25 July 2021 KANNADA Murli Today | Brahma Kumaris
Read and Listen today’s Gyan Murli in Kannada
24 July 2021
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
"ತನು-ಮನದ ಧಣಿವನ್ನು ಕಳೆಯುವ ಸಾಧನ - ಶಕ್ತಿಶಾಲಿ ನೆನಪು"
♫ ಕೇಳು ಇಂದಿನ ಮುರ್ಲಿ (audio)➤
ಗೀತೆ:-
ಇಂದು ಪರದೇಶಿ ತಂದೆಯು ತನ್ನ ಅನಾದಿ ದೇಶವಾಸಿ ಮತ್ತು ಆದಿ ದೇಶವಾಸಿ ಸೇವಾರ್ಥವಾಗಿ ಹೋಗಿರುವ ಎಲ್ಲಾ ವಿದೇಶಿ ಮಕ್ಕಳೊಂದಿಗೆ ಮಿಲನ ಮಾಡಲು ಬಂದಿದ್ದಾರೆ. ಬಾಪ್ದಾದಾರವರಿಗೆ ತಿಳಿದಿದೆ – ಇವರೇ ನನ್ನ ಅಗಲಿ ಹೋಗಿ ಮರಳಿ ಸಿಕ್ಕಿರುವ ಮುದ್ದು ಮಕ್ಕಳಾಗಿದ್ದಾರೆ. ಅನಾದಿ ದೇಶ ಪರಮಧಾಮ ನಿವಾಸಿಗಳಾಗಿದ್ದಾರೆ. ಜೊತೆ ಜೊತೆಗೆ ಸೃಷ್ಟಿಯ ಆದಿಯ ಇದೇ ಭಾರತ ಭೂಮಿಯಲ್ಲಿ ಯಾವಾಗ ಸತ್ಯಯುಗೀ ಸ್ವದೇಶವಿತ್ತೋ, ತಮ್ಮ ರಾಜ್ಯವಿತ್ತೋ, ಯಾವುದಕ್ಕೆ ಎಲ್ಲರೂ ಭಾರತವೆಂದು ಹೇಳುತ್ತಾರೆ ಅಂದಾಗ ಆದಿಯಲ್ಲಿ ಇದೇ ಭಾರತ ದೇಶವಾಸಿಗಳಾಗಿದ್ದಿರಿ. ಇದೇ ಭಾರತ ಭೂಮಿಯಲ್ಲಿ ಬ್ರಹ್ಮಾ ತಂದೆಯ ಜೊತೆ ಜೊತೆಗೆ ರಾಜ್ಯ ಮಾಡಿದಿರಿ. ಅನೇಕ ಜನ್ಮಗಳು ತಮ್ಮ ರಾಜ್ಯದಲ್ಲಿ ಸುಖ, ಶಾಂತಿ, ಸಂಪನ್ನ ಅನೇಕ ಜೀವನಗಳನ್ನು ವ್ಯತೀತ ಮಾಡಿದ್ದೀರಿ. ಆದ್ದರಿಂದ ಆದಿ ದೇಶವಾಸಿಗಳಾಗಿರುವ ಕಾರಣ ಭಾರತ ಭೂಮಿಯೊಂದಿಗೆ ಹೃದಯದ ಸ್ನೇಹವಿದೆ. ಭಲೆ ಎಷ್ಟಾದರೂ ಈಗ ಅಂತಿಮದಲ್ಲಿ ಭಾರತವು ಬಡದೇಶ ಅಥವಾ ಧೂಳು ಮಣ್ಣಿನದಾಗಿ ಬಿಟ್ಟಿರಬಹುದು ಆದರೂ ಸಹ ತನ್ನ ದೇಶವು ತನ್ನದೇ ಆಗಿರುತ್ತದೆ. ಅಂದಾಗ ತಾವೆಲ್ಲಾ ಆತ್ಮಗಳ ತಮ್ಮ ದೇಶ ಮತ್ತು ಶರೀರಧಾರಿ ದೇವತಾ ಜೀವನದ ತಮ್ಮ ದೇಶವು ಯಾವುದಾಗಿತ್ತು? ಭಾರತವೇ ಆಗಿತ್ತಲ್ಲವೆ. ಎಷ್ಟೊಂದು ಜನ್ಮಗಳು ಭಾರತ ಭೂಮಿಯಲ್ಲಿದ್ದಿರಿ, ಅದು ನೆನಪಿದೆಯೇ? ಎಲ್ಲರೂ ತಂದೆಯಿಂದ 21 ಜನ್ಮಗಳ ಆಸ್ತಿಯನ್ನು ಪ್ರಾಪ್ತಿ ಮಾಡಿಕೊಂಡಿದ್ದೀರಿ ಆದ್ದರಿಂದ 21 ಜನ್ಮಗಳದಂತೂ ಗ್ಯಾರಂಟಿಯು ಇದ್ದೇ ಇದೆ. ನಂತರದಲ್ಲಿಯೂ ಪ್ರತಿಯೊಂದು ಆತ್ಮನ ಕೆಲವು ಜನ್ಮಗಳು ಭಾರತ ಭೂಮಿಯಲ್ಲಿಯೇ ಆಗಿದೆ. ಏಕೆಂದರೆ ಯಾರು ಬ್ರಹ್ಮಾ ತಂದೆಯ ಸಮೀಪ ಆತ್ಮರಿದ್ದಾರೆಯೋ, ಸಮಾನರಾಗುವ ಆತ್ಮರಿದ್ದಾರೆಯೋ ಅವರು ಬ್ರಹ್ಮಾ ತಂದೆಯ ಜೊತೆ ಜೊತೆಗೆ ತಾನೇ ಪೂಜ್ಯ, ತಾನೇ ಪೂಜಾರಿಯ ಪಾತ್ರವನ್ನೂ ಜೊತೆಯಲ್ಲಿಯೇ ಅಭಿನಯಿಸುತ್ತೀರಿ. ದ್ವಾಪರಯುಗದ ಮೊದಲ ಭಕ್ತರೂ ಸಹ ತಾವು ಬ್ರಾಹ್ಮಣ ಆತ್ಮರೇ ಆಗುತ್ತೀರಿ. ಆದಿ ಸ್ವರ್ಗದಲ್ಲಿ ಇದೇ ದೇಶದ ನಿವಾಸಿಗಳಾಗಿದ್ದಿರಿ ಮತ್ತು ಅನೇಕ ಬಾರಿ ಭಾರತ ಭೂಮಿಯ ದೇಶವಾಸಿಗಳಾಗಿದ್ದೀರಿ. ಆದ್ದರಿಂದ ಬ್ರಾಹ್ಮಣರ ಅಲೌಕಿಕ ಸಂಸಾರ ‘ಮಧುಬನ’ದೊಂದಿಗೆ ಅತೀ ಪ್ರೀತಿಯಿದೆ. ಈ ಮಧುಬನವು ಬ್ರಾಹ್ಮಣರ ಚಿಕ್ಕ ಸಂಸಾರವಾಗಿದೆ ಅಂದಾಗ ಈ ಸಂಸಾರವು ಬಹಳ ಇಷ್ಟವಾಗುತ್ತದೆಯಲ್ಲವೆ. ಇಲ್ಲಿಂದ ಹೋಗಲು ಇಷ್ಟವಾಗುವುದಿಲ್ಲ ಅಲ್ಲವೆ. ಒಂದುವೇಳೆ ಈಗೀಗ ಮಧುಬನ ನಿವಾಸಿಗಳಾಗಿ ಬಿಡಿ ಎಂದು ಆಜ್ಞೆ ಮಾಡಿದ್ದೇ ಆದರೆ ಖುಷಿಯಾಗಿ ಬಿಡುತ್ತೀರಲ್ಲವೆ ಅಥವಾ ಸೇವೆಯನ್ನು ಯಾರು ಮಾಡುವರು ಎಂದು ಸಂಕಲ್ಪ ಬರುತ್ತದೆಯೇ? ಸೇವೆಗೋಸ್ಕರವಂತೂ ಹೋಗಲೇಬೇಕಾಗಿದೆ. ಒಂದುವೇಳೆ ಇಲ್ಲಿಯೇ ಕುಳಿತು ಬಿಡಿ ಎಂದು ಬಾಪ್ದಾದಾ ಹೇಳಿದರೆ ಸೇವೆ ನೆನಪಿಗೆ ಬರುವುದೇ? ಸೇವೆ ಮಾಡಿಸುವವರು ಯಾರಾಗಿದ್ದಾರೆ? ತಂದೆಯದು ಯಾವ ಆದೇಶವಿದೆಯೋ, ಶ್ರೀಮತವಿದೆಯೋ ಅದನ್ನು ಅದೇ ರೂಪದಲ್ಲಿ ಪಾಲನೆ ಮಾಡುವವರಿಗೆ ಸತ್ಯ ಆಜ್ಞಾಕಾರಿ ಮಕ್ಕಳೆಂದು ಹೇಳುವರು. ಮಧುಬನದಲ್ಲಿ ಕುಳ್ಳರಿಸಿಕೊಳ್ಳಬೇಕೇ ಅಥವಾ ಸೇವೆಗಾಗಿ ಕಳುಹಿಸಬೇಕೇ ಎಂಬುದು ಬಾಪ್ದಾದಾರವರಿಗೆ ಗೊತ್ತಿದೆ. ಬ್ರಾಹ್ಮಣ ಮಕ್ಕಳು ಪ್ರತೀ ಮಾತಿನಲ್ಲಿ ಎವರೆಡಿ ಆಗಿರಬೇಕಾಗಿದೆ. ಈಗೀಗ ಯಾವುದೇ ಆದೇಶ ಸಿಗಲಿ, ಅದರಲ್ಲಿ ಎವರೆಡಿಯಾಗಿರಿ. ಸಂಕಲ್ಪ ಮಾತ್ರದಲ್ಲಿಯೂ ಮನಮತವು ಬೆರಕೆಯಾಗಬಾರದು. ಇಂತಹವರಿಗೆ ಶ್ರೀಮತದ ಅನುಸಾರ ನಡೆಯುವ ಶ್ರೇಷ್ಠ ಆತ್ಮನೆಂದು ಹೇಳಲಾಗುತ್ತದೆ.
ಇದನ್ನಂತೂ ತಿಳಿದುಕೊಂಡಿದ್ದೀರಲ್ಲವೆ – ಸೇವೆಯ ಜವಾಬ್ದಾರಿಯು ಬಾಪ್ದಾದಾರವರದಾಗಿದೆ ಅಥವಾ ತಮ್ಮದೇ? ಈ ಜವಾಬ್ದಾರಿಯಿಂದಂತೂ ತಾವು ಹಗುರರಾಗಿದ್ದೀರಲ್ಲವೆ ಅಥವಾ ಜವಾಬ್ದಾರಿಯ ಸ್ವಲ್ಪ-ಸ್ವಲ್ಪ ಹೊರೆಯಿದೆಯೇ? ಇಷ್ಟು ದೊಡ್ಡ ಕಾರ್ಯಕ್ರಮ ಮಾಡಬೇಕಾಗಿದೆ. ಅದನ್ನು ಮಾಡಬೇಕು, ಇದನ್ನು ಮಾಡಬೇಕು – ಇದೆಲ್ಲವೂ ಹೊರೆಯೆಂದು ತಿಳಿದುಕೊಳ್ಳುವುದಿಲ್ಲ ತಾನೆ! ಮಾಡಿಸುವವರು ಮಾಡಿಸುತ್ತಿದ್ದಾರೆ, ಮಾಡಿಸುವವರು ಒಬ್ಬರೇ ತಂದೆಯಾಗಿದ್ದಾರೆ. ಯಾರ ಬುದ್ಧಿಗಾದರೂ ಪ್ರೇರಣೆ ಕೊಟ್ಟು ವಿಶ್ವ ಸೇವೆಯ ಕಾರ್ಯವನ್ನು ಮಾಡಿಸುತ್ತಿದ್ದಾರೆ ಮತ್ತು ಮಾಡಿಸುತ್ತಾ ಇರುತ್ತಾರೆ. ಕೇವಲ ಮಕ್ಕಳನ್ನು ಏತಕ್ಕೋಸ್ಕರ ನಿಮಿತ್ತ ಮಾಡುತ್ತಾರೆಂದರೆ – ಯಾರು ಮಾಡುವರೋ ಅವರು ಪಡೆಯುವರು. ಪಡೆಯುವವರು ಮಕ್ಕಳೇ ಆಗಿದ್ದಾರೆ. ತಂದೆಯಂತೂ ಏನನ್ನೂ ಸ್ವೀಕರಿಸುವುದಿಲ್ಲ. ಪ್ರಾಲಬ್ಧವನ್ನು ಪಡೆಯುವುದು ಅಥವಾ ಸೇವೆಯ ಫಲದ ಅನುಭವ ಮಾಡುವುದು, ಇದು ಆತ್ಮಗಳ ಕರ್ತವ್ಯವಾಗಿದೆ. ಆದ್ದರಿಂದ ಬಾಪ್ದಾದಾ ಮಕ್ಕಳನ್ನು ನಿಮಿತ್ತ ಮಾಡುತ್ತಾರೆ. ಸಾಕಾರ ರೂಪದಲ್ಲಿಯೂ ಸೇವೆ ಮಾಡಿಸುವ ಕಾರ್ಯವನ್ನು ನೋಡಿದಿರಿ ಮತ್ತು ಈಗ ಅವ್ಯಕ್ತ ರೂಪದಲ್ಲಿಯೂ ಸಹ ಮಾಡಿಸುವಂತಹ ತಂದೆಯು ಅವ್ಯಕ್ತ ಬ್ರಹ್ಮಾರವರ ಮೂಲಕವೂ ಹೇಗೆ ಸೇವೆ ಮಾಡಿಸುತ್ತಿದ್ದಾರೆ ಎಂಬುದನ್ನು ನೋಡುತ್ತಿದ್ದೀರಿ. ಅವ್ಯಕ್ತ ಸೇವೆಯ ಗತಿಯು ಇನ್ನೂ ತೀವ್ರ ಗತಿಯಾಗಿದೆ. ಮಾಡಿಸುವವರು ಮಾಡಿಸುತ್ತಿದ್ದಾರೆ ಮತ್ತು ನೀವು ಕೀಲು ಗೊಂಬೆಯ ಸಮಾನ ನರ್ತಿಸುತ್ತಿದ್ದೀರಿ. ಈ ಸೇವೆಯೂ ಸಹ ಒಂದು ಆಟವಾಗಿದೆ. ಮಾಡಿಸುವವರು ಮಾಡಿಸುತ್ತಿದ್ದಾರೆ ಮತ್ತು ತಾವು ನಿಮಿತ್ತರಾಗಿ ಒಂದು ಹೆಜ್ಜೆಗೆ ಪದುಮದಷ್ಟು ಪ್ರಾಲಬ್ಧವನ್ನು ಮಾಡಿಕೊಳ್ಳುತ್ತಿದ್ದೀರಿ ಅಂದಮೇಲೆ ಹೊರೆಯು ಯಾರ ಮೇಲಿದೆ? ಮಾಡಿಸುವವರ ಮೇಲೋ ಅಥವಾ ಮಾಡುವವರ ಮೇಲೋ? ತಂದೆಯಂತೂ ತಿಳಿದುಕೊಂಡಿದ್ದಾರೆ – ಇದು ಹೊರೆಯಲ್ಲ, ತಾವು ಹೊರೆಯೆಂದು ಹೇಳುತ್ತೀರಿ ಆದ್ದರಿಂದ ತಂದೆಯು ಹೊರೆ ಎಂಬ ಶಬ್ಧವನ್ನು ಉಪಯೋಗಿಸುತ್ತೇವೆ. ತಂದೆಯ ಲೆಕ್ಕದಲ್ಲಿ ಎಲ್ಲವೂ ಆಗಿಯೇ ಬಿಟ್ಟಿದೆ. ಕೇವಲ ಹೇಗೆ ಗೆರೆಯನ್ನು ಎಳೆಯಲಾಗುತ್ತದೆ, ಗೆರೆಯನ್ನು ಎಳೆಯುವುದು ದೊಡ್ಡ ಮಾತೆನಿಸುತ್ತದೆಯೇ? ಈ ರೀತಿ ಬಾಪ್ದಾದಾ ಸೇವೆ ಮಾಡಿಸುತ್ತಾರೆ. ಸೇವೆಯೂ ಸಹ ಹೇಗೆ ಒಂದು ಗೆರೆಯನ್ನು ಎಳೆಯುವಷ್ಟು ಸಹಜವಾಗಿದೆ. ಕೇವಲ ಪುನರಾವರ್ತನೆ ಮಾಡುತ್ತಿದ್ದೀರಿ. ನಿಮಿತ್ತ ಆಟವನ್ನಾಡುತ್ತಿದ್ದೀರಿ.
