25 January 2022 KANNADA Murli Today | Brahma Kumaris

Read and Listen today’s Gyan Murli in Kannada

January 25, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಇದು ನಿಮ್ಮ ವಾನಪ್ರಸ್ಥ ಸ್ಥಿತಿಯಾಗಿದೆ, ಆದುದರಿಂದ ಒಬ್ಬ ತಂದೆಯನ್ನು ನೆನಪು ಮಾಡಬೇಕು. ನಿರ್ವಾಣಧಾಮಕ್ಕೆ ತಯಾರಿ ಮಾಡಿಕೊಳ್ಳಬೇಕು”

ಪ್ರಶ್ನೆ:: -

ತಂದೆಯಲ್ಲಿ ಯಾವ ಮಾತಿನ ಭೇದವಿಲ್ಲ?

ಉತ್ತರ:-

ತಂದೆಯಲ್ಲಿ ಬಡವ ಶ್ರೀಮಂತವೆಂಬ ಭೇದವಿಲ್ಲ. ಪ್ರತಿಯೊಬ್ಬರೂ ತಮ್ಮ ಪುರುಷಾರ್ಥದಿಂದ ಶ್ರೇಷ್ಠ ಪದವಿಯನ್ನು ಪಡೆಯಲು ಅಧಿಕಾರವಿದೆ. ಮುಂಬರುತ್ತಾ ಪ್ರತಿಯೊಬ್ಬರಿಗೂ ತಮ್ಮ ಪದವಿಯ ಸಾಕ್ಷಾತ್ಕಾರವಾಗುತ್ತದೆ. ತಂದೆ ತಿಳಿಸುತ್ತಾರೆ – ನಾನು ಬಡವರ ಬಂಧು ವಾಗಿದ್ದೇನೆ. ಆದುದರಿಂದ ಈಗ ಎಲ್ಲಾ ಬಡ ಮಕ್ಕಳ ಸರ್ವ ಆಸೆಗಳು ಪೂರ್ಣವಾಗುತ್ತವೆ. ಇದು ಅಂತಿಮ ಸಮಯವಾಗಿದೆ. ಕೆಲವರದ್ದು ಮಣ್ಣು ಪಾಲಾಗುತ್ತದೆ……… ಯಾರು ತಂದೆಗೆ ಇನ್ಶೂರ್ ಮಾಡುತ್ತಾರೆ, ಅವರದು ಸಫಲವಾಗುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಕೊನೆಗೂ ಆ ದಿನ ಬಂದೇ ಬಿಟ್ಟಿದ್ದು………

ಓಂ ಶಾಂತಿ. ಇದರ ಅರ್ಥ ಬಹಳ ಸರಳವಾಗಿದೆ. ಪ್ರತಿಯೊಂದು ಮಾತನ್ನು ಸೆಕಂಡಿನಲ್ಲಿ ತಿಳಿದುಕೊಳ್ಳಬಹುದು. ಸೆಕೆಂಡಿನಲ್ಲಿ ತಂದೆಯಿಂದ ಆಸ್ತಿ ತೆಗೆದುಕೊಳ್ಳಬೇಕು. ಬೇಹದ್ದಿನ ತಂದೆ ಬಂದು ಬಿಟ್ಟಿದ್ದಾರೆಂದು ಮಕ್ಕಳು ತಿಳಿದುಕೊಂಡಿದ್ದಾರೆ. ಆದರೆ ಕೆಲವು ಮಕ್ಕಳಲ್ಲಿ ಸದಾ ಈ ನಿಶ್ಚಯ ಇರುವುದಿಲ್ಲ. ಲೌಕಿಕ ಸಂಬಂಧದಲ್ಲಿ ತಾಯಿಗೆ ಮಗುವಾದಾಗ ತಕ್ಷಣ ಈ ಮಾತನ್ನು ತಿಳಿದುಕೊಳುತ್ತದೆ – ಇವರು ಜನ್ಮ ಕೊಟ್ಟು ಪಾಲನೆ ಮಾಡುವವರು ಆಗಿದ್ದಾರೆ. ಇಲ್ಲಿಯೂ ಸಹ ತಕ್ಷಣ ತಿಳಿದುಕೊಳ್ಳಬೇಕಲ್ಲವೆ. ಭಕ್ತಿಯ ನಂತರ ಭಗವಂತ ಬರುತ್ತಾರೆಂದು ಮಕ್ಕಳಾದ ನಿಮಗೆ ಗೊತ್ತಿದೆ. ಈ ಭಕ್ತಿ ಎಷ್ಟು ಸಮಯದ ವರೆಗೆ ನಡೆಯುತ್ತದೆ, ಯಾವಾಗ ಪ್ರಾರಂಭವಾಗುತ್ತದೆ – ನೀವು ಮಕ್ಕಳ ವಿನಃ ಪ್ರಪಂಚದವರು ಬೇರೆ ಯಾರೂ ಸಹ ತಿಳಿದುಕೊಂಡಿಲ್ಲ. ಭಕ್ತಿ ಯಾವಾಗ ಪ್ರಾರಂಭವಾಯಿತೆಂದು ನೀವು ತಿಳಿಸಬಹುದು. ಮನುಷ್ಯರು ಪರಂಪರೆಯಿಂದ ನಡೆಯುತ್ತಾ ಬಂದಿದೆ ಯೆಂದು ತಿಳಿಯುತ್ತಾರೆ. ಜ್ಞಾನ ಹಾಗೂ ಭಕ್ತಿ-ಈ ಎರಡು ವಸ್ತುಗಳು ಅವಶ್ಯಕವಾಗಿ ಇರುತ್ತವೆ. ಇದು ಅನಾದಿಯಾಗಿ ನಡೆದು ಬರುತ್ತದೆಂದು