24 July 2021 KANNADA Murli Today | Brahma Kumaris
Read and Listen today’s Gyan Murli in Kannada
23 July 2021
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
“ಮಧುರ ಮಕ್ಕಳೇ - ನೀವು ತಂದೆಯ ಬಳಿ ತಮ್ಮ ಜೀವನವನ್ನು ವಜ್ರ ಸಮಾನ ಮಾಡಿಕೊಳ್ಳಲು ಬಂದಿದ್ದೀರಿ, ತಂದೆಯ ನೆನಪಿನಿಂದಲೇ ಇಂತಹ ಜೀವನವಾಗುವುದು”
ಪ್ರಶ್ನೆ:: -
ಹೊಸ ಪ್ರಪಂಚದಲ್ಲಿ ಶ್ರೇಷ್ಠ ಪದವಿಗಾಗಿ ಯಾವ ಒಂದು ಮುಖ್ಯ ಪುರುಷಾರ್ಥ ಮಾಡಬೇಕಾಗಿದೆ?
ಉತ್ತರ:-
ತಂದೆಯು ಹೇಳುತ್ತಾರೆ – ಮಧುರ ಮಕ್ಕಳೇ, ಯಾವ ಹಳೆಯ ಸಂಬಂಧಿಗಳು ಇಷ್ಟೊಂದು ದುಃಖಿಯನ್ನಾಗಿ ಮಾಡಿದರು, ಈಗ ಅವರ ಮೋಹ ಜಾಲದಿಂದ ಬುದ್ಧಿಯನ್ನು ತೆಗೆದು ನನ್ನೊಬ್ಬನನ್ನೇ ನೆನಪು ಮಾಡಿರಿ. ಅವರ ಜೊತೆಯಿದ್ದರೂ ಸಹ ಮನಸ್ಸನ್ನು ನನ್ನಲ್ಲಿಡಿ. ಮನ್ಮನಾಭವದ ಮಂತ್ರವನ್ನು ಸದಾ ನೆನಪಿಟ್ಟುಕೊಳ್ಳಿ, ಆಗ ನೀವು ಹೊಸ ಪ್ರಪಂಚದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ.
♫ ಕೇಳು ಇಂದಿನ ಮುರ್ಲಿ (audio)➤
ಗೀತೆ:-
ನೀನು ರಾತ್ರಿಯನ್ನು ನಿದ್ರೆಯಲ್ಲಿ ಕಳೆದೆ, ಹಗಲನ್ನು…..
ಓಂ ಶಾಂತಿ. ಹೇಗೆ ಮಕ್ಕಳಿಗೆ ಎಲ್ಲಾ ಶಾಸ್ತ್ರಗಳ ಸಾರವನ್ನು ತಿಳಿಸುತ್ತೇನೆಯೋ ಹಾಗೆಯೇ ಈ ಹಾಡುಗಳ ಸಾರವನ್ನೂ ನಿಮಗೆ ತಿಳಿಸುತ್ತೇನೆ. ತಂದೆಯೇ ಎಲ್ಲರ ಆತ್ಮಿಕ ತಂದೆಯಾಗಿದ್ದಾರೆ, ಆತ್ಮಿಕ ಮಕ್ಕಳಿಗೆ ಬ್ರಹ್ಮಾರವರ ತನುವಿನಲ್ಲಿ ಕುಳಿತು ತಿಳಿಸುತ್ತಿದ್ದಾರೆ. ತಂದೆಯು ತಿಳಿಸುತ್ತಾರೆ – ಹೇ ಮಕ್ಕಳೇ, ನೀವು ತಿಳಿದುಕೊಂಡಿದ್ದೀರಿ – ನಮ್ಮದು ವಜ್ರ ಸಮಾನ ಜನ್ಮವಾಗುತ್ತಿದೆ. ತಂದೆಯ ಬಳಿ ಬರುವುದೇ ವಜ್ರ ಸಮಾನ ಜನ್ಮವನ್ನು ಮಾಡಿಕೊಳ್ಳುವುದಕ್ಕಾಗಿ. ಸ್ವರ್ಗವಾಸಿಗಳದು ವಜ್ರ ಸಮಾನ ಜನ್ಮವೆಂದು ಹೇಳಲಾಗುತ್ತದೆ. ಕವಡೆಯ ಸಮಾನ ಜನ್ಮವು ನರಕವಾಸಿಗಳದ್ದಾಗಿದೆ. ನೀವು ಸಂಗಮಯುಗವನ್ನೂ ಸಹ ಅರಿತುಕೊಂಡಿದ್ದೀರಿ, ನಾವೀಗ ಸಂಗಮಯುಗ ವಾಸಿಗಳಾಗಿದ್ದೇವೆ. ಈ ಸಂಗಮಯುಗವು ಎಲ್ಲರಿಗಾಗಿ ಕಲ್ಯಾಣಕಾರಿಯಾಗಿದೆ. ಈ ಸಂಗಮಯುಗದಲ್ಲಿಯೇ ಸರ್ವರ ಗತಿ-ಸದ್ಗತಿಯಾಗುತ್ತದೆ. ಯಾರು ಮಾಡುತ್ತಾರೆ? ಪರಂಧಾಮದಿಂದ ಬರುವ ಯಾತ್ರಿಕ. ಅವರು ಯಾತ್ರಿಕನಾಗಿದ್ದಾರಲ್ಲವೆ. ನೀವು ಯಾತ್ರಿಕರಲ್ಲ, ನೀವು ಬಂದು ಹೋಗುವುದಿಲ್ಲ. ತಂದೆಯು ತಿಳಿಸುತ್ತಾರೆ – ನಾನು ಹಳೆಯ ಪ್ರಪಂಚದಲ್ಲಿ ಬಂದು ಮತ್ತೆ ಹಿಂತಿರುಗುತ್ತೇನೆ. ಮಕ್ಕಳಿಗೆ ತಿಳಿದಿದೆ – ಈ ಸೇವೆಯನ್ನು ಮಾಡುವವರು ಕೇವಲ ಒಬ್ಬರೇ ಯಾತ್ರಿಕನಾಗಿದ್ದಾರೆ, ಅವರು ಬಂದು ನಾವು ಮಕ್ಕಳ ಅತಿ ದೊಡ್ಡ ಸೇವೆ ಮಾಡುತ್ತಾರೆ. ಇಂತಹ ಸೇವೆಯನ್ನು ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ಸೇವೆಗಾಗಿಯೇ ಕರೆಯುತ್ತಾರೆ – ತಂದೆಯೇ ಬಂದು ಪತಿತರ ಸೇವೆ ಮಾಡಿರಿ ಎಂದು. ತಂದೆಯು ಹೇಳುತ್ತಾರೆ – ನಾನು ಮಕ್ಕಳ ಸೇವೆಗಾಗಿ ಬಂದಿದ್ದೇನೆ ಏಕೆಂದರೆ ಮಕ್ಕಳು ಬಹಳ ದುಃಖಿಯಾಗಿದ್ದಾರೆ. ನಮ್ಮ ದುಃಖ ದೂರ ಮಾಡಿ ಶಾಂತಿಯನ್ನು ಕೊಡಿ ಎಂದು ಕರೆಯುತ್ತಾರೆ. ಯಾವಾಗಲೂ ಎರಡು ಮಾತುಗಳು ನೆನಪಿರುತ್ತದೆ, ಸುಖ ಮತ್ತು ಶಾಂತಿ. ಇಲ್ಲಿ ದುಃಖ ಮತ್ತು ಅಶಾಂತಿ ಇದೆ ಆದ್ದರಿಂದಲೇ ತಂದೆಯನ್ನು ಕರೆಯುತ್ತಾರೆ. ತಂದೆಯೇ ಬಂದು ಇಡೀ ಸೃಷ್ಟಿಚಕ್ರದ ರಹಸ್ಯವನ್ನು ಮಕ್ಕಳಿಗೆ ತಿಳಿಸುತ್ತಾರೆ. ಮಕ್ಕಳು ತಿಳಿದುಕೊಂಡಿದ್ದೀರಿ – ಈಗ ಭಕ್ತಿಮಾರ್ಗವು ಸಮಾಪ್ತಿಯಾಗುತ್ತದೆ. ಕಲಿಯುಗದ ಅಂತ್ಯವೆಂದರೆ ಭಕ್ತಿಯು ಕೆಳಗಿಳಿಯುತ್ತಾ ಬರುತ್ತದೆ. ಜ್ಞಾನದಿಂದ ನಿಮ್ಮದು ಏರುವ ಕಲೆಯಾಗುತ್ತದೆ. ನೀವು ಶ್ರೇಷ್ಠಾತಿ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ ನಂತರ ಆ ಪ್ರಾಲಬ್ಧದ ಸುಖವು ಕಡಿಮೆ ಆಗತೊಡಗುತ್ತದೆ. ಭಕ್ತಿಯಂತೂ ಭಾರತದಲ್ಲಿರುವಷ್ಟು ಮತ್ತೆಲ್ಲಿಯೂ ಇಲ್ಲ, ಅರ್ಧಕಲ್ಪ ಭಕ್ತಿಯು ನಡೆಯುತ್ತದೆ. ಯಾವಾಗಿನಿಂದ ದ್ವಾಪರವು ಆರಂಭವಾಗುತ್ತದೆಯೋ ಮತ್ತು ಅನ್ಯ ಧರ್ಮಗಳು ಸ್ಥಾಪನೆಯಾಗಲು ಆರಂಭವಾಗುತ್ತದೆಯೋ ಆಗಿನಿಂದ ಭಕ್ತಿಯೂ ಆರಂಭವಾಗುತ್ತದೆ. ಭಕ್ತಿಯೂ ಸಹ ಮೊದಲು ಬಹಳ ಚೆನ್ನಾಗಿರುತ್ತದೆ. ಹೇಗೆ ಸ್ವರ್ಗವೂ ಸಹ ಮೊದಲು ಬಹಳ ಸುಂದರವಾಗಿರುತ್ತದೆ ನಂತರ ಕಳೆಯುತ್ತಾ ಹೋದಂತೆ ಕಲೆಗಳೂ ಕಡಿಮೆಯಾಗುತ್ತಾ ಹೋಗುತ್ತವೆ. ಭಕ್ತಿಯು ಆರಂಭವಾದಾಗ ಮೊಟ್ಟ ಮೊದಲು ಶಿವನ ಪೂಜಾರಿಗಳಾಗುತ್ತಾರೆ. ಅರ್ಧಕಲ್ಪ ಯಾವುದೇ ಪೂಜೆಯಾಗುವುದಿಲ್ಲ. ನಂತರ ಭಕ್ತಿಮಾರ್ಗವು ಆರಂಭವಾಗುತ್ತದೆ ಮತ್ತು ಅನ್ಯ ಧರ್ಮಗಳೂ ಸ್ಥಾಪನೆಯಾಗುತ್ತವೆ. ಪೂರ್ಣ ಅರ್ಧಕಲ್ಪ ಭಕ್ತಿಯು ನಡೆಯುತ್ತದೆ, ಇಷ್ಟೊಂದು ಭಕ್ತಿಯನ್ನು ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ಇದನ್ನೂ ಸಹ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಯಾವ ತಂದೆಯು ಎಲ್ಲರಿಗೆ ವಿಶೇಷವಾಗಿ ಭಾರತಕ್ಕೆ ಸದ್ಗತಿ ನೀಡುತ್ತಾರೆಯೋ, ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆಯೋ ಆ ದೂರ ದೇಶದ ಯಾತ್ರಿಕನು ನಾವು ಮಕ್ಕಳಿಗೆ ಪುನಃ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡಲು ಬಂದಿದ್ದಾರೆ, ಆಸ್ತಿಯೂ ಸಹ ಎಷ್ಟು ಬಲವಾಗಿತ್ತು! ಆದರೆ ಒಂದು ಮಾತೂ ಸಹ ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಭಾರತದಲ್ಲಿ ಎಷ್ಟೊಂದು ಭಕ್ತಿ ಮಾಡುತ್ತಾರೆ, ಎಷ್ಟೊಂದು ಮಂದಿರಗಳಿವೆ! ಭಾರತಖಂಡದಲ್ಲಿ ಅನೇಕ ಮಂದಿರಗಳಿವೆ. ಇದು ಯಾರ ಮಂದಿರವೆಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಮೊಟ್ಟ ಮೊದಲು ಶಿವ ತಂದೆಯ ಮಂದಿರವಾಗುತ್ತದೆ ನಂತರ ದೇವತೆಗಳ ಮಂದಿರವಾಗುತ್ತದೆ, ಆ ಮಂದಿರಗಳೂ ಸಹ ನಿಮ್ಮ ಸನ್ಮುಖದಲ್ಲಿ ನಿಂತಿದೆ. ಒಂದು ಕಡೆ ಶಿವ ತಂದೆಯ ಪೂಜೆ ಮಾಡುತ್ತಿರುತ್ತಾರೆ, ಇನ್ನೊಂದು ಕಡೆ ಶಿವ ತಂದೆಯು ನಿಮ್ಮನ್ನು ಪೂಜ್ಯರನ್ನಾಗಿ ಮಾಡುತ್ತಿದ್ದಾರೆ. ನೀವಿಲ್ಲಿ ಪೂಜ್ಯ ದೇವತೆಗಳಾಗಲು ಬಂದಿದ್ದೀರಿ, ಯಾರೆಲ್ಲಾ ದೇವತೆಗಳ ಪೂಜಾರಿಗಳಿದ್ದಾರೆಯೋ ವಾಸ್ತವದಲ್ಲಿ ಅವರೂ ಬಂದು ಇಲ್ಲಿ ಬ್ರಾಹ್ಮಣರಾಗುತ್ತಾರೆ. ನಿಧಾನ-ನಿಧಾನವಾಗಿ ವೃದ್ಧಿಯಾಗುತ್ತಾ ಹೋಗುತ್ತದೆ. ಎಲ್ಲರೂ ಒಟ್ಟಿಗೆ ಓದಲು ಸಾಧ್ಯವಿಲ್ಲ, ಸಮಯ ಹಿಡಿಸುತ್ತದೆ. ಕಲ್ಪದ ಮೊದಲೂ ಯಾರು ಓದಿದ್ದರೋ ಅವರೇ ಪುನಃ ಓದುತ್ತಾರೆ. ಒಬ್ಬರು ಇನ್ನೊಬ್ಬರಿಗೆ ಓದಿಸುತ್ತಾ ಇರಬೇಕಾಗಿದೆ. ಎಲ್ಲರಿಗೆ ತಂದೆ ಮತ್ತು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ ಯಾವುದರಿಂದ ಮನುಷ್ಯರು ಸ್ವರ್ಗದ ಮಾಲೀಕರಾಗಬಹುದು ಆ ರಹಸ್ಯವನ್ನು ಬಂದು ತಿಳಿದುಕೊಳ್ಳಿ. ಈ ನಾಟಕವು ಹೇಗೆ ಸುತ್ತುತ್ತದೆ ಎಂಬುದು ನೀವು ಮಕ್ಕಳ ಬುದ್ಧಿಯಲ್ಲಿದೆ. ಲಕ್ಷಾಂತರ ವರ್ಷಗಳ ಯಾವುದೇ ಕಥೆಯನ್ನು ತಿಳಿಸಲು ಸಾಧ್ಯವಿಲ್ಲ, ನಿಮಗೆ ತಿಳಿದಿದೆ – 5000 ವರ್ಷಗಳ ಮೊದಲು ಏನಿತ್ತು, ಯಾರ ರಾಜ್ಯವಿತ್ತು! ಭಾರತದಲ್ಲಿ ನಾವು ಪೂಜ್ಯ ದೇವತೆಗಳ ರಾಜ್ಯವಿತ್ತು, ನೆನಪು ಬಂದಿತಲ್ಲವೆ – ನಾವು ಪೂಜ್ಯರಾಗಿದ್ದೆವು ನಂತರ ಪೂಜಾರಿಗಳಾದೆವು. ನಾವೇ ಪೂಜ್ಯರಾಗಿದ್ದೆವು, ನಾವೇ 84 ಜನ್ಮಗಳನ್ನು ತೆಗೆದುಕೊಂಡೆವು ಎಂಬುದು ಮೊದಲು ತಿಳಿದಿರಲಿಲ್ಲ. 84 ಜನ್ಮಗಳ ಕಥೆಯು ಲಕ್ಷ್ಮೀ-ನಾರಾಯಣರದಾಗಿದೆ. ನೀವು ತಮ್ಮ 84 ಜನ್ಮಗಳ ಕಥೆಯನ್ನು ತಿಳಿಸುತ್ತೀರಿ. ಅವರಿಗಂತೂ ತಮ್ಮ ಕಥೆಯನ್ನು ಕುಳಿತು ಬರೆಯುವುದರಲ್ಲಿ ಬಹಳ ಸಮಯ ಹಿಡಿಸುತ್ತದೆ ಆದರೆ ನೀವು ಒಂದು ನಿಮಿಷದಲ್ಲಿ 84 ಜನ್ಮಗಳ ಕಥೆಯನ್ನು ತಿಳಿಸಬಲ್ಲಿರಿ. ಅವರಾದರೆ ಒಂದೊಂದು ಜನ್ಮದ ಕಥೆಯನ್ನು ಬರೆಯುತ್ತಾರೆ. ಬಾಲ್ಯದಲ್ಲಿ ಏನೇನು ಮಾಡಿದೆವು ಎಂಬುದನ್ನೂ ಸಹ ತಮ್ಮ ಕಥೆಯಾಗಿ ತಿಳಿಸುತ್ತಾರೆ. ನಾವು 84 ಜನ್ಮಗಳ ಚಕ್ರವನ್ನು ಹೇಗೆ ಸುತ್ತುತ್ತೇವೆ, ಇದು ಒಬ್ಬರ ಮಾತಲ್ಲ, ಅನೇಕ ಬ್ರಾಹ್ಮಣರಿದ್ದಾರೆ. ನೀವೇ ಈ ಚಕ್ರವನ್ನು ಅರಿತುಕೊಂಡಿದ್ದೀರಿ. ಈ ಚಕ್ರವನ್ನು ಅರಿತುಕೊಳ್ಳುವುದರಿಂದ ನೀವು ರಾಜ-ರಾಣಿಯರಾಗುತ್ತೀರಿ ಮತ್ತೆ ಅನ್ಯರನ್ನೂ ಮಾಡುತ್ತೀರಿ. ಭಾರತವಾಸಿಗಳು ಮಾಡುವಷ್ಟು ಭಕ್ತಿಯನ್ನು ಮತ್ತ್ಯಾರೂ ಮಾಡುವುದಿಲ್ಲ, ಯಾವುದೆಲ್ಲಾ ಮಠ ಪಂಥ, ಧರ್ಮಗಳಿವೆಯೋ ಅವು ನಮ್ಮ ಭಕ್ತಿಯ ಸಮಯದಲ್ಲಿ ಸ್ಥಾಪನೆಯಾಗುತ್ತದೆ. ಮೊದಲು ನಮ್ಮದು ಎಷ್ಟು ಚಿಕ್ಕ ಹೂಗಳ ವೃಕ್ಷವಾಗಿತ್ತು, ಆತ್ಮಿಕ ಹೂದೋಟವಾಗಿತ್ತು, ನೀವು ಚೈತನ್ಯ ಹೂಗಳಾಗಿದ್ದಿರಿ. ಇದಕ್ಕೆ ಹೂವಿನ ಉದ್ಯಾನ ವನವೆಂದು ಹೇಳಲಾಗುತ್ತದೆ ಮತ್ತೆ ಅದೇ ಮುಳ್ಳುಗಳ ಅರಣ್ಯವಾಗುತ್ತಾ ಹೋಗುತ್ತದೆ. ಈ ಸಮಯದಲ್ಲಿ ಎಲ್ಲರೂ ಮುಳ್ಳುಗಳಾಗಿ ಬಿಟ್ಟಿದ್ದಾರೆ ಮತ್ತೆ ಮುಳ್ಳುಗಳಿಂದ ಹೇಗೆ ಹೂಗಳಾಗಬೇಕೆಂದು ತಂದೆಯು ತಿಳಿಸುತ್ತಾರೆ. ಒಬ್ಬರು ಇನ್ನೊಬ್ಬರಿಗೆ ದುಃಖ ಕೊಡುವುದು ಮುಳ್ಳು ಚುಚ್ಚುವುದಾಗಿದೆ. ವಿದ್ಯಾರ್ಥಿ ಜೀವನವು ಅತ್ಯುತ್ತಮ ಜೀವನವೆಂದು ಹೇಳಲಾಗುತ್ತದೆ. ಅದು ಬಹಳ ಚೆನ್ನಾಗಿರುತ್ತದೆ. ಮಕ್ಕಳು ಬಹಳ ಖುಷಿಯಲ್ಲಿ ಓದುತ್ತಿರುತ್ತಾರೆ, ವಿವಾಹವಾದರೆ ಸಾಕು ಒಬ್ಬರು ಇನ್ನೊಬ್ಬರಿಗೆ ಮುಳ್ಳು ಚುಚ್ಚುವುದು ಆರಂಭ ಮಾಡುವರು. ಸತ್ಯಯುಗದಲ್ಲಿ ಯಾರೂ ಈ ರೀತಿ ಮಾಡುವುದಿಲ್ಲ. ನೀವೀಗ ಮತ್ತೆ ಹೂಗಳಾಗುತ್ತೀರಿ. ನಿಮಗೆ ತಿಳಿದಿದೆ – ಭಾರತ ಸ್ವರ್ಗವಾಗಿತ್ತು ಆಗ ಎಷ್ಟೊಂದು ಅಪಾರ ಸುಖವಿತ್ತು! ಚಿನ್ನದ ಗಣಿಗಳಿತ್ತು, ಈಗ ಅದು ಖಾಲಿಯಾಗಿದೆ, ಮತ್ತೆ ನಿಮಗೆ ಚಿನ್ನವು ಸಮೃದ್ಧಿಯಾಗಿ ಸಿಗುವುದು. ಭಾರತದಲ್ಲಿಯೇ ಚಿನ್ನ-ವಜ್ರ, ವೈಡೂರ್ಯಗಳ ಗಣಿಗಳಿತ್ತು ಆ ಸಮಯದಲ್ಲಿ ಅಮೇರಿಕಾ ಮುಂತಾದುವುಗಳು ಯಾವುದೂ ಇರಲಿಲ್ಲ, ಬಾಂಬೆಯೂ ಸಹ ಇರಲಿಲ್ಲ. ಆಶ್ಚರ್ಯವಲ್ಲವೆ. ಕಲಿಯುಗದ ಅಂತ್ಯದಲ್ಲಿ ನೋಡಿ, ಕಾಣುವುದಕ್ಕೂ ಚಿನ್ನವು ಸಿಗುವುದಿಲ್ಲ ಮತ್ತೆ ಸತ್ಯಯುಗದಲ್ಲಿ ಇಷ್ಟೊಂದು ಚಿನ್ನದ ಗಣಿಗಳು ಸಮೃದ್ಧವಾಗಿ ಬಿಡುತ್ತವೆ, ಚಿನ್ನದ ಮಹಲುಗಳು ತಯಾರಾಗಿ ಬಿಡುತ್ತವೆ. ಅದ್ಭುತವಲ್ಲವೆ. ಅಲ್ಲಿ ಗಣಿಗಳಿಂದ ಎಷ್ಟೊಂದು ಚಿನ್ನವನ್ನು ಹೊರತೆಗೆಯುತ್ತಾರೆ, ಇಲ್ಲಿ ಹೇಗೆ ಮಣ್ಣಿನಿಂದ ಇಟ್ಟಿಗೆಗಳನ್ನು ತಯಾರಿಸುವರೋ ಹಾಗೆಯೇ ಅಲ್ಲಿ ಚಿನ್ನದಿಂದ ಇಟ್ಟಿಗೆಗಳು ತಯಾರಾಗುತ್ತವೆ. ಮಾಯಾ ಮಚ್ಛಂದರನ ಆಟವನ್ನು ತೋರಿಸುತ್ತಾರಲ್ಲವೆ. ಧ್ಯಾನದಲ್ಲಿ ನೋಡಿದಾಗ ಚಿನ್ನವೇ ಚಿನ್ನವಿತ್ತು, ಅವಶ್ಯವಾಗಿ ಸತ್ಯಯುಗದಲ್ಲಿ ಚಿನ್ನವೇ ಇರುವುದು. ಇಲ್ಲಿ ನೋಡಿ, ಮಣ್ಣಿನ ಇಟ್ಟಿಗೆಗಳೂ ಸಿಗುವುದಿಲ್ಲ. ಇಲ್ಲಿ ಎಷ್ಟು ರೂಪಾಯಿಗಳಿಗೆ ಇಟ್ಟಿಗೆಗಳು ಸಿಗುತ್ತವೆ, ಅಲ್ಲಿ ಅಷ್ಟು ಚಿನ್ನದ ಇಟ್ಟಿಗೆಗಳು ಸಿಗುತ್ತವೆ. ರಾತ್ರಿ-ಹಗಲಿನ ಅಂತರವಿದೆ ಅಂದಮೇಲೆ ಹೊಸ ಪ್ರಪಂಚದಲ್ಲಿ ಶ್ರೇಷ್ಠ ಪದವಿಯನ್ನೇ ಪಡೆಯುವ ಪುರುಷಾರ್ಥ ಏಕೆ ಮಾಡಬಾರದು. ಇಲ್ಲಿ ಮೋಹ ಜಾಲದಲ್ಲಿ ಏಕೆ ಸಿಕ್ಕಿ ಹಾಕಿಕೊಳ್ಳುವುದು!
ತಂದೆಯು ತಿಳಿಸುತ್ತಾರೆ – ಹಳೆಯ ಸಂಬಂಧಗಳಲ್ಲಿ ನೀವು ಎಷ್ಟೊಂದು ದುಃಖವನ್ನು ಪಡೆಯುತ್ತೀರಿ, ಇವನ್ನು ಬಿಟ್ಟು ಬಿಡಿ ಎಂದು ತಂದೆಯು ಹೇಳುವುದಿಲ್ಲ, ಕೇವಲ ಒಬ್ಬ ತಂದೆಯೊಂದಿಗೆ ನಿಮ್ಮ ಬುದ್ಧಿಯೋಗವನ್ನಿಡಿ. ಇದರಿಂದ ನೀವು ವಿಶ್ವದ ಮಾಲೀಕರಾಗಿ ಬಿಡುವಿರಿ. ಮನ್ಮನಾಭವದ ಅರ್ಥವೇ ಆಗಿದೆ – ನನ್ನನ್ನು ನೆನಪು ಮಾಡಿ ಮತ್ತು ವಿಷ್ಣು ಚತುರ್ಭುಜ ಅರ್ಥಾತ್ ವಿಷ್ಣುಪುರಿಯನ್ನು ನೆನಪು ಮಾಡಿರಿ. ಮೂಲ ಅಕ್ಷರವು ಒಂದೇ ಆಗಿದೆ – ಭಕ್ತಿಮಾರ್ಗದಲ್ಲಿ ಬಹಳಷ್ಟು ಪಂಚಾಯಿತಿ ಇದೆ. ಈಗ ನೀವೆಲ್ಲಾ ಆತ್ಮರು ಒಬ್ಬ ಪರಮಾತ್ಮ ಪ್ರಿಯತಮನಿಗೆ ಪ್ರಿಯತಮೆಯರಾಗಿದ್ದೀರಿ. ಅವರು ನಿಮ್ಮನ್ನು ಸುಖಧಾಮದ ಮಾಲೀಕರನ್ನಾಗಿ ಮಾಡುತ್ತಾರೆ. ಎಲ್ಲಾ ಆತ್ಮರು ಅವರನ್ನು ನೆನಪು ಮಾಡುತ್ತಾರೆ, ನೀವು ಆತ್ಮಿಕ ಪ್ರಿಯತಮೆಯರು ಒಂದೇ ಬಾರಿ ಆತ್ಮಿಕ ಪ್ರಿಯತಮನ ಪ್ರೇಮಿಕೆಯರಾಗಿದ್ದೀರಿ. ಉಳಿದೆಲ್ಲಾ ಮನುಷ್ಯರು ದೈಹಿಕ ಪ್ರಿಯತಮ-ಪ್ರಿಯತಮೆಯರಾಗಿದ್ದಾರೆ. ಈಗ ಬೇಹದ್ದಿನ ಪ್ರಿಯತಮೆಯರಿಗೆ ಬೇಹದ್ದಿನ ಪ್ರಿಯತಮನು ಬಂದು ಸಿಕ್ಕಿದ್ದಾರೆ, ಬಂದು ನಮ್ಮನ್ನು ಪತಿತರಿಂದ ಪಾವನ ಮಾಡು ಎಂದು ಅವರಿಗೇ ಹೇಳುತ್ತಾರೆ, ಅವರೊಬ್ಬರನ್ನೇ ಕರೆಯುತ್ತಾರೆ. ನೀವು ತಿಳಿದುಕೊಂಡಿದ್ದೀರಿ – ನಾವಾತ್ಮರು ಪತಿತರಾಗಿದ್ದೇವೆ ಆದ್ದರಿಂದ ಪತಿತ-ಪಾವನ ಬನ್ನಿ ಎಂದು ಕರೆಯುತ್ತೇವೆ. ಕುಂಭ ಮೇಳವಾಗುತ್ತದೆ, ಎಷ್ಟೊಂದು ಮಂದಿ ಹೋಗಿ ಗಂಗಾ ಸ್ನಾನ ಮಾಡುತ್ತಾರೆ. ಇದರಿಂದ ಲಾಭವೇನೂ ಇಲ್ಲ, ಯಾರೂ ಪಾವನರಾಗುವುದೂ ಇಲ್ಲ. ಈಗ ತಂದೆಯು ಬಂದು ಜ್ಞಾನದ ಮಳೆಯನ್ನು ಸುರಿಸುತ್ತಾರೆ. ನಿಮ್ಮ ಮೇಲೆ ಜ್ಞಾನವೃಷ್ಟಿಯಾಗುತ್ತದೆ, ಇದರಿಂದ ಮುಳ್ಳಿನ ಕಾಡು ಹೂವಿನ ಉದ್ಯಾನವನ ಆಗಿ ಬಿಡುವುದು. ನಿಮಗೆ ತಿಳಿದಿದೆ – ನಮ್ಮ ರಾಜ್ಯವಿದ್ದಾಗ ಅಲ್ಲಿ ಯಾರೂ ಪತಿತರಿರುವುದೇ ಇಲ್ಲ. ಇಡೀ ವಿಶ್ವದ ಮೇಲೆ ಜ್ಞಾನದ ಮಳೆಯಾಗುತ್ತದೆ, ಎಲ್ಲವೂ ಹಚ್ಚ ಹಸುರಾಗುತ್ತವೆ. ವಜ್ರ ವೈಡೂರ್ಯಗಳ ಗಣಿಗಳೂ ಸಹ ಹೊಸದಾಗಿ ಬಿಡುತ್ತವೆ. ಈಗ ನೀವು ಮಕ್ಕಳು ಎಷ್ಟೊಂದು ಖುಷಿಯಲ್ಲಿರಬೇಕು, ಸನ್ಮುಖದಲ್ಲಿ ನೋಡುತ್ತೀರಿ, ಬೇಹದ್ದಿನ ತಂದೆಯು ತಿಳಿಸುತ್ತಾರೆ – ನೀವು ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುವವು. ಭಲೆ ನೀವು ಎಲ್ಲಿಯಾದರೂ ಕುಳಿತುಕೊಳ್ಳಿ, ಸ್ನಾನ ಮಾಡುತ್ತಿದ್ದರೂ ಸಹ ಬುದ್ಧಿಯಲ್ಲಿ ತಂದೆಯ ನೆನಪಿರಲಿ. ಆ ಸಮಯದಲ್ಲಿ ನೆನಪು ಮಾಡಲು ಬಿಡುವಿರುತ್ತದೆ. ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ಸಂಪಾದನೆಯಿದೆ. ನೆನಪಿನಿಂದಲೇ ಸಂಪಾದನೆಯಾಗುವುದು. ನೆನಪಿನಿಂದ ಸಂಪಾದನೆಯಾಗುತ್ತದೆ ಎಂದು ಎಂದಾದರೂ ಕೇಳಿದ್ದೀರಾ!! ಎಷ್ಟು ದೊಡ್ಡ ಸಂಪಾದನೆಯಿದೆ, ನೀವು ವಿಷ್ಣುಪುರಿಗೆ ಮಾಲೀಕರಾಗಿ ಬಿಡುತ್ತೀರಿ. ನಿಮಗೆ ತಿಳಿದಿದೆ – ನಾವಾತ್ಮರ ತಂದೆಯು ನಿರಾಕಾರನಾಗಿದ್ದಾರೆ, ಅವರು ಈ ಶರೀರದ (ಬ್ರಹ್ಮಾ) ಆಧಾರ ತೆಗೆದುಕೊಂಡಿದ್ದಾರೆ, ಭಗೀರಥನ ವರ್ಣನೆಯಿದೆಯಲ್ಲವೆ. ಭಾಗ್ಯಶಾಲಿ ರಥವಾಗಿದೆ ಯಾವ ರಥದಲ್ಲಿ ಪರಮಪಿತ ಪರಮಾತ್ಮನು ಸವಾರಿ ಮಾಡುತ್ತಾರೆ. ಆತ್ಮಕ್ಕೆ ರಥವು ಯಾವಾಗ ರಥವು ತಯಾರಾಗಿ ಬಿಡುವುದೋ ಆಗ ಕೂಡಲೇ ಆತ್ಮವು ಬಂದು ಪ್ರವೇಶ ಮಾಡುತ್ತದೆ. ತಂದೆಯು ಈ ರಥದಲ್ಲಿ ಬಂದು ಕೇವಲ ಜ್ಞಾನವನ್ನು ತಿಳಿಸಬೇಕಾಗಿದೆ. ಇವರ ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿ ವಾನಪ್ರಸ್ಥ ಸ್ಥಿತಿಯಾದಾಗ ತಂದೆಯು ಹೇಳುತ್ತಾರೆ – ನಾನು ಬಂದು ಇವರಲ್ಲಿ ಪ್ರವೇಶ ಮಾಡುತ್ತೇನೆ. ಅಥವಾ ಈ ರಥದಲ್ಲಿ ವಿರಾಜಮಾನ ಆಗುತ್ತೇನೆ ಬಾಕಿ ಯಾವುದೇ ಕುದುರೆ ಗಾಡಿಯ ರಥದ ಮಾತಿಲ್ಲ. ಈಗ ನಿಮಗೆ ಈ ಜ್ಞಾನವು ಸಿಕ್ಕಿದೆ. ತಂದೆಯು ಕುಳಿತು ನೀವು ಮಕ್ಕಳಿಗೆ ಸನ್ಮುಖದಲ್ಲಿ ತಿಳಿಸುತ್ತಾರೆ. ನಿಮಗಂತೂ ಬಹಳ ಖುಷಿಯಿರಬೇಕು. ಐ.