ಹೇಗೆ ಮಾಯೆಯ ವಿಘ್ನವು ಆಟವಾಗಿದೆ ಅಂದಾಗ ಸೇವೆಯೂ ಸಹ ಪರಿಶ್ರಮವಲ್ಲ ಆದರೆ ಆಟವಾಗಿದೆ. ಈ ರೀತಿ ತಿಳಿದುಕೊಳ್ಳುವುದರಿಂದ ಸೇವೆಯಲ್ಲಿ ಸದಾ ರಿಫ್ರೆಷ್ಮೆಂಟ್ನ ಅನುಭವ ಮಾಡುತ್ತೀರಿ. ಹೇಗೆ ಯಾವುದೇ ಆಟವನ್ನು ಏತಕ್ಕಾಗಿ ಆಡುತ್ತಾರೆ? ರಿಫ್ರೆಷ್ ಆಗುವುದಕ್ಕಾಗಿ ಆಡುತ್ತಾರೆಯೇ ಹೊರತು ಸುಸ್ತಾಗುವುದಕ್ಕಾಗಿ ಅಲ್ಲ. ಭಲೆ ಎಷ್ಟಾದರೂ ದೊಡ್ಡ ಕಾರ್ಯವಾಗಿರಲಿ ಆದರೆ ಹೇಗೆ ಆಟವಾಡುವುದರಿಂದ ರಿಫ್ರೆಷ್ ಆಗಿ ಬಿಡುವರೋ ಅದೇರೀತಿ ಅನುಭವ ಮಾಡುವಿರಿ. ಭಲೆ ಎಷ್ಟಾದರೂ ಸುಸ್ತು ಮಾಡಿಸುವ ಆಟವಾಗಿರಲಿ ಆದರೆ ಆಟವೆಂದು ತಿಳಿದಾಗ ಸುಸ್ತಾಗುವುದಿಲ್ಲ. ಏಕೆಂದರೆ ತನ್ನ ರುಚಿಯಿಂದ ಆಟವಾಡಲಾಗುತ್ತದೆ. ಭಲೆ ಆಟದಲ್ಲಿ ಎಷ್ಟೇ ಕಠಿಣ ಕೆಲಸ ಮಾಡಬೇಕಾಗಲಿ ಆದರೆ ಅದೂ ಸಹ ಮನೋರಂಜನೆ ಎನಿಸುತ್ತದೆ ಏಕೆಂದರೆ ತಮ್ಮ ಹೃದಯಪೂರ್ವಕವಾಗಿ ಮಾಡುತ್ತೀರಿ. ಯಾವುದೇ ಲೌಕಿಕ ಕಾರ್ಯವು ಹೊರೆಯೆನಿಸುತ್ತದೆ, ನಿರ್ವಹಣಾರ್ಥ ಮಾಡಲೇಬೇಕಾಗುತ್ತದೆ, ಇದು ನಮ್ಮ ಜವಾಬ್ಧಾರಿಯೆಂದು ತಿಳಿದುಕೊಂಡು ಮಾಡುತ್ತೀರಿ ಆದ್ದರಿಂದ ಪರಿಶ್ರಮವೆನಿಸುತ್ತದೆ. ಭಲೆ ಶಾರೀರಿಕ ಪರಿಶ್ರಮದ ಕೆಲಸವಾಗಿರಬಹುದು ಆದರೆ ಬುದ್ಧಿಯ ಪರಿಶ್ರಮದ ಕೆಲಸವಾಗಿರಬಹುದು ಆದರೆ ಅದೊಂದು ಜವಾಬ್ದಾರಿಯೆಂದು ತಿಳಿದು ಮಾಡುವ ಕಾರಣ ಸುಸ್ತಿನ ಅನುಭವ ಮಾಡುತ್ತೀರಿ ಏಕೆಂದರೆ ಹೃದಯದ ಖುಷಿಯಿಂದ ಮಾಡುವುದಿಲ್ಲ, ಯಾವುದನ್ನು ತನ್ನ ಮನಸ್ಸಿನ ಉಲ್ಲಾಸದಿಂದ, ಖುಷಿಯಿಂದ ಕಾರ್ಯ ಮಾಡಲಾಗುತ್ತದೆಯೋ ಅದರಲ್ಲಿ ಸುಸ್ತಾಗುವುದಿಲ್ಲ, ಹೊರೆಯ ಅನುಭವವಾಗುವುದಿಲ್ಲ. ಕೆಲವೊಂದೆಡೆ ಮಕ್ಕಳ ಮೇಲೆ ಸೇವೆಯ ಲೆಕ್ಕದಿಂದ ಹೆಚ್ಚು ಕಾರ್ಯವು ಬಂದು ಬಿಡುತ್ತದೆ ಆದ್ದರಿಂದಲೂ ಕೆಲಕೆಲವೊಮ್ಮೆ ಸುಸ್ತಿನ ಅನುಭವವಾಗುತ್ತದೆ. ಬಾಪ್ದಾದಾ ನೋಡುತ್ತೇವೆ, ಕೆಲವು ಮಕ್ಕಳು ಅವಿಶ್ರಾಂತರಾಗಿ ಸೇವೆ ಮಾಡುವ ಉಲ್ಲಾಸ-ಉತ್ಸಾಹದಲ್ಲಿಯೂ ಇರುತ್ತಾರೆ. ಆದರೂ ಸಾಹಸವನ್ನಿಟ್ಟು ಮುಂದುವರೆಯುತ್ತಿದ್ದಾರೆ, ಇದನ್ನು ನೋಡಿ ಬಾಪ್ದಾದಾ ಹರ್ಷಿತರಾಗುತ್ತಿದ್ದೇವೆ. ಸದಾ ಬುದ್ಧಿಯನ್ನು ಅವಶ್ಯವಾಗಿ ಹಗುರವಾಗಿಟ್ಟುಕೊಳ್ಳಿ.
ಬಾಪ್ದಾದಾ ಮಕ್ಕಳ ಯೋಜನಾ ಕಾರ್ಯಕ್ರಮವನ್ನು ವತನದಲ್ಲಿ ಕುಳಿತೇ ನೋಡುತ್ತಿರುತ್ತೇವೆ. ಪ್ರತಿಯೊಬ್ಬ ಮಗುವಿನ ಪ್ರತೀ ಸಮಯದ ನೆನಪು ಮತ್ತು ಸೇವೆಯ ರೆಕಾರ್ಡ್ ಬಾಪ್ದಾದಾರವರ ಬಳಿ ಇರುತ್ತದೆ. ಹೇಗೆ ತಮ್ಮ ಸ್ಥೂಲ ಪ್ರಪಂಚದಲ್ಲಿ ರೆಕಾರ್ಡ್ ಇಡುವ ಕೆಲವು ಸಾಧನಗಳಿವೆ ಹಾಗೆಯೇ ತಂದೆಯ ಬಳಿ ವಿಜ್ಞಾನದ ಸಾಧನಗಳಿಗಿಂತಲೂ ರಿಫೈನ್ ಸಾಧನವಿದೆ ಅದು ಸ್ವತಹ ಕಾರ್ಯ ಮಾಡುತ್ತಿರುತ್ತದೆ. ಹೇಗೆ ವಿಜ್ಞಾನದ ಸಾಧನಗಳು ಯಾವುದೆಲ್ಲಾ ಕಾರ್ಯ ಮಾಡುತ್ತದೆಯೋ ಅದು ಲೈಟ್ನ ಆಧಾರದಿಂದ ಮಾಡುತ್ತದೆ. ಸೂಕ್ಷ್ಮ ವತನವೂ ಸಹ ಪ್ರಕಾಶದ್ದಾಗಿದೆ. ಸಾಕಾರ ವತನದ ಬೆಳಕಿನ ಸಾಧನಗಳಾದರೋ ಪ್ರಕೃತಿಯ ಸಾಧನಗಳಾಗಿವೆ ಆದರೆ ಅವ್ಯಕ್ತ ವತನದ ಸಾಧನಗಳು ಪ್ರಕೃತಿಯದಲ್ಲ ಮತ್ತು ಪ್ರಕೃತಿಯು ರೂಪ ಬದಲಾಯಿಸುತ್ತದೆ, ಸತೋ-ರಜೋ-ತಮೋದಲ್ಲಿ ಪರಿವರ್ತನೆಯಾಗುತ್ತದೆ. ಈ ಸಮಯದಲ್ಲಂತೂ ಇರುವುದೇ ತಮೋಗುಣೀ ಪ್ರಕೃತಿ ಆದ್ದರಿಂದ ಈ ಸಾಧನಗಳು ಇಂದು ನಡೆಯುತ್ತವೆ, ನಾಳೆ ನಡೆಯುವುದಿಲ್ಲ. ಆದ್ದರಿಂದ ಅವ್ಯಕ್ತ ವತನದ ಸಾಧನವು ಪ್ರಕೃತಿಯಿಂದ ದೂರವಿದೆ ಆದ್ದರಿಂದ ಅದು ಪರಿವರ್ತನೆಯಲ್ಲಿ ಬರುವುದಿಲ್ಲ. ಯಾವಾಗ ಬೇಕೋ, ಹೇಗೆ ಬೇಕೋ ಸೂಕ್ಷ್ಮ ಸಾಧನವು ಸದಾ ತನ್ನ ಕಾರ್ಯ ಮಾಡುತ್ತಿರುತ್ತದೆ. ಆದ್ದರಿಂದ ಎಲ್ಲಾ ಮಕ್ಕಳ ರೆಕಾರ್ಡ್ ನೋಡುವುದು ಬಾಪ್ದಾದಾರವರಿಗೆ ದೊಡ್ಡ ಮಾತೇನಲ್ಲ. ತಮ್ಮೆಲ್ಲರಿಗಂತೂ ಸಾಧನಗಳನ್ನು ಸಂಭಾಲನೆ ಮಾಡುವುದೇ ಕಷ್ಟವಾಗಿ ಬಿಡುತ್ತದೆಯಲ್ಲವೆ. ಅಂದಾಗ ಬಾಪ್ದಾದಾ ನೆನಪು ಮತ್ತು ಸೇವೆ ಎರಡರ ರೆಕಾರ್ಡನ್ನು ನೋಡುತ್ತೇವೆ ಏಕೆಂದರೆ ಎರಡರ ಬ್ಯಾಲೆನ್ಸ್ ಅಧಿಕ ಬ್ಲೆಸ್ಸಿಂಗ್ನ್ನು ಕೊಡಿಸುತ್ತದೆ.
ಹೇಗೆ ಸೇವೆಗಾಗಿ ಸಮಯವನ್ನು ತೆಗೆಯುತ್ತೀರಿ. ಅದರಲ್ಲಿ ಕೆಲವೊಮ್ಮೆ ನಿಯಮಕ್ಕಿಂತಲೂ ಹೆಚ್ಚು ಸಮಯವನ್ನು ತೊಡಗಿಸುತ್ತೀರಿ. ಸೇವೆಯಲ್ಲಿ ಸಮಯವನ್ನು ತೊಡಗಿಸುವುದು ಬಹಳ ಒಳ್ಳೆಯ ಮಾತಾಗಿದೆ ಮತ್ತು ಸೇವೆಯ ಬಲವೂ ಸಿಗುತ್ತದೆ, ಸೇವೆಯಲ್ಲಿ ಬ್ಯುಜಿಯಾಗಿರುವಕಾ ರಣ ಚಿಕ್ಕ-ಚಿಕ್ಕ ಮಾತುಗಳಿಂದ ಪಾರಾಗುತ್ತೀರಿ. ಬಾಪ್ದಾದಾ ಮಕ್ಕಳ ಸೇವೆಯನ್ನು ನೋಡಿ ಬಹಳ ಖುಷಿ ಪಡುತ್ತೀರಿ. ನಿಮ್ಮ ಸಾಹಸಕ್ಕಾಗಿ ಬಲಿಹಾರಿಯಾಗುತ್ತೇವೆ ಆದರೆ ಯಾವ ಸೇವೆಯು ನೆನಪು ಮತ್ತು ಉನ್ನತಿಯಲ್ಲಿ ಸ್ವಲ್ಪ ಅಡಚಣೆ ಮಾಡಲು ನಿಮಿತ್ತವಾದರೂ ಸಹ ಅಂತಹ ಸೇವೆಯ ಸಮಯವನ್ನು ಕಡಿಮೆ ಮಾಡಿಕೊಳ್ಳಬೇಕು. ಹೇಗೆ ರಾತ್ರಿಯಲ್ಲಿ ಬಹಳ ಸಮಯದವರೆಗೆ ಜಾಗೃತವಾಗಿರುತ್ತೀರಿ. 12 ಗಂಟೆ ಅಥವಾ ಒಂದು ಗಂಟೆಯವರೆಗೂ ಜಾಗೃತವಾಗಿರುತ್ತೀರಿ, ಆದ್ದರಿಂದ ಅಮೃತವೇಳೆಯಲ್ಲಿ ಫ್ರೆಷ್ ಇರುವುದಿಲ್ಲ. ಕುಳಿತುಕೊಂಡರೂ ಸಹ ನಿಯಮ ಪ್ರಮಾಣ ಕುಳಿತುಕೊಳ್ಳುತ್ತೀರಿ ಮತ್ತು ಅಮೃತವೇಳೆಯು ಶಕ್ತಿಶಾಲಿಯಿಲ್ಲವೆಂದರೆ ಇಡೀ ದಿನದ ನೆನಪು ಮತ್ತು ಸೇವೆಯಲ್ಲಿ ಅಂತರವಾಗಿ ಬಿಡುತ್ತದೆ. ತಿಳಿದುಕೊಳ್ಳಿ, ಸೇವೆಯ ಯೋಜನೆ ಮಾಡುವುದರಲ್ಲಿ ಅಥವಾ ಸೇವೆಯನ್ನು ಕಾರ್ಯ ರೂಪದಲ್ಲಿ ತರುವುದರಲ್ಲಿ ಸಮಯ ಹಿಡಿಸುತ್ತದೆಯೆಂದರೆ ರಾತ್ರಿಯ ಸಮಯವನ್ನು ಕಟ್ ಮಾಡಿ. 12 ಗಂಟೆಯ ಬದಲು 11 ಗಂಟೆಗೆ ಮಲಗಿ ಬಿಡಿ. ಆ ಒಂದು ಗಂಟೆ ಏನು ಕಡಿಮೆ ಮಾಡಿದಿರೋ ಮತ್ತು ಶರೀರಕ್ಕೆ ವಿಶ್ರಾಂತಿ ನೀಡುತ್ತೀರೋ ಅದರಿಂದ ಅಮೃತವೇಳೆ ಚೆನ್ನಾಗಿರುವುದು ಮತ್ತು ಬುದ್ಧಿಯು ಪ್ರಫುಲ್ಲಿತವಾಗಿರುವುದು. ಇಲ್ಲದಿದ್ದರೆ ಸೇವೆಯನ್ನಂತೂ ಮಾಡುತ್ತಿದ್ದೇವೆ ಆದರೆ ನೆನಪಿನ ಚಾರ್ಟ್ ಎಷ್ಟಿರಬೇಕೋ ಅಷ್ಟಿಲ್ಲ ಎಂದು ಮನಸ್ಸು ತಿನ್ನುತ್ತದೆ. ಇದು ಈ ರೀತಿಯಾಗಬೇಕು ಆದರೆ ಅದನ್ನು ಮಾಡಲು ಆಗುತ್ತಿಲ್ಲ ಎಂದು ಯಾವ ಸಂಕಲ್ಪವು ಹೃದಯದಲ್ಲಿ ಹಾಗೂ ಮನಸ್ಸಿನಲ್ಲಿ ಪದೇ-ಪದೇ ಬರುತ್ತದೆಯೋ ಆ ಸಂಕಲ್ಪದ ಕಾರಣ ಬುದ್ಧಿಯು ಫ್ರೆಷ್ ಆಗಿರುವುದಿಲ್ಲ ಮತ್ತು ಬುದ್ಧಿಯು ಒಂದುವೇಳೆ ಫ್ರೆಷ್ ಆಗಿದ್ದರೆ, ಫ್ರೆಷ್ ಬುದ್ಧಿಯಿಂದ 2-3 ಗಂಟೆಗಳ ಕೆಲಸವನ್ನು ಒಂದು ಗಂಟೆಯಲ್ಲಿಯೇ ಮುಗಿಸಬಲ್ಲಿರಿ. ಸುಸ್ತಾಗಿರುವ ಬುದ್ಧಿಯಲ್ಲಿ ಹೆಚ್ಚು ಸಮಯ ಹಿಡಿಸುತ್ತದೆ. ಈ ಅನುಭವವಿದೆಯಲ್ಲವೆ! ಎಷ್ಟು ಫ್ರೆಷ್ ಬುದ್ಧಿಯಿರುವುದೋ ಶರೀರದ ಲೆಕ್ಕದಿಂದಲೂ ಫ್ರೆಷ್, ಆತ್ಮದ ಉನ್ನತಿಯ ಲೆಕ್ಕದಿಂದಲೂ ಫ್ರೆಷ್ – ಈ ಡಬಲ್ ತಾಜಾತನವಿದ್ದಾಗ ಒಂದು ಗಂಟೆಯ ಕಾರ್ಯವನ್ನು ಅರ್ಧ ಗಂಟೆಯಲ್ಲಿ ಮಾಡಿಬಿಡುತ್ತೀರಿ. ಆದ್ದರಿಂದ ಸದಾ ತಮ್ಮ ದಿನಚರಿಯಲ್ಲಿ ಬುದ್ಧಿಯು ಫ್ರೆಷ್ ಇರುವ ಗಮನವನ್ನಿಡಿ. ಹೆಚ್ಚು ಆಲೋಚಿಸುವ ಹವ್ಯಾಸವೂ ಇರಬಾರದು ಆದರೆ ಶರೀರದ ಲೆಕ್ಕದಿಂದ ಯಾವ ಅವಶ್ಯಕ ಸಮಯ ಬೇಕೋ ಅದರಮೇಲೆ ಗಮನವನ್ನಿಡಿ. ಕೆಲಕೆಲವೊಮ್ಮೆ ಯಾವುದೇ ಸೇವೆಯ ಅವಕಾಶವಿದ್ದಾಗ ಒಂದೆರಡು ತಿಂಗಳಿನಲ್ಲಿ 2-4 ಬಾರಿ ತಡವಾದರೆ ಅದು ಬೇರೆಯ ಮಾತಾಗಿದೆ ಆದರೆ ಒಂದುವೇಳೆ ನಿಯಮಿತ ರೂಪದಿಂದ ಯಾವಾಗಲೂ ಶರೀರವು ಸುಸ್ತಾಗಿದ್ದರೆ ನೆನಪಿನಲ್ಲಿ ಅಂತರವಾಗುವುದು. ಹೇಗೆ ಸೇವೆಯ ಕಾರ್ಯಕ್ರಮ ಮಾಡಿಕೊಳ್ಳುತ್ತೀರಿ, ನಾಲ್ಕು ಗಂಟೆಗಳ ಸಮಯವನ್ನು ತೆಗೆಯಬೇಕೆಂದರೂ ಸಹ ತೆಗೆಯುತ್ತೀರಿ. ಅದೇ ರೀತಿ ನೆನಪಿಗಾಗಿಯೂ ನಿಶ್ಚಿತ ಸಮಯವನ್ನು ತೆಗೆಯಲೇಬೇಕಾಗಿದೆ. ಇದನ್ನೂ ಅವಶ್ಯಕವೆಂದು ತಿಳಿದು ಈ ವಿಧಿಯಿಂದ ತನ್ನ ಕಾರ್ಯಕ್ರಮ ಮಾಡಿಕೊಳ್ಳಿ. ಆಲಸಿಗಳಾಗಬಾರದು ಆದರೆ ಶರೀರಕ್ಕೆ ವಿಶ್ರಾಂತಿ ಕೊಡಬೇಕಾಗಿದೆ – ಈ ವಿಧಿಯಿಂದ ನಡೆಯಿರಿ ಏಕೆಂದರೆ ದಿನ-ಪ್ರತಿದಿನ ಸೇವೆಯಂತೂ ಇನ್ನೂ ತೀವ್ರ ಗತಿಯಿಂದ ಮುಂದುವರೆಯುವ ಸಮಯ ಬರುತ್ತಿದೆ. ಒಳ್ಳೆಯದು – ಈ ಒಂದು ವರ್ಷದ ಕಾರ್ಯವು ಪೂರ್ಣವಾಗಿ ಬಿಟ್ಟರೆ ನಂತರ ವಿಶ್ರಾಂತಿ ತೆಗೆದುಕೊಳ್ಳೋಣ, ಸರಿಪಡಿಸಿಕೊಳ್ಳೋಣ. ಆಗ ನೆನಪನ್ನು ಇನ್ನೂ ಹೆಚ್ಚಿಸಿಕೊಳ್ಳೋಣವೆಂದು ತಾವು ತಿಳಿದುಕೊಳ್ಳುತ್ತೀರಿ ಆದರೆ ಸೇವಾಕಾರ್ಯವಂತೂ ದಿನ-ಪ್ರತಿದಿನ ಹೊಸದಕ್ಕಿಂತ ಹೊಸದು ಮತ್ತು ದೊಡ್ಡದಕ್ಕಿಂತ ದೊಡ್ಡದಾಗಿ ಆಗಲಿದೆ. ಆದ್ದರಿಂದ ಸದಾ ಬ್ಯಾಲೆನ್ಸ್ ಇಟ್ಟುಕೊಳ್ಳಿ. ಅಮೃತವೇಳೆ ಫ್ರೆಷ್ ಆಗಿ ನಂತರ ಅದೇ ಕೆಲಸವನ್ನು ಇಡೀ ದಿನದಲ್ಲಿ ಸಮಯ ಪ್ರಮಾಣ ಮಾಡಿ ಆಗ ತಂದೆಯ ಅಧಿಕ ಆಶೀರ್ವಾದಗಳೂ ಸಿಗುವುದು ಮತ್ತು ಬುದ್ಧಿಯು ಫ್ರೆಷ್ ಆಗಿರುವ ಕಾರಣ ಬಹು ಬೇಗನೆ ಹಾಗೂ ಸಫಲತಾಪೂರ್ವಕವಾಗಿ ಕಾರ್ಯವನ್ನು ಮಾಡಬಲ್ಲಿರಿ. ತಿಳಿಯಿತೆ.
