25 June 2022 KANNADA Murli Today | Brahma Kumaris

Read and Listen today’s Gyan Murli in Kannada

June 24, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಸತ್ಯತಂದೆಗೆ ನಿಮ್ಮ ಸತ್ಯ-ಸತ್ಯ ಲೆಕ್ಕವನ್ನು (ಚಾರ್ಟ್) ಕೊಡಿ, ಪ್ರತಿಯೊಂದು ಮಾತಿನಲ್ಲಿ ಶ್ರೀಮತವನ್ನು ತೆಗೆದುಕೊಳ್ಳುತ್ತಾ ಇರಿ, ಇದರಲ್ಲಿಯೇ ನಿಮ್ಮ ಕಲ್ಯಾಣವಿದೆ”

ಪ್ರಶ್ನೆ:: -

ಈಗ ನೀವು ಮಕ್ಕಳು ಯಾವ ವ್ಯಾಪಾರವನ್ನು ಯಾವ ವಿಧಿಯಿಂದ ಮಾಡುತ್ತೀರಿ?

ಉತ್ತರ:-

ಸಮರ್ಪಣಾಬುದ್ಧಿಯವರಾಗಿ ಹೇಳುತ್ತೀರಿ- ಬಾಬಾ ನಾನು ನಿಮ್ಮವನಾಗಿದ್ದೇನೆ, ಯಾರು ಈ ತನು-ಮನ-ಧನ ಎಲ್ಲವೂ ನಿಮ್ಮದಾಗಿದೆ. ಅದಕ್ಕೆ ತಂದೆಯೂ ಸಹ ಹೇಳುತ್ತಾರೆ- ಮಕ್ಕಳೇ ಸ್ವರ್ಗದ ರಾಜ್ಯಭಾಗ್ಯವು ನಿಮ್ಮದಾಗಿದೆ. ಇದೇ ವ್ಯಾಪಾರವಾಗಿದೆ ಆದರೆ ಇದರಲ್ಲಿ ಸತ್ಯಹೃದಯ ಬೇಕು. ನಿಶ್ಚಯವು ಪಕ್ಕಾ ಇರಬೇಕು. ತಮ್ಮ ಸತ್ಯ-ಸತ್ಯ ಲೆಕ್ಕವನ್ನು ತಂದೆಗೆ ಕೊಡಬೇಕು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನೀವೇ ಮಾತಾ ಪಿತಾ ಆಗಿದ್ದೀರಿ……

ಓಂ ಶಾಂತಿ. ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ- ಮಕ್ಕಳೂ ಸಹ ತಿಳಿದುಕೊಂಡಿದ್ದಾರೆ, ಈಗ ನಾವು ಬ್ರಹ್ಮಾಕುಮಾರ-ಕುಮಾರಿಯರು ಶ್ರೀಮತದ ಅರ್ಥವನ್ನಂತು ಅರಿತುಕೊಂಡಿದ್ದೇವೆ. ಶಿವಬಾಬಾರವರ ಮತದಿಂದ ನಾವು ಪುನಃ ಆದಿಸನಾತನ ದೇವೀ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಿದ್ದೆವು. ಇದು ನೀವು ಪ್ರತಿಯೊಬ್ಬರಿಗೂ ತಿಳಿದಿದೆ- ಅವಶ್ಯವಾಗಿ ಕಲ್ಪ-ಕಲ್ಪವೂ ಸಹ ಪರಮಪಿತ ಪರಮಾತ್ಮನು ಬಂದು ಬ್ರಹ್ಮನ ಮುಖಾಂತರ ಮಕ್ಕಳನ್ನು ದತ್ತು ಮಾಡಿಕೊಳ್ಳುತ್ತಾರೆ. ನೀವು ದತ್ತು ಬ್ರಾಹ್ಮಣರಾಗಿದ್ದೀರಿ, ಮಡಿಲನ್ನು ತೆಗೆದುಕೊಂಡಿದ್ದೀರಿ. ಶ್ರೀಮತದಿಂದ ನಾವು ಪುನಃ ಯಾವ ಆದಿಸನಾತನ ದೇವೀ-ದೇವತಾ ಧರ್ಮವು ಪ್ರಾಯಃಲೋಪವಾಗಿಬಿಟ್ಟಿದೆ, ಅದನ್ನು ಪುನಃ ಸ್ಥಾಪನೆ ಮಾಡಲಾಗುತ್ತಿದೆ ಮತ್ತು ಕಲ್ಪದ ಮೊದಲಿನ ಯಾವ ಪಾತ್ರ ನಡೆಯುತ್ತದೆ ಎನ್ನುವ ಶಿಕ್ಷಣವು ಸಿಗುತ್ತದೆ, ಕಲ್ಪದ ಹಿಂದಿನಂತೆ ನಾಟಕದನುಸಾರ ನಾವು ಪಾತ್ರ ಮಾಡುತ್ತಿದ್ದೇವೆ. ನೀವು ಮಕ್ಕಳಿಗೆ ತಿಳಿದಿದೆ- ನಾವು ಶ್ರೀಮತದ ಮೇಲೆ ನಮ್ಮ ದೈವೀಸ್ವರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆ. ಯಾರ್ಯಾರು ಎಷ್ಟೆಷ್ಟು ಪುರುಷಾರ್ಥ ಮಾಡುತ್ತಾರೆಯೋ ಅಷ್ಟು ಮಾಡುತ್ತಾರೆ ಏಕೆಂದರೆ ಸೈನ್ಯದಲ್ಲಿ ಕೆಲವರು ಸತೋಪ್ರಧಾನ ಪುರುಷಾರ್ಥಿಗಳು, ಕೆಲವರು ಸತೋ, ಕೆಲವರು ರಜೋ ಪುರುಷಾರ್ಥಿಗಳಿದ್ದಾರೆ. ಕೆಲವರು ಮಹಾರಥಿ, ಕೆಲವರು ಕುದುರೆ ಸವಾರರು, ಕೆಲವರು ಕಾಲಾಳು. ಈ ರೀತಿ ಹೆಸರುಗಳನ್ನು ಕೊಟ್ಟಿದ್ದಾರೆ. ಮಕ್ಕಳಿಗೆ ಖುಷಿಯಾಗುತ್ತದೆ ಏಕೆಂದರೆ ನಾವು ಗುಪ್ತವಾಗಿದ್ದೇವೆ. ಸ್ಥೂಲ ಆಯುಧ ಮುಂತಾದವುಗಳನ್ನು ಉಪಯೋಗಿಸುವುದಿಲ್ಲ. ದೇವಿಯರಿಗೆ ಆಯುಧಗಳು ಮುಂತಾದವನ್ನು ತೋರಿಸುತ್ತಾರೆ. ಅವು ಜ್ಞಾನದ ಅಸ್ತ್ರ ಶಸ್ತ್ರಗಳಾಗಿವೆ. ಆಯುಧಗಳು ಶಾರೀರಿಕ ಬಾಹುಬಲವಾಗಿದೆ. ಮನುಷ್ಯರಿಗೆ ಇಲ್ಲಿ ಸ್ಥೂಲಕತ್ತಿ ಮುಂತಾದವುಗಳನ್ನು ತೆಗೆದುಕೊಳ್ಳುವುದಿಲ್ಲ, ಇದನ್ನು ಜ್ಞಾನದ ಬಾಣವೆಂದು ಹೇಳಲಾಗುತ್ತದೆ ಎನ್ನುವುದು ತಿಳಿದೇ ಇಲ್ಲ. ಚತುರ್ಭುಜ ವಿಷ್ಣುವಿನಲ್ಲಿ ಯಾವ ಅಲಂಕಾರವನ್ನು ತೋರಿಸುತ್ತಾರೆ, ಅದರಲ್ಲಿಯೂ ಸಹ ಶಂಖು ಜ್ಞಾನದ ಶಂಖುವಾಗಿದೆ. ಜ್ಞಾನದ ಚಕ್ರ, ಜ್ಞಾನದ ಗದೆಯಾಗಿದೆ. ಎಲ್ಲವೂ ಜ್ಞಾನದ ಮಾತುಗಳಾಗಿವೆ. ತಿಳಿಸಲಾಗುತ್ತದೆ- ಗೃಹಸ್ಥವ್ಯವಹಾರದಲ್ಲಿ ಕಮಲಪುಷ್ಪ ಸಮಾನ ಇರುತ್ತೀರೆಂದರೆ ಕಮಲದ ಪುಷ್ಪವನ್ನು ಕೊಡುತ್ತೇವೆ. ಈಗ ನೀವು ಪ್ರತ್ಯಕ್ಷ ರೂಪದಲ್ಲಿ ಪಾತ್ರದಲ್ಲಿದ್ದೀರಿ. ಕಮಲಪುಷ್ಪ ಸಮಾನ ಗೃಹಸ್ಥವ್ಯವಹಾರದಲ್ಲಿ ಇದ್ದರೂ ಸಹ ನಿಮ್ಮ ಬುದ್ಧಿಯಲ್ಲಿ ಜ್ಞಾನವಿದೆ. ನಾವು ಒಬ್ಬ ತಂದೆಯನ್ನೇ ನೆನಪು ಮಾಡುತ್ತೇವೆ. ಇದು ಕರ್ಮಯೋಗದ ಸನ್ಯಾಸವಾಗಿದೆ. ತಮ್ಮ ರಚನೆಯನ್ನೂ ಸಹ ಸಂಭಾಲನೆ ಮಾಡಬೇಕಾಗಿದೆ. ಈಗ ನೀವು ಅರಿತುಕೊಂಡಿದ್ದೀರಿ- ಮೊದಲು ದುಃಖದ ವ್ಯವಹಾರವೇ ಇತ್ತು. ಒಬ್ಬರು ಇನ್ನೊಬ್ಬರಿಗೆ ದುಃಖವನ್ನೇ ಕೊಡುತ್ತಿದ್ದೆವು. ಇಲ್ಲಿಯ ಸುಖವಂತು ಕಾಗವೃಷ್ಟ ಸಮಾನ ಛೀ-ಛೀ ಆಗಿದೆ. ದುಃಖ ಕೊಡುವ ಹುಳುಗಳು ಆಗಿಬಿಟ್ಟಿದ್ದೀರಿ. ಮಕ್ಕಳು ತಿಳಿದುಕೊಂಡಿದ್ದೀರಿ, ಇದು ಹಗಲು-ರಾತ್ರಿಯ ವ್ಯತ್ಯಾಸವಾಗಿದೆ. ತಂದೆಯು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ಈಗ ನಾವು ನರಕದ ಮಾಲೀಕರಾಗಿದ್ದೇವೆ. ನರಕದಲ್ಲಿ ಏನು ಸುಖವಿರುತ್ತದೆ! ನೀವು ಮಕ್ಕಳು ಇದನ್ನು ಕೇಳುತ್ತೀರಿ ಮತ್ತು ತಿಳಿದುಕೊಳ್ಳುತ್ತೀರಿ. ತಂದೆಯು ಮಕ್ಕಳಿಗೆ ಈ ಜ್ಞಾನವನ್ನು ತಿಳಿಸುತ್ತಿದ್ದಾರೆ. ಮಕ್ಕಳಿಗೋಸ್ಕರವೇ ಸ್ವರ್ಗವಿದೆ. ಮಕ್ಕಳೇ ಒಳ್ಳೆಯ ರೀತಿಯಲ್ಲಿ ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಳ್ಳುತ್ತಾರೆ. ಮೊಟ್ಟಮೊದಲು ನಿಶ್ಚಯವಿರಬೇಕು. ನಿಶ್ಚಯಬುದ್ಧಿ ವಿಜಯಂತಿ, ನಿಶ್ಚಯವು ಪಕ್ಕಾ ಆಗುವುದರಿಂದ ಅವರು ನಿಶ್ಚಯದಲ್ಲಿಯೇ ಇರುತ್ತಾರೆ. ಒಂದಂತೂ ಶಿವತಂದೆಯ ನೆನಪು ಇರುತ್ತದೆ ಮತ್ತು ಖುಷಿಯ ನಶೆಯು ಏರಿರುತ್ತದೆ. ಸಮರ್ಪಣಾಬುದ್ಧಿಯು ಇರುತ್ತದೆ. ತಂದೆಗೆ ಹೇಳುತ್ತಾರೆ- ಬಾಬಾ ನಾನು ನಿಮ್ಮವನಾಗಿದ್ದೇನೆ. ಈ ತನು, ಮನ, ಧನ ಎಲ್ಲವೂ ನಿಮ್ಮದೇ ಆಗಿದೆ. ತಂದೆಯೂ ಸಹ ಮಕ್ಕಳೇ ಸ್ವರ್ಗದ ರಾಜ್ಯಭಾಗ್ಯವು ನಿಮ್ಮದೆಂದು ಹೇಳುತ್ತಾರೆ. ನೋಡಿ, ವ್ಯಾಪಾರವು ಹೇಗಿದೆ! ಆದ್ದರಿಂದ ಸತ್ಯ ಮಗು ಆಗಬೇಕಾಗಿದೆ. ತಂದೆಗೆ ಎಲ್ಲವೂ ತಿಳಿಸಬೇಕು, ಮಕ್ಕಳಬಳಿ ಏನಿದೆ? ನಾನು ಏನನ್ನು ಕೊಡುತ್ತೇನೆ! ನಿಮ್ಮ ಹತ್ತಿರ ಏನಿದೆ? ತಂದೆಯು ಒಳ್ಳೆಯ ರೀತಿಯಲ್ಲಿ ತಿಳಿಸುತ್ತಾರೆ. ನಾನು