24 June 2022 KANNADA Murli Today | Brahma Kumaris

Read and Listen today’s Gyan Murli in Kannada

23 June 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

(ಮಮ್ಮಾರವರ ಪುಣ್ಯ ಸ್ಮೃತಿ ದಿನದಂದು ಪ್ರಾತಃಕ್ಲಾಸಿನಲ್ಲಿ ತಿಳಿಸುವುದಕ್ಕಾಗಿ ಮಾತೇಶ್ವರಿಯವರ ಮಧುರ ಮಹಾವಾಕ್ಯ)

“ಕರ್ಮವೇ ಸುಖ ಹಾಗೂ ದುಃಖಕ್ಕೆ ಕಾರಣವಾಗಿದೆ”

♫ ಕೇಳು ಇಂದಿನ ಮುರ್ಲಿ (audio)➤

ಜೀವನದಲ್ಲಿ ದುಃಖ ಹಾಗೂ ಸುಖವು ಕರ್ಮದ ಆಧಾರದಿಂದ ಪ್ರಾಲಬ್ಧದ ರೂಪದಲ್ಲಿ ನಡೆಯುತ್ತದೆ ಎನ್ನುವುದನ್ನಂತು ಎಲ್ಲಾ ಮನುಷ್ಯರಿಗೂ ಗೊತ್ತಿದೆ. ಅವಶ್ಯವಾಗಿ ಮೊದಲು ಅಂತಹ ಕರ್ಮವನ್ನು ಮಾಡಿದ್ದಾರೆ, ಅದರ ಪ್ರಾಲಬ್ಧವು ದುಃಖ ಅಥವಾ ಸುಖದ ರೂಪದಲ್ಲಿ ಭೋಗಿಸಬೇಕಾಗುತ್ತದೆ. ಅಂದಮೇಲೆ ಸುಖ ಹಾಗೂ ದುಃಖದ ಸಂಬಂಧವು ಕರ್ಮದಿಂದಲೇ ಆಯಿತು. ಕರ್ಮವನ್ನು ಹಣೆಬರಹವೆಂದು ಹೇಳುವುದಿಲ್ಲ. ಕೆಲವರು ಈ ರೀತಿಯೂ ತಿಳಿಯುತ್ತಾರೆ- ಅದೃಷ್ಟದಲ್ಲೇನಿದೆಯೋ ಅದೇ ಆಗುವುದು ಆದ್ದರಿಂದ ದುಃಖ ಹಾಗೂ ಸುಖವನ್ನು ಅದೃಷ್ಟ ಅಥವಾ ಹಣೆಬರಹವೆಂದು ತಿಳಿದುಬಿಡುತ್ತಾರೆ. ಇದಂತು ಈ ರೀತಿಯಾಯಿತು, ಹೇಗೆಂದರೆ ಈ ಅದೃಷ್ಠವನ್ನು ಭಗವಂತನು ಮಾಡಿದರು ಅಥವಾ ಮತ್ತ್ಯಾರಾದರೋ ಮಾಡಿದ್ದಾರೆ ಎನ್ನುವಂತೆ. ಆದ್ದರಿಂದ ಅದೃಷ್ಟದಲ್ಲೇನಿದೆಯೋ ಅದಾಗುವುದು ಎಂದು ಹೇಳುತ್ತಾರೆ ಆದರೆ ಆ ಅದೃಷ್ಟವನ್ನು ಯಾರು ಮಾಡಿದರು? ಇದನ್ನು ತಿಳಿದುಕೊಳ್ಳುವುದೂ ಸಹ ಅಗತ್ಯವಿದೆ. ಅದೃಷ್ಟವನ್ನೇನೂ ಪರಮಾತ್ಮನು ಮಾಡಲಿಲ್ಲ. ಅದೃಷ್ಟವು ಮುಂಚೆಯೇ ಆಗಿಬಿಟ್ಟಿತ್ತು ಎನ್ನುವಂತೆಯೂ ಅಲ್ಲ. ದುಃಖ ಅಥವಾ ಸುಖವನ್ನೇನು ಮನುಷ್ಯನು ಅನುಭವಿಸುತ್ತಾನೆ, ಅದನ್ನು ಮಾಡಿರುವವರೂ ಸಹ ಮನುಷ್ಯನೇ ಆಗಿದ್ದಾನೆ ಏಕೆಂದರೆ ಕರ್ಮ ಮಾಡುವವನು ಮನುಷ್ಯನಾಗಿದ್ದಾನೆ ಆದ್ದರಿಂದ ಇದರ ಜವಾಬ್ದಾರಿಯೂ ತನ್ನದಾಯಿತು. ಮಾಡಿದ್ದುಣ್ಣೋ ಮಹಾರಾಯ ಎನ್ನುವುದಂತು ಸಾಮಾನ್ಯವಾದ ಹೇಳಿಕೆಯೂ ಇದೆ. ಗೀತೆಯಲ್ಲಿಯೂ ವರ್ಣನೆಯಿದೆ- ಜೀವಾತ್ಮನು ತನಗೆ ತಾನೇ ಮಿತ್ರನಾಗಿದ್ದಾನೆ ಮತ್ತು ತನಗೆ ತಾನೇ ಶತ್ರವಾಗಿದ್ದಾನೆ. ಎಂದಿಗೂ ಈ ರೀತಿ ಹೇಳಲಿಲ್ಲ- ನಾನು ನಿಮ್ಮ ಶತ್ರವಾಗಿದ್ದೇನೆ, ನಾನು ನಿಮ್ಮ ಮಿತ್ರನಾಗಿದ್ದೇನೆ. ಜೀವಾತ್ಮನು ತನಗೆ ತಾನೇ ಶತ್ರು ಅಥವಾ ಮಿತ್ರನಾಗಿದ್ದಾನೆ ಆದ್ದರಿಂದ ತನ್ನ ಜೊತೆ ಮಿತ್ರತ್ವ ಮತ್ತು ತನ್ನ ಜೊತೆ ಶತ್ರುತ್ವ, ದುಃಖ ಮತ್ತು ಸುಖ ಮಾಡುವವನೂ ಸ್ವಯಂ ಮನುಷ್ಯನಾದನು. ಅಂದಮೇಲೆ ಈ ಮಾತು ಇಷ್ಟು ಸ್ಪಷ್ಟವಾಗಿದೆ- ಮನುಷ್ಯನೇ ತನಗೆ ತಾನು ದುಃಖ-ಸುಖದ ಜವಾಬ್ದಾರನಾಗಿದ್ದಾನೆ ಆದ್ದರಿಂದ ಯಾವಾಗ ಯಾವುದೇ ರೂಪದಲ್ಲಿ ದುಃಖವಾಗುತ್ತದೆಯೋ, ಆಗ ಅದನ್ನು ಹೋಗಲಾಡಿಸಲು ಪ್ರಯತ್ನಿಸುತ್ತಾರೆ.ಯಾವುದೇ ಯುದ್ಧ, ಜಗಳಗಳೇ ಆಗಿಬಿಡುತ್ತದೆಯೆಂದರೆ, ಅದನ್ನೂ ಸಮಾಪ್ತಿಗೊಳಿಸಲು ಪ್ರಯತ್ನಿಸುತ್ತಾರೆ, ಇದರಲ್ಲಿ ಕೆಲಕೆಲವರ ಅಕಾಲ ಮೃತ್ಯುವೂ ಆಗಿಬಿಟ್ಟಾಗ ದುಃಖವಾಗುತ್ತದೆ. ಇಂತಹ ಸಮಯದಲ್ಲಿ ತಿಳಿಯುತ್ತಾರೆ- ಗೊತ್ತಿಲ್ಲ, ನನ್ನ ಜೊತೆ ಏನಾಗುತ್ತಿದೆಯೋ? ನಂತರದ ಅದೇ ವೇಗದಲ್ಲಿ(ಆವೇಶದಲ್ಲಿ) ಬಂದು ಭಗವಂತನಿಗೂ ನಿಂದಿಸುತ್ತಾರೆ. ಹಾಗಾದರೆ ಈಗ ನಿಮ್ಮ ಮುಂದೆ ಮಾತೇನು ಬಂದಿದೆಯೋ ಅದನ್ನು ಮಾಡಿರುವವರು ಯಾರು? ಈ ಅಕಾಲಮೃತ್ಯುವೇನು ಆಯಿತು, ಇದೇನು ರೋಗದ ರೂಪದಲ್ಲಿ ದುಃಖವಾಯಿತು, ಇದನ್ನೇನು ಭಗವಂತನು ಮಾಡಿದರೇ? ಪ್ರಪಂಚದಲ್ಲಿ ಇದೇನು ಯುದ್ಧ-ಜಗಳ… ಎಷ್ಟೆಲ್ಲಾ ದುಃಖಕ್ಕೆ ಕಾರಣವಾಗಿದೆ, ಇದೆಲ್ಲವನ್ನೂ ಭಗವಂತನೇ ಮಾಡಿದರೇ? ಅರೆ! ಭಗವಂತನಿಗೆ ಹೇಳುತ್ತೀರಿ- ದುಃಖ ಹರ್ತ, ಸುಖ ಕರ್ತ. ಆದ್ದರಿಂದ ಯಾವಾಗಲೆಲ್ಲಾ ದುಃಖವು ಬರುತ್ತದೆಯೋ ಆಗ ಅವರನ್ನು ನೆನಪು ಮಾಡುತ್ತೀರಿ, ಶರೀರಕ್ಕೆ ರೋಗವುಂಟಾದಾಗ ಹೇಳುತ್ತೀರಿ- ಹೇ ಭಗವಂತ! ದುಃಖದಲ್ಲಿಯೇ ಅವರನ್ನು ನೆನಪು ಮಾಡುತ್ತೀರಿ. ಒಂದುವೇಳೆ ಅವರೇ ಇದನ್ನು ಕೊಟ್ಟಿದ್ದಾರೆಂದರೆ, ಯಾರು ದುಃಖವನ್ನು ಕೊಡುವರು ಅವರಿಗೇನು ಮಾಡಬೇಕು? ತಿಳಿಸಿರಿ. ದುಃಖದ ಸಮಯದಲ್ಲಿ ಯಾರ ನೆನಪು ಬರುತ್ತದೆ ಎಂಬುದನ್ನಂತು ಯೋಚಿಸಬೇಕು, ಅವರಿಗಾಗಿ ಎಂದಿಗೂ ಸಹ ದುಃಖವನ್ನು ಕೊಟ್ಟರು ಎಂದು ಹೇಳುವುದಕ್ಕೂ ಸಾಧ್ಯವಿಲ್ಲ. ಇದನ್ನಂತು ತಿಳಿದುಕೊಳ್ಳುವ ಮಾತಾಗಿದೆ. ಯಾವಾಗ ನೆನಪು ಮಾಡುತ್ತೀರೋ ಆಗ ಅವಶ್ಯವಾಗಿ ನಮ್ಮಜೊತೆ ಅವರ ಸಂಬಂಧ ಬೇರೆ ಮಾತಾಗಿದೆ, ದುಃಖ ಕೊಡುವಂತದ್ದಲ್ಲ. ಇದರಿಂದ ಸಿದ್ಧವಾಗುತ್ತದೆ- ದುಃಖಕ್ಕೆ ಕಾರಣ ಅಥವಾ ಇದರ ಜವಾಬ್ದಾರನು ಬೇರೆ ಯಾರೋ ಇದ್ದಾರೆ! ಅದರಲ್ಲಿ ಮತ್ತ್ಯಾರೋ ಮೂರನೆಯವರಿಲ್ಲ. ಒಂದು ನಾನು ಮತ್ತು ಮತ್ತೊಂದು ನನ್ನ ರಚೈತ.ಅಷ್ಟೇ. ಇವೆರಡೇ ವಸ್ತುಗಳಿವೆಯಲ್ಲವೆ. ಒಂದು ನಾನು ಅವರ ರಚನೆ ಅಥವಾ ಅವರ ಸಂತಾನ ಮತ್ತು ಇನ್ನೊಂದು ತಂದೆ. ಇದಕ್ಕೆ ತಂದೆಯು ಜವಾಬ್ದಾರ ಇಲ್ಲದಿದ್ದರೆ ನಾನು ಜವಾಬ್ದಾರನಾಗಿದ್ದೇನೆ! ಆದರೆ ಯಾವಾಗ ನನ್ನ ಬಳಿ ದುಃಖ ಬರುತ್ತದೆಯೋ ಆಗ ನನಗೆ ಈ ರೀತಿ ಕಾಣಿಸುತ್ತದೆ- ಹೇಗೆಂದರೆ, ಆ ರಚೈತನೇ ನನಗೆ ದುಃಖ ಕೊಟ್ಟಿದ್ದಾರೆ. ಒಳಗಿನಿಂದ ಹೀಗೂ ಅನ್ನಿಸುತ್ತದೆ- ಅವರಂತು ನನ್ನ ಸುಖದಾತಾ ಆಗಿದ್ದಾರೆ.