24 March 2022 KANNADA Murli Today | Brahma Kumaris

Read and Listen today’s Gyan Murli in Kannada

March 23, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಏಕಾಂತವಾಸಿಯಾಗಿ ಕುಳಿತುಕೊಂಡು ಓದುವುದರಿಂದ ಧಾರಣೆ ಬಹಳ ಚೆನ್ನಾಗಿ ಆಗುತ್ತದೆ, ಬೆಳಗ್ಗೆ ಬೆಳಗ್ಗೆ ಎದ್ದು ವಿಚಾರ ಸಾಗರ ಮಂಥನ ಮಾಡುವಂತಹ ಅಭ್ಯಾಸವನ್ನು ಇಟ್ಟುಕೊಳ್ಳಿ”

ಪ್ರಶ್ನೆ:: -

ಪೂರ್ತಿ ತೇರ್ಗಡೆ ಆಗಬೇಕೆಂದರೆ ಯಾವ ಆಲೋಚನೆ ಬರಬೇಕು, ಯಾವ ಆಲೋಚನೆ ಬರಬಾರದು?

ಉತ್ತರ:-

ಪೂರ್ತಿ ತೇರ್ಗಡೆಯಾಗಲು ಸದಾ ಇದೇ ಆಲೋಚನೆಯಿರಬೇಕು….. ನಾವು ಹಗಲು-ರಾತ್ರಿ ಬಹಳ ಶ್ರಮಪಟ್ಟು ಅಧ್ಯಯನ ಮಾಡಬೇಕು. ಬಾಪ್‍ದಾದಾರವರ ಹೃದಯ ಸಿಂಹಾಸನಾಧಿಕಾರಿ ಆಗುವಂತಹ ಶ್ರೇಷ್ಠ ಸ್ಥಿತಿಯನ್ನು ಮಾಡಿಕೊಳ್ಳಬೇಕು. ನಿದ್ರೆಯನ್ನು ಗೆಲ್ಲುವವರಾಗಿ ಖುಷಿಯಲ್ಲಿರಬೇಕು, ಆದರೆ ಎಂದಿಗೂ ನಾಟಕದಲ್ಲಿ ಅಥವಾ ಅದೃಷ್ಟದಲ್ಲಿದ್ದರೆ ಸಿಗುತ್ತದೆ ಎಂಬ ಆಲೋಚನೆ ಬರಬಾರದು. ಈ ಯೋಚನೆ ಆಲಸ್ಯ ಅಥವಾ ಹುಡುಗಾಟಿಕೆಯಲ್ಲಿ ತರುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನಿಮ್ಮನ್ನು ಪಡೆದು ನಾವು ಜಗತ್ತನ್ನೇ ಪಡೆದವು…

ಓಂ ಶಾಂತಿ. ಮಕ್ಕಳು ಹಾಡಿನ ಅರ್ಥವನ್ನು ತಿಳಿದುಕೊಂಡಿರಾ……. ಬೇಹದ್ದಿನ ತಂದೆಯಿಂದ ಈಗ ನಮಗೆ ಬೇಹದ್ದಿನ ಆಸ್ತಿ ಸಿಗುತ್ತಿದೆ. ಯಾವ ವಿಶ್ವದ ರಾಜ್ಯಭಾಗ್ಯವನ್ನು ನಿಮ್ಮಿಂದ ಯಾರೂ ಸಹ ಕಸಿದುಕೊಳ್ಳಲು ಸಾಧ್ಯವಿಲ್ಲವೋ ಅಂತಹ ವಿಶ್ವದ ಸ್ವರಾಜ್ಯದ ಆಸ್ತಿಯನ್ನು ಮಕ್ಕಳು ಪುನಃ ತಂದೆಯಿಂದ ಪಡೆಯುತ್ತಿದ್ದೀರಿ. ನೀವು ಇಡೀ ವಿಶ್ವದ ಮಾಲೀಕರಾಗುತ್ತೀರಿ. ಅಲ್ಲಿ ಯಾವುದೇ ಕೊರತೆ ಇರುವುದಿಲ್ಲ. ಒಬ್ಬ ತಂದೆಯಿಂದ ನೀವು ಒಂದೇ ರಾಜಧಾನಿ ಪಡೆಯುತ್ತೀರಿ. ಆ ರಾಜಧಾನಿಯನ್ನು ಒಬ್ಬ ಮಹಾರಾಜ-ಮಹಾರಾಣಿ ಮಾತ್ರ ರಾಜ್ಯ ಭಾರ ಮಾಡುತ್ತಾರೆ. ತಂದೆಯು ಒಬ್ಬರೇ, ರಾಜಧಾನಿಯೂ ಸಹ ಒಂದೇ, ಅಲ್ಲಿ ಯಾವುದೇ ಭಿನ್ನತೆ ಅಥವಾ ವಿಭಾಗಗಳಿರುವುದಿಲ್ಲ. ಭಾರತದಲ್ಲಿ ಒಂದೇ ಮಹಾರಾಜ-ಮಹಾರಾಣಿ ಲಕ್ಷ್ಮೀ-ನಾರಾಯಣರ ರಾಜಧಾನಿ ಇತ್ತು, ಅವರು ಇಡೀ ವಿಶ್ವದ ಮೇಲೆ ರಾಜ್ಯ ಮಾಡುತ್ತಿದ್ದರು ಎಂದು ನೀವು ತಿಳಿದುಕೊಂಡಿದ್ದೀರಿ. ಅದನ್ನು ಅಧ್ವೈತ ರಾಜಧಾನಿಯೆಂದು ಕರೆಯಲಾಗುತ್ತದೆ. ಏಕೆಂದರೆ ತಂದೆ ಒಬ್ಬರೇ ಮಕ್ಕಳ ಮುಖಾಂತರ ಸ್ಥಾಪನೆ ಮಾಡಿದ್ದಾರೆ. ಮತ್ತೆ ನೀವು ಮಕ್ಕಳೇ ವಿಶ್ವ ರಾಜ್ಯಭಾಗ್ಯವನ್ನು ಅನುಭವ ಮಾಡುತ್ತೀರಿ. ಪ್ರತಿ ಐದು ಸಾವಿರ ವರ್ಷದ ನಂತರ ಈ ರಾಜ್ಯಭಾಗ್ಯವನ್ನು ನಾವು ಪಡೆಯುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ. ಮತ್ತೆ ಅರ್ಧಕಲ್ಪವಾದ ನಂತರ ನಾವು ಈ ರಾಜ್ಯಭಾಗ್ಯವನ್ನು ಕಳೆದುಕೊಳ್ಳುತ್ತೇವೆ. ಪುನಃ ತಂದೆ ಬಂದು ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಸುತ್ತಾರೆ. ಈ ರೀತಿ ಇದು ಸೋಲು ಗೆಲುವಿನ ಆಟವಾಗಿದೆ. ಮಾಯೆಯಿಂದ ಸೋತ ನಂತರ ಮತ್ತೆ ಶ್ರೀಮತದಂತೆ ನೀವು ರಾವಣನ ಮೇಲೆ ವಿಜಯಿಗಳಾಗುತ್ತೀರಿ. ನಾವು ವಿಶ್ವದ ಮಾಲೀಕರಾಗಿ ಸದಾ ಖುಷಿಯಲ್ಲಿ ಇರುತ್ತೇವೆಂಬ ನಿಶ್ಚಯಬುದ್ದಿ ಇರುವವರು ನಿಮ್ಮಲ್ಲಿ ಅನನ್ಯ ಮಕ್ಕಳು ಮಾತ್ರ ಇದ್ದಾರೆ. ಒಂದುವೇಳೆ ಕ್ರಿಶ್ಚಯನ್ ಧರ್ಮದವರು ಎಷ್ಟೇ ಶಕ್ತಿಶಾಲಿಯಾಗಿದ್ದರೂ ಸಹ ವಿಶ್ವದ ಮಾಲೀಕರಾಗಲು ಸಾಧ್ಯವಿಲ್ಲ. ಈಗ ಈ ರಾಜ್ಯವೂ ಛಿದ್ರ-ಛಿದ್ರವಾಗಿ ಬಿಟ್ಟಿದೆ. ಮೊಟ್ಟ ಮೊದಲು ಇಡೀ ವಿಶ್ವದಲ್ಲಿ ಭಾರತ ಒಂದೇ ಅಧಿಕಾರದಲ್ಲಿತ್ತು. ದೇವೀ-ದೇವತಾ ಧರ್ಮದ ವಿನಃ ಬೇರೆ ಯಾವ ಧರ್ಮವೂ ಇರಲಿಲ್ಲ. ಇಂತಹ ವಿಶ್ವದ ಮಾಲೀಕರನ್ನಾಗಿ ವಿಶ್ವದ ರಚಯಿತ ಮಾತ್ರ ಮಾಡುತ್ತಾರೆ. ತಂದೆಯೂ ಸಹ ಹೇಗೆ ಕುಳಿತು ತಿಳಿಸುತ್ತಿದ್ದಾರೆ, ಅದೇ ರೀತಿ ನೀವೂ ಸಹ ತಿಳಿಸಬಹುದು. ಭಾರತವಾಸಿಗಳು ಅಗತ್ಯವಾಗಿ ವಿಶ್ವದ ಮಾಲೀಕರಾಗಿದ್ದರು. ಅವರಿಗೆ ವಿಶ್ವದ ರಚಯಿತನಿಂದ ಅಸ್ತಿ ಪ್ರಾಪ್ತಿಯಾಗಿರಬೇಕು. ಆಮೇಲೆ ರಾಜ್ಯವನ್ನು ಕಳೆದುಕೊಂಡು ದುಃಖಿಗಳಾದಾಗ ತಂದೆಯನ್ನು ನೆನಪು ಮಾಡುತ್ತಾರೆ. ಭಕ್ತಿ ಮಾರ್ಗವೂ ಸಹ ತಂದೆಯನ್ನು ನೆನಪು ಮಾಡುವ ಮಾರ್ಗವಾಗಿದೆ. ಅನೇಕ ಪ್ರಕಾರದಲ್ಲಿ ಭಕ್ತಿ, ದಾನ, ಪುಣ್ಯ, ಜಪ, ತಪ ಮುಂತಾದವುಗಳನ್ನು ಮಾಡುತ್ತಾರೆ. ಈ ವಿದ್ಯೆಯಿಂದ ನಿಮಗೆ ಸಿಗುವ ರಾಜ್ಯಭಾಗ್ಯ ಸಮಾಪ್ತಿಯಾದ ನಂತರ ನೀವು ಭಕ್ತರಾಗುತ್ತೀರಿ. ಲಕ್ಷ್ಮೀ-ನಾರಾಯಣರು ಭಗವಂತನಿಂದ ರಾಜ್ಯ ಪಡೆದ ಕಾರಣ ಅವರಿಗೆ ಭಗವಾನ್-ಭಗವತಿ ಎಂದು ಹೇಳುತ್ತಾರೆ. ಆದರೆ ಅವರಿಗೂ ಸಹ ನೀವು ಭಗವಾನ್-ಭಗವತಿ ಎಂದು ಹೇಳಬಾರದೆಂದು ತಂದೆ ತಿಳಿಸುತ್ತಾರೆ. ಇವರಿಗೆ ಈ ರಾಜಧಾನಿ ಅಗತ್ಯವಾಗಿ ಸ್ವರ್ಗದ ರಚಯಿತನೇ ನೀಡಿರಬೇಕು. ಆದರೆ ಹೇಗೆ ನೀಡಿದ್ದಾರೆನ್ನುವುದನ್ನು ಯಾರೂ ಸಹ ತಿಳಿದುಕೊಂಡಿಲ್ಲ. ನೀವೆಲ್ಲರೂ ತಂದೆ ಅಥವಾ ಭಗವಂತನ ಮಕ್ಕಳಾಗಿದ್ದೀರಿ. ಈಗ ತಂದೆಯಂತು ಎಲ್ಲರಿಗೂ ರಾಜ್ಯವನ್ನು ಕೊಡಲು ಸಾಧ್ಯವಿಲ್ಲ, ಏಕೆಂದರೆ ಈ ನಾಟಕ ಅದೇ ರೀತಿ ಮಾಡಲ್ಪಟ್ಟಿದೆ. ಭಾರತವಾಸಿಗಳು ಮಾತ್ರ ವಿಶ್ವದ ಮಾಲೀಕರಾಗುತ್ತಾರೆ. ಈಗಂತು ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜಾ ರಾಜ್ಯವಾಗಿದೆ. ಅವರು ತಮ್ಮನ್ನು ತಾವೇ ಪತಿತ ಭ್ರಷ್ಟಾಚಾರಿ ಎಂದು ಒಪ್ಪಿಕೊಳ್ಳುತ್ತಾರೆ. ಈ ಪತಿತ ಪ್ರಪಂಚದಿಂದ ಬಿಡುಗಡೆ ಆಗಲು ಅಂಬಿಗನನ್ನು ನೆನಪು ಮಾಡುತ್ತಾ ಬಂದು, ಈ ವೇಶ್ಯಾಲಯದಿಂದ ಶಿವಾಲಯದಲ್ಲಿ ಕರೆದುಕೊಂಡು ಹೋಗು ಎಂದು ಬೇಡುತ್ತಾರೆ. ಒಂದು ನಿರಾಕಾರ ಶಿವಾಲಯ ನಿರ್ವಾಣಧಾಮವಾಗಿದೆ. ಮತ್ತೊಂದು ಶಿವ ತಂದೆಯಿಂದ ಸ್ಥಾಪನೆ ಮಾಡಲ್ಪಟ್ಟ ರಾಜಧಾನಿಯನ್ನು ಸಹ ಶಿವಾಲಯವೆಂದು ಕರೆಯುತ್ತಾರೆ. ಆಗ ಇಡೀ ಸೃಷ್ಟಿಯೇ ಶಿವಾಲಯವಾಗಿ ಬಿಡುತ್ತದೆ. ಈ ರೀತಿ ಸಾಕಾರ ಶಿವಾಲಯ ಸತ್ಯಯುಗವಾಗಿದ್ದು, ನಿರಾಕಾರ ಶಿವಾಲಯ ನಿರ್ವಾಣಧಾಮವಾಗಿದೆ. ಇದನ್ನು ಪುಸ್ತಕದಲ್ಲಿ ಬರೆದುಕೊಳ್ಳಬೇಕು. ಮಕ್ಕಳಿಗೆ ಸೇವೆಯಲ್ಲಿ ತಿಳಿಸಿಕೊಡುವ ಸಲುವಾಗಿ ಬಹಳ ಪಾಯಿಂಟ್ಸ್ ಸಿಗುತ್ತದೆ. ಮತ್ತೆ ಅವುಗಳನ್ನು ನಿರಂತರ ವಿಚಾರ ಸಾಗರ ಮಂಥನ ಮಾಡಬೇಕು. ಹೇಗೆ ಕಾಲೇಜಿನ ಮಕ್ಕಳು ಬಾಲ್ಯದಲ್ಲಿ ಸುಪ್ರಭಾತದ ಸಮಯದಲ್ಲಿ ಎಚ್ಚರವಾಗಿ ಅಧ್ಯಯನ ಮಾಡುತ್ತಾರೆ. ಮುಂಜಾನೆಯೇ ಏಕೆ ಕುಳಿತುಕೊಳ್ಳುತ್ತಾರೆ? ಏಕೆಂದರೆ ಆತ್ಮ ರಾತ್ರಿಯೆಲ್ಲಾ ವಿಶ್ರಾಂತಿಯನ್ನು ಪಡೆದು ಮುಂಜಾನೆಯ ಸಮಯದಲ್ಲಿ ಪ್ರಶಾಂತವಾಗಿರುತ್ತದೆ. ಆಗ ಏಕಾಂತದಲ್ಲಿ ಕುಳಿತು ಅಧ್ಯಯನ ಮಾಡುವದರಿಂದ ಉತ್ತಮವಾದ ಧಾರಣೆ ಆಗುತ್ತದೆ. ಈ ರೀತಿ ಮಕ್ಕಳಿಗೆ ಮುಂಜಾನೆ (ಅಮೃತವೇಳೆ) ಏಳುವಂತಹ ಆಸಕ್ತಿ ಇರಬೇಕು. ಕೆಲವರು ನಮ್ಮ ಕರ್ತವ್ಯ (ನೌಕರಿ) ಈ ರೀತಿ ಇರುವ ಕಾರಣ ನಾವು ಮುಂಜಾನೆಯೇ ಹೋಗಬೇಕಾಗುತ್ತದೆ ಎಂದು ಹೇಳುತ್ತಾರೆ. ಒಳ್ಳೆಯದು. ಅಂತಹ ಸಮಯದಲ್ಲಿ ಆಗುವುದಿಲ್ಲವೆಂದರೆ ಸಾಯಂಕಾಲ ಕುಳಿತುಕೊಳ್ಳಬೇಕು, ಏಕೆಂದರೆ ಮುಸ್ಸಂಜೆಯಲ್ಲಿ ದೇವತೆಗಳು ಪರಿಕ್ರಮ ಮಾಡುತ್ತಾರೆಂದು ಹೇಳುತ್ತಾರೆ. ವಿಕ್ಟೋರಿಯ ರಾಣಿಯ ಮಂತ್ರಿ ರಾತ್ರಿಯವೇಳೆ ಬೀದಿ ದೀಪದ ಕೆಳಗೆ ಕುಳಿತು ಓದುತ್ತಿದ್ದನು, ಏಕೆಂದರೆ ಅವನು ಬಹಳ ಬಡವನಾಗಿದ್ದನು. ನಂತರ ಓದಿ ಮಂತ್ರಿಯಾದನು. ಈ ರೀತಿ ವಿದ್ಯೆಯ ಮೇಲೆ ಆಧಾರವಾಗಿದೆ. ನಿಮಗಾದರು ಓದಿಸುವವರು ಸ್ವಯಂ ಪರಮಪಿತ ಪರಮಾತ್ಮ ಆಗಿದ್ದಾರೆ. ನಿಮಗೆ ಈ ಬ್ರಹ್ಮಾ ಅಥವಾ ಶ್ರೀಕೃಷ್ಣ ಓದಿಸುತ್ತಿಲ್ಲ. ಸ್ವಯಂ ನಿರಾಕಾರ ಜ್ಞಾನಸಾಗರ ತಂದೆ ಓದಿಸುತ್ತಾರೆ. ಅವರಲ್ಲಿ ಮಾತ್ರ ರಚನೆಯ ಆದಿ, ಮಧ್ಯ, ಅಂತ್ಯದ ಜ್ಞಾನವಿದೆ. ಸತ್ಯಯುಗ, ತ್ರೇತಾ ಆದಿ ನಂತರ ತ್ರೇತಾದ ಅಂತ್ಯ, ದ್ವಾಪರದ ಆದಿಯನ್ನು ಮಧ್ಯ ಎಂದು ಕರೆಯಲಾಗುತ್ತದೆ. ಈ ಎಲ್ಲಾ ಮಾತುಗಳನ್ನು ತಂದೆ ತಿಳಿಸುತ್ತಾರೆ, ಬ್ರಹ್ಮನಿಂದ ವಿಷ್ಣುವಾಗಿ ಎಂಬತ್ತನಾಲ್ಕು ಜನ್ಮಗಳನ್ನು ಪಡೆದು ನಂತರ ಬ್ರಹ್ಮಾ ಆಗುತ್ತಾರೆ. ಬ್ರಹ್ಮನ ಎಂಬತ್ತನಾಲ್ಕು ಜನ್ಮಗಳು ಅಥವಾ ಲಕ್ಷ್ಮೀ-ನಾರಾಯಣ ಎಂಬತ್ತನಾಲ್ಕು ಜನ್ಮಗಳ ಮಾತು ಒಂದೇ ಆಗುತ್ತದೆ. ಈ ಸಮಯದಲ್ಲಿ ನೀವು ಬ್ರಾಹ್ಮಣ ವಂಶಾವಳಿಯಾಗಿದ್ದು ನಂತರ ನೀವು ವಿಷ್ಣು ವಂಶಾವಳಿ ಆಗುತ್ತೀರಿ. ಮತ್ತೆ ಇಳಿಯುತ್ತಾ-ಇಳಿಯುತ್ತಾ ನೀವು ಶೂದ್ರ ವಂಶಾವಳಿ ಆಗುತ್ತೀರಿ. ಈ ಎಲ್ಲಾ ಮಾತುಗಳನ್ನು ತಂದೆಯೇ ಕುಳಿತು ತಿಳಿಸುತ್ತಾರೆ. ನಾವು ಬೇಹದ್ದಿನ ತಂದೆಯಿಂದ ಶ್ರೀಮತದಂತೆ ನಡೆದು ವಿಶ್ವ ಮಹಾರಾಜ-ಮಹಾರಾಣಿ ಆಗಲು ಬಂದಿದ್ದೇವೆಂದು ತಂದೆ ತಿಳಿಸುತ್ತಾರೆ. ಪ್ರಜೆಗಳೂ ಸಹ ವಿಶ್ವದ ಮಾಲೀಕರಾಗುತ್ತಾರೆ. ಈ ವಿದ್ಯೆಯಲ್ಲಿ ಬಹಳ ಬುದ್ದಿವಂತರಾಗಿರಬೇಕು. ಎಷ್ಟೆಷ್ಟು ಸ್ವಯಂ ಓದಿ ಅನ್ಯರಿಗೂ ಓದಿಸುತ್ತೀರಿ ಅಷ್ಟಷ್ಟು ಶ್ರೇಷ್ಠ ಪದವಿಯನ್ನು ಪಡೆಯಬಹುದು. ಈ ಬೇಹದ್ದಿನ ವಿದ್ಯೆಯನ್ನು ಎಲ್ಲರು ಓದಬಹುದು. ಎಲ್ಲರೂ ಒಬ್ಬರಿಂದ ಓದುತ್ತಾರೆ. ನಂತರ ನಂಬರ್‍ವಾರ್ ಇದ್ದು, ಕೆಲವರ ಧಾರಣೆ ಉತ್ತಮವಾಗಿದ್ದು, ಕೆಲವರಿಗೆ ಸ್ವಲ್ಪವೂ ಸಹ ಧಾರಣೆ ಆಗುವುದಿಲ್ಲ. ಎಲ್ಲರೂ ನಂಬರ್‍ವಾರ್ ಇರಬೇಕಾಗುತ್ತದೆ. ರಾಜರ ಮುಂದೆ ದಾಸ-ದಾಸಿಯರೂ ಸಹ ಬೇಕಾಗುತ್ತದೆ. ದಾಸ-ದಾಸಿಯರಂತು ಅರಮನೆಯಲ್ಲಿರುತ್ತಾರೆ. ಪ್ರಜೆಗಳು ಹೊರಗಡೆ ಇರುತ್ತಾರೆ. ಅಲ್ಲಿಯ ಅರಮನೆಗಳು ಬಹಳ ವಿಶಾಲವಾಗಿರುತ್ತವೆ. ಬಹಳ ಸ್ಥಳವಕಾಶ ಇರುತ್ತದೆ, ಮನುಷ್ಯರು ಕಡಿಮೆ ಇರುತ್ತಾರೆ. ದವಸ ಧಾನ್ಯವೂ ಸಹ ಹೇರಳವಾಗಿರುತ್ತದೆ. ಎಲ್ಲಾ ಕಾಮನೆಗಳು ಪೂರ್ಣವಾಗುತ್ತವೆ. ಹಣಕ್ಕಾಗಿ ಎಂದೂ ದುಃಖಿಗಳಾಗುವುದಿಲ್ಲ. ವೈಕುಂಠವೆಂಬ ಹೆಸರು ಶ್ರೇಷ್ಠವಾಗಿದೆ. ಒಬ್ಬ ತಂದೆಯ ಮತದಂತೆ ನಡೆಯುವುದರಿಂದ ನೀವು ವಿಶ್ವದ ಮಾಲೀಕರಾಗುತ್ತೀರಿ. ಅಲ್ಲಿ ಸತ್ಯಯುಗದ ಸೂರ್ಯವಂಶ ಲಕ್ಷ್ಮೀ-ನಾರಾಯಣರ ನಂತರ ಅವರ ಮಕ್ಕಳು ಸಿಂಹಾಸನದಲ್ಲಿ ಕುಳಿತುಕೊಳ್ಳುತ್ತಾರೆ. ಈಗ ಅವರ ಮಾಲೆ ಆಗುತ್ತದೆ. ಎಂಟು ರತ್ನಗಳು ಗೌರವಾರ್ಥವಾಗಿ ತೇರ್ಗಡೆಯಾಗುತ್ತಾರೆ (ಪಾಸ್ ವಿತ್ ಆನರ್ಸ್). ನವ ರತ್ನಗಳ ಉಂಗುರವನ್ನೂ ಸಹ ತೊಡುತ್ತಾರೆ. ಮಧ್ಯದಲ್ಲಿ ತಂದೆ ಇದ್ದು ಉಳಿದವರು ಅಷ್ಟ ರತ್ನಗಳಾಗಿದ್ದಾರೆ. ಆದುದರಿಂದ ನವರತ್ನಗಳನ್ನು ಬಹಳಷ್ಟು ತೊಡುತ್ತಾ ಇದು ದೇವತೆಗಳ ಚಿನ್ಹೆ ಎಂದು ತಿಳಿದುಕೊಳ್ಳುತ್ತಾರೆ, ಆದರೆ ನವರತ್ನಗಳು ಯಾರೆಂದು ಅರ್ಥವನ್ನು ತಿಳಿದುಕೊಂಡಿಲ್ಲ. ನವರತ್ನಗಳ ಮಾಲೆಯನ್ನೂ ಸಹ ತೊಡುತ್ತಾರೆ. ಕ್ರಿಶ್ಚಯನ್ನರು ತಮ್ಮ ಕೈಗೆ ಮಾಲೆಯನ್ನು ಹಾಕಿಕೊಳ್ಳುತ್ತಾರೆ. ಆ ಮಾಲೆಯಲ್ಲಿ ಅಷ್ಟ ರತ್ನಗಳಿದ್ದು ಮೇಲೆ ಹೂವಿರುತ್ತದೆ. ಇದು ಮುಕ್ತಿಯನ್ನು ಪಡೆಯುವರ ಮಾಲೆಯಾಗಿದೆ. ಇವರು ಜೀವನ್ಮುಕ್ತಿಯನ್ನು ಪಡೆದವರ ಅಥವಾ ಪ್ರವೃತ್ತಿಯಲ್ಲಿರುವವರ ಮಾಲೆಯಾಗಿದೆ. ಆ ಮಾಲೆಯಲ್ಲಿ ಹೂವಿನ ಜೊತೆಯಲ್ಲಿ ಜೋಡಿಮಣಿ ಅಗತ್ಯವಾಗಿರುತ್ತದೆ. ಬಹುಶಃ ಅವರಲ್ಲಿ ಪೋಪ್‍ರವರ ನಂಬರ್‍ವಾರ್ ಮಾಲೆ ಮಾಡಬಹುದು, ಅದರ ಅರ್ಥವನ್ನು ತಿಳಿಸಬೇಕಾಗುತ್ತದೆ. ಈ ಮಾಲೆಯನ್ನು ಕುರಿತು ಅವರಿಗೇನು ತಿಳಿದಿಲ್ಲ. ಎಲ್ಲರೂ ಜಪ ಮಾಡುವಂತಹ ಮಾಲೆ ವಾಸ್ತವದಲ್ಲಿ ಇದೇ ಆಗಿದೆ (ನವರತ್ನಗಳ ಮಾಲೆ). ಈಗ ಶಿವ ತಂದೆ ಹಾಗೂ ನೀವು ಮಕ್ಕಳು ಪರಿಶ್ರಮ ಪಡುತ್ತಿದ್ದೀರಿ. ಈಗ ನೀವು ಯಾರಿಗಾದರೂ ಕುಳಿತು ಈ ಮಾಲೆ ಹೇಗಾಯಿತೆಂದು ತಿಳಿಸಿಕೊಟ್ಟರೆ ತಕ್ಷಣ ತಿಳಿದುಕೊಳ್ಳುತ್ತಾರೆ. ನಿಮ್ಮ ಪ್ರೋಜೆಕ್ಟರ್ ಸೇವೆ ವಿದೇಶದವರೆಗೆ ಹೋಗುತ್ತದೆ. ಆಗ ತಿಳಿಸಿಕೊಡುವಂತಹ ಪ್ರವೃತ್ತಿಯಲ್ಲಿರುವ ಸೇವಾಧಾರಿಗಳು ಬೇಕಾಗುತ್ತದೆ. ಆಗ ಇದು ಪ್ರವೃತ್ತಿ ಮಾರ್ಗವೆಂದು ತಿಳಿದುಕೊಳ್ಳುತ್ತಾರೆ. ತಂದೆಯ ಪರಿಚಯವನ್ನು ಎಲ್ಲರಿಗೂ ಕೊಡಬೇಕು ಹಾಗೂ ಸೃಷ್ಟಿ ಚಕ್ರವನ್ನು ತಿಳಿದುಕೊಳ್ಳಬೇಕು, ಯಾರು ಸೃಷ್ಟಿಚಕ್ರವನ್ನು ತಿಳಿದುಕೊಳ್ಳುವುದಿಲ್ಲ, ಅವರಿಗೆ ಏನೆಂದು ಹೇಳುವುದು? ಸತ್ಯಯುಗದಲ್ಲಿ ನೀವು ಸರ್ವಗುಣ ಸಂಪನ್ನ, ಹದಿನಾರು ಕಲಾ ಸಂಪೂರ್ಣ ಆಗಿದ್ದೀರಿ……. ಈಗ ಪುನಃ ಆಗುತ್ತೀರಿ. ನೀವು ಈ ವಿದ್ಯೆಯನ್ನು ಓದಿ ಎಷ್ಟೊಂದು ಶ್ರೇಷ್ಠರಾಗುತ್ತೀರಿ. ರಾಧೆ ಕೃಷ್ಣರು ಬೇರೆ-ಬೇರೆ ರಾಜಧಾನಿಯವರಾಗಿದ್ದರು. ಸ್ವಯಂವರ ನಂತರ ಲಕ್ಷ್ಮೀ-ನಾರಾಯಣರ ರೂಪದಲ್ಲಿ ಹೆಸರು ಪರಿವರ್ತನೆಯಾಗುತ್ತದೆ. ಲಕ್ಷ್ಮೀ-ನಾರಾಯಣರಿಗೆ ಎಲ್ಲಿಯೂ ಬಾಲ್ಯದ ಚಿತ್ರಗಳನ್ನು ತೋರಿಸುವುದಿಲ್ಲ. ಸತ್ಯಯುಗದಲ್ಲಿ ಯಾರ ಪತ್ನಿಯು ಸಹ ಅಕಾಲ ಮೃತ್ಯು ಹೊಂದುವುದಿಲ್ಲ. ಸಮಯ ಮುಗಿದ ಮೇಲೆ ಶರೀರವನ್ನು ಬಿಡುತ್ತಾರೆ, ಆದುದರಿಂದ ಅಲ್ಲಿ ಅಳುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ವೈಕುಂಠವೆಂದು ಅದರ ಹೆಸರಾಗಿದೆ. ಈ ಸಮಯದಲ್ಲಿ ರಷ್ಯಾ, ಅಮೆರಿಕಾ ಮುಂತಾದವುಗಳಲ್ಲಿ ಎಲ್ಲಾ ಕಡೆ ಮಾಯೆಯ ಆಡಂಬರವಿದೆ. ಈ ವಿಮಾನ ವಾಹನಗಳೆಲ್ಲವೂ ಸಹ ತಂದೆಯ ಪ್ರವೇಶದ ನಂತರ ಬಂದಿವೆ. ನೂರು ವರ್ಷಗಳ ಮಧ್ಯದಲ್ಲಿ ಇವೆಲ್ಲವೂ ತಯಾರಾಗಿವೆ. ಇದು ಮರೀಚಿಕೆಯೆಂತಹ ರಾಜ್ಯವಾಗಿದ್ದು ಇದನ್ನು ಮಾಯೆಯ ಆಡಂಬರವೆಂದು ಕರೆಯಲಾಗುವುದು. ಅಲ್ಪಕಾಲಕ್ಕಾಗಿ ವಿಜ್ಞಾನದ ಈ ಅಂತಿಮ ಆಡಂಬರವಾಗಿದೆ. ಮತ್ತೆ ಇದೆಲ್ಲಾ ಸ್ವರ್ಗದಲ್ಲಿ ಉಪಯೋಗವಾಗುತ್ತದೆ. ಈ ಮಾಯೆಯ ಆಕರ್ಷಣೆಯಲ್ಲಿ ಖುಷಿಯ ಜೀವನವನ್ನೂ ಸಹ ಮಾಡುತ್ತಾರೆ, ಮತ್ತೆ ಇದೇ ಮಾಯೆಯಿಂದ ವಿನಾಶವೂ ಆಗುತ್ತದೆ. ಈಗ ನೀವು ಶ್ರೀಮತದಂತೆ ರಾಜ್ಯವನ್ನು ಪಡೆಯುತ್ತಿದ್ದೀರಿ. ಈ ರಾಜ್ಯವನ್ನು ಯಾರೂ ಸಹ ನಮ್ಮಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ. ಅಲ್ಲಿ ಯಾವುದೇ ವಿಪತ್ತುಗಳು ಆಗುವುದಿಲ್ಲ, ಏಕೆಂದರೆ ಅಲ್ಲಿ ಮಾಯೆ ಇರುವುದಿಲ್ಲ. ಆದ್ದರಿಂದ ತಂದೆಯು ಮಕ್ಕಳಿಗೆ ಉತ್ತಮ ರೀತಿಯಲ್ಲಿ ಓದಲು ತಿಳಿಸುತ್ತಾರೆ. ಆದರೆ ಪ್ರತಿಯೊಬ್ಬರೂ ಕಲ್ಪದ ಹಿಂದಿನಂತೆ ಓದುತ್ತಾರೆಂದು ತಂದೆಯೂ ಸಹ ತಿಳಿದುಕೊಂಡಿದ್ದಾರೆ. ಈ ದೃಷ್ಯವು ಕಲ್ಪದ ಹಿಂದೆಯು ನಡೆದಿತ್ತು, ಈಗಲೂ ನಡೆಯುತ್ತಿದೆ. ಉಳಿದ ಹಾಗೆ ಈ ಧರ್ಮದವರಲ್ಲವೆಂದರೆ ಈ ಜ್ಞಾನ ಅವರ ಬುದ್ದಿಯಲ್ಲಿ ಕುಳಿತುಕೊಳ್ಳುವುದಿಲ್ಲ. ತಂದೆ ಶಿಕ್ಷಕನಾಗಿರುವ ಕಾರಣ ಮಕ್ಕಳೂ ಸಹ ಶಿಕ್ಷಕರಾಗಬಹುದು. ವಿದೇಶದವರಿಗೂ ಓದಿಸುವ ಸಲುವಾಗಿ ಹೋಗಿದ್ದಾರೆ. ಭಾಷೆಯನ್ನು ತಿಳಿದುಕೊಂಡಿರುವಂತಹ ಬುದ್ದಿವಂತರು ಅವರ ಜೊತೆಯಲ್ಲಿರಬೇಕು. ಪರಿಶ್ರಮಪಡಬೇಕಾಗುತ್ತದೆ.

ಈಶ್ವರೀಯ ಮಕ್ಕಳ ಚಲನೆ ಬಹಳ ಶ್ರೇಷ್ಠವಾಗಿರಬೇಕು. ಸತ್ಯಯುಗದಲ್ಲಿ ಚಲನೆಯು ಶ್ರೇಷ್ಠ ಹಾಗೂ ರಾಯಲ್ಲಾಗಿರುತ್ತದೆ. ಇಲ್ಲಿ ನಿಮ್ಮನ್ನು ಕುರಿಯಿಂದ ಹುಲಿಯನ್ನಾಗಿ, ಮಂಗನಿಂದ ದೇವತೆಯನ್ನಾಗಿ ಮಾಡಲಾಗುತ್ತಿದೆ. ಆದುದರಿಂದ ಪ್ರತಿ ಮಾತಿನಲ್ಲಿ ನಿರಹಂಕಾರಿತನ ಇರಬೇಕು. ತಮ್ಮ ಅಹಂಕಾರವನ್ನು ಬಿಡಬೇಕಾಗಿದೆ. “ನಾನು ಎಂತಹ ಕರ್ಮ ಮಾಡುತ್ತೇನೆ ನನ್ನನ್ನು ನೋಡಿ ಎಲ್ಲರು ಮಾಡುತ್ತಾರೆ” ಎಂಬ ಮಾತು ನೆನಪು ಇರಬೇಕು. ತಮ್ಮ ಕೈಯಿಂದ ಪಾತ್ರೆಗಳನ್ನು ಸ್ವಚ್ಚ ಮಾಡಿಕೊಂಡಾಗ ಎಲ್ಲರೂ ಇವರು ಎಷ್ಟೊಂದು ನಿರಹಂಕಾರಿ ಎಂದು ಹೇಳುತ್ತಾರೆ. ಎಲ್ಲವನ್ನು ಸ್ವಯಂ ತಮ್ಮ ಕೈಯಿಂದ ಮಾಡಿಕೊಂಡಾಗ ಇನ್ನೂ ಹೆಚ್ಚು ಗೌರವ ಸಿಗುತ್ತದೆ. ಒಂದುವೇಳೆ ಅಹಂಕಾರ ಬಂದರೆ ಎಲ್ಲರ ಮನಸ್ಸಿನಿಂದ ದೂರವಾಗುತ್ತಾರೆ. ಎಲ್ಲಿಯವರೆಗೆ ಸ್ಥಿತಿ ಶ್ರೇಷ್ಠವಾಗುವುದಿಲ್ಲ, ಅಲ್ಲಿಯವರೆಗೆ ಎಲ್ಲರ ಮನಸ್ಸಿನ ಮೇಲೆ ವಿಜಯಿಗಳಾಗಿ. ಸಿಂಹಾಸನ ಮೇಲೆ ಹೇಗೆ ಕುಳಿತುಕೊಳ್ಳುತ್ತೀರಿ! ನಂಬರ್‍ವಾರ್ ಪದವಿಯೆಂತೂ ಇರುತ್ತದೆಯಲ್ಲವೇ! ಯಾರ ಬಳಿ ಬಹಳ ಹಣವಿರುತ್ತದೆ ಅವರು ಸುಂದರವಾದ ಅರಮನೆಯನ್ನು ಮಾಡುತ್ತಾರೆ. ಆದರೆ ಬಡವರು ಗುಡಿಸಲನ್ನು ಮಾತ್ರ ಮಾಡಬೇಕಾಗುತ್ತದೆ. ಈ ಕಾರಣದಿಂದ ಶ್ರದ್ದೆಯಿಂದ ಓದಿ ಸಂಪೂರ್ಣ ತೇರ್ಗಡೆ ಹೊಂದಿ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ. ನಾಟಕದಲ್ಲಿದ್ದರೆ ಅಥವಾ ಅದೃಷ್ಟದಲ್ಲಿದ್ದಂತೆ ಆಗಲಿ ಎಂದು ತಿಳಿಯಬಾರದು. ಈ ಆಲೋಚನೆಯಿಂದ ಈ ಪರೀಕ್ಷೆಯಲ್ಲಿ ತೇರ್ಗಡೆ ಆಗಲು ಸಾಧ್ಯವಿಲ್ಲ. ನಿಮ್ಮ ಅದೃಷ್ಟವನ್ನು ವೃದ್ಧಿ ಮಾಡಿಕೊಳ್ಳಬೇಕು. ಹಗಲು ರಾತ್ರಿ ಬಹಳ ಶ್ರಮ ಪಟ್ಟು ಓದಬೇಕು. ನಿದ್ರೆಯನ್ನು ಗೆಲ್ಲುವವರಾಗಬೇಕು. ರಾತ್ರಿ ಎಚ್ಚರದಲ್ಲಿದ್ದು ವಿಚಾರ ಸಾಗಾರ ಮಂಥನ ಮಾಡುವುದರಿಂದ ನಿಮಗೆ ಬಹಳ ಮಜಾ ಅನಿಸುತ್ತದೆ. ನಾವು ಈ ರೀತಿ ವಿಚಾರ ಸಾಗರ ಮಂಥನ ಮಾಡುತ್ತೇವೆಂದು ತಂದೆಗೆ ಯಾರೂ ಸಹ ಹೇಳುವುದಿಲ್ಲ. ಆದುದರಿಂದ ಯಾರೂ ಸಹ ರಾತ್ರಿಯೆಲ್ಲಾ ಎಚ್ಚರವಾಗಿರುವುದಿಲ್ಲವೆಂದು ತಂದೆ ತಿಳಿದುಕೊಳ್ಳುತ್ತಾರೆ. ಬಹುಶಃ ಇವರ ಪಾತ್ರವೇ ಈ ರೀತಿ ವಿಚಾರ ಸಾಗರ ಮಂಥನ ಮಾಡುವುದಾಗಿದೆ ಎಂದು ತಿಳಿದುಕೊಳ್ಳುತ್ತಾರೆ. ನಂಬರ್‍ವನ್ ಮಗು(ಬ್ರಹ್ಮಾ) ಇವರಲ್ಲವೇ! ತಂದೆ ತಮ್ಮ ಅನುಭವನ್ನು ತಿಳಿಸುತ್ತಾರೆ-ಎಚ್ಚರವಾಗಿ ತಂದೆ ನೆನಪಿನಲ್ಲಿ ಕುಳಿತುಕೊಂಡು ಈ ರೀತಿಯಾಗಿ ಆಲೋಚನೆ ಮಾಡಬೇಕು…. ಈ ಸೃಷ್ಟಿ ಚಕ್ರ ಹೇಗೆ ತಿರುಗುತ್ತದೆ. ಸರ್ವ ಶ್ರೇಷ್ಠ ತಂದೆ ಆಗಿದ್ದು ನಂತರ ಸೂಕ್ಷ್ಮವತನವಾಸಿ ಬ್ರಹ್ಮಾ, ವಿಷ್ಣು, ಶಂಕರರಾಗುತ್ತಾರೆ. ಆಮೇಲೆ ಬ್ರಹ್ಮಾ, ವಿಷ್ಣು ಏನಾಗಿದ್ದಾರೆ! ಈ ರೀತಿಯಾಗಿ ವಿಚಾರಸಾಗರ ಮಂಥನ ಮಾಡಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್‍ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. “ನಾವೇನು ಕರ್ಮ ಮಾಡುತ್ತೇವೆ, ನಮ್ಮನ್ನು ನೋಡಿ ಬೇರೆಯವರು ಮಾಡುತ್ತಾರೆ” ಆದುದರಿಂದ ಪ್ರತಿ ಕರ್ಮದ ಮೇಲೆ ಗಮನ ಕೊಡಬೇಕು. ಬಹಳ ನಿರ್ಮಾಣಚಿತ್ತ, ನಿರಹಂಕಾರಿಯಾಗಬೇಕು. ಅಹಂಕಾರವನ್ನು ಬಿಡಬೇಕು.

2. ತಮ್ಮ ಅದೃಷ್ಟವನ್ನು ಶ್ರೇಷ್ಠ ಮಾಡಿಕೊಳ್ಳುವ ಸಲುವಾಗಿ ಶ್ರದ್ಧೆಯಿಂದ ಅಧ್ಯಯನ ಮಾಡಬೇಕು. ಮುಂಜಾನೆ ಎಚ್ಚರವಾಗಿ ತಂದೆಯನ್ನು ನೆನಪು ಮಾಡುವ ಆಸಕ್ತಿ ಇಟ್ಟುಕೊಳ್ಳಬೇಕು.

ವರದಾನ:-

ಯಾವ ಮಕ್ಕಳು ತ್ರಿಕಾಲದರ್ಶಿ ಆಗಿದ್ದಾರೆಯೋ ಅವರೆಂದಿಗೂ ಯಾವುದೇ ಮಾತಿನಲ್ಲಿ ಗೊಂದಲವಾಗಲು ಸಾಧ್ಯವಿಲ್ಲ, ಏಕೆಂದರೆ ಅವರ ಮುಂದೆ ಮೂರು ಕಾಲಗಳು ಸ್ಪಷ್ಟವಾಗಿದೆ. ಯಾವಾಗ ಗುರಿಯು ಸ್ಪಷ್ಟವಾಗಿರುತ್ತದೆಯೋ ಅದರಿಂದ ಯಾರೂ ಗೊಂದಲವಾಗುವುದಿಲ್ಲ. ತ್ರಿಕಾಲದರ್ಶಿ ಆತ್ಮರೆಂದಿಗೂ ಯಾವುದೇ ಮಾತಿನಲ್ಲಿ ಮೋಜಿನ ವಿನಃ ಮತ್ತ್ಯಾವುದೇ ಅನುಭವ ಮಾಡುವುದಿಲ್ಲ. ಭಲೆ ಪರಿಸ್ಥಿತಿಗಳು ತಬ್ಬಿಬ್ಬಾಗುವಂತದ್ದೇ ಇರಲಿ ಆದರೆ ಅದನ್ನು ಬ್ರಾಹ್ಮಣ ಆತ್ಮನು ಮೋಜಿನಲ್ಲಿ ಬದಲಾಯಿಸಿ ಬಿಡುವನು ಏಕೆಂದರೆ ಅನೇಕ ಬಾರಿ ಆ ಪಾತ್ರವನ್ನು ಅಭಿನಯಿಸಿದ್ದಾನೆ. ಈ ಸ್ಮೃತಿಯು ಕರ್ಮಯೋಗಿಯನ್ನಾಗಿ ಮಾಡಿ ಬಿಡುತ್ತದೆ. ಅವರು ಪ್ರತೀ ಕಾರ್ಯವನ್ನು ಮೋಜಿನಿಂದ ಮಾಡುತ್ತಾರೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top