ತಿಳಿಸುತ್ತಾರೆ. ಆದರೆ ಅನಾದಿಯ ಅರ್ಥವನ್ನು ತಿಳಿದುಕೊಂಡಿಲ್ಲ. ಈ ನಾಟಕದ ಚಕ್ರವು ಅನಾದಿ ಕಾಲದಿಂದ ಸುತ್ತುತ್ತಿದೆ. ಅದಕ್ಕೆ ಆದಿ ಅಂತ್ಯವಿಲ್ಲ, ಈ ರೀತಿ ಅಸತ್ಯವನ್ನು ಹೇಳುತ್ತಿರುತ್ತಾರೆ. ಒಮ್ಮೊಮ್ಮೆ ಇಷ್ಟೊಂದು ವರ್ಷವಾಯಿತು? ಒಮ್ಮೊಮ್ಮೆ ಇಷ್ಟು ವರ್ಷವಾಯಿತು? ಎಂದು ಹೇಳುತ್ತಾರೆ. ತಂದೆ ಬಂದು ಎಲ್ಲವನ್ನು ಸಿದ್ದಾಮಾಡಿ ತಿಳಿಸುತ್ತಾರೆ. ಶಾಸ್ತ್ರ ಮುಂತಾದವುಗಳನ್ನು ಓದುವುದರಿಂದ ಯಾರೂ ಸಹ ತಂದೆಯನ್ನು ಪ್ರಾಪ್ತಿ ಮಾಡಿಕೊಳ್ಳುವುದಿಲ್ಲ. ಒಂದು ಸೆಕೆಂಡಿನಲ್ಲಿ ತಂದೆ ಪ್ರಾಪ್ತಿಯಾಗುತ್ತಾರೆ. ಸೆಕೆಂಡಿನಲ್ಲಿ ಜೀವನ್ಮುಕ್ತಿ……. ತಂದೆ ಯಾವಾಗ ಬರುತ್ತಾರೆಂದು ಯಾರಿಗೂ ಗೊತ್ತಿಲ್ಲ. ಕಲ್ಪವನ್ನು ದೀರ್ಘವಾಗಿ ತೋರಿಸಿದ್ದಾರೆ. ಈಗ ತಂದೆ ಹಾಗೂ ಮಕ್ಕಳು ಎಲ್ಲವನ್ನೂ ತಿಳಿದುಕೊಂಡಿದ್ದೀರಿ. ಆದರೆ ಹತ್ತು-ಇಪ್ಪತ್ತು ವರ್ಷಗಳಾದರು ಪೂರ್ತಿ ಕೆಲವರಿಗೆ ನಿಶ್ಚಯವಾಗುವುದಿಲ್ಲ-ಇದು ಆಶ್ಚರ್ಯದ ಮಾತಾಗಿದೆ. ನಿಶ್ಚಯವಾದ ನಂತರ ಎಂದಿಗೂ ಇವರ ನನ್ನ ತಂದೆಯಲ್ಲ ಎಂದು ಹೇಳುವುದಿಲ್ಲ. ತುಂಬಾ ಸಹಜವೇ ಆಗಿದೆ. ನಿಮಗಂತೂ ತಂದೆಗೆ ಮಗುವಾಗುವಲ್ಲಿ ತುಂಬಾ ಸಮಯಬೇಕಾಯಿತು. ಹತ್ತು-ಇಪ್ಪತ್ತು ವರ್ಷಗಳಾದರು ನಿಶ್ಚಯವಾಗಿಲ್ಲ. ಈಗ ನೀವು ಯಾರಿಗಾದರು ಪರಿಚಯ ಕೊಡುವಾಗ ಒಂದು ಸೆಕೆಂಡಿನಲ್ಲಿ ನಿಶ್ಚಯವಾಗಿ ಬಿಡುತ್ತದೆ. ಜನಕನ ಮಾತೂ ಸಹ ಅಂತಿಮ ಸಮಯದ್ದಾಗಿದೆ. ಏಕೆಂದರೆ ದಿನ ಪ್ರತಿದಿನ ಬಹಳ ಸಹಜವಾಗುತ್ತದೆ. ಇಂತಹ ಒಳ್ಳೊಳ್ಳೆಯ ಜ್ಞಾನದ ಮಾತುಗಳನ್ನು ಯಾರಿಗಾದರು ತಿಳಿಸಿದಾಗ ನಿಶ್ಚಯವಾಗಿ ಬಿಡಬೇಕು.

ತಂದೆ ತಿಳಿಸುತ್ತಾರೆ – ಮಕ್ಕಳೇ ಅಶರೀರಿ ಭವ. ಅನೇಕ ದೇಹದ ಧರ್ಮಗಳನ್ನು ಬಿಡಬೇಕು. ಒಂದೇ ಧರ್ಮ ಇತ್ತಲ್ಲವೇ. ಒಂದೇ ಧರ್ಮದಿಂದ ವೃದ್ದಿ ಆಗುತ್ತದೇಯಲ್ಲವೇ. ಇದು ಭಿನ್ನತೆಯುಳ್ಳ ಮನುಷ್ಯ ಸೃಷ್ಟಿಯ ವೃಕ್ಷ, ಇದು ಮನುಷ್ಯರ ಮಾತಾಗಿದೆ. ಅನೇಕ ಧರ್ಮಗಳ ವೃಕ್ಷವನ್ನು ತಿಳಿದುಕೊಳ್ಳಬೇಕು. ಧರ್ಮಗಳ ಸಮ್ಮೇಳನ ನಡೆಯುತ್ತದೆ. ಆದರೆ ಅವರಿಗೆ ಮೊಟ್ಟ ಮೊದಲನೆ ಪೂಜ್ಯ ಧರ್ಮ ಯಾವುದೆಂದು ಗೊತ್ತಿಲ್ಲ. ಬುದ್ದಿಯಲ್ಲಿ ಬರಬೇಕಲ್ಲವೆ. ಭಾರತ ಪ್ರಾಚೀನ ಧರ್ಮವುಳ್ಳದ್ದಾದರೆ ಅವಶ್ಯಕವಾಗಿ ಪ್ರಾಚೀನ ಧರ್ಮವನ್ನು ಪರಮಪಿತ ಪರಮಾತ್ಮನೇ ರಚಿಸಿರಬೇಕು. ಭಾರತದಲ್ಲಿಯೇ ಶಿವ ಜಯಂತಿಯ ಪ್ರತಿಯಾಗಿ ಗಾಯನವಿದೆ. ಅನೇಕಾನೇಕ ಮಂದಿರಗಳಿವೆ… ನಿರ್ವಾಣಧಾಮ ಎಲ್ಲಕ್ಕಿಂತಲು ಅತಿ ದೊಡ್ಡ ಮಂದಿರವಾಗಿದೆ. ಅಲ್ಲಿ ನಾವು ಆತ್ಮಗಳು ಸಹ ತಂದೆ ಜೊತೆ ಇರುತ್ತೇವೆ. ಮಂದಿರವು ವಿಶಾಲ ಸ್ಥಾನದಲ್ಲಿರುತ್ತದೆ. ಹಾಗೆಯೇ ಬ್ರಹ್ಮಾತತ್ವವೂ ಸಹ ಎಷ್ಟೊಂದು ದೊಡ್ಡ ಮಂದಿರವಾಗಿದೆ. ಈಗ ನಿಮ್ಮ ಬುದ್ದಿಯಲ್ಲಿ ಬರಬೇಕಾಗಿದೆ-ಬ್ರಹ್ಮ ಮಹಾತತ್ವ ಎಲ್ಲಕ್ಕಿಂತ ಸರ್ವಶ್ರೇಷ್ಠ ಮಂದಿರವಾಗಿದೆ. ಅಲ್ಲಿ ನಾವೆಲ್ಲರು ಇರುತ್ತೇವೆ. ಅಲ್ಲಿ ಹಗಲು-ರಾತ್ರಿಗಳಾಗದ ಕಾರಣ ಸೂರ್ಯ-ಚಂದ್ರ ಅಲ್ಲಿ ಇರುವುದಿಲ್ಲ. ನಿರ್ವಾಣಧಾಮ ನಮ್ಮೆಲ್ಲರ ಮೂಲತಃ ಆತ್ಮಿಕ ಮಂದಿರವಾಗಿದೆ. ಅದು ಶಿವಾಲಯವಾಗಿದೆ, ಅಲ್ಲಿ ಶಿವ ತಂದೆಯ ಜೊತೆಯಲ್ಲಿ ನಾವು ಇರುತ್ತೇವೆ. ನಾನು ಸಹ ಆ ಶಿವಾಲಯದಲ್ಲಿಯೇ ಇರುತ್ತೀರೆಂದು ಶಿವ ತಂದೆ ತಿಳಿಸುತ್ತಾರೆ. ಇದು ಬೇಹದ್ದಿನ ಶಿವಾಲಯವಾಗಿದೆ. ಶಿವನ ಮಕ್ಕಳಾದ ನೀವು ಅಲ್ಲಿ ಇರುತ್ತೀರಿ. ಅದು ನಿರಾಕಾರಿ ಶಿವಾಲಯವಾಗಿದೆ ಮತ್ತೆ ನಾನು ಸಾಕಾರದಲ್ಲಿ ಬರುತ್ತೇನೆ ಆಗ ನಾನಿರಲು ಮಂದಿರ ಮಾಡುತ್ತಾರೆ. ಈಗ ಶಿವ ತಂದೆಯು ಇಲ್ಲಿಯೇ ಇದ್ದಾರೆ, ಈ ಶರೀರದಲ್ಲಿ ಕುಳಿತುಕೊಂಡಿದ್ದಾರೆ. ಇದು ಚೈತನ್ಯ ಶಿವಾಲಯವಾಗಿದೆ, ಇವರೊಂದಿಗೆ ನೀವು ಮಾತು ಕಥೆ ಆಡಬಹುದು. ಆ ನಿರ್ವಾಣ ಧಾಮವು ಶಿವ ತಂದೆಯ ಶಿವಾಲಯವಾಗಿದೆ. ಅಲ್ಲಿ ನಾವು ಆತ್ಮಗಳಿರುತ್ತೇವೆ. ಆ ಮನೆಯನ್ನು ಎಲ್ಲರು ನೆನಪು ಮಾಡುತ್ತಾರೆ. ಅಲ್ಲಿಂದ ನಾವು ಪಾತ್ರ ಮಾಡಲು ಬರುತ್ತೇವೆ. ಸತೋ-ರಜೋ-ತಮೋನಲ್ಲಿ ಪ್ರತಿಯೊಬ್ಬರು ಬರಬೇಕಾಗುತ್ತದೆ. ಆತ್ಮಗಳಲ್ಲೆರಿಗೂ ತಮ್ಮ-ತಮ್ಮ ಅನಾದಿ ಪಾತ್ರ ದೊರೆತಿದೆ, ಅದಕ್ಕೆ ಆದಿ ಅಂತ್ಯವಿಲ್ಲ….. ಈ ಮಾತುಗಳು ಪ್ರಪಂಚದವರ ಬುದ್ದಿಯಲ್ಲಿ ಬರುವುದಿಲ್ಲ. ನಾವು ಮೂಲತಃ ಶಿವಾಲಯದಲ್ಲಿದ್ದಂತಹವರೆಂದು ಗೊತ್ತಿದೆ. ಶಿವ ತಂದೆಯು ಸ್ಥಾಪನೆ ಮಾಡುವ ಸ್ವರ್ಗವು ಸಹ ಶಿವಾಲಯವಾಗಿದೆ. ಅದು ಶಿವ ತಂದೆಯು ಸ್ಥಾಪನೆ ಮಾಡಿರುವಂತಹ ಸ್ವರ್ಗವಾಗಿದೆ. ಅಲ್ಲಿ ನಾವು ಮಕ್ಕಳಿರುತ್ತೇವೆ. ಅವರಿಗೆ ಈ ರಾಜ್ಯ ಭಾಗ್ಯ ಹೇಗೆ ಪ್ರಾಪ್ತಿಯಾಯಿತು! ಅದಾಗಿದೆ ಸತ್ಯಯುಗದ ಆದಿ, ಇದಾಗಿದೆ ಕಲಿಯುಗ ಅಂತ್ಯ. ಸತ್ಯಯುಗದಲ್ಲಿ ದೇವೀ ದೇವತೆಗಳನ್ನು ಸತ್ಯಯುಗದ ಮಾಲಿಕರನ್ನಾಗಿ ಯಾರು ಮಾಡಿದರು? ಇಲ್ಲಿಯೂ ಸಹ ಎಷ್ಟೊಂದು ಉತ್ತಮವಾದ ಖಂಡಗಳಿವೆ. ಅಮೇರಿಕ ಎಲ್ಲಕ್ಕಿಂತಲೂ ಅತ್ಯುತ್ತಮನಾದ ಖಂಡವಾಗಿದೆ. ತುಂಬಾ ಧನಾಡ್ಯ ಹಾಗೂ ಶಕ್ಯಿಶಾಲಿ ಖಂಡವಾಗಿದೆ. ಈ ಸಮಯದಲ್ಲಿ ಎಲಕ್ಕಿಂತ ಎತ್ತರದಲ್ಲಿದೆ. ಬೃಹಸ್ಪತಿ ದಶೆಯಲ್ಲಿ ಕುಳಿತಿದೆ. ಆದರೆ ಅದರ ಜೊತೆ ಜೊತೆ ರಾಹು ದಶೆಯು ಕುಳಿತಿದೆ. ಈ ಸಮಯದಲ್ಲಿ ಎಲ್ಲರ ಮೇಲೆ ರಾಹು ದಶೆ ಕುಳಿತಿದೆ. ಎಲ್ಲರ ವಿನಾಶವಂತೂ ಆಗಬೇಕು. ಭಾರತ ಎಲ್ಲಕ್ಕಿಂತ ಶ್ರೀಮಂತವಾಗಿತ್ತು. ಈಗ ಬಡತನವುಳ್ಳ ಭಾರತವಾಗಿದೆ. ಇದೆಲ್ಲವು ಮಾಯೆಯ ಆಡಂಬರವಾಗಿದೆ. ಮಾಯೆಯ ಪ್ರಭಾವ ತುಂಬಾ ಇರುವ ಕಾರಣ ಮನುಷ್ಯರು ಸ್ವರ್ಗವೆಂದು ತಿಳಿದುಕೊಂಡಿದ್ದಾರೆ. ಯೋಜನೆಗಳನ್ನು ಮಾಡುತ್ತಿರುತ್ತಾರೆ, ಆದರೆ ನಾವೊಂದು ಭಗೆದರೆ ದೈವವೊಂದು ಭಗೆಯಿತು ಎಂದು ಹೇಳುತ್ತಾರೆ…… ಮನುಷ್ಯರು ಎಷ್ಟೊಂದು ಚಿಂತೆಯಲ್ಲಿ ಮುಳಿಗಿದ್ದಾರೆ. ಎಲ್ಲರ ಮುಂದೆ ಮೃತ್ಯು ನಿಂತಿದೆ. ಎಲ್ಲರ ಕೊರಳಿನಲ್ಲಿ ಮೃತ್ಯುವಿನ ಪಾಸಿ ಇದೆ. ನೀವೂ ಸಹ ಆ ಮೃತ್ಯುವಿನ ಹಿಡಿತದಲಿದ್ದೀರಿ. ನಿಮ್ಮ ಬುದ್ದಿ ಹೊಸ ಪ್ರಪಂಚದಲ್ಲಿದೆ. ಈಗ ಎಲ್ಲರು ವಾನಪ್ರಸ್ಥ ಸ್ಥಿತಿಯಲ್ಲಿ ಹೋಗುವ ಸಮಯವಾಗಿದೆ. ಆದುದರಿಂದ ತಂದೆ ತಿಳಿಸುತ್ತಾರೆ – ಈಗ ನನ್ನನ್ನು ನೆನಪು ಮಾಡಿ. ತಂದೆ ಸ್ವಯಂ ನಿಮಗೆ ಆದೇಶವನ್ನು ಕೊಡುತ್ತಿದ್ದೇನೆ-ನಿಮ್ಮೆಲ್ಲರ ವಾನಪ್ರಸ್ಥ ಸ್ಥಿತಿಯಾಗಿದೆ, ನಾನು ಎಲ್ಲರನ್ನು ಕರೆದೊಯ್ಯಲು ಬಂದಿದ್ದೇನೆ. ಸೊಳ್ಳೆಗಳೋಪಾದಿ ನೀವೆಲ್ಲರು ಹೋಗಬೇಕಾಗುತ್ತದೆ. 84 ಜನ್ಮಗಳ ಚಕ್ರ ಪೂರ್ಣ ವಾಯಿತು ಈಗ ಬದುಕಿದ್ದು ನನ್ನನ್ನು ನೆನಪು ಮಾಡಿ. ನಾವು ಎಲ್ಲರು ಬದುಕಿದ್ದು ಸ್ವರ್ಗದಲ್ಲಿ ಹೊರಡುವ ಸಲುವಾಗಿ ತಯರಾಗಿ ಕುಳಿತಿದ್ದೇವೆ. ಬೇರೆ ಯಾರು ಸಹ ಸ್ವರ್ಗದಲ್ಲಿ ಹೋಗಲು ತಯಾರಾಗುವುದಿಲ್ಲ. ಒಂದುವೇಳೆ ಸ್ವರ್ಗದಲ್ಲಿ ಹೋಗುವ ಖುಷಿಯಿದ್ದರೆ ಆರೋಗ್ಯವಿಲ್ಲದ ಸಮಯದಲ್ಲಿ ಔಷಧಿ ಮೊದಲಾದುಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಆ ಸ್ವರ್ಗದಲ್ಲಂತೂ ನಾವು ಹೋಗುವುದಿಲ್ಲವೆಂದು ನಮಗೆ ಗೊತ್ತಿದೆ. ಮೊದಲು ನಾವು ಸ್ವೀಟ್ ಹೋಮ್ ಗೆ ಹೋಗುತ್ತಿದ್ದೇವೆ. ಅದು ಪರಮಪಿತ ಪರಮಾತ್ಮನ ಮನೆ ಅಥವಾ ಆತ್ಮಿಕ ಶಿವಾಲಯವಾಗಿದೆ. ಆಮೇಲೆ ಸ್ವರ್ಗವನ್ನು ಭೌತಿಕ (ಜಿಸ್ಮಾನಿ) ಶಿವಾಲಯವೆಂದು ಕರೆಯಲಾಗುತ್ತದೆ. ಆ ಸ್ವರ್ಗದಲ್ಲಿ ಹೊರಡಲು ನಾವು ಪುರುಷಾರ್ಥ ಮಾಡುತ್ತಿದ್ದೇವೆ. ಬ್ರಹ್ಮನ ಹಗಲು ಹಾಗೂ ಬ್ರಹ್ಮನ ರಾತ್ರಿ ಪ್ರಖ್ಯಾತವಾಗಿದೆ ಎಂದು ತಂದೆ ತಿಳಿಸಿದ್ದಾರೆ. ಯಾವಾಗ ರಾತ್ರಿ ಮುಗಿಯುತ್ತದೆ ಆಗ ನಾನು ಬರುತ್ತೇನೆ. ಲಕ್ಷ್ಮೀ-ನಾರಾಯಣರಿಗೆ ಹಗಲು ಹಾಗು ರಾತ್ರಿ ಎಂದು ಹೇಳುವುದಿಲ್ಲ. ಅವರೂ ಸಹ ಅದೇ ಆಗಿರುವುದು (ಬ್ರಹ್ಮಾ ಸೊ ವಿಷ್ಣು) ಆದರೇ ಬ್ರಹ್ಮನಿಗೆ ಹಗಲು ಹಾಗೂ ರಾತ್ರಿಯ ಜ್ಞಾನವಿದೆ. ಅಲ್ಲಿ ಲಕ್ಷ್ಮೀ-ನಾರಾಯಣರಿಗೆ ಈ ಜ್ಞಾನವಿರುವುದಿಲ್ಲ. ಆದುದರಿಂದ ಬ್ರಹ್ಮಾ ಹಾಗು ಬ್ರಾಹ್ಮಣ ಬ್ರಾಹ್ಮಣಿಯರು ತಿಳಿದುಕೊಂಡಿದ್ದೀರ ಶಿವನ ರಾತ್ರಿ ಯಾವಾಗ ನಡೆಯುತ್ತದೆ. ಪ್ರಪಂಚದವರು ಈ ಮಾತುಗಳನ್ನು ತಿಳಿದುಕೊಂಡಿಲ್ಲ. ಶಿವ ನಿರಾಕಾರ ಆಗಿದ್ದಾರೆ. ಅವರು ಹೇಗೆ ಬರುತ್ತಾರೆಂದು ನೀವು ಕೇಳಬೇಕು. ಶಿವ ಜಯಂತಿಯಂದು ನೀವು ತುಂಬಾ ಸೇವೆ ಮಾಡಬಹುದು. ರಾಜಧಾನಿ ಸ್ಥಾಪನೆಯಾಗುತ್ತದೆ. ಈಗ ತುಂಬಾ ಚಿಕ್ಕ ವೃಕ್ಷವಾಗಿದೆ ಹಾಗು ಈ ವೃಕ್ಷಕ್ಕೆ ಬಿರುಗಾಳಿಯು ಬರುತ್ತದೆ, ಉಳಿದ ವೃಕ್ಷಗಳಿಗೆ ಇಷ್ಟೊಂದು ಬಿರುಗಾಳಿ ಬರುವುದಿಲ್ಲ. ದೈವೀ ವೃಕ್ಷಕ್ಕೆ ಒಂದರ ಹಿಂದೆ ಮತ್ತೊಂದು ಬರುತ್ತಲೇ ಇರುತ್ತದೆ. ಇದು ನಿಮ್ಮ ಹೊಸ ಜನ್ಮವಾಗಿದೆ. ಮಾಯೆಯ ಬಿರುಗಾಳಿಯು ಮುಂದೆ ನಿಂತಿದೆ ಹಾಗು ಕೆಲವರು ಬಿರುಗಾಳಿವನ್ನು ಎದುರಿಸುವ ಹಾಗಿಲ್ಲ. ಇಲಿ ಧರ್ಮ ಸ್ಥಾಪನೆಯಲ್ಲಿ ಮಾಯೆಯ ಬಿರುಗಾಳಿ ಬರುತ್ತವೆ. ಇದು ಅತಿ ಶ್ರೇಷ್ಠ ಗುರಿಯಾಗಿದೆ. ವಿಶ್ವದ ಮಹಾರಾಜನಾಗುವುದು ಹೊಸ ಮಾತೇನಲ್ಲ. ಅನೇಕ ಬಾರಿ ನೀವು ಈ ಬಿರುಗಾಳಿಯನ್ನು ಎದುರಿಸಿ ತಮ್ಮ ರಾಜ್ಯ ಭಾಗ್ಯವನ್ನು ತೆಗೆದುಕೊಂಡಿದ್ದೀರಿ. ಯಾರು ಎಂತಹ ಪುರುಷಾರ್ಥ ಮಾಡುತ್ತಾರೆ, ಅವರಿಗೆ ಸಾಕ್ಷಾತ್ಕಾರವಾಗುತ್ತಾ ಹೋಗುತ್ತದೆ. ಎಷ್ಟೆಷ್ಟು ಮುಂದೆ ಹೋಗುವಿರಿ, ಯಾರು ಎಂತಹ ಪದವಿಯನ್ನು ಪಡೆಯುತ್ತಾರೆಂದು ನಿಮಗೆ ಸಾಕ್ಷಾತ್ಕಾರವಾಗುತ್ತದೆ ಇವರು ಎಂತಹ ಪುರುಷಾರ್ಥ ಮಾಡುತ್ತಿದ್ದಾರೆಂದು ತಿಳಿಯುತ್ತದೆ. ಇಲ್ಲಿ ಬಡವ ಶ್ರೀಮಂತರ ಮಾತಿಲ್ಲ. ಗೀತೆಯನ್ನು ಕೇಳಿದಿರಿ – ಕೊನೆಗೂ ಆ ದಿನ ಬಂದು ಬಿಟ್ಟಿತು… ಬಡವರ ಬಂಧು ತಂದೆ ಬಂದಿದ್ದಾರೆ. ತಂದೆ ತಿಳಿಸುತ್ತಾರೆ ನಾನು ಯಾವುದೇ ಶ್ರೀಮಂತರನ್ನು ಜ್ಞಾನ ಧನ ಕೊಟ್ಟು ಶ್ರೀಮಂತರನ್ನಾಗಿ ಮಾಡುವುದಿಲ್ಲ. ಅವರು ಶ್ರೀಮಂತರೇ ಆಗಿದ್ದಾರೆ. ಅವರಿಗೆ ಇದೇ ಸ್ವರ್ಗವಾಗಿದೆ. ಈಗ ಬಹಳ ಕೋಟ್ಯಾದೀಶ್ವರರು ಇದ್ದಾರೆ, ಮೊದಲು ಕಷ್ಟಪಟ್ಟು ಕೋಟ್ಯಾದೀಶ್ವರ ಆಗಬೇಕಿತ್ತು. ಈಗಂತೂ ಕೋಟಿ ಗಟ್ಟಲೇ ಹಣ ಮನುಷ್ಯರ ಬಳಿ ಹೇರಳವಾಗಿದೆ. ಆದರೆ ಯಾವ ಕೆಲಸಕ್ಕು ಬರುವುದಿಲ್ಲ. ಹೊಟ್ಟೆ ಜಾಸ್ತಿ ತಿನ್ನುವುದೇನು. ಮೋಸದಿಂದ ಹಣ ಸೇರಿಸುವವರಿಗೆ ನಿದ್ರೆಯೂ ಸಹ ಬಾರದಿರಬೇಕು. ಗೊತ್ತಿಲ್ಲ ಸರ್ಕಾರದ ಕಣ್ಣು ಬಿದ್ದು ಬಿಟ್ಟರೆ ಎಂಬ ಭಯವಿರುತ್ತದೆ! ತಂದೆ ತಿಳಿಸುತ್ತಾರೆ-ನೆನಪಿಟ್ಟುಕೊಳ್ಳಿ-ಇದು ಅಂತಿಮ ಸಮಯವಾಗಿದೆ. ಈಗ ಕೆಲವರ ಹಣ ಮಣ್ಣು ಪಾಲಾಗುತ್ತದೆ….. ಈಶ್ವರ ಧಣಿಯ ಹೆಸರಿನಲ್ಲಿ ಖರ್ಚು ಮಾಡಿದವರ ಹಣ ಸಫಲವಾಗುತ್ತದೆ. ಧಣಿಯಂತು ಈಗ ಸ್ವರ್ಗದ ಮಾಲಿಕರನ್ನಾಗಿ ಮಾಡುತ್ತಿದ್ದಾರೆ. ಈಗ ತಾವು ತಂದೆಯ ಬಳಿ ಇನ್ಶ್ಯೂರ್ ಮಾಡಿಕೊಳ್ಳಿ. ಮೃತ್ಯು ಮುಂದೆ ನಿಂತಿದೆ. ನಿಮ್ಮೆಲ್ಲಾ ಆಸೆಗಳು ಈಗ ಪೂರ್ಣವಾಗುತ್ತವೆ. ಬಾಬಾ ಬಡವರನ್ನೇ ಉದ್ಧಾರ ಮಾಡುತ್ತಾರೆ. ಶ್ರೀಮಂತರ ಒಂದು ಸಾವಿರ, ಬಡವರ ಒಂದು ರೂಪಾಯಿಗೆ ಸಮಾನ. ಹಾಗೆ ನೋಡಿದರೆ ಬಡವರೇ ಬರುತ್ತಾರೆ. ಕೆಲವರಿಗೆ ನೂರು ರೂಪಾಯಿ ಸಂಬಳ ಕೆಲವರಿಗೆ ನೂರೈವತ್ತು. . ಪ್ರಪಂಚದ ಮನುಷ್ಯರ ಬಳಿ ಕೋಟ್ಯಾಂತರ ರೂಪಾಯಿದೆ, ಅವರಿಗೆ ಇದೇ ಸ್ವರ್ಗವಾಗಿದೆ. ಅವರೆಂದಿಗೂ ಜ್ಞಾನಕ್ಕೆ ಬರುವುದಿಲ್ಲ. ತಂದೆಗೂ ಸಹ ಅವಶ್ಯಕತೆ ಇಲ್ಲ. ತಂದೆ ತಿಳಿಸುತ್ತಾರೆ ನೀವು ಮನೆ ಮುಂತಾದುಗಳನ್ನು ಮಾಡಿ ಸೇವಾಕೇಂದ್ರ ತೆರಿಯಿರಿ. ಹಣವನ್ನು ನಾವು ಸಹ ಏನು ಮಾಡುತ್ತೇವೆ? ಸನ್ಯಾಸಿಗಳಂತು ತುಂಬಾ ಪ್ಲಾಟ್ಸ್ ಮೊದಲಾದುಗಳನ್ನು ಮಾಡುತ್ತಾರೆ, ಅವರ ಬಳಿ ತುಂಬಾ ಸಂಪತ್ತು ಇದೆ. ಇದು ಅನುಭವೀ ರಥವಾಗಿದೆ. ಈಗ ನಾನು ಬಂದಿದ್ದಾನೆ ಬಡವರನ್ನು ಶ್ರೀಮಂತರನ್ನಾಗಿ ಮಾಡಲು. ಈಗ ನೀವು ಧ್ಯೆರ್ಯವಾಗಿರಬೇಕು. ಕೋಟ್ಯಾಧೀಶ್ವರ ಹಣ ಯಾವ ಕೆಲಸಕ್ಕು ಬರವುದಿಲ್ಲ. ಇಲ್ಲಿ ಹಣದ ಮಾತೇ ಇಲ್ಲ. ಕೇವಲ ತಂದೆ ತಿಳಿಸುತ್ತಾರೆ ಮನ್ಮನಾಭವ. ಖರ್ಚಿನ ಮಾತೇನಿಲ್ಲ. ಈ ಮನೆಗಳನ್ನು ಸಹ ತುಂಬಾ ಸರಳವಾಗಿ ನೀವು ಅಂತ್ಯದಲ್ಲಿ ಉಳಿಯಲು ಮಾಡಲಾಗಿದೆ. ನಿಮ್ಮ ಜ್ಞಾಪಕಾರ್ಥವು ಇಲ್ಲಿ ನಿಂತಿದೆ. ಈಗ ಪುನಃ ಚೈತನ್ಯದಲ್ಲಿ ಸ್ಥಾಪನೆ ಮಾಡುತ್ತಿದ್ದೀರಿ. ಆಮೇಲೆ ಈ ಎಲ್ಲಾ ಜಡ ಜ್ಞಾಪಕಾರ್ಥಗಳು ಸಮಾಪ್ತಿಯಾಗಿ ಬಿಡುತ್ತವೆ. ನೀವು ಈ ರೀತಿ ಬರೆಯಬೇಕು-ಅಬು ಪರ್ವತಕ್ಕೆ ಬಂದು ಯಾರು ದಿಲ್ವಾಡ ಮಂದಿರವನ್ನು ನೋಡಿರುವುದಿಲ್ಲ ಹಾಗು ಅದರ ಉದ್ದೇಶವನ್ನು ತಿಳಿದುಕೊಳ್ಳಲಿಲ್ಲ ಅಂದರೆ ನೀವು ಏನನ್ನೂ ನೋಡಿಲ್ಲ ಎಂದು ಅರ್ಥ… ನಾವೇ ಚೈತನ್ಯದಲ್ಲಿ ಕುಳಿತಿದ್ದೇವೆಂದು ಹೇಳುತ್ತೀರಿ. ಈ ಜಡ ಚಿತ್ರಗಳ ರಹಸ್ಯವನ್ನು ತಿಳಿಸಬಹುದು. ಇದು ನಾವೇ ಆಗಿದ್ದೇವೆಂದು ಹೇಳುತ್ತೇವೆ. ನಮ್ಮ ಜಡ ಜ್ಞಾಪಕಾರ್ಥ ಮಾಡಲ್ಪಟ್ಟಿದೆ. ಇದು ವಂಡರ್ಫುಲ್ ಮಂದಿರವಾಗಿದೆ, ಆಶ್ಚರ್ಯವಾಗಿದೆಯಲ್ಲವೇ. ಮಮ್ಮಾ ಬಾಬಾ ಹಾಗು ಮಕ್ಕಳು ಚೈತನ್ಯದಲ್ಲಿ ಕುಳಿತಿದ್ದಾರೆ. ಅಲ್ಲಿ ಜಡ ಚಿತ್ರಗಳಿವೆ. ಮುಖ್ಯ ಶಿವನ ಮಂದಿರವಾಗಿದೆ. ಬ್ರಹ್ಮಾ, ಜಗದಂಬಾ ಹಾಗು ಲಕ್ಷ್ಮೀ ನಾರಾಯಣ. ತಂದೆ ಎಷ್ಟೊಂದು ಚೆನ್ನಾಗಿ ತಿಳಿಸುತ್ತಾರೆ. ನಂತರ ಇಂತಹ ತಂದೆಗೆ ಮಕ್ಕಳಾಗಿ ತಂದೆಯನ್ನು ಬಿಟ್ಟು ಬಿಡುತ್ತಾರೆ. ಇದು ಸಹ ಹೊಸ ಮಾತೇನಲ್ಲ. ತಂದೆಗೆ ಮಗುವಾಗಿ ಓಡಿ ಹೋಗುತ್ತಾರೆ. ಓಡಿ ಹೋದಂತವರ ಚಿತ್ರವನ್ನು ಸಹ ನಾವು ಇಡಬಹುದು. ಒಂದುವೇಳೆ ಪಕ್ಕಾ ನಿಶ್ಚಯವಿದ್ದರೆ ತಮ್ಮ ರಾಜ್ಯ ಭಾಗ್ಯದ ಚಿತ್ರವನ್ನು ಮಾಡಿಕೊಳ್ಳಿ, ನಾವು ಭವಿಷ್ಯದಲ್ಲಿ ಡಬಲ್ ಕಿರೀಟಧಾರಿ ಸ್ವರ್ಗದ ಮಾಲಿಕರಾಗುತ್ತೇವೆಂಬ ಸ್ಮೃತಿ ಇರುತ್ತದೆ. ಒಂದುವೇಳೆ ತಂದೆಯನ್ನು ಬಿಟ್ಟು ಹೋದರೆ ಕಿರೀಟವು ಉರುಳಿ ಬಿಡುತ್ತದೆ. ಇದು ತುಂಬಾ ತಿಳಿದುಕೊಳ್ಳುವ ವಂಡರ್ಫುಲ್ ಮಾತಾಗಿದೆ. ತಂದೆಯನ್ನು ನೆನಪು ಮಾಡಿ. ಅವರಿಂದ ಆಸ್ತಿ ಸಿಗುತ್ತದೆ. ಅದನ್ನೇ ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಕರೆಯಲಾಗುತ್ತದೆ. ಭವಿಷ್ಯಕ್ಕೊಸ್ಕರ ತಂದೆಯು ನಮ್ಮನ್ನು ಯೋಗ್ಯರನ್ನಾಗಿ ಮಾಡುತ್ತಿದ್ದಾರೆ. ಮನುಷ್ಯರು ಮುಂದಿನ ಜನ್ಮಕ್ಕೋಸ್ಕರ ದಾನ ಪುಣ್ಯ ಮಾಡುತ್ತಾರೆ. ಅದು ಅಲ್ಪಕಾಲದ ಪ್ರಾಪ್ತಿಯಾಗಿದೆ. ನಿಮ್ಮ ಈ ವಿದ್ಯೆಯಿಂದ ಭವಿಷ್ಯದ ಇಪ್ಪತ್ತೊಂದು ಜನ್ಮಗಳಕ್ಕೊಸ್ಕರ ಪ್ರಾರಂಭವಾಗುತ್ತದೆ. ಯಾರಾದರು ಈ ತಂದೆ ತಾಯಿಯ ಆಜ್ಞೆಯಂತೆ ಪೂರ್ಣವಾಗಿ ನಡೆದಾಗ ಒಮ್ಮೊಮ್ಮೆ ತಯಾರಾಗಿ ಬಿಡುತ್ತಾರೆ. ತಂದೆ ತಾಯಿಯು ಸಹ ಖುಷಿ ಪಡುತ್ತಾರೆ. ಜೀವನದಲ್ಲಿ ಧಾರಣೆ ಮಾಡದಿದ್ದಾಗ ಪದವಿ ಕಡಿಮೆಯಾಗಿ ಬಿಡುತ್ತದೆ. ಶಿವ ತಂದೆ ತಿಳಿಸುತ್ತಾರೆ-ನಾನು ನಿಷ್ಕಾಮಿಯಾಗಿದ್ದೇನೆ, ಅಭೋಕ್ತನಾಗಿದ್ದೇನೆ……… ನಾನು ಈ ಟೋಲಿ ಏನನ್ನು ತಿನ್ನುವುದಿಲ್ಲ. ವಿಶ್ವದ ರಾಜ್ಯ ಭಾಗ್ಯವು ಸಹ ನಿಮಗೋಸ್ಕರವಾಗಿದೆ. ಈ ತಿಂಡಿ ತೀರ್ಥವು ಸಹ ನಿಮಗೋಸ್ಕರವಾಗಿ, ನಾನು ಸೇವಾಧಾರಿಯಾಗಿದ್ದೇನೆ. ನಾನು ಬರುವ ಸಮಯವು ನಿಗಧಿವಾಗಿದೆ ಕಲ್ಪ-ಕಲ್ಪ ತನ್ನ ಮಕ್ಕಳಿಗೆ ರಾಜ್ಯಭಾಗ್ಯವನ್ನು ಕೊಟ್ಟು ನಾನು ನಿರ್ವಾಣಧಾಮದಲ್ಲಿ ಕುಳಿತು ಬಿಡುತ್ತೇನೆ. ಅಂದಮೇಲೆ ತಂದೆಯನ್ನೆಂದಿಗೂ ಮರೆಯಬಾರದು. ತಂದೆಯಂತೂ ನಿಮಗೆ ಸ್ವರ್ಗದ ರಾಜ್ಯಭಾಗ್ಯ ಕೊಡಲು ಬಂದಿದ್ದಾರೆ. ಆದರು ಸಹ ನೀವು ಅವರನ್ನು ಮರೆತು ಬಿಡುತ್ತೀರಿ. ಯಾರಿಗಾದರೂ ತಂದೆಯ ಪರಿಚಯವನ್ನು ಕೊಡುವಂತಹ ವಿಧಿಯನ್ನು ತಂದೆ ತಿಳಿಸಿದ್ದಾರೆ-ಕೇಳಿ ಪರಮಪಿತ ಪರಮಾತ್ಮನೊಂದಿಗೆ ನಿಮ್ಮ ಸಂಬಂಧವೇನು? ಪ್ರಜಾಪಿತ ಬ್ರಹ್ಮನೊಂದಿಗೆ ನಿಮ್ಮ ಸಂಬಂಧವೇನು? ಇಬ್ಬರು ತಂದೆಯರಾಗಿದ್ದಾರೆ. ಅವರು ನಿರಾಕಾರ, ಇವರು ಸಾಕಾರ. ತಂದೆಗೆ ಸರ್ವವ್ಯಾಪಿಯನ್ನು ಹೇಳಿದರೆ ಆಸ್ತಿ ಹೇಗೆ ಸಿಗುತ್ತದೆ. ಶ್ರೀಮತ ಭಗವಂತನಿಂದ ಸಿಗುತ್ತದೆ. ಶ್ರೀಮತದಿಂದ ನೀವು ಶ್ರೇಷ್ಠಾತಿ ಶ್ರೇಷ್ಠರಾಗುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಮಾಯೆಯ ಬಿರುಗಾಳಿಗಳನ್ನು ಪಾರು ಮಾಡುತ್ತಾ ತಂದೆಯಿಂದ ಪೂರ್ಣ ಆಸ್ತಿ ತೆಗೆದುಕೊಳ್ಳಬೇಕು. ತಂದೆ ತಾಯಿಯ ಆಜ್ಞೆಗಳನ್ನು ಜೀವನದಲ್ಲಿ ತರಬೇಕು.

2. ಹಳೆಯ ಪ್ರಪಂಚವನ್ನು ಮರೆತು ಹೊಸ ಪ್ರಪಂಚವನ್ನು ನೆನಪು ಮಾಡಬೇಕು. ಮೃತ್ಯುವಿಗೆ ಮೊದಲು ತಂದೆಯ ಬಳಿ ಸ್ವಯನ್ನು ಇನ್ಶ್ಯೂರ್ ಮಾಡಿಕೊಳ್ಳಬೇಕು.

ವರದಾನ:-

ಸದಾ ಈ ಸ್ಮೃತಿಯಿರಲಿ – ಮಾಲೀಕನಾಗುವುದರ ಜೊತೆಗೆ ಬಾಲಕನೂ ಆಗಿದ್ದೇನೆ ಮತ್ತು ಬಾಲಕನ ಜೊತೆಗೆ ಮಾಲೀಕನೂ ಆಗಿದ್ದೇನೆ. ಬಾಲಕನಾಗುವುದರಿಂದ ಸದಾ ನಿಶ್ಚಿಂತ, ಡಬಲ್ ಲೈಟ್ ಆಗಿರುತ್ತೀರಿ ಮತ್ತು ಮಾಲೀಕನ ಅನುಭವ ಮಾಡುವುದರಿಂದ ಮಾಲೀಕತ್ವದ ಆತ್ಮಿಕ ನಶೆಯಿರುವುದು. ಸಲಹೆ ಕೊಡುವ ಸಮಯದಲ್ಲಿ ಮಾಲೀಕ, ಮತ್ತೆ ಯಾವಾಗ ಮೆಜಾರಿಟಿ ಫೈನಲ್ ಮಾಡುತ್ತಾರೆಯೋ ಆ ಸಮಯದಲ್ಲಿ ಬಾಲಕ, ಇದೂ ಸಹ ಬಾಲಕ ಮತ್ತು ಮಾಲೀಕನಾಗುವ ಏಣಿಯಾಗಿದೆ. ಈ ಏಣಿಯನ್ನು ಕೆಲವು ಹತ್ತಿರಿ, ಕೆಲವೊಮ್ಮೆ ಇಳಿಯಿರಿ, ಕೆಲವೊಮ್ಮೆ ಬಾಲಕರಾಗಿರಿ, ಕೆಲವೊಮ್ಮೆ ಮಾಲೀಕರಾಗುತ್ತೀರೆಂದರೆ, ಯಾವುದೇ ಪ್ರಕಾರದ ಹೊರೆಯಿರುವುದಿಲ್ಲ.

ಸ್ಲೋಗನ್:-

ಲವಲೀನ ಸ್ಥಿತಿಯ ಅನುಭವ ಮಾಡಿರಿ:

ಸೇವೆ ಅಥವಾ ಸ್ವಯಂ ಏರುವ ಕಲೆಯಲ್ಲಿ ಸಫಲತೆಗೆ ಮುಖ್ಯ ಆಧಾರವಾಗಿದೆ – ಒಬ್ಬ ತಂದೆಯೊಂದಿಗೆ ಅಟೂಟ ಪ್ರೀತಿಯಿರುವುದು.ತಂದೆಯ ವಿನಃ ಮತ್ತ್ಯಾವುದೂ ಕಾಣಿಸಬಾರದು. ಸಂಕಲ್ಪದಲ್ಲಿಯೂ ಬಾಬಾ, ಮಾತಿನಲ್ಲಿಯೂ, ಕರ್ಮದಲ್ಲಿಯೂ ಬಾಬಾರವರ ಜೊತೆಯಲ್ಲಿ, ಈ ರೀತಿ ಲವಲೀನ ಸ್ಥಿತಿಯಲ್ಲಿದ್ದು ಒಂದು ಶಬ್ಧ ಮಾತನಾಡಿದರೂ ಸಹ ಆ ಸ್ನೇಹದ ಮಾತು ಆತ್ಮನನ್ನೂ ಸ್ನೇಹದಲ್ಲಿ ಬಂಧಿಸುತ್ತದೆ. ಇಂತಹ ಲವಲೀನ ಆತ್ಮನಿಂದ ಬಾಬಾ ಎಂಬ ಶಬ್ಧವೇ ಜಾದೂ ಮಂತ್ರದ ಕಾರ್ಯವನ್ನು ಮಾಡುತ್ತದೆ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top