25 June 2021 KANNADA Murli Today | Brahma Kumaris

Read and Listen today’s Gyan Murli in Kannad

June 24, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಈ ಸಮಯದಲ್ಲಿ ನೀವು ತಂದೆಯ ಮೇಲೆ ಬಲಿಹಾರಿಯಾಗುತ್ತೀರೆಂದರೆ 21 ಜನ್ಮಗಳಿಗೆ ಸದಾ ಸುಖಿಗಳಾಗುತ್ತೀರಿ”

ಪ್ರಶ್ನೆ:: -

ಜ್ಞಾನಿ ಮಕ್ಕಳು ತಮ್ಮ ಸ್ಥಿತಿಯನ್ನು ಸರಿಯಾಗಿಟ್ಟುಕೊಳ್ಳಲು ಯಾವ ಅಭ್ಯಾಸವನ್ನು ಪಕ್ಕಾ ಮಾಡಿಕೊಳ್ಳಬೇಕು?

ಉತ್ತರ:-

ಬೆಳಗ್ಗೆ-ಬೆಳಗ್ಗೆ ಏಳುವ ಅಭ್ಯಾಸ ಮಾಡಬೇಕು. ಬೆಳಗ್ಗೆ-ಬೆಳಗ್ಗೆ ಎದ್ದು ತಂದೆಯ ನೆನಪಿನಲ್ಲಿ ಕುಳಿತುಕೊಂಡರೆ ಬಹಳ ಚೆನ್ನಾಗಿ ಧಾರಣೆಯಾಗುವುದು. ಯಾವ ಮಕ್ಕಳು ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುತ್ತಾರೆಯೋ ಅವರ ಸ್ಥಿತಿಯು ಇಡೀದಿನ ಸರಿಯಾಗಿರುತ್ತದೆ. ಅಜ್ಞಾನಿಗಳ ನಿದ್ರೆಗಿಂತ ಜ್ಞಾನಿಗಳ ನಿದ್ರೆ ಅರ್ಧಭಾಗದಷ್ಟು ಇರಬೇಕು. 10 ಗಂಟೆಗೆ ಮಲಗಿ 2 ಗಂಟೆಗೆ ಎದ್ದು ಕುಳಿತುಕೊಳ್ಳಬೇಕು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನನಗೆ ಆಶ್ರಯ ಕೊಡುವವರು……………

ಓಂ ಶಾಂತಿ. ಮಕ್ಕಳು ಸನ್ಮುಖದಲ್ಲಿ ಕುಳಿತಿದ್ದೀರೆಂದರೆ ನಾವೆಲ್ಲರೂ ಜೀವಾತ್ಮರೆಂದು ತಿಳಿದಿದ್ದೀರಿ. ಇಲ್ಲಿ ಎಲ್ಲರೂ ಜೀವಾತ್ಮರೇ ಇರುತ್ತಾರಲ್ಲವೆ. ಯಾವಾಗ ಆತ್ಮಕ್ಕೆ ಶರೀರವಿಲ್ಲವೆಂದರೆ ಅದಕ್ಕೆ ಅಶರೀರಿ ಎಂದು ಕರೆಯಲಾಗುತ್ತದೆ. ನೀವು ಶರೀರದ ಜೊತೆಯಲ್ಲಿ ಕುಳಿತಿದ್ದೀರಿ. ಆತ್ಮ ಅಥವಾ ಪರಮಾತ್ಮನು ಶರೀರದಲ್ಲಿ ಬರದ ಹೊರತು ಮಾತನಾಡಲು ಸಾಧ್ಯವಿಲ್ಲ. ನೀವು ಜೀವಾತ್ಮರು ತಂದೆಯ ಸನ್ಮುಖದಲ್ಲಿ ಕುಳಿತಿದ್ದೀರೆಂದು ತಿಳಿದಿದ್ದೀರಿ. 5000 ವರ್ಷದ ಮೊದಲಿನಂತೆಯೇ ಬಂದಿದ್ದೀರಿ. ಮಕ್ಕಳು ಅವಶ್ಯವಾಗಿ ತಂದೆಯಿಂದ ಆಸ್ತಿಯನ್ನು ಪಡೆಯುತ್ತಾರಲ್ಲವೆ. ನಾವು ಪರಮಪಿತ ಪರಮಾತ್ಮ ಬೇಹದ್ದಿನ ತಂದೆಯ ಸನ್ಮುಖದಲ್ಲಿ ಕುಳಿತಿದ್ದೇವೆ ಎಂದು ತಿಳಿದಿದ್ದೀರಿ. ಏಕೆ ಕುಳಿತಿದ್ದೀರಿ? ತಂದೆಯಿಂದ ಆಸ್ತಿಯನ್ನು ಪಡೆಯಲು. ಹೇಗೆ ಶಾಲೆಗಳಲ್ಲಿ ನಾವು ಟೀಚರ್ನ ಮೂಲಕ ಇಂಜಿನಿಯರ್, ಬ್ಯಾರಿಸ್ಟರ್ ಆಗುತ್ತೇವೆ ಎಂದು ಹೇಳುತ್ತಾರೆ. ಈ ಗುರಿ-ಉದ್ದೇಶವಿರುತ್ತದೆ. ಪರಮಪಿತ ಪರಮಾತ್ಮನು ಬ್ರಹ್ಮನ ಶರೀರದಲ್ಲಿ ಕುಳಿತು ನಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆಂದು ನೀವು ತಿಳಿದಿದ್ದೀರಿ. ಭಗವಾನುವಾಚ – ಇದು ನೀವು ಮಕ್ಕಳಿಗೆ ಭಗವಂತ ನಿರಾಕಾರನು ತಿಳಿಸುತ್ತಾರೆ. ಜೀವಾತ್ಮರಂತೂ ಪುನರ್ಜನ್ಮವನ್ನು ಅವಶ್ಯವಾಗಿ ತೆಗೆದುಕೊಳ್ಳುತ್ತಾರೆ. ಮನುಷ್ಯರು ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾರೆಯೇ ಎಂದು ಯಾವುದೇ ಸನ್ಯಾಸಿಗಳನ್ನು ಕೇಳಿದಾಗ ತೆಗೆದುಕೊಳ್ಳುವುದಿಲ್ಲವೆಂದು ಹೇಳುವುದಿಲ್ಲ. ಇಲ್ಲವೆಂದರೆ 84 ಲಕ್ಷ ಜನ್ಮಗಳೆಂದು ಹೇಗೆ ಹೇಳುತ್ತಾರೆ. ಕೇಳಿ ನೀವು ಪುನರ್ಜನ್ಮವನ್ನು ನಂಬುತ್ತೀರಾ? ಇದಂತೂ ಅವಶ್ಯವಾಗಿದೆ, ಆತ್ಮವು ಸಂಸ್ಕಾರದನುಸಾರ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಹೀಗೆ ಬೇರೆ-ಬೇರೆ ಮನುಷ್ಯ ಜನ್ಮಗಳನ್ನು ತೆಗೆದುಕೊಳ್ಳುತ್ತದೆ. 84 ಲಕ್ಷ ಜನ್ಮಗಳ ಮಾತಂತೂ ಇಲ್ಲ. ಮೊದಲ ಜನ್ಮದಲ್ಲಿ ಅವಶ್ಯವಾಗಿ ಸತೋಪ್ರಧಾನವಾಗಿರುತ್ತದೆ, ಅಂತ್ಯದ ಜನ್ಮವು ಛೀ ಛೀ ಆಗಿರುತ್ತದೆ. 16 ಕಲೆಯಿಂದ 14 ಕಲೆ, 12 ಕಲೆ ಆಗುತ್ತದೆ, ಪುನರ್ಜನ್ಮವನ್ನಂತೂ ಅವಶ್ಯವಾಗಿ ತೆಗೆದುಕೊಳ್ಳುತ್ತಾರೆ. ಪರಮಪಿತ ಪರಮಾತ್ಮನು ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾರೆಯೇ? ಅಥವಾ ಪುನರ್ಜನ್ಮ ರಹಿತನಾಗಿದ್ದಾರೆ ಎಂದು ಕೇಳಬೇಕು. ನೋಡಿ, ಇದು ಬಹಳ ಸೂಕ್ಷ್ಮವಾದ ಮಾತಾಗಿದೆ. ಒಂದುವೇಳೆ ಜನನ-ಮರಣ ರಹಿತನೆಂದು ಹೇಳಿದರೆ ಶಿವ ಜಯಂತಿಯನ್ನು ಸಿದ್ಧ ಮಾಡಲು ಸಾಧ್ಯವಿಲ್ಲ. ಶಿವ ಜಯಂತಿಯಂತೂ ಇದೆ ಎಂದು ತಿಳಿದು ಬರುತ್ತದೆ ಆದರೆ ಜನನದ ಜೊತೆಯಲ್ಲಿ ಮತ್ತೆ ಮರಣ ಎಂದು ಯಾವುದಕ್ಕೆ ಹೇಳುತ್ತಾರೆಯೋ ಅದು ಇಲ್ಲ. ಒಂದುವೇಳೆ ಮರಣ ಹೊಂದಿದರೆ ಪುನರ್ಜನ್ಮವನ್ನು ತೆಗೆದುಕೊಳ್ಳಬೇಕು. ತಂದೆಯು ಎಂದೂ ಪುನರ್ಜನ್ಮವನ್ನು ತೆಗೆದುಕೊಳ್ಳುವುದಿಲ್ಲ. ಅವರು ಶರೀರದಲ್ಲಿ ಒಂದು ಬಾರಿ ಬರುತ್ತಾರೆ ಅಷ್ಟೇ, ಮತ್ತೆ ಪುನರ್ಜನ್ಮದಲ್ಲಿ ಬರುವುದಿಲ್ಲ. ಪರಮಪಿತ ಪರಮಾತ್ಮನು ಪುನರ್ಜನ್ಮ ರಹಿತನಾಗಿದ್ದಾರೆ. ಅವರು ಎಂದೂ ಸತೋಪ್ರಧಾನರಿಂದ ತಮೋಪ್ರಧಾನರಾಗುವುದಿಲ್ಲ. ಆತ್ಮರೆಲ್ಲರೂ ಜನನ-ಮರಣದಲ್ಲಿ ಬರುತ್ತಾ-ಬರುತ್ತಾ ಪತಿತರಾಗುತ್ತಾರೆ. ತಂದೆಯು ಪಾವನರನ್ನಾಗಿ ಮಾಡಲು ಮತ್ತೆ ಬರಬೇಕಾಗುತ್ತದೆ, ಆತ್ಮವೇ ಪತಿತವಾಗುತ್ತದೆ, ಆತ್ಮವೇ ಮನೆಯಿಂದ ಪಾವನವಾಗಿ ಬರುತ್ತದೆ, ಮತ್ತೆ ಮಾಯೆಯು ಪತಿತರನ್ನಾಗಿ ಮಾಡಿ ಬಿಡುತ್ತದೆ ಎಂದು ಇದರಿಂದ ಸಿದ್ಧವಾಗುತ್ತದೆ. ತಂದೆಯು ಎಂದೂ ಪತಿತರನ್ನಾಗಿ ಮಾಡುವುದಿಲ್ಲ, ಎಂದೂ ಕೆಟ್ಟ ಮತವನ್ನು ಕೊಡಲು ಸಾಧ್ಯವಿಲ್ಲ. ಈ ಸಮಯದಲ್ಲಿ ಮನುಷ್ಯರು ಪತಿತ ಮತವನ್ನೇ ಕೊಡುತ್ತಾರೆ. ಈಗ ಪತಿತರಾಗಬೇಡಿ ಅರ್ಥಾತ್ ವಿಕಾರದಲ್ಲಿ ಹೋಗಬೇಡಿ ಎಂದು ಪಾವನ ತಂದೆಯು ಹೇಳುತ್ತಾರೆ. ರಾವಣನ ಮತದಿಂದ ದುಃಖಧಾಮವಾಗಿ ಬಿಟ್ಟಿತು, ಮೊದಲು ಸುಖಧಾಮವಿತ್ತು. ತಂದೆಯೇ ಸುಖ-ದುಃಖವನ್ನು ಕೊಡುತ್ತಾರೆಂದಲ್ಲ, ತಂದೆಯು ಮಕ್ಕಳಿಗೆ ಎಂದೂ ದುಃಖದ ಮತ ಕೊಡಲು ಸಾಧ್ಯವಿಲ್ಲ. ಮಾಯೆಯೇ ದುಃಖವನ್ನು ಕೊಡುತ್ತದೆ. ಆ ಮಾಯೆಯ ಮೇಲೆ ವಿಜಯ ಗಳಿಸುವುದರಿಂದ ಜಗಜ್ಜೀತರಾಗುತ್ತೀರಿ. ಮನುಷ್ಯರಿಗೆ ಮಾಯೆಯ ಅರ್ಥವು ತಿಳಿದಿಲ್ಲ, ಅವರು ಧನವನ್ನು ಮಾಯೆಯೆಂದು ಹೇಳುತ್ತಾರೆ. ಇವರಿಗೆ ಮಾಯೆಯ ನಶೆಯೇರಿದೆ ಎಂದು ಹೇಳುತ್ತಾರಲ್ಲವೆ ಆದರೆ ಮಾಯೆಯ ನಶೆ ಇರುವುದಿಲ್ಲ. ಅಲ್ಲಿ ರಾವಣನ ಭೂತವನ್ನು ಮಾಡಿ ಸುಡುವುದಿಲ್ಲ. ಭೂತವನ್ನಂತೂ ಶತ್ರುಗಳಿಗೆ ಮಾಡುತ್ತಾರಲ್ಲವೆ. ರಾವಣ ರಾಜ್ಯವು ಅರ್ಧಕಲ್ಪದಿಂದ ಆರಂಭವಾಗುತ್ತದೆ. ದೇಹದ ಅಹಂಕಾರವು ಬರುವುದರಿಂದ ಬೇರೆ ವಿಕಾರಗಳೂ ಬರುತ್ತವೆ. ಶಾಸ್ತ್ರಗಳಲ್ಲಿ ದೇವತೆಗಳು ವಾಮಮಾರ್ಗದಲ್ಲಿ ಅರ್ಥಾತ್ ವಿಕಾರದಲ್ಲಿ ಹೋದರೆಂದು ಬರೆದಿದ್ದಾರೆ. ಮಾಯೆಯ ವಶವಾಗುವ ಕಾರಣ ಪರವಶರಾಗುತ್ತಾರೆ, ಪರಮತದಂತೆ ನಡೆಯುತ್ತಾ ಇರುತ್ತಾರೆ. ಈಗ ನೀವು ಶ್ರೀಮತದಂತೆ ನಡೆಯುತ್ತೀರಿ. ಪರಮತ ಎಂದರೆ ಮಾಯೆಯ ಮತವಾಗಿದೆ. ಶ್ರೀ ಅರ್ಥಾತ್ ಶ್ರೇಷ್ಠ ತಂದೆಯ ಮತವಾಗಿದೆ. ಅದು ರಾವಣನ ಮತ, ಪರಮತವಾಗಿದೆ. ಆಸುರೀ ಸಂಪ್ರದಾಯದವರೆಲ್ಲರೂ ರಾವಣನ ಸಂಕೋಲೆಯಲ್ಲಿ ದುಃಖಿಗಳಾಗಿದ್ದಾರೆಂದು ತಂದೆಯು ತಿಳಿಸುತ್ತಾರೆ.

ಮನುಷ್ಯರು ಸತ್ಯಯುಗದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ತಿಳಿದುಕೊಂಡಿದ್ದಾರೆ. 5000 ವರ್ಷಗಳು ಹೇಗೆಂದು ನೀವು ಲೆಕ್ಕವನ್ನು ಹೇಳುತ್ತೀರಿ. ಕ್ರೈಸ್ತನು ಬಂದು 2000 ವರ್ಷಗಳಾಯಿತು, ಬುದ್ಧನು ಬಂದು 2250 ವರ್ಷವಾಯಿತು, ನಂತರ ಇಸ್ಲಾಮಿಯರು ಬಂದು 2500 ವರ್ಷಗಳಾಯಿತು. ಒಟ್ಟಾಗಿ ಅರ್ಧಕಲ್ಪವಾಯಿತು. ಅವರಿಗೆ ಮೊದಲು ದೇವತೆಗಳ ರಾಜ್ಯವಿತ್ತು, ಅಂದಮೇಲೆ ದೇವತೆಗಳನ್ನು ಲಕ್ಷಾಂತರ ವರ್ಷಗಳ ಹಿಂದೆ ಇದ್ದರು ಎಂದು ಹೇಗೆ ಹೇಳುವಿರಿ! ಆ ಸಮಯದಲ್ಲಿಯೇ ಇಷ್ಟೊಂದು ಮನುಷ್ಯರಿದ್ದರೆಂದರೆ ಮನುಷ್ಯರು ಬಹಳ ಆಗಿ ಬಿಟ್ಟರು. ಇಷ್ಟೊಂದಂತೂ ಇಲ್ಲ. 5000 ವರ್ಷದಲ್ಲಿಯೇ ಕೋಟ್ಯಾಂತರ ಮನುಷ್ಯರಾಗಿದ್ದಾರೆ, ಕ್ರೈಸ್ತನಿಗಿಂತ ಮೊದಲು ಆದಿ ಸನಾತನ ದೇವತಾ ಧರ್ಮವಿತ್ತು, 5000 ವರ್ಷಗಳು ಪೂರ್ಣವಾಗಿ ಬಿಟ್ಟಿದೆ. ನಾಟಕವು ಪೂರ್ಣವಾಗುತ್ತದೆಯಲ್ಲವೆ. ಈ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ನಾನು ಹೇಗಿದ್ದೇನೆ, ಯಾರಾಗಿದ್ದೇನೆ, ಈ ಚಕ್ರ ಸುತ್ತುತ್ತದೆ ಎಂಬುದನ್ನು ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಇದು ಗೀತೆಯ ಅಧ್ಯಾಯವಾಗಿದೆ. ತಂದೆಯು ಬಂದು ರಾಜಯೋಗವನ್ನು ಕಲಿಸಿದ್ದರು, ವೃದ್ಧರಿಗೂ ಇದು ಬಹಳ ಸಹಜವಾದ ಮಾತಾಗಿದೆ ಎಂದು ತಿಳಿಸುತ್ತಾರೆ. ಕೇವಲ ತಂದೆಯನ್ನು ಮತ್ತು ಆಸ್ತಿಯನ್ನು ನೆನಪು ಮಾಡಬೇಕಾಗಿದೆ. ಮಗುವಿನ ಜನ್ಮವಾಯಿತೆಂದರೆ ವಾರಸುಧಾರನ ಜನ್ಮವಾಯಿತು ಎಂದರ್ಥ. ಈಗ ನಾವೆಲ್ಲರೂ ತಂದೆಯ ವಾರಸುಧಾರರಾಗಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ – 5000 ವರ್ಷಗಳ ನಂತರ ಮತ್ತೆ ಮಿಲನ ಮಾಡಲು ಬಂದಿದ್ದೇವೆ. ಇದು ಬಹಳ ಗುಪ್ತವಾದ ಮಾತಾಗಿದೆ. ಮೊದಲು ಯಾವಾಗಲಾದರೂ ಮಿಲನ ಮಾಡಿದ್ದಿರಾ? ಎಂದು ಕೇಳಿದಾಗ ಹೌದು ಬಾಬಾ ಎಂದು ಹೇಳುತ್ತಾರೆ. ನಾವು 5000 ವರ್ಷದ ಹಿಂದೆ ಮಿಲನ ಮಾಡಿದ್ದೆವು ಎಂದು ಆತ್ಮವು ಈ ಮುಖದಿಂದ ಹೇಳುತ್ತದೆ. ನಾವು ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳಲು ಕುಳಿತಿದ್ದೇವೆಂದು ಮಕ್ಕಳು ಪಕ್ಕಾ ತಿಳಿದಿದ್ದೀರಿ. ನಾವು ಬ್ರಹ್ಮನ ಮೂಲಕ ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ. ನಾನು ನಿಮ್ಮ ತಂದೆಯಾಗಿದ್ದೇನೆಂದು ತಂದೆಯು ತಿಳಿಸುತ್ತಾರೆ. ನೀವು ಹೇಳುತ್ತೀರಿ – ಹೌದು ಬಾಬಾ, ನಾವೆಲ್ಲಾ ಆತ್ಮಗಳಿಗೆ ನೀವು ಪರಮಪಿತ ಪರಮಾತ್ಮನು ತಂದೆಯಾಗಿದ್ದೀರಿ. ನಿಮ್ಮೆಲ್ಲರನ್ನೂ ನಾನು ಸ್ವರ್ಗದಲ್ಲಿ ಕಳುಹಿಸಿದ್ದೆನು, ಆಸ್ತಿಯನ್ನೂ ಕೊಟ್ಟಿದ್ದೆನು ಆದರೆ ಮಾಯೆಯು ಕಸಿದುಕೊಂಡು ಬಿಟ್ಟಿತು, ಪುನಃ ನಾನೀಗ ಕೊಡುತ್ತೇನೆಂದು ತಂದೆಯು ತಿಳಿಸುತ್ತಾರೆ. ಮಾಯೆಯು ಆಸ್ತಿಯನ್ನು ಕಸಿದುಕೊಳ್ಳುತ್ತದೆ, ತಂದೆಯು ಕೊಡುತ್ತಾರೆ. ಈ ಆಟ ಅನೇಕ ಬಾರಿ ಆಗಿ ಹೋಗಿದೆ, ಆಗುತ್ತಲೇ ಇರುತ್ತದೆ, ಇದರ ಅಂತ್ಯವಿಲ್ಲ. ಕೆಲವರು ತಂದೆಯ ಸ್ವಂತ ಮಕ್ಕಳಾಗುತ್ತಾರೆ, ಕೆಲವರು ಮಲತಾಯಿ ಮಕ್ಕಳಾಗುತ್ತಾರೆ. ಕಚ್ಚಾ, ಪಕ್ಕಾ ಅಂತೂ ಇರುತ್ತಾರಲ್ಲವೆ! ಪಕ್ಕಾ ಇರುವ ಮಕ್ಕಳ ಮೇಲೂ ಕೆಲವೊಮ್ಮೆ ಮಾಯೆಯು ವಿಜಯ ಗಳಿಸುತ್ತದೆ. ಬಾಬಾ, ನಾವು ಎಲ್ಲಿಯವರೆಗೆ ಜೀವಿಸಿರುತ್ತೇವೆಯೋ ಅಲ್ಲಿಯವರೆಗೆ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆಂದು ಹೇಳುತ್ತಾರೆ. ವಿಕರ್ಮಗಳ ಹೊರೆಯು ತಲೆಯ ಮೇಲೆ ಬಹಳ ಇದೆ. ಯಾರೆಷ್ಟು ನೆನಪಿನಲ್ಲಿರುತ್ತಾರೆಯೋ ಆ ಯೋಗಾಗ್ನಿಯಿಂದ ನೀವು ಪಾಪಾತ್ಮರಿಂದ ಪುಣ್ಯಾತ್ಮರಾಗಿ ಬಿಡುತ್ತೀರಿ. ಬೆಂಕಿ ವಸ್ತುವನ್ನು ಪವಿತ್ರವನ್ನಾಗಿ ಮಾಡಿ ಬಿಡುತ್ತದೆ, ನಿಮ್ಮದು ಯೋಗ ಅಗ್ನಿಯಾಗಿದೆ. ಇದು ಬೇಹದ್ದಿನ ಯಜ್ಞವಾಗಿದೆ. ಬೇಹದ್ದಿನ ಸೇಟು ಬೇಹದ್ದಿನ ಯಜ್ಞವನ್ನು ರಚನೆ ಮಾಡಿದ್ದಾರೆ, ಯಾವುದೇ ಯಜ್ಞವು ಇಷ್ಟು ವಷಗಳವರೆಗೆ ನಡೆಯುವುದಿಲ್ಲ. 7-8 ದಿನ ಅಥವಾ ಒಂದು ತಿಂಗಳ ಯಜ್ಞವನ್ನು ರಚಿಸುತ್ತಾರೆ, ನಿಮ್ಮ ಯಜ್ಞವಂತೂ ಎಷ್ಟು ವರ್ಷಗಳಿಂದ ನಡೆಯುತ್ತಾ ಬಂದಿದೆ. ತಂದೆಯಂತೂ ತಿಳಿಸುತ್ತಲೇ ಇರುತ್ತಾರೆ. ಮರೆಯಬೇಡಿ, ಕೇವಲ ನನ್ನನ್ನು ನೆನಪು ಮಾಡಿದರೆ ನಿಮ್ಮ ಜನ್ಮ-ಜನ್ಮಾಂತರಗಳ ವಿಕರ್ಮದ ಹೊರೆ ತುಂಡಾಗುತ್ತಾ ಹೋಗುತ್ತದೆ ಎಂದು ತಿಳಿಸುತ್ತಾರೆ. ಭಗವಾನುವಾಚ – ನೀವು ತಂದೆಯಾದ ನನ್ನನ್ನು ನೆನಪು ಮಾಡಿ. ಅವಶ್ಯವಾಗಿ ಬಂದಿದ್ದಾರೆ ಆದ್ದರಿಂದಲೇ ಹೇಳುತ್ತಾರಲ್ಲವೆ! ನೀವೀಗ ಹಿಂತಿರುಗಿ ಹೋಗಬೇಕಾಗಿದೆ, ನಿಮ್ಮ ಆತ್ಮವು ಈಗ ಬಹಳ ಪತಿತವಾಗಿದೆ. ಯೋಗದಿಂದ ನಾವು ಪಾವನರಾಗುತ್ತೇವೆಂದು ನೀವು ತಿಳಿದಿದ್ದೀರಿ. ನೀವು ಬಂದಾಗ ಬೇರೆಲ್ಲಾ ಸಂಗವನ್ನು ಬಿಟ್ಟು ನಿಮ್ಮ ಸಂಗವನ್ನೇ ಮಾಡುತ್ತೇವೆ, ನಿಮ್ಮ ಮೇಲೆಯೇ ಬಲಿಹಾರಿಯಾಗುತ್ತೇವೆಂದು ಪ್ರತಿಜ್ಞೆ ಮಾಡಿದ್ದಿರಿ. ಸ್ತ್ರೀ ಪುರುಷನ ಮೇಲೆ, ಪುರುಷನು ಸ್ತ್ರೀಯ ಮೇಲೆ ಬಲಿಹಾರಿಯಾಗುತ್ತಾರೆ, ಇಲ್ಲಂತೂ ತಂದೆಯ ಮೇಲೆ ಬಲಿಹಾರಿಯಾಗಬೇಕಾಗಿದೆ. ವಿವಾಹದಲ್ಲಿ ಒಬ್ಬರ ಮೇಲೆ ಒಬ್ಬರು ಬಲಿಹಾರಿಯಾಗುತ್ತಾರೆ. ಇಲ್ಲಂತೂ ಮನುಷ್ಯರ ಮೇಲೆ ಬಲಿಹಾರಿಯಾಗಬಾರದು ಎಂದು ತಂದೆಯು ತಿಳಿಸುತ್ತಾರೆ, ನಿಮ್ಮ ಮೇಲೆಯೇ ಬಲಿಹಾರಿಯಾಗುತ್ತೇನೆಂದು ನಿಮ್ಮ ಪ್ರತಿಜ್ಞೆಯಾಗಿದೆ. ನೀವು ನನ್ನ ಮೇಲೆ ಬಲಿಹಾರಿಯಾದರೆ ನಾನು 21 ಜನ್ಮಗಳಲ್ಲಿ ಸುಖಿಯನ್ನಾಗಿ ಮಾಡುತ್ತೇನೆ, ಇದು ಎಷ್ಟು ದೊಡ್ಡ ಆಸ್ತಿಯಾಗಿದೆ. ಶ್ರೀಮತದಿಂದ ನೀವು ಶ್ರೇಷ್ಠರಾಗುತ್ತೀರಿ, ಇದನ್ನು ಮರೆಯಬೇಡಿ. ಲಕ್ಷ್ಮೀ-ನಾರಾಯಣರ ಚಿತ್ರವನ್ನೂ ಸಹ ಮನೆಯಲ್ಲಿಡಬೇಕು. ನಾವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ, ತಂದೆಯು ಪರಮಧಾಮದಿಂದ ಬಂದಿದ್ದಾರೆ. ಆದರೆ ಮಾಯಾ ಹದ್ದು ಸಹ ಕಡಿಮೆಯೇನಿಲ್ಲ. ಎಲ್ಲರ ಮಾತಲ್ಲ ಆದರೆ ನಂಬರ್ವಾರ್ ಆಗಿದೆ. ನಾವು ತಂದೆಯಿಂದ ಆಸ್ತಿಯನ್ನು ಪಡೆಯುತ್ತೇವೆ ಎಂಬುದನ್ನು ಕೆಲವರಂತೂ ಒಂದೇ ಸಾರಿ ಮರೆತು ಹೋಗುತ್ತಾರೆ. ಇಲ್ಲಿ ಕುಳಿತಿರುವಾಗ ನಶೆಯೇರುವುದು, ಇಲ್ಲಿಂದ ಹೋದರೆಂದರೆ ಮರೆತು ಹೋಗುತ್ತಾರೆ. ನಂತರ ಬೆಳಗ್ಗೆ ರಿಫ್ರೆಷ್ ಆಗುತ್ತಾರೆ ಪುನಃ ಇಡೀ ದಿನ ಮರೆತು ಹೋಗುತ್ತಾರೆ. 4-5 ವರ್ಷಗಳು ಚೆನ್ನಾಗಿ ಸೇವೆ ಮಾಡುವವರೂ ಸಹ ಈಗ ಇಲ್ಲ. ಏನೋ ಉಲ್ಲಂಘನೆ ಮಾಡಿರುವ ಕಾರಣ ಅವರ ಕೆನ್ನೆಗೆ ಮಾಯೆಯು ಪೆಟ್ಟು ಕೊಟ್ಟಿರಬೇಕು. ಏರಿದರೆ ವೈಕುಂಠ ರಸ ಏರಬಹುದು, ಬಿದ್ದರೆಂದರೆ ಚಕನಾಚೂರ್ ಆಗುತ್ತಾರೆ. ಹೇಗೆ ಚಕನಾಚೂರ್ ಆಗುತ್ತಾರೆಂದು ನೀವು ತಿಳಿಯುತ್ತೀರಿ. ವೈಕುಂಠದಲ್ಲಂತೂ ಬರುತ್ತಾರೆ ಆದರೆ ಪದವಿಯು ನಂಬರ್ವಾರ್ ಇದೆಯಲ್ಲವೆ. ಭಲೆ ಅಲ್ಲಿ ಎಲ್ಲರೂ ಸುಖಿಯಾಗಿರುತ್ತಾರೆ ಆದರೆ ಪದವಿಗಳಿದೆಯಲ್ಲವೆ. ಶಾಲೆಯಲ್ಲಿ ಪದವಿಯನ್ನು ಪಡೆಯಬೇಕೆಂದು ಪುರುಷಾರ್ಥ ಮಾಡುತ್ತಾರೆ, ಪ್ರಜೆಗಳಾದರೆ ಸಾಕು, ಅದೃಷ್ಟದಲ್ಲಿದ್ದರೆ ಆಗುತ್ತದೆ ಎಂದಲ್ಲ. ಇದಕ್ಕೆ ತಮೋಪ್ರಧಾನ ಪುರುಷಾರ್ಥವೆಂದು ಹೇಳಲಾಗುತ್ತದೆ. ಯಾರು ತಂದೆಯಿಂದ ಪೂರ್ಣ ಆಸ್ತಿಯನ್ನು ಪಡೆಯುವ ಪ್ರತಿಜ್ಞೆ ಮಾಡುತ್ತಾರೆಯೋ ಅವರು ಸತೋಪ್ರಧಾನರೆಂದು ಹೇಳುತ್ತಾರೆ, ಇದಂತೂ ಕುದುರೆಯ ಓಟವಾಗಿದೆ. ಎಲ್ಲರೂ ನಂಬರ್ವನ್ ಆಗಲು ಸಾಧ್ಯವಿಲ್ಲ. ಇದು ಮನುಷ್ಯರ ಓಟವಾಗಿದೆ. ನೀವು ಶಿವ ತಂದೆಯ ಕೊರಳಿನ ಮಾಲೆಯಲ್ಲಿ ಪೋಣಿಸಲ್ಪಡಬೇಕೆಂದು ಬಯಸುತ್ತೀರಿ ಅಂದಮೇಲೆ ಅವರನ್ನು ನೆನಪು ಮಾಡಬೇಕಲ್ಲವೆ. ಎಲ್ಲವೂ ನೆನಪಿನ ಮೇಲೆ ಆಧಾರಿತವಾಗಿದೆ. ಮಾಯೆಯು ವಿಘ್ನ ಹಾಕಿತೆಂದರೆ ಒಮ್ಮೆಲೆ ಓಟದಿಂದ ತೆಗೆದು ಬಿಡುತ್ತದೆ. ನಿಮ್ಮದು ಮನುಷ್ಯರ ಓಟವಾಗಿದೆ, ನಾವು ಬಹಳ ದುಃಖಿಗಳಾಗಿದ್ದೇವೆ, ಶರೀರವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಸುಸ್ತಾಗಿದ್ದೇವೆ, ಈಗ ತಂದೆಯ ಬಳಿ ಹೋಗಬೇಕಾಗಿದೆ ಎಂದು ಆತ್ಮವು ಹೇಳುತ್ತದೆ. ತಂದೆಯು ಎಷ್ಟೊಂದು ಯುಕ್ತಿಗಳನ್ನು ತಿಳಿಸಿದ್ದಾರೆ. ಬಾಬಾ, ನಾವು ನಿಮ್ಮ ನೆನಪಿನಲ್ಲಿರುತ್ತೇವೆ, ನೆನಪಿನಲ್ಲಿರಲು ಎಷ್ಟು ಸಮಯ ಸಾಧ್ಯವಾಗುತ್ತದೆಯೋ ಅಷ್ಟು ಒಳ್ಳೆಯದು. ಸರ್ಕಾರೀ ಕೆಲಸಕ್ಕೆ 8 ಗಂಟೆಗಳ ಕಾಲ ಕೊಡುತ್ತೀರಿ, ಹಾಗೆಯೇ ನೆನಪಿನಲ್ಲಿಯೂ 8 ಗಂಟೆಗಳ ಕಾಲ ಕೊಡಬೇಕಾಗಿದೆ. ಸೃಷ್ಟಿಯನ್ನು ಸ್ವರ್ಗ ಮಾಡುವುದು ಎಷ್ಟು ದೊಡ್ಡ ಸೇವೆಯಾಗಿದೆ. ಕೇವಲ ತಂದೆ ಮತ್ತು ಸುಖಧಾಮವನ್ನು ನೆನಪು ಮಾಡಿ. 8 ಗಂಟೆಗಳ ಸೇವೆ ಮಾಡುತ್ತೀರೆಂದರೆ ಪೂರ್ಣ ಆಸ್ತಿಯನ್ನು ಪಡೆದು ಬಿಡುವಿರಿ. ಈ ರೀತಿ ನೆನಪು ಮಾಡುತ್ತಾ-ಮಾಡುತ್ತಾ ನಿಮ್ಮ ವಿಕರ್ಮಗಳು ವಿನಾಶವಾಗುತ್ತದೆ. 8 ಗಂಟೆಗಳ ಕಾಲ ಈ ಸೇವೆಗಾಗಿ ಕೊಡಿ, ಉಳಿದ 16 ಗಂಟೆಗಳ ಕಾಲ ನೀವು ಬಿಡುವಾಗಿರುತ್ತೀರಿ. ನೆನಪನ್ನಂತೂ ಎಲ್ಲಿ ಬೇಕಾದರೂ ಕುಳಿತು ಮಾಡಬಹುದು. ಮುಂಜಾನೆಯ ಸಮಯವು ಎಲ್ಲದಕ್ಕಿಂತ ಒಳ್ಳೆಯ ಸಮಯ ಸಿಗುತ್ತದೆ. ಸಿಂಧಿಭಾಷೆಯಲ್ಲಿ ಒಂದು ಗಾದೆಮಾತಿದೆ – ಬೇಗನೆ ಮಲಗಬೇಕು, ಬೇಗನೇ ಏಳಬೇಕು. ಅದೇ ಮನುಷ್ಯರ ದೊಡ್ಡ ಗುಣವಾಗಿದೆ. ಈ ಗಾಯನವು ಈಗಿನದೇ ಆಗಿದೆ. ರಾತ್ರಿ ಬೇಗನೆ ಮಲಗಿ ಮುಂಜಾನೆಯೇ ಏಳಬೇಕೆಂದು ತಂದೆಯು ಹೇಳುತ್ತಾರೆ. ಅಜ್ಞಾನಿಗಳು 8 ಗಂಟೆ ನಿದ್ರೆ ಮಾಡುತ್ತಾರೆ, ನಿಮ್ಮ ನಿದ್ರೆಯು ಅದರ ಅರ್ಧ ಭಾಗದಷ್ಟು ಇರಬೇಕು. 