26 April 2022 KANNADA Murli Today | Brahma Kumaris
Read and Listen today’s Gyan Murli in Kannada
25 April 2022
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
“ಮಧುರ ಮಕ್ಕಳೇ – ಶ್ರೇಷ್ಠ ಪದವಿಯನ್ನು ಪಡೆಯಬೇಕೆಂದರೆ ಆತ್ಮದಲ್ಲಿ ಜ್ಞಾನದ ಪೆಟ್ರೋಲ್ ತುಂಬುತ್ತಿರಿ, ಬೆಳಗ್ಗೆ-ಬೆಳಗ್ಗೆ ಎದ್ದು ತಂದೆಯನ್ನು ನೆನಪು ಮಾಡಿ, ಯಾವುದೇ ಉಲ್ಟಾ ಚಲನೆಯಲ್ಲಿ ನಡೆದುಕೊಳ್ಳಬಾರದು”
ಪ್ರಶ್ನೆ:: -
ತಂದೆಗೆ ಪ್ರತಿಯೊಂದು ಮಗುವಿನ ಜನ್ಮ ಪತ್ರಿಕೆ ತಿಳಿದಿದ್ದರೂ ಸಹ ಹೇಳುವುದಿಲ್ಲ – ಏಕೆ?
ಉತ್ತರ:-
ಏಕೆಂದರೆ ತಂದೆಯು ಹೇಳುತ್ತಾರೆ – ನಾನು ಶಿಕ್ಷಕನಾಗಿದ್ದೇನೆ, ನನ್ನ ಕರ್ತವ್ಯವಿದೆ, ನೀವು ಮಕ್ಕಳಿಗೆ ಶಿಕ್ಷಣ ಕೊಟ್ಟು ಸುಧಾರಣೆ ಮಾಡುವುದಾಗಿದೆ. ಉಳಿದಂತೆ ನಿಮ್ಮ ಆಂತರ್ಯದಲ್ಲಿ ಏನಿದೆ ಎಂಬುದನ್ನು ನಾನು ತಿಳಿಸುವುದಿಲ್ಲ. ನಾನು ಬಂದಿರುವುದು ಆತ್ಮನಿಗೆ ಇಂಜಕ್ಷನ್ ಕೊಡಲು, ನಾನು ಶಾರೀರಿಕ ಖಾಯಿಲೆಯನ್ನು ಸರಿ ಪಡಿಸಲು ಬಂದಿಲ್ಲ.
ಪ್ರಶ್ನೆ:: -
ನೀವು ಮಕ್ಕಳೀಗ ಯಾವ ಮಾತಿನಿಂದ ಭಯ ಪಡುವುದಿಲ್ಲ ಮತ್ತು ಏಕೆ?
ಉತ್ತರ:-
ಈಗ ನೀವು ಈ ಹಳೆಯ ಪ್ರಪಂಚವನ್ನು ಬಿಡಲು ಭಯ ಪಡುವುದಿಲ್ಲ, ಏಕೆಂದರೆ ನಾನು ಆತ್ಮ ಅವಿನಾಶಿ ಎಂದು ನಿಮ್ಮ ಬುದ್ಧಿಯಲ್ಲಿದೆ. ಒಂದುವೇಳೆ ಈ ಹಳೆಯ ಶರೀರ ಹೊರಟು ಹೋದರೆ ನಾವು ಮನೆಗೆ ಹಿಂತಿರುಗಿ ಹೋಗಬೇಕು. ನಾವು ಅಶರೀರಿ ಆತ್ಮ ಆಗಿದ್ದೇವೆ. ಈಗ ನೀವು ಈ ಶರೀರದಲ್ಲಿರುತ್ತಾ ಜ್ಞಾನಾಮೃತವನ್ನು ತೆಗೆದುಕೊಳ್ಳುತ್ತಿದ್ದೀರಿ. ಆದುದರಿಂದ ತಂದೆಯು ಹೇಳುತ್ತಾರೆ – ಮಕ್ಕಳೇ ಸದಾ ಅಮರಾಗಿರಿ. ಸೇವಾಧಾರಿಯಾದರೆ ಆಯಸ್ಸು ವೃದ್ಧಿಯಾಗುತ್ತದೆ.
♫ ಕೇಳು ಇಂದಿನ ಮುರ್ಲಿ (audio)➤
ಗೀತೆ:-
ಬಾಲ್ಯದ ದಿನಗಳನ್ನು ಮರೆಯಬಾರದು..
ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ. ಯಾರಿಗೆ ಇಂದು ಮಮ್ಮಾ-ಬಾಬಾ ಎಂದು ಹೇಳುತ್ತಿದ್ದೀರಿ ಅವರನ್ನು ಮರೆಯಬಾರದು. ಯಾರು ಈ ಗೀತೆಯನ್ನು ಮಾಡಿದ್ದಾರೆ, ಅವರು ಇದರ ಅರ್ಥವನ್ನು ತಿಳಿದುಕೊಂಡಿಲ್ಲ. ನಾವು ಆ ಪರಮಪಿತ ಪರಮಾತ್ಮನ ಮಕ್ಕಳೆಂಬ ನಿಶ್ಚಯವೂ ಸಹ ಇಲ್ಲ. ಆ ಪರಮಪಿತ ಪರಮಾತ್ಮನು ಪತಿತರನ್ನು ಪಾವನ ಮಾಡಲು ಬರಬೇಕಾಗುತ್ತದೆ. ಅವರು ಎಷ್ಟೊಂದು ಉನ್ನತವಾದ ಸೇವೆಯಲ್ಲಿ ಬರುತ್ತಾರೆ, ಅವರಿಗೆ ಯಾವುದೇ ಅಭಿಮಾನವೂ ಇಲ್ಲ. ಆದ್ದರಿಂದ ಅವರನ್ನು ನಿರಹಂಕಾರಿ ಎಂದು ಕರೆಯಲಾಗುವುದು. ಅವರೆಂದಿಗೂ ನಿಶ್ಚಯಬುದ್ಧಿ ಅಥವಾ ದೇಹೀ-ಅಭಿಮಾನಿಯಾಗುವ ಮಾತೇ ಇಲ್ಲ. ಅವರೆಂದಿಗೂ ಸಂಶಯದಲ್ಲಿ ಬರುವುದಿಲ್ಲ. ದೇಹಾಭಿಮಾನಿಯೂ ಆಗುವುದಿಲ್ಲ. ಮನುಷ್ಯನು ದೇಹಾಭಿಮಾನಿ ಆಗುತ್ತಾನೆ, ಮತ್ತೆ ದೇಹೀ-ಅಭಿಮಾನಿಯಾಗಲು ಎಷ್ಟು ಕಷ್ಟವಾಗುತ್ತದೆ! ತಮ್ಮನ್ನು ಆತ್ಮನೆಂದು ತಿಳಿದುಕೊಳ್ಳಿ ಎಂದು ತಂದೆಯು ಹೇಳುತ್ತಾರೆ. ಮನುಷ್ಯರು ತಮ್ಮನ್ನು ಪರಮಾತ್ಮ ಎಂದು ತಿಳಿದುಕೊಳ್ಳಿ ಎಂದು ಹೇಳುತ್ತಾರೆ. ಇಬ್ಬರಿಗೂ ಎಷ್ಟೊಂದು ಅಂತರವಿದೆ. ಒಂದು ಕಡೆ ಪತಿತ ಪಾವನ ಬನ್ನಿ ಎಂದು ಕರೆಯುತ್ತಾರೆ, ಮತ್ತೊಂದು ಕಡೆ ಎಲ್ಲರಲ್ಲಿ ಪರಮಾತ್ಮನಿದ್ದಾರೆಂದು ಹೇಳುತ್ತಾರೆ. ನಾನು ಬಂದು ಅವರಿಗೆ ತಿಳಿಸಿಕೊಡಬೇಕು. ನೀವು ಮಕ್ಕಳನ್ನು ಸುಧಾರಣೆ ಮಾಡಲು ನಾನು ಎಲ್ಲಿಂದ ಬಂದಿದ್ದೇನೆ ನೋಡಿ ಎಂದು ತಂದೆಯು ಹೇಳುತ್ತಾರೆ. ಯಾರಿಗೆ ಸಂಪೂರ್ಣ ನಿಶ್ಚಯವಿದೆ ಅವರು ಹೇಳುತ್ತಾರೆ – ನೀವೇ ನಮ್ಮ ತಾಯಿ-ತಂದೆ ಆಗಿದ್ದೀರಿ, ನಾವು ನಿಮ್ಮ ಶ್ರೀಮತದಂತೆ ನಡೆದು ಶ್ರೇಷ್ಠ ದೇವತೆಗಳಾಗಲು ನಾವು ಇಲ್ಲಿಗೆ ಬಂದಿದ್ದೇವೆ. ಪರಮಾತ್ಮನಂತು ಸದಾ ಪಾವನನಾಗಿದ್ದಾರೆ. ಅವರನ್ನು ಪತಿತ ಪ್ರಪಂಚದಲ್ಲಿ ಬನ್ನಿ ಎಂದು ಕರೆಯುತ್ತಾರೆ ಆದ್ದರಿಂದ ಅವರು ಅಗತ್ಯವಾಗಿ ಪತಿತ ಶರೀರದಲ್ಲಿ ಬರಬೇಕಾಗುತ್ತದೆ. ಪತಿತ ಪ್ರಪಂಚದಲ್ಲಿ ಪಾವನ ಶರೀರವಿರುವುದಿಲ್ಲ. ತಂದೆಯನ್ನು ನೋಡಿ ಎಷ್ಟೊಂದು ನಿರಹಂಕಾರಿಯಾಗಿ ಪತಿತ ಶರೀರದಲ್ಲಿ ಬರಬೇಕಾಗುತ್ತದೆ. ಈಗ ನಾವು ನಮ್ಮನ್ನು ಸಂಪೂರ್ಣರೆಂದು ಹೇಳುವುದಿಲ್ಲ. ಈಗಿನ್ನೂ ಆಗುತ್ತಿದ್ದೇವೆ.
