24 November 2021 KANNADA Murli Today | Brahma Kumaris

Read and Listen today’s Gyan Murli in Kannada

November 23, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಇಲ್ಲಿ ನೀವು ತಮ್ಮ ರಾಜ್ಯ ಪದವಿಯ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೀರಿ, ಎಷ್ಟು ನೆನಪಿನಲ್ಲಿರುತ್ತೀರಿ ವಿದ್ಯೆಯ ಮೇಲೆ ಗಮನ ಕೊಡುತ್ತೀರೋ, ಅಷ್ಟು ಅದೃಷ್ಟವು ಶ್ರೇಷ್ಠವಾಗುತ್ತದೆ”

ಪ್ರಶ್ನೆ:: -

ಸಂಗಮದಲ್ಲಿ ಯಾವ ಶ್ರೀಮತದ ಪಾಲನೆ ಮಾಡಿ 21 ಜನ್ಮಗಳಿಗಾಗಿ ನೀವು ತಮ್ಮ ಅದೃಷ್ಟವನ್ನು ಶ್ರೇಷ್ಠ ಮಾಡಿಕೊಳ್ಳುತ್ತೀರಿ?

ಉತ್ತರ:-

ಸಂಗಮದಲ್ಲಿ ತಂದೆಯ ಶ್ರೀಮತವಾಗಿದೆ – ಮಧುರ ಮಕ್ಕಳೇ, ನಿರ್ವಿಕಾರಿಗಳಾಗಿರಿ. ದೇಹೀ-ಅಭಿಮಾನಿಗಳಾಗುವ ಸಂಪೂರ್ಣ ಪುರುಷಾರ್ಥವನ್ನು ಮಾಡಿ. ಎಂದೂ ಯಾವುದೇ ಪಾಪ ಕರ್ಮವನ್ನು ಮಾಡಬೇಡಿ, ಇದರಿಂದ 21 ಜನ್ಮಗಳಿಗಾಗಿ ಅದೃಷ್ಟವು ಶ್ರೇಷ್ಠವಾಗುವುದು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಅದೃಷ್ಟವನ್ನು ಬೆಳಗಿಸಿಕೊಂಡು ಬಂದಿದ್ದೇನೆ…..

ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಈ ಗೀತೆಯನ್ನು ಕೇಳಿದಿರಿ, ಈಗ ಇವೆರಡು ಸಾಲಿನ ಅರ್ಥವನ್ನು ಯಾರು ತಿಳಿದುಕೊಂಡಿದ್ದೀರಿ, ಅವರು ಕೈಯನ್ನೆತ್ತಿರಿ? ಅದೃಷ್ಟವನ್ನು ಬೆಳಗಿಸಿಕೊಂಡು ಬಂದಿದ್ದೇನೆಂದು ಯಾರು ಹೇಳಿದರು? ಆತ್ಮ. ನಾನು ಅದೃಷ್ಟವನ್ನು ರೂಪಿಸಿಕೊಂಡು ಬಂದಿದ್ದೇನೆ ಎಂದು ಎಲ್ಲಾ ಆತ್ಮರು ಹೇಳುತ್ತಾರೆ ಅಂದಾಗ ಯಾವ ಅದೃಷ್ಟ? ಹೊಸ ಪ್ರಪಂಚದಲ್ಲಿ ಹೋಗುವ ಅದೃಷ್ಟವಾಗಿದೆ. ಹೊಸ ಪ್ರಪಂಚವು ಸ್ವರ್ಗವಾಗಿದೆ, ಈ ಹಳೆಯ ಪ್ರಪಂಚವು ನರಕವಾಗಿದೆ ಆದ್ದರಿಂದ ಇದನ್ನು ಎಲ್ಲಾ ಆತ್ಮರೂ ಹೇಳುತ್ತಾರೆ. ಆತ್ಮಕ್ಕೆ ಶರೀರವಿದ್ದಾಗಲೇ ಮಾತನಾಡಲು ಸಾಧ್ಯವಾಗುವುದು. ನಾವು ಶಾಲೆಯಲ್ಲಿ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೇವೆಂದು ಜೀವಾತ್ಮರು ಹೇಳುತ್ತಾರೆ. ಇಲ್ಲಿ ಓದಿಸುವವರು ಯಾರು? ಶಿವ ತಂದೆ, ಜ್ಞಾನ ಸಾಗರ. ಮನುಷ್ಯನನ್ನು ದೇವತೆ ಅಥವಾ ಪತಿತರನ್ನು ಪಾವನ, ನರಕವಾಸಿಗಳನ್ನು ಸ್ವರ್ಗವಾಸಿಗಳನ್ನಾಗಿ ಮಾಡುವವರು ಅವರೊಬ್ಬರೇ ಆಗಿದ್ದಾರೆ. ಈ ನರಕಕ್ಕೆ ಬೆಂಕಿ ಬೀಳಲಿದೆ. ಪ್ರಪಂಚದಲ್ಲಿ ನಾವು ಬೇಹದ್ದಿನ ತಂದೆಯ ಬಳಿ ಬಂದಿದ್ದೇವೆ ಎಂದು ಹೇಳುವಂತಹ ಶಾಲೆಯು ಯಾವುದೂ ಇಲ್ಲ ಅಥವಾ ನಾನು ತಂದೆಯೂ ಆಗಿದ್ದೇನೆ, ಶಿಕ್ಷಕನೂ ಆಗಿದ್ದೇನೆ, ಗುರುವೂ ಆಗಿದ್ದೇನೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಈ ಬ್ರಹ್ಮಾರವರೂ ಸಹ ಹೇಳಲು ಸಾಧ್ಯವಿಲ್ಲ. ನಾನು ಎಲ್ಲರ ತಂದೆ, ಶಿಕ್ಷಕ, ಗುರುವಾಗಿದ್ದೇನೆಂದು ಒಬ್ಬ ಶಿವ ತಂದೆಯೇ ಹೇಳುತ್ತಾರೆ. ಅವರೇ ಕುಳಿತು ಓದಿಸುತ್ತಾರೆ ಅಂದಮೇಲೆ ಈಗ ಮಕ್ಕಳು ಅದೃಷ್ಟವನ್ನು ರೂಪಿಸಿಕೊಳ್ಳಬೇಕಾಗಿದೆ. ಮಕ್ಕಳು ಹೇಳುತ್ತೀರಿ – ನಾವು ಹೊಸ ಪ್ರಪಂಚದ ರಾಜಧಾನಿಯ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೇವೆ. ನಮಗೆ ತಿಳಿದಿದೆ, ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ. ತಂದೆಯು ಬಂದು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆ. ನೀವು 21 ಜನ್ಮಗಳ ರಾಜ್ಯಭಾಗ್ಯವನ್ನು ತೆಗೆದುಕೊಳ್ಳಲು ಓದುತ್ತೀರೆಂದರೆ, ರಾಜ್ಯ ಪದವಿಯ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೀರಿ. ಇಲ್ಲಿ ರಾಜಯೋಗವನ್ನು ಕಲಿಯುತ್ತಿದ್ದೀರಿ. ಈ ಹಾಡುಗಳನ್ನು ಭಲೆ ಆ ನಾಟಕದವರು ಬರೆದಿದ್ದಾರೆ ಆದರೆ ಇದರ ಅರ್ಥವನ್ನು ಈಗ ತಿಳಿಸಬೇಕಾಗಿದೆ. ಹೇಗೆ ತಂದೆಯು ಎಲ್ಲಾ ವೇದಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ. ಈ ಸಮಯದಲ್ಲಿ ಇಡೀ ಪ್ರಪಂಚದಲ್ಲಿ ಭಕ್ತಿಯಿದೆ. ಸತ್ಯಯುಗದಲ್ಲಿ ಭಕ್ತಿ, ಮಂದಿರ ಇತ್ಯಾದಿಗಳಿರುವುದಿಲ್ಲ. ನೀವು ಅರ್ಧಕಲ್ಪ ಭಕ್ತಿ ಮಾಡಿದ್ದೀರಿ. ಈಗಂತೂ ಭಗವಂತ ಸಿಕ್ಕಿ ಬಿಟ್ಟಿದ್ದಾರೆ. ಭಾರತದಲ್ಲಿ ಮೊಟ್ಟ ಮೊದಲು ಈ ದೇವಿ-ದೇವತೆಗಳ ರಾಜ್ಯವಿತ್ತು ನಂತರ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಅದೃಷ್ಟವು ಕೆಟ್ಟು ಹೋಗಿದೆ, ಈಗ ಪುನಃ ಅದೃಷ್ಟವನ್ನು ರೂಪಿಸುತ್ತಾರೆ, ತಂದೆಯು ಅದೃಷ್ಟವನ್ನು ರೂಪಿಸುವುದಕ್ಕಾಗಿಯೇ ಬಂದಿದ್ದಾರೆ. ಮಕ್ಕಳೇ, ನನ್ನನ್ನು ನೆನಪು ಮಾಡಿರಿ, ನೀವು ಬಹಳ ಪಾಪಾತ್ಮರಾಗಿ ಬಿಟ್ಟಿದ್ದೀರಿ ಎಂದು ಹೇಳುತ್ತಾರೆ. ಮೊಟ್ಟ ಮೊದಲು ಶಿವ ತಂದೆಯ ಭಕ್ತಿಯು ನಡೆಯುತ್ತದೆ, ಅದು ಅವ್ಯಭಿಚಾರಿ ಭಕ್ತಿಯಾಗಿದೆ ನಂತರ ಭಕ್ತಿಯೂ ಸಹ ವ್ಯಭಿಚಾರಿಯಾಗಿ ಬಿಡುತ್ತದೆ ಅಂದಾಗ ಮಕ್ಕಳಿಗೆ ಮೊಟ್ಟ ಮೊದಲು ಈ ನಿಶ್ಚಯವಿರಲಿ – ಯಾರಿಗೆ ಭಗವಂತನೆಂದು ಹೇಳಲಾಗುತ್ತದೆಯೋ ಅವರೇ ನಮಗೆ ಓದಿಸುತ್ತಾರೆ. ಅವರಿಗೆ ಯಾವುದೇ ಶರೀರವಿಲ್ಲ. ಅವರು ಈ ಶರೀರದಲ್ಲಿ (ಬ್ರಹ್ಮಾ) ಕುಳಿತು ಮಾತನಾಡುತ್ತಾರೆ. ಹೇಗೆ ನಿಮ್ಮ ಆತ್ಮವು ಈ ಶರೀರದಲ್ಲಿ ಬಂದಾಗ ಮಾತನಾಡತೊಡಗುತ್ತದೆ. ಕೆಲಕೆಲವೊಮ್ಮೆ ಮನುಷ್ಯರು ಸತ್ತು ಹೋಗುತ್ತಾರೆ, ನಂತರ ಯಾವಾಗ ಸ್ಮಶಾನಕ್ಕೆ ತೆಗೆದುಕೊಂಡು ಹೋಗುತ್ತಾರೆಯೋ ಆಗ ಅರ್ಧದಲ್ಲಿಯೇ ಅಲುಗಾಡುತ್ತಾರೆ, ಆತ್ಮವು ಹೊರಟು ಹೋಗಿ ಮತ್ತೆ ಬಂದಿತೆಂದಲ್ಲ, ಆತ್ಮವು ಬಹಳ ಸೂಕ್ಷ್ಮವಾಗಿದೆಯಲ್ಲವೇ ಆದ್ದರಿಂದ ಎಲ್ಲಿಯೋ ಬಚ್ಚಿಟ್ಟುಕೊಂಡಿರುತ್ತದೆ ಆದ್ದರಿಂದ ಈ ರೀತಿ ಹೇಳಬಹುದು – ಮೂರ್ಛಿತರಾಗಿ ಬಿಟ್ಟರು, ಅದು ಯಾರಿಗೂ ಅರ್ಥವಾಗಲಿಲ್ಲ. ಹೀಗೆ ಕೆಲಕೆಲವೊಮ್ಮೆ ಆಗಿ ಬಿಡುತ್ತದೆ. ಚಿತೆಯಿಂದಲೂ ಎದ್ದು ಕುಳಿತುಕೊಳ್ಳುತ್ತಾರೆ ಮತ್ತೆ ಅವರನ್ನು ಮೇಲೇತ್ತುತ್ತಾರೆ. ಇದೇನಾಯಿತು? ಆತ್ಮವು ಶರೀರದಲ್ಲಿಯೇ ಎಲ್ಲಿಯೋ ಪಕ್ಕಕ್ಕೆ ಸರಿದಿರುತ್ತದೆ. ಮತ್ತೆ ತನ್ನ ಸ್ಥಾನಕ್ಕೆ ಬಂದು ಬಿಡುತ್ತದೆ. ಆತ್ಮವಿಲ್ಲದಿದ್ದರೆ ಶರೀರವು ಒಮ್ಮೆಲೆ ಜಡವಾಗಿ ಬಿಡುತ್ತದೆ. ಅಂದಾಗ ಆತ್ಮರ ದೇಶವು ಪರಮಧಾಮವಾಗಿದೆ, ನೀವು ತಿಳಿದುಕೊಂಡಿದ್ದೀರಿ – ನಾವು ಆ ಮನೆಯ ನಿವಾಸಿಗಳಾಗಿದ್ದೇವೆ ಮೊಟ್ಟ ಮೊದಲು ನಾವಾತ್ಮರು ಮನೆಯಿಂದ ಸತ್ಯಯುಗದಲ್ಲಿ ಬಂದೆವು. ಭಾರತವಾಸಿಗಳು ಯಾರು ದೇವಿ-ದೇವತೆಗಳಾಗಿದ್ದರೋ ಅವರೇ ಬಂದು ಬಿಟ್ಟರು. ವಾಸ್ತವದಲ್ಲಿ ಯಾರು-ಯಾರು ಧರ್ಮ ಸ್ಥಾಪನೆ ಮಾಡುತ್ತಾರೆಯೋ ಅವರ ಧರ್ಮವು ಕೊನೆಯವರೆಗೂ ಸ್ಥಿರವಾಗಿರುತ್ತದೆ. ಬುದ್ಧನ ಧರ್ಮವು ಸ್ಥಿರವಾಗಿದೆ, ಕ್ರೈಸ್ಟ್ನ ಧರ್ಮವೂ ಸ್ಥಿರವಾಗಿದೆ. ಕೇವಲ ದೇವಿ-ದೇವತಾ ಧರ್ಮದವರು ಯಾರು ರಾಜ್ಯ ಮಾಡುತ್ತಿದ್ದರೋ ಅವರ ಹೆಸರೇ ಮರೆಯಾಗಿದೆ. ತಮ್ಮನ್ನು ದೇವಿ-ದೇವತಾ ಧರ್ಮದವರೆಂದು ಹೇಳಿಕೊಳ್ಳುವವರು ಯಾರೂ ಇಲ್ಲ.

ತಂದೆಯು ತಿಳಿಸುತ್ತಾರೆ – ಭಾರತವಾಸಿಗಳು ತಮ್ಮ ಧರ್ಮವನ್ನೇ ಮರೆತು ಹೋಗಿದ್ದಾರೆ – ನಮ್ಮ ಗೃಹಸ್ಥ ಧರ್ಮವು ಪವಿತ್ರವಾಗಿತ್ತು, ಸಂಪೂರ್ಣ ನಿರ್ವಿಕಾರಿ ಮಹಾರಾಜ-ಮಹಾರಾಣಿಯ ರಾಜ್ಯವಿತ್ತು. ಅವರಿಗೆ ಭಗವತಿ ಲಕ್ಷ್ಮಿ ಮತ್ತು ಭಗವಾನ್ ನಾರಾಯಣನೆಂದು ಹೇಳುತ್ತಾರೆ. ವಾಸ್ತವದಲ್ಲಿ ಭಗವಂತನು ಒಬ್ಬರೇ ಆಗಿದ್ದಾರೆ, ಅವರಿಗೇ ಜ್ಞಾನಸಾಗರನೆಂದು ಹೇಳಲಾಗುತ್ತದೆ. ಈ ಲಕ್ಷ್ಮೀ-ನಾರಾಯಣರಲ್ಲಿ ಯಾವುದೇ ಜ್ಞಾನವಿಲ್ಲ, ಜ್ಞಾನಸಾಗರನು ಒಬ್ಬ ಶಿವ ತಂದೆಯೇ ಆಗಿದ್ದಾರೆ. ಅವರು ಕುಳಿತು ನೀವು ಮಕ್ಕಳಿಗೇ ಜ್ಞಾನವನ್ನು ಕೊಡುತ್ತಾರೆ. ನೀವೀಗ ಓದುತ್ತಿದ್ದೀರಿ, ಈ ವಿದ್ಯೆಯನ್ನು ಸತ್ಯಯುಗದಲ್ಲಿ ಮರೆತು ಹೋಗುತ್ತೀರಿ. ಈಗ ನೀವು ಪ್ರತಿಯೊಬ್ಬರೂ ತಿಳಿದುಕೊಂಡಿದ್ದೀರಿ – ನಾವಾತ್ಮರಲ್ಲಿ 84 ಜನ್ಮಗಳ ರೆಕಾರ್ಡ್ ತುಂಬಲ್ಪಟ್ಟಿದೆ. ಆತ್ಮವೇ ಈಗ ಜ್ಞಾನವನ್ನು ತೆಗೆದುಕೊಳ್ಳುತ್ತಿದೆ, ನಂತರ ಸತ್ಯಯುಗದಲ್ಲಿ ಹೋಗಿ ತನ್ನ ರಾಜ್ಯಭಾರ ಮಾಡುವುದು. ನೀವು ಹೇಳುತ್ತೀರಿ – ನಾವು 84 ಜನ್ಮಗಳ ಚಕ್ರವನ್ನು ಸುತ್ತಿದೆವು, ಈಗ ತಂದೆಯಿಂದ ನಾವು ಸ್ವರ್ಗದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಿದ್ದೇವೆ. ಪ್ರತಿಯೊಬ್ಬರೂ ಆ ತಾತನಿಂದಲೇ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ ಆದರೆ ತಮ್ಮ-ತಮ್ಮ ಪುರುಷಾರ್ಥದನುಸಾರ. ಇದರಲ್ಲಿ ಭಾಗವನ್ನು ಹಂಚಲಾಗುವುದಿಲ್ಲ, ಲೌಕಿಕದಲ್ಲಿ ಹಂಚಲಾಗುತ್ತದೆಯಲ್ಲವೇ. ಬೇಹದ್ದಿನ ತಂದೆಯು ತಿಳಿಸುತ್ತಾರೆ – ನಾನು ವೈಕುಂಠ ಸ್ಥಾಪನೆ ಮಾಡುತ್ತೇನೆ, ಅದರಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುವುದು ನಿಮ್ಮ ಪುರುಷಾರ್ಥದ ಮೇಲೆ ಆಧಾರಿತವಾಗಿದೆ. ಎಷ್ಟು ತಂದೆಯನ್ನು ನೆನಪು ಮಾಡುತ್ತೀರೋ ಅಷ್ಟು ವಿಕರ್ಮಗಳು ವಿನಾಶವಾಗುತ್ತದೆ, ಪವಿತ್ರರಾಗುತ್ತೀರಿ. ಚಿನ್ನವನ್ನು ಭಟ್ಟಿಯಲ್ಲಿ ಹಾಕಲಾಗುತ್ತದೆಯಲ್ಲವೇ. ಆಗ ಅದರಿಂದ ತುಕ್ಕು ಬಿಟ್ಟುಹೋಗಿ ಅಪ್ಪಟ ಚಿನ್ನದಂತೆ ಗಟ್ಟಿಯಾಗಿ ಬಿಡುತ್ತದೆ. ಈ ಆತ್ಮವೂ ಸಹ ಸತ್ಯ ಚಿನ್ನವಾಗಿತ್ತು ನಂತರ ಇಲ್ಲಿ ಪಾತ್ರವನ್ನು ಅಭಿನಯಿಸಲು ಬರುತ್ತದೆ. ಮೊದಲು ಸತೋಪ್ರಧಾನವಾಗಿರುತ್ತದೆ ನಂತರ ಅದರಲ್ಲಿ ಬೆಳ್ಳಿಯ ಬೆರಕೆಯಾಗುತ್ತದೆ, ಆತ್ಮವು ಸ್ವಲ್ಪ ಅಪವಿತ್ರವಾಗುತ್ತದೆ. ನಂತರ ನಿಧಾನ-ನಿಧಾನವಾಗಿ ಹಳೆಯದಾಗುತ್ತಾ ಹೋಗುತ್ತದೆ. ಮನೆಯೂ ಸಹ ಮೊದಲು ಹೊಸದಾಗಿರುತ್ತದೆ ನಂತರ ಹಳೆಯದಾಗತೊಡಗುತ್ತದೆ. 100 ವರ್ಷಗಳ ನಂತರ ಅದಕ್ಕೆ ಹಳೆಯದೆಂದೇ ಹೇಳುತ್ತಾರೆ. ಹಾಗೆಯೇ ಪ್ರಪಂಚವೂ ಸಹ ಹೊಸದು ಮತ್ತು ಹಳೆಯದಾಗುತ್ತದೆ. ಇಂದಿಗೆ 5000 ವರ್ಷಗಳ ಮೊದಲು ಹೊಸದಾಗಿತ್ತು, ಈ ದೇವಿ-ದೇವತೆಗಳ ರಾಜ್ಯವಿತ್ತು ಅದು ಎಲ್ಲಿ ಹೋಯಿತು? 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ ಹಳೆಯದಾಗಿ ಬಿಟ್ಟಿದೆ. ಆತ್ಮವೂ ಸಹ ಮೈಲಿಗೆ ಮತ್ತು ಶರೀರವೂ ಮೈಲಿಗೆಯಾಗಿ ಬಿಟ್ಟಿತು. ಪಾವನರಿಂದ ಪತಿತರಾಗಿ ಬಿಟ್ಟಿರಿ. ಕೃಷ್ಣನೂ ಸಹ ಶ್ಯಾಮ ಮತ್ತು ಸುಂದರನೆಂದು ತೋರಿಸುತ್ತಾರಲ್ಲವೇ. ಕಾಲು ನರಕದ ಕಡೆ ಮುಖವನ್ನು ಸ್ವರ್ಗದ ಕಡೆ ತೋರಿಸಬೇಕಾಗಿದೆ. ನೀವೂ ಸಹ ಆ ಕುಲದವರಾಗಿದ್ದೀರಿ, ನಿಮ್ಮದು ಕಾಲು ನರಕದ ಕಡೆ ಮುಖವು ಸ್ವರ್ಗದ ಕಡೆಯಿದೆ. ನೀವೀಗ ಮೊದಲು ನಿರ್ವಾಣಧಾಮದಲ್ಲಿ ಹೋಗಿ ನಂತರ ಸ್ವರ್ಗದಲ್ಲಿ ಬರುತ್ತೀರಿ. ಕಲಿಯುಗಕ್ಕೆ ಬೆಂಕಿ ಬೀಳುವುದು. ಅಣ್ವಸ್ತ್ರಗಳ ಮಳೆ, ಬೆಂಕಿ, ಭೂಕಂಪ ಇತ್ಯಾದಿಗಳಾಗುವುದು. ಪತಿತ ಆತ್ಮರೆಲ್ಲರೂ ಲೆಕ್ಕಾಚಾರಗಳನ್ನು ಮುಗಿಸಿ ಮನೆಗೆ ಹೊರಟು ಹೋಗುವರು. ಇನ್ನು ಕೆಲವರೇ ಉಳಿಯುತ್ತಾರೆ. ಪವಿತ್ರ ಆತ್ಮರು ಬರತೊಡಗುತ್ತಾರೆ. ಈಗಂತೂ ಎಲ್ಲರೂ ಮುಳ್ಳುಗಳಾಗಿದ್ದಾರೆ. ಕಾಮ ಕಟಾರಿಯನ್ನು ನಡೆಸುವುದು ಮುಳ್ಳು ಚುಚ್ಚುವುದಾಗಿದೆ. ಇಲ್ಲಂತೂ ತಂದೆಯು ತಿಳಿಸುತ್ತಾರೆ – ಸಂಪೂರ್ಣ ನಿರ್ವಿಕಾರಿಗಳಾಗಬೇಕಾಗಿದೆ. ನನ್ನನ್ನು ನೆನಪು ಮಾಡಿರಿ, ನಾನು ನಿಮಗೆ ಸ್ವರ್ಗದ ಆಸ್ತಿಯನ್ನು ಕೊಡುತ್ತೇನೆ, ನೀವು ಪವಿತ್ರರಾಗಿ ಬಿಡುತ್ತೀರಿ. ನೀವು ಪಾವನರಾಗಿದ್ದಾಗ ಗೃಹಸ್ಥ ವ್ಯವಹಾರವೂ ಪವಿತ್ರವಾಗಿತ್ತು, ನೀವೀಗ ಪತಿತರಾಗಿದ್ದೀರಿ ಆದ್ದರಿಂದ ಗೃಹಸ್ಥ ವ್ಯವಹಾರವೂ ಸಹ ಅಪವಿತ್ರ ವಿಕಾರಿಯಾಗಿದೆ. ಸತ್ಯಯುಗದಲ್ಲಿ ವ್ಯಾಪಾರ ವ್ಯವಹಾರವೂ ಸಹ ಸತ್ಯತೆಯಿಂದ ನಡೆಯುತ್ತದೆ. ಅಲ್ಲಿ ಅಸತ್ಯ ಹೇಳುವ ಅವಶ್ಯಕತೆಯೇ ಇರುವುದಿಲ್ಲ. ಯಾವಾಗ ಹೆಚ್ಚು ಹಣವನ್ನು ಸಂಪಾದಿಸುವ ಲೋಭವಿರುತ್ತದೆಯೋ ಆಗಲೇ ಸುಳ್ಳು ಹೇಳಲಾಗುತ್ತದೆ. ಅಲ್ಲಂತೂ ಅಪಾರ ಧನವಿರುತ್ತದೆ, ಆಹಾರ ಧಾನ್ಯಗಳಿಗೆ ಬೆಲೆ ಕಟ್ಟುವುದಿಲ್ಲ. ಅಲ್ಲಿ ಯಾರೂ ಬಡವರಿರುವುದೇ ಇಲ್ಲ. ಯಾರು ಚೆನ್ನಾಗಿ ಪುರುಷಾರ್ಥ ಮಾಡುವರೋ ಅವರು ಮಹಾರಾಜನಾಗುವರು. ವಜ್ರ ವೈಢೂರ್ಯಗಳ ಮಹಲುಗಳು ಸಿಗುತ್ತವೆ. ಸಂಪೂರ್ಣ ಪುರುಷಾರ್ಥ ಮಾಡದಿದ್ದರೆ ಪ್ರಜೆಗಳಲ್ಲಿ ಹೋಗುವರು. ರಾಜಾ-ರಾಣಿ ಮತ್ತೆ ರಾಜಕುಮಾರ-ರಾಜಕುಮಾರಿ ಇಡೀ ಮನೆತನ ಇರುತ್ತದೆಯಲ್ಲವೇ. ಮತ್ತೆ ಪ್ರಜೆಗಳಲ್ಲಿಯೂ ಸಹ ನಂಬರ್ವಾರ್ ಸಾಹುಕಾರರು ಮತ್ತು ಬಡ ಪ್ರಜೆಗಳಾಗುತ್ತಾರೆ. ಅಲ್ಲಂತೂ ಎಲ್ಲರೂ ಪವಿತ್ರರಾಗಿರುತ್ತಾರೆ. ರಾಜಾ-ರಾಣಿ ಮತ್ತು ಒಬ್ಬರೇ ಮಂತ್ರಿ. ಅಲ್ಲಿ ಅನೇಕ ಮಂತ್ರಿಗಳು ಇರುವುದಿಲ್ಲ ರಾಜನಲ್ಲಿಯೇ ರಾಜ್ಯ ನಡೆಸುವ ಬಲವಿರುತ್ತದೆ ಅಂದಾಗ ತಂದೆಯು ಹೇಗೆ ತಿಳಿಸುತ್ತಾರೆಯೋ ಹಾಗೆಯೇ ಮಕ್ಕಳೂ ತಿಳಿಸಬೇಕಾಗಿದೆ – ನಾವು ಭಾರತವಾಸಿ ದೇವಿ-ದೇವತೆಗಳಾಗಿದ್ದೆವು. ಸತ್ಯಯುಗದಲ್ಲಿ ನಮ್ಮ ರಾಜ್ಯವಿತ್ತು, ಗೃಹಸ್ಥ ವ್ಯವಹಾರದಲ್ಲಿ ನಾವು ಪವಿತ್ರರಾಗಿದ್ದೆವು, ಸ್ವರ್ಗವಾಸಿಗಳಾಗಿದ್ದೆವು ನಂತರ ಪತಿತರಾಗುತ್ತಾ ಆಗುತ್ತಾ ನರಕವಾಸಿಗಳಾಗಿದ್ದೇವೆ ಮತ್ತೆ ಸ್ವರ್ಗವಾಸಿಗಳಾಗುತ್ತೇವೆ. ಈ ಆಟವು ಮಾಡಲ್ಪಟ್ಟಿದೆ. ಒಂದು ಜನ್ಮದಲ್ಲಿಯೇ ಸ್ವರ್ಗವಾಸಿಗಳಾಗುತ್ತೀರಿ ಮತ್ತೆ ನರಕವಾಸಿಗಳಾಗುವುದರಲ್ಲಿ 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಏಣಿಯ ಚಿತ್ರದಲ್ಲಿ ಬಹಳ ಸ್ಪಷ್ಟವಾಗಿ ತೋರಿಸಲಾಗಿದೆ. ನಾವು ಹೋಗಿ ಸ್ವರ್ಗದಲ್ಲಿ ರಾಜ್ಯಭಾರ ಮಾಡುತ್ತೇವೆ, ಈಗ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆಂದು ಬುದ್ಧಿಯಲ್ಲಿ ಬಂದಿದೆ. ತಂದೆಯೇ ಸತ್ಯವನ್ನು ತಿಳಿಸಿ ನರನಿಂದ ನಾರಾಯಣನನ್ನಾಗಿ ಮಾಡುತ್ತಾರೆ. ಮನುಷ್ಯರು ಯಾರು ಸತ್ಯ ನಾರಾಯಣನ ಕಥೆಯನ್ನು ಕೇಳುತ್ತಾರೆಯೋ ಅವರು ಯಾರೂ ನರನಿಂದ ನಾರಾಯಣನಾಗುವುದಿಲ್ಲ ಅಂದಮೇಲೆ ಆ ಕಥೆಯು ಅಸತ್ಯವಾಯಿತಲ್ಲವೇ.