24 January 2022 KANNADA Murli Today | Brahma Kumaris

Read and Listen today’s Gyan Murli in Kannada

January 23, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - 21 ಜನ್ಮಗಳವರೆಗೆ ಸದಾ ಸುಖಿಯಾಗಲು ಈ ಸ್ವಲ್ಪ ಸಮಯದಲ್ಲಿ ದೇಹೀ-ಅಭಿಮಾನಿಯಾಗುವ ಅಭ್ಯಾಸ ಮಾಡಬೇಕು”

ಪ್ರಶ್ನೆ:: -

ದೈವೀ ರಾಜಧಾನಿ ಸ್ಥಾಪನೆ ಮಾಡುವ ಸಲುವಾಗಿ ಪ್ರತಿಯೊಬ್ಬರಲ್ಲೂ ಯಾವ ಆಸಕ್ತಿ ಇರಬೇಕಾಗುತ್ತದೆ?

ಉತ್ತರ:-

ಸೇವೆಯ ಆಸಕ್ತಿ ಇರಬೇಕು. ಜ್ಞಾನ ರತ್ನಗಳ ದಾನ ಹೇಗೆ ಮಾಡಬೇಕೆಂಬ ಆಸಕ್ತಿ ಇರಬೇಕು. ಪತಿತರನ್ನು ಪಾವನರನ್ನಾಗಿ ಮಾಡುವ ಸಂಸ್ಥೆ ನಿಮ್ಮದಾಗಿದೆ. ಆದುದರಿಂದ ಮಕ್ಕಳು ರಾಜಧಾನಿಯನ್ನು ವೃದ್ಧಿ ಮಾಡುವ ಸಲುವಾಗಿ ನಿರಂತರ ಸೇವೆ ಮಾಡಬೇಕು. ಎಲ್ಲಿಯಾದರು ಮೇಳ (ಜಾತ್ರೆ) ಮುಂತಾದವುಗಳು ನಡೆಯುವ ಕಡೆ ಮನುಷ್ಯರು ಸ್ನಾನ ಮಾಡಲು ಹೋಗುತ್ತಾರೆ, ಅಲ್ಲಿ ನೀವು ತಂದೆಯ ಸಂದೇಶವನ್ನು ಮುದ್ರಿಸಿ ಹಂಚಬೇಕು. ಎಲ್ಲಾ ಕಡೆ ಪ್ರಚಾರ ಮಾಡಬೇಕು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನಿಮ್ಮನ್ನು ಪಡೆದು ನಾವು ಜಗತ್ತನ್ನೆ ಪಡೆದೆವು…

