24 September 2021 KANNADA Murli Today | Brahma Kumaris

Read and Listen today’s Gyan Murli in Kannada

September 23, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವಿಲ್ಲಿ ಶ್ರೀಕೃಷ್ಣನಂತೆ ರಾಜಕುಮಾರನಾಗುವ ವಿದ್ಯೆಯನ್ನು ಓದುತ್ತೀರಿ, ನಿಮಗೆ ಓದಿಸುವವರು ಸ್ವಯಂ ಭಗವಂತನಾಗಿದ್ದಾರೆ”

ಪ್ರಶ್ನೆ:: -

ತಂದೆಯು ಭಗವಾನುವಾಚ ಶಬ್ಧವನ್ನು ಹೇಳುತ್ತಾರೆಂದರೆ ಕೆಲವು ಮಕ್ಕಳೂ ಸಹ ತಬ್ಬಿಬ್ಬಾಗುತ್ತಾರೆ – ಏಕೆ?

ಉತ್ತರ:-

ಏಕೆಂದರೆ ಭಗವಂತನಂತೂ ಗುಪ್ತವಾಗಿದ್ದಾರೆ ಆದ್ದರಿಂದ ಭಹುಷಃ ಈ ದಾದಾರವರೇ ಭಗವಾನುವಾಚ ಹೇಳಿದ್ದಾರೆಂದು ಅವರು ತಿಳಿದುಕೊಳ್ಳುತ್ತಾರೆ ಆದರೆ ನಿರಾಕಾರ ಭಗವಂತನಿಗೆ ಮಾತನಾಡುವುದಕ್ಕಾಗಿ ಅವಶ್ಯವಾಗಿ ಮುಖ ಬೇಕಲ್ಲವೆ. ತಂದೆಯು ಹೇಳುತ್ತಾರೆ – ನಾನು ಹೇಗೆ ಇವರಲ್ಲಿ ಪ್ರವೇಶ ಮಾಡಿ ಓದಿಸುತ್ತೇನೆ ಎಂಬುದು ಅದ್ಭುತ ತಿಳಿದುಕೊಳ್ಳುವ ಮಾತಾಗಿದೆ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಭಗವಾನುವಾಚ. ಭಗವಂತನು ಏನು ಹೇಳುತ್ತಾರೆ? ಈ ಭಗವಾನುವಾಚವನ್ನು ಯಾರು ಹೇಳಿದರು? ಕಣ್ಣಿಗೆ ಯಾರು ಕಾಣಿಸುತ್ತಿಲ್ಲ, ಮನುಷ್ಯರಿಗೆ ಭಗವಂತನೆಂದು ಹೇಳಲಾಗುವುದಿಲ್ಲ. ಇಲ್ಲಿ ಮಾತನಾಡುತ್ತಿರುವವರೇ ಭಗವಾನುವಾಚ ಹೇಳುತ್ತಾರೆಂದು ಕೆಲವರು ತಿಳಿದುಕೊಳ್ಳುತ್ತಾರೆ ಆದರೆ ನಿರಾಕಾರ ಭಗವಂತನು ಹೇಳುತ್ತಿದ್ದಾರೆ, ಇದನ್ನು ಕೇವಲ ನೀವೇ ತಿಳಿದುಕೊಳ್ಳುತ್ತೀರಿ. ಇಲ್ಲಿ ಯಾರು ಕುಳಿತಿದ್ದಾರೆ! ಭಗವಂತ ಎಲ್ಲಿದ್ದಾರೆ! ಇದು ಹೊಸ ಮಾತಾಗಿದೆಯಲ್ಲವೆ ಆದ್ದರಿಂದ ಮನುಷ್ಯರು ತಬ್ಬಿಬ್ಬಾಗುತ್ತಾರೆ ಆದರೆ ಭಗವಾನುವಾಚವು ಅವಶ್ಯವಾಗಿ ಇದೆ. ತಿಳಿಸುತ್ತಾರೆ, ನಾನು ಮಕ್ಕಳಿಗೆ ರಾಜಯೋಗವನ್ನು ಕಲಿಸುತ್ತಿದ್ದೇನೆ. ನರನಿಂದ ನಾರಾಯಣ ಅಥವಾ ಕೃಷ್ಣ, ನಾರಿಯನ್ನು ಲಕ್ಷ್ಮೀ ಅಥವಾ ರಾಧೆಯನ್ನಾಗಿ ಮಾಡುವುದಕ್ಕಾಗಿ ಯೋಗ ಮತ್ತು ಜ್ಞಾನವನ್ನು ಕಲಿಸುತ್ತೇನೆ. ಇದಕ್ಕಿಂತ ಮತ್ತೇನು ಬೇಕು! ನಿಮ್ಮನ್ನು ನಾನು ರಾಜಾಧಿ ರಾಜ, ರಾಜಕುಮಾರರಿಗೂ ರಾಜ ಕುಮಾರರನ್ನಾಗಿ ಮಾಡುತ್ತೇನೆ. ರಾಜಕುಮಾರ-ಕುಮಾರಿಯರೂ ಸಹ ಮಂದಿರಗಳಿಗೆ ಹೋಗುತ್ತಾರಲ್ಲವೆ. ವಿಕಾರಿ ರಾಜಕುಮಾರರು ನಿರ್ವಿಕಾರಿ ರಾಜಕುಮಾರನಾದ ಶ್ರೀಕೃಷ್ಣನಿಗೆ ನಮಸ್ಕಾರ ಮಾಡುತ್ತಾರೆ ಅಂದಾಗ ನಾನು ನಿಮ್ಮನ್ನು ರಾಜಕುಮಾರರಿಗೂ ರಾಜಕುಮಾರರನ್ನಾಗಿ ಮಾಡುತ್ತೇನೆ. ಶ್ರೀಕೃಷ್ಣನಂತೆ ಸ್ವರ್ಗದ ರಾಜಕುಮಾರರಾಗಿರಿ. ಜ್ಞಾನವನ್ನು ಓದುವುದರಿಂದಲೇ ಆಗುತ್ತೀರಲ್ಲವೆ. ವೈದ್ಯರು ಅಥವಾ ವಕೀಲರು ವಿದ್ಯಾರ್ಥಿಗಳಿಗೆ ನಾನು ನಿಮ್ಮನ್ನು ವೈದ್ಯ ಅಥವಾ ವಕೀಲನನ್ನಾಗಿ ಮಾಡುತ್ತೇನೆಂದು ಹೇಳುತ್ತಾರಲ್ಲವೆ ಆದರೆ ಆ ವಿದ್ಯೆಯನ್ನು ಓದಿದಾಗಲೇ ಆಗುವರು. ತಂದೆಯು ತಿಳಿಸುತ್ತಾರೆ – ಮಕ್ಕಳೇ, ನೀವು ಬಹಳ ಚೆನ್ನಾಗಿ ತಿಳಿದುಕೊಂಡಿದ್ದೀರಿ, ರಾಜಯೋಗವನ್ನು ಕಲಿಸುವವರು ಒಬ್ಬರೇ ಭಗವಂತನಾಗಿದ್ದಾರೆ, ಶ್ರೀಕೃಷ್ಣನಲ್ಲ. ರಾಧೆ-ಕೃಷ್ಣರು ಬೇರೆ-ಬೇರೆ ರಾಜ್ಯದ ಮಕ್ಕಳಾಗಿದ್ದಾರೆ. ಅವರ ಪರಸ್ಪರ ನಿಶ್ಚಿತಾರ್ಥವಾಗುತ್ತದೆ, ವಿವಾಹದ ನಂತರ ಹೆಸರು ಬದಲಾಗುತ್ತದೆ ಆದ್ದರಿಂದ ಚಿತ್ರದಲ್ಲಿಯೂ ಲಕ್ಷ್ಮೀ-ನಾರಾಯಣರ ಕೆಳಗೆ ರಾಧೆ-ಕೃಷ್ಣರನ್ನು ತೋರಿಸಿದ್ದಾರೆ.

ಈಗ ತಂದೆಯು ಚೆನ್ನಾಗಿ ತಿಳಿಸುತ್ತಾರೆ – ಈ ಬ್ರಹ್ಮನೂ ಸಹ ನಂಬರ್ವನ್ ಭಕ್ತನಾಗಿದ್ದರು, ಅಂತಿಮದಲ್ಲಿ ನಾರಾಯಣನ ಪೂಜೆ ಮಾಡುತ್ತಿದ್ದರು. ಕೃಷ್ಣನ ಭಕ್ತಿ ಅಥವಾ ನಾರಾಯಣನ ಭಕ್ತಿ ಮಾಡಿದರು. ಎರಡೂ ಒಂದೇ ಆಗಿದೆ. ಕೃಷ್ಣನೇ ದೊಡ್ಡವನಾಗಿ ನಾರಾಯಣನಾಗುತ್ತಾನೆ. ಈಗ ನಿಮ್ಮನ್ನು ನರನಿಂದ ನಾರಾಯಣರಾಗುವುದಕ್ಕಾಗಿ ರಾಜಯೋಗವನ್ನು ಕಲಿಸುತ್ತಿದ್ದೇವೆ. ಈಗ ನಿಮ್ಮ 84 ಜನ್ಮಗಳು ಮುಕ್ತಾಯವಾಯಿತು, ಈಗ ಇವರ ಆತ್ಮವೂ ಓದುತ್ತಿದೆ ಮತ್ತೆ ಭವಿಷ್ಯದಲ್ಲಿ ಶ್ರೀಕೃಷ್ಣನಾಗುತ್ತದೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ನೀವು ಜ್ಞಾನ ಚಿತೆಯನ್ನೇರಿ ಸುಂದರರಾಗುತ್ತೀರಿ. ಮತ್ತೆ ಕಾಮ ಚಿತೆಯನ್ನು ಏರಿ ಕಪ್ಪಾಗಿ ಬಿಟ್ಟಿದ್ದೀರಿ, ಇದು ಕಂಸ ಪುರಿಯಾಗಿದೆ. ನಾನು ನಿಮ್ಮನ್ನು ಕೃಷ್ಣ ಪುರಿಗೆ ಕರೆದುಕೊಂಡು ಹೋಗುವುದಕ್ಕಾಗಿ ಬಂದಿದ್ದೇನೆ. ಕೃಷ್ಣನೇ ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣ………. ಆಗಿದ್ದಾನೆ. ಇಲ್ಲಿ ಯಾರಲ್ಲಿಯೂ ಸರ್ವಗುಣಗಳಿಲ್ಲ. ನಾನು ಮಕ್ಕಳನ್ನು ಸಂಪೂರ್ಣ ನಿರ್ವಿಕಾರಿಗಳನ್ನಾಗಿ ಮಾಡಲು ಬಂದಿದ್ದೇನೆ. ಯೋಗಬಲದಿಂದ ಆಗಬೇಕಾಗಿದೆ, ಹಿಂಸಕ ಯುದ್ಧವು ಬಾಹುಬಲವಾಗಿದೆ ಯಾವುದು ಬಿಲ್ಲು- ಬಾಣಗಳಿಂದ ಆಗುತ್ತಿತ್ತು ನಂತರ ಬಂದೂಕು, ಆಯುಧಗಳಿಂದ ಆಯಿತು. ಈಗ ಬಾಂಬುಗಳಿಂದ ಆಗುತ್ತದೆ. ಅವರೇ ಸ್ವಯಂ ಹೇಳುತ್ತಾರೆ – ನಾವು ಇಂತಹ ಬಾಂಬುಗಳನ್ನು ತಯಾರು ಮಾಡುತ್ತೇವೆ ಯಾವುದರಿಂದ ಮನೆಯಲ್ಲಿ ಕುಳಿತೇ ಎಲ್ಲವನ್ನೂ ಸಮಾಪ್ತಿ ಮಾಡುತ್ತೇವೆ ಮತ್ತೆ ಮಿಲಿಟರಿಯವರು ತಾನೆ ಏನು ಮಾಡಲು ಸಾಧ್ಯ! ತಂದೆಯು ತಿಳಿಸುತ್ತಾರೆ – ಮಧುರಾತಿ ಮಧುರ ಮಕ್ಕಳೇ, ಇದು ಪಾಠಶಾಲೆಯಾಗಿದೆ, ನಾನು ನಿಮ್ಮನ್ನು ರಾಜಕುಮಾರ ಶ್ರೀಕೃಷ್ಣನಂತೆ ಮಾಡುತ್ತೇನೆ, ಕೃಷ್ಣನೇ ಸತ್ಯಯುಗದ ಮೊದಲ ರಾಜಕುಮಾರನಾಗಿದ್ದನು, 84 ಜನ್ಮಗಳನ್ನು ತೆಗೆದುಕೊಂಡು ಈಗ ಕಲಿಯುಗದಲ್ಲಿ ವಿಕಾರಿಯಾಗಿದ್ದಾರೆ. ಭಾರತದಲ್ಲಿಯೇ ಅವರ ರಾಜ್ಯವಿತ್ತು ಮತ್ತೆ ಪುನರ್ಜನ್ಮವನ್ನು ತೆಗೆದುಕೊಳ್ಳಬೇಕಾಯಿತಲ್ಲವೆ. ಕೃಷ್ಣನಿಗೆ ಭಗವಂತನೆಂದು ಹೇಳುವುದಾದರೆ ಭಗವಂತನು ಪುನರ್ಜನ್ಮದಲ್ಲಿ ಹೇಗೆ ಬರುವರು? ಭಗವಂತನಂತೂ ನಿರಾಕಾರನಾಗಿದ್ದಾರೆ. ಅವರೊಬ್ಬರೇ ರಚಯಿತನಾಗಿದ್ದಾರೆ ಉಳಿದೆಲ್ಲವೂ ರಚನೆಯಾಗಿದೆ ಆದ್ದರಿಂದಲೇ ನಾವಾತ್ಮರೆಲ್ಲರೂ ಸಹೋದರ -ಸಹೋದರರಾಗಿದ್ದೇವೆ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ, ನೀವು ಬ್ರಹ್ಮಾಕುಮಾರ-ಕುಮಾರಿಯರು ಪರಸ್ಪರ ಸಹೋದರ-ಸಹೋದರಿಯಾದಿರಿ ಅಂದಮೇಲೆ ಪರಸ್ಪರ ಕುದೃಷ್ಟಿಯಿರಲು ಹೇಗೆ ಸಾಧ್ಯ! ನೀವು ಒಬ್ಬ ತಂದೆಯಿಂದ ಭವಿಷ್ಯಕ್ಕಾಗಿ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ಒಂದುವೇಳೆ ಪವಿತ್ರರಾಗಿಲ್ಲವೆಂದರೆ ಶಾಂತಿಧಾಮ, ಸುಖಧಾಮದಲ್ಲಿ ಹೋಗಲು ಹೇಗೆ ಸಾಧ್ಯ! ನಾವು ಪತಿತರಾಗಿ ಬಿಟ್ಟಿದ್ದೇವೆ, ಪಾವನರನ್ನಾಗಿ ಮಾಡಲು ಬನ್ನಿರಿ ಎಂದು ಕರೆಯುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ – ಮಕ್ಕಳೇ, ನನ್ನನ್ನು ನೆನಪು ಮಾಡಿರಿ, ಇದು ನಿಮ್ಮ ಅಂತಿಮ ಜನ್ಮವಾಗಿದೆ. ನೀವೆಲ್ಲಾ ಆತ್ಮರು ಈಗ ಮರಳಿ ವಾನಪ್ರಸ್ಥದಲ್ಲಿ ಹೋಗುತ್ತೀರಿ ಆದ್ದರಿಂದ ವಾನಪ್ರಸ್ಥಿಗಳಾಗಿದ್ದೀರಿ. ಈ ರೀತಿಯಾಗಿ ಯಾವುದೇ ಗುರುಗಳು ಮಾರ್ಗವನ್ನು ತಿಳಿಸಲು ಸಾಧ್ಯವಿಲ್ಲ. ಈ ಜ್ಞಾನವು ಒಬ್ಬ ತಂದೆಯ ಬಳಿಯಿದೆ, ಅವರೇ ಪತಿತ-ಪಾವನ ನಿರಾಕಾರನಾಗಿದ್ದಾರೆ. ತಂದೆಯು ತಿಳಿಸುತ್ತಾರೆ, ನನ್ನನ್ನು ನೆನಪು ಮಾಡಿರಿ, ಸ್ವಲ್ಪ ಸಮಯಕ್ಕಾಗಿ ನಾನು ಈ ತನುವಿನ ಆಧಾರವನ್ನು ತೆಗೆದುಕೊಂಡಿದ್ದೇನೆ. ಶರೀರವಿಲ್ಲದೆ ಆತ್ಮವು ಹೇಗೆ ಮಾತನಾಡುತ್ತದೆ! ಭಗವಾನುವಾಚ ಇದೆ, ನಾನು ವೃದ್ಧ ಸಾಧಾರಣ ತನುವಿನಲ್ಲಿ ಪ್ರವೇಶ ಮಾಡಿ ನೀವು ಮಕ್ಕಳಿಗೆ ಓದಿಸುತ್ತೇನೆ. ನಾನು ಗರ್ಭದಲ್ಲಿ ಬರುವುದಿಲ್ಲ. ಗರ್ಭದಲ್ಲಿ ಬರುವವರು ಪುನರ್ಜನ್ಮದಲ್ಲಿ ಬರಬೇಕಾಗುತ್ತದೆ. ನಾನು ಒಂದೇ ಬಾರಿ ಬರುತ್ತೇನೆ, ನನಗೆ ಪ್ರಕೃತಿಯ ಆಧಾರ ಬೇಕಾಗಿದೆ. ನಾನು ಇವರಲ್ಲಿ ಕುಳಿತು ನಿಮಗೆ ಓದಿಸುತ್ತೇನೆ. ಇವರಂತೂ ಮೊದಲು ತಮ್ಮ ವಜ್ರದ ವ್ಯಾಪಾರ ಮಾಡುತ್ತಿದ್ದರು, ಯಾವುದೇ ಗುರುಗಳು ಕಲಿಸಲಿಲ್ಲ. ಆಕಸ್ಮಿಕವಾಗಿಯೇ ತಂದೆಯು ಪ್ರವೇಶ ಮಾಡಿದರು, ಮಾಡಿ-ಮಾಡಿಸುವವರಾಗಿರುವ ಕಾರಣ ಇವರಿಂದ ಕರ್ತವ್ಯವನ್ನು ಮಾಡಿಸುತ್ತಾ ಇರುತ್ತಾರೆ. ಇವರೂ ಸಹ ಕಲಿಯುತ್ತಾ ಹೋಗುತ್ತಾರೆ. ನೀವೂ ಜೊತೆಯಲ್ಲಿ ಕಲಿಯುತ್ತಾ ಹೋಗುತ್ತೀರಿ. ಹೇಳುವುದು ನಿಮಗೆ ಆದರೆ ಮೊದಲು ನಾನು ಕೇಳಿಸಿಕೊಳ್ಳುತ್ತೇನೆ, ನೀವು ಮಕ್ಕಳಿಗೆ ಓದಿಸುವುದಕ್ಕಾಗಿ ಬರುತ್ತಾರೆ ಆದರೆ ಅದರಿಂದ ನಾನೂ ಸಹ ಓದುತ್ತಾ ಇರುತ್ತೇನೆ. ತಂದೆಯು ಮಕ್ಕಳಿಗೆ ರಾಜಯೋಗವನ್ನು ಕಲಿಸಲು ಬಂದಿದ್ದಾರೆ, ಈ ರೀತಿ ಎಂದೂ ಯಾರೂ ಓದಿಸುವುದಿಲ್ಲ. ಇದು ಪಾವನರಾಗುವ ಮಾತಾಗಿದೆ. ಈ ಸಂಗಮಯುಗವೇ ಪುರುಷೋತ್ತಮರಾಗುವ ಯುಗವಾಗಿದೆ. ಶ್ರೀಕೃಷ್ಣನು ಪುರುಷೋತ್ತಮನಾಗಿದ್ದನು, ಸ್ವಯಂವರದ ನಂತರ ಅವರ ದರ್ಜೆಯು ಸ್ವಲ್ಪ ಕಡಿಮೆ ಆಗಿ ಬಿಡುತ್ತದೆ ಆದ್ದರಿಂದ ಶ್ರೀಕೃಷ್ಣನಿಗೆ ಹೆಚ್ಚು ಮಹಿಮೆಯಿದೆ. ಹೆಸರೇ ಆಗಿದೆ – ಶ್ರೀಕೃಷ್ಣ ಪುರಿ. ಈಗ ಇದಕ್ಕೆ ಕಂಸ ಪುರಿಯೆಂದು ಹೇಳಲಾಗುತ್ತದೆ ಬಾಕಿ ಕೃಷ್ಣ ಮತ್ತು ಕಂಸನ ಕಥೆಯನ್ನು ಬರೆದಿದ್ದಾರೆ.

ಮಕ್ಕಳಿಗೆ ತಿಳಿಸಲಾಗಿದೆ – ಪರಿಪಕ್ವ ಅವಸ್ಥೆಯಾದಾಗ ಭಕ್ತಿಯು ತಾನಾಗಿಯೇ ಬಿಟ್ಟು ಹೋಗುತ್ತದೆ. ನೀವೆಂದೂ ಯಾರಿಗೂ ಭಕ್ತಿ ಮಾಡಬೇಡಿ ಎಂದು ಹೇಳಬಾರದು. ಅವರಿಗೆ ಜ್ಞಾನ ಕೊಡಬೇಕಾಗಿದೆ. ತಂದೆಯು ನಿಮಗೆ ಜ್ಞಾನವನ್ನು ಕೊಟ್ಟು ಸ್ವರ್ಗದ ರಾಜಕುಮಾರನನ್ನಾಗಿ ಮಾಡಲು ಬಂದಿದ್ದಾರೆ, ಕೃಷ್ಣನೂ ಸಹ ಸ್ವರ್ಗದ ಮಾಲೀಕನಾಗಿದ್ದಾನೆ, ಈಗ ಇಲ್ಲ. ಈಗ ಪುನಃ ಅವರೂ ಸಹ ರಾಜಯೋಗದ ಮೂಲಕ ಆಗುತ್ತಿದ್ದಾರೆ. ನೀವು ಪುರುಷಾರ್ಥ ಮಾಡಿ ತಂದೆಯನ್ನು ನೆನಪು ಮಾಡಬೇಕಾಗಿದೆ. ಸ್ವರ್ಗದ ಸ್ಥಾಪನೆ ಮಾಡುವವರು ಸ್ವರ್ಗದ ರಚಯಿತ ತಂದೆಯಾಗಿದ್ದಾರೆ, ಅವರೇ ಬಂದು ಹೊಸ ಸೃಷ್ಟಿಯನ್ನು ರಚಿಸುತ್ತಾರೆ. ಯಾವಾಗ ಕಲಿಯುಗವು ಮುಕ್ತಾಯವಾಗುವುದೋ ಆಗಲೇ ಅವರು ಮಾಡುವರು. ಸತ್ಯ-ತ್ರೇತಾಯುಗದಲ್ಲಿ ಬರುವುದಿಲ್ಲ, ನಾನು ಕಲ್ಪ-ಕಲ್ಪವೂ ಸಂಗಮಯುಗದಲ್ಲಿ ಬರುತ್ತೇನೆಂದು ಹೇಳಿದರು ಆದರೆ ಅವರು ಕಲ್ಪ ಎಂಬ ಶಬ್ಧವನ್ನು ತೆಗೆದು ಕೇವಲ ಯುಗೇ-ಯುಗೇ ಎಂದು ಬರೆದು ಬಿಟ್ಟಿದ್ದಾರೆ. ಅದರಲ್ಲಿಯೂ 4 ಯುಗಗಳಿವೆ, ಐದನೆಯದು ಇದು ಸಂಗಮ ಯುಗವಾಗಿದೆ. ಅಂದಮೇಲೆ 5 ವಿಕಾರಗಳೆಂದು ತಿಳಿಯಿರಿ ಆದರೆ ಇಷ್ಟೊಂದು ಮೀನು, ಮೊಸಳೆ ಪರಶುರಾಮನ ಅವತಾರವಿರುತ್ತದೆಯೇ? ಇವೆಲ್ಲವೂ ಶಾಸ್ತ್ರಗಳ ಮಾತಾಗಿವೆ, ಧರ್ಮದ ಹೆಸರು ಮತ್ತು ಭಾರತದ ಹೆಸರನ್ನು ಬದಲಾಯಿಸಿ ಬಿಟ್ಟಿದ್ದಾರೆ. ಹಿಂದೂ ಧರ್ಮ ಮತ್ತು ಹಿಂದೂಸ್ತಾನವೆಂದು ಹೇಳಿ ಬಿಡುತ್ತಾರೆ. ಭಾರತದ ಹೆಸರು ಏಕೆ ಬದಲಾಗಬೇಕು! ಯಧಾ ಯಧಾಹೀ ಧರ್ಮಸ್ಯ ಗ್ಲಾನಿರ್ಭವತಿ ಭಾರತಃ…. ಇದರಲ್ಲಿ ಭಾರತದ ಶಬ್ಧವೇ ಬರುತ್ತದೆ. ತಂದೆಯು ತಿಳಿಸುತ್ತಾರೆ – ನೀವು ಕೇವಲ ಒಂದು ಜನ್ಮವಷ್ಟೇ ಭಕ್ತಿ ಮಾಡಿಲ್ಲ, ದ್ವಾಪರದಿಂದ ಮಾಡಿದ್ದೀರಿ. ಭಕ್ತಿಯೂ ಸಹ ಮೊದಲು ಅವ್ಯಭಿಚಾರಿಯಿತ್ತು ಕೇವಲ ಶಿವನ ಭಕ್ತಿ ಮಾಡುತ್ತಿದ್ದರು. ಯಾವ ಶಿವ ತಂದೆಯೇ ಭಾರತವನ್ನು ಸ್ವರ್ಗವನ್ನಾಗಿ ಮಾಡಿದ್ದರು ಮತ್ತು ಈಗ ಪುನಃ ಸ್ವರ್ಗದ ಮಾಲೀಕರನ್ನಾಗಿ ಮಾಡಲು ಬಂದಿದ್ದಾರೆ. ಆದ್ದರಿಂದ ಪತಿತ ಶರೀರದಲ್ಲಿ ಕುಳಿತು ತಿಳಿಸುತ್ತಾರೆ – ಮಕ್ಕಳೇ, ನಾನು ಪತಿತ ಶರೀರದಲ್ಲಿ, ಪತಿತ ಪ್ರಪಂಚದಲ್ಲಿ, ಪತಿತರನ್ನು ಪಾವನ ಮಾಡಲು ಬರುತ್ತೇನೆ. ಭಕ್ತಿಮಾರ್ಗದಲ್ಲಾದರೂ ನನಗಾಗಿ ಎಷ್ಟು ದೊಡ್ಡ ಮಂದಿರವನ್ನು ಕಟ್ಟಿಸುತ್ತಾರೆ. ಎಷ್ಟು ಸ್ಪಷ್ಟ ಮಾತಾಗಿದೆ. ಇವರಲ್ಲಿ ತಂದೆಯ ಪ್ರವೇಶತೆಯಾಯಿತು ಮತ್ತು ಗೀತೆ ಓದುವುದನ್ನು ಬಿಟ್ಟು ಬಿಟ್ಟರು, ಭಕ್ತಿಯು ಬಿಟ್ಟು ಹೋಯಿತು. ಕಷ್ಟವಿಲ್ಲದೆ ಬಿಟ್ಟು ಬಿಟ್ಟರು. ಭಕ್ತಿ ಮಾಡಬೇಡಿ ಎಂದು ನಿಮಗೆ ಯಾರೂ ಹೇಳಲಿಲ್ಲ.

ಈಗ ನೀವು ಮಕ್ಕಳಿಗೆ ತಂದೆಯು ತಿಳಿಸುತ್ತಾರೆ – ಪುನಃ ನಾನು ನಿಮ್ಮನ್ನು ಕೃಷ್ಣ ಪುರಿಯ ಮಾಲೀಕರನ್ನಾಗಿ ಮಾಡುತ್ತೇನೆ. ಕೃಷ್ಣನದು 8 ಪೀಳಿಗೆಗಳು ನಡೆಯುತ್ತವೆ. ಮೊದಲು ಸತ್ಯಯುಗದ ರಾಜಕುಮಾರನೆಂದು ಹೇಳುತ್ತಾರೆ ನಂತರ ಸತ್ಯಯುಗದ ರಾಜನೆಂದು ಹೇಳುತ್ತಾರೆ. ಅವರದು 8 ಪೀಳಿಗೆಗಳು ನಡೆಯುತ್ತವೆ, ಆ ಸಮಯದಲ್ಲಿ ಅನ್ಯ ರಾಜ್ಯಗಳು ಇರುವುದಿಲ್ಲ. ಈಗ ತಂದೆಯು ತಿಳಿಸುತ್ತಾರೆ – ನೀವು ಮಕ್ಕಳೂ ಸಹ ಸತ್ಯಯುಗದ ರಾಜಕುಮಾರರಾಗಿರಿ. ಭಕ್ತಿಯಲ್ಲಿ ಯಾವುದೇ ಸುಖವಿಲ್ಲ. ಜ್ಞಾನದಿಂದ ನೀವು ಸ್ವರ್ಗದ ಮಾಲೀಕರಾಗುತ್ತೀರಿ. ಯಾರ ತಂದೆಯಾದರೂ ಶರೀರ ಬಿಟ್ಟರೆ ನಿಮ್ಮ ತಂದೆಯು ಎಲ್ಲಿಗೆ ಹೋದರೆಂದು ಕೇಳಿದರೆ ಸ್ವರ್ಗವಾಸಿಯಾದರು ಎಂದು ಹೇಳುತ್ತಾರೆ. ಆತ್ಮ ಮತ್ತು ಶರೀರ ಎರಡೂ ಹೋಯಿತೆಂದು ತಿಳಿಯುತ್ತಾರೆ ಆದರೆ ಶರೀರವನ್ನಂತೂ ಇಲ್ಲಿಯೇ ಬಿಟ್ಟು ಹೋದರು ಬಾಕಿ ಆತ್ಮವು ಹೋಯಿತು. ಇದರ ಅರ್ಥವು ಮೊದಲು ನರಕದಲ್ಲಿದ್ದರು, ಆತ್ಮವು ಶರೀರವನ್ನು ಬಿಟ್ಟು ಸ್ವರ್ಗಕ್ಕೆ ಹೋಯಿತೆಂದರೆ ಅಳುವ ಅವಶ್ಯಕತೆಯೇನಿದೆ? ಈಗ ಸ್ವರ್ಗವು ಇಲ್ಲಿದೆಯೇ? ಆದರೆ ತಿಳಿದುಕೊಳ್ಳುವುದಿಲ್ಲ. ಎಲ್ಲವೂ ಈಶ್ವರನ ಆಜ್ಞೆಯಾಗಿದೆ. ಸುಖ-ದುಃಖ ಎಲ್ಲವನ್ನೂ ಈಶ್ವರನೇ ಕೊಡುತ್ತಾನೆ, ಎಲ್ಲವೂ ಈಶ್ವರನ ರೂಪವಾಗಿದ್ದಾರೆಂದು ಹೇಳಿ ಬಿಡುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ – ನಾನು ಮಕ್ಕಳಿಗೆ ಹೇಗೆ ದುಃಖ ಕೊಡಬಲ್ಲೆನು! ತಂದೆಯಿಂದ ಮಕ್ಕಳು ಎಂದಾದರೂ ದುಃಖವನ್ನು ಬೇಡುವರೇ? ತಂದೆಯಂತೂ ಮಕ್ಕಳನ್ನು ಯೋಗ್ಯರನ್ನಾಗಿ ಮಾಡಿ ಆಸ್ತಿಯನ್ನು ಕೊಟ್ಟು ಹೋಗುತ್ತಾರೆ. ಬಾಕಿ ದುಃಖವಂತೂ ಪ್ರತಿಯೊಬ್ಬರಿಗೂ ತಮ್ಮ ಕರ್ಮಗಳನುಸಾರವೇ ಸಿಗುತ್ತದೆ. ತಂದೆಯು ತಿಳಿಸುತ್ತಾರೆ – ಈಗ ಮಕ್ಕಳೂ ಮೊದಲಾದವರನ್ನೂ ಬೇಡಬೇಡಿ, ಈಗ ಈ ಆಸ್ತಿ ಇತ್ಯಾದಿಗಳೆಲ್ಲವೂ ಸಮಾಪ್ತಿಯಾಗಲಿದೆ. ಇದು ನಿಮ್ಮ ಮಕ್ಕಳಿಗೇನು ಸಿಗುತ್ತದೆ! ನಿಮ್ಮ ಆಸ್ತಿಗೆ ನಿಮ್ಮ ಮಗನು ಮಾಲೀಕನಾಗಲು ಅಷ್ಟು ಸಮಯವೇ ಇಲ್ಲ. ಮಕ್ಕಳು ದೊಡ್ಡವರಾದಾಗಲೇ ಮಾಲೀಕರಾಗುವರು, ಆದರೆ ಈಗ ಅಷ್ಟು ಸಮಯವೇ ಉಳಿದಿಲ್ಲ. ವಿನಾಶವು ಸನ್ಮುಖದಲ್ಲಿದೆ. ಕಲಿಯುಗದಲ್ಲಿ ಇನ್ನೂ 40 ಸಾವಿರ ವರ್ಷಗಳಿದೆ, ಈ ಬ್ರಹ್ಮಾಕುಮಾರ-ಕುಮಾರಿಯರು ವಿನಾಶ-ವಿನಾಶ ಎಂದು ಮನುಷ್ಯರು ಹೇಳುತ್ತಾರೆ. ಹುಲಿ ಬಂತು ಹುಲಿ ಎಂದು ಕಥೆಯಿದೆಯಲ್ಲವೆ….. ಕೊನೆಗೂ ಬಂದಿತು ತಿಂದು ಹೋಯಿತಲ್ಲವೆ. ಸ್ವಲ್ಪ ಸ್ವಲ್ಪ ಕಾಲವು ಬರಬಹುದೆಂದು ಮನುಷ್ಯರು ತಿಳಿಯುತ್ತಾರೆ. ಇದಂತೂ ಆಗುತ್ತಲೇ ಇರುತ್ತದೆಯೆಂದು ತಿಳಿಯುತ್ತಾರೆ ಆದರೆ ನೀವು ಹೇಳುತ್ತೀರಿ, ಮಹಾಕಾಲನು ಬಂದಿದ್ದಾರೆ. ಶಿವ ತಂದೆಯು ಕಾಲರ ಕಾಲನು ಬಂದಿದ್ದಾರೆ. ಅವರು ಎಲ್ಲಾ ಆತ್ಮಗಳನ್ನು ಮರಳಿ ಕರೆದುಕೊಂಡು ಹೋಗುತ್ತಾರೆ. ಅಂದಮೇಲೆ ಶರೀರವನ್ನಂತೂ ಅವಶ್ಯವಾಗಿ ಬಿಡಬೇಕಾಗಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ – ಯೋಗದಿಂದ ಪವಿತ್ರರಾಗಿರಿ, ಆತ್ಮರನ್ನು ಪವಿತ್ರರನ್ನಾಗಿ ಮಾಡಿ ಮತ್ತೆ ಕರೆದುಕೊಂಡು ಹೋಗುತ್ತೇನೆ. ಒಂದುವೇಳೆ ಪವಿತ್ರರಾಗದಿದ್ದರೆ ಅಂತಿಮದಲ್ಲಿ ಬಹಳ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು ಮತ್ತು ಶ್ರೇಷ್ಠ ಪದವಿಯೂ ಸಿಗುವುದಿಲ್ಲ. ಶ್ರೀಕೃಷ್ಣನು ನಂಬರ್ವನ್ ಪಾಸ್-ವಿತ್-ಆನರ್ ಆಗಿದ್ದಾನೆ, ಕೃಷ್ಣನಿಗೆ ವಿದ್ಯಾರ್ಥಿ ವೇತನವೂ ಸಿಗುತ್ತದೆ. 21 ಜನ್ಮಗಳ ರಾಜ್ಯವನ್ನು ಪಡೆಯುತ್ತಾನೆ, ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ. ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ ಆದರೆ ಮತ್ತೆ ಮಾಯವಾಗಿ ಬಿಡುತ್ತದೆ. ಯಾರಿಗೂ ಭಕ್ತಿಯನ್ನು ಬಿಡಿಸಬಾರದು, ಭಕ್ತರಿಗೆ ಭಕ್ತಿಯ ಫಲವನ್ನು ಕೊಡಲು ತಂದೆಯು ಬಂದಿದ್ದಾರೆ. ಹೇಳುತ್ತಾರೆ – ನಾನು ಕಲ್ಪದ ಹಿಂದಿನ ತರಹ ಮತ್ತೆ ಅದೇ ಸಾಧಾರಣ ತನುವಿನಲ್ಲಿ ಬಂದಿದ್ದೇನೆ, ಕಲ್ಪ-ಕಲ್ಪವೂ ಬಂದು ನಿಮಗೆ ತಿಳಿಸುತ್ತೇನೆ, ಇದು ಶ್ರೇಷ್ಠಾತಿ ಶ್ರೇಷ್ಠ ವಿದ್ಯೆಯಾಗಿದೆ. ನಾವು ಸತೋಪ್ರಧಾನರಾಗಿದ್ದೆವು ಎಂದು ನೀವು ತಿಳಿದುಕೊಂಡಿದ್ದೀರಿ. ಈಗ ತಮೋಪ್ರಧಾನರಾಗಿದ್ದೇವೆ ಪುನಃ ಭಾರತವೇ ಸತೋಪ್ರಧಾನವಾಗುತ್ತದೆ. ಅನ್ಯ ಧರ್ಮದವರು ಇಷ್ಟೊಂದು ಸುಖವನ್ನೂ ನೋಡಲಿಲ್ಲ ಮತ್ತು ದುಃಖವನ್ನೂ ನೋಡಲಿಲ್ಲ. ವಿದೇಶದವರ ಬಳಿ ಬಹಳ ಹಣವಿದೆ ಆದ್ದರಿಂದ ಬಡದೇಶಕ್ಕೆ ಸಾಲ ಕೊಡುತ್ತಾರೆ. ನಾವು ಅವರಿಂದಲೇ ತಂದಿರುವ ಹಣವನ್ನು ಅವರಿಗೆ ಹಿಂತಿರುಗಿಸುತ್ತಿದ್ದೇವೆ ಎಂದು ಪಾಪ ಅವರಿಗೆ ಗೊತ್ತಿಲ್ಲ. ಸಂಪೂರ್ಣ ಘೋರ ಅಂಧಕಾರದಲ್ಲಿ ಕುಂಭಕರ್ಣನ ನಿದ್ರೆಯಲ್ಲಿ ಮಲಗಿದ್ದಾರೆ. ಕೊನೆಯಲ್ಲಿ ಹಾಯ್ ಹಾಯ್ ಎನ್ನುತ್ತಾ ಕೇಳುತ್ತಾರೆ – ಆಗ ನೀವು ಟೂ ಲೇಟ್ ಎಂದು ಹೇಳುತ್ತೀರಿ ಏಕೆಂದರೆ ಯುದ್ಧವು ಆರಂಭವಾಗಿ ಬಿಡುವುದು ನಂತರ ಏನು ಮಾಡುತ್ತೀರಿ? ಬಿದುರಿನ ಕಾಡಿಗೆ ಬೆಂಕಿ ಬೀಳುತ್ತದೆ ಎಂದರೆ ಮತ್ತೆ ಬಹಳ ಟೂಲೇಟ್ ಆಗಿ ಬಿಡುತ್ತದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ – ಮಕ್ಕಳೇ, ಈಗ ಬೇಗ-ಬೇಗ ಪುರುಷಾರ್ಥ ಮಾಡುತ್ತಾ ಹೋಗಿರಿ. ತಂದೆಯು ಯಾವುದೇ ಹೆಚ್ಚು ಕಷ್ಟವನ್ನು ಕೊಡುವುದಿಲ್ಲ. ತಂದೆಯು ಬಂದು ತಿಳಿಸುತ್ತಾರೆ – ಬಾಬಾ, ಒಂದುವೇಳೆ ನಾವು ಪೂಜೆ ಮಾಡದಿದ್ದರೆ ಅವರು ಹೇಳುತ್ತಾರೆ, ಇವರು ನಾಸ್ತಿಕನಾಗಿ ಬಿಟ್ಟರು ಎಂದು ಅವರು ಹೇಳುತ್ತಾರೆ, ಏನು ಮಾಡುವುದು! ತಂದೆಯು ಸಲಹೆ ನೀಡುತ್ತಾರೆ. ಸಾಕ್ಷಿಯಾಗಿ ತಂದೆಯ ನೆನಪಿನಲ್ಲಿರಿ, ಹೊರಗಿನಿಂದ ಸ್ವಲ್ಪ-ಸ್ವಲ್ಪ ಪೂಜೆ ಮಾಡಿಬಿಡಿ. ಒಂದಾಗಿದೆ- ಹೃದಯಪೂರ್ವಕವಾಗಿ ಪೂಜೆ ಮಾಡುವುದು, ಇನ್ನೊಂದಾಗಿದೆ ಖುಷಿ ಪಡಿಸುವುದಕ್ಕಾಗಿ ಪೂಜೆ ಮಾಡುವುದು. ಆಂತರ್ಯದಲ್ಲಿ ನೀವು ಶಿವ ತಂದೆಯನ್ನು ನೆನಪು ಮಾಡಬೇಕಾಗಿದೆ. ಒಂದುವೇಳೆ ಯಾರಾದರೂ ತೊಂದರೆ ಕೊಡುತ್ತಾರೆಂದರೆ ಪೂಜೆ ಮಾಡಿ ತೋರಿಸಿ ಆಗ ಅವರೂ ಖುಷಿಯಾಗಿ ಬಿಡುವರು. ಇದೇನೂ ಪಾಪದ ಕೆಲಸವಲ್ಲ. ತಂದೆಯಂತೂ ಅನೇಕರಿಗೆ ಈ ಮಾತನ್ನು ಹೇಳುತ್ತಾರೆ – ಮಕ್ಕಳೇ, ಭಲೆ ವಿವಾಹ ಮೊದಲಾದ ಸಮಾರಂಭಗಳಿಗೆ ಹೋಗಿ, ಎರಡೂ ಕಡೆ ನಿಭಾಯಿಸಬೇಕಾಗಿದೆ. ಅಲ್ಲಿಯೂ ಸಹ ತಿಳಿಸುತ್ತಾ-ತಿಳಿಸುತ್ತಾ ಯಾವುದಾದರೊಂದು ಬಾಣವು ನಾಟುವುದು. ಯುಕ್ತಿಯಿಂದ ನಡೆಯಬೇಕಾಗಿದೆ. ತಂದೆಯ ಆಜ್ಞೆಯಾಗಿದೆ – ಮಕ್ಕಳೇ, ಈಗ ಪತಿತರಾಗಬಾರದು, ಪವಿತ್ರರಾಗುವುದರಿಂದಲೇ ನೀವು ಕೃಷ್ಣ ಪುರಿಯ ಮಾಲೀಕರಾಗುತ್ತೀರಿ. ಶಿವ ತಂದೆಯನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ವಿಶ್ವದ ಮಾಲೀಕರಾಗುತ್ತೀರಿ. ಮಕ್ಕಳೇ, ಇಂತಿಂತಹ ಯುಕ್ತಿಯಿಂದ ತಮ್ಮ ಮಿತ್ರ ಸಂಬಂಧಿಗಳಿಗೆ ತಿಳಿಸಬೇಕಾಗಿದೆ, ಅದು ದೈಹಿಕ ಯಾತ್ರೆ ಇದು ಆತ್ಮಿಕ ಯಾತ್ರೆಯಾಗಿದೆ. ಈ ಆತ್ಮಿಕ ಯಾತ್ರೆಯನ್ನು ತಂದೆಯು ಕಲಿಸುತ್ತಾರೆ. ತಿಳಿಸುತ್ತಾರೆ, ಮಕ್ಕಳೇ ನನ್ನೊಬ್ಬನನ್ನೇ ನೆನಪು ಮಾಡಿರಿ ಆಗ ಪತಿತರಿಂದ ಪಾವನರಾಗುತ್ತೀರಿ, ಮತ್ತೆಲ್ಲಾ ದುಃಖಗಳೂ ದೂರವಾಗುತ್ತವೆ. ಕೆಲವರೇ ವಿರಳ ವ್ಯಾಪಾರಿಗಳು ಈ ವ್ಯಾಪಾರ ಮಾಡುವರು ಅರ್ಥಾತ್ ಸ್ವರ್ಗದ ರಾಜ್ಯಭಾಗ್ಯವನ್ನೂ ತೆಗೆದುಕೊಳ್ಳುವರು. ಶ್ರೀಮತದಂತೆ ನಡೆಯುತ್ತಾ ಇರಿ, ಹಣವನ್ನು ವ್ಯರ್ಥವಾಗಿ ಏನೂ ಫಲವಿಲ್ಲದೆ ಖರ್ಚು ಮಾಡುವುದಲ್ಲ, ಮನೆಯನ್ನೂ ಸಂಭಾಲನೆ ಮಾಡಬೇಕು, ಮಕ್ಕಳ ಪಾಲನೆಯನ್ನೂ ಮಾಡಬೇಕಾಗಿದೆ. ಕೇವಲ ಶ್ರೀಮತದಂತೆ ನಡೆಯಬೇಕಾಗಿದೆ. ಸಲಹೆ ತೆಗೆದುಕೊಳ್ಳಿ, ಬಾಬಾ ಈ ಸ್ಥಿತಿಯಲ್ಲಿ ನಾವು ಏನು ಮಾಡುವುದು! ಬಾಬಾ ನಮ್ಮ ಮಗಳು ವಿವಾಹ ಆಗಬೇಕೆಂದು ಹೇಳುತ್ತಾರೆ ಎಂದು ತಂದೆಗೆ ಹೇಳಿದಾಗ ತಂದೆಯು ಹೇಳುತ್ತಾರೆ – ವಿವಾಹ ಮಾಡಲೇಬೇಕಾಗುವುದು ಏಕೆಂದರೆ ಅವರಿಗೆ ಪಾಲು ಇದೆ, ಅವರಿಗೆ ಕೊಟ್ಟು ಬಿಡಿ. ತಂದೆಯು ಕೇವಲ ತಿಳಿಸುತ್ತಾರೆ ಆದರೂ ಏನಾದರೂ ಕೇಳುವುದಿದ್ದರೆ ಕೇಳಿ ಶ್ರೀಮತದಂತೆ ನಡೆಯಿರಿ. ಮಕ್ಕಳು ತಂದೆಯ ಆಜ್ಞೆಯಂತೆ ನಡೆಯಬೇಕಾಗಿದೆ, ಇದರಲ್ಲಿಯೇ ಕಲ್ಯಾಣವಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಪ್ರತೀ ಕರ್ಮವನ್ನು ಸಾಕ್ಷಿಯಾಗಿ ಶಿವ ತಂದೆಯ ನೆನಪಿನಲ್ಲಿ ಮಾಡಬೇಕಾಗಿದೆ. ಲೌಕಿಕ-ಅಲೌಕಿಕ ಎರಡೂ ಕಡೆ ಸಂಬಂಧವನ್ನು ನಿಭಾಯಿಸಬೇಕಾಗಿದೆ. ಲೌಕಿಕದೊಂದಿಗೆ ಯುಕ್ತಿಯುಕ್ತವಾಗಿ ನಡೆಯಬೇಕಾಗಿದೆ.

2. ಈ ಸಮಯವು ಅಂತಿಮ ಜನ್ಮದಲ್ಲಿಯೂ ಇದು ವಾನಪ್ರಸ್ಥ ಸ್ಥಿತಿಯಾಗಿದೆ, ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಆದ್ದರಿಂದ ಅವಶ್ಯವಾಗಿ ಮನೆಗೆ ಹೋಗಬೇಕಾಗಿದೆ, ಯಾವುದೇ ಬಂಧನಗಳನ್ನು ಮಾಡಿಕೊಳ್ಳಬಾರದು.

ವರದಾನ:-

ಯಾವುದೇ ಪ್ರಕಾರದ ವಿಘ್ನಗಳಿಂದ, ಬಲಹೀನತೆಗಳಿಂದ ಅಥವಾ ಹಳೆಯ ಸಂಸ್ಕಾರಗಳಿಂದ ಮುಕ್ತಿ ಬಯಸುತ್ತೀರೆಂದರೆ, ಶಕ್ತಿಯ ಧಾರಣೆ ಮಾಡಿರಿ ಅರ್ಥಾತ್ ಅಲಂಕಾರಿ ರೂಪದವರಾಗಿರಿ. ಯಾವ ಅಲಂಕಾರಗಳಿಂದ ಸದಾ ಶೃಂಗಾರಿತರು ಆಗಿರುತ್ತೀರಿ ಅವರು ಭವಿಷ್ಯದಲ್ಲಿಯೂ ವಿಷ್ಣು ವಂಶಿ ಆಗಿರುತ್ತಾರೆ ಆದರೆ ಈಗ ವೈಷ್ಣವರು ಆಗಿ ಬಿಡುತ್ತಾರೆ. ಅವರನ್ನು ಯಾವುದೇ ತಮೋಗುಣಿ ಸಂಕಲ್ಪ ಅಥವಾ ಸಂಸ್ಕಾರವು ಟಚ್ ಮಾಡುವುದಕ್ಕೂ ಸಾಧ್ಯವಿಲ್ಲ. ಅವರು ಹಳೆಯ ಪ್ರಪಂಚ ಅಥವಾ ಪ್ರಪಂಚದ ಯಾವುದೇ ವಸ್ತು ಮತ್ತು ವ್ಯಕ್ತಿಗಳಿಂದ ಸಹಜವಾಗಿಯೇ ದೂರವಾಗಿ ಬಿಡುತ್ತಾರೆ, ಅವರನ್ನು ಕಾರಣ-ಅಕಾರಣಗಳೂ ಸಹ ಟಚ್ ಮಾಡಲು ಸಾಧ್ಯವಿಲ್ಲ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top