ಬಾಪ್ದಾದಾ ನೋಡುತ್ತಿದ್ದೇವೆ – ಮಕ್ಕಳಲ್ಲಿ ಬಹಳ ಉಲ್ಲಾಸವಿದೆ. ಆದ್ದರಿಂದ ಶರೀರದ ಬಗ್ಗೆಯೂ ಯೋಚಿಸುವುದಿಲ್ಲ. ಉಲ್ಲಾಸ-ಉತ್ಸಾಹದಿಂದ ಮುಂದುವರೆಯುತ್ತಿದ್ದಾರೆ. ಮುಂದುವರೆಯುವುದು ಬಾಪ್ದಾದಾರವರಿಗೆ ಇಷ್ಟವಾಗುತ್ತದೆ ಆದರೆ ಸಮತೋಲನೆಯು ಅವಶ್ಯವಾಗಿ ಬೇಕು. ಭಲೆ ಮಾಡುತ್ತಿರುತ್ತೀರಿ, ನಡೆಯುತ್ತಿರುತ್ತೀರಿ ಆದರೆ ಕೆಲಕೆಲವೊಮ್ಮೆ ಹೇಗೆ ಬಹಳ ಕೆಲಸವಿದ್ದರೆ ಆ ಹೆಚ್ಚು ಕೆಲಸದಲ್ಲಿ ಒಂದನೆಯದಾಗಿ, ಬುದ್ಧಿಯು ಸುಸ್ತಾಗುವ ಕಾರಣ ಎಷ್ಟು ಬಯಸುತ್ತೀರೋ ಅಷ್ಟು ಮಾಡಲಾಗುವುದಿಲ್ಲ ಮತ್ತು ಇನ್ನೊಂದು ಬಹಳ ಕೆಲಸವಿರುವ ಕಾರಣ ಯಾರ ಮೂಲಕವಾದರೂ ಸ್ವಲ್ಪ ಏರುಪೇರಾದರೂ ಸಹ ಸುಸ್ತಾಗಿರುವ ಕಾರಣ ಸಿಡುಕುವಿಕೆ ಬಂದು ಬಿಡುವುದು. ಅದರಿಂದ ಖುಷಿಯು ಕಡಿಮೆಯಾಗಿ ಬಿಡುತ್ತದೆ. ಹಾಗೆ ನೋಡಿದರೆ ಒಳಗೆ ಸರಿಯಾಗಿಯೇ ಇರುತ್ತೀರಿ, ಸೇವೆಯ ಬಲವೂ ಸಿಗುತ್ತಿದೆ, ಖುಷಿಯೂ ಸಿಗುತ್ತಿದೆ ಆದರೂ ಸಹ ಶರೀರವಂತೂ ಹಳೆಯದಲ್ಲವೆ. ಆದ್ದರಿಂದ ಸೇವೆಯ ಅತಿಯಲ್ಲಿ ಬರಬೇಡಿ. ಸಮತೋಲನೆಯನ್ನು ಇಟ್ಟುಕೊಳ್ಳಿ. ನೆನಪಿನ ಚಾರ್ಟ್ನ ಮೇಲೆ ಸುಸ್ತಿನ ಪ್ರಭಾವವಾಗಬಾರದು. ಎಷ್ಟು ಸೇವೆಯಲ್ಲಿ ಬ್ಯುಜಿಯಾಗಿರುತ್ತೀರೋ, ಭಲೆ ಎಷ್ಟಾದರೂ ಬ್ಯುಜಿಯಾಗಿರಿ ಆದರೆ ಸುಸ್ತನ್ನು ಕಳೆಯುವ ವಿಶೇಷ ಸಾಧನವೆಂದರೆ ಒಂದು ಗಂಟೆ ಅಥವಾ ಎರಡು ಗಂಟೆಗಳಲ್ಲಿ ಒಂದು ನಿಮಿಷವಾದರೂ ಶಕ್ತಿಶಾಲಿ ನೆನಪಿಗಾಗಿ ಅವಶ್ಯವಾಗಿ ತಿಳಿಯಿರಿ. ಹೇಗೆ ಶರೀರದಲ್ಲಿ ಯಾವುದೇ ನಿರ್ಬಲತೆಯಿದ್ದರೆ ಶರೀರಕ್ಕೆ ಶಕ್ತಿ ಕೊಡುವುದಕ್ಕಾಗಿ ವೈದ್ಯರು ಎರಡೆರಡು ಗಂಟೆಗಳ ನಂತರ ಶಕ್ತಿಯ ಟಾನಿಕ್ನ್ನು ಕುಡಿಸಲು ಕೊಡುತ್ತಾರೆ. ಸಮಯವನ್ನು ತೆಗೆದು ಟಾನಿಕ್ನ್ನು ಕುಡಿಯಲೇ ಬೇಕಾಗುತ್ತದೆಯಲ್ಲವೆ ಅದೇರೀತಿ ಮಧ್ಯ-ಮಧ್ಯದಲ್ಲಿ ಒಂದುವೇಳೆ ಒಂದು ನಿಮಿಷವಾದರೂ ಶಕ್ತಿಶಾಲಿ ನೆನಪಿಗಾಗಿ ಸಮಯ ತೆಗೆಯಿರಿ ಅದರಲ್ಲಿ ಎ, ಬಿ, ಸಿ ಎಲ್ಲಾ ವಿಟಮಿನ್ಗಳೂ ಬಂದು ಬಿಡುತ್ತವೆ.