ಮಕ್ಕಳೇ, ಶ್ರೀಮತದಂತೆ ನಡೆಯಿರಿ ಎಂದು ಬೇಹದ್ದಿನ ತಂದೆಯು ತಿಳಿಸುತ್ತಾರೆ. ತಂದೆಯು ಶ್ರೀಮತ ಕೊಡುತ್ತಾರೆ – ಬೆಳಗ್ಗೆ ಎದ್ದು ನೆನಪು ಮಾಡಿದಾಗ ಪಾಪವು ಭಸ್ಮವಾಗುತ್ತದೆ. ಶ್ರೀಮತದಂತೆ ನಡೆಯದೆ ಇದ್ದರೆ ವಿಕರ್ಮ ವಿನಾಶವಾಗುವುದಿಲ್ಲ. ಮತ್ತೆ ಬಹಳ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಪ್ರಾಣಿ ಮುಂತಾದವುಗಳು ಶಿಕ್ಷೆಗೆ ಗುರಿಯಾಗುವುದಿಲ್ಲ. ಶಿಕ್ಷೆಯೂ ಮನುಷ್ಯರಿಗಾಗಿಯೇ ಇರುವುದು. ಒಂದುವೇಳೆ ಎತ್ತು ಯಾರನ್ನಾದರೂ ಕೊಂದು, ಆ ವ್ಯಕ್ತಿ ಸತ್ತು ಹೋದರೆ ಎತ್ತನ್ನು ಜೈಲಿಗೆ ಹಾಕುತ್ತೀರಾ! ಮನುಷ್ಯರನ್ನಂತೂ ತಕ್ಷಣ ಜೈಲಿಗೆ ಹಾಕುತ್ತಾರೆ. ಈ ಸಮಯದಲ್ಲಿ ಮನುಷ್ಯರು ಪ್ರಾಣಿಗಿಂತ ಕೊನೆಯಾಗಿದ್ದಾರೆಂದು ತಂದೆಯು ಹೇಳುತ್ತಾರೆ. ಅವರನ್ನು ಮತ್ತೆ ಮನುಷ್ಯರಿಂದ ದೇವತೆಗಳನ್ನಾಗಿ ಮಾಡಬೇಕು. ತಂದೆಯು ತಿಳಿಸುತ್ತಾರೆ – ಈ ಲಕ್ಷ್ಮೀ-ನಾರಾಯಣರೂ ಸಹ ಗೀತಾ ಜ್ಞಾನವನ್ನು ತಿಳಿದುಕೊಂಡಿರುವುದಿಲ್ಲ. ಅಲ್ಲಿ ಗೀತಾ ಜ್ಞಾನದ ಅವಶ್ಯಕತೆಯೇ ಇರುವುದಿಲ್ಲ ಏಕೆಂದರೆ ತಂದೆಯು ರಚಯಿತನಾಗಿದ್ದಾರೆ. ಅಲ್ಲಿ ತ್ರಿಕಾಲದರ್ಶಿಗಳಿರುವುದೇ ಇಲ್ಲ. ಇಲ್ಲಿಯ ಮನುಷ್ಯರು ತ್ರಿಕಾಲದರ್ಶಿಗಳಾಗಿಲ್ಲದಿದ್ದರೂ ನಾವು ಭಗವಂತನೆಂದು ಹೇಳುತ್ತಾರೆ. ಆದ್ದರಿಂದ ಗೀತೆಯ ಭಗವಂತ ಪರಮಪಿತ ಪರಮಾತ್ಮನಾಗಿದ್ದಾರೆ, ಶ್ರೀಕೃಷ್ಣನಲ್ಲ ಎಂದು ದೊಡ್ಡ ಅಕ್ಷರಗಳಲ್ಲಿ ಬರೆಯಬೇಕಾಗಿದೆ. ಮುಖ್ಯವಾಗಿ ಮೊದಲ ಯಾವ ತಪ್ಪಿದೆ ಅದು ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಮಕ್ಕಳೂ ಸಹ ಇದು ತಪ್ಪಾಗಿದೆಯೆಂದು ಯಾರ ಬುದ್ಧಿಯಲ್ಲಿಯೂ ಕೂರಿಸುವುದಿಲ್ಲ. ಭಾರತವೇ ಸ್ವರ್ಗವಾಗಿತ್ತು ಎಂಬುದನ್ನು ಮರೆತಿದ್ದಾರೆ, ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷವೆಂದು ಹೇಳಿದ್ದಾರೆ. ಯಾವುದೇ ಹಳೆಯ ವಸ್ತು ದೊರೆತಾಗ ಇದು ಲಕ್ಷಾಂತರ ವರ್ಷದ ವಸ್ತುವಾಗಿದೆಯೆಂದು ಹೇಳುತ್ತಾರೆ. ಒಮ್ಮೊಮ್ಮೆ ಕೆಲವರು ಕ್ರೈಸ್ತನು ಬರುವುದಕ್ಕೆ 3000 ವರ್ಷದ ಮೊದಲು ಭಾರತವು ಸ್ವರ್ಗವಾಗಿತ್ತೆಂದು ಹೇಳುತ್ತಾರೆ. ನಾವು ದೇವತೆಗಳಾಗಿದ್ದೆವೆಂದು ನೀವು ತಿಳಿದುಕೊಂಡಿದ್ದೀರಿ ಆದರೆ ಈಗ ಮಾಯೆಯು ಸಂಪೂರ್ಣವಾಗಿ ಕವಡೆಯ ಸಮಾನ ಮಾಡಿ ಬಿಟ್ಟಿದೆ. ಯಾವುದೇ ಮೌಲ್ಯಗಳು ಇಲ್ಲದಂತಾಗಿದೆ. ಈಗ ನೀವು ಮಕ್ಕಳೂ ಸಹ ಈ ಘೋರ ಅಂಧಕಾರದಿಂದ ಹೊರಬರಬೇಕಾಗಿದೆ. ಯಾರಾದರೂ ನಿಮ್ಮನ್ನು ಮಂಗನೆಂದು ಹೇಳುವಂತಹ ಯಾವುದೇ ಕರ್ತವ್ಯವನ್ನು ಮಾಡಬಾರದು. ನಿಮ್ಮ ಮೈಲಿಗೆ ಬಟ್ಟೆ ಒಗೆಯಲು ನಾನು ಎಷ್ಟೊಂದು ದೂರ ದೇಶದಿಂದ ಬರುತ್ತೇನೆ ಏಕೆಂದರೆ ನಿಮ್ಮ ಆತ್ಮವು ಸಂಪೂರ್ಣವಾಗಿ ಮೈಲಿಗೆ(ಅಶುದ್ಧ)ಯಾಗಿದೆ. ಈಗ ನೀವು ನನ್ನನ್ನು ನೆನಪು ಮಾಡಿದರೆ ನಿಮ್ಮ ಜ್ಯೋತಿ ಬೆಳಗಲು ತೊಡಗುತ್ತದೆ. ಇಲ್ಲಿ ಜ್ಞಾನದ ಪೆಟ್ರೋಲ್ನ್ನು ತುಂಬಿಕೊಳ್ಳುತ್ತೀರೆಂದರೆ ಅಲ್ಲಿಯೂ ಸ್ವಲ್ಪ ಪದವಿಯನ್ನು ಪಡೆಯಬಹುದು. ಅಲ್ಲಿಗೆ ಹೋಗಿ ದಾಸ-ದಾಸಿಯಾಗುವುದು ಚೆನ್ನಾಗಿರುವುದಿಲ್ಲ. ಇದು ರಾಜಯೋಗವಾಗಿದೆ ಅಂದಮೇಲೆ ಶ್ರೇಷ್ಠ ಪದವಿಯನ್ನು ಪಡೆಯಬೇಕು. ಅಲ್ಲದೆ ನೀವು ದಾಸ-ದಾಸಿಯರಾದರೆ ಭಗವಂತನಿಂದ ಎಂತಹ ಆಸ್ತಿಯನ್ನು ಪಡೆದಂತಾಯಿತು, ಏನೂ ಪಡೆಯಲಿಲ್ಲ. ಒಂದುವೇಳೆ ತಂದೆಯನ್ನು ಕೇಳಿದರೆ ತಂದೆ ತಕ್ಷಣ ತಿಳಿಸಬಲ್ಲರು. ತಂದೆಯ ಶಿಕ್ಷಣದಂತೆ ಕೆಲಸ ಮಾಡಬೇಕು. ಹೇಳಿಸಿಕೊಳ್ಳದೆ ಕೆಲಸ ಮಾಡುವವರು ದೇವತೆ…… ಹೇಳಿಸಿಕೊಂಡು ಮಾಡುವವರು ಮನುಷ್ಯರು. ಈಗ ನಿಮಗೆ ದೇವತೆಯಾಗುವ ಶ್ರೀಮತ ಸಿಗುತ್ತದೆ. ಶ್ರೇಷ್ಠರನ್ನಾಗಿ ಮಾಡುವ ತಂದೆ ಹೇಳುತ್ತಾರೆ – ಕೃಷ್ಣ ಭಗವಂತನಲ್ಲ, ಕೃಷ್ಣನು ಪುನರ್ಜನ್ಮದಲ್ಲಿ ಬರುತ್ತಾನೆ ಎಂದು ಎಲ್ಲರ ಕಣ್ಣು ತೆರೆಯುವಂತೆ ದೊಡ್ಡ-ದೊಡ್ಡ ಅಕ್ಷರಗಳಲ್ಲಿ ಬೋರ್ಡ್ನ್ನು ಹಾಕಿ. ಅವರು ತಿಳಿಯುತ್ತಾರೆ – ಕೃಷ್ಣನು