25 August 2021 KANNADA Murli Today | Brahma Kumaris

Read and Listen today’s Gyan Murli in Kannada

August 24, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

"ಮಧುರ ಮಕ್ಕಳೇ - ಶಾಂತವಾಗಿ ಇರುವ ಸ್ವಭಾವವು ಬಹಳ ಒಳ್ಳೆಯದು, ಶಾಂತ ಸ್ವಭಾವವುಳ್ಳವರು ಬಹಳ ಮಧುರವೆನಿಸುತ್ತಾರೆ, ವ್ಯರ್ಥ ಮಾತನಾಡುವುದಕ್ಕಿಂತ ಮಾತನಾಡದೇ ಇರುವುದು ಒಳ್ಳೆಯದು"

ಪ್ರಶ್ನೆ:: -

ಯಾವ ಮಕ್ಕಳನ್ನು ಸರ್ವರೂ ಪ್ರೀತಿ ಮಾಡುವರು? ಸ್ವಯಂನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವ ಸಾಧನವೇನಾಗಿದೆ?

ಉತ್ತರ:-

ಯಾರು ಬಹಳ ಆಸಕ್ತಿಯಿಂದ, ಪ್ರೀತಿಯಿಂದ ಸರ್ವರ ಸೇವೆ ಮಾಡುವರು ಅವರನ್ನು ಸರ್ವರೂ ಪ್ರೀತಿ ಮಾಡುವರು. ನಿಮ್ಮಲ್ಲಿ ಎಂದಿಗೂ ಸೇವೆಯ ಅಹಂಕಾರ ಬರಬಾರದು. ತಂದೆಯ ಮೂಲಕ ಯಾವ ಜ್ಞಾನ ಕಸ್ತೂರಿ ಸಿಕ್ಕಿದೆಯೋ ಅದನ್ನು ಅನ್ಯರಿಗೂ ಕೊಡಬೇಕಾಗಿದೆ, ಸರ್ವರಿಗೂ ಶಿವ ತಂದೆಯ ನೆನಪನ್ನು ತರಿಸಬೇಕಾಗಿದೆ. ಈ ನೆನಪಿನ ಯಾತ್ರೆಯಿಂದಲೇ ನೀವು ಬಹಳ-ಬಹಳ ಸುರಕ್ಷಿತವಾಗಿ ಇರುವಿರಿ. ನೆನಪಿನಲ್ಲಿ ಎಷ್ಟಿರುವಿರಿ ಅಷ್ಟು ಖುಷಿಯೂ ಇರುವುದು ಹಾಗೂ ನಡುವಳಿಕೆಯೂ ಸುಧಾರಣೆ ಆಗುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಆತ್ಮಿಕ ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ, ತಿಳಿಸುತ್ತಾ-ತಿಳಿಸುತ್ತಾ ಎಷ್ಟೊಂದು ಬುದ್ಧಿವಂತರನ್ನಾಗಿ ಮಾಡಿ ಬಿಡುವರು. ವಿದ್ಯಾಭ್ಯಾಸವೂ ಸಹಜವಿದೆಯಲ್ಲವೆ. ಅದಂತು ಸ್ಥೂಲ ವಿದ್ಯಾಭ್ಯಾಸವಾಗಿದೆ ಮತ್ತು ಇದು ಸೂಕ್ಷ್ಮ ವಿದ್ಯಾಭ್ಯಾಸವಾಗಿದೆ.ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಈ ವಿದ್ಯೆಯನ್ನು ತಂದೆಯಲ್ಲದೆ ಮತ್ತ್ಯಾರೂ ಓದಿಸಲು ಸಾಧ್ಯವಿಲ್ಲ. ತಂದೆಯು ಬಂದಿರುವುದೇ ಪವಿತ್ರರನ್ನಾಗಿ ಮಾಡಲು ಹಾಗೂ ಓದಿಸುವುದಕ್ಕಾಗಿಯೇ ಬಂದಿದ್ದಾರೆ. ಗುರಿ-ಉದ್ದೇಶವೂ ತಮ್ಮ ಸನ್ಮುಖದಲ್ಲಿದೆ ಅಂದಮೇಲೆ ಇಂತಹ ತಂದೆಯನ್ನು ನೆನಪು ಮಾಡುತ್ತಾ ಖುಷಿಯಲ್ಲಿ ರೋಮಾಂಚನದಿಂದ ನಿಂತು ಬಿಡಬೇಕಾಗಿದೆ. ಇದೂ ಸಹ ನೀವು ಮಕ್ಕಳಿಗೆ ಗೊತ್ತಿದೆ – ದಿನ ಕಳೆದಂತೆ ನಾವು ಶಾಂತಿಯಲ್ಲಿಯೇ ಹೋಗಬೇಕಾಗಿದೆ. ಶಾಂತಿಯಂತು ಎಲ್ಲರಿಗೂ ಸಹ ಬಹಳ ಪ್ರಿಯವಾಗುವುದು, ಗಣ್ಯ ವ್ಯಕ್ತಿಗಳು ಹೆಚ್ಚು ಮಾತನಾಡುವುದಿಲ್ಲ ಮತ್ತು ಗಡುಸಾಗಿ ಮಾತನಾಡುವುದಿಲ್ಲ. ನೀವು ಬಹಳ-ಬಹಳ ದೊಡ್ಡ ಗಣ್ಯ ವ್ಯಕ್ತಿಯಾಗುವಿರಿ, ವಾಸ್ತವದಲ್ಲಿ ವ್ಯಕ್ತಿಯೆಂದು ಹೇಳುವುವುದಿಲ್ಲ ನೀವಂತು ದೇವತೆಯಾಗುವಿರಿ. ದೇವತೆಗಳು ಬಹಳ ಸ್ವಲ್ಪವೇ ಮಾತನಾಡುತ್ತಾರೆ. ನೀವೂ ಸಹ ಈಗ ದೇವತೆಗಳಾಗಬೇಕು ಅಂದಮೇಲೆ ಶಬ್ಧಕ್ಕೆ ಬದಲಾಗಿ ಶಾಂತಿಯಲ್ಲಿರುವ ಅಭ್ಯಾಸ ಮಾಡಿರಿ. ಶಾಂತಿಯಲ್ಲಿ ಇರುವವರಿಗಾಗಿ ತಿಳಿಯುವರು – ಇವರಿಗೆ ಸ್ವಯಂನ ಪ್ರತಿ ಗಮನವಿದೆ, ಯಾವಾಗ ನೀವು ಶಾಂತಿಧಾಮಕ್ಕೆ ಹೋಗಬೇಕೆಂದಾಗ ಮಾತನಾಡುವುದನ್ನೂ ಸಹ ಬಹಳ ನಿಧಾನವಾಗಿಯೇ ಮಾತನಾಡಬೇಕು. ನಿಧಾನವಾಗಿ ಮಾತನಾಡುತ್ತಾ-ಮಾತನಾಡುತ್ತಾ ಶಾಂತಿಧಾಮಕ್ಕೆ ಹೋಗಿ ಬಿಡಬೇಕು. ನೀವೆಷ್ಟು ಶಾಂತಿಯಲ್ಲಿ ಇರುತ್ತೀರಿ ಅಷ್ಟು ಶಾಂತಿಯನ್ನು ಹರಡುತ್ತೀರಿ. ನೀವು ಬಹಳಷ್ಟು ಶಾಂತಿಯಲ್ಲಿಯೇ ಇರಬೇಕು. ಹೆಚ್ಚು ಶಬ್ಧದಿಂದ ಮಾತನಾಡುವುದು ಇಷ್ಟವಾಗುವುದಿಲ್ಲ. ಕ್ರೋಧವೂ ಒಳ್ಳೆಯದಲ್ಲ, ಮಕ್ಕಳಲ್ಲಿ ಇದ್ಯಾವುದೇ ವಿಕಾರಗಳೂ ಇರಬಾರದು. ನೋಡಿಕೊಳ್ಳಬೇಕು – ನಾವು ಯಾರೊಂದಿಗೂ ಹೊಡೆದಾಟ-ಜಗಳವನ್ನಂತು ಮಾಡುವುದಿಲ್ಲವೇ! ತಂದೆಯು ತಿಳಿಸಿದ್ದಾರೆ – ಕೆಟ್ಟದ್ದನ್ನು ನೋಡಬಾರದು, ಕೆಟ್ಟದ್ದನ್ನು ಕೇಳಬಾರದು…… ಯಾವ ಮಾತು ನಿಮಗೆ ಇಷ್ಟವಿಲ್ಲವೋ ಆ ಕೆಟ್ಟ ಮಾತುಗಳಿಂದ ನೀವು ದೂರವಾಗಿ ಬಿಡಬೇಕು. ಇದರಿಂದ ಎರಡೂ ಮುಖಗಳು ಬಂಧ್ ಆಗಿರುತ್ತದೆ. ಪ್ರತಿಯೊಂದು ಮಾತಿನಲ್ಲಿಯೂ ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕು. ಯಾರಾದರೂ ಜೋರಾಗಿ ಮಾತನಾಡಿದರೂ ಹೇಳಿರಿ – ಶಾಂತವಾಗಿರಿ, ಶಬ್ಧವನ್ನುಂಟು ಮಾಡದಿರಿ. ನೀವು ತಿಳಿದಿದ್ದೀರಿ – ನಾವು ಶಾಂತಿ ಸ್ಥಾಪನೆ ಮಾಡುತ್ತೇವೆ. ಸತ್ಯಯುಗದಲ್ಲಿ ಶಾಂತಿಯಲ್ಲಿ ಇರುತ್ತೇವಲ್ಲವೆ. ಮೂಲವತನದಲ್ಲಂತು ಶಾಂತಿಯೇ ಇರುತ್ತದೆ.ಶರೀರವೇ ಇಲ್ಲದಿದ್ದರೆ ಮಾತನಾಡುವುದಾದರೂ ಹೇಗೆ?ತಂದೆಯು ಮಕ್ಕಳಿಗೆ ಬಹಳ ಒಳ್ಳೆಯ ಶ್ರೀಮತವನ್ನಂತು ಕೊಡುತ್ತಾರೆ, ತಿಳಿಸುತ್ತಾರೆ- ಮಧುರ ಮಕ್ಕಳೇ, ಈಗ ನೀವು ತಮ್ಮ ಮನೆಗೆ ನಡೆಯಬೇಕಾಗಿದೆ, ಶಬ್ಧದಿಂದ ಮೂವಿಯಲ್ಲಿ ಬರಬೇಕು ನಂತರ ಶಾಂತಿಯಲ್ಲಿ ಹೊರಟು ಹೋಗುವಿರಿ. ಯಾರೇ ಭೇಟಿಯಾಗುವರು ಅವರಿಗೆ ಇದೇ ಸಂದೇಶವನ್ನು ಕೊಡಬೇಕಾಗಿದೆ. ನೀವೆಷ್ಟು ಶಾಂತಿಯಲ್ಲಿ ಇರುತ್ತೀರಿ, ಅಷ್ಟು ತಿಳಿದುಕೊಳ್ಳುವರು – ಈ ಜನರು ಯಾವುದೋ ಗುಂಗಿನಲ್ಲಿದ್ದಾರೆ. ಶಾಂತಿಯಲ್ಲಿರುವ ಸ್ವಭಾವವು ಬಹಳ ಒಳ್ಳೆಯದು. ಅಂತಹವರು ಬಹಳ ಮಧುರವೆನಿಸುತ್ತಾರೆ. ವ್ಯರ್ಥ ಮಾತುಗಳನ್ನು ಮಾತನಾಡುವುದಕ್ಕಿಂತ ಮಾತನಾಡದೇ ಇರುವುದು ಒಳ್ಳೆಯದು.

