26 July 2021 KANNADA Murli Today | Brahma Kumaris

Read and Listen today’s Gyan Murli in Kannada

25 July 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೆನಪಿನ ಯಾತ್ರೆಯಲ್ಲಿ ಎಂದೂ ಸುಸ್ತಾಗಬಾರದು, ದೇಹಾಭಿಮಾನದ ಬಿರುಗಾಳಿಯು ಸುಸ್ತು ಮಾಡುತ್ತದೆ, ದೇಹೀ-ಅಭಿಮಾನಿಯಾಗಿರಿ ಆಗ ಸುಸ್ತು ದೂರವಾಗಿ ಬಿಡುವುದು”

ಪ್ರಶ್ನೆ:: -

ಯಾವ ಸಂಸ್ಕಾರವು 21 ಜನ್ಮಗಳ ಶ್ರೇಷ್ಠ ಅದೃಷ್ಟವನ್ನು ಕೆಡಿಸುವಂತದ್ದಾಗಿದೆ?

ಉತ್ತರ:-

ಒಂದುವೇಳೆ ಯಾರಲ್ಲಾದರೂ ಮುನಿಸಿಕೊಳ್ಳುವ ಸಂಸ್ಕಾರವಿರುತ್ತದೆ, ತಂದೆಯೊಂದಿಗೆ ಹಾಗೂ ವಿದ್ಯೆಯೊಂದಿಗೆ ಮುನಿಸಿಕೊಳ್ಳುತ್ತಾರೆಂದರೆ 21 ಜನ್ಮಗಳ ಅದೃಷ್ಟವು ಕೆಟ್ಟು ಹೋಗುತ್ತದೆ. ಆದ್ದರಿಂದ ತಂದೆಯು ಹೇಳುತ್ತಾರೆ – ಮಧುರ ಮಕ್ಕಳೇ, ದೇಹಾಭಿಮಾನಕ್ಕೆ ವಶರಾಗಿ ನೀವು ಎಂದೂ ಸಹ ಉಲ್ಟಾ ನಶೆಯೇರದಿರಲಿ – ನಾನು ಇಷ್ಟು ಜನರಿಗೆ ತಿಳಿಸಿದೆನು, ಇಷ್ಟು ಸಹಾಯ ಮಾಡಿದೆನು ಎಂದು. ತಂದೆಯನ್ನು ನೋಡಿ – ಎಷ್ಟು ದೊಡ್ಡ ಅಥಾರಿಟಿಯಾಗಿದ್ದರೂ ಸಹ ಎಷ್ಟು ನಿರಹಂಕಾರಿಯಾಗಿದ್ದಾರೆ ಆದ್ದರಿಂದ ತಂದೆಯನ್ನು ನೋಡಿರಿ.

 

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ರಾತ್ರಿಯ ಪ್ರಯಾಣಿಕನೇ ಸುಸ್ತಾಗಬೇಡ…….

ಓಂ ಶಾಂತಿ. ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳು ಗೀತೆಯನ್ನು ಕೇಳಿದಿರಿ ಮತ್ತು ಯಾರು ಯೋಗಯುಕ್ತ ಸೇವಾಧಾರಿ ಮಕ್ಕಳಿದ್ದಾರೆಯೋ ಅವರು ಈ ಅರ್ಥವನ್ನು ಕೂಡಲೇ ತಿಳಿದುಕೊಳ್ಳುತ್ತಾರೆ – ನಾವು ರಾತ್ರಿಯ ಪ್ರಯಾಣಿಕರು ಅರ್ಥಾತ್ ಬ್ರಾಹ್ಮಣರಿಗೆ ಈ ರಾತ್ರಿಯು ಮುಕ್ತಾಯವಾಯಿತು, ಭಕ್ತಿಮಾರ್ಗಕ್ಕೆ ರಾತ್ರಿಯೆಂದು ಹೇಳಲಾಗುತ್ತದೆ. ರಾತ್ರಿಯ ಅರ್ಧಕಲ್ಪವು ಈಗ ಮುಗಿಯುತ್ತದೆ. ನಿತ್ಯವೂ ದಿನ ಮತ್ತು ರಾತ್ರಿ ಇರುತ್ತದೆ, ಆದರೆ ನೀವು ಬ್ರಾಹ್ಮಣರದು ಅರ್ಧ ಕಲ್ಪ ದಿನ ಮತ್ತು ಅರ್ಧ ಕಲ್ಪ ರಾತ್ರಿಯಿರುತ್ತದೆ. ಈ ಸಮಯದಲ್ಲಿ ತಂದೆಯು ಬಂದಾಗ ಅಂಧಕಾರವಿದೆ. ಈಗ ಮುಂಜಾನೆಯಾಗುತ್ತಿದೆ, ಮಕ್ಕಳಿಗೆ ತಿಳಿದಿದೆ, ತಂದೆಯು ಹೇಳುತ್ತಾರೆ – ಮಧುರಾತಿ ಮಧುರ ಮಕ್ಕಳೇ, ನೆನಪಿನ ಯಾತ್ರೆಯಲ್ಲಿ ಸುಸ್ತಾಗಬೇಡಿ. ಹೇಗೆ ದೈಹಿಕ ಯಾತ್ರೆಯಿರುತ್ತದೆ, ಮೊದಲು ಪಾದಯಾತ್ರೆಯಲ್ಲಿಯೇ ಹೋಗುತ್ತಿದ್ದರು, ನಿಧಾನ-ನಿಧಾನವಾಗಿ ಮಧ್ಯ ಮಧ್ಯದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಅವರಿಗೆ ನಾವು