ಜನನ-ಮರಣದಲ್ಲಿ ಬರುವುದಿಲ್ಲ, ಅವನಂತು ಎಲ್ಲಾಕಡೇ ಇದ್ದಾನೆಂದು ತಿಳಿದುಕೊಂಡಿದ್ದಾರೆ. ಹನುಮಂತನ ಪೂಜಾರಿಯು ಎಲ್ಲೆಲ್ಲಿಯೂ ಹನುಮಂತನಿದ್ದಾನೆಂದು ಹೇಳುತ್ತಾರೆ. ಇಲ್ಲಿ ಒಬ್ಬ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕು. ಗೀತೆಯಿಂದ ಭಗವಂತನು ವಜ್ರ ಸಮಾನರನ್ನಾಗಿ ಮಾಡುತ್ತಾರೆ, ಅವರ ಹೆಸರನ್ನು ಬದಲಾವಣೆ ಮಾಡಿರುವ ಕಾರಣ ಭಾರತದ ಗತಿ ಹೀಗಾಗಿದೆ. ಈ ಮಾತನ್ನು ಬಹುಷಃ ಈಗಿನ್ನೂ ಅಷ್ಟೊಂದು ಪ್ರಭಾವಶಾಲಿಯಾಗಿ ತಿಳಿಸಿಲ್ಲ. ಜ್ಞಾನಸಾಗರನಂತು ಒಬ್ಬ ತಂದೆಯೇ ಆಗಿದ್ದಾರೆ. ಅವರೇ ಪತಿತ-ಪಾವನನೂ ಆಗಿದ್ದಾರೆ ಆದರೆ ಪ್ರಪಂಚದವರು ಗಂಗೆಯನ್ನು ಪತಿತ-ಪಾವನಿ ಎಂದು ಹೇಳುತ್ತಾರೆ. ಈಗ ಸಾಗರದಿಂದ ಗಂಗೆ ಹೊರಟಿದೆ ಅಂದಮೇಲೆ ಸಾಗರದಲ್ಲಿಯೇ ಹೋಗಿ ಸ್ನಾನ ಮಾಡಬಹುದಲ್ಲವೇ! ಅವರಿಗೆ ತಿಳಿಸಿಕೊಡಲು ಮಕ್ಕಳಲ್ಲಿ ದೇವತಾ ಗುಣಗಳಿರಬೇಕು. ನಾವು ತಂದೆಯ ಮಹಿಮೆಯನ್ನು ಮಾಡುತ್ತೇವೆಂದು ಎಲ್ಲರಿಗೂ ತಿಳಿಸಬೇಕು. ನಿರಾಕಾರ ಪರಮಾತ್ಮನನ್ನು ಎಲ್ಲರೂ ಮಾನ್ಯತೆ ಮಾಡುತ್ತಾರೆ ಆದರೆ ಕೇವಲ ಸರ್ವವ್ಯಾಪಿ ಎಂದು ಹೇಳಿಬಿಡುತ್ತಾರೆ. ಹೇ ರಾಮ, ಹೇ ಪರಮಾತ್ಮ ಎಂದು ಹೇಳುತ್ತಾ ಮಾಲೆಯನ್ನು ಸ್ಮರಿಸುತ್ತಾರಲ್ಲವೆ. ಮಾಲೆಯಲ್ಲಿ ಮೇಲೆ ಹೂವಿರುತ್ತದೆ. ಅದರ ಅರ್ಥವನ್ನೂ ಸಹ ತಿಳಿದುಕೊಂಡಿಲ್ಲ. ಹೂ ಹಾಗೂ ಜೋಡಿ ಮಣಿಯಿರುತ್ತದೆ ಏಕೆಂದರೆ ಇದು ತಾಯಿ-ತಂದೆಯಿರುವ ಪ್ರವೃತ್ತಿ ಮಾರ್ಗವಾಗಿದೆಯಲ್ಲವೇ! ರಚನೆಯನ್ನು ರಚಿಸಲು ಅಗತ್ಯವಾಗಿ ತಾಯಿ-ತಂದೆ ಇರಬೇಕಾಗುತ್ತದೆ ಅಂದಾಗ ಈ ಬ್ರಹ್ಮಾ ತಂದೆಯ ಮೂಲಕ ಕುಳಿತು ನಮ್ಮನ್ನು ಯೋಗ್ಯರನ್ನಾಗಿ ಮಾಡುತ್ತಾರೆ. ನಂತರ ಮಾಲೆಯ ರೂಪದಲ್ಲಿ ಸ್ಮರಣೆ ಮಾಡಲಾಗುತ್ತದೆ. ಪರಮಾತ್ಮ ಹಾಗೂ ಆತ್ಮದ ರೂಪ ಏನಾಗಿದೆ ಎಂಬುದನ್ನೂ ತಿಳಿದುಕೊಂಡಿಲ್ಲ. ನೀವು ಹೊಸ ಮಾತನ್ನು ಕೇಳಿದ್ದೀರಾ. ಪರಮಾತ್ಮ ಒಂದು