ನೀವು ಸತ್ಯ-ಸತ್ಯ ಸಂದೇಶವಾಹಕರು ಆಗಿದ್ದೀರಿ. ನಿಮ್ಮೆಲ್ಲರ ಮೇಲೆ ಕೃಪೆ ಇರಬೇಕು. ಕೃಪೆ ತೋರಿಸುವ ಮಕ್ಕಳು ಬಹಳ ಶಾಂತಿಯಲ್ಲಿದ್ದು ತಂದೆಯ ನೆನಪಿನಲ್ಲಿ ಇರುವರು. ಕೇವಲ ಇಷ್ಟೇ ಸಂದೇಶವನ್ನು ಕೊಡಬೇಕಾಗಿದೆ – ಬೇಹದ್ದಿನ ತಂದೆಯನ್ನು ನೆನಪು ಮಾಡುತ್ತೀರೆಂದರೆ, ಬೇಹದ್ದಿನ ಸುಖ-ಶಾಂತಿ ಸಿಗುವುದು. ಲೌಕಿಕ ತಂದೆಯ ಬಹಳ ಬಹಳ ಹಣವಿದೆಯೆಂದರೆ ಬಹಳ ಆಸ್ತಿಯು ಸಿಗುತ್ತದೆಯಲ್ಲವೆ. ಬೇಹದ್ದಿನ ತಂದೆಯ ಬಳಿಯಂತು ವಿಶ್ವದ ರಾಜ್ಯಭಾಗ್ಯವೇ ಇದೆ, ಅವರಿಂದ ಪ್ರತೀ 5000 ವರ್ಷಗಳ ನಂತರ ನಿಮಗೆ ವಿಶ್ವದ ರಾಜ್ಯಭಾಗ್ಯವು ಸಿಗುವುದು.