ಓಂ ಶಾಂತಿ. ನಿರಾಕಾರ ಶಿವ ತಂದೆ ಕುಳಿತು ಮಕ್ಕಳಿಗೆ ತಿಳಿಸುತ್ತಿದ್ದಾರೆ – ಮಕ್ಕಳೇ ದೇಹೀ-ಅಭಿಮಾನಿ ಭವ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕು. ನಾವು ಆತ್ಮ ಆಗಿದ್ದೇವೆ, ನಮಗೆ ತಂದೆ ಓದಿಸುತ್ತಿದ್ದಾರೆ. ತಂದೆ ತಿಳಿಸಿಕೊಟ್ಟಿದ್ದಾರೆ-ಸಂಸ್ಕಾರವೆಲ್ಲವು ಆತ್ಮನಲ್ಲಿಯೇ ಇರುತ್ತದೆ. ರಾವಣ ರಾಜ್ಯ ಆರಂಭವಾದಾಗ ಅಥವಾ ಭಕ್ತಿ ಮಾರ್ಗ ಪ್ರಾರಂಭವಾದಾಗ ದೇಹಾಭಿಮಾನಿಗಳಾಗುತ್ತೀರಿ. ಮತ್ತೆ ಭಕ್ತಿ ಮಾರ್ಗದ ಅಂತ್ಯವಾದಾಗ ತಂದೆ ಬಂದು ಮಕ್ಕಳಿಗೆ ಈಗ ದೇಹೀ-ಅಭಿಮಾನಿಗಳಾಗಿ ಎಂದು ತಿಳಿಸಿಕೊಡುತ್ತಾರೆ. ನೀವು ಮಾಡಿದ ಜಪ, ತಪ, ದಾನ, ಪುಣ್ಯ ಮುಂತಾದವುಗಳಿಂದ ಯಾವ ಪ್ರಾಪ್ತಿಯೂ ಸಿಗಲಿಲ್ಲ. ಪಂಚ ವಿಕಾರಗಳು ನಿಮ್ಮಲ್ಲಿ ಪ್ರವೇಶವಾದ್ದರಿಂದ ನೀವು ದೇಹ-ಅಭಿಮಾನಿಗಳಾಗಿ ಬಿಟ್ಟಿರಿ. ರಾವಣ ನಿಮ್ಮನ್ನು ದೇಹಾಭಿಮಾನಿಯಾಗಿ ಮಾಡುತ್ತಾನೆ. ವಾಸ್ತವದಲ್ಲಿ ಮೂಲತಃ ನೀವು ಆತ್ಮಾಭಿಮಾನಿಗಳಾಗಿದ್ದವರು, ಈಗ ಪುನಃ ನಿಮಗೆ ಆತ್ಮ-ಅಭಿಮಾನಿಯಾಗುವ ಅಭ್ಯಾಸ ಮಾಡಿಸುತ್ತಿದ್ದಾರೆ. ತಮ್ಮನ್ನು ಆತ್ಮನೆಂದು ತಿಳಿದುಕೊಳ್ಳಿ. ನಾವು ಈ ಹಳೆಯ ಶರೀರವನ್ನು ಬಿಟ್ಟು ಹೊಸ ಶರೀರವನ್ನು ಪಡೆಯಬೇಕು. ಸತ್ಯಯುಗದಲ್ಲಿ ಈ ಪಂಚ ವಿಕಾರಗಳು ಇರುವುದಿಲ್ಲ. ದೇವೀ-ದೇವತೆಗಳಿಗೆ ಸದಾ ಪಾವನರೆಂದು ಕರೆಯಲಾಗುತ್ತದೆ, ಅವರು ಸದಾ ಆತ್ಮಾಭಿಮಾನಿ ಗಳಾಗಿರುವ ಕಾರಣ 21 ಜನ್ಮ ಸದಾ ಸುಖಿಯಾಗಿರುತ್ತಾರೆ. ಪುನಃ ರಾವಣ ರಾಜ್ಯವಾದಾಗ ನೀವು ದೇಹಾಭಿಮಾನದಲ್ಲಿ ಪರಿವರ್ತನೆಯಾಗುತ್ತೀರಿ. ದೇವತೆಗಳಿಗೆ ಆತ್ಮಾಭಿಮಾನಿಗಳೆಂದು, ರಾವಣನಿಗೆ ದೇಹಾಭಿಮಾನಿಯೆಂದು ಕರೆಯಲಾಗುತ್ತದೆ. ನಿರಾಕಾರಿ ಪ್ರಪಂಚದಲ್ಲಿ ದೇಹಾಭಿ ಮಾನ ಹಾಗೂ ಆತ್ಮಾಭಿಮಾನದ ಪ್ರಶ್ನೆ ಹೇಳುವುದಿಲ್ಲ. ಅದು ಶಾಂತಿಯ ಪ್ರಪಂಚವಾಗಿರುತ್ತದೆ. ಆ ಸಂಸ್ಕಾರವನ್ನು ನಾವು ಸಂಗಮಯುಗದಲ್ಲಿ ಮಾಡುಕೊಳ್ಳುತ್ತಿದೇವೆ. ಈಗ ನಿಮ್ಮನ್ನು ದೇಹಾಭಿಮಾನಿಯಿಂದ ಆತ್ಮಾಭಿಮಾನಿಯಾಗಿ ಮಾಡಲಾಗುತ್ತದೆ. ಸತ್ಯಯುಗದಲ್ಲಿ ನೀವು ಆತ್ಮಾಭಿಮಾನಿಯಾಗಿರುವ ಕಾರಣ ದುಃಖವಾಗುವುದಿಲ್ಲ. ಏಕೆಂದರೆ ನಾವು ಆತ್ಮಗಳಾಗಿದ್ದೇವೆಂದು ತಿಳಿದುಕೊಂಡಿರುತ್ತಾರೆ. ಇಲ್ಲಿ ಎಲ್ಲರು ತಮ್ಮನ್ನು ದೇಹವನ್ನು ತಿಳಿದುಕೊಂಡಿರುತ್ತಾರೆ. ತಂದೆ ಬಂದು ತಿಳಿಸಿಕೊಡುತ್ತಿದ್ದಾರೆ-ಮಕ್ಕಳೇ ಈಗ ಆತ್ಮಾಭಿಮಾನಿಯಾದರೆ ವಿಕರ್ಮ ವಿನಾಶ ವಾಗುತ್ತದೆ. ನೀವು ವಿಕರ್ಮಜೀತರಾಗಿ ಬಿಡುತ್ತೀರಿ. ಸತ್ಯಯುಗದಲ್ಲಿ ಶರೀರವನ್ನು ಪಡೆದಾಗ ಹಾಗೂ ರಾಜ್ಯ ಮಾಡುತ್ತಿದ್ದರೂ ಸಹ ಆತ್ಮಾಭಿಮಾನಿಗಳಾಗಿರುತ್ತೀರಿ. ನಿಮಗೆ ಈಗ ಸಿಗುವ ಶಿಕ್ಷಣದಿಂದ ಆತ್ಮಾಭಿಮಾನಿಯಾಗಿ ಬಿಡುತ್ತೀರಿ. ಸದಾ ಸುಖಿಗಳಾಗಿರುತ್ತೀರಿ. ಆತ್ಮಾಭಿಮಾನಿ ಆಗುವುದರಿಂದಲೇ ನಿಮ್ಮ ವಿಕರ್ಮ ವಿನಾಶವಾಗುತ್ತದೆ. ನನ್ನನ್ನು ನೆನಪು ಮಾಡುತ್ತಿದ್ದಾಗ ವಿಕರ್ಮ ವಿನಾಶವುಗುತ್ತದೆ ಎಂದು ತಂದೆ ತಿಳಿಸುತ್ತಿದ್ದಾರೆ. ಅವರು ಹೋಗಿ ಗಂಗಾ ಸ್ನಾನ ಮಾಡುತ್ತಾರೆ, ಆದರೆ ಗಂಗೆ ಪತಿತ ಪಾವನಿಯಲ್ಲ. ಅದು ಪಾಪ ಕರ್ಮ ನಾಶವಾಗುವ ಯೋಗಾಗ್ನಿ ಅಲ್ಲ. ಇಂತಹ ಸಂದರ್ಭಗಳಲ್ಲಿ ಮಕ್ಕಳಿಗೆ ಸೇವೆ ಮಾಡುವ ಅವಕಾಶ ಸಿಗುತ್ತದೆ. ಸಮಯಕ್ಕೆ ಅನುಗುಣವಾಗಿ ಸೇವೆ ಮಾಡಬೇಕು. ಅಲ್ಲಿಗೆ ಎಷ್ಟೊಂದು ಮನುಷ್ಯರು ಸ್ನಾನ ಮಾಡಲು ಹೋಗುತ್ತಾರೆ. ಕುಂಭಮೇಳಕ್ಕೆ ಎಲ್ಲಾ ಕಡೆಯ ಜನರು ಸ್ನಾನ ಮಾಡಲು ಹೋಗುತ್ತಾರೆ. ಕೆಲವರು ಸಾಗರದಲ್ಲಿ, ಕೆಲವರು ನದಿಗಳಲ್ಲಿ ಸ್ನಾನ ಮಾಡಲು ಹೋಗುತ್ತಾರೆ. ತಂದೆಯ ಸಂದೇಶವನ್ನು ಎಲ್ಲರಿಗೂ ಹಂಚಲು ಎಷ್ಟೊಂದು ಪತ್ರಿಕೆಗಳನ್ನು ಮುದ್ರಿಸಬೇಕಾಗುತ್ತದೆ. ತುಂಬಾ ಹಂಚಬೇಕು. ಕೇವಲ ಈ ಮಾತನ್ನು ತಿಳಿಸಿಕೊಡಿ-ಸಹೋದರಿಯರೇ-ಸಹೋದರರೇ ನೀವೇ ವಿಚಾರ ಮಾಡಿ ಪತಿತ ಪಾವನ, ಜ್ಞಾನ ಸಾಗರ ಹಾಗೂ ಅವರಿಂದ ಜ್ಞಾನ ಪಡೆದಂತಹ ಜ್ಞಾನ ನದಿಗಳ ಮುಖಾಂತರ ನೀವು ಪಾವನರಾಗಬಹುದೋ?ಅಥವಾ ಈ ನೀರಿನ ಸಾಗರ ಹಾಗು ನದಿಗಳಿಂದ ನೀವು ಪಾವನರಾಗುತ್ತೀರೋ?ಈ ಒಗಟನ್ನು ಬಿಡಿಸಿದರೆ ಒಂದು ಸೆಕೆಂಡಿನಲ್ಲಿ ನೀವು ಜೀವನ್ಮುಕ್ತಿಯನ್ನು ಪಡೆದುಕೊಳ್ಳುತ್ತೀರಿ. ರಾಜ್ಯ ಭಾಗ್ಯದ ಆಸ್ತಿಯನ್ನೂ ಸಹ ಪಡೆದುಕೊಳ್ಳುತ್ತೀರಿ. ಈ ರೀತಿ ಪ್ರತಿಗಳನ್ನು ಪ್ರತಿಯೊಂದು ಸೇವಾಕೇಂದ್ರದವರು ಮುದ್ರಿಸಬೇಕು. ನದಿಗಳಂತೂ ಎಲ್ಲಾ ಕಡೆ ಇರುತ್ತವೆ. ತುಂಬಾ ದೂರದವರಿಗೂ ಹರಿಯುತ್ತಿರುತ್ತವೆ. ನದಿಗಳು ಕೆಲವು ಕಡೆ ತುಂಬಾ ಇರುತ್ತವೆ. ಹಾಗಾದರೆ ಆ ನದಿಯಲ್ಲೇ ಸ್ನಾನ ಮಾಡಿದರೆ ಪಾವನರಾಗುತ್ತೇವೆಂದು ಏಕೆ ಹೇಳುತ್ತೀರಿ. ಒಂದೇ ಸ್ಥಾನಕ್ಕೆ ಅಷ್ಟೊಂದು ಖರ್ಚು ಮಾಡಿಕೊಂಡು ಏಕೆ ಹೋಗಿತ್ತೀರಿ? ಕೇವಲ ಒಂದು ದಿನ ಸ್ನಾನ ಮಾಡಿದರೆ ಪಾವನರಾಗಿ ಬಿಡುವುದಿಲ್ಲ. ಈ ರೀತಿ ಸ್ನಾನವನ್ನು ಜನ್ಮ-ಜನ್ಮಾಂತರದಿಂದ ಮಾಡುತ್ತಾ ಬಂದಿದ್ದೀರಿ. ಸತ್ಯಯುಗದಲ್ಲಿಯೂ ಸಹ ಸ್ನಾನ ಮಾಡುತ್ತೀರಿ ಆದರೆ ಅಲ್ಲಿ ಎಲ್ಲರು ಪಾವನರಾಗಿರುತ್ತೀರಿ. ಇಲ್ಲಿಯಾದರೋ ಚಳಿಯಲ್ಲಿ ಎಷ್ಟೊಂದು ಕಷ್ಟ ಪಟ್ಟು ಸ್ನಾನ ಮಾಡಲು ಹೋಗುತ್ತೀರಿ. ಅವರಿಗೆ ಈ ರೀತಿ ತಿಳಿಸಿಕೊಡುತ್ತಾ ಕುರುಡರಿಗೆ ಊರುಗೋಲಾಗಬೇಕು. ಅವರನ್ನು ಎಚ್ಚರ ಮಾಡಬೇಕು. ಪತಿತ ಪಾವನ ಬಂದು ಪಾವನ ಮಾಡುತ್ತಿದ್ದಾರೆ. ಆದುದರಿಂದ ದುಃಖಿಗಳಿಗೆ ದಾರಿ ತೋರಿಸಬೇಕು. ಈ ಚಿಕ್ಕ ಚಿಕ್ಕ ಪ್ರತಿಗಳು ಎಲ್ಲಾ ಭಾಷೆಯಲ್ಲು ಮುದ್ರಿಸಬೇಕು. ಲಕ್ಷ-ಎರಡು ಲಕ್ಷ ಮುದ್ರಿಸಬೇಕು. ಯಾರ ಬುದ್ದಿಯಲ್ಲಿ ಜ್ಞಾನದ ನಶೆ ಏರಿರುತ್ತದೆ ಅವರ ಬುದ್ಧಿ ಕೆಲಸ ಮಾಡುತ್ತದೆ. ಈ ಚಿತ್ರಗಳನ್ನು ಎರಡು-ಮೂರು ಲಕ್ಷ ಎಲ್ಲಾ ಭಾಷೆಗಳಲ್ಲಿ ಮಾಡಿಸಬೇಕು. ಎಲ್ಲಾ ಸ್ಥಾನಗಳಲ್ಲಿ ಸೇವೆ ಮಾಡಬೇಕು. ಒಂದು ಸೆಕೆಂಡಿನಲ್ಲಿ ಮುಕ್ತಿ-ಜೀವನ್ಮುಕ್ತಿ ಹೇಗೆ ಸಿಗುತ್ತದೆ ಬಂದು ತಿಳಿದುಕೊಳ್ಳಿ ಎಂದು ಈ ಒಂದೇ ಮಾತನ್ನು ಮುಖ್ಯವಾಗಿ ತಿಳಿಸಬೇಕು. ಮುಖ್ಯ ಸೇವಾಕೇಂದ್ರದ ವಿಲಾಸವನ್ನು ಹಾಕಿಸಬೇಕು, ಆಮೇಲೆ ಅವರು ಬೇಕಾದರೆ ತಿಳಿದುಕೊಳ್ಳಲಿ ಅಥವಾ ತಿಳಿದುಕೊಳ್ಳದೇ ಇರಲಿ. ನೀವು ಮಕ್ಕಳು ತ್ರಿಮೂರ್ತಿ ಚಿತ್ರದ ಮೇಲೆ ತಿಳಿಸಿಕೊಡಬೇಕು-ಬ್ರಹ್ಮನ ಮುಖಾಂತರ ಅಗತ್ಯವಾಗಿ ಸ್ಥಾಪನೆಯಾಗುತ್ತದೆ. ದಿನ-ಪ್ರತಿದಿನ ಮನುಷ್ಯರು ವಿನಾಶ ಮುಂದೆ ನಿಂತಿದೆ ಎಂದು ತಿಳಿದುಕೊಳ್ಳುತ್ತಾರೆ. ಈ ಜಗಳಗಳೆಲ್ಲಾ ಹೆಚ್ಚುತ್ತಾ ಹೋಗುತ್ತವೆ. ಆಸ್ತಿಯ ಮೇಲೆ ಎಷ್ಟೊಂದು ಜಗಳ ನಡೆಯುತ್ತದೆ. ಮಾರಾ-ಮಾರಿ ನಡೆಯುತ್ತದೆ. ವಿನಾಶ ಮುಂದೆ ನಿಂತಿದೆ. ಯಾರು ಗೀತೆ ಭಾಗವತ ಮುಂತಾದವುಗಳನ್ನು ಓದಿರುತ್ತಾರೆ ಅವರೂ ಸಹ ಇದೆಲ್ಲವು ಮೊದಲೂ ಸಹ ನಡೆದಿತ್ತೆಂದು ತಿಳಿದುಕೊಳ್ಳುತ್ತಾರೆ. ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಮನುಷ್ಯರು ಪತಿತರಿಂದ ಪಾವನರಾಗುತ್ತಾರೋ ಅಥವಾ ಯೋಗಾಗ್ನಿಯಿಂದ ಪಾವನಾರುತ್ತಾರೋ-ಇದನ್ನು ನೀವು ಮಕ್ಕಳು ತಿಳಿಸಿಕೊಡಬೇಕು. ಭಗವಾನುವಾಚ-ನನ್ನನ್ನು ನೆನಪು ಮಾಡುವುದರಿಂದ ನಿಮ್ಮ ವಿಕರ್ಮ ವಿನಾಶವಾಗುತ್ತದೆ. ಎಲ್ಲೆಲ್ಲಿ ನಿಮ್ಮ ಸೇವಾಕೇಂದ್ರಗಳಿವೆ ವಿಶೇಷವಾಗಿ ಇಂತಹ ಸಂದರ್ಭದಲ್ಲಿ ಸಂದೇಶದ ಪ್ರತಿಗಳನ್ನು ಮುದ್ರಿಸಬೇಕು. ಜಾತ್ರೆಗಳಂತು ತುಂಬಾ ನಡೆಯುತ್ತಿರುತ್ತವೆ. ಅಲ್ಲಿಗೆ ಬಹಳ ಜನ ಹೋಗುತ್ತಾರೆ. ಆದರೆ ಕಷ್ಟದಿಂದ ತಿಳಿದುಕೊಳ್ಳುತ್ತಾರೆ. ಸಂದೇಶ ಪ್ರತಿಗಳನ್ನು ಹೆಚ್ಚಾಗಿ ಮುದ್ರಿಸಿ ಹಂಚಬೇಕು. ಏಕೆಂದರೆ ಎಲ್ಲರಿಗು ತಂದೆಯ ಸಂದೇಶ ತಲುಪಬೇಕು. ಅಂತಹ ಸ್ಥಾನದಲ್ಲಿ ತುಂಬಾ ಸೇವೆಯನ್ನು ಮಾಡಬಹುದು ಇವು ಜ್ಞಾನರತ್ನಗಳಾಗಿವೆ. ಸೇವೆಯಲ್ಲಿ ತುಂಬಾ ಆಸಕ್ತಿ ಇಟ್ಟುಕೊಳ್ಳಬೇಕು. ನಾವು ನಮ್ಮ ದೈವೀ ರಾಜ್ಯ ಸ್ಥಾಪನೆ ಮಾಡುತ್ತಿದ್ದೇವಲ್ಲವೆ. ಇದು ಮನುಷ್ಯರಿಂದ ದೇವತೆ ಅಥವಾ ಪತಿತರನ್ನು ಪಾವನ ಮಾಡುವ ಸಂಸ್ಥೆಯಾಗಿದೆ. ಮನ್ಮನಾಭವ ಎಂದು ತಂದೆ ತಿಳಿಸಿರುವುದನ್ನು ನೀವು ಬರೆಯಬಹುದು. ಪತಿತ ಪಾವನ ಬೇಹದ್ದಿನ ತಂದೆಯನ್ನು ನೆನಪು ಮಾಡಿದರೆ ವಿಕರ್ಮ ವಿನಾಶವಾಗಿ ಬಿಡುತ್ತದೆ. ಯಾತ್ರೆಯ ಮಾತನ್ನು ಬಾಬಾ ಮಕ್ಕಳಿಗೆ ಬಹಳಷ್ಟು ಸಮಯದಿಂದ ತಿಳಿಸುತ್ತಿದ್ದಾರೆ. ತಂದೆಯನ್ನು ಮತ್ತೆ-ಮತ್ತೆ ನೆನಪು ಮಾಡಿ. ಶ್ವಾಸ-ಶ್ವಾಸದಲ್ಲಿ ಸುಖ ಪಡೆಯಿರಿ, ಕಲಹ ಕ್ಲೇಶ ದೂರವಾಗಿ ಎಲ್ಲರೂ ಆರೋಗ್ಯವಂತರಾಗಿ ಬಿಡುತ್ತೀರಿ. ತಂದೆಯು ನಮಗೆ ಮಂತ್ರ ಕೊಟ್ಟೀದ್ದಾರೆ-ನನ್ನನ್ನು ಸ್ಮರಿಸಿ ಅರ್ಥಾತ್ ನೆನಪು ಮಾಡಿ, ಆದರೆ ಶಿವ ಶಿವ ಎಂದು ಹೇಳಿಕೊಂಡು ಜಪ ಮಾಡಬಾರದು. ಶಿವನ ಭಕ್ತರು ಶಿವ-ಶಿವ ಎಂದು ಮಾಲೆಯನ್ನು ಜಪಿಸುತ್ತಾರೆ. ವಾಸ್ತವದಲ್ಲಿ ಇದು ರುದ್ರ ಮಾಲೆಯಾಗಿದೆ. ಶಿವ ಹಾಗೂ ಸಾಲಿಗ್ರಾಮಗಳು. ಮೇಲೆ ಶಿವನನ್ನು ತೋರಿಸುತ್ತಾರೆ. ಉಳಿದಂತೆ ಚಿಕ್ಕ-ಚಿಕ್ಕ ಮಣಿಗಳು ಅರ್ಥಾತ್ ಆತ್ಮಗಳು. ಆತ್ಮ ಸೂಕ್ಷ್ಮ ಬಿಂದುವಾಗಿದೆ. ಕಪ್ಪು ಮಣಿಗಳ ಮಾಲೆ ಇರುತ್ತದೆ. ಶಿವನ ಮಾಲೆಯನ್ನು ಮಾಡಿಯಿರುತ್ತಾರೆ. ಆತ್ಮ ತನ್ನ ತಂದೆಯನ್ನು ನೆನಪು ಮಾಡಬೇಕು. ಉಳಿದಂತೆ ಮುಖದಿಂದ ಶಿವ-ಶಿವ ಎಂದು ಹೇಳುವ ಆವಶ್ಯಕತೆಯಿಲ್ಲ. ಶಿವ-ಶಿವನೆಂದು ಹೇಳುವುದರಿಂದ ಮಾಲೆಯ ಕಡೆ ಬುದ್ಧಿ ಹೋಗುತ್ತದೆ. ಇದರ ಅರ್ಥವನ್ನು ಯಾರು ತಿಳಿದುಕೊಂಡಿಲ್ಲ. ಶಿವ-ಶಿವನೆಂದು ಜಪಿಸುವರಿಂದ ಪಾಪ ನಾಶವಾಗುವುದಿಲ್ಲ. ಮಾಲೆ ಜಪಿಸುವಂತಹವರ ಬಳಿ ವಿಕರ್ಮ ನಾಶವಾಗುವ ಜ್ಞಾನವಿರುವುದಿಲ್ಲ. ಸಂಗಮಯುಗದಲ್ಲಿ ಸ್ವಯಂ ಶಿವಬಾಬಾ ಬಂದು ನನ್ನೊಬ್ಬನ್ನನ್ನೇ ನೆನಪು ಮಾಡಿ ಎಂದು ಮಂತ್ರವನ್ನು ಕೊಡುತ್ತಾರೆ. ಉಳಿದಂತೆ ಶಿವ-ಶಿವನೆಂದು ಎಷ್ಟು ಜಪ ಮಾಡಿದರು ವಿಕರ್ಮ ವಿನಾಶವಾಗುವುದಿಲ್ಲ. ಕಾಶಿಗೆ ಹೋಗುತ್ತಾರೆ. ಅಲ್ಲಿಗೆ ಹೋಗಿ ಶಿವಕಾಶಿ, ಶಿವಕಾಶಿ ಎಂದು ಹೇಳುತ್ತಿರುತ್ತಾರೆ. ಕಾಶಿಯಲ್ಲಿ ಶಿವನ ಪ್ರಭಾವವಿದೆಯೆಂದು ತಿಳಿಸುತ್ತಾರೆ. ಶಿವನ ಮಂದಿರಗಳಂತು ಐಶಾರಾಮವಾಗಿ ತಯಾರಾಗಿವೆ. ಇದೆಲ್ಲವು ಭಕ್ತಿ ಮಾರ್ಗದ ಸಾಮಾಗ್ರಿಯಾಗಿದೆ. ನೀವು ಈ ರೀತಿ ತಿಳಿಸಿಕೊಡಬಹುದು, ಬೇಹದ್ದಿನ ತಂದೆ ತಿಳಿಸಿಕೊಡುತ್ತಿದ್ದಾರೆ ನನ್ನ ಜೊತೆ ಸಂಬಂಧ ಜೋಡಿಸುವುದರಿಂದ ನೀವು ಪಾವನರಾಗುತ್ತೀರಿ. ಮಕ್ಕಳಿಗೆ ಸೇವೆಯಲ್ಲಿ ತುಂಬಾ ರುಚಿಯಿರಬೇಕು. ಪತಿತರನ್ನು ಪಾವನ ಮಾಡಬೇಕೆಂದು ತಂದೆ ತಿಳಿಸುತ್ತಿದ್ದಾರೆ. ಮಕ್ಕಳಾದ ನೀವು ಪಾವನರನ್ನಾಗಿ ಮಾಡುವ ಸೇವೆಯನ್ನು ಮಾಡಿ. ಸಂದೇಶದ ಪ್ರತಿಯನ್ನು ತೆಗೆದುಕೊಂಡು ಹೋಗಿ ಈ ರೀತಿ ತಿಳಿಸಿಕೊಡಿ-ಇದನ್ನು ಓದಿ. ಈಗ ಮೃತ್ಯು ಮುಂದೆ ನಿಂತಿದೆ. ಇದು ದುಃಖಧಾಮವಾಗಿದೆ. ಈ ಜ್ಞಾನ ಸ್ನಾನ ಒಮ್ಮೆ ಮಾಡಿದರೆ ಸಾಕು ಒಂದು ಸೆಕೆಂಡ್ ನಲ್ಲಿ ಜೀವನ್ಮುಕ್ತಿ ಸಿಗುತ್ತದೆ. ನಂತರ ನದಿಗಳಲ್ಲಿ ಸ್ನಾನ ಮಾಡಲು ಅಲೆದಾಡುವ ಆವಶ್ಯಕತೆ ಇರುವುದಿಲ್ಲ. ನಮಗೆ ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿ ದೊರೆತಿದೆ, ಆದುದರಿಂದ ನಾವು ಎಲ್ಲಾ ಕಡೆ ತಂದೆ ಸಂದೇಶವನ್ನು ಸಾರುತ್ತಿದ್ದೇವೆ. ಇಲ್ಲವೆಂದರೆ ಯಾರೂ ಸಹ ಸಂದೇಶ ಪ್ರತಿಗಳನ್ನು ಮುದ್ರಿಸುವುದಿಲ್ಲ. ಮಕ್ಕಳಿಗೆ ಸೇವೆಯಲ್ಲಿ ತುಂಬಾ ಆಸಕ್ತಿಯಿರಬೇಕು. ಇಂತಹ ಜ್ಞಾನದ ಮಾತುಗಳನ್ನು ಸೇವೆಗಾಗಿ ಮಾಡಿಸಬೇಕು. ಅನೇಕರಿಗೆ ಸೇವೆಯಲ್ಲಿ ಆಸಕ್ತಿ ಇರುವುದಿಲ್ಲ. ಸೇವೆ ಹೇಗೆ ಮಾಡುವುದೆಂಬ ಗಮನವು ಇರುವುದಿಲ್ಲ. ಇದರಲ್ಲಿ ಬುದ್ದಿ ತುಂಬಾ ಚುರುಕಾಗಿರಬೇಕು. ಯಾರು ದೇಹಾಭಿಮಾನದ ಬಂಧನದಲ್ಲಿ ಬಂಧಿಸಿಕೊಂಡಿರುತ್ತಾರೆ, ಅವರು ಆತ್ಮಾಭಿಮಾನಿ ಆಗಲು ಸಾಧ್ಯವಿಲ್ಲ. ಅಂತಹವರು ಎಂತಹ ಪದವಿ ಪಡೆದುಕೊಳ್ಳಬಹುದು ಎಂದು ತಂದೆ ತಿಳಿಸಿಕೊಡುತ್ತಾರೆ. ತಂದೆಗೆ ದಯೆ ಬರುತ್ತದೆ. ಎಲ್ಲಾ ಸೇವಾ ಕೇಂದ್ರಗಳಲ್ಲಿ ನೋಡಲಾಗುತ್ತದೆ-ಯಾರು ಪುರುಷಾರ್ಥದಲ್ಲಿ ಮುಂದೆ ಹೋಗುತ್ತಿದ್ದಾರೆ. ಕೆಲವರು ಎಕ್ಕದ ಹೂವಾಗಿರುತ್ತಾರೆ ಕೆಲವರು ಗುಲಾಬಿ ಹೂವಾಗಿರುತ್ತಾರೆ. ತಂದೆಯ ಸೇವೆಯನ್ನು ಮಾಡದೆಯಿದ್ದಾಗ ನಮ್ಮನ್ನು ಎಕ್ಕದ ಹೂವು ಎಂದು ತಿಳಿಯಬೇಕು. ತಂದೆ ತುಂಬಾ ಚೆನ್ನಾಗಿ ತಿಳಿಸಿಕೊಡುತ್ತಾರೆ. ನೀವು ವಜ್ರದಂತ ಆಗುವ ಪುರುಷಾರ್ಥವನ್ನು ಮಾಡುತ್ತಿದ್ದೀರಿ. ಕೆಲವರಂತು ಸತ್ಯ ವಜ್ರ ಆಗಿದ್ದಾರೆ, ಪ್ರತಿಯೊಬ್ಬರು ತಮ್ಮ ಬಗ್ಗೆ ತಾವೇ ಚಿಂತಿಸಬೇಕು. ನಾವು ವಜ್ರ ಸಮಾನ ಆಗಬೇಕು. ನಮ್ಮನ್ನು ನಾವು ಕೇಳಿಕೊಳ್ಳಬೇಕು-ನಾವು ವಜ್ರದಂತೆ ಆಗಿದ್ದೇವೆಯೇ?. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ದೇಹಾಭಿಮಾನದ ಬಂಧನವನ್ನು ಮುರಿದುಕೊಂಡು ದೇಹೀ-ಅಭಿಮಾನಿಯಾಗಬೇಕು. ಆತ್ಮಾಭಿಮಾನಿ ಆಗುವ ಸಂಸ್ಕಾರವನ್ನು ಮಾಡಿಕೊಳ್ಳಬೇಕು.

