿಕೊಂಡಿದ್ದಾರೆ. ಪರಮಾತ್ಮನಗಾಗಿ ಸರ್ವ ವ್ಯಾಪಿಯೆಂದು ಹೇಳಿ ಬಿಡುತ್ತಾರೆ. ಅವರು ಪತಿತ ಪಾವನರಾಗಿದ್ದಾರೆ. ಪಾವನ ಮಾಡಲು ಬರುತ್ತಾರೆ. ಇದು ಒಂದೇ ಪುರುಷೋತ್ತಮ ಸಂಗಮಯುಗವಾಗಿದೆ, ಇದರಲ್ಲಿ ಏರುವ ಕಲೆಯಾಗುತ್ತದೆ. ಸತ್ಯಯುಗದ ನಂತರ ಕೆಳಗೆ ಇಳಿಯಲೇ ಬೇಕು. ಕಳೆದು ಹೋದು ಸಮಯಕ್ಕೆ ಪೂರ್ಣವಾಯಿತೆಂದು ಹೇಳಲಾಗುತ್ತದೆ. ಹಳೆಯದಾಗುತ್ತಾ ಆಗುತ್ತಾ ಸಂಪೂರ್ಣ ಹಳೆಯದಾಗಿ ಬಿಡುತ್ತದೆ. ನಿಮ್ಮ ಸ್ವಸ್ತಿಕ್ ಚಿನ್ಹೆಯೂ ಸಹ ಇದೇ ರೀತಿ ಮಾಡಲ್ಪಟ್ಟಿದೆ. ಸತೋಪ್ರಧಾನ, ಸತೋ, ರಜೋ, ತಮೋ… ಸ್ಥಿತಿಗಳನ್ನು ನೀವು ತಿಳಿದುಕೊಂಡಿದ್ದೀರಿ-ನಾವೀಗ ತಂದೆಯಿಂದ ಸದಾ ಸುಖದ ಆಸ್ತಿಯನ್ನು ಪಡೆಯುವ ಪುರುಷಾರ್ಥ ಮಾಡುತ್ತೇವೆ. ತಂದೆ ಸಹಜವಾದ ಪುರುಷಾರ್ಥವನ್ನು ಮಾಡಿಸುತ್ತಾರೆ. ಬಡವರಂತು ಸಾಲ ಪಡೆದು ವಿವಾಹ ಮಾಡಿಸಬೇಕಾಗುತ್ತದೆ. ತಂದೆ ಇಂತಹ ಸಾಲ ಮುಂತಾದವುಗಳಿಂದ ಮುಕ್ತರನ್ನಾಗಿ ಮಾಡುತ್ತಾರೆ. ನರಕದಲ್ಲಿ ಬೀಳದಂತೆ ರಕ್ಷಣೆ ಮಾಡುತ್ತಾರೆ. ಇಂತಹ ಖರ್ಚುಗಳಿಂದ ಕಾಪಾಡುತ್ತಾರೆ. ಆದುದರಿಂದ ಇಲ್ಲಿಗೆ ಬಡವರು ತುಂಬಾ ಬರುತ್ತಾರೆ. ಎಷ್ಟೊಂದು ಒಳ್ಳೊಳ್ಳೆಯ ಕನ್ನೆಯರು ಬರುತ್ತಿದ್ದರು ಆದರೆ ಅಕಸ್ಮಾತ್ ಕಾಮದ ಬಿರುಗಾಳಿ ಬಂದು ನಿಶ್ಚಿತಾರ್ಥ ಮಾಡಿಕೊಂಡು ವಿವಾಹ ಆಗಿ ಬಿಟ್ಟರು. ವಿವಾಹವಾದ ನಂತರ ಈ ರೀತಿ ಪಶ್ಚಾತ್ತಾಪ ಪಡುತ್ತಾರೆ-ದೊಡ್ಡ ತಪ್ಪು ಆಗಿ ಹೋಯಿತು. ಸಮಯ ಬೇಕಾಗುತ್ತದೆಯಲ್ಲವೇ ತಂದೆ ಎಷ್ಟೊಂದು ನಮ್ಮನ್ನು ಉಳಿಸಲು ಪ್ರಯತ್ನ ಪಡುತ್ತಾರೆ. ಶ್ರೀಮಂತರಂತೂ ಬರುವುದೇ ಇಲ್ಲ. ಅವರು ಸ್ವಯಂ ಆಸ್ತಿ ಪಡೆಯುವುದಿಲ್ಲ, ಅವರ ರಚನೆಗೂ ಸತ್ಯ ಸಂಪಾದನೆ ಮಾಡಿಕೊಳ್ಳಲು ಬಿಡುವುದಿಲ್ಲ. ಬಡವರಲ್ಲಂತು ಬಹಳ ಕೆಟ್ಟ ರೂಢಿಗಳಿವೆ. ಲೋಕ ಮರ್ಯಾದೆ, ಕುಲ ಮರ್ಯಾದೆಯು ಅವರನ್ನು ನಾಶ ಮಾಡಿ ಬಿಡುತ್ತದೆ. ಕೆಲವು ಮಕ್ಕಳು ಸರಿಯಾಗಿ ಓದುವುದಿಲ್ಲ ಆದರಿಂದ ನರಕದಲ್ಲಿ ಹೊರಟು ಹೋಗುತ್ತಾರೆ. ತಂದೆ ನರಕದಿಂದ ಬಿಡಿಸಲು ಬಂದಿದ್ದಾರೆ. ಕೆಲವರು ಬಿಡುಗಡೆ ಆಗುವುದೇ ಇಲ್ಲ. ಮೂಗಿಗೆ ಹಗ್ಗಾ ಕಟ್ಟಿ ಉಳಿಸಲು ಅವರೇನು ಪ್ರಾಣಿ ಅಲ್ಲ ತಾನೆ. ಇಷ್ಟಾದರು ತಂದೆ ತಿಳಿಸುತ್ತಲೇ ಇರುತ್ತಾರೆ. ತಂದೆ ಮಕ್ಕಳಿಗೆ ರಚೈತನಾಗಿರುವ ಕಾರಣ ನೀವು ಸತ್ಯ ಸಂಪಾದನೆ ಮಾಡಿಕೊಳ್ಳಿ. ತಮ್ಮ ಮಕ್ಕಳಿಗೂ ಸತ್ಯ ಸಂಪಾದನೆ ಮಾಡಿಸಿ ಎಂದು ಮಕ್ಕಳಿಗೂ ತಿಳಿಸುತ್ತಾರೆ. ಆದರೂ ಸಹ ಎಷ್ಟೊಂದು ತೊಂದರೆ ಆಗುತ್ತಿರುತ್ತದೆ. ಸ್ತ್ರೀ ಜ್ಞಾನದಲ್ಲಿ ನಡೆಯುತ್ತಾ, ಪುರುಷರು ನಡೆಯದೆ ಇದ್ದಾಗ, ಪತಿ ಜ್ಞಾನದಲ್ಲಿ ಬಂದು ಮಕ್ಕಳು ಬರೆದಿದ್ದಾಗ ತುಂಬಾ ತೊಂದರೆ ಆಗುತ್ತಿರುತ್ತದೆ. ಬಹಳ ಚೆನ್ನಾಗಿ ತಿಳಿಸಿಕೊಡಲಾಗುತ್ತದೆ. ಮುಖ್ಯ ಪವಿತ್ರತೆಯ ಮಾತಾಗಿದೆ.

ಬಾಬಾ ಕ್ರೋಧ ಬಂದು ಬಿಟ್ಟಿತು ಎಂದು ಮಕ್ಕಳು ಪತ್ರ ಬರೆಯುತ್ತಾರೆ. ನೀವು ಮಕ್ಕಳ ಮೇಲೆ ಏಕೆ ಕ್ರೋಧ ಮಾಡುತ್ತೀರಿ? ಎಂದು ತಂದೆ ತಿಳಿಸಿಕೊಡುತ್ತಾರೆ. ಮಕ್ಕಳು ಚಂಚಲ ಮಾಡಿದರೆ ಒಂದು ಕೊಠಡಿಯಲ್ಲಿ ಕೂಡಿ ಹಾಕಿ ಬಿಡಿ, ಕೈ ಕಾಲನ್ನು ಕಟ್ಟಿ ಹಾಕಿ ಬಿಡಿ, ಅಥವಾ ಊಟ ಕೊಡಬೇಡಿ. ಇದಕ್ಕೆ ಕ್ರೋಧವೆಂದು ಹೇಳುವುದಿಲ್ಲ. ಕೃಷ್ಣನಿಗೆ ಈ ರೀತಿ ತೋರಿಸುತ್ತಾರೆ-ಕೃಷ್ಣನ ಕೈಗಳನ್ನು ಒರಳಿಗೆ ಕಟ್ಟಿ ಹಾಕುತ್ತಿದ್ದರು, ಆದರೆ ಸತ್ಯಯುಗದಲ್ಲಿ ಇಂತಹ ಮಾತುಗಳು ಇರುವುದಿಲ್ಲ. ಅಲ್ಲಿ ಮರ್ಯಾದಾ ಪುರುಷೋತ್ತಮರಾದ ರಮಣೀಕ ಮಕ್ಕಳಿರುತ್ತಾರೆ. ಇಲ್ಲಿಯೂ ಸಹ ಕೆಲವು ಉತ್ತಮ ಮಕ್ಕಳಿರುತ್ತಾರೆ. ತುಂಬಾ ಗೌರವದಿಂದ ಮಾತನಾಡುತ್ತಾರೆ. ಬ್ರಾಹ್ಮಣರಲ್ಲೂ ಸಹ ಅನೇಕ ಮಕ್ಕಳಿದ್ದಾರೆ. ಕೆಲವರಂತೂ ಶ್ರೀಮತದಂತೆ ನಡೆಯುವುದೇ ಇಲ್ಲ, ನಿಯಮಗಳಂತೆ ನಡೆಯುವುದೇ ಇಲ್ಲ. ನಿಯಮಗಳಂತೂ ಇವೆ ಅಲ್ಲವೆ. ಮಿಲಿಟರಿಯಲ್ಲಿ ಕೆಲಸ ಮಾಡು ವಂತಹವರು ಈ ರೀತಿ ಕೇಳುತ್ತಾರೆ – ಬಾಬಾ ಅಲ್ಲಿಯ ಊಟವನ್ನು ತಿನ್ನಬೇಕಾಗುತ್ತದೆ ಏನು ಮಾಡಲಿ? ಶುದ್ದ ವಸ್ತುವನ್ನು ತಿನ್ನುವ ಪ್ರಯತ್ನ ಪಡಿ ಎಂದು ತಂದೆ ತಿಳಿಸುತ್ತಾರೆ. ಸಂದರ್ಭೋಚಿತವಾಗಿ ದೃಷ್ಟಿಯನ್ನು ಕೊಟ್ಟು ತೆಗೆದುಕೊಳ್ಳಿ. ಇನ್ನೇನು ತಾನೆ ಮಾಡಲು ಸಾಧ್ಯ? ಎರಡು ರೊಟ್ಟಿಯಂತು ಸಿಗುತ್ತದೆ. ಬೆಣ್ಣೆ, ಆಲೂಗಡ್ಡೆ. . ತೆಗೆದುಕೊಳ್ಳಬಹುದು. ಯಾವ ವಸ್ತುವಿನ ಅಭ್ಯಾಸವಾಗಿ ಬಿಡುತ್ತದೆ ಆಮೇಲೆ ಕಷ್ಟವಾಗುವುದಿಲ್ಲ. ಆದರು ಪ್ರತಿ ಮಾತನ್ನು ಕೇಳಿ ತಿಳಿದುಕೊಳ್ಳಬೇಕು. ತಂದೆ ತುಂಬಾ ಸಹಜ ಮಾಡಿಕೊಡುತ್ತಾರೆ. ಪವಿತ್ರರಾಗಿರುವುದು ಎಲ್ಲಕ್ಕಿಂತಲು ಉತ್ತಮವಾಗಿದೆ. ಮಕ್ಕಳನ್ನು ಸುಧಾರಣೆ ಮಾಡುವ ಸಲುವಾಗಿ ಒಮ್ಮೊಮ್ಮೆ ಲಾ ಫುಲ್ ಆಗಿ ಹೇಳಬೇಕಾಗುತ್ತದೆ. ಕೆಲವು ಮಕ್ಕಳು ಮನೆಯನ್ನೇ ಮಾರಿಕೊಂಡು ಬಿಡುತ್ತಾರೆ. ತಂದೆ ಆಸ್ತಿಯನ್ನು ಕಳೆದು, ಅವರ ಹೆಸರನ್ನು ಮಣ್ಣು ಪಾಲು ಮಾಡಿ ಬಿಡುತ್ತಾರೆ. ಈಗ ಮಕ್ಕಳ ಬುದ್ದಿಯಲ್ಲಿ ಈ ರೀತಿಯಿದೆ-ಇನ್ನೇನು ನಮ್ಮ ಸುಖದ ದಿನಗಳು ಸಮೀಪಿಸುತ್ತಿವೆ. ಆದ್ದರಿಂದ ಏಕೆ ಪುರುಷಾರ್ಥ ಮಾಡಿ ಶ್ರೇಷ್ಠ ಪದವಿ ಪಡೆಯಬಾರದು? ಪುರುಷಾರ್ಥದಿಂದಲೇ ಪದವಿ ಸಿಗುತ್ತದೆ. ಮಮ್ಮಾ ಬಾಬಾರವರ ಸಿಂಹಾಸನಕ್ಕೆ ಯೋಗ್ಯರಾಗುತ್ತೀರಿ. ಜ್ಞಾನ-ಜ್ಞಾನೇಶ್ವರಿಯಿಂದ ರಾಜ-ರಾಜೇಶ್ವರಿ ಅಗುತ್ತಾರೆ. ಈಶ್ವರ ನಿಮಗೆ ಜ್ಞಾನ ಕೊಡುತ್ತಾರೆ. ನೀವೂ ಸಹ ಈ ಜ್ಞಾನವನ್ನು ಕೇಳಿ ಬೇರೆಯವರನ್ನು ತನ್ನ ಸಮಾನವನ್ನಾಗಿ ಮಾಡಿದರೆ ರಾಜ-ರಾಜೇಶ್ವರಿ ಆಗುತ್ತೀರಿ. ತಂದೆ ತಾಯಿಯನ್ನು ಅನುಕರಣೆ ಮಾಡಬೇಕು ಇದರಲ್ಲಿ ಅಂಧಶ್ರದ್ದೇಯ ಮಾತೇನಿಲ್ಲ. ಸನ್ಯಾಸಿಗಳಿಗೆ ಅನುಯಾಯಿಗಳಾಗುತ್ತಾರೆ, ಆದರೆ ಅವರನ್ನು