26 November 2021 KANNADA Murli Today | Brahma Kumaris

Read and Listen today’s Gyan Murli in Kannada

November 25, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಸ್ವಯಂನ್ನು ರಾಜಯೋಗಿ ಎಂದು ತಿಳಿದು ವಿಕಾರಿ ಸಂಬಂಧಗಳಿಂದ ಮಮತ್ವವನ್ನು ತೆಗೆಯಿರಿ, ಕೇವಲ ಸಂಬಂಧವನ್ನು ನಿಭಾಯಿಸುವುದಕ್ಕಾಗಿ ಜೊತೆಯಲ್ಲಿರಿ”

ಪ್ರಶ್ನೆ:: -

ನೀವು ಮಕ್ಕಳು ದೇಹಭಾನವನ್ನು ಮರೆತಿದ್ದೀರಿ, ಇದರ ನೆನಪಾರ್ಥವನ್ನು ಶಾಸ್ತ್ರಗಳಲ್ಲಿ ಯಾವ ರೂಪದಿಂದ ತೋರಿಸಿದ್ದಾರೆ?

ಉತ್ತರ:-

ಪಾಂಡವರು ಪರ್ವತಗಳ ಮೇಲೆ ಕರಗಿ ಹೋದರೆಂದು ತೋರಿಸುತ್ತಾರೆ ಆದರೆ ಪರ್ವತಗಳ ಮೇಲೆ ಹಿಮಗಡ್ಡೆಗಳಲ್ಲಿ ಹೋಗಿ ಶರೀರ ಬಿಡಲು ಅವರಿಗೇನಾಗಿತ್ತು! ಕಾಯಿದೆ ಹೇಳುತ್ತದೆ – ಹಿಮಾಲಯ ಪರ್ವತಗಳ ಮೇಲೆ ಯಾರೂ ಶರೀರ ಬಿಡುವುದಿಲ್ಲ. ಬಾಕಿ ನೀವು ಯೋಗಬಲದಿಂದ ಶರೀರ ಬಿಡುತ್ತೀರಿ, ದೇಹಭಾನವನ್ನು ಮರೆತು ಅಶರೀರಿಯಾಗುವ ಅಭ್ಯಾಸ ಮಾಡುತ್ತೀರಿ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ – ಪ್ರತಿನಿತ್ಯವೂ ತಿಳಿಸುತ್ತಾರೆ ಆದರೂ ಸಹ ಕೆಲವು ಮಾತುಗಳು ಮರೆತು ಹೋಗುತ್ತವೆ. ಮಕ್ಕಳು ಇದನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ – ಇದು ಸಂಗಮಯುಗವಾಗಿದೆ, ನಾವು ಸಂಗಮಯುಗದಲ್ಲಿದ್ದೇವೆ. ತಂದೆಯು ಸಂಗಮದಲ್ಲಿಯೇ ಬರುತ್ತಾರೆ, ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆದಿಯ ಸಂಗಮವೆಂದು ಗಾಯನವಿದೆ, ಕರೆಯುವುದು ಈ ಸಮಯದಲ್ಲಿಯೇ. ಕಲಿಯುಗದ ಅಂತ್ಯಕ್ಕೆ ಪತಿತ ಪ್ರಪಂಚವೆಂದು ಹೇಳಲಾಗುತ್ತದೆ ಆದ್ದರಿಂದ ಮತ್ತ್ಯಾವುದೇ ಸಮಯದಲ್ಲಿ ಕರೆಯುವುದಿಲ್ಲ, ತಂದೆಯು ಬರುವುದೂ ಇಲ್ಲ. ಯಾವಾಗ ಕಲಿಯುಗದ ಅಂತ್ಯವಾಗುವುದೋ ಆಗಲೇ ಬಾಬಾ, ನಾವು ಪತಿತರನ್ನು ಪಾವನ ಮಾಡಲು ಬನ್ನಿ, ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆದಿಯಲ್ಲಿ ಬನ್ನಿ ಎಂದು ನನ್ನನ್ನು ಕರೆಯುತ್ತಾರೆ ಆದರೆ ಕಲ್ಪದ ಆಯಸ್ಸು ಎಷ್ಟು ಎಂಬುದು ಅವರಿಗೆ ತಿಳಿದಿಲ್ಲ. ಭಕ್ತಿ ಮಾಡುತ್ತಾ ಮಾಡುತ್ತಾ ತಿರುಗಾಡುತ್ತಾ-ತಿರುಗಾಡುತ್ತಾ ಕೊನೆಗೂ ಭಗವಂತ ಅವಶ್ಯವಾಗಿ ಸಿಗುವರು ಎಂದು ತಿಳಿದುಕೊಳ್ಳುತ್ತಾರೆ. ಯಾವಾಗ ಕಲ್ಪದ ಅಂತ್ಯವಾಗುವುದು ಎಂಬುದನ್ನು ತಿಳಿದುಕೊಂಡಿಲ್ಲ. ಕಲಿಯುಗದ ಅಂತ್ಯವು ಬಂದಾಗಲೇ ಎಲ್ಲರೂ ನೆನಪು