ನೀವು ಮಕ್ಕಳಿಗೆ ಬಹಳ ಆಸಕ್ತಿಯಿಂದ ಸರ್ವರ ಸೇವೆಯನ್ನು ಮಾಡಬೇಕಾಗಿದೆ. ಪ್ರತಿಯೊಬ್ಬರೂ ಸೇವೆಗೆ ಯೋಗ್ಯರಾಗಬೇಕು. ಯಾರು ಅನ್ಯರ ಸೇವೆಯನ್ನು ಪ್ರೀತಿಯಿಂದ ಮಾಡುವರು, ಅವರನ್ನು ಸರ್ವರೂ ಪ್ರೀತಿಸುವರು. ಎಂದಿಗೂ ಸಹ ಸೇವೆಯ ಅಹಂಕಾರದಲ್ಲಿ ಬರಬಾರದು. ನಿಮಗೆ ತಂದೆಯ ಮೂಲಕ ಜ್ಞಾನದ ಕಸ್ತೂರಿ ಸಿಕ್ಕಿದೆ, ಅದನ್ನು ಅನ್ಯರಿಗೂ ಕೊಡಬೇಕಾಗಿದೆ. ಒಬ್ಬರಿನ್ನೊಬ್ಬರಿಗೆ ಶಿವ ತಂದೆಯ ನೆನಪಿದೆಯೇ?ಎಂದು ನೆನಪು ತರಿಸುತ್ತಿರಿ. ಇದರಲ್ಲಿ ಖುಷಿಯೂ ಆಗುವುದು. ನೆನಪು ತರಿಸುವವರಿಗೆ ಧನ್ಯವಾದಗಳನ್ನು ಕೊಡಬೇಕು. ನೆನಪಿನ ಯಾತ್ರೆಯಿಂದ ನೀವು ಮಕ್ಕಳು ಬಹಳಷ್ಟು ಸುರಕ್ಷಿತವಾಗಿ ಇರುತ್ತೀರಿ. ಯಾರೆಷ್ಟು ನೆನಪಿನಲ್ಲಿ ಇರುತ್ತಾರೆಯೋ ಅವರಷ್ಟು ಖುಷಿಯಾಗಿಯೂ ಇರುವರು ಮತ್ತು ನಡುವಳಿಕೆಯೂ ಸುಧಾರಣೆ ಆಗುತ್ತಿರುತ್ತದೆ. ನೀವು ತಮ್ಮ ನಡುವಳಿಕೆಯನ್ನು ಅವಶ್ಯವಾಗಿ ಸುಧಾರಣೆ ಮಾಡಿಕೊಳ್ಳಬೇಕಾಗಿದೆ. ಪ್ರತಿಯೊಬ್ಬರೂ ತಮ್ಮ ಹೃದಯದಿಂದ ಕೇಳಿಕೊಳ್ಳಿರಿ – ನಮ್ಮ ಸ್ವಭಾವವು ಬಹಳ-ಬಹಳ ಮಧುರವಾಗಿದೆಯೇ? ಎಂದಿಗೂ ಯಾರನ್ನೂ ಬೇಸರ ಮಾಡುವುದಿಲ್ಲವೆ! ಇಂತಹ ವಾತಾವರಣವೂ ಸಹ ಎಂದಿಗೂ ಇರಬಾರದು, ಅದರಿಂದ ಯಾರಾದರೂ ಬೇಸರವಾಗಿ ಬಿಡುವರು. ಇಂತಹ ಪ್ರಯತ್ನ ಪಡುತ್ತಿರಬೇಕು ಏಕೆಂದರೆ ನೀವು ಮಕ್ಕಳು ಬಹಳ ಶ್ರೇಷ್ಠವಾದ ಸೇವೆಯಲ್ಲಿದ್ದೀರಿ. ನೀವು ಇಡೀ ಸೃಷ್ಟಿಯ ರಂಗಮಂಚಕ್ಕೇ ಬೆಳಕನ್ನು ಕೊಡಬೇಕಾಗಿದೆ. ನೀವು ಧರಣಿಯ ಚೈತನ್ಯ ನಕ್ಷತ್ರಗಳಾಗಿದ್ದೀರಿ. ಇದನ್ನೂ ಹೇಳಲಾಗುತ್ತದೆ – ನಕ್ಷತ್ರ ದೇವತಾ….. ಈಗ ಆ ನಕ್ಷತ್ರಗಳೇನೂ ದೇವತೆಯಲ್ಲ, ನೀವಂತು ಅದಕ್ಕಿಂತಲೂ ಮಹಾನ್ ಬಲಶಾಲಿ ಆಗಿದ್ದೀರಿ ಏಕೆಂದರೆ ನೀವು ಇಡೀ ವಿಶ್ವವನ್ನೇ ಪ್ರಕಾಶತೆಗೊಳಿಸುತ್ತೀರಿ. ನೀವೇ ದೇವತೆಯಾಗುವವರೂ ಆಗಿದ್ದೀರಿ. ಹೇಗೆ ಮೇಲೆ ನಕ್ಷತ್ರಗಳ ಶೋಭೆಯಿದೆ, ಕೆಲವು ನಕ್ಷತ್ರಗಳು ಬಹಳ ಹೊಳೆಯುತ್ತಿರುತ್ತವೆ ಮತ್ತು ಕೆಲವು ಸ್ವಲ್ಪ ಕಡಿಮೆ. ಕೆಲವು ಚಂದ್ರಮನ ಸಮೀಪವಿರುತ್ತವೆ. ನೀವು ಮಕ್ಕಳೂ ಸಹ ಯೋಗಬಲದಿಂದ ಪವಿತ್ರರಾಗುತ್ತೀರೆಂದರೆ ಹೊಳೆಯುತ್ತೀರಿ.

ಈಗ ನೀವು ಮಕ್ಕಳಿಗೆ ಅವಿನಾಶಿ ಜ್ಞಾನರತ್ನಗಳ ಲಾಟರಿ ಸಿಗುತ್ತಿದೆ ಅಂದಾಗ ಎಷ್ಟೊಂದು ಖುಷಿಯಿರಬೇಕು! ಒಳಗೆ ಖುಷಿಯಲ್ಲಿ ನರ್ತಿಸುತ್ತಿರಿ. ಈ ನಿಮ್ಮ ಜನ್ಮವು ವಜ್ರ ಸಮಾನ ಎಂದು ಮಹಿಮೆ ಮಾಡಲಾಗುತ್ತದೆ. ನೀವು ಬ್ರಾಹ್ಮಣರೇ ಜ್ಞಾನಪೂರ್ಣರು ಆಗುತ್ತೀರಿ ಅಂದಾಗ ನಿಮಗೆ ಜ್ಞಾನದಲ್ಲಿಯೇ ಖುಷಿಯಿರುತ್ತದೆ. ಈ ದೇವತೆಗಳಿಗಿಂತಲೂ ನೀವು ಶ್ರೇಷ್ಠರಾಗಿದ್ದೀರಿ ಅಂದಾಗ ನಿಮ್ಮ ಚಹರೆಯು ಸದಾ ಖುಷಿಯಿಂದ ಅರಳಿರಲಿ. ತಂದೆಯು ಮಕ್ಕಳಿಗೆ ಆಶೀರ್ವಾದ ಮಾಡುತ್ತಾರೆ – ಮಧುರ ಮಕ್ಕಳೇ, ಸದಾ ಶಾಂತಚಿತ್ತರಾಗಿರಿ, ಚಿರಂಜೀವಿ ಆಗಿರಿ ಅರ್ಥಾತ್ ಬಹಳ ಜನ್ಮಗಳವರೆಗೆ ಅಮರರಾಗಿರಿ. ತಂದೆಯಿಂದ ಆಶೀರ್ವಾದವಂತು ಸಿಗುವುದು ಆದರೂ ಸಹ ಚಿರಂಜೀವಿ ಆಗಿರುವುದು ಹೇಗೆ! ಎಂದು ಪ್ರತಿಯೊಬ್ಬರೂ ತಮ್ಮ-ತಮ್ಮ ಪುರುಷಾರ್ಥವನ್ನು ಮಾಡಬೇಕು. ತಂದೆಯನ್ನು ನೆನಪು ಮಾಡುವುದರಿಂದ ನೀವು ಚಿರಂಜೀವಿ ಆಗುತ್ತಿದ್ದೀರಿ (ಅಮರರಾಗುತ್ತಿದ್ದೀರಿ), ಈ ಆಶೀರ್ವಾದವನ್ನು ತಂದೆಯು ಕೊಡುವರು. ಬ್ರಾಹ್ಮಣರೂ ಸಹ ಹೇಳುತ್ತಾರೆ – ಆಯುಷ್ಯವಾನ್ ಭವ. ತಂದೆಯೂ ಸಹ ಹೇಳುತ್ತಾರೆ – ಮಕ್ಕಳೇ, ಸದಾ ಅಮರರಾಗಿರಿ. ಅರ್ಧ ಕಲ್ಪದಲ್ಲಿ ನಿಮ್ಮನ್ನು ಕಾಲ ಕಬಳಿಸುವುದಿಲ್ಲ. ಸತ್ಯಯುಗದಲ್ಲಿ ಸಾಯುವ ಹೆಸರೇ ಇರುವುದಿಲ್ಲ. ಇಲ್ಲಂತು ಮನುಷ್ಯರು ಸಾವಿಗೆ ಭಯಪಡುವರಲ್ಲವೆ! ನೀವಂತು ಸಾಯುವುದಕ್ಕಾಗಿ ಪುರುಷಾರ್ಥ ಮಾಡುತ್ತಿದ್ದೀರಿ. ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಈ ಶರೀರವನ್ನು ಬಿಟ್ಟು, ಶಿವ ತಂದೆಯ ಬಳಿ ಹೋಗುತ್ತೇವೆ ನಂತರ ಸ್ವರ್ಗವಾಸಿ ಆಗುತ್ತೇವೆ ಎನ್ನುವುದನ್ನು ನೀವು ತಿಳಿದಿದ್ದೀರಿ.

