26 May 2021 KANNADA Murli Today – Brahma Kumaris
25 May 2021
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
“ಮಧುರ ಮಕ್ಕಳೇ – ನಿಶ್ಚಯ ಬುದ್ಧಿಯವರಾಗಿ ತಂದೆಯ ಪ್ರತೀ ಆಜ್ಞೆಯ ಅನುಸಾರ ನಡೆಯುತ್ತಾ ಇರಿ, ಆಜ್ಞೆಯಂತೆ ನಡೆಯುವುದರಿಂದಲೇ ಶ್ರೇಷ್ಠರಾಗುತ್ತೀರಿ”
ಪ್ರಶ್ನೆ:: -
ಯಾವ ಮಕ್ಕಳಿಗೆ ಸತ್ಯ-ಸತ್ಯವಾದ ಈಶ್ವರೀಯ ಸೇವಾಧಾರಿಗಳೆಂದು ಹೇಳುತ್ತಾರೆ?
ಉತ್ತರ:-
ಯಾವ ಮಕ್ಕಳಿಗೆ ಸತ್ಯ-ಸತ್ಯವಾದ ಈಶ್ವರೀಯ ಸೇವಾಧಾರಿಗಳೆಂದು ಹೇಳುತ್ತಾರೆ?
♫ ಕೇಳು ಇಂದಿನ ಮುರ್ಲಿ (audio)➤
ಓಂ ಶಾಂತಿ. ನೀವು ಇಲ್ಲಿ ಕುಳಿತುಕೊಳ್ಳುತ್ತೀರೆಂದರೆ ಎಲ್ಲರಿಗೆ ಶಿವ ತಂದೆಯನ್ನು ನೆನಪು ಮಾಡಿ ಎಂದು ಹೇಳಬೇಕಾಗಿದೆ. ಇವರನ್ನಂತೂ ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯಾಗಿದ್ದಾರೆ, ಅವರ ಮಂದಿರಕ್ಕೂ ಹೋಗುತ್ತಾರೆ. ಆದರೆ ಶಿವ ತಂದೆಯು ಯಾರು ಎಂಬುದನ್ನು ನೀವು ಮಕ್ಕಳ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ. ಆದ್ದರಿಂದ ಶಿವ ತಂದೆಯ ನೆನಪು ತರಿಸಬೇಕಾಗಿದೆ. ಇಲ್ಲಿ ಕುಳಿತಿದ್ದರೂ ಸಹ ಕೆಲವರ ಬುದ್ಧಿಯೋಗವು ಎಲ್ಲೆಲ್ಲಿಯೋ ಅಲೆದಾಡುತ್ತಿರುವುದು. ಆದ್ದರಿಂದ ನೆನಪು ತರಿಸುವುದು ನಿಮ್ಮ ಕರ್ತವ್ಯವಾಗಿದೆ – ಸಹೋದರ-ಸಹೋದರಿಯರೇ, ತಂದೆಯನ್ನು ನೆನಪು ಮಾಡಿ, ಆ ತಂದೆಯಿಂದಲೇ ಆಸ್ತಿಯು ಸಿಗುವುದು. ನೀವೀಗ ಸತ್ಯವಾದ ಸಹೋದರ-ಸಹೋದರಿಯರಾಗಿದ್ದೀರಿ. ಅವರಂತೂ ಕೇವಲ ಸ್ತ್ರೀ-ಪುರುಷರ ಕಾರಣ ಸಹೋದರ-ಸಹೋದರಿಯೆಂದು ಹೇಳುತ್ತಾರೆ. ಭಾಷಣದಲ್ಲಿಯೂ ಬ್ರದರ್ಸ್ ಅಂಡ್ ಸಿಸ್ಟರ್ಸ್…. ಎಂದು ಅವರು ಶರೀರದ ಸಂಬಂಧದಿಂದ ಸಹೋದರ-ಸಹೋದರಿಯರಾಗಿದ್ದಾರೆ, ಇಲ್ಲಿ ಆ ಮಾತಿಲ್ಲ. ಇಲ್ಲಂತೂ ಆತ್ಮರಿಗೆ ತಮ್ಮ ರಚಯಿತ ತಂದೆಯನ್ನು ನೆನಪು ಮಾಡಿ ಎಂದು ತಿಳಿಸಲಾಗುತ್ತದೆ. ಅವರಿಂದಲೇ ಆಸ್ತಿಯೂ ಸಿಗುವುದು. ಅಂತರವಿದೆಯಲ್ಲವೆ. ಸಹೋದರ-ಸಹೋದರಿ ಅಕ್ಷರವಂತೂ ಸಾಮಾನ್ಯವಾಗಿದೆ. ಇಲ್ಲಿ ತಂದೆಯು ಮಕ್ಕಳಿಗೆ – ಮಕ್ಕಳೇ, ತಂದೆಯಾದ ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಹೇಳುತ್ತಾರೆ. ಆ ಶಿವ ತಂದೆಯು ಆತ್ಮಿಕ ತಂದೆಯಾಗಿದ್ದಾರೆ ಮತ್ತು ಪ್ರಜಾಪಿತ ಬ್ರಹ್ಮಾ ಸಾಕಾರ ತಂದೆಯಾಗಿದ್ದಾರೆ. ಆದ್ದರಿಂದ ಬಾಪ್ದಾದಾ ಇಬ್ಬರೂ ಸಹ ಹೇಳುತ್ತಾರೆ – ಮಕ್ಕಳೇ, ತಂದೆಯನ್ನು ನೆನಪು ಮಾಡಿ, ಮತ್ತೆಲ್ಲಿಯೂ ಬುದ್ಧಿಯು ಹೋಗದಿರಲಿ. ಬುದ್ಧಿಯು ಬಹಳ ಅಲೆದಾಡುತ್ತದೆ, ಭಕ್ತಿಮಾರ್ಗದಲ್ಲಿಯೂ ಇದೇರೀತಿ ಆಗುತ್ತದೆ. ಕೃಷ್ಣನ ಮುಂದೆ ಅಥವಾ ಯಾವುದೇ ದೇವತೆಯ ಮುಂದೆ ಕುಳಿತುಕೊಂಡು ಹೇಳುತ್ತಾರೆ, ಮಾಲೆಯನ್ನು ಜಪಿಸುತ್ತಾರೆಂದರೆ ಬುದ್ಧಿಯು ಎಲ್ಲೆಲ್ಲಿಯೋ ಓಡುತ್ತಿರುತ್ತದೆ. ದೇವತೆಗಳು ಯಾರು? ಅವರಿಗೆ ಈ ರಾಜ್ಯವು ಹೇಗೆ ಸಿಕ್ಕಿತು, ಯಾವಾಗ ಸಿಕ್ಕಿತು! ಇದು ಯಾರಿಗೂ ತಿಳಿದಿಲ್ಲ. ಗುರುನಾನಕರು ಸಿಖ್ಖ್ಪಂಥವನ್ನು ಸ್ಥಾಪನೆ ಮಾಡಿದರೆಂದು ಸಿಖ್ಖರು ತಿಳಿದುಕೊಂಡಿದ್ದಾರೆ. ನಂತರ ಅವರ ಗುರುಗಳು ಅವರ ವಂಶಾವಳಿ ನಡೆದು ಬರುತ್ತದೆ. ಅವರು ಪುನರ್ಜನ್ಮದಲ್ಲಿ ಬರುತ್ತಾ ಇರುತ್ತಾರೆ. ಈ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ಅವರು ಸದಾ ಗುರುನಾನಕರನ್ನು ನೆನಪು ಮಾಡುವರೇ! ಒಳ್ಳೆಯದು – ತಿಳಿದುಕೊಳ್ಳಿ, ಗುರುನಾನಕರನ್ನು ಅಥವಾ ಬುದ್ಧನನ್ನು ಇಲ್ಲವೆ ಯಾರೇ ತಮ್ಮ ಧರ್ಮ ಸ್ಥಾಪಕರನ್ನು ನೆನಪು ಮಾಡುತ್ತಾರೆ ಆದರೆ ಅವರು ಈಗ ಎಲ್ಲಿದ್ದಾರೆಂದು ಯಾರಿಗೂ ತಿಳಿದಿರುವುದಿಲ್ಲ. ಅವರಂತೂ ಜ್ಯೋತಿಯಲ್ಲಿ ಜ್ಯೋತಿ ಸಮಾವೇಶವಾಯಿತು, ವಾಣಿಯಿಂದ ದೂರ ಹೊರಟು ಹೋದರೆಂದು ಹೇಳುತ್ತಾರೆ, ಇಲ್ಲವೆ ಕೃಷ್ಣನು ಪ್ರತ್ಯಕ್ಷವಾಗಿದ್ದಾನೆ, ಎಲ್ಲಿ ನೋಡಿದರೂ ಕೃಷ್ಣನೇ ಕೃಷ್ಣ, ರಾಧೆಯೇ ರಾಧೆ ಎಂದು ಹೇಳುತ್ತಿರುತ್ತಾರೆ. ತಂದೆಯು ತಿಳಿಸುತ್ತಾರೆ – ನೀವು ಭಾರತವಾಸಿಗಳು ದೇವತೆಗಳಾಗಿದ್ದಿರಿ, ನಿಮ್ಮ ಚಹರೆಯು ಮನುಷ್ಯನದು, ಗುಣಗಳು ದೇವತೆಯಾಗಿತ್ತು. ದೇವತೆಗಳ ಚಿತ್ರವಂತೂ ಇದೆಯಲ್ಲವೆ. ಚಿತ್ರಗಳು ಇಲ್ಲದೇ ಹೋಗಿದ್ದರೆ ಇದನ್ನೂ ತಿಳಿದುಕೊಳ್ಳುತ್ತಿರಲಿಲ್ಲ. ರಾಧೆ-ಕೃಷ್ಣರ ಜೊತೆ ಲಕ್ಷ್ಮೀ-ನಾರಾಯಣರ ಸಂಬಂಧವೇನು ಎಂಬುದನ್ನೂ ಸಹ ತಂದೆಯೇ ಬಂದು ತಿಳಿಸುತ್ತಾರೆ. ನೀವು ಯಾರಿಗೆ ಬೇಕಾದರೂ ತಿಳಿಸಬಹುದು – ಈ ನಿರಾಕಾರ ತಂದೆಯು ನಮಗೆ ತಿಳಿಸುತ್ತಾರೆ ಎಂದು. ವಾಸ್ತವದಲ್ಲಿ ಎಲ್ಲರೂ ನಿರಾಕಾರಿಯೇ, ಆತ್ಮವೂ ನಿರಾಕಾರನಾಗಿದೆ ಮತ್ತೆ ಸಾಕಾರದ ಮೂಲಕ ಮಾತನಾಡುತ್ತದೆ. ಶರೀರವಿಲ್ಲದೆ ನಿರಾಕಾರಿ ಆತ್ಮವಂತೂ ಮಾತನಾಡಲು ಸಾಧ್ಯವಿಲ್ಲ. ನೀವು ತಿಳಿಸಿ, ನಮ್ಮ ತಂದೆಯೇ ನಿಮ್ಮ ತಂದೆಯಾಗಿದ್ದಾರೆ. ಶಿವ ತಂದೆಯು ಜ್ಞಾನ ಸಾಗರ, ಶಾಂತಿಯ ಸಾಗರನಾಗಿದ್ದಾರೆ, ಬೇಹದ್ದಿನ ತಂದೆಯಾಗಿದ್ದಾರೆ. ಅವರಿಗೂ ಸಹ ಶರೀರವು ಬೇಕಲ್ಲವೆ ಆದ್ದರಿಂದ ತಿಳಿಸುತ್ತಾರೆ – ನಾನು ಈ ಬ್ರಹ್ಮಾರವರ ತನುವಿನಲ್ಲಿ ಬರುತ್ತೇನೆ ಆಗಲೇ ಈ ಬ್ರಾಹ್ಮಣ ಧರ್ಮದ ಸ್ಥಾಪನೆಯಾಗುವುದು. ಬ್ರಹ್ಮಾರವರ ಮೂಲಕ ಬ್ರಾಹ್ಮಣರದೇ ರಚನೆಯಾಗುತ್ತದೆ ಆದ್ದರಿಂದ ತಂದೆಯು ಬ್ರಾಹ್ಮಣ ಮಕ್ಕಳಿಗೇ ತಿಳಿಸುತ್ತಾರೆ ಮತ್ತ್ಯಾರಿಗೂ ತಿಳಿಸುವುದಿಲ್ಲ. ಮಕ್ಕಳಿಗೇ ತಿಳಿಸುತ್ತಾರೆ. ನಾವು ಶಿವ ತಂದೆಯ ಮಕ್ಕಳಾಗಿರುವ ಕಾರಣ ನಾವೂ ಸಹ ಭಗವಂತರಾಗಿದ್ದೇವೆ ಎಂದಲ್ಲ. ತಂದೆಯು ತಂದೆಯೇ, ಮಕ್ಕಳು ಮಕ್ಕಳೇ ಆಗಿದ್ದೀರಿ. ಮಗುವು ಯಾವಾಗ ಬೆಳೆದು ದೊಡ್ಡವನಾಗಿ ತಂದೆಯಾಗಿ ಮಕ್ಕಳಿಗೆ ಜನ್ಮ ನೀಡುವರೋ ಆಗ ಅವರಿಗೆ ತಂದೆಯೆಂದು ಹೇಳಲಾಗುವುದು. ಈ ತಂದೆಗಂತೂ ಅನೇಕ ಮಕ್ಕಳಿದ್ದಾರಲ್ಲವೆ! ಯಾರು ನಿಶ್ಚಯ ಬುದ್ಧಿಯವರು ಆಗಿದ್ದಾರೆಯೋ ಅಂತಹ ಮಕ್ಕಳಿಗೇ ತಿಳಿಸುತ್ತಾರೆ. ನಿಶ್ಚಯ ಬುದ್ಧಿಯವರು ತಂದೆಯ ಆಜ್ಞೆಯಂತೆ ನಡೆಯುತ್ತಾರೆ ಏಕೆಂದರೆ ಶ್ರೀಮತದಿಂದಲೇ ಶ್ರೇಷ್ಠರಾಗಲು ಸಾಧ್ಯ.
ನೀವೀಗ ತಿಳಿದುಕೊಂಡಿದ್ದೀರಿ – ನಾವು ಆ ದೇವತೆಗಳ ತರಹ ಆಗುತ್ತಿದ್ದೇವೆ. ಜನ್ಮ-ಜನ್ಮಾಂತರದಿಂದ ನಾವು ದೇವತೆಗಳ ಮಹಿಮೆಯನ್ನು ಹಾಡುತ್ತಾ ಬಂದಿದ್ದೇವೆ. ನಾವೀಗ ಶ್ರೀಮತದಂತೆ ಈ ರೀತಿಯಾಗಬೇಕಾಗಿದೆ. ರಾಜಧಾನಿಯು ಸ್ಥಾಪನೆಯಾಗಬೇಕಾಗಿದೆ. ಎಲ್ಲರೂ ಸಂಪೂರ್ಣವಾಗಿ ಶ್ರೀಮತದಂತೆ ನಡೆಯುವುದಿಲ್ಲ, ನಂಬರ್ವಾರ್ ನಡೆಯುತ್ತಾರೆ ಏಕೆಂದರೆ ಬಹಳ ದೊಡ್ಡ ರಾಜಧಾನಿಯಾಗಿದೆ. ಆ ರಾಜಧಾನಿಯಲ್ಲಿ ಪ್ರಜೆ, ನೌಕರ-ಚಾಕರ, ಚಂಡಾಲ ಮೊದಲಾದವರೆಲ್ಲರೂ ಬೇಕು. ಅಂತಹ ಚಲನೆಯಲ್ಲಿ ನಡೆಯುವವರಿಗೆ ಇವರು ಚಂಡಾಲರ ಕುಟುಂಬದಲ್ಲಿ ಹೋಗುವರೆಂದು ಸಾಕ್ಷಾತ್ಕಾರವಾಗುವುದು. ಚಂಡಾಲರೂ ಸಹ ಒಬ್ಬರೇ ಇರುವುದಿಲ್ಲ, ಅವರದೂ ಪರಿವಾರವಿರುತ್ತದೆ. ಚಂಡಾಲರದು ಒಕ್ಕೂಟವಿರುತ್ತದೆ, ಎಲ್ಲರೂ ಪರಸ್ಪರ ಸೇರುತ್ತಾರೆ, ಮುಷ್ಕರ ಇತ್ಯಾದಿಗಳನ್ನು ಹೂಡಿದರೆ ಎಲ್ಲರೂ ಕೆಲಸವನ್ನು ಬಿಟ್ಟು ಬಿಡುತ್ತಾರೆ ಆದರೆ ಸತ್ಯಯುಗದಲ್ಲಿ ಈ ರೀತಿಯ ಮಾತಿರುವುದಿಲ್ಲ. ನಿಮ್ಮ ಬಳಿ ಒಂದು ಚಿತ್ರವೂ ಇದೆ ಯಾವುದರಲ್ಲಿ ನೀವು ಕೇಳುತ್ತೀರಿ. ನೀವು ಏನಾಗ ಬಯಸುತ್ತೀರಿ – ವಕೀಲರೋ ಅಥವಾ ದೇವತೆಯಾಗುತ್ತೀರೋ? ನಿಮ್ಮ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಕಡಿಮೆಯೇನಲ್ಲ. ಬೇಹದ್ದಿನ ತಂದೆಯು ಬೇಹದ್ದಿನ ಮಾತುಗಳನ್ನು ತಿಳಿಸುತ್ತಾರೆ. ಇವು ಬುದ್ಧಿಯಲ್ಲಿ ಕುಳಿತುಕೊಳ್ಳಬೇಕು – ನಾವು ಭವಿಷ್ಯಕ್ಕಾಗಿ ಪುರುಷಾರ್ಥ ಮಾಡಿ ಶ್ರೇಷ್ಠ ಪದವಿಯನ್ನು ಪಡೆಯುತ್ತೇವೆ. ಶ್ರೀಮತದಂತೆ ನಾವು ಶ್ರೇಷ್ಠಾತಿ ಶ್ರೇಷ್ಠ ರಾಜ್ಯ ಪದವಿಯನ್ನೇ ಪಡೆಯುತ್ತೇವೆ ಮತ್ತೆ ಅನ್ಯರನ್ನೂ ಸಹ ತಮ್ಮ ಸಮಾನ ಮಾಡಿಕೊಂಡಾಗಲೇ ಈಶ್ವರೀಯ ಸೇವಾಧಾರಿಗಳೆಂದು ಹೇಳಲಾಗುತ್ತದೆ. ಯಾರದು ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ, ಮುಂದೆ ಹೋದಂತೆ ಎಲ್ಲವೂ ತಿಳಿದು ಬರುತ್ತದೆ, ಇದಕ್ಕೇ ಜ್ಞಾನ ಪ್ರಕಾಶವೆಂದು ಹೇಳಲಾಗುತ್ತದೆ, ಬೆಳಕು ಸಿಗುತ್ತಾ ಹೋಗುತ್ತದೆ. ಇದು ಮನುಷ್ಯರಿಗೆ ಅರ್ಥವಾಗಿದೆಯೇ! ಒಳಗೊಳಗೆ ಬಾಂಬುಗಳನ್ನು ತಯಾರು ಮಾಡುತ್ತಿರುತ್ತಾರೆ, ಯಾವುದೇ ವಸ್ತುಗಳನ್ನು ಕೇವಲ ಇಟ್ಟುಕೊಳ್ಳುವುದಕ್ಕಾಗಿ ತಯಾರು ಮಾಡುತ್ತಿಲ್ಲ. ಮೊದಲು ಕತ್ತಿಗಳಿಂದ ಯುದ್ಧವು ನಡೆಯುತ್ತಿತ್ತು ನಂತರ ಬಂದೂಕುಗಳನ್ನು ತಯಾರಿಸಿದರು, ಅವನ್ನು ಕಾರ್ಯದಲ್ಲಿ ತರುವುದಕ್ಕಾಗಿ, ಕೇವಲ ಇಟ್ಟುಕೊಳ್ಳುವುದಕ್ಕಾಗಿ ಅಲ್ಲ. ಇದರಿಂದ ಮೃತ್ಯುವಾಗುವುದೆಂದು ಅವರಿಗೂ ತಿಳಿದಿದೆ. ಪ್ರಯೋಗವನ್ನೂ ಮಾಡಿದರಲ್ಲವೆ. ಹಿರೋಶಿಮಾದಲ್ಲಿ ಒಂದು ಬಾಂಬಿನಿಂದ ಎಷ್ಟೊಂದು ಮಂದಿ ಸತ್ತು ಹೋದರು. ಅದರ ನಂತರ ನೋಡಿ, ಎಷ್ಟು ಉನ್ನತಿ ಮಾಡಿದ್ದಾರೆ. ಎಷ್ಟೊಂದು ಕಟ್ಟಡಗಳನ್ನು ಕಟ್ಟಿಸಿದ್ದಾರೆ! ಮುಂಬರಲಿರುವ ವಿನಾಶವು ಆಸ್ಪತ್ರೆಯಲ್ಲಿ ಬಿದ್ದು ನರಳುವಂತಹ ವಿನಾಶವು ಈಗ ಆಗುವುದಿಲ್ಲ, ಏಕೆಂದರೆ ಆಸ್ಪತ್ರೆ ಇತ್ಯಾದಿಗಳು ಇರುವುದೇ ಇಲ್ಲ. ಆದ್ದರಿಂದ ಭೂಕಂಪವೂ ಜೊತೆ ಕೊಡುತ್ತದೆ. ಪ್ರಾಕೃತಿಕ ವಿಕೋಪಗಳನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಇದೆಲ್ಲವೂ ಈಶ್ವರನ ಕೈಯಲ್ಲಿದೆ ಎಂದು ಹೇಳುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ವಿನಾಶವಂತೂ ಆಗಲೇಬೇಕಾಗಿದೆ, ಬರಗಾಲ ಬರುವುದು, ನೀರೂ ಸಹ ಸಿಗುವುದಿಲ್ಲ… ಅದನ್ನಂತೂ ನೀವು ತಿಳಿದುಕೊಂಡಿದ್ದೀರಿ. ಯಾವುದೇ ಹೊಸ ಮಾತಿಲ್ಲ. ಕಲ್ಪದ ಮೊದಲೂ ಸಹ ಇದೇ ರೀತಿ ಆಗಿತ್ತು. ಕಲ್ಪದ ಜ್ಞಾನವು ಯಾರಲ್ಲಿಯೂ ಇಲ್ಲ. ಕ್ರಿಸ್ತನಿಗೆ 3000 ವರ್ಷಗಳ ಮೊದಲು ಸ್ವರ್ಗವಿತ್ತೆಂದು ಹೇಳುತ್ತಾರೆ ಮತ್ತೆ ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಬರೆದು ಬಿಟ್ಟಿದ್ದಾರೆ. ಇದರ ಕಡೆ ಯಾರದೂ ಗಮನ ಹರಿಯುವುದಿಲ್ಲ. ಕೇವಲ ಕೇಳಿಸಿಕೊಂಡು ತಮ್ಮ ಉದ್ಯೋಗ-ವ್ಯವಹಾರಗಳಲ್ಲಿ ತೊಡಗಿ ಬಿಡುತ್ತಾರೆ. ಈಗ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ – ಈಗ ಬೇಗ ಬೇಗ ಪುರುಷಾರ್ಥ ಮಾಡಿ ನೆನಪಿನಲ್ಲಿರಿ ಆಗಲೇ ತುಕ್ಕು ಬಿಡುತ್ತಾ ಹೋಗುವುದು. ನೀವು ಇಲ್ಲಿಯೇ ಸತೋಪ್ರಧಾನರಾಗಬೇಕಾಗಿದೆ ಇಲ್ಲದಿದ್ದರೆ ಶಿಕ್ಷೆಗಳನ್ನನುಭವಿಸಿ ತಮ್ಮ-ತಮ್ಮ ಧರ್ಮಗಳಲ್ಲಿ ಹೋಗುತ್ತೀರಿ. ಶ್ರೀಮತವು ಭಗವಂತನಿಂದ ಸಿಗುತ್ತದೆ. ಶ್ರೀಕೃಷ್ಣನಂತೂ ರಾಜಕುಮಾರನಾಗಿದ್ದಾನೆ. ಕೃಷ್ಣನು ಯಾರಿಗೇನು ಮತ ಕೊಡುವನು! ಈ ಮಾತುಗಳನ್ನು ಪ್ರಪಂಚದವರು ಯಾರೂ ತಿಳಿದುಕೊಂಡಿಲ್ಲ. ಶಿವ ತಂದೆಯನ್ನು ನೆನಪು ಮಾಡಿ ಎಂದು ಪ್ರೀತಿಯಿಂದ ತಿಳಿಸಬೇಕಾಗಿದೆ. ಸ್ವಯಂ ತಂದೆಯೇ ತಿಳಿಸುತ್ತಾರೆ – ನನ್ನೊಬ್ಬನನ್ನೇ ನೆನಪು ಮಾಡಿ. ಅವರು ಕಲ್ಯಾಣಕಾರಿಯಾಗಿದ್ದಾರೆ, ಮತ್ತೆಲ್ಲಾ ಸಂಗಗಳನ್ನು ಬಿಟ್ಟು ಒಬ್ಬರ ಸಂಗವನ್ನು ಸೇರಬೇಕಾಗಿದೆ, ನೀವು ಭಾರತದ ದೋಣಿಯನ್ನು ಪಾರು ಮಾಡುವವರಾಗಿದ್ದೀರಿ. ಸತ್ಯ ನಾರಾಯಣನ ಕಥೆಯು ಭಾರತದೊಂದಿಗೆ ಸಂಬಂಧ ಪಟ್ಟಿದೆ. ಅನ್ಯ ಧರ್ಮದವರು ಎಂದೂ ಸತ್ಯ ನಾರಾಯಣನ ಕಥೆಯನ್ನು ಹೇಳುವುದಿಲ್ಲ, ಯಾರು ನರನಿಂದ ನಾರಾಯಣನಾಗುವ ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿರುವರೋ ಅವರೇ ಇದನ್ನು ಕೇಳುತ್ತಾರೆ, ಅವರೇ ಅಮರ ಕಥೆಯನ್ನು ಕೇಳುತ್ತಾರೆ. ಅಮರ ಲೋಕದಲ್ಲಿ ದೇವಿ-ದೇವತೆಗಳಿದ್ದರು ಅಂದಮೇಲೆ ಅವಶ್ಯವಾಗಿ ಅಮರಲೋಕದಲ್ಲಿ ಅಮರ ಕಥೆಯಿಂದಲೇ ಈ ಪದವಿಯನ್ನು ಪಡೆದಿರಬೇಕು. ಒಂದೊಂದು ನೆನಪು ಮಾಡಿಕೊಳ್ಳುವಂತದ್ದಾಗಿದೆ. ಒಂದು ಮಾತು ಬುದ್ಧಿಯಲ್ಲಿ ಚೆನ್ನಾಗಿ ಕುಳಿತುಕೊಂಡರೂ ಸಹ ಮತ್ತೆಲ್ಲವೂ ಬಂದು ಬಿಡುತ್ತದೆ. ತಂದೆಯನ್ನು ನೆನಪು ಮಾಡಬೇಕು ಮತ್ತು ಸ್ವದರ್ಶನ ಚಕ್ರವನ್ನು ಬುದ್ಧಿಯಲ್ಲಿಟ್ಟುಕೊಳ್ಳಬೇಕಾಗಿದೆ. ಶಿವ ತಂದೆಯ ಜೊತೆ ಇಲ್ಲಿ ಪಾತ್ರವನ್ನಭಿನಯಿಸುತ್ತಿದ್ದೀರಿ ನಂತರ ಹಿಂತಿರುಗಿ ಹೋಗಬೇಕಾಗಿದೆ.
