24 August 2021 KANNADA Murli Today | Brahma Kumaris

Read and Listen today’s Gyan Murli in Kannada

August 23, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಇಲ್ಲಿಯವರೆಗೆ ಏನೆಲ್ಲವನ್ನೂ ಓದಿದ್ದೀರೋ ಅದನ್ನು ಮರೆತು ಒಬ್ಬ ತಂದೆಯನ್ನು ನೆನಪು ಮಾಡಿರಿ”

ಪ್ರಶ್ನೆ:: -

ಭಾರತದಲ್ಲಿ ಸತ್ಯಯುಗೀ ಸ್ವರಾಜ್ಯವನ್ನು ಸ್ಥಾಪನೆ ಮಾಡಲು ಯಾವ ಬಲ ಬೇಕು?

ಉತ್ತರ:-

ಪವಿತ್ರತೆಯ ಬಲ. ನೀವು ಸರ್ವಶಕ್ತಿವಂತ ತಂದೆಯೊಂದಿಗೆ ಬುದ್ಧಿಯೋಗವನ್ನಿಟ್ಟು ಪವಿತ್ರರಾಗುತ್ತೀರಿ. ಈ ಪವಿತ್ರತೆಯ ಬಲದಿಂದಲೇ ಸತ್ಯಯುಗೀ ಸ್ವರಾಜ್ಯವು ಸ್ಥಾಪನೆಯಾಗುತ್ತದೆ, ಇದರಲ್ಲಿ ಯುದ್ಧ ಮೊದಲಾದುವುಗಳ ಮಾತಿಲ್ಲ. ಜ್ಞಾನ ಮತ್ತು ಯೋಗಬಲವು ಪಾವನ ಪ್ರಪಂಚದ ಮಾಲೀಕರನ್ನಾಗಿ ಮಾಡುತ್ತದೆ. ಈ ಬಲದಿಂದ ಏಕಮತದ ಸ್ಥಾಪನೆಯಾಗಿ ಬಿಡುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಕೊನೆಗೂ ಆ ದಿನ ಇಂದು ಬಂದಿತು……

ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ, ಈ ಗೀತೆಯು ನಾವು ರಚಿಸಿರುವಂತಹ ಗೀತೆಯಲ್ಲ. ಹೇಗೆ ಅನ್ಯ ವೇದ ಶಾಸ್ತ್ರಗಳ ಸಾರವನ್ನು ತಿಳಿಸಲಾಗುತ್ತಿದೆಯೋ ಹಾಗೆಯೇ ಮನುಷ್ಯರು ಬರೆದಿರುವ ಈ ಹಾಡುಗಳ ಸಾರವನ್ನೂ ತಿಳಿಸುತ್ತೇವೆ. ಮಕ್ಕಳಿಗೆ ತಿಳಿದಿದೆ – ಅಂಬಿಗ ಅಥವಾ ಹೂದೋಟದ ಮಾಲೀಕ ಹಾಗೂ ಸದ್ಗತಿದಾತ ಒಬ್ಬರೇ ತಂದೆಯಾಗಿದ್ದಾರೆ, ಎಲ್ಲರೂ ಜೀವನ್ಮುಕ್ತಿಗಾಗಿಯೇ ಭಕ್ತಿ ಮಾಡುತ್ತಾರೆ ಆದರೆ ಜೀವನ್ಮುಕ್ತಿ ಅಥವಾ ಸದ್ಗತಿದಾತನು ಒಬ್ಬ ಭಗವಂತನಾಗಿದ್ದಾರೆ. ಅದರ ಅರ್ಥವನ್ನು ಮಕ್ಕಳೇ ತಿಳಿದುಕೊಳ್ಳುತ್ತೀರಿ, ಮನುಷ್ಯರಿಗೆ ಅರ್ಥವಾಗುವುದಿಲ್ಲ. ಸದ್ಗತಿ ಅರ್ಥಾತ್ ದುಃಖದಿಂದ ಬಿಡಿಸಿ ಶಾಂತಿಯ ಪ್ರಾಪ್ತಿ ಮಾಡಿಸುತ್ತಾರೆ. ಭಾರತವಾಸಿ ಮಕ್ಕಳಿಗೆ ತಿಳಿದಿದೆ – ಈ ಲಕ್ಷ್ಮೀ- ನಾರಾಯಣರ ರಾಜ್ಯವಿದ್ದಾಗ ಇಲ್ಲಿ ಸುಖ-ಶಾಂತಿ, ಪವಿತ್ರತೆಯಿತ್ತು, ರಾಧೆ-ಕೃಷ್ಣನ ರಾಜ್ಯವೆಂದು ಹೇಳುವುದಿಲ್ಲ. ವಾಸ್ತವದಲ್ಲಿ ಮಾತೆಯರ ಜೊತೆಗಾತಿ ರಾಧೆಯಾಗಿದ್ದಾಳೆ. ರಾಧೆಯನ್ನು ಹೆಚ್ಚು ಪ್ರೀತಿ ಮಾಡಬೇಕು ಆದರೆ ಮಾತೆಯರು ಕೃಷ್ಣನನ್ನೇ ಹೆಚ್ಚು ಪ್ರೀತಿ ಮಾಡುತ್ತಾರೆ, ಉಯ್ಯಾಲೆಯಲ್ಲಿ ತೂಗುತ್ತಾರೆ. ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ, ರಾಧೆಯ ಜಯಂತಿಯನ್ನು ಆಚರಿಸುವುದಿಲ್ಲ. ವಾಸ್ತವದಲ್ಲಿ ಇಬ್ಬರ ಜಯಂತಿಯನ್ನೂ ಆಚರಿಸಬೇಕು ಆದರೆ ಮನುಷ್ಯರಿಗೆ ತಿಳುವಳಿಕೆಯಿಲ್ಲ, ಅವರ ಜೀವನ ಕಥೆಯನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ಬಂದು ತನ್ನ ಮತ್ತು ಎಲ್ಲರ ಜೀವನ ಚರಿತ್ರೆಯನ್ನು ತಿಳಿಸುತ್ತಾರೆ. ಮನುಷ್ಯರು ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ ಆದರೆ ಅವರ ಜೀವನ ಕಥೆಯನ್ನು ತಿಳಿದುಕೊಂಡಿಲ್ಲ. ಮನುಷ್ಯರ ಜೀವನ ಕಥೆಗೆ ಇತಿಹಾಸ-ಭೂಗೋಳವೆಂದು ಹೇಳಲಾಗುತ್ತದೆ. ಹೇಗೆ ಎಷ್ಟು ಪ್ರಾಂತ್ಯಗಳಲ್ಲಿ ಯಾರ್ಯಾರು ರಾಜ್ಯ ಮಾಡುತ್ತಿದ್ದರು? ಎಷ್ಟು ಭೂಮಿಯ ಮೇಲೆ ರಾಜ್ಯ ಮಾಡುತ್ತಿದ್ದರು ಎಂದು ಪ್ರಪಂಚದ ಇತಿಹಾಸ-ಭೂಗೋಳವನ್ನು ತಿಳಿಸಲಾಗುತ್ತದೆಯಲ್ಲವೆ. ಹೇಗೆ ರಾಜ್ಯ ಮಾಡಿದರು? ಮತ್ತೆ ಅವರು ಎಲ್ಲಿಗೆ ಹೋದರು…. ಈ ಮಾತುಗಳು ಯಾರಿಗೂ ತಿಳಿದಿಲ್ಲ. ನೀವು ಮಕ್ಕಳಿಗೆ ಬಹಳ ಚೆನ್ನಾಗಿ ತಿಳಿಸಲಾಗುತ್ತದೆ, ರಚಯಿತ ಮತ್ತು ರಚನೆಯ ಜ್ಞಾನವನ್ನು ಮಕ್ಕಳಿಗೆ ತಿಳಿಸುತ್ತೇನೆ. ನೀವು ಮಕ್ಕಳಿಗೆ ಅರ್ಥವಾಗಿದೆ, ಅವಶ್ಯವಾಗಿ ಈಗ ಕಲಿಯುಗದ ಅಂತ್ಯವಾಗಿದೆ ಮತ್ತು ಸತ್ಯಯುಗದ ಆದಿಯಾಗಿದೆ. ಸಂಗಮಯುಗದಲ್ಲಿಯೇ ಪರಮಪಿತ ಪರಮಾತ್ಮನು ಬಂದು ಮನುಷ್ಯರನ್ನು ಪಾವನ ದೇವತೆಗಳನ್ನಾಗಿ ಮಾಡುತ್ತಾರೆ. ಉತ್ತಮ ಪುರುಷರು ಅಥವಾ ಪುರುಷೋತ್ತಮರನ್ನಾಗಿ ಮಾಡುತ್ತಾರೆ ಏಕೆಂದರೆ ಈ ಸಮಯದ ಪುರುಷರು ಉತ್ತಮರಲ್ಲ, ಕನಿಷ್ಠರಾಗಿದ್ದಾರೆ. ಉತ್ತಮ, ಮಧ್ಯಮ, ಕನಿಷ್ಟ, ಸತೋ-ರಜೋ-ತಮೋ ಇರುತ್ತಾರೆ. ಯಾರು ಚೆನ್ನಾಗಿ ಜ್ಞಾನವನ್ನು ಕೇಳುವರೋ ಅವರಿಗೆ ಸತೋಗುಣಿಯೆಂದು ಹೇಳುವರು. ಯಾರು ಸ್ವಲ್ಪ ಕೇಳುವರೋ ಅವರಿಗೆ ರಜೋಗುಣಿಯೆಂತಲೂ, ಯಾರು ಕೇಳುವುದೇ ಇಲ್ಲವೋ ಅವರಿಗೆ ತಮೋಗುಣಿಯೆಂದು ಹೇಳಲಾಗುವುದು. ವಿದ್ಯೆಯಲ್ಲಿಯೂ ಇದೇ ರೀತಿಯಾಗುತ್ತದೆ. ನೀವು ಮಕ್ಕಳಿಗೆ ಸತೋಪ್ರಧಾನ ವಿದ್ಯೆಯು ಬೇಕಾಗಿದೆ, ಆದ್ದರಿಂದ ನಿಮಗೆ ಸತೋಪ್ರಧಾನ ಲಕ್ಷ್ಮೀ-ನಾರಾಯಣರಾಗುವ ಜ್ಞಾನವನ್ನು ಕೊಡಲಾಗುತ್ತದೆ. ನರನಿಂದ ನಾರಾಯಣ, ನಾರಿಯಿಂದ ಲಕ್ಷ್ಮಿಯಾಗಬೇಕಾಗಿದೆ. ಭಗವದ್ಗೀತೆಯನ್ನೂ ಇದು ಸತ್ಯವಾದ ಗೀತೆಯೆಂದು ನೀವು ಹೇಳುತ್ತೀರಿ. ನೀವು ಇದನ್ನೂ ಬರೆಯಬಹುದು – ಇದು ಸತ್ಯ ಗೀತಾ ಪಾಠಶಾಲೆಯಾಗಿದೆ ಅರ್ಥಾತ್ ಸತ್ಯ ನಾರಾಯಣನಾಗುವ ಕಥೆ ಅಥವಾ ಸತ್ಯ ಅಮರ ಕಥೆ, ಸತ್ಯ ಮೂರನೇ ನೇತ್ರದ ಕಥೆಯಾಗಿದೆ. ಚಿತ್ರಗಳೆಲ್ಲವೂ ನಿಮ್ಮ ಬಳಿಯಿದೆ, ಇದರಲ್ಲಿ ಸಂಪೂರ್ಣ ಜ್ಞಾನವಿದೆ, ನೀವು ಮಕ್ಕಳು ಪ್ರತಿಜ್ಞೆ ಮಾಡುತ್ತೀರಿ – ನಾವು ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರು ಭಾರತವನ್ನು ಸತೋಪ್ರಧಾನ ಸ್ವರ್ಗವನ್ನಾಗಿ ಮಾಡಿಯೇ ತೀರುತ್ತೇವೆ. ನೀವು ಇದನ್ನು ಪ್ರತಿಜ್ಞೆ ಮಾಡಬೇಕಾಗಿದೆ. ಗಾಂಧೀಜಿಯೂ ಸಹ ಪಾವನ ರಾಜ್ಯವನ್ನು ಬಯಸುತ್ತಿದ್ದರು ಅಂದಮೇಲೆ ಅವಶ್ಯವಾಗಿ ಈಗ ಪತಿತ ರಾಜ್ಯವಾಗಿದೆ ಆದರೆ ನಾವು ಪತಿತರಾಗಿದ್ದೇವೆ ಎಂಬುದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ಪಂಚ ವಿಕಾರಗಳೇ ರಾವಣನಾಗಿದೆ, ರಾಮ ರಾಜ್ಯ ಬೇಕೆಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಆಸುರೀ ಸಂಪ್ರದಾಯದವರಾದರಲ್ಲವೆ ಆದರೆ ಇಲ್ಲಿ ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಎಷ್ಟು ದೊಡ್ಡ-ದೊಡ್ಡ ಗುರುಗಳೂ ಸಹ ಇದನ್ನು ತಿಳಿದುಕೊಳ್ಳುವುದಿಲ್ಲ. ನೀವು ಮಕ್ಕಳು ಪ್ರತಿಜ್ಞೆ ಮಾಡುತ್ತೀರಿ, ನಾವು ಶ್ರೀಮತದಂತೆ ಬ್ರಹ್ಮಾರವರ ಮೂಲಕ 5000 ವರ್ಷಗಳ ಹಿಂದಿನ ತರಹ ದೈವೀರಾಜ್ಯವನ್ನು ಸ್ಥಾಪನೆ ಮಾಡುತ್ತೇವೆ. ಇದು ಪುರುಷೋತ್ತಮ ಸಂಗಮಯುಗವಾಗಿದೆ. ಈ ಸಮಯದಲ್ಲಿಯೇ ನೀವು ಕನಿಷ್ಟ ಪುರುಷರಿಂದ ಸತೋಪ್ರಧಾನ ಪುರುಷೋತ್ತಮರಾಗುತ್ತೀರಿ. ಮರ್ಯಾದಾ ಪುರುಷೋತ್ತಮ, ಆದಿ ಸನಾತನ ದೇವಿ-ದೇವತಾ ಧರ್ಮವೇ ಆಗಿದೆ. ಈಗ ಒಂದೇ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತದೆ ಮತ್ತ್ಯಾವುದೂ ಆಗುವುದಿಲ್ಲ. ನೀವು ಮಕ್ಕಳು ಸಿದ್ಧ ಮಾಡಿ ತಿಳಿಸುತ್ತೀರಿ – ಸತ್ಯಯುಗದಲ್ಲಿ ಒಂದು ಧರ್ಮ, ಒಂದು ರಾಜ್ಯವಿತ್ತು. ಭಲೆ ತ್ರೇತಾದಲ್ಲಿ ಸೂರ್ಯವಂಶಿಯರಿಂದ ಬದಲಾಗಿ ಚಂದ್ರವಂಶಿಯರಾಗುತ್ತಾರೆ ಆದರೆ ಭಾಷೆಯು ಮಾತ್ರ ಒಂದೇ ಇರುತ್ತದೆ. ಈಗಂತೂ ಭಾರತದಲ್ಲಿ ಅನೇಕ ಭಾಷೆಗಳಿವೆ. ಮಕ್ಕಳಿಗೆ ತಿಳಿದಿದೆ – ನಮ್ಮ ರಾಜ್ಯದಲ್ಲಿ ಒಂದೇ ಭಾಷೆಯಿತ್ತು, ಈಗಂತೂ ಬಹಳಷ್ಟು ನೋಡುತ್ತಾ ಇರುತ್ತೀರಿ. ಹೇಗೆ ತೀರ್ಥ ಯಾತ್ರೆಯಿಂದ ಮರಳಿ ಬರುವಾಗ ತನ್ನ ದೇಶವು ಸಮೀಪಿಸುತ್ತಿದ್ದಂತೆ ನೋಡಿ ಈಗ ನಮ್ಮ ಮನೆ ಬಂದು ಬಿಟ್ಟಿತು, ಹೋಗಿ ಮಿಲನ ಮಾಡುತ್ತೇವೆಂದು ಖುಷಿಯಾಗುತ್ತದೆ. ನಿಮಗೂ ಸಹ ನಿಮ್ಮ ರಾಜಧಾನಿಯ ಸಾಕ್ಷಾತ್ಕಾರವಾಗುತ್ತಾ ಇರುವುದು. ತಮ್ಮ ಪುರುಷಾರ್ಥದ ಸಾಕ್ಷಾತ್ಕಾರವೂ ಆಗುವುದು. ನೋಡುತ್ತೀರಿ, ತಂದೆಯು ನಮಗೆ ಪುರುಷಾರ್ಥ ಮಾಡಿ ಎಂದು ಎಷ್ಟೊಂದು ಹೇಳುತ್ತಾರೆ, ಇಲ್ಲದಿದ್ದರೆ ಹಾಯ್ ಹಾಯ್ ಎನ್ನಬೇಕಾಗುವುದು ಮತ್ತು ಪದವಿಯೂ ಕಡಿಮೆಯಾಗುವುದು. ಯೋಗದ ಯಾತ್ರೆಯನ್ನು ಎಲ್ಲರಿಗೂ ತಿಳಿಸುತ್ತಾ ಇರಿ. ತಿಳಿಸುವುದು ಬಹಳ ಸಹಜವಾಗಿದೆ, ಏಣಿಯ ಜ್ಞಾನವು ಎಷ್ಟು ಸಹಜವಾಗಿದೆ! ಯಾರು ತಡವಾಗಿ ಬರುವರೋ ಅವರಿಗೆ ದಿನ-ಪ್ರತಿದಿನ ಇನ್ನೂ ಸಹಜ ಜ್ಞಾನವು ಸಿಗುತ್ತದೆ. ಒಂದು ವಾರದಲ್ಲಿಯೇ ಸಹಜವಾಗಿ ತಿಳಿದುಕೊಳ್ಳುತ್ತಾರೆ. ಆ ರೀತಿಯಲ್ಲಿ ಚಿತ್ರಗಳು ತಯಾರಾಗಿವೆ ಯಾವುದರಲ್ಲಿ ಬಹಳ ಸ್ಪಷ್ಟ ಜ್ಞಾನವಿದೆ. 84 ಜನ್ಮಗಳ ಚಕ್ರದ ಜ್ಞಾನವು ಸರಿಯಾಗಿದೆ. ಇದು ಭಾರತವಾಸಿಗಳಿಗಾಗಿ ಇದೆ. ನೀವು ಮಕ್ಕಳ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವಿದೆ. ನೀವು ತಿಳಿದುಕೊಂಡಿದ್ದೀರಿ, ಪತಿತ-ಪಾವನ, ಸದ್ಗತಿದಾತ ಶಿವ ತಂದೆಯ ಮತದಂತೆ ನಾವು ಪುನಃ ಸಹಜ ರಾಜಯೋಗ ಬಲದಿಂದ ನಮ್ಮ ತನು-ಮನ-ಧನದಿಂದ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೇವೆ, ಮತ್ತ್ಯಾರದೇ ಧನವನ್ನು ನಾವು ಉಪಯೋಗಿಸುವುದಿಲ್ಲ. ನಮ್ಮದೇ ತನು-ಮನ-ಧನದಿಂದ ನಾವು ಸೇವೆ ಮಾಡುತ್ತೇವೆ. ಯಾರೆಷ್ಟು ಮಾಡುವರೋ ಅವರು ತಮ್ಮ ಭವಿಷ್ಯಕ್ಕಾಗಿ ಮಾಡಿಕೊಳ್ಳುವರು. ನೀವೇ ಮನೆಯ ಮಕ್ಕಳಾಗಿದ್ದೀರಿ. ನಿಮ್ಮಿಂದಲೇ ತಂದೆಯು ಸತ್ಯಯುಗೀ ಸ್ವರಾಜ್ಯವನ್ನು ಸ್ಥಾಪನೆ ಮಾಡಿಸುತ್ತಿದ್ದಾರೆ. ನೀವೇ ಖರ್ಚು ಮಾಡುತ್ತೀರಿ, ನಿಮ್ಮದೇನೂ ಜಾಸ್ತಿ ಖರ್ಚಿಲ್ಲ. ನೀವು ಕೇವಲ ಶಿವ ತಂದೆಯನ್ನು ನೆನಪು ಮಾಡಬೇಕಾಗಿದೆ. ಕನ್ಯೆಯರು ಏನು ಖರ್ಚು ಮಾಡುವರು, ಅವರ ಬಳಿ ಏನಾದರೂ ಇದೆಯೇ? ತಂದೆಯು ಮಕ್ಕಳಿಂದ ಶುಲ್ಕವನ್ನೇನು ತೆಗೆದುಕೊಳ್ಳುವರು! ಏನೂ ಇಲ್ಲ. ಶಾಲೆಗಳಲ್ಲಿ ಮೊದಲು ಶುಲ್ಕದ ಮಾತನ್ನಾಡುತ್ತಾರೆ. ಅಲ್ಲಿ ವಿದ್ಯಾಭ್ಯಾಸ ಮಾಡಲು ಎಷ್ಟೊಂದು ಖರ್ಚಾಗುತ್ತದೆ, ಇಲ್ಲಂತೂ ಶಿವ ತಂದೆಯು ಮಕ್ಕಳಿಂದ ಹಣವನ್ನು ಹೇಗೆ ತೆಗೆದುಕೊಳ್ಳುವರು! ಶಿವ ತಂದೆಯು ಹಣ ತೆಗೆದುಕೊಳ್ಳಲು ತನಗಾಗಿ ಮನೆ ಕಟ್ಟಿಸಬೇಕಾಗಿದೆಯೇ? ನೀವು ಮಕ್ಕಳು ಭವಿಷ್ಯ ಸ್ವರ್ಗದಲ್ಲಿ ಹೋಗಿ ವಜ್ರ-ವೈಡೂರ್ಯಗಳ ಮಹಲುಗಳನ್ನು ಕಟ್ಟಿಸಬೇಕಾಗಿದೆ ಆದ್ದರಿಂದ ನೀವಿಲ್ಲಿ ಏನೆಲ್ಲವನ್ನೂ ಮಾಡುತ್ತೀರೋ ಅದಕ್ಕೆ ಮರುಪಾವತಿಯಾಗಿ ಭವಿಷ್ಯದಲ್ಲಿ ನಿಮಗೆ ಮಹಲು ಸಿಕ್ಕಿ ಬಿಡುತ್ತದೆ. ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ಯಾರೆಷ್ಟು ತನ್ನ ತನು-ಮನ-ಧನದಿಂದ ಸೇವೆ ಮಾಡುವರೋ ಅಷ್ಟೇ ಅವರು ಅಲ್ಲಿ ಪಡೆಯುತ್ತಾರೆ. ಕಾಲೇಜು ಅಥವಾ ಆಸ್ಪತ್ರೆಗಳನ್ನು ಕಟ್ಟಿಸುತ್ತಾರೆ, ಅದರಲ್ಲಿ 10-20 ಲಕ್ಷ ರೂ.ಗಳನ್ನು ತೊಡಗಿಸಬೇಕಾಗುತ್ತದೆ, ಇಲ್ಲಂತೂ ಅಷ್ಟೊಂದು ಖರ್ಚಿಲ್ಲ. ಚಿಕ್ಕ ಮನೆಯಲ್ಲಿಯೇ ಆತ್ಮಿಕ ಆಸ್ಪತ್ರೆ ಕಮ್ ಯುನಿವರ್ಸಿಟಿಯನ್ನು ತೆರೆಯುತ್ತೀರಿ. ಪಾಂಡವರ ಪತಿಯು ಯಾರಾಗಿದ್ದಾರೆ? ಅದರಲ್ಲಿ ಕೃಷ್ಣನ ಹೆಸರನ್ನು ಬರೆದು ಬಿಟ್ಟಿದ್ದಾರೆ, ವಾಸ್ತವದಲ್ಲಿ ನಿರಾಕಾರ ಭಗವಂತನಾಗಿದ್ದಾರೆ. ನಿಮಗೆ ಶ್ರೀಮತವನ್ನು ಕೊಡುವವರು ಭಗವಂತನಾಗಿದ್ದಾರೆ, ಉಳಿದೆಲ್ಲರೂ ರಾವಣ ರಾಜ್ಯದಲ್ಲಿ ರಾವಣನ ಮತದ ಮೇಲಿದ್ದಾರೆ. ರಾವಣನ ಮತದಂತೆ ಎಷ್ಟೊಂದು ಪತಿತರಾಗಿ ಬಿಟ್ಟಿದ್ದಾರೆ. ಈಗ ಇದೇ ಹಳೆಯ ಸೃಷ್ಟಿಯು ಹೊಸದಾಗುತ್ತದೆ. ಸೃಷ್ಟಿಯಲ್ಲಿ ಭಾರತವಿತ್ತು, ನವಭಾರತ-ಹಳೆಯ ಭಾರತವೆಂದು ಹೇಳುತ್ತಾರೆ. ನವಭಾರತವಂತೂ ಸ್ವರ್ಗವಾಗಿತ್ತು, ಈಗ ಭಾರತವು ಹಳೆಯದಾಗಿದೆ ಆದ್ದರಿಂದ ನರಕವಾಗಿದೆ, ಇದಕ್ಕೆ ರೌರವ ನರಕವೆಂದು ಹೇಳಲಾಗುತ್ತದೆ, ಮನುಷ್ಯರದೇ ಮಾತಾಗಿದೆ. ಇಲ್ಲಿ ಸುಖದ ಹೆಸರು, ಗುರುತೂ ಇಲ್ಲ. ಇಲ್ಲಿರುವ ಸುಖವು ಸುಖವಲ್ಲ. ಈ ಸಮಯದ ಸುಖವು ಕಾಗವಿಷ್ಟ ಸಮಾನವೆಂದು ಸನ್ಯಾಸಿಗಳು ಹೇಳುತ್ತಾರೆ ಆದ್ದರಿಂದ ಅವರು ಗೃಹಸ್ಥ ವ್ಯವಹಾರವನ್ನು ಬಿಟ್ಟು ಬಿಡುತ್ತಾರೆ. ಆದರೆ ಅವರು ಸ್ವರ್ಗ ಅಥವಾ ಸತ್ಯಯುಗದ ಸ್ಥಾಪನೆ ಮಾಡಲು ಸಾಧ್ಯವಿಲ್ಲ, ಪರಮಾತ್ಮನೇ ಕೃಷ್ಣ ಪುರಿಯನ್ನು ಸ್ಥಾಪನೆ ಮಾಡುತ್ತಾರೆ. ಶ್ರೀಕೃಷ್ಣನ ಆತ್ಮ ಮತ್ತು ಶರೀರ ಎರಡೂ ಸತೋಪ್ರಧಾನವಾಗಿತ್ತು ಆದ್ದರಿಂದ ಎಲ್ಲರೂ ಬಹಳ ಪ್ರೀತಿ ಮಾಡುತ್ತಾರೆ ಏಕೆಂದರೆ ಪವಿತ್ರನಲ್ಲವೆ. ಚಿಕ್ಕ ಮಕ್ಕಳು ಬ್ರಹ್ಮ ಜ್ಞಾನಿಗಳ ಸಮಾನರೆಂದು ಗಾಯನವಿದೆ, ಚಿಕ್ಕ ಮಕ್ಕಳಿಗೆ ವಿಕಾರದ ಬಗ್ಗೆ ತಿಳಿದಿರುವುದಿಲ್ಲ. ಸನ್ಯಾಸಿಗಳಿಗಾದರೂ ತಿಳಿದಿರುತ್ತದೆ ಮಕ್ಕಳು ಜನ್ಮದಿಂದಲೇ ಮಹಾತ್ಮರಾಗಿರುತ್ತಾರೆ. ಮಕ್ಕಳಿಗೆ ಪವಿತ್ರ ಹೂಗಳೆಂದು ಹೇಳಲಾಗುತ್ತದೆ. ನಂಬರ್ವನ್ ಹೂ ಶ್ರೀಕೃಷ್ಣನಾಗಿದ್ದಾನೆ. ಸ್ವರ್ಗ ಹೊಸ ಪ್ರಪಂಚದ ಮೊದಲ ರಾಜಕುಮಾರನಾಗಿದ್ದಾನೆ. ಜನ್ಮ ಪಡೆದುಕೊಂಡಾಗ ಮೊದಲ ರಾಜಕುಮಾರನೆಂದು ಹೇಳುತ್ತಾರೆ. ಶ್ರೀಕೃಷ್ಣನಂತಹ ಮಗುವಾಗಲಿ ಎಂದು ಕೃಷ್ಣನನ್ನು ಎಲ್ಲರೂ ನೆನಪು ಮಾಡುತ್ತಾರೆ. ಈಗ ತಂದೆಯು ಹೇಳುತ್ತಾರೆ – ನೀವು ಏನು ಪದವಿಯನ್ನು ಪಡೆಯಬೇಕಾದರೂ ಈಗ ಪಡೆಯಿರಿ. ಕೇವಲ ಒಬ್ಬ ಕೃಷ್ಣನೇ ಆಗುವುದಿಲ್ಲ. ಎಷ್ಟೊಂದು ಮಂದಿ ರಾಜಕುಮಾರರಾಗುತ್ತಾರೆ! ಪ್ರಥಮ, ದ್ವಿತೀಯ, ತೃತಿಯ ಹೀಗೆ ಇರುತ್ತಾರಲ್ಲವೆ ಅಂದಾಗ ಇಲ್ಲಿಯೂ ರಾಜಧಾನಿಯಿದೆ. ತಂದೆಯ ಹಿಂದೆ ಮತ್ತೆ ಅನ್ಯರು ಸಿಂಹಾಸನವನ್ನೇರುತ್ತಾರೆ. ಹೇಗೆ ಮನೆತನವಿರುತ್ತದೆಯಲ್ಲವೆ ಹಾಗೆಯೇ ಇದೂ ಸಹ ಮನೆತನವಾಗಿದೆ. ನಿಮ್ಮ ಸಂಬಂಧವು