ಹೇ ಭಗವಂತ, ಈ ದುಃಖವನ್ನು ದೂರ ಮಾಡು, ಭಗವಂತ ನನ್ನ ಆಯಸ್ಸು ಧೀರ್ಘಾಯಸ್ಸಾಗಿ ಮಾಡಿ- ಹೀಗೆ ಸುಖ ಆಶ್ರಯಕ್ಕಾಗಿ ಬೇಡುತ್ತಾರೆ, ಆಯಸ್ಸಿಗಾಗಿಯೂ ಬೇಡುತ್ತಾರೆಂದರೆ ಆಯಸ್ಸಿಗಾಗಿಯೂ, ದುಃಖಕ್ಕಾಗಿಯೂ, ಶರೀರದ ರೋಗಕ್ಕಾಗಿಯೂ ಹಾಗೂ ಏನೆಲ್ಲಾ ಯುದ್ಧ-ಜಗಳಗಳೆನೆಲ್ಲಾ ಆಗುತ್ತದೆಯೋ, ಅದು ಅಶಾಂತಿಗೆ ಕಾರಣವಾಗಿ ಬರುತ್ತದೆ, ಆ ಸಮಯದಲ್ಲಿ ಭಗವಂತಯೆಂದು ಬೇಡುತ್ತಾರೆ. ಯಾರ ಮಕ್ಕಳಾದರೂ ಅಂತಹ ರೀತಿಯಿದ್ದರೆ ಹೇಳುತ್ತಾರೆ- ಭಗವಂತ ಇವರಿಗೆ ಸುಮತ ಕೊಡಿ, ಇದಕ್ಕೂ ಅವರಿಂದಲೇ ಬೇಡುತ್ತಾರೆ. ಯಾವುದೇ ಮಾತಿನಿಂದ ಸ್ವಲ್ಪ ದುಃಖ ಅಥವಾ ಕಷ್ಟವಾಗುತ್ತದೆಯೆಂದರೂ ಅವರನ್ನೇ ನೆನಪು ಮಾಡುತ್ತಾರೆ ಹಾಗೂ ಅವರಿಂದ ಬೇಡಿಕೆಯನ್ನೂ ಇಡುತ್ತಾರೆ.ಯಾವಾಗ ಅವರಿಂದಲೇ ಬೇಡುತ್ತಾರೆಂದಾಗ ಅವಶ್ಯವಾಗಿ ಅವರು ದಾತಾನಾಗಿದ್ದಾರೆ ಮತ್ತು ಅವರೇ ನಮಗೆ ಸುಖ ಕೊಡುವಂತಹವರು ಅಂದರೆ ಇವೆಲ್ಲಾ ಮಾತುಗಳ ಚಿಕಿತ್ಸೆಯು ಕೇವಲ ಅವರ ಬಳಿಯೇ ಇದೆ.ಕೇವಲ ಸಾಧಾರಣವಾಗಿ ನೆನಪು ಮಾಡುವುದಿಲ್ಲ, ಅವರಬಳಿ ಚಿಕಿತ್ಸೆಯಿದೆ ಆದ್ದರಿಂದ ಇವೆಲ್ಲಾ ಹವ್ಯಾಸಗಳು ನಮ್ಮಲ್ಲಿ ನಡೆಯುತ್ತದೆ.ಭಲೆ ಗೊತ್ತಿದೆಯೋ ಅಥವಾ ಗೊತ್ತಿಲ್ಲವೋ ಆದರೆ ಭಗವಂತನನ್ನಂತು ದುಃಖದ ಸಮಯದಲ್ಲಿ ಅವಶ್ಯವಾಗಿ ನೆನಪು ಮಾಡುತ್ತಾರೆ. ಯಾವುದೇ ಮಾತಾಗುತ್ತದೆಯೆಂದರೆ ಮುಖದಿಂದ ಬರುತ್ತದೆ- ಓ ಮೈ ಗಾಡ್(ಓ ನನ್ನ ದೇವರೇ). ಭಲೆ ಯಾರ ಅರಿತು-ಅರಿಯದೆ ಖಂಡಿತವಾಗಿ ಹೊರಬರುತ್ತದೆ- ಆ ಪರಮಾತ್ಮನು ಯಾರು, ಏನಾಗಿದ್ದಾರೆ ಎಂಬುದು, ಅಂದಮೇಲೆ ಇದೂ ಸಹ ತಿಳಿದುಕೊಳ್ಳುವ ಮಾತಾಗಿದೆ- ಕೊನೆಗೆ ನಾವು ಯಾರನ್ನು ನೆನಪು ಮಾಡುತ್ತೇವೆ, ಹಾಗಾದರೆ ಅವರು ನಮ್ಮ ಇವೆಲ್ಲಾ ದುಃಖಗಳೊಂದಿಗೆ ಸಂಬಂಧವಿದೆಯೇ! ಅವರೇನಾದರೂ ದುಃಖ ದಾತನೇ ಅಥವಾ ಅವರ ಸಂಬಂಧವು ಸುಖ ಕೊಡುವುದರೊಂದಿಗೆ ಇದೆಯೇ! ಈ ಮಾತಂತು ನಮ್ಮ ನೆನಪಿನಿಂದಲೂ ಸಿದ್ಧವಾಗಿಬಿಡುತ್ತದೆ- ಅವರು ಯಾವುದೇ ದುಃಖ ಕೊಡುವ ಕೆಲಸವನ್ನೇ ಮಾಡುವುದಿಲ್ಲ. ಒಂದುವೇಳೆ ಕೊಟ್ಟಿದ್ದೇ ಆದರೆ ನೆನಪೇಕೆ ಮಾಡುತ್ತೇವೆ? ದುಃಖ ಕೊಡುವವರಪ್ರತಿ ಒಳಗಿನಿಂದ ಕ್ರೋಧ ಬರುತ್ತದೆ, ಯೋಚಿಸುತ್ತೇವೆ- ಇವರಿಗಾಗಿ ನಾವೇನು ಮಾಡಬೇಕು….. ಆದರೆ ಭಗವಂತನ ಬಗ್ಗೆ ಸದಾ ಹಾಗೂ ದುಃಖದ ಸಮಯದಲ್ಲಂತು ವಿಶೇಷ ಪ್ರೀತಿ ಉತ್ಪನ್ನವಾಗುತ್ತದೆ. ಆಂತರ್ಯದಿಂದ ಬರುತ್ತದೆ- ಅವರು ನಮಗೆ ಬಹಳ ದೊಡ್ಡ ಮಿತ್ರನೆನ್ನುವಂತೆ, ಆ ಖುಷಿಯೂ ಒಳಗಿನಿಂದ ಬರುತ್ತದೆ ಅಂದಮೇಲೆ ಅವಶ್ಯವಾಗಿ ಅವರದು ನಮ್ಮೊಂದಿಗೆ ಸುಖದ ಸಂಬಂಧವಿದೆ. ಹಾಗಾದರೆ ದುಃಖಕ್ಕೆ ಕಾರಣ ಮತ್ತೇನೂ ಇದೆ! ಈಗ ಮತ್ತೆ ಮೂರನೆಯವರಂತು ಇಲ್ಲವೇ ಇಲ್ಲ, ಒಂದು ನಾನು ಇನ್ನೊಂದು ಅವರು. ಹಾಗಾದರೆ ಅವಶ್ಯವಾಗಿ ನಾನು ಜವಾಬ್ದಾರನಾದೆನು.

ಹಾಗಾದರೆ ನಾನು ಯಾವ ವಸ್ತುವಿಗಾಗಿ ನಿಮಿತ್ತನಾಗಿದ್ದೇನೆ ಹಾಗೂ ನಾನೇ ದುಃಖದಲ್ಲಿ ದುಃಖಿಯಾಗುತ್ತೇನೆ, ಮತ್ತು ನಾನೇ ನನಗೆ ನಾನು ಉತ್ಪನ್ನವನ್ನೂ ಮಾಡುತ್ತೇನೆ ಅಂದಮೇಲೆ ಇದೆಷ್ಟು ಬುದ್ಧಿಹೀನತೆಯಾಗಿದೆ ನೋಡಿ. ಯಾವ ವಸ್ತುವಿನಿಂದ ಮುಕ್ತರಾಗಬೇಕೆಂದು ಬಯಸುತ್ತೇವೆ, ಆ ವಸ್ತುವನ್ನು ನಾನೇ ನನಗಾಗಿ ಮಾಡಿಕೊಳ್ಳುತ್ತೇನೆ ಅಂದರೆ ಆಶ್ಚರ್ಯದ ಮಾತಲ್ಲವೆ. ಮನುಷ್ಯನೇನೂ ಬಯಸುವುದಿಲ್ಲ ಆದರೂ ದುಃಖವಾಗುತ್ತಾ ಹೋಗುತ್ತದೆ ಅಂದಮೇಲೆ ಅವಶ್ಯವಾಗಿ ಅವರು ಯಾವುದೋ ಮಾತಿನಿಂದ ಬುದ್ಧಿಹೀನರಾಗಿದ್ದಾರೆ.ಆದ್ದರಿಂದ ಯಾವ ಮಾತಿನ ಅರಿವಾಗುವುದಿಲ್ಲವೋ ಅದನ್ನು ಮೊದಲು ತಿಳಿದುಕೊಳ್ಳಬೇಕಲ್ಲವೆ. ಅವಶ್ಯವಾಗಿ ನನಗೆ ಅದರ ತಿಳುವಳಿಕೆಯಿರಬೇಕು, ಅಂದಾಗ ಇದ ತಿಳುವಳಿಕೆಯನ್ನೇ ಮೊದಲು ಪರಿಶೀಲಿಸಬೇಕು. ಆದರೆ ಆಶ್ಚರ್ಯವೇನೆಂದರೆ- ಇವತ್ತು ಇಂತಹ ಮಾತನ್ನು ತಿಳಿದುಕೊಳ್ಳುವುದಕ್ಕಾಗಿಯೂ ನೋಡಿ, ಇದರಲ್ಲಿ ಎಷ್ಟೊಂದು ಮಂದಿ ಪಾಪ! ಕಾರಣಗಳನ್ನು ಕೊಡುತ್ತಾರೆ. ನಮಗೆ ಸಮಯವಿಲ್ಲ, ನಾವೇನು ಮಾಡುವುದು ಗೃಹಸ್ಥ ವ್ಯವಹಾರ ಮುಂತಾದವನ್ನು ಸಂಭಾಲನೆ ಮಾಡಬೇಕು ಅಥವಾ ಇದನ್ನು ಮಾಡಬೇಕು, ಅದನ್ನು ಮಾಡಬೇಕು, ಏನು ಮಾಡುವುದು….. ಎಂದು ಹೇಳುತ್ತಾರೆ ಆದ್ದರಿಂದ ಅದನ್ನು ನೋಡುತ್ತಾ, ಸಂಭಾಲನೆ ಮಾಡುತ್ತಾ, ಅದರಲ್ಲಿಯೇ ದುಃಖಿಯಾಗಿದ್ದಾರೆ.ಈಗ ಯಾವಾಗ ನಾನೇ ನನ್ನದು, ನನ್ನದು ಎಂದು ಹೇಳುತ್ತಾ, ಈ ದುಃಖದ ರೂಪವನ್ನಾಗಿ ಮಾಡಿದ್ದೇನೆ, ಅದನ್ನು ದುಃಖದ ರೂಪದಲ್ಲಿ ತಂದಿದ್ದೇನೆಂದರೆ ಮೊದಲು ಅದರ ಪರಿಶೀಲನೆ ಆಗಬೇಕು.ಅದನ್ನು ಮಾಡುವ ಮೊದಲು ಅದರಬಗ್ಗೆ ಪರಿಚಯವಿರಬೇಕು- ಇದನ್ನೇನು ಮಾಡಿ ನಾನು ದುಃಖಿಯಾಗುತ್ತೇನೆ, ಅದರ ಕಾರಣವೇನಾಗಿದೆ! ಮೊದಲು ನಾನು ದುಃಖಿಯೇಕೆ ಆಗುತ್ತೇನೆ! ಎಂಬುದರ ತಿಳುವಳಿಕೆಯಂತು ಇರಬೇಕು. ನಮಗಾಗಿ ಸುಖವೇ ಇಲ್ಲವೇ! ಇದರಬಗ್ಗೆಯೂ ತಿಳಿಯಬೇಕಾಗಿದೆ.

