24 October 2021 KANNADA Murli Today | Brahma Kumaris

Read and Listen today’s Gyan Murli in Kannada

October 23, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ದಿವ್ಯತೆಯು ಸಂಗಮಯುಗೀ ಬ್ರಾಹ್ಮಣರ ಶೃಂಗಾರವಾಗಿದೆ

♫ ಕೇಳು ಇಂದಿನ ಮುರ್ಲಿ (audio)➤

ಇಂದು ದಿವ್ಯ ಬುದ್ಧಿ ವಿದಾತ, ದಿವ್ಯ ದೃಷ್ಠಿದಾತ, ತನ್ನ ದಿವ್ಯ ಜನ್ಮಧಾರಿ ದಿವ್ಯ ಆತ್ಮಗಳನ್ನು ನೋಡುತ್ತಿದ್ದಾರೆ. ಬಾಪ್ದಾದಾ ಪ್ರತಿಯೊಬ್ಬ ಮಗುವನ್ನೂ ದಿವ್ಯ ಜೀವನ ಅರ್ಥಾತ್ ದಿವ್ಯ ಸಂಕಲ್ಪ, ದಿವ್ಯ ಮಾತು, ದಿವ್ಯ ಕರ್ಮ ಮಾಡುವಂತಹ ದಿವ್ಯ ಮೂರ್ತಿಗಳನ್ನಾಗಿ ಮಾಡಿದ್ದಾರೆ. ದಿವ್ಯತೆಯು ತಾವು ಸಂಗಮಯುಗೀ ಮಕ್ಕಳ ಶ್ರೇಷ್ಠ ಶೃಂಗಾರವಾಗಿದೆ. ಒಂದು ಸಾಧಾರಣತೆ, ಇನ್ನೊಂದು ದಿವ್ಯತೆಯಾಗಿದೆ. ದಿವ್ಯತೆಯ ಲಕ್ಷಣಗಳನ್ನು ತಾವೆಲ್ಲರೂ ತಿಳಿದುಕೊಂಡಿದ್ದೀರಿ. ದಿವ್ಯ ಜನ್ಮಧಾರಿ ಆತ್ಮನು ಯಾವುದೇ ಆತ್ಮನಿಗೆ ತನ್ನ ದಿವ್ಯ ನಯನಗಳ ಮೂಲಕ ಅರ್ಥಾತ್ ದಿವ್ಯ ದೃಷ್ಠಿಯ ಮೂಲಕ ಸಾಧಾರಣತೆಯಿಂದ ದೂರ ದಿವ್ಯಾನುಭೂತಿಯನ್ನು ಮಾಡಿಸುವರು. ಸನ್ಮುಖದಲ್ಲಿ ಬರುತ್ತಿದ್ದಂತೆಯೇ ಸಾಧಾರಣ ಆತ್ಮವು ತನ್ನ ಸಾಧಾರಣತೆಯನ್ನು ಮರೆತು ಹೋಗುವುದು ಏಕೆಂದರೆ ಈಗಿನ ಸಮಯದನುಸಾರ ವರ್ತಮಾನ ಸಾಧಾರಣ ಜೀವನದಿಂದ ಮೆಜಾರಿಟಿ ಆತ್ಮಗಳು ಸಂತುಷ್ಟರಿಲ್ಲ. ಮುಂದೆ ಹೋದಂತೆ ಈ ಜೀವನವು ಯಾವುದೇ ಜೀವನವಲ್ಲ, ಜೀವನದಲ್ಲಿ ಯಾವುದಾದರೂ ನವೀನತೆ ಬೇಕೆಂಬ ಶಬ್ಧವು ಎಲ್ಲರಿಂದ ಕೇಳುತ್ತೀರಿ. “ಅಲೌಕಿಕತೆ” “ದಿವ್ಯತೆ”ಯು ಜೀವನದ ವಿಶೇಷ ಆಧಾರವಾಗಿದೆ ಎಂಬುದನ್ನು ಅನುಭವ ಮಾಡುತ್ತಾರೆ. ಏನಾದರೂ ಬೇಕು, ಏನಾದರೂ ಬೇಕು – ಈ ‘ಬೇಕು’ ಎಂಬ ಬಾಯಾರಿಕೆಯಿಂದ ನಾಲ್ಕಾರು ಕಡೆ ಹುಡುಕುತ್ತಾರೆ. ಹೇಗೆ ಸ್ಥೂಲ ನೀರಿನ ಬಾಯಾರಿಕೆಯಲ್ಲಿ ಚಡಪಡಿಸುತ್ತಿರುವ ಮಾನವನು ನಾಲ್ಕಾರು ಕಡೆ ನೀರಿನ ಹನಿಗಾಗಿ ಹುಡುಕುತ್ತಾನೆ. ಹಾಗೆಯೇ ದಿವ್ಯತೆಗೆ ಬಾಯಾರಿರುವ ಆತ್ಮವು ನಾಲ್ಕಾರು ಕಡೆ ಅಂಚಲಿಗಾಗಿ ಚಡಪಡಿಸುತ್ತಿರುವುದು ಕಂಡು ಬರುತ್ತದೆ. ಅವರು ಹುಡುಕುತ್ತಾ ಎಲ್ಲಿ ಬರುತ್ತಾರೆ? ತಮ್ಮೆಲ್ಲರ ಬಳಿ ಬರುತ್ತಾರೆ. ಅಂದಮೇಲೆ ತಾವು ದಿವ್ಯತೆಯ ಖಜಾನೆಯಿಂದ ಸಂಪನ್ನರಾಗಿದ್ದೀರಾ? ಪ್ರತೀ ಸಮಯ ದಿವ್ಯತೆಯ ಅನುಭವವಾಗುತ್ತದೆಯೋ ಅಥವಾ ಕೆಲವೊಮ್ಮೆ ಸಾಧಾರಣ, ಕೆಲವೊಮ್ಮೆ ದಿವ್ಯತೆಯೋ? ಯಾವಾಗ ತಂದೆಯು ದಿವ್ಯ ದೃಷ್ಠಿ, ದಿವ್ಯ ಬುದ್ಧಿಯ ವರದಾನವನ್ನು ಕೊಟ್ಟು ಬಿಟ್ಟರು ಅಂದಮೇಲೆ ದಿವ್ಯ ಬುದ್ಧಿಯಲ್ಲಿ ಸಾಧಾರಣ ಮಾತು ಹೊರಬರಲು ಸಾಧ್ಯವಿಲ್ಲ. ದಿವ್ಯ ಜನ್ಮಧಾರಿ ಬ್ರಾಹ್ಮಣರು ತನುವಿನಿಂದ ಸಾಧಾರಣ ಕರ್ಮ ಮಾಡಲು ಸಾಧ್ಯವಿಲ್ಲ. ಭಲೆ ಮನುಷ್ಯರಿಗೆ ನೋಡಲು ಸಾಧಾರಣ ಕರ್ಮವೇ ಆಗಿರಬಹುದು, ಬೇರೆಯವರ ಸಮಾನ ತಾವೆಲ್ಲರೂ ವ್ಯವಹಾರ ಮಾಡುತ್ತೀರಿ, ವ್ಯಾಪಾರ ಮಾಡುತ್ತೀರಿ ಅಥವಾ ಸರ್ಕಾರದ ನೌಕರಿ ಮಾಡುತ್ತೀರಿ, ಮಾತೆಯರು ಭೋಜನವನ್ನು ತಯಾರಿಸುತ್ತೀರಿ. ಭಲೆ ನೋಡಲು ಸಾಧಾರಣ ಕರ್ಮವಾಗಿದೆ ಆದರೆ ಈ ಸಾಧಾರಣ ಕರ್ಮದಲ್ಲಿಯೂ ತಮ್ಮದು ಮತ್ತೆಲ್ಲರಿಗಿಂತ ಭಿನ್ನ “ಅಲೌಕಿಕ” ದಿವ್ಯ ಕರ್ಮವಾಗಿರಲಿ. ಈ ಮಹಾನ್ ಅಂತರವನ್ನು ಏಕೆ ತಿಳಿಸಿದೆವು ಎಂದರೆ ದಿವ್ಯ ಜನ್ಮಧಾರಿ ಬ್ರಾಹ್ಮಣರು ತನುವಿನಿಂದ ಸಾಧಾರಣ ಕರ್ಮವನ್ನು ಮಾಡುವುದಿಲ್ಲ. ಮನಸ್ಸಿನಿಂದ ಸಾಧಾರಣ ಸಂಕಲ್ಪ ಮಾಡಲು ಸಾಧ್ಯವಿಲ್ಲ, ಧನವನ್ನೂ ಸಹ ಸಾಧಾರಣ ರೀತಿಯಿಂದ ತೊಡಗಿಸುವಂತಿಲ್ಲ ಏಕೆಂದರೆ ತನು, ಮನ, ಧನ ಮೂರಕ್ಕೂ ಟ್ರಸ್ಟಿಗಳಾಗಿದ್ದೀರಿ ಆದ್ದರಿಂದ ಮಾಲೀಕ ತಂದೆಯ ಶ್ರೀಮತವಿಲ್ಲದೆ ಕಾರ್ಯದಲ್ಲಿ ತೊಡಗಿಸುವಂತಿಲ್ಲ. ಪ್ರತೀ ಸಮಯ ತಂದೆಯ ದಿವ್ಯ ಕರ್ತವ್ಯವನ್ನು ಮಾಡುವ ಶ್ರೀಮತ ಸಿಗುತ್ತದೆ ಆದ್ದರಿಂದ ಪರಿಶೀಲನೆ ಮಾಡಿಕೊಳ್ಳಿ – ಇಡೀ ದಿನದಲ್ಲಿ ಸಾಧಾರಣ ಮಾತು ಮತ್ತು ಕರ್ಮವು ಎಷ್ಟು ಸಮಯವಿತ್ತು ಮತ್ತು ದಿವ್ಯ ಅಲೌಕಿಕ ಎಷ್ಟು ಸಮಯವಿತ್ತು? ಕೆಲವು ಮಕ್ಕಳು ಕೆಲಕೆಲವೊಂದೆಡೆ ಬಹಳ ಭೋಲಾ ಆಗಿ ಬಿಡುತ್ತಾರೆ. ಪರಿಶೀಲನೆ ಮಾಡಿಕೊಳ್ಳುತ್ತಾರೆ ಆದರೆ ಭೋಲಾತನದಲ್ಲಿ. ಇಡೀ ದಿನದಲ್ಲಿ ಯಾವುದೇ ವಿಶೇಷ ತಪ್ಪನ್ನಂತೂ ಮಾಡಲಿಲ್ಲ, ಕೆಟ್ಟದ್ದನ್ನು ಆಲೋಚಿಸಲಿಲ್ಲ, ಕೆಟ್ಟದ್ದನ್ನು ಮಾತನಾಡಲಿಲ್ಲ ಎಂದು ತಿಳಿದುಕೊಳ್ಳುತ್ತಾರೆ ಆದರೆ ಇದನ್ನು ಪರಿಶೀಲನೆ ಮಾಡಿಕೊಂಡಿರಾ? ದಿವ್ಯ ಹಾಗೂ ಅಲೌಕಿಕ ಕರ್ಮ ಮಾಡಿದೆವೇ? ಏಕೆಂದರೆ ಸಾಧಾರಣ ಮಾತು ಹಾಗೂ ಕರ್ಮವು ಜಮಾ ಆಗುವುದಿಲ್ಲ, ಕಳೆಯುವುದೂ ಇಲ್ಲ, ಜಮಾ ಆಗುವುದೂ ಇಲ್ಲ. ವರ್ತಮಾನದ ದಿವ್ಯ ಸಂಕಲ್ಪ ಹಾಗೂ ದಿವ್ಯ ಮಾತು ಮತ್ತು ಕರ್ಮವು ಭವಿಷ್ಯಕ್ಕೆ ಜಮಾ ಮಾಡುತ್ತದೆ. ಜಮಾದ ಖಾತೆಯು ಹೆಚ್ಚುವುದಿಲ್ಲವೆಂದರೆ ಜಮಾ ಮಾಡುವ ಲೆಕ್ಕದಲ್ಲಿ ಭೋಲಾ ಆಗಿ ಬಿಡುತ್ತಾರೆ – ನಾನಂತೂ ವ್ಯರ್ಥ ಮಾಡಲಿಲ್ಲವೆಂದು ಖುಷಿಯಾಗಿರುತ್ತಾರೆ ಆದರೆ ಕೇವಲ ಇದರಲ್ಲಿ ಖುಷಿಯಾಗಿರಬಾರದು. ವ್ಯರ್ಥವನ್ನಂತೂ ಮಾಡಲಿಲ್ಲ ಆದರೆ ಸಮರ್ಥವಾದುದನ್ನು ಎಷ್ಟು ಮಾಡಿದಿರಿ? ಕೆಲವುಬಾರಿ ಮಕ್ಕಳು ಹೇಳುತ್ತಾರೆ – ನಾನು ಇಂದು ಯಾರಿಗೂ ದುಃಖ ಕೊಡಲಿಲ್ಲವೆಂದು ಆದರೆ ಸುಖವನ್ನು ಕೊಟ್ಟಿರಾ? ದುಃಖವನ್ನು ಕೊಡಲಿಲ್ಲ – ಇದರಿಂದ ವರ್ತಮಾನವನ್ನು ಚೆನ್ನಾಗಿ ಮಾಡಿಕೊಂಡಿರಿ ಆದರೆ ಸುಖ ಕೊಡುವುದರಿಂದ ಭವಿಷ್ಯಕ್ಕೆ ಜಮಾ ಆಗುತ್ತದೆ. ಅದನ್ನು ಮಾಡಿಕೊಂಡಿರಾ ಅಥವಾ ಕೇವಲ ವರ್ತಮಾನದಲ್ಲಿ ಖುಷಿಯಾಗಿ ಬಿಟ್ಟಿರಾ? ಸುಖದಾತನ ಮಕ್ಕಳು ಸುಖದ ಖಾತೆಯನ್ನು ಜಮಾ ಮಾಡಿಕೊಳ್ಳುತ್ತಾರೆ ಆದ್ದರಿಂದ ಇಂದು ದುಃಖವನ್ನು ಕೊಡಲಿಲ್ಲವೆಂದು ಕೇವಲ ಇಷ್ಟನ್ನು ಪರಿಶೀಲನೆ ಮಾಡಿಕೊಳ್ಳಬೇಡಿ. ಎಷ್ಟು ಸುಖವನ್ನು ಕೊಟ್ಟೆವು ಎಂದು ನೋಡಿಕೊಳ್ಳಿ. ಯಾರೇ ಸಂಬಂಧ-ಸಂಪರ್ಕದಲ್ಲಿ ಬರಲಿ ಮಾ|| ಸುಖದಾತನ ಮೂಲಕ ಪ್ರತೀ ಹೆಜ್ಜೆಯಲ್ಲಿ ಸುಖದ ಅನುಭೂತಿ ಮಾಡಲಿ. ಇದಕ್ಕೇ ದಿವ್ಯತೆ ಹಾಗೂ ಅಲೌಕಿಕತೆಯೆಂದು ಹೇಳಲಾಗುತ್ತದೆ. ಆದ್ದರಿಂದ ಪರಿಶೀಲನೆಯನ್ನೂ ಸಾಧಾರಣವಾಗಿ ಅಲ್ಲ, ಗುಹ್ಯ ಪರಿಶೀಲನೆ ಮಾಡಿಕೊಂಡು ಪ್ರತೀ ಸಮಯ ಇದು ಸ್ಮೃತಿಯಿರಲಿ – ಒಂದು ಜನ್ಮದಲ್ಲಿ 21 ಜನ್ಮಗಳ ಖಾತೆಯನ್ನು ಜಮಾ ಮಾಡಿಕೊಳ್ಳಬೇಕಾಗಿದೆ ಆದ್ದರಿಂದ ಎಲ್ಲರೂ ಖಾತೆಯನ್ನು ನೋಡಿಕೊಳ್ಳಿ – ತನುವಿನಿಂದ ಎಷ್ಟು ಜಮಾ ಮಾಡಿಕೊಂಡಿರಿ? ಮನಸ್ಸಿನ ದಿವ್ಯಸಂಕಲ್ಪದಿಂದ ಎಷ್ಟು ಜಮಾ ಮಾಡಿಕೊಂಡಿರಿ? ಮತ್ತು ಧನವನ್ನು ಶ್ರೀಮತದ ಪ್ರಮಾಣ ಶ್ರೇಷ್ಠ ಕಾರ್ಯದಲ್ಲಿ ತೊಡಗಿಸಿ ಎಷ್ಟು ಜಮಾ ಮಾಡಿಕೊಂಡಿರಿ? ಜಮಾದ ಖಾತೆಯ ಕಡೆ ವಿಶೇಷ ಗಮನ ಕೊಡಿ ಏಕೆಂದರೆ ತಾವು ವಿಶೇಷ ಆತ್ಮರ ಜಮಾ ಮಾಡಿಕೊಳ್ಳುವ ಸಮಯವು ಈ ಚಿಕ್ಕದಾದ ಜನ್ಮವನ್ನು ಬಿಟ್ಟರೆ ಇಡೀ ಕಲ್ಪದಲ್ಲಿ ಮತ್ತ್ಯಾವ ಸಮಯವೂ ಇಲ್ಲ. ಅನ್ಯ ಆತ್ಮಗಳ ಲೆಕ್ಕವೇ ಬೇರೆಯಾಗಿದೆ ಆದರೆ ತಾವು ಶ್ರೇಷ್ಠಾತ್ಮರಿಗಾಗಿ – “ಈಗಿಲ್ಲದಿದ್ದರೆ ಇನ್ನೆಂದಿಗೂ ಇಲ್ಲ”. ಅಂದಾಗ ಏನು ಮಾಡಬೇಕೆಂದು ತಿಳಿಯಿತೇ? ಇದರಲ್ಲಿ ಭೋಲಾ ಆಗಬೇಡಿ, ಹಳೆಯ ಸಂಸ್ಕಾರಗಳಲ್ಲಿ ಮುಗ್ಧರಾಗಬೇಡಿ. ಬಾಪ್ದಾದಾರವರು ಫಲಿತಾಂಶವನ್ನು ನೋಡಿದೆವು, ಅನೇಕ ಮಕ್ಕಳ ಫಲಿತಾಂಶದಲ್ಲಿ ಜಮಾದ ಖಾತೆಯು ಬಹಳ ಕಡಿಮೆಯಿದೆ, ಅದರ ವಿಸ್ತಾರವನ್ನು ಮತ್ತೆ ತಿಳಿಸುತ್ತೇವೆ.

ಎಲ್ಲರೂ ಸ್ನೇಹದಲ್ಲಿ ಎಲ್ಲವನ್ನೂ ಮರೆತು ಬಂದು ಬಿಟ್ಟಿದ್ದೀರಿ, ಬಾಪ್ದಾದಾರವರೂ ಸಹ ಮಕ್ಕಳ ಸ್ನೇಹವನ್ನು ನೋಡಿ ಒಂದು ಘಳಿಗೆಯ ಸ್ನೇಹಕ್ಕೆ ರಿಟರ್ನ್ ಆಗಿ ಅನೇಕ ಘಳಿಗೆಗಳು ಪ್ರಾಪ್ತಿಯನ್ನು ನೀಡುತ್ತಲೇ ಇರುತ್ತೇವೆ. ತಮ್ಮೆಲ್ಲರಿಗೆ ಇಷ್ಟು ದೊಡ್ಡ ಸಂಘಟನೆಯಲ್ಲಿ ಬರುವುದಕ್ಕಾಗಿ ಏನೇನನ್ನು ಪಕ್ಕಾ ಮಾಡಿಸಲಾಯಿತು? ಮೊದಲಂತೂ ನೆಲದ ಮೇಲೆ ಕುಳಿತುಕೊಳ್ಳಬೇಕಾಗುತ್ತದೆ, ನಾಲ್ಕು ದಿನಗಳಷ್ಟೇ ಇರಬೇಕಾಗುತ್ತದೆ, ಬಂದು ಹೋಗಲೇಬೇಕಾಗುತ್ತದೆ ಆದರೆ ಇವೆಲ್ಲಾ ಮಾತುಗಳನ್ನೂ ಕೇಳಿಯೂ ಸಹ ಸ್ನೇಹದಲ್ಲಿ ಬಂದು ಬಿಟ್ಟಿರಿ, ಇದನ್ನೂ ತಮ್ಮ ಭಾಗ್ಯವೆಂದೇ ತಿಳಿದುಕೊಳ್ಳಿ, ಇಷ್ಟಾದರೂ ಸಿಗುತ್ತಿದೆ. ಆ ಜಡ ಮೂರ್ತಿಗಳ ದರ್ಶನದಂತೆ ನಿಂತು-ನಿಂತುಕೊಂಡೇ ರಾತ್ರಿಯನ್ನಂತೂ ಕಳೆಯುತ್ತಿಲ್ಲ ಅಲ್ಲವೆ. ಮೂರು ಹೆಜ್ಜೆಗಳಷ್ಟು ಪೃಥ್ವಿಯಾದರೂ ಎಲ್ಲರಿಗೆ ಸಿಕ್ಕಿದೆಯಲ್ಲವೆ. ಇಲ್ಲಿಯೂ ಸಹ ಆರಾಮದಿಂದ ಕುಳಿತಿದ್ದೀರಿ, ಮುಂದೆ ಇನ್ನೂ ವೃದ್ಧಿಯಾದಾಗ ಸ್ವತಹ ವಿಧಿಯೂ ಸಹ ಪರಿವರ್ತನೆಯಾಗುತ್ತಾ ಇರುವುದು ಆದರೆ ಸದಾ ಈ ಅನುಭವ ಮಾಡಿ – ಏನೆಲ್ಲಾ ಸಿಗುತ್ತಿದೆಯೋ ಅದು ಬಹಳ ಚೆನ್ನಾಗಿದೆ, ಏಕೆಂದರೆ ವೃದ್ಧಿಯಂತೂ ಆಗಲೇಬೇಕು ಮತ್ತು ಪರಿವರ್ತನೆಯೂ ಆಗಲೇಬೇಕಾಗಿದೆ ಅಂದಾಗ ಎಲ್ಲರಿಗೆ ಆರಾಮದಿಂದ ಇರಲು, ತಿನ್ನಲು ಸಿಗುತ್ತಿದೆಯಲ್ಲವೆ. ತಿನ್ನುವುದು ಮತ್ತು ಮಲಗುವುದು ಎರಡೇ ಬೇಕಲ್ಲವೆ. ಮಾತೆಯರಿಗಂತೂ ಬಹಳ ಖುಷಿಯಾಗುತ್ತದೆ ಏಕೆಂದರೆ ತಯಾರಾಗಿರುವ ಭೋಜನವು ಸಿಗುತ್ತದೆ. ಅಲ್ಲಂತೂ ತಯಾರು ಮಾಡಿ ಭೋಗವನ್ನಿಟ್ಟು ನಂತರ ತಿನ್ನಬೇಕಾಗುವುದು, ಇಲ್ಲಿ ತಯಾರಾದ ಭೋಗವನ್ನಿಟ್ಟ ಭೋಜನವು ಸಿಗುತ್ತದೆ ಆದ್ದರಿಂದ ಮಾತೆಯರಿಗೆ ಒಳ್ಳೆಯ ಆರಾಮವಿದೆ. ಕುಮಾರರಿಗೂ ಸಹ ವಿಶ್ರಾಂತಿ ಸಿಗುತ್ತದೆ ಏಕೆಂದರೆ ಅವರಿಗೆ ಭೋಜನವನ್ನು ತಯಾರಿಸುವುದೇ ಬಹಳ ದೊಡ್ಡ ಸಮಸ್ಯೆಯಾಗುತ್ತದೆ, ಇಲ್ಲಂತೂ ಆರಾಮದಿಂದ ಸಿದ್ಧವಾಗಿರುವ ಭೋಜನವನ್ನು ಮಾಡಿದಿರಲ್ಲವೆ. ಸದಾ ಇದೇ ರೀತಿ ಸರಳವಾಗಿರಿ, ಯಾರ ಸಂಸ್ಕಾರವು ಸರಳವಾಗಿರುವುದೋ ಅವರಿಗೆ ಪ್ರತೀ ಕಾರ್ಯವು ಸಹಜ ಅನುಭವವಾಗುವ ಕಾರಣ ಸಹಜವಾಗಿರುತ್ತಾರೆ. ಸಂಸ್ಕಾರವು ಬಿಗಿಯಾಗಿದ್ದರೆ ಪರಿಸ್ಥಿತಿಯೂ ಸಹ ಬಿಗಿಯಾಗಿ ಬಿಡುತ್ತವೆ. ಸಂಬಂಧ-ಸಂಪರ್ಕದವರೂ ಸಹ ಬಹಳ ಬಿಗಿಯಾಗಿ ವ್ಯವಹಾರ ಮಾಡುತ್ತಾರೆ, ಬಿಗಿಯಾಗಿರುವುದು ಎಂದರೆ ಎಳೆದಾಟದಲ್ಲಿ ಇರುವವರು ಅಂದಾಗ ಎಲ್ಲರೂ ಡ್ರಾಮಾದ ಪ್ರತೀ ದೃಶ್ಯವನ್ನು ನೋಡಿ, ನೋಡಿ ಹರ್ಷಿತರಾಗಿ ಇರುವವರಾಗಿದ್ದೀರಲ್ಲವೆ. ಅಥವಾ ಕೆಲವೊಮ್ಮೆ ಒಳ್ಳೆಯ-ಕೆಟ್ಟದರ ಆಕರ್ಷಣೆಯಲ್ಲಿ ಬಂದು ಬಿಡುತ್ತೀರೋ? ಒಳ್ಳೆಯದು-ಕೆಟ್ಟದ್ದು ಎರಡರಲ್ಲಿಯೂ ಆಕರ್ಷಿತರಾಗಬೇಡಿ, ಸದಾ ಹರ್ಷಿತರಾಗಿರಿ. ಒಳ್ಳೆಯದು.