ಕ್ರಿಶ್ಚಿಯನ್ನಿರೊಂದಿಗೆ ಇದೆ. ಕೃಷ್ಣ ಮತ್ತು ಕ್ರಿಶ್ಚಿಯನ್ ಇಬ್ಬರದೂ ಒಂದೇ ರಾಶಿಯಾಗಿದೆ. ಲೇವಾದೇವಿಯೂ ಸಹ ಪರಸ್ಪರ ಬಹಳ ನಡೆಯುತ್ತಿದೆ. ಭಾರತದಿಂದ ಅವರು ಎಷ್ಟೊಂದು ಹಣವನ್ನು ತೆಗೆದುಕೊಂಡು ಹೋಗಿದ್ದಾರೆ, ಈಗ ಮತ್ತೆ ಕೊಡುತ್ತಿದ್ದಾರೆ. ರಿಟರ್ನ್ ಸೇವೆ ಮಾಡುತ್ತಿದ್ದಾರೆ. ಈ ಯುರೋಪಿಯನ್ನರು ಪರಸ್ಪರ ಹೊಡೆದಾಡಿ ಸಮಾಪ್ತಿಯಾಗಿ ಬಿಡುತ್ತಾರೆ. ಇದರ ಮೇಲೆ ಕಥೆಯೂ ಇದೆ – ಎರಡು ಬೆಕ್ಕುಗಳು ಕಾದಾಡಿದವು, ಮಧ್ಯದಲ್ಲಿ ಬೆಣ್ಣೆಯನ್ನು ಕೋತಿಯು ತಿಂದು ಹೋಯಿತು….. ಈ ಮಾತು ಈಗಿನದಾಗಿದೆ. ಅವರು ಪರಸ್ಪರ ಹೊಡೆದಾಡುತ್ತಾರೆ ಮತ್ತು ರಾಜ್ಯಭಾಗ್ಯವು ನಿಮಗೆ ಸಿಗುತ್ತದೆ. ಈಗ ನೀವು ಮಕ್ಕಳಿಗೆ ಅಪಾರ ಜ್ಞಾನವಿದೆ, ನೀವು ಮಕ್ಕಳ ಬುದ್ಧಿಯಲ್ಲಿದೆ – ನಾವೆಲ್ಲರೂ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ. ನಾವು ಗುಜರಾತಿನವರಾಗಿದ್ದೇವೆ, ಬಂಗಾಳದವರಾಗಿದ್ದೇವೆ ಎಂಬುದೇನೂ ಇಲ್ಲ. ಈ ಮತ ಭೇದವೂ ಹೊರಟು ಹೋಗಬೇಕು. ನಾವು ಒಬ್ಬ ತಂದೆಯ ಸಂತಾನರಾಗಿದ್ದೇವೆ, ಬ್ರಹ್ಮಾರವರ ಮೂಲಕ ಶಿವ ತಂದೆಯ ಶ್ರೀಮತದಂತೆ ಪುನಃ ನಾವು ನಮ್ಮ ಸ್ವರಾಜ್ಯವನ್ನು ಜ್ಞಾನ ಮತ್ತು ಯೋಗಬಲದಿಂದ ಸ್ಥಾಪನೆ ಮಾಡುತ್ತಿದ್ದೇವೆ. ಯೋಗಬಲದಿಂದಲೇ ನಾವು ಪಾವನರಾಗುತ್ತೇವೆ. ತಂದೆಯು ಸರ್ವಶಕ್ತಿವಂತನಾಗಿದ್ದಾರೆ, ಅವರಿಂದ ಬಲ ಸಿಗುತ್ತದೆ. ನೀವು ವಿಶ್ವದ ರಾಜ್ಯಭಾಗ್ಯವನ್ನು ಪಡೆಯುತ್ತೀರಿ, ಇದರಲ್ಲಿ ಯುದ್ಧ ಇತ್ಯಾದಿಗಳ ಮಾತಿಲ್ಲ, ಎಲ್ಲವೂ ಪವಿತ್ರತೆಯ ಮೇಲೆ ಆಧಾರಿತವಾಗಿದೆ. ಬಂದು ನಮ್ಮನ್ನು ಪತಿತರಿಂದ ಪಾವನ ಮಾಡಿ ಎಂದು ಹೇಳುತ್ತಾರೆ ಅಂದಮೇಲೆ ಇದು ನೆನಪಿನದೇ ಬಲವಾಗಿದೆ. ಇಲ್ಲಿಂದ ಹೋದ ನಂತರ ಕಾರ್ಯ ವ್ಯವಹಾರಗಳಲ್ಲಿ ಎಲ್ಲವನ್ನೂ ಮರೆತು ಬಿಡುವುದಲ್ಲ, ಇಲ್ಲಿ ಸನ್ಮುಖದಲ್ಲಂತೂ ಜ್ಞಾನ ಸಾಗರನ ಅಲೆಗಳನ್ನು ನೋಡುತ್ತಾ ಇರುತ್ತೀರಿ. ನದಿಗಳಲ್ಲಿ ಈ ಅಲೆಗಳು ಇರುವುದಿಲ್ಲ, ಸಾಗರದ ಒಂದು ಅಲೆಯು ಎಷ್ಟೊಂದು ನಷ್ಟವನ್ನುಂಟು ಮಾಡಿ ಬಿಡುತ್ತದೆ. ಯಾವಾಗ ಭೂಕಂಪವಾಗುವುದೋ ಆಗ ಸಾಗರವು ಉಕ್ಕುತ್ತದೆ. ಸಾಗರವನ್ನು ಒಣಗಿಸಿ ಜಮೀನನ್ನು ಮಾಡಿಕೊಂಡಿದ್ದಾರೆ, ಆ ಜಮೀನನ್ನು ಎಷ್ಟೊಂದು ಬೆಲೆಗೆ ಮಾರುತ್ತಾರೆ. ನಿಮಗೆ ತಿಳಿದಿದೆ – ಮೊದಲು ಈ ಬಾಂಬೆ ಇರಲಿಲ್ಲ. ಇದು ಬಹಳ ಚಿಕ್ಕ ಹಳ್ಳಿಯಾಗಿತ್ತು, ಮಾತೆಯರಂತೂ ಬಹಳ ಮುಗ್ಧರಾಗಿದ್ದಾರೆ. ಇವರು ಎಷ್ಟೊಂದು ವಿದ್ಯಾವಂತರಲ್ಲ, ಇಲ್ಲಂತೂ ಓದಿರುವುದೆಲ್ಲವನ್ನೂ ಮರೆಯಬೇಕಾಗಿದೆ. ನೀವು