ಬಿಂದುವಾಗಿದ್ದಾರೆ. ಇಷ್ಟೊಂದು ಚಿಕ್ಕ ಬಿಂದುವಿಗೆ ಜ್ಞಾನ ಸಾಗರನೆಂದು ಒಪ್ಪಿಕೊಳ್ಳುವುದು ಆಶ್ಚರ್ಯವಲ್ಲವೇ! ಮನುಷ್ಯನನ್ನು ಒಪ್ಪಿಕೊಳ್ಳುವರು ಆದರೆ ಅವರು ಮನುಷ್ಯರು ಮನುಷ್ಯರಿಗೆ ಜ್ಞಾನ ಕೊಡುತ್ತಾರೆ, ಅದರಿಂದ ದುರ್ಗತಿಯಾಗುತ್ತದೆ ಆದರೆ ಇಲ್ಲಿ ಸ್ವಯಂ ಭಗವಂತನು ಬಂದು ಜ್ಞಾನವನ್ನು ಕೊಟ್ಟು ಸದ್ಗತಿ ಮಾಡುತ್ತಾರೆ ಅರ್ಥಾತ್ ರಾಜರಿಗೂ ರಾಜರನ್ನಾಗಿ ಮಾಡುವರು. ನಿಮಗೆ ಆಶ್ಚರ್ಯವಾಗುತ್ತದೆಯಲ್ಲವೇ! ಆತ್ಮ ಚಿಕ್ಕ ಬಿಂದು ಅತೀ ಸೂಕ್ಷ್ಮವಾಗಿದೆ ಅಂದಾಗ ತಂದೆಯೂ ಸಹ ಅದೇರೀತಿ ಇರುತ್ತಾರಲ್ಲವೇ! ಆದರೆ ತಂದೆಯಲ್ಲಿ ಎಷ್ಟೊಂದು ದೊಡ್ಡ ಅಥಾರಿಟಿಯಿದೆ. ಅವರು ಹೇಗೆ ಪತಿತ ಪ್ರಪಂಚದಲ್ಲಿ ಹಾಗೂ ಪತಿತ ಶರೀರದಲ್ಲಿ ಬಂದು ಓದಿಸುತ್ತಾರೆ. ಪ್ರಪಂಚದ ಮನುಷ್ಯರು ಈ ಮಾತುಗಳನ್ನು ಹೇಗೆ ತಿಳಿದುಕೊಳ್ಳುತ್ತಾರೆ! ಅವರಂತೂ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಯಾರು ನನ್ನ ಮತದಂತೆ ನಡೆಯುತ್ತೀರಿ. ಅವರೇ ಸ್ವರ್ಗದ ಮಾಲೀಕರಾಗುತ್ತೀರಿ ಎನ್ನುವ ಆಜ್ಞೆಯನ್ನು ಈಗ ತಂದೆಯು ಕೊಡುತ್ತಾರೆ, ಇದರಲ್ಲಿ ಭಯ ಪಡುವ ಮಾತಿಲ್ಲ. ನಾವು ಆತ್ಮ ಅಶರೀರಿಯಾಗಿದ್ದೇವೆ. ಈಗ ಮನೆಗೆ ಹಿಂತಿರುಗಬೇಕು. ನಾನಂತೂ ಅವಿನಾಶಿ ಆತ್ಮನಾಗಿದ್ದೇನೆ. ಉಳಿದಂತೆ ಈ ಹಳೆಯ ಶರೀರ ಹೊರಟು ಹೋಗಲಿ……. ತಂದೆಯು ಜ್ಞಾನಾಮೃತವನ್ನು ಕುಡಿಸುತ್ತಾರೆ. ಆದ್ದರಿಂದ ನಾವು ಜೀವಂತವಾಗಿರಬೇಕು. ಅದರಲ್ಲಿಯೂ ಯಾರು ಸೇವಾಧಾರಿಗಳಿರುತ್ತಾರೆ, ಅವರ ಆಯಸ್ಸು ವೃದ್ಧಿಯಾಗುತ್ತದೆ. ಪ್ರದರ್ಶನಿಯಲ್ಲಿ ಬಹಳ ಸೇವೆಯಾಗಬೇಕು, ವೃದ್ಧಿಯಾಗುತ್ತದೆ. ಕೃಷ್ಣನ ಮಹಿಮೆ ಹಾಗೂ ಪರಮಾತ್ಮನ ಮಹಿಮೆಯಲ್ಲಿ ಬಹಳ ಅಂತರವಿದೆ. ನೀವು ಸ್ವರ್ಗದಲ್ಲಿ ಪಾವನರಾಗಿದ್ದವರು ಹೇಗೆ ಪತಿತರಾದಿರಿ ಎಂಬುದನ್ನು ತಿಳಿಯಬೇಕು. ತಂದೆಯು ಬಂದು ಕಲ್ಲು ಬುದ್ಧಿಯವರನ್ನು ಪಾರಸ ಬುದ್ಧಿಯವರನ್ನಾಗಿ ಮಾಡುತ್ತಾರೆ.