ಈ ತಿಳುವಳಿಕೆಗಾಗಿ ಇಲ್ಲಿ ತಿಳಿಸಲಾಗುತ್ತದೆ- ಯಾವ ವಸ್ತುವನ್ನು ನೀವು ನನ್ನದೆಂದು ತಿಳಿದಿದ್ದೀರಿ, ಇದೇ ದುಃಖದ ಕಾರಣವಾಗಿದೆ.ದುಃಖವನ್ನು ನಶಿಸಲು ಚಿಕಿತ್ಸೆಯೇನಾಗಿದೆ, ಅದೂ ಸಹ ಜೀವನಕ್ಕಾಗಿ ತಿಳಿದುಕೊಳ್ಳುವುದು ಬಹಳ ಅವಶ್ಯಕವಿದೆ ಆದರೆ ತಿಳಿದಿದ್ದರೂ ಹೇಳುತ್ತಾರೆ- ಏನು ಮಾಡಲಿ, ಹೇಗೆ ಮಾಡಲಿ, ನಾವು ಗೃಹಸ್ಥ ವ್ಯವಹಾರವನ್ನು ಬಿಟ್ಟುಬಿಡುವುದೇ! ನೋಡಿ- ಮನುಷ್ಯನ ಬುದ್ಧಿ ಹೇಗಿದೆ! ಎಲ್ಲಾ ತಿಳುವಳಿಕೆ ಸಿಗುತ್ತಿದ್ದರೂ ಅದನ್ನು ಧಾರಣೆ ಮಾಡಿಕೊಳ್ಳಲಾಗುತ್ತಿಲ್ಲ, ಇದರಿಂದ ಆಶ್ಚರ್ಯವೆನಿಸುತ್ತದೆ.ನಾವು ಅದೇ ಮಾತುಗಳನ್ನು ತಿಳಿದುಕೊಂಡು ಹಾಗೂ ಧಾರಣೆ ಮಾಡಿಕೊಂಡು ಅನುಭವದಿಂದ ತಿಳಿಸುತ್ತೇವೆ- ಇದು ಅನುಭವ ಮಾಡುವ ವಸ್ತುವಾಗಿದೆ. ಅವಶ್ಯವಾಗಿ ಅನುಭವವಾಗಿದೆ ಆದ್ದರಿಂದ ಹೇಳುತ್ತೇವೆ- ಪ್ರತ್ಯಕ್ಷದಲ್ಲಿ ಯಾವ ರೀತಿಯಿಂದ ಸುಖದ ಪ್ರಾಪ್ತಿಯಾಗಲು ಸಾಧ್ಯವಿದೆ. ಯಾರು ಬಹಳ ಕಾಲದ ಆಶೆಯನ್ನಿಟ್ಟುಕೊಂಡು ಬಂದಿದ್ದೀರಿ, ಈಗ ಯಾರು ಸುಖದಾತಾ ಆಗಿದ್ದಾರೆಯೋ ಅವರೇ ಸ್ವಯಂ ನಮಗೆ ತನ್ನ ಈ ಪರಿಚಯವನ್ನು ಕೊಡುತ್ತಿದ್ದಾರೆ- ಹೇ ಮಕ್ಕಳೇ, ನೀವೇಕೆ ದುಃಖಿಯಾಗಿದ್ದೀರಿ? ಕಾರಣವಂತು ನಿಮ್ಮದೇ ಆಗಿದೆ ಆದರೆ ನಿಮ್ಮಲ್ಲಿ ಅಂತಹ ಯಾವ ಮಾತೆನಿದೆ, ಅದು ನಿಮಗೇ ಗೊತ್ತಾಗುತ್ತಿಲ್ಲ, ಅದರಿಂದ ದುಃಖವನ್ನೇ ಪಡೆಯುತ್ತಿದ್ದೀರಿ. ನಿಮ್ಮ ಕರ್ಮವೇ ದುಃಖಕ್ಕೆ ಕಾರಣವಾಗುತ್ತಾ ಹೋಗುತ್ತಿದೆಯೇ! ನಾವು ಇಷ್ಟೊಂದು ಅವಕಾಶವನ್ನು ಕೊಡುತ್ತಿದ್ದೇವೆಂದರೆ ನೀವು ಬಂದು ಅದನ್ನು ತಿಳಿದುಕೊಳ್ಳಿರಿ. ಆದರೂ ಆಶ್ಚರ್ಯವೇನೆಂದರೆ ನೋಡಿ, ಇಷ್ಟು ಕೇಳುತ್ತಿದ್ದರೂ ಹೇಳುತ್ತಾರೆ- ಬಹುಷಃ ಇದೇ ನಡೆಯಬೇಕಾಗಿದೆ ಎನಿಸುತ್ತದೆ. ಇದಕ್ಕೇ ಅಹೋ ಮಾಯೆ! ಸಂಪೂರ್ಣವಾಗಿ ಹಿಡಿದಿಟ್ಟುಕೊಂಡು ಕುಳಿತಿರುವೆ ಎಂದು ಹೇಳಲಾಗುತ್ತದೆ. ಮತ್ತು ಯಾವುದಕ್ಕಾಗಿ ಇಡೀ ದಿನ ಬಯಸುತ್ತಿದ್ದರೂ ತಲೆಕೆಡಿಸಿಕೊಳ್ಳುತ್ತಿದ್ದಾರೆ, ಅದನ್ನು ತಂದೆಯು ಸನ್ಮುಖದಲ್ಲಿ ತಿಳಿಸುತ್ತಾರೆ- ಮಕ್ಕಳೇ, ನಿಮ್ಮ ಸುಖ ಹಾಗೂ ದುಃಖಕ್ಕೆ ಕಾರಣವೇನಾಗಿದೆ! ಎಂದು.