ಸಿ.ಎಸ್.,ನ ಪರೀಕ್ಷೆಯನ್ನು ಓದುತ್ತಾರೆಂದರೆ ಬಹಳ ನಶೆಯಿರುತ್ತದೆ, ಅದು ಎಲ್ಲದಕ್ಕಿಂತ ಉನ್ನತ ಪರೀಕ್ಷೆಯಾಗಿರುತ್ತದೆ. ನಿಮ್ಮದೂ ಸಹ ಇದು ವಿದ್ಯೆಯಾಗಿದೆ. ಇದು ಭಗವಂತನ ಪಾಠಶಾಲೆಯಾಗಿದೆ ಅಂದಮೇಲೆ ಈಗ ಪ್ರಶ್ನೆಯೂ ಉದ್ಭವವಾಗುತ್ತದೆ – ಭಗವಂತ ಯಾರು? ಶ್ರೀಕೃಷ್ಣನೋ ಅಥವಾ ಶಿವ ತಂದೆಯೋ? ಎಲ್ಲರ ಭಗವಂತನು ಯಾರು? ಎಲ್ಲರೂ ಒಬ್ಬ ನಿರಾಕಾರನನ್ನು ಬಿಟ್ಟರೆ ಕೃಷ್ಣನನ್ನು ಒಪ್ಪುವುದಿಲ್ಲ. ಎಲ್ಲಾ ಆತ್ಮರಿಗೆ ತಂದೆಯು ನಿರಾಕಾರ ಪರಮಪಿತ ಪರಮಾತ್ಮನಾಗಿದ್ದಾರೆ, ಅವರು ಸದಾ ಪರಮಧಾಮದಲ್ಲಿರುತ್ತಾರೆ. ಮಕ್ಕಳನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಲು ಒಂದೇ ಬಾರಿ ಬರುತ್ತಾರೆ. ನೀವು ತಿಳಿದುಕೊಂಡಿದ್ದೀರಿ – ಆ ತಂದೆಯೇ ಕಲ್ಪ-ಕಲ್ಪವೂ ಬಂದು ನಮ್ಮನ್ನು ಗುಲಾಮರಿಂದ ರಾಜರನ್ನಾಗಿ ಮಾಡುತ್ತಾರೆ. ಭಾರತವು ಈಗ ಗುಲಾಮನಾಗಿದೆ ಅಲ್ಲವೆ! ಇನ್ನೊಂದು ಜನ್ಮದಲ್ಲಿ ಏನಾಗಬೇಕು ಎಂಬುದು ನಿಮಗೆ ಸಾಕ್ಷಾತ್ಕಾರವಾಗಿದೆ. ವಿನಾಶದ ಸಾಕ್ಷಾತ್ಕಾರವನ್ನು ನೋಡಿದ್ದೀರಿ, ಸ್ಥಾಪನೆಯ ಸಾಕ್ಷಾತ್ಕಾರವೂ ಆಗಿದೆ. ಭಗವಾನುವಾಚ – ನಾನು ನಿಮ್ಮನು ರಾಜಾಧಿ ರಾಜರನ್ನಾಗಿ ಮಾಡುತ್ತೇನೆ. ಬಹಳ ದಾನ-ಪುಣ್ಯ ಮಾಡಿದರೆ ಕೆಲವರಿಗೆ ಅಲ್ಪಕಾಲದ ಸುಖ ಸಿಗುತ್ತದೆ. ರಾಜರ ಬಳಿ ಜನ್ಮ ಪಡೆದು ಕೂಡಲೇ ಸತ್ತು ಹೋಗುತ್ತಾರೆ. ಕೆಲವರು ಗರ್ಭದಲ್ಲಿಯೇ ಸತ್ತು ಹೋಗುತ್ತಾರೆ, ಕೆಲವರು ಕುರುಡ-ಕುಂಟ, ಕಿವುಡನಾಗುತ್ತಾರೆ. ಎಂತಹ ಕರ್ಮ ಮಾಡುವರೋ ಅಂತಹ ಪದವಿಯನ್ನು ಪಡೆಯುತ್ತಾರೆ. ಈಗ ನಿಮ್ಮನ್ನು ರಾಜಾಧಿರಾಜರನ್ನಾಗಿ ಮಾಡುತ್ತೇನೆ. ಬಾಬಾ, ಬಲಿಹಾರಿಯಾಗುತ್ತೇವೆ ಎಂದು ನೀವು ಹೇಳುತ್ತೀರಿ ಅಂದಮೇಲೆ ಅವಶ್ಯವಾಗಿ ರಾಜ್ಯವನ್ನೂ ನೀವೇ ಪಡೆಯುತ್ತೀರಿ. ಭಾರತಕ್ಕೆ ಮಹಾದಾನಿ ಖಂಡವೆಂದು ಹೇಳಲಾಗುತ್ತದೆ. ಇಲ್ಲಿ ಬಹಳ ದಾನ ಪುಣ್ಯ ಮಾಡುತ್ತಾರೆ. ಇದು ಮತ್ತೆ ಭಕ್ತಿಮಾರ್ಗದಲ್ಲಿ ಪ್ರಾರಂಭವಾಗುತ್ತದೆ. ಆಗ ತಂದೆಯು ನಿಮಗೆ 21 ಜನ್ಮಗಳಿಗಾಗಿ ದಾನ ಕೊಡುತ್ತಾರೆ. ನೀವೀಗ ತಂದೆಗೆ ಬಲಿಹಾರಿಯಾಗುತ್ತೀರಿ, ತನು-ಮನ-ಧನ ಎಲ್ಲವನ್ನೂ ಕೊಟ್ಟು ಬಿಟ್ಟಿರಿ. ಈಗ ತಂದೆಯು ತಿಳಿಸುತ್ತಾರೆ – ಮಕ್ಕಳೇ, ಟ್ರಸ್ಟಿಯಾಗಿರಿ. ತಮ್ಮ ಗೃಹಸ್ಥವನ್ನೂ ಸಂಭಾಲನೆ ಮಾಡಿರಿ, ಎಲ್ಲವೂ ಶಿವ ತಂದೆಯದಾಗಿದೆ. ಬಾಬಾ, ನಾನು ನಿಮ್ಮವನಾಗಿದ್ದೇನೆ, ನಿಮ್ಮನ್ನೇ ನೆನಪು ಮಾಡುತ್ತೇನೆ ಎಂದು ಹೃದಯದಿಂದ ಸಮರ್ಪಣೆ ಮಾಡುತ್ತಾರೆ. ಆಗ ತಂದೆಯು ಹೇಳುತ್ತಾರೆ, ಭಲೆ ಮಹಲಿನಲ್ಲಿರಿ, ತಿನ್ನಿರಿ, ತಿರುಗಾಡಿರಿ. ಮೋಜನ್ನು ಆಚರಿಸಿ ಆದರೆ ಕೇವಲ ನನ್ನನ್ನು ನೆನಪು ಮಾಡಿದರೆ ನೀವು ಬಹಳ ಖುಷಿಯಲ್ಲಿ ಇರುತ್ತೀರಿ. ನೀವು ವಿಶ್ವದ ಮಾಲೀಕರಾಗಿದ್ದಿರಿ, ಈಗ ಪುನಃ ಪುರುಷಾರ್ಥ ಮಾಡಿ ಅವರಂತೆಯೇ ಆಗುತ್ತೀರಿ. ತಂದೆಯು ತಿಳಿಸುತ್ತಾರೆ – ಮಧುರಾತಿ ಮಧುರ ಮಕ್ಕಳೇ, ಯೋಗಬಲದಿಂದಲೇ ನೀವು ವಿಕರ್ಮಾಜೀತರಾಗುತ್ತೀರಿ, ತಂದೆಯ ಬಲದಿಂದ ನೀವು ವಿಶ್ವದ ಮಾಲೀಕರಾಗುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:-
1. ರಾಜ್ಯ ಪದವಿಯನ್ನು ಪಡೆಯಲು ತಂದೆಯ ಮೇಲೆ ಸಂಪೂರ್ಣ ಬಲಿಹಾರಿಯಾಗಬೇಕಾಗಿದೆ. ತನು-ಮನ-ಧನ ಎಲ್ಲವನ್ನೂ ಸಮರ್ಪಣೆ ಮಾಡಿ ಟ್ರಸ್ಟಿಯಾಗಿರಬೇಕಾಗಿದೆ. ವಿಕರ್ಮಾಜೀತರಾಗುವ ಪುರುಷಾರ್ಥ ಮಾಡಿರಿ.
2. ನೆನಪಿನಲ್ಲಿಯೇ ಸಂಪಾದನೆಯಿದೆ ಆದ್ದರಿಂದ ನಿರಂತರ ನೆನಪಿನಲ್ಲಿರುವ ಪುರುಷಾರ್ಥ ಮಾಡಬೇಕಾಗಿದೆ. ಇಂತಹ ಆತ್ಮಿಕ ಹೂಗಳಾಗಬೇಕು ಯಾವುದರಿಂದ ಹೂಗಳ ಪ್ರಪಂಚದ ಅಧಿಕಾರಿಯಾಗಬೇಕಾಗಿದೆ. ಒಳಗೆ ಯಾವುದೇ ಮುಳ್ಳು ಇರಬಾರದು.
ವರದಾನ:-
ಪ್ರತಿಯೊಂದು ಸಂಕಲ್ಪ, ಪ್ರತಿಯೊಂದು ಕರ್ಮವನ್ನು ತ್ರಿಕಾಲದರ್ಶಿ ಸ್ಥಿತಿಯಲ್ಲಿ ಸ್ಥಿತರಾಗಿದ್ದು ಮಾಡಿರಿ ಮತ್ತು ಪ್ರತಿಯೊಂದು ಮಾತಿನಲ್ಲಿಯೂ ನೋಡಿರಿ, ಇದೇಕೆ-ಇದೇನು ಎಂಬ ಪ್ರಶ್ನಾರ್ಥಕ ಚಿಹ್ನೆಯು ಆಗುತ್ತಿಲ್ಲವೆ, ಸದಾ ಪೂರ್ಣ ವಿರಾಮವಿರಲಿ. ಇದು ಹೊಸದೇನಲ್ಲ, ಪ್ರತಿಯೊಂದು ಆತ್ಮನ ಪಾತ್ರವನ್ನು ಬಹಳ ಚೆನ್ನಾಗಿ ತಿಳಿದುಕೊಂಡು ಪಾತ್ರದಲ್ಲಿ ಬನ್ನಿರಿ. ಆತ್ಮರುಗಳ ಸಂಬಂಧ-ಸಂಪರ್ಕದಲ್ಲಿ ಬರುತ್ತಾ ನಿರ್ಲಿಪ್ತ ಮತ್ತು ಪ್ರಿಯವಾಗಿ ಇರುವುದರಲ್ಲಿ ಸಮಾನತೆಯಿರಲಿ, ಇದರಿಂದ ಏರುಪೇರುಗಳೆಲ್ಲವೂ ಸಮಾಪ್ತಿಯಾಗಿ ಬಿಡುತ್ತವೆ. ಇದೇರೀತಿ ಸದಾ ಅಚಲ ಹಾಗೂ ಸಾಕ್ಷಿಯಾಗಿರುವುದೇ ನಂಬರ್ವನ್ ಭಾಗ್ಯಶಾಲಿ ಆತ್ಮನ ಲಕ್ಷಣವಾಗಿದೆ.
ಸ್ಲೋಗನ್:-
➤ Email me Murli: Receive Daily Murli on your email. Subscribe!