ಅನುಸರಿಸುವುದಿಲ್ಲ. ಯಾರು ಸನ್ಯಾಸ ಧರ್ಮದಲ್ಲಿ ಹೋಗುತ್ತಾರೆ ಅವರು ಮನೆಯಲ್ಲಿ ಇರುವುದೇ ಇಲ್ಲ. ಅವರು ಸನ್ಯಾಸಿ ಆಗುವ ಪುರುಷಾರ್ಥ ಅವಶ್ಯವಾಗಿ ಮಾಡುತ್ತಾರೆ. ನಾಟಕನುಸಾರವಾಗಿ ಭಕ್ತಿ ಮಾರ್ಗ ಪ್ರಾರಂಭವಾಗಿದೆ. ಸತೋ, ರಜೋ, ತಮೋನಲ್ಲಿ ಎಲ್ಲರೂ ಬರಬೇಕಾಗುತ್ತದೆ. ಮೊದಲನೇ ಸ್ಥಾನದ ಶ್ರೀ ಕೃಷ್ಣನನ್ನು ನೋಡಿ, ಅವರು ಸಹ ಅವಶ್ಯವಾಗಿ 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈಗ ಅಂತಿಮ ಜನ್ಮವಾದ್ದರಿಂದ ಪುನಃ ಅವರು ಆರಂಭದಲ್ಲಿಯೇ ಬರುತ್ತಾರೆ. ಲಕ್ಷ್ಮೀ ನಾರಾಯಣರು ಪ್ರಥಮ ಸ್ಥಾನದಿಂದ ಪುನಃ ಅಂತಿಮದಲ್ಲಿ ಬರುತ್ತಾರೆ, ನಂತರ ಅವರೇ ಪ್ರಥಮ ಸ್ಥಾನದಲ್ಲಿ ಬರುತ್ತಾರೆ. ಅವರನ್ನು ಜಗನ್ನಾಥರನ್ನಾಗಿ ಯಾರು ಮಾಡಿದರು? ಆಸ್ತಿ ಯಾವಾಗ ಪ್ರಾಪ್ತಿ ಆಯಿತು. ಅವರಿಗೆ ಸಂಗಮದಲ್ಲಿಯೇ ಆಸ್ತಿ ಪ್ರಾಪ್ತಿಯಾಯಿತೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ರಾಜಧಾನಿಯೆಲ್ಲವೂ ಸ್ಥಾಪನೆಯಾಗುತ್ತದೆ. ಬ್ರಾಹ್ಮಣರೇ 84 ಜನ್ಮ ಪಡೆದಿದ್ದಾರೆ, ಅವರೇ ಈಗ ಪಾತ್ರ ಮಾಡುತ್ತಿದ್ದಾರೆ. ತುಂಬಾ ತಿಳಿದುಕೊಳ್ಳುವ ಮಾತುಗಳಾಗಿವೆ. ಆದರೆ ಕೆಲವರು ಚೆನ್ನಾಗಿ ಧಾರಣೆ ಮಾಡುತ್ತಾರೆ, ಕೆಲವರು ಮಾಡುವುದಿಲ್ಲ. . . . ಇಲ್ಲಿ ಪುರುಷಾರ್ಥದ ಮಾತಾಗಿದೆ. ತಂದೆ ಪ್ರಜಾಪಿತ ಬ್ರಹ್ಮಾರವರ ಮುಖದಿಂದ ಸನ್ಮುಖದಲ್ಲಿ ತಿಳಿಸುತ್ತಾರೆ-ನಾನು ಬಂದಿದ್ದೇನೆ ನನ್ನನ್ನು ನೆನಪು ಮಾಡಿದಾಗ ಯೋಗದಿಂದಲೇ ನಿಮ್ಮ ವಿಕರ್ಮ ವಿನಾಶವಾಗುತ್ತದೆ. ಆತ್ಮ ಹೇಳುತ್ತದೆ-ಹಾ ಬಾಬಾ ನಾನು ಈ ಕಿವಿಗಳಿಂದ ಕೇಳುತ್ತೇನೆ. ದೇಹವಿಲ್ಲದೆ ತಾವು ರಾಜಯೋಗವನ್ನು ಹೇಗೆ ಕಲಿಸಲು ಸಾಧ್ಯ? ಶಿವ ಜಯಂತಿಯು ಅವಶ್ಯವಾಗಿ ಇದೆ. ನಾನು ಬರುತ್ತೇನೆ ಆದರೆ ಯಾರಿಗೂ ಗೊತ್ತಾಗುವುದಿಲ್ಲ.

