24 June 2021 KANNADA Murli Today | Brahma Kumaris

Read and Listen today’s Gyan Murli in Kannada

23 June 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಮಾತೇಶ್ವರಿಯವರ ಪುಣ್ಯ ಸ್ಮೃತಿ ದಿನದಂತು ಕ್ಲಾಸಿನಲ್ಲಿ ತಿಳಿಸುವುದಕ್ಕಾಗಿ ಜಗದಂಬಾ ಸರಸ್ವತಿಯವರ ಮಧುರ ಮಹಾವಾಕ್ಯಗಳು

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಬಿಟ್ಟು ಬಿಡು ಜಗತ್ತಿನ ಸಂಬಂಧವನ್ನು..

ಒಂದುವೇಳೆ ನಾವು ಜಗತ್ತಿನಿಂದ ಸಂಬಂಧವನ್ನೇ ಬಿಟ್ಟಿದ್ದೇವೆಂದರೆ, ನಂತರ ಜಗತ್ತು ಏತಕ್ಕಾಗಿ ಇದೆ? ಒಂದುವೇಳೆ ಸಂಬಂಧವನ್ನು ಮರಿಯುವ ಮಾತಿದೆಯೆಂದರೆ, ಈ ಸಂಬಂಧವನ್ನು ಮಾಡಿದ್ದಾದರೂ ಏಕೆ? ಪತಿ-ಪತ್ನಿ, ತಂದೆ-ಮಗ, ರಾಜಾ-ಪ್ರಜೆ ಇತ್ಯಾದಿ, ಇತ್ಯಾದಿ, ಅನೇಕಾನೇಕ ಸಂಬಂಧಗಳೇನಿವೆ, ಇವೆಲ್ಲವೂ ಭಗವಂತನೇ ರಚಿಸಿದ್ದಾರೆ ಎಂದು ಹೇಳುತ್ತಾರಲ್ಲವೆ! ಅಂದಾಗ ಯಾವಾಗ ಭಗವಂತನೇ ರಚಿಸಿದ್ದಾರೆ ಅಂದಮೇಲೆ ಇದನ್ನು ಬಿಟ್ಟು ಬಿಡಿ ಎಂದು ಏಕೆ ಹೇಳುವುದು! ಅಥವಾ ಈ ಹಾಡೇ ತಪ್ಪಾಗಿದೆಯೆ!

ಭಗವಂತನು ಎಂತಹ ಪ್ರಪಂಚವನ್ನು ರಚಿಸಿದರು? ಜಗತ್ತು ಅಥವಾ ಪ್ರಪಂಚವೆಂದಾದರೂ ಹೇಳಿರಿ, ಅದನ್ನು ಭಗವಂತನೇ ರಚಿಸಿದರೆಂದರೆ, ಯಾವುದನ್ನು ಬಿಡಬೇಕಾಗುತ್ತದೆಯೋ ಅಂತಹ ಪ್ರಪಂಚವನ್ನು ರಚಿಸಿದರೇನು! ಭಗವಂತನು ಈಗಿರುವ ಸಂಬಂಧವನ್ನು ರಚಿಸಲಿಲ್ಲ. ಭಲೆ ಈಗ ಈ ಜಗತ್ತನ್ನೂ ನೋಡಿ – ನಿಮ್ಮ ಸಂಬಂಧಗಳು ಹೇಗಾಗಿ ಬಿಟ್ಟಿದೆ! ಕರ್ಮಗಳನುಸಾರ ತಮೋಪ್ರಧಾನತೆಯಲ್ಲಿ ಬರುತ್ತಾ-ಬರುತ್ತಾ ಏನಾಗಿ ಬಿಟ್ಟಿದೆ! ಒಬ್ಬರಿನ್ನೊಬ್ಬರನ್ನು ಕರ್ಮಗಳ ಬಂಧನವೇ ಚುಚ್ಚುತ್ತಾ (ದುಃಖ ಕೊಡುತ್ತದೆ) ಇರುತ್ತದೆ. ಎಲ್ಲಾ ಸಂಬಂಧಗಳ ಲೆಕ್ಕಾಚಾರದಲ್ಲಿ ತಮೋಪ್ರಧಾನತೆಯಲ್ಲಿ ಬರುತ್ತಾ, ಒಬ್ಬರಿನ್ನೊಬ್ಬರಿಗೆ ದುಃಖವನ್ನೇ ಕೊಡುತ್ತಾ-ತೆಗೆದುಕೊಳ್ಳುತ್ತಾ ಇರುತ್ತಾರೆ. ಇದಕ್ಕೆ ಭಗವಂತನು ಸ್ವಯಂ ಹೇಳುತ್ತಾರೆ – ನಾನಂತು ನಿಮ್ಮ ಈ ದುಃಖದ ಸಂಬಂಧಗಳನ್ನು ಮಾಡಲಿಲ್ಲ, ನಾನು ನಿಮ್ಮ ಸಂಬಂಧಗಳೇನು ಬೆಸೆದಿದ್ದೆನು ಅದು ಬಂಧನವಾಗಿರಲಿಲ್ಲ. ನಾನು ನಿಮ್ಮ ಶ್ರೇಷ್ಠ ಸಂಬಂಧವನ್ನು ಬೆಸೆದಿದ್ದೆನು, ನೀವು ಅದೇ ಸಂಬಂಧದಲ್ಲಿ ಸದಾ ಸುಖಿಯಾಗಿದ್ದಿರಿ. ನಿಮ್ಮ ಎಲ್ಲಾ ಸಂಬಂಧಗಳು ಬಹಳ ಸ್ವಚ್ಛವಾಗಿದ್ದವು (ಪವಿತ್ರ) ಆದ್ದರಿಂದ ನೆನಪು ಮಾಡುತ್ತೀರಲ್ಲವೆ – ರಾಮ ರಾಜ, ರಾಮ ಪ್ರಜಾ, ರಾಮ ಸಾಹುಕಾರ ಆಗಿದ್ದಾರೆ, ಇಡೀ ನಗರವು ಬದುಕಲು ದಾತನ ಧರ್ಮದ ಉಪಕಾರವಿದೆ…. ಅದಕ್ಕೆ ಗೃಹಸ್ಥ ಧರ್ಮ ಎಂದು ಹೇಳುತ್ತಿದ್ದಿರಿ. ಧರ್ಮ-ಪತಿ, ಧರ್ಮ-ಪತ್ನಿ, ಧರ್ಮದ ಹೆಸರಿನಿಂದಲೇ ಇದೆಯಲ್ಲವೆ ಆದರೆ ಈಗಂತು ಆ ಧರ್ಮದ ಸಂಬಂಧವಿಲ್ಲದಂತೆ ಆಗಿದೆ, ಪ್ರತ್ಯಕ್ಷದಲ್ಲಿ ಆ ಜೀವನವೇ ಇಲ್ಲದಂತದಾಗಿದೆ, ಆದ್ದರಿಂದ ತಂದೆಯವರು ಹೇಳುತ್ತಾರೆ – ನೀವೇನು ತಮ್ಮ ಜಗತ್ತನ್ನು ಮಾಡಿದ್ದೀರಿ, ಇದರಲ್ಲಿ ಸಂಬಂಧಗಳೇ ಹಾಳಾಗಿ ಬಿಟ್ಟಿದೆ. ನಾವು ಯಾವ ಜಗತ್ತನ್ನು ತಯಾರು ಮಾಡಿದ್ದೆವು, ಅದರಲ್ಲಿ ನಿಮ್ಮ ಸಂಬಂಧಗಳು ಬಹಳ ಚೆನ್ನಾಗಿದ್ದವು, ಬಹಳ ಪ್ರಿಯವಾಗಿದ್ದವು, ಒಬ್ಬರಿಗೊಬ್ಬರು ಎಷ್ಟೊಂದು ಸುಖವನ್ನು ಕೊಡುವವರಿದ್ದರು. ಅಂದರೆ ಅಲ್ಲಿ ಅವಶ್ಯವಾಗಿ ಸಂಬಂಧಗಳಿದ್ದವು, ಆದರೆ ಭಗವಂತನು ಸಂಬಂಧಗಳನ್ನೇ ರಚಿಸಲಿಲ್ಲ ಎಂದಲ್ಲ. ಸಂಬಂಧಗಳಿದ್ದವು ಆದರೆ ಆ ಸಂಬಂಧಗಳು ಕರ್ಮ ಬಂಧನ ಮುಕ್ತವಾಗಿದ್ದವು ಆದ್ದರಿಂದ ಅವರಿಗೆ ಜೀವನ್ಮುಕ್ತರು ಎಂದು ಹೇಳಲಾಗುತ್ತದೆ. ಜೀವನದಲ್ಲಿ ಈ ಕರ್ಮದ ಬಂಧನಗಳಿಂದ ಮುಕ್ತವಾಗಿದ್ದರು ಆದ್ದರಿಂದ ಜೀವನ್ಮುಕ್ತರೆಂದು ಹೇಳುತ್ತಾರೆ. ಈಗ ನಿಮ್ಮ ಸಂಬಂಧವು ಜೀವನ ಬಂಧನ ಆಗಿ ಬಿಟ್ಟಿದೆ. ಆದ್ದರಿಂದ ಹೇಳುತ್ತಾರೆ – ಈಗ ಅದರಿಂದ ಮುಕ್ತಿ ಪಡೆಯುವುದು ಹೇಗೆ! ತಂದೆಯು ತಿಳಿಸುತ್ತಾರೆ – ಅದರಿಂದ ಸಂಬಂಧವನ್ನು ಮುರಿದು ನನ್ನೊಬ್ಬನೊಂದಿಗೆ ಜೋಡಿಸಿರಿ. ನೀವು ನಿಮ ಇದೊಂದು ಜೀವನವನ್ನು ನನಗೆ ಅರ್ಪಣೆ ಮಾಡಿಬಿಡಿ. ನನಗೆ ಅರ್ಪಣೆಯಾಗುವುದು ಎಂದರೆ ಸ್ತ್ರೀಯು ಪತಿಯ ಅರ್ಪಣೆ, ಪತಿಯು ಸ್ತ್ರೀಯ ಅರ್ಪಣೆ ಮಾಡುವುದು. ಹೇಗೆ ಮಾಡಲಿ, ಏನು ಮಾಡಲಿ ಎಂಬ ಪ್ರಶ್ನೆಯನ್ನೂ ಸಹ ಕೇಳಲು ಸಾಧ್ಯವಿಲ್ಲ, ನೀವು ತಮ್ಮ ಜೀವನವನ್ನು ಒಬ್ಬರಿನ್ನೊಬ್ಬರಿಗಾಗಿಯೇ ಕೊಡುತ್ತಾ ಬಂದಿದ್ದೀರಿ, ನೀವು ನಿಮ್ಮ ಜೀವನವನ್ನು ಮಕ್ಕಳಿಗಾಗಿ ಕೊಟ್ಟು ಕುಳಿತಿಲ್ಲವೇ? ತಮ್ಮ ತನು, ಮನ, ಧನ ಏನೆಲ್ಲವೂ ಇದೆಯೋ, ಅದನ್ನು ನೀವು ಅವರಿಗಾಗಿಯೇ ಮಾಡುತ್ತಾ ಕುಳಿತಿದ್ದೀರಲ್ಲವೆ. ನಿಮ್ಮದು-ಇದು ನಿಮ್ಮದು ಎನ್ನುತ್ತೀರಲ್ಲವೆ! ಇಡೀ ಜೀವನವನ್ನೇ ಅವರಿಗಾಗಿ ಉಪಯೋಗಿಸುತ್ತೀರಿ, ಅಂದಮೇಲೆ ನಾನೇನು ಇದೆಲ್ಲವನ್ನೂ ನನಗೆ ಅರ್ಪಣೆ ಮಾಡಿ ಬಿಡಿ ಎಂದು ಅಂತಹ ಯಾವುದೇ ಹೊಸ ಮಾತನ್ನು ಹೇಳುವುದಿಲ್ಲ. ಹೇಗೆ ಈಗ ಒಬ್ಬರಿನ್ನೊಬ್ಬರಿಗಾಗಿ ಮಾಡುತ್ತಾ ಬಂದಿದ್ದೀರಿ ಹಾಗೆಯೇ ಈಗ ನೀವು ನನ್ನವರಾಗಿರಿ ಎಂದು ಹೇಳುತ್ತೇನೆ. ನನ್ನವರಾದ ನಂತರ ನಿಮಿತ್ತರಾಗಿದ್ದು ನಿಭಾಯಿಸಿರಿ. ನೀವು ಭಕ್ತಿಮಾರ್ಗದಲ್ಲಿ ಇದನ್ನೇ ಹೇಳುತ್ತಾ ಬಂದಿದ್ದೀರಿ – ಭಗವಂತ, ಇದೆಲ್ಲವೂ ನಿನ್ನದು, ನಾನೂ ನಿನ್ನವಳು…. ಆದರೆ ನಿನ್ನದೆಂದು ಮಾಡಲಿಲ್ಲ, ಕೇವಲ ನಿನ್ನದೆಂದು ಹೇಳಿದಿರಷ್ಟೆ. ನಿನ್ನದೂ ನನ್ನದೆ, ನನ್ನದೂ ನಿನ್ನದೆ…. ಈ ರೀತಿಯಾಗಿಯೇ ಎಲ್ಲರೂ ಮಾಡುತ್ತಿದ್ದಿರಿ ಆದರೆ ಈಗ ಆ ಮೋಸವಂತು ನಡೆಯುವುದಿಲ್ಲ ಅಲ್ಲವೇ! ನಿನ್ನದೆಲ್ಲವೂ ನನ್ನದು, ಹಾಗೆಯೇ ನನ್ನದೆಲ್ಲವೂ ನನ್ನದು ಈ ರೀತಿಯಾಗಬಾರದು. ಈಗ ನಿನ್ನದು-ನನ್ನದು ಎಂಬುದೆಲ್ಲವನ್ನೂ ಸಮಾಪ್ತಿ ಮಾಡಬೇಕಾಗುತ್ತದೆ. ಈಗ ನಾನು ನಿನ್ನವನೆಂದಾಗ ಅದರಲ್ಲಿ ಸರ್ವಸ್ವವೂ ಬಂದು ಬಿಡುತ್ತದೆ. ನಾನು ನಿನ್ನವನು ಅಷ್ಟೇ, ಉಳಿದಂತೆ ಅವರದೂ ನನ್ನದೇ, ನನ್ನದೂ ನನ್ನದೆ…. ಇಂತಹ ಮೋಸದಿಂದ ಲಾಭವೇನಿದೆ! ಏಕೆಂದರೆ ತಾವೇ ತಮ್ಮನ್ನು ಮೋಸ ಮಾಡಿಕೊಳ್ಳುತ್ತೀರಿ, ಆ ಪರಮಾತ್ಮನನ್ನೆಂದಿಗೂ ಮೋಸ ಮಾಡಲು ಸಾಧ್ಯವಿಲ್ಲ. ಮೊದಮೊದಲು ಹೇಗೇಗೆ ಮೋಸ ಮಾಡುತ್ತಿದ್ದಿರಿ ಆದರೆ ಮಾಡುತ್ತಾ-ಮಾಡುತ್ತಾ ಸ್ವಯಂ ತಾವೇ ದುಃಖಿ-ಅಶಾಂತರಾದಿರಿ ಏಕೆಂದರೆ ಮೋಸವನ್ನಂತು ತಾವೇ ಅನುಭವಿಸುತ್ತಿದ್ದಿರಿ, ಆದ್ದರಿಂದ ತಂದೆಯವರು ಈಗ ಹೇಳುತ್ತಾರೆ – ಅದೆಲ್ಲವನ್ನೂ ಬಿಟ್ಟು ಬಿಡಿ, ದೇಹ ಸಹಿತವಾಗಿ ಎಲ್ಲಾ ಸಂಬಂಧಗಳಿಂದ ಬುದ್ಧಿಯನ್ನು ತೆಗೆದು, ಈಗ ನನ್ನೊಂದಿಗೆ ಜೋಡಿಸಿರಿ. ನಂತರ ನನ್ನದೆನ್ನುವುದೇ ಇರುವುದಿಲ್ಲ.

ಈಗಿನವರೆಗೂ ನನ್ನದು-ನನ್ನದು ಎನ್ನುತ್ತಾ ದುಃಖಿಯಾಗುತ್ತಾ ಇರುತ್ತೀರಿ, ಆದರೂ ಕೂಡ ಬುದ್ಧಿಯು ಅದರ ಕಡೆಯೇ ಹೋಗುತ್ತದೆ, ಆದ್ದರಿಂದ ಏನು ಮಾಡಲಿ-ಹೇಗೆ ಮಾಡಲಿ… ಎಂದು ಹೇಳುತ್ತೀರಿ. ನೀವು ಒಂದುವೇಳೆ ಯಾವುದರಲ್ಲಾದರೂ ಸಿಲುಕುತ್ತೀರೆಂದರೆ ಅದೃಷ್ಟವೇನಾಗುವುದು! ಮೋಹದ ಕಾರಣದಿಂದಲೇ ನೀವು ದುಃಖಿಯಾಗಿದ್ದೀರಿ. ಆದ್ದರಿಂದ ತಂದೆಯು ಹೇಳುತ್ತಾರೆ – ನೀವೀಗ ಈ ಜಗತ್ತಿನ ಸಂಬಂಧವನ್ನು ಮುರಿದು ನನ್ನವರಾಗಿರಿ. ಈಗ ನೀವೇನು ತಮ್ಮ ದೇಹದ ಬಂಧನ, ಜೀವನ ಬಂಧನವನ್ನಾಗಿ ಮಾಡಿಕೊಂಡಿದ್ದೀರಿ, ಅದರಿಂದ ಹೊರಬಂದು ನನ್ನವರಾಗಿ ಬಿಡಿ. ಆನಂತರ ನಾನೇನು ನಿಮ್ಮ ಜೊತೆ ಜನ್ಮ-ಜನ್ಮದಲ್ಲಿಯೂ ನಡೆಯುತ್ತಿರುತ್ತೇನೆಯೇ! ಇಲ್ಲ. ಈಗ ನನಗೆ ನಿಮ್ಮೊಂದಿಗೆ ಕೆಲಸವಿದೆ ಅಷ್ಟೇ. ನಂತರದಲ್ಲಂತು ಸದಾಕಾಲಕ್ಕಾಗಿ ನೀವಾತ್ಮರು ಪರಸ್ಪರದಲ್ಲಿ ಸುಖದಲ್ಲಿ ನಡೆಯುತ್ತಾ ಇರುತ್ತೀರಿ. ಅದಕ್ಕಾಗಿ ನಿಮ್ಮ ದುಃಖದ ಬಂಧನಗಳನ್ನು ಮುರಿಯುತ್ತಾ, ಸುಖದ ಸಂಬಂಧವನ್ನಾಗಿ ಮಾಡಿ ಬಿಡುತ್ತೇನೆ, ಆನಂತರ ಪರಸ್ಪರ ನೀವೇ ಸುಖವನ್ನು ಅನುಭವಿಸುವಿರಿ. ಈಗ ನೋಡಿ, ನೀವೆಷ್ಟು ಹಾಳಾಗಿದ್ದೀರಿ ಆದ್ದರಿಂದಲೇ ದುಃಖಿಯಾಗಿದ್ದೀರಿ. ಮತ್ತೆ ನಾನು ಹಾಳಾಗಿರುವ ನಿಮ್ಮನ್ನು ಸುಧಾರಣೆ ಮಾಡುತ್ತೇನೆ, ನಂತರ ನೀವೇ ಸುಖಿಯಾಗಿರುತ್ತೀರಿ. ನಾನೇನಾದರೂ ಜನ್ಮ-ಜನ್ಮದಲ್ಲಿಯೂ ನಿಮ್ಮಜೊತೆ ನಡೆಯುತ್ತೇನೆಯೇ! ನಾನಂತು ಕೇವಲ ಹಾಳಾಗಿರುವ (ಪತಿತ) ನಿಮ್ಮನ್ನು ಸರಿಹೋಗಲು (ಪಾವನ) ಹೇಳುತ್ತೇನೆ, ಅದಕ್ಕಾಗಿ ಈಗ ನನ್ನವರಾಗಿರಿ. ಅದನ್ನೂ ಏಕೆ ಹೇಳುತ್ತೇನೆ? ಏಕೆಂದರೆ ನನ್ನ ಆದೇಶದಂತೆ ನಡೆಯುವುದರಿಂದ ನಿಮಗೆ ಎಲ್ಲವೂ ಸಹಜವಾಗುತ್ತದೆ – ಈ ಸಹಜ ಯುಕ್ತಿಯನ್ನು ನಾನು ನಿಮಗೆ ಕೊಡುತ್ತೇನೆ. ನೀವು ಪ್ರತ್ಯಕ್ಷವಾಗಿ ನನ್ನವರಾಗಿದ್ದು ನಡೆಯುತ್ತೀರೆಂದರೆ, ಈ ಯುಕ್ತಿಯು ಕೆಲಸಕ್ಕೆ ಬರುತ್ತದೆ. ಹೇಗೆ ಯಾರೇ ಯಾರನ್ನಾದರೂ ಮಡಿಲಿನ ಮಗುವಾಗುತ್ತದೆ, ನಂತರ ಅವರ ಹೆಸರೇ ಪ್ರತ್ಯಕ್ಷವಾಗಿ ನಡೆಯುತ್ತದೆಯಲ್ಲವೆ. ಅದೇರೀತಿ ನೀವೂ ಸಹ ಪ್ರತ್ಯಕ್ಷವಾಗಿ ನನ್ನವರಾಗಿದ್ದು ನಡೆಯುವುದರಿಂದ ನಿಮ್ಮದೇ ಭಾಗ್ಯವಾಗುತ್ತದೆ. ತಂದೆಯಂತು ಬಹಳ ಸೀದಾ, ಸಹಜ, ಅತ್ಯಂತ ಸಹಜವಾದ ಮಾತುಗಳನ್ನು ತಿಳಿಸುತ್ತಾರೆ. ಅದನ್ನೂ ಸಹ ನೋಡಿ, ಕೋಟಿಯಲ್ಲಿ ಕೆಲವರೇ ಧಾರಣೆ ಮಾಡುವವರು ಹೊರಬರುತ್ತಾರೆ.

ತಂದೆಯವರು ತಿಳಿಸುತ್ತಾರೆ – ಈ ಪುಟ್ಟ ಸಂಗಮಯುಗದಲ್ಲಿ ನಿಮ್ಮ ದೇಶವಾದ ಈ ಸಾಕಾರ ಪ್ರಪಂಚದಲ್ಲಿ, ನಿಮಗಾಗಿಯೇ ಬಂದಿರುವೆನು. ಅಂದಮೇಲೆ ಕೊನೆಪಕ್ಷ ಎಷ್ಟು ಸಮಯವಿದೆಯೋ ಅಷ್ಟು ಸಮಯವಂತು ನಮ್ಮ ಚಿಂತನೆ ಮಾಡಿರಿ. ಬಾಬಾರವರ ಮಕ್ಕಳಾಗಿದ್ದೀರೆಂದರೆ ಕೊನೆಪಕ್ಷ ಇಷ್ಟು ಸಮಯವಂತು ಶುದ್ಧವಾಗಿರಲಿ. ನಂತರದಲ್ಲಂತು ನಿಮ್ಮ ಪ್ರಾಲಬ್ಧವೇ ಅಂತಹದ್ದಾಗುತ್ತದೆ, ಯಾವುದರಲ್ಲಿ ನೀವು ಪರಿಶ್ರಮ ಪಡಬೇಕಾಗಿರುವುದಿಲ್ಲ. ಈಗ ಸ್ವಲ್ಪವೇ ಪರಿಶ್ರಮದ ಮಾತಿದೆ, ಈಗ ನೀವು ಏನಾದರೂ ಮಾಡಿ, ಎಲ್ಲವನ್ನೂ ಸಹನೆ ಮಾಡಿಯಾದರೂ ಪವಿತ್ರರಾಗುವ ಪ್ರತಿಜ್ಞೆಯನ್ನು ಮಾಡಿರಿ. ಅದರಲ್ಲಿ ತಮ್ಮ ಧೃಡತೆಯನ್ನಿಡಿ, ತಮ್ಮ ಧಾರಣೆಗಳಲ್ಲಿಯೇ ಇರುವಂತಹ ಸಂಪೂರ್ಣ ಪ್ರಯತ್ನದಲ್ಲಿರಿ. ತಂದೆಯು ನಿಮಗೆ ಸ್ಪಷ್ಟ ರೀತಿಯಿಂದ ತಿಳಿಸುತ್ತಾರೆ, ಇದನ್ನು ಕೇವಲ ಸ್ವಲ್ಪ ಸಮಯಕ್ಕಾಗಿ ಪರಿಶ್ರಮ ಪಡಬೇಕು. ನಾನು ನಿಮಗೆ ಮತ್ತ್ಯಾವುದೇ ಪರಿಶ್ರಮ ಕೊಡುವುದಿಲ್ಲ, ನಿಮಗೆಷ್ಟು ಸಿಗುತ್ತದೆಯೋ ಅದರ ಹೋಲಿಕೆಯಲ್ಲಿ ಇದೇನೂ ಪರಿಶ್ರಮವೇ ಅಲ್ಲ.