4-5 ಗಂಟೆಗಳ ನಿದ್ರೆ ಸಾಕು. ನೀವಂತೂ ಕರ್ಮಯೋಗಿಗಳಲ್ಲವೆ. ರಾತ್ರಿ 10 ಗಂಟೆಗೆ ಮಲಗಿ ಬೆಳಗ್ಗೆ 2 ಗಂಟೆಗೆ ಏಳಬೇಕು. ಶಿವ ತಂದೆಯನ್ನು ನೆನಪು ಮಾಡುವುದರಿಂದ ನಿಮಗೆ ಬಹಳ ಸಂಪಾದನೆಯಾಗುತ್ತದೆ. ನಿಮಗೆ ಆರೋಗ್ಯ-ಸಂಪತ್ತು ಎರಡೂ ಸಿಗುತ್ತದೆ. ಒಳ್ಳೆಯದು – 2 ಗಂಟೆಗೆ ಇಲ್ಲವೆಂದರೆ 3 ಗಂಟೆಗೆ ಏಳಿ, 4 ಗಂಟೆಗೆ ಎದ್ದೇಳಿ. ಇದು ಫಸ್ಟ್ಕ್ಲಾಸ್ ಸಮಯವಾಗಿದೆ, ಶಾಂತಿಯಿರುತ್ತದೆ, ಎಲ್ಲರೂ ಅಶರೀರಿಗಳಾಗಿರುತ್ತಾರೆ. ಆ ಸಮಯದಲ್ಲಿ ಸನ್ನಾಟ ಶಾಂತಿಯಿರುತ್ತದೆ. ಅಮೃತವೇಳೆಯಲ್ಲಿ ಬಹಳ ಚೆನ್ನಾಗಿ ಪ್ರಭಾವ ಬೀರುತ್ತದೆ. ತಂದೆಯು ರಾತ್ರಿಯಲ್ಲಿ ಬಹಳ ಎಚ್ಚರವಾಗಿರುತ್ತಾರೆ. ಸೂಕ್ಷ್ಮ ಸೇವೆಯಲ್ಲಿ ಸುಸ್ತಾಗುವುದಿಲ್ಲ, ಸಂಪಾದನೆಯಿಂದ ಬಹಳ ಖುಷಿಯಾಗುತ್ತದೆ. ನೀವು ಮಕ್ಕಳು ಬೆಳಗ್ಗೆ ಎದ್ದು ನಿಮ್ಮ ಅವಿನಾಶಿ ಸಂಪಾದನೆಯನ್ನು ಮಾಡಿಕೊಳ್ಳುತ್ತಿರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. 21 ಜನ್ಮಗಳವರೆಗೆ ಸದಾ ಸುಖಿಯಾಗಿರಲು ಒಬ್ಬ ತಂದೆಯ ಮೇಲೆ ಸಂಪೂರ್ಣ ಬಲಿಹಾರಿಯಾಗಬೇಕಾಗಿದೆ. ಶ್ರೀಮತದಿಂದ ಶ್ರೇಷ್ಠರಾಗಬೇಕಾಗಿದೆ. ಮನಮತ ಅಥವಾ ಪರಮತವನ್ನು ತ್ಯಾಗ ಮಾಡಬೇಕಾಗಿದೆ. ಯಾವುದೇ ಉಲ್ಲಂಘನೆ ಮಾಡಬಾರದು.

2. ಮುಂಜಾನೆ ಎದ್ದು ನೆನಪಿನಲ್ಲಿ ಕುಳಿತು ಸಂಪಾದನೆ ಮಾಡಿಕೊಳ್ಳಬೇಕು. ಸೃಷ್ಟಿಯನ್ನು ಸ್ವರ್ಗವನ್ನಾಗಿ ಮಾಡುವ ಸೇವೆಯಲ್ಲಿ ಕೊನೆಪಕ್ಷ 8 ಗಂಟೆಗಳ ಕಾಲ ಅವಶ್ಯವಾಗಿ ಕೊಡಬೇಕು.

ವರದಾನ:-

ಯಾರು ದೇಹ-ಅಭಿಮಾನವನ್ನು ಅರ್ಪಣೆ ಮಾಡುತ್ತಾರೆಯೋ ಅವರ ಪ್ರತೀ ಕರ್ಮವು ದರ್ಪಣವಾಗಿ ಬಿಡುತ್ತದೆ. ಹೇಗೆ ಯಾವುದೇ ವಸ್ತುವನ್ನು ಅರ್ಪಣೆ ಮಾಡುತ್ತಾರೆಂದರೆ, ಅರ್ಪಣೆಯಾಗಿರುವ ವಸ್ತುವನ್ನೆಂದಿಗೂ ತನ್ನದೆಂದು ತಿಳಿಯುವುದಿಲ್ಲ. ಅಂದಾಗ ದೇಹದ ಪರಿವೆಯನ್ನೂ ಸಹ ಅರ್ಪಣೆ ಮಾಡುವುದರಿಂದ ನನ್ನತನವೆನ್ನುವುದು ಯಾವಾಗ ಸಮಾಪ್ತಿಯಾಗುತ್ತದೆಯೋ ಆಗ ಸೆಳೆತವೂ ನಶಿಸಿ ಹೋಗುತ್ತದೆ. ಅದನ್ನೇ ಸಂಪೂರ್ಣ ಸಮರ್ಪಣೆ ಎಂದು ಹೇಳಲಾಗುತ್ತದೆ. ಈ ರೀತಿ ಸಮರ್ಪಣೆ ಆಗುವವರು ಸದಾ ಯೋಗಯುಕ್ತ ಮತ್ತು ಬಂಧನ ಮುಕ್ತರು ಆಗುತ್ತಾರೆ. ಅವರ ಪ್ರತೀ ಸಂಕಲ್ಪ, ಪ್ರತೀ ಕರ್ಮವು ಯುಕ್ತಿ ಯುಕ್ತವಾಗಿ ಇರುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top