ತಂದೆ ತಿಳಿಸುತ್ತಾರೆ-ನಾನು ಕಲ್ಪ-ಕಲ್ಪ ಬ್ರಹ್ಮನ ತನುವಿನಲ್ಲಿ ಬರುತ್ತೇನೆ. ಯಾರು 84 ಜನ್ಮ ಪಡೆದಿರುತ್ತಾರೆ, ಇದು ಪರಿವರ್ತನೆ ಆಗುವುದಿಲ್ಲ. ಇವರು ರಾಜ-ರಾಜೇಶ್ವರಾಗಿದ್ದರು ನಂತರ ಈಗ ಜ್ಞಾನ-ಜ್ಞಾನೇಶ್ವರಾಗಿ ಅಮೇಲೆ ರಾಜ-ರಾಜೇಶ್ವರಾಗುತ್ತಾರೆ. ಇದು ಮಾಡಿ ಮಾಡಲ್ಪಟ್ಟ ನಾಟಕವಾಗಿದೆ. ಗಾಯನ ಮಾಡಲಾಗುತ್ತದೆ-ಬ್ರಹ್ಮಾ, ವಿಷ್ಣು, ಶಂಕರ. ಪ್ರಜಾಪಿತನೆಂದು ಬ್ರಹ್ಮಾರವರಿಗೆ ಹೇಳಲಾಗುತ್ತದೆ. ವಿಷ್ಣು ಅಥವಾ ಶಂಕರನಿಗೆ ಹೇಳುವುದಿಲ್ಲ. ಪ್ರಜಾ ಎಂದರೆ ಮನುಷ್ಯರು ಎಂದು ಅರ್ಥ. ಮನುಷ್ಯರನ್ನೇ ದೇವತೆಯನ್ನಾಗಿ ಮಾಡುತ್ತೇನೆಂದು ಹೇಳುತ್ತಾರೆ. ಹೊಸ ರಚನೆಯನ್ನೇನು ಮಾಡುವುದಿಲ್ಲ. ತಂದೆ ಕೇಳುತ್ತಾರೆ-ಮಕ್ಕಳೇ ಈಗ ಸ್ವರ್ಗದಲ್ಲಿ ಹೋಗುತ್ತೀರಾ? ಬಲಿಹಾರಿ ಆಗುತ್ತೀರಾ? ಈಗ ನಾನು ಬಂದಿದ್ದೇನೆ-ನನ್ನನ್ನು ನೆನಪು ಮಾಡಿ. ಸಾಧ್ಯವಾದಷ್ಟು ದೇಹಧಾರಿಗಳ ನೆನಪನ್ನು ಕಡಿಮೆ ಮಾಡುತ್ತಾ ಹೋಗಿ. ನೀವು ಕರ್ಮಯೋಗಿಗಳಾಗಿದ್ದೀರಿ, ಇಡೀ ದಿನ ಎಲ್ಲವನ್ನು ಮಾಡುತ್ತಾ ಜೊತೆ-ಜೊತೆಯಲ್ಲಿ ಈ ರೀತಿ ತಂದೆಯ ನೆನಪಿನ ಅಭ್ಯಾಸ ಮಾಡಿ. ಅಂತ್ಯದಲ್ಲಿ ನನ್ನ ಒಬ್ಬರ ನೆನಪು ಇರಬೇಕು. ಇಲ್ಲವಾದರೆ ನಿಮಗೆ ಯಾರೊಂದಿಗೆ ಆಕರ್ಷಣೆ (ಸೆಳತೆ) ಇರುತ್ತದೆ, ಅವರ ಬಳಿ ಜನ್ಮ ಪಡೆಯಬೇಕಾಗುತ್ತದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ತಂದೆಯ ನೆನಪು ಮಾಡುವುದರಲ್ಲಿ ಶ್ರಮವಾಗುತ್ತದೆ. ರಾತ್ರಿಯೆಲ್ಲಾ ಎಚ್ಚರವಿದ್ದು ನೆನಪು ಮಾಡಬೇಕಾಗುತ್ತದೆಯೆಂದು ತಂದೆ ತಿಳಿಸುತ್ತಾರೆ. ನಿಮ್ಮ ಆರೋಗ್ಯ ಹದಗಿಡುವುದಿಲ್ಲ. ಯೋಗದಿಂದ ಇನ್ನೂ ಶಕ್ತಿ ಸಿಗುತ್ತದೆ. ಸ್ವದರ್ಶನ ಚಕ್ರಧಾರಿಯಾಗಿ ಚಕ್ರವನ್ನು ತಿರಿಗಿಸಿ. ಹೇ ನಿದ್ರೆಯನ್ನು ಗೆಲ್ಲುವಂತಹ ಪ್ರಿಯ ಮಕ್ಕಳೇ, ಯಾರ ರಥವನ್ನು ಪಡೆದಿದ್ದಾರೆ ಅವರಿಗೆ ಹೇಳುತ್ತಾರೆ.