ತಂದೆಯೇ ಸ್ವಯಂ ಹೇಳುತ್ತಾರೆ- ನಿಮ್ಮೆಲ್ಲಾ ದುಃಖವನ್ನು ಪರಿಹರಿಸಲು ಹಾಗೂ ಸುಖವನ್ನು ಕೊಡುವುದಕ್ಕಾಗಿ ಬಂದಿದ್ದೇನೆ, ಆದ್ದರಿಂದಲೇ ಮಹಿಮೆ ಮಾಡುವಿರಿ- ದುಃಖ ಹರ್ತ, ಸುಖ ಕರ್ತ ಎಂದು. ಎಂದಿಗೂ ಸಹ ಇಂದು ದುಃಖ ಹರ್ತ, ಸುಖ ಕರ್ತ ಎಂದು ಹೇಳುವುದಿಲ್ಲ ಅಂದಮೇಲೆ ಪ್ರತಿಯೊಂದು ದುಃಖಕ್ಕೂ ಅವರೇ ಪರಿಹರಿಸುವವರಾಗಿದ್ದಾರೆ.ತಂದೆಯು ಹೇಳುತ್ತಾರೆ- ಮಕ್ಕಳೇ ನಿಮ್ಮ ದುಃಖ ಪರಿಹರಿಸುವುದಕ್ಕಾಗಿಯೇ ಬಂದಿರುವೆನು, ಆದರೆ ಅದಕ್ಕಾಗಿ ನಿಮಗೆ ಅಂತಹ ಕರ್ಮವನ್ನು ಕಲಿಸುತ್ತೇನೆ, ಅದರಿಂದ ನಿಮ್ಮ ದುಃಖಗಳೆಲ್ಲವೂ ಸಮಾಪ್ತಿಯಾಗಿಬಿಡುತ್ತದೆ. ಕೇವಲ ನಾನೇನು ಕಲಿಸುತ್ತೇನೆ, ತಿಳಿಸುತ್ತೇನೆಯೋ ಅದನ್ನು ತಿಳಿದುಕೊಂಡು ಪುರುಷಾರ್ಥ ಮಾಡಿರಿ, ಅದರಿಂದ ದುಃಖವು ನಷ್ಟವಾಗಿಬಿಡಲಿ. ನಾನು ನಿಮ್ಮ ದುಃಖವನ್ನೇ ನಷ್ಟ ಮಾಡುವ ಶಿಕ್ಷಣವನ್ನು ಕೊಡುತ್ತೇನೆ, ಅದನ್ನು ಧಾರಣೆ ಮಾಡಿಕೊಳ್ಳಿರಿ ಏಕೆಂದರೆ ನಿಮ್ಮ ವಸ್ತುವಲ್ಲವೆ. ಆದರೆ ಕೆಲವರಂತು ಪಾಪ! ಇಂತಹ ಕಾರಣಗಳನ್ನು ಕೊಡುತ್ತಾರೆ- ಹೇಗೆಂದರೆ, ನಾವೇನೋ ಭಗವಂತನ ಮೇಲೆ ದಯೆ ತೋರಿಸುತ್ತಿದ್ದೇವೆ ಎನ್ನುವಂತೆ. ಮತ್ತೆ ಕೆಲವರು ಹೇಳುತ್ತಾರೆ- ಸಮಯ ಸಿಕ್ಕಿದಾಗ ಮಾಡಿಬಿಡುತ್ತೇವೆ! ಅರೆ ಸಹೋದರನೇ! ನೀವು ತಿನ್ನುವ-ಕುಡಿಯುವ ಏನೆಲ್ಲಾ ಮಾತುಗಳಿವೆ, ಅದೇ ಕರ್ಮಗಳಿಂದ ಮಾಡಿಕೊಂಡಿರುವ ಖಾತೆಯಲ್ಲಿಯೇ ತಬ್ಬಿಬ್ಬಾಗಿದ್ದೀರಿ, ಅದರಲ್ಲಿಯೇ ದುಃಖಿಯಾಗಿದ್ದೀರಿ.ಯಾವಾಗ ಒಂದು ಕಡೆ ಹೇಳುತ್ತೀರಿ- ದುಃಖದಿಂದ ಮುಕ್ತ ಮಾಡು ಹಾಗೆಯೇ ಮತ್ತೊಂದು ಕಡೆ- ಸ್ವಯಂ ತಂದೆಯೇ ಇವೆಲ್ಲಾ ದುಃಖಗಳಿಂದ ಮುಕ್ತರಾಗುವ ಮಾರ್ಗವನ್ನು ತಿಳಿಸುತ್ತಿದ್ದಾರೆ, ಆದರೂ ನೋಡಿ- ಕೆಲವರ ಬುದ್ಧಿಯಲ್ಲಿ ಕುಳಿತುಕೊಳ್ಳುವುದೇ ಕಷ್ಟವಾಗಿದೆ. ಇದೇರೀತಿ ಮಾಯೆಯೆಂದು ಈ 5 ವಿಕಾರಗಳಿಗೆ ಹೇಳಲಾಗುತ್ತದೆ ಆದರೆ ಮನುಷ್ಯನು ಪಾಪ! ಇಷ್ಟಾದರೂ ಧನ-ಸಂಪತ್ತನ್ನು ಮಾಯೆಯೆಂದು ತಿಳಿದುಬಿಡುತ್ತಾರೆ.ಕೆಲವರು ಶರೀರವನ್ನೇ ಮಾಯೆಯೆಂದು ಹೇಳಿಬಿಡುತ್ತಾರೆ.ಅದರಿಂದ ಪಾರಾಗುವ ಉಪಾಯವನ್ನು ಹುಡುಕುತ್ತಿರುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ- ನಿಮ್ಮ ದುಃಖಕ್ಕೆ ಕಾರಣವೇ ಬೇರೆ ಇದೆ. ಈ ಪ್ರಕೃತಿಯಂತು ನನ್ನ ರಚನೆಯಾಗಿದೆ, ಯಾವುದು ಅನಾದಿ ಆಗಿದೆಯೋ ಅದ್ಯಾವುದೂ ದುಃಖಕ್ಕೆ ಕಾರಣವಲ್ಲ. ನಿಮ್ಮಲ್ಲಿ ವಿಶೇಷವಾಗಿ ಬೇರೆ ಯಾವುದೋ ವಸ್ತು ಬಂದಿದೆ, ಅದು ದುಃಖದ ಕಾರಣವಾಗಿದೆ, ಅದನ್ನೇ 5 ವಿಕಾರ(ಮಾಯೆ) ಎಂದು ಹೇಳಲಾಗುತ್ತದೆ. ವಿಕಾರವೆಂದು ಶರೀರವಲ್ಲ, ಸಂಸ್ಕಾರವು ವಿಕಾರವಲ್ಲ, ಧನ-ಸಂಪತ್ತು ವಿಕಾರವಲ್ಲ, ವಿಕಾರವೇ ಬೇರೆ ವಸ್ತುವಾಗಿದೆ, ಅದು ಬಂದನಂತರ ಇವೆಲ್ಲಾ ವಸ್ತುಗಳು ದುಃಖದ ಕಾರಣವಾಗಿಬಿಟ್ಟಿದೆ.ಇಲ್ಲದಿದ್ದರೆ ಇವೆಲ್ಲಾ ಪದಾರ್ಥಗಳು ಆತ್ಮದ ಸುಖಕ್ಕೆ ಕಾರಣವಾಗಿದೆ. ಅದಕ್ಕಾಗಿ ಧನ-ಸಂಪತ್ತು, ಇತ್ಯಾದಿ… ಏನೆಲ್ಲಾ ಇವೆಯೋ ಅವೆಲ್ಲವೂ ಸುಖದ ಕಾರಣವಾಗಿದೆ.ಆದರೆ ಇವೆಲ್ಲಾ ಮಾತುಗಳ ಬಗ್ಗೆ ಸಂಪೂರ್ಣ ತಿಳುವಳಿಕೆಯಿಲ್ಲದ ಕಾರಣದಿಂದ, ಇವೆಲ್ಲಾ ವಸ್ತುಗಳು ದುಃಖದಲ್ಲಿ ಬಂದುಬಿಟ್ಟಿದೆ. ಹೀಗೂ ಅಲ್ಲ- ನಾನೇನು ಅನಾದಿ ರಚನೆಯನ್ನು ರಚಿಸಿದ್ದೇನೆ, ಅದು ದುಃಖ ಕಾರಣವಾಗಿದೆ, ಅಲ್ಲ. ದುಃಖಕ್ಕೆ ಕಾರಣ ನೀವಾಗಿದ್ದೀರಿ, ನಿಮ್ಮಲ್ಲಿ ಬೇರೆ ಯಾವುದೋ ವಸ್ತು ಬಂದಿದೆ, ಆ ಬೇರೆ ವಸ್ತುವೇ ಈ ಮಾಯೆಯ 5 ವಿಕಾರಗಳಾಗಿವೆ, ಈಗ ಅದನ್ನು ನೀವು ತೆಗೆಯಬೇಕಾಗಿದೆ. ಮತ್ತೆ ಮನುಷ್ಯನು ಇದರ ಬಗ್ಗೆ ಹೇಳಿಬಿಡುತ್ತಾನೆ- ಇದೆಲ್ಲವೂ ಭಗವಂತನೇ ಕೊಟ್ಟಿದ್ದಾರೆ, ಒಂದುವೇಳೆ ಭಗವಂತನೇ ಕೊಟ್ಟಿದ್ದಾರೆಂದರೆ ಸುಖದ ವಸ್ತುವನ್ನೇ ಕೊಟ್ಟಿರಬೇಕಲ್ಲವೆ. ಇದರಲ್ಲಿ ನೀವು ವಿಕಾರವನ್ನು ಸೇರಿಸಿ, ಇವೆಲ್ಲಾ ವಸ್ತುಗಳನ್ನು ಹಾಳು ಮಾಡಿಬಿಟ್ಟಿದ್ದೀರಿ ಆದ್ದರಿಂದ ತಂದೆಯು ಹೇಳುತ್ತಾರೆ- ನೀವು ಈ ವಿಕಾರಗಳನ್ನು ತೆಗೆದುಬಿಡಿ, ಆಗಲೇ ಸದಾಕಾಲಕ್ಕಾಗಿ ಸುಖಿಯಾಗಿಬಿಡುತ್ತೀರಿ. ಇವೆಲ್ಲಾ ಮಾತುಗಳು ತಿಳಿದುಕೊಳ್ಳುವ ಮಾತುಗಳಾಗಿವೆ. ಇದಕ್ಕಾಗಿ ಸ್ವಲ್ಪ ಸಮಯವನ್ನೂ ಕೊಡಬೇಕಾಗುತ್ತದೆ. ದುಃಖಗಳನ್ನು ನಾಶಪಡಿಸುವ ವಿಧಿಯನ್ನು ಕಲಿಯಬೇಕಾಗಿದೆ. ಇದಕ್ಕಾಗಿ ಹೇಳುತ್ತೇವೆ- ಮತ್ತೆ-ಮತ್ತೆ ಬನ್ನಿ, ಸ್ವಲ್ಪ ತಿಳಿದುಕೊಳ್ಳಿರಿ, ಆದರೆ ಇಲ್ಲಿ ಕೇಳುತ್ತಾ ಹೊರಗೆ ಹೋದಮೇಲೆ ಮಾತುಗಳೆಲ್ಲವೂ ಮರೆತುಹೋಯಿತು ಎನ್ನುವಂತೆ ಆಗಬಾರದು.ಕೆಲವರು ಹೇಳುತ್ತಾರೆ- ಇದಂತು ಹಿರಿಯರು ಅಥವಾ ವೃದ್ಧರ ಕಾರ್ಯವಾಗಿದೆ, ಹಾಗಾದರೆ ಜೀವನ ರೂಪಿಸಿಕೊಳ್ಳುವುದು ವೃದ್ಧರಿಗೇ ಅವಶ್ಯಕವಿದೆಯೇ! ವೃದ್ಧರಂತು ಆದರು, ಯಾರು ಉಲ್ಟಾ ಏಣಿಯನ್ನು ಹತ್ತಿದರು ನಂತರ ಅದನ್ನು ನೋಡಿ ಕೆಳಗಿಳಿಯುತ್ತಾರೆ, ಅದಕ್ಕಿಂತಲೂ ಏಣಿಯನ್ನು ಹತ್ತುವುದಕ್ಕೇ ಮೊದಲೇ- ನಾವು ಜೀವನವನ್ನು ಹೇಗೆ ನಡೆಸಬೇಕು ಎಂದು ಸಂಭಾಲನೆ ಮಾಡಿಬಿಟ್ಟರೆ ಹೇಗಿರುತ್ತದೆ! ಆದ್ದರಿಂದ ಅವರಿಗೆ ಸಲಹೆ ಕೊಡುತ್ತೇವೆ- ಈ ಮಾತುಗಳನ್ನು ತಿಳಿದುಕೊಂಡು, ತಮ್ಮ ಜೀವನದಲ್ಲೇನು ದುಃಖದ ಬುನಾದಿಯಾಗಿದೆ, ದುಃಖದ ಕಾರಣವೇನಿದೆಯೋ ಅದನ್ನು ಸಮಾಪ್ತಿ ಮಾಡುವ ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ.

ಭಗವಂತ, ಯಾರು ನಮ್ಮೆಲ್ಲರ ಪಿತನಾಗಿದ್ದಾರೆ, ಅವರ ಮೇಲೆ ನಮ್ಮ ಅಧಿಕಾರವೇನಿದೆಯೋ ಅದನ್ನೂ ತಿಳಿಯಬೇಕು ಹಾಗೂ ಆ ಅಧಿಕಾರವನ್ನು ಪಡೆಯಬೇಕಾಗಿದೆ. ಹಾಗೆಯೇ ಖಾಲಿಯಾಗಿ ತಂದೆಯೆಂದು ಹೇಳುತ್ತೀರಿ ಆದರೆ ಅವರ ಮೂಲಕ ನಾವೇನು ಪ್ರಾಪ್ತಿ ಮಾಡಿಕೊಳ್ಳಬೇಕು, ಅದನ್ನೂ ಯಾರೇ ಆಗಲಿ ಬಂದು ಕೇಳಿ ಹಾಗೂ ತಿಳಿದುಕೊಳ್ಳಿರಿ.ನಾವು ಎಲ್ಲರಿಗೂ ಅವಕಾಶವನ್ನು ಮಾಡಿಕೊಡುತ್ತಾ ಇರುತ್ತೇವೆ, ಆಮಂತ್ರಣ ಕೊಡುತ್ತಿರುತ್ತೇವೆ. ನಂತರ ಕೋಟಿಯಲ್ಲಿ ಕೆಲವರೇ ಜಾಗೃತರಾಗುತ್ತಾರೆ. ಮುಂಚೆಯೂ ಹೀಗೆಯೇ ಆಗಿತ್ತು ಆದ್ದರಿಂದ ಭಗವಂತನೇ ಸ್ವಯಂ ಹೇಳಿದ್ದಾರೆ- ಕೋಟಿಯಲ್ಲಿ ಕೆಲವರು ನನ್ನನ್ನು ತಿಳಿಯುತ್ತಾರೆ. ಅಂದಮೇಲೆ ಇಲ್ಲಿಗೆ ಬಂದು ಈ ವಸ್ತುವನ್ನು ತಿಳಿದುಕೊಂಡು ಮತ್ತು ಸ್ವಲ್ಪ ಧಾರಣೆ ಮಾಡಿಕೊಳ್ಳುವ ಮಾತನಾಡಿರಿ.ಒಂದೇ ದಿನದಲ್ಲಿ ಇವೆಲ್ಲಾ ಮಾತುಗಳನ್ನು ಅರಿತುಕೊಳ್ಳುವುದಕ್ಕೆ ಆಗುವುದಿಲ್ಲ. ಒಳ್ಳೆಯದು. ಮಧುರಾತಿ ಮಧುರ ಮಕ್ಕಳ ಪ್ರತಿ ನೆನಪು-ಪ್ರೀತಿ ಹಾಗೂ ನಮಸ್ತೆ.

ವರದಾನ:-

ಬ್ರಾಹ್ಮಣ ಜೀವನದ ಮಜಾ ಜೀವನ್ಮುಕ್ತ ಸ್ಥಿತಿಯಲ್ಲಿದೆ.ಯಾರು ಸದಾ ತನ್ನ ಪೂಜ್ಯಸ್ವರೂಪದ ಸ್ಮೃತಿಯಿರುತ್ತದೆಯೋ ಅವರ ಕಣ್ಣುಗಳು ತಂದೆಯನ್ನಲ್ಲದೆ ಮತ್ತೆಲ್ಲಿಯೂ ಮುಳುಗಲು ಸಾಧ್ಯವಿಲ್ಲ. ಪೂಜ್ಯಾತ್ಮರ ಮುಂದೆ ವ್ಯಕ್ತಿ ಹಾಗೂ ವೈಭವವೆಲ್ಲವೂ ತಾನಾಗಿಯೇ ಬಾಗುತ್ತದೆ. ಪೂಜ್ಯನು ಯಾರ ಹಿಂದೆಯೂ ಆಕರ್ಷಿತನಾಗಲು ಸಾಧ್ಯವಿಲ್ಲ. ಅವರ ಮನಸ್ಸು-ಬುದ್ಧಿಯು ದೇಹ, ಸಂಬಂಧ, ಪದಾರ್ಥ ಅಥವಾ ಸಂಸ್ಕಾರಗಳಲ್ಲಿಯೂ ಬಾಗುವಿಕೆ ಇರುವುದಿಲ್ಲ. ಅವರೆಂದಿಗೂ ಯಾವುದೇ ಬಂಧನದಲ್ಲಿಯೂ ಬಂಧಿಸಲು ಸಾಧ್ಯವಿಲ್ಲ. ಸದಾ ಜೀವನ್ಮುಕ್ತ ಸ್ಥಿತಿಯ ಅನುಭವ ಮಾಡುತ್ತಾರೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top