ಮಾಡುತ್ತಾರೆ, ಸತ್ಯ-ತ್ರೇತಾಯುಗದಲ್ಲಿ ಅಪಾರ ಸುಖವಿರುತ್ತದೆ. ದ್ವಾಪರದಲ್ಲಿಯೂ ಇಷ್ಟು ದುಃಖವಿರುವುದಿಲ್ಲ, ಕಲಿಯುಗದಲ್ಲಿ ಮನುಷ್ಯರು ಯಾವಾಗ ದುಃಖಿಯಾಗುವರೋ ಆಗ ತಂದೆಯನ್ನು ಕರೆಯಲು ಆರಂಭಿಸುತ್ತಾರೆ. ತಮೋಪ್ರಧಾನರೆಂದರೆ ದುಃಖಿಗಳು ಆದ್ದರಿಂದಲೇ ಕರೆಯುತ್ತಾರಲ್ಲವೇ – ಹೇ ದುಃಖಹರ್ತ-ಸುಖಕರ್ತ ಬನ್ನಿರಿ ಎಂದು. ದುಃಖದ ಬಂಧನವು ಬಹಳಷ್ಟಿದೆ, ದುಃಖದ ಸಮಯದಲ್ಲಿ ಬಂದು ನಮ್ಮನ್ನು ಬಿಡಿಸಿ ಎಂದು ಭಗವಂತನನ್ನು ಕರೆಯುತ್ತಾರೆ. ಯಾವುದೇ ಮಾರ್ಗ ಸಿಗಲಿಲ್ಲವೆಂದರೆ ಬಹಳ ಜೋರಾಗಿ ಕರೆಯುತ್ತಾರೆ ಆದರೂ ಪಡೆಯುವುದಿಲ್ಲ. ಹೇಗೆ ಚಕ್ರವ್ಯೂಹವಿರುತ್ತದೆಯಲ್ಲವೇ, ಎಲ್ಲಿಂದ ಹೋದರೂ ಮಾರ್ಗ ಸಿಗುವುದಿಲ್ಲ. ಯಾವಾಗ ಸುಸ್ತಾಗಿ ಬಿಡುವರೋ ಆಗ ಜೋರಾಗಿ ಚೀರಾಡುತ್ತಾರೆ, ಇಲ್ಲಿಯೂ ಸಹ ಮನುಷ್ಯರು ಬಹಳ ದುಃಖಿಯಾದಾಗ ಹೇ ದುಃಖಹರ್ತ-ಸುಖಕರ್ತ ಅಂಧರಿಗೆ ಊರುಗೋಲಾದ ತಂದೆಯೇ ಎಂದು ಕೂಗುತ್ತಾರೆ. ಈ ಸಮಯದಲ್ಲಿಯೇ ತಂದೆಗೆ ಅಂಧರಿಗೆ ಊರುಗೋಲು ಎಂದು ಕರೆಯುತ್ತಾರೆ.

ನೀವೀಗ ಸಂಗಮದಲ್ಲಿದ್ದೀರಿ, ಒಂದು ಕಡೆ ಪಾಂಡವರು, ಇನ್ನೊಂದು ಕಡೆ ಕೌರವರಿದ್ದಾರೆ. ಯಾರು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲವೋ ಅವರಿಗೆ ಅಂಧರೆಂದು ಹೇಳಲಾಗುತ್ತದೆ. ತಂದೆಯ ಮೂಲಕ ರಚಯಿತ ಮತ್ತು ರಚನೆಯನ್ನು ಅರಿತುಕೊಂಡಿರುವವರಿಗೆ ಕಣ್ಣಿರುವವರೆಂದು ಹೇಳಲಾಗುತ್ತದೆ. ನೀವು ತಿಳಿಸುತ್ತೀರಿ – ನಮಗೆ ರಾಜ್ಯಭಾಗ್ಯವು ಸಿಕ್ಕಿದೆ ಆದ್ದರಿಂದಲೇ ಚಿತ್ರಗಳನ್ನು ತೋರಿಸುತ್ತೇವೆ. ಸತ್ಯಯುಗವು ಶಿವ ತಂದೆಯು ಸ್ಥಾಪನೆ ಮಾಡಿರುವುದಾಗಿದೆ ಆದ್ದರಿಂದ ಅದಕ್ಕೆ ಶಿವಾಲಯವೆಂದು ಹೆಸರು ಬಂದಿತು ನಂತರ ವಿಕಾರಿಗಳಾದಾಗ ವಾಮಮಾರ್ಗದ ಸ್ಥಾಪನೆಯಾಗುತ್ತದೆ. ಆದ್ದರಿಂದ ಇದಕ್ಕೆ ವೇಶ್ಯಾಲಯವೆಂದು ಹೇಳಲಾಗುತ್ತದೆ. ಸತ್ಯಯುಗವು ಶಿವಾಲಯವಾಗಿರುತ್ತದೆ, ಕಲಿಯುಗವು ವೇಶ್ಯಾಲಯವಾಗಿದೆ. ನೀವು ಸಂಗಮಯುಗೀ ಬ್ರಾಹ್ಮಣರಿಗೆ ಇದು ಅರ್ಥವಾಗಿದೆ – ನಾವೀಗ ವೇಶ್ಯಾಲಯದಲ್ಲಿಯೂ ಇಲ್ಲ, ಶಿವಾಲಯದಲ್ಲಿಯೂ ಇಲ್ಲ. ನಾವು ಶಿವಾಲಯದಲ್ಲಿ ಹೋಗುತ್ತಿದ್ದೇವೆ, ಈಗ ವೇಶ್ಯಾಲಯ, ವಿಕಾರಿ ಸಂಬಂಧಗಳಿಂದ ನಮ್ಮ ಮಮತೆಯು ಹೊರಟುಹೋಗಿದೆ, ಈಗ ನಮ್ಮದು ಭವಿಷ್ಯದ ಸಂಬಂಧಗಳೊಂದಿಗೆ ಮಮತೆಯಿದೆ, ನಾವೀಗ ರಾಜಯೋಗಿಗಳಾಗಿದ್ದೇವೆ. ಅವರು ಯೋಗಿಗಳಾಗಿದ್ದಾರೆ, ಅವರೊಂದಿಗೆ ನಮಗೆ ಸಂಬಂಧವೇನಿದೆ! ಆದರೂ ಸಹ ಸಂಬಂಧವನ್ನು ನಿಭಾಯಿಸುವುದಕ್ಕಾಗಿ ತಮ್ಮ ಮನೆಯಲ್ಲಿಯೇ ಇರಬೇಕಾಗಿದೆ. ಆದರೂ ಬ್ರಾಹ್ಮಣರೊಂದಿಗೆ ಹೆಚ್ಚು ಸಂಬಂಧವಿರುತ್ತದೆ ಏಕೆಂದರೆ ಬ್ರಾಹ್ಮಣರಷ್ಟು ಶ್ರೇಷ್ಠ ಸೇವೆಯನ್ನು ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ಆತ್ಮಿಕ ಸೇವೆ ಮಾಡಲು ತಂದೆಯೇ ನಿಮಿತ್ತರಾಗುತ್ತಾರೆ, ಅವರು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಗುರುವೂ ಆಗಿದ್ದಾರೆ. ಸತ್ಯ ತಂದೆ, ಸತ್ಯ ಶಿಕ್ಷಕ, ಸದ್ಗುರುವಾಗಿದ್ದಾರೆ, ಸತ್ಯಕ್ಕೆ ಸುಪ್ರೀಂ ಎಂದು ಹೇಳುತ್ತಾರೆ. ಅವರ ಮೂಲಕ ನಮಗೆ ಆಸ್ತಿ ಸಿಗುತ್ತಿದೆ, ಇದು ನೆನಪಿದ್ದರೆ ಪ್ರತೀ ಸಮಯ ಎಷ್ಟೊಂದು ಖುಷಿಯಿರುವುದು ಮತ್ತೆ ಅನ್ಯರಿಗೂ ತಿಳಿಸುವುದಕ್ಕಾಗಿ ಪುರುಷಾರ್ಥ ಮಾಡಲಾಗುತ್ತದೆ. ಮೊಟ್ಟ ಮೊದಲು ಅವರು ಪಾರಲೌಕಿಕ ತಂದೆಯಾಗಿದ್ದಾರೆ. ಅವರು ಸತ್ಯ ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ, ಸೃಷ್ಟಿಚಕ್ರದ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡುತ್ತಾರೆ ಆದ್ದರಿಂದ ಅವರಿಗೆ ಜ್ಞಾನಸಾಗರನೆಂದು ಹೇಳಲಾಗುತ್ತದೆ. ಮೊಟ್ಟ ಮೊದಲು ಅವರ ಮಹಿಮೆ ಮಾಡಬೇಕಾಗಿದೆ. ಅವರು ಸತ್ಯತಂದೆ, ಸತ್ಯ ಶಿಕ್ಷಕ, ಸದ್ಗುರುವಾಗಿದ್ದಾರೆ, ಸತ್ಯಧರ್ಮದ ಸ್ಥಾಪನೆ ಮಾಡುತ್ತಾರೆ. ಒಂದು ರಾಜ್ಯವಿರಲಿ ಎಂದು ಬಯಸುತ್ತಾರಲ್ಲವೇ, ಅದು ಸತ್ಯಯುಗದಲ್ಲಿಯೇ ಇರುತ್ತದೆ, ಇಲ್ಲಂತೂ ಇರಲು ಸಾಧ್ಯವಿಲ್ಲ. ಒಂದು ವಿಶ್ವವಿರಲಿ, ಏಕತೆಯಿರಲಿ ಎಂದು ಮನುಷ್ಯರು ಹೇಳುತ್ತಾರೆ. ವಿಶ್ವವಂತೂ ಒಂದೇ ಇರುತ್ತದೆ, ಕೇವಲ ವಿಶ್ವದಲ್ಲಿ ಒಂದು ರಾಜ್ಯವಿರಲಿ ಎಂಬುದು ಸರಿಯಾಗಿದೆ, ದೇವತೆಗಳ ರಾಜ್ಯವಿತ್ತು ಅಲ್ಲಿ ಮತ್ತ್ಯಾವುದೇ ಏರುಪೇರಿನ ಮಾತೇ ಇರಲಿಲ್ಲ. ಬೇಹದ್ದಿನ ತಂದೆಯು ಬಂದು ರಾಜಧಾನಿಯ ಸ್ಥಾಪನೆ ಮಾಡುತ್ತಾರೆ, ಇದನ್ನೂ ನೀವು ಈಗ ತಿಳಿದುಕೊಂಡಿದ್ದೀರಿ. ತಂದೆಯೇ ರಾಜಯೋಗವನ್ನು ಕಲಿಸುತ್ತಾರೆ, ಶ್ರೀಕೃಷ್ಣನಲ್ಲ, ಅವರು ಕೃಷ್ಣನೆಂದು ತಿಳಿದುಕೊಂಡಿದ್ದಾರೆ. ಯಾವಾಗ ರಾಜಧಾನಿಯನ್ನು ಸ್ಥಾಪನೆ ಮಾಡಬೇಕಾಗಿದೆಯೋ ಆಗಲೇ ರಾಜಯೋಗವನ್ನು ಕಲಿಸಿದರು ಬಾಕಿ ಶಾಸ್ತ್ರಗಳಲ್ಲಿ ಕೇವಲ ಮಹಿಮೆಯಿದೆ. ಮಹಿಮೆ ಮಾಡುವುದರಿಂದ ರಾಜಯೋಗವನ್ನು ಕಲಿತಂತಾಯಿತೇ! ಅವರು ಯಾವ ಗೀತೆ ಇತ್ಯಾದಿಗಳನ್ನು ತಿಳಿಸುತ್ತಾರೆಯೋ ಅವರು ರಾಜಯೋಗವನ್ನು ಕಲಿಸುತ್ತಾರೆಯೇ? ಗೀತೆಯನ್ನು ತಿಳಿಸುತ್ತಾರೆ, ಅದು ಕೇವಲ ಯಾರು ಬಿದ್ದು ಹೋಗಿದ್ದಾರೆಯೋ ಅವರ ಮಹಿಮೆ ಮಾಡುತ್ತಾರೆ. ಭಗವಂತನು ಯಾರಿಗೆ ತಿಳಿಸಿದರೋ ಅವರೇ ರಾಜ್ಯ ಪದವಿಯನ್ನು ಪಡೆದರು. ಬಾಕಿ ಈ ಹಬ್ಬಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ, ಮುಖ್ಯವಾದುದು ಸಂಗಮಯುಗದ ಮಾತಾಗಿದೆ. ಶಿವ ತಂದೆಯು ಬರುತ್ತಾರೆ, ಶಿವ ಜಯಂತಿಯ ನಂತರ ಕೃಷ್ಣ ಜಯಂತಿಯಾಗುತ್ತದೆ. ಶಿವ ತಂದೆಯು ಬಂದ ನಂತರ ಅವಶ್ಯವಾಗಿ ಹೊಸ ಪ್ರಪಂಚವು ಸ್ಥಾಪನೆಯಾಗುವುದು. ಕೃಷ್ಣನಂತೂ ಸತ್ಯಯುಗದ ಮಾಲೀಕನಾಗಿದ್ದಾನೆ, ಶಿವ ತಂದೆಯು ಬಂದು ಕೃಷ್ಣನನ್ನು ಈ ರೀತಿ ಮಾಡಿದರು. ಕೇವಲ ಒಬ್ಬ ಕೃಷ್ಣನಿಗೇ ಜ್ಞಾನವನ್ನು ಕೊಟ್ಟಿರುವರೇ? ಕೃಷ್ಣಪುರಿಯನ್ನೂ ಸ್ಥಾಪನೆ ಮಾಡಿರುವರು. ಆತ್ಮವನ್ನೇ ತಮೋಪ್ರಧಾನದಿಂದ ಸತೋಪ್ರಧಾನವನ್ನಾಗಿ ಮಾಡಿಕೊಳ್ಳಲು ಯೋಗವನ್ನು ಕಲಿಸಿದ್ದಾರೆ. ನೀವೇ ಮತ್ತೆ ಸತೋ, ರಜೋ, ತಮೋದಲ್ಲಿ ಬರುತ್ತೀರಲ್ಲವೇ. ನೀವು ಸತ್ಯಯುಗದಲ್ಲಿಯೇ ಕುಳಿತುಬಿಡಬೇಕು ಎಂದಲ್ಲ, 84 ಜನ್ಮಗಳ ಲೆಕ್ಕವೂ ಇದೆ. ಸತ್ಯಯುಗದ ನಂತರ ತ್ರೇತಾ, ದ್ವಾಪರ…. ಅವಶ್ಯವಾಗಿ ಬರಲೇಬೇಕಾಗಿದೆ. ದಿನದ ನಂತರ ರಾತ್ರಿಯಾಗಲೇಬೇಕಾಗಿದೆ. ಸತ್ಯಯುಗದ ಸ್ಥಾಪನೆಯನ್ನು ಯಾರು ಮಾಡುತ್ತಾರೆ, ಹೇಗೆ ಮಾಡುತ್ತಾರೆ? ಏಕೆಂದರೆ ಸತ್ಯಯುಗವು ಹೊಸ ಪ್ರಪಂಚವಾಗಿದೆ. ನಾನು ಹಳೆಯ ಪ್ರಪಂಚವನ್ನು ಪರಿವರ್ತಿಸುತ್ತೇನೆಂದು ತಂದೆಯು ಹೇಳುತ್ತಾರೆ. ಇದು ಮಹಾಭಾರತದ ಅದೇ ಅಣ್ವಸ್ತ್ರಗಳ ಯುದ್ಧವಾಗಿದೆ. ಅಲ್ಲಿ ಪಾಂಡವರೂ ಇದ್ದರು, ಪಾಂಡವರ ಜಯವಾಯಿತು, ಸ್ವರಾಜ್ಯವು ಸಿಕ್ಕಿತೆಂದು ಹೇಳುತ್ತಾರೆ. ಅಂದಾಗ ಸ್ವರಾಜ್ಯದಲ್ಲಿ ಬರುತ್ತೀರಲ್ಲವೇ. ಭಲೆ ಎಲ್ಲಿಯಾದರೂ ಶರೀರ ಬಿಡಲಿ, ರಾಜ್ಯದಲ್ಲಂತೂ ಬರಬೇಕಾಗಿದೆ. ಕಾಯಿದೆಯು ಹೇಳುತ್ತದೆ – ಹಿಮಾಲಯ ಪರ್ವತಗಳಲ್ಲಿ ಯಾರೂ ಶರೀರ ಬಿಡುವುದಿಲ್ಲ. ಯೋಗವನ್ನು ಇಲ್ಲಿಯೇ ಕಲಿಯುತ್ತಾರೆ, ಯೋಗಬಲದಿಂದಲೇ ಶರೀರ ಬಿಡಬೇಕಾಗಿದೆ. ಪರ್ವತಗಳಲ್ಲಿ ಹಿಮಗಡ್ಡೆಗಳಲ್ಲಿ ಶರೀರ ಬಿಡಲು ಅವರಿಗೇನಾಗಿದೆ? ಇದೆಲ್ಲವೂ ವಾಸ್ತವಿಕತೆಯಲ್ಲ, ಹೇಗೆ ಸರ್ಪವು ಹಳೆಯ ಪೋರೆಯನ್ನು ಬಿಟ್ಟು ಹೊಸದನ್ನು ತೆಗೆದುಕೊಳ್ಳುತ್ತದೆ ಹಾಗೆಯೇ ಆತ್ಮವೂ ಸಹ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಶಾಂತಿಧಾಮದಲ್ಲಿ ಹೋಗಿ ನಂತರ ಸತ್ಯಯುಗದಲ್ಲಿ ಬರುತ್ತೀರಿ. ತಂದೆಯು ತಿಳಿಸುತ್ತಾರೆ- ಸತ್ಯಯುಗದಲ್ಲಿ ಶರೀರ ಬಿಟ್ಟರೆ ತಮ್ಮ ಸಮಯದಲ್ಲಿ ಯಾವಾಗ ಶರೀರವು ಹಳೆಯದಾಗುತ್ತದೆಯೋ ಆಗ ತಾವಾಗಿಯೇ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ. ಅಲ್ಲಂತೂ ಹಿಂತಿರುಗಿ ಶಾಂತಿಧಾಮಕ್ಕೆ ಹೋಗುವುದಿಲ್ಲ. ಶಾಂತಿಧಾಮಕ್ಕೆ ಈಗಲೇ ಹೋಗಬೇಕಾಗಿದೆ. ಈಗ ಆ ಅಭ್ಯಾಸವನ್ನು ಮಾಡಲಾಗುತ್ತದೆ, ಆ ನಿಮ್ಮ ಅಭ್ಯಾಸವು ಅವಿನಾಶಿಯಾಗಿ ಬಿಡುತ್ತದೆ. ಇಲ್ಲಂತೂ ಏಕೆ ಅಭ್ಯಾಸ ಮಾಡಿಸುತ್ತಾರೆಂದರೆ ಈ ಹಳೆಯ ಪ್ರಪಂಚವನ್ನೇ ಬಿಡಬೇಕಾಗಿದೆ, ಅಲ್ಲಂತೂ ಹೊಸ ಪ್ರಪಂಚವಿರುತ್ತದೆ. ಸ್ವರ್ಗವಾಸಿಗಳು ಶರೀರ ಬಿಟ್ಟರೆ ಸ್ವರ್ಗದಲ್ಲಿಯೇ ಬರುತ್ತಾರೆ. ನರಕವಾಸಿಗಳು ಶರೀರ ಬಿಟ್ಟರೆ ನರಕದಲ್ಲಿಯೇ ಇರುತ್ತಾರೆ, ಸ್ವರ್ಗದಲ್ಲಿ ಹೋಗಲು ಸಾಧ್ಯವಿಲ್ಲ. ರಾಜ-ಮಹಾರಾಜ ಎಂಬ ಬಿರುದು ಇಲ್ಲಿಯೂ ಸಿಗುತ್ತದೆ. ಭಲೆ ಇನ್ನೊಂದು ಪದವಿ ಸಿಗುತ್ತದೆ ಆದರೂ ಸಹ ಹೆಸರು ಅದೇ ನಡೆದು ಬರುತ್ತದೆ, ಮರೆಯುವುದಿಲ್ಲ. ಕೆಲಕೆಲವರ ಬಿರುದನ್ನು ಖಾಯಂ ಮಾಡಿ ಬಿಡುತ್ತಾರೆ. ಅದನ್ನು ಹಣ ಕೊಟ್ಟು ಬಿರುದನ್ನು ತೆಗೆದುಕೊಳ್ಳುತ್ತಾರೆ. ಹಿಂದೆ ಒಂದೆರಡು ಲಕ್ಷಗಳನ್ನು ಕೊಟ್ಟರೆ ಬಿರುದು ಸಿಗುತ್ತಿತ್ತು. ಈ ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ ಅವರಿಗೆ ಆತ್ಮಿಕ ತಂದೆಯೆಂದು ಹೇಳಲಾಗುತ್ತದೆ. ಅವರನ್ನೇ ಹೇ ತಂದೆಯೇ ಬಂದು ನಮ್ಮನ್ನು ಪತಿತರಿಂದ ಪಾವನ ಮಾಡಿರಿ, ಇಲ್ಲಿ ಬಹಳ ದುಃಖವಿದೆ, ನಮ್ಮನ್ನು ರಾಮ ರಾಜ್ಯದಲ್ಲಿ ಕರೆದುಕೊಂಡು ಹೋಗಿ ಎಂದು ಕರೆಯುತ್ತಾರೆ. ಡ್ರಾಮಾನುಸಾರ 5000 ವರ್ಷಗಳ ಮೊದಲೂ ಸಹ ಇದೇ ರೀತಿ ಹೇಳಿದ್ದರು. ಪರಮಪಿತ ಪರಮಾತ್ಮನು ಬರಲೇಬೇಕಾಗಿದೆ, ಈ ಚಕ್ರವು ಸುತ್ತುತ್ತಿರುತ್ತದೆ. ನಾನು ಕಲ್ಪ-ಕಲ್ಪವೂ ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆಂದು ತಂದೆಯು ಹೇಳುತ್ತಾರೆ. ಈ ಅಕ್ಷರವನ್ನು ಅವಶ್ಯವಾಗಿ ಹಾಕಬೇಕಾಗಿದೆ, ನಾನು ಡ್ರಾಮಾ ಪ್ಲಾನನುಸಾರ ಬರುತ್ತೇನೆ, ಈ ಡ್ರಾಮಾ ಶಬ್ಧವನ್ನು ಬರೆಯಬೇಕಾಗಿದೆ, ಇದರಿಂದ ಮನುಷ್ಯರಿಗೆ ಅರ್ಥವಾಗಲಿ – ಇದು 5000 ವರ್ಷಗಳ ನಾಟಕವಾಗಿದೆ ಎಂದು.

ಈಗ ಎಲ್ಲಾ ಮನುಷ್ಯ ಮಾತ್ರರು ಪತಿತರಾಗಿದ್ದಾರೆ ಆದ್ದರಿಂದ ನಾವು ಪಾಪಿಯಾಗಿದ್ದೇವೆ, ನೀಚರಾಗಿದ್ದೇವೆ ಎಂದು ಸ್ವಯಂ ಹೇಳುತ್ತಾರೆ. ಅವಶ್ಯವಾಗಿ ವೇಶ್ಯಾಲಯವೂ ಆಗಿದೆ, ವಿಷಯಸಾಗರ ಆಗಿದೆಯಲ್ಲವೇ. ವಿಷ್ಣುಪುರಿಯು ಕ್ಷೀರಸಾಗರವಾಗಿತ್ತು ಅಲ್ಲಿ ಲಕ್ಷ್ಮೀ-ನಾರಾಯಣ ಇಬ್ಬರೂ ಇದ್ದರು, ಕ್ಷೀರಸಾಗರವೆಂದು ಹೋಲಿಕೆಯಲ್ಲಿ ಹೇಳಲಾಗುತ್ತದೆ. ಬಾಕಿ ಸ್ಥೂಲವಾಗಿ ಯಾವುದೇ ಕ್ಷೀರಸಾಗರ ಇರುವುದಿಲ್ಲ. ಸಾಗರವು ಸತ್ಯಯುಗದಲ್ಲಿಯೂ ಇದೇ ಇರುತ್ತದೆ, ಕಲಿಯುಗದಲ್ಲಿಯೂ ಇದೆ. ಸತ್ಯಯುಗದಲ್ಲಿ ಇಡೀ ಸಾಗರಕ್ಕೆ ನೀವು ಮಾಲೀಕರಾಗಿರುತ್ತೀರಿ, ಆಕಾಶ ಭೂಮಿ ಎಲ್ಲದಕ್ಕೂ ನೀವು ಮಾಲೀಕರಾಗಿದ್ದೀರಿ. ಈಗಂತೂ ತುಂಡು-ತುಂಡಾಗಿ ಬಿಟ್ಟಿದೆ. ಈಗ ಇದು ಸಂಗಮಯುಗವಾಗಿದೆ. ಸಂಗಮಯುಗವು ನೆನಪಿಗೆ ಬಂದಾಗಲೇ ಈಗ ಸತ್ಯಯುಗದಲ್ಲಿ ಹೋಗುತ್ತೇವೆ ಎಂಬುದು ಅರ್ಥವಾಗುತ್ತದೆ. ಸಂಗಮವಾಗಿದೆಯೆಂದ ಮೇಲೆ ತಂದೆಯು ಅವಶ್ಯವಾಗಿ ಇರುವರು, ಅವರು ಈ ಪ್ರಪಂಚವನ್ನು ಬದಲಾಯಿಸುವವರಾಗಿದ್ದಾರೆ. ಸ್ಥಾಪನೆಯಂತೂ ಬ್ರಹ್ಮಾರವರ ಮೂಲಕ ಇಲ್ಲಿಯೇ ಆಗುತ್ತದೆ, ನೀವೀಗ ಚಿತ್ರವನ್ನು ಮಾಡಿಸುತ್ತೀರಿ. ತಂದೆಯು ಶಕ್ತಿ ಮತ್ತು ಬೆಳಕಿನ ಬಿಂದುವಾಗಿದ್ದಾರೆ. ನೀವಾತ್ಮರೂ ಬಿಂದುವಾಗಿದ್ದೀರಿ. ಈಗ ನಿಮಗೆ ಪ್ರಕಾಶತೆಯನ್ನು ಎಲ್ಲಿ ತೋರಿಸುವುದು! ಆದ್ದರಿಂದ ನಿಮ್ಮ ತಲೆಯಲ್ಲಿ ಬಿಂದುವನ್ನು ತೋರಿಸಿದ್ದಾರೆ. ಆತ್ಮಕ್ಕೆ ಪ್ರಕಾಶವನ್ನು ಹೇಗೆ ತೋರಿಸುವುದು! ಲೈಟ್ನ್ನು ತೋರಿಸಿದರೆ ಅದು ದೊಡ್ಡದಾಗಿ ಬಿಡುತ್ತದೆ, ಅವರು ದೊಡ್ಡ ಲೈಟನ್ನೇ ಪೂಜಿಸುತ್ತಾರೆ ಆದರೆ ಮನುಷ್ಯರು ಪರಮಾತ್ಮನನ್ನೇ ಜ್ಯೋತಿ ಸ್ವರೂಪನೆಂದು ಹೇಳಿ ಬಿಡುತ್ತಾರೆ. ವಾಸ್ತವದಲ್ಲಿ ಪ್ರಕಾಶತೆಯು ಪವಿತ್ರತೆಯ ಚಿಹ್ನೆಯಾಗಿದೆ. ಜ್ಯೋತಿ ಸ್ವರೂಪವೆಂದು ಮನುಷ್ಯರು ತಿಳಿಯುತ್ತಾರೆ, ಒಂದುವೇಳೆ ಬಿಂದುವಿಗೆ ಆ ಪ್ರಕಾಶವನ್ನು ಚಿಕ್ಕದಾಗಿ ಕೊಟ್ಟರೆ ಪೂಜೆ ಮಾಡಲು ಆಗುವುದಿಲ್ಲ ಆದ್ದರಿಂದ ದೊಡ್ಡ ಗಾತ್ರದಲ್ಲಿ ಮಾಡಿ ಬಿಡುತ್ತಾರೆ. ತಂದೆಯು ತಿಳಿಸುತ್ತಾರೆ – ನಾನು ಪರಮ ಆತ್ಮನಾಗಿದ್ದೇನೆ, ನನ್ನನ್ನು ನೀವು ಪರಮಾತ್ಮನೆಂದು ಹೇಳುತ್ತೀರಿ ಆದರೆ ಚಿಕ್ಕ ಬಿಂದುವಿಗೆ ಹೇಗೆ ಪೂಜೆ ಮಾಡುವುದು! ಹೇಗೆ ಪ್ರಭಾವಳಿಯನ್ನು ತೋರಿಸುವುದು? ಕೆಲವರು ಲಿಂಗ ಪೂಜೆಯನ್ನು ಮಾಡುತ್ತಾರೆ, ಸಾಹುಕಾರರಾಗಿದ್ದರೆ ವಜ್ರದಿಂದ ಲಿಂಗಾಕಾರವಾಗಿ ಮಾಡಿಸಿ ಅದರ ಪೂಜೆ ಮಾಡುತ್ತಾರೆ, ಹೆಸರನ್ನಂತೂ ಶಿವಲಿಂಗವೆಂದೇ ಇಡುತ್ತಾರೆ. ತಂದೆಯು ಬಿಂದುವಲ್ಲವೇ ಮತ್ತೇನೂ ಅಲ್ಲ. ಇವು ತಿಳಿದುಕೊಳ್ಳುವ ಗುಹ್ಯ ಮಾತುಗಳಾಗಿವೆ. ಆತ್ಮವು ಚಿಕ್ಕದು, ದೊಡ್ಡದಾಗಿರುವುದಿಲ್ಲ. ಇಲ್ಲದಿದ್ದರೆ ಅದು ಕುಳಿತುಕೊಳ್ಳುವುದು ಹೇಗೆ? ನೀವೀಗ ಹೇಗೆ ತಮ್ಮ ಆತ್ಮವನ್ನು ತಿಳಿದುಕೊಂಡಿದ್ದೀರೋ ಹಾಗೆಯೇ ತಂದೆಯನ್ನೂ ತಿಳಿದುಕೊಂಡಿದ್ದೀರಿ, ಆತ್ಮವು ತಂದೆಯನ್ನೇ ಕರೆಯುತ್ತದೆ ಅಂದಾಗ ನೋಡಿದ್ದೀರಾ? ಪರಮಾತ್ಮನನ್ನು ಹೇಗೆ ನೋಡುತ್ತೀರಿ? ಹಾ! ದಿವ್ಯದೃಷ್ಟಿಯಿಂದ ನೋಡಬಹುದಾಗಿದೆ, ಅದರಲ್ಲಿಯೂ ನೀವೀಗ ಯಥಾರ್ಥವಾಗಿ ಅರಿತುಕೊಂಡಿದ್ದೀರಿ ಅಂದಮೇಲೆ ನೋಡುವುದರಿಂದ ಏನು ಲಾಭ! ಇಲ್ಲಂತೂ ವಿದ್ಯೆಯನ್ನು ಓದಬೇಕಾಗಿದೆ, ಇದರಿಂದ ಮನುಷ್ಯರು ದೇವತೆಯಾಗುತ್ತಾರೆ. ಇದು ಭವಿಷ್ಯ ಹೊಸ ಪ್ರಪಂಚಕ್ಕಾಗಿ ವಿದ್ಯೆಯಾಗಿದೆ. ಈ ಲಕ್ಷ್ಮೀ-ನಾರಾಯಣರು ಇಂತಹ ಕರ್ಮವನ್ನು ಎಲ್ಲಿಂದ ಕಲಿತರು? ಸಂಗಮಯುಗದಲ್ಲಿ. ತಂದೆಯು ತಿಳಿಸುತ್ತಾರೆ – ನಾನು ಸಂಗಮದಲ್ಲಿಯೇ ಬಂದು ನಿಮಗೆ ಹೊಸ ಪ್ರಪಂಚಕ್ಕಾಗಿ ವಿದ್ಯೆಯನ್ನು ಓದಿಸುತ್ತೇನೆ. ತಂದೆಯು ಪ್ರದರ್ಶನಿಯಲ್ಲಿ ಪತ್ರವನ್ನು ಕೊಡುತ್ತಾರೆ, ಅದರಲ್ಲಿ ಇದನ್ನೂ ಬರೆಯಬೇಕಾಗಿದೆ – ಇದು ಸಂಗಮಯುಗವಾಗಿದೆ. ತಂದೆಯು ಹೇಳುತ್ತಾರೆ, ನೀವು ನನ್ನಿಂದ ಭವಿಷ್ಯ 21 ಜನ್ಮಗಳಿಗಾಗಿ ಜನ್ಮಸಿದ್ಧ ಅಧಿಕಾರವನ್ನು ತೆಗೆದುಕೊಳ್ಳಬಹುದು, ಈ ಸಂಗಮಯುಗ ಶಬ್ಧವನ್ನು ಅವಶ್ಯವಾಗಿ ಬರೆಯಬೇಕಾಗಿದೆ. ಯಾವ ಪತ್ರವು ಸರಿಯಾಗಿ ತಲುಪುತ್ತದೆಯೋ ಅದರ ಕಾಪಿಯನ್ನು ಅಲ್ಲಿ ಅಂಟಿಸಬೇಕು. ದೊಡ್ಡ ಅಕ್ಷರಗಳಲ್ಲಿ ಬರೆಯಬೇಕಾಗಿದೆ. ದಿನ-ಪ್ರತಿದಿನ ಸ್ಪಷ್ಟವಾಗುತ್ತಾ ಹೋಗುತ್ತದೆ. ಕೆಳಗೆ ಬಾಪ್ದಾದಾ ಎಂದು ಬರೆಯುತ್ತಾರೆ. ಶಿವ ತಂದೆಯು ಯಾರು ಆತ್ಮರ ತಂದೆಯಾಗಿದ್ದಾರೆಯೋ ಅವರು ಪ್ರಜಾಪಿತ ಬ್ರಹ್ಮನ ಮೂಲಕ ಕಲಿಸುತ್ತಾರೆ. ತಂದೆಯು ತಿಳಿಸುತ್ತಾರೆ – ನನಗೆ ಶರೀರದ ಆಧಾರವಂತೂ ಬೇಕಲ್ಲವೆ, ಶಿವ ನಿರಾಕಾರನಾಗಿದ್ದಾರೆ. ಅವರಿಗೆ ತಮ್ಮದೇ ಆದ ಶರೀರವಿಲ್ಲ. ಬ್ರಹ್ಮಾ-ವಿಷ್ಣು-ಶಂಕರನಂತೂ ಸೂಕ್ಷ್ಮ ಆಕಾರಿಯಾಗಿದ್ದಾರೆ, ಉಳಿದೆಲ್ಲರಿಗೂ ಶರೀರವಿದೆ. ತಂದೆಯು ತಿಳಿಸುತ್ತಾರೆ- ನನಗೆ ಶರೀರವೆಲ್ಲಿದೆ? ಆದರೆ ನಾನು ನಾಮ-ರೂಪದಿಂದ ಭಿನ್ನವೆಂದಲ್ಲ, ಬಹಳ ಸ್ಪಷ್ಟವಾಗಿ ಮಕ್ಕಳಿಗೆ ತಿಳಿಸುತ್ತಾರೆ- ನಾನು ನಿರಾಕಾರನಾಗಿದ್ದೇನೆ ಆದರೆ ನಾನು ಬರುತ್ತೇನೆಂದರೆ ಅವಶ್ಯವಾಗಿ ನನಗೆ ಶರೀರ ಬೇಕು, ನಾನು ಗರ್ಭದಲ್ಲಿ ಬರುವುದಿಲ್ಲ. ನಾನೇ ಸ್ವಯಂ ತಿಳಿಸುತ್ತೇನೆ – ನಾನು ಈ ಸಾಧಾರಣ ತನುವಿನಲ್ಲಿ ಬರುತ್ತೇನೆ. ಇವರು ಮೊದಲು ಪೂಜ್ಯನಾಗಿದ್ದರು, ಈಗ ಪೂಜಾರಿಯಾಗಿದ್ದಾರೆ. ಮಾಲೆಯಲ್ಲಿ ಮೊದಲು ಶಿವ ತಂದೆ ನಂತರ ಎರಡು ಮಣಿಗಳಿವೆ, ಪ್ರವೃತ್ತಿ ಮಾರ್ಗವಿದೆಯಲ್ಲವೇ, ಈಗ ನಿಮಗೆ ತಿಳಿದಿದೆ – ಪ್ರವೃತ್ತಿ ಮಾರ್ಗದವರದೇ ಮಾಲೆಯಿದೆ, ಯಾರು ಪ್ರವೃತ್ತಿ ಮಾರ್ಗದಲ್ಲಿ ಪತಿತರಾಗಿದ್ದರು, ಈಗ ಶಿವ ತಂದೆಯ ಮತದಿಂದ ಪಾವನರಾಗಿ ಸೃಷ್ಟಿಯನ್ನು ಪಾವನ ಮಾಡಿದ್ದಾರೆ ಆದ್ದರಿಂದಲೇ ಅವರ ನೆನಪಾರ್ಥವಾಗಿ ಮಾಲೆಯು ಮಾಡಲ್ಪಟ್ಟಿದೆ. ರುದ್ರಮಾಲೆ ಮತ್ತು ವಿಷ್ಣುವಿನ ವೈಜಯಂತಿ ಮಾಲೆಯಿದೆ, ಬ್ರಾಹ್ಮಣರ ಮಾಲೆಯಾಗುವುದಿಲ್ಲ. ಬ್ರಾಹ್ಮಣರ ಮಾಲೆ ಮಾಡಲು ಪ್ರಯತ್ನ ಪಟ್ಟೆವು ಆದರೆ ಆಗಲಿಲ್ಲ. ಆದ್ದರಿಂದ ಮಾಲೆಯಾಗುವುದು, ಅವ್ಯಕ್ತ ಹೆಸರುಗಳನ್ನು ಇಡುವುದನ್ನು ಬಿಟ್ಟು ಬಿಟ್ಟೆವು. ಇಲ್ಲಿ ಯಾವ ಹೆಸರುಗಳನ್ನು ಇಡಲಾಗಿತ್ತೋ ಅವನ್ನು ಇಲ್ಲಿಯೇ ಬಿಟ್ಟು ಮತ್ತೆ ಅದೇ ತಮ್ಮ ಹಳೆಯ ಹೆಸರನ್ನು ಇಟ್ಟುಕೊಂಡು ಹೊರಟು ಹೋಗುತ್ತಾರೆ. ಅವರನ್ನು ಆ ಹೊಸ ಹೆಸರಿನಿಂದ ಯಾರೂ ಕರೆಯುವುದಿಲ್ಲ. ಅಂದಾಗ ತಂದೆಯು ನಮ್ಮ ತಂದೆ, ಶಿಕ್ಷಕ, ಗುರುವಾಗಿದ್ದಾರೆ, ಇಂತಹ ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ ಆದರೆ ಮಾಯೆಯು ಹೀಗಿದೆ ಅದು ಮರೆಸಿ ಬಿಡುತ್ತದೆ ಆದ್ದರಿಂದ ಸ್ಥಿತಿಯು ಡೋಲಾಯಮಾನವಾಗುತ್ತದೆ. ಬಹಳ ಬೇಸರದ ಅನುಭವವಾಗುತ್ತದೆ. ಶಿವ ತಂದೆಯ ನೆನಪಿನಿಂದ ಮತ್ತೆ ಎದ್ದು ನಿಲ್ಲುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ವಿಕಾರೀ ಸಂಬಂಧಗಳಿಂದ ಮಮತೆಯನ್ನು ತೆಗೆಯಬೇಕು, ಭವಿಷ್ಯದ ಹೊಸ ಸಂಬಂಧಗಳೊಂದಿಗೆ ಬುದ್ಧಿಯೋಗವನ್ನು ಇಡಬೇಕಾಗಿದೆ.

2. ಅನ್ಯರಿಗೆ ತಿಳಿಸುವುದಕ್ಕಾಗಿ ಪ್ರತಿ ಸಮಯ ಖುಷಿಯಲ್ಲಿ ಇರಬೇಕಾಗಿದೆ. ಸತ್ಯ ತಂದೆ, ಸತ್ಯ ಶಿಕ್ಷಕ ಮತ್ತು ಸತ್ಗುರುವಿನ ಶ್ರೀಮತದಂತೆ ನಡೆದು ಅಂಧರಿಗೆ ಊರುಗೋಲಾಗಬೇಕಾಗಿದೆ.

ವರದಾನ:-

ಶಕ್ತಿ ಸ್ವರೂಪರಾಗುವುದಕ್ಕಾಗಿ ಕೋಮಲತೆಯನ್ನು ಚಮತ್ಕಾರದಲ್ಲಿ ಪರಿವರ್ತನೆ ಮಾಡಿರಿ. ಕೇವಲ ಸ್ವಯಂನ ಸಂಸ್ಕಾರಗಳನ್ನು ಪರಿವರ್ತನೆ ಮಾಡುವುದರಲ್ಲಿ ಕೋಮಲರಾಗಿರಿ, ಕರ್ಮದಲ್ಲೆಂದಿಗೂ ಕೋಮಲರಾಗಬಾರದು, ಇದರಲ್ಲಿ ಶಕ್ತಿರೂಪವುಳ್ಳವರಾಗಿರಿ. ಯಾರು ಶಕ್ತಿರೂಪದ ಕವಚವನ್ನು ಧರಿಸುತ್ತಾರೆಯೋ, ಅವರಿಗೆ ಮಾಯೆಯ ಯಾವುದೇ ಬಾಣವು ನಾಟಲು ಸಾಧ್ಯವಿಲ್ಲ. ಆದ್ದರಿಂದ ತಮ್ಮ ಚಹರೆ, ನಯನ, ಚಲನೆಯಿಂದ ಕೋಮಲತೆಗೆ ಬದಲಾಗಿ ಶಕ್ತಿರೂಪವು ಕಾಣಿಸಲಿ, ಇದರಿಂದ ಮಾಯಾಜೀತರಾಗಿ ಪಾಸ್-ವಿತ್-ಆನರ್ನ ಸರ್ಟಿಫಿಕೇಟನ್ನು ತೆಗೆದುಕೊಳ್ಳಲು ಸಾಧ್ಯವಾಗುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top