ಇಲ್ಲಿ ನೀವು ನರನಿಂದ ನಾರಾಯಣನಾಗುವುದಕ್ಕಾಗಿ ಕುಳಿತಿದ್ದೀರಿ. ಅಲ್ಲಿ ಯಾರೂ ಸಹ ಪವಿತ್ರರಾಗಿ, ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಹೇಳುವುದಿಲ್ಲ, ಹುಣ್ಣಿಮೆಯ ದಿನ ಸತ್ಯನಾರಾಯಣನ ಕಥೆಯನ್ನು ಹೇಳುತ್ತಾರೆ, ಈಗ ಈ ಸಮಯದಲ್ಲಿ ಸಂಪೂರ್ಣ ಚಂದ್ರಮನಿಗೆ ಹುಣ್ಣಿಮೆಯೆಂದು ಹೇಳಲಾಗುತ್ತದೆ. ನಂತರ ಕೊನೆಯಲ್ಲಿ ಯಾವಾಗ ಚಂದ್ರನಲ್ಲಿ ಒಂದು ಗೆರೆಯಷ್ಟು ಉಳಿಯುತ್ತದೆಯೋ ಅದಕ್ಕೆ ಅಮಾವಾಸ್ಯೆ ಎಂದು ಹೇಳಲಾಗುತ್ತದೆ. ಅಮಾವಾಸ್ಯೆ ಎಂದರೆ ಅಂಧಕಾರ ರಾತ್ರಿ, ಸತ್ಯ-ತ್ರೇತಾಯುಗಕ್ಕೆ ದಿನವೆಂತಲೂ, ದ್ವಾಪರ-ಕಲಿಯುಗಕ್ಕೆ ರಾತ್ರಿಯೆಂತಲೂ ಹೇಳಲಾಗುತ್ತದೆ. ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ, ಇದನ್ನು ಶಿವ ತಂದೆಯೇ ಓದಿಸುತ್ತಾರೆ ಅವರು ತಂದೆಯೂ ಆಗಿದ್ದಾರೆ, ಶಿಕ್ಷಕ ಮತ್ತು ಸದ್ಗುರುವೂ ಆಗಿದ್ದಾರೆ, ಇವರಲ್ಲಿ ಪ್ರವೇಶ ಮಾಡಿ ಆತ್ಮರಿಗೆ ತಿಳಿಸುತ್ತಾರೆ.

ತಂದೆಯು ತಿಳಿಸುತ್ತಾರೆ – ಹೇಗೆ ಇವರ ಆತ್ಮವು (ಬ್ರಹ್ಮ) ಭೃಕುಟಿಯ ಮಧ್ಯದಲ್ಲಿ ಕುಳಿತಿದೆಯೋ ಹಾಗೆಯೇ ನಾನೂ ಸಹ ಬಂದು ಇಲ್ಲಿ ಕುಳಿತುಕೊಳ್ಳುತ್ತೇನೆ, ನಿಮಗೆ ತಿಳಿಸುತ್ತೇನೆ. ನೀವು ಮೊದಲು ಪಾವನರಾಗಿದ್ದಿರಿ ನಂತರ ಪತಿತರಾಗುತ್ತೀರಿ. ಈಗ ತಂದೆಯಾದ ನನ್ನನ್ನು ನೆನಪು ಮಾಡಿರಿ, ಪವಿತ್ರರಾಗದೇ ಮನೆಗೆ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಪವಿತ್ರರಾದಾಗಲೇ ಹಾರುವಿರಿ. ಹೇ ಪತಿತ-ಪಾವನ ಬನ್ನಿ, ಪಾವನರನ್ನಾಗಿ ಮಾಡಿ, ಆಗಲೇ ನಾವು ಹಾರುವೆವು, ನಮ್ಮ ಮನೆಯಾದ ಮುಕ್ತಿಧಾಮದಲ್ಲಿ ಹೋಗುವೆವು ಎಂದು ಎಲ್ಲರೂ ಕರೆಯುತ್ತಾರೆ. ಅದು ನಾವಾತ್ಮರ ಮನೆಯಾಗಿದೆ, ಪತಿತರ ಮನೆಗೆ ಹೋಗಲು ಸಾಧ್ಯವಿಲ್ಲ. ಶಿಕ್ಷಣವನ್ನು ಯಾರು ಚೆನ್ನಾಗಿ ಧಾರಣೆ ಮಾಡಿಕೊಳ್ಳುವರೋ ಅವರು ಬೇಗನೆ ಸ್ವರ್ಗದಲ್ಲಿ ಬರುತ್ತಾರೆ, ಇಲ್ಲದಿದ್ದರೆ ತಡವಾಗಿ ಬರುತ್ತಾರೆ. ಹೊಸ ಮನೆಯಲ್ಲಿ ಬರಬೇಕಲ್ಲವೇ. ಹೊಸ ಮನೆಯಲ್ಲಿಯೇ ಮಜಾ ಬರುತ್ತದೆಯಲ್ಲವೇ. ಸತ್ಯಯುಗದಲ್ಲಿ ಮೊಟ್ಟ ಮೊದಲಿಗೆ ಬರಬೇಕಾಗಿದೆ. ಮಮ್ಮಾ-ಬಾಬಾರವರು ಸತ್ಯಯುಗದಲ್ಲಿ ಬರುತ್ತಾರೆ ಅಂದಮೇಲೆ ನಾವೇಕೆ ತಡವಾಗಿ ಬರಬೇಕು! ನೀವೂ ಸಹ ಬ್ರಹ್ಮಾರವರನ್ನು ಫಾಲೋ ಮಾಡಿರಿ, ತಂದೆಯನ್ನು ನೆನಪು ಮಾಡುತ್ತಾ ಇರಿ. ಯಾವುದೇ ಮಾತಿನಲ್ಲಿ ಕಷ್ಟವಾದರೆ ಶಿವ ತಂದೆಯನ್ನು ಕೇಳಿರಿ, ಶ್ರೀಮತದಿಂದಲೇ ಶ್ರೇಷ್ಠರಾಗುತ್ತೀರಿ. ಹಳೆಯ ಪ್ರಪಂಚದಲ್ಲಿ ಪಂಚ ವಿಕಾರರೂಪಿ ರಾವಣನ ಮತದಂತೆ ನಡೆಯುತ್ತಾ ಬಂದಿದ್ದೀರಿ. ಮೊಟ್ಟ ಮೊದಲನೆಯದು ದೇಹಾಭಿಮಾನವಾಗಿದೆ. ಈಗ ನೀವು ಮಕ್ಕಳು ದೇಹೀ-ಅಭಿಮಾನಿಗಳಾಗಬೇಕಾಗಿದೆ. ನಾನಾತ್ಮನು ಪರಮಧಾಮ ನಿವಾಸಿಯಾಗಿದ್ದೇನೆ, ಅದಕ್ಕೆ ಶಾಂತಿಧಾಮವೆಂದು ಹೇಳಲಾಗುತ್ತದೆ. ಇಂತಹ ಮಾತುಗಳನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ, ತಂದೆಯೇ ತಿಳಿಸುತ್ತಾರೆ. ನಿಮ್ಮ ಆತ್ಮವು ಈ ಕರ್ಮೇಂದ್ರಿಯಗಳಿಂದ ಕೇಳಿಸಿಕೊಳ್ಳುತ್ತದೆ. ಸತ್ಯಯುಗದಲ್ಲಿ ಎಂದೂ ಶರೀರವು ರೋಗಿಯಾಗುವುದಿಲ್ಲ. ಇಲ್ಲಂತೂ ಅಕಾಲಮೃತ್ಯು ಆಗಿ ಬಿಡುತ್ತದೆ. ಸತ್ಯಯುಗದಲ್ಲಿ ಅಂತಹ ಮಾತೇ ಇರುವುದಿಲ್ಲ, ಅದಕ್ಕೆ ಹೆವೆನ್ ಸ್ವರ್ಗ, ಪ್ಯಾರಡೈಸ್ ಎಂದು ಹೇಳಲಾಗುತ್ತದೆ ನಂತರ ನಾವು ಚಕ್ರವನ್ನು ಸುತ್ತಿ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ 84 ಜನ್ಮಗಳನ್ನು ಪೂರ್ಣಗೊಳಿಸಿದ್ದೇವೆ. ಪುನಃ ತಂದೆಯು ಬಂದು ಮಕ್ಕಳನ್ನು ಸ್ವರ್ಗಕ್ಕೆ ಯೋಗ್ಯರನ್ನಾಗಿ ಮಾಡುತ್ತಾರೆ, ನೀವೀಗ ಹೊಸ ಪ್ರಪಂಚಕ್ಕೆ ಯೋಗ್ಯರಾಗುತ್ತಿದ್ದೀರಿ. ಈಗಂತೂ ನರಕವಾಗಿದೆ, ನೀವೀಗ ನರಕವಾಸಿಗಳಿಂದ ಸ್ವರ್ಗವಾಸಿಗಳಾಗುವ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೀರಿ. ನಾವು ಶಿವ ತಂದೆಯ ಬಳಿ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೇವೆ, ಕಲ್ಪ-ಕಲ್ಪವೂ ಪ್ರತೀ 5000 ವರ್ಷಗಳ ನಂತರ ನಾವು ಅದೃಷ್ಟವನ್ನು ರೂಪಿಸಿಕೊಳ್ಳುತ್ತೇವೆಂದು ಹೇಳುತ್ತೀರಿ. ಈಗ ಸ್ವರ್ಗವಾಸಿಗಳಾಗುತ್ತೀರಿ ನಂತರ ರಾವಣ ರಾಜ್ಯವು ಆರಂಭವಾಗುವುದರಿಂದ ವಿಕಾರಿಗಳಾಗಿ ಬಿಡುತ್ತೀರಿ. ಈಗ ಎಲ್ಲರೂ ವಿಕಾರಿ ಪತಿತರಾಗಿದ್ದಾರೆ. ಆದ್ದರಿಂದ ತಂದೆಯು ಬಂದು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆ. ಹೊಸ ಪ್ರಪಂಚದಲ್ಲಿ ಕೇವಲ ನೀವು ಮಕ್ಕಳೇ ಇರುತ್ತೀರಿ, ಉಳಿದೆಲ್ಲರೂ ಶಾಂತಿಧಾಮಕ್ಕೆ ಹೊರಟು ಹೋಗುತ್ತಾರೆ. ಮೇಲೆ ಆತ್ಮಗಳ ವೃಕ್ಷವಿದೆ, ನಂತರ ತಮ್ಮ-ತಮ್ಮ ಸಮಯದಲ್ಲಿ ಅಲ್ಲಿಂದ ಬರುತ್ತೇವೆ. ಯಾವಾಗ ನಮ್ಮ ರಾಜ್ಯವಿರುವುದೋ ಅಲ್ಲಿ ಮತ್ತ್ಯಾವ ಧರ್ಮದವರೂ ಇರುವುದಿಲ್ಲ, ದ್ವಾಪರದಲ್ಲಿ ರಾವಣ ರಾಜ್ಯವು ಆರಂಭವಾಗುತ್ತದೆ. ಇದೆಲ್ಲಾ ಮಾತುಗಳನ್ನು ಚೆನ್ನಾಗಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ಇಲ್ಲಿ ನರಕವಾಸಿಗಳಿಂದ ಸ್ವರ್ಗವಾಸಿಗಳಾಗಬೇಕಾಗಿದೆ. ನರಕವಾಸಿ ಮನುಷ್ಯರನ್ನು ಅಸುರರೆಂತಲೂ ಸ್ವರ್ಗವಾಸಿ ಮನುಷ್ಯರನ್ನು ದೇವತೆಗಳೆಂತಲೂ ಹೇಳುತ್ತಾರೆ. ಈಗ ಎಲ್ಲರೂ ಆಸುರೀ ಸ್ವಭಾವದವರಾಗಿದ್ದಾರೆ. ಈಗ ತಂದೆಯು ಕುಳಿತು ಪುರುಷಾರ್ಥ ಮಾಡಿಸುತ್ತಾರೆ. ತಂದೆಯು ಹೇಳುತ್ತಾರೆ – ಪವಿತ್ರರಾಗಿರಿ, ಪ್ರತಿಯೊಂದು ಮಾತಿನಲ್ಲಿ ಕೇಳುತ್ತಾ ಇರಿ. ಬಾಬಾ, ವ್ಯಾಪಾರದಲ್ಲಿ ಸುಳ್ಳು ಹೇಳಬೇಕಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಸುಳ್ಳು ಹೇಳುವುದರಿಂದ ಸ್ವಲ್ಪ ಪಾಪವಾಗುವುದು, ಅದು ಮತ್ತೆ ತಂದೆಯನ್ನು ನೆನಪು ಮಾಡುತ್ತಾ ಇದ್ದರೆ ಪಾಪವು ಕಳೆಯುತ್ತಾ ಹೋಗುತ್ತದೆ. ಈಗಿನ ಪ್ರಪಂಚದಲ್ಲಿ ಎಲ್ಲರೂ ಪಾಪ ಮಾಡುತ್ತಾ ಇರುತ್ತಾರೆ, ಎಷ್ಟೊಂದು ಲಂಚವನ್ನು ತಿನ್ನುತ್ತಿರುತ್ತಾರೆ. ಈ ಪ್ರದರ್ಶನಿ ಚಿತ್ರಗಳು ನಕ್ಷೆಗಳಾಗಿವೆ, ಇಂತಹ ನಕ್ಷೆಗಳು ಎಲ್ಲಿಯೂ ಇಲ್ಲ. ಒಂದುವೇಳೆ ಯಾರಾದರೂ ನೋಡಿ ಕಾಪಿ ಮಾಡಬಹುದು ಆದರೆ ಅದರ ಅರ್ಥವನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಪ್ರದರ್ಶನಿ, ಮೇಳಗಳಲ್ಲಿ ಅನೇಕರು ಬರುತ್ತಾರೆ ಆಗ ಹೇಳಲಾಗುತ್ತದೆ – ಏಳು ದಿನಗಳ ಕಾಲ ತಿಳಿದುಕೊಳ್ಳಲು ಬನ್ನಿರಿ. ಅದರಿಂದ ನೀವು ಸ್ವರ್ಗವಾಸಿಗಳಾಗಲು ಯೋಗ್ಯರಾಗಿ ಬಿಡುತ್ತೀರಿ, ಈಗ ನರಕವಾಸಿಗಳಾಗಿದ್ದೀರಿ. ಏಣಿ ಚಿತ್ರದಲ್ಲಿ ನೋಡಿ ಎಷ್ಟು ಸ್ಪಷ್ಟವಾಗಿದೆ! ಇದು ಪತಿತ ಪ್ರಪಂಚವಾಗಿದೆ, ಪಾವನ ಪ್ರಪಂಚವು ಮೇಲ್ಭಾಗದಲ್ಲಿದೆ.

ಈಗ ನೀವು ಮಕ್ಕಳು ಶಿವ ತಂದೆಯೊಂದಿಗೆ ಬಾಬಾ ನಾವು ನರಕವಾಸಿಗಳಿಂದ ಸ್ವರ್ಗವಾಸಿಗಳು ಅವಶ್ಯವಾಗಿ ಆಗುತ್ತೇವೆಂದು ಪ್ರತಿಜ್ಞೆ ಮಾಡುತ್ತೀರಿ, ನೀವೀಗ ಶಿವಾಲಯದಲ್ಲಿ ಹೋಗಲು ತಯಾರಾಗುತ್ತಿದ್ದೀರಿ ಆದ್ದರಿಂದ ವಿಕಾರದಲ್ಲಿ ಎಂದೂ ಹೋಗಬಾರದು. ಮಾಯೆಯ ಬಿರುಗಾಳಿಗಳು ಬಹಳ ಬರುತ್ತವೆ ಆದರೆ ಪತಿತರಾಗಬಾರದು. ಪತಿತರಾಗುವುದರಿಂದ ದೊಡ್ಡ ತಪ್ಪಾಗಿ ಬಿಡುವುದು ಮತ್ತೆ ಧರ್ಮರಾಜನ ಬಳಿ ಬಹಳ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಮನುಷ್ಯರಿಂದ ದೇವತೆಗಳಾಗಬೇಕೆಂದರೆ ಯಾವುದೆಲ್ಲಾ ಅಸುರೀ ಸ್ವಭಾವ ಇದೆಯೋ ಸುಳ್ಳು ಹೇಳುವ ಹವ್ಯಾಸವಿದೆಯೋ ಅದನ್ನು ತ್ಯಾಗ ಮಾಡಬೇಕಾಗಿದೆ. ದೈವೀ ಸ್ವಭಾವವನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ.

2. ಮನೆಗೆ ಹೋಗುವುದಕ್ಕಾಗಿ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. ಮಾಯೆಯ ಬಿರುಗಾಳಿಗಳು ಬಂದರೂ ಸಹ ಕರ್ಮೇಂದ್ರಿಯಗಳಿಂದ ಎಂದೂ ಯಾವುದೇ ವಿಕರ್ಮ ಮಾಡಬಾರದು.

ವರದಾನ:-

ಯಾರ ಸಂಕಲ್ಪ ಅಥವಾ ಸ್ವಪ್ನದಲ್ಲಿಯೂ ತಂದೆ ಹಾಗೂ ತಂದೆಯ ಕರ್ತವ್ಯ ಅಥವಾ ತಂದೆಯ ಮಹಿಮೆಯ, ತಂದೆಯ ಜ್ಞಾನದ ವಿನಃ ಮತ್ತೇನೂ ಕಾಣಿಸುವುದಿಲ್ಲ ಅವರೇ ಸಂಪೂರ್ಣ ವಿಧೇಯನೆಂದು ಹೇಳಲಾಗುವುದು. ಒಬ್ಬ ತಂದೆಯ ಹೊರತು ಮತ್ತ್ಯಾರೂ ಇಲ್ಲ….. ಬುದ್ಧಿಯ ಲಗನ್ ಸದಾ ಒಬ್ಬರ ಸಂಗದಲ್ಲಿದ್ದಾಗ, ಅನೇಕ ಸಂಗದ ರಂಗೇರಲು ಸಾಧ್ಯವಿಲ್ಲ. ಆದ್ದರಿಂದ ಮೊದಲ ಪ್ರತಿಜ್ಞೆಯಾಗಿದೆ – ಮತ್ತೆಲ್ಲಾ ಸಂಗಗಳನ್ನು ಮುರಿದು ಒಬ್ಬರ ಸಂಗವನ್ನು ಜೋಡಿಸು- ಈ ಪ್ರತಿಜ್ಞೆಯನ್ನು ನಿಭಾಯಿಸುವುದು ಅರ್ಥಾತ್ ಸಂಪೂರ್ಣ ವಿಧೇಯರಾಗುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top