2. ಸೇವೆಯಲ್ಲಿ ತುಂಬಾ ಆಸಕ್ತಿ ಇಟ್ಟುಕೊಳ್ಳಬೇಕು. ತಂದೆಯ ಸಮಾನ ಪತಿತರಿಂದ ಪಾವನರಾಗುವ ಸೇವೆ ಮಾಡಬೇಕು. ಸತ್ಯ ವಜ್ರ ಆಗಬೇಕು.

ವರದಾನ:-

ಕರ್ಮಾತೀತ ಅರ್ಥಾತ್ ಭಿನ್ನ ಹಾಗೂ ಪ್ರಿಯ. ಕರ್ಮ ಮಾಡಲಾಯಿತು ಮತ್ತು ಮಾಡಿದ ನಂತರ ಈ ರೀತಿ ಅನುಭವವಾಗಲಿ – ಏನೂ ಮಾಡಿಯೇ ಇಲ್ಲ, ಮಾಡಿಸುವವರು ಮಾಡಿಸಿದರು. ಇಂತಹ ಸ್ಥಿತಿಯ ಅನುಭವ ಮಾಡುವುದರಿಂದ ಸದಾ ಹಗುರತೆ ಇರುತ್ತದೆ. ಕರ್ಮವನ್ನು ಮಾಡುತ್ತಾ ತನುವೂ ಹಗುರತೆ, ಮನಸ್ಸಿನ ಸ್ಥಿತಿಯಲ್ಲಿಯೂ ಹಗುರತೆಯಿರುವುದು. ಕಾರ್ಯವೆಷ್ಟಾದರೂ ಹೆಚ್ಚಾಗಲಿ ಅಷ್ಟೇ ಹಗುರತೆಯೂ ಹೆಚ್ಚಾಗುವುದು. ಕರ್ಮವು ತನ್ನ ಕಡೆಗೆ ಆಕರ್ಷಣೆ ಮಾಡಬಾರದು, ತಾವು ಮಾಲೀಕರಾಗಿದ್ದು ಕರ್ಮೇಂದ್ರಿಯಗಳಿಂದ ಕರ್ಮವನ್ನು ಮಾಡಿಸಿರಿ ಮತ್ತು ಸಂಕಲ್ಪದಲ್ಲಿಯೂ ಹಗುರತೆಯ ಅನುಭವ ಮಾಡುವುದೇ ಕರ್ಮಾತೀತರಾಗುವುದು ಆಗಿದೆ.

ಸ್ಲೋಗನ್:-

ಮಾತೇಶ್ವರಿಯವರ ಅಮೂಲ್ಯ ಮಹಾವಾಕ್ಯಗಳು – “ಅದೃಷ್ಟವನ್ನು ರೂಪಿಸುವವರು ಪರಮಾತ್ಮ, ಅದೃಷ್ಟವನ್ನು ಹಾಳು ಮಡುವವರು ಸ್ವಯಂ ಮನುಷ್ಯನಾಗಿದ್ದಾನೆ”

ಈಗ ನಾವು ಇದನ್ನಂತು ತಿಳಿದುಕೊಂಡಿದ್ದೇವೆ – ಮನುಷ್ಯಾತ್ಮನ ಅದೃಷ್ಟವನ್ನು ಯಾರು ಬೆಳಗಿಸುತ್ತಾರೆ? ಮತ್ತು ಅದನ್ನು ಹಾಳು ಮಾಡುವವನು ಯಾರು? ನಾವಂತು ಈ ರೀತಿ ಹೇಳುವುದಿಲ್ಲ – ಅದೃಷ್ಟವನ್ನು ರೂಪಿಸುವವರು ಮತ್ತು ಅಳಿಸುವವರು ಪರಮಾತ್ಮನೇ ಆಗಿದ್ದಾರೆಂದು. ಆದರೆ ಇದಂತು ಖಂಡಿತವಾಗಿ ಹೇಳುತ್ತೇವೆ – ಅದೃಷ್ಟವನ್ನು ರೂಪಿಸುವವರು ಪರಮಾತ್ಮನಾಗಿದ್ದಾರೆ ಮತ್ತು ಹಾಳು ಮಾಡುವವನು ಸ್ವಯಂ ಮನುಷ್ಯನಾಗಿದ್ದಾನೆ. ಈಗ ಈ ಅದೃಷ್ಟವಾಗುವುದು ಹೇಗೆ? ಮತ್ತೆ ಹೇಗೆ ಬೀಳುತ್ತೇವೆ? ಇದರ ಬಗ್ಗೆ ತಿಳಿಸಲಾಗುವುದು – ಮನುಷ್ಯನು ಯಾವಾಗ ತನ್ನನ್ನು ತಿಳಿಯುತ್ತಾನೆ ಹಾಗೂ ಪವಿತ್ರವಾಗುವನೋ ಆಗ ಮತ್ತೆ ಅದೃಷ್ಟವನ್ನು ರೂಪಿಸಿಕೊಳ್ಳುತ್ತಾನೆ. ಈಗ ನಾವು ಹಾಳಾಗಿರುವ ಅದೃಷ್ಟವೆಂದು ಯಾವುದಕ್ಕೆ ಹೇಳುತ್ತೇವೆ, ಇದರಿಂದ ಸಿದ್ಧವಾಗುತ್ತದೆ – ಯಾವುದೋ ಸಮಯದಲ್ಲಿ ನಮ್ಮ ಅದೃಷ್ಟವು ಬೆಳಗಿತ್ತು, ಅದೀಗ ಹಾಳಾಗಿ ಬಿಟ್ಟಿದೆ. ಈಗ ಆ ಅದೃಷ್ಟವನ್ನೇ ಸ್ವಯಂ ಪರಮಾತ್ಮನು ಬಂದು ರೂಪಿಸುತ್ತಾರೆ. ಈಗ ಯಾರಾದರೂ ಕೇಳುತ್ತಾರೆ – ಪರಮಾತ್ಮನಂತು ಸ್ವಯಂ ನಿರಾಕಾರ ಆಗಿದ್ದಾರೆ, ಅವರು ಹೇಗೆ ಅದೃಷ್ಟವನ್ನು ರೂಪಿಸುವರು? ಇದರ ಬಗ್ಗೆ ಈಗ ತಿಳಿಸಲಾಗುತ್ತದೆ – ನಿರಾಕಾರ ಪರಮಾತ್ಮನು ಯಾವ ರೀತಿ ತನ್ನ ಸಾಕಾರ ಬ್ರಹ್ಮಾ ತನುವಿನ ಮೂಲಕ, ಅವಿನಾಶಿ ಜ್ಞಾನದ ಮೂಲಕ ಹಾಳಾಗಿರುವ ನಮ್ಮ ಅದೃಷ್ಟವನ್ನು ರೂಪಿಸುತ್ತಾರೆ. ಈಗ ಈ ತಿಳುವಳಿಕೆಯನ್ನು ಕೊಡುವುದು ಪರಮಾತ್ಮನ ಕಾರ್ಯವಾಗಿದೆ, ಮನುಷ್ಯಾತ್ಮರಂತು ಒಬ್ಬರಿನ್ನೊಬ್ಬರ ಅದೃಷ್ಟವನ್ನು ಬೆಳಗಿಸಲು ಸಾಧ್ಯವೇ ಇಲ್ಲ. ಅದೃಷ್ಟವನ್ನು ಬೆಳಗಿಸುವವರಂತು ಒಬ್ಬರೇ ಪರಮಾತ್ಮನಾಗಿದ್ದಾರೆ, ಆದ್ದರಿಂದಲೇ ಅವರ ನೆನಪಾರ್ಥ ಮಂದಿರವು ಕಾಯಂ ಆಗಿ ಕಟ್ಟಲಾಗಿದೆ. ಒಳ್ಳೆಯದು.

ಲವಲೀನ ಸ್ಥಿತಿಯ ಅನುಭವ ಮಾಡಿರಿ:

ಯಾವ ಸಮಯದಲ್ಲಿ ಯಾವ ಸಂಬಂಧದ ಅವಶ್ಯಕತೆಯಿದೆಯೋ, ಭಗವಂತನನ್ನು ಅದೇ ಸಂಬಂಧದಿಂದ ತಮ್ಮವರನ್ನಾಗಿ ಮಾಡಿಕೊಳ್ಳಿರಿ. ಹೃದಯದಿಂದ ನನ್ನ ಬಾಬಾ ಎಂದು ಹೇಳಿರಿ ಮತ್ತು ಬಾಬಾರವರು ನನ್ನ ಮಕ್ಕಳೇ ಎನ್ನುವರು. ಇದೇ ಸ್ನೇಹದ ಸಾಗರನಲ್ಲಿ ಸಮಾವೇಶವಾಗಿಬಿಡಿ. ಈ ಸ್ನೇಹವು ಛತ್ರಛಾಯೆಯ ಕಾರ್ಯವನ್ನು ಮಾಡುತ್ತದೆ, ಇದರಲ್ಲಿ ಮಾಯೆಯು ಬರಲು ಸಾಧ್ಯವಿಲ್ಲ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top