ಬಡವರಬಂಧು ಆಗಿದ್ದೇನೆ. ಸಾಹುಕಾರರು ಧನವಂತರಂತೂ ಸಮರ್ಪಣೆ ಆಗುವುದರಲ್ಲಿ ಹೃದಯವಿಧೀರ್ಣವಾಗುತ್ತದೆ. ಬಡವರು ತಕ್ಷಣ ತಿಳಿಸುತ್ತಾರಲ್ಲವೇ. ವ್ಯಾಪಾರ ಮಾಡುತ್ತಾರೆ, ಉದ್ಯೋಗ ಮುಂತಾದವುಗಳನ್ನು ಯಾರು ಮಾಡುತ್ತಾರೆ ಅವರು ತಮ್ಮ ಸಂಪಾದನೆಯಿಂದ ಒಂದೆರಡು ಪೈಸೆ ಅಥವಾ ನಾಲ್ಕು ಪೈಸೆಗಳನ್ನು ತೆಗೆಯುತ್ತಾರೆ. ಯಾರು ಧಾನದ ಆಸಕ್ತಿಯುಳ್ಳವರಿರುತ್ತಾರೆ, ಅವರು ಧರ್ಮಕ್ಕಾಗಿ (ದಾನದ ಹಣ) ಜಾಸ್ತಿ ತೆಗೆಯುತ್ತಾರೆ. ಏನೆಲ್ಲಾ ಮಾಡುತ್ತಾರೆ, ಅದನ್ನು ಈಶ್ವರಾರ್ಪಣಂ ಎಂದು ಹೇಳುತ್ತಾರೆ ಆದ್ದರಿಂದ ಅಲ್ಪಕಾಲದ ಸುಖವು ನಂತರದ ಜನ್ಮದಲ್ಲಿ ಸಿಗುತ್ತದೆ. ಕೆಲವರು ಕಾಲೇಜ್, ಧರ್ಮಶಾಲೆ, ಆಸ್ಪತ್ರೆ ಮುಂತಾದವುಗಳನ್ನು ತೆರೆಯುತ್ತಾರೆಂದರೆ ಅವರಿಗೆ ನಂತರದ ಜನ್ಮದಲ್ಲಿ ಅದರ ಲಾಭವು ಸಿಗುತ್ತದೆ. ಪುಣ್ಯಾತ್ಮರಾಗುತ್ತಾರಲ್ಲವೇ. ಅವರ ಆರೋಗ್ಯವು ಚೆನ್ನಾಗಿರುವುದು. ಕಾಲೇಜಿನಲ್ಲಿ ಒಳ್ಳೆಯ ರೀತಿಯಲ್ಲಿ ಓದುತ್ತಾರೆ. ಅದೆಲ್ಲವನ್ನೂ ಸಹ ನಾನೇ ಕೊಡುತ್ತೇನೆ. ಸಾಕ್ಷಾತ್ಕಾರವನ್ನೂ ಸಹ ನಾನೇ ಮಾಡಿಸುತ್ತೇನೆ. ಪ್ರತಿಯೊಬ್ಬರ ಲೆಕ್ಕವೂ ಸಹ ನನ್ನ ಹತ್ತಿರವಿದೆ. ನಾಟಕದನುಸಾರ ಮೊದಲಿನಿಂದಲೇ ನಿಗಧಿಯಾಗಿದೆ. ಹಣವು ಜಾಸ್ತಿ ಇದ್ದರೆ ಮಂದಿರ ಮುಂತಾದವುಗಳನ್ನು ಮಾಡುತ್ತಾರೆ, ಅದು ಧರ್ಮಾವು ತೆಗೆಯುವುದಾಗಿದೆ. ತಮ್ಮ ಕಾರ್ಖಾನೆ ಮುಂತಾದವುಗಳ ಸಂಪಾದನೆಯಿಂದ ಸ್ವಲ್ಪ ಹಣವನ್ನು ತೆಗೆದು ಮಂದಿರವನ್ನು ಮಾಡಿಸುತ್ತಾರೆ, ಕೆಲವರು ಕಾಲೇಜು ಮುಂತಾದವುಗಳನ್ನು ಮಾಡಿಸುತ್ತಾರೆ. ಅವರು ಈಶ್ವರಾರ್ಥವಾಗಿ ದಾನ ಮಾಡುತ್ತೇನೆ ಎಂದು ಹೇಳುತ್ತಾರೆ. ಅದಕ್ಕೆ ಈಶ್ವರ ಹಿಂತಿರುಗಿಸಿ ಕೊಡುತ್ತಾರೆ. ಅನೇಕ ಮನುಷ್ಯರು ನಾವು ನಿಷ್ಕಾಮಸೇವೆ ಮಾಡುತ್ತೇವೆಂದು ಹೇಳುತ್ತಾರೆ ಆದರೆ ನಿಷ್ಕಾಮಿಗಳಂತೂ ಇರುವುದಿಲ್ಲ. ನಿಷ್ಕಾಮ ಎನ್ನುವ ಅಕ್ಷರವು ಎಲ್ಲಿಂದ ಬಂತು? ತಂದೆಯು ತಿಳಿಸಿದ್ದಾರೆ- ನಿಷ್ಕಾಮ ಸೇವೆಯಾಗಲು ಸಾಧ್ಯವಿಲ್ಲ ಏಕೆಂದರೆ ಫಲವು ಅವಶ್ಯವಾಗಿ ಸಿಗುತ್ತದೆ. ಈಗ ನೀವು ಗೃಹಸ್ಥ ವ್ಯವಹಾರದಲ್ಲಿ ಇರಲೇಬೇಕಾಗಿದೆ. ನೌಕರಿ ಮಾಡಬೇಕಾಗಿದೆ, ಸಂಭಾಲನೆ ಮಾಡಬೇಕಾಗಿದೆ. ಮಕ್ಕಳು ತಮ್ಮ ಲೆಕ್ಕ ಮುಂತಾದವುಗಳನ್ನು ತಂದೆಗೆ ಕೊಡಬೇಕಾಗಿದೆ. ಎಷ್ಟು ಉಳಿಯುತ್ತದೆ ಎಂದು ತಿಳಿಸಬೇಕಾಗಿದೆ. ಆಗ ತಂದೆ ಹೇಳುತ್ತಾರೆ- ಒಳ್ಳೆಯದು ನೀವು ಬಡವರಾಗಿದ್ದೀರಿ, ಸಂಪಾದನೆ ಮುಂತಾದವುದೇನೂ ಇಲ್ಲ. ತಮ್ಮ ರಚನೆಯ ಪೂರ್ಣ ಪಾಲನೆಯನ್ನೂ ಸಹ ಮಾಡಲಾಗುವುದಿಲ್ಲ. ಒಳ್ಳೆಯದು- ನೀವು ಒಂದುಪೈಸೆಯನ್ನು ಕೊಡಿ. ಇದೇ ನಿಮ್ಮ ಅವಿನಾಶಿ 21 ಜನ್ಮಗಳ ಸಂಪಾದನೆಯಾಗಿದೆ. ಅದು ಅಲ್ಪಕಾಲ ಸುಖಕ್ಕೋಸ್ಕರ ಇತ್ತು. ಆ ಸಂಪಾದನೆಯು ಅಲ್ಪಕಾಲದ ಸುಖಕ್ಕೋಸ್ಕರ ಇತ್ತು, ಇದು 21 ಜನ್ಮಗಳಿಗೋಸ್ಕರವಾಗಿದೆ ಮತ್ತು ಇದು ಡೈರೆಕ್ಟ್ ಆಗಿದೆ. ತಂದೆಯು ಹೇಳುತ್ತಾರೆ- ನೀವು ಬೀಜವನ್ನು ಬಿತ್ತಲೇಬೇಕಾಗಿದೆ. ಸುಧಾಮನು ಹಿಡಿ ಅವಲಕ್ಕಿಯನ್ನು ಕೊಟ್ಟನು, ಅದರಿಂದ 21 ಜನ್ಮಗಳಿಗೋಸ್ಕರ ಮಹಲ್ ಸಿಕ್ಕಿಬಿಟ್ಟಿತು ಏಕೆಂದರೆ ಸುಧಾಮ ಬಡವನಾಗಿದ್ದನು. ಸಾಹುಕಾರರು ವಜ್ರದ ಹಿಡಿಯನ್ನು ಕೊಟ್ಟರೂ ಸಹ ಇಬ್ಬರದೂ ಒಂದೇ ಆಗಿದೆ. ತಂದೆಯು ಏನೂ ಹೇಳುವುದಿಲ್ಲ. ನೀವು ಇಷ್ಟನ್ನು ಮಾಡಿ ಎಂದು ಪ್ರತಿಯೊಬ್ಬರಿಗೆ ತಮ್ಮ-ತಮ್ಮ ಸಲಹೆಯನ್ನು ಕೊಡುತ್ತಾರೆ. ತಂದೆಯು ಕೇಳುತ್ತಾರೆ- ಎಷ್ಟು ಖರ್ಚಾಗುತ್ತದೆ, ಸ್ವಲ್ಪವು ಉಳಿಯುತ್ತದೆ0iÉುಂದರೆ ಅದರನುಸಾರವೇ ಸಲಹೆ ಕೊಡುತ್ತಾರೆ. ಸಮಯದಲ್ಲಿ ಕೆಲಸಕ್ಕೆ ಬರಬೇಕು. ತಂದೆಯು ಇಷ್ಟನ್ನು ಕೊಡಿ ಎಂದು ಸಲಹೆ ಕೊಡುತ್ತಾರೆ, ಬಾಕಿ ತಂದೆಯು ಜವಾಬ್ದಾರನಾಗಿದ್ದಾರೆ. ಒಳ್ಳೆಯದು- ಮನೆಯಲ್ಲಿ ಒಂದು ಹಾಲ್ ನಿರ್ಮಾಣ ಮಾಡಿ. ಅದರಲ್ಲಿ ಮಕ್ಕಳು ಬಂದು ಸರ್ವೀಸ್ ಮಾಡಲಿ. ಆಸ್ಪತ್ರೆ ತುಂಬಾ ದೊಡ್ಡ-ದೊಡ್ಡದಾಗಿ ನಿರ್ಮಾಣ ಮಾಡುತ್ತಾರೆ, ಅದೇರೀತಿ ಇದನ್ನೂ ಸಹ ದೊಡ್ಡದಾಗಿ ಮಾಡಬೇಕಾಗುತ್ತದೆ ಏಕೆಂದರೆ ಅನೇಕರು ಬರುತ್ತಾರೆ. ಒಂದುವೇಳೆ ಜಾಸ್ತಿ ಹಣವಿದ್ದರೆ ಈ ಆಸ್ಪತ್ರೆ, ಕಾಲೇಜನ್ನು ತೆರೆಯಿರಿ. ಎಂತೆಂತಹ ಗ್ರಾಮವೋ ಅಂತಂತಹ ವಸ್ತುಗಳು. ಇದರಲ್ಲಿ ಎಷ್ಟೊಂದು ಮಕ್ಕಳು ಬಂದು ಆರೋಗ್ಯಭಾಗ್ಯದ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ. ಈಗ ನೀವು ಹೀಗೀಗೆ ಮಾಡುವುದರಿಂದ ರಾಜ್ಯಭಾಗ್ಯವು ಸಿಗುತ್ತದೆ, ಅನೇಕರ ಕಲ್ಯಾಣವಾಗುತ್ತದೆ. 21 ಜನ್ಮಗಳಗೋಸ್ಕರ ನೀವು ಈ ರೀತಿ ಆಗುತ್ತೀರಿ. ಮಕ್ಕಳನ್ನಂತೂ ಪೂರ್ಣ ಸಂಭಾಲನೆ ಮಾಡಬೇಕಾಗಿದೆ. ಸಾಧು-ಸಂತರಿಗೆ ಈ ಮಾತುಗಳು ಇರುವುದಿಲ್ಲ. ಅವರಿಗೆ ಏನನ್ನು ಕೊಡುತ್ತಾರೆ ಅದನ್ನು ತಮ್ಮ ಕೆಲಸದಲ್ಲಿಯೇ ತೊಡಗಿಸಿಕೊಳ್ಳುತ್ತಾರೆ. ತಮ್ಮ ಸನ್ಯಾಸಕುಲದ ವೃದ್ಧಿ ಮಾಡುತ್ತಾರೆ, ಕುಠೀರ ಮುಂತಾದವುಗಳನ್ನು ಮಾಡುತ್ತಾರೆ. ಇಲ್ಲಿ ಯಾರೆಷ್ಟು ಪರಿಶ್ರಮ ಪಡುತ್ತಾರೆ ಅಷ್ಟು ಸಿಂಹಾಸನದ ಮಾಲೀಕರಾಗುತ್ತಾರೆ. ಈ ಆಸ್ತಿಯು ಸಿಗುತ್ತದೆ. ಯಾರೆಲ್ಲಾ ಮಕ್ಕಳಿದ್ದಾರೆ, ಅವರೆಲ್ಲರಿಗೂ ತಂದೆಯಿಂದ ಆಸ್ತಿ ಸಿಗುತ್ತದೆ. ಕೇವಲ ತಂದೆಯು ಹೇಳುತ್ತಾರೆ- ಮಕ್ಕಳೇ, ನೀವು ನನ್ನನ್ನು ಮರೆತುಬಿಟ್ಟಿದ್ದೀರಲ್ಲವೇ. ನೀವು ಎಷ್ಟೊಂದು ಅಲೆದಿದ್ದೀರಿ. ಕಲ್ಲುಮುಳ್ಳಲ್ಲಿ ಹೋಗಿ ಹುಡುಕಾಡಿ-ಹುಡುಕಾಡಿ ತಮ್ಮ ಕಾಲುಗಳೇ ಸುಸ್ತಾದವು. ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ, ನಂತರವೂ ಹೀಗೆಯೇ ಆಗುವುದು. ಸೂರ್ಯವಂಶಿಯರು ಬಂದರು, ಚಂದ್ರವಂಶಿಯರು ಬಂದರು ನಂತರ ಹೇಗೆ ವೃದ್ಧಿಯಾಗುತ್ತಾ ಹೋಯಿತು, ಜನ್ಮ ತೆಗೆದುಕೊಳ್ಳುತ್ತಾ ಹೋದರು. ಇದೆಲ್ಲವೂ ನಿಮ್ಮ ಬುದ್ಧಿಯಲ್ಲಿದೆ. ಭಕ್ತಿಮಾರ್ಗದಲ್ಲಿಯೂ ಸಹ ನಾನೇ ಫಲವನ್ನು ಕೊಡುತ್ತೇನೆ. ಕಲ್ಲಿನ ಜಡಮೂರ್ತಿಯು ಏನು ಕೊಡುತ್ತದೆ! ಈಗ ನೀವು ಶೂದ್ರವರ್ಣದಿಂದ ಬ್ರಾಹ್ಮಣ ವರ್ಣದವರಾಗಿದ್ದೀರಿ.

ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ನಾವು ಶ್ರೀಮತದ ಮೇಲೆ ಪುನಃ ಆದಿಸನಾತನ ದೇವೀ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಿದ್ದೇವೆ. ಕಲ್ಪದ ಹಿಂದೆಯೂ ಮಾಡಿದ್ದೆವು ನಂತರ 84 ಜನ್ಮಗಳ ಚಕ್ರದಲ್ಲಿ ಬಂದುಬಿಟ್ಟಿದ್ದೇವೆ. ಬಾಕಿ ಇಸ್ಲಾಮಿ, ಬೌದ್ಧಿ, ಮುಂತಾದ ಇವೆಲ್ಲವೂ ರೆಂಬೆ-ಕೊಂಬೆಗಳಾಗಿವೆ. ನಾಟಕವೆಲ್ಲವೂ ಭಾರತದ ಮೇಲೆಯೇ ಇದೆ. ನೀವೇ ದೇವತೆಗಳಾಗಿದ್ದವರು, ನೀವೇ ಅಸುರರಾಗಿದ್ದೀರಿ. ರಾವಣನ ಪ್ರವೇಶತೆಯಾಗುವುದರಿಂದ ವಾಮಮಾರ್ಗದಲ್ಲಿ ಹೋಗಿ ನೀವು ವಿಕಾರಿಗಳಾಗಿಬಿಡುತ್ತೀರಿ. ಭ್ರಷ್ಟಾಚಾರಿತನವು ಶುರುವಾಗಿಬಿಡುತ್ತದೆ. ಭ್ರಷ್ಟಾಚಾರವೂ ಸಹ ಮೊದಲು ಸತೋಪ್ರಧಾನ ನಂತರ ಸತೋ, ರಜೋ, ತಮೋ ಆಗುತ್ತದೆ. ತಂದೆಯು ತಿಳಿಸುತ್ತಾರೆ ಈ ಸಮಯದಲ್ಲಿ ಇಡೀ ವೃಕ್ಷವು ಜಡಜಡೀಭೂತ ಅವಸ್ಥೆಯನ್ನು ಪಡೆದುಕೊಂಡಿದೆ. ಈಗ ಇದು ಸಮಾಪ್ತಿಯಾಗಲೇಬೇಕಾಗಿದೆ. ಯಾವ ದೇವತಾಧರ್ಮವಿಲ್ಲವೋ ಅದು ಪುನಃ ಸ್ಥಾಪನೆಯಾಗಬೇಕಾಗಿದೆ. ಕಲ್ಪ-ಕಲ್ಪವು ಸ್ಥಾಪನೆ ಮಾಡುತ್ತಾರೆ ಆದರೆ ಇದರ ವರ್ಣನೆಯು ಕಾಯಿದೆಯನುಸಾರ ಇಲ್ಲ. ನಂಬರ್ವನ್ ಮಾತು ಭಗವಾನುವಾಚ ಆಗಿದೆ. ಭಗವಂತನಂತು ಒಬ್ಬರೇ ಆಗಿದ್ದಾರಲ್ಲವೇ. ಸರ್ವವ್ಯಾಪಿಯ ಜ್ಞಾನದಿಂದ ಭಕ್ತಿಯೂ ಸಹ ನಡೆಯುವುದಿಲ್ಲ. ಓ ಪರಮಪಿತ ಎಂದು ಯಾರಿಗೆ ಹೇಳುತ್ತೀರಿ, ಅವರು ಸರ್ವವ್ಯಾಪಿಯಾಗಿದ್ದರೆ ಓ ಭಗವಂತ ಎಂದು ಹೇಳಲು ಸಾಧ್ಯವಿಲ್ಲ. ಸತೋಪ್ರಧಾನದಿಂದ ನಂತರ ಸತೋ, ರಜೋ, ತಮೋನಲ್ಲಿ ಬರಲೇಬೇಕಾಗಿದೆ ಆದ್ದರಿಂದ ಎಲ್ಲರೂ ಪತಿತರಾಗಿದ್ದಾರೆ. ಗಾಯನ ಮಾಡುತ್ತಾರೆ- ಪತಿತಪಾವನ ಬಾ ಎಂದು. ತಂದೆಯೂ ಬರುವುದೇ ಪತಿತರನ್ನು ಪಾವನ ಮಾಡಲು. ನೀವೀಗ ಪಾವನರಾಗುತ್ತಿದ್ದೀರಿ. ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುತ್ತಾರೆ. ಯಾವಾಗ ಆಪತ್ತುಗಳು ಬರುತ್ತವೆ, ಆಗ ಹೇ! ಭಗವಂತ ಎಂದು ನೆನಪು ಮಾಡುತ್ತಾರೆ ಆದರೆ ಅರಿತುಕೊಂಡಿಲ್ಲ. ನಿಮಗೆ ಜ್ಞಾನವು ಸಿಗುತ್ತಿದೆ. ನೀವೇ ನಂತರ ದೇವೀ-ದೇವತೆಗಳಾಗಬೇಕಾಗಿದೆ. ಈಗ ಇದು ಅಂತಿಮದ ಸಮಯವಾಗಿದೆ, ಎಲ್ಲರ ಲೆಕ್ಕಾಚಾರವು ಸಮಾಪ್ತಿಯಾಗುವುದಿದೆ. ಈಗ ಎಲ್ಲರೂ ಸ್ಮಶಾನಕ್ಕೆ ಯೋಗ್ಯರಾಗಿದ್ದಾರೆ, ತಂದೆಯು ಬಂದು ಜಾಗೃತಗೊಳಿಸುತ್ತಾರೆ. ಈ ಜ್ಞಾನವು ಯಾರ ಹತ್ತಿರವೂ ಇಲ್ಲ. ಬರುತ್ತಾ ಇರುತ್ತಾರೆ, ವೃದ್ಧಿಯಾಗುತ್ತಾ ಇರುತ್ತದೆ. ತಂದೆಯೊಂದಿಗೆ ಕೇಳುತ್ತೀರಿ- ನಾನು ಯಾವ ಪದವಿಯನ್ನು ಪಡೆಯುತ್ತೇನೆ! ಅದನ್ನು ತಮ್ಮ ಸ್ಥಿತಿಯಿಂದ ತಿಳಿದುಕೊಳ್ಳಬಲ್ಲಿರಿ. ಈಗ ತುಂಬಾ ಅವಕಾಶವಿದೆ. ತಂದೆಯನ್ನು ನೆನಪು ಮಾಡಲು ನೀವೆಲ್ಲರೂ ಪುರುಷಾರ್ಥಿಗಳಾಗಿದ್ದೀರಿ. ಪರಿಪೂರ್ಣರಂತು (ಸಂಪೂರ್ಣರು) ಅಂತ್ಯದಲ್ಲಿಯೇ ಆಗುತ್ತೀರಿ. ಪರೀಕ್ಷೆಯು ಪೂರ್ತಿಯಾಗುವುದು ನಂತರ ಯುದ್ಧವು ಪ್ರಾರಂಭವಾಗಿಬಿಡುತ್ತದೆ. ಯಾವಾಗ ನೀವು ಸಮೀಪ ಹೋಗುತ್ತೀರಿ, ಆಗ ಅನೇಕರಿಗೆ ಸಾಕ್ಷಾತ್ಕಾರಗಳು ಆಗುತ್ತಾ ಇರುವುದು. ಒಬ್ಬರು ಇನ್ನೊಬ್ಬರನ್ನು ಇವರು ಯಾವ ಪದವಿಯನ್ನು ಪಡೆಯುತ್ತಾರೆ ಎನ್ನುವುದನ್ನು ತಿಳಿಯುತ್ತೀರಿ. ಇದು ತಿಳಿವಳಿಕೆಯ ಮಾತಾಗಿದೆಯಲ್ಲವೇ. ಆತ್ಮವು ಬುದ್ಧಿಹೀನವಾಗಿಬಿಟ್ಟಿದೆ. ಈಗ ಮತ್ತೆ ತಂದೆಯು ಕವಡೆಯಿಂದ ವಜ್ರವನ್ನಾಗಿ ಮಾಡಲು ಬುದ್ಧಿವಂತರನ್ನಾಗಿ ಮಾಡುತ್ತಾರೆ. ತಂದೆಯು ಹೇಳುತ್ತಾರೆ – ಮಕ್ಕಳೇ ಇದು ಯುದ್ಧದ ಮೈದಾನವಾಗಿದೆ, ಬಿರುಗಾಳಿಗಳು ತುಂಬಾ ಬರುತ್ತವೆ. ಎಲ್ಲಾ ರೋಗಗಳು ಹೊರಬರುತ್ತವೆ. ತಮ್ಮ ಕಲೆಗಳಲ್ಲಿ ಬುದ್ಧಿವಂತರಾಗಬೇಕಾಗಿದೆ.

ಮಾಲೀಕನು ಯಾವುದೇ ಸಹಯೋಗ ಕೊಡುವುದಿಲ್ಲ. ಸೋಲು ಅಥವಾ ಗೆಲುವನ್ನು ಪಡೆಯುವುದು ನಿಮ್ಮ ಕೈಯಲ್ಲಿ ಇದೆ. ಮಾಲೀಕ ತಂದೆಯು ಹೇಳುತ್ತಾರೆ- ಇದು ಮಾಯೆಯ ಯುದ್ಧವಾಗಿದೆ. ಮಾಯೆಯು ತುಂಬಾ ಕೆಳಗೆ ಬೀಳಿಸುತ್ತದೆ. ಇಷ್ಟವಿಲ್ಲದಿದ್ದರೂ ಸಹ 5-6ವರ್ಷ ಸರಿಯಾಗಿ ನಡೆಯುತ್ತಾ-ನಡೆಯುತ್ತಾ ನಂತರ ಹೀಗೆ ಜೋರಾಗಿ ಬಿರುಗಾಳಿಯು ಬರುತ್ತದೆ, ಅದು ನಿದ್ರೆಯನ್ನೂ ಸಹ ಹಾರಿಸಿಬಿಡುತ್ತದೆ. ಸಾಹಸವಂತರು ಸುಸ್ತಾಗಬಾರದಾಗಿದೆ, ಅನುತ್ತೀರ್ಣರಾಗಬಾರದು. ಇದರ ಮೇಲೆ ಚಿಕ್ಕ-ಚಿಕ್ಕ ನಾಟಕಗಳನ್ನು ತೋರಿಸುತ್ತಾರೆ- ಭಗವಂತನು ತನ್ನಕಡೆ, ರಾವಣನು ತನ್ನಕಡೆ ಇಳಿಯುತ್ತಾರೆ. ನೀವು ನೆನಪಿನಲ್ಲಿ ಇರಲು ಇಚ್ಛಿಸುತ್ತೀರಿ, ಆದರೆ ಮಾಯೆಯು ಬಿರುಗಾಳಿಯನ್ನು ತರುತ್ತದೆ. ಇದಂತು ಆಗಿಯೇ ಆಗುತ್ತದೆ. ಯುದ್ಧ ಮಾಡುತ್ತಲೇ ಇರಬೇಕಾಗಿದೆ. ನೀವು ಕರ್ಮಯೋಗಿಗಳಾಗಿದ್ದೀರಿ. ಬೆಳಗ್ಗೆ ಎದ್ದು ಅಭ್ಯಾಸ ಮಾಡಿ, ತಂದೆಯನ್ನು ನೆನಪು ಮಾಡಿ. ನಿಮ್ಮದು ಗುಪ್ತವಾಗಿದೆ, ಗುಪ್ತಸೈನ್ಯವೆಂದು ಗಾಯನವಿದೆ. ಅನ್ನೋನ್ ವಾರಿಯರ್ಸ್ ಬಟ್ ವೆರೀ ವೆಲ್ ನೋನ್ ಅರ್ಥಾತ್ ಗುಪ್ತಸೈನಿಕರು ಆದರೆ ಎಲ್ಲರಿಗೆ ತಿಳಿದಿರುವವರು. ನಿಮ್ಮ ನೆನಪಾರ್ಥವೂ ಈ ದಿಲ್ವಾಡ ಮಂದಿರವು ಗುಪ್ತಸೈನಿಕರ ನೆನಪಾರ್ಥ ಮಂದಿರವಾಗಿದೆ. ಲಕ್ಷ್ಮೀ-ನಾರಾಯಣರದ್ದಲ್ಲ. ಇವರು ನಂತರ ಲಕ್ಷ್ಮೀ-ನಾರಾಯಣರಾಗುತ್ತಾರೆ. ನಿಮ್ಮದೆಲ್ಲವೂ ಗುಪ್ತವಾಗಿದೆ. ಸ್ಥೂಲಆಯುಧ ಮುಂತಾದವುಗಳೇನೂ ಇಲ್ಲ, ಇದರಲ್ಲಿ ಕೇವಲ ಬುದ್ಧಿಯ ಕೆಲಸವಾಗಿದೆ. ಗಾಯನವು ಮಾಡುತ್ತಾರೆ ಆತ್ಮಗಳು ಪರಮಾತ್ಮನಿಂದ ಬಹಳ ಕಾಲ ಅಗಲಿಹೋಗಿದ್ದರು……. ಮನುಷ್ಯರಂತೂ ಗುರುಗಳು ಆಗುತ್ತಾರೆ ಆದರೆ ಸದ್ಗುರು ಒಬ್ಬರೇ ನಿರಾಕಾರನಾಗಿದ್ದಾರೆ. ಅವರನ್ನು ಪತಿತಪಾವನ ಎಂದು ಹೇಳುತ್ತಾರೆಂದರೆ ಅವರು ಸದ್ಗುರು ಆದರಲ್ಲವೇ. ಉಳಿದವರು ಕಲಿಯುಗೀ ಕರ್ಮಕಾಂಡದವರಾಗಿದ್ದಾರೆ, ಎಲ್ಲರೂ ಕರೆಯುತ್ತಾರೆ, ಚಪ್ಪಾಳೆ ತಟ್ಟುತ್ತಾರೆ ಪತಿತಪಾವನ….. ಎಲ್ಲಾ ಸೀತೆಯರ ರಾಮ ಒಬ್ಬರೇ ಆಗಿದ್ದಾರೆ, ಈಗ ನಿಮ್ಮ ಬುದ್ಧಿಯಲ್ಲಿ ಎಲ್ಲಾ ಜ್ಞಾನವು ಬಂದುಬಿಟ್ಟಿದೆ. ನಮ್ಮಲ್ಲಿ ಯಾವುದೇ ಅವಗುಣವಂತು ಇಲ್ಲವೆ ಎಂದು ತಮ್ಮ ಸ್ಥಿತಿಯನ್ನು ನೋಡಿಕೊಳ್ಳಬೇಕಾಗಿದೆ. ಕ್ರೋಧದ ಭೂತ ಹಾಗೂ ಕಾಮದ ಭೂತವಿರಬಾರದು. ಕೆಲವರು ಬರೆಯುತ್ತಾರೆ- ಏನಾಗುತ್ತದೆಯೋ ಗೊತ್ತಿಲ್ಲ. ತುಂಬಾ ಬಿರುಗಾಳಿಗಳು ಬರುತ್ತವೆ! ತಂದೆಯು ಹೇಳುತ್ತಾರೆ- ಈ ಬಿರುಗಾಳಿಗಳಂತು ಬರುತ್ತವೆ, ತುಂಬಾ ಬೇಸರ ಮಾಡಿಸುತ್ತವೆ ಆದರೆ ನೀವು ಎಚ್ಚರಿಕೆಯಿಂದ ಇರಬೇಕು. ತಂದೆಯನ್ನು ನೆನಪು ಮಾಡಬೇಕಾಗಿದೆ. ಬಾಬಾ ನಿಮ್ಮದು ಕಮಾಲ್ ಆಗಿದೆ. ನೀವು ಬಂದು ರಾಜಧಾನಿಯನ್ನು ಹೇಗೆ ಸ್ಥಾಪನೆ ಮಾಡುತ್ತಿದ್ದೀರೆಂದು ಯಾರೂ ತಿಳಿದುಕೊಂಡಿಲ್ಲ. ನಾವು ಭಾರತದ ಈಶ್ವರೀಯ ಸೇವಾಧಾರಿಗಳಾಗಿದ್ದೇವೆ. ನಿರಾಕಾರ ಶಿವನ ಜಯಂತಿಯನ್ನು ಆಚರಿಸುತ್ತಾರೆ ಆದರೆ ಅವರು ಯಾವಾಗ ಮತ್ತೆ ಹೇಗೆ ಬಂದರು, ಇದನ್ನು ತಿಳಿದುಕೊಂಡಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ- ಶಿವತಂದೆಯು ನಮಗೆ ಪ್ರಜಾಪಿತ ಬ್ರಹ್ಮಾರವರ ಮುಖಾಂತರ ಆಸ್ತಿಯನ್ನು ಕೊಡುತ್ತಿದ್ದಾರೆ. ಇದು ತಾತನ ಆಸ್ತಿ ಆಗಿದೆ. ಅವರನ್ನು ಬಾಬಾ ಎಂದು ಹೇಳುತ್ತಾರೆ. ಆದ್ದರಿಂದ ಶಿವಬಾಬಾ ತಂದೆ ಮತ್ತು ಬ್ರಹ್ಮಾಬಾಬಾ ದಾದಾ(ಅಣ್ಣ) ಆಗಿದ್ದಾರೆ. ತಂದೆಯು ಆತ್ಮಿಕ ಆಗಿದ್ದಾರೆ, ದಾದಾ (ಅಣ್ಣ) ಶಾರೀರಿಕ ಆಗಿದ್ದಾರೆ. ಪರಮಾತ್ಮ ಇವರ ಮುಖಾಂತರ ಆಸ್ತಿ ಕೊಡುತ್ತಿದ್ದಾರೆ. ಇದು ಬುದ್ಧಿಯಲ್ಲಿ ಇರಬೇಕು. ಶ್ರೀಮತದ ಮೇಲೆ ನಡೆಯಬೇಕಾಗಿದೆ. ಮನ್ಮನಾಭವ ಮತ್ತು ಚಕ್ರದ ರಹಸ್ಯವು ಸಹಜವಾಗಿದೆ, ಸ್ವದರ್ಶನಚಕ್ರಧಾರಿಗಳೂ ಆಗಬೇಕಾಗಿದೆ. ನೀವು ಸ್ವದರ್ಶನ ಚಕ್ರಧಾರಿಗಳು ಆಗಿದ್ದೀರಿ. ಆದರೆ ಅಲಂಕಾರಗಳನ್ನು ವಿಷ್ಣುವಿಗೆ ಕೊಟ್ಟುಬಿಟ್ಟಿದ್ದಾರೆ ಏಕೆಂದರೆ ಈಗ ನೀವು ಸಂಪೂರ್ಣರಾಗಿಲ್ಲ. ಮೊದಲು ಈ ನಿಶ್ಚಯಬೇಕು- ಇವರು ನಮ್ಮ ತಂದೆಯಾಗಿದ್ದಾರೆ, ಶಿಕ್ಷಕರಾಗಿದ್ದಾರೆ. ನಮಗೆ ಶಿಕ್ಷಣವನ್ನು ಕೊಡುತ್ತಿದ್ದಾರೆ. ಸದ್ಗುರುವಾಗಿ ಜೊತೆ ಕರೆದುಕೊಂಡು ಹೋಗುತ್ತಾರೆ, ಅವರಿಗೆ ಅವರ ತಂದೆ, ಟೀಚರ್, ಗುರು ಯಾರೂ ಇಲ್ಲ. ಎಷ್ಟು