ಇಂತಿಂತಹ ಸ್ಥಳಗಳಲ್ಲಿ ವಿಶ್ರಾಂತಿ ಪಡೆಯಬೇಕೆಂದು ತಿಳಿದಿರುತ್ತದೆ. ಮೊದಲು ಬಹಳ ಶ್ರದ್ಧೆಯಿಂದ ಪಾದಯಾತ್ರೆ ಮಾಡುತ್ತಿದ್ದರು, ಅದರಲ್ಲಿ ಬಹಳ ಪರಿಶ್ರಮವಿದೆ. ಈಗ ಇದಂತೂ ಬಹಳ ಸಹಜವಾಗಿದೆ, ಇದಕ್ಕೆ ಸಹಜ ನೆನಪು ಅಥವಾ ಯೋಗವೆಂದು ಹೇಳಲಾಗುತ್ತದೆ. ಕೇವಲ ತಂದೆಯನ್ನು ನೆನಪು ಮಾಡಬೇಕು, ಸುಸ್ತಾಗುವ ಅರ್ಥವೇ ಆಗಿದೆ – ದೇಹಾಭಿಮಾನಿ ಆಗುವುದು. ಹಾ! ಇದರಲ್ಲಿ ಯಾವುದೇ ಸಂಶಯವಿಲ್ಲ, ಮಾಯೆಯ ವಿಘ್ನಗಳು ಬರುತ್ತವೆ ಆದರೆ ಇದರಲ್ಲಿ ಸುಸ್ತಾಗಬಾರದು. ಸುಸ್ತಾದರೆ ದೇಹಾಭಿಮಾನವು ಬಂದು ಬಿಡುತ್ತದೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಶರೀರ ನಿರ್ವಹಣೆಗಾಗಿ ಕಾರ್ಯವನ್ನಂತೂ ಮಾಡಬೇಕಾಗಿದೆ, ಅದಕ್ಕಾಗಿ ಅನುಮತಿಯಿದೆ. 8 ಗಂಟೆಗಳು ಶರೀರ ನಿರ್ವಹಣೆಗಾಗಿ, 8 ಗಂಟೆಯ ಸಮಯ ವಿಶ್ರಾಂತಿಗಾಗಿ ಇನ್ನುಳಿದ 8 ಗಂಟೆಗಳ ಸಮಯವನ್ನು ಇದರಲ್ಲಿ ಕೊಡಿ. ಈಗ ಇನ್ನೂ ಪೂರ್ಣ 8 ಗಂಟೆಗಳ ಸಮಯವನ್ನು ಯಾರೂ ಕೊಡುತ್ತಿಲ್ಲ, ಅಂತ್ಯದಲ್ಲಿ 8 ಗಂಟೆಯವರೆಗೆ ತಲುಪುತ್ತೀರಿ ಆದ್ದರಿಂದ ಚಾರ್ಟನ್ನು ಹೆಚ್ಚಿಸಿಕೊಳ್ಳುತ್ತಾ ಇರಿ. ಇಲ್ಲಿ ಬಂದು ಕುಳಿತುಕೊಂಡಾಗ ನೆನಪು ತರಿಸಲಾಗುತ್ತದೆ. ಇದಕ್ಕೆ ನೀವು ಧ್ಯಾನವೆಂದು ಹೇಳುತ್ತೀರಿ. ಬಂದು ತಂದೆಯ ನೆನಪಿನಲ್ಲಿ ಕುಳಿತುಕೊಳ್ಳುತ್ತೀರಿ ಅಂದರೆ ಇದರ ಅರ್ಥವು ಕೇವಲ ಇಲ್ಲಿಗೆ ಬಂದು ನೆನಪಿನಲ್ಲಿ ಕುಳಿತುಕೊಳ್ಳಬೇಕೆಂದಲ್ಲ. ಇಂತಹವರು ಅನೇಕರಿದ್ದಾರೆ, 5-10 ನಿಮಿಷ ಯೋಗ ಮಾಡಿ ಹೋಗೋಣವೆಂದು ತಿಳಿಯುತ್ತಾರೆ ಆದರೆ ತಂದೆಯು ಹೇಳುತ್ತಾರೆ, ಕಾರ್ಯ ವ್ಯವಹಾರಗಳನ್ನು ಮಾಡುತ್ತಾ ಎಲ್ಲಿಗೇ ಬಂದರೂ ಹೋದರೂ ಸಹ ನೀವು ಯೋಗದಲ್ಲಿರಿ. ಎಲ್ಲಿಯಾದರೂ ಗಂಗಾ ಸ್ನಾನ ಮಾಡಲು ಹೋಗುತ್ತಾರೆಂದರೆ ರಾಮ, ರಾಮ ಎಂದು ಜಪಿಸುತ್ತಾರಲ್ಲವೆ. ಇಲ್ಲಿ ನೀವು ಏನನ್ನೂ ಜಪಿಸುವಂತಿಲ್ಲ, ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ಈ ತಂದೆಯು ಮಕ್ಕಳೊಂದಿಗೇ ಮಾತನಾಡುತ್ತಿದ್ದಾರೆ. ನಿಮ್ಮ ಕಲ್ಯಾಣವೇ ನೆನಪಿನ ಯಾತ್ರೆಯಾಗಿದೆ. ಇದರಲ್ಲಿ ಸುಸ್ತಾಗಬಾರದು. ಬಹಳ ಬಿರುಗಾಳಿಗಳು ಬರುತ್ತವೆ, ಬಿರುಗಾಳಿಯೆಂದರೆ ಯಾವುದೇ ಮಣ್ಣು-ಧೂಳಿನದಲ್ಲ. ಮಾಯೆಯ ಬಿರುಗಾಳಿಗಳು ಬರುವುದರಿಂದ ಬುದ್ಧಿಯ ಯೋಗವೇ ತುಂಡಾಗಿ ಬಿಡುತ್ತದೆ. ಮತ್ತೆ ದೇಹಾಭಿಮಾನದಲ್ಲಿ ಬರುವುದರಿಂದ ಉದ್ಯೋಗ-ವ್ಯವಹಾರ ಮಕ್ಕಳು ನೆನಪಿಗೆ ಬಂದು ಬಿಡುತ್ತಾರೆ ಆದ್ದರಿಂದ ತಂದೆಯು ತಿಳಿಸುವುದೇನೆಂದರೆ ಈ ಉದ್ಯೋಗ-ವ್ಯವಹಾರ ಎಲ್ಲವೂ ಸಮಾಪ್ತಿಯಾಗಲಿದೆ. ನಿಮ್ಮ ಮಕ್ಕಳು ವಾರಸುಧಾರರು ಆಗುವುದಿಲ್ಲ, ಎಲ್ಲರೂ ಸಮಾಪ್ತಿಯಾಗುವರು. ಈಗಂತೂ ವಾರಸುಧಾರ ಬೇಹದ್ದಿನ ತಂದೆಯಿದ್ದಾರೆ. ಹದ್ದಿನ ಆಸ್ತಿಯೆಲ್ಲವೂ ಸಮಾಪ್ತಿಯಾಗುವುದು. ಮಕ್ಕಳು ದೊಡ್ಡವರಾಗುವರು, ವಿವಾಹವಾಗುವುದು, ಇದಾಗುವುದು, ಅದಾಗುವುದು.. ಎಂದು ಸಾಹುಕಾರರು ತಿಳಿದುಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ – ಈಗ ಅಷ್ಟೊಂದು ಸಮಯವಿಲ್ಲ ಆದ್ದರಿಂದ ಪ್ರಪಂಚದಿಂದ ಮೋಹವನ್ನು ಸಂಪೂರ್ಣ ತೆಗೆಯಿರಿ. ಇದಂತೂ ಸ್ಮಶಾನವಾಗಿದೆ. ಉದ್ಯೋಗ-ವ್ಯವಹಾರ ಮಕ್ಕಳು ಮೊದಲಾದವರ ಚಿಂತನೆಯಲ್ಲಿ ಶರೀರ ಬಿಡುತ್ತೀರೆಂದರೆ ತಮಗೆ ನಷ್ಟವನ್ನುಂಟು ಮಾಡಿಕೊಳ್ಳುವಿರಿ. ಶಿವ ತಂದೆಯನ್ನು ನೆನಪು ಮಾಡಿರಿ ಆಗ ಲಾಭವಾಗುವುದು. ದೇಹಾಭಿಮಾನದಲ್ಲಿ ಬರುವ ಕಾರಣ ನಷ್ಟವುಂಟಾಗುತ್ತದೆ, ದೇಹೀ-ಅಭಿಮಾನಿ ಆಗುವುದರಲ್ಲಿ ಲಾಭವಾಗುತ್ತದೆ. ಎಷ್ಟು ನೆನಪು ಮಾಡುತ್ತೀರೋ ಅಷ್ಟು ಭವಿಷ್ಯ 21 ಜನ್ಮಗಳ ಆಸ್ತಿಯನ್ನು ಪಡೆಯುತ್ತೀರಿ. ನೆನಪು ಮಾಡದಿದ್ದರೆ ಬಹಳ ನಷ್ಟವುಂಟಾಗುವುದು. ಅದೇ ಮತ್ತೆ ಕಲ್ಪ-ಕಲ್ಪಾಂತರವೂ ಆಗುತ್ತಾ ಹೋಗುವುದು. ಇಷ್ಟು ದೊಡ್ಡ ನಷ್ಟದ ಮಾತಾಗಿದೆ ಅಂದಮೇಲೆ ನಾವು ಹೇಗೆ ಪೂರ್ಣ ಆಸ್ತಿಯನ್ನು ಪಡೆಯಬೇಕೆಂಬ ವಿಚಾರ ಮಾಡಿರಿ. ಹೆಚ್ಚು ಹಣದ ಲಾಲಸೆಯು ಇರಬಾರದು, ಅತಿಯಲ್ಲಿ ಹೋಗಬಾರದು. ಯಾರಾದರೂ ದಿವಾಳಿಯಾದರೆ ಬಹಳ ಚಿಂತೆಯಾಗಿ ಬಿಡುತ್ತದೆ. ಶಿವ ತಂದೆಯನ್ನು ಮರೆತು ಹೋಗುತ್ತಾರೆ ನಂತರ ಜ್ಞಾನದಲ್ಲಿ ಬಂದ ಕಾರಣವೇ ದಿವಾಳಿಯಾದೆವು, ರೋಗಿಯಾದೆವು ಎಂದು ದೋಷ ಹಾಕುತ್ತಾರೆ ಆದರೆ ಈ ರೀತಿ ಎಂದೂ ತಿಳಿದುಕೊಳ್ಳಬಾರದು. ಖಾಯಿಲೆ ಇತ್ಯಾದಿಗಳು ಬರುವುದೂ ಸಹ ಕರ್ಮ ಭೋಗವಾಗಿದೆ, ಒಳ್ಳೆಯದೇ ಆಗಿದೆ ಏಕೆಂದರೆ ಇದರಿಂದ ವಿಕರ್ಮಗಳು ವಿನಾಶವಾಗುತ್ತವೆ. ಧರ್ಮರಾಜನ ಶಿಕ್ಷೆಗಳಿಗಿಂತಲೂ ಖಾಯಿಲೆಯೇ ಒಳ್ಳೆಯದಲ್ಲವೆ. ಕರ್ಮಭೋ ಗವನ್ನು ಕಳೆಯಬೇಕಾಗಿದೆ, ಇದಂತೂ ಮಹಾರೋಗಿ ಶರೀರವಾಗಿದೆ. ಎಷ್ಟೊಂದು ಸಂಭಾಲನೆ ಮಾಡಬೇಕಾಗುತ್ತದೆ. ನಡೆಯುತ್ತಾ-ನಡೆಯುತ್ತಾ ಇದ್ದಂತೆಯೇ ನಿಂತು ಬಿಡುತ್ತದೆ. ಕೆಲವರಿಗೆ ಹೃದಯಾಘಾತವಾಗುತ್ತದೆ, ಇಂತಹ ಹಳೆಯ ಪ್ರಪಂಚವನ್ನಂತೂ ಬುದ್ಧಿಯಿಂದ ಸಂಪೂರ್ಣ ಬಿಡಬೇಕು. ಹೇಗೆ ತಂದೆಯು ಹೊಸ ಮನೆ ಕಟ್ಟಿಸುತ್ತಿರುವುದನ್ನು ನೋಡಿ ಮಕ್ಕಳಿಗೆ ಹಳೆಯ ಮನೆಯಿಂದ ಬುದ್ಧಿಯೋಗವೇ ತುಂಡಾಗುತ್ತದೆ. ಬೇಗನೆ ಮನೆಯನ್ನು ಕಟ್ಟಿಸಿ ಬಿಡಿ ಎಂದು ಹೇಳುತ್ತಾರೆ. ಹಳೆಯ ಮನೆಯಲ್ಲಿ ಹೆಚ್ಚು ಕಷ್ಟವಿರುತ್ತದೆ. ನೀವೂ ಸಹ ತಿಳಿದುಕೊಂಡಿದ್ದೀರಿ – ಈ ಹಳೆಯ ಪ್ರಪಂಚವು ಬಹಳ ಕೊಳಕಾಗಿದೆ, ನಿಮ್ಮದು ಇದು ಬೇಹದ್ದಿನ ಸನ್ಯಾಸವಾಗಿದೆ, ಅವರು ಕೇವಲ ಗೃಹಸ್ಥದ ಸನ್ಯಾಸ ಮಾಡುತ್ತಾರೆ ಅದಕ್ಕೆ ಕೇವಲ ಹದ್ದಿನ ಸನ್ಯಾಸವೆಂದು ಹೇಳಲಾಗುತ್ತದೆ. ನೀವಂತೂ ವಿಕಾರಗಳ ಸನ್ಯಾಸ ಮಾಡುತ್ತೀರಿ. ದೇಹ ಸಹಿತವಾಗಿ ದೇಹದ ನಿಮ್ಮ ಯಾವುದೆಲ್ಲಾ ಸಂಬಂಧಗಳಿವೆಯೋ ಎಲ್ಲವನ್ನೂ ಮರೆತು ನನ್ನೊಬ್ಬನನ್ನೇ ನೆನಪು ಮಾಡಿ, ಈ ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೀರಿ ಎಲ್ಲವನ್ನೂ ಮರೆತು ಬಿಡಿ ಎಂದು ತಂದೆಯು ತಿಳಿಸುತ್ತಾರೆ. ನಾವು ಸ್ವರ್ಗದ ರಾಜಧಾನಿಗಾಗಿ ಪುರುಷಾರ್ಥ ಮಾಡುತ್ತಿದ್ದೇವೆ ಎಂದು ಈಗ ನಿಮ್ಮ ಬುದ್ಧಿಯು ತಿಳಿದುಕೊಂಡಿದೆ. ಜ್ಞಾನದ ಮೂರನೇ ನೇತ್ರವು ದೊರೆತಿದೆ. ಇದೆಲ್ಲವೂ ಸ್ಮಶಾನವಾಗುವುದು, ಅಂದಮೇಲೆ ಇದರೊಂದಿಗೆ ಪ್ರೀತಿಯು ಬೇಡ. ಈಗಿನ ಕಾಲದಲ್ಲಿ ಮನುಷ್ಯರ ಬಳಿ ಬಹಳ ಹಣವಿರುವ ಕಾರಣ ವಿಕಾರವು ಹೆಚ್ಚಾಗಿ ಬಿಟ್ಟಿದೆ. ಕಾಮ ವಿಕಾರವು ಎಷ್ಟು ತೀಕ್ಷ್ಣವಾಗಿದೆ, ಕಾಮವಿಲ್ಲದೆ ಇರಲು ಸಾಧ್ಯವಿಲ್ಲ. ನಾಲ್ಕೈದು ವರ್ಷಗಳವರೆಗೆ ಪವಿತ್ರವಾಗಿದ್ದು ನಂತರ ಪತ್ರ ಬರೆಯುತ್ತಾರೆ. ಬಾಬಾ, ಇಂದು ಇವರಿಗೆ ಭೂತ ಹಿಡಿಯಿತು, ಮುಖ ಕಪ್ಪು ಮಾಡಿಕೊಂಡರು ಎಂದು. ಎಷ್ಟು ಪೆಟ್ಟು ತಿಂದರು ಒಮ್ಮೆಲೆ 5ನೇ ಅಂತಸ್ತಿನಿಂದ ಕೆಳಗೆ ಬಿದ್ದರು. ಮೊಟ್ಟ ಮೊದಲನೆಯದು ದೇಹಾಭಿಮಾನವಾಗಿದೆ. ಮೇಲಿನಿಂದ ಬಿದ್ದರೆ ಮೂಳೆಯು ಪುಡಿ ಪುಡಿಯಾಗುವುದು. ಮತ್ತೆ ಪುರುಷಾರ್ಥ ಮಾಡುವುದರಲ್ಲಿ ಸಮಯ ಹಿಡಿಸುತ್ತದೆ. ಇದು ಎಲ್ಲದಕ್ಕಿಂತ ದೊಡ್ಡ ಪೆಟ್ಟಾಗಿದೆ ಆದ್ದರಿಂದಲೇ ತಂದೆಯು ತಿಳಿಸುತ್ತಾರೆ – ಕಾಮ ಮಹಾಶತ್ರುವೆಂದು ಹೇಳಲಾಗುತ್ತದೆ. ವಿಕಾರಕ್ಕೇ ಪತಿತತನವೆಂದು ಹೇಳಲಾಗುತ್ತದೆ. ಬಾಬಾ, ನಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡಿ ಎಂದು ಹೇಳುತ್ತಾರೆ. ಭಾರತದಲ್ಲಿಯೇ ಸಂಪೂರ್ಣ ನಿರ್ವಿಕಾರಿಗಳಿದ್ದರಲ್ಲವೆ. ಭಾರತವೇ ನಿರ್ವಿಕಾರಿಯಾಗಿತ್ತು, ಈಗ ಭಾರತವು ವಿಕಾರಿಯಾಗಿದೆ. ಸಂಪೂರ್ಣ ನಿರ್ವಿಕಾರಿಗಳೆಂದು ಸೂರ್ಯವಂಶಿಯರಿಗೆ ಹೇಳುತ್ತಾರೆ. ಭಲೆ ರಾಮ ಚಂದ್ರನ ರಾಜ್ಯದಲ್ಲಿಯೂ ವಿಕಾರದ ಮಾತಿರುವುದಿಲ್ಲ ಆದರೆ ಕಲೆಗಳು ಕಡಿಮೆ ಆಗಿ ಬಿಡುತ್ತವೆ. 