ಸದಾ ಪ್ರತೀ ಹೆಜ್ಜೆಯಲ್ಲಿ ದಿವ್ಯತೆಯ ಅನುಭವ ಮಾಡುವವರು ಮತ್ತು ಮಾಡಿಸುವಂತಹ ದಿವ್ಯಮೂರ್ತಿಗಳಿಗೆ, ಸದಾ ತನ್ನ ಜಮಾದ ಖಾತೆಯನ್ನು ಹೆಚ್ಚಿಸಿಕೊಳ್ಳುವ ಜ್ಞಾನಪೂರ್ಣ ಆತ್ಮರಿಗೆ, ಸದಾ ಪ್ರತಿಯೊಂದು ಸಮಸ್ಯೆಯನ್ನು ಸರಳ ಸ್ಥಿತಿಯ ಮೂಲಕ ಸರಳವಾಗಿ ಪಾರು ಮಾಡುವಂತಹ ಬುದ್ಧಿವಂತ ಮಕ್ಕಳಿಗೆ, ಅನೇಕ ಆತ್ಮರ ಜೀವನದ ಬಾಯಾರಿಕೆಯನ್ನು ನೀಗಿಸುವಂತಹ ಮಾ|| ಜ್ಞಾನಸಾಗರ ಶ್ರೇಷ್ಠಾತ್ಮರಿಗೆ ಜ್ಞಾನಸಾಗರ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಬಾಂಬೆ (ಸಾಂತಾಕುಜ್-ಪಾರ್ಲಾ) ಗ್ರೂಪ್:

ಬಾಂಬೆ ನಿವಾಸಿ ಮಕ್ಕಳು ಸರ್ವ ಖಜಾನೆಗಳಿಂದ ಸಂಪನ್ನರಾಗಿದ್ದೀರಿ ಅಲ್ಲವೆ. ಸದಾ ತಮ್ಮನ್ನು ಸಂಪನ್ನ ಆತ್ಮನಾಗಿದ್ದೇನೆ ಎಂಬ ಅನುಭವ ಮಾಡುತ್ತೀರಲ್ಲವೆ? ಸಂಪನ್ನತೆಯು ಸಂಪೂರ್ಣತೆಯ ಚಿಹ್ನೆಯಾಗಿದೆ, ಇದರ ಪರಿಶೀಲನೆಯನ್ನು ತಮ್ಮ ಸಂಪನ್ನತೆಯಿಂದ ಮಾಡಿಕೊಳ್ಳಬಹುದು ಏಕೆಂದರೆ ಸಂಪೂರ್ಣತೆಯೆಂದರೆ ಸರ್ವ ಖಜಾನೆಗಳಿಂದ ಸಂಪನ್ನರಾಗುವುದು. ಹೇಗೆ ಚಂದ್ರಮನು ಯಾವಾಗ ಸಂಪನ್ನನಾಗುವನೋ ಅದೇ ಸಂಪೂರ್ಣತೆಯ ಚಿಹ್ನೆಯಾಗುತ್ತದೆ. ಇದಕ್ಕಿಂತ ಹೆಚ್ಚಾಗುವುದಿಲ್ಲ, ಇದಷ್ಟೇ ಸಂಪೂರ್ಣತೆಯಾಗಿದೆ, ಅಲ್ಪಸ್ವಲ್ಪವೂ ಕಡಿಮೆಯಾಗುವುದಿಲ್ಲ, ಸಂಪನ್ನವಾಗಿರುತ್ತದೆ. ಅಂದಾಗ ತಾವೆಲ್ಲರೂ ಜ್ಞಾನ, ಯೋಗ, ಧಾರಣೆ, ಸೇವೆ – ಎಲ್ಲದರಲ್ಲಿಯೂ ಸಂಪನ್ನರಾಗಿರುವುದಕ್ಕೇ ಸಂಪೂರ್ಣತೆ ಎಂದು ಹೇಳಲಾಗುತ್ತದೆ. ಇದರಿಂದ ತಾವು ತಿಳಿಯಬಹುದು – ಸಂಪೂರ್ಣತೆಗೆ ಸಮೀಪನಿದ್ದೇನೆಯೇ ಅಥವಾ ದೂರವಿದ್ದೇನಾ!! ಸಂಪನ್ನರು ಆಗಿದ್ದೀರೆಂದರೆ ಸಂಪೂರ್ಣತೆಯ ಸಮೀಪವಿದ್ದೀರಿ, ಅಂದಮೇಲೆ ಎಲಲ್ರೂ ಸಮೀಪವಿದ್ದೀರಾ? ಎಷ್ಟು ಸಮೀಪದಲ್ಲಿದ್ದೀರಿ? 8ರವರೆಗೆ, 100ರವರೆಗೆ ಅಥವಾ 16000…ದವರೆಗೆ ಸಮೀಪವಿದ್ದೀರಾ – ಇದನ್ನೇ ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ. ಇದೂ ಸಹ ಒಳ್ಳೆಯದು ಏಕೆಂದರೆ ಪ್ರಪಂಚದ ಕೋಟ್ಯಾಂತರ ಆತ್ಮರೆಲ್ಲರಿಂದ ತಾವು ಬಹಳ-ಬಹಳ ಭಾಗ್ಯಶಾಲಿ ಆಗಿದ್ದೀರಿ, ಅವರು ಚಡಪಡಿಸುತ್ತಾ ಇರುವವರು ಮತ್ತು ತಾವು ಸಂಪನ್ನ ಆತ್ಮರು- ಪ್ರಾಪ್ತಿ ಸ್ವರೂಪ ಆತ್ಮರಾಗಿದ್ದೀರಿ – ಈ ಖುಷಿಯಿದೆಯಲ್ಲವೆ. ಪ್ರತಿನಿತ್ಯವೂ ತಮ್ಮೊಂದಿಗೆ ಮಾತನಾಡಿಕೊಳ್ಳಿರಿ – ನಾವಲ್ಲದೆ ಮತ್ತ್ಯಾರು ಖುಷಿಯಾಗಿರಲು ಸಾಧ್ಯವಿದೆ? ಸದಾ ಇದೇ ವರದಾನವನ್ನು ಸ್ಮೃತಿಯಲ್ಲಿಯೂ ಇಟ್ಟುಕೊಳ್ಳಿರಿ – ಸಮೀಪವಿದ್ದೇವೆ, ಸಂಪನ್ನವಾಗಿದ್ದೇವೆ. ಈಗಂತು ಸಮೀಪದಲ್ಲಿ ಮಿಲನವಾಗಿ ಬಿಟ್ಟಿದೆ. ಹೇಗೆ ಸ್ಥೂಲದಲ್ಲಿ ಸಮೀಪವು ಪ್ರಿಯವೆನಿಸುತ್ತದೆಯೋ ಹಾಗೆಯೇ ಸ್ಥಿತಿಯಲ್ಲಿಯೂ ಸದಾ ಸಮೀಪ ಅಂದರೆ ಸದಾ ಸಂಪನ್ನವಾಗಿರಿ. ಒಳ್ಳೆಯದು.

ಗುಜರಾತ್-ಪೂನಾ ಗ್ರೂಪ್:

ಎಲ್ಲರೂ ದೃಷ್ಟಿಯ ಮೂಲಕ ಶಕ್ತಿಗಳ ಪ್ರಾಪ್ತಿಯ ಅನುಭೂತಿ ಮಾಡುವ ಅನುಭವಿ ಆಗಿದ್ದೀರಲ್ಲವೆ. ಹೇಗೆ ವಾಣಿಯ ಮೂಲಕ ಶಕ್ತಿಯ ಅನುಭವ ಮಾಡುತ್ತೀರಿ, ಮುರುಳಿಯನ್ನು ಕೇಳುತ್ತೀರೆಂದರೆ ಶಕ್ತಿ ಸಿಕ್ಕಿತೆಂದು ತಿಳಿಯುವಿರಲ್ಲವೆ! ಹಾಗೆಯೇ ದೃಷ್ಟಿಯ ಮೂಲಕ ಶಕ್ತಿಗಳ ಪ್ರಾಪ್ತಿಯ ಅನುಭೂತಿಯ ಅಭ್ಯಾಸಿಗಳೂ ಆಗಿದ್ದೀರಾ ಅಥವಾ ವಾಣಿಯ ಮೂಲಕ ಅನುಭವವಾಗುತ್ತದೆ, ದೃಷ್ಟಿಯ ಮೂಲಕ ಕಡಿಮೆಯಿದೆಯೇ? ದೃಷ್ಟಿಯ ಮೂಲಕ ಶಕ್ತಿಯನ್ನು ಕ್ಯಾಚ್ ಮಾಡಬಲ್ಲಿರಾ? ಏಕೆಂದರೆ ಕ್ಯಾಚ್ ಮಾಡುವ ಅಭ್ಯಾಸಿ ಆಗುತ್ತೀರೆಂದರೆ, ತಮ್ಮ ದಿವ್ಯದೃಷ್ಟಿಯ ಮೂಲಕ ಅನ್ಯರಿಗೂ ಅನುಭವ ಮಾಡಿಸಬಹುದು. ಮುಂದೆ ನಡೆದಂತೆ ವಾಣಿಯ ಮೂಲಕ ಎಲ್ಲರಿಗೂ ಪರಿಚಯ ಕೊಡುವ ಸಮಯವೂ ಇರುವುದಿಲ್ಲ ಹಾಗೂ ಆ ಸಂದರ್ಭವೂ ಸಿಗುವುದಿಲ್ಲ, ಆಗೇನು ಮಾಡುವಿರಿ? ವರದಾನಿ ದೃಷ್ಟಿಯ ಮೂಲಕ, ಮಹಾದಾನಿ ದೃಷ್ಟಿಯ ಮೂಲಕ ಮಹಾದಾನ-ವರದಾನವನ್ನು ಕೊಡುವಿರಿ. ದೃಷ್ಟಿಯ ಮೂಲಕ ಶಾಂತಿಯ ಶಕ್ತಿ, ಪ್ರೇಮದ ಶಕ್ತಿ, ಸುಖ ಹಾಗೂ ಆನಂದ ಶಕ್ತಿಗಳೆಲ್ಲವೂ ಪ್ರಾಪ್ತಿಯಾಗುವುದು. ಜಡಮೂರ್ತಿಗಳ ಮುಂದೆ ಹೋಗುತ್ತಾರೆಂದರೆ, ಜಡಮೂರ್ತಿಯು ಮಾತನಾಡವುದಂತು ಇಲ್ಲ ಅಲ್ಲವೆ. ಆದರೂ ಭಕ್ತಾತ್ಮರಿಗೆ ಏನಾದರೊಂದು ಪ್ರಾಪ್ತಿಯಾಗುತ್ತದೆ, ಆದ್ದರಿಂದ ಹೋಗುತ್ತಾರಲ್ಲವೆ. ಅದು ಹೇಗೆ ಪ್ರಾಪ್ತಿಯಾಗುತ್ತದೆ? ಅವರ ದಿವ್ಯತೆಯ ಪ್ರಕಂಪನಗಳಿಂದ ಹಾಗೂ ದಿವ್ಯ ನಯನಗಳ ದೃಷ್ಟಿಯನ್ನು ನೋಡುತ್ತಾ ಪ್ರಕಂಪನಗಳನ್ನು ತೆಗೆದುಕೊಳ್ಳುತ್ತಾರೆ. ಯಾವುದೇ ದೇವತೆ ಅಥವಾ ದೇವಿಯ ಮೂರ್ತಿಗಳಲ್ಲಿ ನಯನಗಳ ಕಡೆಗೇ ವಿಶೇಷವಾಗಿ ಗಮನವಿಟ್ಟು ನೋಡುವರು. ಚಹರೆಯ ಕಡೆಗೆ ಗಮನ ಹರಿಯುತ್ತದೆ ಏಕೆಂದರೆ ಮಸ್ತಕದ ಮೂಲಕ ಪ್ರಕಂಪನಗಳು ಸಿಗುತ್ತವೆ, ನಯನಗಳ ಮೂಲಕ ದಿವ್ಯತೆಯ ಅನುಭೂತಿ ಆಗುತ್ತದೆ. ಅದಂತು ಜಡಮೂರ್ತಿ ಆಗಿದೆ ಆದರೆ ಅದು ಯಾರದು? ತಾವು ಚೈತನ್ಯ ಮೂರ್ತಿಗಳ ಜಡಮೂರ್ತಿಗಳಾಗಿವೆ. ಇದು ನಮ್ಮ ಮೂರ್ತಿ ಆಗಿದೆಯೆಂದು ನಶೆಯಿದೆಯೇ? ಚೈತನ್ಯದಲ್ಲಿ ಈ ಸೇವೆಯನ್ನು ಮಾಡಲಾಗಿದೆ ಆದ್ದರಿಂದ ಜಡಮೂರ್ತಿಗಳಿವೆ. ಅಂದಾಗ ದೃಷ್ಟಿಯ ಮೂಲಕ ಶಕ್ತಿಯನ್ನು ತೆಗೆದುಕೊಳ್ಳುವುದು ಮತ್ತು ದೃಷ್ಟಿಯ ಮೂಲಕ ಶಕ್ತಿ ಕೊಡುವುದರ ಅಭ್ಯಾಸ ಮಾಡಿರಿ. ಶಾಂತಿಯ ಶಕ್ತಿಯ ಅನುಭೂತಿಯು ಅತ್ಯಂತ ಶ್ರೇಷ್ಠವಾದುದು. ಹೇಗೆ ವರ್ತಮಾನ ಸಮಯದಲ್ಲಿ ವಿಜ್ಞಾನದ ಶಕ್ತಿಯು ಹೊರ ಬಂದಿತು, ಯಾವುದರಿಂದ? ಶಾಂತಿಯ ಶಕ್ತಿಯಿಂದ ಅಲ್ಲವೆ! ಯಾವಾಗ ವಿಜ್ಞಾನದ ಶಕ್ತಿಯು ಅಲ್ಪಕಾಲದ ಪ್ರಾಪ್ತಿಯನ್ನು ಪ್ರಾಪ್ತಿ ಮಾಡಿಸುತ್ತಿದೆ, ಅಂದಮೇಲೆ ಶಾಂತಿಯ ಶಕ್ತಿಯು ಇನ್ನೆಷ್ಟು ಪ್ರಾಪ್ತಿ ಮಾಡಿಸಬಹುದು! ಅದಕ್ಕಾಗಿ ತಮ್ಮಲ್ಲಿ ತಂದೆಯ ದಿವ್ಯ ದೃಷ್ಟಿಯ ಮೂಲಕ ಶಕ್ತಿಯನ್ನು ಜಮಾ ಮಾಡಿಕೊಳ್ಳಿರಿ, ಜಮಾ ಮಾಡಿಕೊಂಡಿರುವ ಶಕ್ತಿಗಳನ್ನು ಸಮಯದಲ್ಲಿ ಕೊಡಬಹುದು. ತಮಗಾಗಿಯೇ ಜಮಾ ಮಾಡಿಕೊಂಡಿರಿ ಮತ್ತು ಕಾರ್ಯದಲ್ಲಿ ಉಪಯೋಗಿಸುವುದು ಎಂದರೆ ಸಂಪಾದನೆ ಮಾಡಿ ಖಾಲಿ ಮಾಡಿದಂತೆ. ಯಾರು ಹೀಗೆ ಮಾಡುತ್ತಾರೆಯೋ ಅವರಲ್ಲಿ ಎಂದಿಗೂ ಜಮಾ ಆಗುವುದಿಲ್ಲ. ಮತ್ತು ಯಾರದು ಜಮಾ ಆಗುವುದಿಲ್ಲವೋ ಅವರಿಗೆ ಸಮಯದಲ್ಲಿ ಮೋಸವೇ ಆಗುತ್ತದೆ. ಇದರಿಂದ ದುಃಖದ ಪ್ರಾಪ್ತಿಯೇ ಆಗುತ್ತದೆ. ಇದೇರೀತಿ ಶಾಂತಿಯ ಶಕ್ತಿಯ ಜಮಾ ಆಗಲಿಲ್ಲ, ದೃಷ್ಟಿಯ ಮಹತ್ವದ ಅನುಭವವಾಗದಿದ್ದರೆ ಅಂತಿಮ ಸಮಯದ ಶ್ರೇಷ್ಠ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳುವುದರಲ್ಲಿಯೂ ಮೋಸವನ್ನೇ ಅನುಭವಿಸುತ್ತೀರಿ. ನಂತರ ದುಃಖವಾಗುತ್ತದೆ, ಪಶ್ಚಾತ್ತಾಪ ಆಗುತ್ತದೆ ಆದ್ದರಿಂದ ಈಗಿನಿಂದಲೇ ತಂದೆಯ ದೃಷ್ಟಿಯ ಮೂಲಕ ಪ್ರಾಪ್ತಿಯಾಗಿರುವ ಶಕ್ತಿಗಳನ್ನು ಅನುಭವ ಮಾಡುತ್ತಾ ಜಮಾ ಮಾಡುತ್ತಿರಿ. ಹಾಗಾದರೆ ಜಮಾ ಮಾಡಿಕೊಳ್ಳುವುದು ಬರುತ್ತದೆಯೇ? ಜಮಾ ಆಗಿದೆಯೆಂದರೆ ಅದರ ಚಿಹ್ನೆಯೇನಾಗಿದೆ? ನಶೆಯಿರುತ್ತದೆ. ಹೇಗೆ ಸಾಹುಕಾರರ ಚಲನೆ, ಕುಳಿತುಕೊಳ್ಳುವ, ಏಳುವುದರಲ್ಲಿಯೂ ನಶೆಯು ಕಾಣಿಸುತ್ತದೆ, ನಶೆಯು ಎಷ್ಟಿರುತ್ತದೆಯೋ ಅಷ್ಟೇ ಖುಷಿಯಾಗುತ್ತದೆ. ಇದಂತು ಆತ್ಮಿಕ ನಶೆಯಾಗಿದೆ, ಈ ನಶೆಯಲ್ಲಿ ಇರುವುದರಿಂದ ಖುಷಿಯು ಸ್ವತಹವಾಗಿಯೇ ಆಗುತ್ತದೆ. ಖುಷಿಯೇ ಜನ್ಮ-ಸಿದ್ಧ ಅಧಿಕಾರವೂ ಆಗಿದೆ. ಸದಾ ಈ ಖುಷಿಯ ಹೊಳಪಿನಿಂದ, ಅನ್ಯರಿಗೂ ಆತ್ಮಿಕ ಹೊಳಪನ್ನು ತೋರಿಸುವವರಾಗಿರಿ – ಸದಾ ಇದೇ ವರದಾನವನ್ನು ಸ್ಮೃತಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ. ಏನಾದರೂ ಆಗಲಿ ಆದರೆ ಖುಷಿಯ ವರದಾನವನ್ನು ಕಳೆಯಬಾರದು. ಸಮಸ್ಯೆಗಳು ಬರುತ್ತವೆ ಮತ್ತು ಹೋಗುತ್ತವೆ ಆದರೆ ಅದರ ಮಧ್ಯೆ ಖುಷಿಯು ಹೋಗಿ ಬಿಡಬಾರದು ಏಕೆಂದರೆ ಖುಷಿಯು ನಮ್ಮ ವಸ್ತುವಾಗಿದೆ, ಸಮಸ್ಯೆಯು ಪರಿಸ್ಥಿತಿ ಆಗಿದೆ ಮತ್ತು ಅದು ಅನ್ಯರ ಕಡೆಯಿಂದ ಬಂದಿರುವಂತದ್ದು. ತನ್ನ ವಸ್ತುವನ್ನಂತು ಸದಾ ಜೊತೆಯಲ್ಲಿ ಇಟ್ಟುಕೊಳ್ಳಬೇಕಲ್ಲವೆ. ಪರರ ವಸ್ತುವಂತು ಅವಶ್ಯವಾಗಿ ಬರುತ್ತದೆ ಮತ್ತು ಅವಶ್ಯವಾಗಿ ಹೋಗುತ್ತದೆ. ಪರಿಸ್ಥಿತಿಯು ಮಾಯೆಯದಾಗಿದೆ, ತಮ್ಮದಲ್ಲ ಆದರೆ ತಮ್ಮ ವಸ್ತುವನ್ನು ಕಳೆದುಕೊಳ್ಳಬಾರದು ಅಂದರೆ ಖುಷಿಯನ್ನು ಕಳೆದುಕೊಳ್ಳಬಾರದು. ಭಲೆ ಈ ಶರೀರವೂ ಹೊರಟು ಹೋಗಲಿ ಆದರೆ ಖುಷಿಯು ಹೋಗಬಾರದು. ಖುಷಿಯಿಂದ ಶರೀರವೂ ಹೋಗುತ್ತದೆಯೆಂದರೆ, ಅದಕ್ಕಿಂತಲೂ ಶ್ರೇಷ್ಠವಾಗಿರುವುದು ಸಿಗುತ್ತದೆ. ಹಳೆಯದು ಹೋಗುತ್ತದೆ, ಹೊಸದು ಸಿಗುತ್ತದೆ ಮತ್ತು ಈ ಮಹಾನತೆಯಲ್ಲಿ ಮಹಾರಾಷ್ಟ್ರದವರು ಸದಾ ಇರಬೇಕು, ಖುಷಿಯಲ್ಲಿ ಮಹಾನರಾಗಿ ಇರಬೇಕಾಗಿದೆ. ಒಳ್ಳೆಯದು.

ಆಂಧ್ರಪ್ರದೇಶ ಮತ್ತು ಕರ್ನಾಟಕ ಗ್ರೂಪ್:

ಈ ಡ್ರಾಮಾದಲ್ಲಿ ವಿಶೇಷ ಪಾತ್ರವನ್ನು ಅಭಿನಯಿಸುವ ವಿಶೇಷ ಆತ್ಮರಾಗಿದ್ದೇವೆ – ಇದನ್ನು ಅನುಭವ ಮಾಡುತ್ತೀರಾ? ಯಾವಾಗ ತನ್ನನ್ನು ವಿಶೇಷ ಆತ್ಮನೆಂದು ತಿಳಿಯುತ್ತೀರೋ ಆಗ ಆ ರೀತಿ ಮಾಡುವಂತಹ ತಂದೆಯ ನೆನಪು ಸ್ವತಹ ಇರುತ್ತದೆ, ಸಹಜವೆನಿಸುತ್ತದೆ ಏಕೆಂದರೆ ‘ಸಂಬಂಧ’ವು ನೆನಪಿಗೆ ಆಧಾರವಾಗಿದೆ. ಎಲ್ಲಿ ಸಂಬಂಧವಿರುವುದೋ ಅಲ್ಲಿ ನೆನಪೂ ಸ್ವತಹ ಹಾಗೂ ಸಹಜವಾಗಿ ಬಿಡುತ್ತದೆ. ಯಾವಾಗ ಸರ್ವ ಸಂಬಂಧಗಳು ಒಬ್ಬ ತಂದೆಯೊಂದಿಗೆ ಆಗಿ ಬಿಟ್ಟಿತು ಅಂದಮೇಲೆ ಮತ್ತ್ಯಾರೂ ಇಲ್ಲವೇ ಇಲ್ಲ. ಒಬ್ಬ ತಂದೆಯೇ ಸರ್ವ ಸಂಬಂಧಿಯಾಗಿದ್ದಾರೆ, ಈ ಸ್ಮೃತಿಯಿಂದ ಸಹಜಯೋಗಿಗಳಾಗಿ ಬಿಟ್ಟಿರಿ, ಎಂದೂ ಕಷ್ಟವೆನಿಸುವುದಿಲ್ಲ ಅಲ್ಲವೆ. ಯಾವಾಗ ಮಾಯೆಯ ಯುದ್ಧವಾಗುವುದೋ ಆಗ ಪರಿಶ್ರಮವೆನಿಸುತ್ತದೆಯೇ – ಮಾಯೆಗೆ ಸದಾಕಾಲಕ್ಕಾಗಿ ವಿದಾಯಿ ನೀಡುವವರಾಗಿ. ಯಾವಾಗ ಮಾಯೆಗೆ ವಿದಾಯಿ ನೀಡುವಿರೋ ಆಗ ತಂದೆಯ ಬದಾಯಿ (ಶುಭಾಷಯಗಳು) ಬಹಳ ಮುಂದುವರೆಸುತ್ತವೆ. ಭಕ್ತಿಮಾರ್ಗದಲ್ಲಿ ಆಶೀರ್ವಾದ ಕೊಡಿ ಎಂದು ಎಷ್ಟು ಬಾರಿ ಬೇಡಿದಿರಿ, ಆದರೆ ಈಗ ತಂದೆಯಿಂದ ಆಶೀರ್ವಾದವನ್ನು ಪಡೆಯುವ ಸಹಜ ಸಾಧನವನ್ನು ತಿಳಿಸಲಾಗಿದೆ – ಎಷ್ಟು ಮಾಯೆಗೆ ವಿದಾಯಿ ನೀಡುತ್ತೀರೋ ಅಷ್ಟು ಆಶೀರ್ವಾದಗಳು ಸ್ವತಹ ಸಿಗುವುದು. ಪರಮಾತ್ಮನ ಆಶೀರ್ವಾದಗಳು ಒಂದು ಜನ್ಮಕ್ಕಲ್ಲ ಆದರೆ ಅನೇಕ ಜನ್ಮಗಳು ಶ್ರೇಷ್ಠರನ್ನಾಗಿ ಮಾಡುತ್ತಾರೆ. ಸದಾ ಇದನ್ನು ಸ್ಮೃತಿಯಲ್ಲಿ ಇಟ್ಟುಕೊಳ್ಳಿ – ನಾವು ಸದಾ ಪ್ರತೀ ಹೆಜ್ಜೆಯಲ್ಲಿ ತಂದೆಯ, ಬ್ರಾಹ್ಮಣ ಪರಿವಾರದ ಆಶೀರ್ವಾದಗಳನ್ನು ತೆಗೆದುಕೊಳ್ಳುತ್ತಾ, ಸಹಜವಾಗಿ ಹಾರುತ್ತಾ ಹೋಗಬೇಕು. ಡ್ರಾಮಾದಲ್ಲಿ ವಿಶೇಷ ಆತ್ಮರಾಗಿದ್ದೀರಿ, ವಿಶೇಷ ಕರ್ಮ ಮಾಡಿ ಅನೇಕ ಜನ್ಮಗಳಿಗಾಗಿ ವಿಶೇಷ ಪಾತ್ರವನ್ನು ಅಭಿನಯಿಸುವವರಾಗಿದ್ದೀರಿ. ಸಾಧಾರಣ ಕರ್ಮವಲ್ಲ, ವಿಶೇಷ ಕರ್ಮ, ವಿಶೇಷ ಸಂಕಲ್ಪ, ವಿಶೇಷ ಮಾತುಗಳಿರಲಿ ಅಂದಾಗ ಆಂಧ್ರದವರು ವಿಶೇಷವಾಗಿ ಇದೇ ಸೇವೆ ಮಾಡಿ – ತನ್ನ ಶ್ರೇಷ್ಠ ಕರ್ಮದ ಮೂಲಕ, ತನ್ನ ಶ್ರೇಷ್ಠ ಪರಿವರ್ತನೆಯ ಮೂಲಕ ಅನೇಕ ಆತ್ಮರನ್ನು ಪರಿವರ್ತನೆ ಮಾಡಿ. ತಮ್ಮನ್ನು ಕನ್ನಡಿಯನ್ನಾಗಿ ಮಾಡಿಕೊಳ್ಳಿ ಮತ್ತು ತಮ್ಮ ಕನ್ನಡಿಯಲ್ಲಿ ತಂದೆಯು ಕಾಣಿಸಲಿ. ಇಂತಹ ವಿಶೇಷ ಸೇವೆ ಮಾಡಿ ಆದ್ದರಿಂದ ಇದನ್ನೇ ನೆನಪಿಟ್ಟುಕೊಳ್ಳಿ – ನಾನು ದಿವ್ಯ ಕನ್ನಡಿಯಾಗಿದ್ದೇನೆ, ನಾನು ಕನ್ನಡಿಯ ಮೂಲಕ ತಂದೆಯೇ ಕಂಡುಬರಲಿ. ತಿಳಿಯಿತೆ. ಒಳ್ಳೆಯದು.

ವರದಾನ:-

ಅತ್ಯಂತ ಶ್ರೇಷ್ಠವಾದ ಸಿಂಹಾಸನವೆಂದರೆ ಬಾಪ್ದಾದಾರವರ ಹೃದಯ ಸಿಂಹಾಸನಾಧಾರಿ ಆಗುವುದಾಗಿದೆ. ಆದರೆ ಈ ಸಿಂಹಾಸನದಲ್ಲಿ ಕುಳಿತುಕೊಳ್ಳುವುದಕ್ಕಾಗಿ ಅಚಲ, ಅಡೋಲ, ಏಕರಸ ಸ್ಥಿತಿಯ ಸಿಂಹಾಸನವಿರಬೇಕು. ಒಂದುವೇಳೆ ಈ ಸ್ಥಿತಿಯ ಸಿಂಹಾಸನದಲ್ಲಿ ಸ್ಥಿತರಾಗದಿದ್ದರೆ ಬಾಪ್ದಾದಾರವರ ಹೃದಯವೆಂಬ ಸಿಂಹಾಸನದಲ್ಲಿಯೂ ಸ್ಥಿತರಾಗಲು ಸಾಧ್ಯವಿಲ್ಲ. ಇದಕ್ಕಾಗಿ ತಮ್ಮ ಭೃಕುಟಿಯ ಸಿಂಹಾಸನದಲ್ಲಿ ಅಕಾಲಮೂರ್ತಿಯಾಗಿ ಸ್ಥಿತರಾಗಿ ಬಿಡಿ. ಈ ಸಿಂಹಾಸನದಿಂದ ಮತ್ತೆ-ಮತ್ತೆ ಏರುಪೇರಾಗಬಾರದು, ಇದರಿಂದ ಬಾಪ್ದಾದಾರವರ ಹೃದಯ ಸಿಂಹಾಸನದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top