ಈಶ್ವರೀಯ ಸಂತಾನರೆಂದೂ ಯಾರಿಗೂ ಮನಸ್ಸಾ, ವಾಚಾ, ಕರ್ಮಣಾ ದುಃಖ ಕೊಡಬಾರದು. ಒಂದುವೇಳೆ ದುಃಖ ಕೊಟ್ಟರೆ ಮಹಾನ್ ದುಃಖಿಯಾಗಿ ಸಾಯುತ್ತೀರೆಂದು ತಂದೆಯು ಹೇಳುತ್ತಾರೆ. ಯಾವಾಗಲೂ ಎಲ್ಲರಿಗೂ ಸುಖ ಕೊಡಬೇಕು. ಮನೆಯಲ್ಲಿ ಅತಿಥಿಗಳಿಗೆ ಬಹಳ ಒಳ್ಳೆಯ ಸೇವೆ ಮಾಡಲಾಗುತ್ತದೆ. ಇದು ಹಳೆಯ ಶರೀರವಾಗಿದೆ. ದುಃಖವನ್ನು ಭೋಗಿಸಿ ಲೆಕ್ಕಾಚಾರವನ್ನು ಸಮಾಪ್ತಿ ಮಾಡಿಕೊಳ್ಳಬೇಕು, ಇದರಲ್ಲಿ ಭಯ ಪಡಬಾರದು. ಇಲ್ಲದಿದ್ದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಬಹಳ ಮಧುರರಾಗಬೇಕು. ತಂದೆಯು ಎಷ್ಟೊಂದು ಪ್ರೀತಿಯಿಂದ ತಿಳಿಸಿಕೊಡುತ್ತಾರೆ. ಸಂಪಾದನೆಯ ಸಮಯದಲ್ಲಿ ಎಂದಿಗೂ ಆಕಳಿಕೆ ಅಥವಾ ತೂಕಡಿಕೆ ಬರಬಾರದು. ನೀವು ನನ್ನನ್ನು ನೆನಪು ಮಾಡಿದಾಗ ಸದಾ ನಿರೋಗಿ ಆಗುತ್ತೀರೆಂದು ತಂದೆಯು ತಿಳಿಸುತ್ತಾರೆ. ನಾನು ನಿಮ್ಮನ್ನು ಸ್ವರ್ಗದಲ್ಲಿ ಕರೆದೊಯ್ಯಲು ಬಂದಿದ್ದೇನೆ, ಆದುದರಿಂದ ನೀವು ಯಾವುದೇ ಕೆಟ್ಟ ಕರ್ಮವನ್ನು ಮಾಡಬಾರದು. ಇಂತಹ ವಸ್ತುವನ್ನು ತೆಗೆದುಕೊಂಡು ತಿನ್ನೋಣವೇ.. ಎಂಬ ಅನೇಕ ಸಂಕಲ್ಪಗಳು ಬರುತ್ತವೆ, ಇವೆಲ್ಲಾ ಮಾತುಗಳನ್ನು ಅರ್ಪಣೆ ಮಾಡಬೇಕು. ಅರೇ! ತಂದೆಯು ಮಕ್ಕಳ ಜಾತಕವನ್ನು ತಿಳಿದುಕೊಂಡಿದ್ದಾರೆ, ಆದುದರಿಂದ ಉತ್ತಮ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕು. ನಾನು ಎಲ್ಲರ ಜನ್ಮದ ಜಾತಕವನ್ನು ತಿಳಿದುಕೊಂಡಿದ್ದೇನೆಂದು ತಂದೆಯು ತಿಳಿಸುತ್ತಾರೆ ಆದರೆ ನಿಮ್ಮ ಆಂತರ್ಯದಲ್ಲಿ ಏನೇನಿದೆ ಎಂದು ಒಬ್ಬೊಬ್ಬರಿಗೂ ತಿಳಿಸುತ್ತೇನೆಯೇ! ನನ್ನ ಕರ್ತವ್ಯವಾಗಿದೆ – ಶಿಕ್ಷಣ ಕೊಡುವುದು. ನಾನಂತು ಶಿಕ್ಷಕನಾಗಿದ್ದೇನೆ. ತಂದೆ ನಮ್ಮ ಔಷಧಿಯನ್ನು ತಾವೇ ಕಳುಹಿಸಿಕೊಡುತ್ತಾರೆ ಎಂದು ಹೇಳುವುದು ತಪ್ಪಾಗಿದೆ. ನಾನು ಎಲ್ಲವನ್ನು ತಿಳಿದುಕೊಂಡಿಲ್ಲ. ಆದುದರಿಂದ ಅನಾರೋಗ್ಯವಿದ್ದಾಗ ವೈದ್ಯರ ಬಳಿ ಹೋಗಿ ಎಂದು ತಂದೆಯು ಹೇಳುತ್ತಾರೆ. ಹಾ! ಎಲ್ಲಕ್ಕಿಂತ ಉತ್ತಮ ಔಷಧಿ ಯೋಗವಾಗಿದೆ ಆದರೆ ನಾನು ಎಲ್ಲರಿಗೂ ಔಷಧಿ ಕೊಡುವಂತಹ ವೈದ್ಯನಲ್ಲ. ಒಂದುವೇಳೆ ನಾಟಕದಲ್ಲಿದ್ದರೆ ಒಮ್ಮೊಮ್ಮೆ ಕೊಡಬಹುದು ಆದರೆ ನಾನು ನಿಮ್ಮ ಆತ್ಮನಿಗೆ ಇಂಜಕ್ಷನ್ ಕೊಡಲು ಬಂದಿದ್ದೇನೆ. ನಾಟಕದಲ್ಲಿದ್ದರೆ ಎಂದಾದರೂ ಔಷಧವನ್ನು ಕೊಡುತ್ತಾರೆ. ತಂದೆ ಸಮರ್ಥರಾಗಿದ್ದಾರೆ, ನಮ್ಮನ್ನು ಈ ರೋಗದಿಂದ ಏಕೆ ಮುಕ್ತರನ್ನಾಗಿ ಮಾಡಬಾರದು ಎಂದು ತಿಳಿದುಕೊಳ್ಳಬಾರದು. ಭಗವಂತ ಏನು ಬೇಕಾದರೂ ಮಾಡುತ್ತಾರೆಂದು ತಿಳಿದುಕೊಳ್ಳಬಾರದು ಏಕೆಂದರೆ ಪತಿತರನ್ನು ಪಾವನ ಮಾಡುವುದಕ್ಕಾಗಿಯೇ ತಂದೆಯು ಬಂದಿದ್ದಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:-
1. ಮನಸ್ಸಾ-ವಾಚಾ-ಕರ್ಮಣಾ ಎಂದೂ ಯಾರಿಗೂ ದುಃಖ ಕೊಡಬಾರದು. ಕಾಯಿಲೆಗೆ (ಕರ್ಮ ಭೋಗ) ಭಯ ಪಡಬಾರದು. ಖುಷಿ-ಖುಷಿಯಿಂದ ತಮ್ಮ ಹಳೆಯ ಲೆಕ್ಕಾಚಾರವನ್ನು ಸಮಾಪ್ತಿ ಮಾಡಿಕೊಳ್ಳಬೇಕು.
2. ಸಂಕಲ್ಪಗಳಿಗೆ ವಶವಾಗಿ ಯಾವುದೇ ಕೆಟ್ಟ ಕರ್ಮವನ್ನು ಮಾಡಬಾರದು. ಉತ್ತಮ ಗುಣಗಳನ್ನು ಧಾರಣೆ ಮಾಡಬೇಕು. ದೇವತೆಗಳಾಗಲು ಪ್ರತಿಯೊಂದು ಮಾತನ್ನು ಸೂಚನೆಯಿಂದಲೇ ತಿಳಿದುಕೊಳ್ಳಬೇಕು, ಹೇಳಿಸಿಕೊಳ್ಳಬಾರದು.
ವರದಾನ:-
ವರ್ತಮಾನ ಸಮಯದಲ್ಲಿ ತಾವು ಮಕ್ಕಳು ಇಂತಹ ಶ್ರೇಷ್ಠ ಅಧಿಕಾರಿಯಾಗುತ್ತೀರಿ, ಅದರಿಂದ ಸ್ವಯಂ ಸರ್ವಶಕ್ತಿವಂತನ ಮೇಲೂ ತಮ್ಮ ಅಧಿಕಾರವಿದೆ. ಪರಮಾತ್ಮನ ಅಧಿಕಾರಿ ಮಕ್ಕಳು ಸರ್ವ ಸಂಬಂಧಗಳ ಹಾಗೂ ಸರ್ವ ಸಂಪತ್ತಿನ ಅಧಿಕಾರವನ್ನೇ ಪ್ರಾಪ್ತಿ ಮಾಡಿಕೊಂಡು ಬಿಡುವರು. ಈ ಸಮಯದಲ್ಲಿಯೇ ತಂದೆಯ ಮೂಲಕ ಸರ್ವಶ್ರೇಷ್ಠ ಸಂಪದ್ಭರಿತ ಭವದ ವರದಾನವು ಲಭಿಸುವುದು. ತಮ್ಮಬಳಿ ಸರ್ವ ಗುಣಗಳ, ಸರ್ವ ಶಕ್ತಿಗಳ ಹಾಗೂ ಶ್ರೇಷ್ಠ ಜ್ಞಾನದ ಅವಿನಾಶಿ ಸಂಪತ್ತಿದೆ. ಆದ್ದರಿಂದ ತಮ್ಮಂತಹ ಸಂಪದ್ಭರಿತರು ಮತ್ತ್ಯಾರೂ ಇಲ್ಲ.
ಸ್ಲೋಗನ್:-
➤ Email me Murli: Receive Daily Murli on your email. Subscribe!