1250 ವರ್ಷಗಳು ಕಡಿಮೆ ಆಯಿತೆಂದರೆ ಪ್ರಪಂಚದ ಶಕ್ತಿಯು ಕಡಿಮೆ ಆಯಿತಲ್ಲವೆ. ಆದ್ದರಿಂದ ಅವರನ್ನು ಸತೋಪ್ರಧಾನರಿಂದ ಸತೋ ಎಂದು ಹೇಳಲಾಗುತ್ತದೆ. ನಾವು ಮಮ್ಮಾ-ಬಾಬಾರವರನ್ನು ಫಾಲೋ ಮಾಡಿ ಸೂರ್ಯವಂಶಿ ಮಹಾರಾಜ-ಮಹಾರಾಣಿ ಆಗುತ್ತೇವೆಂದು ನೀವು ಬಯಸುತ್ತೀರಿ. ಇದರಲ್ಲಿ ಕಷ್ಟ ಅಥವಾ ಖರ್ಚಿನ ಮಾತಿಲ್ಲ. ಇದರಲ್ಲಿ ಬಾಯಿಂದ ಏನನ್ನೂ ಹೇಳುವಂತಿಲ್ಲ. ಕೇವಲ ನೆನಪು. ಇದಕ್ಕೆ ಸಹಜ ಯೋಗವೆಂದು ಹೇಳಲಾಗುತ್ತದೆ, ಇದರಲ್ಲಿ ಬಹಳ ಪರಿಶ್ರಮ ಬೇಕು. ತಂದೆಯ ಮುಂದೆ ಎಲ್ಲಾ ಮಹಾರಥಿಗಳಿದ್ದಾರೆ. ಇದರಲ್ಲಿ ಯೋಗ ಪೂರ್ಣವಿರಬೇಕು ಆಗ ಬಾಣವು ನಾಟುವುದು. ಯೋಗಬಲವಾಗಿದೆಯಲ್ಲವೆ. ಯೋಗ ಬಹಳ ಕಡಿಮೆಯಿದೆ, ಯೋಗದಲ್ಲಿ ವಿಘ್ನಗಳೂ ಸಹ ಬಹಳಷ್ಟು ಬೀಳುತ್ತವೆ. ಬೇಹದ್ದಿನ ತಂದೆಯು ಮಧುರಾತಿ ಮಧುರ ಮಕ್ಕಳಿಗೆ ಕುಳಿತು ತಿಳಿಸುತ್ತಾರೆ. ತಂದೆಯ ಜೊತೆ ಅಥವಾ ವಿದ್ಯೆಯ ಜೊತೆ ಎಂದೂ ಮುನಿಸಿಕೊಳ್ಳಬಾರದು. ಮುನಿಸಿಕೊಳ್ಳುತ್ತೀರೆಂದರೆ 21 ಜನ್ಮದ ಅದೃಷ್ಟದೊಂದಿಗೆ ಮುನಿಸಿಕೊಳ್ಳುವುದಾಗಿದೆ. ಬಹಳ ಒಳ್ಳೊಳ್ಳೆಯ ಮಕ್ಕಳೂ ಸಹ ಮುನಿಸಿಕೊಳ್ಳುತ್ತಾರೆ. ದೇಹದ ಅಹಂಕಾರದ ನಶೆಯೇರುತ್ತಿರುತ್ತದೆ. ನಾನು ಇಷ್ಟೊಂದು ಮಂದಿಗೆ ತಿಳಿಸಿದೆನು ಎಂಬ ದೇಹದ ಅಹಂಕಾರ ಬರುವುದರಿಂದ ಮತ್ತೆ ಬಿದ್ದು ಬಿಡುತ್ತಾರೆ. ಇದರಲ್ಲಿ ಅಹಂಕಾರ ಬರಬಾರದು. ಶಿವ ತಂದೆಗೆ ಯಾವುದೇ ಅಹಂಕಾರವಿದೆಯೇ? ಎಷ್ಟು ನಿರಹಂಕಾರಿಯಾಗಿದ್ದಾರೆ. ಆದರೂ ಸಹ ಎಷ್ಟು ದೊಡ್ಡ ಅಥಾರಿಟಿಯಿದೆ! ನಾನು ಸಾಧಾರಣ ತನುವಿನಲ್ಲಿ, ಸಾಧಾರಣ ಮನೆಯಲ್ಲಿ ಬರುತ್ತೇನೆಂದು ಹೇಳುತ್ತಾರೆ, ಸಾಹುಕಾರರ ಮನೆಯಲ್ಲೇನಾದರೂ ಬರುತ್ತೇನೆಯೇ? ಈಗ ಮಕ್ಕಳು ಜಾಗೃತರಾಗಬೇಕಾಗಿದೆ. ತಂದೆಯು ಬಹಳ ಒಳ್ಳೆಯ ಯುಕ್ತಿಗಳನ್ನು ತಿಳಿಸಿಕೊಡುತ್ತಾರೆ, ನೀವು ಮಕ್ಕಳದೇ ತಡವಾಗಿದೆ. ಡ್ರಾಮಾನುಸಾರ ನಿಮ್ಮ ಸ್ಥಿತಿಯು ಇನ್ನೂ ಅಷ್ಟು ಶಕ್ತಿಶಾಲಿಯಾಗಿಲ್ಲ. ಮುಂದೆ ಹೋದಂತೆ ಶಕ್ತಿಶಾಲಿ ಆಗುವುದು. ನಾವು ಸರ್ಕಾರಕ್ಕೂ ಇದನ್ನು ತಿಳಿಸಬಹುದಾಗಿದೆ – ಇಷ್ಟು ವರ್ಷಗಳಲ್ಲಿ ಸ್ವರ್ಗದ ಸ್ಥಾಪನೆ ಆಗುವುದು. ಇದನ್ನು ಪತ್ರಿಕೆಗಳಲ್ಲಿ ಓದಿ ಬಂದು ನಿಮ್ಮನ್ನು ಕೇಳುತ್ತಾರೆ. ಕೆಲವೇ ವರ್ಷಗಳಲ್ಲಿ ಸ್ಥಾಪನೆ ಆಗುವುದು ಅಂದಮೇಲೆ ವಿನಾಶವೂ ಖಂಡಿತ ಆಗುವುದು, ಅನೇಕರು ಬರುವರು. ಇಲ್ಲಿನ ಸಂಪತ್ತೆಲ್ಲವೂ ಸ್ವಲ್ಪ ಸಮಯಕ್ಕಾಗಿ ಮಾತ್ರ. ಆದ್ದರಿಂದ ಈ ಆಸ್ತಿಯನ್ನು ನೀವು ಆಸ್ತಿಯ ಲೆಕ್ಕದಲ್ಲಿ ತಿಳಿದುಕೊಳ್ಳುವುದಿಲ್ಲ. ಏಕೆಂದರೆ ನಿಮಗೇ ತಿಳಿದಿದೆ – ಇದೆಲ್ಲವೂ ಇನ್ನು ಕೆಲವೇ ದಿನಗಳು ಮಾತ್ರವೇ ಇರುತ್ತದೆ. ಈ ಮನೆ ಇತ್ಯಾದಿಗಳೆಲ್ಲವೂ ಇರುವುದಕ್ಕಾಗಿ ಕಟ್ಟಿಸಲಾಗಿದೆ ಏಕೆಂದರೆ ಮಧುಬನದಲ್ಲಿ ರಿಫ್ರೆಶ್ ಆಗುವುದಕ್ಕಾಗಿ ಮುಂದೆ ಅನೇಕ ಮಕ್ಕಳು ಬರುತ್ತಾರೆ. ಮುಖ್ಯ ಕೇಂದ್ರವಂತೂ ಮಧುಬನವಾಗಿದೆ, ಇಂದು ನೀವು ಏನು ಮಾಡುತ್ತೀರಿ, ನಾಳೆ ಏನು ಮಾಡುವಿರಿ? ಇಲ್ಲಿ ತಪಸ್ಸು ಮಾಡುತ್ತೀರಿ ನಂತರ ದೆಹಲಿ ಬೃಂದಾವನದಲ್ಲಿ ಹೋಗಿ ರಾಜ್ಯಭಾರ ಮಾಡುತ್ತೀರಿ. ನಮ್ಮ ನೆನಪಾರ್ಥವು ಹೇಗೆ ನಿಂತಿದೆ ಎಂಬುದನ್ನು ಚೆನ್ನಾಗಿ ತೋರಿಸಬೇಕಾಗಿದೆ. ಯಾವ ಕೆಲಸವನ್ನು ನಾವೀಗ ಮಾಡುತ್ತಿದ್ದೇವೆಯೋ ಅದನ್ನು 5000 ವರ್ಷಗಳ ಮೊದಲೂ ಸಹ ಮಾಡಿದ್ದೆವು. ಮೊಟ್ಟ ಮೊದಲು ಶಿವ ತಂದೆಯ ಮಂದಿರವನ್ನು ಕಟ್ಟಿಸುತ್ತಾರೆ. ಬಾಕಿ ದಿಲ್ವಾಡಾ ಮಂದಿರ ಮೊದಲಾದವು ನಂತರದಲ್ಲಿ ಕಟ್ಟಿಸಲ್ಪಟ್ಟಿದೆ. ಬುದ್ಧಿಗೆ ಕೆಲಸ ಕೊಡಬೇಕಾಗಿದೆ. ದಿಲ್ವಾಡಾ ಮಂದಿರದ ಲೆಕ್ಕವನ್ನೂ ಸಹ ತೆಗೆಯಬೇಕಾಗಿದೆ. ಇದು ನಮ್ಮದೇ ನೆನಪಾರ್ಥವಾಗಿದೆ. ನೀವು ತಿಳಿದುಕೊಂಡಿದ್ದೀರಿ – ಇದು ಸ್ಥಾಪನೆಯ ನೆನಪಾರ್ಥವಾಗಿದೆ.

ನೀವು ಮಧುರಾತಿ ಮಧುರ ಮಕ್ಕಳಿಗೆ ಬಹಳ ಖುಷಿಯಿರಬೇಕು. ಸೇವೆಯನ್ನು ವೃದ್ಧಿ ಪಡಿಸುವ ಯುಕ್ತಿಗಳನ್ನು ತೆಗೆಯಬೇಕಾಗಿದೆ. ರಾಮನೂ ಹೋದ ರಾವಣನೂ ಹೋದ…. ಅವರದು ಬಹಳ ಪರಿವಾರವಿದೆ. ರಾವಣನ ಪರಿವಾರವನ್ನು ನೋಡಿ ಎಷ್ಟೊಂದು ! ರಾಮನದು ಎಷ್ಟು ಚಿಕ್ಕ ಪರಿವಾರವಾಗಿದೆ. ಅಂದಮೇಲೆ ಗಾಯನವು ಸತ್ಯವಾಗಿದೆ, ಆದರೆ ಇದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ತಂದೆಯು ತಿಳಿಸಿದಾಗಲೂ ನಿಶ್ಚಯ ಬರುವುದಿಲ್ಲ. ಶರೀರ ನಿರ್ವಹಣಾರ್ಥವಾಗಿ ಕರ್ಮವನ್ನಂತೂ ಅವಶ್ಯವಾಗಿ ಮಾಡಬೇಕಾಗಿದೆ. ಯಾರು ಸೇವಾಧಾರಿ ಮಕ್ಕಳಿದ್ದಾರೆಯೋ ಅರ್ಥಾತ್ ಪಾಂಡವರಿದ್ದಾರೆಯೋ ಅವರಂತೂ ಸರ್ಕಾರದಿಂದ ಪಾಲನೆ ತೆಗೆದುಕೊಳ್ಳಬಹುದು, ಅವರ ಪೂರ್ಣ ಸಂಭಾಲನೆಯನ್ನೂ ಮಾಡಬೇಕಾಗಿದೆ. ಈಗ ಮಕ್ಕಳ ಸ್ಥಿತಿಯು ಈ ರೀತಿಯಿರಲಿ, ತಂದೆಯ ನೆನಪಿನಲ್ಲಿ ಈ ಪ್ರಪಂಚದ್ದೆಲ್ಲವನ್ನೂ ಮರೆಸುವಂತಿರಲಿ. ಯಾರು ನೆನಪಿನ ಯಾತ್ರೆಯಲ್ಲಿ ಪಕ್ಕಾ ಮಸ್ತರಾಗಿರುವರೋ ಅವರ ಸ್ಥಿತಿಯೂ ಸಹ ಬಹಳ ಶಕ್ತಿಶಾಲಿಯಾಗಿರುವುದು. ಹೇಗೆ ಶಿವ ತಂದೆಯ ನೆನಪಿನಲ್ಲಿದ್ದು ಶರೀರ ಬಿಡುತ್ತೀರಿ. ಸನ್ಯಾಸಿಗಳು ಬ್ರಹ್ಮ್ತತ್ವದ ನೆನಪಿನಲ್ಲಿ ಶರೀರ ಬಿಟ್ಟರೂ ಸಹ ವಾಯುಮಂಡಲ ಪ್ರಶಾಂತವಾಗಿ ಬಿಡುತ್ತದೆ. ಬ್ರಹ್ಮಾ ತಂದೆಗೆ ಅನುಭವವಿದೆ – ಮನುಷ್ಯರು ಮರಣ ಹೊಂದಿದಾಗ ಮನೆಯಲ್ಲಿ ಶಾಂತಿ ಏರ್ಪಡುತ್ತದೆಯಲ್ಲವೆ ಇದರಲ್ಲಿಯೂ ಹಾಗೆಯೇ ಆಗುತ್ತದೆ. ಅಂತಿಮದಲ್ಲಿ ಹೇಗೆ ಎಲ್ಲವನ್ನೂ ಮರೆತು ಬಿಡುತ್ತೀರಿ, ಕೇವಲ ನಾವೀಗ ಮನೆಗೆ ಹಿಂತಿರುಗಿ ಹೋಗಬೇಕಾಗಿದೆ. ದೇಹಾಭಿಮಾನವು ಕಳೆಯುತ್ತಾ ಹೋಗುತ್ತದೆ. ಅಂತಿಮದಲ್ಲಿ ಶರೀರವನ್ನು ಖುಷಿ-ಖುಷಿಯಿಂದ ಬಿಡಬೇಕು, ನಾವು ಎಲ್ಲಿಗೆ ಹೋಗುತ್ತಿದ್ದೇವೆ! ಯಾವಾಗ ಈ ಸ್ಥಿತಿಯು ಬರುವುದೋ ಆಗಲೇ ವಿಜಯಮಾಲೆಯಲ್ಲಿ ಬರಲು ಯೋಗ್ಯರಾಗುತ್ತೀರಿ. ನಿಮ್ಮಲ್ಲಿ ಶಾಂತಿಯ ಶಕ್ತಿಯಿದೆ, ಯಾರು ಬಂದರೂ ಸಹ ಇಲ್ಲಿ ಶಾಂತಿಯಿದೆ ಎಂದು ಹೇಳುತ್ತಾರೆ. ಇದೇ ಸತ್ಯವಾದ ಶಾಂತಿಯಾಗಿದೆ. ಆತ್ಮವು ಶರೀರದಿಂದ ಭಿನ್ನವಾಗಿ ಬಿಡುತ್ತದೆ. ನೀವು ತಿಳಿದುಕೊಂಡಿದ್ದೀರಿ – ನಾವಾತ್ಮರು ಶಾಂತ ಸ್ವರೂಪರಾಗಿದ್ದೇವೆ, ನಾವು ನಮ್ಮ ಸ್ವಧರ್ಮದಲ್ಲಿ ಕುಳಿತುಕೊಳ್ಳುತ್ತೇವೆ ಯಾವುದೇ ಮನುಷ್ಯರು ಕರ್ಮವಿಲ್ಲದೆ ಇರಲು ಸಾಧ್ಯವಿಲ್ಲ. ಅವರು ಹಠಯೋಗದಿಂದ ಏನೇನು ಮಾಡುವುದಿಲ್ಲ! ನೀವೀಗ ತಿಳಿದುಕೊಂಡಿದ್ದೀರಿ, ನಮ್ಮ ಸ್ವಧರ್ಮವೇ ಶಾಂತಿಯಾಗಿದೆ, ನಾವಿಲ್ಲಿ ಪಾತ್ರವನ್ನು ಅಭಿನಯಿಸಲು ಬಂದಿದ್ದೇವೆ, ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ನನ್ನನ್ನು ನೆನಪು ಮಾಡಿರಿ ಮತ್ತು ಮನೆಯನ್ನು ನೆನಪು ಮಾಡಿರಿ ಎಂದು ತಂದೆಯು ತಿಳಿಸುತ್ತಾರೆ. ತಂದೆಯ ನೆನಪಿನಿಂದಲೇ ಆಸ್ತಿಯು ಸಿಗುವುದು. ತಂದೆಯು ಹೇಳುತ್ತಾರೆ – ನನ್ನನ್ನು ಮನೆಯಲ್ಲಿ (ಪರಮಧಾಮ) ನೆನಪು ಮಾಡಿರಿ, ಇಲ್ಲಂತೂ ನಾನು ಸ್ವಲ್ಪ ಸಮಯಕ್ಕಾಗಿ ಬರುತ್ತೇನೆ. ನಿಮ್ಮ ಬುದ್ಧಿಯು ಶಾಂತಿಧಾಮದಲ್ಲಿ ತಂದೆಯ ನೆನಪಿನಲ್ಲಿ ಸ್ಥಿತವಾಗಬೇಕು. ಮನೆಯ ಆಸ್ತಿಯನ್ನೂ ತೆಗೆದುಕೊಳ್ಳಬೇಕಲ್ಲವೆ. ಅದು ಆತ್ಮಗಳ ಮನೆಯಾಗಿದೆ, ಇದು ಜೀವಾತ್ಮರ ಮನೆಯಾಗಿದೆ. ತಮ್ಮ ಮನೆಯನ್ನೂ ಮರೆಯಬೇಡಿ, ತಂದೆಯನ್ನೂ ಮರೆಯಬೇಡಿ. ತಂದೆಯನ್ನು ನೆನಪು ಮಾಡಿದರೆ ಪವಿತ್ರರಾಗಿ ಮನೆಗೆ ಹೋಗುವಿರಿ. ಜ್ಞಾನವನ್ನು ಧಾರಣೆ ಮಾಡಿಕೊಳ್ಳುವುದರಿಂದ ಹೊಸ ಪ್ರಪಂಚದಲ್ಲಿ ರಾಜ್ಯಭಾರ ಮಾಡಲು ಬರುತ್ತೀರಿ ಆದ್ದರಿಂದ ಈಗ ಎಷ್ಟು ಸಾಧ್ಯವೋ ಅಷ್ಟು ಅನ್ಯರಿಗೂ ಮಾರ್ಗವನ್ನು ತಿಳಿಸುತ್ತಾ ಹೋಗಿರಿ. ಸದಾ ತಂದೆಯನ್ನು ನೋಡಿರಿ. ನೀವು ತಿಳಿದುಕೊಂಡಿದ್ದೀರಿ – ತಂದೆಯು ಏನು ಮಾಡಿದರು? ಎಲ್ಲವನ್ನೂ ಮಾತೆಯರಿಗೆ ಕೊಟ್ಟು ಬಿಟ್ಟರು. ಎಲ್ಲವನ್ನೂ ಮಾತೆಯರ ಸೇವೆಯಲ್ಲಿ ತೊಡಗಿಸಿ ಎಂದು ಅವರೇ ಆದೇಶ ನೀಡಿದರು. ಒಬ್ಬರನ್ನು ನೋಡಿ ಇನ್ನೊಬ್ಬರು ಅನುಸರಿಸ ತೊಡಗಿದರು. ಸ್ವಾಹಾ ಆಗಿ ಬಿಟ್ಟರು ಆದರೆ ನಂತರ ಸ್ಥಿರವಾಗಿ ನಿಲ್ಲಬೇಕಲ್ಲವೆ. ಡ್ರಾಮಾನುಸಾರ ಭಟ್ಟಿಯೂ ಆಗಬೇಕಿತ್ತು. ಪಾಕೀಸ್ತಾನ, ಹಿಂದೂಸ್ತಾನವಾಯಿತು, ನಿಮ್ಮ ಭಟ್ಟಿಯು ಮೊದಲು