ಈಗ ತುಪ್ಪದ ಮಡಿಕೆಯಾಗಬಾರದು….. ಇದನ್ನು ಮಾಡುವೆನು,… ಅದು ಮಾಡುವೆನು…. ಪ್ರಪಂಚವೇನು ಹೇಳುತ್ತದೋ…. ಅವರೇನು ಹೇಳುವರೋ…. ಅರೆ! ಪ್ರಪಂಚವೇನು ಹೇಳುತ್ತದೆ… ಇದನ್ನು ಬಿಟ್ಟು ಬಿಡಿ. ಈಗ ಈ ಪ್ರಪಂಚವೇ ಹೋಗುವುದಿದೆ ಆದರೆ ಪಾಪ! ಅವರಿಗೇನಾದರೂ ಗೊತ್ತಿದೆಯೇ! ಆದ್ದರಿಂದ ತಂದೆಯು ಹೇಳುತ್ತಾರೆ – ಇದರ ಬಗ್ಗೆ ಚಿಂತಿಸಬಾರದು. ಈಗಂತು ಮೃತ್ಯುವೇ ಸನ್ಮುಖದಲ್ಲಿ ನಿಂತುಕೊಂಡಿದೆ, ನೀವಂತು ಇಷ್ಟು ಉದ್ದಗಲವಾಗಿ ಮಾಡಿಕೊಂಡು ಕುಳಿತಿದ್ದೀರಿ – ಎಲ್ಲವನ್ನೂ ವ್ಯರ್ಥ ಮಾಡುತ್ತಿದ್ದೀರಿ. ಈಗ ತಂದೆಯು ತಿಳಿಸುತ್ತಾರೆ – ವ್ಯರ್ಥವೆಲ್ಲವನ್ನೂ ಉಳಿತಾಯ ಮಾಡಿರಿ, ಈ ಶರೀರ ನಿರ್ವಹಣೆಗಾಗಿ ಭಲೆ ಎಷ್ಟು ಬೇಕು ಅಷ್ಟು ಮಾಡಿರಿ, ನಿಮ್ಮ ರಚನೆಯೊಂದಿಗೆ ಎಷ್ಟು ಲೆಕ್ಕಾಚಾರವಿದೆಯೋ ಅಷ್ಟು ಮಾಡಿರಿ, ನಾನು ಹೇಗೆ ಸಂಭಾಲನೆ ಮಾಡುವುದು! ಎಂದರೆ ಇದನ್ನು ನೀವೇ ಸಂಭಾಲಿಸಬೇಕು. ಯಾವುದು ಅವಶ್ಯಕವೋ ಅದರಲ್ಲಿ ನಿಮ್ಮನ್ನು ಮುಕ್ತಗೊಳಿಸುತ್ತೇನೆ ಆದರೆ ಈಗೇನು ರಚಿಸುತ್ತಿದ್ದೀರಿ, ಅದಕ್ಕಾಗಿ ಬೇಡವೆನ್ನುತ್ತೇನೆ ಏಕೆಂದರೆ ಈಗ ಅವರಂತು ಬೀಳಲೇಬೇಕು, ಅದರಲ್ಲಿ ತಮ್ಮ ಸಮಯವನ್ನೇಕೆ ವ್ಯರ್ಥವಾಗಿ ಕಳೆಯುತ್ತಿದ್ದೀರಿ. ಈ ವ್ಯರ್ಥ ಜಂಜಾಟಗಳಿಂದಲೇ ನೀವು ದುಃಖಿಯಾಗಿದ್ದೀರಿ, ಅದರಿಂದ ಹೇಗೆ ಮುಕ್ತರಾಗುವುದು ಎನ್ನುವುದನ್ನೇ ನಾನು ತಿಳಿಸುತ್ತೇನೆ. ಇಷ್ಟು ಮಾಡಿದರೂ ಅನೇಕ ನೆಪ/ಕಾರಣ ಕೊಡುತ್ತೀರೆಂದರೆ, ಇದು ಎಲ್ಲಿನ ರೀತಿಯಾಗಿದೆ? ಇಷ್ಟಾದರೂ ತಂದೆಯು ಹೇಳುತ್ತಾರೆ – ಈಗೇನಾದರೂ ನನಗೆ ಡೈರೆಕ್ಟ್ ಸಹಯೋಗ ಕೊಡುವುದಿಲ್ಲ, ಕೈ ಕೊಡುವುದಿಲ್ಲವೆಂದರೆ ನೋಡಿ, ನಾನಂತು ಆ ರೀತಿ ಮೂಗನ್ನಿಡಿದು ಕರೆದುಕೊಂಡು ಹೋಗುವೆನು. ಮೂಗನ್ನಿಡಿದರೆ ಆ ನಂತರ ಉಸಿರಿಡಿದುಕೊಳ್ಳುತ್ತದೆ, ನಂತರ ದುಃಖವಾಗುವುದು, ಶಿಕ್ಷೆಯನ್ನು ಅನುಭವಿಸಬೇಕಲ್ಲವೆ! ಆದ್ದರಿಂದ ಹೇಳುತ್ತಿದ್ದೇವೆ – ಈಗ ಕೈಯಲ್ಲಿ ಕೈ ಹಿಡಿದು ನೇರವಾಗಿ ನಡೆಯುವ ಸಮಯ ಬಂದು ಬಿಟ್ಟಿದೆ. ಈಗೇನಾದರೂ ನೇರವಾಗಿ ನಡೆಯದಿದ್ದರೆ, ನಮ್ಮ ಕೈಯಂತು ನಿಮ್ಮ ಮೂಗನ್ನಿಡಿಯುತ್ತದೆ ಆದ್ದರಿಂದ ನೋಡಿ ಏನು ಮಾಡುವಿರಿ! ಆ ಸಮಯದಲ್ಲಂತು ಏನು ಮಾಡಲೂ ಸಾಧ್ಯವಿಲ್ಲ, ಏನೂ ಆಗಲು ಸಾಧ್ಯವಿಲ್ಲ. ಆದ್ದರಿಂದ ತಂದೆಯು ಹೇಳುತ್ತಾರೆ – ಮಕ್ಕಳೇ, ಈಗ ನೀವು ನನ್ನವರಾಗಿದ್ದು, ನನ್ನ ಬಳಿ ಬಂದು, ನನ್ನ ಮಾತುಗಳನ್ನು ಕೇಳುತ್ತಾ ಇದ್ದರೂ ಸಹ ಏನೂ ಮಾಡದಿದ್ದರೆ ಬಹಳ ಕಠಿಣ ಶಿಕ್ಷೆಗಳಾಗುವುದು, ಆದ್ದರಿಂದ ಯಾರಿಗೆ ಪಾಪ! ಗೊತ್ತಿಲ್ಲವೋ ಅವರ ಮಾತಂತು ಬೇರೆ ಆದರೆ ಯಾರು ಕುಳಿತು-ಕೇಳಿಸಿಕೊಳ್ಳುತ್ತಾ, ನಂತರ ಇದೇ ಮಾತುಗಳಲ್ಲಿ ತಪ್ಪಾಗುತ್ತದೆಯೆಂದರೆ ಅವರಿಗೆ ಕ್ಷಮೆಯಿಲ್ಲ. ಹೇಗೆ 10 ಪಟ್ಟು ಲಾಭವಿದೆಯೋ ಹಾಗೆಯೇ 10 ಪಟ್ಟು ನಷ್ಟವಾಗುವುದು. ಆದ್ದರಿಂದ ಈಗ ತಮ್ಮ ನಷ್ಟವನ್ನು, ಹಾನಿಯನ್ನು….. ಬಹಳ ಚೆನ್ನಾಗಿ ತಿಳಿದುಕೊಳ್ಳಿರಿ ಎಂದು ಹೇಳುತ್ತೇವೆ. ಬಹಳ ಚೆನ್ನಾಗಿ ಸ್ವಲ್ಪವಾದರೂ ತಮ್ಮ ಬುದ್ಧಿಯನ್ನು ತೆರೆಯಿರಿ. ಈಗ ತಂದೆಯೊಂದಿಗೆ ಬುದ್ಧಿಯೋಗವನ್ನು ಇಡುತ್ತೀರೆಂದರೆ ಶಕ್ತಿ ಸಿಗುವುದು. ಆದ್ದರಿಂದ ಇವೆಲ್ಲಾ ಮಾತುಗಳನ್ನು ತಿಳಿಯಿರಿ, ಮರೆಯಬಾರದು.

ಈಗ ಯಾವ ಸಮಯ ನಡೆಯುತ್ತಿದೆಯೋ ಅದನ್ನು ಗುರುತಿಸಿರಿ, ಸ್ವಲ್ಪವಾದರೂ ಕಣ್ಣು ತೆರೆಯಿರಿ, ಬುದ್ಧಿ ತೆರೆಯಿರಿ ಮತ್ತು ಸಮಯದ ಪೂರ್ಣ ಲಾಭವನ್ನು ಪಡೆದುಕೊಳ್ಳಿ ಮತ್ತು ತಮ್ಮ ಅದೃಷ್ಟವೆಲ್ಲವನ್ನೂ ಜಾಗೃತಗೊಳಿಸಿರಿ. ಎಂತಹ ಸಂಗವೋ ಅಂತಹ ರಂಗೇರುತ್ತದೆ ಎಂದೂ ಸಹ ಹೇಳುತ್ತಾರೆ ಆದ್ದರಿಂದ ಯಾರಲ್ಲೀಗ ಈ ಧಾರಣೆಯು ಆಗಿಲ್ಲವೋ ಅವರಿಗೆ ಮಾಯೆಯ ಸಂಗವಂತು ಹಿಡಿದಿರುತ್ತದೆ, ಆದ್ದರಿಂದ ಹೇಳುತ್ತೇವೆ – ಕೆಟ್ಟದನ್ನು ಕೇಳಬಾರದು, ಕೆಟ್ಟದ್ದನ್ನು ನೋಡಬಾರದು, ಕೆಟ್ಟದ್ದನ್ನು ಚಿಂತನೆ ಮಾಡಬಾರದು….. ಕೆಲವು ಅಂತಹ ಕೆಟ್ಟ ಗುಣಗಳಿವೆ, ಅದು ಇಲ್ಲಿರುವವಲ್ಲಿಯೂ ಕೆಲವರನ್ನು ಬಿಡುವುದಿಲ್ಲ, ಆನಂತರ ಒಬ್ಬರಿನ್ನೊಬ್ಬರ ಸಂಗದೋಷದಲ್ಲಿ ಬಂದು ಬಿಡುತ್ತಾರೆ. ಅದಕ್ಕಾಗಿಯೇ ಹೇಳುತ್ತೇವೆ – ಅಂತಹ ಸಂಗದೋಷದಿಂದ ಪಾರಾಗಿರಿ (ಸುರಕ್ಷಿತವಾಗಿರಿ). ಈ ರೀತಿಯೂ ತಿಳಿಯಬಾರದು – ಸಂಗದೋಷವಂತು ಹೊರಗಿದೆ, ಇಲ್ಲಿಲ್ಲ. ಇಲ್ಲಿಯೂ ಸಹ ಸುತ್ತಾಡುತ್ತಿರುತ್ತದೆ ಏಕೆಂದರೆ ಅವನ ರಾಜ್ಯವಿದೆಯಲ್ಲವೆ. ಆದ್ದರಿಂದ ತಂದೆಯು ಹೇಳುತ್ತಾರೆ – ಬಹಳ ಚೆನ್ನಾಗಿ ಕವಚವನ್ನು ಧರಿಸಿಕೊಂಡಿರಿ, ಕವಚವಿದ್ದರೆ ಅದರ ಗುಂಡು ನಾಟುವುದಿಲ್ಲ. ಯೋಗವೇ ಕವಚವಾಗಿದೆ, ಜ್ಞಾನವು ಖಡ್ಗವಾಗಿದೆ- ತಮ್ಮಬಳಿ ಇವೆಲ್ಲಾ ಅಸ್ತ್ರಶಸ್ತ್ರಗಳನ್ನು ಬಹಳಷ್ಟು ಕಾಪಾಡಿಕೊಂಡು ಇಟ್ಟುಕೊಳ್ಳಿರಿ.

ಯಾರು ಮಾಡುತ್ತಾರೆಯೋ ಅವರು ಪಡೆಯುವರು ಎಂದೂ ಸಹ ಹೇಳಲಾಗುತ್ತದೆ, ಇದಂತು ಭವಿಷ್ಯ ಪ್ರಾಲಬ್ಧವನ್ನು ಮಾಡಿಕೊಳ್ಳುವ ಮಾತಾಗಿದೆ. ಇಲ್ಲಂತು ಪ್ರಾಲಬ್ಧವನ್ನು ಅನುಭವಿಸುವುದಿಲ್ಲ, ಇಲ್ಲಿ ಯಾವುದೇ ಗುರುಗಳಾಗಿಯೂ ಕುಳಿತಿಲ್ಲ. ಇದರಲ್ಲಿ ಯಾವುದೇ ಗೊಂದಲ ಮಾಡಿಕೊಳ್ಳಬಾರದು ಆದ್ದರಿಂದ ಇವೆಲ್ಲವನ್ನೂ ತಿಳಿಸಲಾಗುತ್ತದೆ. ಅದಕ್ಕಾಗಿ ಇವೆಲ್ಲಾ ಮಾತುಗಳನ್ನು ಗಮನದಲ್ಲಿ ಇಟ್ಟುಕೊಳ್ಳುತ್ತಾ, ತಮ್ಮನ್ನು ಸುರಕ್ಷತೆಯಿಂದ ಇಡಬೇಕಾಗಿದೆ. ಇಲ್ಲಿ ಯಾವುದೇ ಖರ್ಚು ಇತ್ಯಾದಿಯ ಮಾತುಗಳಾಗಬಾರದು. ಈಗ ಇವೆಲ್ಲಾ ಖರ್ಚುಗಳನ್ನು ಅನ್ಯರ ಕಲ್ಯಾಣಾರ್ಥವಾಗಿ ಉಪಯೋಗಿಸಬೇಕು. ಇದೇ ಕಾರ್ಯಕ್ಕಾಗಿ ಒಂದೊಂದು ಪೈಸೆಯನ್ನು ಉಪಯೋಗಿಸಬೇಕು. ಒಳ್ಳೆಯದು!

ಇನ್ನೊಂದು ಮುರುಳಿ: “ಏರುವ ಕಲೆಯಲ್ಲಿ ಹೋಗಬೇಕೆಂದರೆ ತಮ್ಮ ಜೀವನದ ಎಲ್ಲಾ ಜವಾಬ್ದಾರಿಗಳನ್ನು ಅವರ ಕೈಯಲ್ಲಿ ಸಮರ್ಪಣೆ ಮಾಡಿಬಿಡಿ”

ಬಹಳ ಮನುಷ್ಯರು ಇಂತಹ ಪ್ರಶ್ನೆಯನ್ನು ಕೇಳುತ್ತಾರೆ, ಇಷ್ಟೆಲ್ಲಾ ಜ್ಞಾನವನ್ನು ಕೇಳುತ್ತಿದ್ದರೂ ನಮ್ಮ ಸ್ಥಿತಿಯು ವೃದ್ಧಿಯಾಗುತ್ತಿಲ್ಲ-ಏಕೆ? ವೃದ್ಧಿಯಾಗುವುದರಲ್ಲಿ ಅಡಚಣೆಗಳೇಕೆ? ಯಾರು ಈ ಮಾರ್ಗದಲ್ಲಿ ನಡೆಯುವಂತಹ ಹೆಜ್ಜೆಯನ್ನಿಟ್ಟರು, ಅವರ ಪ್ರತಿ ಈ ತಿಳುವಳಿಕೆಯನ್ನು ಕೊಡಲಾಗುತ್ತದೆ. ಆದರೆ ಎಲ್ಲಿಯವರೆಗೆ ತನ್ನ ಜೀವನವನ್ನು ಮನ-ವಾಣಿ-ಕರ್ಮ ಸಮೇತವಾಗಿ ಅರ್ಪಣೆಯಾಗಿ, ಇವರ ಮಗುವಾಗಲಿಲ್ಲವೋ ಅಲ್ಲಿಯವರೆಗೆ ಅವರಿಗೆ ಅತೀಂದ್ರಿಯ ಸುಖದ ಅನುಭೂತಿಯಾಗಲು ಸಾಧ್ಯವಿಲ್ಲ. ಇದೊಂದು ಈಶ್ವರೀಯ ನಿಯಮವಾಗಿದೆ, ತಾವು ಯಾವಾಗ ಅವರ ಆಶ್ರಯವನ್ನು ಪಡೆದಿದ್ದೀರೆಂದಾಗ, ಹೃದಯದಿಂದ ಅವರಮುಂದೆ ಜೀವನವನ್ನು ಅರ್ಪಣೆ ಮಾಡಿ ಬಿಡಬೇಕು ಅರ್ಥಾತ್ ಸಂಪೂರ್ಣವಾಗಿ ವಾರಸುಧಾರನಾಗಿ ಆಸ್ತಿಯನ್ನು ಪಡೆಯಬೇಕಾಗಿದೆ. ಈ ನಶೆಯಲ್ಲಿ ಇರುವುದರಿಂದ ಆ ಸ್ಥಿತಿಯಲ್ಲಿ ಉಲ್ಲಾಸವು ತುಂಬಿ ಬಿಡುತ್ತದೆ, ಅದಾದ ನಂತರ ಜ್ಞಾನದ ಧಾರಣೆ ಆಗುವುದರಿಂದ ಅನ್ಯರನ್ನೂ ತಮ್ಮ ಸಮಾನ ಮಾಡಿಕೊಳ್ಳುವ ಶಕ್ತಿಯು ಬರುತ್ತದೆ. ಬಾಕಿ ಈ ರೀತಿ ತಿಳಿಯಬಾರದು- ಮಾನಸಿಕವಾಗಿ ನಾವು ಅರ್ಪಣೆಯಾಗಿದ್ದೇವೆ. ಅಲ್ಲ. ಇದಂತು ತಮ್ಮನ್ನು ಮೋಸ ಮಾಡಿದಂತೆ. ಯಾವಾಗ ಬಾಬಾರವರು ಪ್ರತ್ಯಕ್ಷದಲ್ಲಿ ಬಂದಿದ್ದಾರೆ ಅಂದಮೇಲೆ ಪ್ರತ್ಯಕ್ಷದಲ್ಲಿಯೇ ಮಕ್ಕಳಾಗಿರಿ, ನಂತರ ಬಾಬಾರವರು ಆ ಮಕ್ಕಳ ಜನ್ಮಪತ್ರಿಕೆಯನ್ನು ತಿಳಿದುಕೊಂಡು, ಹೇಗಾದರೂ ಮಾಡಿ ಡೈರೆಕ್ಷನ್ನಂತೆ ನಡೆಸುತ್ತಾರೆ. ಅದರಲ್ಲಿ ಮೊದಲು ಸ್ವಲ್ಪ ಕಷ್ಟವಾಗುತ್ತದೆ ಆದರೆ ಅಂತ್ಯದಲ್ಲಿ ತಿಳಿಯುವಿರಿ – ಇದರಲ್ಲಿಯೇ ನಮ್ಮ ಏರುವ ಕಲೆ ಇದೆ. ತಮ್ಮ ಜೀವನದ ಎಲ್ಲಾ ಜವಾಬ್ದಾರಿಗಳನ್ನು ಅವರ ಕೈಯಲ್ಲಿ ಸಮರ್ಪಣೆ ಮಾಡಿ ಬಿಡಬೇಕು. ಬಾಕಿ ಯಾರೂ ಸಹ ಗುರುವಿನ ಹಿಂದೆ ಗುರುವಾಗಿ, ಅವರ ಗದ್ದುಗೆಯ ಮೇಲೆ ಕುಳಿತುಕೊಳ್ಳಬಾರದು. ಈಗ ಇವೆಲ್ಲಾ ಮಾತುಗಳನ್ನು ಬುದ್ಧಿಯಲ್ಲಿ ಇಟ್ಟುಕೊಂಡಾಗಲೇ ಸ್ಥಿತಿಯು ಶ್ರೇಷ್ಠವಾಗಲು ಸಾಧ್ಯವಿದೆ. ಒಂದುವೇಳೆ ಶ್ರೇಷ್ಠ ಮಟ್ಟ ಹೋಗುತ್ತಿಲ್ಲವೆಂದರೆ, ಅವಶ್ಯವಾಗಿ ತಮ್ಮದೇ ಹೃದಯ ಅಥವಾ ಧಾರಣೆಗಳಲ್ಲಿ ಸ್ವಲ್ಪ ಕೊರತೆಯಿದೆ. ತಿಳಿಯಿತೆ. ಒಳ್ಳೆಯದು – ಮಧುರಾತಿ ಮಧುರ ಮಕ್ಕಳಿಗೆ ನೆನಪು-ಪ್ರೀತಿ, ಸುಪ್ರಭಾತ.

ವರದಾನ:-

ಹೇಗೆ ನಕ್ಷತ್ರಗಳ ಸಂಘಟನೆಯಲ್ಲಿಯೂ, ವಿಶೇಷ ನಕ್ಷತ್ರಗಳ ಹೊಳಪು ದೂರದಿಂದಲೇ ಭಿನ್ನ-ಪ್ರಿಯವೆನಿಸುತ್ತದೆ. ಹಾಗೆಯೇ ತಾವು ನಕ್ಷತ್ರಗಳು ಸಾಧಾರಣೆ ಆತ್ಮರ ಮಧ್ಯೆಯೂ ಒಂದು ವಿಶೇಷ ಆತ್ಮರಾಗಿ ಕಾಣಿಸಬೇಕು, ಸಾಧಾರಣ ರೂಪದಲ್ಲಿದ್ದರೂ ಅಸಾಧಾರಣ ಅಥವಾ ಅಲೌಕಿಕ ಸ್ಥಿತಿಯಿರಲಿ, ಇದರಿಂದ ಸಂಘಟನೆಯ ಮಧ್ಯೆ ಅಲ್ಲಾಹ್ನ ಜನರು ಕಾಣಿಸಿಕೊಳ್ಳುವರು. ಇದಕ್ಕಾಗಿ ಅಂತರ್ಮುಖಿಯಾಗಿರುತ್ತಾ, ನಂತರದಲ್ಲಿ ಬಾಹರ್ಮುಖತೆಯಲ್ಲಿ ಬರುವ ಅಭ್ಯಾಸವಿರಲಿ. ಸದಾ ಶ್ರೇಷ್ಠ ಸ್ವರೂಪ ಅಥವಾ ನಶೆಯಲ್ಲಿ ಸ್ಥಿತರಾಗಿದ್ದು, ಜ್ಞಾನ ಪೂರ್ಣರಾಗುವುದರ ಜೊತೆಗೆ ಶಕ್ತಿಪೂರ್ಣರಾಗಿದ್ದು ಜ್ಞಾನ ಕೊಡುತ್ತೀರೆಂದರೆ, ಅನೇಕ ಆತ್ಮರುಗಳನ್ನು ಅನುಭವಿಯನ್ನಾಗಿ ಮಾಡಬಹುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top