ಈಗ ನೀವು ಅತಿ ಪ್ರಿಯ ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ನೀವೂ ಸಹ ತಂದೆಯಂತೆ ಬಹಳ-ಬಹಳ ಮಧುರ, ಬಹಳ ಪ್ರೀತಿಯುಳ್ಳವರು ಆಗಬೇಕಾಗಿದೆ. ತಂದೆಯವರು ಪತ್ರಗಳಲ್ಲಿ ಬರೆಯುತ್ತಾರೆ – ಮಧುರಾತಿ ಮಧುರ ಮುದ್ದಾದ ಅಗಲಿ ಸಿಕ್ಕಿರುವ ಮಕ್ಕಳೇ…… ಬಾಬಾ ಬಹಳ ಮಧುರವಲ್ಲವೆ. ಪ್ರತ್ಯಕ್ಷದಲ್ಲಿಯೂ ಅನುಭವ ಮಾಡುತ್ತೀರಿ – ಬಾಬಾರವರು ಎಷ್ಟೊಂದು ಮಧುರ, ಎಷ್ಟೊಂದು ಪ್ರಿಯವಾಗಿದ್ದಾರೆ. ನಮ್ಮನ್ನೂ ಇದೇ ರೀತಿ ಮಾಡುತ್ತಾರೆ. ನೀವೂ ಇದನ್ನು ತಿಳಿದಿದ್ದೀರಿ – ನಾವೆಷ್ಟು ಮಧುರ, ಎಷ್ಟೊಂದು ಪ್ರಿಯರಿದ್ದೆವು, ನಾವೇ ಪೂಜ್ಯರಿದ್ದವರು ನಂತರ ಪೂಜಾರಿಯಾದಾಗ, ಸ್ವಯಂನ್ನು ಪೂಜಿಸುತ್ತಿದ್ದೆವು. ಇದೂ ಸಹ ಬಹಳ ವಿಚಿತ್ರವಾದ ತಿಳಿದುಕೊಳ್ಳುವ ಮಾತುಗಳಾಗಿವೆ.

ನೀವು ಮಕ್ಕಳು ತಿಳಿದಿದ್ದೀರಿ – ನಮ್ಮೆಲ್ಲರ ಅರ್ಧಕಲ್ಪದ ದುಃಖವನ್ನು ದೂರಗೊಳಿಸುವಂತಹ ತಂದೆಯೀಗ ಬಂದಿದ್ದಾರೆ. ಹರ ಹರ ಮಹದೇವ ಎಂದು ಹೇಳುತ್ತಾರೆ, ಈಗ ಮಹದೇವನಂತು ಅವರಲ್ಲ, ದುಃಖವನ್ನಂತು ತಂದೆಯೇ ಹರಣ ಮಾಡುವರು. ದುಃಖವನ್ನು ಹರಣ ಮಾಡಿ ಸುಖ ಕೊಡುವವರು ತಂದೆಯಾಗಿದ್ದಾರೆ. ಅರ್ಧ ಕಲ್ಪದಲ್ಲಿ ನೀವು ಬಹಳ ದುಃಖವನ್ನು ನೋಡಿದ್ದೀರಿ. 5 ವಿಕಾರಗಳ ರೋಗವಂತು ಬಹಳಷ್ಟು ಹೆಚ್ಚಾಗಿ ಬಿಟ್ಟಿದೆ, ಈ ರೋಗವು ಬಹಳ ದುಃಖಿಯನ್ನಾಗಿಯೂ ಮಾಡಿದೆ. ಆದ್ದರಿಂದ ತಂದೆಯು ಹೇಳುವರು – ಮಧುರ ಮಕ್ಕಳೇ, ಕರ್ಮಗಳ ಖಾತೆಯೇನಿದೆಯೋ ಅದನ್ನೀಗ ಸರಿಪಡಿಸಿಕೊಳ್ಳಿರಿ. ವ್ಯಾಪಾರಿಗಳೂ ಸಹ 12 ತಿಂಗಳ ಖಾತೆಯನ್ನು ಇಡುತ್ತಾರಲ್ಲವೆ.

ತಂದೆಯು ತಿಳಿಸುತ್ತಾರೆ – ಮಕ್ಕಳೇ, ಈಗ ಇಡೀ ಸೃಷ್ಟಿಯಲ್ಲಿ ಎಷ್ಟೊಂದು ಕೊಳಕಿದೆ (ಅಶುದ್ಧತೆ) ನೋಡಿ, ಇದಂತು ಇರುವುದೇ ನರಕ ಅದಕ್ಕಾಗಿಯೇ ತಂದೆಯು ನರಕವನ್ನು ಸ್ವರ್ಗವನ್ನಾಗಿ ಮಾಡಲು ಬರಬೇಕಾಗುವುದು. ತಂದೆಯು ಬಹಳ ಪ್ರೀತಿಯಿಂದ ಬರುತ್ತಾರೆ. ನಾನು ನನ್ನ ಮಕ್ಕಳ ಸೇವೆಯಲ್ಲಿ ಬರಬೇಕಾಗಿದೆ ಎನ್ನುವುದು ಗೊತ್ತಿದೆ. ನಾನು ಕಲ್ಪ-ಕಲ್ಪವೂ ನೀವು ಮಕ್ಕಳ ಸೇವೆಯಲ್ಲಿ ಹಾಜರಾಗುವೆನು. ಯಾವಾಗ ನಾನೇ ಬರುವೆನು ಆಗ ಮಕ್ಕಳು ತಿಳಿದುಕೊಳ್ಳುವರು – ತಂದೆಯು ನಮ್ಮ ಸೇವೆಯಲ್ಲಿ ಹಾಜರಾಗಿದ್ದಾರೆ. ಇಲ್ಲಿ ಕುಳಿತುಕೊಂಡೇ ಎಲ್ಲರ ಸೇವೆಯಾಗಿ ಬಿಡುತ್ತದೆ. ಇಡೀ ಸೃಷ್ಟಿಯ ಕಲ್ಯಾಣಕಾರಿ ದಾತಾ ಒಬ್ಬ ತಂದೆಯ ಆಗಿರುವರಲ್ಲವೆ! ತಂದೆಗೆ ಗೊತ್ತಿದೆ – ಇಡೀ ಪ್ರಪಂಚದಲ್ಲಿ ಎಷ್ಟೆಲ್ಲಾ ಆತ್ಮರಿದ್ದಾರೆ, ಸರ್ವರಿಗೂ ನಾನೇ ಆಸ್ತಿಯನ್ನು ಕೊಡುವುದಕ್ಕಾಗಿ ಬಂದಿದ್ದೇನೆ. ಬೇಹದ್ದಿನ ತಂದೆಯ ದೃಷ್ಟಿಯು ಪ್ರಪಂಚದಲ್ಲಿರುವ ಆತ್ಮರ ಕಡೆಗೇ ಹೋಗುವುದು. ಭಲೆ ಇಲ್ಲಿ ಕುಳಿತಿರಬಹುದು ಆದರೆ ದೃಷ್ಟಿಯು ಇಡೀ ವಿಶ್ವದ ಮೇಲೆ ಹಾಗೂ ಇಡೀ ವಿಶ್ವದಲ್ಲಿ ಇರುವಂತಹ ಮನುಷ್ಯಾತ್ಮರ ಮೇಲಿದೆ ಏಕೆಂದರೆ ಇಡೀ ವಿಶ್ವವನ್ನೇ ಪರಿವರ್ತನೆ ಮಾಡಬೇಕಾಗಿದೆ. ಡ್ರಾಮಾದ ಯೋಜನೆಯನುಸಾರ ಕಲ್ಪದ ಮೊದಲಿನಂತೆ ಇಡೀ ವಿಶ್ವದ ಆತ್ಮರು ಪರಿವರ್ತನೆ ಆಗಿ ಬಿಡುವರು. ತಂದೆಯು ಎಲ್ಲಾ ಮಕ್ಕಳನ್ನು ನೆನಪು ಮಾಡುತ್ತಾರೆ, ದೃಷ್ಟಿಯಂತು ಹೋಗುವುದಲ್ಲವೆ. ಸಂಗಮಯುಗದಲ್ಲಿಯೇ ತಂದೆಯು ಮಕ್ಕಳ ಸೇವೆಯಲ್ಲಿ ಹಾಜರಾಗುವರು. ಅವರ ಹೋಲಿಕೆಯಲ್ಲಿ ಯಾರೂ ಸಹ ಸೇವೆಯನ್ನು ಮಾಡಲು ಸಾಧ್ಯವಿಲ್ಲ, ಅವರದು ಬೇಹದ್ದಿನ ಸೇವೆಯಾಗಿದೆ. ನೀವು ಮಕ್ಕಳೂ ಸಹ ತಂದೆಯಂತೆ ಸೇವೆ ಮಾಡಿದಾಗಲೇ ತಂದೆಯನ್ನು ಪ್ರತ್ಯಕ್ಷಗೊಳಿಸುವಿರಿ. ಸೇವೆ ಮಾಡುವವರಿಗೆ ಫಲವೂ ಸಹ ಬಹಳ ಶ್ರೇಷ್ಠವಾಗಿರುವುದೇ ಸಿಗುವುದು. ಮಕ್ಕಳಿಗೆ ನಶೆಯೂ ಏರುವುದು – ನಾವು ಶ್ರೀಮತದಂತೆ ಇಡೀ ವಿಶ್ವದ ಮನುಷ್ಯರಿಗೆ ಸುಖ ಕೊಡುತ್ತೇವೆ ಎಂದು.

ತಂದೆಯು ಹೇಳುತ್ತಾರೆ – ಮಧುರ ಮಕ್ಕಳೇ, ಈಗ ತಮ್ಮ ಜೋಳಿಗೆಯನ್ನು ಬಹಳ ಚೆನ್ನಾಗಿ ಜ್ಞಾನರತ್ನಗಳಿಂದ ತುಂಬಿಕೊಳ್ಳಿರಿ, ಎಷ್ಟು ತುಂಬಿಕೊಳ್ಳಬೇಕೋ ಅಷ್ಟು ತುಂಬಿರಿ. ತಮ್ಮ ಸಮಯವನ್ನು ವ್ಯರ್ಥ ಮಾಡದಿರಿ. ತಂದೆಯ ನೆನಪಿನಲ್ಲಿಯೇ ಸಮಯವನ್ನು ಸಫಲಗೊಳಿಸಿರಿ. ಯಾರು ಬಹಳ ಚೆನ್ನಾಗಿ ಧಾರಣೆ ಮಾಡುವರೋ ಅವರು ಅನ್ಯರ ಸೇವೆಯನ್ನು ಅವಶ್ಯವಾಗಿ ಬಹಳ ಚೆನ್ನಾಗಿ ಮಾಡುವರು. ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಮಕ್ಕಳೇ ನೀವು ಪುರುಷಾರ್ಥ ಮಾಡಿ ಅಂತರ್ಮುಖಿ ಆಗಬೇಕಾಗಿದೆ. ನಾವು ಆತ್ಮರಿಗೆ ತಂದೆಯು ತಿಳಿಸುತ್ತಿದ್ದಾರೆ ಎಂಬ ನಿಶ್ಚಯ ಮಾಡಿಕೊಳ್ಳಬೇಕು. ಆತ್ಮಾಭಿಮಾನಿ ಆಗಿರುವುದೇ ಸತ್ಯ-ಸತ್ಯವಾದ ಅಂತರ್ಮುಖಿ ಆಗುವುದಾಗಿದೆ. ಅಂತರ್ಮುಖಿ ಎಂದರೆ ಒಳಗೆ ಆತ್ಮವೇನಿದೆ, ಅದು ಎಲ್ಲದರ ಬಗ್ಗೆಯೂ ತಂದೆಯಿಂದಲೇ ಕೇಳಬೇಕಾಗಿದೆ. ತಂದೆಯು ಮತ್ತೆ-ಮತ್ತೆ ಪ್ರೀತಿಯಿಂದ ತಿಳಿಸುತ್ತಿದ್ದಾರೆ. ಮಾತಾ-ಪಿತ ಹಾಗೂ ಯಾರೆಲ್ಲರೂ ಅನನ್ಯ ಸಹೋದರ-ಸಹೋದರಿ ಇದ್ದಾರೆ, ಯಾರು ಬಹಳ ಚೆನ್ನಾಗಿ ಸೇವೆ ಮಾಡುತ್ತಾರೆ ಅವರಿಂದಲೂ ಕಲಿಯುತ್ತಾ ಸಾಗಿರಿ. ಆಂತರ್ಯದಲ್ಲಿ ಈ ನಿಶ್ಚಯ ಮಾಡಿಕೊಳ್ಳಿ – ನಾವು ಸಮಯವನ್ನು ವ್ಯರ್ಥವಾಗಿ ಕಳೆಯಬಾರದು. ಶರೀರ ನಿರ್ವಹಣೆಯನ್ನೂ ಮಾಡಬೇಕು, ನಮ್ಮ ರಚನೆಯನ್ನೂ ನೋಡಿಕೊಳ್ಳಬೇಕು, ಅದರಲ್ಲಿ ಕೇವಲ ಮಮತ್ವವನ್ನಿಡಬಾರದು. ಮಮತ್ವವಿಡುವುದರಿಂದ ಹಾನಿಯಾಗುವುದು. ಒಬ್ಬ ತಂದೆಯಲ್ಲಿ ಮಾತ್ರವೇ ಮಮತ್ವವನ್ನಿಡಿ. ಇಲ್ಲಿ ನೀವು ತಂದೆಯ ಸನ್ಮುಖದಲ್ಲಿ ಇದ್ದೀರಿ. ಆತ್ಮರು ಮತ್ತು ಪರಮಾತ್ಮ ಸನ್ಮುಖದಲ್ಲಿದ್ದಾರೆ ಏಕೆಂದರೆ ಇಲ್ಲಿ ಸ್ವಯಂ ತಂದೆಯೇ ಆತ್ಮರಿಗೆ ವಿದ್ಯಾಭ್ಯಾಸ ಮಾಡಿಸುತ್ತಾರೆ. ಅಲ್ಲಿ ಆತ್ಮರು ಆತ್ಮರಿಗೆ ವಿದ್ಯಾಭ್ಯಾಸ ಮಾಡಿಸುತ್ತಾರೆ.

ಇವೆಲ್ಲಾ ಮಾತುಗಳ ಬಗ್ಗೆ ನೀವು ಮಕ್ಕಳ ಆಂತರ್ಯದಲ್ಲಿ ಮಥನವಾಗಬೇಕು. ವಿದ್ಯಾರ್ಥಿಯ ಬುದ್ಧಿಯಲ್ಲಿ ಇಡೀದಿನ ವಿದ್ಯಾಭ್ಯಾಸವೇ ಇರುತ್ತದೆಯಲ್ಲವೆ. ನಿಮ್ಮ ಬುದ್ಧಿಯಲ್ಲಿಯೂ ಸಂಪೂರ್ಣ ಜ್ಞಾನವಿದೆ, ಇದು ಆತ್ಮಿಕ ವಿದ್ಯೆಯಾಗಿದೆ. ಯಾರು ಒಳ್ಳೆಯ ವಿದ್ಯಾರ್ಥಿ ಆಗಿರುತ್ತಾರೆಯೋ ಅವರು ಸದಾ ಏಕಾಂತದಲ್ಲಿ ಹೋಗಿ ಓದಿಕೊಳ್ಳುವರು. ವಿದ್ಯಾರ್ಥಿಯು ಪರಸ್ಪರದಲ್ಲಿ ಹೊಂದಾಣಿಕೆಯಿರುತ್ತದೆ ಎಂದರೆ ವಿದ್ಯಾಭ್ಯಾಸದ ಬಗ್ಗೆಯೇ ವಾರ್ತಾಲಾಪ ಮಾಡುತ್ತಾರೆ. ಈ ಬೇಹದ್ದಿನ ವಿದ್ಯೆಯಲ್ಲಂತು ಇನ್ನೂ ಖುಷಿಯಿಂದ ತೊಡಗಿ ಬಿಡಬೇಕು.

ನೀವು ಮಕ್ಕಳೀಗ ತಂದೆಯ ಸಹಯೋಗಿ ಆಗುವಿರಿ. ನೆನಪಿನಲ್ಲಿರುವುದೇ ಸಹಯೋಗ ಕೊಡುವುದಾಗಿದೆ ಏಕೆಂದರೆ ನೆನಪಿನ ಯಾತ್ರೆ ಅಂದರೆ ಶಾಂತಿಯ ಯಾತ್ರೆಯಲ್ಲಿರುವುದು. ಆದ್ದರಿಂದ ಹೇಳಲಾಗುತ್ತದೆ – ಪ್ರತಿಯೊಬ್ಬರೂ ತಮ್ಮ ಮನೆಯನ್ನು ಸ್ವರ್ಗವನ್ನಾಗಿ ಮಾಡಿರಿ. ಪ್ರತಿಯೊಬ್ಬರ ಬುದ್ಧಿಯಲ್ಲಿ ತಂದೆ ಮತ್ತು ಆಸ್ತಿ ಇದೆ. ತಂದೆಯನ್ನು ನೆನಪು ಮಾಡುತ್ತೀರೆಂದರೆ ರಾಜ್ಯಭಾಗ್ಯವು ಸಿಗುವುದು, ಮತ್ತೇನೂ ಮಾಡಬೇಕಾಗಿಲ್ಲ. ಕೇವಲ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುತ್ತೀರೆಂದರೆ ರಾಜ್ಯಭಾಗ್ಯ ನಿಮ್ಮದು. ನೀವು ಮಕ್ಕಳು ಎಲ್ಲರಿಗೂ ಇದೇ ಸಂದೇಶವನ್ನು ಕೊಡುತ್ತಿರಿ – ತಂದೆಯನ್ನು ನೆನಪು ಮಾಡುತ್ತೀರೆಂದರೆ ಸ್ವರ್ಗದ ರಾಜ್ಯಭಾಗ್ಯವು ಸಿಗುವುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತ ಬಾಪ್ದಾದಾರವರ ಹೃದಯಪೂರ್ವಕವಾಗಿ ಬಹಳ ಪ್ರೀತಿಯಿಂದ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಂದೆಯ ನೆನಪಿನಲ್ಲಿ ತಮ್ಮ ಸಮಯವನ್ನು ಸಫಲಗೊಳಿಸಬೇಕು. ಅಮೂಲ್ಯವಾದ ಈ ಸಮಯವನ್ನು ಎಲ್ಲಿಯೂ ವ್ಯರ್ಥಗೊಳಿಸಬಾರದು. ಪುರುಷಾರ್ಥ ಮಾಡಿ ಅಂತರ್ಮುಖಿ ಅರ್ಥಾತ್ ಆತ್ಮಭಿಮಾನಿ ಆಗಿರಬೇಕು.

2. ಈಗ ನಾವು ದೇವತೆಗಳಿಗಿಂತಲೂ ಶ್ರೇಷ್ಠವಾದ ಬ್ರಾಹ್ಮಣರಾಗಿದ್ದೇವೆ, ಈಗ ತಂದೆಯ ಮೂಲಕ ಅವಿನಾಶಿ ಜ್ಞಾನ ರತ್ನಗಳ ಲಾಟರಿ ಸಿಕ್ಕಿದೆ, ಜ್ಞಾನ ಪೂರ್ಣರು ಆಗಿದ್ದೀರಿ ಅಂದಮೇಲೆ ಚಹರೆಯು ಸದಾ ಖುಷಿಯಿಂದ ಅರಳಿರಲಿ. ಆಂತರ್ಯದಲ್ಲಿ ಖುಷಿಯಿಂದ ನರ್ತನ ಮಾಡುತ್ತಿರಿ.