ಏನನ್ನೂ ಓದಿಲ್ಲವೆಂದರೆ ಇನ್ನೂ ಒಳ್ಳೆಯದಾಗಿದೆ. ಓದಿರುವ ಮನುಷ್ಯರು ಇದನ್ನು ತಿಳಿದುಕೊಳ್ಳುವ ಸಮಯದಲ್ಲಿ ಎಷ್ಟೊಂದು ಪ್ರಶ್ನೆಗಳನ್ನು ಮಾಡುತ್ತಾರೆ, ಇಲ್ಲಂತೂ ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ಯಾವುದೇ ದೇಹಧಾರಿ ಮನುಷ್ಯರನ್ನು ನೆನಪು ಮಾಡುವ ಅವಶ್ಯಕತೆಯಿಲ್ಲ. ಮಹಿಮೆಯು ಒಬ್ಬ ಬೇಹದ್ದಿನ ತಂದೆಯದಾಗಿದೆ. ನಿಮಗೆ ತಿಳಿದಿದೆ – ಒಬ್ಬ ಭಗವಂತನೇ ಶ್ರೇಷ್ಠಾತಿ ಶ್ರೇಷ್ಠನಾಗಿದ್ದಾರೆ, ಅವರ ನಂತರ ಬ್ರಹ್ಮಾ, ಇವರಿಗಿಂತಲೂ ಶ್ರೇಷ್ಠರು ಮತ್ತ್ಯಾರೂ ಇಲ್ಲ, ಇವರಿಗಿಂತ ದೊಡ್ಡ ವ್ಯಕ್ತಿಗಳೂ ಯಾರೂ ಇಲ್ಲ ಆದರೆ ಇವರು ಎಷ್ಟು ಸಾಧಾರಣವಾಗಿ ನಡೆಯುತ್ತಾರೆ, ನೋಡಿರಿ. ಮಕ್ಕಳೊಂದಿಗೆ ಎಷ್ಟು ಸಾಧಾರಣ ರೀತಿಯಿಂದ ಕುಳಿತುಕೊಳ್ಳುತ್ತಾರೆ, ರೈಲಿನಲ್ಲಿ ಹೋಗುತ್ತಾರೆ. ಇವರು ಯಾರು ಎಂಬುದು ಯಾರಿಗೇನು ತಿಳಿದಿದೆ! ಭಗವಂತನು ಬಂದು ಜ್ಞಾನವನ್ನು ಕೊಡುತ್ತಾರೆ ಅಂದಮೇಲೆ ಅವಶ್ಯವಾಗಿ ಪ್ರವೇಶ ಮಾಡಿ ಜ್ಞಾನ ಕೊಡುವರಲ್ಲವೆ. ಒಂದುವೇಳೆ ಕೃಷ್ಣನಿದ್ದಿದ್ದರೆ ಇಲ್ಲಿ ಬಹಳ ಜನಸಂದಣಿಯಾಗಿ ಬಿಡುತ್ತಿತ್ತು, ಮತ್ತೆ ಓದಿಸಲೂ ಸಾಧ್ಯವಾಗುತ್ತಿರಲಿಲ್ಲ, ಕೇವಲ ದರ್ಶನ ಮಾಡುತ್ತಾ ಇರುತ್ತಿದ್ದರು. ಇಲ್ಲಂತೂ ತಂದೆಯು ಗುಪ್ತ, ಸಾಧಾರಣ ವೇಷದಲ್ಲಿ ಕುಳಿತು ಓದಿಸುತ್ತಾರೆ.

ನೀವು ಗುಪ್ತ ಸೈನಿಕರಾಗಿದ್ದೀರಿ. ನಿಮಗೆ ತಿಳಿದಿದೆ, ನಾವಾತ್ಮರು ಯೋಗಬಲದಿಂದ ಪುನಃ ನಮ್ಮ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆ. ಈ ಹಳೆಯ ಶರೀರವನ್ನು ಬಿಟ್ಟು ಹೋಗಿ ಹೊಸ ಸುಂದರ ಶರೀರವನ್ನು ಧಾರಣೆ ಮಾಡಿಕೊಳ್ಳುತ್ತೇವೆ. ಈಗ ಆಸುರೀ ಸಂಪ್ರದಾಯದವರಾಗಿದ್ದೇವೆ ನಂತರ ದೈವೀ ಸಂಪ್ರದಾಯದವರಾಗುತ್ತೇವೆ. ನಾನು ಹೊಸ ಪ್ರಪಂಚದಲ್ಲಿ ದೈವೀ ಶರೀರವನ್ನು ಧಾರಣೆ ಮಾಡಿ ರಾಜ್ಯಭಾರ ಮಾಡುತ್ತೇವೆಂದು ಆತ್ಮವು ಹೇಳುತ್ತದೆ. ಆತ್ಮವು ಪುರುಷನಾಗಿದೆ, ಶರೀರವು ಪ್ರಕೃತಿಯಾಗಿದೆ. ಆತ್ಮವು ಸದಾ ಪುರುಷನಾಗಿರುತ್ತದೆ, ಬಾಕಿ ಲೆಕ್ಕಾಚಾರದಿಂದ ಆತ್ಮಕ್ಕೆ ಸ್ತ್ರೀ-ಪುರುಷರ ಶರೀರ ಸಿಗುತ್ತದೆ ಆದರೆ ನಾನು ಅವಿನಾಶಿ ಆತ್ಮನಾಗಿದ್ದೇನೆ, ಈ ಚಕ್ರವು ಸುತ್ತುತ್ತಾ ಇರುತ್ತದೆ. ಕಲಿಯುಗದ ವಿನಾಶವೂ ಅವಶ್ಯವಾಗಿ ಆಗುವುದು, ವಿನಾಶದ ಚಿಹ್ನೆಗಳನ್ನೂ ಸನ್ಮುಖದಲ್ಲಿ ನೋಡುತ್ತೀರಿ. ಅದೇ ಮಹಾಭಾರತ ಯುದ್ಧವಾಗಿದೆ ಅಂದಮೇಲೆ ಅವಶ್ಯವಾಗಿ ಭಗವಂತನೂ ಇರುವರು. ಯಾವ ರೂಪದಲ್ಲಿ, ಯಾವ ತನುವಿನಲ್ಲಿದ್ದಾರೆ ಎಂಬುದು ನೀವು ಮಕ್ಕಳ ವಿನಃ ಯಾರಿಗೂ ತಿಳಿದಿಲ್ಲ. ನಾನು ಸಂಪೂರ್ಣ ಸಾಧಾರಣ ತನುವಿನಲ್ಲಿ ಬರುತ್ತೇನೆ, ನಾನು ಕೃಷ್ಣನ ತನುವಿನಲ್ಲಿ ಬರುವುದಿಲ್ಲವೆಂದು ತಂದೆಯು ಹೇಳುತ್ತಾರೆ. ಈ ಕೃಷ್ಣನ ಆತ್ಮವೇ ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತದೆ. ನಾನು ಇವರ ಬಹಳ ಜನ್ಮಗಳ ಅಂತಿಮದಲ್ಲಿಯೂ ಅಂತ್ಯದಲ್ಲಿ ಬರುತ್ತೇನೆ. 84 ಜನ್ಮಗಳನ್ನು ಸೂರ್ಯವಂಶಿ ಮನೆತನದವರೇ ತೆಗೆದುಕೊಳ್ಳುತ್ತಾರೆ. ಅವರೇ ಮೊದಲ ನಂಬರಿನಲ್ಲಿ ಬರುತ್ತಾರೆ. ನಿಮಗೆ ಸಾಕಾರಿ ವೃಕ್ಷ ಮತ್ತು ನಿರಾಕಾರಿ ವೃಕ್ಷ ಎರಡರ ಸಂಪೂರ್ಣ ಜ್ಞಾನವಿದೆ. ಮೂಲವತನದಿಂದ ಆತ್ಮರು ನಂಬರ್ವಾರ್ ಆಗಿ ಬರುತ್ತಾರೆ, ಮೊಟ್ಟ ಮೊದಲು ದೇವಿ-ದೇವತಾ ಧರ್ಮದ ಆತ್ಮರು ಬರುತ್ತಾರೆ ನಂತರ ನಂಬರ್ವಾರ್ ಅನ್ಯ ಧರ್ಮದವರು ಬರುತ್ತಾರೆ. ಚಿತ್ರಗಳಲ್ಲಿ ಬಹಳ ಶ್ರೇಷ್ಠ ಜ್ಞಾನವಿದೆ. ಮಕ್ಕಳು ಇದನ್ನು ತಿಳಿಸಬೇಕಾಗಿದೆ. ಇದರಲ್ಲಿ ಕುಮಾರಿಯರು ಎದ್ದು ನಿಲ್ಲಬೇಕು. ಯಾರಾದರೂ ಕನ್ಯೆಯರು ಇಂತಿಂತಹ ಮಾತುಗಳನ್ನು ತಿಳಿಸಿದರೆ ಚಮತ್ಕಾರವಾಗುವುದಲ್ಲವೆ. ಹೆಸರು ಪ್ರಸಿದ್ಧವಾಗುವುದು. ಲೌಕಿಕ, ಅಲೌಕಿಕ ಹೆಸರನ್ನು ಪ್ರಸಿದ್ಧಗೊಳಿಸುವಿರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಸಂಗಮಯುಗದಲ್ಲಿ ಶ್ರೇಷ್ಠ ಕರ್ಮ ಮಾಡಿ ಪುರುಷೋತ್ತಮರಾಗಬೇಕಾಗಿದೆ. ಕನಿಷ್ಟರಾಗುವಂತಹ ಯಾವುದೇ ಕರ್ಮ ಮಾಡಬಾರದು.

2. ಗುಪ್ತ ರೂಪದಲ್ಲಿ ತಂದೆಯ ಸಹಯೋಗಿಗಳಾಗಿ ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. ತಮ್ಮದೇ ತನು-ಮನ-ಧನದಿಂದ ಭಾರತವನ್ನು ಸ್ವರ್ಗವನ್ನಾಗಿ ಮಾಡಬೇಕಾಗಿದೆ. ನೆನಪು ಮತ್ತು ಪವಿತ್ರತೆಯ ಬಲವನ್ನು ಜಮಾ ಮಾಡಿಕೊಳ್ಳಬೇಕಾಗಿದೆ.

ವರದಾನ:-

ಯಾವ ಮಕ್ಕಳು ಜ್ಞಾನದ ಸ್ಮರಣೆ ಮಾಡುತ್ತಾ, ಅದರ ಸ್ವರೂಪರಾಗುವರು ಅವರು ಸದಾ ಹರ್ಷಿತವಾಗಿ ಇರುತ್ತಾರೆ. ಸದಾ ಹರ್ಷಿತವಾಗಿರುವುದು ಬ್ರಾಹ್ಮಣ ಜೀವನದ ಸತ್ಯ ಸಂಸ್ಕಾರವಾಗಿದೆ. ದಿವ್ಯ ಗುಣಗಳು ತಮ್ಮ ವಸ್ತುವಾಗಿದೆ, ಅವಗುಣವು ಮಾಯೆಯ ವಸ್ತುವಾಗಿದೆ, ಅದೇ ಸಂಗದೋಷದಿಂದ ಬಂದು ಬಿಟ್ಟಿದೆ. ಈಗ ಅದರಿಂದ ಹಿಂತಿರುಗಿರಿ ಹಾಗೂ ತಮ್ಮ ಸರ್ವ ಶಕ್ತಿವಂತನ ಸ್ಥಿತಿಯಲ್ಲಿ ಇರುತ್ತೀರೆಂದರೆ, ಸದಾ ಹರ್ಷಿತವಾಗಿ ಇರುತ್ತೀರಿ. ಯಾವುದೇ ಅಸುರಿ ಅಥವಾ ವ್ಯರ್ಥ ಸಂಸ್ಕಾರವು ತಮ್ಮ ಮುಂದೆ ಬರುವ ಸಾಹಸವನ್ನೂ ಇಡುವುದಕ್ಕೆ ಸಾಧ್ಯವಿಲ್ಲ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top