ನೀವು ತಿಳಿದುಕೊಂಡಿದ್ದೀರಿ-ರಾಜ-ರಾಜೇಶ್ವರಿ ಇವರು ಆಗುತ್ತಾರೆಂದಾಗ ನಿದ್ರೆಯನ್ನು ಗೆಲ್ಲಬೇಕಾಗುತ್ತದೆ. ಇಡೀ ದಿನ ಸೇವೆಯನ್ನು ಮಾಡಬೇಕು. ಉಳಿದ ಸಂಪಾದನೆ ರಾತ್ರಿಯಲ್ಲಿ ಮಾಡಬೇಕು. ಭಕ್ತರೂ ಸಹ ಮುಂಜಾನೆಯೇ ಏಳುತ್ತಾರೆ. ಗುರುಗಳು ಅವರಿಗೆ ಮಾಲೆ ಜಪಿಸಬೇಕೆಂದು ಹೇಳುತ್ತಾರೆ. ಕಾರ್ಯ ವ್ಯವಹಾರದ ಮಧ್ಯದಲ್ಲಿ ಜಪಿಸಲು ಆಗುವುದಿಲ್ಲ. ಕೆಲವರು ಕೈ ಚೀಲದಲ್ಲಿ ಇಟ್ಟುಕೊಂಡು ಜಪಿಸುತ್ತಾರೆ. ಆದುದರಿಂದ ನೀವೂ ಸಹ ಮುಂಜಾನೆಯೇ ಎದ್ದು ನೆನಪು ಮಾಡಬೇಕು. ವಿಚಾರಸಾಗರ ಮಂಥನ ಮಾಡಬೇಕು. ನೆನಪಿನಿಂದ ವಿಕರ್ಮ ವಿನಾಶವಾಗುತ್ತದೆ. ಸದಾ ಆರೋಗ್ಯವಂತರಾಗಬೇಕಾದರೆ ನಿರಂತರವಾಗಿ ನೆನಪು ಮಾಡಬೇಕು. ಆಗ ಅಂತಿಮತಿ ಸೋ ಗತಿ ಆಗಿ ಬಿಡುತ್ತದೆ. ತುಂಬಾ ಶ್ರೇಷ್ಠ ಪದವಿ ಸಿಗುತ್ತದೆ. ಅದಕ್ಕಾಗಿ ಕಷ್ಟ ಪಡುವ ಆವಶ್ಯಕತೆಯಿಲ್ಲ. ಮೌನದಲ್ಲಿರಬೇಕು, ಹಾಗೂ ಓದಬೇಕು. ಉಳಿದಂತೆ ಓದಿರುವುದೆನ್ನೆಲ್ಲಾ ಮರೆತು ಬಿಡಬೇಕು. ಮಕ್ಕಳೇ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕು. ಆತ್ಮವೆ ದೇಹದ ಮೂಲಕ ಕರ್ಮ ಮಾಡಿಸುತ್ತದೆ. ಮಾಡಿ ಮಾಡುಸುವಂತಹವರು ಆತ್ಮ ಆಗಿದೆ. ಪರಮಪಿತ ಪರಮಾತ್ಮ ಬಂದು ಇವರ ಮುಖಾಂತರ ಮಾಡುತ್ತಾರೆ. ಆತ್ಮನೂ ಸಹ ಮಾಡುತ್ತದೆ ಹಾಗೂ ಮಾಡಿಸುತ್ತದೆ. ಈ ಎಲ್ಲಾ ಜ್ಞಾನವನ್ನು ಧಾರಣೆ ಮಡಿದಾಗ ಯೋಗ್ಯರಾಗುತ್ತೇವೆ. ತಾವು ತಿಳಿದುಕೊಂಡು ಬೇರೆಯವರಿಗೆ ತಿಳಿಸಿಕೊಡುವವರಿಗೆ ತಂದೆ ಯೋಗ್ಯರೆಂದು ತಿಳಿದುಕೊಳ್ಳುತ್ತಾರೆ. ಸ್ವರ್ಗದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯಲು ಅವರು ಯೋಗ್ಯರಾಗಿರುತ್ತಾರೆ. ಯಾರು ತಿಳಿಸಿಕೊಡುವುದೇ ಇಲ್ಲ ಅಂತಹವರು ಶ್ರೇಷ್ಠ ಪದವಿಗೆ ಯೋಗ್ಯ ಇಲ್ಲದವರೆಂದು ತಿಳಿದುಕೊಳುತ್ತಾರೆ. ತಂದೆ ರಾಜ-ರಾಣಿಯಾಗಲು ಯೋಗ್ಯರಾಗಿ ಎಂದು ತಿಳಿಸುತ್ತಾರೆ. ಅಂತಹವರಿಗೇ ಸುಪುತ್ರ ಮಗುವೆಂದು ಹೇಳುತ್ತಾರೆ, ಈ ಮಾತುಗಳು ತಿಳಿದುಕೊಳ್ಳುವ ಮಾತುಗಳಾಗಿವೆ. ಬಾಕಿ ಮಾಡುವುದೇನು ಇಲ್ಲ. ಎಲ್ಲಾ ಮಾತುಗಳಿಂದ ತಂದೆ ಬಿಡಿಸಿ, ಒಂದೇ ಮಾತನ್ನು ನೆನಪಿಟ್ಟುಕೊಳ್ಳಲು ಹೇಳುತ್ತಾರೆ. ಅಂತ್ಯ ಕಾಲದಲ್ಲಿ ಯಾರು ಸ್ತ್ರೀಯನ್ನು ನೆನಯುತ್ತಾರೆ…………

ಯಾರು ಸೇವಾಧಾರಿ ಮಕ್ಕಳಿದ್ದಾರೆ ಅವರು ತಂದೆಯ ಮುರಳಿಯಿಂದ ತಕ್ಷಣ ಚಿತ್ರವನ್ನು ಮಾಡಿಸುತ್ತಾರೆ. ವಿಚಾರ ಸಾಗರ ಮಂಥನ ಮಾಡುತ್ತಾರೆ. ಮಕ್ಕಳು ಸೇವೆ ಮಾಡಬೇಕು. ಈ ಬೇಹದ್ದಿನ ತಂದೆ ಎಲ್ಲರಿಗು ತಿಳಿಸುತ್ತಾರೆ-ತಂದೆ ತಾಯಿಯನ್ನು ಅನುಕರಣೆ ಮಾಡಿರಿ (ಫಾಲೊ ಫಾದರ್-ಮದರ್). ಇವರೂ ಸಹ ಶಿವ ತಂದೆಯಿಂದ ಜ್ಞಾನವನ್ನು ಪಡೆಯುತ್ತಾರೆ. ಬ್ರಹ್ಮಾ ಶ್ರೇಷ್ಠ ಪದವಿಯನ್ನು ಪಡೆಯುವಾಗ ನೀವು ಏಕೆ ಪಡೆಯಬಾರದು. ಈಗ ಬ್ರಹ್ಮಾರವರನ್ನು ಅನುಕರಣೆ ಮಾಡಿದರೆ ಕಲ್ಪ-ಕಲ್ಪಾಂತರ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಈಗ ಫೇಲ್ ಆದರೆ ಕಲ್ಪ-ಕಲ್ಪಾಂತರ ಫೇಲ್ ಆಗುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಂದೆಯ ಆಶೀರ್ವಾದ ಪಡೆಯುವ ಸಲುವಾಗಿ ಸೇವಾಧಾರಿಯಾಗಬೇಕು. ತಮ್ಮ ಸಮಾನ ಮಾಡುವ ಸೇವೆ ಮಾಡಬೇಕು. ಈಗ ಜ್ಞಾನ-ಜ್ಞಾನೇಶ್ವರಿಯಾಗಿ ನಂತರ ರಾಜ-ರಾಜೇಶ್ವರಿಯಾಗಬೇಕು.