ವರದಾನ:-

ಹೇಗೆ ನಿರಾಕಾರ ಆತ್ಮ ಮತ್ತು ಸಾಕಾರ ಶರೀರ – ಎರಡರ ಸಂಬಂಧದಿಂದ ಪ್ರತಿಯೊಂದು ಕಾರ್ಯವನ್ನೂ ಮಾಡಬಹುದು, ಅದೇರೀತಿ ಪ್ರತಿಯೊಂದು ಕರ್ಮ ಅಥವಾ ಸಂಕಲ್ಪವನ್ನೂ ನಿರಾಕಾರ ಹಾಗೂ ಸಾಕಾರ ತಂದೆಯಿಬ್ಬರನ್ನೂ ಜೊತೆ ಅಥವಾ ಸನ್ಮುಖದಲ್ಲಿ ಇಟ್ಟುಕೊಳ್ಳುತ್ತಾ ಮಾಡುತ್ತೀರೆಂದರೆ ಸಫಲತಾಮೂರ್ತಿ ಆಗಿ ಬಿಡುವಿರಿ. ಏಕೆಂದರೆ ಯಾವಾಗ ಬಾಪ್ದಾದಾರವರು ಸನ್ಮುಖದಲ್ಲಿ ಇರುತ್ತಾರೆಂದರೆ ಅವಶ್ಯವಾಗಿ ಅವರಿಂದ ನಿರ್ಣಯ ತೆಗೆದುಕೊಂಡು, ನಿಶ್ಚಯ ಹಾಗೂ ನಿರ್ಭಯತೆಯಿಂದ ಮಾಡುವಿರಿ. ಇದರಿಂದ ಸಮಯ ಹಾಗೂ ಸಂಕಲ್ಪದ ಉಳಿತಾಯವಾಗುವುದು. ಯಾವುದೂ ಸಹ ವ್ಯರ್ಥವಾಗುವುದಿಲ್ಲ, ಪ್ರತಿಯೊಂದು ಕರ್ಮವು ಸ್ವತಹವಾಗಿಯೇ ಸಫಲವಾಗುವುದು.

ಸ್ಲೋಗನ್:-

ದಾದಿ ಪ್ರಕಾಶಮಣಿಯವರ 14ನೇ ಪುಣ್ಯ ಸ್ಮೃತಿ ದಿನದಂದು ಕ್ಲಾಸಿನಲ್ಲಿ ತಿಳಿಸುವುದಕ್ಕಾಗಿ ದಾದೀಜಿಯವರ ಮೂಲಕ ಪ್ರಾಪ್ತವಾಗಿರುವ ಅಮೂಲ್ಯವಾದ ಉಡುಗೊರೆ:

1. ಈಶ್ವರೀಯ ನಿಯಮ ಹಾಗೂ ಮರ್ಯಾದೆಗಳು ನಮ್ಮ ಜೀವನ ಸತ್ಯ ಶೃಂಗಾರ ಆಗಿದೆ, ಇದನ್ನು ಸದಾ ತಮ್ಮ ಜೀವನದಲ್ಲಿ ಧಾರಣೆ ಮಾಡಿಕೊಂಡು ಉನ್ನತಿ ಮಾಡಿಕೊಳ್ಳುತ್ತಿರಿ.

2. ಸದಾ ಇದೇ ನಶೆಯನ್ನಿಟ್ಟುಕೊಳ್ಳಿರಿ – ನಾವು ಭಗವಂತನ ಕಣ್ಮಣಿ ಆಗಿದ್ದೇವೆ, ಭಗವಂತನ ನಯನಗಳಲ್ಲಿ ಗುಪ್ತವಾಗಿ ಇರುತ್ತೀರೆಂದರೆ ಮಾಯೆಯ ಬಿರುಗಾಳಿಗಳು ಸ್ಥಿತಿಯನ್ನು ಅಲುಗಾಡಿಸಲು ಸಾಧ್ಯವಿಲ್ಲ. ಸದಾ ಬಾಬಾರವರ ಛತ್ರಛಾಯೆಯಲ್ಲಿ ಇರುತ್ತೀರೆಂದರೆ, ರಕ್ಷಕ ತಂದೆಯು ಸದಾ ರಕ್ಷಣೆ ಮಾಡುತ್ತಿರುತ್ತಾರೆ.

3. ನಮ್ಮೆಲ್ಲರ ಹೃದಯರಾಮ ಮತ್ತು ರಕ್ಷಕನು ಒಬ್ಬ ತಂದೆಯಾಗಿದ್ದಾರೆ, ಅವರಿಂದೊಗೇ ಹೃದಯದ ಲೇವಾದೇವಿಯನ್ನು ಮಾಡಿರಿ, ಎಂದಿಗೂ ಯಾವುದೇ ದೇಹಧಾರಿಯನ್ನು ಮಿತ್ರನನ್ನಾಗಿ ಮಾಡಿಕೊಂಡು, ಅವರೊಂದಿಗೆ ವ್ಯರ್ಥ ಚಿಂತನೆ ಮತ್ತು ಪರಚಿಂತನೆ ಮಾಡಬಾರದು.

4. ಎಂದಿಗೂ ಸಹ ಚಹರೆಯಲ್ಲಿ ಆಲಸ್ಯ, ತಿರಸ್ಕಾರದ ಚಿಹ್ನೆಯೂ ಬರಬಾರದು. ಸದಾ ಖುಷಿಯಾಗಿರಿ ಮತ್ತು ಖುಷಿಯನ್ನೇ ಹಂಚುತ್ತಿರಿ. ತಮ್ಮ ಸೇವಾಕೇಂದ್ರ ವಾತಾವರಣವನ್ನೂ ಭಾಗ್ಯವನ್ನು ಬೆಳಗಿಸಿಕೊಳ್ಳುವಂತೆ ಮಾಡಿರಿ, ಅದು ಪ್ರತಿಯೊಬ್ಬರನ್ನೂ ಭಾಗ್ಯಶಾಲಿಯನ್ನಾಗಿ ಮಾಡಿ ಬಿಡಬೇಕು.

5. ಅಂತರ್ಮುಖಿಯಾಗಿದ್ದು ಮುಖ ಹಾಗೂ ಮನಸ್ಸಿನ ಮೌನವನ್ನೆಷ್ಟು ಧಾರಣೆ ಮಾಡುವಿರಿ, ಅಷ್ಟು ಸ್ಥಾನದ ವಾಯುಮಂಡಲವು ಲೈಟ್ಮೈಟ್ನಿಂದ ಸಂಪನ್ನವಾಗುವುದು ಹಾಗೂ ಅದರ ಪ್ರಭಾವವು ಬರುವವರ ಮೇಲೆ ಬೀರುತ್ತದೆ – ಇದೇ ಸೂಕ್ಷ್ಮವಾಗಿ ಸಕಾಶ ಕೊಡುವ ಸೇವೆಯಾಗಿದೆ.

6. ಯಾವುದೇ ಕಾರಣಕ್ಕೆ ವಶರಾಗಿ ನನ್ನದು-ನಿನ್ನದು ಎನ್ನುವುದರಲ್ಲಿ ಬಂದು, ಪರಸ್ಪರದಲ್ಲಿ ಮತಭೇದದಲ್ಲಿ ಬರಬಾರದು. ಪರಸ್ಪರದಲ್ಲಿನ ಮನಸ್ತಾಪಗಳೇ ಸೇವೆಯಲ್ಲಿ ಅತಿ ದೊಡ್ಡ ವಿಘ್ನವಾಗಿದೆ, ಈಗ ಈ ವಿಘ್ನದಿಂದ ಮುಕ್ತರಾಗಿರಿ ಹಾಗೂ ಅನ್ಯರನ್ನೂ ಮುಕ್ತಗೊಳಿಸಿರಿ.

7. ಒಬ್ಬರಿನ್ನೊಬ್ಬರ ವಿಚಾರಗಳಿಗೆ ಗೌರವನ್ನು ಕೊಟ್ಟು, ಪ್ರತಿಯೊಬ್ಬರ ಮಾತನ್ನೂ ಮೊದಲು ಆಲಿಸಿರಿ ನಂತರ ನಿರ್ಣಯ ತೆಗೆದುಕೊಳ್ಳುತ್ತೀರೆಂದರೆ ಎರಡು ಮತಗಳಾಗುವುದಿಲ್ಲ. ಹಿರಿಯರು-ಕಿರಿಯರು ಪ್ರತಿಯೊಬ್ಬರಿಗೂ ಅವಶ್ಯವಾಗಿ ಗೌರವ ಕೊಡಿ.