ಸತ್ಯವೇನು, ಅಸತ್ಯವೇನು ಎಂಬುದನ್ನು ತಂದೆಯೇ ತಿಳಿಸುತ್ತಾರೆ. ಒಬ್ಬರೇ ಸತ್ಯವಾಗಿದ್ದಾರೆ, ಉಳಿದೆಲ್ಲವೂ ಅಸತ್ಯವಾಗಿದೆ. ಲಂಕೆಯಲ್ಲಿ ರಾವಣನಿದ್ದನು, ಇದು ಒಬ್ಬರ ಮಾತೇನು? ಸತ್ಯ-ತ್ರೇತಾಯುಗದಲ್ಲಂತೂ ಇಂತಹ ಮಾತುಗಳಿರುವುದಿಲ್ಲ. ಈ ಇಡೀ ಮನುಷ್ಯರ ಪ್ರಪಂಚವೇ ಲಂಕೆಯಾಗಿದೆ, ಇದು ರಾವಣ ರಾಜ್ಯವಾಗಿದೆ. ಎಲ್ಲಾ ಸೀತೆಯರು ಒಬ್ಬ ರಾಮನನ್ನು ನೆನಪು ಮಾಡುತ್ತಾರೆ ಅಥವಾ ಎಲ್ಲಾ ಭಕ್ತಿನಿಯರು, ಪ್ರಿಯತಮೆಯರು. ಒಬ್ಬ ಭಗವಂತ ಪ್ರಿಯತಮನನ್ನು ನೆನಪು ಮಾಡುತ್ತಾರೆ ಏಕೆಂದರೆ ರಾವಣ ರಾಜ್ಯವಾಗಿದೆ. ಸನ್ಯಾಸಿಗಳು ಈ ಮಾತುಗಳನ್ನು ತಿಳಿದುಕೊಳ್ಳುವುದಿಲ್ಲ. ಎಲ್ಲರೂ ದುಃಖಿಯಾಗಿದ್ದಾರೆ, ಶೋಕವಾಟಿಕೆಯಲ್ಲಿದ್ದಾರೆ, ಕಲಿಯುಗವು ಶೋಕವಾಟಿಕೆಯಾಗಿದೆ, ಸತ್ಯಯುಗವು ಅಶೋಕವಾಟಿಕೆಯಾಗಿದೆ. ಇಲ್ಲಂತೂ ಹೆಜ್ಜೆ ಹೆಜ್ಜೆಯಲ್ಲಿ ದುಃಖ, ಶೋಕವಿದೆ. ತಂದೆಯು ನಿಮ್ಮನ್ನು ಅಶೋಕ ಸ್ವರ್ಗದಲ್ಲಿ ಕರೆದುಕೊಂಡು ಹೋಗುತ್ತಾರೆ. ಇಲ್ಲಂತೂ ಮನುಷ್ಯರು ಎಷ್ಟೊಂದು ಶೋಕಿಸುತ್ತಾರೆ. ಯಾರಾದರೂ ಮರಣ ಹೊಂದಿದರೆ ಹೇಗೆ ಹುಚ್ಛರಾಗಿ ಬಿಡುತ್ತಾರೆ. ಸ್ವರ್ಗದಲ್ಲಂತೂ ಇವೆಲ್ಲಾ ಮಾತುಗಳಿರುವುದೇ ಇಲ್ಲ. ಸ್ತ್ರೀ ವಿಧವೆಯಾಗಲು ಅಲ್ಲೆಂದೂ ಅಕಾಲ ಮೃತ್ಯುವಾಗುವುದಿಲ್ಲ. ಅಲ್ಲಂತೂ ಸಮಯದಲ್ಲಿ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ. ಸ್ತ್ರೀ ಅಥವಾ ಪುರುಷನ ಶರೀರವನ್ನು ಪಡೆಯುತ್ತಾರೆಂದರೆ ಅದೂ ಸಹ ಸಾಕ್ಷಾತ್ಕಾರವಾಗುವುದು. ಕೊನೆಯಲ್ಲಿ ಯಾರ್ಯಾರು ಏನೇನಾಗುತ್ತಾರೆ ಎಂಬುದೆಲ್ಲವೂ ಅರ್ಥವಾಗುತ್ತದೆ. ಮತ್ತೆ ಆ ಸಮಯದಲ್ಲಿ ನಾವು ಇಷ್ಟು ಸಮಯ ಪರಿಶ್ರಮ ಪಡಲಿಲ್ಲ ಎಂದು ಹೇಳುತ್ತಾರೆ. ಆದರೆ ಆ ಸಮಯದಲ್ಲಿ ಹೇಳುವುದರಿಂದೇನು ಲಾಭ? ಸಮಯವಂತೂ ಕಳೆದು ಹೋಯಿತಲ್ಲವೆ. ಆದ್ದರಿಂದ ತಂದೆಯು ತಿಳಿಸುತ್ತಾರೆ – ಮಕ್ಕಳೇ, ಪರಿಶ್ರಮ ಪಡಿ. ಸರ್ವೀಸಿನಲ್ಲಿ ಸತ್ಯವಾದ ಬಲ ಭುಜಗಳಾಗಿ ಆಗ ರಾಜಧಾನಿಯಲ್ಲಿ ಬಂದು ಬಿಡುತ್ತೀರಿ. ಸರ್ವೀಸಿನಲ್ಲಿ ತೊಡಗಿರಿ. ಹೇಗೆ ಕೆಲವರು ಮಾದರಿಯಾಗಿದ್ದಾರಲ್ಲವೆ – ಇಡೀ ಕುಟುಂಬವೇ ಸರ್ವೀಸಿನಲ್ಲಿ ತೊಡಗಿದ್ದಾರೆ. ಈ ಕುಟುಂಬದವರು ಇಂತಹ ಒಳ್ಳೆಯ ಕರ್ಮ ಮಾಡಿದ್ದಾರೆ ಎಲ್ಲರೂ ಈಶ್ವರೀಯ ಸೇವೆಯಲ್ಲಿ ತೊಡಗಿದ್ದಾರೆಂದು ಹೇಳುತ್ತಾರಲ್ಲವೆ. ತಂದೆ, ತಾಯಿ, ಮಕ್ಕಳು….. ಹೀಗೆ ಎಲ್ಲರೂ ಸೇವೆಯಲ್ಲಿ ತೊಡಗುವುದು ಒಳ್ಳೆಯದೇ ಅಲ್ಲವೆ. ಸರ್ವೀಸಿನ ಹಿಂದೆ ಸುತ್ತುತ್ತಿರುತ್ತಾರೆ. ನೀವು ಮಕ್ಕಳಿಗೆ ಬಹಳ ಉಲ್ಲಾಸವಿರಬೇಕು – ಮನುಷ್ಯರಿಗೆ ಹೇಗೆ ಮಾರ್ಗವನ್ನು ತಿಳಿಸುವುದು, ಯಾವುದರಿಂದ ಅವರ ಆತ್ಮವು ಖುಷಿಯಾಗಲಿ? ಎಷ್ಟು ಮಂದಿಗೆ ಮಾರ್ಗವನ್ನು ತಿಳಿಸುತ್ತೀರೋ ಅಷ್ಟು ನೀವು ಪ್ರಜೆಗಳನ್ನು ಮಾಡಿಕೊಂಡಿರಿ. ಬೀಜ ಬಿತ್ತಿದರಲ್ಲವೆ. ಯಾರೂ ಜನ್ಮ ಪಡೆದ ಕೂಡಲೇ ರಾಜನಾಗುವುದಿಲ್ಲ. ಮೊದಲು ಪ್ರಜೆಗಳ ಅಧಿಕಾರಿಯಾಗುತ್ತಾರೆ ನಂತರ ಪುರುಷಾರ್ಥ ಮಾಡುತ್ತಾ-ಮಾಡುತ್ತಾ ಹೇಗಿದ್ದವರು ಏನಾಗಿ ಬಿಡುತ್ತಾರೆ! ನೀವು ಸೇವೆಯಲ್ಲಿ ತೊಡಗಿರುವುದನ್ನು ನೋಡಿ ಅನ್ಯರಿಗೂ ಸಹ ನಾವೇಕೆ ಇಂತಹ ಪುರುಷಾರ್ಥ ಮಾಡಬಾರದು ಎಂದು ಉಮ್ಮಂಗ ಬರುತ್ತದೆ. ಇಲ್ಲದಿದ್ದರೆ ಕಲ್ಪ-ಕಲ್ಪವೂ ಇದೇ ಗತಿಯಾಗುವುದು. ಅನೇಕರು ಬರುತ್ತಾರೆ, ಪಶ್ಚಾತ್ತಾಪ ಪಡುತ್ತಾರೆ. ಆ ಸಮಯದಲ್ಲಿ ಇರುವಂತಹ ದುಃಖವನ್ನು ಮನುಷ್ಯರು ಇಡೀ ಜೀವನದಲ್ಲಿ ಎಂದೂ ನೋಡಿರುವುದಿಲ್ಲ. ಶ್ರೀಮತದಂತೆ ನಡೆಯದ ಕಾರಣ ಅಂತಿಮದಲ್ಲಿ ಇಂತಹ ದುಃಖವನ್ನು ನೋಡುತ್ತಾರೆ, ಅದರ ಮಾತೇ ಕೇಳಬೇಡಿ! ಏಕೆಂದರೆ ಅನೇಕ ವಿಕರ್ಮಗಳನ್ನು ಮಾಡಿದ್ದಾರೆ. ತಂದೆಯು ಬಹಳ ಸಹಜ ಮಾರ್ಗವನ್ನು ತಿಳಿಸುತ್ತಾರೆ, ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ಅನ್ಯರಿಗೂ ಈ ಮಾರ್ಗವನ್ನು ತಿಳಿಸಿರಿ.
ನೀವು ದೇವಿ-ದೇವತಾ ಧರ್ಮದವರಾಗಿದ್ದಿರಿ. ಹೇಗೆ ಕ್ರಿಶ್ಚಿಯನ್ ಧರ್ಮದ ಮನುಷ್ಯರು, ಇಸ್ಲಾಮಿ ಧರ್ಮದ ಮನುಷ್ಯರಿದ್ದಾರೆಯೋ ಹಾಗೆಯೇ ಇವರೂ ಇದ್ದಾರೆ. ಇವರು ಎಲ್ಲರಿಗಿಂತ ಪವಿತ್ರರಾಗಿದ್ದಾರೆ. ಇಂತಹ ಧರ್ಮವು ಮತ್ತ್ಯಾವುದೂ ಇಲ್ಲ. ಅರ್ಧಕಲ್ಪ ನೀವು ಪವಿತ್ರರಾಗಿರುತ್ತೀರಿ, ಸ್ವರ್ಗ ಮತ್ತು ನರಕವೆಂದು ಗಾಯನವಿದೆ. ಸ್ವರ್ಗವೆಂದು ಯಾವುದಕ್ಕೆ ಹೇಳುತ್ತಾರೆ ಎಂಬುದನ್ನೂ ತಿಳಿದುಕೊಂಡಿಲ್ಲ. ತಂದೆಯು ಭಾರತದಲ್ಲಿಯೇ ಬಂದು ಮಕ್ಕಳನ್ನು ಜಾಗೃತಗೊಳಿಸುತ್ತಾರೆ. 5000 ವರ್ಷಗಳ ಮಾತಾಗಿದೆ. ಯಾರು ಸ್ವರ್ಗವಾಸಿಗಳಾಗಿದ್ದರೋ ಅವರೇ ಈಗ ನರಕವಾಸಿಗಳಾಗಿದ್ದಾರೆ ಪುನಃ ತಂದೆಯು ಬಂದು ಪಾವನ ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆ. ಒಬ್ಬ ಪ್ರಿಯತಮನನ್ನು ಬಂದು ಎಲ್ಲಾ ಪ್ರಿಯತಮೆಯರನ್ನು ತನ್ನ ಅಶೋಕವಾಟಿಕೆಗೆ ಕರೆದುಕೊಂಡು ಹೋಗುತ್ತಾರೆ ಅಂದಾಗ ಮೊಟ್ಟ ಮೊದಲು ಎಲ್ಲರಿಗೆ ಇದನ್ನೇ ಹೇಳಿರಿ – ತಂದೆಯನ್ನು ನೆನಪು ಮಾಡಿ. ಇಲ್ಲದಿದ್ದರೆ ಇಲ್ಲಿ ಕುಳಿತು-ಕುಳಿತಿದ್ದಂತೆಯೇ ಬುದ್ಧಿಯು ಎಲ್ಲೆಲ್ಲಿಯೋ ಅಲೆಯುತ್ತಿರುತ್ತದೆ. ಭಕ್ತಿಮಾರ್ಗದಲ್ಲಿಯೂ ಇದೇರೀತಿ ಆಗುತ್ತದೆ. ಈ ಬ್ರಹ್ಮಾ ತಂದೆಯು ಅನುಭವಿಯಲ್ಲವೆ. ಎಲ್ಲದಕ್ಕಿಂತ ಒಳ್ಳೆಯ ವ್ಯಾಪಾರವು ವಜ್ರ ವ್ಯಾಪಾರವಾಗಿದೆ, ಅದರಲ್ಲಿ ಸತ್ಯ ವಜ್ರ ಅಥವಾ ನಕಲಿ ಎಂಬುದನ್ನು ಬಹಳ ಕಷ್ಟದಿಂದ ತಿಳಿದುಕೊಳ್ಳುತ್ತಾರೆ. ಇಲ್ಲಿಯೂ ಸಹ ಸತ್ಯವು ಮರೆಯಾಗಿದೆ, ಸುಳ್ಳೇ ಸುಳ್ಳು ನಡೆಯುತ್ತಿರುತ್ತದೆ. ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ನೀವು ತಿಳಿದುಕೊಂಡಿದ್ದೀರಿ – ನಾವೆಲ್ಲರೂ ಡ್ರಾಮಾದ ಪಾತ್ರಧಾರಿಗಳಾಗಿದ್ದೇವೆ, ಇದರಲ್ಲಿ ಯಾರೂ ಬಿಡುಗಡೆಯಾಗಲು ಸಾಧ್ಯವಿಲ್ಲ, ಯಾರೂ ಮೋಕ್ಷವನ್ನು ಪಡೆಯಲು ಸಾಧ್ಯವಿಲ್ಲ. ವಿವೇಕದಿಂದ ಕೆಲಸ ತೆಗೆದುಕೊಳ್ಳಬೇಕಾಗಿದೆ. ಪಾತ್ರದಲ್ಲಿ ನಡೆಯುತ್ತಲೇ ಹೋಗುತ್ತಾರೆ. ಮತ್ತೆ ಕಲ್ಪದ ನಂತರ ಅದೇ ಪಾತ್ರವನ್ನು ಪುನರಾವರ್ತನೆ ಮಾಡುತ್ತಾರೆ. ಹೇಗೆ ಮನುಷ್ಯರು ಸಾಯುತ್ತಾರೆ, ವಿನಾಶವಾಗುತ್ತದೆ ಎಂಬುದನ್ನು ನೀವು ನೋಡುತ್ತೀರಿ, ಎಲ್ಲಾ ಆತ್ಮರು ನಿರ್ವಾಣಧಾಮಕ್ಕೆ ಹೊರಟು ಹೋಗುತ್ತಾರೆ. ಇದು ಬುದ್ಧಿಯಲ್ಲಿ ಜ್ಞಾನವಿದೆ. ಸರ್ವೀಸಿನಲ್ಲಿ ತೊಡಗಿದ್ದರೆ ಅನೇಕರ ಕಲ್ಯಾಣವಾಗುವುದು. ಇಡೀ ಪರಿವಾರವೇ ಈ ಜ್ಞಾನದಲ್ಲಿ ತೊಡಗಿ ಬಿಟ್ಟರೆ ಬಹಳ ಅದ್ಭುತವಾಗಿ ಬಿಡುವುದು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:-
1. ಅಂತಿಮದ ಭಯಾನಕ ದೃಶ್ಯದಿಂದ ಹಾಗೂ ದುಃಖಗಳಿಂದ ಮುಕ್ತರಾಗಲು ಈಗಿನಿಂದಲೇ ತಂದೆಯ ಶ್ರೀಮತದಂತೆ ನಡೆಯಬೇಕಾಗಿದೆ, ಅನ್ಯರನ್ನೂ ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುವ ಸೇವೆಯಲ್ಲಿ ಶ್ರೀಮತದಂತೆ ಮಾಡಬೇಕಾಗಿದೆ.
2. ಸರ್ವೀಸಿನಲ್ಲಿ ತಂದೆಗೆ ಬಲ ಭುಜಗಳಾಗಬೇಕಾಗಿದೆ. ಆತ್ಮವನ್ನು ಖುಷಿ ಪಡಿಸುವ ಮಾರ್ಗವನ್ನು ತಿಳಿಸಬೇಕಾಗಿದೆ. ಎಲ್ಲರ ಕಲ್ಯಾಣ ಮಾಡಬೇಕಾಗಿದೆ.
ವರದಾನ:-
ಯಾವ ಮಕ್ಕಳು ತಮ್ಮನ್ನು ತಾವು ಒಬ್ಬರೇ ತಂದೆ ಅರ್ಥಾತ್ ರಾಮನ ಸತ್ಯ ಸೀತೆಯೆಂದು ತಿಳಿದುಕೊಂಡು, ಸದಾ ಮರ್ಯಾದೆಗಳ ಗೆರೆಯೊಳಗೆ ಇರುತ್ತಾರೆ ಅಂದರೆ ಈ ಎಚ್ಚರಿಕೆ ವಹಿಸುತ್ತಾರೆಯೋ ಅವರು ಸ್ವತಹವಾಗಿಯೇ ಹರ್ಷಿತಮುಖಿ ಆಗಿರುತ್ತಾರೆ. ಅಂದಮೇಲೆ ಮುಂಜಾನೆಯಿಂದ ರಾತ್ರಿಯವರೆಗಿನ ಯಾವುದೆಲ್ಲಾ ಮರ್ಯಾದೆಗಳು ಸಿಕ್ಕಿರುತ್ತವೆ, ಅದರ ಜ್ಞಾನವನ್ನು ಸ್ಪಷ್ಟವಾಗಿ ಬುದ್ಧಿಯಲ್ಲಿ ಇಟ್ಟುಕೊಳ್ಳುತ್ತಾ, ಸ್ವಯಂನ್ನು ಸತ್ಯ ಸೀತೆ ಎಂದು ತಿಳಿದುಕೊಂಡು, ಮರ್ಯಾದೆಗಳ ಗೆರೆಯೊಳಗೆ ಇರುತ್ತೀರೆಂದರೆ ಹೇಳುತ್ತೇವೆ – ಮರ್ಯಾದಾ ಪುರುಷೋತ್ತಮರು.
ಸ್ಲೋಗನ್:-
➤ Email me Murli: Receive Daily Murli on your email. Subscribe!