2. ಒಬ್ಬ ತಂದೆಯ ನೆನಪಲ್ಲಿರುವ ಶ್ರಮ ಪಡಬೇಕು. ಯಾವ ದೇಹಧಾರಿಯೊಂದಿಗೂ ಮೋಹ ಇಟ್ಟುಕೊಳ್ಳಬಾರದು. ನಿದ್ರೆಯನ್ನು ಗೆಲ್ಲುವಂತಹವರಾಗಿ ರಾತ್ರಿಯ ವೇಳೆ ಸಂಪಾದನೆ ಜಮಾ ಮಾಡಿಕೊಳ್ಳಬೇಕು.

ವರದಾನ:-

ಸ್ನೇಹದ ರಿಟರ್ನ್ನಲ್ಲಿ ಮಕ್ಕಳಿಗೆ ವರದಾತಾ ತಂದೆಯು ಇದೇ ವರದಾನವನ್ನು ಕೊಡುತ್ತಾರೆ – “ಸದಾ ಪ್ರತೀ ಸಮಯ, ಪ್ರತಿಯೊಂದು ಆತ್ಮನೊಂದಿಗೆ, ಪ್ರತಿಯೊಂದು ಪರಿಸ್ಥಿತಿಯಲ್ಲಿಯೂ ಸ್ನೇಹಿ ಮೂರ್ತಿ ಭವ” ಎಂದಿಗೂ ತಮ್ಮ ಸ್ನೇಹಿ ಮೂರ್ತಿ, ಸ್ನೇಹದ ಚಹರೆ, ಸ್ನೇಹಿ ವ್ಯವಹಾರ, ಸ್ನೇಹದ ಸಂಬಂಧ-ಸಂಪರ್ಕವನ್ನು ಬಿಡಬಾರದು, ಮರೆಯಬಾರದು. ಭಲೆ ಯಾವುದೇ ವ್ಯಕ್ತಿ ಅಥವಾ ಪ್ರಕೃತಿಯಿಂದ ಅಥವಾ ಮಾಯೆಯಿಂದಲೂ ಯಾವುದೇ ಭಯಾನಕ, ಜ್ವಾಲಾರೂಪವನ್ನು ಧಾರಣೆ ಮಾಡಿಕೊಂಡಾದರೂ ಬರಲಿ. ಆದರೆ ಅದಕ್ಕೆ ಸದಾ ಸ್ನೇಹದ ಶೀತಲತೆಯ ಮೂಲಕ ಪರಿವರ್ತನೆ ಮಾಡುತ್ತಿರಿ. ಸ್ನೇಹದ ದೃಷ್ಟಿ, ವೃತ್ತಿ ಹಾಗೂ ಕೃತಿಯ ಮೂಲಕ ಸೃಷ್ಟಿಯನ್ನು ತಯಾರು ಮಾಡಿರಿ.

ಸ್ಲೋಗನ್:-

ಲವಲೀನ ಸ್ಥಿತಿಯ ಅನುಭವ ಮಾಡಿರಿ:

ಲವಲೀನ ಸ್ಥಿತಿಯಿರುವ ಸಮಾನ ಆತ್ಮರು ಸದಾಕಾಲವೂ ಯೋಗಿಯಾಗಿರುತ್ತಾರೆ. ಯೋಗವನ್ನಿಡುವವರಲ್ಲ ಆದರೆ ಅವರಿರುವುದೇ ಲವಲೀನ. ನೆನಪು ಮಾಡಲು ಅವರು ಬೇರೆ ಆಗುವುದೇ ಇಲ್ಲ, ಸ್ವತಹವಾಗಿಯೇ ನೆನಪಿರುತ್ತದೆ. ಎಲ್ಲಿ ಜೊತೆಯಿರುತ್ತದೆಯೋ (ಸಂಗ) ಅದು ಸ್ವತಹವಾಗಿಯೇ ನೆನಪಿರುತ್ತದೆ. ಅಂದಮೇಲೆ ಸಮಾನ ಆತ್ಮರ ಸ್ಥಿತಿಯು ಜೊತೆಯಿರುವುದಾಗಿದೆ, ಸಮಾವೇಶವಾಗಿ ಇರುವುದಾಗಿದೆ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top