8. ಈಗ ಬಾಬಾರವರ ಮಕ್ಕಳೆಲ್ಲರೂ ಅಂತಹ ಸಂತುಷ್ಟತೆಯ ಗಣಿಯಾಗಬೇಕು, ಅದರಿಂದ ತಮ್ಮನ್ನು ನೋಡಿ ಪ್ರತಿಯೊಬ್ಬರೂ ಸಂತುಷ್ಟವಾಗಿ ಬಿಡಬೇಕು. ಸದಾ ಸಂತುಷ್ಟವಾಗಿ ಇರಬೇಕು ಹಾಗೂ ಅನ್ಯರನ್ನೂ ಸಂತುಷ್ಟ ಪಡಿಸಿರಿ.

9. ಸದಾ ನಾಲ್ಕು ಮಂತ್ರಗಳನ್ನು ನೆನಪಿಟ್ಟುಕೊಳ್ಳಿರಿ – 1. ಎಂದಿಗೂ ಹುಡುಗಾಟಿಕೆಯಲ್ಲಿ ಬರಬಾರದು, ಸದಾ ಅಲರ್ಟ್ ಆಗಿರಬೇಕು. 2. ಯಾರನ್ನೂ ತಿರಸ್ಕರಿಸಬಾರದು, ಸರ್ವರ ಪ್ರತಿ ಶುಭ ಭಾವನೆಯನ್ನಿಡಬೇಕು. 3. ಯಾರೊಂದಿಗೂ ಈರ್ಷ್ಯೆ ಪಡಬಾರದು, ಉನ್ನತಿಯ ಸ್ಪರ್ಧೆಯನ್ನೇ ಮಾಡಬೇಕು. 4. ಎಂದಿಗೂ ಸಹ ಯಾವುದೇ ವ್ಯಕ್ತಿ, ವಸ್ತು ಅಥವಾ ವೈಭವದ ಕಡೆ ಪ್ರಭಾವಿತರು ಆಗಬಾರದು, ಸದಾ ಒಬ್ಬ ತಂದೆಯದೇ ಪ್ರಭಾವದಲ್ಲಿರಬೇಕು.

10. ನಾವೆಲ್ಲರೂ ರಾಯಲ್ ತಂದೆಯ ರಾಯಲ್ ಮಕ್ಕಳಾಗಿದ್ದೇವೆ, ಸದಾ ಸ್ವಯಂನಲ್ಲಿ ರಾಯಲ್ಟಿ (ಘನತೆ) ಹಾಗೂ ಪವಿತ್ರತೆಯ ಸಂಸ್ಕಾರವನ್ನು ತುಂಬಿಕೊಳ್ಳಬೇಕು, ಗುಲಾಮರಾಗುವ ಸಂಸ್ಕಾರಗಳಿಂದ ಮುಕ್ತರಾಗಿ ಇರಬೇಕು. ಸತ್ಯತೆಯನ್ನೆಂದಿಗೂ ಬಿಡಬಾರದು.

11. ನಿತ್ಯವೂ ಪ್ರತಿಯೊಬ್ಬರೂ ಅವಶ್ಯವಾಗಿ ಪ್ರತೀ ಗಂಟೆಯಲ್ಲಿ ಐದು ನಿಮಿಷಗಳಾದರೂ ಶಾಂತಿಯ ಅನುಭೂತಿಯನ್ನು ಮಾಡುತ್ತೀರೆಂದರೆ, ಅನೇಕ ಮಾತುಗಳಿಂದ ವಿಜಯಿಗಳಾಗುವ ಶಕ್ತಿಯು ಬರುವುದು. ಯಾವಾಗ ಜ್ಞಾನ ಸಹಿತ ಯೋಗದಲ್ಲಿ ಇರುತ್ತೀರಿ, ಆಗಲೇ ಮಾಯೆಯ ಮೇಲೆ ವಿಜಯಿಯಾಗಬಹುದು.

12. ಸೇವೆಯ ಜೊತೆ-ಜೊತೆಗೆ ಸ್ವ-ಸ್ಥಿತಿಯು ಏಕರಸವಾಗಿರಲಿ, ಅದಕ್ಕಾಗಿ ಯೋಗ ಭಟ್ಟಿಯ ಅವಶ್ಯಕತೆ ಬಹಳಷ್ಟಿದೆ, ಇದರಲ್ಲಿ ಎಲ್ಲರನ್ನೂ ಸಂಘಟನೆಯಲ್ಲಿ ಕುಳಿತುಕೊಂಡು ಅಭ್ಯಾಸ ಮಾಡಬೇಕಾಗಿದೆ. ಇದರಿಂದ ಸಂಘಟನೆಯ ಬಲವೂ ಸಿಗುವುದು.

13. ತಮ್ಮ ಚಹರೆಯಲ್ಲೆಂದಿಗೂ ಸಹ ಬೇಸರ, ತಿರಸ್ಕಾರದ ಚಿಹ್ನೆಗಳೇ ಕಾಣಿಸಬಾರದು. ಒಂದುವೇಳೆ ಪರಸ್ಪರದಲ್ಲಿ 19-20 ಮಾತುಗಳೇ ನಡೆದಿರಬಹುದು, ಆದರೂ ತಮ್ಮ ತಪಸ್ಸಿನಿಂದ ಅದನ್ನು ನಶಿಸಿ ಹಾಕಿರಿ. ಒಬ್ಬರ ಬಗ್ಗೆ ಇನ್ನ್ನೊಬ್ಬರ ಮುಂದೆ ವರ್ಣನೆ ಮಾಡಬಾರದು. ವರ್ಣನೆ ಮಾಡುವುದರಿಂದ ವಾಯುಮಂಡಲವು ಹಾಳಾಗಿ ಬಿಡುವುದು.

14. ಮನಸ್ಸನ್ನು ಯಾರೆಷ್ಟಾದರೂ ಹಾಳು ಮಾಡುವ ಪ್ರಯತ್ನದಲ್ಲಿರಲಿ ಆದರೆ ಅದರ ಪ್ರಭಾವದಲ್ಲೆಂದಿಗೂ ಬರಬಾರದು. ಸಂಗದೋಷವೂ ಬಹಳ ಹಾಳಾಗುವುದು, ಅದರಿಂದ ಬುದ್ಧಿಯನ್ನು ಬದಲಾಗಿ ಬಿಡುತ್ತದೆ. ಎಲ್ಲರೂ ಮಿತ್ರರೇ ಆಗಿದ್ದಾರೆ, ಎಲ್ಲರೊಂದಿಗೂ ಪ್ರೀತಿಯಿಂದ ಇರಿ. ಆದರೆ ವ್ಯಕ್ತಿಗತವಾಗಿ ಯಾರನ್ನೂ ಮಿತ್ರನನ್ನಾಗಿ ಮಾಡಿಕೊಳ್ಳಬಾರದು – ಇದನ್ನು ವಿಶೇಷವಾಗಿ ಗಮನದಲ್ಲಿ ಇಟ್ಟುಕೊಳ್ಳಿರಿ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top