ಪಾಕೀಸ್ತಾನದಲ್ಲಿಯೇ ಆರಂಭವಾಯಿತು, ನೀವು ನದಿಯನ್ನು ದಾಟಿ ಬಂದಿರಿ, ಇದನ್ನು ಶಾಸ್ತ್ರಗಳಲ್ಲಿ ಏನೇನು ಬರೆದಿದ್ದಾರೆ? ಪ್ರತ್ಯಕ್ಷದಲ್ಲಂತೂ ಈಗ ಕೇಳುತ್ತೀರಲ್ಲವೆ ಮತ್ತು ಕಲ್ಪದ ನಂತರ ನೀವೇ ಕೇಳುತ್ತೀರಿ. ಈಗ ತಂದೆಯು ತಿಳಿಸುತ್ತಾರೆ – ಕೆಟ್ಟದ್ದನ್ನು ಕೇಳಬೇಡಿ, ಉದ್ಯೋಗ-ವ್ಯವಹಾರಗಳನ್ನು ಭಲೆ ಮಾಡಿರಿ ಆದರೆ ಕೆಟ್ಟದ್ದನ್ನು ಕೇಳಬೇಡಿ, ಪ್ರತೀ ಮಾತಿನಲ್ಲಿ ಶ್ರೀಮತವನ್ನು ತೆಗೆದುಕೊಂಡು ಬಾಬಾ, ಈ ಸಮಯದಲ್ಲಿ ನಾವು ಏನು ಮಾಡಬೇಕೆಂದು ಕೇಳಿದರೆ ತಂದೆಯು ಎಲ್ಲವನ್ನೂ ತಿಳಿಸುತ್ತಾರೆ, ಯಾವುದೇ ಮಾತನ್ನು ಕೇಳಬೇಕಾದರೆ ನೀವು ತಂದೆಯ ಬಳಿ ಬನ್ನಿ. ಏಕೆ ಹೆದರುತ್ತೀರಿ? ಹೆಜ್ಜೆ-ಹೆಜ್ಜೆಯಲ್ಲಿ ಕೇಳಬೇಕಾಗಿದೆ. ಶ್ರೀಮತದಂತೆ ನಡೆದರೆ ಹೆಜ್ಜೆ-ಹೆಜ್ಜೆಯಲ್ಲಿ ಪದುಮದಷ್ಟು ಸಂಪಾದನೆಯಿದೆ. ನಿಮ್ಮ ಯಾವ ಕ್ಷಣ-ಪ್ರತಿಕ್ಷಣ ಕಳೆಯುತ್ತದೆಯೋ ಅದರಲ್ಲಿ ಪದುಮಗಳಿವೆ ಅಂದಮೇಲೆ ಇಷ್ಟೊಂದು ಸಂಪಾದನೆಯಾಗುತ್ತಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ವಿಜಯಮಾಲೆಯಲ್ಲಿ ಬರುವುದಕ್ಕಾಗಿ ಈ ಶರೀರದಿಂದ ಭಿನ್ನವಾಗುವ ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. ದೇಹಾಭಿಮಾನವನ್ನು ಬಿಡುತ್ತಾ ಹೋಗಬೇಕಾಗಿದೆ. ಬುದ್ಧಿಯಿಂದ ಈ ಪ್ರಪಂಚವನ್ನು ಮರೆಯಬೇಕಾಗಿದೆ.

2. ಅತಿಯಾಗಿ ಧನದ ಲಾಲಸೆಯಲ್ಲಿ ಹೋಗಬಾರದು. ತಂದೆಯ ನೆನಪಿನ ವಿನಃ ಬೇರೇನೂ ಚಿಂತನೆಯಿರಬಾರದು. ಎಂದೂ ತಂದೆಯೊಂದಿಗೆ ಅಥವಾ ವಿದ್ಯೆಯೊಂದಿಗೆ ಮುನಿಸಿಕೊಳ್ಳಬಾರದು.

ವರದಾನ:-

ಒಂದುವೇಳೆ ತಮಗೆ ಯಾರೇ ಅಪಕಾರ ಮಾಡುತ್ತಾರೆಂದರೆ, ತಾವು ಒಂದು ಸೆಕೆಂಡಿನಲ್ಲಿ ಅಪಕಾರವನ್ನೂ ಉಪಕಾರದಲ್ಲಿ ಪರಿವರ್ತನೆ ಮಾಡಿ ಬಿಡಿ, ತಮ್ಮ ಮುಂದೆ ಯಾರಾದರೂ ತಮ್ಮ ಸಂಸ್ಕಾರ-ಸ್ವಭಾವದ ರೂಪದಲ್ಲಿ ಪರೀಕ್ಷೆಯಾಗಿ ಬಂದಿತೆಂದರೂ, ತಾವು ಒಬ್ಬ ತಂದೆಯ ಸ್ಮೃತಿಯಿಂದ ಅಂತಹ ಆತ್ಮನ ಪ್ರತಿಯೂ ದಯಾಹೃದಯಿಯ ಶ್ರೇಷ್ಠ ಸಂಸ್ಕಾರ-ಸ್ವಭಾವವನ್ನು ಧಾರಣೆ ಮಾಡಿಕೊಳ್ಳಿರಿ. ಯಾರಾದರೂ ದೇಹಧಾರಿ ದೃಷ್ಟಿಯಿಂದ ತಮ್ಮ ಮುಂದೆ ಬಂದರೆ, ಅವರ ದೃಷ್ಟಿಯನ್ನು ಆತ್ಮಿಕ ದೃಷ್ಟಿಯಲ್ಲಿ ಬದಲಾಯಿಸಿ ಬಿಡಿ. ಈ ರೀತಿಯಲ್ಲಿ ಪರಿವರ್ತನೆ ಮಾಡುವ ಯುಕ್ತಿಯ ಅಭ್ಯಾಸವಾಯಿತೆಂದರೆ ವಿಘ್ನಜೀತರು ಆಗಿ ಬಿಡುವಿರಿ. ನಂತರ ತಮಗೆ ತಮ್ಮ ಸಂಪರ್ಕದಲ್ಲಿ ಬರುವ ಎಲ್ಲಾ ಆತ್ಮರು ಧನ್ಯವಾದಗಳನ್ನು ಸಲ್ಲಿಸುವರು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top