ತಿಳಿಸಿದೆವಲ್ಲವೆ – ಶಕ್ತಿಶಾಲಿ ನೆನಪು ಸದಾ ಏಕೆ ಇರುವುದಿಲ್ಲ? ಎಂದು. ಯಾವಾಗ ತಂದೆಯವರಾಗಿದ್ದೀರಿ ಮತ್ತು ತಂದೆಯು ತಮ್ಮವರಾಗಿದ್ದಾರೆ, ಸರ್ವ ಸಂಬಂಧವಿದೆ, ಹೃದಯದ ಸ್ನೇಹವಿದೆ, ಜ್ಞಾನಪೂರ್ಣರಾಗಿದ್ದೀರಿ, ಪ್ರಾಪ್ತಿಯ ಅನುಭವಿಗಳಾಗಿದ್ದೀರಿ ಆದರೂ ಸಹ ಸದಾ ಶಕ್ತಿಶಾಲಿ ನೆನಪು ಏಕೆ ಇರುವುದಿಲ್ಲ, ಅದಕ್ಕೆ ಕಾರಣವೇನು? ತಮ್ಮ ನೆನಪಿನ ಬುದ್ಧಿಯೋಗವನ್ನು ಇಟ್ಟುಕೊಳ್ಳುವುದಿಲ್ಲ. ಬುದ್ಧಿಯ ಯೋಗವು ತುಂಡಾಗುತ್ತದೆ ಆದ್ದರಿಂದ ಮತ್ತೆ ಜೋಡಿಸುವುದರಲ್ಲಿ ಸಮಯವೂ ಹಿಡಿಸುತ್ತದೆ, ಪರಿಶ್ರಮವೂ ಆಗುತ್ತದೆ ಮತ್ತು ಶಕ್ತಿಶಾಲಿಗಳ ಬದಲು ನಿರ್ಬಲರಾಗಿ ಬಿಡುತ್ತೀರಿ. ವಿಸ್ಮೃತಿಯಂತೂ ಆಗಲು ಸಾಧ್ಯವಿಲ್ಲ, ನೆನಪಿರುತ್ತದೆ ಆದರೆ ಸದಾ ಶಕ್ತಿಶಾಲಿ ನೆನಪು ಸ್ವತಹ ಇರಬೇಕೆಂದರೆ ಈ ಬುದ್ಧಿಯೋಗವು ತುಂಡಾಗಬಾರದು. ಪ್ರತೀ ಸಮಯ ಬುದ್ಧಿಯಲ್ಲಿ ನೆನಪಿನ ಲಿಂಕ್ ಜೋಡಣೆಯಾಗಿರಲಿ. ಇದು ವಿಧಿಯಾಗಿದೆ. ಇದನ್ನೂ ಸಹ ಅವಶ್ಯಕವೆಂದು ತಿಳಿಯಿರಿ. ಹೇಗೆ ಆ ಕೆಲಸಗಳನ್ನು ಅವಶ್ಯಕವಾಗಿವೆ, ಈ ಯೋಜನೆಯನ್ನು ಪೂರ್ಣ ಮಾಡಿಯೇ ಎದ್ದೇಳಬೇಕೆಂದು ತಿಳಿದುಕೊಳ್ಳುತ್ತೀರಿ ಆದ್ದರಿಂದ ಸಮಯವನ್ನೂ ಕೊಡುತ್ತೀರಿ, ಶಕ್ತಿಯನ್ನೂ ತೊಡಗಿಸುತ್ತೀರಿ ಹಾಗೆಯೇ ಇದೂ ಸಹ ಅತ್ಯವಶ್ಯಕವಾಗಿದೆ. ಈ ಕೆಲಸವನ್ನು ಮೊದಲು ಮುಗಿಸಿ ನಂತರ ನೆನಪು ಮಾಡೋಣವೆಂದು ಇದನ್ನು ಹಿಂದಕ್ಕೆ ಸರಿಸಬೇಡಿ. ಸಮಯ ಪ್ರಮಾಣ ತಮ್ಮ ಕಾರ್ಯಕ್ರಮದಲ್ಲಿ ಇದನ್ನು ಮೊದಲು ಸೇರಿಸಿ. ಹೇಗೆ ಸೇವೆಯ ಯೋಜನೆಗಾಗಿ ಎರಡು ಗಂಟೆಯ ಸಮಯವನ್ನು ನಿಗಧಿ ಪಡಿಸುತ್ತೀರಿ – ಮೀಟಿಂಗ್ ಮಾಡುತ್ತೀರೋ ಅಥವಾ ಪ್ರಾಕ್ಟಿಕಲ್ ಮಾಡುತ್ತೀರೋ, ಸಮಯವನ್ನಂತೂ ತೆಗೆಯುತ್ತೀರಿ. ಆ ಎರಡು ಗಂಟೆಗಳ ಜೊತೆ ಜೊತೆಗೆ ಇದನ್ನೂ ಸಹ ಮಧ್ಯ-ಮಧ್ಯದಲ್ಲಿ ಮಾಡಲೇಬೇಕೆಂದು ನಿಯಮವನ್ನು ಇಟ್ಟುಕೊಳ್ಳಿ. ಒಂದು ಗಂಟೆಯಲ್ಲಿ ಯಾವ ಯೋಜನೆ ಮಾಡುವಿರೋ ಅದು ಅರ್ಧ ಗಂಟೆಯಲ್ಲಿಯೇ ಆಗಿ ಬಿಡುವುದು, ಮಾಡಿ ನೋಡಿ. ಬಹಳ ಫ್ರೆಷ್ನೆಸ್ನ ಕಾರಣ ಅದು ಎರಡು ಗಂಟೆಗೆ ತಾನಾಗಿಯೇ ಎಚ್ಚರವಾಗುತ್ತದೆ, ಅದು ಬೇರೆ ಮಾತಾಗಿದೆ ಆದರೆ ಕಾರ್ಯದ ಕಾರಣ ಜಾಗೃತವಾಗಿ ಇರಬೇಕಾಗುತ್ತದೆ ಎಂದರೆ ಅದರ ಹೆಚ್ಚಿನ ಪ್ರಭಾವವು ಶರೀರದ ಮೇಲೆ ಬೀಳುತ್ತದೆ. ಆದ್ದರಿಂದ ಸಮತೋಲನೆಯ ಮೇಲೆ ಸದಾ ಗಮನವನ್ನಿಡಿ.
ಬಾಪ್ದಾದಾ ಮಕ್ಕಳು ಇಷ್ಟು ಬ್ಯುಜಿಯಾಗಿರುವುದನ್ನು ನೋಡಿ ಇದನ್ನೇ ಯೋಚಿಸುತ್ತೇವೆ – ಹೋಗಿ ಇವರ ತಲೆಯನ್ನು ಮಾಲೀಷ್ ಮಾಡಬೇಕು. ಆದರೆ ಸಮಯವನ್ನು ತೆಗೆದಿದ್ದೇ ಆದರೆ ವತನದಲ್ಲಿ ಬಾಪ್ದಾದಾ ಮಾಲೀಷ್ನ್ನೂ ಮಾಡಿ ಬಿಡುತ್ತಾರೆ. ಅದು ಲೌಕಿಕ ಮಾಲೀಷ್ನಂತೆ ಅಲ್ಲ, ಅದು ಅಲೌಕಿಕವಾಗಿರುವುದು. ಒಮ್ಮೆಲೆ ಫ್ರೆಷ್ ಆಗಿ ಬಿಡುತ್ತೀರಿ. ಒಂದು ಸೆಕೆಂಡಿನ ಶಕ್ತಿಶಾಲಿ ನೆನಪೂ ಸಹ ತನು-ಮನ ಎರಡನ್ನೂ ಸಹ ಫ್ರೆಷ್ ಮಾಡಿ ಬಿಡುತ್ತದೆ. ತಂದೆಯ ವತನದಲ್ಲಿ ಬಂದು ಬಿಡಿ, ಯಾವ ಸಂಕಲ್ಪ ಮಾಡುವಿರೋ ಅದು ಈಡೇರುವುದು. ಭಲೆ ಶರೀರದ ಸುಸ್ತಿರಲಿ, ಬುದ್ಧಿ ಅಥವಾ ಸ್ಥಿತಿಯ ಸುಸ್ತಿರಲಿ – ತಂದೆಯಂತೂ ಬಂದಿರುವುದೇ ಸುಸ್ತನ್ನು ಕಳೆಯುವುದಕ್ಕಾಗಿ.