ಸ್ಪಷ್ಟವಾಗಿ ತಿಳಿಸಲಾಗುತ್ತದೆ, ಆದರೂ ಸಹ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಗೃಹಸ್ಥವ್ಯವಹಾರದಲ್ಲಿ ಇರುತ್ತಾ ನಿರ್ಮೋಹಿ ಆಗಬೇಕಾಗಿದೆ. ನಾವಂತು ಒಬ್ಬ ತಂದೆಯ ಮಕ್ಕಳಾಗಿದ್ದೇವೆ, ಇದೇ ಬುದ್ಧಿಯಲ್ಲಿ ಇರಬೇಕು. ನೀವು ಅಂಧರಿಗೆ ಊರುಗೋಲು ಆಗಬೇಕಾಗಿದೆ. ಯಾರೇ ಮಿತ್ರಸಂಬಂಧಿ ಮುಂತಾದವರಿದ್ದರೆ ಅವರೊಂದಿಗೆ ಮಾತನಾಡುತ್ತಾ-ಮಾತನಾಡುತ್ತಾ ಇದನ್ನೇ ಕೇಳಿ, ಪತಿತಪಾವನ ಪರಮಪಿತ ಪರಮಾತ್ಮನೊಂದಿಗೆ ನಿಮ್ಮ ಸಂಬಂಧವೇನು? ನಿಮ್ಮ ಲೌಕಿಕತಂದೆಯಂತು ಅವರಾಗಿದ್ದಾರೆ ಆದರೆ ಪರಮಪಿತ ಪರಮಾತ್ಮ ಯಾರ ತಂದೆಯಾಗಿದ್ದಾರೆ? ಅವಶ್ಯವಾಗಿ ನಮ್ಮ ತಂದೆ ಆಗಿದ್ದಾರೆ ಎಂದು ಹೇಳುತ್ತಾರೆ. ಒಳ್ಳೆಯದು- ತಂದೆಯಂತು ಸ್ವರ್ಗದ ರಚಯಿತನಾಗಿದ್ದಾರೆ. ಭಾರತವು ಸ್ವರ್ಗವಾಗಿತ್ತು, ಈಗಿಲ್ಲ. ಪುನಃ ಬೇಹದ್ದಿನ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಿ, ಇದು ನಿಮ್ಮ ಅಧಿಕಾರವಾಗಿದೆ. ನೆನಪು ಮಾಡುವುದರಿಂದ ನೀವು ಅಲ್ಲಿಗೆ ಹೋಗುತ್ತೀರಿ. ಎಷ್ಟೊಂದು ವಿಷಯಗಳಿವೆ, ಅವುಗಳನ್ನು ಬುದ್ಧಿಯಲ್ಲಿ ಧಾರಣೆ ಮಾಡಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿಹೋಗಿ ಮರಳಿಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಒಳಗೆ ಯಾವುದೇ ಕಾಮ ಅಥವಾ ಕ್ರೋಧದ ಅವಗುಣವಿದ್ದರೆ ಅದನ್ನು ತೆಗೆದುಹಾಕಿ, ಸತ್ಯ-ಸತ್ಯ ಈಶ್ವರೀಯ ಸೇವಾಧಾರಿಗಳಾಗಬೇಕಾಗಿದೆ. ಬಿರುಗಾಳಿಗಳಲ್ಲಿ ಎಚ್ಚರಿಕೆಯಿಂದಿರಬೇಕಾಗಿದೆ. ಸೋಲನ್ನು ಅನುಭವಿಸಬಾರದಾಗಿದೆ.

2. ತಂದೆಯ ಸಲಹೆಯಿಂದ ಸುಧಾಮನ ತರಹ ಹಿಡಿಅವಲಕ್ಕಿಯನ್ನು ಕೊಟ್ಟು 21 ಜನ್ಮಗಳ ರಾಜ್ಯಭಾಗ್ಯವನ್ನು ತೆಗೆದುಕೊಳ್ಳಬೇಕಾಗಿದೆ.

ವರದಾನ:-

ಹೇಗೆ ತಂದೆಯು ಅತ್ಯಂತ ಶ್ರೇಷ್ಠವಾದ ಪರಿವಾರದವರಾಗಿದ್ದಾರೆ ಆದರೆ ಎಷ್ಟು ದೊಡ್ಡ ಪರಿವಾರವೋ ಅಷ್ಟೇ ಭಿನ್ನ ಹಾಗೂ ಸರ್ವರ ಪ್ರಿಯರಾಗಿದ್ದಾರೆ, ಇದೇ ರೀತಿ ಫಾಲೋ ಫಾದರ್ ಮಾಡಿರಿ. ಸಂಘಟನೆಯಲ್ಲಿರುತ್ತಾ ಸದಾ ನಿರ್ವಿಘ್ನ ಮತ್ತು ಸಂತುಷ್ಟವಾಗಿರುವುದಕ್ಕಾಗಿ ಸೇವೆಯನ್ನೆಷ್ಟು ಮಾಡುತ್ತೀರಿ ಅಷ್ಟು ಭಿನ್ನತೆಯಿರಲಿ. ಯಾರೆಷ್ಟಾದರೂ ಏರುಪೇರು ಮಾಡಲಿ, ಒಂದು ಕಡೆ ತೊಂದರೆಯನ್ನೇ ಕೊಡಲಿ, ಇನ್ನೊಂದು ಕಡೆ ಇನ್ನೊಂದು, ಅದಕ್ಕಾಗಿ ಯಾವುದೇ ಪರಿಹಾರವೂ ಸಿಗದಿರಬಹುದು, ಯಾರೇ ಗ್ಲಾನಿಯೇ ಮಾಡಲಿ ಆದರೆ ಸಂಕಲ್ಪದಲ್ಲಿಯೂ ಅಚಲರಾಗಿದ್ದರೆ ಹೇಳಲಾಗುತ್ತದೆ- ನಿರ್ವಿಘ್ನ ಆತ್ಮ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top