ಇಂದು ಡಬಲ್ ವಿದೇಶಿಯರೊಂದಿಗೆ ವ್ಯಕ್ತಿಗತವಾಗಿ ವಾರ್ತಾಲಾಪ ಮಾಡುತ್ತಿದ್ದೇವೆ. ಬಹಳ ಚೆನ್ನಾಗಿ ಸೇವೆ ಮಾಡಿದ್ದೀರಿ ಮತ್ತು ಮಾಡುತ್ತಲೇ ಇರಬೇಕಾಗಿದೆ. ಸೇವೆ ವೃದ್ಧಿಯಾಗುವುದು – ಇದು ಡ್ರಾಮಾನುಸಾರ ಮಾಡಲ್ಪಟ್ಟಿದೆ. ಈಗಂತೂ ಬಹಳಷ್ಟಾಯಿತು ಎಂದು ತಾವು ಎಷ್ಟಾದರೂ ಆಲೋಚಿಸಿ ಆದರೆ ಡ್ರಾಮಾದ ಪೂರ್ವನಿಶ್ಚಿತವು ಮಾಡಲ್ಪಟ್ಟಿದೆ ಆದ್ದರಿಂದ ಸೇವೆಯ ಯೋಜನೆಗಳು ಬಂದೇ ಬರುತ್ತವೆ ಮತ್ತು ತಾವೆಲ್ಲರೂ ನಿಮಿತ್ತರಾಗಿ ಮಾಡಲೇಬೇಕಾಗಿದೆ. ಈ ಪೂರ್ವ ನಿಶ್ಚಿತವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ತಂದೆಯು ಭಲೆ ಒಂದು ವರ್ಷ ಸೇವೆಯಿಂದ ನಿಮಗೆ ವಿಶ್ರಾಂತಿ ಕೊಟ್ಟುಬಿಡಬಹುದು ಆದರೆ ಬದಲಾಗಲು ಸಾಧ್ಯವಿಲ್ಲ. ಸೇವೆಯಿಂದ ಮುಕ್ತರಾಗಿ ಕುಳಿತುಕೊಳ್ಳಲು ಸಾಧ್ಯವೇ? ಹೇಗೆ ನೆನಪು ಬ್ರಾಹ್ಮಣ ಜೀವನದ ಟಾನಿಕ್ ಆಗಿದೆ. ಹಾಗೆಯೇ ಸೇವೆಯೂ ಸಹ ಜೀವನದ ಟಾನಿಕ್ ಆಗಿದೆ. ಈ ಟಾನಿಕ್ ಇಲ್ಲದೆ ಎಂದೂ ಯಾರೂ ಇರಲು ಸಾಧ್ಯವಿಲ್ಲ ಆದರೆ ಸಮತೋಲನೆಯನ್ನು ಖಂಡಿತ ಇಟ್ಟುಕೊಳ್ಳಬೇಕು. ಬುದ್ಧಿಯ ಮೇಲೆ ಹೊರೆ ಆಯಾಗುವಷ್ಟನ್ನೂ ಇಟ್ಟುಕೊಳ್ಳಬೇಡಿ ಅಥವಾ ಎಲ್ಲಾ ಸೇವೆಯನ್ನೂ ಬಿಟ್ಟು ಆಲಸಿಗಳೂ ಆಗಬಾರದು. ಹೊರೆಯೂ ಇರಬಾರದು, ಆಲಸ್ಯವೂ ಆಗಬಾರದು – ಇದಕ್ಕೆ ಬ್ಯಾಲೆನ್ಸ್ ಎಂದು ಹೇಳಲಾಗುತ್ತದೆ.
ಸದಾ ನೆನಪು ಮತ್ತು ಸೇವೆಯ ಬ್ಯಾಲೆನ್ಸ್ನ ಮೂಲಕ ತಂದೆಯ ಅಶೀರ್ವಾದಕ್ಕೆ ಅಧಿಕಾರಿಗಳು, ಸದಾ ತಂದೆಯ ಸಮಾನ ಡಬಲ್ಲೈಟ್ ಇರುವಂತಹ, ಸದಾ ನಿರಂತರ ಶಕ್ತಿಶಾಲಿ ನೆನಪಿನ ಲಿಂಕ್ನ್ನು ಜೋಡಿಸುವಂತಹ, ಸದಾ ಶರೀರ ಮತ್ತು ಆತ್ಮನನ್ನು ರಿಫ್ರೆಷ್ ಆಗಿಟ್ಟುಕೊಳ್ಳುವಂತಹ, ಪ್ರತೀ ಕರ್ಮವನ್ನು ವಿಧಿಪೂರ್ವಕವಾಗಿ ಮಾಡುವಂತಹ, ಸದಾ ಶ್ರೇಷ್ಠ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಶ್ರೇಷ್ಠ, ಸಮೀಪ ಮಕ್ಕಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ವರದಾನ:-
ಯಾರು ಸದಾ ತನ್ನ ಶ್ರೇಷ್ಠ ಭಾಗ್ಯವನ್ನು ಸ್ಮೃತಿಯಲ್ಲಿ ಇಟ್ಟುಕೊಳ್ಳುತ್ತಾರೆಯೋ ಅವರು ಸಮರ್ಥ ಸ್ವರೂಪದಲ್ಲಿರುತ್ತಾರೆ. ಅವರು ಸದಾ ತನ್ನ ಅನಾದಿ ಸತ್ಯ ಸ್ವರೂಪವು ಸ್ಮೃತಿಯಲ್ಲಿರುತ್ತದೆ. ಕೆಲವೊಮ್ಮೆಗೂ ನಕಲಿ ಚಹರೆಯನ್ನು ಧಾರಣೆ ಮಾಡಿಕೊಳ್ಳುವುದಿಲ್ಲ. ಕೆಲವೊಮ್ಮೆ ಮಾಯೆಯು ನಕಲಿ ಗುಣ ಮತ್ತು ಕರ್ತವ್ಯದ ಸ್ವರೂಪವನ್ನಾಗಿ ಮಾಡಿ ಬಿಡುತ್ತದೆ. ಕೆಲವರನ್ನು ಕ್ರೋಧಿಯನ್ನಾಗಿ, ಕೆಲವರನ್ನು ಲೋಭಿ, ಕೆಲವರನ್ನು ದುಃಖಿ, ಕೆಲವರನ್ನು ಅಶಾಂತರನ್ನಾಗಿ ಮಾಡಿಬಿಡುತ್ತದೆ ಆದರೆ ಸತ್ಯ ಸ್ವರೂಪವು ಇವೆಲ್ಲಾ ಮಾತುಗಳಿಂದ ಆಚೆಯಿರುತ್ತದೆ. ಯಾವ ಮಕ್ಕಳು ತನ್ನ ಸತ್ಯ ಸ್ವರೂಪದಲ್ಲಿ ಸ್ಥಿತರಾಗಿರುತ್ತಾರೆಯೋ ಅವರು ಸೂರ್ಯವಂಶಿ ಪದವಿಯ ಅಧಿಕಾರಿಯನ್ನಾಗಿ ಮಾಡಿ ಬಿಡುತ್ತದೆ.
ಸ್ಲೋಗನ್:-
➤ Email me Murli: Receive Daily Murli on your email. Subscribe!